WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Wednesday, July 29, 2020

ರಾಜಮೌಳಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಕೊರೊನಾ ಪಾಸಿಟಿವ್

ಜನಪ್ರಿಯ ನಿರ್ದೇಶಕ ರಾಜಮೌಳಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಕೊರೊನಾ ಸೋಂಕು ತಗುಲಿದೆ. ಈ ಬಗ್ಗೆ ಸ್ವತಃ ರಾಜಮೌಳಿ ಅವರೇ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ನಾನು ಮತ್ತು ನಮ್ಮ ಕುಟುಂಬದವರಿಗೆ ಕೆಲವು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ನಂತರದ ದಿನಗಳಲ್ಲಿ ಜ್ವರ ಅದಾಗಿಯೇ ಕಡಿಮೆ ಆಗಿದೆ. ಆದರೂ ಕೂಡ ನಾವು ಕೊರೊನಾ ತಪಾಸಣೆಗೆ ಒಳಗಾದ್ವಿ. ಅದರ ವರದಿ ಇಂದು ಬಂದಿದ್ದು, ಪಾಸಿಟಿವ್ ಇದೆ. ನಾವು ಈಗ ವೈದ್ಯರ ಸಲಹೆಯಂತೆ ಹೋಂ ಕ್ವಾರಂಟೀನ್​​ನಲ್ಲಿ ಇದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
(ಮಾಹಿತಿ ಕೃಪೆ news first love)

ESIC ನೀಡುವ ಗರ್ಭಿಣಿಯರ ಹಣಕಾಸು ಅನುದಾನ 7,500 ರುಪಾಯಿಗೆ ಏರಿಕೆ

ಒಂದು ವೇಳೆ ಇಎಸ್ ಐಸಿಗೆ ಸೇರಿದ ಆಸ್ಪತ್ರೆಗಳಲ್ಲಿ ಹೆರಿಗೆಗೆ ಅವಕಾಶ ಸಿಗದಿದ್ದಲ್ಲಿ ಕಾರ್ಮಿಕರ ರಾಜ್ಯ ವಿಮಾ ನಿಗಮವು (ESIC) ಗರ್ಭಿಣಿಯರಿಗೆ ಈಗಿರುವ ಹಣಕಾಸು ಅನುದಾನ 2500 ರುಪಾಯಿಯನ್ನು 7500 ರುಪಾಯಿಗೆ ಹೆಚ್ಚಿಸಲು ನಿರ್ಧಾರ ಮಾಡಿದೆ. ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದಿಂದ ಹೊರಡಿಸಿರುವ ಅಧಿಕೃತ ಗೆಜೆಟ್ ನಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.
ಸಲಹೆ ಅಥವಾ ಆಕ್ಷೇಪಗಳನ್ನು ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ.
ಇಎಸ್ ಐಸಿ ಮಂಡಳಿಯು ಮೊತ್ತವನ್ನು ಹೆಚ್ಚಿಸಲು ಅನುಮತಿ ನೀಡಿದೆ. ಈ ವರ್ಷದ ಫೆಬ್ರವರಿಯಲ್ಲಿ ನಡೆದ ಚರ್ಚೆ ವೇಳೆಯೇ ಇದಕ್ಕೆ ಸಮ್ಮತಿ ಸಿಕ್ಕಿದೆ. ಈಗ ಅಧಿಸೂಚನೆ ಕೂಡ ಹೊರಬಂದಿದ್ದು, ಇನ್ನು ಯಾವುದೇ ಆಕ್ಷೇಪಣೆ ಬಾರದಿದ್ದಲ್ಲಿ ನಿಯಮವನ್ನು ಜಾರಿಗೆ ತರಲಾಗುತ್ತದೆ.

ರಕ್ತಹೀನತೆ ಸಮಸ್ಯೆ ಗೆಲ್ಲೋಕೆ ಇಲ್ಲಿದೆ ರಾಮಬಾಣ

ಬೆಂಗಳೂರು : ನಿಮಗೆ ರಕ್ತಹೀನತೆಯ ಸಮಸ್ಯೆಯೇ? ಚಿಂತೆ ಬಿಟ್ಟು ಬಿಡಿ. ಇಡೀ ಜಗತ್ತಿನಲ್ಲಿ ಎಲ್ಲದಕ್ಕೂ ಪರಿಹಾರವಿದೆ. ಹಾಗೇ ರಕ್ತ ಹೀನತೆಗೆ ಒಂದಿಷ್ಟು ಸೇವಿಸುವ ಆಹಾರದಲ್ಲಿ ಮಾರ್ಪಾಡು ಮಾಡಿಕೊಂಡರೆ ಸಾಕು ನೀವು ಸಮಸ್ಯೆ ಗೆದ್ದು ಬೀಗುತ್ತೀರಾ.
ಬೀಟ್​ರೂಟ್, ದಾಳಿಂಬೆ, ಕ್ಯಾರೆಟ್, ಟೊಮ್ಯಾಟ,
ಕಿತ್ತಳೆ ಹಾಗೂ ಬೆಲ್ಲದಲ್ಲಿ ಕಂಡು ಬರುವ ಕಬ್ಬಿಣಾಂಶ, ಫೋಲಿಕ್ ಆಯಸಿಡ್, ಫೈಬರ್ ಮತ್ತು ಪೊಟಾಶಿಯಂ ಅಂಶಗಳು ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತದೆ. ಇದನ್ನು ನೀವು ಜ್ಯೂಸ್ ಆಗಿ ಕೂಡ ಕುಡಿಯಬಹುದು.
ಬೀಟ್​ರೂಟ್: ಬೀಟ್​ ರೂಟ್​ ಎನ್ನುವುದು ರಕ್ತಹೀನತೆಗೆ ಪರಿಣಾಮಕಾರಿ ಆಹಾರ. ಸಾಮಾನ್ಯ ರಕ್ತ ಕೊರತೆ ಉಂಟಾದರೆ ವೈದ್ಯರು ಕೂಡ ಮೊದಲು ಬೀಟ್ ರೂಟ್​ ಸೇವನೆಗೆ ಸಲಹೆ ನೀಡುತ್ತಾರೆ. ಇದರಲ್ಲಿ ಕಂಡು ಬರುವ ಕಬ್ಬಿಣಾಂಶ, ಫೋಲಿಕ್ ಆಯಸಿಡ್, ಫೈಬರ್ ಮತ್ತು ಪೊಟಾಶಿಯಂ ಅಂಶಗಳು ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತದೆ.
ಇದನ್ನು ನೀವು ಜ್ಯೂಸ್ ಆಗಿ ಕೂಡ ಕುಡಿಯಬಹುದು. ವಾರಕ್ಕೆ ಎರಡು ಬಾರಿಯಾದರೂ ಬೀಟ್​ ರೂಟ್​ ಸೇವನೆಯಿಂದ ರಕ್ತ ಮತ್ತು ಹಿಮೋಗ್ಲೋಬಿನ್ ಸಮಸ್ಯೆಯ ಅಪಾಯವನ್ನು ಕಡಿಮೆ ಮಾಡಬಹುದು.
ದಾಳಿಂಬೆ: ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಲು, ದಾಳಿಂಬೆ ಸೇವಿಸಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಇದಲ್ಲದೆ, ವೈಜ್ಞಾನಿಕ ಸಂಶೋಧನೆಯ ಪ್ರಕಾರ, ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ದಾಳಿಂಬೆ ಸೇವನೆಯು ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಪ್ರತಿನಿತ್ಯ ದಾಳಿಂಬೆ ಸೇವನೆ ಅಥವಾ ಜ್ಯೂಸ್ ಮಾಡಿ ಕುಡಿಯುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಬಹುದು.
ಕ್ಯಾರೆಟ್: ಸಾಮಾನ್ಯವಾಗಿ ಕ್ಯಾರೆಟ್ ಅನ್ನು ಸಲಾಡ್ ಆಗಿ ಸಹ ಸೇವಿಸಲಾಗುತ್ತದೆ. ಇನ್ನು ಕೆಲವರು ಕ್ಯಾರೆಟ್ ಅನ್ನು ಜ್ಯೂಸ್ ಮಾಡಿ ಕುಡಿಯುತ್ತಾರೆ. ಹೇಗೆ ಸೇವಿಸಿದರೂ ಇದರಿಂದ ನಿಮ್ಮ ರಕ್ತದಲ್ಲಿನ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಬಹುದು. ಏಕೆಂದರೆ ಕ್ಯಾರೆಟ್​ನಲ್ಲಿರುವ ಬೀಟಾ ಕ್ಯಾರೋಟಿನ್ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸತ್ತದೆ. ಇದರ ಹೊರತಾಗಿ ಗರ್ಭಿಣಿ ಮಹಿಳೆಯರು ಕ್ಯಾರೆಟ್ ಅನ್ನು ಅತಿಯಾಗಿ ಸೇವಿಸಬಾರದು ಎಂಬುದು ನೆನಪಿರಲಿ.
ಟೊಮ್ಯಾಟೊ: ಸಾಮಾನ್ಯವಾಗಿ ಪದಾರ್ಥಗಳಿಗೆ ಮಾತ್ರ ಸೀಮಿತವಾಗಿರುವ ಟೊಮ್ಯಾಟೊದಿಂದ ಕೂಡ ಹಿಮೋಗ್ಲೋಬಿನ್ ಹೆಚ್ಚಿಸಬಹುದು. ಇದರಲ್ಲಿ ಉತ್ಕರ್ಷಣ ನಿರೋಧಕಗಳು ರಕ್ತದಲ್ಲಿನ ಹಿಮೋಗ್ಲೋಬಿನ್ ಹೆಚ್ಚಿಸಲು ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಟೊಮ್ಯಾಟೊ ಸೇವನೆಯಿಂದಾಗಿ, ಆರೋಗ್ಯಕ್ಕೆ ಬೇಕಾದ ಸಾಕಷ್ಟು ಪ್ರಮಾಣದ ವಿಟಮಿನ್-ಸಿ ಅನ್ನು ಸಹ ಪಡೆಯಬಹುದು. ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಕೂಡ ಟೊಮ್ಯಾಟೊ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಇದನ್ನು ನೀವು ಜ್ಯೂಸ್ ಅಥವಾ ಸೂಪ್ ಆಗಿ ಕುಡಿಯಬಹುದು.
ಕಿತ್ತಳೆ: ವಿಟಮಿನ್-ಸಿ ಆಹಾರದ ಪ್ರಮುಖ ಮೂಲವೆಂದರೆ ಕಿತ್ತಳೆ. ಇದನ್ನು ಜ್ಯೂಸ್​ ಅಥವಾ ಹಾಗೆಯೇ ತಿನ್ನಬಹುದು. ವೈಜ್ಞಾನಿಕ ಅಧ್ಯಯನದ ಪ್ರಕಾರ, ಕಿತ್ತಳೆ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವ ಜನರಲ್ಲಿ ಹಿಮೋಗ್ಲೋಬಿನ್ ಸಮಸ್ಯೆಯ ಅಪಾಯ ಬಹಳ ಕಡಿಮೆ. ಹೀಗಾಗಿ ಹಿಮೋಗ್ಲೋಬಿನ್ ಸಮಸ್ಯೆಗಳನ್ನು ದೂರ ಮಾಡಲು ಪ್ರತಿನಿತ್ಯ ಕಿತ್ತಲೆ ಅಥವಾ ಆರೆಂಜ್ ಸೇವಿಸಿ.
ಬೆಲ್ಲ: ಬೆಲ್ಲವನ್ನು ಐರನ್ ಅಂಶದ ಪ್ರಮುಖ ಮೂಲವೆಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಸಿಹಿ ಪದಾರ್ಥಗಳ ಹೊರತಾಗಿ ಮನೆಮದ್ದಾಗಿ ಬೆಲ್ಲವನ್ನು ಉಪಯೋಗಿಸಲಾಗುತ್ತದೆ. ಗಂಟಲು ನೋವು ಮತ್ತು ಶೀತ ಇತ್ಯಾದಿ ಸಮಸ್ಯೆಗಳದಾಗ ಶುಂಠಿಯೊಂದಿಗೆ ಬೆಲ್ಲವನ್ನು ಬಳಸಿ ಪರಿಹಾರ ಕಂಡುಕೊಳ್ಳಲಾಗುತ್ತದೆ. ಅಂದರೆ ಬೆಲ್ಲದಲ್ಲಿ ಆರೋಗ್ಯಕಾರಿ ಅಂಶಗಳಿರುವುದು ದೃಢ. ಹೀಗೆ ನಿಯಮಿತವಾಗಿ ಬೆಲ್ಲವನ್ನು ಸೇವಿಸುವುದರಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಹಾಗೆಯೇ ಇದರಿಂದ ಹಿಮೋಗ್ಲೋಬಿನ್ ಸಮಸ್ಯೆಯನ್ನು ನಿವಾರಣೆಯಾಗುತ್ತದೆ ಎಂದು ತಿಳಿಸಲಾಗಿದೆ.
(ಮಾಹಿತಿ ಕೃಪೆ ಸುದ್ದಿಒನ್)

Tuesday, July 28, 2020

Qualcomm Quick Charge 5: ಕೇವಲ 15 ನಿಮಿಷಗಳಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ ಬ್ಯಾಟರಿಯನ್ನು ಫುಲ್ ಚಾರ್ಜ್ ಮಾಡಿ

 
ಅಮೆರಿಕದ ಚಿಪ್ಸೆಟ್ ತಯಾರಕ Qualcomm ತಮ್ಮ Quick Charge 5 ಅನ್ನು ಬಿಡುಗಡೆ ಮಾಡಿದೆ. ಕೇವಲ ಐದು ನಿಮಿಷಗಳಲ್ಲಿ ಸ್ಮಾರ್ಟ್ಫೋನ್ನ ಬ್ಯಾಟರಿ 0-50% ಪ್ರತಿಶತದಷ್ಟು ಚಾರ್ಜ್ ಆಗುತ್ತದೆ ಎಂದು ಕ್ವಾಲ್ಕಾಮ್ ಕ್ವಿಕ್ ಚಾರ್ಜ್ 5 ಹೇಳಿಕೊಂಡಿದೆ. 2017 ರಲ್ಲಿ ಪ್ರಾರಂಭವಾದ ಕ್ವಿಕ್ ಚಾರ್ಜ್ 5 ಕ್ವಿಕ್ ಚಾರ್ಜ್ 4 ಪ್ಲಸ್ನ ನವೀಕರಿಸಿದ ಆವೃತ್ತಿಯಾಗಿದೆ.
ಕ್ವಾಲ್ಕಾಮ್ನ ವೇಗದ ಚಾರ್ಜಿಂಗ್ ತಂತ್ರಜ್ಞಾನವು ಈ ವೇಗದ ಚಾರ್ಜಿಂಗ್ ತಂತ್ರಜ್ಞಾನವು ಶೇಕಡಾ 10 ರಷ್ಟು ತಂಪಾಗಿರುತ್ತದೆ. ಹಿಂದಿನ ಆವೃತ್ತಿಗೆ ಹೋಲಿಸಿದರೆ ನಾಲ್ಕು ಪಟ್ಟು ವೇಗವಾಗಿರುತ್ತದೆ ಮತ್ತು ಕಾರ್ಯಕ್ಷಮತೆಯ ದೃಷ್ಟಿಯಿಂದ 70% ಪ್ರತಿಶತ ಮುಂದಿದೆ ಎಂದು ಹೇಳುತ್ತದೆ. ಇದು 2 ಎಸ್ ಬ್ಯಾಟರಿ ಪ್ಯಾಕ್ಗಳನ್ನು ಬೆಂಬಲಿಸುತ್ತದೆ. ಇದಲ್ಲದೆ ಇದನ್ನು ಯುಎಸ್ಬಿ-ಪಿಡಿ ಮತ್ತು ಯುಎಸ್ಬಿ ಟೈಪ್-ಸಿ ಚಾರ್ಜಿಂಗ್ಗೆ ಹೊಂದುವಂತೆ ಮಾಡಲಾಗಿದೆ.
ಕ್ವಿಕ್ ಚಾರ್ಜ್ 5 ಪ್ರಸ್ತುತ ಪರೀಕ್ಷಾ ಹಂತದಲ್ಲಿದೆ ಮತ್ತು ಈ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರುವ ಮೊದಲ ಸಾಧನವು 2020 ರ ಮೂರನೇ ತ್ರೈಮಾಸಿಕದಲ್ಲಿ ಬರಲಿದೆ. ಕ್ವಿಕ್ ಚಾರ್ಜ್ 5 ತಂತ್ರಜ್ಞಾನವು 100w ಗಿಂತ ಹೆಚ್ಚಿನ ಚಾರ್ಜಿಂಗ್ ಸಾಮರ್ಥ್ಯವನ್ನು ಬೆಂಬಲಿಸುತ್ತದೆ. ಕ್ವಿಕ್ ಚಾರ್ಜ್ 4 ಇದು 45 ವ್ಯಾಟ್ಗಳವರೆಗೆ ಬೆಂಬಲಿಸುತ್ತದೆ.
  ಕ್ವಿಕ್ ಚಾರ್ಜ್ 4 ಪ್ಲಸ್ಗೆ ಹೋಲಿಸಿದರೆ ಇದರ ಕೂಲಿಂಗ್ 4000 mAh ಬ್ಯಾಟರಿಯಲ್ಲಿ 10 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ. ಕ್ಲಿಕ್ ಚಾರ್ಜ್ 5 ಕೇವಲ 15 ನಿಮಿಷಗಳಲ್ಲಿ ಯಾವುದೇ ಬ್ಯಾಟರಿಯನ್ನು 0-100 ಪ್ರತಿಶತದಿಂದ ಚಾರ್ಜ್ ಮಾಡಬಹುದು ಎಂಬ ಹಕ್ಕನ್ನು ಹೊಂದಿದೆ.
ಈ ಹೊಸ ಚಾರ್ಜಿಂಗ್ ತಂತ್ರಜ್ಞಾನವು ಬ್ಯಾಟರಿ ಸೇವರ್ ಅನ್ನು ಹೊಂದಿದೆ ಮತ್ತು ಯಾವುದೇ ಅಡಾಪ್ಟರ್ ಅನ್ನು ಗುರುತಿಸಬಹುದು ಆದ್ದರಿಂದ ಇದು ಸ್ಮಾರ್ಟ್ ಗುರುತಿಸುವಿಕೆ. ನೀಡಿದ. ಇದು ವೋಲ್ಟೇಜ್ ಪ್ರಕಾರ ಡ್ಯುಯಲ್ ಮತ್ತು ಟ್ರಿಪಲ್ ಚಾರ್ಜ್ ತಂತ್ರಜ್ಞಾನವನ್ನು ಸಕ್ರಿಯಗೊಳಿಸುವ ಸಾಮರ್ಥ್ಯ ಹೊಂದಿದೆ. ಇದು ನಿಮ್ಮ ಬ್ಯಾಟರಿ ಅವಧಿಯನ್ನು ಹಿಡಿದಿಟ್ಟುಕೊಳ್ಳುತ್ತದೆ.
ತ್ವರಿತ ಚಾರ್ಜ್ 5 ಅನ್ನು ಸ್ನಾಪ್ಡ್ರಾಗನ್ 865 ಮತ್ತು 865+ ನಲ್ಲಿ ಬೆಂಬಲಿಸಲಾಗುತ್ತದೆ. ಇವುಗಳ ಜೊತೆಗೆ ಈ ಚಾರ್ಜಿಂಗ್ ತಂತ್ರಜ್ಞಾನಕ್ಕೆ ಸ್ನಾಪ್ಡ್ರಾಗನ್ 700 ಸರಣಿಯು ಸಹ ಬೆಂಬಲವನ್ನು ಹೊಂದಿರುತ್ತದೆ ಎಂದು is ಹಿಸಲಾಗಿದೆ. ಕ್ವಿಕ್ ಚಾರ್ಜ್ 5 ಇತ್ತೀಚೆಗೆ ಬಿಡುಗಡೆಯಾದ ಒಪ್ಪೋ 125 ವಾ ಫ್ಲ್ಯಾಷ್ ಲಾಂಚ್ ತಂತ್ರಜ್ಞಾನದೊಂದಿಗೆ ಸ್ಪರ್ಧಿಸಲಿದ್ದು ಇದು ಕೇವಲ 20 ನಿಮಿಷಗಳಲ್ಲಿ 4000 mAh ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡುವ ಸಾಮರ್ಥ್ಯ ಹೊಂದಿದೆ.
(ಮಾಹಿತಿ ಕೃಪೆ Digit)

ಈ ವರ್ಷಾಂತ್ಯಕ್ಕೆ 'ಮಾಡೆರ್ನಾ' ಕೊವಿಡ್ ಲಸಿಕೆ ಬಳಕೆಗೆ ಸಿದ್ಧ: ಅಮೆರಿಕ

ವಾಷಿಂಗ್ಟನ್, ಜುಲೈ 28: ಈ ವರ್ಷಾಂತ್ಯಕ್ಕೆ 'ಮಾಡೆರ್ನಾ' ಕೊವಿಡ್ ಲಸಿಕೆ ಬಳಕೆಗೆ ಸಿದ್ಧವಿರಲಿದೆ ಎಂದು ಅಮೆರಿಕ ಭರವಸೆ ನೀಡಿದೆ. ಈಗಾಗಲೇ 30 ಸಾವಿರ ಮಂದಿ ಮೇಲೆ ಮಾಡೆರ್ನಾ ಲಸಿಕೆ ಪ್ರಯೋಗ ನಡೆಸಿದ್ದು, ಈ ವರ್ಷಾಂತ್ಯಕ್ಕೆ ಲಸಿಕೆ ಲಭ್ಯವಿರಲಿದೆ ಎಂಬ ಮಾಹಿತಿಯನ್ನು ನೀಡಿದೆ.
ಅಮೆರಿಕದಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ಲಸಿಕೆಯನ್ನು ಹೆಚ್ಚು ಬೇಗ ಬಳಕೆ ಸಿದ್ಧಪಡಿಸುವುದು ಅನಿವಾರ್ಯವಾಗಿದೆ.
ಈ ಲಸಿಕೆಯು ಕೊರೊನಾ ಸೋಂಕನ್ನು ತಡೆಗಟ್ಟಲು ಕಾರಣವಾಗುತ್ತದೆ.
ಮಾಡೆರ್ನಾ ಲಸಿಕೆಗೆ ಅಮೆರಿಕ ಸರ್ಕಾರವು 1 ಬಿಲಿಯನ್ ಡಾಲರ್ ಹಣವನ್ನು ನೀಡಿದೆ. ಒಟ್ಟು 150ಕ್ಕೂ ಹೆಚ್ಚು ಲಸಿಕೆಗಳು ಅನೇಕ ಹಂತದಲ್ಲಿ ತಯಾರಾಗುತ್ತಿವೆ. ಸುಮಾರು 12 ಲಸಿಕೆಗಳು ಮಾನವನ ಮೇಲೆ ಪ್ರಯೋಗಗಳನ್ನು ಆರಂಭಿಸಿವೆ.

ಮಾಡೆರ್ನಾ ಚುಚ್ಚುಮದ್ದು
ಮಾಡೆರ್ನಾದ ಚುಚ್ಚುಮದ್ದು ವಿಶ್ವದಾದ್ಯಂತ ಕೊರೊನಾದಿಂದ ಘಾಸಿಗೊಳಗಾಗಿರುವ ಲಕ್ಷಾಂತರ ಜನರನ್ನು ಕೊರೊನಾ ಸೋಂಕಿನಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ತುರ್ತಾಗಿ ಒಂದು ರೋಗನಿರೋಧಕ ಚುಚ್ಚುಮದ್ದು ಬೇಕಾಗಿದೆ. ಈ ನಿಟ್ಟಿನಲ್ಲಿ ಮಾಡೆರ್ನಾದ ಚುಚ್ಚುಮದ್ದಿನ ಭರವಸೆದಾಯಕ ಫಲಿತಾಂಶ ಜನರಲ್ಲಿ ಆಶಾಭಾವನೆ ಮೂಡಿಸಿದೆ ಎಂದು ತಜ್ಞರು ಹೇಳಿದ್ದಾರೆ.
ಯಾವುದೇ ಅಡ್ಡಪರಿಣಾಮಗಳಿಲ್ಲ
ಈ ಚುಚ್ಚುಮದ್ದು ಪಡೆದ ಆರೋಗ್ಯ ಕಾರ್ಯರ್ತರ ಪೈಕಿ ಯಾರಲ್ಲೂ ಗಂಭೀರವಾದ ಅಡ್ಡಪರಿಣಾಮ ಕಂಡುಬಂದಿಲ್ಲ. ಅರ್ಧಕ್ಕರ್ಧ ಜನ ಸುಸ್ತು, ತಲೆನೋವು, ಚಳಿ, ಮಾಂಸಖಂಡಗಳಲ್ಲಿ ನೋವು ಅಥವಾ ಚುಚ್ಚುಮದ್ದು ನೀಡಿದ ಜಾಗದಲ್ಲಿ ನೋವಿನಂಥ ಸಣ್ಣಪುಟ್ಟ ತೊಂದರೆಗಳು ಆಗಿದ್ದಾಗಿ ಹೇಳಿದರು. ಎರಡನೇ ಡೋಸ್​ನ ಚುಚ್ಚುಮದ್ದನ್ನು ಕೊಟ್ಟಾದ ನಂತರ ಅಥವಾ ಹೆಚ್ಚಿನ ಡೋಸ್​ ಕೊಟ್ಟಾದ ನಂತರ ಇಂಥ ಸಮಸ್ಯೆಗಳು ಸಹಜವಾಗಿ ಕಾಣಿಸಿಕೊಳ್ಳುತ್ತವೆ ಎಂದು ಮಾಡೆರ್ನಾ ಹೇಳಿದೆ.
2020ರ ಅಂತ್ಯಕ್ಕೆ ಮಾಡೆರ್ನಾ ಲಸಿಕೆ ಲಭ್ಯ
2020ರ ಅಂತ್ಯಕ್ಕೆ ಮಾಡೆರ್ನಾ ಲಸಿಕೆ ಲಭ್ಯವಿರಲಿದೆ. ವಿಶ್ವದಾದ್ಯಂತ ಕೊರೊನಾ ಸೋಂಕು 65,0000ಮಂದಿಯ ಸಾವಿಗೆ ಕಾರಣವಾಗಿದೆ. ಆಗಸ್ಟ್‌ನಲ್ಲಿ, ಆಕ್ಸ್‌ಫರ್ಡ್ ಶಾಟ್‌ನ ಅಂತಿಮ ಅಧ್ಯಯನವು ಪ್ರಾರಂಭವಾಗುತ್ತದೆ. ನಂತರ ಸೆಪ್ಟೆಂಬರ್‌ನಲ್ಲಿ ಜಾನ್ಸನ್ ಮತ್ತು ಜಾನ್ಸನ್ ಮತ್ತು ಅಕ್ಟೋಬರ್‌ನಲ್ಲಿ ನೊವಾವಾಕ್ಸ್‌ನಿಂದ ಅಭ್ಯರ್ಥಿಯನ್ನು ಪರೀಕ್ಷಿಸುವ ಯೋಜನೆ ಇದೆ. ಎಲ್ಲವೂ ವೇಳಾಪಟ್ಟಿಯ ಪ್ರಕಾರ ಹೋದರೆ. ಫಿಜರ್ ಇಂಕ್ ಈ ಬೇಸಿಗೆಯಲ್ಲಿ 30,000 ವ್ಯಕ್ತಿಗಳ ಅಧ್ಯಯನವನ್ನು ಯೋಜಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.
ರೋಗ ನಿರೋಧಕ ಚುಚ್ಚುಮದ್ದು
ಕೊರೊನಾ ಸೋಂಕು ಭಾರಿ ಪಿಡುಗಾಗಿ ಪರಿಣಮಿಸಿದ 66 ದಿನಗಳ ಬಳಿಕ ಕೊರೊನಾ ವೈರಾಣುವಿನ ಸೀಕ್ವೆನ್ಸ್​ ಅನ್ನು ಬಿಡುಗಡೆ ಮಾಡಿದ ನಂತರದಲ್ಲಿ ಅಂದರೆ ಮಾ.16ರಿಂದ ಮಾಡೆರ್ನಾ ಸಂಸ್ಥೆ ರೋಗನಿರೋಧಕ ಚುಚ್ಚುಮದ್ದಿನ ಅನ್ವೇಷಣೆಯಲ್ಲಿ ತೊಡಗಿಕೊಂಡಿದೆ.
(ಮಾಹಿತಿ ಕೃಪೆ Oneindia)

ಮಾದರಿ ರಾಜ್ಯದ ಗುರಿ : ಯಡಿಯೂರಪ್ಪ ಸರಕಾರಕ್ಕೆ ಒಂದು ವರ್ಷ; ವರದಿ ಬಿಡುಗಡೆ

ಬೆಂಗಳೂರು: ಬರ ಕಾಣಿಸಿಕೊಂಡಿದ್ದಾಗ ಅಧಿಕಾರ ವಹಿಸಿಕೊಂಡ ನನಗೆ ಆ ಬಳಿಕ ನೆರೆಯ ಅಗ್ನಿಪರೀಕ್ಷೆ ಎದುರಾಯಿತು.
ಈಗ ಕೋವಿಡ್ 19 ಪಿಡುಗಿನಿಂದ ಹಿನ್ನಡೆಯಾದರೂ ಒಂದಷ್ಟು ಅಭಿವೃದ್ಧಿಯಾಗಿದೆ.
ರಾಜ್ಯದ ಜನರ ಋಣ ತೀರಿಸಬೇಕಿದ್ದು, ಮೂರು ವರ್ಷಗಳಲ್ಲಿ ಕರ್ನಾಟಕವನ್ನು ದೇಶದಲ್ಲೇ ಮಾದರಿ ರಾಜ್ಯ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ರಾಜ್ಯ ಸರಕಾರ ಒಂದು ವರ್ಷದ ಆಡಳಿತ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಸೋಮವಾರ ‘ಸಮಸ್ಯೆ- ಸವಾಲುಗಳ ಒಂದು ವರ್ಷ: ಪರಿಹಾರದ ಸ್ಪರ್ಶ’ ಶೀರ್ಷಿಕೆಯಡಿ ನಡೆದ ಸರಕಾರದ ಕಾರ್ಯನಿರ್ವಹಣ ವರದಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾನು ಅಧಿಕಾರ ವಹಿಸಿಕೊಂಡು ರವಿವಾರಕ್ಕೆ ವರ್ಷ ಪೂರ್ಣಗೊಂಡಿದೆ.
ಇನ್ನುಳಿದ ಅವಧಿಯಲ್ಲಿ ಎಲ್ಲರ ಸಹಕಾರದಿಂದ ಸುಭದ್ರ ಸರಕಾರ ಮುನ್ನಡೆಸುವುದರ ಜತೆಗೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ನನ್ನ ಗುರಿ. ಅದನ್ನು ತಲುಪಲು ನನ್ನ ಶಕ್ತಿ ಮೀರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಎಲ್ಲರ ಸಹಕಾರದಿಂದ ಅಭಿವೃದ್ಧಿ ಕೋವಿಡ್‌-19ರ ಸಂದರ್ಭದಲ್ಲೂ ಅಭಿವೃದ್ಧಿ ಆಗಿದೆ ಎಂದಾದರೆ ಅದಕ್ಕೆ ಪ್ರಧಾನಿ ಮೋದಿಯವರ ಆಶೀರ್ವಾದ, ಶಾಸಕರು, ಸಂಪುಟ ಸಹೋದ್ಯೋಗಿಗಳು, ಸಂಸದರು, ವಿಪಕ್ಷ ನಾಯಕರ ಸಹಕಾರ ಕಾರಣ ಎಂದರು.
ಕಣ್ಣೀರು ಬರುತ್ತದೆ
ಕೋವಿಡ್‌ ಕಾಡುವುದನ್ನು ನೆನಪಿಸಿಕೊಂಡರೆ ನನಗೆ ಕಣ್ಣೀರು ಬರುತ್ತದೆ. ಭಗವಂತನ‌ ಇಚ್ಛೆ ಏನಿದೆಯೋ ಗೊತ್ತಿಲ್ಲ. ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಈಗಾಗಲೇ ಶೇ.90ರಷ್ಟು ರೈತರು ಬಿತ್ತನೆ ಪೂರ್ಣಗೊಳಿಸುತ್ತಿದ್ದಾರೆ. ಈ ಬಾರಿಯೂ ಅತಿವೃಷ್ಟಿಯಾಗದೆ ಜನ ನೆಮ್ಮದಿಯಿಂದ ಬದುಕುವಂತಹ ಒಳ್ಳೆಯ ಕಾಲ ಬರಬೇಕು ಎಂದು ಭಗವಂತನಲ್ಲಿ ಪ್ರಾರ್ಥಿಸೋಣ.
ರಾಜ್ಯದ ಜನತೆಯ ಬಹಳಷ್ಟು ಋಣ ತೀರಿಸಬೇಕಿದೆ. ಎಲ್ಲರ ಸಹಕಾರದಿಂದ ನಾಡಿನ ಜನ, ರೈತರು, ಕೃಷಿ ಕಾರ್ಮಿಕರು, ದೀನ ದಲಿತರು ಗೌರವದಿಂದ ಬದುಕಲು ಅಗತ್ಯವಾದ ಕಾರ್ಯಕ್ರಮಗಳನ್ನೆಲ್ಲ ರೂಪಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಇನ್ನು ಮೂರು ವರ್ಷದಲ್ಲಿ ಯಾವುದೇ ಬಡವನಿಗೂ ವಾಸಕ್ಕೆ ಮನೆ ಇಲ್ಲದಂತಾಗಬಾರದು ಎಂಬ ಗುರಿ ಇದೆ. ಅದಕ್ಕೆ ಪೂರಕವಾಗಿ ಎಲ್ಲ ಕಾರ್ಯಕ್ರಮ, ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಅವರು ನಾನಾ ಯೋಜನೆ, ಪರಿಹಾರಗಳ ನೆರವು ಪಡೆದ ಫ‌ಲಾನುಭವಿಗಳೊಂದಿಗೆ ಆನ್‌ಲೈನ್‌ ಸಂವಾದ ನಡೆಸಿದರು.
ಕೈಪಿಡಿ ಬಿಡುಗಡೆ
ಸರಕಾರ ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಪ್ರಗತಿ ವಿವರ ನೀಡಲು ರೂಪಿಸಿರುವ “ಸವಾಲುಗಳ ಒಂದು ವರ್ಷ- ಪರಿಹಾರದ ಸ್ಪರ್ಶ’ ಕೈಪಿಡಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವರಾದ ಆರ್‌. ಅಶೋಕ್‌, ಎಸ್‌. ಸುರೇಶ್‌ ಕುಮಾರ್‌, ರಾಜ್ಯ ಬಿಜೆಪಿ ಅಧ್ಯಕ್ಷ ಸಂಸದ ನಳಿನ್‌ ಕುಮಾರ್‌ ಕಟೀಲು, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ಬಿಡುಗಡೆಗೊಳಿಸಿದರು. ಸಿಎಂ ಮಾಧ್ಯಮ ಸಲಹೆಗಾರ ಮಹದೇವ ಪ್ರಕಾಶ್‌ ಸಂಪಾದಕತ್ವದ “ಪುಟಕ್ಕಿಟ್ಟ ಚಿನ್ನ’ ಕಿರುಹೊತ್ತಗೆ, ‘ಮಾರ್ಚ್‌ ಆಫ್ ಕರ್ನಾಟಕ’ ಕೈಪಿಡಿಯನ್ನೂ ಇದೇ ವೇಳೆ ಬಿಡುಗಡೆ ಮಾಡಲಾಯಿತು. ಸಿಎಂ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ್‌ ಉಪಸ್ಥಿತರಿದ್ದರು.

ಸೋರಿಕೆ ತಡೆದು ಖಜಾನೆ ತುಂಬಿ
ರಾಜ್ಯದಲ್ಲಿ ಇನ್ನು ಲಾಕ್‌ಡೌನ್‌ ಬಗ್ಗೆ ಚರ್ಚಿಸುವುದಿಲ್ಲ. ಈಗಾಗಲೇ ಎಲ್ಲ ಡಿಸಿಗಳೊಂದಿಗೆ ಚರ್ಚಿಸಲಾಗಿದ್ದು, ಸೋಂಕು ನಿಯಂತ್ರಣಕ್ಕೆ ಶ್ರಮ ವಹಿಸುವಂತೆ ಸೂಚಿಸಿದ್ದೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಇನ್ನು ಮುಂದೆ ಕೋವಿಡ್ 19 ಜತೆಗೆ ಬದುಕುವುದನ್ನು ಕಲಿಯಬೇಕಿದೆ. ಆದ್ದರಿಂದ ಕೋವಿಡ್‌ ಜತೆಗೆ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದು ನಮ್ಮ ಕರ್ತವ್ಯ ಎಂದರು.
ಸೋರಿಕೆ ತಡೆದು ಖಜಾನೆ ತುಂಬಿ ಅಭಿವೃದ್ಧಿ ಕಾರ್ಯದ ಕಡೆಗೆ ಗಮನ ಕೊಡಬೇಕು ಎಂಬುದು ಎಲ್ಲ ಶಾಸಕರು, ಸಂಸದರು, ಅಧಿಕಾರಿಗಳಲ್ಲಿ ನನ್ನ ಮನವಿ. ರಾಜ್ಯದಲ್ಲಿ ವಿಶಾಲ ಭೂಮಿ, ದಟ್ಟ ಅರಣ್ಯ, ದುಡಿಯಲು ಲಕ್ಷಾಂತರ ಕೈಗಳಿವೆ. ಇವನ್ನೆಲ್ಲ ಬಳಸಿ ನಾಡನ್ನು ಕಟ್ಟುವ ಮೂಲಕ ಕರ್ನಾಟಕವನ್ನು ಮಾದರಿ ರಾಜ್ಯ ಮಾಡುವ ಸಂಕಲ್ಪ ತೊಡೋಣ ಎಂದು ಬಿಎಸ್‌ವೈ ಕರೆ ನೀಡಿದರು.
ನಿರುದ್ಯೋಗ ನಿವಾರಣೆ ಉದ್ದೇಶ
ಕರ್ನಾಟಕ ಭೂಸುಧಾರಣೆ ಕಾಯ್ದೆಯ ಕಲಂ 79ಎ, ಬಿಗೆ ತಿದ್ದುಪಡಿ ತಂದ ಉದ್ದೇಶ ಸ್ಪಷ್ಟ. ಈ ವರೆಗೆ ಕೇವಲ ಶೇ.2ರಷ್ಟು ಕೃಷಿ ಭೂಮಿಯಷ್ಟೇ ಕೈಗಾರಿಕೆಗಳಿಗೆ ಬಳಕೆಯಾಗಿದೆ. ಮುಂದಿನ ದಿನಗಳಲ್ಲಿ ಕೈಗಾರಿಕೆಗಳಿಗೆ ತುಸು ಉತ್ತೇಜನ ನೀಡುವುದರಿಂದ ನಿರುದ್ಯೋಗ ಸಮಸ್ಯೆ ಬಗೆಹರಿಯುತ್ತದೆ ಎಂಬ ಕಾರಣಕ್ಕೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಅದರ ವಿನಾ ಬೇರೆ ಯಾವುದೇ ಕಾರಣವಿಲ್ಲ. ಹಾಗಾಗಿ ವಿಪಕ್ಷಗಳು ಅನಗತ್ಯವಾಗಿ ಟೀಕೆ ಮಾಡದೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಸಿಎಂ ಹೇಳಿದರು.
ದ್ವೇಷದ ರಾಜಕಾರಣ ಮಾಡಿಲ್ಲ
ನಾನು ಎಂದೂ ದ್ವೇಷದ ರಾಜಕಾರಣ ಮಾಡಲಿಲ್ಲ. ನನ್ನನ್ನು ಟೀಕಿಸುವವರ ಬಗ್ಗೆಯೂ ಗೌರವ ಹೊಂದಿದ್ದೇನೆ. ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗಬೇಕು ಎಂಬುದು ನನ್ನ ಉದ್ದೇಶ. ಒಂದು ವರ್ಷದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಅವಕಾಶ ನೀಡಿಲ್ಲ. ಭೇದ ಭಾವ ಇಲ್ಲದೆ, ಕೋಮು ಗಲಭೆಗೆ ಅವಕಾಶವಿಲ್ಲದಂತೆ ಮುನ್ನಡೆಯುತ್ತಿದ್ದೇವೆ ಎಂದು ಸಿಎಂ ಹೇಳಿದರು.
(ಮಾಹಿತಿ ಕೃಪೆ ಉದಯವಾಣಿ)

1 ಕೋಟಿಗಾಗಿ 6ನೇ ತರಗತಿ ಬಾಲಕನನ್ನು ಅಪಹರಿಸಿ ಹತ್ಯೆಗೈದ ದುಷ್ಕರ್ಮಿಗಳು

ಗೋರಖ್‌ಪುರ, ಜುಲೈ 27: ಮೋಸ್ಟ್ ವಾಂಟೆಡ್ ರೌಡಿ ಶೀಟರ್‌ಗಳ ಎನ್‌ಕೌಂಟರ್, ನಡುರಸ್ತೆಯಲ್ಲಿ ಪತ್ರಕರ್ತನ ಹತ್ಯೆ ಅಂತಹ ಪ್ರಕರಣಗಳ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿರುವ ಉತ್ತರ ಪ್ರದೇಶದಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ.
ಆರನೇ ತರಗತಿ ಓದುತ್ತಿದ್ದ 14 ವರ್ಷದ ವಿದ್ಯಾರ್ಥಿಯನ್ನು ದುಷ್ಕರ್ಮಿಗಳು ಅಪಹರಣ ಮಾಡಿ ಕೊಲೆ ಮಾಡಿರುವ ಘಟನೆ ಗೋರಖ್‌ಪುರದಲ್ಲಿ ವರದಿಯಾಗಿದೆ.


ಮಗುವನ್ನು ಅಪಹರಿಸಿದ್ದ ದುಷ್ಕರ್ಮಿಗಳು ಒಂದು ಕೋಟಿ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದರು. ಬಳಿಕ, ಪೋಷಕರಿಗೆ ಪ್ರತಿಕ್ರಿಯೆ ಬಾರದ ಕಾರಣ ಮಗುವನ್ನು ಕೊಂದು ಗೋರಖ್‌ಪುರದ ಕಾಲುವೆ ಬಳಿ ಎಸೆದಿದ್ದಾರೆ ಎಂದು ತಿಳಿದು ಬಂದಿದೆ.
ಕಿರಾಣಿ ಮತ್ತು 'ಪಾನ್' ಅಂಗಡಿ ಮಾಲೀಕರ 14 ವರ್ಷದ ಮಗನನ್ನು ಪಿಪ್ರೈಚ್ ಪ್ರದೇಶದಿಂದ ಭಾನುವಾರ ಅಪಹರಿಸಲಾಗಿದೆ. ಭಾನುವಾರ ಮಧ್ಯಾಹ್ನ ಹದಿಹರೆಯದವರನ್ನು ಅಪಹರಿಸಲಾಗಿದ್ದು, ಕುಟುಂಬಕ್ಕೆ ಒಂದು ಕೋಟಿ ನೀಡುವಂತೆ ಕರೆ ಕೂಡ ಬಂದಿತ್ತು.
'ಭಾನುವಾರ ಮಧ್ಯಾಹ್ನ ಊಟ ಮಾಡಿದ ನಂತರ, ನನ್ನ ಮಗ ಆಟವಾಡಲು ಹೊರಗೆ ಹೋಗಿದ್ದ. ಸಂಜೆ ನನಗೆ ಅಪರಿಚಿತ ಸಂಖ್ಯೆಯಿಂದ ದೂರವಾಣಿ ಕರೆ ಬಂತು. ನನ್ನ ಮಗನನ್ನು ಬಿಡಲು 1 ಕೋಟಿ ನೀಡುವಂತೆ ಕೇಳಿದರು. ಈ ವಿಷಯವನ್ನು ತಕ್ಷಣವೇ ಪೊಲೀಸರಿಗೆ ತಿಳಿಸಿದೆ.' ಎಂದು ತಂದೆ ಪಿಟಿಐಗೆ ತಿಳಿಸಿದ್ದಾರೆ.
ಗೋರಖ್‌ಪುರದ ಎಸ್‌ಎಸ್‌ಪಿ ಸುನೀಲ್ ಕುಮಾರ್ ಗುಪ್ತಾ ಮಾಹಿತಿ ಪಡೆದ ಕೂಡಲೇ ಪೊಲೀಸರು ಕ್ರಮ ಕೈಗೊಂಡು ಅಪಹರಣಕಾರರನ್ನು ಭಾನುವಾರ ರಾತ್ರಿಯಲ್ಲಿಯೇ ಬಂಧಿಸಿದ್ದಾರೆ. ಬಳಿಕ, ಅಪಹರಣಕಾರರನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಕಿಡ್ನಾಪ್ ಮಾಡಿದ ಕೂಡಲೇ ಬಾಲಕನನ್ನು ಕೊಂದಿರುವುದು ಬೆಳಕಿಗೆ ಬಂದಿದೆ. ನಂತರ ಅಪಹರಣಕಾರರು ನೀಡಿದ ಮಾಹಿತಿಯ ಮೇರೆಗೆ ಬಾಲಕನ ಶವವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಎಸ್‌ಪಿ ತಿಳಿಸಿದೆ.
(ಮಾಹಿತಿ ಕೃಪೆ onindia)

Monday, July 27, 2020

ಸರ್ಕಾರದಿಂದ ಹವಾಮಾನ ಮುನ್ಸೂಚನೆ ನೀಡುವ ಮೌಸಮ್ ಅಪ್ಲಿಕೇಶನ್ ಬಿಡುಗಡೆ!


ತಂತ್ರಜ್ಞಾನ ಮುಂದುವರೆದಂತೆ ಸರ್ಕಾರಗಳು ಸಾಕಷ್ಟು ವಿಭಿನ್ನ ಮಾದರಿಯ ಆಪ್‌ಗಳು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿವೆ. ಎಲ್ಲಾ ಮಾದರಿಯ ಸೇವೆಗಳನ್ನು ಒದಗಿಸುವ ಆಪ್‌ಗಳು ಕೂಡ ಇಂದು ಲಭ್ಯವಾಗುತ್ತಿವೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ಸರ್ಕಾರಗಳು ಕೂಡ ತಮ್ಮ ಪ್ರಜೆಗಳ ಅನುಕೂಲಕ್ಕಾಗಿ ಹಲವು ಆಪ್‌ಗಳನ್ನ ಪರಿಚಯಿಸಿರೋದು ಗೊತ್ತೇ ಇದೆ. ಸದ್ಯ ಇದೀಗ ಕೇಂದ್ರ ಸರ್ಕಾರ ಮತ್ತೊಂದು ಹೊಸ ಆಪ್‌ ಅನ್ನು ಪರಿಚಯಿಸಿದೆ. ಇದೊಂದು ಮೊಬೈಲ್‌ ಅಪ್ಲಿಕೇಶನ್‌ ಆಗಿದ್ದು, ಇದು ನಗರವಾರು ಹವಾಮಾನ ಮುನ್ಸೂಚನೆಗಳನ್ನು ನೀಡಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ.

ಹೌದು, ಕೇಂದ್ರದ Earth Sciences Minister ಹರ್ಷ್ ವರ್ಧನ್ ಮೌಸಮ್‌ ಎಂಬ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದು, ಇದು ನಗರವಾರು ಹವಾಮಾನ ಮುನ್ಸೂಚನೆಗಳು, ಪ್ರಸಾರಗಳು ಮತ್ತು ಇತರ ಎಚ್ಚರಿಕೆಗಳನ್ನು ನೀಡುತ್ತದೆ. ಇನ್ನು ಮೌಸಮ್ ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಇಂಟರ್ನ್ಯಾಷನಲ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಸೆಮಿ-ಆರಿಡ್ ಟ್ರಾಪಿಕ್ಸ್ (ಐಕ್ರಿಸಾಟ್), ಭಾರತೀಯ ಇನ್ಸ್‌ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯರೋಲಜಿ (ಐಐಟಿಎಂ), ಪುಣೆ ಮತ್ತು ಭಾರತ ಹವಾಮಾನ ಇಲಾಖೆ (ಐಎಮ್‌ಡಿ) ಜಂಟಿಯಾಗಿ ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸಿದೆ. ಈ ಅಪ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್ನು ಮೌಸಮ್ ಅಪ್ಲಿಕೇಶನ್ ಅನ್ನು ಇಂಟರ್ನ್ಯಾಷನಲ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಸೆಮಿ-ಆರಿಡ್ ಟ್ರಾಪಿಕ್ಸ್ , ಭಾರತೀಯ ಇನ್ಸ್‌ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯರೋಲಜಿ (ಐಐಟಿಎಂ), ಪುಣೆ ಮತ್ತು ಭಾರತ ಹವಾಮಾನ ಇಲಾಖೆ ಜಂಟಿಯಾಗಿ ವಿನ್ಯಾಸಗೊಳಿಸಿದ್ದು, ಇದರಿಂದ ನಗರವಾರು ವ್ಯಾಪ್ತಿಯ್ಲಿ ಹವಾಮಾನ ಹೇಗಿರಲಿದೆ ಎಂದು ತಿಳಿಯಲು ಉಪಯೋಗವಾಗಲಿದೆ. ಇದಲ್ಲದೆ ವೀಕ್ಷಣಾ ಜಾಲಗಳನ್ನು ಹೆಚ್ಚಿಸಲು, ಹಳೆಯ ಹಡಗುಗಳನ್ನು ಬದಲಿಸಲು ಮತ್ತು ಹೊಸ ಕಂಪ್ಯೂಟಿಂಗ್ ಸಂಪನ್ಮೂಲಗಳನ್ನು ಸಂಪಾದಿಸಲು ಪ್ರಸ್ತುತ ಬಜೆಟ್‌ನ ಕನಿಷ್ಠ ಎರಡು ಪಟ್ಟು ದೊಡ್ಡ ಪ್ರಮಾಣದ ಹೂಡಿಕೆ ಅಗತ್ಯವಾಗಿದೆ ಎನ್ನುವ ಮಾತನ್ನು ಸಹ ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರು ತಿಳಿಸಿದ್ದಾರೆ..

ಸದ್ಯ ಮೌಸಮ್ ಗೂಗಲ್‌ನ ಪ್ಲೇ ಸ್ಟೋರ್ ಮತ್ತು ಆಪಲ್‌ನ ಆಪ್ ಸ್ಟೋರ್‌ನಲ್ಲಿ ಲಭ್ಯವಿದೆ. ಇದು 200 ನಗರಗಳಿಗೆ ತಾಪಮಾನ, ತೇವಾಂಶ, ಗಾಳಿಯ ವೇಗ ಮತ್ತು ನಿರ್ದೇಶನ ಸೇರಿದಂತೆ ಪ್ರಸ್ತುತ ಹವಾಮಾನ ಮಾಹಿತಿಯನ್ನು ಒದಗಿಸುತ್ತದೆ. ಮಾಹಿತಿಯನ್ನು ದಿನಕ್ಕೆ ಎಂಟು ಬಾರಿ ನವೀಕರಿಸುತ್ತದೆ. ಅಲ್ಲದೆ ಇದು ಸ್ಥಳೀಯ ಹವಾಮಾನ ವಿದ್ಯಮಾನಗಳಿಗಾಗಿ nowcasts, ಮೂರು-ಗಂಟೆಗಳ ಎಚ್ಚರಿಕೆಗಳು ಮತ್ತು ಸುಮಾರು 800 ನಿಲ್ದಾಣಗಳು ಮತ್ತು ಜಿಲ್ಲೆಗಳಿಗೆ ಅವುಗಳ ತೀವ್ರತೆಯನ್ನು ನೀಡುತ್ತದೆ. ತೀವ್ರ ಹವಾಮಾನದ ಸಂದರ್ಭದಲ್ಲಿ, ಅದರ ಪ್ರಭಾವವನ್ನು ಆಲರ್ಟ್‌ ನೀಡಲಿದೆ.

ಈ ಅಪ್ಲಿಕೇಶನ್ ಮುಂದಿನ ಏಳು ದಿನಗಳವರೆಗೆ ಭಾರತದ ಸುಮಾರು 450 ನಗರಗಳಿಗೆ ಹವಾಮಾನ ಮುನ್ಸೂಚನೆಯನ್ನು ನೀಡುತ್ತದೆ. ಕಳೆದ 24 ಗಂಟೆಗಳ ಹವಾಮಾನ ಮಾಹಿತಿಯು ಸಹ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತದೆ. ಅಪಾಯಕಾರಿ ಹವಾಮಾನಕ್ಕಿಂತ ಮುಂಚಿತವಾಗಿ ಜನರಿಗೆ ಎಚ್ಚರಿಕೆ ನೀಡಲು ಐದು ದಿನಗಳವರೆಗೆ ಎಲ್ಲಾ ಜಿಲ್ಲೆಗಳಿಗೆ ದಿನಕ್ಕೆ ಎರಡು ಬಾರಿ ಬಣ್ಣ-ಕೋಡೆಡ್ ಎಚ್ಚರಿಕೆಗಳನ್ನು ನೀಡುವ ವ್ಯವಸ್ಥೆಯನ್ನು ಸಹ ಇದು ಹೊಂದಿದೆ.


(ಮಾಹಿತಿ ಕೃಪೆ gizbot)

ಗುಡ್‌ನ್ಯೂಸ್: ಆಗಸ್ಟ್‌ 1 ರಿಂದ ಚಿತ್ರಮಂದಿರಗಳು ಓಪನ್

ಕೊರೊನಾ ಜೊತೆಗೆ ಜೀವಿಸುವುದು ಕಲಿಯಬೇಕಿದೆ ಎಂದು ಸರ್ಕಾರವೇ ಹೇಳುತ್ತಿದೆ. ಹಾಗಾಗಿ ಕೊರೊನಾ ಉಚ್ರಾಯದಲ್ಲಿದ್ದರೂ ಲಾಕ್‌ಡೌನ್ ಗೆ ಕೈಹಾಕುತ್ತಿಲ್ಲ ಸರ್ಕಾರಗಳು, ಬದಲಿಗೆ ಹಂತಹಂತವಾಗಿ ಅನ್‌ಲಾಕ್ ಮಾಡಲಾಗುತ್ತಿದೆ. ಕೊರೊನಾ ದಿಂದಾಗಿ ಭಾರಿ ದೊಡ್ಡ ಪೆಟ್ಟು ತಿಂದಿದ್ದು ಚಿತ್ರೋದ್ಯಮ. ಚಿತ್ರೀಕರಣ, ಚಿತ್ರಮಂದಿರಗಳು ದೇಶದಾದ್ಯಂತ ಅಧಿಕೃತ ಲಾಕ್‌ಡೌನ್ ಘೋಷಣೆಗೆ ಮುನ್ನವೇ ಸ್ಥಗಿತಗೊಳಿಸಲಾಗಿತ್ತು. ಬಹುತೇಕ ಉದ್ಯಮಗಳು ನಿಯಮಗಳನ್ವಯ ಪುನರ್‌ಪ್ರಾರಂಭವಾಗಿದೆಯಾದರೂ ಚಿತ್ರಮಂದಿರಗಳು ಮಾತ್ರ ಇನ್ನೂ ತೆರೆಯಲಾಗಿರಲಿಲ್ಲ. ಚಿತ್ರಮಂದಿರಗಳ ಮಾಲೀಕರು ಬಹುದೊಡ್ಡ ಆರ್ಥಿಕ ಪೆಟ್ಟು ತಿಂದಿದ್ದರು, ಆದರೆ ಈಗ ಭರವಸೆಯ ಬೆಳಕೊಂದು ಕಾಣಿಸಿಕೊಂಡಿದ್ದು, ಚಿತ್ರಮಂದಿರಗಳು ತೆರೆಯುವ ಮುನ್ಸೂಚನೆ ದೊರೆತಿದೆ.