WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Saturday, April 25, 2020

ಸಾಮಾಜಿಕ ಕಾರ್ಯಕರ್ತ, ಬಜರಂಗದಳ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ವಿಧಿವಶರಾಗಿದ್ದಾರೆ . ಅವರ ಆತ್ಮಕ್ಕೆ ಶಾಂತಿ ಸಿಗಲಿ. #RIP

ಕತ್ತಲು ಆವರಿಸಿರುವಾಗಲೇ ದೀಪವೊಂದು ಅರಿತು.
ನಮ್ಮ ಧ್ವನಿ ಸಂಸ್ಥಾಪಕರಾದ
ಅವರ ಆತ್ಮಕ್ಕೆ ಶಾಂತಿ ಸಿಗಲಿ.
ಮೊದಲು ಭಜರಂಗ ದಳದಲ್ಲಿ ಸಕ್ರಿಯವಾಗಿದ್ದ, ಕೊನೆಗೆ ಬೇಸತ್ತು, ತಪ್ಪಿನ ಅರಿವಾಗಿ ಸಾಮಾಜಿಕ ಹೋರಾಟಗಾರನಾಗಿ‌ ಸಾರ್ವತ್ರಿಕವಾದ ಬದಲಾವಣೆಯಾಗಿ ಜನಪರ ಕೆಲಸದಲ್ಲಿ ತೊಡಗಿದ್ದ ಭಜರಂಗದಳದ ಮಾಜಿ ಸಂಚಾಲಕ ಮಹೇಂದ್ರ ಕುಮಾರ್
ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಹೃದಯಾಘಾತದಿಂದ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಮಹೇಂದ್ರ ಕುಮಾರ್ ವಿಧಿವಶರಾಗಿದ್ದಾರೆ..!



ಹೊಸಪೇಟೆ: ಪೊಲೀಸ್‌ ಬಂದೋಬಸ್ತ್‌ನಲ್ಲಿ 'ಆಹಾರಾಧನ್ಯ' ಕಿಟ್‌ ವಿತರಣೆ

ಹೊಸಪೇಟೆ: ಬಿಗಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ಶನಿವಾರ ಇಲ್ಲಿನ ಸಂಡೂರು ರಸ್ತೆಯ ನಿವೇದಿತಾ ಶಾಲೆಯ ಮೈದಾನದಲ್ಲಿ 'ಆಹಾರಾನಂದ' ಕಿಟ್‌ಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.
ಮೈದಾನದ ಒಂದು ಅಂಚಿನಲ್ಲಿ ಕಿಟ್‌ ತುಂಬಿರುವ ಲಾರಿಗಳನ್ನು ನಿಲ್ಲಿಸಲಾಗಿತ್ತು. ಮೈದಾನದಲ್ಲಿ ಮಾರ್ಕಿಂಗ್‌ ಮಾಡಿ ಜನರನ್ನು ಅಂತರದಿಂದ ನಿಲ್ಲಿಸಿ, ಶಿಸ್ತುಬದ್ಧವಾಗಿ ಕಿಟ್‌ಗಳನ್ನು ಹಂಚಲಾಯಿತು.
ಕಿಟ್‌ ಹಂಚುವ ವಿಷಯ ಗೊತ್ತಾಗಿ ಜನ ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ಈ ಸಾಲು ಸಂಡೂರು ರಸ್ತೆಯ ತುಂಗಭದ್ರಾ ಮೇಲ್ಮಟ್ಟದ ಕಾಲುವೆ (ಎಚ್‌.ಎಲ್‌.ಸಿ.) ವರೆಗೆ ಕಂಡು ಬಂತು. ಬೆಳಿಗ್ಗೆ 7ರಿಂದ 11 ಗಂಟೆಯ ವರೆಗೆ ಕರ್ಫ್ಯೂನಲ್ಲಿ ಸಡಿಲಿಕೆ ಇದೆ. ಸಡಿಲಿಕೆ ಅವಧಿ ಮುಗಿದಿದ್ದರಿಂದ ಅನೇಕರು ಕಿಟ್ ಸಿಗದೇ ವಾಪಾಸಾದರು.
ಭಾನುವಾರ ಕೂಡ ಉಚಿತ ಕಿಟ್‌ ವಿತರಿಸುವ ಕೆಲಸ ನಡೆಯಲಿದೆ ಎಂದು ಗೊತ್ತಾಗಿದೆ.
ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರು ಅಂತ್ಯೋದಯ ಹಾಗೂ ಬಿ.ಪಿ.ಎಲ್‌. ಕಾರ್ಡುದಾರರಿಗೆ ಈ ಕಿಟ್‌ಗಳನ್ನು ಉಚಿತವಾಗಿ ವಿತರಿಸುತ್ತಿದ್ದಾರೆ. ಇತ್ತೀಚೆಗೆ ಕಿಟ್‌ ಹಾಗೂ ಟೋಕನ್‌ ಹಂಚುವಾಗ ಅಪಾರ ಸಂಖ್ಯೆಯಲ್ಲಿ ಜನ ನೆರೆದಿದ್ದರು. ತೀವ್ರ ಟೀಕೆ ವ್ಯಕ್ತವಾಗಿದ್ದರಿಂದ ಅದನ್ನು ಮೊಟಕುಗೊಳಿಸಿದ್ದರು. ಫಲಾನುಭವಿಗಳ ಮನೆಬಾಗಿಲಿಗೆ ಹೋಗಿ ಟೋಕನ್‌ ನೀಡಿದ್ದು, ಈಗ ಆಯಾ ಬಡಾವಣೆಗಳಲ್ಲಿ ಕಿಟ್‌ ವಿತರಿಸಲಾಗುತ್ತಿದೆ.
'ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಕಿಟ್‌ ವಿತರಿಸಲಾಗುತ್ತಿದೆ. ಜನರನ್ನು ಅಂತರದಿಂದ ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ಉಪವಿಭಾಗಾಧಿಕಾರಿ ಶೇಖ್‌ ತನ್ವೀರ್‌ ಆಸಿಫ್‌ 'ಪ್ರಜಾವಾಣಿ'ಗೆ ತಿಳಿಸಿದರು.

ಸಾಲ ಮನ್ನಾ: ಮತ್ತೊಂದು ಸಿಹಿ ಸುದ್ದಿ ಕೊಟ್ಟ ಯಡಿಯೂರಪ್ಪ 'ಸರ್ಕಾರ'

ಬೆಂಗಳೂರು: ಮೀನುಗಾರರ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರ 60 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸುಮಾರು 23,000 ಮೀನುಗಾರರ ಸಾಲ ಮನ್ನಾಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 60 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಒಂದು ವರ್ಷದಿಂದ ಮೀನುಗಾರರ ಸಾಲ ಮನ್ನಾ ಬಾಬ್ತು ಹಣವನ್ನು ಬಿಡುಗಡೆ ಮಾಡುವ ಮೂಲಕ ಕೊರೋನಾ ಲಾಕ್ ಡೌನ್ ಸಂಕಷ್ಟದ ಸಮಯದಲ್ಲಿ ಮೀನುಗಾರರಿಗೆ ಅನುಕೂಲ ಮಾಡಿಕೊಡಲಾಗಿದೆ.
ಮೀನುಗಾರರು ಪಡೆದಿರುವ ಸಾಲಕ್ಕೆ ಪ್ರಮಾಣ ಪತ್ರ ಸಲ್ಲಿಕೆಯಾದ ಬಳಿಕ ಬ್ಯಾಂಕುಗಳಿಗೆ ಹಣ ಪಾವತಿ ಮಾಡಲಾಗುವುದು. ಬಂದರು ಮತ್ತು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೀನುಗಾರರ ಸಾಲ ಮನ್ನಾಕ್ಕೆ ಹಣ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಸಿಎಂ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಧನ್ಯವಾದ ಹೇಳಿದ್ದಾರೆ.

ರಾಜ್ಯದಲ್ಲಿ ಇನ್ನೆರಡು ದಿನ ಭಾರಿ ಮಳೆಯಾಗುವ ಸಾಧ್ಯತೆ - ಹವಾಮಾನ ಇಲಾಖೆ

ಬೆಂಗಳೂರು, ಏ.25 (ಹಿ.ಸ) : ರಾಜ್ಯದಲ್ಲಿ ಮೇಲ್ಮೈ ಸುಳಿಗಾಳಿಯಿಂದ ದಕ್ಷಿಣ ಒಳನಾಡಿನ ಹಲವೆಡೆ ಮಳೆ ಮುಂದುವರಿದಿದೆ. ಒಳನಾಡಿನ ಹಲವು ಜಿಲ್ಲೆಗಳಲ್ಲಿ ಇನ್ನೆರಡು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು, ರಾಮನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಎರಡು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗಿಲ್ಲ. ಗ್ರಾಮೀಣ ಭಾಗದ ಕೆಲವು ಕಡೆ ತುಂತುರು ಮಳೆಯಾಗಿದೆ. ಇದರ ಪರಿಣಾಮ ಬಿಸಿಲು, ಸೆಕೆ ವಿಪರೀತ ಏರಿಕೆ ಕಂಡಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಿದರಹಳ್ಳಿ, ವಿಠಲಾಪೂರ ಗ್ರಾಮಗಳಲ್ಲಿ ಬುಧವಾರ ರಾತ್ರಿ ಜೋರಾದ ಗಾಳಿ ಮತ್ತು ಆಲಿಕಲ್ಲು ಮಳೆಯಿಂದ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿನ ಭತ್ತ, ಮಾವಿನಕಾಯಿ ಉದುರುತ್ತಿವೆ.
ಹಿಂದುಸ್ತಾನ ಸಮಾಚಾರ/ಎಂ.ಎಸ್ /ಯ.ಮ

ಕೊರೊನಾ ಪೀಡಿತರಿಗೆ ಪ್ಲಾಸ್ಮಾ ಥೆರಪಿ ಪ್ರಾಯೋಗಿಕ ಚಿಕಿತ್ಸೆಗೆ ಶ್ರೀರಾಮುಲು ಚಾಲನೆ

ಬೆಂಗಳೂರು, ಏ.25 (ಹಿ.ಸ) : ಕೊರೊನಾ ವೈರಸ್ ನಿಂದ ಬಳಲುತ್ತಿರುವ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ನೀಡುವ ಪ್ರಾಯೋಗಿಕ ಚಿಕಿತ್ಸೆಗೆ ರಾಜ್ಯ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಇಂದು ಚಾಲನೆ ನೀಡಿದ್ದಾರೆ.
ಬಿಎಂಸಿ ವಿಕ್ಟೋರಿಯಾ ಆಸ್ಪತ್ರೆ ಕೊರೊನಾ ವಿರುದ್ದ ಮೊದಲ ದಿಟ್ಟ ಹೆಜ್ಜೆಯೊಂದನ್ನು ಇಟ್ಟಿದೆ. ಮನುಕುಲಕ್ಕೆ ಕಂಟಕವಾಗಿ ಪರಿಣಮಿಸಿರುವ ವೈರಸನ್ನು ಮಣಿಸಲು ನಿಶ್ಚಯಿಸಿದ್ದೇವೆ. ಇದರಂತೆ ಸೋಂಕಿಗೊಳಗಾಗಿ ಆರೋಗ್ಯ ಸ್ಥಿತಿ ಗಂಭೀರವಾಗಿರುವ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಪ್ರಯೋಗವನ್ನು ಆರಂಭಿಸಲಾಗುತ್ತಿದೆ ಎಂದು ಶ್ರೀರಾಮುಲು ಹೇಳಿದ್ದಾರೆ.
ಬಿಎಂಸಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ವೈದ್ಯರು ಹಾಗೂ ಡಾ.ಯುಎಸ್ ವಿಶಾಲ್ ರಾವ್ ನೇತೃತ್ವದ ತಂಡ ಉತ್ತಮ ಯಶಸ್ಸುಗಳಿಸಲಿ ಎಂದು ನಾನು ಶುಭ ಹಾರೈಸುತ್ತೇನೆ. ಕೊರೊನಾ ವಿರುದ್ಧದ ಹೋರಾಟಕ್ಕೆ ಈ ಪ್ರಯೋಗ ಪ್ರೇರಣೆಯಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ 474 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇದರಲ್ಲಿ ಈಗಾಗಲೇ 152 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಕೊರೊನಾ ವೈರಸ್ ಗೆ ಈವರೆಗೂ 18 ಮಂದಿ ಬಲಿಯಾಗಿದ್ದಾರೆ.
ಹಿಂದುಸ್ತಾನ ಸಮಾಚಾರ/ಎಂ.ಎಸ್ /ಯ.ಮ

ಭಜರಂಗದಳ ಮಾಜಿ ರಾಜ್ಯ ಸಂಚಾಲಕ ಮಹೇಂದ್ರಕುಮಾರ್ ನಿಧನ

ಬೆಂಗಳೂರು, ಏ.25 (ಹಿ.ಸ) : ಭಜರಂಗದಳದ ಮಾಜಿ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್‌ ಇಂದು ಬೆಳಗ್ಗೆ ಹೃದಯಾಘಾತದಿಂದಾಗಿ ಎಂ.ಎಸ್‌. ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ನಿನ್ನೆ ರಾತ್ರಿಯೇ ಅವರಿಗೆ ತೀವ್ರವಾದ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಚಿಕಿತ್ಸೆಗಾಗಿ ಎಂ.ಎಸ್‌. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ.
ಬಜರಂಗದಳದ ರಾಜ್ಯ ಸಂಚಾಲಕರಾಗಿದ್ದ ಅವರು ಅದರಿಂದ ಹೊರಬಂದ ಬಳಿಕ ಸಾಮಾಜಿಕ, ಜಾಗೃತಿಕ ಚಟುವಟಿಕೆಯಲ್ಲಿ ಸಕ್ರೀಯವಾಗಿದ್ದರು. ಬಿಜೆಪಿ, ಸಂಘ ಪರಿವಾರದ ಸಿದ್ಧಾಂತ ವಿರೋಧಿಸಿ ಸಾಕಷ್ಟು ನಿಷ್ಠುರಗಳನ್ನು ಕಟ್ಟಿಕೊಂಡಿದ್ದರು. ಮೂಲತ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದವರಾದ ಮಹೇಂದ್ರ ಕುಮಾರ್ ಬೆಂಗಳೂರು ವಾಸಿಯಾಗಿದ್ದರು.
ನಮ್ಮ ಧ್ವನಿ ಎಂಬ ಸಂಘಟನೆ ಸಂಸ್ಥಾಪಕರಾಗಿದ್ದ ಅವರು ನಮ್ಮ ಧ್ವನಿ ಯೂಟ್ಯೂಬ್ ಚಾನೆಲ್ ಮೂಲಕ ವಿವಿಧ ವಿಷಯಗಳ ಬಗ್ಗೆ ಮಾತನಾಡಿ ಜನಪ್ರಿಯರಾಗಿದ್ದರು.
ಜನಪರ ಹೋರಾಟಗಾರ, ಶಾಂತಿಪ್ರಿಯ, ಸೌಹಾರ್ದಪರ, ಪ್ರಗತಿಪರ ನಿಲುವುಗಳ ಮಹೇಂದ್ರ ಕುಮಾರ್ ಅವರ ನಿಧನ ರಾಜ್ಯಕ್ಕೆ ಬಹು ದೊಡ್ಡ ಆಘಾತವಾಗಿದೆ. ಮಹೇಂದ್ರ ಕುಮಾರ್ ಅವರು ಪತ್ನಿ, ಇಬ್ಬರು ಮಕ್ಕಳು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಹಿಂದುಸ್ತಾನ ಸಮಾಚಾರ/ಎಂ.ಎಸ್ /ಯ.ಮ

Friday, April 24, 2020



ರಾಮನಗರಕ್ಕೂ ಬಂದೆ ಬಿಟ್ಟಿತು ಕೊರೊನಾ

ಡಿಕೆ.ಸುರೇಶ್ ಮಾಡಿದ್ದು ಏನ್ ನೀವೇ ನೋಡಿ

ವಿಶೇಷ ಗೌರವದ ಕ್ಷಣವನ್ನು ನೆನದ ಡಾ!! ಉಮಾ ಮಧುಸೂದನ್

ಡಾ!! ಉಮಾ ಮಧುಸೂದನ್
ಇವರು ನಮ್ಮ ಕರ್ನಾಟಕದ ಮಹಿಳೆ ಇವರು ಅಮೇರಿಕದಲ್ಲಿ
ವೈದ್ಯರು ಆಗಿ ಬಹಳಷ್ಟು ಅಲ್ಲಿಯ ಜನಗಳನ್ನ ಕಪಡಿದ್ದಾರೆ.
ಅಲ್ಲಿಯ ನಮ್ಮ ಹೆಮ್ಮೆಯ ಮಹಿಳೆಗೆ ಅಲ್ಲಿಯ ಜನರು
ಗೌರವ ಸಲ್ಲಿಸಿದರೆ. ಈಗ ಅವರೇ ನಮ್ ಕರ್ನಾಟಕ ಚಾನಲ್ ಅಲ್ಲಿ ಕಾಲಿಂಗ್ ಮೂಲಕ ಮಥನಡುತಿದ್ದಾಳೆ. ನೋಡಿ.


ಸುಗ್ರೀವಾಜ್ಞೆಗೂ ಹೆದರದ ದುಷ್ಟರು: ಮಂಡ್ಯದಲ್ಲೂ ಆಶಾ ಕಾರ್ಯಕರ್ತೆಯ ಮೇಲೆ ದಾಳಿ, ಆತ್ಮಹತ್ಯೆಗೆ ಯತ್ನ!




ಮಂಡ್ಯ: ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದರೆ 7 ವರ್ಷಗಳ ಕಾಲ ಜೈಲು ಶಿಕ್ಷೆಗೆ ಆದೇಶಿ ಸುಗ್ರೀವಾಜ್ಞೆ ಹೊರಡಿಸಿದ್ದರು ಇದಕ್ಕೆ ಹೆದರದ ಕೊರೋನಾ ಶಂಕಿತನೋರ್ವ ಆಶಾ ಕಾರ್ಯಕರ್ತೆ ಮೇಲೆ ದೌರ್ಜನ್ಯವೆಸಗಿದ್ದು ಇದರಿಂದ ನೊಂದ ಆಶಾ ಕಾರ್ಯಕರ್ತೆ ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನು ಸದ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಉರುಳಿ ಕ್ಯಾತನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇತ್ತೀಚೆಗೆ ಮೈಸೂರಿನ ಮಹದೇಶ್ವರ ನರ್ಸಿಂಗ್ ಹೋಂನಲ್ಲಿ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿದ್ದವರನ್ನು ಹೋಂ ಕ್ವಾರೆಂಟೈನ್ ಮಾಡಲು ಸೂಚನೆ ನೀಡಲಾಗಿತ್ತು.
ಮಹದೇಶ್ವರ ಆಸ್ಪತ್ರೆಗೆ ತೆರಳಿದ್ದ ಉರುಳಿ ಕ್ಯಾತನಹಳ್ಳಿಯ ವ್ಯಕ್ತಿಯನ್ನು ಹೋಂ ಕ್ವಾರೆಂಟೈನ್ ಗೆ ಒಳಪಡಲು ಆಶಾ ಕಾರ್ಯಕರ್ತೆಗೆ ಸೂಚಿಸಲಾಗಿತ್ತು.
ಈ ಸಂಬಂಧ ಆಶಾ ಕಾರ್ಯಕರ್ತೆ ಮೀನಾಕ್ಷಿ ಎಂಬುವರು ಗ್ರಾಮಕ್ಕೆ ತೆರಳಿದ್ದಾಗ ಕೊರೋನಾ ಶಂಕಿತ ಹೋಂ ಕ್ವಾರೆಂಟೈನ್ ಗೆ ಒಳಪಡದೇ ಜಾಗೃತಿ ಮೂಡಿಸಲು ಬಂದಿದ್ದ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.
ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದು ಇದರಿಂದ ಮನನೊಂದ ಮೀನಾಕ್ಷಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರು. ಸದ್ಯ ಆಶಾ ಕಾರ್ಯಕರ್ತೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಅರಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವರದಿ: ನಾಗಯ್ಯ

ಜಗತ್ತಿನಾದ್ಯಂತ ಕೊರೋನಾ ಆರ್ಭಟ: 24 ಗಂಟೆಯಲ್ಲಿ 5 ಸಾವಿರ ಬಲಿ, ಒಟ್ಟಾರೆ 1,89 ಲಕ್ಷ ಸಾವು, 27 ಲಕ್ಷ ಮಂದಿಗೆ ಸೋಂಕು!

ನವದೆಹಲಿ: ಜಗತ್ತಿನಾದ್ಯಂತ ಕೊರೋನಾ ಆರ್ಭಟ ಮುಂದುವರೆದಿದ್ದು ಕಳೆದ 24 ಗಂಟೆಯಲ್ಲಿ 5 ಸಾವಿರ ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ 1,89 ಲಕ್ಷಕ್ಕೇರಿದೆ. ಇನ್ನು 64 ಸಾವಿರ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ 27 ಲಕ್ಷಕ್ಕೇರಿದೆ.
ಅಮೆರಿಕದಲ್ಲಿ ಕೊರೋನಾ ಮರಣ ಮೃದಂಗ ಬಾರಿಸಿದ್ದು ಒಂದೇ ದಿನ 1 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಅಮೆರಿಕದಲ್ಲಿ ಒಟ್ಟು 49 ಸಾವಿರ ಮಂದಿ ಬಲಿಯಾಗಿದ್ದಾರೆ. ಇನ್ನು ಇಟಲಿಯಲ್ಲಿ 25 ಸಾವಿರ, ಸ್ಪೇನ್ ನಲ್ಲಿ 22 ಸಾವಿರ, ಫ್ರಾನ್ಸ್ ನಲ್ಲಿ 21,856 ಮಂದಿ ಹಾಗೂ ಇಂಗ್ಲೆಂಡ್ ನಲ್ಲಿ 18,738 ಮಂದಿ ಮೃತಪಟ್ಟಿದ್ದಾರೆ.
ಜಗತ್ತಿನಾದ್ಯಂತ 17,70,153 ಮಂದಿ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 58 ಸಾವಿರ ಮಂದಿಯ ಪರಿಸ್ಥಿತಿ ಗಂಭೀರವಾಗಿದೆ.
ಇನ್ನು 7,40,379 ಮಂದಿ ಗುಣಮುಖರಾಗಿದ್ದಾರೆ

ಮಾಸ್ಕ್ ಹಾಕಿಕೊಳ್ಳಿ ಎಂದಿದ್ದಕ್ಕೆ ಕಾರ್ಯನಿರತ ಪೊಲೀಸ್ ಮೇಲೆ ಯೋಧನಿಂದ ಹಲ್ಲೆ.!

ಚಿಕ್ಕೋಡಿ: ಮಾಸ್ಕ್ ಹಾಕಿಕೊಳ್ಳಿ, ಅನವಶ್ಯಕವಾಗಿ ತಿರುಗಾಡಬೇಡಿ ಎಂದು ಬುದ್ದಿವಾದ ಹೇಳಿದ ಕರ್ತವ್ಯ ನಿರತ ಪೊಲೀಸನಿಗೆ ಯುವಕನೋರ್ವ ಹಲ್ಲೆ ಮಾಡಿದ‌ ಘಟನೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ‌ ನಡೆದಿದೆ.
ಎಕ್ಸಂಬಾ ಪಟ್ಟಣದಲ್ಲಿ ಕರ್ತವ್ಯದಲ್ಲಿ ಇದ್ದ ಪೊಲೀಸರು ಮಾಸ್ಕ್ ಇಲ್ಲದೆ ಹೊರಗೆ ತಿರುಗಾಡುತ್ತಿದ್ದ ಸಚಿನ್ ಸಾವಂತ್ ಎಂಬಾತನಿಗೆ ಮಾಸ್ಕ್ ಹಾಕಿಕೊಳ್ಳಿ, ಅನಗತ್ಯವಾಗಿ ಹೊರಗೆ ತಿರುಗಾಡಬೇಡಿ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಪೊಲೀಸರು ಹಾಗೂ ಸಚಿನ್ ನಡುವೆ ಮಾತಿಗೆ ಮಾತು ಬೆಳೆದಿದೆ.
ಈ ವೇಳೆ ಮಾತುಕತೆ ಕೈಮೀರಿ ನನಗೆ ಬುದ್ಧಿವಾದ ಹೇಳುತ್ತೀರಾ ಎಂದು ಏಕಾಏಕಿ ಸಚಿನ್ ಪೊಲೀಸರ ಬಟ್ಟೆ ಹಿಡಿದು ಎಳೆದಾಡಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ.
ಇದರಿಂದ ಪೊಲೀಸರು ಕೂಡ ಲಾಠಿ ರುಚಿ ತೋರಿಸಿ ಯೋಧನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಇನ್ನೂ ಸಚಿನ್ ಎಂಬಾತನು ಸಿಆರ್ ಪಿ ಎಫ್ ಯೋಧ ಎಂದು ತಿಳಿದು ಬಂದಿದೆ. ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ರಾಮನಗರಕ್ಕೆ ಕೊರೊನಾ ಲಗ್ಗ ಇಡಲು ಸರ್ಕಾರವೇ ಕಾರಣ ಎಂದ ಎಚ್ ಡಿಕೆ

ರಾಮನಗರ, ಏಪ್ರಿಲ್.23: ಬೆಂಗಳೂರು ಪಾದರಾಯನಪುರದಲ್ಲಿ ವೈದ್ಯರು ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ 121 ಮಂದಿಯನ್ನು ರಾಮನಗರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿತ್ತು. ಹೀಗೆ ಶಿಫ್ಟ್ ಆದ 121 ಆರೋಪಿಗಳ ಪೈಕಿ ಇಬ್ಬರಿಗೆ ಕೊರೊನಾ ವೈರಸ್ ಸೋಂಕು ಇರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ.
ತೀವ್ರ ವಿರೋಧದ ನಡುವೆಯೂ ಬೆಂಗಳೂರು ಪರಪ್ಪನ ಅಗ್ರಹಾರದಿಂದ ರಾಮನಗರ ಜಿಲ್ಲಾ ಕಾರಾಗೃಹಕ್ಕೆ 121 ಮಂದಿ ಆರೋಪಿಗಳನ್ನು ಸ್ಥಳಾಂತರ ಮಾಡಲಾಗಿತ್ತು. ಸರ್ಕಾರದ ನಿರ್ಧಾರಕ್ಕೆ ಆರಂಭದಿಂದಲೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದರು.
ರಾಜ್ಯ ಸರ್ಕಾರವು ತೆಗೆದುಕೊಂಡ ನಿರ್ಧಾರದಿಂದ ರಾಮನಗರ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗುವಂತಾ ಸ್ಥಿತಿ ನಿರ್ಮಾಣ ಮಾಡುವುದು ಬೇಡು ಎಂದು ಸಲಹೆ ನೀಡಿದ್ದರು.
ಅದಾಗಿಯೂ ಸ್ಥಳಾಂತರಿಸಿದ್ದು, ಇದೀಗ ಸರ್ಕಾರಕ್ಕೆ ಟ್ವಿಟ್ಟರ್ ನಲ್ಲಿ ಹೆಚ್ಡಿಕೆ ಚಾಟಿ ಏಟು ಕೊಟ್ಟಿದ್ದಾರೆ.
ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ ಎಚ್ ಡಿಕೆ
ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ ಕುಮಾರಸ್ವಾಮಿ
ರಾಮನಗರ ಕಾರಾಗೃಹದಲ್ಲಿ ಇರಿಸಲಾಗಿದ್ದ ಪಾದರಾಯನಪುರದ ಗಲಭೆಕೋರರ ಪೈಕಿ ಇಬ್ಬರಿಗೆ ಕೊರೋನಾ ವೈರಸ್ ತಗುಲಿರುವ ಪಾಸಿಟಿವ್ ವರದಿ ಬಂದಿದೆ. ರಾಮನಗರ ಜೈಲಿನಲ್ಲಿ ಇರಿಸಲಾಗಿರುವ ಕೈದಿಗಳನ್ನು ಸಕಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತಕ್ಷಣವೇ ಸ್ಥಳಾಂತರಿಸದಿದ್ದರೆ ನಾಳೆಯಿಂದ ಉಗ್ರ ಪ್ರತಿಭಟನೆ ಮಾಡುತ್ತೇನೆ.
ಅವಿವೇಕದ ನಿರ್ಧಾರದಿಂದ ಜಿಲ್ಲೆಯ ಜನರಿಗೆ ಭೀತಿ
ರಾಮನಗರ ಜಿಲ್ಲೆಯ ಜನರಲ್ಲಿ ಕೊರೊನಾ ಭೀತಿ
ಈ ಹಿಂದೆಯೇ ನಾನು ಇದೇ ವಿಷಯವಾಗಿ ಸರ್ಕಾರದ ಗಮನ ಸೆಳೆದರೂ ನಿರ್ಲಕ್ಷಿಸಿದರ ಫಲವಾಗಿ ಇಂದು ರಾಮನಗರಕ್ಕೂ ಕೊರೋನಾ ವೈರಸ್ ವಕ್ಕರಿಸಿದೆ. ಪಾಸಿಟಿವ್ ಬಂದ ಇಬ್ಬರ ಜತೆಯಲ್ಲಿದ್ದ ಏಳೆಂಟು ಮಂದಿಯನ್ನು ಕ್ವಾರಂಟೈನ್ಗೆ ಕರೆದೊಯ್ಯಲಾಗಿದೆ. ಸರ್ಕಾರ ತಡಮಾಡದೆ ರಾಮನಗರ ಜೈಲಿನಲ್ಲಿರುವ ಕೈದಿಗಳನ್ನು ಕೂಡಲೇ ಸ್ಥಳಾಂತರ ಮಾಡಬೇಕು ಸರ್ಕಾರದ ಅವಿವೇಕದ ನಿರ್ಧಾರದಿಂದಾಗಿ ರಾಮನಗರ ಜಿಲ್ಲೆಯ ಜನ ಭೀತಿಗೊಂಡಿದ್ದಾರೆ. ಇದನ್ನು ಇನ್ನೂ ಸಹಿಸಲು ಸಾಧ್ಯವಿಲ್ಲ.
ಸರ್ಕಾರದ ಎಡವಟ್ಟಿನಿಂದ ರಾಮನಗರಕ್ಕೆ ಕೊರೊನಾ ಲಗ್ಗೆ
ರಾಮನಗರಕ್ಕೆ ಕೊರೊನಾ ಲಗ್ಗೆ ಇಡಲು ಸರ್ಕಾರ ಕಾರಣ
ಈಗಾಗಲೇ ರಾಜ್ಯದಲ್ಲಿ 445 ಮಂದಿ ಸೋಂಕಿಗೆ ತುತ್ತಾಗಿ, 17 ಮಂದಿ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಎಂಟು ಜಿಲ್ಲೆಗಳು ಮಾತ್ರ ಸೋಂಕು ಮುಕ್ತವಾಗಿವೆ. ಅವುಗಳಲ್ಲಿ ರಾಮನಗರವೂ ಒಂದು. ಇದೀಗ ಸರ್ಕಾರ ತೆಗೆದುಕೊಂಡ ಎಡವಟ್ಟು ನಿರ್ಧಾರದಿಂದ ರಾಮನಗರದಲ್ಲೂ ಸೋಂಕು ಹರಡುವ ಭೀತಿ ಎದುರಾಗಿದೆ.
ಸರ್ಕಾರ ಮುನ್ನೆಚ್ಚರಿಕೆ ವಹಿಸದಿದ್ದರೆ ಉಗ್ರ ಹೋರಾಟ
ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳದಿದ್ದರೆ ಉಗ್ರ ಹೋರಾಟ
ಸರ್ಕಾರ ಸಕಲ ಮುನ್ನೆಚ್ಚರಿಕೆಯಿಂದ ಪರಿಸ್ಥಿತಿ ನಿಭಾಯಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ರಾಮನಗರ ಜೈಲ್ ಅನ್ನು ಸಂಪೂರ್ಣ ಕ್ವಾರಂಟೈನ್ ಮಾಡಬೇಕು. ಪೊಲೀಸರು ಸೇರಿದಂತೆ ಜೈಲಿನಲ್ಲಿ ಕಾರ್ಯನಿರ್ವಹಿಸಿದ ಅಡುಗೆ ಮತ್ತು ಸ್ವಚ್ಛತೆ ಯವರು ಸಂಬಂಧಿಸಿದವರ ಆರೋಗ್ಯ ಕಾಪಾಡಲು ಸರ್ಕಾರ ತಕ್ಷಣವೇ ಕಾರ್ಯೋನ್ಮುಖವಾಗಬೇಕು.

Thursday, April 23, 2020

ದೇಶದ ಗ್ರಾಮ ಪಂಚಾಯಿತಿಗಳನ್ನು ಉದ್ದೇಶಿಸಿ ನಾಳೆ ಪ್ರಧಾನಿ ಮೋದಿ ಭಾಷಣ

ನವದೆಹಲಿ : ದೇಶಾದ್ಯಂತ ಕೊರೊನಾ ವೈರಸ್ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ ಡೌನ್ ಸೇರಿದಂತೆ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ನಡುವೆ ನಾಳೆ ದೇಶದ ವಿವಿಧ ಗ್ರಾಮ ಪಮಚಾಯಿತಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.
ಏಪ್ರಿಲ್ 24 ರಾಷ್ಟ್ರೀಯ ಪಂಚಾಯತ್ ರಾಜ್ ದಿನವಾಗಿದ್ದು, ನಾಳೆ ಪ್ರಧಾನಿ ನರೇಂದ್ರ ಮೋದಿ ವಿವಿಧ ಗ್ರಾಮ ಪಂಚಾಯಿತಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಲಿದ್ದಾರೆ ಎಂದು ಪಂಚಾಯತ್ ರಾಜ್ ಸಚಿವಾಲಯ ತಿಳಿಸಿದೆ.
ಇನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ ಏಕೀಕೃತ ಇ-ಗ್ರಾಮ್ ಸ್ವರಾಜ್ ಪೋರ್ಟಲ್ ಮತ್ತು ಮೊಬೈಲ್ ಆಯಪ್ ಗೆ ಚಾಲನೆ ನೀಡಲಿದ್ದಾರೆ.

ಕೊರೋನಾ ಇಂದು- ನಾಳೆ ಹೋಗುವ ವೈರಸ್​ ಅಲ್ಲ, ತುಂಬ ಸಮಯ ನಮ್ಮೊಂದಿಗೆ ಇರಲಿದೆ; WHO ಎಚ್ಚರಿಕೆ

ವಿಶ್ವಾದ್ಯಂತ 1.84 ಲಕ್ಷ ಜನರನ್ನು ಬಲಿ ಪಡೆದಿರುವ ಕೊರೋನಾ ಸೋಂಕಿನಿಂದ 26.36 ಲಕ್ಷ ಜನ ಬಳಲುತ್ತಿದ್ದಾರೆ. ಬಹುತೇಕ ಎಲ್ಲ ದೇಶಗಳಲ್ಲೂ ಸಾವಿನ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್​ ಅಷ್ಟು ಸುಲಭವಾಗಿ ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್​ಓ) ನಿರ್ದೇಶಕ ಟೆಡ್ರಾಸ್ ಅಧನಾಮ್ ಗೆಬ್ರೆಯೆಸಸ್, ಬಹುತೇಕ ದೇಶಗಳು ತಾವು ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸಿದ್ದೇವೆ. ತಮ್ಮ ರಾಷ್ಟ್ರ ಕೊರೋನಾದಿಂದ ಮುಕ್ತವಾಗುತ್ತಿದೆ ಎಂದು ನಂಬಿಕೊಂಡಿವೆ. ಆದರೆ, ಕೊರೋನಾ ಸೋಂಕು ಇನ್ನೂ ಸಾಕಷ್ಟು ಸಮಯದವರೆಗೆ ಈ ಭೂಮಿ ಮೇಲೆ ಉಳಿದಿರುತ್ತದೆ. ಕೊರೋನಾ ವಿರುದ್ಧ ಹೋರಾಡಲು ಸಿದ್ಧ ಎಂದಿದ್ದ ಅಮೆರಿಕ, ಆಫ್ರಿಕಾದಂತಹ ದೇಶಗಳಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ ಎಂದಿದ್ದಾರೆ.
ಕೊರೋನಾ ಆಪತ್ತನ್ನು ಮೊದಲೇ ಅರಿತಿದ್ದ ವಿಶ್ವ ಆರೋಗ್ಯ ಸಂಸ್ಥೆ ಜನವರಿ 30ರಂದೇ ಕೊರೋನಾ ವೈರಸ್​ ಅನ್ನು ಜಾಗತಿಕ ತುರ್ತು ಆರೋಗ್ಯ ಸಮಸ್ಯೆ ಎಂದು ಘೋಷಿಸಿತ್ತು. ಜಗತ್ತಿನ ಹಲವು ದೇಶಗಳಲ್ಲಿ ಕೊರೋನಾ ವೈರಸ್‌ ಇನ್ನೂ ಆರಂಭಿಕ ಹಂತದಲ್ಲಿದೆ. ಇನ್ನು ಕೆಲವು ದೇಶಗಳಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆರಂಭಿಕ ಹಂತದಲ್ಲಿರುವ ದೇಶಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಬರಲು ಇನ್ನೂ ಸಾಕಷ್ಟು ಸಮಯ ಬೇಕು. ಹೀಗಾಗಿ, ಕೊರೋನಾ ವಿರುದ್ಧದ ಹೋರಾಟ ಸದ್ಯಕ್ಕೆ ಕೊನೆಯಾಗುವುದಿಲ್ಲ ಎಂದಿದ್ದಾರೆ.

ವಿಶ್ವಾದ್ಯಂತ ಸುಮಾರು 2 ಲಕ್ಷ ಜನರು ಕೊರೋನಾಗೆ ಬಲಿಯಾಗಿದ್ದಾರೆ. ಕೊರೋನಾ ಬಗ್ಗೆ ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಅದಕ್ಕೆ ಸಾಕಷ್ಟು ಜನರು ಬೆಲೆ ತೆರಬೇಕಾಗುತ್ತದೆ. ಹೀಗಾಗಿ, ನಮ್ಮ ಆರೋಗ್ಯ ಮತ್ತು ಸುತ್ತಲಿನವರ ಸುರಕ್ಷತೆಯ ದೃಷ್ಟಿಯಿಂದ ಮನೆಗಳಿಂದ ಹೊರಗೆ ಹೋಗದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ. ಇನ್ನು ನಮ್ಮಿಂದ ಈ ನಿಟ್ಟಿನಲ್ಲಿ ಯಾವುದೇ ತಪ್ಪುಗಳು ಸಂಭವಿಸದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಟೆಡ್ರಾಸ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಲಾಕ್‌ಡೌನ್‌: ಕುರಿಗಾಹಿಗಳ ಪರದಾಟ


ಕೊಣನೂರು: ಕುರಿ ಮೇಯಿಸಿಕೊಂಡು ಊರೂರು ತಿರುಗುತ್ತಾ ಜೀವನ ನಡೆಸುತ್ತಿರುವ ಕುರಿಗಾಹಿಗಳಿಗೆ ಕೊರೊನಾ ದಿಗ್ಬಂಧನವು ಸಂಕಷ್ಟ ತಂದೊಡ್ಡಿದೆ.
4 ಮಹಿಳೆಯರು, 6 ಮಕ್ಕಳು ಸೇರಿದಂತೆ 16 ಜನರಿರುವ ಚಿತ್ರದುರ್ಗ ಜಿಲ್ಲೆಯ ಮೂರು ಕುಟುಂಬಗಳು ಬಿದರೂರಿನ ಸಮೀಪ ವಾಸ್ತವ್ಯ ಹೂಡಿದ್ದು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಅವರು 1 ಸಾವಿರ ಕುರಿಗಳನ್ನು ಸಾಕಿದ್ದು ಅವುಗಳಿಗೂ ಮೇವಿನ ಕೊರತೆ ಕಾಡುತ್ತಿದೆ.
ರೈತರ ಜಮೀನಿನಲ್ಲಿ ಕುರಿಗಳನ್ನು ಬಿಟ್ಟು ಅದರಿಂದ ಬರುವ ಆದಾಯದಲ್ಲಿ ನಿತ್ಯವೂ ದಿನಸಿ ಖರೀದಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಈಗ ಕೊರೊನಾ ಭೀತಿಯಲ್ಲಿ ಗ್ರಾಮದಲ್ಲಿ ಯಾವ ರೈತರೂ ಜಮೀನಿಗೆ ಕುರಿಗಳನ್ನು ಬಿಡಿಸುತ್ತಿಲ್ಲ. ಅತ್ತ ಊರಿಗೆ ಹೋಗಲೂ ಸಾಧ್ಯವಾಗದೆ, ಇಲ್ಲಿ ಅಗತ್ಯ ದಿನಸಿಯೂ ಸಿಗದ ಕಾರಣ ಉಪವಾಸ ಅನಿವಾರ್ಯವಾಗಿದೆ.
'ಕೊರೊನಾ ಸೋಂಕಿನ ಭೀತಿಯಿಂದ ಯಾರೂ ಜಮೀನಿನಲ್ಲಿ ಕುರಿಗಳನ್ನು ತಡೆಸುತ್ತಿಲ್ಲ. ಅಲ್ಲದೇ, ಬೀಡುಬಿಟ್ಟಿರುವ ಸ್ಥಳದ ಸಮೀಪದಲ್ಲಿರುವ ಕೊಳವೆ ಬಾವಿ, ಮತ್ತಿತರೆಡೆ ನಮಗೆ ಅಡುಗೆಗೂ ನೀರನ್ನು ಕೊಡಲೂ ಸ್ಥಳೀಯರು ನಿರಾಕರಿಸುತ್ತಿದ್ದಾರೆ. ನಮ್ಮ ಕಷ್ಟವನ್ನು ಅರ್ಥಮಾಡಿಕೊಂಡು ನಮಗೆ ಪಾಸ್‌ ನೀಡಿದರೆ ನಮ್ಮ ಊರು ಸೇರಿಬಿಡುತ್ತೇವೆ' ಎಂದು ಅಂಗಲಾಚುತ್ತಾರೆ ಕುರಿಗಳ ಮಾಲೀಕ ಪಾಂಡಪ್ಪ.
ಕುರಿಗಾಹಿಗಳಿರುವಲ್ಲಿಗೆ ಅಧಿಕಾರಿಗಳನ್ನು ಕಳುಹಿಸಿ ಅವರ ಸಮಸ್ಯೆಯನ್ನು ಪರಿಶೀಲಿಸಲಾಗುವುದು. ಅಗತ್ಯಬಿದ್ದಲ್ಲಿ ಊರಿಗೆ ಹೋಗಲು ಪಾಸ್ ಕೊಡುವ ವ್ಯವಸ್ಥೆ ಮಾಡಲಾಗುವುದು
ವೈ.ಎಂ.ರೇಣುಕುಮಾರ್, ತಹಶೀಲ್ದಾರ್

ಶುಭ್ರ ಆಕಾಶ; ಬಾಹ್ಯಾಕಾಶ ನಿಲ್ದಾಣ ಬರಿಗಣ್ಣಿಗೆ ಗೋಚರ

ಶಿರಸಿ: ನಾಸಾ ನಿಯಂತ್ರಿತ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಇಂಟರ್‌ನ್ಯಾಷನಲ್‌ ಸ್ಪೇಸ್ ಸ್ಟೇಷನ್- ಐಎಸ್‌ಎಸ್) ಜಗತ್ತಿನಾದ್ಯಂತ ಬರಿಗಣ್ಣಿಗೆ ಗೋಚರಿಸುತ್ತಿದೆ. ಬಾಹ್ಯಾಕಾಶ ವಿಜ್ಞಾನದ ಆಸಕ್ತರಿಂದ ಮಾಹಿತಿ ಪಡೆದು, ನಿಲ್ದಾಣವನ್ನು ನೋಡಿದ ಹಲವರು ಬೆರಗುಗೊಂಡಿದ್ದಾರೆ.
ಕೋವಿಡ್ 19 ಕಾರಣಕ್ಕೆ ಜಗತ್ತಿನ ಬಹಳಷ್ಟು ದೇಶಗಳಲ್ಲಿ ಉದ್ದಿಮೆ ಆಧಾರಿತ ಚಟುವಟಿಕೆ, ವಾಹನ ಸಂಚಾರ ಕಡಿಮೆಯಿರುವ ಕಾರಣ ಮಾಲಿನ್ಯ ಕಡಿಮೆಯಾಗಿದೆ. ಜತೆಗೆ, ಆಕಾಶವೂ ಶುಭ್ರವಾಗಿರುವುದರಿಂದ ಐಎಸ್‌ಎಸ್‌ ನೋಡುವ ಸದವಕಾಶ ಒದಗಿಬಂದಿದೆ.
ಏ.12ರ ಸಂಜೆ 7.15ಕ್ಕೆ, ಏ.17 ಸಂಜೆ 5.15ಕ್ಕೆ ಹಾಗೂ ಏ.21ರ ಬೆಳಗಿನ ಜಾವ 5.36ಕ್ಕೆ ಆಗಸದಲ್ಲಿ ಐಎಸ್‌ಎಸ್‌ನ ಚಲನವನ್ನು ಕಂಡಿರುವ ಜೀವವೈವಿಧ್ಯ ವಿಜ್ಞಾನಿ ಗದುಗಿನ ಮಂಜುನಾಥ ನಾಯಕ ಅವರು ಈ ವಿಷಯವನ್ನು 'ಪ್ರಜಾವಾಣಿ' ಜೊತೆ ಹಂಚಿಕೊಂಡಿದ್ದಾರೆ.
http://issdetector.com ಈ ಆಯಪ್ ಮೂಲಕ ಈ ಬಾಹ್ಯಾಕಾಶ ನಿಲ್ದಾಣವು ಯಾವ ಪಥದಲ್ಲಿ ಚಲಿಸುತ್ತದೆ, ಭೂಮಿಗೆ ಯಾವಾಗ ಸಮೀಪ ಬರುತ್ತದೆ ಎಂಬುದರ ಮಾಹಿತಿ ಪಡೆಯಬಹುದು.
ಇದರಲ್ಲಿ ಪ್ರಕಟಿಸಿದ ವೇಳಾಪಟ್ಟಿ ಹಾಗೂ ಸ್ನೇಹಿತ ಸುನೀಲ್‌ಕುಮಾರ್ ಮರಳಕುಂಟೆ ಮತ್ತು ಇಸ್ರೊ ತಂತ್ರಜ್ಞ ಕಾಂತರಾಜು ಅವರು ನೀಡಿರುವ ಮಾಹಿತಿ ಬೆನ್ನತ್ತಿದಾಗ, ಗದಗದಲ್ಲಿ ಸಹ ಐಎಸ್‌ಎಸ್ ನೋಡಲು ಸಾಧ್ಯವಾಯಿತು. ಅನೇಕ ವಿದ್ಯಾರ್ಥಿಗಳಿಗೂ ಈ ಮಾಹಿತಿ ಒದಗಿಸಿದೆ. ಶುಕ್ರ ಗ್ರಹದ ಹಾಗೆ ಇದು ಹೊಳೆಯುತ್ತದೆ. ವಿವಿಧ ದೇಶಗಳಲ್ಲಿ ಇದು ಗೋಚರಿಸುವ ಸಮಯ ಬೇರೆಯಾಗುತ್ತದೆ. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ, ನಿಗದಿತ ಸಮಯದಲ್ಲಿ 2ರಿಂದ 4 ನಿಮಿಷ ವ್ಯತ್ಯಾಸವಾಗಬಹುದು' ಎಂದು ಅವರು ತಿಳಿಸಿದರು.
ಏನಿದು ಐಎಸ್‌ಎಸ್‌?:
1998ರಲ್ಲಿ ಉಡಾವಣೆ ಮಾಡಿದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು 2000ದಲ್ಲಿ ಕಾರ್ಯ ಪ್ರಾರಂಭಿಸಿದೆ. ಇದು ಮಾನವ ನಿರ್ಮಿತ ಅತಿದೊಡ್ಡ ಬಾಹ್ಯಾಕಾಶ ಪ್ರಯೋಗಾಲಯ. ಇದು ಭೂಮಿಯ ಹೊರ ಮೇಲ್ಮೈನಿಂದ ಸುಮಾರು 250 ಮೈಲು ಎತ್ತರದಲ್ಲಿ ಪ್ರತಿ ಗಂಟೆಗೆ 17,500 ಮೈಲು ವೇಗದಲ್ಲಿ ತನ್ನ ಪಥದಲ್ಲಿ ಚಲಿಸುತ್ತಿರುತ್ತದೆ. ಇದರಲ್ಲಿ ಜೀವ ವಿಜ್ಞಾನ, ಭೌತ ವಿಜ್ಞಾನ, ಖಗೋಳ ವಿಜ್ಞಾನಗಳ ವಿಜ್ಞಾನಿಗಳು, ಹವಾಮಾನ ಪರಿಣಿತರು ಸೇರಿ ಆರರಿಂದ ಒಂಬತ್ತು ಜನರು ಕಾರ್ಯನಿರ್ವಹಿಸುತ್ತಾರೆ ಎಂದು ಅವರು ವಿವರಿಸಿದರು.
****
ಭೌಗೋಳಿಕ ಪ್ರದೇಶ ಮತ್ತು ಆಕಾಶದ ಹವಾಮಾನದ ಸ್ಥಿತಿಗೆ ಅನುಗುಣವಾಗಿ ಐಎಸ್‌ಎಸ್‌ ಗೋಚರಿಸುತ್ತದೆ. ಮೋಡವಿದ್ದರೆ ಕಾಣಿಸುವುದಿಲ್ಲ
-ಮಂಜುನಾಥ ನಾಯಕ ಜೀವವೈವಿಧ್ಯ ವಿಜ್ಞಾನಿ

ಶಹಾಪುರ| ಸಂಕಷ್ಟದಲ್ಲಿ ರೈತರ ಕೈಹಿಡಿದ ಸಜ್ಜೆ

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಹಂಗಾಮಿನ ಬೆಳೆಯಾಗಿ ಬಿತ್ತನೆ ಮಾಡಿದ ಸಜ್ಜೆ ಬೆಳೆ ರೈತರ ಪಾಲಿಗೆ ವರವಾಗಿ ಪರಿಣಮಿಸಿದೆ. ನಿರೀಕ್ಷೆಗೂ ಮೀರಿ ಇಳುವರಿ ಬಂದಿದ್ದು ರೈತರಿಗೆ ನೆಮ್ಮದಿ ಮೂಡಿಸಿದೆ.
'ಮುಂಗಾರು ಹಂಗಾಮಿನ ಬೆಳೆಗೆ ನಾರಾಯಣಪುರ ಎಡದಂಡೆ ಕಾಲುವೆ ನೀರು ಸಮರ್ಪಕವಾಗಿ ದೊರೆಯಿತು. ನಂತರ ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹ ಇದ್ದ ಕಾರಣ ಬೇಸಿಗೆ ಹಂಗಾಮಿನ ಬೆಳೆಗೂ ನೀರು ದೊರೆಯುವುದು ಖಾತರಿಯಾಯಿತು. ಮುಂಗಾರು ಬೆಳೆಯನ್ನು ತೆಗೆದುಕೊಂಡ ನಂತರ ರೈತರು ಸಜ್ಜೆ ಬಿತ್ತನೆ ಮಾಡಿದ್ದರು. ಎಕರೆಗೆ ₹ 3 ಸಾವಿರ ಖರ್ಚು ಮಾಡಿದ್ದೇವೆ. ಪ್ರತಿ ಎಕರೆಗೆ 9ರಿಂದ 10 ಕ್ವಿಂಟಲ್ ಇಳುವರಿ ಬಂದಿದೆ. ಧಾರಣಿ ₹ 2 ಸಾವಿರ ಇದೆ' ಎಂದು ರೈತ ಹನುಮಂತರಾಯ ತಿಳಿಸಿದರು.
'ಸಜ್ಜೆ ಗ್ರಾಮೀಣ ಪ್ರದೇಶದ ಜನತೆಗೆ ಹೆಚ್ಚು ಉಪಯುಕ್ತವಾಗಿದೆ. ಜಾನುವಾರುಗಳಿಗೆ ಸಜ್ಜೆಯನ್ನು ಕುದಿಸಿ ಇಡುತ್ತಾರೆ. ಕುರಿ, ಮೇಕೆಗಳಿಗೆ ಹಾಕುತ್ತಾರೆ ಹಾಗೂ ಊಟಕ್ಕೂ ಉಪಯೋಗಿಸುತ್ತಾರೆ. ಕೊರೊನಾ ವೈರಸ್ ಸಂಕಷ್ಟ ಕಾಲದಲ್ಲಿ ಸಜ್ಜೆ ಬೆಳೆ ನಮಗೆ ಒಪ್ಪತ್ತಿನ ಊಟಕ್ಕೆ ನೆರವಿನ ಅಭಯ ನೀಡಿದೆ. ಮುಂದಿನ ಕೆಲ ದಿನಗಳವರೆಗೂ ನಮಗೆ ಯಾವುದೇ ತೊಂದರೆ ಇಲ್ಲ. ಧಾರಣಿ ನಮ್ಮ ಕೈಗೆಟುಕುತ್ತಿರುವುದರಿಂದ ಒಂದಿಷ್ಟು ಖರೀದಿಸಿ, ಸಂಗ್ರಹಿಸಿ ಇಟ್ಟಿದ್ದೇವೆ' ಎಂದು ವನದುರ್ಗ ಗ್ರಾಮದ ರೈತ ಮಾನಯ್ಯ ಹೇಳಿದರು.
'ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಈ ಬಾರಿ ರೈತರು ತುಸು ನೆಮ್ಮದಿ ಬದುಕು ಕಾಣುವಂತೆ ಆಗಿದೆ. ಮೂರು ವರ್ಷದ ಬಳಿಕ ಮುಂಗಾರು ಮತ್ತು ಹಿಂಗಾರು ಎರಡು ಅವಧಿಗೂ ನೀರು ಲಭಿಸಿದೆ. ಕೊರೊನಾ ಭೀತಿ ನಡುವೆಯೂ ಮುಂಗಾರು ಪೂರ್ವದ ಮಳೆ ಬಂದರೆ ಮತ್ತೆ ಕೃಷಿ ಚಟುವಟಿಕೆಗಳು ಗರಿಗೆದರಲಿವೆ' ಎಂದು ರೈತರು ಹೇಳಿದರು.

ಮಗನಿಗೆ ಕೋವಿಡ್‌ ಬಂದರೂ ಸೇವೆ ಮುಂದುವರಿಸಿದ ನರ್ಸ್‌


ಬಸವಾಪಟ್ಟಣ: ಸಮೀಪದ ಕಾರಿಗನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಸಹಾಯಕಿಯಾಗಿ 37 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸರಸಮ್ಮ ಪ್ರಾಮಾಣಿಕ ಸೇವೆಯಿಂದ ಗ್ರಾಮಸ್ಥರ ಮನ ಗೆದ್ದಿದ್ದಾರೆ.
ಒಂದು ತಿಂಗಳ ಹಿಂದೆಯೇ ಬೆಂಗಳೂರಿನಲ್ಲಿರುವ ತಮ್ಮ 34 ವರ್ಷದ ಮಗನಿಗೆ ಕೋವಿಡ್‌- 19 ಪಾಸಿಟಿವ್‌ ಬಂದ ಬಗ್ಗೆ ತಿಳಿದಿದ್ದರೂ, ಧೈರ್ಯ ಕಳೆದುಕೊಂಡಿಲ್ಲ. ಕಾರಿಗನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಇಲ್ಲಿಯೇ ಉಳಿದು ಮಾದರಿಯಾಗಿದ್ದಾರೆ.
'ನಾನು ನಿರಂತರವಾಗಿ ಸಾರ್ವಜನಿಕರ ಆರೋಗ್ಯ ಸೇವೆಯಲ್ಲಿರುವ ದಾದಿ. ಮಗನ ಮೇಲಿನ ಮಮತೆಯಿಂದ ಆತನನ್ನು ನೋಡಲು ಹೋಗಿ ಕೊರೊನಾ ವೈರಸ್‌ ನನಗೂ ತಗುಲಿದರೆ, ಅದು ನಿವಾರಣೆಯಾಗುವವರೆಗೆ ನಮ್ಮ ಆಸ್ಪತ್ರೆ ಹಾಗೂ ಇಲ್ಲಿಯ ಜನತೆಯನ್ನು ಬಿಟ್ಟು ದೂರ ಇರಬೇಕಾಗುತ್ತದೆ
37 ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿರುವ ನನಗೆ ಮಗನ ಮೇಲಿನ ಪ್ರೀತಿ ಕಪ್ಪು ಚುಕ್ಕೆಯಾಗಬಾರದು. ಈಗ ನನ್ನ ಮಗ ಪೂರ್ಣ ಗುಣಮುಖನಾಗಿದ್ದಾನೆ. ಆದರೆ ಸರ್ಕಾರ ಕರ್ನಾಟಕ ರಾಜ್ಯ ಕೋವಿಡ್‌-19ರಿಂದ ಮುಕ್ತವಾಗಿದೆ' ಎಂದು ಘೋಷಿಸುವವರೆಗೂ ಮಗನನ್ನು ನೋಡಲು ಹೋಗಬಾರದು ಎಂದು ನಾನು ನಿರ್ಧರಿಸಿದ್ದೇನೆ. ನನ್ನ ಪತಿ ಹಾಗೂ ಸೊಸೆಯ ಅಭಿಪ್ರಾಯವೂ ಇದೇ ಆಗಿದೆ. ಕೊರೊನಾಗೆ ಹೆದರಿ ನನ್ನ ವೃತ್ತಿಗೆ ದ್ರೋಹ ಬಗೆಯುವುದಿಲ್ಲ' ಎನ್ನುತ್ತಾರೆ ಸರಸಮ್ಮ.
ಸರಸಮ್ಮನವರ ಪ್ರಾಮಾಣಿಕ ಸೇವೆಯನ್ನು ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ಪಟೇಲ್‌ ಮುಖಂಡ ಜಿ.ಟಿ.ಮಹಾರುದ್ರಪ್ಪ
ಶ್ಲಾಘಿಸಿದ್ದಾರೆ.

ಪಿಎಂ ಆವಾಸ್‌: ವಾರದಲ್ಲಿ ಅನುದಾನ ಬಿಡುಗಡೆ- ಸೋಮಣ್ಣ

ಬೆಂಗಳೂರು: 'ಕೊರೊನಾ ಸೋಂಕಿನ ಭೀತಿಯಿಂದ ಬಡವರ ಮನೆ ನಿರ್ಮಾಣ ಕಾರ್ಯಗಳಿಗೆ ಅಡ್ಡಿ ಉಂಟಾಗಬಾರದು ಎಂಬ ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಪ್ರಧಾನಮಂತ್ರಿ ಆವಾಸ್‌ ಯೋಜನೆಯ 1.02 ಲಕ್ಷ ಫಲಾನುಭವಿಗಳ ಖಾತೆಗಳಿಗೆ ತಕ್ಷಣವೇ ಹಣ ಜಮೆ ಮಾಡಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.
ಒಂದು ಲಕ್ಷ ಫಲಾನುಭವಿಗಳಿಗೆ ಸರ್ಕಾರದ ಅನುದಾನ ಹಂಚಿಕೆ ಮಾಡಲು ₹ 400 ಕೋಟಿ ಬೇಕಾಗಲಿದೆ. ಹಣಕಾಸು ಇಲಾಖೆಗೆ ಈ ಸಂಬಂಧ ಪತ್ರ ಬರೆಯಲಾಗುತ್ತಿದ್ದು, ವಾರದೊಳಗೆ ಎಲ್ಲ ಪ್ರಕ್ರಿಯೆ ಕೊನೆಗೊಂಡು ಆರ್‌ಟಿಜಿಎಸ್‌ ಮೂಲಕ ಫಲಾನುಭವಿಗಳ ಖಾತೆಗಳಿಗೆ ದುಡ್ಡು ಹಾಕಲಾಗುವುದು. ಇದೇ ಯೋಜನೆಯಡಿಯಲ್ಲಿ ಈಗಾಗಲೇ 1.22 ಲಕ್ಷ ಫಲಾನುಭವಿಗಳಿಗೆ ಒಟ್ಟಾರೆ ₹ 528 ಕೋಟಿ ಮಂಜೂರು ಮಾಡಲಾಗಿದೆ' ಎಂದು ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.‌
'ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 1 ಲಕ್ಷ ಬಹುಮಹಡಿ ಕಟ್ಟಡಗಳ ಮೂಲಕ ಮನೆ ಇಲ್ಲದವರಿಗೆ ಮನೆ ನೀಡುವ ಯೋಜನೆ ಘೋಷಿಸಲಾಗಿತ್ತು.
ಆದರೆ ಒಂದಿಷ್ಟು ಕೆಲಸವೂ ಆಗಿರಲಿಲ್ಲ. ಇದೀಗ 46,499 ಮನೆಗಳ ನಿರ್ಮಾಣಕ್ಕಾಗಿ ಜಾಗ ಗುರುತಿಸಲಾಗಿದ್ದು, 43 ಸಾವಿರ ಮನೆಗಳ ನಿರ್ಮಾಣ ಆರಂಭವಾಗಿದೆ. ಇನ್ನೊಂದು ವರ್ಷದಲ್ಲಿ ಮನೆಗಳ ಹಸ್ತಾಂತರ ಮಾಡಲಾಗುವುದು' ಎಂದರು.
ಪ್ರಧಾನಮಂತ್ರಿ ಟೌನ್‌ಶಿಪ್‌: 'ವಸತಿ ರಹಿತರಿಂಧ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದಾಗ 43 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿದ್ದವು. ಹೀಗಾಗಿ ಜಿಗಣಿ ಹೋಬಳಿಯ ಸ್ವಾಮಿ ವಿವೇಕಾನಂದ ಯೋಗ ವಿಶ್ವವಿದ್ಯಾಲಯ ಸಮೀಪ 1,938 ಎಕರೆ ಪ್ರದೇಶದಲ್ಲಿ 30 ಸಾವಿರ ನಿವೇಶನಗಳನ್ನು ಪ್ರಧಾನಮಂತ್ರಿ ಟೌನ್‌ಶಿಪ್‌ ಹೆಸರಲ್ಲಿ ಸಿದ್ಧಪಡಿಸಲಾಗುತ್ತಿದೆ. ಈಗಾಗಲೇ 564 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಒಂದೂವರೆ ವರ್ಷದಲ್ಲಿ ಎರಡು ಹಂತಗಳಲ್ಲಿ ನಿವೇಶನಗಳು ಸಿದ್ಧವಾಗಲಿವೆ' ಎಂದು ಸಚಿವರು ತಿಳಿಸಿದರು.‌
ಹರಪನಹಳ್ಳಿ, ಸೂರ್ಯನಗರ, ರಾಜಾಪುರ, ಉಡುಪಿಯ ಕೊರಂಗವಾಡಿ, ಬೆಂಗಳೂರು ದಕ್ಷಿಣದ ಬನ್ನೇನಹಳ್ಳಿ, ನೆಲಮಂಗಲದ ಮಾದನಾಯ್ಕನಹಳ್ಳಿಗಳಲ್ಲಿ 400 ಎಕರೆ ಪ್ರದೇಶದಲ್ಲಿ 6 ಸಾವಿರ ನಿವೇಶನಗಳನ್ನು ನಿರ್ಮಿಸುತ್ತಿದ್ದು, ಬಹುತೇಕ ಕೊನೆಯ ಹಂತಕ್ಕೆ ಬಂದಿವೆ. ಕನಕಪುರದ ರಾಯಸಂದ್ರ, ಚಿಕ್ಕಮಗಳೂರಿನ ಮೂಡಿಗೆರೆ, ಮೈಸೂರಿನ ಇಲವಾಲ, ಗದಗದ ಮುಂಡರಗಿ, ಕೊಪ್ಪಳಗಳಲ್ಲಿ 340 ಎಕರೆ ಪ್ರದೇಶದಲ್ಲಿ 5,100 ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದು, ಸಾಕಷ್ಟು ಅರ್ಜಿಗಳು ಬಂದಿವೆ' ಎಂದು ಸಚಿವರು ವಿವರಿಸಿದರು.
'ರೈತರೊಂದಿಗೆ ಹಂಚಿಕೆ ಮಾಡುವ ಒಪ್ಪಂದದಂತೆ ಜಿಲ್ಲಾ ಮಟ್ಟದಲ್ಲಿ 50;50 ಅನುಪಾತದಲ್ಲಿ, ತಾಲ್ಲೂಕು ಮಟ್ಟದಲ್ಲಿ 40:60 ಅನುಪಾತದಲ್ಲಿ ನಿವೇಶನ ಹಂಚಿಕೊಂಡು 24 ಸಾವಿರ ನಿವೇಶನ ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ' ಎಂದರು.
'ಕೊಳೆಗೇರಿ ಅಭಿವೃ‌ದ್ಧಿ ಮಂಡಳಿಯಿಂದ 83,119 ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಿ 3 ವರ್ಷವಾಗಿದ್ದರೂ ಯಾವುದೇ ಕೆಲಸ ಆಗಿರಲಿಲ್ಲ. ಬಿಜೆಪಿ ಸರ್ಕಾರ ಬಂದ ನಂತರ ಕೆಲಸ ಚುರುಕುಗೊಂಡಿದೆ, ಮನೆಗಳ ನಿರ್ಮಾಣವಾಗುತ್ತಿದೆ' ಎಂದರು.

ಹಸಿದವರನ್ನು ರಾಜಕೀಯ ಕಣ್ಣಿನಿಂದ ನೋಡದಿರಿ: ಸಿದ್ದರಾಮಯ್ಯ


ಬೆಂಗಳೂರು: 'ಹಸಿವಿಗೆ ಜಾತಿ, ಧರ್ಮ, ಪಕ್ಷ ಮತ್ತು ಪಂಗಡ ಎಂಬುದು ಇರುವುದಿಲ್ಲ. ಹೀಗಾಗಿ ಹಸಿದವರನ್ನು ರಾಜಕೀಯದ ಕಣ್ಣುಗಳಿಂದ ನೋಡಬೇಡಿ' ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಬಿಟಿಎಂ ಲೇಔಟ್‌ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಆರಂಭಿಸಿರುವ ಅನ್ನ ದಾಸೋಹ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿದ ಅವರು ಸುದ್ದಿಗಾರರ ಜತೆ ಮಾತನಾಡಿದರು.
'ಕೊರೊನಾದಿಂದ ಸಂಕಷ್ಟಕ್ಕೆ ಗುರಿಯಾಗಿರುವ ಕೂಲಿಕಾರ್ಮಿಕರು, ವಲಸಿಗ ಕಾರ್ಮಿಕರು ಹಾಗೂ ಬಡವರಿಗೆ ಆಹಾರ ನೀಡುವ ವಿಚಾರದಲ್ಲಿ ತಾರತಮ್ಯ ಮಾಡಬೇಡಿ' ಎಂದರು.
'ಸರ್ಕಾರ ಹಸಿದವರಿಗೆ ಆಹಾರದ ಪ್ಯಾಕೇಟ್ ನೀಡುವುದಾಗಿ ಹೇಳಿದೆ. ಆದರೆ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ.
ರಾಮಲಿಂಗಾರೆಡ್ಡಿಯವರು ಒತ್ತಡ ಹೇರಿದ ಕಾರಣಕ್ಕೆ ಅವರ ಕ್ಷೇತ್ರಕ್ಕಾಗಿ ಸರ್ಕಾರದ ಕಡೆಯಿಂದ ಕೇವಲ ಐದು ಸಾವಿರ ಪ್ಯಾಕೆಟ್‌ ಬರುತ್ತಿದೆ. ಆದರೆ ಇಲ್ಲಿ ಶಾಸಕರು ಸ್ವಂತ ಖರ್ಚಿನಲ್ಲಿ ಹಲವು ಸಂಘ ಸಂಸ್ಥೆಗಳ ನೆರವಿನೊಂದಿಗೆ ಊಟ, ತಿಂಡಿ, ದಿನಸಿ, ತರಕಾರಿ ವಿತರಣೆ ಮಾಡುತ್ತಿದ್ದಾರೆ' ಎಂದರು.
'ಆಹಾರದ ಪ್ಯಾಕೆಟ್‌ ವಿತರಣೆಯಲ್ಲಿ ಪಕ್ಷಪಾತ ನಡೆಯುತ್ತಿದೆ. ಅನೇಕ ಕಡೆಗಳಲ್ಲಿ ಬಿಜೆಪಿ ಕಾರ್ಪೊರೇಟರ್‌ಗಳು ಅವರಿಗೆ ಬೇಕಾದವರಿಗೆ ಮಾತ್ರ ಆಹಾರ ನೀಡುತ್ತಿದ್ದಾರೆ ಎಂಬ ದೂರುಗಳಿವೆ. ಜೊತೆಗೆ ರಾಜ್ಯದ ನಾನಾ ಕಡೆಗಳಲ್ಲಿಯೂ ಇಂತಹ ವರ್ತನೆ ಕಂಡುಬರುತ್ತಿದೆ. ಹಸಿದ ಎಲ್ಲರಿಗೂ ಅನ್ನ ನೀಡುವುದು ಸರ್ಕಾರದ ಕರ್ತವ್ಯ' ಎಂದು ಹೇಳಿದರು.
'ಪಾದರಾಯನಪುರ ಘಟನೆ ಸಮರ್ಥನೀಯವಲ್ಲ. ತಪ್ಪು ಯಾರು ಮಾಡಿದ್ದರೂ ತಪ್ಪೇ. ಅದನ್ನು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಆದರೆ ಘಟನೆಗೆ ಜಾತಿ, ಧರ್ಮದ ಬಣ್ಣ ಕಟ್ಟಬಾರದು. ತಪ್ಪು ಮಾಡಿದವರಿಗೆ, ಕಾನೂನು ಕೈಗೆ ತೆಗೆದುಕೊಳ್ಳುವವರಿಗೆ ಶಿಕ್ಷೆ ಆಗಲೇಬೇಕು' ಎಂದು ಸಿದ್ದರಾಮಯ್ಯ ಹೇಳಿದರು.
'ಕೊರೊನಾ ಸೋಂಕು ನಿಯಂತ್ರಣಕ್ಕೆ ಹೋರಾಟ ಮಾಡುತ್ತಿರುವ ವೈದ್ಯರು, ನರ್ಸ್‍ಗಳು, ಆಶಾ ಕಾರ್ಯಕರ್ತರೇ ನಿಜವಾದ ಯೋಧರು. ಅವರಿಗೆ ಗೌರವ ನೀಡಬೇಕಾದುದು ನಮ್ಮ ಕರ್ತವ್ಯ' ಎಂದರು.
'ಅಕ್ಕಿಯಿಂದ ಸ್ಯಾನಿಟೈಸರ್ ಬೇಡ'
'ಬಡವರಿಗೆ ವಿತರಿಸಲು ದಾಸ್ತಾನಾಗಿರುವ ಅಕ್ಕಿಯಿಂದ ಸ್ಯಾನಿಟೈಸರ್ ತಯಾರು ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿರುವುದು ಸರಿಯಲ್ಲ. ಸ್ಯಾನಿಟೈಸರ್ ತಯಾರು ಮಾಡಲು ಬೇರೆ ವಸ್ತುಗಳಿವೆ. ಅಕ್ಕಿ ಹೆಚ್ಚಾಗಿದ್ದರೆ ಹಸಿದವರಿಗೆ ವಿತರಿಸಲಿ. ಬೇರೆ ದಾರಿಯೇ ಇಲ್ಲ ಎಂದಾಗ ಮಾತ್ರ ಅಕ್ಕಿ ಬಳಸಲಿ' ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

ಪರಿಹಾರ ನಿಧಿಗೆ ಸಂಗ್ರಹಿಸಿದ 4 ಕೋ. ರೂ. ಪಿಎಂ ಕೇರ್ಸ್ ನಿಧಿಗೆ ವರ್ಗಾಹಿಸಿದ ಕುಲಪತಿ: ದಿಲ್ಲಿ ವಿವಿ ಸಿಬ್ಬಂದಿಯ ಆರೋಪ

ಹೊಸದಿಲ್ಲಿ, ಎ.22: ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಯುಜಿಸಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ದಿಲ್ಲಿ ವಿವಿಯ ಸಿಬ್ಬಂದಿ ವರ್ಗದವರು ತಮ್ಮ ಒಂದು ದಿನದ ವೇತನವನ್ನು ನೀಡಿದ್ದರು. ಆದರೆ ವಿವಿಯ ಕುಲಪತಿ ಸುಮಾರು 4 ಕೋಟಿಯಷ್ಟು ಮೊತ್ತದ ಈ ಹಣವನ್ನು 'ಪಿಎಂ ಕೇರ್ಸ್' ನಿಧಿಗೆ ವರ್ಗಾಯಿಸಿದ್ದಾರೆ ಎಂದು ಸಿಬ್ಬಂದಿಯೊಬ್ಬರು ಆರೋಪಿಸಿದ್ದಾರೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಸೂಚನೆಯಂತೆ ಈ ಬದಲಾವಣೆ ಮಾಡಲಾಗಿದೆ. ಅದರಂತೆ 4.04 ಕೋಟಿ ರೂ. ಹಣವನ್ನು ಪಿಎಂ ಕೇರ್ಸ್ ನಿಧಿಗೆ ಪಾವತಿಸಲಾಗಿದೆ ಎಂದು ದಿಲ್ಲಿ ವಿವಿಯ ಹಿರಿಯ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
ಆದರೆ ವಂತಿಗೆ ನೀಡಿದವರ ಗಮನಕ್ಕೂ ತಾರದೆ, ಅಂತಿಮ ಕ್ಷಣದಲ್ಲಿ ಬದಲಾವಣೆ ಮಾಡಿರುವುದು ಸರಿಯಲ್ಲ. ಕನಿಷ್ಟ ಪಕ್ಷ ಸಿಬ್ಬಂದಿಗಳಿಗೆ ಮಾಹಿತಿ ನೀಡಬೇಕಿತ್ತು ಎಂದು ಹಂಸರಾಜ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಮಿಥುರಾಜ್ ಧುಸಿಯಾ ಪ್ರತಿಕ್ರಿಯಿಸಿದ್ದಾರೆ.
ವಿವಿಯ ಕುಲಪತಿಯವರ ಈ ಕ್ರಮದ ಬಗ್ಗೆ ಹಲವು ಸಿಬ್ಬಂದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ದಿಲ್ಲಿ ವಿವಿ ಶಿಕ್ಷಕರ ಸಂಘ ಕುಲಪತಿಗೆ ಪತ್ರ ಬರೆದು ತೀವ್ರ ಆಕ್ಷೇಪ ಸೂಚಿಸಿದ್ದು, ಈ ರೀತಿಯ ಕ್ರಮದಿಂದ ವಿವಿಯ ವೃತ್ತಿಪರ ಕೆಲಸದ ಮೇಲೆ ನಾವಿಟ್ಟಿರುವ ವಿಶ್ವಾಸಕ್ಕೆ ಧಕ್ಕೆ ತರುತ್ತದೆ ಎಂದು ಹೇಳಿದ್ದಾರೆ.

ನನ್ನ ಮೇಲೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆಗೆ ಯತ್ನ: ಅರ್ನಬ್ ಆರೋಪ


ಹೊಸದಿಲ್ಲಿ : ರಾಹುಲ್ ‌ಗಾಂಧಿಯವರ ಹೇಳಿಕೆಯನ್ನು ತಿರುಚಿದ ಆರೋಪದಲ್ಲಿ ರಿಪಬ್ಲಿಕ್ ಟಿವಿ ಸಂಸ್ಥಾಪಕ ಅರ್ನಬ್ ಗೋಸ್ವಾಮಿ ಮೇಲೆ ಹಲವು ಪ್ರಕರಣಗಳು ದಾಖಲಾಗಿರುವ ಬೆನ್ನಲ್ಲೇ, ಯುವ ಕಾಂಗ್ರೆಸ್ ಕಾರ್ಯಕರ್ತರು ನನ್ನ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದಾರೆ ಎಂದು ಟಿವಿ ನಿರೂಪಕರೂ ಆಗಿರುವ ಅವರು ಆಪಾದಿಸಿದ್ದಾರೆ.
ರಾತ್ರಿ ಪತ್ನಿಯ ಜತೆ ಮನೆಗೆ ಹೋಗುತ್ತಿದ್ದಾಗ ಈ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದಾರೆ.
ಇಂಥ ಹಲ್ಲೆಯಿಂದ ತಾವು ವಿಚಲಿತರಾಗಿಲ್ಲ ಎಂದು ಹೇಳಿಕೊಂಡು ಸೋನಿಯಾಗಾಂಧಿ ವಿರುದ್ಧ ವೈಯಕ್ತಿಕ ದಾಳಿ ನಡೆಸುವ ಅರ್ನಬ್ ಅವರ ಆಯನಿಮೇಶನ್ ವೀಡಿಯೊ ತುಣುಕನ್ನು ರಿಪಬ್ಲಿಕ್ ಟಿವಿ ಟ್ವೀಟ್ ಮಾಡಿದೆ. ಕೋಮು ದ್ವೇಷ ಹರಡುತ್ತಿರುವ ಆರೋಪದಲ್ಲಿ ಗೋಸ್ವಾಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಮಹಾರಾಷ್ಟ್ರದ ಸಚಿವರೊಬ್ಬರು ಹೇಳಿಕೆ ನೀಡಿದ ಬೆನ್ನಲ್ಲೇ ಗೋಸ್ವಾಮಿ ಈ ಆರೋಪ ಮಾಡಿದ್ದಾರೆ.
ಅರ್ನಬ್ ಗೋಸ್ವಾಮಿ ದಂಪತಿ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಈ ದಾಳಿಕೋರರನ್ನು ಕಳುಹಿಸಿದ್ದಾರೆ ಎಂದು ಆಪಾದಿಸಿದ್ದಾರೆ. ಇದಕ್ಕೂ ಮುನ್ನ ಮಹಾರಾಷ್ಟ್ರ ವಿದ್ಯುತ್ ಖಾತೆ ಸಚಿವ ನಿತಿನ್ ರಾವುತ್ ಅವರು ಗೋಸ್ವಾಮಿ ವಿರುದ್ಧ ನಾಗ್ಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ಕೋಮು ಗಲಭೆಗೆ ಪ್ರಚೋದನೆ ನೀಡಿರುವುದು ಮತ್ತು ಎರಡು ಗುಂಪುಗಳ ಮೇಲೆ ಧಾರ್ಮಿಕ ಅಥವಾ ಜನಾಂಗೀಯ ಹಿನ್ನೆಲೆಯಲ್ಲಿ ದ್ವೇಷ ಹರಡಲು ಪ್ರಯತ್ನಿಸುತ್ತಿರುವ ಆರೋಪವನ್ನು ಅರ್ನಬ್ ಮೇಲೆ ಹೊರಿಸಲಾಗಿದೆ. ಜತೆಗೆ ಧಾರ್ಮಿಕ ಭಾವನೆಯನ್ನು ಕೆರಳಿಸಲು ಉದ್ದೇಶಪೂರ್ವಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಪಾದಿಸಲಾಗಿದೆ.

ಕೊರೋನ ಸೋಂಕಿನಿಂದ ಮೃತರಾದವರ ಅಂತ್ಯ ಸಂಸ್ಕಾರ ಹೇಗೆ?

ಕೊರೋನ ಸೋಂಕಿನಿಂದ ಮೃತರಾದವರ ಅಂತ್ಯ ಸಂಸ್ಕಾರವನ್ನು ನಡೆಸಲು ಜನರು ಭಯಗೊಂಡು ಹಿಂಜರಿಯುತ್ತಿರುವ ಬಗ್ಗೆ ಹಲವೆಡೆಗಳಿಂದ ವರದಿಗಳಾಗಿವೆ. ಮೇಘಾಲಯ, ಚೆನ್ನೈಯಲ್ಲೂ ಕೊರೋನದಿಂದ ಮೃತರಾದ ಹಿರಿಯ ವೈದ್ಯರ ಅಂತ್ಯ ಸಂಸ್ಕಾರಕ್ಕೆ ಅಡ್ಡಿ ಪಡಿಸಿ ಕಲ್ಲು ತೂರಿದ ಮೂರು ಘಟನೆಗಳೂ ನಡೆದಿವೆ. ಕುಟುಂಬದವರು ಅಂತ್ಯ ಸಂಸ್ಕಾರವನ್ನು ಮಾಡದಿದ್ದ ಸಂದರ್ಭಗಳಲ್ಲಿ ಅನ್ಯ ಮತೀಯರು, ಸ್ನೇಹಿತರು ಮುಂತಾದವರು ಅವನ್ನು ನಡೆಸಲು ನೆರವಾಗಿರುವ ಬಗ್ಗೆಯೂ ವರದಿಗಳಾಗಿವೆ
ಕೊರೋನದಿಂದ ಮೃತರಾದವರ ಅಂತ್ಯ ಸಂಸ್ಕಾರದ ಬಗ್ಗೆ ಜನಸಾಮಾನ್ಯರಲ್ಲಿ ಮಾಹಿತಿಯ ಕೊರತೆಯಿರುವುದು ಮತ್ತು ಆ ಕಾರಣದಿಂದ ಹಲವು ತಪ್ಪು ಕಲ್ಪನೆಗಳಿರುವುದು ಇಂತಹಾ ಸನ್ನಿವೇಶಗಳಿಗೆ ಕಾರಣವಾಗುತ್ತಿವೆ. ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತುರ್ತು ವೈದ್ಯಕೀಯ ಪರಿಹಾರದ ವಿಭಾಗವು ಕೊರೋನ ಸೋಂಕಿತರ ಶವ ಸಂಸ್ಕಾರದ ವಿಧಾನಗಳ ಬಗ್ಗೆ ಸ್ಪಷ್ಟವಾದ ಮಾರ್ಗಸೂಚಿಗಳನ್ನು ಈಗಾಗಲೇ ಪ್ರಕಟಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯೂ ಕೂಡ ಕೊರೋನ ಸೋಂಕಿನ ಸನ್ನಿವೇಶದಲ್ಲಿ ಸುರಕ್ಷಿತವಾದ ಶವ ಸಂಸ್ಕಾರದ ಬಗ್ಗೆ ಮತ್ತು ಸೋಂಕು ನಿಯಂತ್ರಣದ ಬಗ್ಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಕೊರೋನ ಪೀಡಿತರಾಗಿದ್ದವರ ಮೃತ ದೇಹದಿಂದ ಕೊರೋನ ಸೋಂಕು ಹರಡುವುದಿಲ್ಲವೆಂದೂ, ಅಂಥವರ ಮತೀಯ, ಸಾಮಾಜಿಕ ಹಾಗೂ ಕೌಟುಂಬಿಕ ಸಂಪ್ರದಾಯಗಳಿಗೆ ಯಾವುದೇ ಚ್ಯುತಿಯಾಗದಂತೆ, ಕೆಲವೊಂದು ಎಚ್ಚರಿಕೆಗಳನ್ನು ವಹಿಸಿ, ಅಂತ್ಯ ಸಂಸ್ಕಾರಗಳನ್ನು ನಡೆಸಬಹುದೆಂದೂ, ಇವೆರಡು ಮಾರ್ಗಸೂಚಿಗಳಲ್ಲಿ ಅತಿ ಸ್ಪಷ್ಟವಾಗಿ ಹೇಳಲಾಗಿದೆ.
ಈಗ ನಮ್ಮ ದೇಶದಲ್ಲಿ ಪ್ರತಿನಿತ್ಯ 30-50 ಕೊರೋನ ಸಂಬಂಧಿತ ಸಾವುಗಳಾಗುವ ಬಗ್ಗೆ ವರದಿಗಳಾಗುತ್ತಿದ್ದು, ಮೃತರಿಗೆ ಅವರವರ ಸಂಪ್ರದಾಯಗಳಿಗನುಗುಣವಾಗಿ ಅಂತ್ಯ ಕ್ರಿಯೆಗಳನ್ನು ನಡೆಸುವ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟವಾದ ಮಾಹಿತಿಯಿದ್ದರೆ ಯಾವುದೇ ಗೊಂದಲಗಳಿಗಾಗಲೀ, ಆತಂಕಗಳಿಗಾಗಲೀ ಅವಕಾಶವಿಲ್ಲದಂತೆ ಮಾಡಬಹುದಾಗಿದೆ. ಅದಕ್ಕಾಗಿ ಈ ಎರಡು ಅಧಿಕೃತ ಮಾರ್ಗಸೂಚಿ ಗಳನ್ನಷ್ಟೇ ಪಾಲಿಸಿದರೆ ಸಾಕಾಗುತ್ತದೆ; ಅಲ್ಲಿಲ್ಲಿ ಒಬ್ಬೊಬ್ಬರು ಹೇಳುವುದನ್ನು ಅಲ್ಲಿಂದಲ್ಲಿಗೇ ಕಡೆಗಣಿಸಲಡ್ಡಿಯಿಲ್ಲ.
ಕೊರೋನ ಪೀಡಿತರಾಗಿದ್ದವರ ಮೃತ ದೇಹದಿಂದ ಕೊರೋನ ಸೋಂಕು ಹರಡುವುದಿಲ್ಲ.
ಇಬೋಲ, ಮಾರ್ಬರ್ಗ್ ಜ್ವರಗಳಂತಹ ರಕ್ತಸ್ರಾವವನ್ನುಂಟು ಮಾಡುವ ಸೋಂಕುಗಳು ಹಾಗೂ ಕೊಲೆರಾ ಹೊರತು ಪಡಿಸಿದರೆ ಬೇರೆ ಯಾವ ಸಂದರ್ಭಗಳಲ್ಲೂ ಮೃತ ದೇಹಗಳಿಂದ ಸೋಂಕು ತಗಲುವ ಸಾಧ್ಯತೆಗಳಿಲ್ಲ. ಫ್ಲೂ ಸೋಂಕಿನಲ್ಲಿ ಮರಣೋತ್ತರ ಪರೀಕ್ಷೆಯ ವೇಳೆ ಸೂಕ್ತ ಜಾಗರೂಕತೆಗಳನ್ನು ವಹಿಸದಿದ್ದರಷ್ಟೇ ಮೃತ ದೇಹದ ಶ್ವಾಸಕೋಶಗಳಿಂದ ಸೋಂಕುಂಟಾಗುವ ಸಾಧ್ಯತೆಗಳಿವೆ ಎಂದು ಗುರುತಿಸಲಾಗಿರುವುದನ್ನು ಬಿಟ್ಟರೆ, ಇತರ ಸಂದರ್ಭಗಳಲ್ಲಿ ಮೃತ ದೇಹಗಳಿಂದ ಸೋಂಕು ಹರಡುವುದಿಲ್ಲವೆಂದೇ ಹೇಳಬಹುದು. ಕೊರೋನ ಪೀಡಿತರ ಮೃತ ದೇಹದಿಂದ ಸೋಂಕು ಹರಡಿರುವ ಬಗ್ಗೆ ಇದುವರೆಗೆ ಎಲ್ಲಿಂದಲೂ ವರದಿಗಳಾಗಿಲ್ಲ. ಆದರೂ ಕೂಡ, ಕೊರೋನ ಸೋಂಕು ಹೊಸದಾಗಿರುವ ಕಾರಣಕ್ಕೆ, ಮತ್ತು ಅದರ ಬಗ್ಗೆ ಎಲ್ಲಾ ವಿವರಗಳು ಇನ್ನೂ ಲಭ್ಯವಿಲ್ಲದಿರುವ ಕಾರಣಕ್ಕೆ ಕೊರೋನದಿಂದ ಮೃತ ಪಟ್ಟವರ ದೇಹಗಳ ಅಂತ್ಯ ಸಂಸ್ಕಾರದ ವೇಳೆ ಕೆಲವೊಂದು ಸಾಮಾನ್ಯ ಎಚ್ಚರಿಕೆಗಳನ್ನು ವಹಿಸಬೇಕೆಂದು ಸೂಚಿಸಲಾಗುತ್ತಿದೆ.
ಕೊರೋನದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಅವರವರ ಸಂಪ್ರದಾಯಗಳಿಗೆ ಅನುಗುಣವಾಗಿ ನಡೆಸಬಹುದು.
ಸೋಂಕಿನಿಂದ ಮೃತರಾದವರ ದೇಹವನ್ನು ಸುಡಲೇಬೇಕು ಎಂಬ ನಿಯಮವೇನಿಲ್ಲ; ಮೃತ ದೇಹವನ್ನು ಸುಡಬಹುದು ಅಥವಾ ಹೂಳಬಹುದು. ಚಿತಾಗಾರದಲ್ಲಿ ಉಳಿಯುವ ಭಸ್ಮದಿಂದ ಸೋಂಕು ಹರಡುವ ಅಥವಾ ಅಪಾಯವಾಗುವ ಯಾವುದೇ ಸಾಧ್ಯತೆಗಳು ಇಲ್ಲದಿರುವುದರಿಂದ ಅದನ್ನು ಸಂಗ್ರಹಿಸಿ ಅಂತಿಮ ವಿಧಿಗಳನ್ನು ನಡೆಸುವುದಕ್ಕೆ ಯಾವ ರೀತಿಯ ಅಡಚಣೆಗಳೂ ಇಲ್ಲ.
ಕೊರೋನ ಸೋಂಕಿನಿಂದಾಗುವ ಸಾವುಗಳು ಆಸ್ಪತ್ರೆಗಳಲ್ಲಾಗಬಹುದು, ವೃದ್ಧಾಶ್ರಮಗಳಲ್ಲಾಗಬಹುದು ಅಥವಾ ಮನೆಗಳಲ್ಲೂ ಆಗಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳಲ್ಲಿ ಈ ಎಲ್ಲಾ ಸನ್ನಿವೇಶಗಳನ್ನೂ ಪರಿಗಣಿಸಲಾಗಿದ್ದರೆ, ಭಾರತ ಸರಕಾರದ ಮಾರ್ಗಸೂಚಿಗಳಲ್ಲಿ ಆಸ್ಪತ್ರೆಗಳಲ್ಲಿ ಸಾವುಗಳಾದಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯಷ್ಟೇ ಹೇಳಲಾಗಿದೆ. ತೀವ್ರ ರೂಪದ ಕೊರೋನ ಪೀಡಿತರೆಲ್ಲರೂ ಆಸ್ಪತ್ರೆಗಳಲ್ಲಿ ದಾಖಲಾಗಿಯೇ ಆಗುತ್ತಾರೆಂಬ ನಿರೀಕ್ಷೆಯಿಂದ ನಮ್ಮ ಸರಕಾರದ ಮಾರ್ಗಸೂಚಿಗಳನ್ನು ರೂಪಿಸಿರಬಹುದೇನೋ?
ಕೊರೋನ ಪೀಡಿತರು ಆಸ್ಪತ್ರೆಗಳಲ್ಲಿ ಮೃತರಾದಾಗ ಆಸ್ಪತ್ರೆಯ ಸಿಬ್ಬಂದಿಯೇ ಮೃತ ದೇಹವನ್ನು ಶುಚಿಗೊಳಿಸುತ್ತಾರೆ.
ತೀವ್ರ ರೂಪದ ಕೊರೋನ ಸೋಂಕಿತರು ಆಸ್ಪತ್ರೆಗಳ ತೀವ್ರ ಚಿಕಿತ್ಸಾ ಘಟಕಗಳಲ್ಲಿ ಮೃತರಾಗುವುದರಿಂದ, ಅವರ ಸಂಬಂಧಿಕರಿಗೆ ಆ ಘಟಕಗಳೊಳಕ್ಕೆ ಪ್ರವೇಶವಿರುವುದಿಲ್ಲ. ಹಾಗಾಗಿ, ಮೃತ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸುವ ಮೊದಲು ಆ ರೋಗಿಯ ಚಿಕಿತ್ಸೆಗಾಗಿ ಹಾಕಿರಬಹುದಾದ ಎಲ್ಲಾ ನಳಿಕೆಗಳು, ಚುಚ್ಚು ಸೂಜಿಗಳು ಇತ್ಯಾದಿಗಳನ್ನೆಲ್ಲ ತೆಗೆದು, ಮೂಗು, ಬಾಯಿ, ಕಣ್ಣು ಮುಂತಾದ ರಂಧ್ರಗಳಲ್ಲಿ ಒಸರುವ ಎಲ್ಲಾ ಸ್ರಾವಗಳನ್ನು ಶುಚಿಗೊಳಿಸಿ, ಅವನ್ನು ಮುಚ್ಚುವ ಕೆಲಸಗಳನ್ನು ಆಸ್ಪತ್ರೆಯ ಸಿಬ್ಬಂದಿಯೇ ಮಾಡುತ್ತಾರೆ. ಇದಾದ ಬಳಿಕ ಮೃತರ ಸಂಬಂಧಿಕರು ಮೃತ ದೇಹವನ್ನು ನೋಡಬಯಸಿದರೆ ಅಗತ್ಯ ಎಚ್ಚರಿಕೆಯ ಕ್ರಮಗಳೊಂದಿಗೆ ಅವರಿಗೆ ನೋಡಲು ಅವಕಾಶವನ್ನು ನೀಡಲಾಗುತ್ತದೆ; ಆದರೆ ಮೃತ ದೇಹವನ್ನು ಮುಟ್ಟುವುದಕ್ಕೆ, ಅಥವಾ ಮುತ್ತಿಕ್ಕುವುದಕ್ಕೆ ಅವಕಾಶವಿರುವುದಿಲ್ಲ. ಆ ಬಳಿಕ ಮೃತ ದೇಹವನ್ನು ವಿಶೇಷವಾದ ಚೀಲದಲ್ಲಿರಿಸಲಾಗುತ್ತದೆ, ಮತ್ತು ಆ ಚೀಲದ ಹೊರಮೈಯನ್ನು 1% ಹೈಪೊಕ್ಲೋರೈಟ್ ದ್ರಾವಣದಿಂದ ಶುದ್ಧೀಕರಿಸಲಾಗುತ್ತದೆ, ನಂತರ ಮನೆಯವರು ನೀಡಿರಬಹುದಾದ ಬಟ್ಟೆಯನ್ನು ಅದರ ಹೊರಗೆ ಸುತ್ತಿ ಮೃತ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತದೆ.
ವೃದ್ಧಾಶ್ರಮದಲ್ಲೋ, ಮನೆಯಲ್ಲೋ ಮೃತ್ಯುವುಂಟಾದರೆ ಮೃತ ದೇಹವನ್ನು ನಿಭಾಯಿಸುವ ಬಗ್ಗೆ ನಮ್ಮ ಆರೋಗ್ಯ ಇಲಾಖೆಯ ಮಾರ್ಗಸೂಚಿಯಲ್ಲಿ ಏನನ್ನೂ ಹೇಳಿಲ್ಲ. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಲ್ಲಿ ಆ ಬಗ್ಗೆ ಸ್ಪಷ್ಟವಾದ ವಿವರಣೆಗಳಿವೆ. ಮೃತ ದೇಹವನ್ನು ಅಂತ್ಯ ಸಂಸ್ಕಾರಕ್ಕಾಗಿ ಸಿದ್ಧಗೊಳಿಸುವವರು (ದೇಹವನ್ನು ಶುಚಿಗೊಳಿಸುವುದು, ಕೂದಲನ್ನು ಸರಿ ಪಡಿಸುವುದು, ಬಟ್ಟೆಯನ್ನು ಉಡಿಸುವುದು ಇತ್ಯಾದಿಗಳನ್ನು ಮಾಡುವ ಕುಟುಂಬದ ಸದಸ್ಯರು ಅಥವಾ ಧರ್ಮಗುರುಗಳು) ಕೈಗವಸುಗಳನ್ನು ಬಳಸಬೇಕು; ಮೃತ ದೇಹದ ಸ್ರಾವಗಳು ಅದನ್ನು ಶುಚಿಗೊಳಿಸುವವರ ಮುಖಕ್ಕೆ ಸಿಂಪಡನೆಯಾಗುವ ಸಾಧ್ಯತೆಗಳಿದ್ದರೆ ಅಂಥವರು ತಮ್ಮ ಮುಖ ಮತ್ತು ಕಣ್ಣುಗಳಿಗೆ ರಕ್ಷಣೆ ನೀಡಬಲ್ಲ ಮುಖಕವಚವನ್ನೂ, ಕನ್ನಡಕವನ್ನೂ ಬಳಸಬೇಕು. ಮೃತ ದೇಹವನ್ನು ಶುಚಿಗೊಳಿಸಿದವರು ಆ ಸಂದರ್ಭದಲ್ಲಿ ತಾವು ಧರಿಸಿದ ಬಟ್ಟೆಗಳನ್ನು ಕೆಲಸವಾದ ಕೂಡಲೇ ತೆಗೆದು ಪ್ರತ್ಯೇಕವಾಗಿ ಒಗೆಯಬೇಕು, ಅಥವಾ ತಮ್ಮ ದಿರಿಸಿನ ಮೇಲೆ ಪ್ರತ್ಯೇಕವಾದ ಮೇಲಂಗಿಯನ್ನು ಧರಿಸಿ, ಬಳಿಕ ಅದನ್ನು ತೆಗೆದು ಒಗೆಯಬಹುದು. ಹೀಗೆ ಮೃತ ದೇಹವನ್ನು ಅಂತ್ಯಕ್ರಿಯೆಗಾಗಿ ಸಿದ್ಧಪಡಿಸಿದವರು ಮತ್ತು ಅವರಿಗೆ ನೆರವಾದವರು ಆ ಬಳಿಕ ತಮ್ಮ ಕೈಗಳನ್ನು ಸೋಪು ಮತ್ತು ನೀರಿನಿಂದ ತೊಳೆದುಕೊಳ್ಳಬೇಕು. ಇವರಲ್ಲಿ ಯಾರೇ ಆಗಲೀ ಮೃತ ದೇಹವನ್ನು ಮುತ್ತಿಕ್ಕಬಾರದು. ಮಕ್ಕಳು, ಅರುವತ್ತಕ್ಕೆ ಮೇಲ್ಪಟ್ಟ ಹಿರಿಯರು, ರಕ್ತದ ಏರೊತ್ತಡ, ಸಕ್ಕರೆ ಕಾಯಿಲೆ, ಶ್ವಾಸಕೋಶಗಳ ಕಾಯಿಲೆ, ಹೃದ್ರೋಗ, ಇತ್ಯಾದಿ ಸಮಸ್ಯೆಗಳಿರುವವರು ಮೃತ ದೇಹವನ್ನು ಶುಚಿಗೊಳಿಸುವ ಕೆಲಸವನ್ನು ಮಾಡಬಾರದು. ಆದಷ್ಟು ಕಡಿಮೆ ಜನರಷ್ಟೇ ಆ ಕೆಲಸಗಳನ್ನು ಮಾಡಿ, ಇನ್ನುಳಿದವರು ಮೃತದೇಹದಿಂದ ಒಂದು ಮೀಟರ್ ದೂರವುಳಿದು ಅವನ್ನು ನೋಡಬಹುದು.
ಕುಟುಂಬದ ಸಂಪ್ರದಾಯಗಳಿಗೆ ಅನುಗುಣವಾಗಿ ಮೃತದೇಹವನ್ನು ವೀಕ್ಷಿಸುವುದಕ್ಕೆ ಅವಕಾಶವನ್ನು ನೀಡಬಹುದು; ಆದರೆ ದೇಹವನ್ನು ಮುಟ್ಟುವುದಕ್ಕಾಗಲೀ, ಮುತ್ತಿಕ್ಕುವುದಕ್ಕಾಗಲೀ ಅವಕಾಶವಿರಬಾರದು; ದೇಹವನ್ನು ವೀಕ್ಷಿಸುವಾಗ ಪರಸ್ಪರ ಒಂದು ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು, ಶ್ವಾಸಕೋಶದ ಸಮಸ್ಯೆಯುಳ್ಳವರು ಮೃತದೇಹವನ್ನು ವೀಕ್ಷಿಸುವುದರಿಂದ ದೂರವುಳಿದರೆ ಒಳ್ಳೆಯದು; ಹಾಗೊಂದು ವೇಳೆ ಅವರು ವೀಕ್ಷಿಸುವುದಿದ್ದರೆ ಮುಖಕವಚವನ್ನು ಧರಿಸುವುದೊಳ್ಳೆಯದು. ಮೃತ ದೇಹವನ್ನು ವೀಕ್ಷಿಸಿದವರೆಲ್ಲರೂ ಆ ಬಳಿಕ ತಮ್ಮ ಕೈಗಳನ್ನು ಸೋಪು ಮತ್ತು ನೀರಿನಿಂದ ತೊಳೆದುಕೊಳ್ಳಬೇಕು.
ಮೃತ ದೇಹವನ್ನು ಅಂತ್ಯ ಸಂಸ್ಕಾರದ ಸ್ಥಳಕ್ಕೆ ಒಯ್ಯುವ ವಾಹನವನ್ನು 1% ಹೈಪೊಕ್ಲೋರೈಟ್ ದ್ರಾವಣದಿಂದ ಶುದ್ಧೀಕರಿಸಬಹುದು.
ಚಿತಾಗಾರದಲ್ಲಿ ಅಥವಾ ಹೂಳುವ ಸ್ಮಶಾನದಲ್ಲಿ ಕಾರ್ಯ ನಿರ್ವಹಿಸುವವರಿಗೆ ಕೊರೊನಾದಿಂದ ಮೃತ ಪಟ್ಟವರ ದೇಹಗಳಿಂದ ಯಾವುದೇ ವಿಶೇಷ ಅಪಾಯಗಳಿಲ್ಲ; ಅವರು ಕೈಗವಸುಗಳನ್ನು ಧರಿಸುವುದು, ಮುಖಕವಚಗಳನ್ನು ಧರಿಸುವುದು ಹಾಗೂ ಕೈಗಳನ್ನು ತೊಳೆದುಕೊಳ್ಳುವುದು ಮುಂತಾದ ಸಾಮಾನ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡರೆ ಸಾಕು.
ಸ್ಮಶಾನದಲ್ಲಿ ಮೃತ ದೇಹದ ಮುಖವನ್ನು ವೀಕ್ಷಿಸುವುದಕ್ಕೆ ಅವಕಾಶ ನೀಡಬಹುದು; ಅದಕ್ಕಾಗಿ ಮೃತ ದೇಹದ ಮುಖದ ಬಟ್ಟೆಯನ್ನು ಸರಿಸುವವರು ಸಾಮಾನ್ಯ ಸುರಕ್ಷತಾ ಕ್ರಮಗಳನ್ನು ವಹಿಸಬೇಕು.
ಧರ್ಮಗ್ರಂಥಗಳನ್ನು ಪಠಿಸುವುದು, ಮೃತ ದೇಹದ ಮೇಲೆ ಪವಿತ್ರ ಜಲವನ್ನು ಪ್ರೋಕ್ಷಿಸುವುದು, ಅಥವಾ ಮೃತ ದೇಹವನ್ನು ಮುಟ್ಟುವ ಅಗತ್ಯವಿಲ್ಲದ ಇತರ ಯಾವುದೇ ಅಂತಿಮ ವಿಧಿಗಳನ್ನು ನಡೆಸುವುದಕ್ಕೆ ಯಾವುದೇ ಅಡ್ಡಿಗಳಿಲ್ಲ. ಆದರೆ ಮೃತದೇಹವನ್ನು ಆಲಂಗಿಸುವುದು ಅಥವಾ ಮುತ್ತಿಕ್ಕುವುದನ್ನು ಮಾಡಬಾರದು.
ಮೃತರ ಕುಟುಂಬದ ಸದಸ್ಯರಿಗೆ ಆ ಮೊದಲೇ ಸೋಂಕು ತಗಲಿರುವ ಸಾಧ್ಯತೆಗಳಿರುವುದರಿಂದ ಸ್ಮಶಾನದಲ್ಲಿ ಆದಷ್ಟು ಕಡಿಮೆ ಜನರಿರಬೇಕು ಮತ್ತು ಪರಸ್ಪರ ಅಂತರವನ್ನು ಕಾಯಬೇಕು. ಅಂತಿಮ ಕ್ರಿಯೆಗಳಲ್ಲಿ ಭಾಗಿಗಳಾದವರೆಲ್ಲರೂ ತಮ್ಮ ಕೈಗಳನ್ನು ಸೋಪು ಮತ್ತು ನೀರಿನಿಂದ ತೊಳೆದುಕೊಳ್ಳಬೇಕು.
ಮೃತ ದೇಹವನ್ನು ಚಿತೆಯಲ್ಲಿರಿಸುವಾಗ ಸಾಮಾನ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು.
ಮೃತ ದೇಹವನ್ನು ಹೂಳುವ ಸಂದರ್ಭದಲ್ಲಿ ಅದಕ್ಕೆ ಸಾಮಾನ್ಯವಾಗಿ ಅನುಸರಿಸುವ ಕ್ರಮಗಳನ್ನೇ ಅನುಸರಿಸಬಹುದು, ಮತ್ತು ಸಾಮಾನ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು; ಹೆಚ್ಚು ಆಳಕ್ಕೆ ಹೂಳಬೇಕೆಂಬ ಅಥವಾ ಇತರ ಯಾವುದೇ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕೆಂಬ ಯಾವುದೇ ಸಲಹೆಗಳನ್ನು ಎರಡು ಮಾರ್ಗಸೂಚಿಗಳಲ್ಲೂ ನೀಡಿಲ್ಲ.
ಚಿತಾಗಾರದಿಂದ ಚಿತಾ ಭಸ್ಮವನ್ನು ಸಂಗ್ರಹಿಸುವುದಕ್ಕೆ ಮತ್ತು ಅದರ ವಿಸರ್ಜನೆ ಇತ್ಯಾದಿ ಅಂತಿಮ ಕ್ರಿಯೆಗಳಿಗೆ ಯಾವ ವಿಶೇಷ ಸೂಚನೆಯೂ ಇಲ್ಲ.
ಮೃತರು ಬಳಸಿದ್ದ ಬಟ್ಟೆಗಳನ್ನು ಅಥವಾ ವಸ್ತುಗಳನ್ನು ಎಸೆಯುವ ಅಥವಾ ಸುಟ್ಟುಹಾಕುವ ಅಗತ್ಯವಿಲ್ಲ. ಅವನ್ನು ಬಿಸಿನೀರಿನಲ್ಲಿ ಸೋಪಿನೊಂದಿಗೆ ಶುಚಿಗೊಳಿಸಬಹುದು ಅಥವಾ 70% ಇಥನಾಲ್ ಯಾ 1% ಹೈಪೊಕ್ಲೋರೈಟ್ ದ್ರಾವಣದಿಂದ ಶುದ್ಧೀಕರಿಸಬಹುದು.
ಪರಸ್ಪರ ಅಂತರವನ್ನು ಕಾಯ್ದುಕೊಳ್ಳುವುದಕ್ಕಾಗಿ ಹೆಚ್ಚು ಜನರು ಸೇರದಂತೆ ನಿರ್ಬಂಧಗಳನ್ನು ಹೇರಲಾಗಿರುವುದರಿಂದ ಉತ್ತರ ಕ್ರಿಯೆಯ ಕಾರ್ಯಕ್ರಮಗಳನ್ನು ಅತಿ ಕಡಿಮೆ ಬಂಧುಮಿತ್ರರ ಉಪಸ್ಥಿತಿಯಲ್ಲಿ, ಅತಿ ಸರಳವಾಗಿ, ನಡೆಸಬೇಕಾಗುತ್ತದೆ.
ಒಟ್ಟಿನಲ್ಲಿ, ಕೊರೋನ ಸೋಂಕಿನಿಂದ ಮೃತರಾದವರ ಅಂತಿಮ ವಿಧಿಗಳನ್ನು ನೆರವೇರಿಸುವಾಗ ಯಾವುದೇ ಭಯ ಅಥವಾ ಆತಂಕಗಳಿಗೆ ಒಳಗಾಗಬೇಕಾದ ಅಗತ್ಯವಿಲ್ಲ; ಸಾಮಾನ್ಯವಾದ, ಸರಳವಾದ, ಸುರಕ್ಷತಾ ಕ್ರಮಗಳನ್ನು ಪಾಲಿಸಿದರೆ ಮೃತರ ಕುಟುಂಬಗಳ ಸಂಪ್ರದಾಯ ಗಳಿಗನುಗುಣವಾಗಿ ಗೌರವಯುತವಾದ ಅಂತ್ಯ ಸಂಸ್ಕಾರವನ್ನು ನಡೆಸುವುದಕ್ಕೆ ಯಾವುದೇ ಅಡ್ಡಿಗಳಾಗಬಾರದು.
ಆಕರಗಳು: ಕೊರೋನ ಸೋಂಕಿತರ ಶವ ಸಂಸ್ಕಾರದ ವಿಧಾನಗಳ ಬಗೆಗಿನ ಮಾರ್ಗಸೂಚಿ; ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತುರ್ತು ವೈದ್ಯಕೀಯ ಪರಿಹಾರ ವಿಭಾಗದ ಪ್ರಕಟಣೆ.
ಕೊರೋನ ಸೋಂಕಿನ ಸನ್ನಿವೇಶದಲ್ಲಿ ಸುರಕ್ಷಿತವಾದ ಶವ ಸಂಸ್ಕಾರ ಮತ್ತು ಸೋಂಕು ನಿಯಂತ್ರಣದ ಬಗೆಗಿನ ಮಾರ್ಗಸೂಚಿ; ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಟಣೆ

Wednesday, April 22, 2020

ಬಂಜೆತನಕ್ಕೆ ಕಾರಣವಾಗುತ್ತಿದೆ ಜೀವನಶೈಲಿ, ಎಚ್ಚರಿಕೆ ವಹಿಸಲು ಸಕಾಲ!H

ಭಾರತದಲ್ಲಿ ಅನೇಕ ದಂಪತಿಗಳು ಅನೇಕ ಕಾರಣಗಳಿಗಾಗಿ ಬಂಜೆತನದಿಂದ ನರಳುತ್ತಿದ್ದು, ಇದನ್ನು ಭಾರತೀಯ ಸಮಾಜದಲ್ಲಿ ಕಳಂಕವೆಂದು ಭಾವಿಸಲಾಗಿದೆ. ಅನೇಕ ಆರೋಗ್ಯದ ಸಮಸ್ಯೆಗಳಂತೆ ಬಂಜೆತನವೂ ಭಾರತದಲ್ಲಿ ಹೆಚ್ಚುತ್ತಿದೆ.
ಅದೇ ರೀತಿ, ಬೆಂಗಳೂರಿನಂತಹ ಮೆಟ್ರೊ ನಗರಗಳಲ್ಲಿಯೂ ಬಂಜೆತನದ ಪ್ರಮಾಣ ಹೆಚ್ಚುತ್ತಿದೆ. ನನ್ನ ವೈದ್ಯಕೀಯ ಅನುಭವದಲ್ಲಿ, ಕಳೆದ ದಶಕಕ್ಕೆ ಹೋಲಿಸಿದರೆ ಬಂಜೆತನವು ಗಣನೀಯವಾಗಿ ಏರಿಕೆಯಾಗಿದೆ. ಭಾರತೀಯ ನೆರವಿನ ಸಂತಾನೋತ್ಪತ್ತಿ ಸಂಘದ ಪ್ರಕಾರ, ಬಂಜೆತನವು ಈಗ ಬಹಳ ವೇಗವಾಗಿ ಹೆಚ್ಚುತ್ತಿರುವ ಸಮಸ್ಯೆಯಾಗಿದ್ದು ಶೇ 10-14 ರಷ್ಟು ಭಾರತೀಯರನ್ನು ಕಾಡುತ್ತಿದೆ.
ಹೆಚ್ಚುತ್ತಿರುವ ಬಂಜೆತನಕ್ಕೆ ಕಾರಣಗಳು
* ಮಾನಸಿಕ ಒತ್ತಡ: ಒತ್ತಡವು ಸ್ತ್ರೀಯರಲ್ಲಿ ಅಂಡಾಣುವಿನ ಮತ್ತು ಪುರುಷರ ವೀರ್ಯಾಣುವಿನ ಮೇಲೆ ಪ್ರಭಾವ ಬೀರುತ್ತದೆ, ಮತ್ತು ಲೈಂಗಿಕ ಕ್ರಿಯೆಯನ್ನು ಕಡಿಮೆ ಮಾಡುತ್ತದೆ.
*ಆಹಾರದ ಅಭ್ಯಾಸಗಳು: ಜಂಕ್ ಆಹಾರ ಮತ್ತು ತಕ್ಷಣದ ಪ್ಯಾಕೇಜ್ ಆಹಾರಗಳ ಮೇಲೆ ಅವಲಂಬನೆ ದಂಪತಿಗಳಲ್ಲಿ ಹೆಚ್ಚುತ್ತಿದೆ. ಈ ಆಹಾರಗಳಲ್ಲಿ ಬಳಸಲಾಗುವ ಎಣ್ಣೆ ಪ್ರತಿ ಬಳಕೆಯಲ್ಲೂ ಕಲುಷಿತಗೊಳ್ಳುತ್ತದೆ ಮತ್ತು ಈ ಆಹಾರದಲ್ಲಿ ಕೃತಕ ವರ್ಣಗಳು ಮತ್ತು ರುಚಿಗಳು ಇರುತ್ತವೆ. ಆದ್ದರಿಂದ ಇವು ಸಂತಾನೋತ್ಪತ್ತಿ ಶಕ್ತಿಯ ಮೇಲೆ ದುಷ್ಪರಿಣಾಮ ಬೀರುವುದರಿಂದ ಇವುಗಳನ್ನು ದೂರವಿಡಬೇಕು.
*ಸರಿಯಾದ ನಿದ್ರೆ ಇಲ್ಲದಿರುವುದು: ಯುವಕರು ತಮ್ಮ ವೃತ್ತಿಯ ಗುರಿಗಳನ್ನು ಬೆನ್ನೇರುತ್ತಾ ಸರಿಯಾಗಿ ನಿದ್ರಿಸುವುದಿಲ್ಲ. ಅದರಲ್ಲಿಯೂ ಬಿಪಿಓ ಅಥವಾ ಅಂತರರಾಷ್ಟ್ರಿಯ ಪಾಳಿಯ ಉದ್ಯೋಗಿಗಳು ಅಸಹಜವಾದ ಕೆಲಸದ ಸಮಯವನ್ನು ಹೊಂದಿರುತ್ತಾರೆ. ಇದನ್ನು ಪರಿಹರಿಸಿಕೊಳ್ಳಲು ಅವರು ಧೂಮಪಾನ ಮಾಡುತ್ತಾರೆ, ಮತ್ತು ಹೆಚ್ಚಾಗಿ ಕೆಫೀನ್ ಕುಡಿಯುವುದರಿಂದ ಇದು ಸಂತಾನೋತ್ಪತ್ತಿಯ ಮೇಲೆ ಪ್ರಭಾವ ಬೀರುತ್ತದೆ.
*ದೀರ್ಘವಾದ ಪ್ರಯಾಣಗಳು: ನಗರದಲ್ಲಿ ಎಂದೂ ಮುಗಿಯದ ಸಂಚಾರಿ ಸಮಸ್ಯೆಗಳಿಂದ, ಬೆಂಗಳೂರಿಗರು ಪ್ರತಿ ದಿನ 30-40 ಕಿ.ಮೀ.ಗಳು ಸಂಚರಿಸುತ್ತಾರೆ. ಇದು ಅವರ ಹಾರ್ಮೋನ್ ಮಟ್ಟದ ಮೇಲೆ ಪ್ರಭಾವ ಬೀರುತ್ತದೆ, ಇದರಿಂದ ಅಂಡಾಣು ಮತ್ತು ವೀರ್ಯಾಣುವಿನ ಗುಣಮಟ್ಟ ಕಡಿಮೆಯಾಗುತ್ತದೆ.
*ವಿದ್ಯುತ್ ಸಾಧನಗಳ ತೀವ್ರ ಬಳಕೆ: ಮೊಬೈಲ್, ಟ್ಯಾಬ್ಲೆಟ್, ಬ್ಲುಟೂತ್ ಇತ್ಯಾದಿಗಳು ವಿಕಿರಣಗಳನ್ನು ಸೂಸುತ್ತವೆ ಮತ್ತು ಇದು ಹಾರ್ಮೋನ್ ಮೇಲೆ ಪ್ರಭಾವ ಬೀರುತ್ತದೆ. ಈ ಉಪಕರಣಗಳನ್ನು ತೀವ್ರವಾಗಿ ಬಳಸಿದಾಗ, ಇದರಿಂದ ನಿದ್ರೆಯು ಕಡಿಮೆಯಾಗುತ್ತದೆ, ಮತ್ತು ಹಾರ್ಮೋನ್ ಮೇಲೆ ಪ್ರಭಾವ ಬೀರುತ್ತದೆ.
*ಅನುವಂಶೀಯತೆ: ಹಾರ್ಮೋನ್ ಗಳ ಅನುವಂಶೀಯ ಗುಣಗಳಲ್ಲಿ ನಾವು ಬದಲಾವಣೆ ಕಂಡಿದ್ದು, ಈಗ ಮಹಿಳೆಯರ ಮೇಲೆ 35 ವರ್ಷಗಳಿಗೆ ಪ್ರಭಾವ ಬೀರುತ್ತದೆ, ಹಿಂದೆ ಇದು 40 ವರ್ಷಗಳಲ್ಲಿ ಆಗುತ್ತಿತ್ತು.
ಚಿಕಿತ್ಸೆಯ ಆಯ್ಕೆಗಳು...
ಚಿಕಿತ್ಸೆಯಿಂದ ಬಂಜೆತನಕ್ಕೆ ಕಾರಣವಾದ ಅನೇಕ ಅಂಶಗಳನ್ನು ಪತ್ತೆ ಮಾಡಬಹುದು. ಬಂಜೆತನಕ್ಕೆ ಕಾರಣವಾದ ಅಂಶಕ್ಕೆ ಚಿಕಿತ್ಸೆ ನೀಡುವುದೇ ಉತ್ತಮ ಆಯ್ಕೆ. ಮಹಿಳೆಯರಲ್ಲಿ ಸರಳ ಪರೀಕ್ಷೆಗಳಾದ ವಜೀನಲ್ ಸ್ಕ್ಯಾನ್‌, ಫಾಲ್ಲೋಪಿಯನ್ ಟ್ಯೂಬ್ ಪರೀಕ್ಷೆ, ಹಾರ್ಮೋನ್ ಪರೀಕ್ಷೆ ಮತ್ತು ಪುರುಷರಲ್ಲಿ ವೀರ್ಯಾಣು ಪರೀಕ್ಷೆಯಿಂದ ಸಮಸ್ಯೆಯನ್ನು ಗುರುತಿಸಿ, ಚಿಕಿತ್ಸೆ ನೀಡುವುದು ಸಾಧ್ಯ. ಫಾಲ್ಲೊಪಿಯನ್ ಟ್ಯೂಬ್ ನಲ್ಲಿ ತಡೆಯಿದ್ದರೆ, ನಾವು ಐವಿಎಫ್‌ ಸಲಹೆ ನೀಡುತ್ತೇವೆ. ನಾವು ಕಂಡಂತೆ ಶೇ 13-18% ಪ್ರಕರಣಗಳಲ್ಲಿ ಕಾರಣ ಪತ್ತೆಯಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ವೈದ್ಯಕೀಯ ಅಥವಾ ಶಸ್ತ್ರಚಿಕಿತ್ಸೆಯ ಆಯ್ಕೆಗಳು ಸರಿಯಿಲ್ಲದಿದ್ದರೆ, ನಾವು IUI (ಇಂಟ್ರಾ ಯುಟೆರೈನ್ ಇನ್ಸೆಮಿನೇಶನ್), IVF (ಇನ್ವಿಟ್ರೊ ಫರ್ಟಿಲೈಜೆಶನ್‌ ‌) ಅಥವಾ ICSI (ಇಂಟ್ರಾ ಸೈಟೊಪ್ಲಾಸ್ಮಿಕ್ ಸ್ಪರ್ಮ್ ಇಂಜಕ್ಷನ್‌) ಚಿಕಿತ್ಸೆಯ ಸಲಹೆ ನೀಡುತ್ತೇವೆ. IUI ಗರ್ಭಧಾರಣೆಯ ಸಾಧ್ಯತೆಗಳನ್ನು 4 ಪಟ್ಟು ಹೆಚ್ಚಿಸುತ್ತದೆ.
ಜೀವನಶೈಲಿಯ ಬದಲಾವಣೆ
ಇಂದು ಕಂಡು ಬರುವ ಬಹಳಷ್ಟು ಬಂಜೆತನದ ಸಮಸ್ಯೆಗಳಲ್ಲಿ ಕೆಲವನ್ನು ಜೀವನ ಶೈಲಿಯ ಬದಲಾವಣೆಗಳಿಂದ ನಿಲ್ಲಿಸಬಹುದು ಅಥವಾ ನಿಯಂತ್ರಿಸಬಹುದು. ಮದ್ಯಪಾನ ಮಾಡದಿರುವುದು, ಧೂಮಪಾನ ಬಿಡುವುದು, ಆರೋಗ್ಯಕರ ಆಹಾರ, ತೂಕ ನಿರ್ವಹಣೆ ಮತ್ತು ಒತ್ತಡ ನಿರ್ವಹಣೆಯನ್ನು ನಾನು ಶಿಫಾರಸು ಮಾಡುತ್ತೇನೆ. ಬಂಜೆತನದ ನಿರ್ವಹಣೆ ಈಗ ಒಂದು ಕದನವಾಗಿಲ್ಲ. ಸಮಯೋಚಿತ ಕ್ರಮದಿಂದ ಅದನ್ನು ಪರಿಣಾಮಕಾರಿಯಾಗಿ ಪರಿಹರಿಸಬಹುದು.
-ಡಾ. ಶಿಲ್ಪಾ ಜಿ.ಬಿ, ಸ್ತ್ರೀರೋಗತಜ್ಞರು, ಬ್ಲೂಂ ಕ್ಲಿನಿಕ್ ಮತ್ತು ಸಮಾಲೋಚಕ ಸ್ತ್ರೀರೋಗತಜ್ಞರು, ಶಾಂತಿ ಶೆಲ್ ಫರ್ಟಿಲಿಟಿ, ಬೆಂಗಳೂರು

ಹೃದಯಾಘಾತದ ಲಕ್ಷಣಗಳು

ಎಲ್​ಡಿಎಲ್ ಕೊಲೆಸ್ಟ್ರಾಲ್ (LDL-C) ಎಂಬ ಕೆಟ್ಟ ಕೊಬ್ಬು ಹೃದಯದ ಕೊರೊನರಿ ರಕ್ತನಾಳಗಳ ಒಳಮೈಯಲ್ಲಿ ಸಂಗ್ರಹವಾಗಿ ರಕ್ತನಾಳವನ್ನು ಕಿರಿದಾಗಿಸಿ, ರಕ್ತನಾಳವು ಬಂದ್ ಆದಾಗ ಹೃದಯದ ಸ್ನಾಯು ರಕ್ತಹೀನತೆಯಿಂದ ಕಾರ್ಯಹೀನವಾಗುತ್ತದೆ. ಇದನ್ನು ಹೃದಯಾಘಾತವಾಗಿದೆ ಎಂದು ಕರೆಯುತ್ತೇವೆ.
ಹೃದಯಾಘಾತದ ಲಕ್ಷಣಗಳು:
1) ಎದೆನೋವು (Chest Pain): ಹೃದಯಾಘಾತದ ಸಾಮಾನ್ಯ ಲಕ್ಷಣವು ಎದೆನೋವು.
ಈ ನೋವು ತೀವ್ರತೆಯಲ್ಲಿ ಹೆಚ್ಚಾದಾಗ ಯಾವ ಥರದ್​ಎಂದು ಹೇಳುವುದೂ ಕಠಿಣ. ಹೃದಯಾಘಾತಕ್ಕೊಳಗಾದ ಹಲವರು ಈ ನೋವನ್ನು ಹೀಗೆ ವಿವರಿಸುತ್ತಾರೆ: 'ಎದೆಯನ್ನು ಒಳಗಿನಿಂದ ಹಿಚುಕಿದಂತಾಯಿತು; ಎದೆಯ ಮೇಲೆ ದೊಡ್ಡ ಬಂಡೆಗಲ್ಲನ್ನು ಇಟ್ಟಂತಾಯಿತು; ಎದೆಯಲ್ಲೂ ಉರಿ, ಗಂಟಲಿನಲ್ಲಿ ಏನೋ ಸಿಕ್ಕಂಂತಾಯಿತು.' ಹಲವರಲ್ಲಿ ಎದೆನೋವಿನ ತೀವ್ರತೆಗಿಂತ ಸಾವೇ ಉತ್ತಮ ಎನ್ನುವ ಭಾವನೆ ಬರುತ್ತದೆ. ಆಸ್ಪತ್ರೆಯಲ್ಲಿ ಬಂದ ತಕ್ಷಣವೇ 'ಡಾಕ್ಟರೇ, ಏನಾದರೂ ಮಾಡಿ ಈ ಎದೆನೋವು ಕಡಿಮೆ ಮಾಡಿ' ಎನ್ನುವುದು ಸಾಮಾನ್ಯ. ಇನ್ನು ಹಲವರಿಗೆ 'ಗ್ಯಾಸ್' ಆಗಿದೆ, ಇದರಿಂದ ಸ್ವಲ್ಪ ಎದೆ ಉರಿ ಎಂದು ಅನಿಸಿದ್ದುಂಟು. ಎದೆನೋವಿನ ತೀವ್ರತೆ ಗಂಡಸರಿಗಿಂತ ಹೆಣ್ಣುಮಕ್ಕಳಲ್ಲಿ ಕಡಿಮೆ. ಅವರಲ್ಲಿ ದಣಿವು, ವಾಂತಿ, ಏರುಸಿರು ಹೆಚ್ಚು ಸಾಮಾನ್ಯ.
2) ಬೆವರು (sweating): ಈ ಎದೆನೋವಿನೊಂದಿಗೆ ತೀವ್ರತರ ಬೆವರು (severe) ಸಾಮಾನ್ಯ. ಇದು ಸ್ವಲ್ಪ ಅಥವಾ ಇಡೀ ದೇಹವನ್ನೇ ಸ್ನಾನ ಮಾಡಿಸಿದಂತೆ ಒದ್ದೆ ಮಾಡಬಹುದು. ಅದು ಹೃದಯಾಘಾತದ ತೀವ್ರತೆಯ ಮೇಲೆ ಅವಲಂಬಿಸಿದೆ.
3) ವಾಂತಿ (vomting, nausea): ವಾಂತಿ ಆದಂತೆನಿಸುವುದು, ವಾಂತಿಯೂ ಆಗುವುದು ಅಜೀರ್ಣವಾದಂತೆನಿಸುವುದು ಸಾಮಾನ್ಯ.
4) ಉಸಿರಾಟದ ತೊಂದರೆ (Breathlessness): ಹೃದಯಾಘಾತದ ತೀವ್ರತೆ ಹೆಚ್ಚಿದಂತೆ ಹಲವರಲ್ಲಿ ಏರುಸಿರು ಕೂಡ ಕಾಣುವುದುಂಟು.
5) ಆಯಾಸ (Fatigue): ಅತಿ ಆಯಾಸ ಕೂಡ ಸಾಮಾನ್ಯ. ಹೆಣ್ಣುಮಕ್ಕಳಲ್ಲಿ ಹೆಚ್ಚು ಸಾಮಾನ್ಯ.
6) ತಲೆ ತಿರುಗುವಿಕೆ (Dizziness): ತಲೆ ಸುತ್ತುವಂತೆನಿಸುವುದೂ ಸಹಜ. ಆಗ ಬಿಪಿ ಕಡಿಮೆ ಇರುವ ಸಾಧ್ಯತೆ ಹೆಚ್ಚು.
ಈ ಲಕ್ಷಣಗಳು ಕಂಡುಬಂದಲ್ಲಿ ಅಲಕ್ಷಿಸಕೂಡದು. ಆಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ದಾಖಲಾಗುವುದು ಒಳಿತು. ಮನೆ ಹತ್ತಿರದ ವೈದ್ಯರಿಗೆ ತೋರಿಸುವುದರಿಂದ ಸಮಯ ಹಾಳಾಗುವ ಸಂಭವವಿದೆ.
ಎರಡನೇ ಸ್ಥಾನವು ಶನಿವಾರ ದಿನಕ್ಕೆ!: ದಿನದ ವೇಳೆ, ರಾತ್ರಿ ಕುಳಿತಾಗ, ನಿಂತಾಗ, ಭಾರ ಹೊರುವಾಗ, ಅಟ್ಟದ ಮೇಲೆ ಹತ್ತುವಾಗ, ಮಲಗಿದಾಗ, ಯಾವಾಗಲಾದರೂ ಹೃದಯಾಘಾತದ ಎದೆನೋವು ಬರಬಹುದು. ಆದರೆ, ಹೆಚ್ಚಾಗಿ ಈ ನೋವು ಬೆಳಗ್ಗೆ 4ರಿಂದ 10 ಗಂಟೆಯವರೆಗೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಬೆಳಗಿನ ವೇಳೆ ಪ್ಲೇಟ್​ಲೆಟ್ (Platelets), ಕಣಗಳು ಹೆಚ್ಚು ಜಿಗುಟಾಗಿ ಹತ್ತಿಕೊಳ್ಳುತ್ತವೆ (ಅಂಟಿಕೊಳ್ಳುತ್ತವೆ) (Sticks) ಮತ್ತು ಆಗ 'ಅಡ್ರೆನಾಲಿನ್' ಎಂಬ ಹಾಮೋನ್ ಕೂಡ ರಕ್ತದಲ್ಲಿ ಬಿಡುಗಡೆ ಹೆಚ್ಚಾಗಿ ರಕ್ತನಾಳದ ಪ್ಲಾಕ್ (Plaque) ಒಡೆಯುವಿಕೆಯ (Rupture) ಸಾಧ್ಯತೆಯನ್ನು ಹೆಚ್ಚಿಸುತ್ತವೆ.
ಸೋಮವಾರ ಹೃದಯಾಘಾತದ ಎದೆನೋವು ಕಂಡುಬರುವುದೆಂದು ಹಲವಾರು ಅಧ್ಯಯನಗಳು ಇವೆ. ಆದರೆ, ಯಾವುದೇ ದಿನ ಆಗಬಹುದು. ಈ ಎದೆನೋವು, ಎದೆಯ ಮಧ್ಯಭಾಗದಲ್ಲಿ ಸಾಮಾನ್ಯ. ಮೂವತ್ತು ನಿಮಿಷಕ್ಕೂ ಹೆಚ್ಚು ಸಮಯದವರೆಗೆ ಇರುತ್ತದೆ. ಕೆಲವೇ ಸೆಕೆಂಡ್ ಬರುವ ಎದೆನೋವು ಹೃದಯಾಘಾತದ ನೋವಲ್ಲ! ಇದು ಮಾಂಸಖಂಡದ ನೋವು (Muscle or bone pain) ಅಥವಾ ಅಪಚನದಿಂದ ಆದದ್ದು. ಈ ನೋವು (Radiation) ಎಡ ಅಥವಾ ಬಲಗೈ, ಕುತ್ತಿಗೆ, ಮೇಲಿನ ಬೆನ್ನು, ಹೊಟ್ಟೆಯ ಮೇಲ್ಭಾಗ, ಕಾಲುಗಳಿಗೆ ಹರಡದು. ಇನ್ನು ಹಲವರಲ್ಲಿ ಎದೆನೋವು ಕಾಣದೆ ಈ ಸ್ಥಳಗಳಲ್ಲಿ ಮಾತ್ರ ಕಾಣಬಹುದು. ಉದಾ: ಎಡಗೈ ಅಥವಾ ಬೆನ್ನು. ಶೇ. ಮೂವತ್ತರಷ್ಟು ಜನ ಇದು ಗ್ಯಾಸ್ ಆಗಿದೆ ಎಂದು ವೈದ್ಯರನ್ನು ಕಾಣುವುದೂ ಇಲ್ಲ. ಇದು ಮಾರಣಾಂತಿಕವಾಗುವ ಸಂಭವ ಹೆಚ್ಚು.

20 ದೆಹಲಿ ಪೊಲೀಸರಿಗೆ ಕರೋನವೈರಸ್ ಪಾಸಿಟಿವ


ನವದೆಹಲಿ: 20 ದೆಹಲಿ ಪೊಲೀಸರಿಗೆ ಕರೋನವೈರಸ್ ಗೆ ಒಳಗಾಗಿದ್ದಾರೆ. ಇದೇ ವೇಳೆ ಭಾರತದಲ್ಲಿ COVID-19 ಸೋಂಕಿನ ಒಟ್ಟು ಪ್ರಕರಣಗಳು 18,000 ದಾಟಿದ್ದರೆ, ಒಟ್ಟು 590 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಈ 24 ಗಂಟೆಗಳಲ್ಲಿ 945 ಹೊಸ ಕರೋನವೈರಸ್ ಪ್ರಕರಣಗಳು ವರದಿಯಾಗಿದ್ದು, ಭಾರತದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ18,601 ಕ್ಕೆರಿದೆ.ಒಟ್ಟು ಪ್ರಕರಣಗಳಲ್ಲಿ 14,759 ಸಕ್ರಿಯ ಪ್ರಕರಣಗಳು ಸೇರಿವೆ, ಆದರೆ 3,251 ಗುಣಮುಖರಾಗಿದ್ದಾರೆ ಅಥವಾ ಒಬ್ಬರು ವಲಸೆ ಹೋಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಭಾರತದಲ್ಲಿ ಅತಿ ಹೆಚ್ಚು ದೃಢಪಡಿಸಿದ ಪ್ರಕರಣಗಳು ಮಹಾರಾಷ್ಟ್ರ (4,666), ನಂತರದ ಸ್ಥಾನ ದೆಹಲಿ (2,081), ಗುಜರಾತ್ (1,939), ಮಧ್ಯಪ್ರದೇಶ (1,485) ಮತ್ತು ತಮಿಳುನಾಡು (1,520). ಉತ್ತರ ಪ್ರದೇಶದಲ್ಲಿ 153 ಹೊಸ ಕರೋನವೈರಸ್ ಪ್ರಕರಣಗಳಿವೆ, ಒಟ್ಟು ಪ್ರಕರಣಗಳು 1337 ಕ್ಕೆ ತಲುಪಿದೆ. ಈ ಪೈಕಿ 1154 ಸಕ್ರಿಯ ಪ್ರಕರಣಗಳು ಮತ್ತು 814 ಜನರು ತಬ್ಲೀಘಿ ಜಮಾಅತ್‌ಗೆ ಸಂಬಂಧಿಸಿವೆ.

Tuesday, April 21, 2020

ಬಾಪೂಜಿ ನಗರ ಸರ್ಕಾರಿ ಪ್ರೌಢಶಾಲೆ: ವಾಟ್ಸ್‌ ಆ್ಯಪ್‌ನಲ್ಲೇ ಪರೀಕ್ಷೆ ಸಿದ್ಧತೆ ಎಸ್ಸೆಸ್ಸೆಲ್ಸಿ ಮಕ್ಕಳ ಜೂಮ್‌ ಕ್ಲೌಡ್‌ ಮೀಟಿಂಗ್!

ಕೆ.ನರಸಿಂಹಮೂರ್ತಿ
ಬಳ್ಳಾರಿ: ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ರೀತಿಯಲ್ಲೇ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೂ ಜೂಮ್‌ ಕ್ಲೌಡ್‌ ಮೀಟಿಂಗ್‌ ಮೂಲಕ ಪರೀಕ್ಷೆ ಸಿದ್ಧತೆ ನಡೆಸಬಹುದೇ?
ಹೌದೆನ್ನುತ್ತಿದ್ದಾರೆ ನಗರದ ಬಾಪೂಜಿ ನಗರ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು. ಲಾಕ್‌ಡೌನ್‌ ನಿಂದ ಸ್ಥಗಿತಗೊಂಡಿರುವ ಶೈಕ್ಷಣಿಕ ಚಟುವಟಿಕೆಗಳನ್ನು ಜೂಮ್‌ ಕ್ಲೌಡ್‌ ಮೀಟಿಂಗ್ ಮೂಲಕ ಮುಂದು ವರಿಸುತ್ತಿರುವ ವಿಶ್ವವಿದ್ಯಾಲಯಗಳ ಹಾದಿಯಲ್ಲೇ ಈ ಸರ್ಕಾರಿ ಶಾಲೆ ನಡೆ ಯುತ್ತಿದೆ ಎಂಬುದು ಸದ್ಯದ ವಿಶೇಷ.
ಸದ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾವಾಗ ನಡೆಯಬಹುದು ಎಂಬ ಖಚಿತತೆ ಇನ್ನೂ ಇಲ್ಲ. ಹಾಗೆಂದು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸುಮ್ಮನೆ ಕುಳಿತಿಲ್ಲ.
ಶಾಲೆಯಲ್ಲಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪೋಷಕರೆಲ್ಲರ ಬಳಿಯೂ ಆಂಡ್ರಾಯ್ಡ್‌ ಮೊಬೈಲ್ ಫೋನ್‌ ಇಲ್ಲ. ಹೀಗಾಗಿ ಸದ್ಯ 14 ವಿದ್ಯಾರ್ಥಿಗಳಷ್ಟೇ ಮೀಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಉಳಿದವರು ಅವ ರಿಂದ ಮಾಹಿತಿ ಪಡೆಯುತ್ತಿದ್ದಾರೆ.
ವಾಟ್ಸ್‌ ಅ್ಯಪ್‌ ಗ್ರೂಪ್: ಶಿಕ್ಷಕರು ಮತ್ತು ವಿದ್ಯಾರ್ಥಿಗಳ ವಾಟ್ಸ್‌ ಆ್ಯಪ್‌ ಗ್ರೂಪ್‌ ರಚಿಸಲಾಗಿದ್ದು, ಅಲ್ಲಿಯೇ ಶಿಕ್ಷಕರು ಹೋಂ ವರ್ಕ್‌ ಏನು ಎಂಬುದನ್ನು ತಿಳಿಸುತ್ತಾರೆ. ಅದನ್ನು ಪೂರ್ಣಗೊಳಿಸಿ ವಿದ್ಯಾರ್ಥಿಗಳು ಅದೇ ಗ್ರೂಪ್‌ನಲ್ಲಿ ಸಂಜೆ ಸಲ್ಲಿಸಬೇಕು. ನಂತರ ಅವುಗಳನ್ನು ಪರಿಶೀಲಿಸಿ ಶಿಕ್ಷಕರು ರಾತ್ರಿ 8ಗಂಟೆಗೆ ಆ ಕುರಿತು ವರದಿ ಮತ್ತು ವಿದ್ಯಾರ್ಥಿಗಳ ಹಾಜರಾತಿ ಮಾಹಿತಿಯನ್ನು ಮುಖ್ಯಶಿಕ್ಷಕ ಜಿ.ಎಸ್‌.ಮನೋಹರ್‌ ಅವರಿಗೆ ಸಲ್ಲಿಸುತ್ತಾರೆ.
ಮಾರ್ಚ್‌ 24ರಿಂದ: ‘ಮಾರ್ಚ್‌ 24ರಂದು ಈ ಪ್ರಯತ್ನವನ್ನು ಆರಂಭಿಸಿದೆವು. ಮೊದಲಿಗೆ ವಿದ್ಯಾರ್ಥಿಗಳು ಆಸಕ್ತಿ ತೋರಲಿಲ್ಲ. ನಂತರ ಅವರಲ್ಲಿ ಉತ್ಸಾಹ ಹೆಚ್ಚಾಗಿದೆ. ಅವರೇ ಶಿಕ್ಷಕರಿಗೆ ಕರೆ ಮಾಡುತ್ತಾರೆ’ ಎಂದು ಮುಖ್ಯಶಿಕ್ಷಕ ಜಿ.ಎಸ್‌.ಮನೋಹರ್‌ ‘ಪ್ರಜಾವಾಣಿ’ಗೆ ಸೋಮವಾರ ತಿಳಿಸಿದರು.
‘ಕನ್ನಡ, ಇಂಗ್ಲಿಷ್‌, ಹಿಂದಿ ಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜ ಬೋಧಿಸುವ ಆರು ಶಿಕ್ಷಕರು ಸಕ್ರಿಯರಾಗಿದ್ದಾರೆ 2018ರಿಂದ ಬಂದಿರುವ ಮುಖ್ಯ ವಿಷಯಗಳ ಹೊಸ ಪಠ್ಯಕ್ರಮದ ಪ್ರಶ್ನೆಪತ್ರಿಕೆಗಳು ಹಾಗೂ 2017ರಿಂದ ಜಾರಿಯಲ್ಲಿರುವ ಭಾಷಾ ಪಠ್ಯಕ್ರಮಗಳ ಪ್ರಶ್ನೆಪತ್ರಿಕೆಗಳ ಅಭ್ಯಾಸ ನಡೆದಿದೆ’ ಎಂದರು.
‘ಪ್ರಶ್ನೆಪತ್ರಿಕೆಗಳನ್ನು ಆಧರಿಸಿಯೇ ಹೋಂ ವರ್ಕ್‌ ನೀಡಲಾಗುತ್ತದೆ. ಅವುಗಳಿಗೆ ವಿದ್ಯಾರ್ಥಿಗಳು ಉತ್ತರಿಸ ಬೇಕು. ಒಬ್ಬರ ಉತ್ತರವನ್ನು ಮತ್ತೊ ಬ್ಬರು ಬರೆದರೂ ಗೊತ್ತಾಗುತ್ತದೆ. ಎಲ್ಲರ ಉತ್ತರಗಳನ್ನು ಪರಿಶೀಲಿಸಿ ಅವರುಗಳ ಮೇಲೆ ಶಿಕ್ಷಕರು ಗುರುತು ಮಾಡಿ ನನಗೆ ಕಳಿಸುತ್ತಾರೆ. ನಾನು ಮತ್ತೊಮ್ಮೆ ಪರಿಶೀಲಿಸುತ್ತೇನೆ’ ಎಂದರು.

Monday, April 20, 2020

ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ


ಮುಳಗುಂದ (ಗದಗ): ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಜಿಲ್ಲೆಯ ಮುಳಗುಂದ ಸಮೀಪದ ಶಿರೋಳದಲ್ಲಿ ಸಂಭವಿಸಿದೆ.
ಮೃತರನ್ನು ಗ್ರಾಮದ ಚನ್ನಬಸವ್ವ ಬಸಯ್ಯ ದಂಡಿನ (40) ಮತ್ತು ಆಕೆಯ ಇಬ್ಬರು ಮಕ್ಕಳಾಗಿರುವ ಕೋಟ್ರಯ್ಯ (6) ಹಾಗೂ ಮಾಲಾ (5) ಎಂದು ಗುರುತಿಸಲಾಗಿದೆ.
ಶಿರೋಳ- ಮುಳಗುಂದ ರಸ್ತೆಯಲ್ಲಿರುವ ತಮ್ಮದೇ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದು ಬಂದಿದೆ.
ಈ ಘಟನೆಗೆ ನಿಖರವಾದ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ. ಸ್ಥಳಕ್ಕೆ ಮುಳಗುಂದ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಸಿದ್ದರಾಮಯ್ಯ

ಬೆಂಗಳೂರು: ಪಾದರಾಯನಪುರದಲ್ಲಿ ನಡೆದ ಗಲಭೆ ಅತ್ಯಂತ ದುರದೃಷ್ಟಕರ. ‌ಇಂತಹ ಘಟನೆಗಳು ಮರುಕಳಿಸದಂತೆ ತಡೆಯಬೇಕಾದರೆ ದುಷ್ಕೃತ್ಯದಲ್ಲಿ ತೊಡಗಿರುವವರನ್ನು ಗುರುತಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಘಟನೆ ಕುರಿತು ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಮಾಹಿತಿ ಪಡೆದುಕೊಂಡರು.
ಪಾದರಾಯನಪುರ ಘಟನೆ ಖಂಡನೀಯ. ಇದಕ್ಕೆ ಕಾರಣರಾದವರನ್ನು ಶಿಕ್ಷೆಗೆ ಗುರಿ ಮಾಡಬೇಕು. ಕೋವಿಡ್-19 ವಿಚಾರದಲ್ಲಿ ಸರ್ಕಾರ ಕೈಗೊಳ್ಳುವ ಕ್ರಮಗಳಿಗೆ ನಮ್ಮ ಸಹಮತವಿದೆ. ಇದನ್ನು ನಾವು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇವೆ ಎಂದರು.
ಯಾರೇ ಆಗಲಿ, ಕಾನೂನಿಗೆ ಗೌರವ ಕೊಡಬೇಕು. ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಹಲ್ಲೆ ಮಾಡುವವರ ವಿರುದ್ಧ ಉತ್ತರ ಪ್ರದೇಶ‌ ಮಾದರಿ ಕಾನೂನು ಜಾರಿಗೆ ಸಂಪುಟ ಸಭೆ ತೀರ್ಮಾನ


ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕು ವಿರುದ್ಧದ ಹೋರಾಟದಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯರು ಸೇರಿದಂತೆ ಆರೋಗ್ಯ ಹಾಗೂ ಸೇವಾ ಇಲಾಖೆಗಳ ಸಿಬ್ಬಂದಿ ‌ಮೇಲೆ ಹಲ್ಲೆ ಮಾಡುವವರ ವಿರುದ್ಧ ಉತ್ತರ ಪ್ರದೇಶ‌ ಮಾದರಿ ಕಾನೂನು ಜಾರಿಗೆ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ವರದಿಯಾಗಿದೆ.
ಹಲ್ಲೆ ಮಾಡುವವರ ವಿರುದ್ಧ ಉತ್ತರ ಪ್ರದೇಶ‌ ಮಾದರಿ ಕಾನೂನು ಜಾರಿ ಮಾಡಲಾಗುತ್ತದೆ, ಇದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ಕೇಂದ್ರದ ‌ಮಾರ್ಗಸೂಚಿಯಂತೆ ಲಾಕ್ ಡೌನ್ ಅನ್ನು ರಾಜ್ಯದಲ್ಲಿ ಮೇ.3 ರವರೆಗೆ ಮುಂದುವರಿಸಿ ಪಾಲನೆ ಮಾಡಲು ತೀರ್ಮಾನ ಮಾಡಲಾಗಿದೆ. ಹೀಗಾಗಿ ಏಪ್ರಿಲ್ 21ರ ನಂತರವೂ ಲಾಕ್ ಡೌನ್ ಸಡಿಲ ಮಾಡಲಾಗುವುದಿಲ್ಲ.ಮೇ 3 ರವರೆಗೂ ಲಾಕ್ ಡೌನ್ ಯಥಾಸ್ಥಿತಿ ಮುಂದುವರಿಯಲಿದೆ.
ಲಾಕ್ ಡೌನ್ ಪಾಲನೆ ನಿಯಮಾವಳಿ ಕುರಿತು ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಟಾಸ್ಕ್ ಫೋರ್ಸ್ ಜೊತೆ ಚರ್ಚಿಸಿ ಮುಖ್ಯಮಂತ್ರಿಯವರು ತೀರ್ಮಾನ ಮಾಡುತ್ತಾರೆ ಎಂದು ಸಂಸದೀ‌ಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಯಾರೋ ವ್ಯಕ್ತಿಗಳು ಮಾಡಿದ ಕೃತ್ಯಕ್ಕೆ ಸಮಾಜವನ್ನು ದೋಷಿಸುವುದು ಸರಿಯಲ್ಲ: ಡಿ ಕೆ ಶಿವಕುಮಾರ್


ಬೆಂಗಳೂರು: ಪಾದರಾಯನಪುರ ಘಟನೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಆದರೆ ಯಾರೋ ವ್ಯಕ್ತಿಗಳು ಮಾಡಿದ ಕೃತ್ಯಕ್ಕೆ ಸಮಾಜವನ್ನು ದೋಷಿಸುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಸದಾಶಿವ ನಗರದ ತನ್ನ ನಿವಾಸದಲ್ಲಿ ಬೆಂಗಳೂರಿನ ಮುಸ್ಲಿಂ ನಾಯಕರ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಪಾದರಾಯನಪುರ ಘಟನೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಸರ್ಕಾರ ತೆಗೆದುಕೊಳ್ಳುವ ಎಲ್ಲಾ ಒಳ್ಳೆಯ ನಿರ್ಧಾರಗಳಲ್ಲಿ ನಾವು ಸಹಕಾರ ಕೊಡುತ್ತೇವೆ. ನಾವು ಇಷ್ಟೇಲ್ಲ ಸಹಕಾರ ನೀಡುತ್ತಿದ್ದರೂ, ತಮ್ಮ ಮಂತ್ರಿಗಳ, ಶಾಸಕರ ಹೇಳಿಕೆಗಳನ್ನೂ ಗಮನಿಸಿ. ಯಾವುದೇ ಪಕ್ಷದ ನಾಯಕರೂ ಪ್ರಚೋದನಕಾರಿ ಹೇಳಿಕೆ ನೀಡಿದರೆ, ಅವರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಡಿಕೆ ಶಿವಕುಮಾರ್ ಮನವಿ ಮಾಡಿದರು.
ಪಾದರಾಯನಪುರ ಘಟನೆ ಖಂಡನೀಯ, ವ್ಯಕ್ತಿಗಳು ಮಾಡಿದ ಕೃತ್ಯಕ್ಕೆ ವ್ಯಕ್ತಿಗಳಿಗೆ ಶಿಕ್ಷೆಯಾಗಬೇಕು. ಪೊಲೀಸರನ್ನು ಕೆಲವು ಮಂತ್ರಿಗಳು ನಿಂದಿಸುತ್ತಿರುವುದು ಸರಿಯಲ್ಲ. ವಾರ್ನಿಂಗ್ ಕೊಡೋದು ಸರಿಯಲ್ಲ. ಆಶಾ ಕಾರ್ಯಕರ್ತೆಯರೂ ಉತ್ತಮ ಕೆಲಸ ಮಾಡ್ತಿದಾರೆ ಎಂದರು.
ಮುಂದಿನ ದಿನಗಳಲ್ಲಿ ನೀವು ಎಲ್ಲಿಗೆ ಕರೆದರೂ, ಬರಲು ಸಹಕಾರ ಕೊಡಲು ನಾವು ಸಿದ್ದರಿದ್ದೇವೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.

ದಿನಸಿ ಅಂಗಡಿಗಳ ಮೇಲೆ ದಾಳಿ: ಐವರು ಮಾಲೀಕರ ವಿರುದ್ಧ ಪ್ರಕರಣ

ಹೊಸಪೇಟೆ: ಮಾರುಕಟ್ಟೆ ಬೆಲೆಗಿಂತ ಅಧಿಕ ದರಕ್ಕೆ ದಿನಸಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನಗರದ ಐದು ಕಿರಾಣಿ ಮಳಿಗೆಗಳ ಮೇಲೆ ಸೋಮವಾರ ದಾಳಿ ನಡೆಸಿ, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದುಬಾರಿ ಬೆಲೆಗೆ ದಿನಸಿ ಮಾರಾಟ' ಶೀರ್ಷಿಕೆ ಅಡಿ 'ಪ್ರಜಾವಾಣಿ' ಸೋಮವಾರ ವಿಶೇಷ ವರದಿ ಪ್ರಕಟಿಸಿತ್ತು. ವರದಿಗೆ ಎಚ್ಚೆತ್ತುಕೊಂಡು ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಹಾಗೂ ಆಹಾರ ಇಲಾಖೆಯ ಸಿಬ್ಬಂದಿ ನಗರದ ಕಿರಾಣಿ ಮಳಿಗೆಗಳ ಮೇಲೆ ದಾಳಿ ನಡೆಸಿ, ಕ್ರಮ ಕೈಗೊಂಡಿದ್ದಾರೆ.
ನಗರದ ಮೂರಂಗಡಿ ವೃತ್ತದ ದೇವಿನಾರಾಯಣಿ ಕಿರಾಣಿ ಅಂಗಡಿ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಎದುರಿನ ಬಾಲಾಜಿ ಬಜಾರ್‌, ನಗರ ಠಾಣೆ ಬಳಿಯ ಲಕ್ಷ್ಮಿನಾರಾಯಣ ಜನರಲ್‌ ಸ್ಟೋರ್ಸ್‌, ಮೇನ್‌ ಬಜಾರ್‌ನ ಜನಾದ್ರಿ ರಾಮಚಂದ್ರಪ್ಪ ಮತ್ತು ಸನ್ಸ್‌ ಹಾಗೂ ಪಟೇಲ್‌ ನಗರದ ಶಿರಡಿ ಸಾಯಿ ಬಜಾರ್‌ ಮಳಿಗೆ ಮಾಲೀಕರ ವಿರುದ್ಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುರ್ತು ಸುದ್ದಿಗೋಷ್ಠಿ ಕರೆದು ಮಾತನಾಡಿದ ಉಪವಿಭಾಗಾಧಿಕಾರಿ ಶೇಖ್‌ ತನ್ವೀರ್‌ ಆಸಿಫ್‌, 'ಅಧಿಕ ಬೆಲೆಗೆ ದಿನಸಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎನ್ನುವ ವಿಷಯ 'ಪ್ರಜಾವಾಣಿ'ಯಲ್ಲಿ ಓದಿದೆ. ಈ ಸಂಬಂಧ ತಹಶೀಲ್ದಾರ್‌ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೆ. ಅವರು ಗ್ರಾಹಕರ ಸೋಗಿನಲ್ಲಿ ಕಿರಾಣಿ ಮಳಿಗೆಗಳಿಗೆ ಹೋಗಿ, ದರ ಕೇಳಿದ್ದಾರೆ. ಮಾರುಕಟ್ಟೆ ಬೆಲೆಗಿಂತ ಶೇ 30ರಷ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದು ಖಾತ್ರಿಯಾದ ನಂತರ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ' ಎಂದು ಮಾಹಿತಿ ಹಂಚಿಕೊಂಡರು.
'ಯಾವುದಾದರೂ ವಸ್ತುಗಳ ದಾಸ್ತಾನು ಇರದಿದ್ದರೆ ₹4ರಿಂದ ₹5 ಹೆಚ್ಚಿಗೆ ಪಡೆಯಲಿ. ಅದು ಬಿಟ್ಟು ₹30ರಿಂದ ₹40 ಹೆಚ್ಚಿಗೆ ಪಡೆದರೆ ಸುಮ್ಮನಿರಲ್ಲ. ಲಾಕ್‌ಡೌನ್‌ ವೇಳೆಯಲ್ಲಿ ಯಾರಾದರೂ ಅಧಿಕ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಿದರೆ ಅದು ಅಪರಾಧವಾಗುತ್ತದೆ. ಅಂತಹವರ ವಿರುದ್ಧ ಸಾರ್ವಜನಿಕರು ದೂರು ಕೊಟ್ಟರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.
'ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 7ರಿಂದ 11ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಈ ವೇಳೆ ಕೆಲವರು ಅನಗತ್ಯವಾಗಿ ಹೊರಗೆ ಓಡಾಡುತ್ತಿದ್ದಾರೆ. ಅಂತಹವರ ವಿರುದ್ಧವೂ ಮಂಗಳವಾರದಿಂದ ಕ್ರಮ ಜರುಗಿಸಲಾಗುವುದು. ಅನುಮತಿಯಿಲ್ಲದೆ ಬಾಗಿಲು ತೆರೆದಿದ್ದ ನಗರದ ಎಲೆಕ್ಟ್ರಿಕ್‌, ಹಾರ್ಡ್‌ವೇರ್‌ ಮಳಿಗೆ ಮಾಲೀಕರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗಿದೆ' ಎಂದು ವಿವರಿಸಿದರು.
'ನಗರದಲ್ಲಿ ಏ. 17ರಂದು ಮತ್ತೆ ಏಳು ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಏ. 22ರ ವರೆಗೆ ಈಗಿರುವ ನಿಯಮಗಳೇ ಚಾಲ್ತಿಯಲ್ಲಿರುತ್ತವೆ. ಅಂದು ರಾಜ್ಯ ಸರ್ಕಾರ ಹೊಸದಾಗಿ ಮಾರ್ಗಸೂಚಿಗಳನ್ನು ಹೊರಡಿಸಲಿದ್ದು, ಅವುಗಳನ್ನು ನೋಡಿಕೊಂಡು ಸ್ಥಳೀಯ ಪರಿಸ್ಥಿತಿಗೆ ತಕ್ಕಂತೆ ನಿಯಮಗಳನ್ನು ಪರಿಷ್ಕರಿಸಲಾಗುವುದು' ಎಂದು ಹೇಳಿದರು. ಡಿವೈಎಸ್ಪಿ ವಿ. ರಘುಕುಮಾರ ಇದ್ದರು.
'ಖಾಸಗಿಯವರು ಆಹಾರ ಧಾನ್ಯ ವಿತರಿಸುವಂತಿಲ್ಲ'
'ನಗರದಲ್ಲಿ ಇನ್ಮುಂದೆ ಖಾಸಗಿಯವರಿಗೆ ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ಆಹಾರ ಧಾನ್ಯ ವಿತರಿಸಲು ಅವಕಾಶ ಕಲ್ಪಿಸುವುದಿಲ್ಲ' ಎಂದು ಉಪವಿಭಾಗಾಧಿಕಾರಿ ಶೇಖ್‌ ತನ್ವೀರ್‌ ಆಸಿಫ್‌ ತಿಳಿಸಿದರು.
'ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರ ಬೆಂಬಲಿಗರು ಏ. 18ರಂದು ನಗರದಲ್ಲಿ 'ಆಹಾರಾನಂದ' ಕಿಟ್‌ ಹಂಚುವಾಗ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ರೀತಿಯ ಘಟನೆಗಳು ಮರುಕಳಿಸದಿರಲೆಂದು ಖಾಸಗಿಯವರಿಗೆ ಆಹಾರ ಧಾನ್ಯ ಹಂಚುವುದಕ್ಕೆ ನಿರ್ಬಂಧ ಹೇರಲಾಗಿದೆ. ಈಗಾಗಲೇ ತಾಲ್ಲೂಕಿನಲ್ಲಿ ಶೇ 96ರಷ್ಟು ಜನರಿಗೆ ಪಡಿತರ ವಿತರಿಸಲಾಗಿದೆ' ಎಂದರು.

ರಾಜ್ಯದಲ್ಲಿ 408 ಕೋವಿಡ್-19 ಪ್ರಕರಣ; ಒಂದೇ ದಿನ ವಿಜಯಪುರದಲ್ಲಿ 11 ಮಂದಿಗೆ ಸೋಂಕು

ಬೆಂಗಳೂರು: ಏಪ್ರಿಲ್‌ 19ರ ಸಂಜೆ 5ರಿಂದ ಏಪ್ರಿಲ್‌ 20ರ ಸಂಜೆ 5ರ ವರೆಗೂ ರಾಜ್ಯದಲ್ಲಿ ಕೋವಿಡ್‌-19 ದೃಢಪಟ್ಟ 18 ಹೊಸ ಪ್ರಕರಣಗಳು ದಾಖಲಾಗಿವೆ. ವಿಜಯಪುರ ಒಂದರಲ್ಲಿಯೇ 11 ಜನರಲ್ಲಿ ಸೋಂಕು ದೃಢಪಟ್ಟಿದೆ.
ರಾಜ್ಯದಲ್ಲಿ ಈವರೆಗೂ ಒಟ್ಟು 408 ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದಾಖಲಾಗಿದ್ದು, ಸಾವಿಗೀಡಾದವರ ಸಂಖ್ಯೆ 16 ಮುಟ್ಟಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 280 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 112 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಲಬುರ್ಗಿಯ ಐವರು, ವಿಜಯಪುರದ 11 ಮಂದಿ, ಬೀದರ್‌ ಮತ್ತು ಗದಗದ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.
ಈವರೆಗೂ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 89 ಪ್ರಕರಣಗಳು ದಾಖಲಾಗಿವೆ. ಮೈಸೂರಿನಲ್ಲಿ 84, ಬೆಳಗಾವಿಯಲ್ಲಿ 42, ವಿಜಯಪುರದಲ್ಲಿ 32 ಹಾಗೂ ಕಲಬುರ್ಗಿಯಲ್ಲಿ 27 ಕೋವಿಡ್‌-19 ಪ್ರಕರಣಗಳು ವರದಿಯಾಗಿವೆ.

ಬರೋಬ್ಬರಿ 53 ಪತ್ರಕರ್ತರಿಗೆ ಕೊರೋನಾ ಪಾಸಿಟಿವ್, ಮಾಧ್ಯಮ ಕ್ಷೇತ್ರದಲ್ಲಿ ತಲ್ಲಣ


ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು ಮುಂಬೈನಲ್ಲಿ ಬರೋಬ್ಬರಿ 53 ಮಂದಿ ಪತ್ರಕರ್ತರಿಗೆ ಸೋಂಕು ತಗುಲಿದೆ.
ವೈದ್ಯಕೀಯ ಪರೀಕ್ಷೆಯಲ್ಲಿ ಕೊರೋನಾ ಪಾಸಿಟಿವ್ ಬಂದಿರುವ 53 ಪತ್ರಕರ್ತರನ್ನು ಐಸೋಲೇಷನ್ ನಲ್ಲಿ ಇಡಲಾಗಿದೆ. ಬೃಹತ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು 53 ಪತ್ರಕರ್ತರಿಗೆ ಕೊರೋನಾ ಸೋಂಕು ತಗಲಿದೆ ಎಂದು ಹೇಳಿದ್ದಾರೆ.
ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ 171 ಮಂದಿ ವರದಿಗಾರರು, ವಿಡಿಯೋ ಜರ್ನಲಿಸ್ಟ್ ಗಳು ಮತ್ತು ಫೋಟೋಗ್ರಾಫರ್ ಗಳ ಸ್ಯಾಂಪಲ್ ಗಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು 53 ಮಂದಿಯಲ್ಲಿ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಈ ಪತ್ರಕರ್ತರು ಸಂಪರ್ಕಿಸಿದ ವ್ಯಕ್ತಿಗಳ ಪತ್ತೆ ಮಾಡಿ ಆರೋಗ್ಯ ಪರೀಕ್ಷೆ ಕಾರ್ಯ ಆರಂಭವಾಗಿದೆ.

Sunday, April 19, 2020

ಲಾಕ್‌ಡೌನ್‌ ಹೊತ್ತಿನಲ್ಲಿ ನಿರುದ್ಯೋಗಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ ರಾಜ್​ ಇಲಾಖೆಯಿಂದ ಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನ


ಬೆಂಗಳೂರು: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ ರಾಜ್​ ಇಲಾಖೆಯಿಂದ ಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಅರಣ್ಯೀಕರಣ, ಕೃಷಿ, ತೋಟಗಾರಿಕೆ, ರೇಷ್ಮೆ ಕ್ಷೇತ್ರದಲ್ಲಿ ತಾಂತ್ರಿಕ ಸಹಾಯಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಿದೆ. ಇನ್ನೂ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಎಲ್ಲಾ ಜಿಲ್ಲೆಗಳಲ್ಲೂ ಕೂಡ ಅವಕಾಶ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಈ ಲಿಂಕ್​ ಮೇಲೆ ಕ್ಲಿಕ್‌ ಮಾಡಿ : http://end2endmgnrega.co.in/
ಅರ್ಜಿ ಸಲ್ಲಿಕೆಗೆ ಆರಂಭ: ಏಪ್ರಿಲ್​ 20
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 15
ಹೆಚ್ಚಿನ ವಿವರ ಗಳಿಗೆ : https://bit.ly/3akkGLl