I have shared in the popular news in dodmane photo studio uploaded in Bairava in all posted by all news papers in online upded news in kannada....
Contact number 9844043679
ವಾಷಿಂಗ್ಟನ್ : ಭಾರತದ ಮೇಲೆ ನಮಗೆ ವಿಶೇಷವಾದ ಅಭಿಮಾನವಿದೆ ಎಂದು ಈಗಾಗಲೇ
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳಿರುವ ವಿಚಾರ ಎಲ್ಲರಿಗೂ ತಿಳಿದೇ
ಇದೆ. ಆದರೆ ಈಗ ಮತ್ತೊಮ್ಮೆ ಭಾರತದ ಪರವಾಗಿ ಅವರು ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ಅಮೇರಿಕಾ ಲವ್ಸ್ ಇಂಡಿಯಾ' ಎಂಬ ಅವರ ಟ್ವೀಟ್ ಪ್ರಪಂಚದಾದ್ಯಂತ ವೈರಲ್ ಆಗಿದೆ. ಆಮೇರಿಕಾದ
244 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆ
ಅಧ್ಯಕ್ಷ ಮತ್ತು ದೇಶದ ಜನರಿಗೆ ಶನಿವಾಯ ಶುಭಾಶಯ ಸಂದೇಶವನ್ನು ಕಳುಹಿಸಿದ್ದರು. ಇದಕ್ಕೆ
ಪ್ರತಿಕ್ರಿಯಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 'ಧನ್ಯವಾದಗಳು ನನ್ನ ಪ್ರಿಯ ಸ್ನೇಹಿತ'
ಎಂದು ಟ್ವೀಟ್ ಮಾಡಿದ್ದಾರೆ. ಅಮೇರಿಕಾ ಲವ್ಸ್ ಇಂಡಿಯಾ ಎಂದು ಟ್ವಿಟ್ಟರ್ ಮೂಲಕ
ಮತ್ತೊಮ್ಮೆ ತಮ್ಮ ಅಭಿಮಾನ ತೋರಿಸಿದ್ದಾರೆ. (ಮಾಹಿತಿಸುದ್ದಿಒನ್ ಕೃಪೆ )
ಗೂಗಲ್ ಪ್ಲೇ ಸ್ಟೋರ್ನಲ್ಲಿರುವ 25 ಆಯಪ್ಗಳನ್ನು ಕಿತ್ತೆಸೆದಿದೆ.
ಫೇಸ್ಬುಕ್ ಬಳಕೆದಾರರ ಪಾಸ್ವರ್ಡ್ ಮತ್ತು ಒಳಕೆದಾರರ ಮಾಹಿತಿಯನ್ನು
ಎಗರಿಸುತ್ತಿದೆ ಎಂಬ ಆಧಾರದ ಮೇಲೆ ಗೂಗಲ್ ಈ ನಿರ್ಣಯ ಕೈಗೊಂಡು 25 ಆಯಪ್ಗಳನ್ನು
ತೆಗೆದು ಹಾಕಿದೆ.
ಫ್ರೆಂಚ್ ಸೈಬರ್ ಸೆಕ್ಯುರಿಟಿ ಸಂಸ್ಥೆ ಪ್ಲೇ
ಸ್ಟೋರ್ನಲ್ಲಿರುವ ಕೆಲವು ಆಯಪ್ಗಳನ್ನು ಪಟ್ಟಿ ಮಾಡಿದ್ದು, ಆ ಆಯಪ್ಗಳು ಫೇಸ್ಬುಕ್
ಬಳಕೆದಾರರ ಪಾಸ್ವರ್ಡ್ ಮತ್ತು ಇನ್ನಿತರ ಮಾಹಿತಿ ಎಗರಿಸುತ್ತಿದೆ ಎಂಬ ಸಂಗತಿಯನ್ನು
ಗೂಗಲ್ಗೆ ತಿಳಿಸಿದೆ. ಇದರ ಬೆನ್ನಲ್ಲೇ ಗೂಗಲ್ ತನ್ನ ಪ್ಲೇ ಸ್ಟೋರ್ನಿಂದ 25
ಆಯಪ್ಗಳನ್ನು ಪರೀಕ್ಷಿಸಿ ತೆಗೆದು ಹಾಕಿದೆ.
ಪ್ಲೇ ಸ್ಟೋರ್ 25 ಆಯಪ್ಗಳನ್ನು
ತೆಗೆದು ಹಾಕುವ ಮೊದಲು ಈ ಅಪ್ಲಿಕೇಶನ್ಗಳು ಒಟ್ಟು 2.34 ಮಿಲಿಯನ್ ಬಾರಿ ಡೌನ್‌ಲೋಡ್
ಕಂಡಿದೆ. ಅನೇಕರು ಈ ಆಯಪ್ ಅನ್ನು ಬಳಸುತ್ತಿದ್ದಾರೆ ಎಂದು ತಿಳಿಸಿದೆ.
ಅಷ್ಟು ಮಾತ್ರವಲ್ಲದೆ, ಈ ಆಯಪ್ಗಳನ್ನು ಒಂದೇ ಗುಂಪು ಸೇರಿ
ರಚಿಸಿದೆ ಎಂಬ ಶಾಕಿಂಗ್ ಸುದ್ದಿಯನ್ನು ಹೊರಹಾಕಿದೆ. ಗೂಗಲ್ ಪ್ಲೇ ಸ್ಟೋರ್ನಿಂದ
ತೆಗೆದು ಹಾಕಿರುವ ಆಯಪ್ಗಳ ಪಟ್ಟಿಯಲ್ಲಿ ಫೋಟೋ ಎಡಿಟರ್, ವಿಡಿಯೋ ಎಡಿಟರ್, ವಾಲ್
ಪೇಪರ್, ಫ್ಲಾಷ್ಲೈಟ್ ಅಪ್ಲಿಕೇಶನ್, ಫೈಲ್ ಮ್ಯಾನೇಜರ್ ಮತ್ತು ಮೊಬೈಲ್
ಗೇಮ್ಗಳಿದ್ದವು. ಈ ಎಲ್ಲಾ ಆಯಪ್ಗಳ ವೈಶಿಷ್ಟ್ಯತೆ ಮತ್ತು ಫೀಚರ್ಗಳು ಒಂದೇ
ಸಮನಾಗಿದ್ದವು ಎಂದು ತಿಳಿಸಿದೆ.
ಸೂಪರ್ ಫ್ಲ್ಯಾಶ್ ಲೈಟ್, ಸೋಲಿಟೈರ್,
ಅಕ್ಯುರೇಟ್ ಸ್ಕ್ಯಾನಿಂಗ್ ಆಫ್ ಕ್ಯೂ ಆರ್ ಕೋಡ್, ಕ್ಲಾಸಿಕ್ ಕಾರ್ಡ್ ಗೇಮ್. ಜಂಕ್ ಫೈಲ್
ಕ್ಲೀನಿಂಗ್, ಸಿಂಥೇಟಿಕ್ ಝಡ್, ಫೈಲ್ ಮೆನೇಜರ್, ಸೂಪರ್ ವಾಲ್ ಪೇಪರ್ ಫ್ಲ್ಯಾಶ್ ಲೈಟ್,
ವಾಲ್ ಪೇಪರ್ ಲೆವೆಲ್, ಕಾನ್ ಟೂರ್ ಲೆವೆಲ್ ವಾಲ್ ಪೇಪರ್, ಐ ಪ್ಲೇಯರ್ ಮತ್ತು ಐ ವಾಲ್
ಪೇಪರ್, ವಿಡಿಯೋ ಮೇಕರ್, ಕಲರ್ ವಾಲ್ ಪೇಪರ್ಸ್, ಪೆಡೋಮೀಟರ್. ಪವರ್ ಫುಲ್ ಫ್ಲ್ಯಾಶ್
ಲೈಟ್, ಸೂಪರ್ ಬ್ರೈಟ್ ಫ್ಲ್ಯಾಶ್ ಲೈಟ್, ಕಾಂಪೋಸೈಟ್ ಝಡ್, ಸ್ಕ್ರೀನ್ ಶಾಟ್
ಕ್ಯಾಪ್ಚರ್, ಡೈಲಿ ಹೋರೋಸ್ಕೋಪ್ ವಾಲ್ ಪೇಪರ್ಸ್, ವುಕ್ಸಿಯಾ ರೀಡರ್, ಪ್ಲಸ್ ವೆದರ್,
ಎನಿಮ್ ಲೈವ್ ವಾಲ್ ಪೇಪರ್, ಐ ಹೆಲ್ತ್ ಸ್ಟೆಪ್ ಕೌಂಟರ್, ಕಾಮ್ ಟೈಪ್ ಫಿಕ್ಷನ್,
ಪಾಡೆನಾಟೆಫ್
ಇನ್ನು ಪ್ಲೇ ಸ್ಟೋರ್ನಿಂದ ರಿಮೂವ್ ಆದ ಆಯಪ್ಗಳು
ದುರುದ್ದೇಶಪೂರಿತ ಕೋಡ್ ಹೊಂದಿದ್ದು, ಬಳಕೆದಾರರ ಫೇಸ್ಬುಕ್ ಆಯಪ್ಗಳ ಬ್ರೌಸರ್
ವಿಂಡೋವನ್ನು ನಕಲಿ ಮಾಡಿ ಲೋಡ್ ಮಾಡುತ್ತದೆ. ಬಳಕೆದಾರರು ಇದು ಅಸಲಿ ಎಂದು ತಿಳಿದು
ಕಾರ್ಯ ನಿರ್ವಹಿಸುತ್ತಾರೆ. ಆ ಮೂಲಕ ಆಯಪ್ಗಳು ಬಳಕೆದಾರರ ಪಾಸ್ವರ್ಡ್ ಮತ್ತು
ಇತರೆ ಮಾಹಿತಿಯನ್ನು ಹ್ಯಾಕ್ ಮಾಡುತ್ತಿದ್ದರು ಎನ್ನಲಾಗಿದೆ. ಇದೀಗ ಈ ಆಯಪ್ ಅನ್ನು
ಗೂಗಲ್ ತನ್ನ ಪ್ಲೇ ಸ್ಟೋರ್ನಿಂದ ರಿಮೂವ್ ಮಾಡಿದೆ.(ಮಾಹಿತಿNews18 ಕನ್ನಡ ಕೃಪೆ )
ಈ ವರ್ಷದ ಕೊನೆಯ ಭಾಗದಲ್ಲಿ ಅಥವಾ 2021ರ ಆರಂಭದಲ್ಲಿ ಭಾರತದಲ್ಲಿ 5ಜಿ ಮೊಬೈಲ್
ಸೇವೆ ಲಭ್ಯವಾಗಬಹುದು ಎಂಬ ನಿರೀಕ್ಷೆ ಕೆಲವು ಸಮಯದ ಹಿಂದೆ ಇತ್ತು. ಆದರೆ, ಕೋವಿಡ್-19
ಸಾಂಕ್ರಾಮಿಕ ತಂದಿತ್ತ ತಲೆನೋವು ಸೇರಿದಂತೆ ಕೆಲವು ಕಾರಣಗಳಿಂದಾಗಿ ದೇಶದಲ್ಲಿ 5ಜಿ
ತರಂಗಾಂತರಗಳ ಹರಾಜು ಪ್ರಕ್ರಿಯೆ ಮುಂದಕ್ಕೆ ಹೋಗುವುದು ಖಚಿತವಾಗಿದೆ. ಒಂದು ವರದಿಯ
ಪ್ರಕಾರ 2021ರ ಕೊನೆಯ ಭಾಗದಲ್ಲಿ ಅಥವಾ 2022ರಲ್ಲಿ ದೇಶದಲ್ಲಿ 5ಜಿ ಸೇವೆಗಳು
ಲಭ್ಯವಾಗಬಹುದು. ಅದಿರಲಿ, 5ಜಿ ಸೇವೆ ಶುರುವಾದ ನಂತರ ಮೊಬೈಲ್ ಮೂಲಕ ಪಡೆಯುವ
ಇಂಟರ್ನೆಟ್ ಸಂಪರ್ಕದ ವೇಗ ಹೆಚ್ಚಲಿದೆಯೇ? ಹೌದು, ಅದು ಹೆಚ್ಚಾಗಲಿದೆ. ಅದರಲ್ಲಿ
ಅನುಮಾನ ಇಲ್ಲ. 1 ಜಿಬಿಪಿಎಸ್ ವೇಗದ ಇಂಟರ್ನೆಟ್ ಸಂಪರ್ಕ 5ಜಿ ಸೇವೆ ಆರಂಭವಾದ ನಂತರ
ಸಿಗಬಹುದು.
ಅಂದರೆ, 5 ಜಿಬಿ ಗಾತ್ರದ
ಸಿನಿಮಾವೊಂದನ್ನು ಡೌನ್‌ಲೋಡ್ ಮಾಡಿಕೊಳ್ಳಲು 5ಜಿ ಸೇವೆಗಳು ಆರಂಭವಾದ ನಂತರ 40
ಸೆಕೆಂಡುಗಳಷ್ಟು ಕಾಲ ಸಾಕು ಎನ್ನುತ್ತಾರೆ ಕಂಪ್ಯೂಟರ್ ಪರಿಣತರು!
ದೇಶದಲ್ಲಿ ಸರಿಸುಮಾರು 2001ನೆಯ ಇಸವಿಯವರೆಗೂ
ಚಾಲ್ತಿಯಲ್ಲಿ ಇದ್ದಿದ್ದು 2ಜಿ ಸೇವೆಗಳು. ಆ ಕಾಲದಲ್ಲಿ ಇಷ್ಟೇ ಗಾತ್ರದ ಒಂದು ಸಿನಿಮಾ
ಅಥವಾ ಸಾಕ್ಷ್ಯಚಿತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ದಿನಗಳ ಕಾಲ ಕಾಯಬೇಕಿತ್ತು!
ವಾಸ್ತವದಲ್ಲಿ, ಅಷ್ಟೊಂದು ಗಾತ್ರದ ಕಡತಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಆಗ
ಬಹುತೇಕರಿಂದ ಆಗುತ್ತಿರಲಿಲ್ಲ ಕೂಡ. 5ಜಿ ಸೇವೆಗಳನ್ನು ಪಡೆಯಲು, ಅದಕ್ಕೆ
ಸೂಕ್ತವಾದ ಸ್ಮಾರ್ಟ್ ಫೋನ್ ಬೇಕು. ಇಂತಹ ಸ್ಮಾರ್ಟ್ ಫೋನ್‌ಗಳು ಭಾರತದ
ಮಾರುಕಟ್ಟೆಯನ್ನು ಈಗಾಗಲೇ ಪ್ರವೇಶಿಸಿ ಆಗಿದೆ. ಆದರೆ 5ಜಿ ಸೇವೆಗಳು ಲಭ್ಯವಾಗಬೇಕಷ್ಟೆ.
5ಜಿ ತಂತ್ರಜ್ಞಾನವು ಅಂತರ್ಜಾಲ ಸಂಪರ್ಕದ ವೇಗವನ್ನು ಹೆಚ್ಚಿಸುವ ಕಡೆ ಹೆಚ್ಚು ಗಮನ
ನೀಡುತ್ತದೆ, ಕರೆಗಳ ಗುಣಮಟ್ಟವನ್ನು ಸುಧಾರಿಸುವತ್ತ ಹೆಚ್ಚಿನ ಗಮನ ನೀಡಿಲ್ಲ
ಎನ್ನುತ್ತಾರೆ ಕೆಲವು ತಜ್ಞರು. ಹಾಗಾಗಿ, 5ಜಿ ಸೇವೆಗಳು ದೇಶದಲ್ಲಿ ಲಭ್ಯವಾದ ನಂತರವೂ, ಕರೆಗಳ ಕಡಿತದ ಕರಕರೆಗೆ ಪೂರ್ಣ ವಿರಾಮ ಸಿಗಲಿಕ್ಕಿಲ್ಲವೇನೋ... (ಮಾಹಿತಿಪ್ರಜಾವಾಣಿ ಕೃಪೆ )
ನವದೆಹಲಿ : ಚೀನಾ ಆಯಪ್ ಗಳನ್ನು ಬ್ಯಾನ್ ಮಾಡಿದ ಬೆನ್ನಲೇ ಇಂದು ಮೊದಲ ದೇಶಿ ಆಯಪ್ ಅಲಾಯಿಮೆಂಟ್ಸ್ ಗೆ ಚಾಲನೆ ನೀಡಲಾಗುವುದು.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇಂದು ಮೊದಲ ದೇಶಿ ಆಯಪ್ ಅಲಾಯಿಮೆಂಟ್ಸ್ ಗೆ
ಚಾಲನೆ ನೀಡಲಿದ್ದಾರೆ. ಅಲಾಯಿಮೆಂಟ್ಸ್ ಆಯಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈಗಾಗಲೇ
ಲಭ್ಯವಿದ್ದು, ಇದು ಎಂಟು ಭಾಷೆಗಳಲ್ಲಿ ಸಿಗಲಿದ್ದು, ಇದರಿಂದ ಆಡಿಯೋ-ವಿಡಿಯೋ ಕಾಲಿಂಗ್
ಮಾಡಬಹುದಾಗಿದೆ. ಈಗಾಗಲೇ ಲಕ್ಷಕ್ಕೂ ಹೆಚ್ಚು ಜನರು ಇದನ್ನು ಡೌನ್ ಲೋಡ್ ಮಾಡಿಕೊಂಡು
ಬಳಕೆ ಮಾಡುತ್ತಿದ್ದಾರೆ.
ಬೆಂಗಳೂರು : ಗುರು ಪೌರ್ಣಿಮೆ ದಿನವಾದ ಇಂದು ಈ ವರ್ಷದ ಮೂರನೇ ಚಂದ್ರ ಗ್ರಹಣ ಸಂಭವಿಸಿದೆ.
ಚಂದ್ರ ಗ್ರಹಣ ಇಂದು ಬೆಳಿಗ್ಗೆ 8.37ಕ್ಕೆ ಆರಂಭವಾಗಿದ್ದು, ಬೆಳಿಗ್ಗೆ 9.59ಕ್ಕೆ
ಪೂರ್ಣ ಗೋಚರವಾಗಲಿದೆ. ಬೆಳಿಗ್ಗೆ 11.37ಕ್ಕೆ ಗ್ರಹಣ ಮೋಕ್ಷವಾಗಲಿದೆ. ಒಟ್ಟು 2 ಗಂಟೆ
45 ನಿಮಿಷಗಳ ಕಾಲ ಚಂದ್ರ ಗ್ರಹಣ ಸಂಭವಿಸಲಿದೆ.
ಈ ಚಂದ್ರ ಗ್ರಹಣ ಆಫ್ರಿಕಾ, ಉತ್ತರ ಅಮೇರಿಕಾ, ಫೆಸಿಫಿಕ್, ಅಟ್ಲಾಂಟಿಕ್,
ಅಂಟಾರ್ಟಿಕಾದಲ್ಲಿ ಹೆಚ್ಚು ಗೋಚರವಾಗಲಿದ್ದು, ಭಾರತದಲ್ಲಿ ಈ ಚಂದ್ರ ಗ್ರಹಣ ಗೋಚರವಾಗಲ್ಲ
ಎನ್ನಲಾಗಿದೆ.
ಬಾಗಲಕೋಟೆ/ವಿಜಯಪುರ:ಕೊರೋನಾ ಸೋಂಕು ಕಳೆದ
ನಾಲ್ಕೈದು ತಿಂಗಳಲ್ಲಿ ಜನರ ಜೀವನ ವಿಧಾನವನ್ನೇ ಬದಲಿಸಿದೆ. ಸಿಲಿಕಾನ್ ಸಿಟಿ
ಬೆಂಗಳೂರಿನಲ್ಲಿ ಜೀವನ ಮಾಡಲು ಸಾಧ್ಯವಾಗುತ್ತಿಲ್ಲ, ಇಲ್ಲಿ ಕೊರೋನಾ ಸೋಂಕು ದಿನದಿಂದ
ದಿನಕ್ಕೆ ಹೆಚ್ಚಾಗುತ್ತಿದೆ ಎಂದು ವಲಸೆ, ಕೂಲಿ ಕಾರ್ಮಿಕರು, ಬಡವರು, ಕೆಳ ಮಧ್ಯಮ
ವರ್ಗದವರು ಮಾತ್ರವಲ್ಲದೆ ಕೈ ತುಂಬಾ ಸಂಬಳ ತರುತ್ತಿದ್ದ ಉತ್ತರ ಕರ್ನಾಟಕದ ಹಲವು
ಟೆಕ್ಕಿಗಳು ಬೆಂಗಳೂರು ಬಿಟ್ಟು ಊರಿಗೆ ಹೋಗುತ್ತಿದ್ದಾರೆ.
ನಿನ್ನೆ
ಒಂದೇ ದಿನ ಬೆಂಗಳೂರಿನಲ್ಲಿ 1,172 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಭಯ,
ಆತಂಕಗಳಿಂದ ಉತ್ತರ ಕರ್ನಾಟಕಕ್ಕೆ ಹೋಗುವ ಮಂದಿ ಹೆಚ್ಚಾಗಿದ್ದು ಕಳೆದ ಕೆಲ ದಿನಗಳಿಂದ
ಬಸ್ಸುಗಳಲ್ಲಿ ಬೆಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ ಹೋಗುವ ಪ್ರಯಾಣಿಕರ ಸಂಖ್ಯೆ
ಹೆಚ್ಚಾಗಿದೆ.
ಬೆಂಗಳೂರಿನ ಕಮಲಾ ನಗರದಲ್ಲಿ ವಾಸವಿದ್ದ ಸಾಫ್ಟ್ ವೇರ್
ಎಂಜಿನಿಯರ್ ಸಿದ್ದರಾಮಪ್ಪ ನವಲಗುಂದ, ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ
ಪ್ರಕರಣ ಹೆಚ್ಚಾಗುತ್ತಿದೆ. ಇದರಿಂದ ಎಲ್ಲೆಡೆ ಭಯ ಹೆಚ್ಚಾಗುತ್ತಿದೆ. ಹೀಗಾಗಿ ನಾವು
ಮನೆಗೆ ಬೀಗ ಹಾಕಿ ನಮ್ಮೂರು ಗದಗಕ್ಕೆ ಹೋಗುತ್ತಿದ್ದೇವೆ, ಪರಿಸ್ಥಿತಿ ಸಹಜ ಸ್ಥಿತಿಗೆ
ಬರುವವರೆಗೆ ಅಲ್ಲಿಯೇ ಇರುತ್ತೇವೆ ಎಂದರು. ಕಳೆದ ಎರಡು ದಶಕಗಳಿಂದ ಇವರು
ಬೆಂಗಳೂರಿನಲ್ಲಿದ್ದಾರೆ. ಬೆಂಗಳೂರಿನಲ್ಲಿ ಕೊರೋನಾ ಕೇಸು ಹೆಚ್ಚಾಗುತ್ತಿರುವುದರಿಂದ
ನಾನು ಕೆಲಸ ಮಾಡುವ ಕಂಪೆನಿಯಲ್ಲಿ ಮುಂದಿನ ಎರಡು ತಿಂಗಳು ಮನೆಯಿಂದ ಕೆಲಸ ಮಾಡಲು ಅನುಮತಿ
ನೀಡಿದ್ದಾರೆ. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಂದೆ ರಾಜೀನಾಮೆ
ನೀಡಿದ್ದಾರೆ. ಬೆಂಗಳೂರಿಗಿಂತ ನಮ್ಮ ಊರಿನಲ್ಲಿ ನಮಗೆ ಹೆಚ್ಚು ಸುರಕ್ಷತೆ ಎನಿಸುತ್ತದೆ
ಎಂದರು. ಬಾಗಲಕೋಟೆಯ ಲೋಕಾಪುರದ ನಿವಾಸಿ ಅನಿಲ್ ಮೈಗೇರಿ, ಕೆಂಗೇರಿ, ಬಿಡದಿ
ಸುತ್ತಮುತ್ತ ಆಟೋಮೊಬೈಲ್ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ನಮ್ಮ ಸುತ್ತಮುತ್ತ
ಗ್ರಾಮಗಳ ನಾವು 12 ಮಂದಿ ಕಂಪೆನಿಗಳಲ್ಲಿ ಅನುಮತಿ ಕೇಳಿ ಊರಿಗೆ ಹೋಗುತ್ತಿದ್ದೇವೆ,
ಇಲ್ಲಿದ್ದರೆ ಊರಿನಲ್ಲಿರುವ ನಮ್ಮ ಮನೆಯವರಿಗೆ ಸುದ್ದಿ ನೋಡಿ ಭಯ, ಆತಂಕವಾಗುತ್ತಿದೆ
ಎಂದರು. ನ್ಯೂ ಸಂಡೆ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ವಿಜಯಪುರ ಜಿಲ್ಲಾ
ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಬೆಂಗಳೂರಿನಲ್ಲಿ ಕೊರೋನಾ
ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಹಲವರು ಊರಿಗೆ ಬರುತ್ತಿದ್ದಾರೆ. ಜಿಲ್ಲೆಯೊಳಗೆ
ಸಂಚರಿಸಿ ಬರುವುದರಿಂದ ಹೋಂ ಕ್ವಾರಂಟೈನ್ ನಲ್ಲಿ ಇರಿ ಎಂದು ಅವರಿಗೆ ಹೇಳಲು ಸಾಧ್ಯವಿಲ್ಲ
ಎಂದರು. ಬೆಂಗಳೂರಿನಿಂದ ಬಂದವರ ಬಗ್ಗೆ ದಾಖಲೆಗಳು: ಬೆಂಗಳೂರಿನಿಂದ
ಊರಿಗೆ ಬರುವವರ ಬಗ್ಗೆ ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದು ಅವರ ಮಾರ್ಗಸೂಚಿಗೆ
ಕಾಯುತ್ತಿದ್ದೇವೆ. ಸರ್ಕಾರ ಮಾಡದಿದ್ದರೆ ಈ ಬಗ್ಗೆ ನಾವು ಗಮನಹರಿಸಬೇಕಾಗುತ್ತದೆ. ಊರಿಗೆ
ಬಂದವರಿಂದ ಇಲ್ಲಿ ಹಳ್ಳಿಯಲ್ಲಿ ಸೋಂಕು ತಗಲುವ ಸಾಧ್ಯತೆಯಿದೆ. ಬೆಂಗಳೂರಿನಿಂದ ಬಂದವರ
ಬಗ್ಗೆ ವಿವರಗಳನ್ನು ಪಡೆದು ಪ್ರತ್ಯೇಕವಾಗಿ ನಿರ್ವಹಿಸಿ ಎಂದು ನಾನು ಎಲ್ಲಾ ಗ್ರಾಮಗಳ
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬೆಂಗಳೂರಿನಿಂದ ಬಂದವರ ಬಗ್ಗೆ
ಗ್ರಾಮಸ್ಥರು ಆತಂಕಕ್ಕೊಳಗಾಗಬೇಡಿ ಎಂದು ನಾನು ಈ ಸಂದರ್ಭದಲ್ಲಿ ಹೇಳುತ್ತೇನೆ ಎಂದು
ಗೋವಿಂದ ರೆಡ್ಡಿ ತಿಳಿಸಿದ್ದಾರೆ.