WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Wednesday, April 22, 2020

ಹೃದಯಾಘಾತದ ಲಕ್ಷಣಗಳು

ಎಲ್​ಡಿಎಲ್ ಕೊಲೆಸ್ಟ್ರಾಲ್ (LDL-C) ಎಂಬ ಕೆಟ್ಟ ಕೊಬ್ಬು ಹೃದಯದ ಕೊರೊನರಿ ರಕ್ತನಾಳಗಳ ಒಳಮೈಯಲ್ಲಿ ಸಂಗ್ರಹವಾಗಿ ರಕ್ತನಾಳವನ್ನು ಕಿರಿದಾಗಿಸಿ, ರಕ್ತನಾಳವು ಬಂದ್ ಆದಾಗ ಹೃದಯದ ಸ್ನಾಯು ರಕ್ತಹೀನತೆಯಿಂದ ಕಾರ್ಯಹೀನವಾಗುತ್ತದೆ. ಇದನ್ನು ಹೃದಯಾಘಾತವಾಗಿದೆ ಎಂದು ಕರೆಯುತ್ತೇವೆ.
ಹೃದಯಾಘಾತದ ಲಕ್ಷಣಗಳು:
1) ಎದೆನೋವು (Chest Pain): ಹೃದಯಾಘಾತದ ಸಾಮಾನ್ಯ ಲಕ್ಷಣವು ಎದೆನೋವು.
ಈ ನೋವು ತೀವ್ರತೆಯಲ್ಲಿ ಹೆಚ್ಚಾದಾಗ ಯಾವ ಥರದ್​ಎಂದು ಹೇಳುವುದೂ ಕಠಿಣ. ಹೃದಯಾಘಾತಕ್ಕೊಳಗಾದ ಹಲವರು ಈ ನೋವನ್ನು ಹೀಗೆ ವಿವರಿಸುತ್ತಾರೆ: 'ಎದೆಯನ್ನು ಒಳಗಿನಿಂದ ಹಿಚುಕಿದಂತಾಯಿತು; ಎದೆಯ ಮೇಲೆ ದೊಡ್ಡ ಬಂಡೆಗಲ್ಲನ್ನು ಇಟ್ಟಂತಾಯಿತು; ಎದೆಯಲ್ಲೂ ಉರಿ, ಗಂಟಲಿನಲ್ಲಿ ಏನೋ ಸಿಕ್ಕಂಂತಾಯಿತು.' ಹಲವರಲ್ಲಿ ಎದೆನೋವಿನ ತೀವ್ರತೆಗಿಂತ ಸಾವೇ ಉತ್ತಮ ಎನ್ನುವ ಭಾವನೆ ಬರುತ್ತದೆ. ಆಸ್ಪತ್ರೆಯಲ್ಲಿ ಬಂದ ತಕ್ಷಣವೇ 'ಡಾಕ್ಟರೇ, ಏನಾದರೂ ಮಾಡಿ ಈ ಎದೆನೋವು ಕಡಿಮೆ ಮಾಡಿ' ಎನ್ನುವುದು ಸಾಮಾನ್ಯ. ಇನ್ನು ಹಲವರಿಗೆ 'ಗ್ಯಾಸ್' ಆಗಿದೆ, ಇದರಿಂದ ಸ್ವಲ್ಪ ಎದೆ ಉರಿ ಎಂದು ಅನಿಸಿದ್ದುಂಟು. ಎದೆನೋವಿನ ತೀವ್ರತೆ ಗಂಡಸರಿಗಿಂತ ಹೆಣ್ಣುಮಕ್ಕಳಲ್ಲಿ ಕಡಿಮೆ. ಅವರಲ್ಲಿ ದಣಿವು, ವಾಂತಿ, ಏರುಸಿರು ಹೆಚ್ಚು ಸಾಮಾನ್ಯ.
2) ಬೆವರು (sweating): ಈ ಎದೆನೋವಿನೊಂದಿಗೆ ತೀವ್ರತರ ಬೆವರು (severe) ಸಾಮಾನ್ಯ. ಇದು ಸ್ವಲ್ಪ ಅಥವಾ ಇಡೀ ದೇಹವನ್ನೇ ಸ್ನಾನ ಮಾಡಿಸಿದಂತೆ ಒದ್ದೆ ಮಾಡಬಹುದು. ಅದು ಹೃದಯಾಘಾತದ ತೀವ್ರತೆಯ ಮೇಲೆ ಅವಲಂಬಿಸಿದೆ.
3) ವಾಂತಿ (vomting, nausea): ವಾಂತಿ ಆದಂತೆನಿಸುವುದು, ವಾಂತಿಯೂ ಆಗುವುದು ಅಜೀರ್ಣವಾದಂತೆನಿಸುವುದು ಸಾಮಾನ್ಯ.
4) ಉಸಿರಾಟದ ತೊಂದರೆ (Breathlessness): ಹೃದಯಾಘಾತದ ತೀವ್ರತೆ ಹೆಚ್ಚಿದಂತೆ ಹಲವರಲ್ಲಿ ಏರುಸಿರು ಕೂಡ ಕಾಣುವುದುಂಟು.
5) ಆಯಾಸ (Fatigue): ಅತಿ ಆಯಾಸ ಕೂಡ ಸಾಮಾನ್ಯ. ಹೆಣ್ಣುಮಕ್ಕಳಲ್ಲಿ ಹೆಚ್ಚು ಸಾಮಾನ್ಯ.
6) ತಲೆ ತಿರುಗುವಿಕೆ (Dizziness): ತಲೆ ಸುತ್ತುವಂತೆನಿಸುವುದೂ ಸಹಜ. ಆಗ ಬಿಪಿ ಕಡಿಮೆ ಇರುವ ಸಾಧ್ಯತೆ ಹೆಚ್ಚು.
ಈ ಲಕ್ಷಣಗಳು ಕಂಡುಬಂದಲ್ಲಿ ಅಲಕ್ಷಿಸಕೂಡದು. ಆಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ದಾಖಲಾಗುವುದು ಒಳಿತು. ಮನೆ ಹತ್ತಿರದ ವೈದ್ಯರಿಗೆ ತೋರಿಸುವುದರಿಂದ ಸಮಯ ಹಾಳಾಗುವ ಸಂಭವವಿದೆ.
ಎರಡನೇ ಸ್ಥಾನವು ಶನಿವಾರ ದಿನಕ್ಕೆ!: ದಿನದ ವೇಳೆ, ರಾತ್ರಿ ಕುಳಿತಾಗ, ನಿಂತಾಗ, ಭಾರ ಹೊರುವಾಗ, ಅಟ್ಟದ ಮೇಲೆ ಹತ್ತುವಾಗ, ಮಲಗಿದಾಗ, ಯಾವಾಗಲಾದರೂ ಹೃದಯಾಘಾತದ ಎದೆನೋವು ಬರಬಹುದು. ಆದರೆ, ಹೆಚ್ಚಾಗಿ ಈ ನೋವು ಬೆಳಗ್ಗೆ 4ರಿಂದ 10 ಗಂಟೆಯವರೆಗೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಬೆಳಗಿನ ವೇಳೆ ಪ್ಲೇಟ್​ಲೆಟ್ (Platelets), ಕಣಗಳು ಹೆಚ್ಚು ಜಿಗುಟಾಗಿ ಹತ್ತಿಕೊಳ್ಳುತ್ತವೆ (ಅಂಟಿಕೊಳ್ಳುತ್ತವೆ) (Sticks) ಮತ್ತು ಆಗ 'ಅಡ್ರೆನಾಲಿನ್' ಎಂಬ ಹಾಮೋನ್ ಕೂಡ ರಕ್ತದಲ್ಲಿ ಬಿಡುಗಡೆ ಹೆಚ್ಚಾಗಿ ರಕ್ತನಾಳದ ಪ್ಲಾಕ್ (Plaque) ಒಡೆಯುವಿಕೆಯ (Rupture) ಸಾಧ್ಯತೆಯನ್ನು ಹೆಚ್ಚಿಸುತ್ತವೆ.
ಸೋಮವಾರ ಹೃದಯಾಘಾತದ ಎದೆನೋವು ಕಂಡುಬರುವುದೆಂದು ಹಲವಾರು ಅಧ್ಯಯನಗಳು ಇವೆ. ಆದರೆ, ಯಾವುದೇ ದಿನ ಆಗಬಹುದು. ಈ ಎದೆನೋವು, ಎದೆಯ ಮಧ್ಯಭಾಗದಲ್ಲಿ ಸಾಮಾನ್ಯ. ಮೂವತ್ತು ನಿಮಿಷಕ್ಕೂ ಹೆಚ್ಚು ಸಮಯದವರೆಗೆ ಇರುತ್ತದೆ. ಕೆಲವೇ ಸೆಕೆಂಡ್ ಬರುವ ಎದೆನೋವು ಹೃದಯಾಘಾತದ ನೋವಲ್ಲ! ಇದು ಮಾಂಸಖಂಡದ ನೋವು (Muscle or bone pain) ಅಥವಾ ಅಪಚನದಿಂದ ಆದದ್ದು. ಈ ನೋವು (Radiation) ಎಡ ಅಥವಾ ಬಲಗೈ, ಕುತ್ತಿಗೆ, ಮೇಲಿನ ಬೆನ್ನು, ಹೊಟ್ಟೆಯ ಮೇಲ್ಭಾಗ, ಕಾಲುಗಳಿಗೆ ಹರಡದು. ಇನ್ನು ಹಲವರಲ್ಲಿ ಎದೆನೋವು ಕಾಣದೆ ಈ ಸ್ಥಳಗಳಲ್ಲಿ ಮಾತ್ರ ಕಾಣಬಹುದು. ಉದಾ: ಎಡಗೈ ಅಥವಾ ಬೆನ್ನು. ಶೇ. ಮೂವತ್ತರಷ್ಟು ಜನ ಇದು ಗ್ಯಾಸ್ ಆಗಿದೆ ಎಂದು ವೈದ್ಯರನ್ನು ಕಾಣುವುದೂ ಇಲ್ಲ. ಇದು ಮಾರಣಾಂತಿಕವಾಗುವ ಸಂಭವ ಹೆಚ್ಚು.

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ