WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Friday, December 24, 2021

ಪಾಪಿನಾಯಕನಹಳ್ಳಿ ವ್ಯಕ್ತಿ ಒಬ್ಬ ಕಾಣೆಯಾಗಿದ್ದಾರೆ

 

*ಕಾಣೆಯಾಗಿದ್ದಾರೆ*

*ಈ ಫೋಟೋದಲ್ಲಿರುವ ವ್ಯಕ್ತಿಯ ಹೆಸರು ಕುಂಬಾರ ಬಸವರಾಜ್ ಇವರು ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದವರು  ಮೂಲತಹ  ಅಂಗವಿಕಲರಾಗಿರುವ ಇವರಿಗೆ* *ಎರಡು ಕಾಲುಗಳು ನಡೆಯಲು ಬರುವುದಿಲ್ಲ. ಇವರು ದಿನಾಂಕ 20.12.2021 ರಂದು ಸೋಮವಾರ ಸಂಜೆ 5:00 ಗಂಟೆಗೆ ಹೊರಗಡೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೋದವರು ಇಲ್ಲಿಯವರೆಗೂ ಬಂದಿರುವುದಿಲ್ಲ* *ಇವರು ಬಳಸುತ್ತಿದ್ದ 3 ಗಾಲಿ ಮೋಟಾರ್ ವಾಹನವು ಹೊಸಪೇಟೆ ರೈಲ್ವೆ ಸ್ಟೇಷನ್ ಬಳಿ ಸಿಕ್ಕಿರುತ್ತದೆ ಆದರೆ ಇವರ ಸುಳಿವು ಮಾತ್ರ ಸಿಕ್ಕಿಲ್ಲ ಆದಕಾರಣ ಇವರ ಸುಳಿವು* *ಸಿಕ್ಕಲ್ಲಿ ದಯಮಾಡಿ ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ*

+919449789816🙏🙏🙏

ನಿಮ್ಮ ಮನೆಯಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿದ್ದಾರಾ? ಹಾಗಾದ್ರೆ, ಮಿಸ್‌ ಮಾಡ್ದೇ ಈ ಸ್ಟೋರಿ ಓದಿ..!

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಅಂಚೆ ಇಲಾಖೆಯು ವಿವಿಧ ರೀತಿಯ ಯೋಜನೆ(Post office scheme‌)ಗಳನ್ನ ನಡೆಸುತ್ತಿದೆ. ಅದ್ರಲ್ಲಿ ನಿಮ್ಮ ಅಗತ್ಯತೆಗಳು ಮತ್ತು ಹಣಕಾಸಿನ ಗುರಿಗಳಿಗೆ ಸೂಕ್ತವಾದ ಯೋಜನೆಯನ್ನ ಆರಿಸಿ. ನಂತ್ರ ನೀವು ಯೋಜನೆಗೆ ಸೇರುವುದರಿಂದ ಪ್ರಯೋಜನ ಪಡೆಯುತ್ತೀರಿ.

ಹಾಗಾಗಿ ಯೋಜನೆಯ ಆಯ್ಕೆಯಲ್ಲಿ ನೀವು ಎಚ್ಚರಿಕೆ ವಹಿಸಬೇಕು. ಎರಡು ಬಾರಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಅಂದ್ಹಾಗೆ, ಅಂಚೆ ಕಛೇರಿಯ ಸಣ್ಣ ಉಳಿತಾಯ ಯೋಜನೆಗಳಲ್ಲಿ ಮಾಸಿಕ ಆದಾಯ ಯೋಜನೆ(Monthly Income Plan) ಕೂಡ ಒಂದು. ಇದ್ರಲ್ಲಿ ಸೇರುವುದರಿಂದ ಪ್ರತಿ ತಿಂಗಳು(Every month) ಕೈಗೆ ಹಣ ಬರುತ್ತೆ. ಮನೆಯಲ್ಲಿ ಹತ್ತು ವರ್ಷಕ್ಕಿಂತ ಮೇಲ್ಪಟ್ಟ(Over ten years of age) ಮಕ್ಕಳಿರುವವರು ಈ ಯೋಜನೆಯಡಿ ಹೂಡಿಕೆ ಮಾಡಬೋದು.

ಈ ಯೋಜನೆಯಡಿ ನಿಮ್ಮ ಮಗುವಿನ ಹೆಸರಿನಲ್ಲಿ ಖಾತೆ ತೆರೆದ್ರೆ, ಪ್ರತಿ ತಿಂಗಳು ಹಣ ಬರುತ್ತದೆ. ಅವರ ಬೋಧನಾ ಶುಲ್ಕ ಸೇರಿದಂತೆ ಇತರ ವೆಚ್ಚಗಳನ್ನ ಸರಿದೂಗಿಸಲು ಇವು ಸಾಕಾಗ್ಬೋದು. ಹಾಗಾದ್ರೆ, ನಾವು ಈಗ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯನ್ನ ತಿಳಿದುಕೊಳ್ಳೋಣಾ ಬನ್ನಿ.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಗೆ ಸೇರುವವರು ಒಂದು ವಿಷಯವನ್ನ ಗಮನದಲ್ಲಿಟ್ಟುಕೊಳ್ಳಬೇಕು. ನೀವು ಈ ಯೋಜನೆಗೆ ಸೇರಿದ್ರೆ, ನೀವು ಒಮ್ಮೆಗೆ ನಿರ್ದಿಷ್ಟ ಮೊತ್ತವನ್ನ ಹೂಡಿಕೆ ಮಾಡಬೇಕಾಗುತ್ತದೆ. ನಂತ್ರ ಪ್ರತಿ ತಿಂಗಳು ಹಣ ಬರುತ್ತದೆ. ಇದ್ರಲ್ಲಿ ಏಕ ಖಾತೆ ಮತ್ತು ಜಂಟಿ ಖಾತೆ ಎಂಬ ಎರಡು ವಿಧದ ಆಯ್ಕೆಗಳಿವೆ. ನೀವು ಇಷ್ಟಪಡುವ ಆಯ್ಕೆಯನ್ನ ಆಯ್ಕೆ ಮಾಡಬಹುದು.

ನೀವು ಒಂದೇ ಖಾತೆಯನ್ನ ಆಯ್ಕೆ ಮಾಡಿದ್ರೆ, ನೀವು 4.5 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಅದೇ ಜಂಟಿ ಖಾತೆಯಲ್ಲಿ 9 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ನೀವು ಯಾವ ಆಯ್ಕೆಯನ್ನ ಆರಿಸಿದ್ದೀರಿ ಎಂಬುದರ ಮೇಲೆ ಠೇವಣಿ ಮಾಡಬೇಕಾಗುತ್ತದೆ. ಕನಿಷ್ಠ ರೂ.1000 ಠೇವಣಿ ಇಡಬಹುದು. ಹತ್ತು ವರ್ಷ ಮೇಲ್ಪಟ್ಟವರು ಈ ಯೋಜನೆಗೆ ಸೇರಬಹುದು. ಇದರರ್ಥ ನೀವು ನಿಮ್ಮ ಮಗುವಿನ ಹೆಸರಿನಲ್ಲಿ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಖಾತೆಯನ್ನ ತೆರೆಯಬಹುದು.

ಈ ಯೋಜನೆಯು ಪ್ರಸ್ತುತ 6.6 ಶೇಕಡಾ ಬಡ್ಡಿಯನ್ನ ಪಡೆಯುತ್ತದೆ. ಕೇಂದ್ರ ಸರ್ಕಾರವು ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿದರವನ್ನ ಪರಿಶೀಲಿಸುತ್ತದೆ. ಅಂದ್ರೆ, ಬಡ್ಡಿದರಗಳು ಹೆಚ್ಚಾಗಬಹುದು. ಇಲ್ಲದಿದ್ದರೆ ಕಡಿಮೆಯಾಗಬಹುದು. ಕೆಲವು ಸಂದರ್ಭಗಳಲ್ಲಿ ಇದು ನಿರಂತರವಾಗಿ ಹಾಗೆಯೇ ಮುಂದುವರೆಯಬಹುದು. ಈ ಯೋಜನೆಯ ಮುಕ್ತಾಯ ಅವಧಿಯು ಐದು ವರ್ಷಗಳು. ಇನ್ನು ವಿಳಾಸದ ಪುರಾವೆ, ಗುರುತಿನ ಪುರಾವೆ, ಎರಡು ಫೋಟೋಗಳನ್ನ ತೆಗೆದುಕೊಂಡು ಯೋಜನೆಗೆ ಸೇರಿಕೊಳ್ಳಬೋದು.

ಉದಾಹರಣೆಗೆ, ನೀವು ನಿಮ್ಮ ಮಗುವಿನ ಹೆಸರಿನಲ್ಲಿ 2 ಲಕ್ಷ ರೂಪಾಯಿಗಳನ್ನ ಠೇವಣಿ ಮಾಡಿ ಮತ್ತು ಮಾಸಿಕ ಆದಾಯ ಯೋಜನೆಯಡಿ ಖಾತೆಯನ್ನ ತೆರೆದ್ರೆ, ನೀವು ಪ್ರತಿ ತಿಂಗಳು 1100 ರೂ. ವರ್ಷಕ್ಕೆ 13,200. ಐದು ವರ್ಷದ ಅವಧಿಯ ಪ್ರಕಾರ 66 ಸಾವಿರ ರೂ. ಪಡೆಯಬೋದು. ಇನ್ನು ನೀವು ಅದೇ ಜಂಟಿ ಖಾತೆಯನ್ನ ತೆರೆದು 3.5 ಲಕ್ಷ ರೂ.ಗಳನ್ನ ಠೇವಣಿ ಮಾಡಿದ್ರೆ, ನಿಮಗೆ ತಿಂಗಳಿಗೆ 1925 ರೂ. ಬರುತ್ತೆ. 4.5 ಲಕ್ಷ ಠೇವಣಿ ಇಟ್ಟರೆ ತಿಂಗಳಿಗೆ 2,500 ರೂ. ಬರುತ್ತೆ. ಇನ್ನು ಮುಕ್ತಾಯದ ನಂತರ ನಿಮ್ಮ ಹಣವು ನಿಮಗೆ ಬರುತ್ತದೆ. ಇನ್ನು ಯೋಜನೆಗೆ ಸೇರುವ ವ್ಯಕ್ತಿ ಮೃತಪಟ್ಟರೆ, ಆ ಹಣವನ್ನ ನಾಮಿನಿಗೆ ನೀಡಲಾಗುತ್ತದೆ.

(ಮಾಹಿತಿ ಕೃಪೆ Kannada News Now)


 

Thursday, December 23, 2021

PM Kisan Yojana : ರೈತ ಸಮುದಾಯಕ್ಕೆ ಸಿಹಿಸುದ್ದಿ : ಜನವರಿ 1 ಕ್ಕೆ ಪಿಎಂ ಕಿಸಾನ್ ಯೋಜನೆಯ 10 ನೇ ಕಂತು ಬಿಡುಗಡೆ


ನವದೆಹಲಿ : ಕೇಂದ್ರ ಸರ್ಕಾರವು ಹೊಸ ವರ್ಷಕ್ಕೆ ರೈತ ಸಮುದಾಯಕ್ಕೆ ಸಿಹಿಸುದ್ದಿ ನೀಡಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (Pradhan Mantri Kisan Samman Nidhi) 10 ನೇ 2022 ರ ಜನವರಿ 1 ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೂ 2,000 ಹಣವನ್ನು ಜನವರಿ 1 ರಂದು ರೈತರ ಖಾತೆಗೆ ವರ್ಗಾಯಿಸಲಾಗುವುದು ಎಂದು ವರದಿಯಾಗಿದ್ದು, 2022 ರ ಜನವರಿ 1 ರಂದು PM ಕಿಸಾನ್ ಯೋಜನೆಯಡಿಯಲ್ಲಿ 2,000 ರೂಪಾಯಿಗಳನ್ನು ಅವರ ಖಾತೆಗಳಿಗೆ ವರ್ಗಾಯಿಸಲಾಗುವುದು ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ತೋಮರ್ ಅವರು ಹೇಳಿದ್ದಾರೆ ಎನ್ನಲಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನವರಿ 1, 2022 ರಂದು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಮುಂದಿನ ಕಂತನ್ನು ಬಿಡುಗಡೆ ಮಾಡುತ್ತಾರೆ ಮತ್ತು ರೈತ ಉತ್ಪಾದಕ ಸಂಸ್ಥೆಗಳಿಗೆ ಇಕ್ವಿಟಿ ಅನುದಾನವನ್ನು ಬಿಡುಗಡೆ ಮಾಡುತ್ತಾರೆ ಎಂದು ಹೇಳಲಾಗಿದೆ.
ಕಳೆದ ವರ್ಷ, ಡಿಸೆಂಬರ್ 25 ರಂದು, ಪ್ರಧಾನಿ ಮೋದಿ ಅವರು 7 ನೇ ಕಂತು PM-KISAN ಅನ್ನು ಬಿಡುಗಡೆ ಮಾಡಿದ್ದರು . ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ ಡಿಸೆಂಬರ್ 25 ರಂದು ವೀಡಿಯೊ ಕಾನ್ಫರೆನ್ಸ್ ಮೂಲಕ 9 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ 18,000 ಕೋಟಿ ರೂಪಾಯಿಗಳನ್ನು ಪ್ರಧಾನಿ ಮೋದಿ ವರ್ಗಾಯಿಸಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು 2019 ರಲ್ಲಿ ಪ್ರಧಾನಿ ಮೋದಿಯವರು ಪ್ರಾರಂಭಿಸಿದರು. ಕೆಲವು ವಿನಾಯಿತಿಗಳಿಗೆ ಒಳಪಟ್ಟು ಕೃಷಿಯೋಗ್ಯ ಭೂಮಿ ಇರುವ ದೇಶಾದ್ಯಂತ ಎಲ್ಲಾ ಭೂಮಾಲೀಕ ರೈತ ಕುಟುಂಬಗಳಿಗೆ ಆದಾಯ ಬೆಂಬಲವನ್ನು ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.
ನೇರ ಲಿಂಕ್ ಬಳಸಿ ಪಿಎಂ ಕಿಸಾನ್ ವೆಬ್ ಸೈಟ್ ಮೂಲಕ ನಿಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ ಎಂಬುದು ಇಲ್ಲಿದೆ
pmkisan.gov.in ವೆಬ್ ಸೈಟ್ ಗೆ ಲಾಗ್ ಆನ್ ಮಾಡಿ
ಬಲಭಾಗದಲ್ಲಿ, ನೀವು ರೈತರ ಕಾರ್ನರ್ ನೋಡುತ್ತೀರಿ
ರೈತರ ಕಾರ್ನರ್ ಮೇಲೆ
ಈಗ ಆಯ್ಕೆಯಿಂದ, ಫಲಾನುಭವಿ ಸ್ಥಿತಿ
ನಿಮ್ಮ ಸ್ಥಿತಿಯನ್ನು ನೋಡಲು ನೀವು ನಿಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯಂತಹ ಕೆಲವು ವಿವರಗಳನ್ನು ಒದಗಿಸಬೇಕಾಗುತ್ತದೆ
ನೀವು ಮೇಲಿನ ಕಾರ್ಯವಿಧಾನವನ್ನು ಪೂರ್ಣಗೊಳಿಸಿದ ನಂತರ, ಪಟ್ಟಿಯಲ್ಲಿ ದ್ದರೆ ನಿಮ್ಮ ಹೆಸರನ್ನು ನೀವು ಕಂಡುಕೊಳ್ಳುತ್ತೀರಿ

(ಮಾಹಿತಿ ಕೃಪೆ kannadanewsnow)


 

Good News : ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ಇಂದು ಬೆಳಗಾವಿಯಲ್ಲಿ 'ಉದ್ಯೋಗ ಮೇಳ' ಆಯೋಜನೆ


ಬೆಳಗಾವಿ : ನಿರುದ್ಯೋಗಿ ಯುವಕ ಯುವತಿಯರಿಗೆ ಬೆಳಗಾವಿಯ ಉದ್ಯಮ್ ಬಾಗ್‍ನಲ್ಲಿ ಇರುವ ಗೋಗಟೆ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಎಂಜಿನಿಯರಿಂಗ್, ಡಿಪ್ಲೊಮಾ ಮತ್ತು ಐಟಿಐ ಪದವೀಧರರಿಗೆ ಡಿ.23ರ ಇಂದು ಉದ್ಯೋಗ ಮೇಳ ನಡೆಯಲಿದೆ . ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಎಂಜಿನಿಯರಿಂಗ್, ಡಿಪ್ಲೊಮಾ ಮತ್ತು ಐಟಿಐ ಪದವೀಧರರಿಗೆ ಡಿ.23ರಂದು ಉದ್ಯೋಗ ಮೇಳ ನಡೆಯಲಿದ್ದು, ಉದ್ಯೋಗ ಮೇಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ.
5,600 ಯುವಕರು ನೋಂದಣಿ ಮಾಡಿಕೊಂಡಿದ್ದಾರೆ. 78 ಕಂಪನಿ ಈ ಉದ್ಯೋಗ ಮೇಳದಲ್ಲಿ ಭಾಗಿಯಾಗಲಿವೆ ಎಂದು ಐಟಿ-ಬಿಟಿ ಖಾತೆ ಸಚಿವ ಡಾ.ಅಶ್ವತ್ಥ್​ ನಾರಾಯಣ ಮಾಹಿತಿ ನೀಡಿದ್ದಾರೆ,. ಟಿಸಿಎಸ್, ವಿಪ್ರೋ, ಎಚ್ ಸಿಎಲ್, ಬೈಜಸ್ ಮತ್ತು ಟೊಯೋಟಾ ಸೇರಿದಂತೆ ಪ್ರಮುಖ ಕಂಪನಿಗಳು ಬೆಳಗಾವಿ ಜಿಲ್ಲೆಯ ಕಾಲೇಜಿನಲ್ಲಿ ಉದ್ಯೋಗ ಮೇಳದಲ್ಲಿ ಭಾಗಿಯಾಗಲಿದೆ. ಈ ಉದ್ಯೋಗ ಮೇಳವು ಡಿಸೆಂಬರ್ 23 ರಂದು ಕಾಲೇಜಿನಲ್ಲಿ ನಡೆಯಲಿದೆ. ಬಿಇ, ಬಿಟೆಕ್, ಎಂ ಟೆಕ್, ಡಿಪ್ಲೊಮಾ ಮತ್ತು ಐಟಿಐ ಪೂರ್ಣಗೊಳಿಸಿದ ಅಭ್ಯರ್ಥಿಗಳು ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.ಅವರು ಆಧಾರ್ ಕಾರ್ಡ್, ಶೈಕ್ಷಣಿಕ ಪ್ರಮಾಣಪತ್ರ, ಮಾರ್ಕ್ಸ್ ಕಾರ್ಡ್ (ಮೂಲ ಮತ್ತು ಫೋಟೋಕಾಪಿ ಎರಡೂ), ಎರಡು ಪಾಸ್ ಪೋರ್ಟ್ ಗಾತ್ರದ ಛಾಯಾಚಿತ್ರಗಳು ಜೊತೆಗೆ ಕನಿಷ್ಠ ಐದು ರೆಸ್ಯೂಮ್ ಗಳನ್ನು ಹೊಂದಿರಬೇಕು. ಯಾವುದೇ ಪ್ರವೇಶ ಶುಲ್ಕಇರುವುದಿಲ್ಲ. ಎಚ್ ಪಿ, ನಾರಾಯಣ ಗ್ರೂಪ್, ಯುಟಿಎಲ್, ಓಲಾ, ಟಾಟಾ ಕಮ್ಯುನಿಕೇಷನ್ಸ್, ಟಾಟಾ ಬಿಸಿನೆಸ್ ಹಬ್ ಲಿಮಿಟೆಡ್, ಜಾಸ್ಮಿನ್ ಇನ್ಫೋಟೆಕ್, ಮೇಳದಲ್ಲಿ ಭಾಗವಹಿಸಲಿದ್ದು, . ಡಿಸೆಂಬರ್ 23 ರಂದು ಆಯ್ಕೆಯಾದವರಿಗೆ, ಎರಡನೇ ಸುತ್ತಿನ ಸಂದರ್ಶನಗಳನ್ನು ಡಿಸೆಂಬರ್ 24 ರಂದು ನಡೆಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

(ಮಾಹಿತಿ ಕೃಪೆ kannadanewsnow)


 

Sunday, December 19, 2021

ಉಚಿತ ಹೊಲಿಗೆ ಯಂತ್ರ ವಿತರಣೆ'ಗಾಗಿ ಅರ್ಜಿ ಆಹ್ವಾನ

ಬಾಗಲಕೋಟೆ: ಪ್ರಸಕ್ತ ಸಾಲಿಗೆ ಜಿಲ್ಲಾ ಉದ್ಯಮ ಕೇಂದ್ರ ಹಾಗೂ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಉಪಕರಣಗಳ ಯೋಜನೆಗಳಡಿ ಗ್ರಾಮೀಣ ಭಾಗದ ಅರ್ಹ ಕುಶಲಕರ್ಮಿಗಳಿಗೆ ಪುರುಷ, ಮಹಿಳೆಯರಿಗೆ ಹೊಲಿಗೆ ಯಂತ್ರ ( tailoring machine ) ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವವರು ಈ ಹಿಂದೆ ಹೊಲಿಗೆ ಯಂತ್ರ ಪಡೆದ ಕುಟುಂಬಸ್ಥರು ಪುನಃ ಅರ್ಜಿ ಸಲ್ಲಿಸುವಂತಿಲ್ಲ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಇತರಿಗೆ 18 ರಿಂದ 35 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ 38 ವರ್ಷ ಮೀರಿರದವರು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿಯನ್ನು ಉಪನಿರ್ದೇಶಕರ ಕಚೇರಿ, ಜಿಲ್ಲಾ ಪಂಚಾಯತ, ಕೈಗಾರಿಕಾ ವಿಭಾಗ ಕೊಠಡಿ ಸಂ.239, ಜಿಲ್ಲಾಡಳಿತ ಭವನ, ಬಾಗಲಕೋಟೆ ಇವರಿಂದ ಪಡೆದು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕಾ ವಿಸ್ತರಣಾಧಿಕಾರಿ ಬಾಗಲಕೋಟೆ, ಹುನಗುಂದ (8317437475), ಜಮಖಂಡಿ, ಬಾದಾಮಿ (7795045313) ಬೀಳಗಿ ಮತ್ತು ಮುಧೋಳ (9620721729) ಇವರನ್ನು ಸಂಪರ್ಕಿಸುವಂತೆ ತಿಳಿಸಿದೆ.

(ಮಾಹಿತಿ ಕೃಪೆ kannada news now)