WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Saturday, May 1, 2021

ದಂಡ ಕಟ್ಟಿ ರಸೀದಿ ಕೇಳಿದ್ದಕ್ಕೆ ಮಾಜಿ ಸೈನಿಕನಿಗೆ ಪೊಲೀಸರಿಂದ ಹಿಗ್ಗಾಮುಗ್ಗ ಥಳಿತ..!

 

ದಾವಣಗೆರೆ: ಸೈನಿಕ ದೇಶವನ್ನು ಕಾಯುವ ದೇವರು. ತನ್ನ ಆಸೆ-ಆಕಾಂಶೆಗಳನ್ನು ಬದಿಗೊತ್ತಿ ದೇಶಕ್ಕಾಗಿ ತನ್ನ ಪ್ರಾಣವನ್ನು ಮುಡಿಪಾಗಿಟ್ಟು ಉಗ್ರರ ಜೊತೆ ಹೋರಾಟ ಮಾಡುವವರು. ಯಾವುದಕ್ಕೂ ಎದೆಗುಂದದೆ ಭಯೋತ್ಪಾದಕರ ವಿರುದ್ಧ ಸೆಣಸಾಡುವವರು. ಅದರಂತೆ ಜಿಲ್ಲೆಯ ವೀರಪ್ಪ ಎಂಬ ನಿವೃತ್ತ ಸೈನಿಕ ದೇಶ ಸೇವೆಗೆ 22 ವರ್ಷ ತನ್ನ ಬದುಕನ್ನು ಮುಡುಪಾಗಿಟ್ಟಿದ್ದರು.

ಆದರೆ ನಿವೃತ್ತ ಸೈನಿಕನ ಸ್ಥಿತಿಯನ್ನು ನೋಡಿದರೆ ಕರುಳು ಕಿತ್ತು ಬಂದಂತಾಗುತ್ತದೆ. ಅವರ ಈ ಸ್ಥಿತಿಗೆ ಕಾರಣ ಗ್ರಾಮಾಂತರ ಪೊಲೀಸ್ ಠಾಣೆಯ ನಾಲ್ವರು ಪೊಲೀಸ್ ಕಾನ್ ಸ್ಟೇಬಲ್​ಗಳು ಎನ್ನುವುದು ನಿವೃತ್ತ ಸೈನಿಕನ ಆರೋಪ. 1996 ರಿಂದ 2018ರವರೆಗೆ ಬರೋಬ್ಬರಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಬಳಿಕ ದಾವಣಗೆರೆಯಲ್ಲಿ ವೀರಪ್ಪ ವಾಸ ಮಾಡುತ್ತಿದ್ದರು.

ಕಳೆದ ಸೋಮವಾರ ಆನಗೋಡು ಬಳಿ ಪತ್ನಿ ಜೊತೆ ಬೈಕ್​ನಲ್ಲಿ ಬರುವಾಗ ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ನಿಂಗನಗೌಡ ನೆಗಳೂರು ಮತ್ತು ನಾಲ್ವರು ಕಾನ್ ಸ್ಟೇಬಲ್​ಗಳು ಗಸ್ತಿನಲ್ಲಿದ್ದರು.

ಈ ವೇಳೆ ಮಾಸ್ಕ್ ಹಾಕಿಲ್ಲ ಎಂಬ ಕಾರಣಕ್ಕೆ ತಡೆದು ಫೈನ್ ಹಾಕಿದರು. ಇದಾದ ಬಳಿಕ ರಶೀದಿ ನೀಡುವಂತೆ ಕೇಳಿದ್ದಕ್ಕೆ ಕುಪಿತಗೊಂಡ ಪೊಲೀಸ್ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು.

ನಿವೃತ್ತ ಸೈನಿಕ ಎಂದರೂ ಕೇಳದೆ ಮನಸ್ಸಿಗೆ ಬಂದಂತೆ ಥಳಿಸಿದ್ದಾರೆಂದು ಹಲ್ಲೆಗೊಳಗಾದ ನಿವೃತ್ತ ಸೈನಿಕ ಬಿ.ಎಸ್.ವೀರಪ್ಪ ಆರೋಪಿಸಿದ್ದಾರೆ. ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿರುವ ವೀರಪ್ಪ ಅವರ ಬಲಗೈ ಭುಜ, ಕೈ ಹಾಗೂ ಎಡಕಾಲಿನ ಹೆಬ್ಬೆರಳು ಊದಿಕೊಂಡಿದೆ. ಕೈ ದಪ್ಪಗಾಗುವಂತೆ ಥಳಿಸಿದ್ದು, ಆರಾಮಾಗಲು ಇನ್ನು ತಿಂಗಳುಗಳು ಬೇಕಾಗಬಹುದು.

(ಮಾಹಿತಿ ಕೃಪೆ All Indian News 24x7)

78 ವರ್ಷದ ಯಡಿಯೂರಪ್ಪ ಬದಕಿದ್ರು 28 ವರ್ಷದ ಯವಕ ಸತ್ತ ಅದ್ಹೇಗೆ ಸರ್‌..

 

78 ವರ್ಷದ ಯಡಿಯೂರಪ್ಪ ಬದಕಿದ್ರು 28 ವರ್ಷದ ಯವಕ ಸತ್ತ ಅದ್ಹೇಗೆ ಸರ್‌..
ಕರ್ನಾಟಕದಲ್ಲಿ ಕೊರೊನಾ ಹಾವಳಿ ವಿಪರೀತವಾಗಿ ಹೆಚ್ಚುತ್ತಿದೆ. ಅದ್ಯಾವ ಮಟ್ಟಿಗೆ ಅಂದ್ರೆ ಕೇವಲ 28 ವರ್ಷದ ಯುವಕನೋರ್ವ ಆಕ್ಸಿಜನ್‌ ಸಿಗದೇ ನರಳಿ ನರಳಿ ಸತ್ತೋಗಿದ್ದಾನೆ. ಇನ್ನೂ ಆಘಾತಕಾರಿಯಂದ್ರೆ ಕೆಲವೇ ದಿನಗಳಲ್ಲಿ ಆತನ ಮದ್ವೆ ನಡೆಯಲಿತ್ತು. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಯವಕ ಸ್ನೇಹಿತ ಕೇವಲ ದುಡ್ಡಿದ್ರೆ ಬದುಕ್ತಾರೆ ಇಲ್ಲಾಂದ್ರೆ ಸಾಯ್ತಾರೆ ಸರ್‌ ಎಂದು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
(Corona Positive Youth Died In Bengaluru Due Non Availability Of Oxygen)

(ಮಾಹಿತಿ ಕೃಪೆ  Tv9 ಕನ್ನಡ)

ವಿಶ್ವದ ಅತಿ ಹೆಚ್ಚು ತೂಕದ ಮಾವು ಬೆಳೆದ ಜೋಡಿ; ಈ ಮಾವಿನ ಹಣ್ಣಿನ ತೂಕ ಎಷ್ಟು ಗೊತ್ತಾ?


ಬೊಗೊಟಾ: ಮಾವಿನ ಸೀಸನ್​ ಆರಂಭವಾಗಿದೆ. ಒಂದಿಷ್ಟು ಜನರು ಮಾವಿನ ಕಾಯಿಯ ಉಪ್ಪಿನಕಾಯಿ ತಯಾರಿಸಿಟ್ಟುಕೊಳ್ಳುವ ಭರದಲ್ಲಿದ್ದರೆ ಇನ್ನು ಸಾಕಷ್ಟು ಮಂದಿ ಹಣ್ಣನ್ನು ತಿನ್ನುವ ಕಾತುರದಲ್ಲಿದ್ದಾರೆ. ಆದರೆ ಈ ಒಂದು ಜೋಡಿ ಅದೇ ಮಾವಿನಿಂದ ಗಿನ್ನೆಸ್​ ರೆಕಾರ್ಡ್​ ಬರೆದಿದೆ.

ಕೊಲಂಬಿಯಾದ ಗ್ವಾಯತ್ ಪ್ರದೇಶದ ಜರ್ಮನ್ ಒರ್ಲ್ಯಾಂಡೊ ನೊವಾ ಬ್ಯಾರೆರಾ ಮತ್ತು ರೀನಾ ಮಾರಿಯಾ ಮರೋಕ್ವಿನ್ ಆ ವಿಶೇಷ ಜೋಡಿ. ಇವರು ತಮ್ಮ ಮಾವಿನ ತೋಪಿನಲ್ಲಿ ವಿಶೇಷ ಮಾವನ್ನು ಬೆಳೆದಿದ್ದಾರೆ. ಅಂದ ಹಾಗೆ ಇವರು ಬೆಳೆದಿರುವ ಮಾವಿನ ಕಾಯಿಯ ತೂಕ ಬರೋಬ್ಬರಿ 4.25 ಕೆಜಿ. ಈವರೆಗೆ ಇಷ್ಟೊಂದು ತೂಕದ ಮಾವಿನ ಕಾಯಿಯನ್ನು ಯಾರೂ ಬೆಳೆದಿಲ್ಲ. ಇದೀಗ ವಿಶ್ವದ ಅತ್ಯಂತ ಭಾರೀ ತೂಕದ ಮಾವು ಬೆಳೆದ ಜೋಡಿಯಾಗಿ ಇವರು ಹೊರ ಹೊಮ್ಮಿದ್ದಾರೆ. ಗಿನ್ನೆಸ್​ ರೆಕಾರ್ಡ್​ನಲ್ಲೂ ಇವರ ಹೆಸರು ಸೇರ್ಪಡೆಗೊಂಡಿದೆ.

ಈ ಹಿಂದೆ 2009ರಲ್ಲಿ ಪಿಲಿಫೈನ್ಸ್​ನಲ್ಲಿ 3.435 ಕೆಜಿ ತೂಕದ ಮಾವಿನ ಕಾಯಿಯನ್ನು ಬೆಳೆಯಲಾಗಿತ್ತು. ಆದರೆ ಕೊಲಂಬಿಯಾ ಈ ಜೋಡಿ ಆ ದಾಖಲೆಯನ್ನು ಮುರಿದಿದೆ.

ಕೊಲಂಬಿಯಾದ ಜನ ಕಷ್ಟಪಟ್ಟು ದುಡಿಯುತ್ತಾರೆ. ಪ್ರೀತಿ ಮತ್ತು ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ ಎನ್ನುವುದನ್ನು ಪೂರ್ತಿ ವಿಶ್ವಕ್ಕೆ ತೋರಿಸಬೇಕೆಂಬ ಆಸೆ ಇತ್ತು. ಅದು ಈ ಮೂಲಕ ನೆರವೇರಿತು ಎನ್ನುತ್ತದೆ ಈ ವಿಶೇಷ ಜೋಡಿ. (ಏಜೆನ್ಸೀಸ್)

(ಮಾಹಿತಿ ಕೃಪೆ ವಿಜಯವಾಣಿ)

ಗ್ರಾಹಕರಿಗೆ ಸಿಹಿ ಸುದ್ದಿ: ಕಮರ್ಷಿಯಲ್​ ಸಿಲಿಂಡರ್​ ದರದಲ್ಲಿ ಭಾರೀ ಇಳಿಕೆ

 


ದೇಶದ ಪ್ರಮುಖ ಪೆಟ್ರೋಲಿಯಂ ಕಂಪನಿಗಳಲ್ಲಿ ಎಲ್​​ಪಿಜಿ ಗ್ಯಾಸ್​ ತನ್ನ ಬೆಲೆಯನ್ನ ಕಡಿತ ಮಾಡಿದೆ. ಗ್ಯಾಸ್​ ಕಂಪನಿಗಳು ಕಮರ್ಷಿಯಲ್​ ಬಳಕೆಗೆ ಉಪಯೋಗಿಸಲ್ಪಡುವ 19 ಕೆಜಿ ಗ್ಯಾಸ್​ ಸಿಲಿಂಡರ್​ನ್ನ ಬೆಲೆಯಲ್ಲಿ 45.50 ರೂಪಾಯಿ ಕಡಿತಗೊಳಿಸಿದೆ. ಆದರೆ ಗೃಹೋಪಯೋಗಿ ಗ್ಯಾಸ್​ ಸಿಲಿಂಡರ್​ಗಳ ದರದಲ್ಲಿ ಯಾವುದೇ ವಿನಾಯಿತಿ ನೀಡಲಾಗಿಲ್ಲ.

ಗೃಹೋಪಯೋಗಿ ಸಿಲಿಂಡರ್​ ಅಂದರೆ 14 .2 ಕೆಜಿ ತೂಕವುಳ್ಳ ಗ್ಯಾಸ್​ ಸಿಲಿಂಡರ್​​ಗಳ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಏಪ್ರಿಲ್​ ತಿಂಗಳ ಮೊದಲ ಭಾಗದಲ್ಲಿ ಗೃಹೋಪಯೋಗಿ ಸಿಲಿಂಡರ್​ಗಳ ದರದಲ್ಲಿ 10 ರೂಪಾಯಿ ಕಡಿತ ಮಾಡಲಾಗಿತ್ತು.

ಇಂಡೇನ್​ ವೆಬ್​ಸೈಟ್​ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ ದೆಹಲಿಯಲ್ಲಿ 19 ಕೆಜಿ ಗ್ಯಾಸ್​ ಸಿಲಿಂಡರ್​ ಪರಿಷ್ಕೃತ ದರ 1641 ರೂಪಾಯಿ ಬದಲು 1595.50 ರೂಪಾಯಿ ಆಗಿದೆ. ಮುಂಬೈನಲ್ಲಿ 1590.50 ರೂಪಾಯಿಗಳ ಬದಲು ಇನ್ಮೇಲೆ 1545 ರೂಪಾಯಿ ಪಾವತಿಸಿದ್ರೆ ಸಾಕು. ಇನ್ನು ಕೊಲ್ಕತ್ತಾದಲ್ಲಿ 1713 ದರದಲ್ಲಿ ಇಳಿಕೆ ಮಾಡಿ 1667.50 ರೂಪಾಯಿ ನಿಗದಿ ಮಾಡಲಾಗಿದೆ.

2021ರಲ್ಲಿ ಗೃಹೋಪಯೋಗಿ ಸಿಲಿಂಡರ್​ಗಳ ದರದಲ್ಲಿ ಭಾರೀ ಏರಿಕೆ ಕಂಡು ಬಂದಿದೆ.

ಜನವರಿ ತಿಂಗಳಲ್ಲಿ ಈ ಸಿಲಿಂಡರ್​ ದರದಲ್ಲಿ ಅಷ್ಟೊಂದು ಬದಲಾವಣೆ ಉಂಟಾಗಿಲ್ಲ. ಆದರೆ ಫೆಬ್ರವರಿ 4ರಂದು 694 ರೂಪಾಯಿಯಿಂದ 25 ರೂಪಾಯಿ ಏರಿಕೆ ಮಾಡಿ 719 ರೂಪಾಯಿ ನಿಗದಿ ಮಾಡಲಾಗಿತ್ತು . ಇದಾದ ಬಳಿಕ 15 ಫೆಬ್ರವರಿಯಂದು ಸಿಲಿಂಡರ್​ ಬೆಲೆಯಲ್ಲಿ ಮತ್ತೆ 50 ರೂಪಾಯಿ ಏರಿಕೆ ಮಾಡಲಾಗಿತ್ತು. ಇದಾದ ಬಳಿಕ 25 ಫೆಬ್ರವರಿಯಲ್ಲಿ ಈ ದರ ಇನ್ನೊಮ್ಮೆ 25 ರೂಪಾಯಿಗೆ ಏರಿಕೆಯಾಗಿತ್ತು. ಮಾರ್ಚ್ 1ನೇ ತಾರೀಖಿನಂದು ಮತ್ತೆ 25 ರೂಪಾಯಿ ಏರಿಕೆ ಕಂಡು ಗೃಹೋಪಯೋಗಿ 819 ರೂಪಾಯಿ ಆಗಿತ್ತು. ಏಪ್ರಿಲ್​ ತಿಂಗಳಲ್ಲಿ ಸಿಲಿಂಡರ್​ ದರದಲ್ಲಿ 10 ರೂಪಾಯಿ ಇಳಿಕೆ ಆಗಿದ್ದರಿಂದ ಗೃಹೋಪಯೋಗಿ ಸಿಲಿಂಡರ್​​ ದರ 809 ರೂಪಾಯಿ ಆಗಿದೆ.

(ಮಾಹಿತಿ ಕೃಪೆ ಕನ್ನದುನಿಯ)

ಯಮುನಾ ನದಿಯಲ್ಲಿ ನೀರಿನ ಮಟ್ಟ ಕುಸಿತ: ದೆಹಲಿಯಲ್ಲಿ ಕುಡಿಯುವ ನೀರಿಗೆ ತೊಂದರೆ ಆತಂಕ

 

ನವದೆಹಲಿ: 'ಯಮುನಾ ನದಿಯಲ್ಲಿ ನೀರಿನ ಪ್ರಮಾಣ ಕುಸಿಯುತ್ತಿದೆ. ಇದರಿಂದಾಗಿ ದೆಹಲಿಯ ಹಲವೆಡೆ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಮುಂಬರುವ ದಿನಗಳಲ್ಲಿ ಇದು ಆಸ್ಪತ್ರೆಗಳ ಮೇಲೆಯೂ ಪರಿಣಾಮ ಬೀರಲಿದೆ' ಎಂದು ದೆಹಲಿ ಜಲ ಮಂಡಳಿಯ (ಡಿಜೆಬಿ) ಉಪಾಧ್ಯಕ್ಷ ರಾಘವ್ ಛಡ್ಡಾ ಶನಿವಾರ ತಿಳಿಸಿದ್ದಾರೆ.

'ಯಮುನಾ ನದಿಗೆ ನೀರು ಬಿಡುಗಡೆ ಮಾಡುವ ಮೂಲಕ ದೆಹಲಿಗೆ ಕುಡಿಯುವ ನೀರು ಲಭ್ಯವಾಗುವಂತೆ ಮಾಡಬೇಕು' ಎಂದು ರಾಘವ್‌ ಅವರು ಹರಿಯಾಣದ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್‌ ಅವರನ್ನು ಒತ್ತಾಯಿಸಿದ್ದಾರೆ.

'ಯಮುನಾದಲ್ಲಿ ನೀರಿನ ಮಟ್ಟ ಕುಸಿಯುತ್ತಿರುವ ಕಾರಣ ಮೂರು ನೀರು ಸಂಸ್ಕರಣಾ ಘಟಕಗಳಲ್ಲಿ ನೀರಿನ ಸಂಸ್ಕರಣೆ ಕಡಿಮೆಯಾಗಿದೆ. ಇದು ಹಲವಾರು ವಸತಿ ಪ್ರದೇಶಗಳಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯಕ್ಕೆ ಕಾರಣವಾಗಿದೆ' ಎಂದು ಅವರು ಹೇಳಿದ್ದಾರೆ.

'ಮುಂಬರುವ ದಿನಗಳಲ್ಲಿ ದೆಹಲಿಯ ಆಸ್ಪತ್ರೆಗಳಲ್ಲಿ ನೀರಿನ ಸಮಸ್ಯೆಗೂ ಇದು ಕಾರಣವಾಗಬಹುದು. ಕೋವಿಡ್‌ ಪ್ರಕರಣಗಳಿಂದ ತತ್ತರಿಸುವ ದೆಹಲಿಗೆ ನೀರು ಪೂರೈಸಿ ನೆರವು ನೀಡಬೇಕು' ಎಂದೂ ಅವರು ಟ್ವೀಟ್‌ ಮಾಡಿದ್ದಾರೆ. 

(ಮಾಹಿತಿ ಕೃಪೆ ಪ್ರಜಾವಾಣಿ)

ಪೂರ್ವ ಚೀನಾದಲ್ಲಿ ಬಿರುಗಾಳಿ: 11 ಸಾವು, 102 ಮಂದಿಗೆ ಗಾಯ

 

ಬೀಜಿಂಗ್‌: ಪೂರ್ವ ಚೀನಾದಲ್ಲಿರುವ ನಾಂಟೊಂಗ್‌ ನಗರದಲ್ಲಿ ಬೀಸಿದ ತೀವ್ರ ಬಿರುಗಾಳಿಯಿಂದಾಗಿ ಕಟ್ಟಡಗಳು ಕುಸಿದು, ಮರಗಳು ಉರುಳಿದ ಪರಿಣಾಮ, 11 ಮಂದಿ ಸಾವನ್ನಪ್ಪಿದ್ದು, 102 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

‌ಚೀನಾದ ಪೂರ್ವ ಪ್ರಾಂತ್ಯ ಜಿಯಾಂಗ್ಸುವಿನಲ್ಲಿರುವ ನಾಂಟೊಂಗ್ ನಗರದಲ್ಲಿ ಶುಕ್ರವಾರ ರಾತ್ರಿ ತೀವ್ರವಾಗಿ ಹವಾಮಾನ ಏರುಪೇರಾದ ಪರಿಣಾಮ, ಯಾಂಗ್ಜಿ ನದಿಮುಖಜ ಭೂಮಿ ಮುಳುಗಡೆಯಾಗಿ, ಈ ಅನಾಹುತ ಸಂಭವಿಸಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಈ ಪ್ರಕೃತಿ ವಿಕೋಪದಿಂದ ಸಂಕಷ್ಟದಲ್ಲಿ ಸಿಲುಕಿದ್ದ 3,050 ಮಂದಿಯನ್ನು ರಕ್ಷಿಸಲಾಗಿದೆ ಎಂದು ಸ್ಥಳೀಯ ಸರ್ಕಾರ ತಿಳಿಸಿದೆ.

ಗಂಟೆಗೆ 162 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದ್ದರಿಂದ ಮೀನುಗಾರರ ದೋಣಿಗಳು ಉರುಳಿದವು. ಘಟನೆಯಲ್ಲಿ ಇಬ್ಬರು ನಾವಿಕರನ್ನು ರಕ್ಷಿಸಲಾಗಿದೆ. ಉಳಿದ ಒಂಬತ್ತು ಸಿಬ್ಬಂದಿ ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಿದೆ.

(ಮಾಹಿತಿ ಕೃಪೆ ಪ್ರಜಾವಾಣಿ)

ಬಿಜೆಪಿ MLC ಹರಿ ನಾರಾಯಣ ಚೌಧರಿ ಕೋವಿಡ್‍ಗೆ ಬಲಿ

ಪಾಟ್ನಾ: ಬಿಹಾರ ಬಿಜೆಪಿ ಎಂಎಲ್ಸಿ ಹರಿ ನಾರಾಯಣ್ ಚೌಧರಿ ಮಹಾಮಾರಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.
ಕೋವಿಡ್ ಪಾಸಿಟಿವ್ ಸೋಂಕು ದೃಢ ಪಟ್ಟಿದ್ದರಿಂದ 1 ವಾರದ ಹಿಂದೆ ಇಂದಿರಾಗಾಂಧಿ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ಬಿಹಾರ ವಿಧಾನ ಪರಿಷತ್ ಸಭಾಧ್ಯಕ್ಷ ಅವದೇಶ್ ನರೈನ್ ಸಿಂಗ್ ಹೇಳಿದ್ದಾರೆ.
77 ವರ್ಷದ ಚೌಧರಿ 2015 ರಲ್ಲಿ ಸಮಸ್ತಿಪುರ ಸ್ಥಳೀಯ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಇನ್ನು ನಾರಾಯಣ ಅವರ ನಿಧನಕ್ಕೆ ಸಿಎಂ ನಿತೀಶ್ ಕುಮಾರ್ ಕೂಡ ಸಂತಾಪ ಸೂಚಿಸಿದ್ದಾರೆ.

ಚೌಧರಿ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂರು ಪುತ್ರಿಯರನ್ನು ಅಗಲಿದ್ದಾರೆ. ಸರ್ಕಾರದ ಸಕಲ ಗೌರವಗಳೊಂದಿಗೆ ಮುಕ್ತಿಧಾಮದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ.

(ಮಾಹಿತಿ ಕೃಪೆ ಉದಯವಾಣಿ )

SBI ಗ್ರಾಹಕರೇ ಗಮನಿಸಿ: KYC ನವೀಕರಿಸದಿದ್ರೆ, ನಿಮ್ಮ ಖಾತೆ ಫ್ರೀಜ್ ಮಾಡೋದಿಲ್ಲ.. ಮನೆಯಿಂದ್ಲೇ ಈ ಕೆಲ್ಸ ಮಾಡಿ

 

ಡಿಜಿಟಲ್‌ ಡೆಸ್ಕ್:‌ ಕೊರೊನಾ ಸೋಂಕಿನ ನಡುವೆ ಸಾವಿರಾರು ಗ್ರಾಹಕರಿಗೆ ಎಸ್‌ಬಿಐ ಬಿಗ್‌ ರಿಲೀಫ್ ನೀಡಿದ್ದು, ಕೆವೈಸಿ ವಿವರಗಳನ್ನ ನವೀಕರಿಸಲು ಗ್ರಾಹಕರು ಶಾಖೆಗಳಿಗೆ ಭೇಟಿ ನೀಡಬೇಕಿಲ್ಲ ಎಂದಿದೆ. ಈ ಮೂಲಕ ಬ್ಯಾಂಕ್ ಗ್ರಾಹಕರು ತಮ್ಮ ಕೆವೈಸಿ ನಿಯಮಗಳನ್ನ ನವೀಕರಿಸಲು ಪೋಸ್ಟ್ ಅಥವಾ ನೋಂದಾಯಿತ ಇಮೇಲ್ ಮೂಲಕ ಅಗತ್ಯ ವಿವರಗಳನ್ನ ಕಳುಹಿಸಬಹುದು.

'ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ಅನೇಕ ರಾಜ್ಯಗಳು ಲಾಕ್ಡೌನ್ ಹೇರಿರುವ ಹಿನ್ನೆಲೆಯಲ್ಲಿ, ಪೋಸ್ಟ್ ಅಥವಾ ನೋಂದಾಯಿತ ಇಮೇಲ್ ಮೂಲಕ ಸ್ವೀಕರಿಸಿದ ದಾಖಲೆಗಳ ಆಧಾರದ ಮೇಲೆ ಕೆವೈಸಿ ಅಪ್ ಡೇಶನ್ ನಡೆಸಲು ನಿರ್ಧರಿಸಲಾಗಿದೆ' ಎಂದು ಭಾರತದ ಅತಿದೊಡ್ಡ ಬ್ಯಾಂಕ್ ಟ್ವೀಟ್ನಲ್ಲಿ ತಿಳಿಸಿದೆ.

ಕೆವೈಸಿ ಅಪ್ಡೇಶನ್ ಉದ್ದೇಶಕ್ಕಾಗಿ ಗ್ರಾಹಕರು ವೈಯಕ್ತಿಕವಾಗಿ ಶಾಖೆಗೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ಬ್ಯಾಂಕ್ ಉಲ್ಲೇಖಿಸಿದೆ. ಕೆವೈಸಿ ದಾಖಲೆಗಳನ್ನ ಮೇ 31ರವರೆಗೆ ನವೀಕರಿಸದಿದ್ದರೆ, ಎಸ್ ಬಿಐ ಖಾತೆಗಳನ್ನು ಸ್ಥಗಿತಗೊಳಿಸುವುದಿಲ್ಲ' ಎಂದು ಬ್ಯಾಂಕ್ ಭರವಸೆ ನೀಡಿದೆ. ಕೆವೈಸಿ ಅಪ್ಡೇಶನ್ʼಗೆ ಬಾಕಿ ಇರುವ ಸಿಐಎಫ್ ಗಳನ್ನ ಭಾಗಶಃ ಸ್ಥಗಿತಗೊಳಿಸುವುದನ್ನ 2021ರ ಮೇ 31ರವರೆಗೆ ಮಾಡಲಾಗುವುದಿಲ್ಲ' ಎಂದು ಬ್ಯಾಂಕ್‌ ತಿಳಿಸಿದೆ.

ಅಂದ್ಹಾಗೆ, ಬ್ಯಾಂಕುಗಳು ನಿಯತಕಾಲಿಕವಾಗಿ ತಮ್ಮ ಗ್ರಾಹಕರ ಕೆವೈಸಿ ವಿವರಗಳನ್ನ ನವೀಕರಿಸುತ್ತವೆ. ಕೆವೈಸಿ ದಾಖಲೆಗಳನ್ನ ನವೀಕರಿಸಲು, ಎಸ್ ಬಿಐ ಗ್ರಾಹಕರು ಈ ಕೆಳಗಿನ ಯಾವುದೇ ದಾಖಲೆಗಳನ್ನು ಸಲ್ಲಿಸಬೇಕು: 1) ಪಾಸ್ ಪೋರ್ಟ್, 2) ಮತದಾರರ ಗುರುತಿನ ಚೀಟಿ, 3) ಚಾಲನಾ ಪರವಾನಗಿ, 4) ಆಧಾರ್ ಪತ್ರ/ಕಾರ್ಡ್, 5) ನರೇಗಾ ಕಾರ್ಡ್, 6) ಪ್ಯಾನ್ ಕಾರ್ಡ್.

10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತ ಗ್ರಾಹಕರಿಗೆ, ಖಾತೆಯನ್ನ ನಿರ್ವಹಿಸುವ ವ್ಯಕ್ತಿಯ ಗುರುತಿನ ದಾಖಲೆ (ಐಡಿ) ಪುರಾವೆಯನ್ನ ಬ್ಯಾಂಕಿಗೆ ಸಲ್ಲಿಸಬೇಕಾಗುತ್ತದೆ. ಬ್ಯಾಂಕ್ ಖಾತೆಯನ್ನ ಸ್ವತಃ ನಿರ್ವಹಿಸುವ ಅಪ್ರಾಪ್ತ ವಯಸ್ಕರು, ಗುರುತಿಸುವಿಕೆ ಅಥವಾ ವಿಳಾಸ ಪರಿಶೀಲನೆಗಾಗಿ ಯಾವುದೇ ಕೆವೈಸಿ ದಾಖಲೆಗಳನ್ನು ಹಾಜರು ಪಡಿಸಬಹುದು.

ಅನಿವಾಸಿ ಭಾರತೀಯರು (ಅನಿವಾಸಿ ಭಾರತೀಯರು) ಕೆವೈಸಿ ನಿಯಮಗಳನ್ನು ಪೂರ್ಣಗೊಳಿಸಲು ಪಾಸ್ ಪೋರ್ಟ್ ಅಥವಾ ನಿವಾಸ ವೀಸಾ ಪ್ರತಿಗಳನ್ನು ಸಲ್ಲಿಸಬಹುದು. ನಿವಾಸ ವೀಸಾ ಪ್ರತಿಗಳನ್ನು ವಿದೇಶಿ ಕಚೇರಿಗಳು, ನೋಟರಿ, ಭಾರತೀಯ ರಾಯಭಾರ ಕಚೇರಿ, ವರದಿಗಾರ ಬ್ಯಾಂಕುಗಳ ಅಧಿಕಾರಿಗಳು ದೃಢೀಕರಿಸಬೇಕು, ಅವರ ಸಹಿಗಳನ್ನು ಎಸ್ ಬಿಐನ ಅಧಿಕೃತ ಶಾಖೆಯ ಮೂಲಕ ಪರಿಶೀಲಿಸಬಹುದು ಎಂದು ಸಾಲದಾತ ಈ ಹಿಂದೆ ಉಲ್ಲೇಖಿಸಿದ್ದಾರೆ.

ಅಂದ್ಹಾಗೆ, ಕಳೆದ ವರ್ಷ, ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕುಗಳು, ಸಾಲ ನೀಡುವ ಸಂಸ್ಥೆಗಳು ಮತ್ತು ಫಿನ್ ಟೆಕ್ ಕಂಪನಿಗಳಿಗೆ ವೀಡಿಯೊ ಆಧಾರಿತ ಕೆವೈಸಿ ಮೂಲಕ ದೂರದಿಂದ ಗ್ರಾಹಕರಿಗೆ ಅನುಮತಿಸಿತು. ಗ್ರಾಹಕರು ಇನ್ನು ಮುಂದೆ ಭೌತಿಕ ದಾಖಲೆ ಮತ್ತು ಕೆವೈಸಿ ವಿವರಗಳ ಪರಿಶೀಲನೆಗಾಗಿ ಶಾಖೆಗಳು ಅಥವಾ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಕೇಂದ್ರ ಬ್ಯಾಂಕ್ ಗ್ರಾಹಕನ ಲೈವ್ ಫೋಟೋ ಮತ್ತು ಅವನ ಅಥವಾ ಅವಳ ಅಧಿಕೃತವಾಗಿ ಮಾನ್ಯವಾದ ದಾಖಲೆಯನ್ನ ಗುರುತಿಸುವ ಪುರಾವೆಯಾಗಿ ಬಳಸಲು ಅನುಮತಿಸಿತು.

(ಮಾಹಿತಿ ಕೃಪೆ Kannada News Now )

'ಬಿಜೆಪಿ ಸರ್ಕಾರ' ಕೊರೋನಾ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಿ, ಇಲ್ಲವೇ ಅಧಿಕಾರ ಬಿಟ್ಟು ತೊಲಗಲಿ - ಸಿದ್ದರಾಮಯ್ಯ

 

ಬೆಂಗಳೂರು : ನಿತ್ಯ ಕೊರೊನಾ ಸೋಂಕು ಮಿತಿಮೀರಿ ಏರಿಕೆಯಾಗುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಸರ್ಕಾರದ ನಾಯಕರು ಕೊರೊನಾ ಸೋಂಕು ತಡೆಗಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡಲಿ, ಇಲ್ಲವೇ ಅಧಿಕಾರ ಬಿಟ್ಟು ತೊಲಗಲಿ. ಸರ್ಕಾರದ ಅದಕ್ಷತೆ ಹಾಗೂ ದುರಾಡಳಿತಕ್ಕೆ ಅಮಾಯಕ ಜನರು ಬಲಿಯಾಗುವುದು ಬೇಡ ಎಂಬುದಾಗಿ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ಕುರಿತಂತೆ ಸರಣಿ ಟ್ವಿಟ್ ಮಾಡಿರುವಂತ ಅವರು, ಟಿವಿಯಲ್ಲಿ ಕಾಣಿಸಿಕೊಂಡು ವೀರಾವೇಶದಿಂದ 18ರಿಂದ 45 ವಯಸ್ಸಿನವರಿಗೆ ಮೇ ಒಂದರಿಂದ ಲಸಿಕೆಯ ಘೋಷಣೆ ‌ಮಾಡಿದವರು‌ ಪ್ರಧಾನಿ ನರೇಂದ್ರ ಮೋದಿ. ಈಗ ರಾಜ್ಯದ ಬಿಜೆಪಿ ಸರ್ಕಾರ ಲಸಿಕೆಯನ್ನು ಮುಂದೂಡಿದೆ. ಮಾತಿನ ಶೂರ ಮೋದಿಯವರು ಎಲ್ಲಿದ್ದಾರೆ ಈಗ? ಎಂದು ಪ್ರಶ್ನಿಸಿದ್ದಾರೆ.

18 ರಿಂದ 25 ವರ್ಷ ವಯಸ್ಸಿನವರಿಗೆ ಲಸಿಕೆ ನೀಡಲು ರಾಜ್ಯ ಬಿಜೆಪಿ ಸರ್ಕಾರ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಪ್ರಧಾನಿಯವರಿಗೆ ಗೊತ್ತಿರಲಿಲ್ಲವೇ? ಮುಖ್ಯಮಂತ್ರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿಲ್ಲವೇ? ಮಾತು ತಪ್ಪಿದ ಪ್ರಧಾನಿ ನರೇಂದ್ರ ಮೋದಿ ಟಿವಿಯಲ್ಲಿ‌ ಕಾಣಿಸಿಕೊಂಡು ನಿಜ‌ಸಂಗತಿ ತಿಳಿಸಿ ದೇಶದ ಜನತೆಯಲ್ಲಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಲಸಿಕೆ ಪಡೆದುಕೊಳ್ಳಲು ಆನ್‌ಲೈನ್ ಮೂಲಕ ಜನರು ಹೆಸರನ್ನು ನೋಂದಣಿ ಮಾಡಬೇಕು. ಗ್ರಾಮೀಣ ಭಾಗದ ಜನರಿಗೆ ಈ ಆನ್‌ಲೈನ್ ನೋಂದಣಿ ಕಷ್ಟದ ಕೆಲಸ, ಹೀಗಾಗಿ ಕೊರೊನಾ ಲಸಿಕೆ ನೀಡುವುದನ್ನು ಪೋಲಿಯೋ ಲಸಿಕೆ ಮಾದರಿಯಲ್ಲೆ ಒಂದು ಅಭಿಯಾನವಾಗಿ ರೂಪಿಸಿ, ಜನರ ಬಳಿಗೆ ಹೋಗಿ ಲಸಿಕೆ ನೀಡಬೇಕು ಎಂದು ತಿಳಿಸಿದ್ದಾರೆ.  ಸರ್ಕಾರದ ಮುಖ್ಯಕಾರ್ಯದರ್ಶಿಯವರ ಜೊತೆ ಲಸಿಕೆ ವಿಚಾರವಾಗಿ ಚರ್ಚಿಸಿದ್ದೇನೆ. ಆರುವರೆ ಕೋಟಿ ಲಸಿಕೆಯ ಅಗತ್ಯವಿದೆ ಎಂದಿದ್ದಾರೆ. ನನ್ನ ಪ್ರಕಾರ ಈ ತಿಂಗಳ ಅಂತ್ಯದ ಒಳಗೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವುದನ್ನು ಪ್ರಾರಂಭಿಸಲು ಸಾಧ್ಯವಾಗದು. ಬೇಗ ಸಿಕ್ಕಿದ್ದರೆ ಸೋಂಕು ಇನ್ನಷ್ಟು ಕಡಿಮೆಯಾಗುತ್ತಿತ್ತು ಎಂದಿದ್ದಾರೆ.

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಲಸಿಕೆ ತಯಾರಿಕೆ ಸಂಬಂಧ 162 ಯುನಿಟ್ ಗಳಿಗೆ ಕೇಂದ್ರ ಸರ್ಕಾರ ಟೆಂಡರ್ ಕರೆದಿತ್ತು, ಈ ಪೈಕಿ 30 ಯುನಿಟ್ ಗಳಷ್ಟೇ ಕಾರ್ಯಾರಂಭ ಮಾಡಿವೆ. ದೇಶದಲ್ಲಿ ಲಸಿಕೆಯ ಅಭಾವ ಉಂಟಾಗಲು ಇದೇ ಮುಖ್ಯ ಕಾರಣ. ಒಟ್ಟಿನಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ನಾಯಕರ ತಾತ್ಸಾರ ಧೋರಣೆಗೆ ಜನ ಜೀವ ತೆರುವಂತಾಗಿದೆ ಎಂದು ಕಿಡಿಕಾರಿದ್ದಾರೆ.  45 ವರ್ಷ ಮೇಲ್ಪಟ್ಟವರಿಗೆ ನೀಡುವ ಲಸಿಕೆಗಷ್ಟೇ ಕೇಂದ್ರ ಸರ್ಕಾರ ಹಣ ಕೊಡುವುದು, ಅದಕ್ಕಿಂತ ಕೆಳಗಿನ ವಯೋಮಾನದ ಜನರಿಗೆ ನೀಡುವ ಲಸಿಕೆಗೆ ರಾಜ್ಯಗಳೇ ಹಣ ಹಾಕಬೇಕು. ಸದ್ಯದ ಪರಿಸ್ಥಿತಿಯಲ್ಲಿ ಲಸಿಕೆ ಪಡೆಯುವುದೊಂದೆ ಸೋಂಕು ತಡೆಗಟ್ಟಲು ಇರುವ ದಾರಿ, ಹೀಗಾಗಿ ರಾಜ್ಯ ಸರ್ಕಾರ ವಿಳಂಬ ಮಾಡದೆ ಎಲ್ಲರಿಗೂ ಲಸಿಕೆ ನೀಡಬೇಕು ಎಂದು ಹೇಳಿದ್ದಾರೆ.
ಈ ವರೆಗೆ 45 ವರ್ಷ ಮೇಲ್ಪಟ್ಟ ಶೇ.25 ಜನರಿಗಷ್ಟೇ ಕೊರೊನಾ ಲಸಿಕೆ ನೀಡಲಾಗಿದೆ. ನಮ್ಮಲ್ಲೇ ಲಸಿಕೆಯ ಅಗತ್ಯತೆ ಹೆಚ್ಚಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಗಳಿಗೆ 6 ಕೋಟಿ ಲಸಿಕೆ ನೀಡಿ ಭಾರತೀಯರು ಲಸಿಕೆಗಾಗಿ ಪರದಾಡುವಂತೆ ಮಾಡಿದ್ದಾರೆ. ಸೋಂಕು ಹರಡಲು ಇದೂ ಒಂದು ಕಾರಣ ಎಂದಿದ್ದಾರೆ. ನಿತ್ಯ ಕೊರೊನಾ ಸೋಂಕು ಮಿತಿಮೀರಿ ಏರಿಕೆಯಾಗುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ನಾಯಕರು ಕೊರೊನಾ ಸೋಂಕು ತಡೆಗಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡಲಿ, ಇಲ್ಲವೇ ಅಧಿಕಾರ ಬಿಟ್ಟು ತೊಲಗಲಿ. ಸರ್ಕಾರದ ಅದಕ್ಷತೆ ಹಾಗೂ ದುರಾಡಳಿತಕ್ಕೆ ಅಮಾಯಕ ಜನರು ಬಲಿಯಾಗುವುದು ಬೇಡ ಎಂದು ತಿಳಿಸಿದ್ದಾರೆ.  ರಾಜ್ಯ ಕಾಂಗ್ರೆಸ್ ಪಕ್ಷವು ಬಡರೋಗಿಗಳಿಗಾಗಿ 10 ಆಂಬುಲೆನ್ಸ್ ಗಳನ್ನು ವ್ಯವಸ್ಥೆಗೊಳಿಸಿ ಅವುಗಳ ಮೂಲಕ ಉಚಿತ ಸೇವೆ ನೀಡುತ್ತಿದೆ ಹಾಗೂ ಕೊರೊನಾ ಸಹಾಯವಾಣಿಯನ್ನು ತೆರೆದು ಸಂಕಷ್ಟದಲ್ಲಿರುವವರಿಗೆ ಅಗತ್ಯ ನೆರವು ನೀಡುತ್ತಿದೆ. ನಮ್ಮ ಪಕ್ಷದ ಶಾಸಕರು, ಮುಖಂಡರು, Imageಕಾರ್ಯಕರ್ತರು ಇಂಥಾ ಸಂಕಷ್ಟದ ಸಮಯದಲ್ಲಿ ಜನರ ಜೊತೆ ನಿಂತು, ನೆರವಾಗಬೇಕು ಎಂದಿದ್ದಾರೆ.
(ಮಾಹಿತಿ ಕೃಪೆ Kannada News Now )

ಕೇಂದ್ರ, ರಾಜ್ಯ ಸರ್ಕಾರಗಳು ಇನ್ನಾದ್ರೂ ನಿದ್ದೆಯಿಂದ ಎದ್ದು ಕೆಲಸ ಮಾಡಬೇಕು-ಸೋನಿಯಾ ಗಾಂಧಿ ಕಿಡಿ!

 
ನವದೆಹಲಿ: ದೇಶದಲ್ಲಿ ಕೊರೋನಾ ವಿರಾಟರೂಪ ತಾಳಿದ್ದು, ಇಂದು ಬರೋಬ್ಬರಿ 4 ಲಕ್ಷ ಭಾರತೀಯರು ಸೋಂಕಿಗೆ ತುತ್ತಾಗಿದ್ದಾರೆ. ದೇಶದ ಬಹುತೇಕ ರಾಜ್ಯಗಳಲ್ಲಿ ಲಾಕ್​ಡೌನ್​, ಕರ್ಫ್ಯೂ ಹೇರಲಾಗಿದ್ದರು ಸೋಂಕು ನಿಯಂತ್ರಕ್ಕೆ ಬರುತ್ತಿಲ್ಲ. ಇಂದಿನಿಂದ ವಯಸ್ಕರೆಲ್ಲರಿಗೂ ಲಸಿಕೆ ಎಂದು ಕೇಂದ್ರ ಸರ್ಕಾರ ಹೇಳಿದ್ದರೂ ಎಲ್ಲಾ ರಾಜ್ಯಗಳಲ್ಲಿ ಅದು ಅನುಷ್ಠಾನಕ್ಕೆ ಬಂದಿಲ್ಲ. ಈ ಹಿನ್ನೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ ವರಿಷ್ಠೆ ಸೋನಿಯಾ ಗಾಂಧಿ ಹರಿಹಾಯ್ದಿದ್ದಾರೆ. ಇನ್ನಾದರೂ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ನಿದ್ದೆಯಿಂದ ಎದ್ದು ಕೆಲಸ ಮಾಡಬೇಕು. ತಮ್ಮ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸದಿದ್ದರೆ ಪರಿಸ್ಥಿತಿ ಇನ್ನೂ ಬಿಗಡಾಯಿಸಲಿದೆ ಎಂದು ಎಚ್ಚರಿಸಿದ್ದಾರೆ.

ವಿಡಿಯೋ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಸೋನಿಯಾ ಗಾಂಧಿ ಚಾಟಿ ಬೀಸಿದ್ದಾರೆ. ಕೋವಿಡ್​ ಪರಿಸ್ಥಿತಿಯನ್ನು ನಿಭಾಯಿಸಲು ರಾಷ್ಟ್ರೀಯ ನೀತಿಯನ್ನು ರೂಪಿಸಿ ಎಂದು ಸೋನಿಯಾ ಗಾಂಧಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಲಾಕ್​ಡೌನ್​ನಿಂದ ಜನ ಉದ್ಯೋಗ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ದೇಶದ ಬಡ ಕುಟುಂಬಗಳಿಗೆ 6 ಸಾವಿರ ರೂ. ಹಣವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ದೇಶ ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸುತ್ತಿರುವ ವೇಳೆ ಕಾಳಸಂತೆ ಸಕ್ರಿಯವಾಗಿದೆ. ವೈದ್ಯಕೀಯ ಉಪಕರಣಗಳು, ಔಷಧಿಗಳನ್ನು ದುಬಾರಿ ಬೆಲೆಗೆ ಮಾರುತ್ತಿರುವುದು ಹೆಚ್ಚಾಗಿದೆ. ಸರ್ಕಾರಗಳನ್ನು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಈ ಕೋವಿಡ್​ ಯುದ್ಧದಲ್ಲಿ ಕೇಂದ್ರ ಸರ್ಕಾರದ ಜೊತೆ ಕಾಂಗ್ರೆಸ್​ ಪಕ್ಷ ನಿಲ್ಲುತ್ತದೆ. ಒಟ್ಟಾಗಿ ನಾವು ಈ ಹೋರಾಟದಲ್ಲಿ ಗೆಲುವು ಸಾಧಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ದೇಶದಲ್ಲಿಂದು 4,01,993 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 2,99,988 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ 1,91,64,969ಕ್ಕೆ ಏರಿಕೆ ಆಗಿದೆ.‌ ಇದಲ್ಲದೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದ್ದು ದೇಶದಲ್ಲಿ ಇದೀಗ ದಿನ ಒಂದರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ‌ ಸಾವನ್ನಪ್ಪುತ್ತಿದ್ದಾರೆ. ಶುಕ್ರವಾರ 3,523 ಜನರು ಬಲಿ ಆಗಿದ್ದು ಈವರೆಗೆ ಮಹಾಮಾರಿ ಕೊರೋನಾಗೆ ಬಲಿ ಆದವರ ಸಂಖ್ಯೆ 2,11,853ಕ್ಕೆ ಏರಿಕೆ ಆಗಿದೆ.

(ಮಾಹಿತಿ ಕೃಪೆ News18 ಕನ್ನಡ )

ದುಡಿಯುವ ಕೈಗಳಿಂದ ಕೆಲಸ ಕಸಿದುಕೊಂಡ ಕೊರೋನ : ಕಾರ್ಮಿಕರ ಅಳಲು

 

ಮಂಗಳೂರು, ಮೇ 1: ನಾವು ಮೈ ಮುರಿದು ದುಡಿದು ತಿನ್ನುವವರು. ವಾರದ ರಜೆಯ ಹೊರೆತು ಇತರ ದಿನಗಳಲ್ಲಿ ರಜೆ ಹಾಕಿ ಗೊತ್ತೇ ಇಲ್ಲ. ಆದರೆ, ಈ ಕೊರೋನ-ಲಾಕ್‌ಡೌನ್ ನಮ್ಮಂತಹವರ ದುಡಿಯುವ ಕೈಗಳಿಂದ ಕೆಲಸವನ್ನು ಕಸಿದುಕೊಂಡಿದೆ. ಸದ್ಯ ಊಟಕ್ಕೇನೂ ತೊಂದರೆ ಇಲ್ಲ. ಆದರೆ ಮನೆ ಬಾಡಿಗೆ, ವಿದ್ಯುತ್ ಬಿಲ್, ನೀರಿನ ಬಿಲ್, ಅಡುಗೆ ಅನಿಲಕ್ಕೆ ಹಣ ಬೇಕಲ್ಲ. ದುಡಿದರೆ ಮಾತ್ರ ಹಣ ನಮ್ಮ ಕೈ ಸೇರುತ್ತದೆ. ದುಡಿಯದೇ ಇದ್ದರೆ ನಿಗದಿತ ದಿನಗಳಲ್ಲಿ ಬರುವ ಆ ಬಿಲ್‌ಗಳು, ಮನೆಬಾಡಿಗೆಯನ್ನು ಹೇಗೆ ಪಾವತಿಸಲಿ ? ಇದು ನಗರ ಮಾತ್ರವಲ್ಲ ಗ್ರಾಮಾಂತರ ಪ್ರದೇಶದ ಕಾರ್ಮಿಕರು ಮುಂದಿಡುವ ಪ್ರಶ್ನೆಗಳು. ಅಷ್ಟೇ ಅಲ್ಲ, ನೂರಾರು ಕಾರ್ಮಿಕರ ಅಳಲೂ ಇದೇ ಆಗಿದೆ.

'ನಾನು ಮೇಸ್ತ್ರಿಯೊಬ್ಬರ ಬಳಿ ಹೆಲ್ಪರ್ ಆಗಿ ಊರು ಅಥವಾ ಹತ್ತಿರದ ಊರಿಗೆ ಹೋಗಿ ಕೆಲಸ ಮಾಡುತ್ತಿದ್ದೆ. ಕೋವಿಡ್ ಕರ್ಫ್ಯೂ ಹೇರಿದ ಬಳಿಕ ಒಂದೆರೆಡು ದಿನ ಊರಲ್ಲೇ ಕೆಲಸ ಮಾಡಿದೆ. ಈಗ ಊರಲ್ಲಿ ಕೆಲಸವಿಲ್ಲ. ಬೇರೆ ಕಡೆ ಕಟ್ಟಡ ನಿರ್ಮಾಣದ ಕೆಲಸವಿದ್ದರೂ ಬಸ್ಸಿನಲ್ಲಿ ಹೋಗವೇಕಿದೆ. ಆದರೆ ಬಸ್ಸೇ ಇಲ್ಲದ ಮೇಲೆ ಹೋಗುವುದು ಯಾಕೆ ? ರಿಕ್ಷಾ ಮತ್ತಿತರ ವಾಹನಗಳಲ್ಲಿ ಹೋಗಿ ಬರುವುದು ಅಷ್ಟು ಸುಲಭದ ವಿಷಯವಲ್ಲ. ದುಡಿದದ್ದೆಲ್ಲವೂ ವಾಹನಗಳ ಬಾಡಿಗೆಗೆ ಕೊಡಬೇಕಾದೀತು. ಹಾಗಾಗಿ ಕೆಲಸವಿದ್ದೂ ಕೆಲಸ ಮಾಡಲಾಗದಂತಹ ಸ್ಥಿತಿ ನಮ್ಮದಾಗಿದೆ. ಕಳೆದ ವರ್ಷದ ಕೊರೋನವೇ ನಮ್ಮನ್ನು ಹಿಂಡಿ ಹಿಪ್ಪೆ ಮಾಡಿತ್ತು. ಇದೀಗ ಈ ಬಾರಿಯ ಕೊರೋನ ನಮ್ಮೆಲ್ಲರ ನೆಮ್ಮದಿ ಕೆಡಿಸಿದೆ. ದುಡಿಯುವ ಶಕ್ತಿ ಮತ್ತು ಮನಸ್ಸಿದ್ದರೂ ಕೂಡ ಕೆಲಸ ಮಾಡಲಾಗದ ವಾತಾವರಣ ಸೃಷ್ಟಿಯಾಗಿದೆ ಎಂದು ಗ್ರಾಮಾಂತರ ಪ್ರದೇಶದ ಕಟ್ಟಡ ನಿರ್ಮಾಣ ಕಾರ್ಮಿಕ ಗೋಪಾಲಕೃಷ್ಣ ಅಭಿಪ್ರಾಯಪಡುತ್ತಾರೆ.

ಕೇವಲ ದಿನಗೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಮಾತ್ರವಲ್ಲದೆ ಆಟೋ ರಿಕ್ಷಾ ಚಾಲಕರು, ಖಾಸಗಿ ಬಸ್ಸಿನ ಚಾಲಕರು, ನಿರ್ವಾಹಕರು, ಇತರ ಬಾಡಿಗೆ ವಾಹನಗಳ ಚಾಲಕರ ಸ್ಥಿತಿಯೂ ಇದೇ ರೀತಿಯಾಗಿದೆ. ಸರಕಾರ ಕೊರೋನ ನಿಗ್ರಹಕ್ಕಾಗಿ ಲಾಕ್‌ಡೌನ್ ಹೇರುತ್ತದೆ. ಆದರೆ ಅದರಿಂದ ನಮ್ಮಂತಹವರ ಬದುಕು ಯಾವ ರೀತಿ ಆಗಲಿದೆ ಎಂಬುದನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳುವುದಿಲ್ಲ. ದುಡಿದರಷ್ಟೇ ನಮಗೆ ನೆಮ್ಮದಿ. ಕಳೆದ 'ಕಾರ್ಮಿಕ ದಿನಾಚರಣೆ'ಯಂದು ಕೂಡ ಕೊರೋನ ನಮ್ಮ ಬದುಕಿಗೆ ಕೊಳ್ಳಿ ಇಟ್ಟಿತು. ಈ ಬಾರಿಯೂ ಅದೇ ಸ್ಥಿತಿ. ಈ ಕೊರೋನ ನಮ್ಮನ್ನು ಯಾವಾಗ ಬಿಟ್ಟು ಹೋಗುತ್ತದೋ ಏನೋ? ಎಂದು ಕಾರ್ಮಿಕ ಮಜೀದ್ ಅವರ ಚಿಂತೆಯಾಗಿದೆ.

ನಾನು ಮರಳುಗಾರಿಕೆಯ ಕೆಲಸ ಮಾಡುತ್ತಿದ್ದೇನೆ. ನಮ್ಮಿಂದಿಗೆ ಉತ್ತರ ಭಾರತದ ಹಲವಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕೊರೋನ-ಲಾಕ್‌ಡೌನ್‌ನಿಂದ ಭಯಗೊಂಡ ಹಲವಾರು ಮಂದಿ ತವರೂರಿಗೆ ಮರಳಿದ್ದಾರೆ. ಇದೀಗ ಕೆಲಸಗಾರರ ಕೊರತೆ ಇದೆ. ಹಾಗಾಗಿ ಮರಳು ಗುತ್ತಿಗೆದಾರರು ಮರಳು ತೆಗೆಯಲು ಆಸಕ್ತಿ ವಹಿಸುತ್ತಿಲ್ಲ. ನಮಗೆ ಕೆಲಸ ಮಾಡಲು ಮನಸ್ಸಿದ್ದರೂ ಕಡಿಮೆ ಜನರಿದ್ದ ಕಾರಣ ನಮಗೂ ಕೆಲಸ ಇಲ್ಲದಂತಾಗಿದೆ. ಮರಳು ಪೂರೈಕೆ ಕಡಿಮೆಯಾದರೆ ನಿರ್ಮಾಣ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಅಲ್ಲಿನ ಕಾರ್ಮಿಕರಿಗೂ ಕೆಲಸ ಇಲ್ಲದಂತಾಗಿದೆ ಎಂದು ದಯಾನಂದ್ ಎಂಬವರು ಅಭಿಪ್ರಾಯಪಡುತ್ತಾರೆ.

ನಾನು ನನ್ನ ಮನೆಯಿಂದ 7 ಕಿ.ಮೀ. ದೂರದಲ್ಲಿರುವ ಒಂದು ಮನೆ ನಿರ್ಮಾಣದ ಕೆಲಸ ಮಾಡುತ್ತಿದ್ದೆ. ನಮಗೆ ಅಲ್ಲೇ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಗುತ್ತಿಗೆದಾರರಿಗೆ ಸೂಚಿಸಿದ್ದಾರೆ. ಆದರೆ ನಮಗೆ ಅಲ್ಲೇ ವಸತಿ, ಊಟದ ವ್ಯವಸ್ಥೆ ಕಲ್ಪಿಸಿ ಕೆಲಸ ಮಾಡಿಸಲು ಗುತ್ತಿಗೆದಾರರಿಗೂ ಅಸಾಧ್ಯ. ಹಾಗಾಗಿ ನಮಗೆ ಕೆಲಸವಿದ್ದೂ ಇಲ್ಲದಂತಾಗಿದೆ ಎಂದು ಕಾರ್ಮಿಕ ಮಜೀದ್ ಅಭಿಪ್ರಾಯಪಡುತ್ತಾರೆ.

ಒಟ್ಟಿನಲ್ಲಿ ಕೊರೋನ-ಲಾಕ್‌ಡೌನ್ ಕಾರ್ಮಿಕರನ್ನು ಬೀದಿ ಪಾಲು ಮಾಡುತ್ತಿದ್ದು, ಒಮ್ಮೆ ಇದರಿಂದ ಪಾರಾದರೆ ಸಾಕು ಎಂದು ಬಯಸುತ್ತಿದ್ದಾರೆ.

(ಮಾಹಿತಿ ಕೃಪೆ ವಾರ್ತಾಭಾರತಿ )

ಉಚಿತ ಆಮ್ಲಜನಕ ಪೂರೈಕೆಗಾಗಿ ಪತ್ನಿಯ ಆಭರಣವನ್ನೇ ಮಾರಿದ ಪತಿ

 

ಕೊರೊನಾ ವೈರಸ್​ ಎರಡನೇ ಅಲೆಯಿಂದಾಗಿ ದೇಶದ ಜನತೆ ತತ್ತರಿಸಿದ್ದಾರೆ. ಈ ನಡುವೆ ಕೆಲ ಮಹಾನುಭಾವರು ಕೊರೊನಾ ಸಂಕಷ್ಟದಲ್ಲಿರುವವರಿಗೆ ಕೈಲಾದ ಸಹಾಯವನ್ನ ಮಾಡುತ್ತಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಪ್ರತಿದಿನ ಪ್ಲಾಸ್ಮಾ, ಬೆಡ್​ ಹಾಗೂ ಔಷಧಿಗಳ ಅವಶ್ಯಕತೆ ಪೂರೈಸುವಂತೆ ಕೋರಿ ಸಾಕಷ್ಟು ಮನವಿಗಳು ಹರಿದಾಡುತ್ತಲೇ ಇರುತ್ತೆ. ಅವಶ್ಯಕತೆ ಇರುವವರಿಗೆ ಅನೇಕರು ಸಹಾಯ ಮಾಡುತ್ತಿದ್ದಾರೆ.

ಈ ಮಾತಿಗೆ ಉತ್ತಮ ಉದಾಹರಣೆ ಎಂಬಂತೆ ಮುಂಬೈನ ಮಂಟಪ ಶೃಂಗಾರ ಮಾಡುವ ಉದ್ಯಮ ಮಾಡುತ್ತಿದ್ದ ವ್ಯಕ್ತಿ ತಮ್ಮ ಪತ್ನಿಯ ಆಭರಣಗಳನ್ನ ಮಾರಿ ಕೋವಿಡ್​ ರೋಗಿಗಳಿಗಾಗಿ ಉಚಿತ ಆಕ್ಸಿಜನ್​ ಸಿಲಿಂಡರ್​ ಪೂರೈಸುತ್ತಿದ್ದಾರೆ.

ಪಾಸ್ಕಲ್​ ಸಲ್ದಾನಾ ಎಂಬವರು ತಮ್ಮ ಪತ್ನಿಯ ಮನವಿಗೆ ಬೆಲೆ ನೀಡಿ ಏಪ್ರಿಲ್​ 18ರಿಂದ ಈ ಸಮಾಜಸೇವೆಯನ್ನ ಆರಂಭಿಸಿದ್ರು. ಇವರ ಪತ್ನಿಯ ಕಿಡ್ನಿ ಫೇಲ್​ ಆಗಿರೋದ್ರಿಂದ ಕಳೆದ 5 ವರ್ಷಗಳಿಂದ ಡಯಾಲಿಸಿಸ್​ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾನು ಏಪ್ರಿಲ್​ 18ನೇ ತಾರೀಖಿನಿಂದ ಈ ಕೆಲಸವನ್ನ ಮಾಡುತ್ತಿದ್ದೇನೆ.ಇನ್ನೊಬ್ಬರಿಗೆ ಸಹಾಯ ಮಾಡು ಅಂತಾ ಕೆಲವರು ನನಗೆ ಹಣವನ್ನೂ ನೀಡಿದ್ದಾರೆ ಎಂದು ಪಾಸ್ಕಲ್​ ಹೇಳಿದ್ರು.

ನನ್ನ ಪತ್ನಿ ಡಯಾಲಿಸಿಸ್​ ಚಿಕಿತ್ಸೆ ಪಡೆಯುತ್ತಿದ್ದು ವೈದ್ಯಕೀಯ ಆಮ್ಲಜನಕವನ್ನೇ ಉಸಿರಾಡುತ್ತಿದ್ದಾಳೆ. ಹೀಗಾಗಿ ನಮ್ಮ ಮನೆಯಲ್ಲಿ ಯಾವಾಗಲೂ ಒಂದು ಹೆಚ್ಚುವರಿ ಆಮ್ಲಜನಕ ಸಿಲಿಂಡರ್​ ಇದ್ದೇ ಇರುತ್ತೆ. ಒಂದಿನ ಶಾಲಾ ಪ್ರಾಂಶುಪಾಲರೊಬ್ಬರು ತಮ್ಮ ಪತಿಗೆ ಆಕ್ಸಿಜನ್​ ಬೇಕು ಎಂದು ಮನವಿ ಮಾಡಿದ್ರು. ನನ್ನ ಪತ್ನಿ ಸೂಚನೆಯಂತೆ ನಾನು ನಮ್ಮ ಮನೆಯಲ್ಲಿದ್ದ ಹೆಚ್ಚುವರಿ ಸಿಲಿಂಡರ್​ನ್ನು ಅವರಿಗೆ ನೀಡಿದೆ. ಇದಾದ ಬಳಿಕ ನನ್ನ ಪತ್ನಿಯ ಮನವಿಯಂತೆ ಆಕೆಯ ಚಿನ್ನವನ್ನ 80 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿ ಈ ಕೆಲಸ ಆರಂಭಿಸಿದೆ ಎಂದು ಹೇಳಿದ್ರು.

ಪಾಸ್ಕಲ್​ ದಂಪತಿಯ ಈ ಮಾನವೀಯ ಕಾರ್ಯಕ್ಕೆ ಸಾಮಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗ್ತಿದೆ.

(ಮಾಹಿತಿ ಕೃಪೆ ಕನ್ನಡದುನಿಯಾ )

Friday, April 30, 2021

ಚಂದಿರನಿಲ್ಲದ ಆ ಬಾನಿನಲ್ಲಿ

👉 *ಚಿತ್ರ: ಸೊಗಸುಗಾರ

ಚಂದಿರನಿಲ್ಲದ ಆ ಬಾನಿನಲ್ಲಿ

ಬೆಳದಿಂಗಳ ಹುಡುಕುವ 

ಒಬ್ಬ ಕುರುಡನು ನಾನಿಲ್ಲಿ

 ಚಂದಿರನಿಲ್ಲದ ಆ ಬಾನಿನಲ್ಲಿ

ಬೆಳದಿಂಗಳ ಹುಡುಕುವ

ಒಬ್ಬ ಕುರುಡನು ನಾನಿಲ್ಲಿ

   ಕಂಡಿದ್ದು ...ಸುಳ್ಳು

   ಕಾಣದ್ದು...ಸುಳ್ಳು

ನಿಜ ಹೇಳಲು ಬಾಯಿಲ್ಲ ನನಗಿಲ್ಲಿ ಈ ಈ....

 ದಿಕ್ಕಿಲ್ಲ ದೆಸೆಯಿಲ್ಲ

ಅಳುವ ಕಣ್ಣಿಗೆ ರೆಪ್ಪೆಗಳಿಲ್ಲ

ಚಂದಿರನಿಲ್ಲದ ಆ ಬಾನಿನಲ್ಲಿ

ಬೆಳದಿಂಗಳ ಹುಡುಕುವ

ಒಬ್ಬ ಕುರುಡನು ನಾನಿಲ್ಲಿ ♫♫♫♫♫♫♫♫♫♫♫♫♫♫

ರಾತ್ರಿಗಳೆಲ್ಲ ಸುಖದ ಕನಸುಗಳಾಗಿ

ಮತ್ತೆ ಹಗಲುಗಳೆಲ್ಲ ದುಃಖದ ನೆನಪುಗಳಾಗಿ

ಪಾಪದ ಎತ್ತಿನ ಬಂಡಿಯ ತಕ್ಕಡಿಯಾಗಿ 

ಈ ಕಾಲವೆಂಬ ಕೈಯಲ್ಲಿ ತಕ್ಕಡಿಯಾಗಿ

ಬಾಳೋದೆ......ಹೆ ಹೇ ಹೇ...

ಇಲ್ಲಿ ದಿನದಿನಕ್ಕೂ ಕತೆಗಳಾಗಿ ಕಾಣುತ್ತಮ್ಮ

ಮನುಷ್ಯನ ನಾಶಗಳೇ ವ್ಯತೆಗಳಾಗಿ ಉಳಿಯುತ್ತಮ್ಮ

ವಿಧಿಯಾಟ ಹುಡುಗಾಟ

ಹೆತ್ತವರೆದೆಯಲಿ ಬೆಂಕಿಯ ಊಟ

ಚಂದಿರನಿಲ್ಲದ ಆ ಬಾನಿನಲ್ಲಿ

 ಬೆಳದಿಂಗಳ ಹುಡುಕುವ 

ಒಬ್ಬ ಕುರುಡನು ನಾನಲ್ಲಿ.

♫♫♫♫♫♫♫♫♫♫♫♫♫♫

ಅರ್ಥವಿಲ್ಲದಿರುವ ಲೋಕ ನಮ್ಮದು

ಇಲ್ಲಿ ಸ್ವಾರ್ಥ ಒಂದೇ ಬಡವನ ಆಳುವಂತದು

 ಎಲ್ಲ ಇಲ್ಲಿ ಒಳ್ಳೆಯದು ಎಲ್ಲಾ ಕೆಟ್ಟದು

 ಬಂದ ಹಾಗೆ ಪಡೆಯೋದೆ ಆ  ದೇವರು                               ಕೊಟ್ಟಿದು ನಂಬಿಕೆಯೇ..ಹೇ ಹೇ ಹೇ....

ಇಂತ ಮೂರು ಬಿಟ್ಟವರ ಕಾಯೋ ಊರುಗೋಲು

ಆದರೆ ಮೂರು ಬಿಟ್ಟವರ ಮುಂದೆ ಬುಡಮೇಲು

ಅದು ಯಾರೋ ಬರೆದೋರು

ಗಾಯದ ಮೇಲೆ ಬರೆ ಎಳೆದೋರು

ಚಂದಿರನಿಲ್ಲದ ಆ ಬಾನಿನಲ್ಲಿ

ಬೆಳದಿಂಗಳ ಹುಡುಕುವ

ಒಬ್ಬ ಕುರುಡನು ನಾನಿಲ್ಲಿ....

ಚಂದಿರನಿಲ್ಲದ ಆ ಬಾನಿನಲ್ಲಿ

ಬೆಳದಿಂಗಳ ಹುಡುಕುವ

ಒಬ್ಬ ಕುರುಡನು ನಾನಿಲ್ಲಿ....ಕಂಡಿದ್ದು ...ಸುಳ್ಳು

ಕಾಣದ್ದು...ಸುಳ್ಳು

ನಿಜ ಹೇಳಲು ಬಾಯಿಲ್ಲ ನನಗಿಲ್ಲಿ 

ಈ ಈ....

ದಿಕ್ಕಿಲ್ಲ ದೆಸೆಯಿಲ್ಲ

ಅಳುವ ಕಣ್ಣಿಗೆ ರೆಪ್ಪೆಗಳಿಲ್ಲ

ಚಂದಿರನಿಲ್ಲದ ಆ ಬಾನಿನಲ್ಲಿ

ಬೆಳದಿಂಗಳ ಹುಡುಕುವ

ಒಬ್ಬ ಕುರುಡನು ನಾನಿಲ್ಲಿ


Covid-19 India Update: ದೆಹಲಿಯಲ್ಲಿ ಒಂದೇ ದಿನ 395 ಮಂದಿ ಸಾವು

 

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಕೈಗೊಂಡ ಪ್ರಯತ್ನಗಳು ಫಲ ನೀಡುತ್ತಿಲ್ಲ. ಬದಲಿಗೆ, ಸೋಂಕು ಹರಡುವ ಪ್ರಮಾಣ ದಿನೇ ದಿನೇ ಹೆಚ್ಚುತ್ತಲೇ ಸಾಗಿದೆ.

ಸೋಂಕಿತರ ಸಾವಿನ ಸಂಖ್ಯೆಯೂ ಕಡಿಮೆಯಾಗದೆ ಜನರ ಆತಂಕವನ್ನು ಹೆಚ್ಚಿಸುತ್ತಲೇ ಸಾಗಿದೆ.

ಗುರುವಾರ ಸಂಜೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ನಗರದಾದ್ಯಂತ ಜ್ವರ, ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದ ಒಟ್ಟು 73,851 ಜನ ಪರೀಕ್ಷೆಗೆ ಒಳಪಟ್ಟಿದ್ದು, ಆ ಪೈಕಿ 24,235 (ಶೇ 32.82) ಜನಕ್ಕೆ ಸೋಂಕು ತಗುಲಿದೆ.

ಚಿಕಿತ್ಸೆ ಪಡೆಯುತ್ತಿದ್ದ 395 ಜನ ಸಾವಿಗೀಡಾಗಿದ್ದು, ದಿನವೊಂದರಲ್ಲಿ ಕೊರೊನಾದಿಂದ ಅಧಿಕ ಸಂಖ್ಯೆಯ ಸಾವು ದಾಖಲಾದಂತಾಗಿದೆ.

2020ರ ಮಾರ್ಚ್‌ನಿಂದ ಇಲ್ಲಿಯ ತನಕ ದೆಹಲಿಯಲ್ಲಿ ಒಟ್ಟು 15,772 ಜನ ಪ್ರಾಣ ಕಳೆದುಕೊಂಡಿದ್ದಾರೆ.

ಗುರುವಾರ 25,615 ಜನ ಗುಣಮುಖರಾಗಿದ್ದು, 97,977 ಸಕ್ರಿಯ ಪ್ರಕರಣಗಳಿವೆ. 15 ದಿನಗಳಿಂದ ದೆಹಲಿಯಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದ್ದರೂ, ಕೊರೊನಾ ಸೋಂಕಿನ ಹಾವಳಿ ಮಿತಿ ಮೀರಿದೆ.

(ಮಾಹಿತಿ ಕೃಪೆ ಪ್ರಜಾವಾಣಿ )

ಉತ್ತರ ಪ್ರದೇಶದಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ : ಓರ್ವ ಕಾರ್ಮಿಕ ಸಾವು, ಇಬ್ಬರು ಗಂಭೀರ

 

ಕಾನ್ಪುರ: ದೇಶದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರ ನಡುವೆ ಗಂಭೀರ ಸೋಂಕಿಗೆ ತುತ್ತಾಗುವವರಿಗೆ ಆಕ್ಸಿಜನ್ ಪೂರೈಕೆ ಕಾರ್ಯವೂ ಹೆಚ್ಚುತ್ತಿದೆ. ಇದರ ನಡುವೆ ಹಲವು ಅವಘಢಗಳು ಸಹ ನಡೆಯುತ್ತಿವೆ.

ಇಂದು ಬೆಳಗ್ಗೆ ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಪಂಕಿ ಆಕ್ಸಿಜನ್ ಘಟಕದಲ್ಲಿ ಆಕ್ಸಿಜನ್ ನ್ನು ಮರು ತುಂಬಿಸುವಾಗ ಸಿಲೆಂಡರ್ ಸ್ಫೋಟವಾಗಿ ಓರ್ವ ಕಾರ್ಮಿಕ ಮೃತಪಟ್ಟು ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ದಾದಾ ನಗರ್ ಕೈಗಾರಿಕಾ ಪ್ರದೇಶದಲ್ಲಿ ನಡೆದಿರುವ ಈ ದುರ್ಘಟನೆ ಸ್ಥಳದಲ್ಲಿ ಸದ್ಯ ಪೊಲೀಸರು ಇದ್ದು ಪರಿಸ್ಥಿತಿಯ ಪರಾಮರ್ಶೆ ನಡೆಸುತ್ತಿದ್ದಾರೆ. ಹೆಚ್ಚಿನ ವಿವರ ತಿಳಿದುಬಂದಿಲ್ಲ.

(ಮಾಹಿತಿ ಕೃಪೆ Kannada News Now )

ಅಗ್ರಿವಾರ್ ರೂಂ' : ರಾಜ್ಯದ ರೈತ ಸಮುದಾಯಕ್ಕೆ ಇಲ್ಲಿದೆ ಮಹತ್ವದ ಮಾಹಿತಿ

 

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ 14 ದಿನಗಳ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, 14 ದಿನ ಗಳ ಲಾಕ್ ಡೌನ್ ನಲ್ಲಿ ರೈತರಿಗೆ ಕೃಷಿ ಚುಟುವಟಿಕೆಗಳಿಗೆ ತೊಂದರೆ ಆಗದಿರಲೆಂದು ಕೃಷಿ ಇಲಾಖೆ ಮತ್ತೆ ಅಗ್ರಿವಾರ್ ರೂಂ ಆರಂಭಿಸಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ಮುಂಗಾರು ಆರಂಭವಾಗುತ್ತಿರುವುದರಿಂದ ಲಾಕ್ ಡೌನ್ ಅವಧಿಯಲ್ಲಿ ಯಾವುದೇ ಇಲಾಖೆ, ಅಧಿಕಾರಿಗಳಾಗಲಿ ಕೃಷಿ ಪರಿಕರ ಸಾಗಣಿಕೆ ರೈತರ ಕೃಷಿ ಚಟುವಟಿಕೆಗಳಿಗೆ ಅಡ್ಡಿಯನ್ನುಂಟು ಮಾಡಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ರೈತರು ಸಹಾಯವಾಣಿ ಅಗ್ರಿವಾರ್ ರೂಂ ಆರಂಭವಾಗಿದ್ದು, ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ಕಾರ್ಯನಿರ್ವಹಿಸಲಿದೆ. 080-22210237 ಹಾಗೂ 080-22212818 ಕ್ಕೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಸಚಿವರು ತಿಳಿಸಿದ್ದಾರೆ.

(ಮಾಹಿತಿ ಕೃಪೆ Kannada News Now )

ʼತ್ರಿವರ್ಣʼದಲ್ಲಿ ಕಂಗೊಳಿಸಿದ ನಯಾಗರ ಜಲಪಾತ

 

ಕೊರೊನಾ ಎರಡನೆ ಅಲೆಯ ವಿರುದ್ಧ ದೇಶ ಹೋರಾಟ ನಡೆಸುತ್ತಿದೆ. ಈ ನಡುವೆ ಕೆನಡಾದ ಒಂಟಾರಿಯೋದಲ್ಲಿರುವ ನಯಾಗರ ಜಲಪಾತದಲ್ಲಿ ತ್ರಿವರ್ಣ ಧ್ವಜದ ಬಣ್ಣಗಳನ್ನ ಬೆಳಗುವುದರ ಮೂಲಕ ಭಾರತಕ್ಕೆ ಬೆಂಬಲ ಸೂಚಿಸಿವೆ.

ಭಾರತವು ಕೋವಿಡ್​ 19ನಿಂದಾಗಿ ಸಾಕಷ್ಟು ಜೀವಗಳನ್ನ ಕಳೆದುಕೊಳ್ಳುತ್ತಿದೆ. ಭಾರತದ ಜೊತೆಗೆ ಒಗ್ಗಟ್ಟು ಪ್ರದರ್ಶಿಸುವ ನಿಟ್ಟಿನಲ್ಲಿ ನಯಾಗರ ಜಲಪಾತವು ಇಂದು ರಾತ್ರಿ 9.30 ರಿಂದ 10 ಗಂಟೆಯವರೆಗೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ದೀಪಗಳಿಂದ ಮಿನುಗಲಿದೆ ಎಂದು ಬುಧವಾರ ನಯಾಗರ ಪಾರ್ಕ್ಸ್​ ಟ್ವೀಟ್​ ಮಾಡಿದೆ.

ಒಂದು ವರ್ಷದ ಅವಧಿಯಲ್ಲಿ ಎರಡನೇ ಬಾರಿಗೆ ನಯಾಗರ ಜಲಪಾತವು ತ್ರಿವರ್ಣ ಧ್ವಜದಿಂದ ಕಂಗೊಳಿಸಿದೆ. ಈ ಹಿಂದೆ ದೇಶದ 74ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಯಾಗರ ಜಲಪಾತವು ತ್ರಿವರ್ಣ ಧ್ವಜದಿಂದ ಮಿನುಗಿತ್ತು. ಇದೀಗ ಕೊರೊನಾ ಸಂಕಷ್ಟದಲ್ಲಿರುವ ಭಾರತಕ್ಕೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ನಯಾಗರ ಮತ್ತೊಮ್ಮೆ ತ್ರಿವರ್ಣ ಧ್ವಜದಲ್ಲಿ ಕಂಗೊಳಿಸಿದೆ.

ಕೆನಡಾದ ಈ ಕಾರ್ಯಕ್ಕೆ ಭಾರತೀಯರು ಟ್ವಿಟರ್​ನಲ್ಲಿ ಧನ್ಯವಾದ ಅರ್ಪಿಸುತ್ತಿದ್ದಾರೆ.

(ಮಾಹಿತಿ ಕೃಪೆ ಕನ್ನಡದುನಿಯಾ )

ಭಾರತೀಯ ಚಿತ್ರರಂಗದ ಪಿತಾಮಹರ ಹುಟ್ಟು ಹಬ್ಬ : ದಾದಾ ಸಾಹೇಬ್ ಫಾಲ್ಕೆಯ ಆ ದಿನಗಳು!

 

ಇಂದು ಭಾರತೀಯ ಚಿತ್ರರಂಗದ ಪಿತಾಮಹ ದಾದಾ ಸಾಹೇಬ್ ಫಾಲ್ಕೆಯವರ ಹುಟ್ಟು ಹಬ್ಬ (ಏಪ್ರಿಲ್ 30. 1870). ಇವರ ಪೂರ್ಣ ಹೆಸರು ದುಂಡಿರಾಜ್ ಗೋವಿಂದ ಫಾಲ್ಕೆ. ಫಾಲ್ಕೆಯವರು ನಿರ್ಮಾಪಕರಾಗಿ, ನಿರ್ದೇಶದಕರಾಗಿ, ಚಿತ್ರಕಥೆಗಾರರಾಗಿ ಭಾರತೀಯ ಚಿತ್ರರಂಗವನ್ನು ಹುಟ್ಟುಹಾಕಿದ್ದಾರೆ. ಇವರ ಮೊಟ್ಟ ಮೊದಲ ಸಿನಿಮಾ ರಾಜ ಹರಿಶ್ಚಂದ್ರ (1913). ಈ ಸಿನಿಮಾವನ್ನು ಭಾರತದ ಮೊಟ್ಟ ಮೊದಲ ಪೂರ್ಣ ಪ್ರಮಾಣದ ಚಿತ್ರ ಎಂದು ಕರೆಯಲಾಗುತ್ತದೆ. ಇನ್ನು ದಾದಾ ಸಾಹೇಬರು ಸುಮಾರು 95 ಸಿನಿಮಾಗಳು ಮತ್ತು 27 ಕಿರುಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಎಲ್ಲಾ ಕಾರಣಕ್ಕೆ ಇವರ ಹೆಸರಲ್ಲಿ ಭಾರತೀಯ ಚಿತ್ರರಂಗದಲ್ಲಿ ಜೀವಮಾನ ಸಾಧನೆ ಮಾಡಿದ ಸಿನಿಮಾ ರಂಗದ ಕಲಾವಿಧರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಅದೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ. ಕನ್ನಡದ ಸಿನಿಮಾ ರಂಗದಿಂದ ಡಾ.ರಾಜ್ ಕುಮಾರ್ ಈ ಪ್ರಶಸ್ತಿಯನ್ನು 1995ರಲ್ಲಿ ಪಡೆದಿದ್ದಾರೆ.

ಹಾಗಾದ್ರೆ ದಾದಾ ಸಾಹೇಬರ ಬಗ್ಗೆ ಅಪರೂಪದ ಒಂದಷ್ಟು ಮಾಹಿತಿಗಳನ್ನು ಈ ಲೇಖನದಲ್ಲಿ ತಿಳಿಯೋಣ

* ಇವರು ತಮ್ಮ 15 ನೇ ವಯಸ್ಸಿನಲ್ಲಿ ಮುಂಬೈನ ಜೆ.ಜೆ ಸ್ಕೂಲ್ ಆಫ್ ಆರ್ಟ್ಗೆ ಸೇರಿದರು, ಅಲ್ಲಿ ಶಿಲ್ಪಕಲೆ, ಚಿತ್ರಕಲೆ, ಫೋಟೋಗ್ರಫಿ ಬಗ್ಗೆ ಅಧ್ಯಯನ ಮಾಡಿದರು.

* ಬರೋಡಾದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. ಅಲ್ಲಿ ಆಯಿಲ್ ಪೇಂಟಿಂಗ್ ಮತ್ತು ಜಲವರ್ಣ(watercolour painting) ಚಿತ್ರಕಲೆಯಲ್ಲಿ ಕೋರ್ಸ್ ಮುಗಿಸಿದ್ದಾರೆ.

* 1890 ರಲ್ಲಿ ಗುಜರಾತ್‌ ನ ವಡೋದರಾಕ್ಕೆ ತೆರಳಿ ಫೋಟೋಗ್ರಾಫರ್ ಆಗಿ ಕೆಲಸ ಮಾಡಿದರು.

* ಬುಬೊನಿಕ್ ಪ್ಲೇಗ್‌ ಕಾಯಿಲೆಯಿಂದ ತನ್ನ ಮೊದಲ ಹೆಂಡತಿ ಮತ್ತು ಮಗುವನ್ನು ಕಳೆದುಕೊಳ್ಳುತ್ತಾರೆ. ಇದಾದ ಮೇಲೆ ಫೋಟೋಗ್ರಫಿ ಕೆಲಸವನ್ನು ತೊರೆಯುತ್ತಾರೆ.

* ಫಾಲ್ಕೆ ಭಾರತದ ಪುರಾತತ್ವ ಸಮೀಕ್ಷೆ ಇಲಾಖೆಯಲ್ಲಿ ಕರಕುಶಲ ಕೆಲಸಕ್ಕೆ ಸೇರುತ್ತಾರೆ. ಆದರೆ ಮಹಾರಾಷ್ಟ್ರದಲ್ಲಿ ತನ್ನದೇ ಆದ ಮುದ್ರಣಾಲಯವನ್ನು ಪ್ರಾರಂಭಿಸುವ ಕಾರಣದಿಂದ ಆ ಕೆಲಸಕ್ಕೆ ರಾಜೀನಾಮೆ ನೀಡಿದರು.

*ಭಾರತೀಯ ವರ್ಣಚಿತ್ರಕಾರ ರಾಜಾ ರವಿವರ್ಮ ಅವರೊಂದಿಗೆ ಕೆಲಸ ಮಾಡಿದ ನಂತರ, ದಾದಾಸಾಹೇಬ್ ತಮ್ಮ ಮೊದಲ ವಿದೇಶ ಪ್ರವಾಸವನ್ನು ಕೈಗೊಂಡು ಜರ್ಮನಿಯಲ್ಲಿ ಕಾರ್ಲ್ ಹರ್ಟ್ಜ್ ಎಂಬ ಜಾದೂಗಾರನೊಂದಿಗೆ ಕೆಲಸ ಮಾಡಿದರು.

*ಫರ್ಡಿನ್ಯಾಂಡ್ ಜೆಕ್ಕಾ ಅವರ ಮೂಕ ಚಿತ್ರ ‘ದಿ ಲೈಫ್ ಆಫ್ ಕ್ರೈಸ್ಟ್’ ನೋಡಿದ ನಂತರ ದಾದಾಸಾಹೇಬರ ಜೀವನ ಸಿನಿಮಾ ರಂಗದ ಕಡೆ ತಿರುಗಿತು. ಇದರ ನಂತರವೇ ದಾದಾಸಾಹೇಬ್ ತಮ್ಮ ಮೊದಲ ಚಿತ್ರ ಮಾಡಲು ನಿರ್ಧರಿಸಿದರು.

*ದಾದಾಸಾಹೇಬ್ ತಮ್ಮ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಲು ಕೆಲವು ಸುಂದರ ಮುಖಗಳನ್ನು ಹುಡುಕುತ್ತಿದ್ದರು. ಅಲ್ಲದೆ ಅದಕ್ಕಾಗಿ ಜಾಹೀರಾತುಗಳನ್ನು ನೀಡಿದರು. ಇದಾದ ಮೇಲೆ ಎಂಥೆಂತವರೋ ನಟಿಸಲು ಅವಕಾಶ ಕೊಡಿ ಎಂದು ಬಂದಾಗ ಸುಂದರವಾಗಿರುವವರಿಗೆ ಮಾತ್ರ ಎಂದು ಜಾಹಿರಾತಿನಲ್ಲಿ ಬದಲಾವಣೆ ಮಾಡಿದರು.

* ದಾದಾಸಾಹೇಬ್ ತಮ್ಮ ಮೊದಲ ಸಿನಿಮಾ ರಾಜ ಹರಿಶ್ಚಂದ್ರದಲ್ಲಿ ತಾವೇ ಹರಿಶ್ಚಂದ್ರನ ಪತ್ರಕ್ಕೆ ಬಣ್ಣ ಹಚ್ಚಿದರು. ಇಷ್ಟೆ ಅಲ್ಲದೆ ಈ ಸಿನಿಮಾದಲ್ಲಿ

ಹರಿಶ್ಚಂದ್ರನ ಮಗನಪಾತ್ರಕ್ಕೆ ತಮ್ಮ ಮಗನನ್ನೇ ಬಳಸಿಕೊಂಡರು. ಹಾಗೂ ಚಿತ್ರದ ಕಾಸ್ಟ್ಯೂಮ್ ಡಿಸೈನರ್ ಕಾರ್ಯವನ್ನು ಫಾಲ್ಕೆಯವರ ಪತ್ನಿಯೇ ನಿರ್ವಹಿಸಿದರು. ಇಷ್ಟೆ ಅಲ್ಲದೆ ಚಿತ್ರದ ನಿರ್ದೇಶನ, ವಿತರಣೆ, ಸೆಟ್-ಬಿಲ್ಡಿಂಗ್ ಎಲ್ಲವನ್ನೂ ಫಾಲ್ಕೆಯವರೇ ನಿರ್ವಹಿಸಿದ್ದಾರೆ.

* ದಾದಾಸಾಹೇಬ್ ಸಿನಿಮಾ ಕಾಲದಲ್ಲಿ ಮಹಿಳಾ ಪಾತ್ರದ ಕೊರತೆ ತುಂಬಾ ಇತ್ತು. ಇದಕ್ಕಾಗಿಯೇ ಪುರುಷರನ್ನೇ ಮಹಿಳಾ ಪಾತ್ರಕ್ಕೆ ಬಳಸುತ್ತಿದ್ದರು. ಈ ಕಾರಣದಿಂದ 15 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದ್ದರಂತೆ.

(ಮಾಹಿತಿ ಕೃಪೆ ಉದಯವಾಣಿ )

ಆಮ್ಲಜನಕ ಒದಗಿಸಲು 1 ಕೋಟಿ ರೂ. ನೀಡಿದ ಸಚಿನ್, ರಾಜಸ್ಥಾನ ರಾಯಲ್ಸ್ ತಂಡದಿಂದ 7.5 ಕೋಟಿ ರೂ. ದೇಣಿಗೆ

 

ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆಗೆ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಗತ್ಯವಿರುವವರಿಗೆ ಆಕ್ಸಿಜನ್ ಒದಗಿಸಲು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

ದೆಹಲಿ -ಎನ್.ಸಿ.ಆರ್. ಮೂಲದ ನಿಧಿ ಸಂಗ್ರಹ ಸಂಸ್ಥೆಯಾಗಿರುವ ಮಿಷನ್ ಆಕ್ಸಿಜನ್ ವಿದೇಶಗಳಿಂದ ಆಕ್ಸಿಜನ್ ಸಾಂದ್ರಕ ಯಂತ್ರಗಳನ್ನು ತರಿಸಿಕೊಂಡು ದೇಶದಲ್ಲಿ ಅಗತ್ಯವಿರುವ ಆಸ್ಪತ್ರೆಗಳಿಗೆ ಸರಬರಾಜು ಮಾಡುತ್ತದೆ. ಈ ಸಂಸ್ಥೆಗೆ ಸಚಿನ್ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಅವರಿಗೆ ಕೊರೋನಾ ಪಾಸಿಟಿವ್ ಆಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈಗ ಆಕ್ಸಿಜನ್ ಪೂರೈಕೆಗಾಗಿ ಮಿಷನ್ ಆಕ್ಸಿಜನ್ ಸಂಸ್ಥೆಗೆ ಅವರು ದೇಣಿಗೆ ನೀಡಿದ್ದಾರೆ.

ಕೋವಿಡ್ ವಿರುದ್ಧದ ಹೋರಾಟಕ್ಕೆ ರಾಜಸ್ಥಾನ ರಾಯಲ್ಸ್ 7.5 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಬ್ರೆಟ್ ಲೀ ಪ್ರಧಾನಮಂತ್ರಿ ಪರಿಹಾರ ನಿಧಿಗೆ 40 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಐಪಿಎಲ್ ಕೊಲ್ಕತ್ತಾ ತಂಡದ ಆಟಗಾರ ಆಸ್ಟ್ರೇಲಿಯಾದ ಬ್ಯಾಟ್ ಕಮಿನ್ಸ್ ಅವರು ಆಕ್ಸಿಜನ್ ಸಿಲಿಂಡರ್ ಖರೀದಿಸಲು 37 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

(ಮಾಹಿತಿ ಕೃಪೆ ಕನ್ನಡದುನಿಯಾ )



Thursday, April 29, 2021

ರಾಜ್ಯದ 'OBC' ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ : ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಅವಧಿ ಮೇ.15 ರವರೆಗೆ ವಿಸ್ತರಣ

 * ರಂಜಿತ್ ಶೃಂಗೇರಿ

ಬೆಂಗಳೂರು : ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2020-21 ನೇ ಸಾಲಿಗೆ ' ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ', ' ಶುಲ್ಕ ವಿನಾಯಿತಿ', ' ವಿದ್ಯಾಸಿರಿ, ಊಟ ಮತ್ತು ವಸತಿ ಸಹಾಯ ಯೋಜನೆ' ಮತ್ತು ' ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯವೇತನ' ಸೌಲಭ್ಯಕ್ಕಾಗಿ ಮೆಟ್ರಿಕ್ ನಂತರದ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು 30:04:2021 ಕ್ಕೆ ಕೊನೆಯ ದಿನಾಂಕ ನಿಗದಿ ಪಡಿಸಲಾಗಿತ್ತು.

ಆದರೆ ಕೆಲವೊಂದು ವಿಶ್ವವಿದ್ಯಾಲಯಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನೊಂದಣಿ ಸಂಖ್ಯೆಯನ್ನು ಒದಗಿಸಲು ಸಾಧ್ಯವಾಗಿರುವುದಿಲ್ಲ, ಹಾಗೂ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ದಿನಾಂಕ 12:05:2021 ರವರೆಗೂ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆಯಾಗಿರುವ ಪ್ರಯುಕ್ತ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅರ್ಜಿ ಸಲ್ಲಿಸುವ ದಿನಾಂಕವನ್ನು 15:05:2021 ರವರೆಗೆ ವಿಸ್ತರಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳು ಹಾಗೂ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ 2020-21 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ. ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ, ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಸೌಲಭ್ಯಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕೋವಿಡ್-19: ಆಕ್ಸಿಜನ್ ಬದಲಿಗೆ ಅಗ್ನಿ ನಿರೋಧಕ ಸಿಲಿಂಡರ್ ಮಾರಾಟ ಮಾಡಿದ್ದ ಇಬ್ಬರು ವಂಚಕರ ಬಂಧನ

 

ನವದೆಹಲಿ: ಕೋವಿಡ್-19 ಪಾಸಿಟಿವ್ ಬಂದಿದ್ದ ಸಂಬಂಧಿಕರೊಬ್ಬರಿಗೆ ಆಕ್ಸಿಜನ್ ಸಿಲಿಂಡರ್ ಕೇಳಿದ್ದ ಮಹಿಳೆಗೆ ಅಗ್ನಿ ನಿರೋಧಕ ಸಿಲಿಂಡರ್ ಮಾರಾಟ ಮಾಡಿ ವಂಚಿಸಿದ ಆರೋಪದ ಮೇರೆಗೆ ಇಬ್ಬರು ವ್ಯಕ್ತಿಗಳನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

ವಿಕಾಸ್ ಪುರಿ ನಿವಾಸಿಗಳಾದ ಅಶುತೋಷ್ (19) ಮತ್ತು ಆಯುಷ್ ( 22) ಬಂಧಿತ ಆರೋಪಿಗಳು. ಅವರನ್ನು ಪಶ್ಚಿಮ ದೆಹಲಿಯ ಉತ್ತಮ್ ನಗರದಿಂದ ಬಂಧಿಸಲಾಗಿದೆ. ಅವರಿಂದ ಐದು ಅಗ್ನಿ ನಿರೋಧಕ ಸಿಲಿಂಡರ್ ವಶಕ್ಕೆ ಪಡೆಯಲಾಗಿದೆ. ಆಕ್ಸಿಜನ್ ಸಿಲಿಂಡರ್ ಎಂದು ನಂಬಿಸಿ 10 ಸಾವಿರ ರೂ.ಗೆ ಅಗ್ನಿ ನಿರೋಧಕ ಸಿಲಿಂಡರ್ ಮಾರಾಟ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಸಿಜನ್ ಬದಲಿಗೆ ಅಗ್ನಿ ನಿರೋಧಕ ಸಿಲಿಂಡರ್ ಮಾರಾಟ ಮಾಡಿರುವ ಬಗ್ಗೆ ಬಿಂದಾಪುರದ ಶಿಶ್ರಾಮ್ ಪಾರ್ಕ್ ನಿವಾಸಿ ಗೀತಾ ಅರೋರಾ ಎಂಬವರು ದೂರು ನೀಡಿದ್ದಾಗಿ ದ್ವಾರದ ಡಿಸಿಪಿ ಸಂತೋಷ್ ಕುಮಾರ್ ಮೀನಾ ತಿಳಿಸಿದ್ದಾರೆ.

ಆಕೆಯ ಸಂಬಂಧಿ ಕೋವಿಡ್-19 ನಿಂದ ಆಕ್ಸಿಜನ್ ಮಟ್ಟ ಕಡಿಮೆಯಾಗಿ ಉಸಿರಾಟ ಸಮಸ್ಯೆಯಿಂದ ನರಳುತ್ತಿದ್ದಾಗ ಆಕ್ಸಿಜನ್ ಸಿಲಿಂಡರ್ ಗಾಗಿ ವಂಚಕರ ಸಂಪರ್ಕಕ್ಕೆ ಬಂದಿದ್ದಾರೆ. ನಂತರ ಅವರನ್ನು ಸಂಪರ್ಕಿಸಿ ಮತ್ತೆ ತನ್ನ ಹಣವನ್ನು ಕೇಳಿದಾಗ ಆಕೆಯ ಫೋನ್ ಕರೆಯನ್ನು ಅವರು ಸ್ವೀಕರಿಸುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಐಪಿಸಿ ಸೆಕ್ಷನ್ ಅನ್ವಯ ದೂರು ದಾಖಲಿಸಿಕೊಂಡು, ವಿಶೇಷ ತಂಡ ಆರೋಪಿಗಳ ಜಾಡು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಮೀನಾ ಹೇಳಿದ್ದಾರೆ.

(ಮಾಹಿತಿ ಕೃಪೆ ಕನ್ನಡ ಪ್ರಭ)

ಜೆಸಿಬಿಯಲ್ಲಿ ಕೋವಿಡ್ ಗೆ ಬಲಿಯಾದ ಮಹಿಳೆಯ ಶವ ಸಾಗಾಟ!

 

ಕೊರೊನಾ ವೈರಸ್ ನಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ಸರಿಯಾಗಿ ದೊರೆಯುತ್ತಿಲ್ಲ ಎಂಬ ಕೊರಗು ಒಂದು ಕಡೆ ಮತ್ತೊಂದು ಕಡೆ ಚಿಕಿತ್ಸೆಗೆ ದುಬಾರಿ ಹಣ ವಸೂಲಿ. ಇನ್ನೊಂದೆಡೆ ಮೃತಪಟ್ಟವರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ವರದಿಗಳು ಆತಂಕಕ್ಕೆ ಕಾರಣವಾಗಿದೆ.

ಇದಕ್ಕೆ ತಾಜಾ ಉದಾಹರಣೆ ಕೊರೊನಾದಿಂದ ಮೃತಪಟ್ಟ ಮಹಿಳೆಯೊಬ್ಬರ ಶವವನ್ನು ಜೆಸಿಬಿಯಲ್ಲಿ ಸಾಗಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ತಂದೆ ಕಳೆದುಕೊಂಡಿದ್ದ ಬಾಲಕಿಯ ತಾಯಿ ಕೂಡ ಕೊರೊನಾಗೆ ಬಲಿಯಾಗಿದ್ದಾರೆ. ತಾಯಿಯ ಅಂತ್ಯ ಸಂಸ್ಕಾರ ಮಾಡುವುದು ಹೇಗೆ ಎಂದು ತಿಳಿಯದ ಬಾಲಕಿಗೆ ನೆರವಾಗುವ ಬದಲು ಶವವನ್ನು ಜೆಸಿಬಿಯಲ್ಲಿ ಎತ್ತಿ ಸಾಗಿಸಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ.

ಚಿಂತಾಮಣಿಯ ಕುರುಟಹಳ್ಳಿ ಗ್ರಾಮದ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ಮಹಿಳೆಯ ಶವದ ಬಳಿ ಬರಲು ಗ್ರಾಮಸ್ಥರು ಹೆದರಿದ್ದು, ಇದರಿಂದ ಆಕೆಯ 12 ವರ್ಷದ ಮಗಳ ಮುಂದೆಯೇ ತಾಯಿಯ ಶವವನ್ನು ಜೆಸಿಬಿ ಮೂಲಕ ಅಂತ್ಯ ಸಂಸ್ಕಾರ ಮಾಡಲಾಯಿತು.

ಐದು ವರ್ಷಗಳ ಹಿಂದೆ ಸಾವನ್ನಪಿದ್ದ ತಂದೆ ಮೃತಪಟ್ಟಿದ್ದು, ಇದೀಗ ತಾಯಿಯನ್ನು ಕಳೆದುಕೊಂಡು ಬಾಲಕಿ ಅನಾಥಗೊಂಡಿದ್ದಾರೆ.

(ಮಾಹಿತಿ ಕೃಪೆ Kannadavahini )

ಇಂದು ಹಸೆಮಣೆ ಏರಬೇಕಿದ್ದ ಯುವಕ ಕರೊನಾಗೆ ಬಲಿ: ಮಂಗಳವಾದ್ಯ ಮೊಳಗಬೇಕಿದ್ದ ಮನೆಯಲ್ಲಿ ಆಕ್ರಂದನ


 ಚಿಕ್ಕಮಗಳೂರು: ಇಂದು ಹಸೆಮಣೆ ಏರಬೇಕಿದ್ದ ಯುವಕ ಮಹಾಮಾರಿ ಕರೊನಾ ಸೋಂಕಿಗೆ ಬಲಿಯಾಗಿರುವ ಘಟನೆ ಕೊಪ್ಪ ತಾಲೂಕಿನ ದೇವರಕೊಡಿಗೆ ಗ್ರಾಮದಲ್ಲಿ ನಡೆದಿದೆ.

ಪೃಥ್ವಿರಾಜ್ (32) ಮೃತ ಯುವಕ. ಈತ ಇಂದು ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ, ಮಂಗಳವಾದ್ಯ ಮೊಳಗಬೇಕಿದ್ದ ಮನೆ ಶೋಕ ಸಾಗರದಲ್ಲಿ ಮುಳುಗಿದೆ. ಇಡೀ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನವೇ ತುಂಬಿದೆ.

ಪೃಥ್ವಿರಾಜ್​, ಹತ್ತು ದಿನಗಳ ಹಿಂದಷ್ಟೇ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಮರಳಿದ್ದ. ಆರೋಗ್ಯದಲ್ಲಿ ಏರುಪೇರು ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿಸಿದಾಗ ಕರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಪೃಥ್ವಿರಾಜ್​ ಮೃತಪಟ್ಟಿದ್ದಾರೆ.

(ಮಾಹಿತಿ ಕೃಪೆ ವಿಜಯವಾಣಿ)

ಬಿಮ್ಸ್ ಮುಖ್ಯಸ್ಥರನ್ನು ಬಂಧಿಸಿ, ಸಭೆಗೆ ಕರೆತನ್ನಿ: ಡಿಸಿಎಂ ಲಕ್ಷ್ಮಣ ಸವದಿ ಆದೇಶ


 ಬೆಳಗಾವಿ: ಕೊರೋನಾ ಸೋಂಕು ನಿಯಂತ್ರಣ ಸಂಬಂಧ ಕರೆದಿದ್ದ ಸಭೆಗೆ ಬಿಮ್ಸ್ ನಿರ್ದೇಶಕ ಡಾ. ವಿನಯ್ ದಸ್ತಿಕೊಪ್ಪ ಗೈರಾಗಿದ್ದರು. ಇದರಿಂದ ಕೋಪಗೊಂಡ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಬಂಧಿಸಿ ಸಭೆಗೆ ಕರೆ ತರುವಂತೆ ಪೊಲೀಸ್ ಎಸ್ ಪಿ ಲಕ್ಷ್ಮಣ್ ನಿಂಬರ್ಗಿ ಅವರಿಗೆ ಆದೇಶಿಸಿದರು.

ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಆಕ್ಸಿಜನ್, ಮೆಡಿಸನ್, ಲಸಿಕೆ ಬಗ್ಗೆ ಚರ್ಚಿಸಲು ಬುಧವಾರ ಲಕ್ಷ್ಮಣ ಸವದಿ ಬೆಳಗಾವಿ ಜಿಲ್ಲಾ ಪಂಚಾಯಿತಿ ಹಾಲ್ ನಲ್ಲಿ ಸಭೆ ಕರೆದಿದ್ದರು,

ಆದರೆ ಈ ಬಗ್ಗೆ ವಿವರಗಳನ್ನು ನೀಡಬೇಕಿದ್ದ ಡಾ. ದಸ್ತಿಕೊಪ್ಪ ಸಭೆಗೆ ಹಾಜರಾಗಲಿಲ್ಲ, ಇದರಿಂದ ಸವದಿ ಕೋಪಗೊಂಡಿದ್ದರು, ಅವರು ಮೊದಲು ವೈದ್ಯ ನಂತರ, ಬಿಮ್ಸ್ ನಿರ್ದೇಶಕ, ಅವರನ್ನು ಬಂಧಿಸಿ ಸಭೆಗೆ ಕರೆ ತನ್ನಿ ಎಂದು ಎಸ್ ಪಿ ನಿಂಬರ್ಗಿ ಅವರಿಗೆ ಸೂಚಿಸಿದರು.

(ಮಾಹಿತಿ ಕೃಪೆ ಕನ್ನಡ ಪ್ರಭ)

BREAKING: ಸ್ಯಾಂಡಲ್ ವುಡ್ ಗೆ ಮತ್ತೊಂದು ಶಾಕ್, 'ಕೋಟಿ ರಾಮು' ಮೃತಪಟ್ಟ ಬೆನ್ನಲ್ಲೇ ಮತ್ತೊಬ್ಬ ನಿರ್ಮಾಪಕ ನಿಧನ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತವಾಗಿದೆ. ನಿರ್ಮಾಪಕ ಚಂದ್ರಶೇಖರ್ ಶ್ವಾಸಕೋಶ ತೊಂದರೆಯಿಂದ ಮೃತಪಟ್ಟಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಕೋಟಿ ನಿರ್ಮಾಪಕ ರಾಮು ಮೃತಪಟ್ಟಿದ್ದರು. ಇಂದು ನಿರ್ಮಾಪಕ ಚಂದ್ರಶೇಖರ್ ಮೃತಪಟ್ಟಿದ್ದಾರೆ. 'ಅಣ್ಣಯ್ಯ', 'ಬಿಂದಾಸ್', 'ರನ್ನ' ಮೊದಲಾದ ಸಿನಿಮಾಗಳನ್ನು ನಿರ್ಮಿಸಿದ್ದ ಚಂದ್ರಶೇಖರ್ ಅವರಿಗೆ 23 ದಿನಗಳ ಹಿಂದೆ ಕೋವಿಡ್ ಪಾಸಿಟಿವ್ ಬಂದಿತ್ತು.  ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಗುಣಮುಖರಾಗಿ ಮನೆಗೆ ಮರಳಿದ್ದ ಅವರಿಗೆ ಶ್ವಾಸಕೋಶದ ಸಮಸ್ಯೆ ಉಲ್ಬಣಗೊಂಡು ಮೃತಪಟ್ಟಿದ್ದಾರೆ. ಇಂದು ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿದೆ.

(ಮಾಹಿತಿ ಕೃಪೆ ಕನ್ನಡದುನಿಯಾ)



ರುಚಿ ಮತ್ತು ವಾಸನೆಯನ್ನು ಗುರುತಿಸಲು ಸಮಸ್ಯೆಯಾಗುತ್ತಿದೆಯೇ? ಹಾಗಿದ್ದರೆ ಈ ರೀತಿ ಮಾಡಿ

 

ರುಚಿ ಮತ್ತು ವಾಸನೆಯನ್ನು ಗುರುತಿಸಲು ಸಮಸ್ಯೆಯಾಗುತ್ತಿದೆಯೇ? ಹಾಗಿದ್ದರೆ ಈ ರೀತಿ ಮಾಡಿ

ಕೊರೋನದ ರೋಗಲಕ್ಷಣಗಳಲ್ಲಿ ರುಚಿ ಮತ್ತು ವಾಸನೆಯನ್ನು ಗುರುತಿಸಲು ಆಗದಿರುವುದು ಮುಖ್ಯ ಲಕ್ಷಣಗಳೆಂದು ಪರಿಗಣಿಸಲಾಗುತ್ತದೆ. ಆದರೆ ತಜ್ಞರ ಪ್ರಕಾರ, ಈ ಎರಡೂ ಲಕ್ಷಣಗಳು ಜ್ವರದಲ್ಲಿಯೂ ಕಂಡುಬರುತ್ತವೆ. ಆದರೆ ನಿಮಗೆ ರುಚಿ ಅಥವಾ ವಾಸನೆಯನ್ನು ಗುರುತಿಸುವಲ್ಲಿ ಸಮಸ್ಯೆಯಾಗುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ ಅಥವಾ ಭಯಪಡಬೇಡಿ. ಈ ಸಮಸ್ಯೆಯನ್ನು ನಿವಾರಿಸಬಲ್ಲ ಕೆಲವು ಮನೆಮದ್ದುಗಳು ಇಲ್ಲಿವೆ.


1 ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿ ಆಂಟಿವೈರಸ್ ತರಹದ ಗುಣಗಳಿವೆ. ಆಯುರ್ವೇದದ ಪ್ರಕಾರ, ಬೆಳ್ಳುಳ್ಳಿಯಲ್ಲಿರುವ ಪದಾರ್ಥಗಳು ಮೂಗಿನಲ್ಲಿನ ಊತದ ಸಮಸ್ಯೆಯನ್ನು ನಿವಾರಿಸುತ್ತದೆ. ಇದಕ್ಕಾಗಿ ನೀವು ಬೆಳ್ಳುಳ್ಳಿಯನ್ನು ನೀರಿನಲ್ಲಿ ಸೇರಿಸಿ ಬಿಸಿ ಮಾಡಿ ಸೇವಿಸಬಹುದು.

ನೀವು ಇದಕ್ಕೆ ನಿಂಬೆ ರಸವನ್ನು ಮತ್ತು ಅರಿಶಿನವನ್ನು‌ ಸೇರಿಸಬಹುದು. ಇದನ್ನು ಸೇವಿಸುವುದರಿಂದ ನಿಮ್ಮ ರುಚಿ ಮತ್ತು ವಾಸನೆ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸಬಹುದು.

2 ಕೊತ್ತಂಬರಿ ಸೊಪ್ಪು: ಆಯುರ್ವೇದದಲ್ಲಿ, ಕೊತ್ತಂಬರಿ ಸೊಪ್ಪನ್ನು ಶೀತವನ್ನು ನಿವಾರಿಸಲು ಔಷಧಿಯಾಗಿ ಬಳಸಲಾಗುತ್ತದೆ. ಇದು ವಾಸನೆ ಗುರುತಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕೊತ್ತಂಬರಿ ಸೊಪ್ಪನ್ನು ಕರವಸ್ತ್ರದಲ್ಲಿ ಇರಿಸಿ ಮತ್ತು ಆಳವಾದ ಉಸಿರನ್ನು ತೆಗೆದುಕೊಳ್ಳುತ್ತಾ ಅದನ್ನು ಉಸಿರಾಡಲು ಪ್ರಯತ್ನಿಸಿ.

3 ಹರಳೆಣ್ಣೆ: ಸೈನುಟಿಸ್ ನ ನೋವು ಮತ್ತು ಅಲರ್ಜಿಗೆ ಹರಳೆಣ್ಣೆ ತುಂಬಾ ಪ್ರಯೋಜನಕಾರಿಯಾಗಿದೆ. ಆದ್ದರಿಂದ ಹರಳೆಣ್ಣೆ ಅನ್ನು ಸ್ವಲ್ಪ ಬೆಚ್ಚಗಾಗಿಸಿ ಮತ್ತು ಅದರ ಒಂದು ಹನಿಯನ್ನು ಮೂಗಿಗೆ ಹಾಕಿ. ಇದನ್ನು ಬೆಳಿಗ್ಗೆ ಮತ್ತು ರಾತ್ರಿಯಲ್ಲಿ ಮಲಗುವ ಸಮಯದಲ್ಲಿ ಬಳಸಿ. ಅದು ನಿಮ್ಮ ಮುಚ್ಚಿದ ಮೂಗು ತೆರೆಯುತ್ತದೆ ಮತ್ತು ವಾಸನೆ ಗುರುತಿಸಲು ನೆರವಾಗುತ್ತದೆ.

ದೇಹವು ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಲು ಈ ರೀತಿ ಮಾಡಿ#Saakshatv #healthtips #immunity https://t.co/5t5Bbj6Bod

- Saaksha TV (@SaakshaTv)

ವಿಜಯ ಸಂಕೇಶ್ವರ್ ಹೇಳಿಕೆ ಬರೀ ಬೊಗಳೆ; ನರೇಂದ್ರ ನಾಯಕ್


 ಮಂಗಳೂರು, ಏಪ್ರಿಲ್ 28; ಮೂಗಿಗೆ ಎರಡು ಹನಿ ಲಿಂಬೆ ರಸ ಹಾಕಿದರೆ ದೇಹದಲ್ಲಿರುವ ಆಕ್ಸಿಜನ್ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಉದ್ಯಮಿ, ವಿಆರ್‌ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ವಿಜಯ ಸಂಕೇಶ್ವರ ಹೇಳಿಕೆ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದೆ.

ಕೆಲವು ಮಂದಿ ವಿಜಯ ಸಂಕೇಶ್ವರರ ಹೇಳಿಕೆಗೆ ಸರಿ ಅಂತಾ ಹೇಳಿದರೆ ಇನ್ನೂ ಕೆಲವರು ಇದು ಮೂರ್ಖತನದ ಪರಮಾವಧಿ ಅಂತಾ ಜರಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿರುವ ಹೇಳಿಕೆಗೆ ಮಂಗಳೂರಿನ ವಿಚಾರವಾದಿ ಚಿಂತಕ ಪ್ರೊ. ನರೇಂದ್ರ ನಾಯಕ್ ವಿರೋಧ ವ್ಯಕ್ತಪಡಿಸಿದ್ದಾರೆ.

"ಲಿಂಬೆ ರಸವನ್ನು ಮೂಗಿಗೆ ಹಾಕಿದರೆ ಆಕ್ಸಿಜನ್ ಸಮಸ್ಯೆ ನಿವಾರಣೆ ಆಗುತ್ತದೆ ಅನ್ನೋದು ತಪ್ಪು ಮಾಹಿತಿ. ಮೂಗಿನಲ್ಲಿ ಲಿಂಬೆ ರಸ ಹಾಕಿದರೆ ಕಫ ಹೋಗಿ ಉಸಿರಾಟ ಸರಾಗವಾಗುತ್ತದೆ ಅನ್ನೋದು ಮೂರ್ಖತನದ ಪರಮಾವಧಿಯಾಗಿದೆ‌.  ಲಿಂಬೆ ರಸ ಹಾಕೋದು ಮೂಗಿಗೆ. ಮೂಗಿನಿಂದ ಬರೋದು ಸಿಂಬಳ. ಕಫ ಬರೋದು ಶ್ವಾಸಕೋಶದಿಂದ. ಹಾಗಿರುವ ಇದು ಯಾವ ರೀತಿ ಪರಿಣಾಮಕಾರಿಯಾಗುತ್ತದೆ?" ಎಂದು ಪ್ರಶ್ನಿಸಿದ್ದಾರೆ.  "ತುಂಬಾ ಅಸಿಡಿಕ್ ಆಗಿರುವ ಲಿಂಬೆಯನ್ನು ಮೂಗಿನ ಒಳಗೆ ಹಾಕಿದರೆ ಆಗುವ ಪರಿಣಾಮದ ಬಗ್ಗೆ ತಜ್ಞರೇ ಉತ್ತರಿಸಬೇಕಾಗುತ್ತದೆ. ಹೊರಗಿನ ಅಸ್ವಾಭಾವಿಕ ರಸವನ್ನು ಮೂಗಿಗೆ ಹಾಕಿದರೆ ಆರೋಗ್ಯಕ್ಕೆ ತುಂಬಾ ಅಪಾಯಕಾರಿಯಾಗಲಿದೆ" ಅಂತಾ ನರೇಂದ್ರ ನಾಯಕ್ ಅಭಿಪ್ರಾಯ ಪಟ್ಟಿದ್ದಾರೆ‌.

ವಿಜಯ ಸಂಕೇಶ್ವರ ಅವರು ಲಿಂಬೆ ಕೇವಲ ಆಕ್ಸಿಜನ್ ವೃದ್ಧಿಮಾಡುತ್ತದೆ ಅಂತಾ ಹೇಳಿಕೆ ನೀಡಿದ್ದಾರೆ ಹೊರತು ಕೊರೊನಾವನ್ನು ನಿವಾರಣೆ ಮಾಡುತ್ತದೆ ಅಂತಾ ಹೇಳಿಕೆ ನೀಡೋದಿಲ್ಲ ಅಂತಾ ಸ್ಪಷ್ಟೀಕರಣಗೂ ಉತ್ತರಿಸಿದ ನರೇಂದ್ರ ನಾಯಕ್, "ದೇಶದ ಮೆಡಿಕಲ್ ಕಾಯಿದೆ ಪ್ರಕಾರ ಇರುವ ರೋಗದ ಪಟ್ಟಿಗೆ ಯಾವುದೇ ಜೌಷಧ ಉಪಯೋಗಕಾರಿ ಅಂತಾ ಹೇಳುವ ಹಾಗಿಲ್ಲ. ಹಾಗೆ ಹೇಳಿದರೆ ಅದು ಕ್ರಿಮಿನಲ್ ಅಪರಾಧವಾಗುತ್ತದೆ".

"ಕಳೆದ ಫ್ರೆಬ್ರವರಿಯಲ್ಲಿ ಕೊರೊನಾವನ್ನೂ ಆ ಪಟ್ಟಿಗೆ ಸೇರಿಸಲಾಗಿದೆ. ಹಾಗಾಗಿ ವಿಜಯ ಸಂಕೇಶ್ವರ ಕೊರೊನಾಗೆ ಔಷಧಿ ಅಂತಾ ಹೇಳಿಲ್ಲ. ಆದರೆ ಮಾತಿನಲ್ಲಿ ಅದನ್ನು ವ್ಯಕ್ತಪಡಿಸಿದ್ದಾರೆ. ಜನರಿಗೆ ರೋಗದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕೇ ಹೊರತು ಇಂತಹ ನಾನ್ ಸೆನ್ಸ್ ಮಾಡಬಾರದು..ಜೀವರಸಾಯನ ಶಾಸ್ತ್ರಜ್ಞ ನಾಗಿ ಹೇಳೋದಾದ್ರೆ ವಿಜಯ ಸಂಕೇಶ್ವರರ ಹೇಳಿಕೆ ಅದು ಬರಿ ಬೊಗಳೆ" ಅಂತಾ ನರೇಂದ್ರ ನಾಯಕ್ ಹೇಳಿದ್ದಾರೆ.

(ಮಾಹಿತಿ ಕೃಪೆ Oneindia)

ಕೊರೊನಾದಿಂದ ಪಾರಾಗಲು ವಿಜ್ಞಾನಿಗಳು ಕೊಟ್ಟ ಸಲಹೆ ಇಲ್ಲಿದೆ ನೋಡಿ..!

 

ವಿಟಮಿನ್ ಡಿ ಕೊರತೆಯಿರುವವರಿಗೆ ಸಹ ಕೊರೊನಾ ಅಪಾಯವನ್ನುಂಟು ಮಾಡುತ್ತದೆಯಂತೆ. ಅತ್ಯಂತ ಆಘಾತಕಾರಿ ವಿಷಯವೆಂದರೆ ವಿಟಮಿನ್ ಡಿ ಕೊರತೆ ಇರುವ ಹೆಚ್ಚಿನ ಜನರು ಸಹ ಕೊರೊನಾದಿಂದ ಸಾಯುತ್ತಿದ್ದಾರೆ. 20 ಯುರೋಪಿಯನ್ ದೇಶಗಳಲ್ಲಿ ಸೋಂಕಿತ ರೋಗಿಗಳು ಸಾವನ್ನಪ್ಪಿರುವುದಕ್ಕೆ ಈ ಅಂಶವೂ ಒಂದು ಕಾರಣ ಎಂದು ವಿಜ್ಞಾನಿಗಳು ಬಹಿರಂಗಪಡಿಸಿದ್ದು, ಈ ವೈರಸ್ ಮತ್ತು ವಿಟಮಿನ್ ಡಿ ನಡುವಿನ ಸಂಪರ್ಕವನ್ನು ಕಂಡುಹಿಡಿಯಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ.

ವಿಟಮಿನ್ ಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಈ ವೈರಸ್ಗೆ ಬಲಿಯಾಗುವ ವ್ಯಕ್ತಿಯು ಕಡಿಮೆ ವಿಟಮಿನ್ ಡಿ ಮಟ್ಟವನ್ನು ಹೊಂದಿರುತ್ತಾನೆ. ಆದ್ದರಿಂದ ವಿಟಮಿನ್ ಡಿ ಕೊರತೆಯಾದರೆ ಅಪಾಯ ಹೆಚ್ಚು ಎಂದು ಸ್ಕಿನ್ ಕ್ಯಾನ್ಸರ್ ತಜ್ಞ ಹೇಳಿದ್ದಾರೆ. ದೇಹದ ಪ್ರತಿರಕ್ಷೆಯನ್ನು ಸಮತೋಲನಗೊಳಿಸುವಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆ.  ಕ್ವೀನ್ ಎಲಿಜಬೆತ್ ಹಾಸ್ಪಿಟಲ್ ಫೌಂಡೇಶನ್ ಟ್ರಸ್ಟ್ ಮತ್ತು ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳ ಪ್ರಕಾರ, ಸೋಂಕನ್ನು ತಡೆಗಟ್ಟಲು ವಿಟಮಿನ್-ಡಿ ಪೂರಕಗಳನ್ನು ಪರಿಗಣಿಸಬೇಕಾಗಿದೆ. ವಿಟಮಿನ್ ಡಿ ಹೆಚ್ಚಿದ್ದರೆ ಸೋಂಕಿತ ವ್ಯಕ್ತಿಯು ಚೇತರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಆಶಿಸಿದ್ದಾರೆ. ಡಬ್ಲಿನ್ನ ಟ್ರಿನಿಟಿ ಕಾಲೇಜಿನಲ್ಲಿ ನಡೆಸಿದ ಅಧ್ಯಯನವು ವಿಟಮಿನ್ ಡಿ ಪ್ರಮಾಣವು ಎದೆಯ ಸೋಂಕಿನ ಸಾಧ್ಯತೆಯನ್ನು 50 ಪ್ರತಿಶತದಷ್ಟು ಕಡಿಮೆಗೊಳಿಸಿದೆ ಎಂದು ತೋರಿಸಿದೆ.

ಅಧ್ಯಯನದ ಪ್ರಕಾರ ಇಟಲಿಯಲ್ಲಿ 70 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ವಿಟಮಿನ್ ಡಿ ಮಟ್ಟವು 30 nmol / L ಆಗಿತ್ತು, ಇದು ಸರಾಸರಿಗಿಂತ 26 nmol / L ಕಡಿಮೆಯಿದೆ. ಇಟಲಿಯಲ್ಲಿ ಸಾಮೂಹಿಕ ಸಾವುಗಳು ಹೆಚ್ಚು ಸಂಭವಿಸಿರುವುದನ್ನು ನಾವಿಲ್ಲಿ ಗಮನಿಸಬಹುದು. ಸ್ವಿಟ್ಜರ್ಲ್ಯಾಂಡ್ನಲ್ಲೂ ಇದೇ ರೀತಿ ಆಗಿದೆ.

ಸ್ಪೇನ್ನಲ್ಲಿ ವಿಟಮಿನ್ ಡಿ ಮಟ್ಟವು 26, 28 ಮತ್ತು ಇಟಲಿಯಲ್ಲಿ ಇದು ಪ್ರತಿ ವ್ಯಕ್ತಿಗೆ ಸರಾಸರಿ 45 nmol / L ಆಗಿದೆ, ಅಂದರೆ ಇದು ಸಾಮಾನ್ಯಕ್ಕಿಂತ ಕಡಿಮೆಯಾಗಿದೆ. ಅದಕ್ಕೆ ಈ ಎಲ್ಲಾ ದೇಶಗಳ ಮೇಲೆ ಕೊರೊನಾ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಒಬ್ಬ ವ್ಯಕ್ತಿಯು ಬೆಳಗ್ಗೆ 5 ರಿಂದ 10 ನಿಮಿಷಗಳನ್ನು ಬಿಸಿಲಿನಲ್ಲಿ ಕಳೆಯುವ ಮೂಲಕ ವಿಟಮಿನ್ ಡಿ ಹೆಚ್ಚಿಸಿಕೊಳ್ಳಬಹುದು. ಆದರೆ ಈ ಸಮಯದಲ್ಲಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ. ಮೀನು, ಅಣಬೆಗಳು ಮುಂತಾದ ಆಹಾರಗಳನ್ನು ಸೇವಿಸುವುದರಿಂದಲೂ ದೇಹಕ್ಕೆ ವಿಟಮಿನ್ ಡಿ ಸಿಗುತ್ತದೆ.

(ಮಾಹಿತಿ ಕೃಪೆ All Indian News 24x7)

ಮಾನವೀಯತೆಯ ಕಥೆ...😥👌🙏

 

ಒಬ್ಬಳು ಮಂಗಳಮುಖಿ ಭಿಕ್ಷೆ ಬೇಡಲೆಂದು ಶ್ರೀಮಂತ ವ್ಯಕ್ತಿಯ ಮನೆಗೆ ಹೋದಳು.

ಅಲ್ಲಿ ಒಳಗಡೆ ಆಗಷ್ಟೇ ಮದುವೆಯಾದ ದಂಪತಿಗಳಿಬ್ಬರು ಈ ಜಗಳವಾಡುತ್ತಿದ್ದರು.ಹೆಂಡತಿ ತನ್ನ ಗಂಡನಿಗೆ ಅತ್ತೆ ಮಾವನವರನ್ನು ಇದೆ ವಾರಾಂತ್ಯದೊಳಗೆ ವೃದ್ದಾಶ್ರಮ ಸೇರಿಸಿ ನನಗೆ ಮುಕ್ತಿ ಕೊಡಿ ಅಂತಾ ಬೇಡಿಕೊಳ್ಳುತ್ತಿದ್ದಾಗ ಗಂಡ ಈ ವಾರಾಂತ್ಯದೊಳಗೆ ಆಗದ ಮಾತು ಆದರೆ ತಿಂಗಳಾಂತ್ಯದೊಳಗೆ ವೃದ್ದಾಶ್ರಮಕ್ಕೆ ಕಳುಹಿಸುವೆ ಅನ್ನುತ್ತಾ ಹೆಂಡತಿಯನ್ನ ಪ್ರೀತಿಯಿಂದ ಓಲೈಸುತ್ತಾನೆ....ಈ ವಾದ ವಿವಾದ ಮುಗಿದು ಮನೆಗೆ ಬಂದ ಮಂಗಳಮುಖಿಗೆ ಕೈ ತುಂಬಾ ಹಣ ನೀಡುತ್ತಾ ತಮ್ಮ ಅದ್ಭುತ ಜೀವನಕ್ಕೆ ಆಶೀರ್ವಾದ ಮಾಡು ಎಂದು ನಗುನಗುತ್ತಾ ಕೋರಿಕೆಯನ್ನ ಮುಂದಿಡುತ್ತಾರೆ.....

ಆಗ ಆ ಮಂಗಳಮುಖಿ ನಗುತ್ತಾ ಹೇಳುವಳು ತಂದೆ ತಾಯಿಯನ್ನು ಪ್ರೀತಿಸದ ಜೀವಕ್ಕೆ ಆ ದೇವರು ಸಹ ಆಶೀರ್ವಾದ ನೀಡಲು ಹಿಂಜರಿಯುವನು...ಆದರೂ ಅರ್ಧನಾರೀಶ್ವರನ ಅವತಾರ ತಾಳಿದ ನಾನು ನಿಮಗೆ ಮನಸೋ ಇಚ್ಛೆ ಹರಸುವೆನು ಎಂದಾಗ ಆ ದಂಪತಿಗಳಿಬ್ಬರು ತಮ್ಮ ಶಿರಭಾಗಿ ಅವಳ ಮುಂದೆ ನಿಲ್ಲುತ್ತಾರೆ....

ಆಗ ಅವಳು ಹೇಳಿದ ಮಾತು ಏನು ಗೊತ್ತಾ......

ಮುಂದಿನ ಜನ್ಮದಲ್ಲಿ ನನಗಿಂತಲೂ ಸುಂದರವಾದ ಮಂಗಳಮುಖಿ ಆಗಿ ಇದೆ ಭೂಮಿಯಲ್ಲಿ ಜನಿಸಿರಿ ಆಗ ನಿಮ್ಮವರನ್ನು ದೂರ ಸರಿಸೋ ಪ್ರಮೇಯವೇ ಬರೋದಿಲ್ಲ

ಪ್ರಪಂಚವೇ ನಿಮ್ಮನ್ನ ದೂರ ಸರಿಸುತ್ತದೆ....ಈ ಜನ್ಮದಲ್ಲಿ ತಂದೆ ತಾಯಿಯರನ್ನು ವೃದ್ದಾಶ್ರಮಕ್ಕೆ ತಳ್ಳುವ ನಿಮಗೆ ಮುಂದಿನ ಜನ್ಮದಲ್ಲಿ ಅವರು ತಮ್ಮ ಮಕ್ಕಳೆಂಬ ಕರುಣೆ ಮರೆತು ನಿಮ್ಮನ್ನ ಯಾರು ವಾಸಿಸಲು ಯೋಗ್ಯವಾದ ಜಾಗದಲ್ಲಿ ಬಿಟ್ಟು ಹೋಗುವರು... 

ನಿಮಗೆ ಶುಭವಾಗಲಿ ಅನ್ನುತ್ತಾ ಅವಳು ಅಲ್ಲಿಂದ ಸಾಗುವಳು. 

ತಂದೆ ತಾಯಿಯರನ್ನು ದೂರ ಮಾಡೋ ಪ್ರತಿ ವ್ಯಕ್ತಿಗೂ ಈ ಸಣ್ಣ ಕಥೆ ಸಮರ್ಪಣೆ...

Wednesday, April 28, 2021

ಇತರ ಸಾವು ಯಾರಿಗೂ ಬೇಡ ದೇವರೇ


 ಉತ್ತರ ಪ್ರದೇಶದ ಜೌನ್ ಪುರ ನಲ್ಲಿ ಒಬ್ಬ ವೃದ್ಧ ತನ್ನ ಹೆಂಡತಿ 55ವರ್ಷದ ರಾಜ್ ಕುಮಾರಿ ದೇವಿ ಅವರ  ಶವಕ್ಕೆ ಅಂತಿಮ ಸಂಸ್ಕಾರ ನಿರಕರಿಸಿದ ಊರಿನವರಿಂದ ತಟಸ್ಥ ನಾಗಿ ಕುಳಿತಿರುವುದು . ಇದೇ ನನ್ನ ಭಾರತ, ಇದೇ ನಾವು ಆಯ್ಕೆ ಮಾಡಿದ ಆಡಳಿತ . ಇಲ್ಲಿ ಮಾನವಿಯತೆಗೆ ಬೆಲೆ ಇಲ್ಲ , ಬೆಲೆಯಲ್ಲಿ ಈ ದರಿದ್ರ ಸರ್ಕಾರಕ್ಕೆ ಮಾತ್ರ ಕರುಣೆ ಅನ್ನೋದೇ ಇಲ್ಲ...

ಕಷ್ಟ ಕಾಲದಲ್ಲಿ  ಬಂಧುಗಳು ಇಲ್ಲ 

ಸಾವು ಬಂದಾಗ ದೇವರು ಇಲ್ಲ...


ಟಾಲಿವುಡ್ ನಟ ಅಲ್ಲು ಅರ್ಜುನ್ ಗೆ ಕೊರೋನಾ ಪಾಸಿಟಿವ್ : ನನ್ನ ಬಗ್ಗೆ ಚಿಂತಿಸಬೇಡಿ, ಎಲ್ಲರೂ ಸುರಕ್ಷಿತವಾಗಿರಿ ಎಂದ ನಟ

 

ಹೈದರಾಬಾದ್ : ಟಾಲಿವುದ್ ಜನಪ್ರಿಯ ನಟ ಅಲ್ಲು ಅರ್ಜುನ್ ಅವರು ಕೋವಿಡ್-19 ಗೆ ಪಾಸಿಟಿವ್ ಪರೀಕ್ಷೆ ಮಾಡಿದ್ದಾರೆ ಎಂದು ಸ್ಟೈಲಿಷ್ ಸ್ಟಾರ್ ಬುಧವಾರ ಇನ್ ಸ್ಟಾಗ್ರಾಮ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.

ಇನ್ ಸ್ಟಾಗ್ರಾಮ್ ನಲ್ಲಿ ಅರ್ಜುನ್ ಒಂದು ಹೇಳಿಕೆಯನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು 'ನನಗೆ ಕೊರೋನಾ ಪಾಸಿಟಿವ್ ಬಂದಿದ್ದು, ಎಲ್ಲಾ ಶಿಷ್ಟಾಚಾರಗಳನ್ನು ಅನುಸರಿಸುತ್ತಿದ್ದಾರೆ' ಮತ್ತು ತಮ್ಮ ಮನೆಯಲ್ಲಿ ಸ್ವಯಂ ಐಸಲೋಷನ್ ನಲ್ಲಿದ್ದಾರೆ ಎಂದು ಬರೆದಿದ್ದಾರೆ, ಅಲ್ಲಿ ಅವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ.

ಅಷ್ಟೇ ಅಲ್ಲದೇ ನಟ ತನ್ನ ಬಗ್ಗೆ ಚಿಂತಿಸಬೇಡಿ ಮತ್ತು ಲಸಿಕೆ ಹಾಕಿಸಿಕೊಳ್ಳುವಂತೆ ತಮ್ಮ ಅಭಿಮಾನಿಗಳನ್ನು ವಿನಂತಿಸಿದರು.

ಎಲ್ಲರಿಗೂ ನಮಸ್ಕಾರ, ನಾನು ಕೋವಿಡ್ ಗೆ ಪಾಸಿಟಿವ್ ಪರೀಕ್ಷಿಸಿದ್ದೇನೆ. ನಾನು ಮನೆಯಲ್ಲಿ ನನ್ನನ್ನು ಪ್ರತ್ಯೇಕಿಸಿಕೊಂಡಿದ್ದೇನೆ ಮತ್ತು ಎಲ್ಲಾ ಶಿಷ್ಟಾಚಾರಗಳನ್ನು ಅನುಸರಿಸುತ್ತಿದ್ದೇನೆ,' ಎಂದು ನಟ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ ಮತ್ತು 'ನನ್ನೊಂದಿಗೆ ಸಂಪರ್ಕಕ್ಕೆ ಬಂದವರನ್ನು ಪರೀಕ್ಷಿಸಲು ನಾನು ವಿನಂತಿಸುತ್ತೇನೆ. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಮತ್ತು ನಿಮಗೆ ಅವಕಾಶ ಸಿಕ್ಕಾಗ ಲಸಿಕೆ ಹಾಕಿಸಿಕೊಳ್ಳಿ ಎಂದು ಹೇಳಿದ್ದಾರೆ.

'ನಾನು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ನನ್ನ ಬಗ್ಗೆ ಚಿಂತಿಸಬೇಡಿ ಎಂದು ನನ್ನ ಎಲ್ಲಾ ಹಿತೈಷಿಗಳು ಮತ್ತು ಅಭಿಮಾನಿಗಳನ್ನು ನಾನು ವಿನಂತಿಸುತ್ತೇನೆ.'ಎಂದು ತಿಳಿಸಿದ್ದಾರೆ.

(ಮಾಹಿತಿ ಕೃಪೆ Kannada News Now)