ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಪ್ರತಿ ದಿನ ನಾನಾ ಚಟುವಟಿಕೆಗಳ ಮೂಲಕ ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಬಹುದು. ಅದಕ್ಕೆ ಪೂರಕವಾದ ಚಟುವಟಿಕೆಗಳ ಕೆಲವು ಉಪಯುಕ್ತ ಮಾಹಿತಿ ಇಲ್ಲಿದೆ.
ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಪ್ರತಿ ದಿನ ನಾನಾ ಚಟುವಟಿಕೆಗಳ ಮೂಲಕ ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಬಹುದು. ಅದಕ್ಕೆ ಪೂರಕವಾದ ಚಟುವಟಿಕೆಗಳ ಕೆಲವು ಉಪಯುಕ್ತ ಮಾಹಿತಿ ಇಲ್ಲಿದೆ.
ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಸೋಮವಾರ ಬೆಳಿಗ್ಗೆ ಆರಂಭಿಸಿದ್ದ ಶೋಧ ಕಾರ್ಯಾಚರಣೆ ಅಂತ್ಯಗೊಂಡಿದೆ. ದಾಳಿ ವೇಳೆ ₹ 57 ಲಕ್ಷ ಮತ್ತು ಹಲವು ದಾಖಲೆಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ.
₹ 74.93 ಕೋಟಿ ಮೌಲ್ಯದ ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಶಿವಕುಮಾರ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕರ್ನಾಟಕದ ಒಂಭತ್ತು, ದೆಹಲಿಯ ನಾಲ್ಕು ಮತ್ತು ಮುಂಬೈನ ಒಂದು ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಾಳಿ ವೇಳೆ ₹ 57 ಲಕ್ಷ ನಗದು, ಆಸ್ತಿ ಒಡೆತನಕ್ಕೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್ ದಾಖಲೆಗಳು ಮತ್ತು ಕಂಪ್ಯೂಟರ್ ಹಾರ್ಡ್ ಡಿಸ್ಕ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.(ಮಾಹಿತಿ ಕೃಪೆ ಪ್ರಜಾವಾಣಿ)
ಅವರು ಇಂದು ಕಾರವಾರ ನಗರ ಪೊಲೀಸ್ ಠಾಣಾ ಆವರಣದಲ್ಲಿ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಆರಂಭಿಸಲಾಗಿರುವ ನೂತನ ಕಾನೂನು ಸೇವೆಗಳ ಕೇಂದ್ರ (ಲೀಗಲ್ ಸರ್ವಿಸ್ ಕ್ಲಿನಿಕ್) ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ಕಾನೂನು ಸೇವೆಗಳ ಕೇಂದ್ರಗಳ ಮೂಲಕ ಯಾವುದೇ ವ್ಯಕ್ತಿ ಬಂಧಿತವಾಗುವ ಸಂದರ್ಭ ಕೈಗೊಳ್ಳಬೇಕಾದ ಕಾನೂನು ಬದ್ದ ಕ್ರಮಗಳ ಕುರಿತು ನೆರವು ಪಡೆಯಬಹುದಾಗಿದ್ದು ತಪ್ಪಿತಸ್ಥ ವ್ಯಕ್ತಿ ನ್ಯಾಯಾಲಯ ಅಥವಾ ಸಂಬಂಧಿಸಿದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಅವರಿಗೆ ವಕೀಲರನ್ನು ನೇಮಕ ಮಾಡಿಕೊಳ್ಳಲು ಆಗದಿದ್ದ ಪಕ್ಷದಲ್ಲಿ ಕಾನೂನು ಚೌಕಟ್ಟಿನ ಅಡಿಯಲ್ಲಿ ಕಾನೂನು ಸೇವಾ ಕೇಂದ್ರಗಳ ಮೂಲಕ ನೆರವು ಒದಗಿಸಲಾಗುವುದು ಇದಕ್ಕಾಗಿ ರಿಮ್ಯಾಂಡ್ ಅಥವಾ ಪ್ಯಾನೆಲ್ ಅಡ್ವೋಕೇಟ್‌ರನ್ನು ನೇಮಿಸಲಾಗಿದೆ ಎಂದರು.
ಲೀಗಲ್ ಸರ್ವಿಸ್ ಕ್ಲಿನಿಕ್ ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ದಸ್ತಗಿರಿಯಾಗಿರುವ ವ್ಯಕ್ತಿಗಳನ್ನು ರಕ್ಷಿಸುವ ಉದ್ದೇಶ ಹೊಂದಿಲ್ಲ ಬದಲಾಗಿ ಅವರಿಗೆ ಮೂಲಭೂತ ಕಾನೂನಾತ್ಮಕವಾಗಿ ದೊರೆಯುವ ನೆರವು, ಹಕ್ಕುಗಳನ್ನು ಪ್ರತಿಪಾದಿಸುವುದಾಗಿದೆ ಎಂದ ಅವರು ಕೆಲವೊಂದು ಪ್ರಕರಣಗಳಲ್ಲಿ ವ್ಯಕ್ತಿ ದಸ್ತಗಿರಿ ಆಗದಿದ್ದರೂ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸುತ್ತಾರೆ ಆ ವೇಳೆ ಜನತೆ ಆತಂಕಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ ಅಂತಹ ಸಂದರ್ಭದಲ್ಲಿ ಇದರ ನೆರವು ಪಡೆಯಬಹುದಾಗಿದೆ ಎಂದರು.
ಯಾವುದೇ ಪ್ರಕರಣದಲ್ಲಿ ವ್ಯಕ್ತಿ ಮಾಡಿದ ಕೆಲಸ ತಪ್ಪು ಎಂದು ಸಾಬೀತಾದಲ್ಲಿ ಮಾತ್ರವೇ ಅವರನ್ನು ಅಪರಾಧಿ ಎನ್ನಲು ಸಾಧ್ಯ. ಕಾನೂನು ಸೇವಾ ಕೇಂದ್ರದಿಂದ ಸಾರ್ವಜನಿಕರಿಗೆ ನ್ಯಾಯಯುತವಾಗಿ ಸೌಲಭ್ಯ ಸಿಗಬೇಕು ಎನ್ನುವ ಉದ್ದೇಶದಿಂದ ರಾಷ್ಟೀಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಇದನ್ನು ಆರಂಭಿಸಲಾಗಿದ್ದು ಜನತೆ ಇದರ ಮಹತ್ವ ಅರಿತು ಸದುಪಯೋಗ ಪಡೆದುಕೊಳ್ಳುಬೇಕೆಂದು ಅವರು ತಿಳಿಸಿದರು.
ಬಂಧನಕ್ಕೊಳಗಾಗುವ ಮುನ್ನ ಆರೋಪಕ್ಕೆ ಒಳಗಾದ ವ್ಯಕ್ತಿ ಕಾನೂನು ಚೌಕಟ್ಟಿನಲ್ಲಿ ನೆರವು ಪಡೆಯಲು ಜಿಲ್ಲಾ ಕಾನೂನು ಸೇವಾ ಕೇಂದ್ರದ ಮೂಲಕ ಲೀಗಲ್ ಸರ್ವಿಸ್ ಕ್ಲಿನಿಕ್ ಸೇವೆಯನ್ನು ಆರಂಭಿಸಲಾಗಿದ್ದು, ಈ ಮೂಲಕ ಆ ವ್ಯಕ್ತಿಗೆ ಮೂಲಭೂತ ಹಕ್ಕುಗಳನ್ನು ಕಾನೂನಾತ್ಮಕ ನೆರವಿನ ಮೂಲಕ ಪಡೆಯಲು ಸಾಧ್ಯವಾಗಲಿದೆ. ಕಾನೂನು ಸೇವೆಗಳ ಕೇಂದ್ರದ ಸಲಹಾ ವಕೀಲರ ಕುರಿತು ಪ್ರತಿ ಠಾಣೆಗಳಲ್ಲಿ ಮೊಬೈಲ್ ನಂಬರ್ ಸಹಿತ ಅವರ ಹೆಸರಿನ ಮಾಹಿತಿಯನ್ನು ಫಲಕಗಳಲ್ಲಿ ಹಾಕಲಾಗುವುದರಿಂದ ತಪ್ಪಿತಸ್ಥರು ಬಂಧನವಾಗುವ ಮುನ್ನ ಕಾನೂನಾತ್ಮಕವಾಗಿ ಇವರಿಂದ ನೆರವು ಪಡೆಯಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ. ಗೋವಿಂದಯ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್. ಬದರಿನಾಥ, ಇದ್ದರು
(ಮಾಹಿತಿ ಕೃಪೆ Suddi Kannada)