ನವದೆಹಲಿ : ತೆಂಗಿನ ಎಣ್ಣೆಯ ಆರೋಗ್ಯ ಮಹತ್ವದ ಬಗ್ಗೆ ಬಿಡಿಸಿ ಹೇಳಬೇಕಾಗಿಲ್ಲ. ಆದರೆ ತಲೆಗೂದಲು ಉದುರುವ ಸಮಸ್ಯೆಗೆ (hair fall) ತೆಂಗಿನೆಣ್ಣೆ ರಾಮ ಬಾಣ ಎನ್ನುತ್ತಿದೆ ಒಂದು ಸಂಶೋಧನೆ. ಈ ಸಂಶೋಧನೆ ನಡೆಸಿದ್ದು ಟಿ ಆರ್ ಐ ಫ್ರಿಸ್ಟನ್ ಯುಎಸ್‍ಎ ಎಂಬ ಸಂಸ್ಥೆ. ಅದರ ಅಧ್ಯಯನದ ಪ್ರಕಾರ ತೆಂಗಿನ ಎಣ್ಣೆಯಲ್ಲಿ (coconut oil) ಪ್ರೊಟೀನ್ ಪ್ರಮಾಣ ಕಡಿಮೆ ಇರುತ್ತದೆ. ಹಾಗಾಗಿ, ಅದು ಕೂದಲು ಉದುರುವುದನ್ನು ಶೇ. 50 ರಷ್ಟು ತಡೆಯುತ್ತದೆ.
ಈ ಪ್ರಯೋಗ ಮಾಡಿದ್ದು ಹೇಗೆ..?
ಟಿಆರ್ ಐ ಫ್ರಿಸ್ಟನ್ ಯುಎಸ್‍ಎ ಈ ಸಂಸ್ಥೆ ಈ ಪ್ರಯೋಗ ನಡೆಸಿದ್ದು ಹೇಗೆ ಗೊತ್ತಾ..? ತಲೆಯ ಅರ್ಧ ಕೂದಲಿಗೆ ತೆಂಗಿನೆಣ್ಣೆ (coconut oil) ಹಚ್ಚಲಾಯಿತು. ಇನ್ನರ್ಧ ಭಾಗವನ್ನು ಹಾಗೇ ಬಿಡಲಾಯಿತು. ಎಣ್ಣೆ ಹಚ್ಚಿದ ಭಾಗದ ಕೂದಲು ಸುದೃಢವಾಗಿ, ಆರೋಗ್ಯಕರವಾಗಿತ್ತು. ಉದುರುವಿಕೆ ಇರಲಿಲ್ಲ. ಆದರೆ, ಇದೇ ಸ್ಥಿತಿ ಎಣ್ಣೆ ಹಚ್ಚದ ಕೂದಲುಗಳಲ್ಲಿ ಕಂಡು ಬರಲಿಲ್ಲ.
ಕೂದಲಿಗೆ ತೆಂಗಿನೆಣ್ಣೆಯೇ ಯಾಕೆ ಬೆಸ್ಟ್?
ಈ ಅಧ್ಯಯನ ಕಂಡು ಕೊಂಡ ಸತ್ಯದ ಪ್ರಕಾರ, ತೆಂಗಿನ ಎಣ್ಣೆಯ ಲಾಭಗಳನ್ನು ಹೀಗೆ ಪಟ್ಟಿ ಮಾಡಬಹುದು.
1. ತೆಂಗಿನೆಣ್ಣೆಯಲ್ಲಿ ಪೌಷ್ಠಿಕ ಪ್ರಭಾವವಿದೆ. ಹಾಗಾಗಿ ಅದು ಕೂದಲನ್ನು ಆರೋಗ್ಯವಾಗಿಡುತ್ತದೆ
2. ತೆಂಗಿನೆಣ್ಣೆ ಕೂದಲಿನ ಮೂಲಕ್ಕೆ ತಲುಪುತ್ತದೆ. ತೆಂಗಿನೆಣ್ಣೆಗೆ ಮಾತ್ರ ಇದು ಸಾಧ್ಯ. ಬೇರೆ ಎಣ್ಣೆಗಳಿಗೆ (oil) ಇದು ಸಾಧ್ಯವಿಲ್ಲ. ಇದರಿಂದ ಕೂದಲಿಗೆ ರಕ್ಷಣೆ ಸಿಗುತ್ತದೆ. ಕೂದಲು ಬಲಿಷ್ಠವಾಗುತ್ತದೆ.
3. ತೆಂಗಿನೆಣ್ಣೆಯಲ್ಲಿ ಮೊನೊಲರಿನ್ ಇದೆ. ಲಾರಿಕ್ ಆಸಿಡ್ ಇದೆ. ಲಾರಿಕೆ ಆಸಿಡ್ ತಾಯಿಯ ಎದೆಹಾಲಲ್ಲಿ (mother milk) ಮಾತ್ರ ಕಂಡು ಬರುತ್ತದೆ. ಇದು ಕೂದಲಿನ ರಕ್ಷಣೆಗೆ ಔಷಧೀಯ ವ್ಯವಸ್ಥೆಯಾಗಿ ಕೆಲಸ ಮಾಡುತ್ತದೆ.
4.ಸ್ಟ್ರೆಸ್ (stress) ಇದ್ದಾಗ ಕೂದಲು ಬೇಗ ಉದುರುತ್ತದೆ. ಆದರೆ, ತೆಂಗಿನ ಎಣ್ಣೆಯಲ್ಲಿರುವ ಲಾರಿಕ್ ಆಸಿಡ್ ಅದನ್ನು ತಡೆಯುತ್ತದೆ
5. ತೆಂಗಿನೆಣ್ಣೆ, ಸೂರ್ಯನ ಹಾನಿಕಾರಕ ಕಿರಣಗಳಿಂದ ನಮ್ಮ ತಲೆಗೂದಲನ್ನು ರಕ್ಷಿಸುತ್ತದೆ.
6. ತೆಂಗಿನೆಣ್ಣೆ ಮಾಲಿನ್ಯ, (pollution) ದೂಳುಗಳಿಂದ ನಮ್ಮ ಕೂದಲು ದುರ್ಬಲಗೊಳ್ಳದಂತೆ ತಡೆಯುತ್ತದೆ.
7. ತೆಂಗಿನೆಣ್ಣೆಯಲ್ಲಿ ಬೇಕಾದಷ್ಟು ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ಇರುತ್ತದೆ. ಇದು ಕೂದಲಿಗೆ ರಕ್ಷಣೆ ನೀಡುತ್ತದೆ.
ಈಗ ನಿಮಗೆ ಗೊತ್ತಾಗಿರಬೇಕಲ್ವ. ನಮ್ಮ ಹಿರಿಯರು ಯಾಕೆ ಯಾವತ್ತೂ ತಲೆಗೆ ತೆಂಗಿನೆಣ್ಣೆ ಯಾಕೆ ಹಚ್ಚಿಕೊಳ್ಳುತ್ತಿದ್ದರು ಎಂಬುದರ ಹಿಂದಿನ ಸತ್ಯ.
(ಮಾಹಿತಿ ಕೃಪೆ Zee News ಕನ್ನಡ )
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ