WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Friday, January 8, 2021

35ನೇ ವರ್ಷಕ್ಕೆ ಕಾಲಿರಿಸಿದ ಯಶ್‌: ಗೆಳೆಯನಿಗೆ ಹುಟ್ಟುಹಬ್ಬದ ಶುಭ ಕೋರಿದ ರಾಧಿಕಾ


 ಚಂದನವನದ ಖ್ಯಾತ ನಟ, ಕೆಜಿಎಫ್‌ ಖ್ಯಾತಿಯ ಯಶ್‌ 35ನೇ ವಯಸ್ಸಿಗೆ ಕಾಲಿರಿಸಿದ್ದಾರೆ. ನಟಿ ರಾಧಿಕಾ ಪಂಡಿತ್‌ ಗಂಡನ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾಗಿ ವಿಶ್ ಮಾಡಿದ್ದಾರೆ. ಗಂಡನೊಂದಿಗೆ ಕೇಕ್‌ ಮುಂದೆ ಕುಳಿತಿರುವ ಫೋಟೊ ಹಂಚಿಕೊಂಡಿರುವ ರಾಧಿಕಾ 'ಕೆಲವೊಮ್ಮೆ ನಾನು ಆಶ್ಚರ್ಯಪಡುತ್ತೇನೆ. ನೀವು ನನಗೆ ಅದ್ಹೇಗೆ ಅಷ್ಟು ಪರಿಪೂರ್ಣ ಜೋಡಿ ಎನ್ನಿಸಿಕೊಂಡಿದ್ದೀರಿ ಎಂದು. ನಂತರ ನನಗೆ ಅರಿವಾಗುತ್ತದೆ. ನಿಮ್ಮ ಕೇಕ್‌ನೊಂದಿಗೆ ಕೂಡ ನಾನು ಪಾಲು ಹೊಂದಿದ್ದೇನೆ ಎಂದು. ಹ್ಯಾಪಿ ಬರ್ತ್‌ಡೇ ನನ್ನ ಆತ್ಮೀಯ ಗೆಳೆಯ' ಎಂದು ಬರೆದುಕೊಂಡಿದ್ದಾರೆ.

ಚಿತ್ರರಂಗದ ಗಣ್ಯರು, ಸಹನಟರು ಹಾಗೂ ಅಭಿಮಾನಿಗಳು ಯಶ್ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ನಟಿ ಪ್ರಿಯಾಂಕಾ ಯಶ್ ಅವರ ಕೊಲಾಜ್ ಫೋಟೊವನ್ನು ಹಂಚಿಕೊಂಡು 'ಹುಟ್ಟುಹಬ್ಬದ ಶುಭಾಶಯಗಳು ಯಶ್‌, ನಿಮ್ಮ ಎಲ್ಲಾ ಕನಸುಗಳು ನನಸಾಗಲಿ, ನಿಮಗೂ ನಿಮ್ಮ ಕುಟುಂಬಕ್ಕೂ ದೇವರು ಒಳ್ಳೆಯದು ಮಾಡಲಿ' ಎಂದು ಬರೆದುಕೊಂಡಿದ್ದಾರೆ.  ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಯಶ್‌ ಫೋಟೊ ಹಂಚಿಕೊಂಡು ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. 'ಹುಟ್ಟುಹಬ್ಬದ ಶುಭಾಶಯಗಳು ಯಶ್‌, ಇತಿಹಾಸ ಮರುಕಳಿಸಿದೆ. ಕೆಜಿಎಫ್‌ ಚಾಪ್ಟರ್‌ 2 ಟೀಸರ್‌ನೊಂದಿಗೆ ಅದು ಮುಂದುವರಿಯಲಿದೆ' ಎಂದು ಬರೆದುಕೊಂಡಿದ್ದಾರೆ.

ವಿಜಯ್‌ ಕಿರಗಂದೂರು, ಪವನ್ ಒಡೆಯರ್‌, ಸುಮಲತಾ ಅಂಬರೀಶ್‌, ನೆನಪಿರಲಿ ಪ್ರೇಮ ಸೇರಿದಂತೆ ಅನೇಕರು ಶುಭಾಶಯ ತಿಳಿಸಿದ್ದಾರೆ.

(ಮಾಹಿತಿ ಕೃಪೆ ಪ್ರಜಾವಾಣಿ)


ಟೈಟ್ ಬಟ್ಟೆ ಧರಿಸುವ ಪುರುಷರೇ ಎಚ್ಚರ.!


 ಇದು ಫ್ಯಾಷನ್ ಯುಗ. ಜನರು ದಿನಕ್ಕೊಂದು ಫ್ಯಾಷನ್ ಕೇಳ್ತಾರೆ. ಸದ್ಯ ಟೈಟ್ ಬಟ್ಟೆಯ ಫ್ಯಾಷನ್ ಇದೆ. ಜನರು ಬಿಗಿ ಬಟ್ಟೆಗಳನ್ನು ಧರಿಸುತ್ತಿದ್ದಾರೆ. ಆದ್ರೆ ಬಿಗಿ ಬಟ್ಟೆ ಪುರುಷರಿಗೆ ಒಳ್ಳೆಯದಲ್ಲ ಎಂಬುದು ಅಧ್ಯಯನದಿಂದ ಹೊರಬಿದ್ದಿದೆ.

ಪುರುಷ ಬಂಜೆತನಕ್ಕೆ ಬಿಗಿಯಾದ ಬಟ್ಟೆ ಕಾರಣವೆಂದು ಅಧ್ಯಯನ ಹೇಳಿದೆ. ಲೈಂಗಿಕ ಸಾಮರ್ಥ್ಯದ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆಯಂತೆ. ಲೈಂಗಿಕ ಸಮಸ್ಯೆಯಿಂದ ಬಳಲುತ್ತಿರುವ 656 ಪುರುಷರ ಮೇಲೆ ಅಧ್ಯಯನ ನಡೆದಿದೆ. ಮಕ್ಕಳನ್ನು ಪಡೆಯುವ ಪ್ಲಾನ್ ನಲ್ಲಿರುವ ಪುರುಷರು ಸಡಿಲವಾದ ಬಟ್ಟೆಗಳನ್ನು ಧರಿಸಬೇಕೆಂದು ಅಧ್ಯಯನ ಹೇಳಿದೆ. ಸಡಿಲವಾದ ಬಟ್ಟೆಯಿಂದ ವೀರ್ಯದ ಸಂಖ್ಯೆ ಹಾಗೂ ಗುಣಮಟ್ಟ ಹೆಚ್ಚಾಗಲಿದೆ.

ಈ ಸಂಶೋಧನೆಯನ್ನು ಹಾರ್ವರ್ಡ್ ಟಿ.ಎಚ್. ​​ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಮಾಡಿದೆ. ಇದ್ರಲ್ಲಿ ಪುರುಷರ ಆಹಾರ ಪದ್ಧತಿ, ಜೀವನಶೈಲಿ, ನಿದ್ರೆಯ ಗುಣಮಟ್ಟ, ಸಿಗರೇಟ್- ಆಲ್ಕೊಹಾಲ್ ಸೇವನೆ ಮತ್ತು ಉಡುಗೆ ಬಗ್ಗೆಯೂ ಅಧ್ಯಯನ ಮಾಡಿದೆ.  ಬಿಗಿಯಾದ ಬಟ್ಟೆ ಧರಿಸಿದ ಪುರುಷರಿಗಿಂತ ಸಡಿಲ ಬಟ್ಟೆ ಧರಿಸಿದ ಪುರುಷರ ವೀರ್ಯಾಣು ಸಂಖ್ಯೆ ಶೇಕಡಾ 17ರಷ್ಟು ಹೆಚ್ಚಿತ್ತು. ಹಾಗೆ ವೀರ್ಯದ ಸಾಮರ್ಥ್ಯ ಶೇಕಡಾ 33ರಷ್ಟು ಹೆಚ್ಚಿತ್ತು.

(ಮಾಹಿತಿ ಕೃಪೆ ಕನ್ನಡದುನಿಯಾ)

Thursday, January 7, 2021

ನೆಗಡಿ ಕೆಮ್ಮು ಶೀತ ನಿವಾರಣೆಗೆ ಇದೊಂದೇ ಸಾಕು ಸುಲಭ ಮನೆಮದ್ದು!

 

ಸಾಮಾನ್ಯವಾಗಿ ನೆಗಡಿ ಮತ್ತು ಕೆಮ್ಮು ಎಲ್ಲರಿಗೂ ಆಗುತ್ತದೆ. ಅದರಲ್ಲಿ ನೆಗಡಿ ಕೆಲವರಿಗೆ ಆಗುವುದೇ ಇಲ್ಲ. ಹಾಗೆಯೇ ಕೆಲವರಿಗೆ ವಾತಾವರಣಕ್ಕೆ ನೆಗಡಿ ಅಥವಾ ಕೆಮ್ಮುಗಳು ಉಂಟಾಗಬಹುದು. ಇದನ್ನು ಕಡಿಮೆಮಾಡಿಕೊಳ್ಳಲು ಇಂಗ್ಲೀಷ್ ಮಾತ್ರಗಳನ್ನು ಬಳಸಬಾರದು. ಏಕೆಂದರೆ ಇವುಗಳು ಆರೋಗ್ಯಕ್ಕೆ ಹಾನಿಕರ. ಆದಷ್ಟು ಮನೆಯಲ್ಲಿ ಇರುವ ವಸ್ತುಗಳನ್ನು ಉಪಯೋಗಿಸಬೇಕು. ಆದ್ದರಿಂದ ನಾವು ಇಲ್ಲಿ ನೆಗಡಿಗೆ ಒಂದು ಸರಳವಾದ ಮನೆಮದ್ದಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಯಾವುದೇ ರೀತಿಯ ರೋಗ ಉಂಟಾದರೂ ಮೊದಲನೆಯದಾಗಿ ಮನೆಯ ಮದ್ದನ್ನು ಮಾಡಬೇಕು. ಏಕೆಂದರೆ ಇದರಿಂದ ಆರೋಗ್ಯಕ್ಕೆ ಯಾವುದೇ ರೀತಿ ಹಾನಿ ಇರುವುದಿಲ್ಲ. ಹಾಗೆಯೇ ಮನೆಯಲ್ಲಿರುವ ವಸ್ತುಗಳು ಶುದ್ಧವಾಗಿರುತ್ತದೆ. ಯಾವುದೇ ರೀತಿಯ ರಾಸಾಯನಿಕಗಳನ್ನು ಹೊಂದಿರುವುದಿಲ್ಲ. ಮನೆಮದ್ದುಗಳು ಎಂದರೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಔಷಧಿಗಳನ್ನು ತಯಾರಿಸಿಕೊಳ್ಳುವುದು ಎಂದರ್ಥ. ಇದು ನಮ್ಮ ಹಿರಿಯರು ನಮಗೆ ಹೇಳಿಕೊಟ್ಟ ಸಲಹೆ ಎಂದು ಹೇಳಬಹುದು.

ಮೊದಲು ವೀಳ್ಯದೆಲೆಯನ್ನು ತೆಗೆದುಕೊಳ್ಳಬೇಕು. ವೀಳ್ಯದೆಲೆ ನಾಟಿಯನ್ನು ಹಾಕಬೇಕು. ಹಾಗೆಯೇ ನಂತರದಲ್ಲಿ ನಾಲ್ಕು ತುಳಸಿ ಎಲೆಯನ್ನು ತೆಗೆದುಕೊಳ್ಳಬೇಕು. ತುಳಸಿಯಲ್ಲಿ ಹಸಿರು ತುಳಸಿಯನ್ನು ತೆಗೆದುಕೊಳ್ಳಬೇಕು. ನಂತರ ನಾಲ್ಕು ಕಾಳುಮೆಣಸನ್ನು ತೆಗೆದುಕೊಳ್ಳಬೇಕು. ನಂತರ ಚಿಕ್ಕದಾದ ಈರುಳ್ಳಿಯನ್ನು ತೆಗೆದುಕೊಳ್ಳಬೇಕು. ಈರುಳ್ಳಿ ಸಾಂಬಾರ್ ಈರುಳ್ಳಿ ಆದರೆ ಬಹಳ ಒಳ್ಳೆಯದು. ಇವೆಲ್ಲವುಗಳು ಹೆಚ್ಚಿನ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತವೆ. ಇವು ಈ ಮನೆಮದ್ದಿಗೆ ಬೇಕಾಗುತ್ತದೆ.

ಅದಕ್ಕೆ ನಾಲ್ಕು ತುಳಸಿ ಹಾಗೆಯೇ ಅದಕ್ಕೆ ನಾಲ್ಕು ಕಾಳುಮೆಣಸು ಅದರ ಜೊತೆ ಚಿಕ್ಕದಾದ ಸಾಂಬಾರ್ ಈರುಳ್ಳಿಯನ್ನು ಹಾಕಿ ಕವಳದಂತೆ ಮಾಡಿ ಚೆನ್ನಾಗಿ ಉಗಿಯಬೇಕು. ಇದರಿಂದ ಹಲವಾರು ಪ್ರಯೋಜನಗಳಿವೆ ಯಾವುದೇ ರೀತಿಯ ಉಸಿರಾಟದ ತೊಂದರೆಗಳು ಇದ್ದರೆ ಇದರಿಂದ ಕಡಿಮೆಯಾಗುತ್ತದೆ. ಹಾಗೆಯೇ ಶೀತ, ಕೆಮ್ಮು, ಮಲಬದ್ಧತೆಗಳು ಸಹ ದೂರವಾಗುತ್ತದೆ. ಆದ್ದರಿಂದ ಕೊನೆಯದಾಗಿ ಹೇಳುವುದೇನೆಂದರೆ ಇಂತಹ ಮನೆಮದ್ದುಗಳನ್ನು ಮಾಡಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.

(ಮಾಹಿತಿ ಕೃಪೆ All indian news 24×7)

Wednesday, January 6, 2021

ಗೋಹತ್ಯೆ ನಿಷೇಧ: ರಾಜ್ಯದಲ್ಲಿ ಸುಗ್ರೀವಾಜ್ಞೆಗೆ ಅಂಕಿತ


 ಬೆಂಗಳೂರು: ಹಸು ಮತ್ತು ಎತ್ತುಗಳ ವಧೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಗೋಹತ್ಯೆ ನಿಷೇಧ ಸುಗ್ರೀವಾಜ್ಞೆ-2020ಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಮಂಗಳವಾರ ಅಂಕಿತ ಹಾಕಿದ್ದಾರೆ.

ಉತ್ತರ ಪ್ರದೇಶದ ಮಾದರಿಯಲ್ಲಿ ಸಂಪೂರ್ಣವಾಗಿ ಗೋಹತ್ಯೆ ನಿಷೇಧಿಸುವ ಮಸೂದೆಯನ್ನು ವಿಧಾನ ಮಂಡಲದ ಕಳೆದ ಅಧಿವೇಶನದಲ್ಲಿ ಮಂಡಿಸಲಾಗಿತ್ತು. ವಿಧಾನಸಭೆಯಲ್ಲಿ ಮಸೂದೆಗೆ ಒಪ್ಪಿಗೆ ದೊರಕಿತ್ತು. ಆದರೆ, ವಿಧಾನ ಪರಿಷತ್‌ನಲ್ಲಿ ಮಸೂದೆ ಮಂಡನೆಗೂ ಅವಕಾಶ ಸಿಕ್ಕಿರಲಿಲ್ಲ.

ಸಂಪುಟ ಸಭೆಯ ನಿರ್ಣಯದಂತೆ ಗೋಹತ್ಯೆ ನಿಷೇಧಕ್ಕೆ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಸುಗ್ರೀವಾಜ್ಞೆಗೆ ರಾಜ್ಯಪಾಲರ ಒಪ್ಪಿಗೆ ದೊರಕಿರುವುದರಿಂದ ಮಂಗಳವಾರದಿಂದಲೇ ಗೋಹತ್ಯೆ ನಿಷೇಧಕ್ಕೆ ತರಲಾದ ಹೊಸ ತಿದ್ದುಪಡಿಗಳು ಜಾರಿಗೆ ಬಂದಿವೆ.

(ಮಾಹಿತಿ ಕೃಪೆ ಪ್ರಜಾವಾಣಿ)

Tuesday, January 5, 2021

ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?


 ಹೊಸ ವರ್ಷಕ್ಕೆ ಸ್ವಾಗತ ಕೋರುವವರಲ್ಲಿ ಮೊದಲ ಸ್ಥಾನದಲ್ಲಿ ಕ್ಯಾಲೆಂಡರ್ ಇರುತ್ತದೆ. ಆ ಕ್ಯಾಲೆಂಡರ್ ಯಾವಾಗ ಪ್ರಾರಂಭವಾಯಿತು? ದೇಶದಾದ್ಯಂತ ಬಳಸುತ್ತಿರುವ ಕ್ಯಾಲೆಂಡ ಹೆಸರೇನು? ಅಂತಹ ಕೆಲವು ಕುತೂಹಲಕರ ವಿಷಯಗಳ ಬಗ್ಗೆ. ಲ್ಯಾಟಿನ್‌ನಲ್ಲಿ "ಕ್ಯಾಲೆಂಡೇರಿಯಮ್" ಅಂದರೆ ಅಕೌಂಟ್ ಬುಕ್ ಎಂದು ಅರ್ಥ.

ಅದೇ ರೀತಿ "ಕ್ಯಾಲೆಂಡಾ" ಎಂದರೆ ವರ್ಷದಲ್ಲಿ ಬರುವ ಮೊದಲ ದಿನ ಎಂದರ್ಥ. ಫ್ರೆಂಚ್ ಭಾಷೆಯಲ್ಲಿ "ಕ್ಯಾಲೆಂಡಿಯರ್" ಎಂದರೆ ರಿಜಿಸ್ಟರ್ ಎಂದರ್ಥ. ಲ್ಯಾಟಿನ್ ಪದಕ್ಕೆ ಹತ್ತಿರ ಇರುವ ಅರ್ಥದಿಂದ ಕ್ಯಾಲೆಂಡರ್ ಎಂಬ ಹೆಸರು ಇಟ್ಟರು. ಈಗ ಜಗತ್ತಿನಾದ್ಯಂತ ಬಳಸುತ್ತಿರುವ ಕ್ಯಾಲೆಂಡರ್ ಗ್ರೆಗೋರಿಯನ್ ಕ್ಯಾಲೆಂಡರ್. ರೋಮ್‌ನ ಮೊಟ್ಟಮೊದಲ ರಾಜ ವರ್ಷಕ್ಕೆ 300 ದಿನಗಳನ್ನು ಮಾತ್ರ ಪರಿಗಣಿಸಿ ಹತ್ತು ತಿಂಗಳು ಇರುವ ಕ್ಯಾಲೆಂಡರನ್ನು ತಯಾರಿಸಿದ.   ಇದರಿಂದ ಬೆಳೆ ಬೆಳೆಯಲು, ಹಬ್ಬಗಳನ್ನು ಮಾಡಿಕೊಳ್ಳಲು ತುಂಬಾ ತೊಂದರೆಯಾಗುತ್ತಿತ್ತು.

ಬಳಿಕ ನುಮಾ ಪೊಂಪಿಲುಯಸ್ ಎಂಬ ರಾಜ 365 ದಿನಗಳನ್ನು ಪರಿಗಣಿಸಿ ಜನವರಿ, ಫೆಬ್ರವರಿಯನ್ನು ಈ ಕ್ಯಾಲೆಂಡರ್‌ನಲ್ಲಿ ಸೇರಿಸಿದ. ಜಗತ್ತಿನಾದ್ಯಂತ ಸೂರ್ಯಮಾನ ಆಧಾರ ಮಾಡಿಕೊಂಡು 40ಕ್ಕೂ ಹೆಚ್ಚು ಕ್ಯಾಲೆಂಡರ್‌ಗಳಿವೆ. ಅದರಲ್ಲಿ ಈಜಿಪ್ಟ್, ಮೆಸಪಟೋಮಿಯಾ, ಇಥಿಯೋಪಿಯನ್, ಹೀಬ್ರೂ, ಚೈನೀಸ್, ರೋಮನ್, ಜೂಲಿಯನ್, ಮಾಯನ್, ಗ್ರೆಗೋರಿಯನ್ ಬಳಕೆಯಲ್ಲಿರುವಂತಹವು. ಅನೇಕ ಮುಖ್ಯವಾದ ದಿನಗಳುಳ್ಳ ಕ್ಯಾಲೆಂಡರ್‌ನಲ್ಲಿ 365 ದಿನಗಳಲ್ಲಿ "ಕ್ಯಾಲೆಂಡರ್ ಡೇ" ಎಂಬುದು ಇಲ್ಲದಿರುವುದು ವಿಪರ್ಯಾಸ.

ಕ್ಯಾಲೆಂಡರನ್ನು ಕನ್ನಡದಲ್ಲಿ ಪಂಚಾಂಗ ಎಂದು ಕರೆಯಬಹುದು. ಜಗತ್ತಿನಲ್ಲಿ ಅತಿ ಹೆಚ್ಚು ಉಪಯೋಗಿಸುವ ಕ್ಯಾಲೆಂಡರ್‌ಗಳಲ್ಲಿ ಗ್ರೆಗೋರಿಯನ್ ಮೊದಲ ಸ್ಥಾನದಲ್ಲಿದೆ. ಗ್ರೆಗೋರಿಯನ್ ಕ್ಯಾಲೆಂಡರ್‌ಗೂ ಮುನ್ನ ಜೂಲಿಯನ್ ಕ್ಯಾಲೆಂಡರ್ ಬಳಸುತ್ತಿದ್ದರು.

ಜೂಲಿಯನ್ ಕ್ಯಾಲೆಂಡರ್ನಲ್ಲಿ ವರ್ಷ ತುಂಬಾ ಉದ್ದವಾಗಿತ್ತು. ಇದು ಪ್ರತಿ ವರ್ಷ 365 ದಿನಗಳ 6 ಗಂಟೆಗಳ ಉದ್ದ ಇತ್ತು. ಆದರೆ ಲೆಕ್ಕಾಚಾರಗಳು ಒಂದು ವರ್ಷದ ನಿಜವಾದ ಸರಾಸರಿ ಉದ್ದ ಸ್ವಲ್ಪ ಕಡಿಮೆ (365 ದಿನಗಳ, 5 ಗಂಟೆ 49 ನಿಮಿಷ) ಎಂದು ತೋರಿಸಿದರು.

ಹಿಂದೂಗಳ ಸೌರಮಾನ,ಚಾಂದ್ರಮಾನ ರೀತಿಯ ಕಾಲಗಣನೆಗೆ ಪಂಚಾಂಗವೆಂದು ಕರೆಯುತ್ತಾರೆ. ಪಂಚಾಂಗವೆಂದರೆ, ಪಂಚ + ಅಂಗ = ಐದು ಅಂಗಗಳನ್ನು ಒಳಗೊಂಡದ್ದು. ತಿಥಿ , ವಾರ , ನಕ್ಷತ್ರ , ಯೋಗ ,ಮತ್ತು ಕರಣಗಳು - ಇವೇ ಆ ಐದು ಅಂಗಗಳು.ಇವುಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿಸುವಂಥದ್ದು ಪಂಚಾಂಗ.

# ಗ್ರೆಗೋರಿಯನ್ ಕ್ಯಾಲೆಂಡರ್ :
ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಪಂಚದಲ್ಲಿ ಅತಿ ಹೆಚ್ಚಾಗಿ ಉಪಯೋಗಿಸಲ್ಪಡುವ ಕ್ಯಾಲೆಂಡರ್ (ಪಂಚಾಂಗ). ಅಲೋಸಿಯಸ್ ಲಿಲಿಯಸ್ ಎಂಬ ವೈದ್ಯನಿಂದ ಪ್ರಸ್ತಾಪಿಸಲ್ಪಟ್ಟ ಈ ಕ್ಯಾಲೆಂಡರ್, ಫೆಬ್ರುವರಿ ೨೪, ೧೫೮೨ರಂದು ಪೋಪ್ ಹದಿಮೂರನೆ ಗ್ರೆಗೊರಿಯ ಆದೇಶದ ಮೇರೆಗೆ ಜಾರಿಗೆ ಬಂದಿತು. ಅಲ್ಲಿಯವರೆಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಉಪಯೋಗಿಸಲ್ಪಡುತ್ತಿದ್ದ ಜುಲಿಯನ್ ಕ್ಯಾಲೆಂಡರ್ನ ಲೆಕ್ಕದಲ್ಲಿ ವರ್ಷದ ಉದ್ದವು ಹೆಚ್ಚಾಗಿತ್ತು.

ಜೂಲಿಯನ್ ಕ್ಯಾಲೆಂಡರ್ನಲ್ಲಿ ವರ್ಷ ತುಂಬಾ ಉದ್ದವಾಗಿತ್ತು. ಇದು ಪ್ರತಿ ವರ್ಷ 365 ದಿನಗಳ 6 ಗಂಟೆಗಳ ಉದ್ದ ಇತ್ತು. ಆದರೆ ಲೆಕ್ಕಾಚಾರಗಳು ಒಂದು ವರ್ಷದ ನಿಜವಾದ ಸರಾಸರಿ ಉದ್ದ ಸ್ವಲ್ಪ ಕಡಿಮೆ (365 ದಿನಗಳ, 5 ಗಂಟೆ 49 ನಿಮಿಷ) ಎಂದು ತೋರಿಸಿದರು,

ಪ್ರತಿ ನಾಲ್ಕು ವರ್ಷ ಕ್ಕೊಮ್ಮೆ ನಿಖರವಾಗಿ ಭಾಗಿಸಬಹುದಾದ ವರ್ಷ ಅಧಿಕ ವರ್ಷ. ಫೆಬ್ರವರಿಯಲ್ಲಿ ಒಂದು ದಿನ ಹೆಚ್ಚು, 29 ದಿನ ತೋರಿಸಿದರು. 100ವರ್ಷಗಳನ್ನು ಹೊರತುಪಡಿಸಿ, ಆದರೆ ಶತಮಾನ ವರ್ಷ ಅಧಿಕ ವರ್ಷಗಳಲ್ಲ 400ರಿಂದ ನಿಖರವಾಗಿ ಭಾಗಿಸಬಹುದಾದರೆ ಅಧಿಕ ವರ್ಷ. ಉದಾಹರಣೆಗೆ 1700, 1800, ಮತ್ತು 1900 ಇವು ಅಧಿಕ ವರ್ಷ ಅಲ್ಲ, ಆದರೆ 2000 ಅಧಿಕ ವರ್ಷ.

# ಅಧಿಕ ವರ್ಷ :
ಅಂತರಿಕ್ಷ ಲೆಕ್ಕಾಚಾರದಲ್ಲಿನ ವರ್ಷದೊಂದಿಗೆ ಸಾಮ್ಯತೆ ಕಾಪಾಡಿಕೊಳ್ಳಲು ಒಂದು ದಿನ/ವಾರ/ತಿಂಗಳನ್ನು ಹೆಚ್ಚು ಹೊಂದಿರುವ ಪಂಚಾಂಗದ (ಕ್ಯಾಲೆಂಡರ್) ವರ್ಷವನ್ನು ಅಧಿಕವರ್ಷ ಎನ್ನುವರು. ಸಾಮಾನ್ಯವಾಗಿ ಅಧಿಕವರ್ಷದಲ್ಲಿ ಒಂದು ದಿನ ಹೆಚ್ಚಿರುತ್ತದೆ. ಉದಾಹರಣೆ: ಅಧಿಕವರ್ಷದಲ್ಲಿನ ಫೆಬ್ರುವರಿ ತಿಂಗಳಿನಲ್ಲಿ 28 ದಿನಗಳ ಬದಲಿಗೆ 29 ದಿನಗಳು ಬರುತ್ತದೆ. ಅಧಿಕವರ್ಷವಲ್ಲದ ವರ್ಷವನ್ನು ಸಾಮಾನ್ಯ ವರ್ಷ ಎನ್ನುವರು. ಉದಾಹರಣೆಗೆ ಫೆಬ್ರುವರಿ ತಿಂಗಳಲ್ಲಿ ಕೇವಲ 28ರ ಬದಲಿಗೆ 29 ದಿನಗಳಿರುತ್ತವೆ. ಋತುಗಳು ಮತ್ತು ಖಗೋಳಘಟನೆಗಳು ನಿಶ್ಚಿತ ದಿನಗಳ ನಂತರ ಪುನರಾವೃತ್ತಿಯಾಗದೆ ಪ್ರತಿವರುಷದಲ್ಲಿ ಅಷ್ಟೇ ದಿನಗಳುಳ್ಳ ಪಂಚಾಗವು ತಾನು ತೋರಿಸಬೇಕಾದ ಖಗೋಳ ಘಟನೆಯ ವಿಷಯದಲ್ಲಿ ಕ್ರಮೇಣವಾಗಿ ಲೆಕ್ಕತಪ್ಪುತ್ತದೆ. ಆಗಾಗ್ಗೆ ಒಂದು ಅಧಿಕದಿನ ಅಥವಾ ತಿಂಗಳನ್ನು (ನಿಯಮಿತವಾಗಿ) ಆ ವರ್ಷಕ್ಕೆ ಸೇರಿಸುವ ಮೂಲಕ ,ಅನಿಯಮಿತತೆಯನ್ನು ಸರಿಪಡಿಸಬಹುದು.ಅಧಿಕವರ್ಷವಲ್ಲದ ವರ್ಷವನ್ನು ಸಾಮಾನ್ಯವರ್ಷವೆಂದು ಕರೆಯುತ್ತಾರೆ. (ಪಂಚಾಂಗವನ್ನು ಕಾಲಗಣನೆಯೊಂದಿಗೆ ಸಮೀಕರಣಗೊಳಿಸುವ) ಅಧಿಕವರ್ಷಗಳನ್ನು (ಅಂದಂದಿನ ಗಡಿಯಾರದ ಸಮಯಕ್ಕೆ ಸಮಕಾಲಿಕಗೊಳಿಸುವ) ಅಧಿಕಸೆಕೆಂಡ್‌ನೊಂದಿಗೆ ಗೊಂದಲಿಸಿಕೊಳ್ಳಬಾರದು.

ಪ್ರಪಂಚದ ಬಹುತೇಕ ರಾಷ್ತ್ರಗಳಲ್ಲಿ ಚಾಲ್ತಿಯಲ್ಲಿರುವ ಗ್ರೆಗೋರಿಯನ್ ಕ್ಯಾಲೆಂಡರ್, ಆ ಒಂದು ಹೆಚ್ಚಿನ ದಿನವನ್ನು ನಾಲ್ಕರಿಂದ ಸಮವಾಗಿ ಭಾಗಿಸಲ್ಪಡುವ ವರ್ಷಗಳಲ್ಲಿ ಬರುವ ಫೆಬ್ರುವರಿ ತಿಂಗಳಿಗೆ ಸೇರಿಸುತ್ತದೆ. ಆದರೆ ಶತಮಾನದವರ್ಷಗಳೆಲ್ಲವೂ (ಅಂದರೆ -00ಯಿಂದ ಕೊನೆಯಾಗುವ) ನಾಲ್ಕರಿಂದ ಭಾಜ್ಯವಾಗುವುದಾದರೂ ಸಹ,ಅವು 400ರಿಂದ ಭಾಗಿಸಲ್ಪಟ್ಟಾಗ ಮಾತ್ರ ಅವುಗಳಲ್ಲಿ ಅಧಿಕದಿನಗಳನ್ನು ಸೇರಿಸಲಾಗುತ್ತದೆ.ಹೀಗಾಗಿ 1600 ,2000 ಮತ್ತು 2400 ಅಧಿಕವರ್ಷಗಳೆನಿಸಿಕೊಂಡರೆ,1700,1800,1900 ಹಾಗೂ 2100 ವರ್ಷಗಳು ಅಧಿಕವರ್ಷಗಳಾಗುವುದಿಲ್ಲ.

ಈ ನಿಯಮದ ಹಿಂದೆ ಇರುವ ಕಾರಣ ಏನೆಂದು ನೋಡುವುದಾದರೆ, ಗ್ರೆಗೋರಿಯನ್ ಪಂಚಾಂಗದಲ್ಲಿ ವಸಂತಕಾಲದಲ್ಲಿ ಹಗಲು-ರಾತ್ರಿ ಸಮವಾಗಿರುವ ದಿನ(ಸೂರ್ಯ ಸಮಭಾಜಕರೇಖೆಯನ್ನು ದಾಟಿ ಉತ್ತರ ಗೋಲಾರ್ಧವನ್ನು ಪ್ರವೇಶಿಸುವ ದಿನ ಅಂದರೆ ವಿಷುವತ್‌ಸಂಕ್ರಾಂತಿ(Vernal Equinox) ಮಾರ್ಚ್ 21 ಅಥವ ಅದರ ಸಮೀಪವಿರುವಂತೆ ರೂಪಿಸಲಾಗಿದೆ. ಆದ್ದರಿಂದ ಈಸ್ಟರ್ ಹಬ್ಬದ ದಿನಾಂಕ (ಮಾರ್ಚ್ 21ರ ನಂತರದ ಪ್ರಥಮ ಹುಣ್ಣಿಮೆಯ ನಂತರ ಬರುವ ಭಾನುವಾರದಂದು ಆಚರಿಸಲಾಗುತ್ತದೆ) ವಸಂತಕಾಲದ ಮೊದಲ ದಿನಕ್ಕೆ ಸರಿಹೊಂದುವಂತೆಯೇ ಬರುತ್ತದೆ. ಸದ್ಯಕ್ಕೆ ವಸಂತಕಾಲದಲ್ಲಿ ಹಗಲು-ರಾತ್ರಿ ಸಮವಾಗಿರುವ ದಿನಗಳ ಮಧ್ಯದ ವರ್ಷವು ಸುಮಾರು 365.242375 ದಿನಗಳಷ್ಟು ಉದ್ದವಾಗಿದೆ.ಗ್ರೆಗೋರಿಯನ್ ಅಧಿಕವರ್ಷದ ನಿಯಮದ ಪ್ರಕಾರ ಒಂದು ವರ್ಷದ ಸರಾಸರಿ ಉದ್ದ 365.2425 ದಿನಗಳು.

ಈ ಅಲ್ಪ ವ್ಯತ್ಯಾಸವಾದ 0.0001 ದಿನಗಳು,ಅಂದರೆ ಅಂದಾಜು 8000 ವರ್ಷಗಳಲ್ಲಿ,ಪಂಚಾಂಗವು ಅದು ಇರಬೇಕಾದುದಕ್ಕಿಂತ ಒಂದು ದಿನ ಹಿಂದೆ ಇರುತ್ತದೆ.ಆದರೆ 8000 ವರ್ಷಗಳಲ್ಲಿ ವಿಷುವತ್‌ಸಂಕ್ರಾಂತಿ (ಗಿeಡಿಟಿಚಿಟ ಇquiಟಿox-ವಸಂತದ ಹಗಲು-ರಾತ್ರಿ ಸಮನಾದ) ವರ್ಷದಲ್ಲಿ ಎಷ್ಟು ಕಾಲ ವ್ಯತ್ಯಾಸವಾಗಿರಬಹುದೆಂಬುದನ್ನು ಕರಾರುವಾಕ್ಕಾಗಿ ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಗ್ರೆಗೋರಿಯನ್ ಅಧಿಕವರ್ಷದ ನಿಯಮವೇ ಸಾಕಷ್ಟು ಉಪಯುಕ್ತವಾದ ಕೆಲಸವನ್ನು ಮಾಡುತ್ತದೆ.

# ಯಾವ ದಿನ ಅಧಿಕ ದಿನ.. ?
ಗ್ರೆಗೋರಿಯನ್ ಕ್ಯಾಲೆಂಡರ್ ಮೊದಲು ರೋಮನ್ನರು ಉಪಯೋಗಿಸುತ್ತಿದ್ದ ಜೂಲಿಯನ್ ಕ್ಯಾಲೆಂಡರ್‌ನ ಮಾರ್ಪಡಿತ ರೂಪ.ರೋಮನ್ ಕ್ಯಾಲೆಂಡರ್, ಚಾಂದ್ರಮಾನ ಪಂಚಾಂಗವಾಗಿ ಜನ್ಮ ತಾಳಿತಾದರೂ,ಕ್ರಿ.ಪೂ.5ನೇ ಶತಮಾನದಿಂದ ನಿಜವಾದ ಚಂದ್ರನನ್ನು ಅನುಸರಿಸದೆ,ಚಂದ್ರನ ಮೂರು ಮಜಲುಗಳನ್ನು ಅನುಸರಿಸಿ ತನ್ನ ದಿನಗಳಿಗೆ ಹೆಸರು ನೀಡಿತು: ಹೊಸ ಚಂದ್ರ(ಕ್ಯಾಲೆಂಡ್ಸ್ ನಿಂದ ವ್ಯುತ್ಪತ್ತಿಯಾದ ಕಾರಣ ಕ್ಯಾಲೆಂಡರ್),ಮೊದಲ ಕಾಲು ತಿಂಗಳು(ನೋನ್ಸ್ nones ಅಂದರೆ ಮಾರ್ಚ್,ಮೇ,ಜುಲೈ,ಅಕ್ಟೋಬರ್ ತಿಂಗಳ 7ನೇ ತಾರೀಖು,ಉಳಿದ ತಿಂಗಳ 5ನೇ ತಾರೀಖು) ಮತ್ತು ಪೂರ್ಣ ಚಂದ್ರ(ಐಡ್ಸ್ ides ಅಂದರೆ ಮಾರ್ಚ್,ಮೇ,ಜುಲೈ,ಅಕ್ಟೋಬರ್ ತಿಂಗಳ 15ನೇ ತಾರೀಖು,ಉಳಿದ ತಿಂಗಳ 13ನೇ ತಾರೀಖು). ದಿನಗಳನ್ನು ಮುಂದಿನ ಹೆಸರಿಸಿದ ದಿನಗಳವರೆಗೆ ಎಲ್ಲವನ್ನೂ ಸೇರಿಸಿ(ವ್ಯಾಪಕವಾಗಿ ಒಳಗೊಂಡಂತೆ) ಗಣನೆ ಮಾಡತೊಡಗಿದುದರಿಂದ ,24 ಫೆಬ್ರುವರಿ ದಿನಾಂಕವನ್ನು( ಮಾರ್ಚ್ ಕ್ಯಾಲೆಂಡ್ಸ್‌ನ ಹಿಂದಿನ 6ನೇ ದಿನ)ವೆಂದು ಪರಿಗಣಿಸಲಾಯಿತು(ante diem sextum calendas martii)

ಕ್ರಿ.ಪೂ.45ರಿಂದ ಅಧಿಕವರ್ಷದ ಫೆಬ್ರುವರಿ ತಿಂಗಳಿನಲ್ಲಿ "ಮಾರ್ಚ್ ಕ್ಯಾಲೆಂಡ್ಸ್‌ನ ಹಿಂದಿನ 6ನೇ ದಿನ"(ಅಂದರೆ 24ನೇ ದಿನಾಂಕ)ವೆಂದು ಪರಿಗಣಿತವಾದ ಎರಡು ದಿನಗಳಿರುತ್ತಿದ್ದವು.ಈ ಅಧಿಕ ದಿನ ಮೊದಲು ಎರಡನೇ ದಿನವಾಗಿದ್ದರೂ, ನಂತರದಲ್ಲಿ 3ನೇ ಶತಮಾನದಿಂದ ಅದೇ ಮೊದಲ ದಿನವೆಂದು ಪರಿಗಣಿಸಲ್ಪಟ್ಟಿತು.ಹೀಗಾಗಿ ಫೆಬ್ರುವರಿ 24ನೇ ದಿನಾಂಕಕ್ಕೆ ದಿನಾಧಿಕ ವರ್ಷ(bissextile year)ದ ಅಧಿಕದಿನ(bissextile day) ವೆಂಬ ಪರಿಭಾಷೆ ಬಳಕೆಗೆ ಬಂದಿತು. ಈ ಪದ್ಧತಿ ಅನುಸರಿಸಿದ ಕಡೆಯಲ್ಲೆಲ್ಲಾ,ವಾರ್ಷಿಕೋತ್ಸವಗಳನ್ನು ಅಧಿಕವರ್ಷದಲ್ಲಿ ಬರುವ ಒಳಸೇರಿಸಿದ ಅಧಿಕದಿನದ ನಂತರಕ್ಕೆ ಮುಂದೂಡಲಾಯಿತು.ಉದಾಹರಣೆಗೆ,ಸಂತ ಮಥಿಯಾಸ್‌ನ ಮುನ್ನಾದಿನದ ಹಬ್ಬದ ದಿನವು ಸಾಮಾನ್ಯ ವರ್ಷಗಳಲ್ಲಿ ಫೆಬ್ರುವರಿ 24 ಆಗಿದ್ದರೆ,ಅಧಿಕ ವರ್ಷದಲ್ಲಿ ಅದು ಫೆಬ್ರುವರಿ 25 ಆಗುತ್ತಿತ್ತು.

# ಜೂಲಿಯನ್ ಕ್ಯಾಲೆಂಡರ್ :
ಜೂಲಿಯನ್ ಕ್ಯಾಲೆಂಡರ್ ನಲ್ಲಿ 4ರಿಂದ ಭಾಗವಾಗುವ ವರ್ಷಗಳ ಫೆಬ್ರವರಿ ತಿಂಗಳಿಗೆ ಒಂದು ಅಧಿಕ ದಿನವನ್ನು ಸೇರಿಸಲಾಗುತ್ತದೆ. ಈ ನಿಯಮವು ಒಂದು ಸಾಮಾನ್ಯ ವರ್ಷಕ್ಕೆ 365.25 ದಿನಗಳನ್ನು ಕೊಡುತ್ತದೆ. ವಿಷುವತ್ ಸಂಕ್ರಾಂತಿ ವರ್ಷದ (ಗಿeಡಿಟಿಚಿಟ ಇquiಟಿox) ಅಂದಾಜು 0.0076 ದಿನಗಳ ಹೆಚ್ಚಳವೆಂದರೆ, ಪ್ರತಿ 130 ವರ್ಷಗಳಿಗೊಮ್ಮೆ ಈ ವಿಷುವತ್ ಸಂಕ್ರಾಂತಿಯ ದಿನ ಒಂದು ದಿನ ಮುಂಚಿತವಾಗಿಯೇ ಕ್ಯಾಲೆಂಡರ್‌ನಲ್ಲಿ ಬರುತ್ತದೆಯೆಂದು ಅರ್ಥವಾಗುತ್ತದೆ

ಪರಿಷ್ಕರಣೆ :
ಪರಿಷ್ಕೃತ ಜೂಲಿಯನ ಕ್ಯಾಲೆಂಡರ್4 ರಿಂದ ವಿಭಜಿತವಾಗುವ ವರ್ಷಗಳ , ಆದರೆ 100 ರಿಂದ ವಿಭಜಿತವಾಗಿ ,900 ರಿಂದ ಭಾಗಿಸಿದಾಗ 200 ಅಥವಾ 600 ಶೇಷ ಉಳಿಯದೆ ಇರುವ ವರ್ಷಗಳನ್ನು ಹೊರತುಪಡಿಸಿ ,ಉಳಿದ ವರ್ಷಗಳ ಫೆಬ್ರುವರಿ ತಿಂಗಳಿಗೆ ಒಂದು ಅಧಿಕ ದಿನವನ್ನು ಸೇರಿಸುತ್ತದೆ.ಈ ನಿಯಮ 2799ರವರೆಗೆ ಗ್ರೆಗೋರಿಯನ್ ಕ್ಯಾಲೆಂಡರ್‌ನ ನಿಯಮದೊಂದಿಗೆ ಹೊಂದಿಕೆಯಾಗಿತ್ತು.ಪರಿಷ್ಕೃತ ಜೂಲಿಯನ್ ಕ್ಯಾಲೆಂಡರ್‌ನೊಂದಿಗೆ ಹೊಂದಿಕೆಯಾಗದ ಗ್ರೆಗೋರಿಯನ್ ಕ್ಯಾಲೆಂಡರ್‌ನ ಮೊದಲ ವರ್ಷವೆಂದರೆ 2800.ಏಕೆಂದರೆ 2800 ಗ್ರೆಗೋರಿಯನ್ ಕ್ಯಾಲೆಂದರ್‌ನಲ್ಲಿ ಅಧಿಕ ವರ್ಷವಾಗಿತ್ತು ,ಆದರೆ ಪರಿಷ್ಕೃತ ಜೂಲಿಯನ್ ಕ್ಯಾಲೆಂಡರ್‌ನಲ್ಲಿ ಅಧಿಕ ವರ್ಷವಾಗಿರಲಿಲ್ಲ.

# ಹುಟ್ಟುಹಬ್ಬಗಳು :
ಫೆಬ್ರವರಿ 29 ಯಂದು ಹುಟ್ಟಿದವರಿಗೆ "leapling" ಎಂದು ಕರೆಯಬಹುದು. ಸಾಮಾನ್ಯವಾಗಿ ಇವರು ತಮ್ಮ ಹುಟ್ಟುಹಬ್ಬವನ್ನು ಫೆಬ್ರವರಿ 28 ಅಥವಾ ಮಾರ್ಚ್ 1 ರಂದು ಆಚರಿಸುತ್ತಾರೆ. ಅಧಿಕ ವರ್ಷದ ಹುಟ್ಟುಹಬ್ಬವನ್ನು ಆಧಾರವಾಗಿಟ್ಟುಕೊಂಡು ತಮ್ಮ ವಯಸ್ಸನ್ನು ಇರುವುದಕ್ಕಿಂತ ಕಾಲುಭಾಗದಷ್ಟು ಹೇಳಿಕೊಳ್ಳುವುದನ್ನು ಮಕ್ಕಳ ಸಾಹಿತ್ಯದಲ್ಲಿ ಬಹಳ ಸಂದರ್ಭಗಳಲ್ಲಿ ಕಾಣಬಹುದು.

(ಮಾಹಿತಿ ಕೃಪೆ spardha times)