ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಕೈಗೊಂಡ ಪ್ರಯತ್ನಗಳು ಫಲ ನೀಡುತ್ತಿಲ್ಲ. ಬದಲಿಗೆ, ಸೋಂಕು ಹರಡುವ ಪ್ರಮಾಣ ದಿನೇ ದಿನೇ ಹೆಚ್ಚುತ್ತಲೇ ಸಾಗಿದೆ.
ಸೋಂಕಿತರ ಸಾವಿನ ಸಂಖ್ಯೆಯೂ ಕಡಿಮೆಯಾಗದೆ ಜನರ ಆತಂಕವನ್ನು ಹೆಚ್ಚಿಸುತ್ತಲೇ ಸಾಗಿದೆ.
ಗುರುವಾರ ಸಂಜೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ನಗರದಾದ್ಯಂತ ಜ್ವರ, ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದ ಒಟ್ಟು 73,851 ಜನ ಪರೀಕ್ಷೆಗೆ ಒಳಪಟ್ಟಿದ್ದು, ಆ ಪೈಕಿ 24,235 (ಶೇ 32.82) ಜನಕ್ಕೆ ಸೋಂಕು ತಗುಲಿದೆ.
ಚಿಕಿತ್ಸೆ ಪಡೆಯುತ್ತಿದ್ದ 395 ಜನ ಸಾವಿಗೀಡಾಗಿದ್ದು, ದಿನವೊಂದರಲ್ಲಿ ಕೊರೊನಾದಿಂದ ಅಧಿಕ ಸಂಖ್ಯೆಯ ಸಾವು ದಾಖಲಾದಂತಾಗಿದೆ.
2020ರ ಮಾರ್ಚ್‌ನಿಂದ ಇಲ್ಲಿಯ ತನಕ ದೆಹಲಿಯಲ್ಲಿ ಒಟ್ಟು 15,772 ಜನ ಪ್ರಾಣ ಕಳೆದುಕೊಂಡಿದ್ದಾರೆ.
ಗುರುವಾರ 25,615 ಜನ ಗುಣಮುಖರಾಗಿದ್ದು, 97,977 ಸಕ್ರಿಯ ಪ್ರಕರಣಗಳಿವೆ. 15 ದಿನಗಳಿಂದ ದೆಹಲಿಯಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದರೂ, ಕೊರೊನಾ ಸೋಂಕಿನ ಹಾವಳಿ ಮಿತಿ ಮೀರಿದೆ.
(ಮಾಹಿತಿ ಕೃಪೆ ಪ್ರಜಾವಾಣಿ )
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ