WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Saturday, April 17, 2021

ಓ ಚಂದಮಾಮ ಓ ಚಂದಮಾಮ ಬೆಳದಿಂಗಳ ಬೇಡಿದಾಗ

 

👉

 * ಓ ಚಂದಮಾಮ ಓ ಚಂದಮಾಮ

ಬೆಳದಿಂಗಳ ಬೇಡಿದಾಗ ಹ.. ಹಾ..

ಸುಡುವಂತ ಬಿಸಿಲಾದೆಯಲ್ಲ ಹ.. ಹಾ..

ಒಡಲೆಲ್ಲ ಬುಗಿಲಾಯಿತಲ್ಲ ಹ.. ಹಾ..

ಓ ಚಂದಮಾಮ ಓ ಚಂದಮಾಮ

ಬೆಳದಿಂಗಳ ಬೇಡಿದಾಗ ಹ.. ಹಾ..

ಸುಡುವಂತ ಬಿಸಿಲಾದೆಯಲ್ಲ ಹ.. ಹಾ..

ಒಡಲೆಲ್ಲ ಬುಗಿಲಾಯಿತಲ್ಲ ಹ.. ಹಾ..

              *** 

ಎಲ್ಲಿಂದಲೋ ಒಂದೊಂದೆ ರಾಗ 

ಇಂಪಾಗಿಯೇ ಕೇಳುತಿತ್ತಿತ್ತು ವು ವೂ...

ಎಲ್ಲಿಂದಲೋ ಬಂದಂತ ರಾಗ

ಒಂದಂದನೂ ಕೇಳುತ್ತ ಈಗ

ನೆನಪಾಯ್ತು ಈ ಹಾಡು ವು ವೂ...

ಈ ಪ್ರೇಮಗೀತೆ ಅರಿವಿಲ್ಲದಂತೆ

ಕಣ್ಣೀರ ಹಾಡಾಯಿತಲ್ಲ ಹ.. ಹಾ..

ಲಯವಿಗ ಲಯವಾಯಿತಲ್ಲ ಹ.. ಹಾ..

ಅನುರಾಗ ಶೃತಿ ಸೇರಲಿಲ್ಲ 

              ***

ಈ ಜೋಡಿ ಹಕ್ಕಿ ಎಂದೆಂದು ಒಂದೆ

ಎಂದಿಂದು ಸುಳ್ಳಾಯಿತು ವು ವೂ...

ಈ ಒಂಟಿ ಹಕ್ಕಿ ಕಣ್ಣೀರು ತುಂಬಿ

ನರಳಾಡಿದಾಗ ಇನ್ನೊಂದು ಹಕ್ಕಿ

ಭ್ರಮೆ ಹಿಂದೆಯೇ ಓಡಿತು ವು ವೂ...

ಪ್ರೀತೀಯ ಹೂವೆ ಮುಳ್ಳಾಗಿ ಚುಚ್ಚಿ ಕಣ್ಣಿಂದು ಕಾಣದಲ್ಲ ಹಾ. ಹಾ..

ಬೇವಾಯಿತು ಪ್ರೀತಿ ಬೆಲ್ಲ ಹ.. ಹಾ..

ಆ ಕಹಿಯ ಶಿವ ಮಾತ್ರ ಬಲ್ಲ ಹಾ...

                ***

ಓ ಚಂದಮಾಮ ಓ ಚಂದಮಾಮ

ಬೆಳದಿಂಗಳ ಬೇಡಿದಾಗ ಹ.. ಹಾ..

ಸುಡುವಂತ ಬಿಸಿಲಾದೆಯಲ್ಲ ಹ.. ಹಾ..

ಒಡಲೆಲ್ಲ ಬುಗಿಲಾಯಿತಲ್ಲ ಹ.. ಹಾ..

            **--------**


3 ವರ್ಷದಲ್ಲಿ 18 ಮನೆ ಬದಲು; ವಿಚ್ಛೇದನದವರೆಗೂ ಬಂದ ಹೆಂಡತಿಯ "ಜಿರಲೆ ಫೋಬಿಯಾ"


 ಭೋಪಾಲ್, ಏಪ್ರಿಲ್ 17: ಹೆಂಡತಿಯ ಜಿರಲೆ ಭಯ, ಮೂರು ವರ್ಷದಲ್ಲಿ ಹದಿನೆಂಟು ಬಾರಿ ಮನೆ ಬದಲಿಸುವಂತೆ ಮಾಡಿದೆ. ಅಷ್ಟೇ ಅಲ್ಲ, ಈ ವಿಚಾರ ಈಗ ವಿಚ್ಛೇದನದವರೆಗೂ ಬಂದು ನಿಂತಿದೆ.

ಹೆಂಡತಿಯ ಜಿರಲೆ ಫೋಬಿಯಾದಿಂದ ಬೇಸತ್ತಿರುವ ಗಂಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಸಂಗತಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬೆಳಕಿಗೆ ಬಂದಿದೆ. ಭೋಪಾಲ್‌ನಲ್ಲಿ 2017ರಲ್ಲಿ ಇವರ ಮದುವೆಯಾಗಿದೆ. ಆತ ಸಾಫ್ಟ್‌ವೇರ್ ಇಂಜಿನಿಯರ್. ತನಗೆ ಜಿರಲೆ ಫೋಬಿಯಾ ಇದ್ದು, ಜಿರಲೆ ಕಂಡರೆ ಸಾಕು ಜೋರಾಗಿ ಕೂಗಿಕೊಳ್ಳುತ್ತೇನೆ. ಆ ಜಿರಲೆ ಕಂಡ ಜಾಗಕ್ಕೆ ಮತ್ತೆ ಕಾಲಿಡುವುದೇ ಇಲ್ಲ ಎಂದು ಹೆಂಡತಿ ಮದುವೆ ನಂತರ ತಿಳಿಸಿದ್ದಾಳೆ. ಇದು ಸಹಜ ಎಂದು ಆತನೂ ಮೊದಮೊದಲು ಸುಮ್ಮನಿದ್ದ.  ಮದುವೆ ನಂತರ 2018ರಲ್ಲಿ ಮೊದಲ ಬಾರಿ ಜಿರಲೆ ಕಾರಣಕ್ಕೆ ದಂಪತಿ ಮನೆ ಬದಲಾಯಿಸಿದ್ದರು.

(ಮಾಹಿತಿ ಕೃಪೆ Oneindia)


ಬನ್ನೇರುಘಟ್ಟದ ಆಸ್ಪತ್ರೆಯಲ್ಲಿ ಹುಲಿ ಮತ್ತು ಸಿಂಹದ ಮರಿಗಳ ಚಿನ್ನಾಟ ದೃಶ್ಯ ವೈರಲ್​


 ಬೆಂಗಳೂರು: ಹುಲಿ, ಸಿಂಹ ಅಂದ್ರೆ ಸಾಕು ಮಾರುದ್ದ ಓಡೋಣ ಅನ್ನಿಸೋದು ಸಹಜ. ಆದ್ರೆ ಇಲ್ಲಿ ಮಾತ್ರ ಅವುಗಳನ್ನ ಮತ್ತೆ ಮತ್ತೆ ನೋಡಬೇಕು, ಮುದ್ದು ಮಾಡಬೇಕು… ಅನ್ನಿಸುವ ಜತೆಗೆ ಪ್ರೀತಿ ಉಕ್ಕಿಸುತ್ತೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 'ಅನುಷ್ಕಾ' ಎಂಬ ಹುಲಿ ಎರಡು ಮರಿಗಳಿಗೆ ಜನ್ಮ ನೀಡಿದ್ದು, 'ಸನಾ' ಎಂಬ ಸಿಂಹಿಣಿಯೂ ಎರಡು ಮರಿಗಳಿಗೆ ಜನ್ಮನೀಡಿದೆ. ಬನ್ನೇರುಘಟ್ಟ ‌ಝೂ ಆಸ್ಪತ್ರೆಯಲ್ಲಿ ಆರೈಕೆ ಪಡೆಯುತ್ತಿರುವ ಈ ನಾಲ್ಕೂ ಮರಿಗಳು ಆಸ್ಪತ್ರೆಯಲ್ಲಿ ಅಡ್ಡಾಡುತ್ತಾ ಚಿನ್ನಾಟ ಆಡುವ ದೃಷ್ಯ ನೋಡುಗರಿಗೆ ಖುಷಿಯ ಹೂರಣ.

ಹುಟ್ಟಿದ‌ ಬಳಿಕ ತಾಯಿಯಿಂದ ಮರಿಗಳಿಗೆ ಸೂಕ್ತ ಆರೈಕೆ ಸಿಗದ ಕಾರಣ, ಮೃಗಾಲಯ ಸಿಬ್ಬಂದಿ ಸಿಂಹ ಮತ್ತು ಹುಲಿಯ ಮರಿಗಳಿಗೆ ಮೇಕೆ ಹಾಲು ಹಾಗೂ ಪೌಷ್ಟಿಕಾಂಶದ ಟಾನಿಕ್ ನೀಡಿ ಆರೈಕೆ ಮಾಡುತ್ತಿದ್ದಾರೆ.

ಹುಲಿ ಮತ್ತು ಸಿಂಹದ ಮರಿಗಳು ಆರೋಗ್ಯವಾಗಿದ್ದು, ಆಸ್ಪತ್ರೆಯಲ್ಲಿ ಚಿನ್ನಾಟ ಆಡಿಕೊಂಡಿವೆ.

ಬನ್ನೇರುಘಟ್ಟ ಉದ್ಯಾನದಲ್ಲಿ ಹುಲಿ ಹಾಗೂ ಸಿಂಹದ‌ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದ್ದು, ಸದ್ಯ 19 ಹುಲಿಗಳು ಹಾಗೂ 24 ಸಿಂಹಗಳು ಇವೆ.

(ಮಾಹಿತಿ ಕೃಪೆ ವಿಜಯವಾಣಿ)

SSLC - ಪಿಯುಸಿ ಪರೀಕ್ಷೆ ಕುರಿತು ಶಿಕ್ಷಣ ಸಚಿವರಿಂದ ಮಹತ್ವದ ಹೇಳಿಕೆ


 ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟಿಸುತ್ತಿದೆ. ಇದರ ಜೊತೆಗೆ ಸಾವಿನ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದ್ದು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ರದ್ದುಪಡಿಸಿದ್ದು 12ನೇ ತರಗತಿ ಪರೀಕ್ಷೆಯನ್ನು ಮುಂದೂಡಿದೆ. ಐಸಿಎಸ್ಸಿ ಪರೀಕ್ಷೆ ಕೂಡ ಮುಂದೂಡಲ್ಪಟ್ಟಿದೆ.

ಹೀಗಾಗಿ ಕರ್ನಾಟಕದಲ್ಲೂ ಸಹ 10 ಮತ್ತು 12ನೇ ತರಗತಿ ಪರೀಕ್ಷೆಗಳು ನಡೆಯುತ್ತದೋ ಇಲ್ಲವೋ ಎಂಬ ಗೊಂದಲ ವಿದ್ಯಾರ್ಥಿ ಹಾಗೂ ಪೋಷಕರನ್ನು ಕಾಡುತ್ತಿದೆ. ಇದೀಗ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಚಾಮರಾಜನಗರ ಜಿಲ್ಲೆ ಹನೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸುರೇಶ್ ಕುಮಾರ್, ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ.

ಪರೀಕ್ಷೆ ಜೂನ್ 21 ಕ್ಕೆ ನಿಗದಿಯಾಗಿದೆ. ಇದಕ್ಕೆ ಇನ್ನೂ ಬಹಳಷ್ಟು ಕಾಲಾವಕಾಶವಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ 10 ಮತ್ತು 12ನೇ ಪರೀಕ್ಷೆ ನಡೆಸಲು ಯಾವುದೇ ಅಡ್ಡಿಯಿಲ್ಲ ಎಂದು ತಿಳಿಸಿದ್ದಾರೆ

(ಮಾಹಿತಿ ಕೃಪೆ ಕನ್ನಡ ದುನಿಯಾ)

ಚಿಕಿತ್ಸೆ ಫಲಕಾರಿಯಾಗದೇ ತಮಿಳು ನಟ ವಿವೇಕ್ ನಿಧನ


 ಚೆನ್ನೈ : ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ತಮಿಳಿನ ಖ್ಯಾತ ನಟ ವಿವೇಕ್ (59) ಚೆನ್ನೈ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಮೃತಪಟ್ಟಿದ್ದಾರೆ.

ಆಯಂಜಿಯೋಪ್ಲಾಸ್ಟಿ ಚಿಕಿತ್ಸೆ ಹಾಗೂ ಸ್ಟಂಟ್ ಅಳವಡಿಕೆಗಾಗಿ ವದಪಳನಿಯಲ್ಲಿರುವ ಎಸ್‌ಐಎಂಎಸ್ ಆಸ್ಪತ್ರೆಗೆ ದಾಖಲಾಗಿದ್ದ ವಿವೇಕ್ ಇಂದು ಮುಂಜಾನೆ ನಿಧನರಾಗಿದ್ದಾರೆ.

ಹೃದಯ ನಾಳದಲ್ಲಿ ರಕ್ತ ಸಂಚಾರದಲ್ಲಿ ತೊಂದರೆಯಾದ ಕಾರಣ ಅವನ್ನು ನಿನ್ನೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ 4.35 ರ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವರದಿ ತಿಳಿಸಿದೆ.

(ಮಾಹಿತಿ ಕೃಪೆ kannada news now)

Friday, April 16, 2021

BIG NEWS : ರಾಜ್ಯದಲ್ಲಿ ಮತ್ತೆ ಲಾಕ್ ಡೌನ್.? ಸಿಎಂ ಯಡಿಯೂರಪ್ಪ ಹೇಳಿದ್ದೇನು ಗೊತ್ತಾ.?


 ಬೆಂಗಳೂರು : ಈಗಾಗಲೇ ಸೋಂಕು ಹೆಚ್ಚಿರುವಂತ ರಾಜ್ಯದ 8 ನಗರಗಳಲ್ಲಿ ಮೇ.20ರವರೆಗೆ ಕೊರೋನಾ ಕರ್ಪ್ಯೂ ಹೇರಲಾಗಿದೆ. ಹೀಗಿದ್ದೂ ಕೊರೋನಾ ಸೋಂಕಿನ ಸಂಖ್ಯೆ ಮಾತ್ರ ದಿನೇ ದಿನೇ ಏರಿಕೆಯಾಗುತ್ತಿದೆ. ಇದರಿಂದಾಗಿ ಕೊರೋನಾ ನಿಯಂತ್ರಣಕ್ಕಾಗಿ ಭಾನುವಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸರ್ವ ಪಕ್ಷಗಳ ಸಭೆ ನಡೆಸಲಿದ್ದು, ಮಂಗಳವಾರ ಸಚಿವರು, ಅಧಿಕಾರಿಗಳು ಹಾಗೂ ತಜ್ಞರ ಸಭೆ ನಡೆಸಲಿದ್ದಾರೆ. ಈ ಬಳಿಕ ಮತ್ತೆ ರಾಜ್ಯದಲ್ಲಿ ಲಾಕ್ ಡೌನ್ ಮಾಡುವುದು ಸೇರಿದಂತೆ ಟಫ್ ರೂಲ್ಸ್ ಜಾರಿಗೆ ಕ್ರಮ ಕೈಗೊಳ್ಳಲಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿಯಾಗಲಿದೆ ಎನ್ನಲಾಗುತ್ತಿದೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಇಂದು ಮಾತನಾಡಿದಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ರಾಜ್ಯದಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿರುವಂತ ಕೊರೋನಾ ನಿಯಂತ್ರಣಕ್ಕಾಗಿ ಈಗ ಕಟ್ಟು ನಿಟ್ಟಿನ ನಿಯಮಗಳ ಜಾರಿ ತುರ್ತು ಸಂದರ್ಭವಿದೆ.

ಈಗಾಗಲೇ ಹಲವು ತಜ್ಞರೊಂದಿಗೆ ಚರ್ಚಿಸಲಾಗಿದೆ. ಕೊರೋನಾ ನಿಯಂತ್ರಣ ಕ್ರಮ ಕುರಿತಂತೆ ಸದ್ಯದಲ್ಲೇ ಮಹತ್ವದ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

ಇನ್ನೂ ಭಾನುವಾರ ವಿಪಕ್ಷಗಳ ನಾಯಕರು ಸೇರಿದಂತೆ ಸರ್ವ ಪಕ್ಷ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿಯೂ ರಾಜ್ಯದಲ್ಲಿನ ಕೊರೋನಾ ನಿಯಂತ್ರಣಕ್ಕಾಗಿ ಕೈಗೊಳ್ಳ ಬಹುದಾದಂತ ಕ್ರಮಗಳ ಕುರಿತಂತೆ ಸಲಹೆಯನ್ನು ಪಡೆಯಲಾಗುತ್ತದೆ. ಇದಾದ ಬಳಿಕ ಮಂಗಳವಾರ ಸಚಿವರು, ಅಧಿಕಾರಿಗಳು, ತಜ್ಞರ ಸಭೆಯನ್ನು ಕರೆದಿದ್ದು, ಅಲ್ಲಿಯೂ ಸರ್ವ ಪಕ್ಷ ಸಭೆಯಲ್ಲಿ ನಾಯಕರು ನೀಡಿದಂತ ಸಲಹೆ ಕುರಿತಂತೆ ಚರ್ಚಿಸಿ, ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ರಾಜ್ಯದಲ್ಲಿ ಟಫ್ ರೂಲ್ಸ್ ಅಂತೂ ಕೊರೋನಾ ನಿಯಂತ್ರಣಕ್ಕಾಗಿ ಜಾರಿಗೆ ತರಲಾಗುತ್ತಿದೆ ಎಂದರು. ಈ ಮೂಲಕ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಸುಳಿವನ್ನು ನೀಡಿದ್ದಾರೆ.

ಅಂದಹಾಗೇ, ನಿನ್ನೆ ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 10,497 ಸೇರಿದಂತೆ ರಾಜ್ಯಾಧ್ಯಂತ 14,738 ಜನರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಇದರಿಂದ ಸೋಂಕಿತರ ಸಂಖ್ಯೆ 11,09,650ಕ್ಕೆ ಏರಿಕೆಯಾಗಿತ್ತು. ಇವರಲ್ಲಿ ಇಂದು 3,591 ಜನರು ಸೇರಿದಂತೆ ಇದುವರೆದೆ 9,99,958 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಹೀಗಾಗಿ ರಾಜ್ಯದಲ್ಲಿ 96,561 ಸಕ್ರೀಯ ಸೋಂಕಿತರು ಇರುವುದಾಗಿ ಆರೋಗ್ಯ ಇಲಾಖೆಯು ಕೊರೋನಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ನೀಡಿತ್ತು.

ಇನ್ನೂ ಬಳ್ಳಾರಿಯಲ್ಲಿ ಆರು ಸೋಂಕಿತರು, ಬೆಳಗಾವಿಯಲ್ಲಿ ಒಬ್ಬರು, ಬೆಂಗಳೂರು ನಗರದಲ್ಲಿ 30 ಸೋಂಕಿತರು, ಬೀದರ್ ನಲ್ಲಿ ಇಬ್ಬರು, ಧಾರವಾಡದಲ್ಲಿ ಮೂವರು, ಹಾಸನದಲ್ಲಿ ನಾಲ್ವರು, ಕಲಬುರ್ಗಿ, ಕೋಲಾರದಲ್ಲಿ ಓರ್ವ, ಮೈಸೂರಿನಲ್ಲಿ ಐವರು, ರಾಮನಗರ, ಶಿವಮೊಗ್ಗ ತಲಾ ಒಬ್ಬರು, ತುಮಕೂರು, ಉತ್ತರ ಕನ್ನಡದಲ್ಲಿ ತಲಾ ಇಬ್ಬರು ಮತ್ತು ವಿಜಯಪುರದಲ್ಲಿ ಒಬ್ಬರು ಸೇರಿದಂತೆ 66 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಹೀಗಾಗಿ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 13,112ಕ್ಕೆ ಏರಿಕೆಯಾಗಿತ್ತು.

(ಮಾಹಿತಿ ಕೃಪೆ  Kannada News Now)

ಹಿರಿಯ ನಟ ನಿರ್ಮಾಪಕ ದ್ವಾರಕೀಶ್‍ ಪತ್ನಿ ಅಂಬುಜಾ ವಿಧಿವಶ

 

ಬೆಂಗಳೂರು, ಏ.16- ಕನ್ನಡ ಚಿತ್ರದ ಖ್ಯಾತ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರ ಪತ್ನಿ ಅಂಬುಜಾ ಅವರು ಇಂದು ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಂಬುಜಾ ಅವರು ಎಚ್‍ಎಸ್‍ಆರ್ ಲೇಔಟ್‍ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರಳೆದಿದ್ದಾರೆ.

ಅಂಬುಜಾ ಅವರ ಅಂತ್ಯಕ್ರಿಯೆಯು ಇಂದು ಸಂಜೆ ವೇಳೆಗೆ ನಡೆಸಲು ನಿರ್ಧರಿಸಲಾಗಿದೆ ಎಂದು ನಟ ಹಾಗೂ ಪುತ್ರ ಯೋಗಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಅಂಬುಜಾ ಅವರು ದ್ವಾರಕೀಶ್ ಅವರ ಮೊದಲ ಪತ್ನಿಯಾಗಿದ್ದು, ನಂತರ ಶೈಲಜಾ ಎಂಬುವವರನ್ನು ದ್ವಾರಕೀಶ್ ಅವರು ವಿವಾಹವಾಗಿದ್ದಾರೆ. ಅಂಬುಜಾ ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಜೈರಾಜ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

(ಮಾಹಿತಿ ಕೃಪೆ ಈ ಸಂಜೆ)


Thursday, April 15, 2021

ತಲೆ ಸುತ್ತು, ವಾಕರಿಕೆ ಸಮಸ್ಯೆಗೆ ಮನೆಮದ್ದು

 

ಆಗಾಗ ತಲೆ ಸುತ್ತು ಬರುವುದು, ವಾಕರಿಕೆ ಬರುವುದು ಮತ್ತು ಇದ್ದಕ್ಕಿದ್ದಂತೆ ಆರೋಗ್ಯದ ಅಸ್ವಸ್ಥತೆ ಎದುರಾಗುವುದು ವರ್ಟಿಗೋ ಸಮಸ್ಯೆಯ ರೋಗ – ಲಕ್ಷಣಗಳು. ನಮ್ಮ ಮನೆಯಲ್ಲಿ ಸಿಗುವ ಆಹಾರ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಅನುಸರಿಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ನಮ್ಮ ಆರೋಗ್ಯ ಸಾಕಷ್ಟು ಸುಧಾರಿಸುತ್ತದೆ. ಒಂದು ವೇಳೆ ಮನೆ ಮದ್ದುಗಳನ್ನು ಪ್ರಯೋಗಿಸಿದ ನಂತರವೂ ತಲೆ ಸುತ್ತಿನ ಸಮಸ್ಯೆ ಹಾಗೆ ಇದ್ದರೆ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ
ಶುಂಠಿ ಚಹಾ: ಶುಂಠಿ ನಮಗೆಲ್ಲಾ ಗೊತ್ತಿರುವ ಹಾಗೆ ಆಂಟಿ – ಇಂಪ್ಲಾಮ್ಮೆಟರಿ ಮತ್ತು ಆಂಟಿ – ಆಕ್ಸಿಡೆಂಟ್ ಗುಣ ಲಕ್ಷಣಗಳನ್ನು ಹೊಂದಿರುವ ಕಾರಣದಿಂದ ಇದರಿಂದ ಹಲವಾರು ಕಾಯಿಲೆಗಳು ಗುಣ ಹೊಂದಿದ ಸಾಧ್ಯತೆಗಳು ಸಾಕಷ್ಟಿವೆ. ವರ್ಟಿಗೋ ಸಮಸ್ಯೆಯಿಂದ ಬಳಲುತ್ತಿರುವವರು ಶುಂಠಿ ಬೇರನ್ನು ನೀರಿನಲ್ಲಿ ಸುಮಾರು ಐದು ನಿಮಿಷ ಚೆನ್ನಾಗಿ ಕುದಿಸಿ ಆ ನೀರನ್ನು ಆರಿಸಿ ಶೋಧಿಸಿ ನಂತರ ಅದಕ್ಕೆ ಒಂದು ಟೇಬಲ್ ಚಮಚ ಜೇನು ತುಪ್ಪವನ್ನು ಹಾಕಿ ಮಿಶ್ರಣ ಮಾಡಿ ಸೇವನೆ ಮಾಡುವುದರಿಂದ ಪರಿಹಾರ ಕಂಡುಕೊಳ್ಳಬಹುದು.
​ಬಾದಾಮಿ ಬೀಜಗಳು: ಬಾದಾಮಿ ಬೀಜಗಳಲ್ಲಿ ಅತ್ಯಧಿಕ ಪ್ರಮಾಣದ ವಿಟಮಿನ್ ‘ ಎ ‘, ವಿಟಮಿನ್ ‘ ಬಿ ‘ ಮತ್ತು ವಿಟಮಿನ್ ‘ ಇ ‘ ಅಂಶಗಳು ಸಿಗುತ್ತವೆ. ಒಂದು ಹಿಡಿ ಬಾದಾಮಿ ಬೀಜಗಳನ್ನು ಪ್ರತಿ ದಿನ ಮಧ್ಯಾಹ್ನದ ನಂತರ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ದೀರ್ಘ ಕಾಲದ ವರ್ಟಿಗೊ ರೋಗ ಲಕ್ಷಣಗಳು ಮಾಯವಾಗುತ್ತವೆ ಎಂದು ಹೇಳುತ್ತಾರೆ. ದಿನಾ ಬೆಳಿಗ್ಗೆ ಎದ್ದ ಕೂಡಲೇ ಎರಡೇ ಎರಡು ‘ನೆನೆಸಿಟ್ಟ ಬಾದಾಮಿ’ ತಿನ್ನಿ
​ನೀರು: ನಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆ ಆಗಿ ನಿರ್ಜಲೀಕರಣದ ಸಮಸ್ಯೆ ಎದುರಾದರೆ ವರ್ಟಿಗೋ ರೋಗ – ಲಕ್ಷಣಗಳು ಉಲ್ಬಣಗೊಳ್ಳುತ್ತವೆ ಎಂದು ಹೇಳಲಾಗಿದೆ. ಒಂದು ವೇಳೆ ಸೌಮ್ಯ ರೀತಿಯಲ್ಲಿ ವರ್ಟಿಗೊ ರೋಗ – ಲಕ್ಷಣಗಳು ಇದ್ದರೂ ಕೂಡ ಸಣ್ಣ ಪ್ರಮಾಣದಲ್ಲಿ ಉಂಟಾಗುವ ನಿರ್ಜಲೀಕರಣದ ಸಮಸ್ಯೆಯಿಂದ ಈ ಆರೋಗ್ಯ ಸಮಸ್ಯೆ ಸಾಕಷ್ಟು ದೊಡ್ಡದಾಗುವ ಸಾಧ್ಯತೆ ಇದೆ. ಹಾಗಾಗಿ ತಲೆ ಸುತ್ತು ಮತ್ತು ದೇಹದ ಸಮತೋಲನ ತೊಂದರೆಗಳನ್ನು ನಿವಾರಿಸಿಕೊಳ್ಳಲು ಆಗಾಗ ಹೆಚ್ಚಾಗಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಬಾಯಿ ಹುಣ್ಣಿಗೆ ಮನೆ ಮದ್ದು

 

ಬಾಯಿ ಹುಣ್ಣು ಚಿಕ್ಕದಾದರೂ ಕೊಡುವ ಕಾಟ ಮಾತ್ರ ಅಷ್ಟಿಷ್ಟಲ್ಲ. ಏನೂ ಸೇವಿಸುವ ಹಾಗಿಲ್ಲ, ಸಹಿಸುವ ಹಾಗಿಲ್ಲ. ಇದರಿಂದ ತಪ್ಪಿಸಿಕೊಳ್ಳುವುದಕ್ಕೆ ಈ ಮನೆ ಮದ್ದು ಮಾಡಿ ನೋಡಿ.
ಟೂಥ್ ಪೇಸ್ಟ್: ಟೂಥ್ ಪೇಸ್ಟ್ ನಲ್ಲಿರುವ ಆಂಟಿ ಬಯೋಟಿಕ್ ಅಂಶ ಬಾಯಿ ಹುಣ್ಣಿನ ವೈರಾಣುವನ್ನು ಹೋಗಲಾಡಿಸುವ ಶಕ್ತಿ ಹೊಂದಿದೆ. ಅಷ್ಟೇ ಅಲ್ಲದೆ, ಹುಣ್ಣು ಉರಿಯಾಗುತ್ತಿದ್ದರೆ ಟೂಥ್ ಪೇಸ್ಟ್ ಹಚ್ಚಿದಾಗ ಕೂಲ್ ಆಗುತ್ತದೆ. ಟೂಥ್ ಪೇಸ್ಟ್ ಹಚ್ಚಿ ಸ್ವಲ್ಪ ಸಮಯ ಬಿಟ್ಟು ಬಾಯಿ ಮುಕ್ಕಳಿಸಿಕೊಳ್ಳಿ.
ಆರೆಂಜ್ ಜ್ಯೂಸ್: ಬಾಯಿ ಹುಣ್ಣಿಗೆ ಮುಖ್ಯ ಕಾರಣ ವಿಟಮಿನ್ ಸಿ ಅಂಶದ ಕೊರತೆ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದೆ. ಹೀಗಾಗಿ ಇದನ್ನು ಜ್ಯೂಸ್ ಮಾಡಿ ನಿಯಮಿತಾಗಿ ಸೇವಿಸುತ್ತಿರುವುದು ಒಳ್ಳೆಯದು.
ಬೆಳ್ಳುಳ್ಳಿ: ಬಾಯಿ ಹುಣ್ಣಿರುವ ಜಾಗಕ್ಕೆ ಬೆಳ್ಳುಳ್ಳಿ ಎಸಳುಗಳಿಂದ ಮೃದುವಾಗಿ ಮಸಾಜ್ ಮಾಡಿ. ಅರ್ಧ ಗಂಟೆ ಬಿಟ್ಟು ಬಾಯಿ ತೊಳೆದುಕೊಳ್ಳಿ.
ಇದರ ಹೊರತಾಗಿ ಕೊಬ್ಬರಿ ಎಣ್ಣೆ ಹಚ್ಚುವುದು, ಜೇನು ತುಪ್ಪ ಹೆಚ್ಚುವುದು, ಸೀಬೇಕಾಯಿ ಎಲೆ ಜಗಿಯುವುದು ಇತ್ಯಾದಿ ಮಾಡಬಹುದು.

(ಮಾಹಿತಿ ಕೃಪೆ ಸಂಜೆ ವಾಣಿ)

ನಾಳೆಯಿಂದ ಹಂಪಿ ಸ್ಮಾರಕಗಳ ವೀಕ್ಷಣೆ ಬಂದ್

 

ಬಳ್ಳಾರಿ ಏ 15: ಕೋವಿಡ್ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮುಂದಿನ ತಿಂಗಳು ಮೇ 15 ವರೆಗೆ ಹಂಪಿಯ ಸ್ಮಾರಕಗಳ ವೀಕ್ಷಣೆಯನ್ನು ಬಂದ್ ಮಾಡಲು ಭಾರತೀಯ ಪುರಾತತ್ವ ಇಲಾಖೆ ಆದೇಶಿಸಿದೆ.
ಈ ಕುರಿತು ಇಲಾಖೆಯ
ಸ್ಮಾರಕಗಳ ನಿರ್ದೇಶಕ ಎನ್.ಕೆ.ಪಾಠಕ್ ಇಂದು ಆದೇಶ ಹೊರಡಿಸಿದ್ದಾರೆ.

ಹಂಪಿ ಅಷ್ಟೇ ಅಲ್ಲದೆ ದೇಶದಲ್ಲಿರುವ ಎಲ್ಲಾ ಭಾರತೀಯ ಪುರಾತತ್ವ ಇಲಾಖೆಯಡಿ ಬರುವ ಸ್ಮಾರಕಗಳು ಮತ್ತು ಮ್ಯೂಸಿಯಂ ಗಳ ಪ್ರವೇಶ ಬಂದ್ ಮಾಡಲು ಆದೇಶಿಸಿದ್ದಾರೆ.
ಇದರಿಂದ ಹಂಪಿಯ ವಿರೂಪಾಕ್ಷ ದೇವರಿಗೆ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಗಳು ನಡೆಯಲಿವೆ ಆದರೆ ಪ್ರವಾಸಿಗರ ಮತ್ತು ಭಕ್ತರ ದರ್ಶನ ಬಂದ್ ಅಸಗಲಿದೆ.

ಅದೇ ರೀತಿ ವಿಜಯ ವಿಠಲ್ ದೇವಸ್ಥಾನ,ಕಮಲ ಮಹಲ್, ಮತ್ತು ಕಮಲಾಪುರದಲ್ಲಿನ ಮ್ಯೂಸಿಯಂ ಬರುವ ಮೇ 15 ವರೆಗೆ ವೀಕ್ಷಣೆಗೆ ಬಂದ್ ಆಗಲಿವೆ. 

(ಮಾಹಿತಿ ಕೃಪೆ ಸಂಜೆ ವಾಣಿ)

ಊರುಗಳತ್ತ ಮುಖ ಮಾಡಿದ ವಲಸೆ ಕಾರ್ಮಿಕರು

 

ಬೆಂಗಳೂರು,ಏ.೧೫- ರಾಜ್ಯದಲ್ಲಿ ಉಪಚುನಾವಣೆ ಸಮರ ಮುಗಿಯುತ್ತಿದ್ದಂತೆ ಕೊರೊನಾ ಸೋಂಕು ತಡೆಗೆ ರಾಜ್ಯಸರ್ಕಾರ ಕಠಿಣ ಕ್ರಮಕೈಗೊಳ್ಳಲು ಸಿದ್ಧತೆ ಮಾಡಿಕೊಂಡಿರುವುದರಿಂದ ಭಯಭೀತರಾಗಿರುವ ವಲಸೆ ಕಾರ್ಮಿಕರು ತಮ್ಮ ಊರುಗಳತ್ತ ಮುಖ ಮಾಡಲು ಅಣಿಯಾಗಿದ್ದಾರೆ.
ರಾಜ್ಯದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ಲಾಕ್‌ಡೌನ್ ಅಥವಾ ವಾರಾಂತ್ಯದ ಲಾಕ್‌ಡೌನ್ ಜಾರಿಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೆ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ವಲಸೆ ಕಾರ್ಮಿಕರಲ್ಲಿ ಆತಂಕ ಮನೆಮಾಡಿದೆ.
ಕಳೆದ ವರ್ಷ ಇದೇ ಸಂದರ್ಭದಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಕೂಲಿಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಸಾಕಷ್ಟು ಪ್ರಯಾಸ ಪಡಬೇಕಾಗಿತ್ತು.
ಉದ್ಯೋಗವನ್ನು ಕಳೆದುಕೊಂಡು ಕೆಲಸವೂ ಇಲ್ಲದೆ ಅತ್ತ ತಮ್ಮ ಊರುಗಳಿಗೂ ತೆರಳಲಾಗದೆ ವಲಸೆ ಕಾರ್ಮಿಕರು ತೀವ್ರ ಸಂಕಷ್ಟ ಅನುಭವಿಸುವಂತಾಗಿತ್ತು. ಲಾಕ್‌ಡೌನ್ ಜಾರಿಯಿಂದಾಗಿ ಒಪ್ಪತ್ತಿನ ಊಟಕ್ಕೂ ವಲಸೆ ಕಾರ್ಮಿಕರು ಪರಿತಪಿಸುವಂತಾಗಿತ್ತು.
ತಮ್ಮ ಊರುಗಳಿಗೆ ತೆರಳಲು ರೈಲು, ಬಸ್‌ಗಳ ವ್ಯವಸ್ಥೆ ಇಲ್ಲದ ಕಾರಣ ಕೆಲವರು ಕಿ.ಲೋ ಮೀಟರ್‌ಗಳಲ್ಲಿ ಉರಿ ಬಿಸಿಲನ್ನು ಲೆಕ್ಕಿಸದೇ ನಡೆದುಕೊಂಡೇ ಹೋಗಿ ತಮ್ಮ ಊರುಗಳಿಗೆ ತಲುಪಿದ್ದ ಕಹಿ ನೆನಪುಗಳು ವಲಸೆ ಕಾರ್ಮಿಕರನ್ನು ಕಾಡುತ್ತಿದೆ.
ಏ. ೧೮ ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸರ್ವ ಪಕ್ಷಗಳ ಸಭೆ ಕರೆಯಲಾಗಿದ್ದು, ಸೋಂಕಿನ ತಡೆಗೆ ಇನ್ನಷ್ಟು ಬಿಗಿಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆ ಇದೆ.

(ಮಾಹಿತಿ ಕೃಪೆ ಸಂಜೆ ವಾಣಿ)

ದೆಹಲಿಯಲ್ಲಿಯೂ ವಾರಾಂತ್ಯದ ಕರ್ಫ್ಯೂ ಘೋಷಣೆ

 ನವದೆಹಲಿ, ಏಪ್ರಿಲ್ 15: ರಾಜ್ಯದಲ್ಲಿ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ವಾರಾಂತ್ಯದ ಕರ್ಫ್ಯೂ ಹೇರಲು ನಿರ್ಧರಿಸಿರುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗುರುವಾರ ಘೋಷಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸ್ಥಿತಿಗತಿ ಪರಿಶೀಲನೆಗೆ ಗುರುವಾರ ಮಧ್ಯಾಹ್ನ ಗವರ್ನರ್ ಅನಿಲ್ ಬೈಜಾಲ್ ಹಾಗೂ ಇತರೆ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ವಾರಾಂತ್ಯ ಕರ್ಫ್ಯೂ ಘೋಷಣೆ ಮಾಡಿದ್ದಾರೆ.

ಕರ್ಫ್ಯೂ ಸಂದರ್ಭ ಮಾಲ್‌ಗಳು, ಜಿಮ್‌ಗಳು, ಸ್ಪಾ ಹಾಗೂ ಆಡಿಟೋರಿಯಂಗಳು ಮುಚ್ಚಿರಲಿವೆ. ಮದುವೆಗೆ ಹಾಗೂ ಯಾವುದೇ ಕಾರ್ಯಕ್ರಮಗಳಿಗೆ ಕರ್ಫ್ಯೂ ಪಾಸ್ ಕಡ್ಡಾಯವಾಗಿದೆ. ಚಿತ್ರಮಂದಿರಗಳಲ್ಲಿ ಶೇ 30ರಷ್ಟು ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ರೆಸ್ಟೊರೆಂಟ್‌ಗಳಲ್ಲಿ ಆಹಾರ ಸೇವಿಸುವಂತಿಲ್ಲ. ಪಾರ್ಸೆಲ್‌ಗೆ ಮಾತ್ರ ಅವಕಾಶವಿದೆ. ವಾರಾಂತ್ಯದ ಮಾರುಕಟ್ಟೆಗಳಲ್ಲಿ ಕೆಲವು ನಿಬಂಧನೆಗಳೊಂದಿಗೆ ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.

ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಅಗತ್ಯ ಸೇವೆಗಳಿಗೆ ಜನರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

ನಿಮ್ಮ ಆರೋಗ್ಯದ ಸಲುವಾಗಿ ಈ ನಿಬಂಧನೆಗಳನ್ನು ಹೇರಲಾಗಿದೆ. ಕೊರೊನಾ ಸೋಂಕು ಹರಡುವಿಕೆ ತಡೆಯಲು ಇವು ಅವಶ್ಯಕವಾಗಿವೆ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಬುಧವಾರ ದೆಹಲಿಯಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. ಒಂದೇ ದಿನ 17,282 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ.

ಇದೇ ಸಂದರ್ಭ ಆಸ್ಪತ್ರೆಗಳ ಕುರಿತು ಸ್ಪಷ್ಟನೆ ನೀಡಿದ ಅವರು, "ದೆಹಲಿಯ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಉಂಟಾಗಿಲ್ಲ. ಸದ್ಯಕ್ಕೆ ಐದು ಸಾವಿರಕ್ಕೂ ಹೆಚ್ಚು ಹಾಸಿಗೆಗಳು ಲಭ್ಯವಿವೆ" ಎಂದು ಹೇಳಿದ್ದಾರೆ.

( ಮಾಹಿತಿ ಕೃಪೆ Oneindia) 

ಬ್ಯಾಂಕ್ ಗ್ರಾಹಕರೇ ಗಮನಿಸಿ, ಭಾನುವಾರ RTGS ಸೌಲಭ್ಯ ಇರಲ್ಲ

 

ನವದೆಹಲಿ, ಏ.15- ತಾಂತ್ರಿಕತೆಯನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ಶನಿವಾರ ಮಧ್ಯರಾತ್ರಿಯಿಂದ ಭಾನುವಾರ 2ಗಂಟೆವರೆಗೂ ಹಣವನ್ನು ಆನ್‍ಲೈನ್‍ನಲ್ಲಿ ವರ್ಗಾಹಿಸುವ ಆರ್‌ಟಿಜಿಎಸ್ ಸೌಲಭ್ಯ ಲಭ್ಯವಿರುವುದಿಲ್ಲ ಎಂದು ಆರ್‌ಬಿಐ ತಿಳಿಸಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಆರ್‌ಬಿಐನ ಮುಖ್ಯ ವ್ಯವಸ್ಥಾಪಕರಾದ ಯೋಗೇಶ್ ದಯಾಲ್ ಅವರು, ಏ.17ರ ಮಧ್ಯರಾತ್ರಿಯಿಂದ ಏ.18ರ 14 ಗಂಟೆಯವರೆಗೂ ಆರ್‍ಟಿಜಿಎಸ್ ಸೌಲಭ್ಯವನ್ನು ಸ್ಥಗಿತಗೊಳಿಸಲಾಗುತ್ತಿದೆ.

ತಾಂತ್ರಿಕತೆಯನ್ನು ಮೇಲ್ದರ್ಜೆಗೇರಿಸಿದ ಬಳಿಕ ಎಂದಿನಂತೆ ಎನ್‍ಇಎಫ್‍ಟಿ ವ್ಯವಸ್ಥೆ ಮುಂದುವರೆಯಲಿದೆ ಎಂದು ಆರ್‍ಬಿಐ ತಿಳಿಸಿದೆ. ಎಲ್ಲಾ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಈ ಕುರಿತು ಮಾಹಿತಿ ನೀಡಿ ನಿಗದಿತ ದಿನದಂದು ಆನ್‍ಲೈನ್ ಹಣ ವರ್ಗಾವಣೆಗೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಲು ಸಲಹೆ ನೀಡುವಂತೆ ಆರ್‍ಬಿಐ ಮನವಿ ಮಾಡಿದೆ.                

( ಮಾಹಿತಿ ಕೃಪೆ ಈ ಸಂಜೆ) 

40, 50, 60ರ ಸೀಕ್ರೆಟ್ ಬಿಚ್ಚಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್

 

ಕ್ರೇಜಿಸ್ಟಾರ್ ರವಿಚಂದ್ರನ್ ಇತ್ತೀಚಿಗಷ್ಟೆ ಸೋಶಿಯಲ್ ಮೀಡಿಯಾಗೆ ಅಧಿಕೃತ ಪ್ರವೇಶ ಮಾಡಿದ್ದಾರೆ. ಇಷ್ಟು ದಿನ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಅಧಿಕೃತ ಖಾತೆ ಹೊಂದಿಲ್ಲದೇ ಇದ್ದ ರವಿಮಾಮ ಈಗ ಟ್ವಿಟ್ಟರ್, ಯೂಟ್ಯೂಬ್, ಇನ್ಸ್ಟಾಗ್ರಾಂ ಮೂಲಕ ಜನರಿಗೆ ಹತ್ತಿರವಾಗಲು ನಿರ್ಧರಿಸಿದ್ದಾರೆ.

ಯುಗಾದಿ ಹಬ್ಬದ ಪ್ರಯುಕ್ತ 1n1ly Ravichandran ಯೂಟ್ಯೂಬ್ ಚಾನಲ್‌ನಲ್ಲಿ ವಿಡಿಯೋವೊಂದು ಹಂಚಿಕೊಂಡಿರುವ ರವಿಚಂದ್ರನ್ 40, 50, 60ರ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. 40, 50, 60 ನನಗೆ ಅಭ್ಯಾಸ ಇಲ್ಲ ಎಂದು ಹೇಳುವ ರವಿಚಂದ್ರನ್ ಅದರ ಹಿಂದಿನ ಸೀಕ್ರೆಟ್ ಏನು ಎಂದು ವಿವರಿಸಿದ್ದಾರೆ.  * 40 - ರವಿಚಂದ್ರನ್ ಅವರು ಈ ಸಿನಿಮಾ ಲೋಕಕ್ಕೆ ಬಂದು 40 ವರ್ಷ ಆಗಿದೆ.

* 50 - ರವಿಚಂದ್ರನ್ ರಾಜಾಜಿನಗರದ ಮನೆಗೆ ಬಂದು 50 ವರ್ಷ ಆಯಿತು. ಈಶ್ವರಿ ಪ್ರೊಡಕ್ಷನ್‌ಗೆ 50 ವರ್ಷ ಆಯಿತು.

* 60 - ಮೇ 30ಕ್ಕೆ ರವಿಚಂದ್ರನ್ ಅವರ ವಯಸ್ಸು 60 ವರ್ಷ ಆಗುತ್ತದೆ.

''ನನ್ನ ಜರ್ನಿ ಶುರುವಾಗಿದ್ದು ನಮ್ಮ ಅಪ್ಪ ನನ್ನ ಮೇಲೆ ಇಟ್ಟಿದ್ದ ಪ್ರೀತಿ, ನಂಬಿಕೆಯಿಂದ. ಅದು ಇಷ್ಟು ದೂರು ಬಂದಿದ್ದು ನೀವು ನನ್ನ ಮೇಲೆ ಇಟ್ಟಿದ್ದ ಪ್ರೀತಿ, ನಂಬಿಕೆಯಿಂದ. ಈ ಪ್ರೀತಿ ಹಾಗೆ ಮುಂದುವರಿಯಲಿ. ಎಲ್ಲರೂ ಸೇರಿ ಆಚರಿಸೋಣ'' ಎಂದು ರವಿಚಂದ್ರನ್ ಮನವಿ ಮಾಡಿದ್ದಾರೆ.

ಬಹಳ ವಿಶೇಷ ಹಾಗೂ ವಿಭಿನ್ನವಾಗಿ ಸಾಮಾಜಿಕ ಜಾಲತಾಣ ಪ್ರವೇಶಿಸಿದ ಕ್ರೇಜಿಸ್ಟಾರ್, ಇನ್ಮುಂದೆ ತಮ್ಮ ಸಿನಿಮಾ ಹಾಗು ತಮ್ಮ ಬದುಕಿನ ಹಲವು ವಿಷಯಗಳನ್ನು ಇಲ್ಲಿ ಹಂಚಿಕೊಳ್ಳಲಿದ್ದಾರೆ. 

( ಮಾಹಿತಿ ಕೃಪೆ Filmi Beat) 

ಸಾರ್ವಜನಿಕರೇ ಗಮನಿಸಿ: ಒಂದು ಕರೆ ಮಾಡಿದ್ರೆ ʼಆಧಾರ್ʼ ಗೆ ಸಂಬಂಧಿಸಿದ ಸಮಸ್ಯೆಗೆ ಸಿಗುತ್ತೆ ಪರಿಹಾರ

 

ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಎದುರಿಸುತ್ತಿದ್ದರೂ ಚಿಂತಿಸುವ ಅಗತ್ಯವಿಲ್ಲ. ಒಂದು ಕರೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಯುಐಡಿಎಐ 1947 ನಂಬರ್ ಜಾರಿ ಮಾಡಿದೆ. ಆಧಾರ್ ಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೂ ಈ ನಂಬರ್ ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

( ಮಾಹಿತಿ ಕೃಪೆ ಕನ್ನಡದುನಿಯಾ) 

ಯುಐಡಿಎಐ ಟ್ವೀಟರ್ ಮೂಲಕ ಈ ವಿಷ್ಯವನ್ನು ಬಹಿರಂಗಪಡಿಸಿದೆ. 12 ಭಾಷೆಯಲ್ಲಿ ನಿಮಗೆ ಸಹಾಯ ಮಾಡಲಿದೆ. ಆಧಾರ್‌ಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಒಂದೇ ಫೋನ್ ಕರೆಯಲ್ಲಿ ಪರಿಹರಿಸಬಹುದು ಎಂದು ಯುಐಡಿಎಐ ಟ್ವೀಟ್ ಮಾಡಿದೆ. 1947 ರಲ್ಲಿ ಆಧಾರ್ ಸಹಾಯವಾಣಿ ಹಿಂದಿ, ಇಂಗ್ಲಿಷ್, ತೆಲುಗು, ಕನ್ನಡ, ತಮಿಳು, ಮಲಯಾಳಂ, ಪಂಜಾಬಿ, ಗುಜರಾತಿ, ಮರಾಠಿ, ಒರಿಯಾ, ಬಂಗಾಳಿ, ಅಸ್ಸಾಮಿ ಮತ್ತು ಉರ್ದು ಭಾಷೆಗಳಲ್ಲಿ ಲಭ್ಯವಿದೆ ಎಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ.

ಈ 1947 ಸಂಖ್ಯೆ ಡ್ಯೂಟಿ ಫ್ರೀ ಆಗಿದೆ. ಸೌಲಭ್ಯಕ್ಕಾಗಿ ಕಾಲ್ ಸೆಂಟರ್ ಪ್ರತಿನಿಧಿಗಳು ಬೆಳಿಗ್ಗೆ 7 ರಿಂದ ರಾತ್ರಿ 11 ರವರೆಗೆ ಲಭ್ಯವಿರುತ್ತಾರೆ. ಭಾನುವಾರ ಪ್ರತಿನಿಧಿಗಳು ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಲಭ್ಯವಿರುತ್ತಾರೆ. ಈ ಸಹಾಯವಾಣಿ ಸಂಖ್ಯೆ ಜನರಿಗೆ ಆಧಾರ್ ದಾಖಲಾತಿ ಕೇಂದ್ರಗಳು, ದಾಖಲಾತಿಯ ನಂತರ ಆಧಾರ್ ಸಂಖ್ಯೆಯ ಸ್ಥಿತಿ ಮತ್ತು ಇತರ ಆಧಾರ್ ಸಂಖ್ಯೆಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

ಸಾರಿಗೆ ನೌಕರರ ಬೆಂಬಲಕ್ಕೆ ನಿಂತ ಯಶ್: ಸರ್ಕಾರಕ್ಕೆ ಮನವಿ ಮಾಡಿದ್ದೇನು?

 

ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ ಹಲವು ದಿನಗಳಿಂದ ಪ್ರತಿಭಟನೆ ಮಾಡುತ್ತಿರುವ ಬಿಎಂಟಿಸಿ ಮತ್ತು ಕೆ ಎಸ್ ಆರ್‌ ಟಿ ಸಿ ಬಸ್ ಚಾಲಕರು ಮತ್ತು ನಿರ್ವಾಹಕರ ಬೆಂಬಲಕ್ಕೆ ರಾಕಿಂಗ್ ಸ್ಟಾರ್ ಯಶ್ ನಿಂತಿದ್ದಾರೆ.

ಪ್ರತಿಭಟನೆಗೆ ನಟ ಯಶ್ ಬೆಂಬಲ ಕೊಡಬೇಕಾಗಿ ಸಾರಿಗೆ ನೌಕರರು ಒಕ್ಕೂಟ ಬರೆದಿದೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಪತ್ರದಲ್ಲಿ ಯಾವುದೇ ಸಂಘಟನೆಯ ಅಧಿಕೃತ ಮುದ್ರೆ, ಸಹಿ, ದಿನಾಂಕ ಇರಲಿಲ್ಲ. ಆದರೆ, ಯಶ್ ಅವರ ತಂದೆ ಸಹ ಬಿಎಂಟಿಸಿ ನಿವೃತ್ತ ನೌಕರರಾಗಿರುವ ಕಾರಣ ಈ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿತ್ತು. ಇದೀಗ ಬೆನ್ನಲ್ಲೇ ಈಗ ಪ್ರತಿಕ್ರಿಯೆ ನೀಡಿರುವ ರಾಕಿಂಗ್ ಸ್ಟಾರ್ ಯಶ್ ನೌಕರರಿಗೆ ಬೆಂಬಲವಾಗಿ ನಿಂತಿರುವುದಲ್ಲದೆ, ಸಾರಿಗೆ ಸಚಿವರ ಬಳಿ ಮಾತನಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿರುವುದಾಗಿ ಪತ್ರದ ಮೂಲಕ ತಿಳಿಸಿದ್ದಾರೆ. ಯಶ್ ಬರೆದಿರುವ ಪತ್ರದಲ್ಲಿ,

'ಇಂದು ನಿಮ್ಮ ಯಶ್ ಏನೇ ಆಗಿರಬಹುದು. ಅದರೆ ಅದಕ್ಕೂ ಮೊದಲು ನಾನು ನಿಮ್ಮ ಸಂಸ್ಥೆಯ ಪ್ರಾಮಾಣಿಕ ಚಾಲಕನ ಪುತ್ರ. ಮನೆಯಲ್ಲಿ ನಾನು ತಡ ಮಾಡಿದ್ರೆ ದಿನಾಲೂ ನನ್ನ ಬಸ್ಸಿನಲ್ಲಿ ಬರೋ ಪ್ರಯಾಣಿಕರಿಗೆ ಟ್ರೈನ್ ಮಿಸ್ ಆಗುತ್ತೇನೋ, ಆಫೀಸ್ ಗೆ ಲೇಟ್ ಆಗುತ್ತೇನೋ..ಅಂತ ನಮ್ಮಪ್ಪ ಎಷ್ಟೋ ದಿನ ಬೆಳಗ್ಗೆ ಮನೆಯಲ್ಲಿ ತಿಂಡಿ ಕೂಡ ತಿನ್ನದೆ ಗಡಿಬಿಡಿಯಲ್ಲಿ ನಡೆಯುತ್ತಿದ್ದ ಆ ದಿನಗಳು ಈಗಲೂ ನೆನಪಾಗುತ್ತೆ.'

'ಬಹುಶಃ ಇದು ನನ್ನ ಅಪ್ಪನ ಕತೆ ಮಾತ್ರವಲ್ಲ. ಕರ್ತವ್ಯ ನಿಷ್ಠೆ ಮೆರೆವ ಸಾವಿರಾರು ಸೈರಗೆ ನೌಕರುಗಳ ದಿನಚರಿ ಹೀಗೆ ಇರುತ್ತೆ. ಸಾರಿಗೆ ಸಂಸ್ಥೆಯ ನೌಕರರು ಮತ್ತು ಪ್ರಯಾಣಿಕರ ನಡುವಿನ ಸಂಬಂಧ ಮತ್ತು ಸಹಕಾರ ಲೆಕ್ಕವಿಲ್ಲದಷ್ಟು ಗೆಳೆತನಗಳಿಗೆ ಸಾಕ್ಷಿಯಾಗಿದೆ. ಆದರೆ ನಮ್ಮ ಸಾರಿಗೆ ಸಂಸ್ಥೆಯ ನೌಕರರ ಸಂಬಳದ ತಾರತಮ್ಯ ವಿರಬಹುದು. ರಜೆಗಳಿಗಾಗಿ ನಡೆಯುವ ತಕರಾರುಗಳಿರಬಹುದು. ಓವರ್ ಡ್ಯೂಟಿಗಾಗಿ ನಡೆಯುವ ಜಟಾಪಟಿಗಳಿರಬಹುದು. ಎಲ್ಲವೂ ನಾನು ಹತ್ತಿರದಿಂದ ಬಲ್ಲವನು.'

'ನ್ಯಾಯ ಕೊಡಿ ಎಂದು ಪ್ರಾಮಾಣಿಕವಾಗಿ ಹೋರಾಟಕ್ಕಿಳಿದಿರುವ ಸಾರಿಗೆ ನೌಕರರ ಕೂಗು ಮತ್ತು ಸಾರಿಗೆ ಬಸ್ಸುಗಳ ಮೇಲೆಯೇ ಅವಲಂಬಿತವಾಗಿರುವ ಮಧ್ಯಮ ವರ್ಗದ ಜನರ ಅಳಲು. ಈ ಎರಡು ಕೂಡ ನನ್ನನ್ನು ಬಹುವಾಗಿ ಕಾಡುತ್ತಿದೆ.'

'ದೊಡ್ಡ ಸಮಸ್ಯೆಯೊಂದರ ಪರಿಹಾರಕ್ಕೆ ಚಿಕ್ಕ ಪ್ರಯತ್ನವೆಂಬಂತೆ ಸನ್ಮಾನ್ಯ ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ ಅವರೊಂದಿಗೆ ಈ ಬಗ್ಗೆ ವಿವರವಾಗಿ ಮಾತನಾಡಿ ಸಾರಿಗೆ ನೌಕರರ ಸಮಸ್ಯೆಗಳನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇನೆ.'

'ಸಮಾಧಾನದ ವಿಷಯ ಅಂದ್ರೆ ಸನ್ಮಾನ್ಯ ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ ಅವರಿಗೆ ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಇದ್ದ ಅರಿವು ಮತ್ತು ಕಳಕಳಿ, ಜೊತೆಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಾರಿಗೆ ನೌಕರರ ಬಹುಮುಖ್ಯ ಬೇಡಿಕೆಗಳ ಬಗ್ಗೆ ದ್ದ ವೇತನ ತಾರತಮ್ಯವನ್ನು ತಪ್ಪದೆ ಈಡೇರಿಸುವ ಮಾತನ್ನು ನನಗೆ ಕೊಟ್ಟಿದ್ದು ಮತ್ತಷ್ಟು ಖುಷಿ ಕೊಡ್ತು.' ಎಂದು ದೀರ್ಘವಾಗಿ ಬರೆದಿದ್ದಾರೆ.

( ಮಾಹಿತಿ ಕೃಪೆ Filmi Beat) 

'ಕನಕಪುರದಲ್ಲಿ ಕಳ್ಳ ಮಾಲು ಮಾರುತ್ತಿದ್ದ ಮಹಾನಾಯಕನ ಸಂಪತ್ತಿನ ಮೂಲ ಹುಡುಕುವಿರಾ!?'

 

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಷ್ಟೊಂದು ಧನ ಸಂಪಾದಿಸಿದ್ದು ಹೇಗೆ? ಕನಕಪುರದಲ್ಲಿ ಕಳ್ಳ ಮಾಲು ಮಾರುತ್ತಿದ್ದ ಮಹಾನಾಯಕನ ಸಂಪತ್ತಿನ ಮೂಲ ಹುಡುಕುವಿರಾ ಎಂದು ಬಿಜೆಪಿ ಪ್ರಶ್ನಿಸಿದೆ.

ಬಿಜೆಪಿ ಶಾಸಕ ಸಿ.ಟಿ. ರವಿ ಅವರು ಕೋಟ್ಯಂತರ ಬೆಲೆಯ ಆಸ್ತಿ ಸಂಗ್ರಹಿಸಿದ್ದು ಹೇಗೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಶ್ನಿಸಿದ ಬೆನ್ನಲ್ಲೇ ಬಿಜೆಪಿ ಸರಣಿ ಟ್ವಿಟ್ ಮೂಲಕ ತಿರುಗೇಟು ನೀಡಿದೆ.

ಕಾಂಗ್ರೆಸ್ ಪಕ್ಷಕ್ಕೆ ಕಾಮಾಲೆ ರೋಗ ಬಾಧಿಸುತ್ತಿದೆ. ರಾಬರ್ಟ್ ವಾದ್ರಾ, ಸೋನಿಯಾ ಗಾಂಧಿ, ಚಿದಂಬರಂ, ಡಿ.ಕೆ.ಶಿ, ಖರ್ಗೆ ಅವರ ಖಜಾನೆ ತುಂಬಿದ್ದು ಹೇಗೆ ಎಂದು ಪ್ರಶ್ನಿಸುವ ಧೈರ್ಯವನ್ನು ಕಾಂಗ್ರೆಸ್ ತೋರಬೇಕು. ಕನಕಪುರದಲ್ಲಿ ಕಳ್ಳ ಮಾಲು ಮಾರುತ್ತಿದ್ದ ಮಹಾನಾಯಕನ ಸಂಪತ್ತಿನ ಮೂಲ ಹುಡುಕುವಿರಾ!? ಎಂದು ಪ್ರಶ್ನಿಸಿದೆ.

ಕನಕಪುರದಲ್ಲಿ ಕಳ್ಳ ವಹಿವಾಟು ನಡೆಸುತ್ತಿದ್ದ ಭ್ರಷ್ಟಾಚಾರ ಆರೋಪಿಯ ಘೋಷಿತ ಆಸ್ತಿಯೇ 840 ಕೋಟಿ. 2013ರಿಂದ 2018ರ ಅವಧಿಯಲ್ಲಿ ತನ್ನ ಆಸ್ತಿ 600 ಕೋಟಿ ವೃದ್ಧಿಸಿದೆ ಎಂದು ಮಹಾನಾಯಕ ಹೇಳಿಕೊಂಡಿದ್ದರು. ಇಂಧನದಲ್ಲಿ ಇಷ್ಟೊಂದು ಧನ ಸಂಪಾದಿಸಿದ್ದು ಹೇಗೆ ಎಂದು ಕನಕಪುರದ ಮಹಾನಾಯಕನ ಪ್ರಶ್ನಿಸಿ ಎಂದು ಕಾಂಗ್ರೆಸ್‌ಗೆ ಹೇಳಿದೆ.

ಕನಕಪುರದಲ್ಲಿ ಕಳ್ಳ ವಹಿವಾಟು ನಡೆಸುತ್ತಿದ್ದ ಭ್ರಷ್ಟಾಚಾರ ಆರೋಪಿಯ ಘೋಷಿತ ಆಸ್ತಿಯೇ 840 ಕೋಟಿ. 2013 ರಿಂದ 2018 ರ ಅವಧಿಯಲ್ಲಿ ತನ್ನ ಆಸ್ತಿ 600 ಕೋಟಿ ವೃದ್ಧಿಸಿದೆ ಎಂದು ಮಹಾನಾಯಕ ಹೇಳಿಕೊಂಡಿದ್ದರು.

ಮಜವಾದಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 600 ಕೋಟಿ ಸಂಪತ್ತು ಹೆಚ್ಚಾಗಿದೆ ಎಂದು ಡಿ.ಕೆ. ಶಿವಕುಮಾರ್ ಘೋಷಿಸಿಕೊಂಡಿದ್ದರು. ಹಾಗಾದರೆ ಉಳಿದ ಕುಖ್ಯಾತರಾದ ಜಾರ್ಜ್, ಮಹಾದೇವಪ್ಪ, ಎಂ.ಬಿ.ಪಾಟೀಲ್ ಮೊದಲಾದವರ ಲೂಟಿ ಎಷ್ಟು? ಎಂಎಲ್‌ಸಿ ಗೋವಿಂದರಾಜ್ ಐಟಿ ಡೈರಿಯನ್ನು ಒಮ್ಮೆ ಬಿಚ್ಚಿಸಿಡುವಿರಾ ಕಾಂಗ್ರೆಸ್? ಎಂದು ಸವಾಲು ಹಾಕಿದೆ. 

( ಮಾಹಿತಿ ಕೃಪೆ ಕನ್ನಡ ಪ್ರಭ) 

ಬೇಸಿಗೆಯಲ್ಲಿ ಕಣ್ಣಿನ ರಕ್ಷಣೆ ಹೇಗೆ? ಇಲ್ಲಿದೆ ಉಪಯುಕ್ತ ಸಲಹೆಗಳು...

 

ಒಂದೆಡೆ ನೆತ್ತಿ ಸುಡುವ ಬಿಸಿಲು, ಮತ್ತೊಂದೆಡೆ ಧೂಳಿನ ಕಾಟ... ಬೇಸಿಗೆ ಬಂದರೆ ಸಾಕು ಮನೆಯಿಂದ ಹೊರಗೆ ಬರುವುದೇ ಎಂದೆನಿಸಿ ಬಿಡುತ್ತದೆ. ಬೇಸಿಗೆ ಬಂತೆಂದರೆ ಒಂದಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುವುದು ಸಾಮಾನ್ಯ. ಬಿರುಬೇಸಿಗೆಯಲ್ಲಿ ಹೆಚ್ಚುವ ಧೂಳಿನ ಪ್ರಮಾಣ ಕಣ್ಣಿನ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಜೊತೆಗೆ ಕಟ್ಟಡಗಳ ನಿರ್ಮಾಣ ಕಾರ್ಯಗಳು ಹೆಚ್ಚಾಗಿ ನಡೆಯುವುದರಿಂದ ಕಣ್ಣಿಗೆ ಬೀಳುವ ಧೂಳು ಸಾಕಷ್ಟು ಅಲರ್ಜಿ ಮತ್ತು ಸೋಂಕು ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಕಣ್ಣಿನಲ್ಲಿ ನವೆ, ನೀರು ಸುರಿಯುವವುದು, ಗೀಜು ಕಟ್ಟುವುದು, ಕಣ್ಣೊಳಗೆ ಚುಚ್ಚಿದ ಅನುಭವವಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಕಣ್ಣುಗಳ ಬಗ್ಗೆ ಸ್ವಲ್ಪ ಜಾಸ್ತಿಯೇ ಜಾಗರೂಕರಾಗಬೇಕಾಗುತ್ತದೆ.

ಹಾಗಾದರೆ ಬೇಸಿಗೆಯಲ್ಲಿ ಕಣ್ಣುಗಳನ್ನು ಯಾವ ರೀತಿ ರಕ್ಷಣೆ ಮಾಡಬೇಕು? ಇಲ್ಲಿದೆ ಉಪಯುಕ್ತ ಸಲಹೆಗಳು...

  • ತಣ್ಣಗಿನ ಶುದ್ಧ ನೀರಿನಲ್ಲಿ ದಿನಕ್ಕೆ ಎರಡರಿಂದ ಮೂರು ಬರಿ ಕಣ್ಣನ್ನು ಸ್ವಚ್ಛಗೊಳಿಸಬೇಕು.
  • ಬೇಸಿಗೆಯಲ್ಲಿ ಹೆಚ್ಚಾಗಿ ಎಸಿ ಮತ್ತು ಫ್ಯಾನುಗಳನ್ನು ಬಳಸುತ್ತೇವೆ. ಇದರಿಂದಾಗಿ ಕಣ್ಣುಗಳು ಬೇಗ ಒಣಗುತ್ತವೆ. ಆದಷ್ಟು ಎಸಿ ಅಥವಾ ಫ್ಯಾನಿನ ಗಾಳಿ ನೇರವಾಗಿ ಕಣ್ಣಿಗೆ ತಗುಲದಂತೆ ನೋಡಿಕೊಳ್ಳಬೇಕು.
  • ಬಿಸಿಲಿನಲ್ಲಿ ಓಡಾಡುವಾಗ ಗಾಗಲ್ಸ್ ಬಳಸುವುದು ಮತ್ತು ದ್ವಿಚಕ್ರ ಸವಾರರು ಆದಷ್ಟು ಮುಚ್ಚಿರುವ ಹೆಲ್ಮೆಟ್‍ಗಳನ್ನು ಬಳಸುವುದು ಉತ್ತಮ.

  • ಮಡ್ರಾಸ್ ಐ ಎಂಬುದು ಬೇಸಿಗೆಯಲ್ಲಿ ಸರ್ವೇಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆಯಾಗಿದೆ. ಹಾಗಾಗಿ ಧೂಳಿನ ಕೈಗಳನ್ನು ಸ್ವಚ್ಛ ಮಾಡಿದ ನಂತರವೇ ಕಣ್ಣನ್ನು ಮುಟ್ಟಬೇಕು. ಯಾವುದೇ ಕಾರಣಕ್ಕೂ ಕೊಳಕು ಕೈಗಳಿಂದ ಕಣ್ಣು ಮುಟ್ಟಿಕೊಳ್ಳಬಾರದು.
  • ಬೇಸಿಗೆಯಲ್ಲಿ ನೀರು ಕೂಡ ಬಹಳಷ್ಟು ಕಲುಷಿತವಾಗಿರುತ್ತದೆ. ಹಾಗಾಗಿ ಕಣ್ಣುಗಳನ್ನು ಕ್ಲೀನ್ ಮಾಡಿಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕು.

    ಅಲ್ಲದೇ ಕಣ್ಣಿಗೆ ಧೂಳು ಅಥವಾ ಕಸ ಬಿದ್ದಾಗ ಕಣ್ಣುಗಳನ್ನು ಉಜ್ಜಿಕೊಳ್ಳಬಾರದು. ಮೊದಲು ಸ್ವಚ್ಛ ನೀರು ಅಥವಾ ಬಟ್ಟೆಯಿಂದ ಒರೆಸಿ ನಂತರ ನೇತ್ರತಜ್ಞರನ್ನು ಕಾಣುವುದರಿಂದ ಹೆಚ್ಚಿನ ಅಪಾಯ ಆಗುವುದನ್ನು ತಪ್ಪಿಸಬಹುದು.
  • ಮನೆ ಅಥವಾ ಕಚೇರಿಯಲ್ಲಿ ಯಾರಿಗಾದರೂ ಕಣ್ಣಿನ ಸೋಂಕು ತಗುಲಿದೆ ಎಂದರೆ ಹೆಚ್ಚು ಜಾಗರೂಕರಾಗಿರಬೇಕು. ಏಕೆಂದರೆ, ಸೋಂಕು ಬಹುಬೇಗ ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆಗಳಿರುತ್ತವೆ.
  • ಬೇಸಿಗೆಯಲ್ಲಿ ಬ್ಯಾಕ್ಟೀರಿಯಾ ಬೇಗ ಬೆಳೆಯುತ್ತವೆ. ಹಾಗಾಗಿ ಸೋಂಕುಗಳು ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತವೆ. 
  • ( ಮಾಹಿತಿ ಕೃಪೆ ಕನ್ನಡ ಪ್ರಭ) 
  • ಸವಾಲು, ಸಂಕಷ್ಟಗಳನ್ನು ಮೆಟ್ಟಿನಿಂತ 'ಮಹಾನಾಯಕ'

     

    ಕೊಪ್ಪಳ: 'ಡಾ.ಬಿ.ಆರ್.ಅಂಬೇಡ್ಕರ್ ಕುರಿತಾದ ಪುಸ್ತಕಗಳನ್ನು ಓದುವ ಮೂಲಕ ಅವರ ಜೀವನದ ಸಂಘರ್ಷ, ಸಾಧನೆ ಅರಿಯಬೇಕು. ಅವರು ಕಷ್ಟಗಳನ್ನು ಮೆಟ್ಟಿನಿಂತ ಮಹಾನಾಯಕ' ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಬುಧವಾರ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಅಂಬೇಡ್ಕರ್ ಕುರಿತು ಸಾಕಷ್ಟು ಲೇಖಕರು ಪುಸ್ತಕ ರಚಿಸಿದ್ದಾರೆ. ಆ ಪುಸ್ತಕಗಳನ್ನು ಓದಿ, ಅದರಲ್ಲಿರುವ ಮಾಹಿತಿ, ಚಿಂತನೆ ಅರಿತು ನಾಲ್ಕು ಜನಕ್ಕೆ ತಿಳಿಸಬೇಕು. ಇತಿಹಾಸ ತಿಳಿಯದವನು-ಇತಿಹಾಸ ಸೃಷ್ಟಿಸಲಾರ. ಆದ್ದರಿಂದ ಅಂಬೇಡ್ಕರ್ ಅವರ ಜೀವನದ ಇತಿಹಾಸವನ್ನು ಪ್ರತಿಯೊಬ್ಬರೂ ಅರಿಯಲೇಬೇಕು. ಅವರ ಬಗೆಗಿನ ವಿಚಾರಗಳನ್ನು ತಿಳಿದು, ಸ್ವಂತ ಅಭಿಪ್ರಾಯ ಹಾಗೂ ನಿಲುವು ವ್ಯಕ್ತಪಡಿಸಬೇಕು ಎಂದರು.

    ಹೊಸಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಟಿ.ಎಚ್‌.ಬಸವರಾಜ ಉಪನ್ಯಾಸ ನೀಡಿ,'ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದಂತೆ ಪ್ರತಿವರ್ಷ ಬಜೆಟ್‌ನಲ್ಲಿ ಯಾವ, ಯಾವ ಯೋಜನೆಗಳು ಘೋಷಣೆಯಾಗುತ್ತವೆ ಎಂಬುದರ ಇಲಾಖಾವಾರು ಮಾಹಿತಿಯನ್ನು ಸಾಮಾನ್ಯ ಜನರಿಗೆ ನೀಡಬೇಕು. ಯೋಜನೆಗಳನ್ನು ಸಮರ್ಪಕವಾಗಿ ಸೂಕ್ತ ಫಲಾನುಭವಿಗಳಿಗೆ ತಲುಪಿಸಬೇಕು' ಎಂದರು.

    ಅಂಬೇಡ್ಕರ್ ಅವರು 60ಕ್ಕೂ ಅಧಿಕ ದೇಶಗಳ ಸಂವಿಧಾನಗಳನ್ನು ಅರಿತು, ಅಧ್ಯಯನ ಮಾಡಿ, ನಮ್ಮ ದೇಶದ ಸಂವಿಧಾನವನ್ನು ರೂಪಿಸಿ, ನಮಗೆ ಕೊಡುಗೆಯಾಗಿ ನೀಡಿದ್ದಾರೆ. ಗಾಂಧಿ ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟರೆ, ಅಂಬೇಡ್ಕರ್ ಆ ಸ್ವಾತಂತ್ರ್ಯವನ್ನು ಹೇಗೆ ಅನುಭವಿಸಬೇಕು ಎಂದು ತಿಳಿಸಿಕೊಟ್ಟರು ಎಂದರು.

    ಹಿಂದೂ ಕೋಡ್ ಬಿಲ್ ಮೂಲಕ ಹೆಣ್ಣುಮಕ್ಕಳ ರಕ್ಷಣೆ, ಹಕ್ಕು ರಕ್ಷಣೆಗೆ ಹೋರಾಡಿದರು. ಕ್ಯಾಬಿನೆಟ್‌ನಲ್ಲಿ ಹಿಂದೂ ಕೋಡ್-ಬಿಲ್ ಬಗ್ಗೆ ಸರಿಯಾಗಿ ಚರ್ಚೆಯಾಗದೆ ಇರುವ ಕಾರಣದಿಂದ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದರು.

    ಜಿಲ್ಲಾ ಪಂಚಾಯತಿ ಸದಸ್ಯ ಗೂಳಪ್ಪ ಹಲಗೇರಿ, ನಗರಸಭೆ ಸದಸ್ಯರಾದ ಸಿದ್ದು ಮ್ಯಾಗೇರಿ ಹಾಗೂ ಗುರುರಾಜ ಹಲಗೇರಿ ಮಾತನಾಡಿದರು.

    ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನವೀನ್ ಶಿಂತ್ರೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್, ಸಮುದಾಯದ ಮುಖಂಡರಾದ ಗಾಳೆಪ್ಪ ಪೂಜಾರ, ಗವಿಸಿದ್ದಪ್ಪ ಬೆಲ್ಲದ ಹಾಗೂ ಡಾ.ಜ್ಞಾನಸುಂದರ್ ಕಂದಾರಿ ಇದ್ದರು.

    ಮಹನೀಯರ ಪುತ್ಥಳಿಗೆ ಮಾಲಾರ್ಪಣೆ: ಡಾ.ಬಿ.ಆರ್.ಅಂಬೇಡ್ಕರ್ ಅವರ‌ 130ನೇ ಜನ್ಮ ದಿನಾಚರಣೆಯ ಅಂಗವಾಗಿ ಬೆಳಿಗ್ಗೆ ನಗರದ ಹೊಸಪೇಟೆ ರಸ್ತೆಯ ಉದ್ಯಾನವನದಲ್ಲಿರುವ ಮಹನೀಯರ ಪುತ್ಥಳಿಗೆ ಪೂಜೆ ಹಾಗೂ ಮಾಲಾರ್ಪಣೆ ಮಾಡಲಾಯಿತು.

    ಸಂಸದ ಕರಡಿ ಸಂಗಣ್ಣ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ ಎಸ್., ನಗರಸಭೆ ಸದಸ್ಯರಾದ ಮುತ್ತುರಾಜ್ ಕುಷ್ಟಗಿ ಹಾಗೂ ಸಿದ್ದು ಮ್ಯಾಗೇರಿ ಇದ್ದರು.

    'ಆದರ್ಶ ಅಳವಡಿಸಿಕೊಳ್ಳಿ'

    ಯಲಬುರ್ಗಾ: 'ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿದ ಅಂಬೇಡ್ಕರ್‌ ಅವರು ಸಮಾನತೆಯ ಹರಿಕಾರ' ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅಭಿಪ್ರಾಯಪಟ್ಟರು.

    ಪಟ್ಟಣದಲ್ಲಿ ತಾಲ್ಲೂಕು ಛಲವಾದಿ ಮಹಾಸಭಾದ ವತಿಯಿಂದ ಆಯೋಜಿಸಲಾಗಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    'ಪ್ರಜಾಪ್ರಭುತ್ವ ಪದ್ಧತಿಯ ಮೂಲಕ ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಹಕ್ಕುಗಳನ್ನು ಕಲ್ಪಿಸಿಕೊಡುವ ಮೂಲಕ ಸಮಾಜ ಜೀವನಕ್ಕೆ ದಾರಿ ಮಾಡಿಕೊಟ್ಟಿದ್ದ ಕೀರ್ತಿ ಇವರಿಗೆ ಸಲ್ಲುತ್ತದೆ' ಎಂದರು.

    ಮುಖಂಡ ರಮೇಶ ಸುಗ್ಗೇನಹಳ್ಳಿ ಉಪನ್ಯಾಸ ನೀಡಿದರು.

    ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ಅಧ್ಯಕ್ಷ ಡಿ.ಕೆ. ಪರಶುರಾಮ ಛಲವಾದಿ ಮಾತನಾಡಿದರು. ಜಿ.ಪಂ. ಮಾಜಿ ಸದಸ್ಯರಾದ ಸಿ.ಎಚ್.ಪೋಲೀಸ್ ಪಾಟೀಲ, ಈರಪ್ಪ ಕುಡಗುಂಟಿ, ಮುಂಕುದರಾವ ಭವನಿಮಠ, ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ವಸಂತಕುಮಾರ ಭಾವಿಮನಿ, ಮುಖಂಡರಾದ ಬಸವರಾಜ ಉಳ್ಳಾಗಡ್ಡಿ, ವೀರಣ್ಣ ಹುಬ್ಬಳ್ಳಿ, ಉಪ್ಪಾರ ಸಮಾಜದ ಅಧ್ಯಕ್ಷ ಬಸವರಾಜ ಪೂಜಾರ, ಬಿ.ಎಂ.ಶಿರೂರು, ಕೃಷಿ ಇಲಾಖೆಯ ತಾಂತ್ರಿಕಾಧಿಕಾರಿ ಶರಣಪ್ಪ ಗುಂಗಾಡಿ, ಶಂಕರ ಕಟ್ಟಿ, ಸಿದ್ದಪ್ಪ ಕಟ್ಟಿಮನಿ, ಛತ್ರಪ್ಪ ಛಲವಾದಿ, ಮಲ್ಲಿಕಾರ್ಜುನ ಜಕ್ಕಲಿ, ವಿಜಯ ಜಕ್ಕಲಿ, ಅಂದಪ್ಪ ಹಾಳಕೇರಿ, ಕನಕೇಶ ಪೆಂಟರ್, ಪ.ಪಂ. ಸರ್ವ ಸದಸ್ಯರು ಭಾಗವಹಿಸಿದ್ದರು.

    'ಸಮುದಾಯಗಳಿಗೆ ಬದುಕು ನೀಡಿದ ನಾಯಕ'

    ಹನುಮಸಾಗರ: 'ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡುವ ಮೂಲಕ ತುಳಿತಕ್ಕೊಳಪಟ್ಟವರಿಗೆ ಬದುಕು ನೀಡಿದರು' ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಭೀಮಣ್ಣ ಅಗಸಿಮುಂದಿನ ಅಭಿಪ್ರಾಯಪಟ್ಟರು.

    ಇಲ್ಲಿನ ಅಂಬೇಡ್ಕರ್‌ ಭವನದಲ್ಲಿ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್ ಅವರ 130ನೇ ಜಯಂತಿ ಪ್ರಯುಕ್ತ 'ಜೈ ಭೀಮ ಕಟ್ಟಡ ಕೂಲಿ ಕಾರ್ಮಿಕರ ಯುವಕ ಸಂಘ' ಉದ್ಘಾಟಸಿ ಮಾತನಾಡಿದರು.

    'ಅಂಬೇಡ್ಕರ್‌ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು' ಎಂದು ಸಲಹೆ ನೀಡಿದರು.

    ಲೇಖಕ ಕಿಶನರಾವ್ ಕುಲಕರ್ಣಿ ಮಾತನಾಡಿ,'ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್ ಅವರು ವಿಶ್ವಕ್ಕೆ ಮಾದರಿಯಾಗುವ ಸಂವಿಧಾನ ರಚಿಸುವ ಮೂಲಕ ಭಾರತೀಯರಿಗೆ ನಿತ್ಯ ಸ್ಮರಣೀಯರಾಗಿದ್ದಾರೆ' ಎಂದು ಅವರು ಹೇಳಿದರು.

    ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಮೂಲಿಮನಿ, ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ದ್ಯಾವಣ್ಣವರ ಹಾಗೂ ಬಸವರಾಜ ಅಕ್ಕಿ ಮಾತನಾಡಿದರು.

    ಮಾದಿಗ ಸಮಾಜದ ಅಧ್ಯಕ್ಷ ನೀಲಕಂಠಪ್ಪ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಂಕ್ರವ್ವ ನಿರ್ವಾಣಿ, ಉಪಾಧ್ಯಕ್ಷ ಮಂಜುನಾಥ ಹುಲ್ಲೂರ, ಎಪಿಎಂಸಿ ಅಧ್ಯಕ್ಷ ಶರಣಪ್ಪ ಹುಲ್ಲೂರ, ಪ್ರಮುಖರಾದ ಸೂಚಪ್ಪ ದೇವರಮನಿ, ಚಂದ್ರು ಹಿರೇಮನಿ, ಗ್ರಾ.ಪಂ ಸದಸ್ಯರಾದ ದುರಗವ್ವ ಪೂಜಾರ, ಕಸ್ತೂರೆವ್ವ ಸಂದಿಮನಿ, ನೀಲವ್ವ ಹಕ್ಕಿ, ಶ್ರೀಶೈಲ ಮೋಟಗಿ, ಶಿವಪುತ್ರಪ್ಪ ಕಂಪ್ಲಿ, ಭವಾನಿಸಾ ಪಾಟೀಲ, ರುದ್ರಗೌಡ ಗೌಡಪ್ಪನವರ, ರಮೇಶ ಬಡಿಗೇರ, ಶ್ರೀನಿವಾಸ ಜಹಗೀರದಾರ, ಚಂದಪ್ಪ ಗುಡಗಲದಿನ್ನಿ, ಚಂದಪ್ಪ ಕುದರಿ, ಹನುಮಂತ ಪೂಜಾರ, ನೀಲಪ್ಪ ಕುದರಿ, ಶ್ರೀನಿವಾಸ ಇಲಕಲ್ಲ, ಸೋಮಪ್ಪ ಸಂದಿಮನಿ, ವಿಜಯಕುಮಾರ ಹಿರೇಮನಿ, ದುರಗಪ್ಪ ಹರಿಜನ, ಪರಶುರಾಮ ಗುಡಿಮನಿ ಇದ್ದರು.

    ವೆಂಕಟೇಶ ಹೊಸಮನಿ ನಿರೂಪಿಸಿದರು.

    ( ಮಾಹಿತಿ ಕೃಪೆ ಪ್ರಜಾವಾಣಿ) 

    ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಸದಾಶಿವರಾವ ಭೋಸಲೆ ಇನ್ನಿಲ್ಲ

     

    ಬೆಳಗಾವಿ: ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಹಾಗೂ ಅಪ್ಪಟ ಗಾಂಧಿವಾದಿಯಾಗಿದ್ದ ಸದಾಶಿವರಾವ ಬಾಪುಸಾಹೇಬ ಭೋಸಲೆ (101) ವಯೋಸಹಜ ಅನಾರೋಗ್ಯದಿಂದ ತಾಲ್ಲೂಕಿನ ಕಡೋಲಿ ಗ್ರಾಮದ ಸ್ವಗೃಹದಲ್ಲಿ ಗುರುವಾರ ಮುಂಜಾನೆ ನಿಧನರಾದರು.

    ಅವರಿಗೆ ಪುತ್ರ, ಸೊಸೆ, ಮಗಳು, ಅಳಿಯ ಹಾಗೂ ಮೊಮ್ಮಕ್ಕಳು ಇದ್ದಾರೆ. ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ.

    ಗಾಂಧೀಜಿ ಹಾಗೂ ವಿನೋಬಾ ಭಾವೆ ಅವರ ವಿಚಾರಧಾರೆಗಳನ್ನು ಪಾಲಿಸುತ್ತಿದ್ದರು. ಅವರಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. 1946 (ಬ್ರಿಟಿಷ್ ಸರ್ಕಾರವು ಆಗ ಚುನಾವಣೆ ನಡೆಸಿತ್ತು. ಆಗ ಬೆಳಗಾವಿಯು ಮುಂಬೈ ಪ್ರಾಂತ್ಯಕ್ಕೆ ಒಳ‍ಪಟ್ಟಿತ್ತು. ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದರು) ಹಾಗೂ 1952 (ಹಿರೇಬಾಗೇವಾಡಿ ಕ್ಷೇತ್ರದಿಂದ)ರಲ್ಲಿ ಎರಡು ಬಾರಿ ಶಾಸಕರಾಗಿದ್ದವರು. ಸರ್ಕಾರವು ಬಡವರ ಪರವಾಗಿ ಕೆಲಸ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಮತ್ತು ಸ್ಥಳೀಯರ ಪ್ರಗತಿಗೆ ಸಮಯ ಮೀಸಲಿಡಬೇಕೆಂದು 1954ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಭೂ ದಾನ ಚಳವಳಿಯಲ್ಲಿ ಪಾಲ್ಗೊಂಡಿದ್ದರು.

    ಗ್ರಾಮದ ಜನರಿಗೆ ನೂರು ಎಕರೆವರೆಗೆ ಜಮೀನನ್ನು ದಾನವಾಗಿ ನೀಡಿ ನೆರವಾಗಿದ್ದರು. ಆ ಭಾಗದಲ್ಲಿ ಆಗಾಗ ತರುಣ ಕ್ರಾಂತಿ ಶಿಬಿರ ನಡೆಸಿ, ಯುವಜನರಿಗೆ ಗಾಂಧಿ ತತ್ವದ ಬಗ್ಗೆ ತಿಳಿಸಿಕೊಡುತ್ತಿದ್ದರು. ಸ್ವತಃ ಸಾವಯವ ಕೃಷಿ ಮಾಡುತ್ತಿದ್ದರು. ಅದನ್ನು ಪಾಲಿಸುವಂತೆ ಇತರರಿಗೂ ಜಾಗೃತಿ ಮೂಡಿಸುತ್ತಿದ್ದರು. ತಮಗೆ ಹಾಗೂ ಪತ್ನಿಗೆ ಬೇಕಾದ ಖಾದಿ ಬಟ್ಟೆಗಳನ್ನು ಚರಕದಲ್ಲಿ ತಾವಾಗಿಯೇ ಸಿದ್ಧಪಡಿಸಿಕೊಳ್ಳುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಅವರು ವಯೋಸಹಜ ಕಾರಣದಿಂದಾಗಿ ಜಮೀನಿಗೆ ಹೋಗುತ್ತಿರಲಿಲ್ಲ; ಚರಕ ಬಳಸುತ್ತಿರಲಿಲ್ಲ. ಸರಳ ಜೀವನ ಕ್ರಮದಿಂದಾಗಿ ಗಮನಸೆಳೆದಿದ್ದರು.

    ಗಾಂಧಿ ತತ್ವ ಪಾಲನೆಯು ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲದು ಎಂದು ಪ್ರತಿಪಾದಿಸುತ್ತಿದ್ದರು ಹಾಗೂ ಕಾರ್ಯಕ್ರಮಗಳಲ್ಲಿ ಅದನ್ನೇ ಹೇಳುತ್ತಿದ್ದರು. ಕಡೋಲಿ ಸಮೀಪದ ದೇವಗಿರಿಯಲ್ಲಿ ಕಟ್ಟಡವೊಂಡನ್ನು ಕಟ್ಟಿಸಿ ಅದಕ್ಕೆ 'ಗಾಂಧಿ ಘರ್‌' ಎಂದು ಹೆಸರಿಟ್ಟಿದ್ದರು. ಗಾಂಧೀಜಿ ಅವರ ಸತ್ಯ, ಅಹಿಂಸೆ, ಗ್ರಾಮ ಸ್ವರಾಜ್ಯದ ತತ್ವಗಳನ್ನು ಪಸರಿಸುವ ಕೆಲಸವನ್ನು ಅದರ ಮೂಲಕ ಮಾಡುತ್ತಿದ್ದರು. 'ಗಾಂಧಿ ಘರ್‌'ನಲ್ಲಿ ನೂಲು ತೆಗೆಯುವುದು, ಮಕ್ಕಳಿಗೆ ಅಕ್ಷರಾಭ್ಯಾಸ, ಮಹಿಳೆಯರಿಗೆ ಸ್ವ ಉದ್ಯೋಗ ತರಬೇತಿ, ಕೃಷಿ, ಸ್ವಚ್ಛತೆ ಜಾಗೃತಿ ಮತ್ತು ಚಿಂತನ-ಮಂಥನ ಕಾರ್ಯಕ್ರಮಗಳು ನಡೆಯುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಈ ಚಟುವಟಿಕೆಗಳು ಸ್ಥಗಿತಗೊಂಡಿದ್ದವು.

    'ಸೆರೆಮನೆ ವಾಸ ನನಗೆ ಶಿಕ್ಷೆಯಾಗಿ ಗೋಚರಿಸಲಿಲ್ಲ. ಬದಲಿಗೆ ಅಲ್ಲಿ ನಾನು ಶಿಸ್ತು ಮತ್ತು ಸಂಯಮವನ್ನು ಕಲಿತೆ' ಎಂದು ಕಾರ್ಯಕ್ರಮ ಒಂದರಲ್ಲಿ ಹೇಳಿಕೊಂಡಿದ್ದರು.

    ( ಮಾಹಿತಿ ಕೃಪೆ ಪ್ರಜಾವಾಣಿ) 


    Monday, April 12, 2021

    ಗೊಬ್ಬರ ಬೆಲೆ ಶೇ.80ರಷ್ಟು ಏರಿಕೆಯಾಗಿದೆ: ಮೋದಿ ಸರಕಾರ ಏನ್‌ ಮಾಡ್ತಿದೆ?

    ದೇಶದಲ್ಲಿ ರಸಗೊಬ್ಬರ ಬೆಲೆ ಏರಿಕೆ ಮಾಡಿರುವ ಕ್ರಮದ ವಿರುದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ, ಕೊಲಾರದ ಅಣ್ಣೇಹಳ್ಳಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಮಹಿಳಾ ಸಂಘಗಳಿಗೆ ಆಯೋಜಿಸಿದ್ದ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಮೇಶ್ ಕುಮಾರ್ ಪ್ರಧಾನಿ ಮೋದಿ ವಿರುದ್ದ ನೇರವಾಗಿ ವಾಗ್ದಾಳಿ ನಡೆಸಿದರು,

    ಗೊಬ್ಬರದ ಮೇಲೆ ಶೇ.80ರಷ್ಟು ಹೆಚ್ಚು

    ಗೊಬ್ಬರದ ಬೆಲೆ ಒಮ್ಮೆಲೆ ಶೇ. 80 ರಷ್ಟು ಏರಿಕೆಯಾಗಿದೆ, ಈ ಬಗ್ಗೆ ಯಾರೂ ಮಾತಾಡಲ್ಲ, ಒಂದು ಯೋಗ್ಯ ಸರಕಾರ ನರ ಗಟ್ಟಿಯಾಗಿದ್ರೆ ಕಂಪನಿಗಳನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು, ಮೋದಿ ನಿಮಗೆ ಶೇವಿಂಗ್ ಮಾಡೋಕೆ ಟೈಮಿಲ್ಲ, ಈ ದೇಶದ ಪ್ರದಾನ ಮಂತ್ರಿ ನೀವು ಕೇವಲ ಭಾಷಣ ಮಾಡಿದರೆ ಸಾಲದು ಕಾರ್ಯಸಾದನೆ ತೋರಿಸಬೇಕು, ಮುಂದಿನ ದಿನಗಳಲ್ಲಿ ನಮಗೆ ಒಳ್ಳೆಯದಾದರೆ ಅದನ್ನ ಮಾಡಿ ನಾವು ತೋರಿಸುತ್ತೇವೆ, ಒಮ್ಮೆಲೆ ರಸಗೊಬ್ಬರ ಇಷ್ಟು ಬೆಲೆ ಹೆಚ್ಚಾದರೆ ಕಾರಣವೇ ಹೇಳ್ತಿಲ್ಲ ಯಾಕೆ ಯಾವ ಊರಲ್ಲಿ ನಿನಗೆ ವ್ಯವಸಾಯ ಇದೆಯಪ್ಪ ಮೋದಿ, ನಿಮ್ಮ ಅಣ್ಣ ತಮ್ಮ ವ್ಯೆವಸಾಯ ಮಾಡ್ತಿದ್ದಾರಾ? ಅಷ್ಟು ದೊಡ್ಡ ಪ್ರಮಾಣದಲ್ಲಿ ರಸಗೊಬ್ಬರ ಬೆಲೆ ಏರಿಸಬೇಕಾದರೆ ಅಂತಹ ಅಗತ್ಯ ಏನು ಬಂದಿದೆ ನಿನಗೆ ಯಾರು ಬಂದು ನಿನಗೆ ಹೇಳ್ತಾರೆ, ರೈತರು ಬೆಳೆಯುವ ಯಾವ ತರಕಾರಿ, ಬೆಳೆಗೆ ರೇಟ್ ಹೆಚ್ಚಿಗೆ ಮಾಡಿದ್ದೀಯ? ನೀನು ರೈತಬೆಳೆಯುವ ಉತ್ಪನ್ನಗಳಿಗೆ ಬೆಲೆ ಜಾಸ್ತಿಮಾಡಿ ಆಮೇಲೆ 800 ರೂ ಅಲ್ಲ 2000 ರೂಪಾಯಿ ಜಾಸ್ತಿ ಮಾಡು ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು,

    ದೇಶಭಕ್ತಿ ಜಹಗೀರ್‌ ತೆಗೆದುಕೊಂಡಿದ್ದಾರೆ

    ಬಿಜೆಪಿಯವರು ದೇವರ ಭಕ್ತಿಯನ್ನು ಕೂಡಾ ಜಹಗೀರ್ ತಗೊಂಡು ಬಿಟ್ಟಿದ್ದಾರೆ ಶ್ರೀರಾಮ ಅವರಕಡೆ, ಹನುಮಂತ ಅವರಕಡೆಯಂತೆ ನಮಗೆ ಯಾವ ದೇವರನ್ನು ಸಹ ಬಿಟ್ಟಿಲ್ಲ, ಅವಾಗ ಅವಾಗ ಅವರ ಅಮಿತ್ ಶಾ ದುರ್ಯೋಧನನ್ನು ನಮ್ಮ ಮೇಲೆ ಬಿಡ್ತಿದ್ದಾರೆ ಅಷ್ಟೇ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ರಮೇಶ್‌ ಕುಮಾರ್‌ ನಡೆಸಿದ್ದಾರೆ.
    (ಮಾಹಿತಿ ಕೃಪೆ ವಿಜಯಕರ್ನಾಟಕ)

    ಸಾರ್ವಜನಿಕರೇ ಗಮನಿಸಿ: ಇಂದಿನಿಂದ ಈ 7 ಜಿಲ್ಲೆಗಳ ಸರ್ಕಾರಿ ಕಚೇರಿ ಸಮಯ ಬದಲು


     ರಾಜ್ಯದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗತೊಡಗಿದ್ದು, ಜನತೆ ಹೈರಾಣಾಗಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ತಾಪಮಾನ ಬಹಳಷ್ಟು ಹೆಚ್ಚಿದೆ. ರಾತ್ರಿ ಸಮಯದಲ್ಲೂ ಹಗಲಿನ ಅನುಭವವಾಗುವಂತಾಗಿದೆ.

    ತಾಪಮಾನದ ಕಾರಣಕ್ಕಾಗಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಹಗಲಿನ ವೇಳೆ ಹೊರಬೀಳುವುದು ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎರಡು ವಿಭಾಗಗಳ 9 ಜಿಲ್ಲೆಗಳಲ್ಲಿ ಸರ್ಕಾರಿ ಕೆಲಸದ ಸಮಯವನ್ನು ಬದಲಿಸಿದೆ.  ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ, ಕಲಬುರಗಿ ವಿಭಾಗದ ರಾಯಚೂರು, ಕಲಬುರಗಿ, ಕೊಪ್ಪಳ, ಯಾದಗಿರಿ, ಬಳ್ಳಾರಿ, ವಿಜಯನಗರ ಮತ್ತು ಬೀದರ್ ಜಿಲ್ಲೆಗಳಲ್ಲಿ ಇಂದಿನಿಂದ ಕಚೇರಿ ಅವಧಿ ಬೆಳಗ್ಗೆ 8ರಿಂದ ಮಧ್ಯಾಹ್ನ 1-30 ರ ವರೆಗೆ ನಿಗದಿಪಡಿಸಲಾಗಿದೆ.

    (ಮಾಹಿತಿ ಕೃಪೆ ಕನ್ನಡ ದುನಿಯಾ)

    Sunday, April 11, 2021

    ರೈತ

     


    ನಿನ್ನಂದ ಕಾಣಲೆಂದು … ಆನಂದ ಹೊಂದಲೆಂದು.. ಆ..ಕಾ..ಶ ಬಾಗಿದೆ

    👉 
     *ನಿನ್ನಂದ ಕಾಣಲೆಂದು …
    ಆನಂದ ಹೊಂದಲೆಂದು..
    ಆ..ಕಾ..ಶ ಬಾಗಿದೆ
    ನಿನ್ನಂದ ಕಾಣಲೆಂದು ಆನಂದ ಹೊಂದಲೆಂದು
    ನೋಡಲ್ಲಿ ಮೋಹಿನಿ ಕಾಮಿನಿ ಭಾಮಿನಿ
    ಆಕಾಶ ಬಾಗಿದೆ
    ನಿನ್ನಂದ ಕಾಣಲೆಂದು ಆನಂದ ಹೊಂದಲೆಂದು
    ನೋಡಲ್ಲಿ ಮೋಹಿನಿ ಕಾಮಿನಿ ಭಾಮಿನಿ
    ಆಕಾಶ ಬಾಗಿದೆ
    ***
    ಆ ಆ..ಆ ಆ..ಆ ಆ..ಆ ಆ..
    ತಂಗಾಳಿ ಬೀಸಿ ಬಂದು ನಿನ್ನ ಹೂ ಮೈಯಿ ಸೋಕಿತೆ
    ಅರಳಿದ ಸುಮಗಳ ಪರಿಮಳ ಚೆಲ್ಲಾಡೀತೆ
    ಆ ರೆಂಬೆ ತೂಗಿ ತೂಗಿ ಹೊಸ ಉಲ್ಲಾಸ ತೋರುತಾ
    ಹಸುರಿನಾ ಎಲೆಗಳ ಚಾಮರ ಬೀಸಿತೇ
    ಬಳ್ಳಿಲಿ ನಗುವ ಹೂವು …ಸೌಂದರ್ಯ ಕಾಣುವಾ
    ಚಪಲದಿ ಇಣುಕುತಾ ನಸು ನಾಚಿ ನೋಡಿದೆ
    ಆಕಾಶ ಬಾಗಿದೆ
    ನಿನ್ನಂದ ಕಾಣಲೆಂದು ಆನಂದ ಹೊಂದಲೆಂದು
    ನೋಡಲ್ಲಿ ಮೋಹಿನಿ ಕಾಮಿನಿ ಭಾಮಿನಿ
    ಆಕಾಶ ಬಾಗಿದೆ
    ***
    ಎಲ್ಲಿಂದ ತಂದ ಕಣ್ಣೋ ..
    ಇವಳು ಎಲ್ಲಿಂದ ಬಂದ ಹೆಣ್ಣೋ
    ನಡೆಯಲು ನಾಟ್ಯವು ..ಮೌನವು ಸಂಗೀತವು …
    ಶೃಂಗಾರ ಕಾವ್ಯ ಒಂದು
    ಹೊಸ ಹೆಣ್ಣಾಗಿ ಬಂದಿತೇನೋ …
    ಹವಾಳವೋ ಅಧರವೋ ..ಪ್ರಣಯದ ಚೆಲ್ಲಾಟ ವೊ
    ಬಂಗಾರದಿಂದ ತಂದ ಈ ತನುವ ಕಾಂತಿಗೆ …
    ಬಯಕೆಯು ಮನಸನು ಕೆಣಕಲು ನಾ ಸೋತೆನೇ
    ಆಕಾಶ ಬಾಗಿದೆ
    ನಿನ್ನಂದ ಕಾಣಲೆಂದು ಆನಂದ ಹೊಂದಲೆಂದು
    ನೋಡಲ್ಲಿ ಮೋಹಿನಿ ಕಾಮಿನಿ ಭಾಮಿನಿ
    ಆಕಾಶ ಬಾಗಿದೆ 
     ಹೇ... ಹೇ....

    ಪ್ರೀತಿ ಕೊಂದ ಕೊಲೆಗಾತಿ ನಾ ಹೇಳೋ ಕಥೆಗೆ ಸ್ಪೂರ್ತಿ...

     


    👉 
     *ಪ್ರೀತಿ ಕೊಂದ ಕೊಲೆಗಾತಿ ನಾ ಹೇಳೋ  ಕಥೆಗೆ ಸ್ಪೂರ್ತಿ...
    ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು
    ಕೇಳಿ ಪ್ರೇಮಿಗಳೇ ಒಬ್ಬನು ಸುಂದರ ಇದ್ದನು
    ಜೋಡಿ ಜೋಡಿ ಕಂಗಳಿಗೆ ಪ್ರೀತಿ ಬಂತು ಸ್ಪೂರ್ತಿ
    ಪ್ರೀತಿ ಕೋಂದ ಕೊಲೆಗಾತಿ ನಾ ಹೇಳೋ ಕಥೆಗೆ ಸ್ಪೂರ್ತಿ...
    ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು
      ***
    ಕೋಟಿ ಮಾತನಾಡಿದರೂ ಕೋಟಿ ಮುತ್ತ ನೀಡಿದರೂ
    ತಿರುಗದ ನೋಟದ ಸೆರೆಯಲಿ ತಿರುಗುವ ಭೂಮಿಯ ಮರೆತರೂ
    ಜನನವ ಹಿಂದೇ ದೂಡಿದರೂ ದಿನವೂ ಒಂದು ಗೂಡಿದರೂ
    ತಿಂಗಳ ಬೆಳಕಿನ ತೆರೆಯಲಿ ಸೂರ್ಯನು ಬರುವುದೇಮರೆತರೂ
    ಭಾಷ ರಾಶಿ ಸುರಿದವೂ
    ಆಣೆಯ ಕೋಟೆ ಮೆರೆದವು
    ಪ್ರೇಮ ಪ್ರಣಯದ ಮನೆಯಲಿ ಬೇರೆತವೂ
    ಜೋಡಿ ಜೋಡಿ ಕಂಗಳಿಗೆ ಪ್ರೀತಿ ಬಂತು ಸ್ಪೂರ್ತಿ
    ಪ್ರೀತಿ ಕೊಂದ ಕೊಲೆಗಾತಿ ನಾ ಹೇಳೋ ಕಥೆಗೆ ಸ್ಫೂರ್ತಿ
    ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು..
       ***
    ಆಆಆಆಆ......ಆಆಆಆಆ......
    ಪ್ರೇಮ ಒಂದು ವರದಾನ ಅದರ ಇಂದೆ ಬಲಿದಾನ 
    ಎಂಬುದ ತಿಳಿಯದ ಹುಡುಗನು ಹುಡುಗಿಯ (ಪ್ರೀತಿ ಮಾಡಿದನು) ಮದುವೆಯ ಆದನು
    ತನ್ನ ಕಣ್ಣ ನೋಟದಲಿ ಕಡಲಿಗಿಂತ ಆಳದಲೀ
    ಪೇಮವ ಕೊಲ್ಲುವ ಚೂರಿಯ... ಕಾಣದೇ ಇಟ್ಟಳೂ ಮರೆಯಲಿ
    ನಿರ್ಮಲ ಪ್ರೇಮದ ಕಣ್ಣಿಗೆ 
    ಕಲ್ಮಶ ತಿಳೀಯದ ಮನಸಿಗೆ
    ಕಾಣದೇ ಹೊಯಿತು ಸಂಚಿನ ಹುಸಿನಗೆ
    ಆ ಸಾವಂತೆ ಬಯಲಾಯ್ತು ಈ ಹೆಮ್ಮಾರಿ ವೇಷಾ.. (ವೇಷ ವೇಷ ವೇಷ)
    ಪ್ರೀತಿ ಎಂಬ ಮುಖವಾಡ ತಾ ಮಾಡಿತ್ತು ಮೋಸ...
    ಮೋಸ ಮೋಸ ಮೋಸ ದ್ವೇಷ ಮೋಸ ದ್ವೇಷ ಮೋಸ 
    ಜೂಜುಜೂಜು ಜೂಜುಜೂಜು ಜೂಜುಜೂಜು ಜೂಜುಜೂಜು
    ಜೂಜುಜೂಜು ಜೂಜುಜೂಜು ಜೂಜುಜೂಜು ಜೂಜುಜೂಜು
    ಕೇಳಿ ಪ್ರೇಮಿಗಳೇ ಪ್ರೇಮಿಯೇ ಪ್ರೇಮವ ಕೊಂದಳು
    ಕೇಳಿ ಪ್ರೇಮಿಗಳೇ ಪ್ರೇಮಿಯೇ ಪ್ರೇಮವ ಕೊಂದಳು


    ಯಾರೆ ನೀನು ರೋಜಾ ಹೂವೆ

    👉 
     *ಇದು ಹೂವಿನ ಲೋಕವೇ
    ಇಲ್ಲಿ ಗೆಳತಿಯರಿಲ್ಲವೇ
    ಹೇಗೆ ನಾ ಹಾಡಲಿ
    ಹೇಳಿ ಹೂಗಳೇ

    ಯಾರೆ ನೀನು ರೋಜಾ ಹೂವೆ
    ಯಾರೆ ನೀನು ಮಲ್ಲಿಗೆ ಹೂವೆ
    ಹೇಳೆ ಓ ಚೆಲುವೆ ಚೆಲುವಿನ ಹೂವೆ

    ಸೌಗಂಧ ಹೂವಲ್ಲಿ ಕೂಡಿಕೊಂಡಿತಂತೆ
    ಸೌಂದರ್ಯ ಹೆಣ್ಣಲ್ಲಿ ತುಂಬಿಕೊಂಡಿತಂತೆ
    ಸಂಗೀತ ನನ್ನಲ್ಲಿ ಸೇರಿಕೊಂಡಿತಂತೆ
    ಹೇ… ಹೇ…

    ಯಾರೆ ನೀನು ರೋಜಾ ಹೂವೆ
    ಯಾರೆ ನೀನು ಮಲ್ಲಿಗೆ ಹೂವೆ
    ಹೇಳೆ ಓ ಚೆಲುವೆ ಚೆಲುವಿನ ಹೂವೆ

    ***

    ಹೂವಿನಲ್ಲಿ ಹೆಣ್ಣಿನ ಅಂದ ನೋಡು
    ಹೆಣ್ಣಿನಲ್ಲಿ ಹೂವಿನ ಬಣ್ಣ ನೋಡು
    ಹೆಣ್ಣೇ ಹೂವೆಂದು ಪ್ರೀತಿ ಮಾಡು

    ಹೆಣ್ಣಿನಲ್ಲಿ ಸಂಗೀತ ಕೇಳಿ ನೋಡು
    ಸಂಗೀತಕ್ಕೆ ಸ್ಪೂರ್ತಿ ಹೆಣ್ಣು ನೋಡು
    ಹೆಣ್ಣೆ ಸಂಗೀತವೆಂದು ಹಾಡು

    ಅ ರಪಪಾಪಾಪಾ ರಪಪಾಪಾಪಾ ರಪಪಪ
    ಜಾಲಿ ಮಾಡು ಲೈಫಲೀ
    ಸೌಗಂಧ ಸೌಂದರ್ಯ ಸಂಗೀತ ನಿನ್ನದು

    ಯಾರೆ ನೀನು ರೋಜಾ ಹೂವೆ
    ಯಾರೆ ನೀನು ಮಲ್ಲಿಗೆ ಹೂವೆ
    ಹೇಳೆ ಓ ಚೆಲುವೆ ಚೆಲುವಿನ ಹೂವೆ

    ***

    ಹುಡ್ಗಿರಿಗೆ ನಾನೇ ರಾಜ ನಾನು
    ಹುಡ್ಗಿರಿಗೆ ಖದೀಮ ಕಳ್ಳ ನಾನು
    ಪ್ರಳಯಾಂತಕ ನಾನು ಕೇಳು ನೀನು

    ಲೋಕವೆಲ್ಲ ನನ್ನ ಪೋಕೇಟ್ ನಲ್ಲಿ
    ಸ್ನೇಹವೆಂಬ ಲೌಲಿ ರಾಕೆಟ್ ನಲ್ಲಿ
    ತೇಲಿ ಹಾಡೊ ಪ್ರೇಮಿ ನಾನು
    ಶಬಬಬ್ ಬಾಬ್ ರಾಬಬಾಬಾ ರಬಬಬ
    ಕೇಳಿ ನನ್ನ ಪ್ರೇಮಿಗಳೇ
    ಈ ಪ್ರೀತಿ ಅಭಿಮಾನ
    ಎಂದೆಂದೂ ನನ್ನದೂ

    ಯಾರೆ ನೀನು ರೋಜಾ ಹೂವೆ
    ಯಾರೆ ನೀನು ಮಲ್ಲಿಗೆ ಹೂವೆ
    ಹೇಳೆ ಓ ಚೆಲುವೆ ಚೆಲುವಿನ ಹೂವೆ

    ಸೌಗಂಧ ಹೂವಲ್ಲಿ ಕೂಡಿಕೊಂಡಿತಂತೆ
    ಸೌಂದರ್ಯ ಹೆಣ್ಣಲ್ಲಿ ತುಂಬಿಕೊಂಡಿತಂತೆ
    ಸಂಗೀತ ನನ್ನಲ್ಲಿ ಸೇರಿಕೊಂಡಿತಂತೆ
    ಹೇ… ಹೇ…
    ಹ್ಯಾ… ಹ್ಯಾ… ಹೇ… ಹೇ…
    ಹ್ಹೇ
    ರಾಪ ರಪಪ್ ಪಾಪಪಪ
    ಶಬ್ ರಬಬ್ ಬಾಬಬ
    ಲಾಲಲಾಲ ಲಾಲಲಾಲ ಲಾಲಲಾಹೇ
    ಲಾಲಲಾಹ್ಯಾ
    ತರನರ ತರನರ
    ಪಾಪಾಪ ರಪ ಪಾಪಪ