WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Friday, April 17, 2020

ಬಳ್ಳಾರಿ:- ಪ್ರೀತಿಸಿದಕ್ಕೆ ಹೆತ್ತ ತಂದೆ ತಾಯಿ ಇಂದಲೇ ಪ್ರೇಯಸಿ ಮರಣ


ಬಳ್ಳಾರಿ ಸಮೀಪದ ಕೊಳಗಲ್ಲು ಎಂಬ ಊರಲ್ಲಿ ಇಂದು ಬೆಳಗ್ಗೆ ಪ್ರಯಸಿಯನ್ನು ಕೊಲೆಗೈದು ಪೊಲೀಸರಿಗೆ ಶರಣಗಿದ್ದರೆ. ಹುಡುಗಿಯ ತಂದೆ. ತಾಯಿ ಆದ ರುದ್ರಪ್ಪ ಹನುಮಂತಮ್ಮ. ಪ್ರೇಯಸಿ ಹೆಸರು:- (ಶಿಲ್ಪ)
ಇವರ ಮಗಳು  ಒಬ್ಬ ವ್ಯಕ್ತಿಯನ್ನು ಪ್ರೀತಿಸಿದಳು ಅವನು ಕೊರಸರು ಎಂಬ ಜಾತಿಯವನು ಆಗಿದ್ದವನು. ಹುಡುಗಿ (ಉಪ್ಪರ್) ಎಂಬ ಜಾತಿಯವಳಾಗಿದ್ದಳು
ಇವರು ಕೆಲದಿನಗಳ ಇಂದಿನಿಂದ ಪ್ರೀತಿಸಿದರು ಇದನ್ನ ಕಂಡ ಹುಡುಗಿಯ ಕುಟುಂಬದವರು ಹುಡುಗಿಯನ್ನ ಕುರುಗೋಡು ಸಮೀಪಕ್ಕೆ ಕರೆದು ಕೊಂಡು ಹೋಗಿ ಕೊಲೆಗೈದು ಕಾಲುವೆಗೆ ಅಕಿದ್ದಾರೆ ಪ್ರೇಯಸಿ ತಂದೆ ತಾಯಿ ಇಂದು ಅವರೇ ಪೊಲೀಸರಿಗೆ ಶರಣಗಿದರೆ.

ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ಸಾವಿರ ರೂ. ದಂಡ

ಚಿತ್ರದುರ್ಗ,ಏ.16(ಹಿ.ಸ): ಚಿತ್ರದುರ್ಗ ಜಿಲ್ಲೆಯ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿರ್ಬಂಧ ವಿಧಿಸಿ ಆದೇಶಿಸಲಾಗಿದ್ದು, ಈ ಆದೇಶ ಉಲ್ಲಂಘಿಸುವವರ ವಿರುದ್ಧ ಗರಿಷ್ಠ 1000 ರೂ. ವರೆಗೆ ದಂಡ ಹಾಗೂ ಕಾನೂನು ರೀತ್ಯ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಎಚ್ಚರಿಕೆ ನೀಡಿದ್ದಾರೆ.
ಕೋವಿಡ್-19 ಸೋಂಕು ತಡೆ ಹಾಗೂ ನಿಯಂತ್ರಣ ಉದ್ದೇಶಕ್ಕಾಗಿ ಲಾಕ್‍ಡೌನ್ ಜಾರಿಯಲ್ಲಿದೆ. ಅಲ್ಲದೆ ಸೋಂಕು ಹರಡುವುದನ್ನು ತಡೆಗಟ್ಟಲು ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಇದರ ಜೊತೆಗೆ ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ.
ಈ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಕೂಡ ನಿರ್ಬಂಧಿಸಲಾಗಿದೆ. ವಸತಿ ಸಮುಚ್ಛಯಗಳು, ಆಸ್ಪತ್ರೆ ಕಟ್ಟಡಗಳು , ಬಸ್ ಹಾಗೂ ರೈಲ್ವೆ ನಿಲ್ದಾಣಗಳು , ಹೋಟೆಲ್‍ಗಳು , ಸರ್ಕಾರಿ ಕಚೇರಿಗಳು , ನ್ಯಾಯಾಲಯ ಕಟ್ಟಡಗಳು , ಶಿಕ್ಷಣ ಸಂಸ್ಥೆ , ಶಾಲಾ ಕಾಲೇಜು ಕಟ್ಟಡಗಳು , ಗ್ರಂಥಾಲಯ , ಸಾರ್ವಜನಿಕ ಉದ್ಯಾನವನ ಸೇರಿದಂತೆ ಸಾರ್ವಜನಿಕರಿಂದ ಹೆಚ್ಚಾಗಿ ಬಳಸಲ್ಪಡುವ ಎಲ್ಲ ಸ್ಥಳಗಳಲ್ಲಿ ಉಗುಳುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.
ಈ ಆದೇಶ ಉಲ್ಲಂಘಿಸುವವರ ವಿರುದ್ಧ ಗರಿಷ್ಠ 1000 ರೂ. ವರೆಗೆ ದಂಡ ಹಾಗೂ ಕಾನೂನು ರೀತ್ಯ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ಹಿಂದೂಸ್ಥಾನ್ ಸಮಾಚಾರ್/ಪ್ರಬಿ/ಎಂವೈ

ಒಂದೇ ದಿನ 36 ಕೊರೊನಾ ಪ್ರಕರಣ: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 315ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಪ್ರಕರಣ ಪತ್ತೆಯಾದ ಬಳಿಕ ನಿಧಾನ ಗತಿಯಲ್ಲಿ ಏರಿಕೆ ಕಾಣುತ್ತಿದ್ದ ಸೋಂಕಿತರ ಸಂಖ್ಯೆ ನಾಲ್ಕು ದಿನಗಳಿಂದೀಚೆಗೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಗುರುವಾರ ಒಂದೇ ದಿನ 36 ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದ್ದು ಆತಂಕಕ್ಕೂ ಕಾರಣವಾಗಿದೆ.
ಮೊದಲ ಪ್ರಕರಣ ಪತ್ತೆಯಾಗಿ ಒಂದೂವರೆ ತಿಂಗಳು ಕಳೆಯುವಷ್ಟರಲ್ಲೇ ಸೋಂಕಿತರ ಸಂಖ್ಯೆ 315ಕ್ಕೆ ತಲುಪಿದೆ. ಎರಡು ದಿನಗಳ ಹಿಂದೆ ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ ಏರುಗತಿಯಲ್ಲಿತ್ತು. ಗುರುವಾರ ಈ ಹೆಚ್ಚಳದ ಪ್ರಮಾಣ ಬೆಳಗಾವಿ, ವಿಜಯಪುರದತ್ತ ತಿರುಗಿದೆ.
ಈವರೆಗೆ ರಾಜ್ಯದಲ್ಲಿ ಒಂದು ದಿನ ವರದಿಯಾದ ಗರಿಷ್ಠ ಪ್ರಕರಣಗಳ ಸಂಖ್ಯೆ 19. ಆದರೆ, ಇದರ ಒಂದು ಪಟ್ಟಿನಷ್ಟು ಪ್ರಕರಣಗಳು ಒಂದೇ ದಿನ ವರದಿಯಾಗಿದೆ. ಸೋಂಕು ಸಮುದಾಯಕ್ಕೆ ಹರಡಿತೆ ಎಂಬ ಶಂಕೆಯೂ ಅಧಿಕಾರಿಗಳ ವಲಯದಲ್ಲಿ ಮೂಡಲಾರಂಭಿಸಿದೆ.
ಮೃತರ ಸಂಖ್ಯೆ 13
ಬೆಂಗಳೂರಿನಲ್ಲಿ 66 ವರ್ಷದ ವೃದ್ಧ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಇದರಿಂದಾಗಿ ಈವರೆಗೆ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿದೆ. 195ನೇ ರೋಗಿಯಾಗಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಮಣಿಪುರಕ್ಕೆ ಪ್ರಯಾಣ ಮಾಡಿದ್ದ ಇತಿಹಾಸ ಹೊಂದಿದ್ದಾರೆ. ಏ.10ರಿಂದ ತೀವ್ರನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿತ್ತು. ಇವರ ಸಾವಿನಿಂದ ಬೆಂಗಳೂರಿನಲ್ಲಿ ಮರಣ ಹೊಂದಿದವರ ಸಂಖ್ಯೆ 3ಕ್ಕೆ ತಲುಪಿದೆ.
ಹೊಸ ಪ್ರಕರಣ ಎಲ್ಲಿ
ಹೊಸದಾಗಿ ಬೆಳಗಾವಿಯಲ್ಲಿ 17, ವಿಜಯಪುರದಲ್ಲಿ 7, ಬೆಂಗಳೂರಿನಲ್ಲಿ 5, ಮೈಸೂರಿನಲ್ಲಿ 3, ಕಲಬುರ್ಗಿಯಲ್ಲಿ 3 ಹಾಗೂ ಗದಗದಲ್ಲಿ 1 ಪ್ರಕರಣ ವರದಿಯಾಗಿದೆ.
'ಮಹಾರಾಷ್ಟ್ರದ ಕೋವಿಡ್‌-19 ರೋಗಿಯೊಂದಿಗೆ ನೇರ ಸಂಪರ್ಕ ಹೊಂದಿದ್ದ ವಿಜಯಪುರದ ಎರಡು ಕುಟುಂಬಗಳ 17 ಮಂದಿ ಈವರೆಗೆ ಸೋಂಕಿತರಾಗಿದ್ದಾರೆ. ಇವರೊಂದಿಗೆ ನೇರ ಸಂಪರ್ಕ ಹೊಂದಿದ್ದ 270 ವ್ಯಕ್ತಿಗಳ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಅವರು ವಾಸವಿದ್ದ ಜಾಗವನ್ನು ಸೀಲ್ ಮಾಡಲಾಗಿದೆ. ಅವರ ಮನೆಗಳಿಗೆ ಅಗತ್ಯ ಆಹಾರ ಸಾಮಗ್ರಿಗಳನ್ನು ಒದಗಿಸಲು ವ್ಯವಸ್ಥೆ ಮಾಡಿದ್ದೇವೆ ' ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಪರೀಕ್ಷೆ ಹೆಚ್ಚಳ
'ರಾಜ್ಯದಲ್ಲಿ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ಏ.13 ರಂದು 766 ಮಂದಿ, ಏ.14ಕ್ಕೆ 1,090 ಮಂದಿ, ಏ.15ಕ್ಕೆ 1,376 ಮಂದಿ ಹಾಗೂ ಏ.16ಕ್ಕೆ 1,240 ಮಂದಿಯ ರಕ್ತ ಹಾಗೂ ಗಂಟಲಿನ ದ್ರವವನ್ನು ಪರೀಕ್ಷೆ ಮಾಡಲಾಗಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ವರದಿಯಾದ ಪ್ರಕರಣಗಳಲ್ಲಿ 9 ಮಂದಿ ಕೇರಳ ಹಾಗೂ 5 ಮಂದಿ ಆಂಧ್ರ ಪ್ರದೇಶದವರು' ಎಂದು ಸಚಿವರು ಮಾಹಿತಿ ನೀಡಿದರು.
94 ಮಂದಿಗೆ ದೆಹಲಿ ನಂಟು
ದೆಹಲಿಯ ನಿಜಾಮುದ್ದೀನ್ ಪ್ರದೇಶಕ್ಕೆ ಭೇಟಿ ನೀಡಿದವರಲ್ಲಿ ಈಗಾಗಲೇ 46 ಮಂದಿಗೆ ಸೋಂಕು ದೃಢಪಟ್ಟಿದೆ. ಇವರೊಂದಿಗೆ ನೇರ ಸಂಪರ್ಕ ಹೊಂದಿದ್ದ 48 ಮಂದಿಗೂ ಸೋಂಕು ಹರಡಿದೆ. ಅದೇ ರೀತಿ, ಮೈಸೂರಿನಲ್ಲಿ ವರದಿಯಾದ 61 ಪ್ರಕರಣಲ್ಲಿ 49 ಮಂದಿ ನಂಜನಗೂಡಿನ ಫಾರ್ಮಾ ಕಂಪನಿಯ ಸಿಬ್ಬಂದಿ ಹಾಗೂ ಅವರೊಂದಿಗೆ ನೇರ ಸಂಪರ್ಕ ಹೊಂದಿರುವವರಾಗಿದ್ದಾರೆ.
6.5 ಲಕ್ಷ ಪರೀಕ್ಷಾ ಕಿಟ್‌ ಚೀನಾದಿಂದ ಆಮದು
ಕೊರೊನಾ ಸೋಂಕು ಪರೀಕ್ಷೆಯ 6.5 ಲಕ್ಷ ಕಿಟ್‌ಗಳು ಚೀನಾದಿಂದ ಭಾರತಕ್ಕೆ ಗುರುವಾರ ಬಂದಿವೆ. ಇದರಲ್ಲಿ ಐದು ಲಕ್ಷ ರ‍್ಯಾಪಿಡ್‌ ಆಯಂಟಿಬಾಡಿ ಪರೀಕ್ಷಾ ಕಿಟ್‌ಗಳು ಮತ್ತು ಒಂದೂವರೆ ಲಕ್ಷ ಆರ್‌ಎನ್‌ಎ ಕಿಟ್‌ಗಳು. ಕಳೆದ ವಾರದಲ್ಲಿ ಸೋಂಕು ಪರೀಕ್ಷೆ ಪ್ರಮಾಣವು ಗಣನೀಯವಾಗಿ ಏರಿಕೆಯಾಗಿತ್ತು. ಬುಧವಾರ 30,043 ಪರೀಕ್ಷೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಪರೀಕ್ಷೆಯ ಸಂಖ್ಯೆಯು ಇನ್ನಷ್ಟು ಹೆಚ್ಚಲಿದೆ.
ಆಯಂಟಿಬಾಡಿ ಕಿಟ್‌ಗಳನ್ನು ಹಾಟ್‌ಸ್ಪಾಟ್‌ಗಳಲ್ಲಿನ ಜನರ ಪರೀಕ್ಷೆಗೆ ಬಳಸಲಾಗುವುದು. ಆರಂಭಿಕ ಸೋಂಕು ಪತ್ತೆಗೆ ಇವುಗಳನ್ನು ಬಳಸಲಾಗುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ ವಿಜ್ಞಾನಿ ರಾಮನ್‌ ಗಂಗಾಖೇಡ್ಕರ್‌ ಹೇಳಿದ್ದಾರೆ. ಹಾಟ್‌ಸ್ಪಾಟ್‌ಗಳಲ್ಲಿ ಸೋಂಕು ಪ್ರಸರಣ ಯಾವ ರೀತಿಯಲ್ಲಿದೆ ಎಂಬುದನ್ನು ಗುರುತಿಸಲು ಆಯಂಟಿಬಾಡಿ ಪರೀಕ್ಷೆ ನೆರವಾಗುತ್ತದೆ.
ಕೋವಿಡ್‌ನಿಂದ ತತ್ತರಿಸಿದ್ದ ಕಾಸರಗೋಡು ಜಿಲ್ಲೆಯಲ್ಲಿ ಬಾಧಿತರಾಗಿದ್ದ 24 ಮಂದಿ ಗುಣಮುಖರಾಗಿದ್ದಾರೆ. ಕೇರಳದಲ್ಲಿ ಒಟ್ಟು 27 ಮಂದಿ ಗುರುವಾರ ರೋಗಮುಕ್ತರಾಗಿ ಮನೆಗೆ ಮರಳಿದ್ದಾರೆ. ಈಗ ರಾಜ್ಯದಲ್ಲಿ ಸೋಂಕು ಇರುವ ವ್ಯಕ್ತಿಗಳ ಸಂಖ್ಯೆ 147ಕ್ಕೆ ಇಳಿದಿದೆ. ಇವರ ಪೈಕಿ 61 ಮಂದಿ ಕಾಸರಗೋಡು ಜಿಲ್ಲೆಯವರು. ನೆರೆಯ ಕಣ್ಣೂರು ಜಿಲ್ಲೆಯಲ್ಲಿ 45 ಮಂದಿ ಸೋಂಕಿತರಿದ್ದಾರೆ. ಕೇರಳದಲ್ಲಿ ಒಟ್ಟು 394 ಮಂದಿಗೆ ಸೋಂಕು ತಗಲಿತ್ತು. 245 ಮಂದಿ ಗುಣಮುಖರಾಗಿದ್ದಾರೆ.
ಸರಕು ಹೊತ್ತು ಅಲ್ಲಲ್ಲಿ ನಿಂತಿದ್ದ ಲಾರಿಗಳು, ಎಲ್ಲ ರೀತಿಯ ಸರಕುಗಳ ಸಾಗಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ಕೊಟ್ಟ ಬಳಿಕ ಸಂಚಾರ ಆರಂಭಿಸಿವೆ ಎಂದು ಅಖಿಲ ಭಾರತ ಸಾರಿಗೆ ಕಾಂಗ್ರೆಸ್‌ (ಎಐಎಂಟಿಸಿ) ಹೇಳಿದೆ. ಆದರೆ, ಸರಕುಗಳನ್ನು ಲಾರಿಗೆ ಹೇರುವ ಮತ್ತು ಲಾರಿಯಿಂದ ಇಳಿಸುವ ನೌಕರರ ಕೊರತೆ ಎದುರಾಗಿದೆ. ಲಾಕ್‌ಡೌನ್‌ನಿಂದಾಗಿ ತಮ್ಮ ಊರುಗಳಿಗೆ ಹೋಗಿರುವ ಚಾಲಕರು ಮತ್ತು ಇತರ ಸಿಬ್ಬಂದಿಯನ್ನು ಕರೆತರುವುದು ಕೂಡ ಕಷ್ಟವಾಗಿದೆ. ಹಾಗಾಗಿ, ಸರಕು ಸಾಗಾಟ ಹಳಿಗೆ ಬರಲು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಐಎಂಟಿಸಿ ಹೇಳಿದೆ.
ಅಮೆರಿಕದಲ್ಲಿ ಸಾವಿನ ಸಂಖ್ಯೆ 31 ಸಾವಿರಕ್ಕೆ ಗುರುವಾರ ಏರಿದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ಜನರು ಕೊರೊನಾಕ್ಕೆ ಬಲಿಯಾದ ದೇಶ ಅಮೆರಿಕ. ಇಟಲಿಯಲ್ಲಿ ಈವರೆಗೆ 22,170, ಸ್ಪೇನ್‌ನಲ್ಲಿ 19,130 ಮತ್ತು ಫ್ರಾನ್ಸ್‌ನಲ್ಲಿ 17,188 ಜನರು ಮೃತಪಟ್ಟಿದ್ದಾರೆ.
ಚೀನಾ ಮತ್ತು ಇತರ ರಾಷ್ಟ್ರಗಳಲ್ಲಿ ನವೆಂಬರ್‌ನಲ್ಲಿ ಎರಡನೇ ಬಾರಿ ಕೊರೊನಾ ವೈರಸ್‌ ಹಬ್ಬುವ ಸಾಧ್ಯತೆ ಇದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಕೆ ನೀಡಿದ್ದಾರೆ

Monday, April 13, 2020

GOOD NEWS: ಮೂರು ತಿಂಗಳು ಉಚಿತವಾಗಿ ಸಿಗಲಿದೆ ಅಡುಗೆ ಸಿಲಿಂಡರ್


ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಫಲಾನುಭವಿಗಳಿಗೆ ನೆಮ್ಮದಿ ಸುದ್ದಿ ನೀಡಿದೆ. ಉಜ್ವಲಾ ಯೋಜನೆಯ ಫಲಾನುಭವಿಗಳಿಗಾಗಿ ಮೋದಿ ಸರ್ಕಾರ ಮೂರು ತಿಂಗಳ ಉಚಿತ ಅನಿಲ ನೀಡುವುದಾಗಿ ಘೋಷಿಸಿದೆ.
ಈ ಯೋಜನೆ ಏಪ್ರಿಲ್ 1 ರಿಂದ ಜೂನ್ 30 ರವರೆಗೆ ಜಾರಿಯಲ್ಲಿರುತ್ತದೆ. ಅಧಿಕೃತ ಹೇಳಿಕೆಯ ಪ್ರಕಾರ ಇಲ್ಲಿಯವರೆಗೆ ತೈಲ ಕಂಪನಿಗಳು ಉಜ್ವಲಾ ಯೋಜನೆಯ ಸುಮಾರು 7.15 ಕೋಟಿ ಫಲಾನುಭವಿಗಳ ಖಾತೆಗೆ 5,606 ಕೋಟಿ ರೂಪಾಯಿ ಹಾಕಲಾಗಿದೆ.
ಇದರ ಅಡಿಯಲ್ಲಿ ಕಂಪನಿಗಳು ಪ್ಯಾಕೇಜ್ ಪ್ರಕಾರ 14.2 ಕೆಜಿ ಅಥವಾ ಐದು ಕೆಜಿ ಸಿಲಿಂಡರ್ ಮೌಲ್ಯಕ್ಕೆ ಸಮಾನವಾದ ಮುಂಗಡವನ್ನು ಫಲಾನುಭವಿಯ ಖಾತೆಯಲ್ಲಿ ಜಮಾ ಮಾಡುತ್ತವೆ. ಈ ಮೊತ್ತದೊಂದಿಗೆ ಗ್ರಾಹಕರು ಸಿಲಿಂಡರ್ ಪಡೆಯಬಹುದು.
ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್‌ನಂತಹ ಕಂಪನಿಗಳು ಈಗಾಗಲೇ ವಿತರಣಾ ಬಾಯ್‌ ಗಳು ಸೇರಿದಂತೆ ಪೂರೈಕೆ ಸರಪಳಿಯ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಮ್ಮ ಉದ್ಯೋಗಿಗಳಿಗೆ ಐದು ಲಕ್ಷ ರೂಪಾಯಿ ವಿಮೆ ಘೋಷಣೆ ಮಾಡಿದೆ.
ಒಂದು ವೇಳೆ ಕೊರೊನಾ ಸೋಂಕಿನಿಂದ ಸಿಬ್ಬಂದಿ ಸಾವನ್ನಪ್ಪಿದ್ರೆ ಕುಟುಂಬಸ್ಥರಿಗೆ ವಿಮೆ ಹಣ ಸಿಗಲಿದೆ.

Sunday, April 12, 2020

ಲಾಕ್‍‍ಡೌನ್ | ಅಂಬೇಡ್ಕರ್ ಜಯಂತಿ ಸರಳ ಆಚರಣೆ: ಡಿಸಿಎಂ ಗೋವಿಂದಕಾರಜೋಳ


ಬೆಂಗಳೂರು: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ರಾಷ್ಟದಾದ್ಯಂತ ಲಾಕ್‌ಡೌನ್ ಕಾರಣ ಏಪ್ರಿಲ್ 14 ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 129 ನೇ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 10.00 ಗಂಟೆಗೆ ವಿಧಾನಸೌಧದ ಮುಂಭಾಗದ ಪ್ರತಿಮೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಲಾರ್ಪಣೆ ಮಾಡಲಿದ್ದಾರೆ.
ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದನ್ನು ನಿಯಂತ್ರಣಗೊಳಿಸಲು ರಾಷ್ಟ್ರದಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದು, 144 ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು, ಸಂಘಟನೆಗಳು, ಸಂಘಸಂಸ್ಥೆಗಳ ಪದಾಧಿಕಾರಿಗಳು, ಈ ಮಹಾನ್ ಚೇತನರ ಅಭಿಮಾನಿಗಳು, ಅನುಯಾಯಿಗಳು ಸಹಕರಿಸಿ ಏ.14ರಂದು ಡಾ. ಬಿ.ಆರ್.ಅಂಬೇಡ್ಕರ್‌ರವರ ಜನ್ಮ ದಿನಾಚರಣೆಯನ್ನು ತುಂಬಾ ಸರಳವಾಗಿ ಹೆಚ್ಚಿನ ಜನಸಂದಣಿ ಸೇರದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಆಚರಿಸಬೇಕು ಎಂದು ಗೋವಿಂದ ಎಂ ಕಾರಜೋಳ‌ ಮನವಿ ಮಾಡಿದ್ದಾರೆ.

ಯಡಿಯೂರಪ್ಪ ನಗರ ಪ್ರದಕ್ಷಿಣೆ: ಲಾಕ್ ಡೌನ್ ಅವಲೋಕನಕ್ಕಾಗಿ ರಸ್ತೆಗಿಳಿದ ಸಿಎಂ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಸಂಜೆ ಬೆಂಗಳೂರಿನ ನಗರದಲ್ಲಿ ಸಂಚರಿಸಿ ಕೊರೊನಾ ಲಾಕ್‌ ಡೌನ್ ಪರಿಸ್ಥಿತಿಯನ್ನು ಅವಲೋಕಿಸಿದರು.
ನಗರದ ಗೊರಗುಂಟೆ ಪಾಳ್ಯ, ಸುಮನಹಳ್ಳಿ ಸಿಗ್ನಲ್, ಜಯದೇವ ಜಂಕ್ಷನ್, ದೇವೇಗೌಡ ಪೆಟ್ರೋಲ್ ಬಂಕ್ ಜಂಕ್ಷನ್, ಯಶವಂತಪುರ ಭಾಗಗಳಿಗೆ ಭೇಟಿಕೊಟ್ಟು ಜನರಿಗೆ ಅಚ್ಚರಿ ಮೂಡಿಸಿದರು.
ಯಶವಂತಪುರ ಫ್ಲೈಓವರ್ ಬಳಿ ಪೊಲೀಸರ ಬಳಿ ಮಾತುಕತೆ ನಡೆಸಿ ಪರಿಸ್ಥಿತಿಯ ಜನರ ಸಂಚಾರದ ಬಗ್ಗೆ ಮಾಹಿತಿ ಪಡೆದರು. ನಗರದ ಹಲವೆಡೆ ಸಂಚರಿಸಿ ಲಾಕ್ ಡೌನ್ ಅನುಷ್ಠಾನವನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ, ಪೊಲೀಸರು, ಹೂವು, ಹಣ್ಣು ಮತ್ತು ತರಕಾರಿ ವ್ಯಾಪಾರಿಗಳು, ಕಿರಾಣಿ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕ ಜತೆ ಮಾತುಕತೆ ನಡೆಸಿದರು. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ತಿಳಿಸಿದರು.
ಮುಖ್ಯಮಂತ್ರಿ ಶ್ರೀ @BSYBJP ಅವರು ನಗರದ ಹಲವೆಡೆ ಸಂಚರಿಸಿ ಲಾಕ್ ಡೌನ್ ಅನುಷ್ಠಾನವನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ, ಪೊಲೀಸರು, ಹೂವು, ಹಣ್ಣು ಮತ್ತು ತರಕಾರಿ ವ್ಯಾಪಾರಿಗಳು, ಕಿರಾಣಿ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕ ಜತೆ
ಮಾತುಕತೆ ನಡೆಸಿದರು. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ತಿಳಿಸಿದರು.#ಮನೆಯಲ್ಲೇಇರಿ

ಬಾಗಲಕೋಟೆ: ಲಾಕ್‌ಡೌನ್‌ನಿಂದ ರಸ್ತೆ ಬಂದ್, ಚಿಕಿತ್ಸೆ ಸಿಗದೆ ವೃದ್ದೆ ಸಾವು


ಬಾಗಲಕೋಟೆ: ದೇಶಾದ್ಯಂತ ಕೊರೋನಾ ಲಾಕ್‌ಡೌನ್‌ನಿಂದ ಕಾರಣ ಮನೆಯಿಂದ ಜನ ಹೊರ ಬರುತ್ತಿಲ್ಲ. ಕೆಲ ಗ್ರಾಮಗಳಲ್ಲಿ ಗ್ರಾಮಕ್ಕೆ ಬರುವ ರಸ್ತೆಗಳನ್ನೇ ಅಗೆದು ಹಾಕಲಾಗಿದ್ದು ಹೊರ ಪ್ರದೇಶದವರು ಗ್ರಾಮಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಆದರೆ ರಸ್ತೆ ಅಗೆದಿದ್ದ ಕಾರಣಕ್ಕೆ ಗ್ರಾಮದ ಅನಾರೋಗ್ಯಪೀಡಿತ ವೃದ್ದೆಗೆ ಸಕಾಲಕ್ಕೆ ಚಿಕಿತ್ಸೆ ಸಿಕ್ಕದೆ ಮೃತಪಟ್ಟಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದ ತೇರದಾಳ ಪಟ್ಟಣದ ನಿರ್ಮಲಾ ತೆಳಗಿನಮನಿ (61) ಎಂಬುವ ಮಹಿಳೆ ಸಾವನ್ನಪ್ಪಿದ್ದಾರೆ.
ಹೃದಯ ಸಮಸ್ಯೆಯ ಕಾರಣ ಅನಾರೋಗ್ಯಕ್ಕೆ ತುತ್ತಾಗಿದ್ದ ವೃದ್ದೆಯನ್ನು ಅವರ ಕುಟುಂಬಸ್ಥರು ಚಿಕಿತ್ಸೆಗಾಗಿ ಬೆಳಗಾವಿಯ ಹಾರೋಗೇರಿಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗದ ಮಧ್ಯೆ ಮುಖ್ಯ ರಸ್ತೆಯನ್ನು ಅಗೆದಿದ್ದು ಕಾರು ಸಂಚರಿಸಲು ಸಾಧ್ಯವಾಗಿಲ್ಲ.
ಬಳಿಕ ಒಳ ರಸ್ತೆಗಳ ಮೂಲಕ ಆಸ್ಪತ್ರೆಗೆ ಸಾಗಲು ಪ್ರಯತ್ನಿಸಿದರೂ ಅವೆಲ್ಲವೂ ಬಂದ್ ಆಗಿತ್ತು.
ಸುಮಾರು ಎರಡು ಗಂಟೆಗಳ ಕಾಲ ಆಸ್ಪತ್ರೆಗೆ ತಲುಪುವ ಮಾರ್ಗದ ಹುಡುಕಾಟ ನಡೆದರೂ ವೃದ್ದೆಯನ್ನು ಸಕಾಲಕ್ಕೆ ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗಿಲ್ಲ. ಪರಿಣಾಮ ಅವರಿಗೆ ತೀವ್ರ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.
ಘಟನೆಗೆ ರಸ್ತೆ ಅಗೆದಿರುವ ತಾಲೂಕು ಆಡಳಿತವೇ ಕಾರಣವೆಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಇಡೀ ಬೆಂಗಳೂರು ಸೀಲ್‌ಡೌನ್ ಬಗ್ಗೆ ಸರ್ಕಾರದ ನಿಲುವೇನು? ಇಲ್ಲಿದೆ ಮಾಹಿತಿ

ಬೆಂಗಳೂರು, ಏ. 12: ಇಡೀ ಜಗತ್ತಿನಾದ್ಯಂತ ರಣಕೇಕೆ ಹಾಕುತ್ತಿರುವ ಕೊರೊನಾ ವೈರಸ್‌ ಹರಡದಂತೆ ತಡೆಯಲು ಲಾಕ್‌ಡೌನ್ ರಾಮಬಾಣ. ಜಗತ್ತಿನ ಹಲವು ದೇಶಗಳು ಲಾಕ್‌ಡೌನ್ ಅಸ್ತ್ರದ ಮೂಲಕ ಕೊರೊನಾ ವೈರಸ್ ಕಟ್ಟಿಹಾಕಲು ಪ್ರಯತ್ನಿಸುತ್ತಿವೆ. ಆದರೆ ಅದು ಸಮುದಾಯಕ್ಕೆ ವೈರಸ್ ಹರಡುವ ಮೊದಲು ಕೈಗೊಳ್ಳಬೇಕಾಗಿದ್ದ ಅಸ್ತ್ರ. ಸಮುದಾಯಕ್ಕೆ ವೈರಸ್ ಹರಡಿದ್ರೆ ಲಾಕ್‌ಡೌನ್ ಬದಲಿಗೆ ಸೀಲ್‌ಡೌನ್ ಅಸ್ತ್ರವನ್ನು ಜಾರಿಗೆ ತರಲಾಗುತ್ತದೆ....ದೇಶದ ಕೊರೊನಾ ವೈರಸ್ ಹಾಟ್‌ಸ್ಪಾಟ್‌ ಎಂದು ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಈಗಾಗಲೇ ಎರಡು ವಾರ್ಡ್‌ಗಳಲ್ಲಿ ಸೀಲ್‌ಡೌನ್ ಮಾಡಲಾಗಿದೆ. ಆದರೂ ಹೆಚ್ಚುತ್ತಿರುವ ಪ್ರಕರಣಗಳು ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿವೆ. ಹೀಗಾಗಿ ಇಡೀ ಬೆಂಗಳೂರಿನಾದ್ಯಂತ ಸೀಲ್‌ಡೌನ್ ಜಾರಿಯಾಗುತ್ತದೆ ಎಂಬ ಆತಂಕ ಜನರಲ್ಲಿದೆ. ಇದಕ್ಕೆ ಸರ್ಕಾರ ಅಧಿಕೃತವಾಗಿ ಸ್ಪಷ್ಟನೆಯನ್ನು ಕೊಟ್ಟಿದೆ. ಕೊರೊನಾ ಹಾಟ್‌ಸ್ಪಾಟ್‌ಗಳಲ್ಲಿ ಸ್ಥಾನ ಪಡೆದಿದೆ ಬೆಂಗಳೂರು ದೇಶದಲ್ಲಿ ದಿನದಿಂದ ದಿನಕ್ಕೆ ಹರಡುವುದು ಹೆಚ್ಚಾಗುತ್ತಿದೆ. ಈಗಾಗಲೇ ನಮ್ಮ ದೇಶದಲ್ಲಿ ಒಟ್ಟು 8,356 ಪ್ರಕರಣಗಳು ವರದಿಯಾಗಿದೆ. ಅದರಲ್ಲಿ 7,367 ಕೇಸ್‌ಗಳು ಚಾಲ್ತಿಯಲ್ಲಿದೆ. 716 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಡಿಸ್ಚಾರ್ಜ್ ಆಗಿದ್ದಾರೆ. 273 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿಯೂ ಈವರೆಗೆ 226 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 6 ಜನರು ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಬೆಂಗಳೂರು ದೇಶದ ಕೊರೊನಾ ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿದೆ. ಬೆಂಗಳೂರಿನಲ್ಲಿ 76 ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು ಒಬ್ಬರು ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಪ್ರಾಣಿಗಳಿಂದ ಮನುಷ್ಯನ ಅಂತರ!


ಹೊಸಪೇಟೆ: ಪ್ರಾಣಿಗಳಲ್ಲೂ ಕೊರೊನಾ ಸೋಂಕು ಕಂಡು ಬಂದಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಮಾ. 15ರಂದೇ ಸಾರ್ವಜನಿಕರ ಪ್ರವೇಶವನ್ನು ಉದ್ಯಾನಕ್ಕೆ ನಿರ್ಬಂಧಿಸಲಾಗಿತ್ತು. ಈಗಲೂ ಅದು ಮುಂದುವರೆದಿದೆ. 149 ಹೆಕ್ಟೇರ್‌ನಲ್ಲಿ ವಿಸ್ತರಿಸಿಕೊಂಡಿರುವ ಉದ್ಯಾನದಲ್ಲಿ ಅಧಿಕಾರಿ ವರ್ಗ ಸೇರಿದಂತೆ ಒಟ್ಟು 32 ಜನ ಕೆಲಸ ನಿರ್ವಹಿಸುತ್ತಾರೆ. ಸಮೀಪದ ಕಮಲಾಪುರದಿಂದ ಉದ್ಯಾನಕ್ಕೆ ಬರುವ ಸಿಬ್ಬಂದಿ ವರ್ಗಕ್ಕೆ ವಿಶೇಷ ವಾಹನದ ವ್ಯವಸ್ಥೆ ಮಾಡಲಾಗಿದ್ದು, ಸಾಮಾಜಿಕ ಅಂತರ ಸೃಷ್ಟಿಸಿ ಅವರನ್ನು ಕರೆತರಲಾಗುತ್ತಿದೆ.
ಉದ್ಯಾನಕ್ಕೆ ಬಂದ ನಂತರ ಎಲ್ಲರನ್ನೂ ಕಡ್ಡಾಯವಾಗಿ ಆರೊಗ್ಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸ್ಯಾನಿಟೈಸರ್‌ನಿಂದ ಕೈತೊಳೆದುಕೊಂಡ ನಂತರ ಕೈಗವಸು, ಮುಖಗವಸು ಧರಿಸಿಕೊಂಡು ಕೆಲಸಕ್ಕೆ ಹೋಗುತ್ತಿದ್ದಾರೆ.
ಎಲ್ಲರಿಗೂ ಪ್ರಾಣಿಗಳ ಮನೆಗಳಿಂದ ದೂರ ಇಡಲಾಗಿದೆ. ದೂರದಿಂದಲೇ ಅವುಗಳ ಚಲನವಲನ, ನಡವಳಿಕೆ ಮೇಲೆ ನಿಗಾ ಇಡಲು ಸೂಚಿಸಲಾಗಿದೆ.
ಸದ್ಯ 5 ಹುಲಿ, 4 ಸಿಂಹ, 6 ಚಿರತೆ, ತಲಾ ನಾಲ್ಕು ಹೈನಾ, ಗುಳ್ಳೇನರಿಗಳು, ಎರಡು ತರಹದ ಮಂಗಗಳು, ಇನ್ನೂರಕ್ಕೂ ಅಧಿಕ ಜಿಂಕೆ, ಸಾಂಬಾರ್‌ ಹಾಗೂ ಕೃಷ್ಣಮೃಗಗಳಿವೆ. ಅವುಗಳನ್ನು ಇರಿಸಿರುವ ಜಾಗದ ಸುತ್ತಲೂ ನಿತ್ಯ ಔಷಧ ಸಿಂಪಡಿಸಲಾಗುತ್ತಿದೆ. ಬಿಸಿ ನೀರಿನಲ್ಲಿ ತೊಳೆದ ಬಳಿಕ ದೂರದಿಂದಲೇ ಮಾಂಸ, ಹಣ್ಣು ಕೊಡಲಾಗುತ್ತಿದೆ.
'ಕೆಲ ದೇಶಗಳಲ್ಲಿ ಪ್ರಾಣಿಗಳಲ್ಲಿ ಕೊರೊನಾ ಸೋಂಕು ಕಂಡು ಬಂದಿರುವುದರಿಂದ ಕೇಂದ್ರ ಮೃಗಾಲಯ ಪ್ರಾಧಿಕಾರವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಅದರ ಪ್ರಕಾರ ಈಗಾಗಲೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಿತ್ಯ ಎಲ್ಲಾ ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಯಾರಲ್ಲಾದರೂ ರೋಗದ ಗುಣಲಕ್ಷಣಗಳು ಕಂಡು ಬಂದರೆ ಅಂತಹವರಿಗೆ ರಜೆ ಕೊಟ್ಟು ವಾಪಸ್‌ ಕಳುಹಿಸಿಕೊಡಲಾಗುತ್ತಿದೆ' ಎಂದು ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ಎಂ. ಕಿರಣ್‌ 'ಪ್ರಜಾವಾಣಿ'ಗೆ ತಿಳಿಸಿದರು.
'ನಮ್ಮ ಸಿಬ್ಬಂದಿ ವಾಸಿಸುವ ಪ್ರದೇಶದಲ್ಲಿ ಯಾರಾದರೂ ಕ್ವಾರಂಟೈನ್‌ನಲ್ಲಿದ್ದರೆ, ಸೋಂಕು ದೃಢಪಟ್ಟರೆ ಅಂತಹವರಿಗೆ ಮನೆಯಲ್ಲೇ ಇರುವಂತೆ ತಿಳಿಸಲಾಗಿದೆ. ಎಲ್ಲೆಲ್ಲಿ ಸೋಂಕಿತರಿದ್ದಾರೆ ಎನ್ನುವ ಮಾಹಿತಿ ಕಲೆ ಹಾಕಲಾಗುತ್ತಿದೆ. ಯಾರ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಂಡು ಬಂದರೂ ತಿಳಿಸಲು ಸುಚಿಸಲಾಗಿದೆ. ನಮ್ಮ ಸಿಬ್ಬಂದಿ ಹೊರತುಪಡಿಸಿ ಯಾರಿಗೂ ಒಳಬಿಡುತ್ತಿಲ್ಲ' ಎಂದು ಮಾಹಿತಿ ನೀಡಿದರು.
*
ಉದ್ಯಾನಕ್ಕೆ ಬರುವ ಪ್ರತಿಯೊಂದು ವಸ್ತು, ವಾಹನಕ್ಕೆ ಔಷಧ ಸಿಂಪಡಿಸಲಾಗುತ್ತಿದೆ. ತಜ್ಞ ವೈದ್ಯರು ಪ್ರಾಣಿಗಳ ಚಲನವಲನದ ಮೇಲೆ ನಿಗಾ ವಹಿಸಿದ್ದಾರೆ.
-ಎನ್.ಎಂ. ಕಿರಣ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ, ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ

ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿ ಜೀವ ಕಳೆದುಕೊಂಡ ಹಾವು


ಚನ್ನಗಿರಿ: ಸಾಮಾನ್ಯವಾಗಿ ದೃಶ್ಯ ಮಾಧ್ಯಮಗಳಲ್ಲಿ ನಾಗರಹಾವುಗಳ ಕಥಾನಕದ ದೃಶ್ಯಗಳು ಪ್ರತಿ ದಿನ ಪ್ರಸಾರವಾಗುವುದನ್ನು ನೋಡುತ್ತಿದ್ದೇವೆ. ಈ ಧಾರಾವಾಹಿಗಳಲ್ಲಿ ನಾಗರಹಾವು ಸೇಡು ತೀರಿಸಿಕೊಳ್ಳುವ ದೃಶ್ಯ ಸಾಮಾನ್ಯ. ಅದೇ ರೀತಿ ತಾಲ್ಲೂಕಿನ ದಿಗ್ಗೇನಹಳ್ಳಿ ಗ್ರಾಮದ ಬಳಿ ಶುಕ್ರವಾರ ನಾಗರಹಾವೊಂದು ಟ್ರ್ಯಾಕ್ಟರ್ ಚಾಲಕನ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿ ಕೊನೆಗೆ ತನ್ನ ಜೀವವನ್ನೇ ಕಳೆದುಕೊಂಡಿದೆ.
ತಾಲ್ಲೂಕಿನ ಹೊನ್ನೇಬಾಗಿ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಪ್ಪ ಅವರು ದಿಗ್ಗೇನಹಳ್ಳಿ ಗ್ರಾಮದ ಬಳಿಯ ತಮ್ಮ ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಟ್ರ್ಯಾಕ್ಟರ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಟ್ರ್ಯಾಕ್ಟರ್ ಟೈರ್‌ ರಸ್ತೆಯಲ್ಲಿ ಬಂದ ನಾಗರಹಾವಿನ ಬಾಲದ ಮೇಲೆ ಹರಿದಿದೆ. ಇದರಿಂದ ನಾಗರಹಾವು ಗಾಯಗೊಂಡಿತ್ತು.
ಇದರಿಂದ ಸಿಟ್ಟಿಗೆದ್ದ ಹಾವು ಚಲಿಸುತ್ತಿದ್ದ ಟ್ರ್ಯಾಕ್ಟರನ್ನು ಹಿಂಬಾಲಿಸಿಕೊಂಡು ಹೋಗಿದೆ. ಹಾವು ಹಿಂಬಾಲಿಸಿಕೊಂಡು ಬರುವುದನ್ನು ನೋಡಿದ ಚಾಲಕ ಟ್ರ್ಯಾಕ್ಟರ್‌ ನಿಲ್ಲಿಸಿ ಕಾಪಾಡಿ ಎಂದು ಕೂಗುತ್ತಾ ಓಡಿ ಹೋಗಿದ್ದಾರೆ. ಹಿಂಬಾಲಿಸಿಕೊಂಡು ಬಂದ ಹಾವು ಟ್ರ್ಯಾಕ್ಟರ್ ಚಾಲಕನ ಸೀಟಿನ ಮೇಲೆ 1 ಗಂಟೆ ಕಾಲ ಬುಸುಗುಡುತ್ತಾ ಕುಳಿತಿತ್ತು.
ಸುತ್ತಲಿನ ಜನರು ಸ್ಥಳಕ್ಕೆ ಬಂದಾಗ ಹಾವು ಬುಸುಗುಡುತ್ತಿದ್ದುದನ್ನು ಕಂಡು ಇದು ಚಾಲಕನನ್ನು ಕಚ್ಚದೇ ಬಿಡುವುದಿಲ್ಲ ಎಂದುಕೊಂಡು ಹಾವನ್ನು ಹೊಡೆದು ಕೊಂದರು.