WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Wednesday, April 28, 2021

ಕೋವಿಡ್‌ ಲಕ್ಷಣ ಮುನ್ನವೇ ಶ್ವಾಸಕೋಶಕ್ಕೆ ಹಾನಿ

 

ಕೋವಿಡ್‌ನ‌ ಎರಡನೇ ಅಲೆಯ ವಿರುದ್ಧ ದೇಶದಲ್ಲಿ ಸಮರ ಮುಂದುವರಿದಿದೆ. ಈ ಬಾರಿ ಕೊರೊನಾ ವೈರಸ್‌ ಜನರ ಶ್ವಾಸಕೋಶದ ಮೇಲೆ ಹೆಚ್ಚು ಮಾರಣಾಂತಿಕ ದಾಳಿ ನಡೆಸುತ್ತಿದೆ. ಕೊರೊನಾ ಲಕ್ಷಣಗಳು ಗೋಚರಿಸುವ ಮೊದಲೇ ಶೇ. 25 ಜನರಿಗೆ ಶ್ವಾಸ ಕೋ ಶಕ್ಕೆ ಹಾನಿಯಾಗುವ ಸಂದರ್ಭಗಳಿವೆ.

ಕೋವಿಡ್‌-19 ಹೊಂದಿರುವ ಸುಮಾರು ಶೇ. 60ರಿಂದ 65ರಷ್ಟು ರೋಗಿಗಳು ಸಾಮಾನ್ಯವಾಗಿ ಉಸಿ ರಾಡಲು ತೊಂದರೆ ಅನುಭವಿಸುತ್ತಾರೆ. ಅವರಲ್ಲಿನ ಆಮ್ಲಜನಕದ ಮಟ್ಟವು ಶೀಘ್ರವಾಗಿ ಕಡಿಮೆಯಾಗುತ್ತಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಕೃತಕ ಉಸಿರಾ ಟದ ವ್ಯವಸ್ಥೆ ಮಾಡಲಾಗುತ್ತದೆ.

ಎಕ್ಸ್‌ರೇ, ಸಿಟಿ ಸ್ಕ್ಯಾನ್‌ ಅಗತ್ಯ
ಆಮ್ಲಜನಕದ ಕೊರತೆಯಿಂದಾಗಿ ಬಳಲುವ ರೋಗಿಗಳ ಪರಿಸ್ಥಿತಿ ತುಂಬಾ ಗಂಭೀರವಾಗಿರುತ್ತದೆ. ಈ ಪ್ರಕರಣಗಳಲ್ಲಿ ಕೆಲವು ಆರಂಭಿಕ ಲಕ್ಷಣಗಳು ಕಂಡುಬರುತ್ತವೆ. ‌ತ್‌ಕ್ಷಣ ಈ ರೋಗಲಕ್ಷಣಗಳ ಗೋಚರಿಸುವಿಕೆಯ ಮೇಲೆ ಶ್ವಾಸಕೋಶವನ್ನು ಪರೀಕ್ಷಿಸಲು ಎಕ್ಸ್‌ರೇ ಮತ್ತು ಸಿಟಿ ಸ್ಕ್ಯಾನ್‌ ಮಾಡಿಸಬೇಕಾಗುತ್ತದೆ. ಇಲ್ಲದಿದ್ದರೆ ಇದು ಪತ್ತೆಯಾಗುವುದಿಲ್ಲ.

ನೆಗೆಟಿವ್‌ ರಿಪೋರ್ಟ್‌ ಬಂದರೂ..
ಕೆಲವೊಂದು ಸಾರಿ ನೆಗೆಟಿವ್‌ ವರದಿ ಬರುತ್ತದೆ. ಜತೆಗೆ ಕೆಲವೊಮ್ಮೆ ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಹಾಗಾಗಿ ಈ ಸಂದರ್ಭ ನೀವು ಪರೀಕ್ಷೆ ನಡೆಸಿದಾಗ ವರದಿ ನಕರಾತ್ಮಕವಾಗಿದ್ದರೂ ಸಿಟಿ ಸ್ಕ್ಯಾನ್‌ ವರದಿಯು ಅವರ ಶ್ವಾಸಕೋಶಕ್ಕೆ ಹಾನಿಯಾಗಿದೆ ಎಂದು ತೋರಿಸುತ್ತದೆ. ಮತ್ತೂಂದೆಡೆ ತಮ್ಮ ದೇಹದಲ್ಲಿ ಯಾವುದೇ ರೋಗಲಕ್ಷಣಗಳನ್ನು ಗೊತ್ತಾಗದ ರೋಗಿಗಳೂ ಇರುತ್ತಾರೆ.

ಕ್ಷೀಣಿಸಬಹುದು ಆರೋಗ್ಯ
ವೈದ್ಯರ ಪ್ರಕಾರ, 2ರಿಂದ 3 ದಿನಗಳಲ್ಲಿ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವವರ ಸ್ಥಿತಿ ತುಂಬಾ ಕೆಟ್ಟದಾಗುತ್ತದೆ. ಅಂಥ ರೋಗಿಗಳ ಶ್ವಾಸಕೋಶಗಳು ಸಹ ಹಾನಿಗೊ ಳಗಾಗುತ್ತವೆ. ಅವರನ್ನು ತಡಮಾಡದೆ ಆಸ್ಪತ್ರೆಗೆ ಸೇರಿಸಬೇಕು. 45 ವರ್ಷ ದೊಳಗಿನ ಜನರಲ್ಲಿ ಕೊರೊನಾ ಸೋಂಕು ಹೆಚ್ಚು ಶ್ವಾಸಕೋಶದ ಸಮಸ್ಯೆಯನ್ನು ಉಂಟು ಮಾಡುತ್ತಿವೆ. ಆದ್ದರಿಂದ ಯಾವುದೇ ರೋಗಲಕ್ಷಣಗಳು ಅಥವಾ ದೇಹದಲ್ಲಿ ಯಾವುದೇ ಬದಲಾವಣೆಗಳಿದ್ದಲ್ಲಿ ಪರೀಕ್ಷೆಯನ್ನು ಮಾಡಬೇಕು.

(ಮಾಹಿತಿ ಕೃಪೆ ಉದಯವಾಣಿ )

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ