WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Tuesday, June 1, 2021

NCVT ITI Result 2021 ಬಿಡುಗಡೆ: ಚೆಕ್‌ ಮಾಡಲು ಲಿಂಕ್‌ ಇಲ್ಲಿದೆ..

ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಷನಲ್ ಟ್ರೈನಿಂಗ್, 2021 ನೇ ಸಾಲಿನ ಎನ್‌ಸಿವಿಟಿ ಐಟಿಐ ಫಲಿತಾಂಶ ಬಿಡುಗಡೆ ಮಾಡಲಾಗಿದೆ. 1, 2, 3, 4ನೇ ಸೆಮಿಸ್ಟರ್‌ ಪರೀಕ್ಷೆಗಳ ರಿಸಲ್ಟ್‌ ಅನ್ನು ಪ್ರಕಟಿಸಲಾಗಿದೆ. ಎನ್‌ಸಿವಿಟಿ ಐಟಿಐ
ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಷನಲ್ ಟ್ರೈನಿಂಗ್, 2021 ನೇ ಸಾಲಿನ ಎನ್‌ಸಿವಿಟಿ ಐಟಿಐ ಫಲಿತಾಂಶ ಬಿಡುಗಡೆ ಮಾಡಲಾಗಿದೆ. 1, 2, 3, 4ನೇ ಸೆಮಿಸ್ಟರ್‌ ಪರೀಕ್ಷೆಗಳ ರಿಸಲ್ಟ್‌ ಅನ್ನು ಪ್ರಕಟಿಸಲಾಗಿದೆ. ಎನ್‌ಸಿವಿಟಿ ಐಟಿಐ ಮೊದಲನೇ ವರ್ಷ ಮತ್ತು ಎರಡನೇ ವರ್ಷದ ಸೆಮಿಸ್ಟರ್ ಪರೀಕ್ಷೆಗಳಿಗೆ ಹಾಜರಾದ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಫೀಶಿಯಲ್ ವೆಬ್‌ಸೈಟ್‌ ncvtmis.gov.in ಗೆ ಭೇಟಿ ನೀಡಿ ಚೆಕ್‌ ಮಾಡಬಹುದು.
ಎನ್‌ಸಿವಿಟಿ ಐಟಿಐ ಫಲಿತಾಂಶ 2021 ರಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ತೋರಿಸಲಾಗುತ್ತದೆ. ಪ್ರಾವಿಷನಲ್ ಅಂಕಪಟ್ಟಿಯನ್ನು ಎನ್‌ಸಿವಿಟಿ ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಡೌನ್‌ಲೋಡ್‌ಗೆ ಡೈರೆಕ್ಟ್‌ ಲಿಂಕ್‌ ಅನ್ನು ಈ ಕೆಳಗೆ ನೀಡಲಾಗಿದೆ.
ಎನ್‌ಸಿವಿಟಿ ಬೋರ್ಡ್‌ ಒರಿಜಿನಲ್ ಅಂಕಪಟ್ಟಿಯನ್ನು ಶೀಘ್ರದಲ್ಲೇ ವಿದ್ಯಾರ್ಥಿಗಳಿಗೆ ವಿತರಿಸಲಿದೆ. ಪ್ರಾವಿಷನಲ್ ಅಂಕಪಟ್ಟಿ ಹಾಗೂ ಫಲಿತಾಂಶಕ್ಕಾಗಿ ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿರಿ.
ಎನ್‌ಸಿವಿಟಿ ಐಟಿಐ ಫಲಿತಾಂಶ 2021: ಡೌನ್‌ಲೋಡ್‌ ಹೇಗೆ?
- ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಷನಲ್ ಟ್ರೈನಿಂಗ್ ವೆಬ್‌ಸೈಟ್‌ ncvtmis.gov.in ಗೆ ಭೇಟಿ ನೀಡಿ.
- ಅಥವಾ ಡೈರೆಕ್ಟ್‌ ಲಿಂಕ್‌ NCVT ITI Result 2021 ಕ್ಲಿಕ್ ಮಾಡಿ.
- ಓಪನ್ ಆದ ಪೇಜ್‌ನಲ್ಲಿ 'MIS ITI Result' ಸೆಕ್ಷನ್‌ ಆಯ್ಕೆ ಮಾಡಿ.
- ಎನ್‌ಸಿವಿಟಿ ಟ್ಯಾಬ್‌ ಸೆಲೆಕ್ಟ್‌ ಮಾಡಿ, ರೋಲ್‌ ನಂಬರ್ ಎಂಟರ್ ಮಾಡಿ ಸಬ್‌ಮಿಟ್‌ ಮಾಡಿ.
- ಫಲಿತಾಂಶ ಚೆಕ್‌ ಮಾಡಿ, ಡೌನ್‌ಲೋಡ್‌ ಮಾಡಿಕೊಳ್ಳಿ.
- ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್ ತೆಗೆದುಕೊಳ್ಳಿ.
ವಿದ್ಯಾರ್ಥಿಗಳು ರಾಜ್ಯವಾರು ಫಲಿತಾಂಶವನ್ನು ಚೆಕ್‌ ಮಾಡಬಹುದು. ಪ್ರತಿ ವರ್ಷವು ಹೆಚ್ಚಿನ ಸಂಖ್ಯೆಯಲ್ಲೇ ವಿದ್ಯಾರ್ಥಿಗಳು ಟೆಕ್ನಿಕಲ್ ಮತ್ತು ನಾನ್‌-ಟೆಕ್ನಿಕಲ್ ಟ್ರೈನಿ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆಯುತ್ತಾರೆ. ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ವಿದ್ಯಾರ್ಥಿಗಳು ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಷನಲ್ ಟ್ರೈನಿಂಗ್ ವೆಬ್‌ ncvtmis.gov.in ಗೆ ಭೇಟಿ ನೀಡಬಹುದು.

(ಮಾಹಿತಿ ಕೃಪೆ Vijaya Karnataka Web Updated: 31 May 2021, 08:24:00 PM )

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಇಳಿಕೆ; ಅಸಲಿ ಕಥೆಯೇ ಬೇರೆ

 

ಬೀದರ್, ಜೂನ್ 01; ಬೀದರ್ ಜಿಲ್ಲೆಯಲ್ಲಿ ಕ್ಷೀಪ್ರಗತಿಯಲ್ಲಿ ಏರಿಕೆಯಾಗುತ್ತಿದ್ದ ಕೋವಿಡ್ ಸೋಂಕು ಮೇ ತಿಂಗಳಿನಲ್ಲಿ ದಿಢೀರ್ ಇಳಿಕೆ ಕಂಡಿದೆ. ಇದು ಒಂದು ಕಡೆ ಸಂತೋಷ ಹಾಗೂ ಮತ್ತೊಂದೆಡೆ ಚರ್ಚೆಗೆ ಗ್ರಾಸವಾಗಿದೆ. ದಿನಂಪ್ರತಿ 500ಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗುತ್ತಿದ್ದ ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಸರ್ಕಾರ ಜಾರಿಗೊಳಿಸಿದ ಲಾಕ್‌ಡೌನ್‌ನಿಂದಾಗಿ ಭಾರೀ ಇಳಿಕೆ ಕಂಡಿದೆ.
ಕಳೆದ ಒಂದು ವಾರದಲ್ಲಿ ನೂರಕ್ಕಿಂತ ಕಡಿಮೆ ಹೊಸ ಸೋಂಕಿನ ಪ್ರಕರಣಗಳು ದಾಖಲಾಗುತ್ತಿವೆ. ಸೋಮವಾರ ಬೀದರ್ ಜಿಲ್ಲೆಯಲ್ಲಿ ಕೇವಲ 17 ಪ್ರಕರಣಗಳು ವರದಿಯಾಗಿವೆ. ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ಅತಿ ಕಡಿಮೆ ಪ್ರಕರಣ ದಾಖಲಾಗಿದ್ದು ಮೇ 31ರಂದು.
ಲಾಕ್‌ಡೌನ್ ಜಾರಿಯಿಂದಾಗಿ ಸಹಜವಾಗಿಯೇ ಜನಸಂಚಾರ ಕಡಿಮೆಯಾಗಿದೆ. ಸಾವಿನ ಸಂಖ್ಯೆಯಲ್ಲಿ ಭಾರೀ ಏರಿಕೆಯಾದ ಹಿನ್ನೆಲೆಯಲ್ಲಿ ಜನ ಆತಂಕಕ್ಕೊಳಗಾಗಿ ಕೋವಿಡ್ ನಿಯಮ ಪಾಲನೆಯಿಂದ ಸೋಂಕು ಪ್ರಕರಣಗಳು ಇಳಿಕೆ ಕಂಡಿವೆ ಎಂಬ ಬಗ್ಗೆಯೂ ಜಿಲ್ಲೆಯಲ್ಲಿ ಚರ್ಚೆಗಳು ನಡೆಯುತ್ತಿವೆ.
ಮೊದಲ ಅಲೆಯಲ್ಲಿ ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚು ದಾಖಲಾಗಿದ್ದರೂ ಸಾವಿನ ಪ್ರಮಾಣ ಕಡಿಮೆ ಇತ್ತು. ಆದರೆ, 2ನೇ ಅಲೆ ಹಾಗಲ್ಲ, ಕೇವಲ ಶಿಕ್ಷಕ ವರ್ಗದಲ್ಲೇ ಅಂದಾಜು 55ಕ್ಕಿಂತ ಹೆಚ್ಚಿನ ಸಾವುಗಳು ದಾಖಲಾಗಿವೆ. ದಿನನಿತ್ಯ ಸರಾಸರಿ 5 ಸಾವಿನ ಪ್ರಮಾಣ ವರದಿಯಾಗಿವೆ.
ಜಿಲ್ಲಾಡಳಿತ ಕೋವಿಡ್ 2ನೇ ಅಲೆಯನ್ನು ನಿಭಾಯಿಸುವಲ್ಲಿ ತಕ್ಕಮಟ್ಟಿಗೆ ಯಶಸ್ಸುಕಂಡಿದೆ. ನಿರಂತರ ಪ್ರಚಾರ, ಜಾಗೃತಿ ಲಸಿಕೆ ನೀಡಿಕೆಯಲ್ಲಿ ಜಿಲ್ಲಾಡಳಿತ ಕ್ಷೀಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸಿದ ಹಿನ್ನೆಲೆ ಸೋಂಕಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ.
ವಿರೋಧ ಪಕ್ಷದ ಶಾಸಕರು ಹೇಳುವ ಅಸಲಿ ಕಥೆಯೇ ಬೇರೆಯಾಗಿದೆ. ಭಾಲ್ಕಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳುವ ಪ್ರಕಾರ, "ಜಿಲ್ಲಾಡಳಿತ ಸೋಂಕು ಪರೀಕ್ಷೆಗಳನ್ನು ತಗ್ಗಿಸಿದ್ದೇ ಸೋಂಕು ಇಳಿಕೆ ಕಾಣಲು ಪ್ರಮುಖ ಕಾರಣ" ಎಂದು ಆರೋಪಿಸುತ್ತಿದ್ದಾರೆ.
ದಿನನಿತ್ಯ 6 ಸಾವಿರ ಪರೀಕ್ಷೆ ನಡೆಸಲಾಗುತ್ತಿತ್ತು. ಲಾಕ್‌ಡೌನ್ ಆರಂಭವಾದ ಬಳಿಕ ಪರೀಕ್ಷೆ ಸಂಖ್ಯೆ 1030ಕ್ಕೆ ಇಳಿಸಲಾಗಿದೆ. ಪರೀಕ್ಷೆಗಳನ್ನು ಕಡಿಮೆ ಮಾಡಿದ್ದು ಏಕೆ? ಎಂದು ಜಿಲ್ಲಾಡಳಿತಕ್ಕೆ ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ ಇದೇ ಪ್ರಶ್ನೆ ಎತ್ತಿದ್ದಾರೆ. "ಲಾಕ್‌ಡೌನ್‌ಗಿಂತ ಮುಂಚಿತವಾಗಿ 26-3-2021ರಿಂದ 26-4-2021ರವರೆಗೆ 102003 ಪರೀಕ್ಷೆಗಳನ್ನು ನಡೆಸಲಾಗಿತ್ತು. 27-4-2021 ರಿಂದ 24-5-2021ರವರೆಗೆ ಕೇವಲ 65788 ಪರೀಕ್ಷೆಗಳನ್ನು ಮಾತ್ರ ಮಾಡಲಾಗಿದೆ" ಎಂದು ಹೇಳಿದ್ದಾರೆ.
ಜಿಲ್ಲಾಡಳಿತ ಸೋಂಕು ಪರೀಕ್ಷೆ ತಗ್ಗಿಸಿದ್ದೇ ಸೋಂಕು ಪ್ರಕರಣಗಳು ಕಡಿಮೆಯಾಗಲು ಕಾರಣ ಎಂದು ಶಾಸಕರು ನೇರ ಆರೋಪ ಮಾಡಿದ್ದಾರೆ. ಆದರೆ ಆರೋಪಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭುಚೌವ್ಹಾಣ್ ಸ್ಪಷ್ಟೀಕರಣ ನೀಡಿಲ್ಲ.
(ಮಾಹಿತಿ ಕೃಪೆ Oneindia )

ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ; ನಿನ್ನೆಯ ಈ ಪ್ರಕರಣಕ್ಕೆ ಕಾರಣವೇನು ಗೊತ್ತೇ?

 

ಚಿಕ್ಕಮಗಳೂರು: ನಿನ್ನೆ ಮಧ್ಯಾಹ್ನ ಸುಮಾರಿಗೆ ಸೈಕಲ್​ನಲ್ಲಿ ಮನೆಗೆ ಮರಳುತ್ತಿದ್ದ ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಕುರಿತ ಮತ್ತಷ್ಟು ಮಾಹಿತಿ ಹೊರಬಿದ್ದಿದೆ. ಮಾತ್ರವಲ್ಲ, ಹಲ್ಲೆಗೆ ಕಾರಣವೇನು ಎಂಬುದು ಕೂಡ ಬಹಿರಂಗಗೊಂಡಿದ್ದು, ನಾಲ್ವರು ಆರೋಪಿಗಳ ಬಂಧನವೂ ಆಗಿದೆ.
ತರೀಕೆರೆ ವೈದ್ಯ ಡಾ.ದೀಪಕ್ ಎಂಬವರ ಮೇಲೆ ಹಲ್ಲೆ ಆಗಿದ್ದು, ಅದೇ ಊರಿನ ವೇಣುಗೋಪಾಲ್, ಚಂದ್ರಶೇಖರ್, ನಿತಿನ್​, ವೆಂಕಟೇಶ್​ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಅಗ್ನಿಶಾಮಕ ಠಾಣೆ ಬಳಿ ಈ ಕೃತ್ಯ ನಡೆದಿದ್ದು ಡಾ.ದೀಪಕ್ ಕ್ಲಿನಿಕ್​ನಿಂದ ಮನೆಗೆ ಸೈಕಲ್​ನಲ್ಲಿ ಹೋಗುತ್ತಿದ್ದಾಗ ಈ ದಾಳಿ ನಡೆದಿದೆ. ಮಚ್ಚಿನಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳು ಅವರನ್ನು ಅಲ್ಲೇ ರಸ್ತೆ ಬದಿ ತಳ್ಳಿ ಹೋಗಿದ್ದರು.
ಆರೋಪಿಗಳ ಪೈಕಿ ಒಬ್ಬರ ಸಹೋದರಿಯ ಪುತ್ರ, ಅಜ್ಜಂಪುರ ತಾಲೂಕಿನ ತಡಗ ಗ್ರಾಮದ 9 ವರ್ಷದ ಬಾಲಕನನ್ನು ಡಾ. ದೀಪಕ್ ಅವರ ಕ್ಲಿನಿಕ್​ಗೆ ಕರೆತರಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಶಿವಮೊಗ್ಗಕ್ಕೆ ಕರೆದೊಯ್ಯಲಾಗಿತ್ತು. ಆದರೆ ಮೇ 29ರಂದು ಈ ಬಾಲಕ ಮೃತಪಟ್ಟಿದ್ದ. ಈ ಸಾವಿಗೆ ಡಾ. ದೀಪಕ್​ ಕಾರಣವೆಂಬ ದ್ವೇಷದಿಂದ ಬಾಲಕನ ಕಡೆಯವರು ಈ ಹಲ್ಲೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಶಿವಮೊಗ್ಗದ ಆಸ್ಪತ್ರೆಯಲ್ಲಿ ಡಾ.ದೀಪಕ್​ ಚಿಕಿತ್ಸೆ ಪಡೆಯುತ್ತಿದ್ದಾರೆ.

(ಮಾಹಿತಿ ಕೃಪೆ ವಿಜಯವಾಣಿ )

ಜೂನ್ 6 ರಿಂದ ಮುಂಗಾರು ಪ್ರಾರಂಭ : ಈ ವರ್ಷ 135.48 ಲಕ್ಷ ಟನ್ ಆಹಾರ ಉತ್ಪಾದನೆಯ ಗುರಿ : ಸಿಎಂ 'BSY' ನೇತೃತ್ವದ ಸಭೆಯಲ್ಲಿ ಚರ್ಚೆ

 

ಬೆಂಗಳೂರು : 2020-21 ರಲ್ಲಿ ದಾಖಲೆ ಪ್ರಮಾಣದ 153.08 ಲಕ್ಷ ಟನ್ ಗಳಷ್ಟು ಆಹಾರ ಧಾನ್ಯ ಉತ್ಪಾದನೆ ಆಗಿದೆ, ಕಳೆದ ವರ್ಷಕ್ಕಿಂತ ಶೇ.10 ರಷ್ಟು ಹೆಚ್ಚಳವಾಗಿದೆ, ಈ ವರ್ಷ 135.48 ಲಕ್ಷ ಟನ್ ಆಹಾರ ಉತ್ಪಾದನೆಯ ಗುರಿ ಹೊಂದಲಾಗಿದೆ ಎಂದು ಇಂದಿನ ಸಭೆಯಲ್ಲಿ ಚರ್ಚೆ ನಡೆದಿದೆ.

ರಾಜ್ಯಕ್ಕೆ ಮುಂಗಾರು ಪ್ರವೇಶ ಹಿನ್ನೆಲೆ ಕೃಷಿ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಿಎಂ ಯಡಿಯೂರಪ್ಪ ಸಭೆ ನಡೆಸಿದರು., ಸಭೆಯಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕೃಷಿ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಲಾಯಿತು.

ರಾಜ್ಯದಲ್ಲಿ ಮಳೆ ಚೆನ್ನಾಗಿ ಆಗಿದೆ. ಕರ್ನಾಟಕದ 20 ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಹಾಗೂ 10 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 6 ಅಥವಾ 7 ಕ್ಕೆ ಮುಂಗಾರು ಪ್ರಾರಂಭವಾಗಲಿದೆ.

2020-21 ರಲ್ಲಿ ದಾಖಲೆ ಪ್ರಮಾಣದ 153.08 ಲಕ್ಷ ಟನ್ ಗಳಷ್ಟು ಆಹಾರ ಧಾನ್ಯ ಉತ್ಪಾದನೆ ಆಗಿದೆ, ಕಳೆದ ವರ್ಷಕ್ಕಿಂತ ಶೇ.10 ರಷ್ಟು ಹೆಚ್ಚಳವಾಗಿದೆ. ಮಳೆಗಾಲದಲ್ಲಿ ಪ್ರವಾಹ ಎದುರಿಸಲ ಸಿದ್ದತೆ ನಡೆಸಲಾಗಿದ್ದು, ಪಂಚಾಯತಿ ಮಟ್ಟದಲ್ಲಿ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಡಿಎಪಿ ಗೊಬ್ಬರ ಮತ್ತು ಯೂರಿಯ ಗೊಬ್ಬರ ಸಕಾಲದಲ್ಲಿ ಪೂರೈಸುವ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.6. ರಾಜ್ಯದಲ್ಲಿ 690 ಕೃಷಿ ಯಂತ್ರ ಧಾರೆ ಕೇಂದ್ರಗಳು ಹಾಗೂ 210 ಗ್ರಾಮ ಮಟ್ಟದ ಕೃಷಿ ಯಂತ್ರೋಪಕರಣಗಳ ಬ್ಯಾಂಕ್ ಗಳು ಕಾರ್ಯನಿರ್ವಹಿಸುತ್ತಿದ್ದು, ಬಾಡಿಗೆ ಆಧಾರದಲ್ಲಿ ಕೃಷಿ ಯಂತ್ರೋಪಕರಣ ಒದಗಿಸಲಾಗುತ್ತಿದೆ.

ಕೋವಿಡ್ 2ನೇ ಅಲೆಯ ಹಿನ್ನೆಲೆಯಲ್ಲಿ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಘೋಷಿಸಲಾದ ಪರಿಹಾರ ವಿತರಣೆ ಈಗಾಗಲೇ ಪ್ರಾರಂಭವಾಗಿದ್ದು, ಇದಕ್ಕಾಗಿ ಬಿಡುಗಡೆಯಾಗಿರುವ 19 ಕೋಟಿ ರೂ. ಗಳಲ್ಲಿ 15.23 ಕೋಟಿ ರೂ. ಗಳನ್ನು 36,327 ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ.

ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ತಂಡಗಳು ಸಜ್ಜಾಗಿವೆ. ಎಲ್ಲ ಜಿಲ್ಲಾಧಿಕಾರಿಗಳು ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.

2020-21ರಲ್ಲಿ ಕೃಷಿ ಸಾಲ ಗುರಿಗಿಂತ 16 ಶೇ. ಹೆಚ್ಚು ವಿತರಣೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತ 3 ಸಾವಿರ ಕೋಟಿ ರೂ. ಹೆಚ್ಚುವರಿ ಗುರಿ ನಿಗದಿ ಪಡಿಸಿದ್ದು, ಪ್ರಸಕ್ತ ಸಾಲಿನಲ್ಲಿ 21 ಸಾವಿರ ಕೋಟಿ ರೂ. ಸಾಲ ವಿತರಣೆಯ ಗುರಿ ನಿಗದಿ ಪಡಿಸಲಾಗಿದೆ.

ಸಭೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ, ಕೃಷಿ ಸಚಿವ ಬಿ.ಸಿ.ಪಾಟೀಲ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ತೋಟಗಾರಿಕಾ ಸಚಿವ ಶಂಕರ್, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು

(ಮಾಹಿತಿ ಕೃಪೆ Kannada News Now )

ವಿಶ್ವದಲ್ಲೇ ಮೊದಲ ಬಾರಿಗೆ ಚೀನಾದಲ್ಲಿ ಮಾನವನಲ್ಲಿ H10N3 ಹಕ್ಕಿ ಜ್ವರ ಪತ್ತೆ

 

ಬೀಜಿಂಗ್, ಜೂ. 1: ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ಮೊದಲ ಬಾರಿಗೆ ಹೆಚ್ 10 ಎನ್ 3 (H10N3) ಹಕ್ಕಿ ಜ್ವರವು ಮಾನವನಲ್ಲಿ ದೃಢಪಟ್ಟಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಮಂಗಳವಾರ ತಿಳಿಸಿದೆ.
ಪ್ರಪಂಚದಲ್ಲೇ ಮೊದಲ ಬಾರಿಗೆ ಮಾನವನ ದೇಹದಲ್ಲಿ ಕಾಣಿಸಿಕೊಂಡ H10N3 ವೈರಸ್ | Oneindia Kannadaಪೂರ್ವ ಪ್ರಾಂತ್ಯದ ನಗರವಾದ ಜಿಯಾಂಗ್ಸುನಲ್ಲಿ ವಾಸಿಸುತ್ತಿರುವ 41 ವರ್ಷ ವಯಸ್ಸಿನ ಪುರುಷನೋರ್ವನಲ್ಲಿ ಈ H10N3 ಹಕ್ಕಿ ಜ್ವರ ಪತ್ತೆಯಾಗಿದ್ದು ಈ ಸೋಂಕು ಕೋಳಿಮಾಂಸ ಸೇವನೆಯಿಂದ ಹಕ್ಕಿಯಿಂದ ಮಾನವನಿಗೆ ಹರಡಿದೆ ಎಂದು ಕೂಡಾ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.
ಇನ್ನು ಈ ಸೋಂಕು ದೊಡ್ಡ ಪ್ರಮಾಣದಲ್ಲಿ ಹರಡುವ ಅಪಾಯವು ತುಂಬಾ ಕಡಿಮೆಯಾಗಿದೆ. ಈ ಹಿಂದೆ ಜಗತ್ತಿನಲ್ಲಿ H10N3 ಹಕ್ಕಿ ಜ್ವರ ಮಾನವನಲ್ಲಿ ಪತ್ತೆಯಾದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ಎನ್‌ಎಚ್‌ಸಿ ತಿಳಿಸಿದೆ.
ಚೀನೀ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಕಳೆದ ವಾರ ರೋಗಿಯಿಂದ ರಕ್ತದ ಮಾದರಿಯಲ್ಲಿ ಸಂಗ್ರಹಿಸಿದ್ದು ಅದರಲ್ಲಿ H10N3 ಹಕ್ಕಿ ಜ್ವರ ದೃಢಪಟ್ಟಿದೆ. ಸ್ಥಳೀಯ ಅಧಿಕಾರಿಗಳು ರೋಗಿಯ ಸಂಪರ್ಕಗಳನ್ನು ಪತ್ತೆಹಚ್ಚಿದ್ದು ಅವರ ರಕ್ತದ ಮಾದರಿಯನ್ನು ಕೂಡಾ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ವರದಿ ತಿಳಿಸಿದೆ.
ಈ ಪ್ರದೇಶದ ಜನರು ಅನಾರೋಗ್ಯ ಅಥವಾ ಸತ್ತ ಕೋಳಿಗಳ ಸಂಪರ್ಕದಿಂದ ದೂರವಿರಬೇಕು. ಪಕ್ಷಿಗಳೊಂದಿಗೆ ನೇರ ಸಂಪರ್ಕವನ್ನು ತಪ್ಪಿಸಲು ಪ್ರಯತ್ನಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಆಹಾರ ನೈರ್ಮಲ್ಯದ ಬಗ್ಗೆ ಗಮನ ಹರಿಸಬೇಕು, ಮಾಸ್ಕ್‌ ಧರಿಸಬೇಕು, ಜಾಗರೂಕರಾಗಿರಬೇಕು, ಜ್ವರ ಮತ್ತು ಉಸಿರಾಟದ ಸಮಸ್ಯೆಯ ಲಕ್ಷಣಗಳು ಕಂಡು ಬಂದರೆ ಪರೀಕ್ಷಿಸಬೇಕು ಎಂದು ಎನ್‌ಎಚ್‌ಸಿ ಸಲಹೆ ನೀಡಿತು.


ಫೆಬ್ರವರಿಯಲ್ಲಿ, ಚೀನಾ ಪೂರ್ವ ಪ್ರಾಂತ್ಯದ ಜಿಯಾಂಗ್ಸುನಲ್ಲಿರುವ ಕರಾವಳಿ ನಗರವಾದ ಲಿಯಾನ್ಯುಂಗಾಂಗ್‌ನಲ್ಲಿ ಎಚ್ 5 ಎನ್ 8 ಏವಿಯನ್ ಇನ್ಫ್ಲುಯೆನ್ಸ್‌ನ ಮೊದಲ ಪ್ರಕರಣವನ್ನು ಚೀನಾ ವರದಿ ಮಾಡಿತ್ತು. ಈ ಪ್ರದೇಶದಲ್ಲಿ ಕಾಡು ಪಕ್ಷಿಗಳಲ್ಲಿ ಹೆಚ್ಚು ರೋಗಕಾರಕ ಏವಿಯನ್ ಇನ್ಫ್ಲುಯೆನ್ಸ್‌ ರೋಗ ಪತ್ತೆಯಾಗಿದೆ.
ಏಪ್ರಿಲ್‌ನಲ್ಲಿ, ಈಶಾನ್ಯ ಚೀನಾದ ಲಿಯಾನಿಂಗ್ ಪ್ರಾಂತ್ಯದ ಶೆನ್ಯಾಂಗ್ ಎಂಬ ನಗರದ ಕಾಡು ಪಕ್ಷಿಗಳಲ್ಲಿ ಹೆಚ್ಚು ರೋಗಕಾರಕ H5N6 ಏವಿಯನ್ ಜ್ವರ ಕಂಡುಬಂದಿದೆ.

(ಒನ್‌ಇಂಡಿಯಾ ಸುದ್ದಿ)

ಬಳ್ಳಾರಿ; ಜೂನ್ 2ರಿಂದ ಮೂರು ದಿನ ಬ್ಯಾಂಕ್ ಬಂದ್

 

ಬಳ್ಳಾರಿ, ಮೇ 31; ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಹರಡುವಿಕೆ ತಡೆಯಲು ಸಂಪೂರ್ಣ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಜೂನ್ 7ರವರೆಗೆ ಇದನ್ನು ವಿಸ್ತರಣೆ ಮಾಡಲು ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಈ ಕುರಿತು ಮಾಹಿತಿ ನೀಡಿದ್ದಾರೆ. ಸಂಪೂರ್ಣ ಲಾಕ್‌ಡೌನ್ ಹಿನ್ನಲೆಯಲ್ಲಿ ಜೂನ್‌ 2ರಿಂದ ಮೂರು ದಿನಗಳ ಕಾಲ ಬ್ಯಾಂಕ್‍ಗಳು ಹಾಗೂ ಹಣಕಾಸು ವ್ಯವಹಾರ ಹೊಂದಿರುವ ಸಂಸ್ಥೆಗಳ ಚಟುವಟಿಕೆಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ" ಎಂದು ಹೇಳಿದ್ದಾರೆ.
ಜೂನ್ 2ರಿಂದ ಮೂರು ದಿನಗಳ ಕಾಲ ಬಂದ್ ಮಾಡಲಾಗುತ್ತದೆ. ಶನಿವಾರ ಮತ್ತು ಭಾನುವಾರ ಬ್ಯಾಂಕ್‍ಗಳು ಮುಚ್ಚಿರಲಿವೆ. ಇದರಿಂದಾಗಿ 5 ದಿನಗಳ ಕಾಲ ಬ್ಯಾಂಕ್ ಚಟುವಟಿಕೆಗಳು ಇರುವುದಿಲ್ಲ.
ಬ್ಯಾಂಕ್‌ಗಳು ಬಂದ್ ಆಗಿದ್ದರೂ ಎಲ್ಲಾ ಎಟಿಎಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಹಣವಿರುವಂತೆ ನೋಡಿಕೊಳ್ಳಲಾಗುತ್ತದೆ. ಜನರು ಅನಗತ್ಯ ಭಯಗೊಂಡು ಬ್ಯಾಂಕ್‍ಗಳಿಗೆ ಆಗಮಿಸಿ ವ್ಯವಹಾರ ಮಾಡಬೇಡಿ ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಇನ್ನೂ ಒಂದು ವಾರ ಕಟ್ಟುನಿಟ್ಟಾಗಿ ಲಾಕ್‌ಡೌನ್ ನಿಯಮ ಪಾಲಿಸಿದರೇ ಸೋಂಕು ನಿಯಂತ್ರಣಕ್ಕೆ ಬರಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮತಿ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಸೋಮವಾರದ ವರದಿಯಂತೆ ಬಳ್ಳಾರಿಯಲ್ಲಿ 437 ಹೊಸ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ

(ಮಾಹಿತಿ ಕೃಪೆ Oneindia )

ಹಂದಿ ದಾಳಿ: ರೈತನಿಗೆ ಗಾಯ

 

ಕಮಲಾಪುರ: ಹಂದಿ ದಾಳಿಯಿಂದ ರೈತನೊಬ್ಬ ತೀವ್ರ ಗಾಯಗೊಂಡ ಘಟನೆ ತಾಲ್ಲೂಕಿನ ಬೆಳಕೋಟಾ

ಗ್ರಾಮದಲ್ಲಿ ಸೋಮವಾರ ನಡೆದಿದೆ.

ಬಸವರಾಜ ಗುರುಲಿಂಗಪ್ಪ ಕವನಳ್ಳಿ ಗಾಯಗೊಂಡವರು. ಬೆಳಿಗ್ಗೆ ಕಬ್ಬಿಗೆ ನೀರುಣಿಸಲು ತೆರಳಿದ್ದು, ಒಳಗಿನಿಂದ ಬಂದ ಹಂದಿ ದಾಳಿ ಮಾಡಿದೆ. ಕಾಲಿಗೆ ಕಚ್ಚಿ ಗಾಯಗೊಳಿಸಿದೆ. ರಕ್ತಸ್ರಾವವಾಗಿ ಬಸವರಾಜ ನಿತ್ರಾಣ ಸ್ಥಿತಿಗೆ ತಲುಪಿದ್ದರು. ಹಿಂದಿನಿಂದ ಗುದ್ದಿರುವುದರಿಂದ ಸೊಂಟಕ್ಕು ಗಾಯಗಳಾಗಿವೆ. ಕಮಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು 

(ಮಾಹಿತಿ ಕೃಪೆ ಪ್ರಜಾವಾಣಿ)

BIG BREAKING NEWS : ಸಿಬಿಎಸ್‌ಇ ಪರೀಕ್ಷೆ ಬಳಿಕ, ISC 12ನೇ ತರಗತಿ ಪರೀಕ್ಷೆ ರದ್ದ


ನವದೆಹಲಿ : ಕೊರೋನಾ ಸೋಂಕಿನ ತೀವ್ರತೆಯಿಂದಾಗಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ ನಡೆಸದಿರಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಇದರ ಬೆನ್ನಲ್ಲೇ, ಐಎಸ್‌ಇ 12ನೇ ತರಗತಿ ಪರೀಕ್ಷೆಗಳನ್ನು ಕೂಡ ರದ್ದು ಪಡಿಸಲಾಗಿದೆ.

ಇಂದು ಸಿಬಿಎಸ್ ಇ 12ನೇ ತರಗತಿ ವಿದ್ಯಾರ್ಥಿಗಳಿಗೆ ಈ ವರ್ಷ ಯಾವುದೇ ಪರೀಕ್ಷೆಗಳು ಇರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.

ಪರೀಕ್ಷೆಗಳ ಸ್ಥಿತಿಗತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಮುಖ ಸಭೆ ನಂತರ ಜೂನ್ 1ರ ಮಂಗಳವಾರ 12ನೇ ತರಗತಿ ಸಿಬಿಎಸ್ ಇ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿತ್ತು.

ಎಲ್ಲಾ ರಾಜ್ಯಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ವ್ಯಾಪಕ ಚರ್ಚೆಯ ಆಧಾರದ ಮೇಲೆ 12ನೇ ತರಗತಿ ವಿದ್ಯಾರ್ಥಿಗಳಿಗೆ ಎಲ್ಲಾ ಆಯ್ಕೆಗಳ ಬಗ್ಗೆ ಪ್ರಧಾನಿಗೆ ವಿವರಿಸಲಾಯಿತು.

ಏತನ್ಮಧ್ಯೆ, ಸುಪ್ರೀಂ ಕೋರ್ಟ್ ಸೋಮವಾರ, ಮೇ 31 ರಂದು, 12 ನೇ ತರಗತಿ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಂಡಳಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಮುಂದೂಡಿತು. ಈಗ ಜೂನ್ 3ರ ಗುರುವಾರ ವಿಚಾರಣೆಗೆ ನಿಗದಿಪಡಿಸಲಾಗಿದೆ. ಇದರ ಮಧ್ಯೆ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದಂತ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯನ್ನು ರದ್ದು ಪಡಿಸುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಇದರ ಬೆನ್ನಲ್ಲಿಯೇ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯ ಬಳಿಕ, ಐಎಸ್‌ಇ 12ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ರದ್ದು ಪಡಿಸಲಾಗಿದೆ.

(ಮಾಹಿತಿ ಕೃಪೆ Kannada News Now )

ಆಹಾರಧಾನ್ಯ ಖರೀದಿ: ಬೆಂಬಲ ಬೆಲೆ ಬಾಕಿ; ₹ 250 ಕೋಟಿ ಬಿಡುಗಡೆಗೆ ಸಿಎಂ ಸೂಚನೆ

 

ಬೆಂಗಳೂರು: 'ಕನಿಷ್ಠ ಬೆಂಬಲ ಬೆಲೆಯಲ್ಲಿ ಕಳೆದ ವರ್ಷ ದಾಖಲೆ ಪ್ರಮಾಣದಲ್ಲಿ ರೈತರಿಂದ ಆಹಾರಧಾನ್ಯ ಖರೀದಿಸಲಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ₹ 1067 ಕೋಟಿ ಪಾವತಿಗೆ ಬಾಕಿ ಇದೆ. ತಕ್ಷಣ ₹ 250 ಕೋಟಿ ಬಿಡುಗಡೆ ಮಾಡುವಂತೆ ಸೂಚಿಸಲಾಗಿದೆ' ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಯ ಪೂರ್ವ ಸಿದ್ಧತೆ ಕುರಿತಂತೆ ಕೃಷಿ ಸಚಿವ ಬಿ.ಸಿ. ಪಾಟೀಲ ಮತ್ತು ಇಲಾಖೆಯ ಅಧಿಕಾರಿಗಳ ಜೊತೆ ಮಂಗಳವಾರ ಸಭೆ ನಡೆಸಿದ ಅವರು, 'ಡಿಎಪಿ ಗೊಬ್ಬರ ಮತ್ತು ಯೂರಿಯ ಸಕಾಲದಲ್ಲಿ ಪೂರೈಸುವ ಬಗ್ಗೆ ಕೇಂದ್ರ ಸಚಿವರ ಜೊತೆ ಚರ್ಚಿಸಲಾಗುವುದು' ಎಂದರು.

ಕೃಷಿ ಸಾಲ ಕಳೆದ ಸಾಲಿನ (2020-21) ಗುರಿಗಿಂತ ಈ ಬಾರಿ ಶೇ 16 ಹೆಚ್ಚು ವಿತರಣೆ ಉದ್ದೇಶಿಸಲಾಗಿದ್ದು, ₹ 3 ಸಾವಿರ ಕೋಟಿ ಹೆಚ್ಚುವರಿ ಗುರಿ ನಿಗದಪಡಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ₹ 21 ಸಾವಿರ ಕೋಟಿ ಸಾಲ ವಿತರಣೆ ಗುರಿ ನಿಗದಿಪಡಿಸಲಾಗಿದೆ.

'ರಾಜ್ಯದಲ್ಲಿ ಈವರೆಗೆ ಉತ್ತಮ ಮಳೆಯಾಗಿದೆ. 20 ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಹಾಗೂ 10 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ 6 ಅಥವಾ 7ರ ವೇಳೆಗೆ ಮುಂಗಾರು ಆರಂಭವಾಗಲಿದೆ' ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

'ರಾಜ್ಯದಲ್ಲಿ 2020-21ರಲ್ಲಿ ದಾಖಲೆ ಪ್ರಮಾಣದ 153.08 ಲಕ್ಷ ಟನ್‌ ಆಹಾರ ಧಾನ್ಯ ಉತ್ಪಾದನೆ ಆಗಿದೆ. ಹಿಂದಿನ ವರ್ಷಕ್ಕಿಂತ ಶೇ 10ರಷ್ಟು ಹೆಚ್ಚಳವಾಗಿದೆ. ಈ ವರ್ಷ 135.48 ಲಕ್ಷ ಟನ್ ಗುರಿ ಹೊಂದಲಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಸಾಕಷ್ಟಿದೆ. ಡಿಎಪಿ ಪೂರೈಕೆಯ ಸಮಸ್ಯೆ ಬಗೆಹರಿಸಲಾಗಿದೆ. 690 ಕೃಷಿ ಯಂತ್ರ ಧಾರೆ ಕೇಂದ್ರಗಳು ಹಾಗೂ 210 ಗ್ರಾಮ ಮಟ್ಟದ ಕೃಷಿ ಯಂತ್ರೋಪಕರಣಗಳ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಬಾಡಿಗೆ ಆಧಾರದಲ್ಲಿ ಕೃಷಿ ಯಂತ್ರೋಪಕರಣ ಒದಗಿಸಲಾಗುತ್ತಿದೆ' ಎಂದು ಬಿ.ಸಿ. ಪಾಟೀಲ ತಿಳಿಸಿದರು.

'ಕೋವಿಡ್ ಎರಡನೇ ಅಲೆಯ ಕಾರಣ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಘೋಷಿಸಿರುವ ಪರಿಹಾರ ವಿತರಣೆ ಈಗಾಗಲೇ ಆರಂಭವಾಗಿದೆ. ಈ ಉದ್ದೇಶಕ್ಕೆ ಬಿಡುಗಡೆಯಾಗಿರುವ ₹ 19 ಕೋಟಿಯಲ್ಲಿ ₹ 15.23 ಕೋಟಿಯನ್ನು 36,327 ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ ಮಾಡಲಾಗಿದೆ'

ಪ್ರವಾಹ ಎದುರಿಸಲು ಸಿದ್ಧತೆ: 'ಮಳೆಗಾಲದಲ್ಲಿ ಪ್ರವಾಹ ಎದುರಿಸಲು ಕೂಡಾ ಸಿದ್ಧತೆ ಮಾಡಲಾಗುತ್ತಿದ್ದು, ಪಂಚಾಯಿತಿ ಮಟ್ಟದ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ತಂಡಗಳು ಸಜ್ಜಾಗಿವೆ. ಎಲ್ಲ ಜಿಲ್ಲಾಧಿಕಾರಿಗಳು ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ' ಎಂದೂ ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ತೋಟಗಾರಿಕಾ ಸಚಿವ ಆರ್‌. ಶಂಕರ್, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಕೂಡಾ ಸಭೆಯಲ್ಲಿ ಇದ್ದರು.

(ಮಾಹಿತಿ ಕೃಪೆ ಪ್ರಜಾವಾಣಿ)

ತಡವಾಗಿ ಹಣ ಕೊಟ್ಟರೂ ಪರವಾಗಿಲ್ಲ ಸರ್ಕಾರವೇ ರೈತರ ಬೆಳೆ ಖರೀದಿಸಲಿ: ಡಿಕೆಶಿ

 

ಬೆಂಗಳೂರು: 'ತೋಟಗಾರಿಕೆ ಬೆಳೆಗಳಾದ ಹೂವು, ಹಣ್ಣು, ತರಕಾರಿಗಳನ್ನು ಸರ್ಕಾರವೇ ರೈತರಿಂದ ನೇರವಾಗಿ ಖರೀದಿಸಬೇಕು. ಒಂದು ತಿಂಗಳು ತಡವಾಗಿ ಹಣ ಕೊಟ್ಟರೂ ಪರವಾಗಿಲ್ಲ. ಆದರೆ, ಬೇಗ ಕೊಳೆಯುವ ಈ ಬೆಳೆಗಳನ್ನು ಮೊದಲು ಖರೀದಿಸಬೇಕು' ಎಂದು ರಾಜ್ಯ ಸರ್ಕಾರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, 'ಕಿಲೋಗೆ ₹ 40ರಿಂದ ₹ 50ಕ್ಕೆ ಮಾರುತ್ತಿದ್ದ ಹಸಿ ಮೆಣಸಿನಕಾಯಿಯನ್ನು ರೈತರು ಒಂದೆರಡು ರೂಪಾಯಿಗೆ ಮಾರುತ್ತಿದ್ದಾರೆ. ಕೆಲವರು ಹೊಲದಲ್ಲೇ ಗೊಬ್ಬರ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ 2 ಗಂಟೆ ಮಾತ್ರ ಅವಕಾಶ ನೀಡಲಾಗಿದೆ. ಉತ್ತರ ಕರ್ನಾಟಕದಲ್ಲಿ ಹೂವು, ಹಣ್ಣು, ತರಕಾರಿ ಬೆಳೆಯುವ ಎಲ್ಲ ರೈತರ ಪರಿಸ್ಥಿತಿ ದಯನೀಯವಾಗಿದೆ' ಎಂದರು.

'ಸರ್ಕಾರ ಘೋಷಿಸಿರುವ ಅಲ್ಪ ಮೊತ್ತದ ಪ್ಯಾಕೇಜ್‌ಗಾಗಿ ಸಣ್ಣ ರೈತರು ಆನ್‌ಲೈನ್‌ನಲ್ಲಿ ಅರ್ಜಿ ಹಾಕಿಕೊಂಡು ಕುಳಿತುಕೊಳ್ಳಲ್ಲ. ಹೀಗಾಗಿ, ಒಂದು ತಂಡ ರಚಿಸಿ ಸರ್ಕಾರವೇ ಬೆಳೆ ಖರೀದಿಸಲಿ. ಮಾರುವ ಬೆಲೆಯಲ್ಲಿ ಅರ್ಧದಷ್ಟನ್ನು ರೈತರಿಗೆ ಕೊಡಲಿ' ಎಂದ ಅವರು, 'ಸರ್ಕಾರ ಘೋಷಿಸಿದ ಪ್ಯಾಕೇಜ್ ರಿಯಲ್‌ ಅಲ್ಲ, ರೀಲ್. 25 ಲಕ್ಷ ಚಾಲಕ ವೃತ್ತಿ ಅವಲಂಬಿಸಿದ್ದಾರೆ. ಸವಿತಾ ಸಮಾಜ, ನೇಕಾರರು ಹೀಗೆ ಅಸಂಘಟಿತ ಕಾರ್ಮಿಕರಲ್ಲಿ ಎಷ್ಟು ಜನ ಅರ್ಜಿ ಹಾಕಿದ್ದಾರೆ' ಎಂದು ಪ್ರಶ್ನಿಸಿದರು.

'ಸರ್ಕಾರ ನಿಜವಾಗಿ ನೊಂದವರ ರಕ್ಷಣೆ ಮಾಡುತ್ತಿಲ್ಲ. ಮೊದಲು ಈ ವರ್ಗದ ರಕ್ಷಣೆಗೆ ಕಾರ್ಯಕ್ರಮ ರೂಪಿಸಿ. ವರ್ತಕರಿಗೆ ಒಂದು ವರ್ಷದಿಂದ ಸರಿಯಾಗಿ ವ್ಯಾಪಾರಕ್ಕೆ ಅವಕಾಶ ನೀಡಿಲ್ಲ. ಆದರೆ, ಪಾಲಿಕೆ ಮಾತ್ರ ತೆರಿಗೆ ಪಾವತಿಸುವಂತೆ ಪೀಡಿಸುತ್ತಿದೆ. ಚಿತ್ರಮಂದಿರಗಳ ಮಾಲೀಕರು ಎಲ್ಲಿಂದ ತೆರಿಗೆ ಕಟ್ಟುತ್ತಾರೆ. ಮದ್ಯದಂಗಡಿಗೆ 10 ಗಂಟೆವರೆಗೂ ಅವಕಾಶ ಕೊಟ್ಟರೆ, ರೈತನಿಗೆ ಬೆಳಿಗ್ಗೆ 8 ಗಂಟೆವರೆಗೆ ಮಾತ್ರ ಅವಕಾಶ ಕೊಟ್ಟಿದ್ದಾರೆ. ಅವರು ಕೊಟ್ಟಿರುವ ಸಮಯ ಅಂಗಡಿ ಬಾಗಿಲು ತೆಗೆದು, ಮುಚ್ಚಲು ಸಾಕಾಗುತ್ತದೆ. ಇನ್ನು ವ್ಯಾಪಾರ ಮಾಡುವುದು ಹೇಗೆ' ಎಂದೂ ಪ್ರಶ್ನಿಸಿದರು.

'ಬಡವರಿಗೆ ನೆರವಾಗಲು ಆಹಾರ ಕಿಟ್ ನೀಡುವಂತೆ ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಸೂಚನೆ ನೀಡಿದ್ದು, ಅದರಂತೆ ಎಲ್ಲ ಕಡೆಗಳಲ್ಲಿ ಹಂಚಿಕೆ ಮಾಡಲಾಗುತ್ತಿದೆ. ಪಕ್ಷದ ವತಿಯಿಂದ ಸುಮಾರು 200ಕ್ಕೂ ಹೆಚ್ಚು ಆಂಬುಲೆನ್‌ಗಳು ಸೇವೆ ನೀಡುತ್ತಿವೆ' ಎಂದರು.

ಗಾಂಧಿ ತತ್ವ ಪಾಲನೆ: 'ಬಿಜೆಪಿ ಸಂಸದರು ಗಾಂಧಿ ತತ್ವ ಅನುಸರಿಸುತ್ತಿದ್ದಾರೆ. ಕಣ್ಣು, ಕಿವಿ, ಬಾಯಿ ಬಂದ್ ಮಾಡಿಕೊಂಡಿದ್ದಾರೆ. ರಾಜ್ಯದ ಜನರ ಪರವಾಗಿ ಧ್ವನಿ ಎತ್ತುತ್ತಿಲ್ಲ' ಎಂದು ದೂರಿದರು.

ನಮ್ಮೆಲ್ಲರಿಗೂ ಹೆಮ್ಮೆ: 'ದೇವೇಗೌಡರು ಪ್ರಧಾನಿಯಾಗಿ 25 ವರ್ಷ ಆಗಿದೆ. ಇದು ರಾಜ್ಯಕ್ಕೆ ದೊಡ್ಡ ಗೌರವ. ಯಾರಿಗೂ ಇಂಥ ದೊಡ್ಡ ಅವಕಾಶ ಸಿಕ್ಕಿಲ್ಲ. ತಮಗೆ ಸಿಕ್ಕಿದ ಅವಕಾಶವನ್ನು ಅವರು ಪ್ರಾಮಾಣಿಕವಾಗಿ ಬಳಸಿಕೊಂಡು ಕೆಲಸ ಮಾಡಿದ್ದಾರೆ' ಎಂದರು.

'ಉತ್ತರ ಭಾರತೀಯರು ದಕ್ಷಿಣ ಭಾರತೀಯರನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೆ ದೇವೇಗೌಡರು ತಮ್ಮ ಹೋರಾಟದಿಂದ ಆ ಎತ್ತರದ ಸ್ಥಾನ ತಲುಪಿದ್ದಾರೆ. ಅವರು ಈ ಸ್ಥಾನ ಅಲಂಕರಿಸಿದಾಗ ನಾವೆಲ್ಲ ಪಕ್ಷಬೇಧ ಮರೆತು ಸಂತೋಷಪಟ್ಟೆವು. ಅವರಿಗೆ ಒಳ್ಳೆಯದಾಗಲಿ, ಅವರ ಮಾರ್ಗದರ್ಶನ ರಾಜ್ಯಕ್ಕೆ ಬೇಕು' ಎಂದರು.

ಕೂದಲ ಆರೋಗ್ಯಕ್ಕೆ ತೆಂಗಿನ ಎಣ್ಣೆ ಯಾಕೆ ಬೆಸ್ಟ್..? ಇಲ್ಲಿದೆ 7 ಕಾರಣ

 

ನವದೆಹಲಿ : ತೆಂಗಿನ ಎಣ್ಣೆಯ ಆರೋಗ್ಯ ಮಹತ್ವದ ಬಗ್ಗೆ ಬಿಡಿಸಿ ಹೇಳಬೇಕಾಗಿಲ್ಲ. ಆದರೆ ತಲೆಗೂದಲು ಉದುರುವ ಸಮಸ್ಯೆಗೆ (hair fall) ತೆಂಗಿನೆಣ್ಣೆ ರಾಮ ಬಾಣ ಎನ್ನುತ್ತಿದೆ ಒಂದು ಸಂಶೋಧನೆ. ಈ ಸಂಶೋಧನೆ ನಡೆಸಿದ್ದು ಟಿ ಆರ್ ಐ ಫ್ರಿಸ್ಟನ್ ಯುಎಸ್‍ಎ ಎಂಬ ಸಂಸ್ಥೆ. ಅದರ ಅಧ್ಯಯನದ ಪ್ರಕಾರ ತೆಂಗಿನ ಎಣ್ಣೆಯಲ್ಲಿ (coconut oil) ಪ್ರೊಟೀನ್ ಪ್ರಮಾಣ ಕಡಿಮೆ ಇರುತ್ತದೆ. ಹಾಗಾಗಿ, ಅದು ಕೂದಲು ಉದುರುವುದನ್ನು ಶೇ. 50 ರಷ್ಟು ತಡೆಯುತ್ತದೆ.

ಈ ಪ್ರಯೋಗ ಮಾಡಿದ್ದು ಹೇಗೆ..?
ಟಿಆರ್ ಐ ಫ್ರಿಸ್ಟನ್ ಯುಎಸ್‍ಎ ಈ ಸಂಸ್ಥೆ ಈ ಪ್ರಯೋಗ ನಡೆಸಿದ್ದು ಹೇಗೆ ಗೊತ್ತಾ..? ತಲೆಯ ಅರ್ಧ ಕೂದಲಿಗೆ ತೆಂಗಿನೆಣ್ಣೆ (coconut oil) ಹಚ್ಚಲಾಯಿತು. ಇನ್ನರ್ಧ ಭಾಗವನ್ನು ಹಾಗೇ ಬಿಡಲಾಯಿತು. ಎಣ್ಣೆ ಹಚ್ಚಿದ ಭಾಗದ ಕೂದಲು ಸುದೃಢವಾಗಿ, ಆರೋಗ್ಯಕರವಾಗಿತ್ತು. ಉದುರುವಿಕೆ ಇರಲಿಲ್ಲ. ಆದರೆ, ಇದೇ ಸ್ಥಿತಿ ಎಣ್ಣೆ ಹಚ್ಚದ ಕೂದಲುಗಳಲ್ಲಿ ಕಂಡು ಬರಲಿಲ್ಲ.

ಕೂದಲಿಗೆ ತೆಂಗಿನೆಣ್ಣೆಯೇ ಯಾಕೆ ಬೆಸ್ಟ್?
ಈ ಅಧ್ಯಯನ ಕಂಡು ಕೊಂಡ ಸತ್ಯದ ಪ್ರಕಾರ, ತೆಂಗಿನ ಎಣ್ಣೆಯ ಲಾಭಗಳನ್ನು ಹೀಗೆ ಪಟ್ಟಿ ಮಾಡಬಹುದು.
1. ತೆಂಗಿನೆಣ್ಣೆಯಲ್ಲಿ ಪೌಷ್ಠಿಕ ಪ್ರಭಾವವಿದೆ. ಹಾಗಾಗಿ ಅದು ಕೂದಲನ್ನು ಆರೋಗ್ಯವಾಗಿಡುತ್ತದೆ
2. ತೆಂಗಿನೆಣ್ಣೆ ಕೂದಲಿನ ಮೂಲಕ್ಕೆ ತಲುಪುತ್ತದೆ. ತೆಂಗಿನೆಣ್ಣೆಗೆ ಮಾತ್ರ ಇದು ಸಾಧ್ಯ. ಬೇರೆ ಎಣ್ಣೆಗಳಿಗೆ (oil) ಇದು ಸಾಧ್ಯವಿಲ್ಲ. ಇದರಿಂದ ಕೂದಲಿಗೆ ರಕ್ಷಣೆ ಸಿಗುತ್ತದೆ. ಕೂದಲು ಬಲಿಷ್ಠವಾಗುತ್ತದೆ.
3. ತೆಂಗಿನೆಣ್ಣೆಯಲ್ಲಿ ಮೊನೊಲರಿನ್ ಇದೆ. ಲಾರಿಕ್ ಆಸಿಡ್ ಇದೆ. ಲಾರಿಕೆ ಆಸಿಡ್ ತಾಯಿಯ ಎದೆಹಾಲಲ್ಲಿ (mother milk) ಮಾತ್ರ ಕಂಡು ಬರುತ್ತದೆ. ಇದು ಕೂದಲಿನ ರಕ್ಷಣೆಗೆ ಔಷಧೀಯ ವ್ಯವಸ್ಥೆಯಾಗಿ ಕೆಲಸ ಮಾಡುತ್ತದೆ.

4.ಸ್ಟ್ರೆಸ್ (stress) ಇದ್ದಾಗ ಕೂದಲು ಬೇಗ ಉದುರುತ್ತದೆ. ಆದರೆ, ತೆಂಗಿನ ಎಣ್ಣೆಯಲ್ಲಿರುವ ಲಾರಿಕ್ ಆಸಿಡ್ ಅದನ್ನು ತಡೆಯುತ್ತದೆ
5. ತೆಂಗಿನೆಣ್ಣೆ, ಸೂರ್ಯನ ಹಾನಿಕಾರಕ ಕಿರಣಗಳಿಂದ ನಮ್ಮ ತಲೆಗೂದಲನ್ನು ರಕ್ಷಿಸುತ್ತದೆ.
6. ತೆಂಗಿನೆಣ್ಣೆ ಮಾಲಿನ್ಯ, (pollution) ದೂಳುಗಳಿಂದ ನಮ್ಮ ಕೂದಲು ದುರ್ಬಲಗೊಳ್ಳದಂತೆ ತಡೆಯುತ್ತದೆ.
7. ತೆಂಗಿನೆಣ್ಣೆಯಲ್ಲಿ ಬೇಕಾದಷ್ಟು ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ಇರುತ್ತದೆ. ಇದು ಕೂದಲಿಗೆ ರಕ್ಷಣೆ ನೀಡುತ್ತದೆ.
ಈಗ ನಿಮಗೆ ಗೊತ್ತಾಗಿರಬೇಕಲ್ವ. ನಮ್ಮ ಹಿರಿಯರು ಯಾಕೆ ಯಾವತ್ತೂ ತಲೆಗೆ ತೆಂಗಿನೆಣ್ಣೆ ಯಾಕೆ ಹಚ್ಚಿಕೊಳ್ಳುತ್ತಿದ್ದರು ಎಂಬುದರ ಹಿಂದಿನ ಸತ್ಯ.

(ಮಾಹಿತಿ ಕೃಪೆ Zee News ಕನ್ನಡ )

'ಒಳ ಉಡುಪು ಹರಿದಿದೆ, ಬಟ್ಟೆ ಅಂಗಡಿ ಬಾಗಿಲು ತೆಗೆಸಿ ಸ್ವಾಮಿ' : ಸಿಎಂ 'BSY' ಬಳಿ ವಿಚಿತ್ರ ಬೇಡಿಕೆಯಿಟ್ಟ ವ್ಯಕ್ತಿ.!

 

ಮೈಸೂರು : ರಾಜ್ಯದಲ್ಲಿ ಕೊರೊನಾ ಸ್ಪೋಟವಾದ ಹಿನ್ನೆಲೆ ಜೂನ್ 7 ರವರೆಗೆ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಹಿನ್ನೆಲೆ ಬಟ್ಟೆ ಅಂಗಡಿ ಸೇರಿದಂತೆ ಎಲ್ಲವೂ ಬಂದ್ ಆಗಿದೆ. ಕೊರೊನಾ ಲಾಕ್‌ಡೌನ್‌ ಸಂದರ್ಭ ಅಗತ್ಯ ವಸ್ತು ಹೊರತುಪಡಿಸಿ ಬೇರೆ ಯಾವುದೇ ಅಂಗಡಿಗಳು ತೆರೆಯಲು ಅವಕಾಶವಿಲ್ಲ.

ಈ ಹಿನ್ನೆಲೆ ಮೈಸೂರಿನಲ್ಲಿ ವ್ಯಕ್ತಿಯೋರ್ವ ನನ್ನ ಬಳಿ ಇರುವ ಎರಡು ಒಳಉಡುಪು ಹರಿದು ಹೋಗಿದೆ, ದಯವಿಟ್ಟು ಬಟ್ಟೆ ಅಂಗಡಿ ತೆರೆಸಿ ಎಂದು ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪರ ಬಳಿ ಮನವಿ ಮಾಡಿದ್ದಾರೆ. ಹೌದು, ಈ ಕುರಿತು ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿರುವ ಮೈಸೂರಿನ ಚಾಮರಾಜಪುರದ. ನರಸಿಂಹಮೂರ್ತಿ ಎಂಬವರು, ವಾರಕ್ಕೆ ಒಂದು ಸಲ ಬಟ್ಟೆ ಅಂಗಡಿಯನ್ನು ತೆರೆದು, ನಮ್ಮ ಒಳ ಉಡುಪಿನ ಸಮಸ್ಯೆಯನ್ನು ಪರಿಹರಿಸಿ . ನನ್ನ ಬಳಿ ಇರುವ ಎರಡು ಒಳಉಡುಪು ಹರಿದು ಹೋಗಿದೆ, ದಯವಿಟ್ಟು ಬಟ್ಟೆ ಅಂಗಡಿ ತೆರೆಸಿ ಎಂದು ಬಿ ಎಸ್‌ ಯಡಿಯೂರಪ್ಪರ ಬಳಿ ಮನವಿ ಮಾಡಿದ್ದಾರೆ.

'ಮಾನ್ಯ ಮುಖ್ಯಮಂತ್ರಿಗಳೇ, ಕಳೆದೆರಡು ತಿಂಗಳುಗಳಿಂದ ಎಲ್ಲಾ ಅಂಗಡಿಗಳು ತೆರೆಯುತ್ತಿದ್ದರೂ ಅದೇಕೋ ಬಟ್ಟೆ ಅಂಗಡಿಗಳು ತೆರೆಯಲು ಸರ್ಕಾರ ಅನುಮತಿ ನೀಡುತ್ತಿಲ್ಲ. ಕೇವಲ ಎರಡು ಜೊತೆ ಒಳ ಉಡುಪುಗಳನ್ನು ಹೊಂದಿರುವ ನನ್ನಂತಹವರ ಒಳ ಉಡುಪುಗಳು ಹರಿಯುತ್ತಿದೆ. ಇನ್ನು ಪಾಪ ಹೆಣ್ಣುಮಕ್ಕಳ ಬಟ್ಟೆಗಳ ಕಥೆಯೂ ಹೀಗೇ ಇರಬಹುದು. ನಮ್ಮ ಕಷ್ಟ ಯಾರ ಬಳಿ ಹೇಳುವುದು,,,,,ತಿಂಗಳಲ್ಲಿ ವಾರಕ್ಕೆ ಒಮ್ಮೆಯಾದರೂ ಬಟ್ಟೆ ಅಂಗಡಿಯನ್ನು ತೆರೆದು ನಮ್ಮ ಒಳ ಉಡುಪಿನ ಸಮಸ್ಯೆಯನ್ನು ಪರಿಹರಿಸಿ ಸ್ವಾಮಿ' ಎಂದು ಸಿಎಂಗೆ ಮನವಿ ಮಾಡಿದ್ದಾರೆ.

(ಮಾಹಿತಿ ಕೃಪೆ Kannada News Now)


'ಪವರ್ ಬೆಗ್ಗರ್ಸ್ ಬಗ್ಗೆ ಮಾತನಾಡುವುದು ಬೇಡ' - ಡಿಕೆ ಶಿವಕುಮಾರ್‌

 

ಬೆಂಗಳೂರು, ಜೂ. 1: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ವಿಚಾರ ಸುದ್ದಿಯಾದ ಬೆನ್ನಲ್ಲೇ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ದೆಹಲಿಗೆ ಭೇಟಿ ನೀಡಿರುವುದು ಮತ್ತೆ ರಾಜ್ಯ ರಾಜಕೀಯದಲ್ಲಿ ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಬೆನ್ನಲ್ಲೇ ಬಿ ವೈ ವಿಜಯೇಂದ್ರ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಯಾರು ಎಲ್ಲಿಗೆ ಬೇಕಾದರೂ ಹೋಗಲಿ, ನಾವು ರಾಜಕೀಯವಾಗಿ ಮಾಡಿದ್ದನ್ನೇ ಅನುಭವಿಸುತ್ತೇವೆ, ಪವರ್ ಬೆಗ್ಗರ್ಸ್ ಬಗ್ಗೆ ಮಾತನಾಡುವುದು ಬೇಡ ಎಂದು ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಡಿಕೆಶಿ ವಿಜಯೇಂದ್ರ ದೆಹಲಿ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ಇವರೆಲ್ಲರೂ ಪವರ್ ಬೆಗ್ಗರ್ಸ್, ಅವರ ಬಗ್ಗೆ ಮಾತನಾಡುವುದು ಬೇಡ ಎಂದು ಹೇಳಿದ್ದಾರೆ.

ಯಾರು ಎಲ್ಲಿ ಬೇಕಾದರೂ ಹೋಗಲಿ. ನಾವು ಆ ಪವರ್ ಬೆಗ್ಗರ್ಸ್ ಬಗ್ಗೆ ಮಾತನಾಡುವುದು ಬೇಡ. ಎಲ್ಲರನ್ನೂ ಯಡಿಯೂರಪ್ಪ ತಮ್ಮ ಪಕ್ಷಕ್ಕೆ ಕರೆತಂದ್ರು. ಈಗ ಅವರು ಅನುಭವಿಸುತ್ತಿದ್ದಾರೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಸರ್ಕಾರದ ಕೋವಿಡ್‌ ಪ್ಯಾಕೇಜ್‌ ವಿಚಾರದಲ್ಲಿ ಮಾತನಾಡಿದ ಡಿಕೆಶಿ, ಇದು ರೀಲ್‌ ಪ್ಯಾಕೇಜ್‌, ನಿಜವಾಗಿ ಕಷ್ಟದಲ್ಲಿರುವವರಿಗೆ ಅರ್ಜಿ ಹಾಕಲು ಆಗುತ್ತಾ? ಯಾರು ಪರಿಹಾರಕ್ಕೆ ಅರ್ಜಿ ಹಾಕಿದ್ದಾರೆ? ನಿಜವಾಗಿ ಕಷ್ಟದಲ್ಲಿ ಇರುವ ಹಲವು ಮಂದಿಗೆ ಏನು ವಿಷಯ, ಈ ಅರ್ಜಿ ಹಾಕುವುದು ಹೇಗೆ ಎಂಬುದು ತಿಳಿದಿರಲ್ಲ ಎಂದು ಸರ್ಕಾರವನ್ನು ಟೀಕಿಸಿದ್ದಾರೆ.

ಇನ್ನು ಸಂಕಷ್ಟದಲ್ಲಿ ಇರುವವರಿಗೆ ಆನ್‌ಲೈನ್‌ ಅರ್ಜಿ ಹಾಕುವುದು ತಿಳಿದಿದ್ದರೆ, ವಿಧಾನ ಸೌಧಕ್ಕೆ ಬಂದು ಕೆಲಸ ಮಾಡುತ್ತಿದ್ದರು. ಆ ಬಗ್ಗೆ ತಿಳಿಯದ ಕಾರಣದಿಂದ ಅಲ್ಲವೇ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವುದು ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಕೊರೊನಾ ಸಾವಿನ ಬಗ್ಗೆ ಸುಳ್ಳು ಅಂಕಿ-ಅಂಶ ಕೊಡುತ್ತಿಲ್ಲ ಎಂಬ ಆರೋಗ್ಯ ಸಚಿವ ಸುಧಾಕರ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಸುಧಾಕರ್‌ ಅಣ್ಣ ನೀನು ಮೊದಲು ಔಷಧಿ ಕೊಡಿಸುವುದನ್ನು ನೋಡು. ನಿನಗೆ ಡೆತ್‌ ಆಡಿಟ್‌ ಕಾರ್ಯ ಬೇಡ. ಅದನ್ನು ಮಾಡಲು ಮುನ್ಸಿಪಲ್, ರೆವಿನ್ಯೂ ಡಿಪಾಟ್ರ್ಮೆಂಟ್ ಇದೆ. ಅವರು ಈ ಲೆಕ್ಕಾಚಾರ ನೋಡಿಕೊಳ್ಳುತ್ತಾರೆ. ನೀನು ಈಗ ಔಷಧಿ, ಲಸಿಕೆ ಬಗ್ಗೆ ಗಮನ ಕೊಡು ಎಂದು ಸಿಡಿಮಿಡಿಗೊಂಡರು. ಹಾಗೆಯೇ ರಾಜಸ್ಥಾನದಲ್ಲಿ ಡೆತ್ ಆಡಿಟ್ ಮಾಡಿಸುತ್ತಿದ್ದಾರೆ, ನೀವು ಕೂಡಾ ಮರಣ ಪ್ರಮಾಣ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.

ಇನ್ನು ಉತ್ತರಕರ್ನಾಕದ ರೈತರ ಪರಿಸ್ಥಿತಿ ಶೋಚನೀಯ, ನಾನು ನಿನ್ನೆ ಅಲ್ಲಿಗೆ ಭೇಟಿ ನೀಡಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ರೈತರ ತರಕಾರಿ, ಹೂ ಎಲ್ಲವನ್ನು ಸರ್ಕಾರ ಖರೀದಿ ಮಾಡಬೇಕು ಎಂದು ಸಿಎಂಗೆ ಮನವಿ ಮಾಡಿದರು.

ಈ ಸಂದರ್ಭದಲ್ಲೇ ದೇವೇಗೌಡರ ಬಗ್ಗೆ ಮಾತನಾಡಿ, ದೇವೇಗೌಡರು ಪ್ರಧಾನಿಯಾಗಿ 25 ವರ್ಷ ಪೂರೈಸಿದ್ದಾರೆ. ದೇವೇಗೌಡರದ್ದು ಹೋರಾಟದ ಜೀವನ. ದೆಹಲಿಯಲ್ಲಿ ದಕ್ಷಿಣ ಭಾರತದವರು ಉತ್ತರ ಭಾರತದವರ ಎದುರು ರಾಜಕೀಯ ನಡೆಸುವುದು ಅಷ್ಟು ಸುಲಭವಾದ ವಿಚಾರವಲ್ಲ. ಹಾಗಿರುವಾಗ ದೇವೇಗೌಡರು ಪ್ರಧಾನಿಯಾಗಿದ್ದರು. ರಾಜ್ಯದ ಜನರು ನೋವಿಗೆ ಸ್ಪಂಧಿಸುತ್ತಿದ್ದರು ಎಂದು ಶ್ಲಾಘಿಸಿದರು.

(ಒನ್‌ಇಂಡಿಯಾ ಸುದ್ದಿ)