WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Saturday, April 24, 2021

ʼಕೊರೊನಾʼ ಸೋಂಕಿತರು ಏನು ಮಾಡಬೇಕು.? ಏನು ಮಾಡಬಾರದು.? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

 

ದೇಶದಲ್ಲಿ ಕೊರೊನಾ ಎರಡನೇ ಅಲೆ ಮಿತಿಮೀರಿದ್ದು ಸೋಂಕಿನ ವಿರುದ್ಧ ಸಂಪೂರ್ಣ ವೈದ್ಯಕೀಯ ಲೋಕ ಹಗಲಿರುಳು ಶ್ರಮಿಸುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್​ ಕೊರತೆ ಉಂಟಾಗಿರೋದ್ರಿಂದ ರೋಗಿಗಳು ಪಡಬಾರದ ಕಷ್ಟ ಪಡ್ತಿದ್ದಾರೆ.

ನಿಮಗೂ ಕೂಡ ಕೊರೊನಾ ಲಕ್ಷಣಗಳು ಕಾಣಲಾರಂಭಿಸಿದ್ರೆ ಈ ಕೆಳಗಿನ ಮಾರ್ಗಗಳನ್ನ ಅನುಸರಿಸಿ :

ಪ್ರತ್ಯೇಕ ವಾಶ್​ರೂಮ್​ ಹೊಂದಿರುವ ಕೊಠಡಿಯಲ್ಲಿ ಐಸೋಲೇಟ್​ ಆಗಿ. ಆದಷ್ಟು ಬೇಗ ಆರ್​ಟಿ - ಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳಿ.

ಮನೆಯಲ್ಲೇ ಇರಿ. ಸೌಮ್ಯ ಲಕ್ಷಣ ಹೊಂದಿರುವ ಸೋಂಕಿತರು ಮನೆಯಲ್ಲೇ ಚಿಕಿತ್ಸೆ ತೆಗೆದುಕೊಳ್ಳಬಹುದು. ವೈದ್ಯರ ಜೊತೆ ನಿಕಟ ಸಂಪರ್ಕದಲ್ಲಿರಿ.

ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ಗಮನವಿರಲಿ. ಉಸಿರಾಟದ ಸಮಸ್ಯೆ ಉಲ್ಬಣವಾಗ್ತಾ ಇರೋದು ಗಮನಕ್ಕೆ ಬಂದಲ್ಲಿ ಕೂಡಲೇ ಆಸ್ಪತ್ರೆಗೆ ದಾಖಲಾಗಿ.

ಉತ್ತಮ ಗುಣಮಟ್ಟದ ಮಾಸ್ಕ್​ಗಳನ್ನ ಧರಿಸಿ. ಸರ್ಜಿಕಲ್​ ಇಲ್ಲವೇ ಎನ್​ 95 ಮಾಸ್ಕ್​ಗಳಲ್ಲಿ ನಿಮ್ಮ ಮೂಗು, ಬಾಯಿ ಸಂಪೂರ್ಣ ಮುಚ್ಚುವಂತಿರಲಿ.

ಪದೇ ಪದೇ ಕೈಗಳನ್ನ ತೊಳೆಯುತ್ತಲೇ ಇರಿ.

ಆದಷ್ಟು ಸಮಯ ನೀರು ಕುಡಿಯುತ್ತಲೇ ಇರಿ. ತೀರಾ ಮಸಾಲೆಯಲ್ಲದ, ಎಣ್ಣೆಯಲ್ಲಿ ಕರಿಯದ ಆಹಾರಗಳನ್ನ ಸೇವಿಸಿ.

ಈ ಕೆಲಸಗಳನ್ನ ಮಾಡಲೇಬೇಡಿ :

ನೀವು ಬಳಸುವ ಶೌಚಾಲಯ, ಆಹಾರಗಳನ್ನ ಇತರರೊಂದಿಗೆ ಹಂಚಿಕೊಳ್ಳಬೇಡಿ.

ಸಾರ್ವಜನಿಕ ಸಾರಿಗೆ ಬಳಕೆ ಮಾಡಬೇಡಿ.

ಮನೆ ಬಿಟ್ಟು ಎಲ್ಲಿಗೂ ಹೋಗಬೇಡಿ. ವೈದ್ಯಕೀಯ ಕಾರ್ಯಕ್ಕಾಗಿ ಮಾತ್ರ ಹೊರ ಹೋಗಿ.

ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಲೇಬೇಡಿ.

ಮನೆಯಲ್ಲೇ ಇರುವಾಗ ರೆಮಿಡಿಸಿವರ್​, ಸ್ಟೆರಾಯ್ಡ್ಸ್​ ತೆಗೆದುಕೊಳ್ಳಲೇಬೇಡಿ.

ಕೊರೊನಾ ಪಾಸಿಟಿವ್​ ವರದಿ ಬಳಿಕ ಈ ಕೆಲಸ ಮಾಡಿ :

ಆರ್​ಟಿ - ಪಿಸಿಆರ್​ ವರದಿ ಬಂದ ಬಳಿಕ ಆದಷ್ಟು ಬೇಗ ವೈದ್ಯರ ಅಪಾಯಿಂಟ್​ಮೆಂಟ್​ ಪಡೆಯಿರಿ. ಅಲ್ಲಿಯವರೆಗೂ ಮನೆಯಲ್ಲೇ ಇರಿ.

ನಿಮ್ಮ ಲಕ್ಷಣಗಳ ಮೇಲೆ ಗಮನವಿರಲಿ. ರೋಗದ ಲಕ್ಷಣಗಳು ಹೆಚ್ಚಾಗುತ್ತಿರೋದು ಗಮನಕ್ಕೆ ಬಂದಲ್ಲಿ ವೈದ್ಯರನ್ನ ಸಂಪರ್ಕಿಸಿ.

ನಿಮ್ಮ ಪ್ರಾಥಮಿಕ ಸಂಪರ್ಕಿತರಿಗೆ ನಿಮ್ಮ ಪಾಸಿಟಿವ್​ ವರದಿ ಬಗ್ಗೆ ಮಾಹಿತಿ ನೀಡಿ.

ಪ್ರತ್ಯೇಕ ಶೌಚಾಲಯವಿರುವ ಪ್ರತ್ಯೇಕ ಕೋಣೆಯಲ್ಲಿ ಐಸೋಲೇಟ್​ ಆಗಿರಿ.

ಆದಷ್ಟು ವಿಶ್ರಾಂತಿ ಪಡೆಯಿರಿ, ಪೋಷಕಾಂಶಯುಕ್ತ ಆಹಾರ ಸೇವನೆ ಮಾಡಿ, ದೇಹದಲ್ಲಿ ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ.

ಆಕ್ಸಿಮೀಟರ್​ನಲ್ಲಿ ಪದೇ ಪದೇ ಆಮ್ಲಜನಕ ಪ್ರಮಾಣವನ್ನ ಪರೀಕ್ಷೆ ಮಾಡಿಕೊಳ್ಳುತ್ತಲೇ ಇರಿ. ಆಮ್ಲಜನಕ ಮಟ್ಟ ಕ್ಷೀಣಿಸುತ್ತಿರೋದು ಗಮನಕ್ಕೆ ಬಂದಲ್ಲಿ ವೈದ್ಯರನ್ನ ಭೇಟಿಯಾಗಿ.

ಪ್ರೋನಿಂಗ್​ ಮಾದರಿಯಲ್ಲಿ ಮಲಗಿಕೊಳ್ಳಿ. ಈ ರೀತಿ ಮಾಡೋದ್ರಿಂದ ನಿಮ್ಮ ದೇಹದಲ್ಲಿ ಆಮ್ಲಜನಕ ಮಟ್ಟ ಸುಧಾರಿಸಲಿದೆ.

ಕೆಮ್ಮುವಾಗ ಹಾಗೂ ಸೀನುವಾಗ ಮುಖಕ್ಕೆ ಕರವಸ್ತ್ರ ಹಾಗೂ ಟಿಶ್ಯೂ ಪೇಪರ್​ ಹಿಡಿಯಿರಿ.

ಬಳಸಿದ ಟಿಶ್ಯೂ ಪೇಪರ್​ಗಳನ್ನ ಸರಿಯಾಗಿ ಡಂಪ್​ ಮಾಡಿ.

20 ಸೆಕೆಂಡ್​ಗಳ ಕಾಲ ನಿಮ್ಮ ಕೈಯನ್ನ ಸೋಪು ಹಾಗೂ ಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳಿ.

ಸೋಂಕಿಗೆ ಒಳಗಾದ ಮೇಲೆ ಈ ಕಾರ್ಯ ಮಾಡಲೇಬೇಡಿ :

ನೀವು ಬಳಸಿದ ಪಾತ್ರೆಗಳನ್ನ, ಟವೆಲ್​, ಹಾಸಿಗೆ, ಆಹಾರ , ಶೌಚಾಲಯಗಳನ್ನ ಇತರರೊಂದಿಗೆ ಹಂಚಿಕೊಳ್ಳಬೇಡಿ.

ನೀವಾಗಿಯೇ ಸ್ಟೆರಾಯ್ಡ್ಸ್ ಹಾಗೂ ರೆಮಿಡಿಸಿವರ್ ಪಡೆಯುವ ಸಾಹಸ ಬೇಡ.

ಸಾರ್ವಜನಿಕ ಸ್ಥಳಗಳಾದ ಕಚೇರಿ, ಸಿನಿಮಾ ಮಂದಿರ, ಹೋಟೆಲ್​ ಸೇರಿದಂತೆ ಜನನಿಬಿಡ ಸ್ಥಳಕ್ಕೆ ಭೇಟಿ ನೀಡುವುದನ್ನ ನಿಲ್ಲಿಸಿ.

ವೈದ್ಯಕೀಯ ಕಾರ್ಯಕ್ಕೆ ಹೊರತುಪಡಿಸಿ ಇನ್ಯಾವ ಕಾರ್ಯಕ್ಕೂ ಮನೆಬಿಟ್ಟು ಹೊರಬರಬೇಡಿ.

(ಮಾಹಿತಿ ಕೃಪೆ ಕನ್ನಡ ದುನಿಯಾ)

ಬೆನ್ನು ನೋವು ಬರಲು ಕೇವಲ ಕುಳಿತುಕೊಳ್ಳುವುದು ಒಂದೇ ಕಾರಣವಲ್ಲ..!ಬೇರೆನೂ ಅಂತೀರಾ..?

 ಬೆನ್ನು ನೋವು ಎಂಬುದು ಎಲ್ಲರಲ್ಲೂ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ಆದರೆ ಇದೇ ಸಮಸ್ಯೆ ಅನೇಕರನ್ನು ನಿರಂತರವಾಗಿ ಕಾಡುತ್ತಿರುತ್ತವೆ. ಒಂದು ಬಹುಮುಖ್ಯ ಕಾರಣ ಸತತ ಕೆಲಸ ಎನ್ನಬಹುದು. ಇದಾಗ್ಯೂ ತಪ್ಪು ಭಂಗಿಗಳಲ್ಲಿ ಮಲಗುವುದು, ವ್ಯಾಯಾಮ ಮಾಡದಿರುವುದು ಕೂಡ ಬೆನ್ನುನೋವಿಗೆ ಕಾರಣವಾಗಬಹುದು. ಇನ್ನು ಅನೇಕ ಬಾರಿ ಭಾರವಾದ ವಸ್ತುಗಳನ್ನು ಎತ್ತುವುದು ಸಹ ಈ ಸಮಸ್ಯೆಯನ್ನು ಉಂಟು ಮಾಡಬಹುದು.

ಬೆನ್ನು ಹುರಿಯ ಕೆಳಭಾಗದಲ್ಲಿ ಸೊಂಟಾ ಪಾವನಿಯ ಭಾಗಗಳು ಅನೇಕರಲ್ಲಿ ನೋವನ್ನುಂಟು ಮಾಡುತ್ತದೆ ಇದಕ್ಕೆ ಅತಿಯಾಗಿ ಕೆಲಸ ಅಥವಾ ವ್ಯಾಯಾಮವಿಲ್ಲದ ಮಾಂಸಖಂಡಗಳಿಂದ ಬೆನ್ನು ನೋವು ಬರುತ್ತದೆ. ಹೊಟ್ಟೆಯ ಬೊಜ್ಜು ಹೆಚ್ಚಿದಾಗ ಕೂಡ ಬೆನ್ನು ನೋವು ಬರುತ್ತದೆ. ಅತಿ ಹೆಚ್ಚು ಸಮಯ ಮಲಗಿದ್ದರು ಕೂಡ ಬೆನ್ನು ನೋವು ಬರುವ ಸಾದ್ಯತೆ ಇರುತ್ತದೆ. ಹಾಗೆಯೇ ಈ ಬೆನ್ನು ನೋವು ತಡೆಯಲು ಹಾಗದೆ ನಾವು ವೈದ್ಯರ ಬಳಿ ಹೋದಾಗ ವೈದ್ಯರು ನಮ್ಮನ್ನು ಕೇಳುವ ಪ್ರಶ್ನೆಗಳು ಎಂದರೆ

ಬೆನ್ನು ನೋವು ಹೇಗೆ ಪ್ರಾರಂಭವಾಯಿತು.

(ಮಾಹಿತಿ ಕೃಪೆ All Indian News 24x7)

Friday, April 23, 2021

ರಾಜ್ಯದಲ್ಲಿ ಇನ್ನೂ 3 ದಿನ ಮಳೆ..!

 

ಬೆಂಗಳೂರು,ಏ.23- ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಚದುರಿದಂತೆ ಅಲ್ಲಲ್ಲಿ ಪೂರ್ವ ಮುಂಗಾರು ಮಳೆಯಾಗುತ್ತಿದ್ದು, ಇದೇ ರೀತಿ ಇನ್ನೂ ಮೂರು ದಿನ ಮುಂದುವರೆಯುವ ಸಾಧ್ಯತೆ ಗಳಿವೆ. ಹವಾಮಾನ ಮುನ್ಸೂಚನೆ ಪ್ರಕಾರ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೂರು ದಿನಗಳ ಕಾಲ ಪೂರ್ವ ಮುಂಗಾರು ಮಳೆಯಾಗಲಿದೆ. ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗಲಿದೆ. ಏ.26ರಿಂದ ರಾಜ್ಯದಲ್ಲಿ ಮಳೆ ಪ್ರಮಾಣ ಇಳಿಮುಖವಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.

ರಾಜ್ಯದಲ್ಲಿ ಬೇಸಿಗೆಯಲ್ಲಿ ಗುಡುಗು-ಮಿಂಚು, ಆಲಿಕಲ್ಲು ಸಹಿತ ಮಳೆಯಾಗುವುದು ವಾಡಿಕೆ. ಕೆಲವೆಡೆ ಭಾರೀ ಪ್ರಮಾಣದ ಆಲಿಕಲ್ಲು ಬಿದ್ದಿರುವ ವರದಿಯಾಗಿದೆ. ನಿನ್ನೆ ಹಾಸನ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಮಂಡ್ಯ, ಶಿವಮೊಗ್ಗ, ಚಿತ್ರದುರ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪು, ಬೆಂಗಳೂರು ನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾದ ವರದಿಯಾಗಿದೆ.

ಕೆಲವು ಜಿಲ್ಲೆಗಳಲ್ಲಿ ಭಾಗಶಃ ಮಳೆಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆ ಇದೆ ಎಂದು ಹೇಳಿದರು. ಏ.1ರಿಂದ ನಿನ್ನೆಯವರೆಗೆ ರಾಜ್ಯದಲ್ಲಿ 27.1 ಮಿಲಿ ಮೀಟರ್‍ನಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಹೆಚ್ಚಿನ ಮಳೆಯಾದಂತಾಗಿದೆ. ಕಳೆದ ಮೂರು ವಾರಗಳ ರಾಜ್ಯದ ವಾಡಿಕೆ ಪ್ರಮಾಣ 21.1 ಮಿಲಿಮೀಟರ್ ಆಗಿದ್ದು,

ಈ ಅವಯಲ್ಲಿ ವಾಡಿಕೆಗಿಂತ ಶೇ.28ರಷ್ಟು ಹೆಚ್ಚು ಮಳೆಯಾಗಿದೆ. 26 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಬಳ್ಳಾರಿ, ಗದಗ, ಕೊಪ್ಪಳ, ರಾಯಚೂರು, ಗದಗ ಸೇರಿದಂತೆ 7 ಜಿಲ್ಲೆಗಳಲ್ಲಿ ಮಳೆ ಕೊರತೆ ಕಂಡು ಬಂದಿದೆ. ರಾಜ್ಯದ 153 ತಾಲ್ಲೂಕುಗಳಲ್ಲಿ ವಾಡಿಕೆ ಮತ್ತು ಅದಕ್ಕಿಂತ ಹೆಚ್ಚು ಮಳೆಯಾಗಿದ್ದು, 74 ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಿದೆ. 34 ತಾಲ್ಲೂಕುಗಳಲ್ಲಿ ಮಳೆ ಕೊರತೆ ತೀವ್ರವಾಗಿದೆ.

538 ಹೋಬಳಿಗಳಲ್ಲಿ ವಾಡಿಕೆ ಮಳೆಯಾಗಿದ್ದು, 352 ಹೋಬಳಿಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೆ, 153 ಹೋಬಳಿಗಳಲ್ಲಿ ಮಳೆ ಕೊರತೆ ಹೆಚ್ಚಾಗಿ ಕಂಡು ಬಂದಿದೆ ಎಂದು ತಿಳಿಸಿದರು.

ಏ.1ರಿಂದ ನಿನ್ನೆಯವರೆಗೆ ದಕ್ಷಿಣ ಒಳನಾಡಿನಲ್ಲಿ 30.6 ಮಿಲಿಮೀಟರ್, ಉತ್ತರ ಒಳನಾಡಿನಲ್ಲಿ 14.6 , ಮಲೆನಾಡಿನಲ್ಲಿ 43.3 ಹಾಗೂ ಕರಾವಳಿ ಭಾಗದಲ್ಲಿ 54.3 ಮಿಲಿ ಮೀಟರ್‍ನಷ್ಟು ಮಳೆಯಾಗಿದೆ ಎಂದು ಹೇಳಿದರು.

(ಮಾಹಿತಿ ಕೃಪೆ ಈ ಸಂಜೆ)

ಕೋವಿಡ್ ಉಲ್ಬಣ:ಬೀಡಿ ಸಿಗರೇಟ್ ಮಾರಾಟ ನಿಷೇಧಿಸುವಂತೆ ಮುಂಬೈ ಹೈಕೋರ್ಟ್ ಸಲಹೆ

 

ಮುಂಬೈ:ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಿಗರೇಟ್ ಮತ್ತು ಬೀಡಿಗಳ ಮಾರಾಟವನ್ನು ತಾತ್ಕಾಲಿಕವಾಗಿ ನಿಷೇಧಿಸುವಂತೆ ಸೂಚಿಸಿದ ಬಾಂಬೆ ಹೈಕೋರ್ಟ್ ಗುರುವಾರ ಧೂಮಪಾನಕ್ಕೆ ವ್ಯಸನಿಯಾಗಿದ್ದ ಕೋವಿಡ್ -19 ರೋಗಿಗಳ ಮಾಹಿತಿಯೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪ್ರತಿಕ್ರಿಯೆ ಕೋರಿದೆ. ಕೋವಿಡ್ -19 ವೈರಸ್ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ ಮತ್ತು ದುರ್ಬಲ ಶ್ವಾಸಕೋಶಗಳು ತೀವ್ರವಾಗಿ ಪರಿಣಾಮ ಬೀರುತ್ತವೆ ಎಂದು ಸರ್ಕಾರಗಳು ಇಂತಹ ನಿಷೇಧವನ್ನು ಪರಿಗಣಿಸುವ ಅಭಿಪ್ರಾಯವಿದೆ ಎಂದು ನ್ಯಾಯಾಲಯ ಹೇಳಿದೆ.

ಕೋವಿಡ್ -19 ರೋಗಿಗಳಿಗೆ ರೆಮ್ಡೆಸಿವಿರ್ ಔಷಧಿ ಲಭ್ಯವಾಗುವಂತೆ ಮಾಡಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಖಚಿತಪಡಿಸಿಕೊಳ್ಳುವಂತೆ ನ್ಯಾಯಾಲಯವು ಮಹಾರಾಷ್ಟ್ರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು, ರೋಗಿಯನ್ನು ಅಥವಾ ಸಂಬಂಧಿಕರನ್ನು ಒಂದು‌ಕಡೆಯಿಂದ ಇನ್ನೊಂದು ಕಡೆಗೆ ಓಡಿಸಬಾರದು ಎಂದಿದೆ.

ಪರಿಣಾಮಕಾರಿ ಕೋವಿಡ್ -19 ನಿರ್ವಹಣೆಯನ್ನು ಕೋರಿ ಪಿಐಎಲ್ ಗುರುವಾರ ವಿಚಾರಣೆ ನಡೆಸಿ ವಿವರವಾದ ಆದೇಶವನ್ನು ಶುಕ್ರವಾರ ಬೆಳಿಗ್ಗೆ ಲಭ್ಯಗೊಳಿಸಲಾಯಿತು.

ಕೋವಿಡ್ -19 ನಿಂದ ಪ್ರಭಾವಿತರಾದ ಮತ್ತು ವಿಮರ್ಶಕರಾಗಿರುವ ವ್ಯಕ್ತಿಗಳು ಸಿಗರೇಟ್ ಮತ್ತು ಬೀಡಿಗಳನ್ನು ಧೂಮಪಾನ ಮಾಡುವ ವ್ಯಕ್ತಿಗಳೇ ಎಂಬ ಬಗ್ಗೆ ನಾವು ಅಷ್ಟೇ ಕಾಳಜಿ ವಹಿಸುತ್ತೇವೆ, ಏಕೆಂದರೆ ಕೋವಿಡ್ -19 ವೈರಸ್ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ ಮತ್ತು ದುರ್ಬಲ ಶ್ವಾಸಕೋಶಗಳು ಹೆಚ್ಚು ಪರಿಣಾಮ ಬೀರುತ್ತವೆ ಎಂದು ತೀವ್ರವಾಗಿ, 'ಹೈಕೋರ್ಟ್ ಗಮನಿಸಿದೆ.

ಧೂಮಪಾನಿಗಳ ಮೇಲೆ ಕೋವಿಡ್ -19 ಪರಿಣಾಮದ ಬಗ್ಗೆ ಯಾವುದೇ ಮಾಹಿತಿ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಸಾರ್ವಜನಿಕ ವಲಯದಲ್ಲಿ ಲಭ್ಯವಿಲ್ಲ ಎಂದು ಗಮನಿಸಿದ ನ್ಯಾಯಪೀಠ, 'ಇದು ಸಮಸ್ಯೆಯಾಗಿದ್ದರೆ ಮತ್ತು ನಾಗರಿಕರ ಆರೋಗ್ಯಕ್ಕೆ ಮಾರಕವಾಗಿದ್ದರೆ, ನಾವು ಸಾಂಕ್ರಾಮಿಕ ಸಮಯದಲ್ಲಿ ಸಿಗರೇಟ್ ಮತ್ತು ಬೀಡಿಗಳ ಮಾರಾಟವನ್ನು ನಿಷೇಧಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂಬ ಅಭಿಪ್ರಾಯ ಪಟ್ಟಿದೆ '

(ಮಾಹಿತಿ ಕೃಪೆ Kannada News Now)

ಇಂದು ಚಿನ್ನದ ಬೆಲೆ ಏರಿಕೆ: ಬೆಳ್ಳಿ ಬೆಲೆ ಮತ್ತಷ್ಟು ಹೆಚ್ಚಳ

 

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಕುಸಿತದ ಬಳಿಕ ಶುಕ್ರವಾರ ಮತ್ತಷ್ಟು ಏರಿಕೆಗೊಂಡಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಪ್ರತಿ ಗ್ರಾಂಗೆ ಶೇಕಡಾ 0.32ರಷ್ಟು ಏರಿಕೆಗೊಂಡು 47,927 ರೂಪಾಯಿಗೆ ತಲುಪಿದ್ದರೆ, ಬೆಳ್ಳಿ ಶೇಕಡಾ 0.25ರಷ್ಟು ಹೆಚ್ಚಳವಾಗಿ ಪ್ರತಿ ಕೆಜಿಗೆ 69,389 ರೂಪಾಯಿಗೆ ತಲುಪಿದೆ.

ಕಳೆದ ವಹಿವಾಟಿನಲ್ಲಿ ಚಿನ್ನ ಶೇಕಡಾ 0.83ರಷ್ಟು ಮತ್ತು ಬೆಳ್ಳಿ ಶೇಕಡಾ 1.6ರಷ್ಟು ಕುಸಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ದುರ್ಬಲದ ಜೊತೆಗೆ ಚಿನ್ನದ ಬೆಲೆ ಹೆಚ್ಚಾಗಿದೆ.

ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.2ರಷ್ಟು ಏರಿಕೆಯಾಗಿ 1,787.11 ಡಾಲರ್‌ಗೆ ತಲುಪಿದೆ. ಈ ವಾರ ಇಲ್ಲಿಯವರೆಗೆ ಚಿನ್ನವು ಸುಮಾರು ಶೇಕಡಾ 0.6ರಷ್ಟು ಹೆಚ್ಚಾಗಿದೆ.

ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿ ಔನ್ಸ್‌ಗೆ ಶೇಕಡಾ 0.3ರಷ್ಟು ಇಳಿದು 26.10 ಡಾಲರ್‌ಗೆ ತಲುಪಿದ್ದರೆ, ಪ್ಲಾಟಿನಂ ಸ್ಥಿರವಾಗಿ 1,203.10 ಡಾಲರ್‌ಗೆ ತಲುಪಿದೆ.

(ಮಾಹಿತಿ ಕೃಪೆ Good Returns)

ವಲಸೆ ಕಾರ್ಮಿಕರು ಮರಳಿ ಹೋಗದಂತೆ ಸರ್ಕಾರ ಮನವಿ

 

ಬೆಂಗಳೂರು,ಏ.23- ಕೋವಿಡ್ ನಿಯಂತ್ರಣಕ್ಕಾಗಿ ದೇಶಾದ್ಯಂತ್ ಲಾಕ್‍ಡೌನ್ ಜಾರಿಗೊಳಿಸುವ ಯಾವುದೇ ಯೋಜನೆ ಸದ್ಯಕ್ಕೆ ಸರ್ಕಾರದ ಮುಂದೆ ಇಲ್ಲದೇ ಇರುವುದರಿಂದ ಕಾರ್ಮಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಕಾರ್ಮಿಕ ಇಲಾಖೆ ಮನವಿ ಮಾಡಿದೆ. ಒಂದೆಡೆ ಪೊಲೀಸರು ಎಲ್ಲಾ ರೀತಿಯ ವ್ಯಾಪಾರ ವಹಿವಾಟು ಅಂಗಡಿಗಳನ್ನು ಮುಚ್ಚಿಸಿಕೊಂಡು ಬರುತ್ತಿದ್ದಾರೆ. ಮಾಲೀಕರು ವ್ಯವಹಾರ ನಡೆಸದೇ ಇರುವುದರಿಂದ ಕಾರ್ಮಿಕರಿಗೆ ವೇತನ, ಕಟ್ಟಡದ ಬಾಡಿಗೆ, ವಿದ್ಯುತ್ ಹಾಗೂ ನೀರಿನ ಬಿಲ್ ಸೇರಿದಂತೆ ಇತರ ವೆಚ್ಚಗಳನ್ನು ಭರಿಸಲು ಪರದಾಡುವ ಸ್ಥಿತಿಯಲ್ಲಿದೆ.

ವಾಸ್ತವತೆ ಕಣ್ಣೆದುರಿಗೇ ಇದ್ದರೂ ಕಾರ್ಮಿಕ ಇಲಾಖೆ ವಿಚಿತ್ರ ರೀತಿಯಲ್ಲಿ ಪ್ರಕಟಣೆ ಹೊರಡಿಸಿದ್ದು, ಸರ್ಕಾರ ಮತ್ತು ಕಾರ್ಮಿಕರ ಇಲಾಖೆ ನಿಮ್ಮ ಜತೆಯಲ್ಲಿದೆ ಆತಂಕ ಪಡಬೇಡಿ ಎಂದು ಧೈರ್ಯ ಹೇಳುವ ಪ್ರಯತ್ನ ಮಾಡಿದೆ. ರಾಜ್ಯದಲ್ಲಿ ಲಾಕ್‍ಡೌನ್ ಇಲ್ಲ ಎಂದು ಮುಖ್ಯಮಂತ್ರಿ ಕೂಡ ಸ್ಪಷ್ಟಪಡಿಸಿ ದ್ದಾರೆ.

ವಲಸೆ ಕಾರ್ಮಿಕರು ಗಾಳಿಮಾತು ಹಾಗೂ ಸುಳ್ಳು ವದಂತಿಗಳಿಗೆ ಧೈರ್ಯಗೆಡುವ ಅಗತ್ಯವಿಲ್ಲ. ತಮ್ಮ ಊರುಗಳಿಗೆ ಹೋಗುವ ಅಗತ್ಯವಿಲ್ಲ. ನೀವು ಈಗ ಕಾರ್ಯ ನಿರ್ವಹಿಸುತ್ತಿರುವ ಜಾಗದಲ್ಲೇ ಸರ್ಕಾರದ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಕೆಲಸ ಮುಂದುವರೆಸಬೇಕು. ಹೊರಗುತ್ತಿಗೆ ನಿರ್ವಹಿಸುವ ಗುತ್ತಿಗೆದಾರರು ನಿಯಮಾವಳಿಗಳನ್ನು ಪಾಲಿಸಿ ಮಾಸ್ಕ್, ಸ್ಯಾನಿಟೇಜರ್ ವ್ಯವಸ್ಥೆ ಮಾಡಬೇಕು, ತಮ್ಮ ಬಳಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಗುರುತಿನ ಚೀಟಿ ಕೊಡಬೇಕು ಎಂದು ಇಲಾಖೆ ಸೂಚನೆ ನೀಡಿದೆ.

ಮೇ 1ರಿಂದ ರಾಜ್ಯಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ನಿಯಂತ್ರಣ ಲಸಿಕೆ ಹಾಕಲಾಗುತ್ತದೆ. ಕಾರ್ಮಿಕರು ಲಸಿಕೆ ಹಾಕಿಸಿಕೊಳ್ಳಿ ಎಂದು ಇಲಾಖೆ ಸಲಹೆ ನೀಡಿದೆ. ಈಗಾಗಲೇ ಮೊದಲ ಹಂತದ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೀಡಾಗಿ ನರಳಿದ ಕಾರ್ಮಿಕರು ಕೋವಿಡ್‍ನ ಎರಡನೇ ಅಲೆ ಹೆಚ್ಚಾದಾಗ ಸದ್ದಿಲ್ಲದೆ ತಮ್ಮ ಊರುಗಳತ್ತ ಮುಖ ಮಾಡಿದರು.

ಈಗಾಗಲೇ ಬಹಳಷ್ಟು ಮಂದಿ ವಾಪಸ್ ಹೋಗಿದ್ದಾರೆ. ತಡವಾಗಿ ಎಚ್ಚೆತ್ತುಕೊಂಡಿರುವ ಕಾರ್ಮಿಕ ಇಲಾಖೆ ಈಗ ಧೈರ್ಯ ಹೇಳುವ ಪ್ರಯತ್ನ ಮಾಡಿದೆ. ಆದರೆ, ಈಗಾಗಲೇ ಅನಕೃತ ಲಾಕ್‍ಡೌನ್‍ನಿಂದ ಉದ್ಯೋಗ ವಿಲ್ಲದೆ ಪರಿತಪಿಸುತ್ತಿರುವವರಿಗೆ ಯಾವ ರೀತಿ ನೆರವು ನೀಡಲಾಗುತ್ತಿದೆ ಎಂಬ ಮಾಹಿತಿಯನ್ನು ಕಾರ್ಮಿಕ ಇಲಾಖೆ ತಮ್ಮ ಪ್ರಕಟಣೆಯಲ್ಲಿ ತಿಳಿಸಿಲ್ಲ.

(ಮಾಹಿತಿ ಕೃಪೆ ಈ ಸಂಜೆ)

ದೇಶದ 80 ಕೋಟಿ ಜನರಿಗೆ 2 ತಿಂಗಳು ಉಚಿತ ಆಹಾರ ಧಾನ್ಯ ನೀಡುವುದಾಗಿ ಘೋಷಿಸಿದ ಪ್ರಧಾನಿ ಮೋದಿ

 

ನವದೆಹಲಿ : ಕೇಂದ್ರ ಸರ್ಕಾರವು ಮುಂದಿನ ಎರಡು ತಿಂಗಳು (ಮೇ ಮತ್ತು ಜೂನ್) ಸುಮಾರು 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯವನ್ನು ಒದಗಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದರು. ಇದನ್ನು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಆನ್ ಯೋಜನೆ ಮೂಲಕ ಅನುಕೂಲ ಮಾಡಿಕೊಡಲಾಗುವುದು.

(ಮಾಹಿತಿ ಕೃಪೆ Kannada News Now)

ಯೋಜನೆಯ ಪ್ರಕಾರ, ಕೇಂದ್ರವು ಫಲಾನುಭವಿಗಳಿಗೆ 5 ಕೆಜಿ ಉಚಿತ ಆಹಾರ ಧಾನ್ಯವನ್ನು ಒದಗಿಸಲಿದೆ. ಇದಕ್ಕಾಗಿ ೨೬,೦೦೦ ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ದೇಶವು ಕೋವಿಡ್-19 ರ ಎರಡನೇ ಅಲೆಯನ್ನು ಎದುರಿಸುತ್ತಿರುವ ಸಮಯದಲ್ಲಿ ಬಡವರಿಗೆ ಪೌಷ್ಠಿಕಾಂಶ ನೀಡುವುದು ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದರು.

ಕಳೆದ ವರ್ಷ ಮಾರ್ಚ್ ನಲ್ಲಿ ಸರ್ಕಾರ ಪಿಎಂ ಗರೀಬ್ ಕಲ್ಯಾಣ್ ಆನ್ ಯೋಜನೆಯನ್ನು ಘೋಷಿಸಿತು, ಅದರ ಅಡಿಯಲ್ಲಿ ಬಡವರಿಗೆ ಸುಮಾರು ಮೂರು ತಿಂಗಳ ಕಾಲ (ಏಪ್ರಿಲ್-ಜೂನ್) ಉಚಿತ ಆಹಾರ ಧಾನ್ಯವನ್ನು ಒದಗಿಸಿತು.

ಆ ಸಮಯದಲ್ಲಿ ಸರ್ಕಾರವು ವಿಶೇಷ ಯೋಜನೆಯು ಸುಮಾರು ೮೧ ಕೋಟಿ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ ಮತ್ತು ಅವರಿಗೆ ಪ್ರತಿ ವ್ಯಕ್ತಿಗೆ ತಿಂಗಳಿಗೆ ೫ ಕೆಜಿ ಪ್ರಮಾಣದಲ್ಲಿ ಉಚಿತ ಆಹಾರ ಧಾನ್ಯಗಳ (ಅಕ್ಕಿ/ಗೋಧಿ) ಹೆಚ್ಚುವರಿ ಕೋಟಾವನ್ನು ಒದಗಿಸಲಾಗುವುದು ಎಂದು ಹೇಳಿದೆ.

ಸರ್ಕಾರದ ನಿಯಮಗಳು ನಮಗೇ ಅರ್ಥವಾಗುತ್ತಿಲ್ಲ; ಡಿ.ಕೆ.ಶಿವಕುಮಾರ್ ಆಕ್ರೋಶ

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿ ಮಾಡುವ ನಿಯಮಗಳು ನಮಗೆ ಅರ್ಥವಾಗಿಲ್ಲ. ನಿನ್ನೆ ಏಕಾಏಕಿ ಅಂಗಡಿಗಳನ್ನು ಬಂದ್ ಮಾಡಿಸಿದರು. ರಾಜ್ಯದಲ್ಲಿ ಅಘೋಷಿತ ಲಾಕ್ ಡೌನ್ ಜಾರಿಯಾಗಿದೆ. ಪ್ರತಿದಿನ ನಿಯಮಗಳನ್ನು ಬದಲಿಸುತ್ತಿದ್ದಾರೆ. ಮಾರ್ಗಸೂಚಿ ಬಗ್ಗೆ ಸರ್ಕಾರ ಸ್ಪಷ್ಟತೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಯಾವುದು ಓಪನ್, ಯಾವುದು ಬಂದ್ ಎಂದು ಸರ್ಕಾರ ಸರಿಯಾಗಿ ಹೇಳಲಿ, ನಿಯಮದ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ. ವರ್ತಕರು, ಬಡವರು, ಆರ್ಥಿಕ ಪರಿಸ್ಥಿತಿ ಬಗ್ಗೆ ಸರ್ಕಾರ ಯೋಚನೆ ಮಾಡಿಲ್ಲ. ಜನರು ಆತಂಕಕ್ಕಿಡಾಗಿದ್ದಾರೆ ಎಂದು ಕಿಡಿಕಾರಿದರು.

ಮೊನ್ನೆ ಮುಖ್ಯಕಾರ್ಯದರ್ಶಿ ಹೇಳಿದ್ದೇನು? ನಿನ್ನೆ ಸರ್ಕಾರ ಮಾಡಿದ್ದೇನು? ಜನಸಾಮಾನ್ಯರ ಆರೋಗ್ಯದ ಬಗ್ಗೆಯೂ ಸರ್ಕಾರ ಯೋಚನೆ ಮಾಡುತ್ತಿಲ್ಲ, ಆರ್ಥಿಕ ಪರಿಸ್ಥಿತಿ ಬಗ್ಗೆಯೂ ಚಿಂತಿಸುತ್ತಿಲ್ಲ. ಲಾಕ್ ಡೌನ್ ಎಂದು ಘೋಷಿಸಿಲ್ಲ. ಆದರೆ ದಿಢೀರ್ ಆಗಿ ಎಲ್ಲವನ್ನು ಬಂದ್ ಮಾಡಿಸಿದ್ದಾರೆ. ಸರ್ಕಾರದ ನಿಯಮಗಳು ನಮಗೇ ಅರ್ಥವಾಗುತ್ತಿಲ್ಲ ಇನ್ನು ಇದರಿಂದ ಜನರ ಪರಿಸ್ಥಿತಿ ಏನಾಗಬೇಡ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಕೊವಿಡ್ ಮಾರ್ಗಸೂಚಿ ಉಲ್ಲಂಘಿಸಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವ ಸಚಿವ ಶ್ರೀರಾಮುಲು ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

(ಮಾಹಿತಿ ಕೃಪೆ ಕನ್ನಡದುನಿಯಾ)

'ಸಾರಿಗೆ ಬಸ್ ಪ್ರಯಾಣಿಕ'ರೇ ಗಮನಿಸಿ : ಇಂದು ರಾತ್ರಿಯಿಂದ 'ವಾರಾಂತ್ಯ ಕರ್ಪ್ಯೂ' ಇದ್ರು 'KSRTC ಬಸ್ ಸಂಚಾರ

 

ಬೆಂಗಳೂರು : ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ಅಬ್ಬರಕ್ಕೆ ಬ್ರೇಕ್ ಹಾಕುವ ಸಂಬಂಧ ರಾಜ್ಯ ಸರ್ಕಾರ, ನೈಟ್ ಹಾಗೂ ವಾರಾಂತ್ಯ ಕರ್ಪ್ಯೂ ಜಾರಿಗೊಳಿಸಿದೆ. ಅದರಲ್ಲೂ ವಾರಾಂತ್ಯ ಸಂಪೂರ್ಣ ಕರ್ಪ್ಯೂ ಜಾರಿಗೊಳಿಸಲಾಗಿದೆ. ಇದರ ಮಧ್ಯೆಯೂ ಸಾರಿಗೆ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗಿನ ಕರ್ಪ್ಯೂ ಮಧ್ಯೆಯೂ ಪ್ರಯಾಣಿಕರ ಅಗತ್ಯತೆಗೆ ಅನುಗುಣವಾಗಿ ಕೆ ಎಸ್ ಆರ್ ಟಿ ಸಿ ಬಸ್ ಸಂಚರಿಸಲಿದೆ.

ಈ ಕುರಿತಂತೆ ಕೆ ಎಸ್ ಆರ್ ಟಿ ಸಿಯ ವ್ಯವಸ್ಥಾಪಕ ನಿರ್ದೇಶಕರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು ಕರ್ನಾಟಕ ಸರ್ಕಾರವು ವಾರಾಂತ್ಯದಲ್ಲಿ ಅಂದರೆ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಕರ್ಪ್ಯೂ ಜಾರಿಗೊಳಿಸಿರುತ್ತದೆ.

ಈ ಅವಧಿಯಲ್ಲಿ ಕೆ ಎಸ್ ಆರ್ ಟಿ ಸಿ ನಿಗಮದ ಬಸ್ಸುಗಳ ಕಾರ್ಯಾಚರಣೆ ಇದ್ದು, ಪ್ರಯಾಣಿಕರ ದಟ್ಟಣೆ ಮತ್ತು ಅವಶ್ಯಕತೆ ಅನುಗುಣವಾಗಿ ಮಾತ್ರ ಸಾರಿಗೆಗಳನ್ನು ಕಾರ್ಯಾಚರರಿಸಲಾಗುವುದು. ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದ್ದಾರೆ.

ವರದಿ : ವಸಂತ ಬಿ ಈಶ್ವರಗೆರೆ

(ಮಾಹಿತಿ ಕೃಪೆ Kannada News Now ) 

ಗರ್ಭಿಣಿ ಮಹಿಳೆಯರಿಗೆ ಸಿಗ್ತಿಲ್ಲ ಕೊರೊನಾ ಚಿಕಿತ್ಸೆ.. ಇದು ಎರಡು ಜೀವಗಳ ಪ್ರಶ್ನೆ ಸಾರ್ ಎಂದು ಕುಟುಂಬಸ್ಥರ ಕಣ್ಣೀರು

 

ಬೆಂಗಳೂರು: ಕೊರೊನಾದ ಎರಡನೇ ಅಲೆ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಅದರಲ್ಲೂ ಬೆಂಗಳೂರಿನ ಶಿವಾಜಿನಗರದ ಘೋಷಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಗರ್ಭಿಣಿ ಮಹಿಳೆಯರ ಪರಿಸ್ಥಿತಿ ಹೇಳತೀರದ್ದು. ಚಿಕಿತ್ಸೆ ಇಲ್ಲದೆ ಗರ್ಭೀಣಿಯರು ನರಳಾಡುತ್ತಿದ್ದಾರೆ ಎಂಬ ಆರೋಪಗಳು ಹೇಳಿ ಬರುತ್ತಿವೆ. ಕೊರೊನಾ ಪಾಸಿಟಿವ್ ಬಂದ ಮಹಿಳೆಯರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ಮಹಿಳೆ ಕುಟುಂಬಸ್ಥರು ಆರೋಪ ಮಾಡುತ್ತಿದ್ದು ಆಸ್ಪತ್ರೆ ಮುಂದೆ ಆಕ್ರೋಶ ಹೊರ ಹಾಕಿದ್ದಾರೆ.

ಶಿವಾಜಿನಗರದ ಘೋಷಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಗರ್ಭಿಣಿಯರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆಯಂತೆ. ಕಣ್ಣೀರು ಹಾಕುತ್ತ ಸೋಂಕಿತ ಮಹಿಳೆ ತನ್ನ ನೋವನ್ನು ತೋಡಿಕೊಂಡಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ಆಸ್ಪತ್ರೆ ಮುಂದೆ ಕುಟುಂಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಅಡ್ಮಿಟ್ ಮಾಡಿ ಮೂರು ದಿನವಾದ್ರೂ, ಗರ್ಭಿಣಿಯರಿಗೆ ಚಿಕಿತ್ಸೆ ಸಿಗ್ತಿಲ್ಲ. ಕುಟುಂಬಸ್ಥರ ಸಂಪರ್ಕಕ್ಕೂ ಬಿಡ್ತಿಲ್ಲವಂತೆ. ಹೀಗಾಗಿ ಗರ್ಭಿಣಿ ಮಹಿಳೆಯರು ವಿಡಿಯೋ ಕಾಲ್ ಮತ್ತು ಫೋನ್ ಮಾಡಿ ಗೋಳು ತೋಡಿಕೊಳ್ಳುತ್ತಿದ್ದಾರೆ.

ಮತ್ತೊಬ್ಬ ಮಹಿಳೆಗೆ ಮೂರು ದಿನದಿಂದ ಬ್ಲೀಡಿಂಗ್ ಆಗ್ತಿದ್ರೂ, ನೋಡೊರೇ ಇಲ್ಲವಂತೆ. ಕೊರೊನಾ ಇರೋ ಕಾರಣಕ್ಕೆ ಅವ್ರನ್ನ ಮುಟ್ಟಲು ಕೂಡ ವೈದ್ಯರು ಹಿಂದೆ ಸರಿಯುತ್ತಿದ್ದಾರೆ ಎಂದು ಸೋಂಕಿತೆ ಕಣ್ಣಿರು ಹಾಕುತ್ತ ನೋವು ಹೇಳಿಕೊಂಡಿದ್ದಾರೆ. ಇಲ್ಲಿ ಚಿಕಿತ್ಸೆ ಕೊಡದಿದ್ರೆ ಡಿಸ್ಚಾರ್ಜ್ ಮಾಡಿ, ನಾವು ಬೇರೆ ಕಡೆ ಹೋಗುತ್ತೇವೆ ಅಂತ ಬೇಡಿಕೊಂಡ್ರು, ಡಿಸ್ಚಾರ್ಜ್ ಮಾಡುತ್ತಿಲ್ಲ. ಈ ಮೊದಲೇ ಬೆಡ್ ಬುಕ್ ಮಾಡಿ ಆಸ್ಪತ್ರೆಗೆ ಬರಬೇಕು ಎಂದು ಸಿಬ್ಬಂದಿ ಬೈಯುತ್ತಿದ್ದಾರೆ ಎಂದು ಆಸ್ಪತ್ರೆ ಹೊರಗೆ ನಿಂತು ಕುಟುಂಬಸ್ಥರು ಗೋಳಾಡುತ್ತಿದ್ದಾರೆ.

ಅವ್ಯವಸ್ಥೆ ವಿರುದ್ಧ ಕುಟುಂಬಸ್ಥರ ಆಕ್ರೋಶ
ಸ್ಮಶಾನಕ್ಕೆ ಹೋಗಿ ಪರಿಸ್ಥಿತಿ ನೋಡೋದಲ್ಲ. ಇಲ್ಲಿ ಬಂದು ನೋಡಿ ಪರಿಸ್ಥಿತಿ ಹೇಗಿದೆ ಎಂದು. ಮೊದಲೇ ಬೆಡ್ ಬುಕ್ ಮಾಡಬೇಕು ಅಂತಾರೆ. ಗರ್ಭಿಣಿ ಅಂತಾನೂ ನೋಡಲ್ಲ, ಆಕೆ ನೋವಿನಿಂದ ನರಳುತ್ತಿದ್ರು ಚಿಕಿತ್ಸೆ ಕೊಡ್ತಿಲ್ಲ. ಪ್ರಾಣ ಹೋದ್ರೆ ಯಾರು ಹೊಣೆ ಆಗ್ತಾರೆ. ಒಂದಲ್ಲ, ಎರಡೂ ಜೀವಗಳ ಪ್ರಶ್ನೆ ಇದು. ಸರ್ಕಾರ ಇಂತಿಷ್ಟು ಹೆಣಗಳ ಲೆಕ್ಕ ಕೊಡ್ತೀವಿ ಅಂತ ಕಮಿಟ್ ಆಗಿರಬೇಕು. ಅದಕ್ಕೆ ಸಾಮಾನ್ಯರಿಗೆ ಏನೇ ಆದ್ರೂ, ಸಾವು, ನೋವಾದ್ರು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಕುಟುಂಸ್ಥರು ಬೇಸರ ವ್ಯಕ್ತ ಪಡಿಸಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಆಕ್ಸಿಜನ್ ಅಭಾವ ಶುರುವಾಗಿದೆ. ಒಂದು ಗಂಟೆಗೆ 1,500 ರೂ. ಚಾರ್ಜ್ ಮಾಡುತ್ತಿದ್ದಾರೆ. 120 ಗಂಟೆ ಆಕ್ಸಿಜನ್ ಬಳಕೆ‌ ಮಾಡಿದ್ರೆ ಖಾಸಗಿ ಆಸ್ಪತ್ರೆಯಲ್ಲಿ1,80,000 ರೂ. ಬಿಲ್ ಆಗುತ್ತೆ.

ಇದನ್ನೂ ಓದಿ: ನಾವು ಮನೆ ಬಿಟ್ಟು ಕೆಲಸ ಮಾಡ್ತಾ ಇದೀವಿ, ನಾವು ಸತ್ರೂ ಯಾರೂ ಕೇಳೋರೆ ಇಲ್ಲ! ಚಿತಾಗಾರದ ಸಿಬ್ಬಂದಿ ಹೋರಾಟದ ಎಚ್ಚರಿಕೆ

The post ಗರ್ಭಿಣಿ ಮಹಿಳೆಯರಿಗೆ ಸಿಗ್ತಿಲ್ಲ ಕೊರೊನಾ ಚಿಕಿತ್ಸೆ.. ಇದು ಎರಡು ಜೀವಗಳ ಪ್ರಶ್ನೆ ಸಾರ್ ಎಂದು ಕುಟುಂಬಸ್ಥರ ಕಣ್ಣೀರು appeared first on TV9 Kannada.

ಕೊರೋನಾ ಸಂಕಷ್ಟ: ಜನರಿಗೆ ನೆರವಾಗಿ- ಶಾಸಕರಿಗೆ ಸಿದ್ದರಾಮಯ್ಯ ಮನವಿ

 

ಬೆಂಗಳೂರು: ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ನೆರವಾಗುವಂತೆ ಕಾಂಗ್ರೆಸ್ ಪಕ್ಷದ ಶಾಸಕರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಕೋವಿಡ್ 2ನೇ ಅಲೆ ರಾಜ್ಯ ಮತ್ತು ರಾಷ್ಟ್ರವನ್ನು ಬಾಧಿಸುತ್ತಿದೆ. ತಜ್ಞರುಗಳು ಮತ್ತು ಪರಿಣಿತರು 2020ರ ನವೆಂಬರ್ ತಿಂಗಳಲ್ಲಿಯೇ ಕೋವಿಡ್ 2ನೇ ಅಲೆ ಫೆಬ್ರವರಿ ಅಥವಾ ಮಾರ್ಚ್ ತಿಂಗಳ ಹೊತ್ತಿಗೆ ತನ್ನ ಭೀಕರತೆಯನ್ನು ಪ್ರದರ್ಶಿಸಲಿದೆ ಎಂದು ಹೇಳಿದ್ದರು. ಈ ಎಚ್ಚರಿಕೆಗಳನ್ನು ಸರ್ಕಾರಗಳು ಕಸದ ಬುಟ್ಟಿಗೆ ಎಸೆದವು. ಸಮರ್ಪಕವಾಗಿ ಟೆಸ್ಟಿಂಗ್ ಗಳನ್ನು ಸಹ ನಡೆಸುತ್ತಿಲ್ಲ, ನಡೆಸಿದ ಟೆಸ್ಟ್ ವರದಿ ವಾರವಾದರೂ ಜನರ ಕೈಗೆ ವೈದ್ಯರುಗಳ ಕೈಗೆ ಸಿಗುತ್ತಿಲ್ಲ. ಇದೆಲ್ಲದರಿಂದಾಗಿ ಕೋವಿಡ್‍ನಿಂದ ಮರಣ ಹೊಂದುವವರಷ್ಟೆ ಆತಂಕದಿಂದ ಮರಣ ಹೊಂದುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ತಜ್ಞರ ವರದಿಯನ್ನು ಗಂಭೀರವಾಗಿ ಪರಿಗಣಿಸಿ ಲ್ಯಾಬ್ ಗಳು, ಆಸ್ಪತ್ರೆಗಳು, ಹಾಸಿಗೆಗಳು, ಆಕ್ಸಿಜನ್ ವ್ಯವಸ್ಥೆ, ಐ.ಸಿ.ಯು, ವೆಂಟಿಲೇಟರ್ ಗಳು, ಕೋವಿಡ್ ನಿಯಂತ್ರಣಕ್ಕೆ ಬೇಕಾದ ಔಷಧಿಗಳು ಇತ್ಯಾದಿಯಾಗಿ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದರೆ ಇವತ್ತಿನ ಈ ಅನಾಹುತವನ್ನು ತಪ್ಪಿಸಬಹುದಾಗಿತ್ತು. ಈ ಸಿದ್ದತೆಗಳನ್ನೇನೂ ಮಾಡಿಕೊಳ್ಳದ ಕಾರಣದಿಂದಾಗಿಯೇ ಜನರು ಅನಾಥರಂತೆ ರಸ್ತೆಗಳಲ್ಲಿ, ಆಸ್ಪತ್ರೆಯ ವರಾಂಡಗಳಲ್ಲಿ ಮರಣ ಹೊಂದುತ್ತಿದ್ದಾರೆ.ಮರಣ ಹೊಂದುತ್ತಿರುವ ಬಹುಪಾಲು ಜನರು ರಾಜಕೀಯ ನಿರ್ಲಕ್ಷ್ಯದಿಂದ ಆದ ಕೊಲೆಗಳು ಎನ್ನದೆ ಅನ್ಯ ದಾರಿ ಇಲ್ಲ ಎಂದಿದ್ದಾರೆ.

ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರಗಳಿಗೆ ಶವಸಂಸ್ಕಾರವನ್ನೂ ಸಹ ಘನತೆಯಿಂದ ನಡೆಸಲು ಸಾಧ್ಯವಾಗದಷ್ಟರ ಮಟ್ಟಿಗೆ ಪರಿಸ್ಥಿತಿ ಅರಾಜಕವಾಗಿದೆ. ಸಂಕಷ್ಟದಲ್ಲಿರುವ ಬಡವರು ಹಸಿವಿನಿಂದ ನರಳದಂತೆ ನೋಡಿಕೊಳ್ಳಲು, ಪಡಿತರ ವ್ಯವಸ್ಥೆಯನ್ನು ಇನ್ನಷ್ಟುಸಮರ್ಪಕಗೊಳಿಸಬೇಕಾಗಿತ್ತು. ಅದರ ಬದಲಾಗಿ ಜನರಿಗೆ ನೀಡುವ ಪಡಿತರ ಅಕ್ಕಿಯನ್ನು 2 ಕೆ.ಜಿ ಗೆ ಇಳಿಸಲಾಗಿದೆ. ಇಂದಿರಾ ಕ್ಯಾಂಟಿನ್‍ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಇಂತಹ ಸಂದರ್ಭದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರು, ಕೋವಿಡ್‍ನ 2ನೇ ಅಲೆ ರಾಕ್ಷಸ ರೂಪವನ್ನು ತಳೆಯುತ್ತಿರುವ ಈ ಸಂದರ್ಭದಲ್ಲಿ ಜನರ ಜೊತೆ ನಿಂತು, ಆಸ್ಪತ್ರೆ, ಆಕ್ಸಿಜನ್, ಔಷಧಿಗಳು, ಆಂಬ್ಯುಲೆನ್ಸ್‍ಗಳು, ಇನ್ನಿತರ ಚಿಕಿತ್ಸೆಗಳಿಗೆ ನೆರವಾಗಬೇಕು ಹಾಗೂ ಹಸಿವಿನಿಂದ ಬಳಲುತ್ತಿರುವವರಿಗೆ ಅನ್ನ ಆಹಾರದ ವ್ಯವಸ್ಥೆಯನ್ನು ಸಹ ಕಳೆದ ವರ್ಷದಂತೆ ಈ ವರ್ಷವೂ ಮಾಡುವ ಮೂಲಕ ಜನರ ಸಕಲ ಸಂಕಷ್ಟಗಳಿಗೆ ಸ್ಪಂದಿಸುವ ಮಾನವೀಯ ಕಾರ್ಯಗಳನ್ನು ಮಾಡಬೇಕೆಂದು ಸಿದ್ದರಾಮಯ್ಯ ಕೋರಿದ್ದಾರೆ. 

(ಮಾಹಿತಿ ಕೃಪೆ ಕನ್ನಡ ಪ್ರಭ )

Thursday, April 22, 2021

ಸಾರಿಗೆ ನೌಕರರ ಮುಷ್ಕರ ಅಂತ್ಯ: ಹೈಕೋರ್ಟ್‌ ಸೂಚನೆಗೆ ಮಣಿದ ಸಾರಿಗೆ ನೌಕರರ ಕೂಟ


 ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ವೇತನ ಪರಿಷ್ಕರಣೆಗೆ ಆಗ್ರಹಿಸಿ 15 ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಬುಧವಾರ ಸಂಜೆ ಅಂತ್ಯಗೊಳಿಸಿದರು.

ಹೈಕೋರ್ಟ್‌ ಸೂಚನೆಗೆ ಮಣಿದ ಸಾರಿಗೆ ನೌಕರರ ಕೂಟ, ಮುಷ್ಕರ ಕೈಬಿಡುವ ನಿರ್ಧಾರ ಘೋಷಿಸಿದೆ.

'ಕೋವಿಡ್‌ ಎರಡನೇ ಅಲೆ ವ್ಯಾಪಿಸುತ್ತಿರುವುದರಿಂದ ಸಾರಿಗೆ ನೌಕರರು ಮುಷ್ಕರ ನಡೆಸುವ ಸಮಯ ಇದಲ್ಲ' ಎಂದು ಹೈಕೋರ್ಟ್‌ ಮಂಗಳವಾರ ಕಟುವಾಗಿ ಹೇಳಿತ್ತು. ಬುಧವಾರ ಬೆಳಿಗ್ಗೆ ಯಿಂದಲೇ ಕರ್ತವ್ಯಕ್ಕೆ ಹಾಜರಾದ ನೌಕರರ ಸಂಖ್ಯೆಯಲ್ಲಿ ಗಣನೀಯ ಏರಿಕೆ
ಯಾಗಿತ್ತು. ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌, ಮುಷ್ಕರ ಅಂತ್ಯಗೊಳಿಸುವ ನಿರ್ಧಾರ ಪ್ರಕಟಿಸಿದರು.

'ಹೈಕೋರ್ಟ್‌ ನ್ಯಾಯಮೂರ್ತಿಗಳ ಸೂಚನೆಗೆ ತಲೆಬಾಗಿ ಸಾರಿಗೆ ನೌಕರರು ಮುಷ್ಕರ ಅಂತ್ಯಗೊಳಿಸುತ್ತಿದ್ದಾರೆ.

ಕರ್ತವ್ಯಕ್ಕೆ ಹಾಜರಾಗಬೇಕು ಎಂಬ ನ್ಯಾಯಾಲಯದ ಸೂಚನೆಯನ್ನು ನೌಕರರು ತಕ್ಷಣದಿಂದಲೇ ಪಾಲಿಸು
ತ್ತಾರೆ. ಬುಧವಾರ ಎರಡನೇ ಪಾಳಿಯ ನೌಕರರು ಕರ್ತವ್ಯಕ್ಕೆ ಹಾಜರಾಗಲಿದ್ದು, ಗುರುವಾರ ಎಲ್ಲ ನೌಕರರೂ ಕರ್ತವ್ಯಕ್ಕೆ ಮರಳುತ್ತಾರೆ' ಎಂದು ತಿಳಿಸಿದರು.

'ಕೋವಿಡ್‌ ಸಂಕಷ್ಟದ ಕಾಲದಲ್ಲಿ ಜನರಿಗೆ ತೊಂದರೆ ಮಾಡಬಾರದು ಎಂಬ ಸೂಚನೆಯನ್ನು ನ್ಯಾಯಾಲಯ ನೀಡಿದೆ. ಆ ಮಾತನ್ನು ಗೌರವಿಸಿ ತಾತ್ಕಾಲಿಕವಾಗಿ ಮುಷ್ಕರವನ್ನು ಅಂತ್ಯಗೊಳಿಸಲಾಗುತ್ತಿದೆ' ಎಂದರು.

15 ದಿನಗಳ ಹಗ್ಗ ಜಗ್ಗಾಟ

ಏಪ್ರಿಲ್‌ 7ರ ಮಧ್ಯಾಹ್ನದಿಂದಲೇ ಸಾರಿಗೆ ನಿಗಮಗಳ ನೌಕರರು ಮುಷ್ಕರ ಆರಂಭಿಸಿದ್ದರು. ಏ.8ರಿಂದ ರಾಜ್ಯದಾದ್ಯಂತ ಸಾರಿಗೆ ನಿಗಮಗಳ ಬಸ್‌ ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು. ನೋಟಿಸ್‌ ಜಾರಿ, ವರ್ಗಾವಣೆ, ಅಮಾನತು, ಕೆಲಸದಿಂದ ವಜಾ ಮಾಡುವ ಮೂಲಕ ನೌಕರರನ್ನು ಮಣಿಸಲು ಸಾರಿಗೆ ನಿಗಮಗಳು ಪ್ರಯತ್ನಿಸಿದ್ದವು.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಎನ್‌ಇಕೆಆರ್‌ಟಿಸಿಯ 975ಕಾಯಂ ನೌಕರರನ್ನು ಸೇವೆಯಿಂದ ವಜಾ ಮಾಡಲಾಗಿತ್ತು. ನಾಲ್ಕೂ ನಿಗಮಗಳ 995 ಟ್ರೈನಿ ನೌಕರರನ್ನು ಕೆಲಸದಿಂದ ಕೈಬಿಡಲಾಗಿದೆ. 2,941 ನೌಕರರನ್ನು ಅಮಾನತು ಮಾಡುವ ಮೂಲಕ ಉಳಿದ ಸಿಬ್ಬಂದಿಗೆ ಎಚ್ಚರಿಕೆಯ ಸಂದೇಶ ರವಾನಿಸಲು ಸಾರಿಗೆ ನಿಗಮಗಳು ಪ್ರಯತ್ನಿಸಿದ್ದವು.

13,000 ಬಸ್‌ ಸಂಚಾರ

ಮಂಗಳವಾರ ನಾಲ್ಕು ನಿಗಮಗಳ ಒಟ್ಟು 7,848 ಬಸ್‌ಗಳು ಸಂಚರಿಸಿದ್ದವು. ಹೈಕೋರ್ಟ್‌ ಸೂಚನೆಯ ಪರಿಣಾಮವಾಗಿ ಬುಧವಾರ ಬೆಳಿಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದರು. ರಾತ್ರಿಯವರೆಗೂ ಒಟ್ಟು 13,000 ಬಸ್‌ಗಳು ಸಂಚಾರ ನಡೆಸಿವೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

'ಮುಷ್ಕರದ ನಡುವೆಯೂ ಹಲವು ನೌಕರರು ಕರ್ತವ್ಯಕ್ಕೆ ಹಾಜರಾಗಿ ಸಹಕಾರ ನೀಡಿದ್ದಾರೆ. ಬುಧವಾರ 13,000 ಬಸ್‌ಗಳು ಸಂಚರಿಸಿದ್ದು, ಗುರುವಾರ ದಿಂದ ಪೂರ್ಣ ಪ್ರಮಾಣದಲ್ಲಿ ಬಸ್‌ ಗಳು ಸಂಚರಿಸಲಿವೆ' ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

₹ 287 ಕೋಟಿ ಆದಾಯ ನಷ್ಟ

15 ದಿನಗಳ ಅವಧಿಯ ನೌಕರರ ಮುಷ್ಕರದಿಂದಾಗಿ ನಾಲ್ಕು ಸಾರಿಗೆ ನಿಗಮ ಗಳಿಗೆ ಒಟ್ಟು ₹ 287 ಕೋಟಿ ಆದಾಯ ನಷ್ಟವಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕೆಎಸ್‌ಆರ್‌ಟಿಸಿಗೆ ₹ 122.50 ಕೋಟಿ, ಬಿಎಂಟಿಸಿಗೆ ₹ 45 ಕೋಟಿ, ಎನ್‌ಡಬ್ಲ್ಯುಕೆಆರ್‌ಟಿಸಿಗೆ ₹ 57.50 ಕೋಟಿ ಮತ್ತು ಎನ್‌ಇಕೆಆರ್‌ಟಿಸಿಗೆ ₹ 62 ಕೋಟಿ ಆದಾಯ ನಷ್ಟವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

(ಮಾಹಿತಿ ಕೃಪೆ ಪ್ರಜಾವಾಣಿ)

Wednesday, April 21, 2021

ALEART: ರಾಜ್ಯದಲ್ಲಿ ಇಂದಿನಿಂದ ಮೇ.4ರವರೆಗೆ 14 ದಿನ 'ವೀಕೆಂಡ್ ಕರ್ಪ್ಯೂ', 'ನೈಟ್ ಕರ್ಪ್ಯೂ' ಜಾರಿ: ಏನುಂಟು, ಏನಿರಲ್ಲ..? ಇಲ್ಲಿದೆ ಮಾಹಿತಿ

ಅವಿನಾಶ್‌ ಆರ್ ಭೀಮಸಂದ್ರ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸ್ಪೋಟವಾಗುತ್ತಿರುವ ಹಿನ್ನೆಲೆ ರಾಜ್ಯಾದ್ಯಂತ 'ವೀಕೆಂಡ್ ಕರ್ಪ್ಯೂ', ನೈಟ್ ಕರ್ಪ್ಯೂ' ಜಾರಿಗೊಳಿಸಿ ರಾಜ್ಯ ಸರ್ಕಾರ ಮಹತ್ತರದ ಆದೇಶ ಹೊರಡಿಸಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ರಿಂದ ಶುಕ್ರವಾರ ಬೆಳಿಗ್ಗೆ 6 ಗಂಟೆಯವರೆಗೆ ರಾತ್ರಿ ಕರ್ಪ್ಯೂ ಹಾಗೂ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ವೀಕ್ ಎಂಡ್ ಕರ್ಪ್ಯೂ ಜಾರಿಗೊಳಿಸಿ ಆದೇಶಿಸಿದೆ. ಈ ಮೂಲಕ ಹೊಸ ಮಾರ್ಗಸೂಚಿಯಲ್ಲಿ 14 ದಿನಗಳ ವರೆಗೆ ರಾಜ್ಯಾಧ್ಯಂತ ವೀಕ್ ಎಂಡ್ ಕರ್ಪ್ಯೂ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದ್ದು, ಇಂದು ಇಂದಿನಿಂದ ಜಾರಿಗೆ ಬರಲಿದೆ. ಇಂದಿನಿಂದ ಸೆ 144 ಸಿ ಕಾಯಿದೆಯನ್ನು ಜಾರಿಗೆ ಮಾಡಲಾಗಿದೆ. ವಾರಾಂತ್ಯದಲ್ಲಿ ಸಂಪೂರ್ಣ ಲಾಕ್‌ಡೌನ್‌ ಜಾರಿಯಾಗಿದ್ದು, ಅನಗತ್ಯವಾಗಿ ಯಾರೂ ಹೊರಗೆ ಬರುವಂತಿಲ್ಲ.  ಇದಲ್ಲದೇ ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ಟೆಸ್ಟ್ ನೆಗೆಟಿವ್ ರಿಸಲ್ಟ್ ಕಡ್ಡಾಯ.

.ಮದುವೆಗೆ 50 ಜನರಿಗೆ, ಅಂತ್ಯಕ್ರಿಯೆಗೆ 20 ಜನರಿಗೆ ಮಾತ್ರವೇ ಅವಕಾಶ ನೀಡಲಾಗಿದೆ. ಎಲ್ಲಾ ಇ ಕಾಮರ್ಸ್ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಸಿನಿಮಾ ಹಾಲ್, ಸ್ವಿಮ್ಮಿಂಗ್ ಫೂಲ್, ಮಾರ್ಕೆಟ್ ಬಂದ್ ಮಾಡಲಾಗುತ್ತಿದೆ. ಶಾಲಾ-ಕಾಲೇಜು ಮುಚ್ಚಲಾಗುತ್ತಿದೆ. ರಾತ್ರಿ ಪಾಳಿಯಲ್ಲಿ ಕಾರ್ಖಾನೆಗಳಲ್ಲಿ ಕೆಲಸ ಮಾಡೋದಕ್ಕೆ ಅವಕಾಶ ನೀಡಲಾಗಿದೆ. ರಾತ್ರಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬಸ್ ನಲ್ಲಿ ತೆರಳೋರು ಟಿಕೆಟ್ ತೋರಿಸಿ ಸಾಗಬೇಕು. ರಾಜ್ಯಾಧ್ಯಂತ ಧಾರ್ಮಿಕ ಕ್ಷೇತ್ರಗಳು ಬಂದ್ ಮಾಡಲಾಗುತ್ತಿದೆ. ಭಕ್ತರಿಗೆ ಅವಕಾಶವಿಲ್ಲ. ಸಲೂನ್, ಬ್ಯೂಟಿ ಪಾರ್ಲರ್ ಗೆ ಅವಕಾಶ ನೀಡಲಾಗಿದೆ. ಸರ್ಕಾರಿ ಕಚೇರಿಯಲ್ಲಿ ಶೇ.50ರಷ್ಟು ಜನರಿಗೆ ಕೆಲಸ ಮಾಡೋದಕ್ಕೆ ಅವಕಾಶ ನೀಡಲಾಗಿದೆ.

ಏನಿರಲ್ಲ : ಚಿತ್ರಮಂದಿರ​, ಶಾಪಿಂಗ್ ಮಾಲ್​, ಜಿಮ್​, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಮನೋರಂಜನಾ ಸ್ಥಳ, ಸ್ವಿಮ್ಮಿಂಗ್ ಪೂಲ್​, ಬಾರ್ & ಆಡಿಟೋರಿಯಂ, ಮಸೀದಿ, ಮಂದಿರ, ಚರ್ಚ್​ಗಳನ್ನು ಬಂದ್ ಮಾಡಲಾಗಿದೆ, ಮಸೀದಿ, ಮಂದಿರ, ಚರ್ಚ್​ಗಳಲ್ಲಿ ಪೂಜೆ ಮಾಡುವವರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಬೇರೆಯವರಿಗೆ ಅವಕಾಶ ಇರೋದಿಲ್ಲ. ಕಟಿಂಗ್ ಶಾಪ್​, ಬ್ಯೂಟಿ ಪಾರ್ಲರ್​ಗಳು ಕೂಡ ಓಪನ್‌ ಇರಲಿದ್ದು, ಈ ಸ್ಥಳಗಳಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲು ಸೂಚನೆ ನೀಡಲಾಗಿದೆ ಇದಲ್ಲದೇ ಬಸ್​​ಗಳಲ್ಲಿ ಶೇ.50ರಷ್ಟು ಮಾತ್ರ ಅವಕಾಶ ನೀಡಲಾಗಿದ್ದು, ಊರಿನಿಂದ ಊರಿಗೆ ರಾತ್ರಿ ಸಮಯದಲ್ಲಿ ತೆರಳುವವರು ತಪ್ಪದೇ ತಮ್ಮ ಬಳಿ ಪ್ರಯಾಣದ ಟಿಕೇಟ್‌ ಅನ್ನು ಇಟ್ಟುಕೊಳ್ಳುವುದು ಕಡ್ಡಾಯವಾಗಿದ್ದು, ತಪಾಸಣೆ ವೇಳೆಯಲ್ಲಿ ತೋರಿಸಬೇಕಾಗಿದೆ. ಸದ್ಯದದ ಮಟ್ಟಿಗೆ ಶಾಲಾ ಕಾಲೇಜುಗಳನ್ನು ಏಳು ದಿನಗಳ ಮಟ್ಟಿಗೆ ಬಂದ್ ಮಾಡಲಾಗಿದ್ದು, ಮುಂದೆ ಪರಿಸ್ಥಿತಿಯನ್ನು ನೋಡಿಕೊಂಡು ಅಂತಿಮ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು. ಹೋಟೆಲ್‌, ಬಾರ್‌, ಫುಡ್‌ ಸ್ಟ್ರೀಟ್‌, ದರ್ಶಿನಿ, ರೆಸ್ಟೋರೆಂಟ್‌ ಗಳಲ್ಲಿ ಊಟ ಮಾಡಲು ಅವಕಾಶ ಇರೋದಿಲ್ಲ, ಪಾರ್ಸಲ್‌ ತೆಗೆದುಕೊಂಡು ಹೋಗುವುದಕ್ಕೆ ಮಾತ್ರ ಅವಕಾಶ. ರಾಜಕೀಯ ಚಟುವಟಿಕೆಗಳಿಗೆ ನಿರ್ಬಂದ, ಶಾಪಿಂಗ್ ಮಾಲ್​​ ಬಂದ್‌.

ಏನುಂಟು : ಆಸ್ಪತ್ರೆ, ಕ್ಲಿನಿಕ್‌, ತುರ್ತು ವಾಹನಗಳ ಸಂಚಾರ, ಮಾರುಕಟ್ಟೆ, ಮೆಡಿಸನ್‌ ಶಾಪ್‌ಗಳು, ಎಟಿಎಂ, ಬ್ಯಾಂಕ್‌ಗಳು, ಅಗತ್ಯವಾಗಿರುವ ಸಂಚಾರ ವಾಹನಕ್ಕೆ ಅವಕಾಶ, ಅಂತರ್ ಜಿಲ್ಲಾ ಓಡಾಡಕ್ಕೆ ಅವಕಾಶ, ಸರ್ಕಾರಿ ಕಚೇರಿಗಳು, ಬಸ್‌ ಸಂಚಾರ ಇರುತ್ತವೆ. ಇ ಕಾಮರ್ಸ್, ಕೋಲ್ಡ್ ಸ್ಟೋರೇಜ್, ವೇರ್ ಹೌಸಿಂಗ್ ಕಟ್ಟಡ ಕಾಮಗಾರಿಗಳಿಗೆ ಅನುಮತಿ ಕೃಷಿ ಚಟುವಟಿಕೆಗಳ ಮೇಲೆ ಯಾವುದೇ ನಿರ್ಬಂಧ ಇಲ್ಲ ವಿಮೆ ಸಂಸ್ಥೆಗಳು, ತರಕಾರಿ, ಹಣ್ಣುಗಳ ಮಾರುಕಟ್ಟೆಗಳು, ಕೃಷಿ ಮಂಡಿಗಳು, ಇ-ಮಾರ್ಕೆಟ್ ಗಳು, ರಸಗೊಬ್ಬರ, ಕೀಟನಾಶಕಗಳ ಮಾರಾಟ ಮಳಿಗೆಗಳಿಗೆ ಅವಕಾಶ ತರಕಾರಿ, ಹಣ್ಣು, ದಿನಸಿ, ಹಾಲಿನ ಕೇಂದ್ರಗಳು ಬೆಳಗ್ಗೆ 6ರಿಂದ 10ಗಂಟೆವರೆಗೆ ಮಾತ್ರ ಮಾತ್ರ ತೆರೆಯಲು ಅವಕಾಶ.

ಈ ನಡುವೆ ರಾಜ್ಯದಲ್ಲಿ ಕೊರೊನಾ ರಣ ಕೇಕೆ ಮುಂದುವರಿದ್ದು , ಮಂಗಳವಾರಕ್ಕೆ ಅನ್ವಯವಾಗುವಂತೆ ಕಳೆದ 24 ಗಂಟೆಯಲ್ಲಿ 21,794 ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ ರಾಜ್ಯದಲ್ಲಿ ಬರೋಬ್ಬರಿ 149 ಮಂದಿಗೆ ಕೊರೊನಾಗೆ ಬಲಿಯಾಗಿದ್ದಾರೆ.

(ಮಾಹಿತಿ ಕೃಪೆ kannada news now)





 

ಕರೋನ ರೋಗಿಗಳು ಗೋಸ್ಕರಪ್ರತಿ ದಿನ 300 ಟನ್ ಆಕ್ಸಿಜನ್ ಉಚಿತವಾಗಿ


 

Tuesday, April 20, 2021

Big Breaking News: ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿಗೆ 'ಕರೋನ ಪಾಸಿಟಿವ್‌'

 

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿಗೆ ಕರೋನ ಸೊಂಕು ಇರೋದು ಧೃಡಪಟ್ಟಿದ್ದು ಈ ಬಗ್ಗೆ ಅವರು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. ನನಗೆ ಸೌಮ್ಯ ರೋಗಲಕ್ಷಣಗಳನ್ನು ಅನುಭವಿಸಿದ ನಂತರ, ಕರೋನ ಸೊಂಕು ಇರೋದು ಪತ್ತೆಯಾಗಿದ್ದು, ಇತ್ತೀಚೆಗೆ ನನ್ನೊಂದಿಗೆ ಸಂಪರ್ಕದಲ್ಲಿರುವ ಎಲ್ಲರೂ, ದಯವಿಟ್ಟು ಎಲ್ಲಾ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸಿ ಮತ್ತು ಸುರಕ್ಷಿತವಾಗಿರಿ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ಸಿನ ಮತ್ತೊಬ್ಬ ಹಿರಿಯ ಮುಖಂಡ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೂಡ ಕರೋನ ಸೊಂಕಿಗೆ ಈಡಾಗಿದ್ದು ಅವರು ಕೂಡ ಚಿಕಿತ್ಸೆಗಾಗಿ ನಿನ್ನೆಯಿಂದ ಆಸ್ಪತ್ರೆಯಲ್ಲಿದ್ದಾರೆ.

(ಮಾಹಿತಿ ಕೃಪೆ kannada news now)

ರಾಜ್ಯದಲ್ಲಿ ಪ್ರತಿ 10 ನಿಮಿಷಕ್ಕೆ 1 ಸಾವು! ಹೆಚ್ಚಿದ ಕೊರೋನಾಘಾತ


 ಬೆಂಗಳೂರು (ಏ.20): ರಾಜ್ಯದಲ್ಲಿ ಸೋಮವಾರ 146 ಮಂದಿ ಕೋವಿಡ್‌ನಿಂದ ಮರಣವನ್ನಪ್ಪಿದ್ದು ಪ್ರತಿ ಹತ್ತು ನಿಮಿಷಕ್ಕೆ ಒಬ್ಬರು ಪ್ರಾಣ ಕಳೆದುಕೊಂಡಂತೆ ಆಗಿದೆ. ಬೆಂಗಳೂರು ನಗರದಲ್ಲೇ 97 ಮಂದಿ ಅಸುನೀಗಿದ್ದು 14 ನಿಮಿಷಕ್ಕೆ ಒಬ್ಬರು ಮರಣವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಸೆಪ್ಟೆಂಬರ್‌ 18ಕ್ಕೆ 179 ಮಂದಿ ಪ್ರಾಣ ಕಳೆದುಕೊಂಡಿದ್ದರು. 213 ದಿನಗಳ ಬಳಿಕ 146 ಮಂದಿ ಮೃತರಾಗಿದ್ದಾರೆ. ಅಕ್ಟೋಬರ್‌ 10 (102) ಕೊನೆಯ ಬಾರಿ ಶತಕ ಮೀರಿದ ಸಾವು ದಾಖಲಾಗಿತ್ತು. 190 ದಿನದ ಬಳಿಕ ಮೂರಂಕಿಯಲ್ಲಿ ಸಾವು ವರದಿಯಾಗಿದೆ.

ಬೆಂಗಳೂರಲ್ಲಿ ಲಾಕ್ಡೌನ್‌ ಭೀತಿ : ಮತ್ತೆ ಕಾರ್ಮಿಕರ ಗುಳೆ .

ಏ.17 ಮತ್ತು ಏ. 18ಕ್ಕೆ ಹೋಲಿಸಿದರೆ ಸುಮಾರು 20 ಸಾವಿರ ಪರೀಕ್ಷೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಸೋಂಕಿತರ ಪ್ರಮಾಣದಲ್ಲಿ ತುಸು ಇಳಿಕೆ ದಾಖಲಾಗಿದೆ.

ಆದರೂ ಪ್ರತಿ ನಿಮಿಷಕ್ಕೆ 11 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಈ ಪ್ರತಿ ನಿಮಿಷಕ್ಕೆ 7 ಮಂದಿಯಲ್ಲಿ ಸೋಂಕು ದೃಢ ಪಡುತ್ತಿದೆ. ರಾಜ್ಯದ ಗುಣಮುಖರ ಪ್ರಮಾಣ ಪ್ರತಿ ನಿಮಿಷಕ್ಕೆ 5 ರಷ್ಟಿದೆ. ಹೊಸ ಸೋಂಕಿನ ಪ್ರಮಾಣಕ್ಕಿಂತ ಗುಣಮುಖರಾಗುತ್ತಿರುವವ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿದಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1.50 ಲಕ್ಷಕ್ಕೆ ಏರಿಕೆ ಆಗಿದೆ.

ಮೊದಲ ಅಲೆಯಲ್ಲಿ ಅಕ್ಟೋಬರ್‌ ತಿಂಗಳಲ್ಲಿ 1.20 ಲಕ್ಷದಷ್ಟುಸಕ್ರಿಯ ಪ್ರಕರಣಗಳಿದ್ದವು. ಪ್ರಸ್ತುತ ಸಕ್ರಿಯ ಪ್ರಕರಣಗಳಲ್ಲಿ ಶೇ. 4.1ರಷ್ಟುಮಂದಿ ಕೋವಿಡ್‌ನ ಗುಣಲಕ್ಷಣ ಹೊಂದಿದ್ದಾರೆ.

(ಮಾಹಿತಿ ಕೃಪೆ Suvarna News)

1 ರಿಂದ 9 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೇ ಪಾಸ್ : ಶಿಕ್ಷಣ ಇಲಾಖೆ ಅಧಿಕೃತ ಆದೇಶ

 

ಬೆಂಗಳೂರು : ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆಯಿಲ್ಲದೇ 1ರಿಂದ9 ನೇ ತರಗತಿ ವಿದ್ಯಾರ್ಥಿಗಳನ್ನು ಪಾಸ್ ಮಾಡುವ ಆದೇಶವನ್ನು ಶಿಕ್ಷಣ ಇಲಾಖೆ ಅಧಿಕೃತವಾಗಿ ಹೊರಡಿಸಿದೆ.

ಕೋವಿಡ್ ಭೀತಿಯಲ್ಲಿ ರಜೆಯಲ್ಲಿದ್ದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಇನ್ನೆರೆಡು ದಿನಗಳಲ್ಲಿ ಪರೀಕ್ಷೆ ದಿನಾಂಕವನ್ನು ತಿಳಿಸುವುದಾಗಿ ಶಿಕ್ಷಣ ಸಚಿವರು ಹೇಳಿದ್ದರು. ಆದರೆ ಇದೀಗ ಪರೀಕ್ಷೆ ನಡೆಸದೇ 1 ರಿಂದ 9 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಪಾಸ್ ಮಾಡಲು ಆದೇಶ ಹೊರಡಿಸಿದ್ದಾರೆ. ಮೌಲ್ಯಾಂಕನ ವಿಶ್ಲೇಷಿಸಿ ಆಧರಿಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡುವುದಾಗಿ ಇಲಾಖೆ ಹೇಳಿದೆ.

ಕರ್ನಾಟಕದಲ್ಲಿ ಕೋವಿಡ್ ಸೋಂಕು ದಿನೇ ದಿನೇ ಹೆಚ್ಚುತ್ತಲೇ ಇದೆ. ಪ್ರತಿನಿತ್ಯ ಕೋವಿಡ್ ಸಾವಿನ ಸಂಖ್ಯೆ ಕೂಡ ಏರುತ್ತಲೇ ಇದೆ. ಈಗಾಗಲೇ ಶೈಕ್ಷಣಿಕವಾಗಿ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಕೋನದಿಂದ ಹತ್ತು ಹಲವು ಕ್ರಮಗಳನ್ನು ಅನುಸರಿಸಲಾಗಿದ್ದು.

ಇದೀಗ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳನ್ನು ಪಾಸ್ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಬೇಸಿಗೆ ರಜೆ ಮತ್ತು ಮುಂದಿನ ಶೈಕ್ಷಣಿಕ ವರ್ಷಾರಂಭ:

ಒಂದರಿಂದ ಏಳು/ಎಂಟನೇ ತರಗತಿಗಳು ಇರುವ ಪ್ರಾಥಮಿಕ ಶಾಲೆಗಳಿಗೆ ಮೇ 1ರಿಂದ ಜೂನ್ 14ರವರಗೆ ಬೇಸಿಗೆ ರಜೆ. ಜೂ. 15ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭ ಮತ್ತು ಪ್ರೌಢಶಾಲೆಗಳಿಗೆ ಅಂದರೆ 8 ಮತ್ತು 9ನೇ ತರಗತಿಗಳಲ್ಲಿನ ವಿದ್ಯಾರ್ಥಿಗಳಿಗೆ ಮೇ 1ರಿಂದ ಜುಲೈ 14ರವರೆಗೆ ಬೇಸಿಗೆ ರಜೆ. ಪ್ರೌಢಶಾಲೆಗಳ ಶಿಕ್ಷಕರಿಗೆ ಜೂ. 15ರಿಂದ ಜುಲೈ 14ರವರೆಗೆ ಬೇಸಿಗೆ ರಜೆ. ಜೂ. 21ರಿಂದ ಜು. 5ರವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆಯುತ್ತವೆ. ಜು. 15 ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದೆ.

ಈ ವೇಳಾಪಟ್ಟಿ ತಾತ್ಕಾಲಿಕವಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ, ಇಲಾಖೆ ಮತ್ತು ಜಿಲ್ಲಾಡಳಿತಗಳು ನೀಡುವ ಸೂಚನೆ ಮತ್ತು ನಿರ್ದೇಶನಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

(ಮಾಹಿತಿ ಕೃಪೆ ಉದಯವಾಣಿ)

ಪ್ರತಿಭಟನಾನಿರತ ಸಾರಿಗೆ ನೌಕರರನ್ನ ಅಟ್ಟಾಡಿಸಿ ಹೊಡೆದ ಪೊಲೀಸರು


 ಕೋಲಾರ: ಪ್ರತಿಭಟನಾನಿರತ ಸಾರಿಗೆ ನೌಕರರ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಎದುರು ಲಾಠಿ ಚಾರ್ಜ್ ಮಾಡಲಾಗಿದೆ.

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಂಗೊಂಡಹಳ್ಳಿ ಬಳಿ ಪ್ರತಿಭಟನೆ ಮಾಡುತ್ತಿದ್ದ ನೌಕರರನ್ನು ಪೊಲೀಸರು ಠಾಣೆಗೆ ಕರೆತಂದಿದ್ದರು. ಪೊಲೀಸರ ಕ್ರಮ ಖಂಡಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಮಂಗಳವಾರ ಬೆಳಗ್ಗೆ ಯತ್ನಿಸಿದ ಸಾರಿಗೆ ನೌಕರರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.

ಕೋವಿಡ್​ ಹಿನ್ನೆಲೆಯಲ್ಲಿ ಗುಂಪು ಸೇರುವಿಕೆ, ಪ್ರತಿಭಟನೆ, ಸಭೆ, ಸಮಾರಂಭಕ್ಕೆ ಅವಕಾಶ ಇಲ್ಲ. ಇಲ್ಲಿಂದ ಹೊರಡಿ ಎಂದರೂ ನೌಕರರು ನಮ್ಮವರನ್ನು ಬಿಟ್ಟುಬಿಡಿ ಎನ್ನುತ್ತಾ ಪೊಲೀಸ್​ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪರಿಸ್ಥಿತಿ ನಿಯಂತ್ರಿಸಲು ಪ್ರತಿಭಟನಾನಿರತ ಸಾರಿಗೆ ನೌಕರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಕೆಲ ಸಾರಿಗೆ ನೌಕರರನ್ನ ಅಟ್ಟಾಡಿಸಿ ಹೊಡೆದರು.

ಸಾರಿಗೆ ನೌಕರರ ಮೇಲೆ ಪೊಲೀಸ್​ ಲಾಠಿ ಚಾರ್ಜ್​ ನಡೆಸಿದ ವಿಡಿಯೋ ನೋಡಲು ವಿಜಯವಾಣಿ ಫೇಸ್​ಬುಕ್​ ಲಿಂಕ್​ ಅನ್ನು ಕ್ಲಿಕ್​ ಮಾಡಿ https://www.facebook.com/VVani4U/videos/336254347836192

(ಮಾಹಿತಿ ಕೃಪೆ ವಿಜಯವಾಣಿ)


ಲೋ ಬಿಪಿ ಸಮಸ್ಯೆ ಇದ್ರೆ ಈ ಮನೆಮದ್ದು ಮಾಡಿಕೊಳ್ಳಿ


 ಲೋ ಬಿಪಿ ಸಮಸ್ಯೆ ಬಹಳಷ್ಟು ಜನರು ಅನುಭವಿಸುತ್ತಿದ್ದಾರೆ ಈ ಸಮಸ್ಯೆಗೆ ಮನೆಯಲ್ಲೆ ಮಾಡಬಹುದಾದ ಪರಿಹಾರವಿದೆ ಅದರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಲೋ ಬಿಪಿ ಆದಾಗ ತಲೆಸುತ್ತು ಬರುವುದು, ಸುಸ್ತಾಗುವುದು ಇನ್ನಿತರ ಸಮಸ್ಯೆಗಳು ಕಂಡುಬರುತ್ತವೆ. ಲೋ ಬಿಪಿಗೆ ಕಾರಣ ರಕ್ತದ ಕೊರತೆ, ಅಶಕ್ತತೆ, ಹಿಮೋಗ್ಲೋಬಿನ್ ಅಂಶ ಕಡಿಮೆಯಾದಲ್ಲಿ, ದೇಹದಲ್ಲಿ ಉಪ್ಪಿನ ಅಂಶ ಕಡಿಮೆಯಾದಲ್ಲಿ ಅಥವಾ ಯಾವುದಾದರೂ ಕಾಯಿಲೆಯಿಂದ ಲೋ ಬಿಪಿ ಆಗುವ ಸಾಧ್ಯತೆ ಹೆಚ್ಚು ಇದಕ್ಕೆ ಪರಿಹಾರವೆಂದರೆ ಜಾಸ್ತಿ ಉಪ್ಪು ಮತ್ತು ಉಪ್ಪಿನಕಾಯಿಯನ್ನು ತಿನ್ನಬೇಕು ಅದರೊಂದಿಗೆ ಹಾಲಿಗೆ ಸ್ವಲ್ಪ ತುಪ್ಪ ಹಾಕಿ ಸೇವನೆ ಮಾಡುತ್ತಾ ಬರಬೇಕು.

ಅಲ್ಲದೇ ಕ್ಯಾರೇಟ್ ಮತ್ತು ಬಿಟರೂಟ್ ರಸವನ್ನು ಅಥವಾ ಜ್ಯೂಸನ್ನು 10 ರಿಂದ 20 ml ಪ್ರತಿದಿನ ಬೆಳಗ್ಗೆ ಹಾಗೂ ಸಾಯಂಕಾಲ ಸೇವಿಸುತ್ತಾ ಬರಬೇಕು ಇದರಿಂದ ಲೋ ಬಿಪಿ ಸಮಸ್ಯೆಯು ನಿವಾರಣೆಯಾಗುತ್ತದೆ.

ಸ್ವಲ್ಪ ಒಣದ್ರಾಕ್ಷಿಯನ್ನು ಒಂದು ಲೋಟ ನೀರಿನಲ್ಲಿ ರಾತ್ರಿ ನೆನೆಸಿಟ್ಟು ಬೆಳಗ್ಗೆ ಅದೇ ನೀರಿನಲ್ಲಿ ಕಿವುಚಿ ಹಾಲಿನೊಂದಿಗೆ ಬೆರೆಸಿ ಸೇವಿಸುತ್ತಾ ಬರುವುದರಿಂದ ರಕ್ತ ಹೀನತೆ ಸಮಸ್ಯೆ ನಿವಾರಣೆಯಾಗಿ ಲೋ ಬಿಪಿಯು ನಿವಾರಣೆಯಾಗುತ್ತದೆ. ಹೆಚ್ಚಿನ ಸಮಸ್ಯೆ ಕಂಡುಬಂದರೆ ವೈದ್ಯರ ಬಳಿ ಸಲಹೆ ಪಡೆಯಬಹುದು.

(ಮಾಹಿತಿ ಕೃಪೆ All Indian News 24x7)

ರಾಜ್ಯದ ಎಲ್ಲಾ ಅಂಗನವಾಡಿಗಳಿಗೆ ವಿದ್ಯುತ್‌, ಫ್ಯಾನ್ ಒದಗಿಸಿ: ಹೈಕೋರ್ಟ್‌

ಬೆಂಗಳೂರು: ರಾಜ್ಯದ ಎಲ್ಲಾ 65,911 ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಮತ್ತು ಫ್ಯಾನ್‌ಗಳನ್ನು ಒದಗಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

33,164 ಅಂಗನವಾಡಿಗಳಿಗೆ ಮಾತ್ರ ವಿದ್ಯುತ್ ಸಂಪರ್ಕ, 26,560 ಅಂಗನವಾಡಿಗಳಿಗೆ ಫ್ಯಾನ್‌ಗಳನ್ನು ಪೂರೈಸಲಾಗಿದೆ. 44,225 ಕೇಂದ್ರಗಳಲ್ಲಿ ಶೌಚಾಲಯ ಇದೆ ಎಂದು ಸರ್ಕಾರ ಮೆಮೊ ಸಲ್ಲಿಸಿತ್ತು.

ಇದನ್ನು ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, 'ಈ ಅಂಕಿ-ಅಂಶಗಳು ಆಘಾತಕಾರಿ ಸ್ಥಿತಿಯನ್ನು ಚಿತ್ರಿಸುತ್ತವೆ' ಎಂದು ಅಭಿಪ್ರಾಯಪಟ್ಟಿತು.

'ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ಇರಬೇಕು. ಬಾಲಕರು, ಬಾಲಕಿಯರು ಮತ್ತು ಅಂಗವಿಕಲ ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕು.

ಈ ಶಿಫಾರಸನ್ನು ಸರ್ಕಾರ ಗಮನಿಸಬೇಕು' ಎಂದು ಪೀಠ ಹೇಳಿತು.

'ಕೊಳೆಗೇರಿಗಳಿಗೆ 100 ಮತ್ತು ನಗರ ಪ್ರದೇಶಕ್ಕೆ 350 ಅಂಗನವಾಡಿಗಳನ್ನು ಮಂಜೂರು ಮಾಡಲಾಗಿದೆ. ಹೆಚ್ಚುವರಿಯಾಗಿ ಇನ್ನೂ 4,244 ಅಂಗನವಾಡಿಗಳಿಗೆ ಬೇಡಿಕೆ ಇದೆ. ಸ್ವಚ್ಛ ಭಾರತ ಯೋಜನೆಯಡಿ 3,219 ಶೌಚಾಲಯಗಳನ್ನು ನಿರ್ಮಿಸಲಾಗಿದೆ' ಎಂದು ಸರ್ಕಾರ ವಿವರಣೆ ಸಲ್ಲಿಸಿತು.

'ಕೊಳೆಗೇರಿ ಮತ್ತು ಎಸ್‌ಸಿ/ಎಸ್‌ಟಿ ಜನಸಂಖ್ಯೆ ಹೆಚ್ಚಿರುವ ಅಂಗನವಾಡಿಗಳಲ್ಲಿ ಕುಡಿಯಲು ಶುದ್ಧ ಮತ್ತು ಬಿಸಿನೀರು ಪೂರೈಸಬೇಕು ಎಂಬ ಶಿಫಾರಸನ್ನು ಸರ್ಕಾರ ಪಾಲಿಸಿಲ್ಲ' ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಬೆಂಗಳೂರು ನಗರದಲ್ಲಿ ಹೆಚ್ಚಿನ ಸಂಖ್ಯೆಯ ಅಂಗವಾಡಿಗಳನ್ನು ತೆರೆಯ ಬೇಕು. ಈ ಎಲ್ಲಾ ನಿರ್ದೇಶನಗಳನ್ನು ಪಾಲಿಸಿರುವ ಸಂಬಂಧ ಅನುಸರಣಾ ಅಫಿಡವಿಟ್‌ ಸಲ್ಲಿಸುವಂತೆ ತಿಳಿಸಿದ ಪೀಠ, ವಿಚಾರಣೆಯನ್ನು ಜೂ.11ಕ್ಕೆ ಮುಂದೂಡಿತು.

(ಮಾಹಿತಿ ಕೃಪೆ ಪ್ರಜಾವಾಣಿ)

ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ, ನೋಂದಣಿಗೆ ಇಲ್ಲಿದೆ ಮುಖ್ಯ ಮಾಹಿತಿ -ಬೇಕಿದೆ ದಾಖಲೆ


 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೋನಾ ವೈರಸ್ ವ್ಯಾಕ್ಸಿನೇಷನ್ ಹಂತ 3 ಮೇ 1 ರಿಂದ ಪ್ರಾರಂಭವಾಗಲಿದೆ. ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡಲಾಗುವುದು ಎಂದು ಭಾರತ ಸರ್ಕಾರ ಸೋಮವಾರ ಪ್ರಕಟಿಸಿದೆ.

18 ವರ್ಷ ಮೇಲ್ಪಟ್ಟ ಭಾರತದ ಪ್ರತಿಯೊಬ್ಬ ನಾಗರಿಕರು ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ ಮೊದಲಿನಂತೆಯೇ ವ್ಯಾಕ್ಸಿನೇಷನ್ ಡ್ರೈವ್ ನಡೆಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಎಲ್ಲಾ ಸರ್ಕಾರಿ ಕೋವಿಡ್ ಕೇಂದ್ರಗಳಲ್ಲಿ ಲಸಿಕೆಗಳು ಉಚಿತವಾಗಿರುತ್ತವೆ, ಆದರೆ ಖಾಸಗಿ ಆಸ್ಪತ್ರೆಗಳು ಲಸಿಕೆಗಾಗಿ ಸ್ವಯಂ-ನಿಗದಿತ ಸುಲಭ ದರವನ್ನು ಪಾರದರ್ಶಕವಾಗಿ ಘೋಷಿಸಬಹುದು.

COVID-19 ವ್ಯಾಕ್ಸಿನೇಷನ್ ಹಂತ 3: ನೋಂದಾಯಿಸುವುದು ಹೇಗೆ..?

CoWIN - cowin.gov.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

ನಿಮ್ಮ 10-ಅಂಕಿಯ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ನಮೂದಿಸಿ

ನೀವು ಮೊಬೈಲ್ ಸಂಖ್ಯೆಯಲ್ಲಿ ಒಟಿಪಿಯನ್ನು ಸ್ವೀಕರಿಸುತ್ತೀರಿ, ನಿರ್ದಿಷ್ಟ ಜಾಗದಲ್ಲಿ ಅದನ್ನು ನಮೂದಿಸಿ

ನೋಂದಾಯಿಸಿದ ನಂತರ, ನಿಮ್ಮ ಆದ್ಯತೆಯ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ

ನಿಮ್ಮ COVID-19 ವ್ಯಾಕ್ಸಿನೇಷನ್ ಮಾಡಿ.

ಇದರ ನಂತರ, ನೀವು ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಪಡೆಯುವ ಮೂಲಕ ಉಲ್ಲೇಖಿಸಿದ ಐಡಿ ಕೂಡ ಪಡೆಯುತ್ತೀರಿ.

COVID-19 ವ್ಯಾಕ್ಸಿನೇಷನ್ ಹಂತ 3: ದಾಖಲೆಗಳು ಅಗತ್ಯವಿದೆ

ಫೋಟೋ ಐಡಿಯೊಂದಿಗೆ ನೋಂದಣಿ ಸಮಯದಲ್ಲಿ ನಿಮಗೆ ಈ ಕೆಳಗಿನ ದಾಖಲೆಗಳಲ್ಲಿ ಒಂದಾದರೂ ಬೇಕಾಗುತ್ತದೆ

ಆಧಾರ್ ಕಾರ್ಡ್

ಪ್ಯಾನ್ ಕಾರ್ಡ್

ಮತದಾರರ ID

ಚಾಲನಾ ಪರವಾನಿಗೆ

ಕಾರ್ಮಿಕ ಸಚಿವಾಲಯದ ಅಡಿಯಲ್ಲಿ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್ ನೀಡಲಾಗಿದೆ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ

ಗ್ಯಾರಂಟಿ ಆಕ್ಟ್ (ಎಂಜಿಎನ್‌ಆರ್‌ಇಜಿಎ) ಜಾಬ್ ಕಾರ್ಡ್

ಸಂಸದರು / ಶಾಸಕರು / ಶಾಸಕರಿಗೆ ಅಧಿಕೃತ ಗುರುತಿನ ಚೀಟಿ ನೀಡಲಾಗಿದೆ

ಪಾಸ್ಪೋರ್ಟ್

ಬ್ಯಾಂಕ್ / ಪೋಸ್ಟ್ ಆಫೀಸ್ ನೀಡುವ ಪಾಸ್‌ಬುಕ್‌ಗಳು

ಪಿಂಚಣಿ ದಾಖಲೆ

ಸೇವಾ ಗುರುತಿನ ಚೀಟಿ ನೌಕರರಿಗೆ ಕೇಂದ್ರ / ರಾಜ್ಯ ಸರ್ಕಾರ / ಸಾರ್ವಜನಿಕ ಲಿಮಿಟೆಡ್ ಕಂಪನಿಗಳಿಂದ ನೀಡಲಾಗುತ್ತದೆ

(ಮಾಹಿತಿ ಕೃಪೆ ಕನ್ನಡ ದುನಿಯಾ)

Sunday, April 18, 2021

ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ

👉

 *ಹಾಡು: ಹ್ಯಾಪಿ ಸಾಹಿತ್ಯ: ಆಲ್ ಓಕೆ ಗಾಯನ: ಆಲ್ ಓಕೆ ಸಂಗೀತ: ನಿಂಬರ್ಕ್, ಆಯುಷ್ ಹಾಗು ಆಲ್ ಓಕೆ ಮಿಕ್ಸಿಂಗ್: ಅನಿಕೇತ್


ಏನು ಮಾಡೋದು ಮುಂದೆ ಏನು ಮಾಡೋದು ಅಂತ
ಮಂಕಾಗಿ ಕೊತ್ರೆಂಗೆ
ಆ ಸವಿಗನಸಿನ ಸಿಹಿ ಪ್ರತಿ ನಿಮಿಷವ ನಿನ್ನ ಕೈಯಾರ ಕೊಂದಂಗೆ
ಹೇಗೆ ಬಾಳೋದು ಎಲ್ಲ ನೋಡಿ ನಗುತಾರೆ ಅಂತ ಬೇಜಾರಾದ್ರೆಂಗೆ
ನಿನ್ನ ನಗುವಲ್ಲೇ ಗೆಲ್ಲಬೇಕು ಇಡೀ ಪರಪಂಚವೆ ತಿರುಗಿ ನೋಡಂಗೆ
ಇಲ್ಲಿ ಕಾದು ತಿನ್ನೋ ಹಣ್ಣು ತುಂಬ ಸ್ವೀಟ್ ಮಗ
ನಿನ್ ಟೈಮ್ ಕೂಡ ಬರ್ತದ್ ಒಸಿ ತಡಿ ಮಗ
ಕೆಟ್ಟ ನೆನಪುಗಳನು ನೀ ಡಿಲೀಟ್ ಮಗ
ಬರಿ ಗುಡ್ ವೈಬ್ಸ್ ಓನ್ಲಿ ರಿಪೀಟ್ ಮಗ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ನಂಗೆ ಈಗ ಜೀವನದಲ್ಲಿ ಖುಷಿಯಾಗಿದೆ ಅನ್ಕೋ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಲೈಫು ಹೆಂಗೆ ಇದ್ರೂ ನಂಗೆ ಸೂಪರಾಗಿದೆ ಅನ್ಕೋ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಜೀವನದಲ್ಲಿ ನಂಗೆ ಈಗ ಖುಷಿಯಾಗಿದೆ ಅನ್ಕೋ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಯಾರೇ ಏನೆ ಅಂದ್ರು ನಾನು ಸೂಪರಾಗಿ ಇರ್ತೀನಿ ಅನ್ಕೋ
ತೆಲೆಮೇಲೆ ಕೈಯಿಟ್ಟ ಕೂತ್ರೆ ಕೆಲ್ಸ ಐತಾದ?
ಹಳೆ ಪ್ರೀತಿ ಫೋಟೋ ಇಟ್ಕೊಂಡ್ ನಿದ್ದೆ ಬರ್ತದಾ?
ಅಜ್ಜಿ ಕೋಳಿ ಕೂಗಿದ್ರೆನೆ ಬೆಳಕೈಕಾಗದಾ?
ಬೋರ್ ವೆಲ್ಲು ತೊಡದೇನೆ ನೀರ್ ಬತ್ತದಾ?
ಹಂಗೆ ಕಹಿ ನೆನೆಪುಗಳ ನೀ ಮರಿಬೇಕು
ನಿನ್ನ ಅನುಭವಗಳಿಂದ ನೀ ಕಲಿಬೇಕು
ನಿನ್ನ ಹಾಸಿಗೇನ ಮೀರಿ ಕಾಲ್ ಚಾಚ್ಬೇಕು
ಲೈಫು ಎಷ್ಟೇ ಕಷ್ಟ ಆದ್ರೂ ನೀನು ನಗಬೇಕು
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ನಂಗೆ ಈಗ ಜೀವನದಲ್ಲಿ ಖುಷಿಯಾಗಿದೆ ಅನ್ಕೋ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಲೈಫು ಹೆಂಗೆ ಇದ್ರೂ ನಂಗೆ ಸೂಪರಾಗಿದೆ ಅನ್ಕೋ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಜೀವನದಲ್ಲಿ ನಂಗೆ ಈಗ ಖುಷಿ ಯಾಗಿದೆ ಅನ್ಕೋ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಯಾರೇ ಏನೆ ಅಂದ್ರು ನಾನು ಸೂಪರಾಗಿ ಇರ್ತೀನಿ ಅನ್ಕೋ

                                                                          *** 

ಹ್ಯಾಪಿ ಹ್ಯಾಪಿ… ಹ್ಯಾಪಿ ಹ್ಯಾಪಿ ಹ್ಯಾಪಿ
ಹ್ಯಾಪಿ ಹ್ಯಾಪಿ ಐ ಆಮ್ ಫೀಲಿಂಗ್ ಹ್ಯಾಪಿ
ಹ್ಯಾಪಿ ಹ್ಯಾಪಿ… ಹ್ಯಾಪಿ ಹ್ಯಾಪಿ ಹ್ಯಾಪಿ
ಐ ಆಮ್ ಫೀಲಿಂಗ್ ಹ್ಯಾಪಿ ಯಹ್…
ಓಕೆ ಇಲ್ಲಿ ಮಾತಾಡೋವ್ರು ನಿನ್ ಇಎಂಐ ಕಟ್ತಾರಾ? ನೊಪ್
ಜೀವನದಲ್ಲಿ ಸೋತಿದ್ದಾಗ ನಿನ್ ಬೆನ್ನತ್ಟಟ್ತಾರಾ?
ಹೊಟ್ಟೆ ಹಸಿವ್ ಅಂತ ಅಂದಾಗ್ ಊಟಾ ಹಾಕ್ತಾರಾ?
ಶನಿವಾರದ್ ಸಂಜೆ ಖರ್ಚಿಗ್ ಕಾಸ್ ಕೊಡ್ತಾರಾ?
ಇಟ್ಸ್ ಓಕೆ..
ನಿಂಗ್ ತುಂಬಾ ಜನ ಫ್ರೆಂಡ್ಸ್ ಇಲ್ಲ ಅಂದ್ರು ಓಕೆ
ನಿನ್ ಹಾಕೋ ಪೋಸ್ಟಿಗ್ ಲೈಕ್ಸ್ ಇಲ್ಲ ಅಂದ್ರು ಓಕೆ
ನಿನ್ ಜೇಬಲ್ ನಯಾ ಪೈಸಾ ಇಲ್ಲ ಅಂದ್ರು ಓಕೆ
ಜೀವ್ನಾ ನಡಿತಾದ್ ಆಲ್ ಓಕೆ
ಇಲ್ಲಿ ಸ್ವಾಭಿಮಾನ ದೇವ್ರ್ ಇದ್ದಂಗ ಅಲ್ವಾ
ನಿನ್ನ ಹಣೆಬರಹಕ್ ಹೊಣೆ ಕಂಡವ್ರ್ ಅಭಿಪ್ರಾಯ ಅಲ್ಲ
ನಿನ್ನ ಕಸ್ಟಕ್ ಇಲ್ಲ ನಸ್ಟಕ್ ಇಲ್ಲ ಬೇಕಾದಾಗ ಜೊತೆಗಿಲ್ಲ
ಅಂಥವರ ಅಭಿಪ್ರಾಯ ಕಟ್ಕೊಂಡ್ ಏನ್ಮಾಡ್ತಿಯ ಬಾರ್ಲೆ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಜೀನದಲ್ಲಿ ನಂಗೆ ಈಗ ಖುಷಿ ಯಾಗಿದೆ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಜೀವನದಲ್ಲಿ ನಂಗೆ ಈಗ ಖುಷಿಯಾಗಿದೆ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಜೀವನದಲ್ಲಿ ಏನೆ ಬಂದ್ರು ಖುಷಿ ಆಗಿದೆ ಅನ್ಕೋ
ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ
ಯಾರೇ ಏನೆ ಅಂದ್ರು ನಾನು ಸೂಪರಾಗಿ ಇರ್ತೀನಿ ಅನ್ಕೋ
ಇಟ್ಸ್ ಓಕೆ
ಓಕೆ
ಓಕೆ
ಓಕೆ
ಆಲ್ ಓಕೆ
ಅಲ್ವಾ
ಅಲ್ಲ






ಬಳ್ಳಾರಿ, ಹೊಸಪೇಟೆ ನಗರಗಳಲ್ಲಿ ಏ.19ರಿಂದ ಕೋವಿಡ್‌ ನೈಟ್‌ ಕರ್ಫ್ಯೂ ಜಾರಿ

 

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ಹಾಗೂ ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿ ಏ.19ರಿಂದ ಏ.30ರವರೆಗೆ 'ಕೊರೊನಾ ಕರ್ಫ್ಯೂ' ಜಾರಿಗೊಳಿಸಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಆದೇಶ ಹೊರಡಿಸಿದ್ದಾರೆ.

ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ(34)ರಡಿ ಬಳ್ಳಾರಿ ಮಹಾನಗರ ಪಾಲಿಕೆ ಹಾಗೂ ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿ ಏ.19ರಿಂದ ಏ.30ರವರೆಗೆ ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ಕೊರೊನಾ ಕರ್ಫ್ಯೂ ಜಾರಿಗೊಳಿಸಲಾಗಿದೆ. 'ಕೊರೊನಾ ಕರ್ಫ್ಯೂ' ಸಂದರ್ಭದಲ್ಲಿ ಅತ್ಯವಶ್ಯಕ ಸೇವೆಗಳಿಗೆ ಮಾತ್ರ ಅನುಮತಿಸಿದ್ದು, ಉಳಿದಂತೆ ಎಲ್ಲ ಸೇವೆ / ಸಂಚಾರಗಳನ್ನು ನಿಷೇಧಿಸಿಲಾಗಿದೆ.

(ಮಾಹಿತಿ ಕೃಪೆ ಈ vijaykarnataka)