ವಿಟಮಿನ್ ಡಿ ಕೊರತೆಯಿರುವವರಿಗೆ ಸಹ ಕೊರೊನಾ ಅಪಾಯವನ್ನುಂಟು ಮಾಡುತ್ತದೆಯಂತೆ. ಅತ್ಯಂತ ಆಘಾತಕಾರಿ ವಿಷಯವೆಂದರೆ ವಿಟಮಿನ್ ಡಿ ಕೊರತೆ ಇರುವ ಹೆಚ್ಚಿನ ಜನರು ಸಹ ಕೊರೊನಾದಿಂದ ಸಾಯುತ್ತಿದ್ದಾರೆ. 20 ಯುರೋಪಿಯನ್ ದೇಶಗಳಲ್ಲಿ ಸೋಂಕಿತ ರೋಗಿಗಳು ಸಾವನ್ನಪ್ಪಿರುವುದಕ್ಕೆ ಈ ಅಂಶವೂ ಒಂದು ಕಾರಣ ಎಂದು ವಿಜ್ಞಾನಿಗಳು ಬಹಿರಂಗಪಡಿಸಿದ್ದು, ಈ ವೈರಸ್ ಮತ್ತು ವಿಟಮಿನ್ ಡಿ ನಡುವಿನ ಸಂಪರ್ಕವನ್ನು ಕಂಡುಹಿಡಿಯಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ.
ವಿಟಮಿನ್ ಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಈ ವೈರಸ್ಗೆ ಬಲಿಯಾಗುವ ವ್ಯಕ್ತಿಯು ಕಡಿಮೆ ವಿಟಮಿನ್ ಡಿ ಮಟ್ಟವನ್ನು ಹೊಂದಿರುತ್ತಾನೆ. ಆದ್ದರಿಂದ ವಿಟಮಿನ್ ಡಿ ಕೊರತೆಯಾದರೆ ಅಪಾಯ ಹೆಚ್ಚು ಎಂದು ಸ್ಕಿನ್ ಕ್ಯಾನ್ಸರ್ ತಜ್ಞ ಹೇಳಿದ್ದಾರೆ. ದೇಹದ ಪ್ರತಿರಕ್ಷೆಯನ್ನು ಸಮತೋಲನಗೊಳಿಸುವಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆ. ಕ್ವೀನ್ ಎಲಿಜಬೆತ್ ಹಾಸ್ಪಿಟಲ್ ಫೌಂಡೇಶನ್ ಟ್ರಸ್ಟ್ ಮತ್ತು ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳ ಪ್ರಕಾರ, ಸೋಂಕನ್ನು ತಡೆಗಟ್ಟಲು ವಿಟಮಿನ್-ಡಿ ಪೂರಕಗಳನ್ನು ಪರಿಗಣಿಸಬೇಕಾಗಿದೆ. ವಿಟಮಿನ್ ಡಿ ಹೆಚ್ಚಿದ್ದರೆ ಸೋಂಕಿತ ವ್ಯಕ್ತಿಯು ಚೇತರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಆಶಿಸಿದ್ದಾರೆ. ಡಬ್ಲಿನ್ನ ಟ್ರಿನಿಟಿ ಕಾಲೇಜಿನಲ್ಲಿ ನಡೆಸಿದ ಅಧ್ಯಯನವು ವಿಟಮಿನ್ ಡಿ ಪ್ರಮಾಣವು ಎದೆಯ ಸೋಂಕಿನ ಸಾಧ್ಯತೆಯನ್ನು 50 ಪ್ರತಿಶತದಷ್ಟು ಕಡಿಮೆಗೊಳಿಸಿದೆ ಎಂದು ತೋರಿಸಿದೆ.
ಅಧ್ಯಯನದ ಪ್ರಕಾರ ಇಟಲಿಯಲ್ಲಿ 70 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ವಿಟಮಿನ್ ಡಿ ಮಟ್ಟವು 30 nmol / L ಆಗಿತ್ತು, ಇದು ಸರಾಸರಿಗಿಂತ 26 nmol / L ಕಡಿಮೆಯಿದೆ. ಇಟಲಿಯಲ್ಲಿ ಸಾಮೂಹಿಕ ಸಾವುಗಳು ಹೆಚ್ಚು ಸಂಭವಿಸಿರುವುದನ್ನು ನಾವಿಲ್ಲಿ ಗಮನಿಸಬಹುದು. ಸ್ವಿಟ್ಜರ್ಲ್ಯಾಂಡ್ನಲ್ಲೂ ಇದೇ ರೀತಿ ಆಗಿದೆ.
ಸ್ಪೇನ್ನಲ್ಲಿ ವಿಟಮಿನ್ ಡಿ ಮಟ್ಟವು 26, 28 ಮತ್ತು ಇಟಲಿಯಲ್ಲಿ ಇದು ಪ್ರತಿ ವ್ಯಕ್ತಿಗೆ ಸರಾಸರಿ 45 nmol / L ಆಗಿದೆ, ಅಂದರೆ ಇದು ಸಾಮಾನ್ಯಕ್ಕಿಂತ ಕಡಿಮೆಯಾಗಿದೆ. ಅದಕ್ಕೆ ಈ ಎಲ್ಲಾ ದೇಶಗಳ ಮೇಲೆ ಕೊರೊನಾ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಒಬ್ಬ ವ್ಯಕ್ತಿಯು ಬೆಳಗ್ಗೆ 5 ರಿಂದ 10 ನಿಮಿಷಗಳನ್ನು ಬಿಸಿಲಿನಲ್ಲಿ ಕಳೆಯುವ ಮೂಲಕ ವಿಟಮಿನ್ ಡಿ ಹೆಚ್ಚಿಸಿಕೊಳ್ಳಬಹುದು. ಆದರೆ ಈ ಸಮಯದಲ್ಲಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ. ಮೀನು, ಅಣಬೆಗಳು ಮುಂತಾದ ಆಹಾರಗಳನ್ನು ಸೇವಿಸುವುದರಿಂದಲೂ ದೇಹಕ್ಕೆ ವಿಟಮಿನ್ ಡಿ ಸಿಗುತ್ತದೆ.
(ಮಾಹಿತಿ ಕೃಪೆ All Indian News 24x7)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ