WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Friday, March 26, 2021

ಪೊಗರು ಲಿರಿಕ್ಸ್ ಸಾಂಗ್

👉




ಜೀವ ಕೊಟ್ಟವಳು ತುತ್ತು ಇಟ್ಟವಳು
ಭೂಮಿ ಮೇಲೆ ಒಬ್ಬಳೆ
ಪ್ರಾಣ ಒತ್ತೆ ಇಟ್ಟು ಜನ್ಮ ನೀಡುವಳು
ತಾಯಿ ಇಲ್ಲಿ ಒಬ್ಭಳೆ

ಕಾಣುವ ದೈವವೆ
ಕಂಬನಿ ಇಟ್ಟರೆ
ಬದುಕಿಗೆ ಅರ್ಥ ಎಲ್ಲಿದೆ?

ಕರುಣೆ ಕಣಜವೆ
ಕೊರಗಿ ನಿಂತರೆ
ನನ್ನುಸಿರೆ ನನ್ನ ಕೊಂದಿದೆ..

(X2)

ಋಣಿಯೇ ನಿನಗೆ ನಾನು ಅಮ್ಮ!

ಕಂದ ಕೂಗೋ ಕರೆಯೇ ಅಮ್ಮ
ನಿನ್ನ ಮಡಿಲಲಿ ಮಲಗುವಾಸೆ
ಮನದಲಿ ನಾ ಕೂಸೇ..

ನಿನ್ನ ಬಿಟ್ಟು ನಾನು ಎಲ್ಲೂ ಹೋಗಲಾರೆ
ನೀನೆ ನನ್ನ ಜಗವೇ..

ಕೈಯನು ಹಿಡಿದು ನೀ
ನನ್ನನ್ನು ನಡೆಸಿದೆ
ಕುರುಡನೆ ನಾನು ಅಮ್ಮ..

ಹಾದಿಯೇ ಕಾಣದ
ನನ್ನಯ ಪಯಣದಿ
ಧ್ರುವತಾರೆ ನೀನಮ್ಮ..

ನೋವ ಮರೆಸೋ ನಗುವೇ ಅಮ್ಮ
ಜೋಜೋ ಲಾಲಿಯಲ್ಲಿ ಜಗವನ್ನೇ ಮರೆಸುವ
ದೇವತೆ ಅಮ್ಮ..
ಎಷ್ಟೇ ತಪ್ಪು ಮಾಡಿದರು ಕ್ಷಮಿಸುವ
ಜೀವಿ ನೀನೆ ಅಮ್ಮ..

ಸ್ವಾರ್ಥವೇ ಇಲ್ಲದ
ಅರ್ಥಕು ಮೀರಿದ
ಭಾವನೆಯೇ ನೀನಮ್ಮ..

ಜೀವವೇ ಹೋದರು
ಕೊನೆಯ ಉಸಿರಲು
ನಿನ್ನ ಕಾಯುವೆನಮ್ಮ..

ಋಣಿಯೇ ನಿನಗೆ ನಾನು ಅಮ್ಮ!


👇ಯುವರತ್ನ ಲಿರಿಕ್ಸ್ ಸಾಂಗ್

👉

                     


 *ನಿನ್ನ ಜೊತೆ ನನ್ನ ಕಥೆ

ಒಂದೊಂದು ಸಾಲು ಜೀವಿಸಿದೆ

ನನ್ನ ಜೊತೆ ನಿನ್ನ ಕಥೆ

ಬೇರೊಂದು ಲೋಕ ಸೃಷ್ಟಿಸಿದೆ

ಎಂದು ಹೀಗೆ ಆಗೇ ಇಲ್ಲ

ಏನು ಇದರ ಸೂಚನೆ

ನೂರು ವಿಷಯ ಇದ್ದರೂನು

ನಿನ್ನದೊಂದೇ ಯೋಚನೆ

ಇಬ್ಬರಲ್ಲ ಒಬ್ಬರೀಗ

ನಾನಿನ್ನು ನಿನಗರ್ಪಣೆ

ನೀನಾದೆ ನಾ.. ನೀನಾಗೆ ನಾ..

ನಿನ್ನೊಂದಿಗೆ ಈ ಜೀವನ!

ನೀನಾದೆ ನಾ.. ನೀನಾಗೆ ನಾ..

ನಿನ್ನೊಂದಿಗೆ ಈ ಜೀವನ!

ನಿನ್ನ ಜೊತೆ ನನ್ನ ಕಥೆ

ಒಂದೊಂದು ಸಾಲು ಜೀವಿಸಿದೆ

ನನ್ನ ಜೊತೆ ನಿನ್ನ ಕಥೆ

ಬೇರೊಂದು ಲೋಕ ಸೃಷ್ಟಿಸಿದೆ

*ನೀನು ದೂರ ನಾನು ದೂರ

ಆದರೂ ಇಲ್ಲೇ ಈ ಕ್ಷಣದಲ್ಲೇ

ತಿರುಗುವ ಭುವಿಯಲ್ಲಿ

ಇರಲಿ ನಾನೆಲ್ಲೇ ಇರುವೆ ನಿನ್ನಲ್ಲೇ

ಎದೆಯ ಬಡಿತ ಹೃದಯ ತುಂಬಿ

ಉಸಿರಾಡುವಾಗ ವಿಪರೀತವೀಗ

ಒಂಟಿತನಕೆ ನೀನೆ ತಾನೇ

ಸರಿಯಾದ ಸಿಹಿಯಾದ ಪರಿಹಾರ ಈಗ

ಉಕ್ಕಿ ಬರುವ ಅಕ್ಕರೆಗೆ

ನಿನ್ನ ನೆರಳೆ ಉತ್ತರ

ಯಾವ ದೃಷ್ಟಿ ತಾಕದಂತೆ

ನಿನ ಕಣ್ಣೇ ನನ ಕಾವಲು

ನೀನಾದೆ ನಾ.. ನೀನಾಗೆ ನಾ..

ನಿನ್ನೊಂದಿಗೆ ಈ ಜೀವನ!

ನೀನಾದೆ ನಾ.. ನೀನಾಗೆ ನಾ..

ನಿನ್ನೊಂದಿಗೆ ಈ ಜೀವನ!

ನಿನ್ನ ಜೊತೆ ನನ್ನ ಕಥೆ

ಒಂದೊಂದು ಸಾಲು ಜೀವಿಸಿದೆ

ನನ್ನ ಜೊತೆ ನಿನ್ನ ಕಥೆ

ಬೇರೊಂದು ಲೋಕ ಸೃಷ್ಟಿಸಿದೆ

ಎಂದು ಹೀಗೆ ಆಗೇ ಇಲ್ಲ

ಏನು ಇದರ ಸೂಚನೆ

ನೂರು ವಿಷಯ ಇದ್ದರೂನು

ನಿನ್ನದೊಂದೇ ಯೋಚನೆ

ಇಬ್ಬರಲ್ಲ ಒಬ್ಬರೀಗ

ನಾನಿನ್ನು ನಿನಗರ್ಪಣೆ

ನೀನಾದೆ ನಾ.. ನೀನಾಗೆ ನಾ..

ನಿನ್ನೊಂದಿಗೆ ಈ ಜೀವನ!

ನೀನಾದೆ ನಾ.. ನೀನಾಗೆ ನಾ..

ನಿನ್ನೊಂದಿಗೆ ಈ ಜೀವನ!

ನೀನಾದೆ ನಾ.. ನೀನಾಗೆ ನಾ..

ನಿನ್ನೊಂದಿಗೆ ಈ ಜೀವನ!

ನೀನಾದೆ ನಾ.. ನೀನಾಗೆ ನಾ.. ನಿನ್ನೊಂದಿಗೆ ಈ ಜೀವನ!


ಯುವರತ್ನ


(01)JAGO JAGORE JAAGO
(02)NINNA JOTHE NANNA KATHE 
(03)SONGU KELI STEJU 
(04)ATTHI DESHAKKE YODA NAADIGE RAITHA 
(05)SOUND SONG

Tuesday, March 23, 2021

ನಿಮ್ಮ ಮಕ್ಕಳಿಗೆ ತಿಳಿಸಿ ಕೊಡಬೇಕಾದ ಮಾಹಿತಿ ಇದು ಜ್ಞಾನ-ಧಾರೆ ಒಂದು ಸರಿ ಓದಿ ತಿಳಿ,,,,,

ಮೇಲೆ ಸರಿಸುತ್ತ ಓದಿ 


ಸತ್ತ ಮಗುವನ್ನು ಸ್ಮಶಾನದ ಗುಂಡಿಯಿಂದ ಹೊರ ತೆಗೆಸಿದ ಅಮಾನವೀಯ ಘಟನೆ ತುಮಕೂರು


 

ಪರೀಕ್ಷೆಯಲ್ಲಿ ಕಾಪಿ ಮಾಡಲು ವಿದ್ಯಾರ್ಥಿ ಮಾಡಿದ ಪ್ಲಾನ್‌ ಕೇಳಿದ್ರೆ ದಂಗಾಗ್ತೀರಾ..!

 

ಬಿಹಾರದ ವೈಶಾಲಿ ಜಿಲ್ಲೆಯ ಬಿದುಪುರದಲ್ಲಿರುವ ಹೈಯರ್​ ಸೆಕೆಂಡರಿ ಶಾಲೆಯಲ್ಲಿ ಸೈನಿಕ ಹುದ್ದೆಗೆ ಭರ್ತಿ ಮಾಡಿಕೊಳ್ಳುವ ಸಲುವಾಗಿ ಪರೀಕ್ಷೆಯನ್ನ ನಡೆಸಲಾಗಿತ್ತು. ಈ ಪರೀಕ್ಷೆಯ ವೇಳೆ ಅಭ್ಯರ್ಥಿಯಿಂದ ಎಲೆಕ್ಟ್ರಾನಿಕ್​ ಡಿವೈಸ್​ ಒಂದನ್ನ ವಶಪಡಿಸಿಕೊಳ್ಳಲಾಗಿದೆ.

ಈ ಡಿವೈಸ್​ನ್ನು ಆತ ಮಾಸ್ಕ್​​ನ ಒಳಗಡೆ ಅಳವಡಿಸಿಕೊಂಡಿದ್ದ ಎನ್ನಲಾಗಿದೆ. ಪರೀಕ್ಷೆಯಲ್ಲಿ ಮಾಸ್ಕ್​ ಬಳಕೆ ಕಡ್ಡಾಯವಾಗಿದ್ದರಿಂದ ಅಭ್ಯರ್ಥಿ ನಕಲು ಮಾಡಲು ಇದೇ ಮಾಸ್ಕ್​ನ ಸಹಾಯ ಪಡೆಯಲು ಹೋಗಿ ಪೇಚಿಗೆ ಸಿಲುಕಿದ್ದಾನೆ. ಪರೀಕ್ಷೆಯ ವೇಳೆ ಚೆಕಿಂಗ್​ ಮಾಡಿದ ವೇಳೆ ಅಭ್ಯರ್ಥಿಯ ಈ ಕಳ್ಳಾಟ ಬಟಾಬಯಲಾಗಿದೆ.

ಅಶುತೋಶ್​ ಕುಮಾರ್​ ಹಾಗೂ ಮಮ್ರಾಜ್​​ ಎಂಬ ಅಧಿಕಾರಿಗಳು ಅಭ್ಯರ್ಥಿಯು ಮಾಸ್ಕ್​​ನ ಒಳಗಡೆ ಅಡಗಿಸಿ ಇಟ್ಟಿದ್ದ ಈ ಡಿವೈಸ್​ನ್ನು ಪತ್ತೆ ಮಾಡಿದ್ದಾರೆ. ಇದರಲ್ಲಿ ಪ್ರಶ್ನೆ ಪತ್ರಿಕೆ ಸಂಬಂಧಿಸಿದ ಉತ್ತರಗಳಿದ್ದವು ಎನ್ನಲಾಗಿದೆ.

ಆರೋಪಿ ಅಭ್ಯರ್ಥಿ ವಿಶಾಲ್​ ಕುಮಾರ್​​ರನ್ನ ಪರೀಕ್ಷಾ ಹಾಲ್​ನಿಂದ ಹೊರಗಟ್ಟಲಾಗಿದೆ.

ಈ ಮಾಸ್ಕ್​ನ ಫೋಟೋ ನೋಡಿದ ಮೊಬೈಲ್​ ಅಂಗಡಿ ಮಾಲೀಕರೊಬ್ಬರು ಈ ಮಾಸ್ಕ್​ ಮೊಬೈಲ್​ನಂತೆ ಕೆಲಸ ಮಾಡುವ ರೀತಿಯಲ್ಲಿ ಮಾರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಮೊಬೈಲ್​​ನ ಬಿಡಿ ಭಾಗಗಳನ್ನ ಮಾಸ್ಕ್​​ನ ಒಳಕ್ಕೆ ಅಳವಡಿಸಿ ಈ ಡಿವೈಸ್​ನ್ನು ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ರು.

(ಮಾಹಿತಿ ಕೃಪೆ ಕನ್ನಡ ದುನಿಯಾ)

Monday, March 22, 2021

ಸತ್ಯ ಯುಗ ಮಾಹಿತಿ

 


ʼಇಯರ್ ​ಫೋನ್​ʼ ಬಳಸ್ತೀರಾ.? ಹಾಗಾದ್ರೆ ಮಿಸ್‌ ಮಾಡದೆ ಓದಿ ಈ ಸುದ್ದಿ


 ಮೊಬೈಲ್​ ಫೋನ್​ನಲ್ಲಿ ಮಾತನಾಡುವ ವೇಳೆ ಇಲ್ಲವೇ ತಮ್ಮಿಷ್ಟದ ಸಂಗೀತವನ್ನ ಕೇಳುವ ವೇಳೆ ಇಯರ್​ಫೋನ್​ಗಳನ್ನ ಬಳಕೆ ಮಾಡೋದು ಅಭ್ಯಾಸ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತೆ. ಅದರಲ್ಲೂ ಯುವ ಜನತೆಯಂತೂ ದಿನದಲ್ಲಿ ಹೆಚ್ಚು ಬಾರಿ ಇಯರ್​​ಫೋನ್​ಗಳನ್ನ ಕಿವಿಗೆ ಸಿಕ್ಕಿಸಿಕೊಂಡೇ ತಿರುಗ್ತಾ ಇದ್ದಾರೆ.

ಬಹುಶಃ ನಿಮಗೂ ಕೂಡ ಈ ಅಭ್ಯಾಸ ಇದ್ದಿರಬಹುದು. ಒಂದು ವೇಳೆ ನೀವು ಕೂಡ ಇಯರ್ ​ಫೋನ್​ಗಳನ್ನ ಸಿಕ್ಕಾಪಟ್ಟೆ ಬಳಕೆ ಮಾಡುವವರ ಪೈಕಿಗೆ ಸೇರಿದ್ದರೆ ನೀವು ಈ ಸ್ಟೋರಿಯನ್ನ ನೋಡಲೇಬೇಕು. ಯಾಕಂದರೆ ಇಯರ್ ​ಫೋನ್​​ಗಳನ್ನ ಅತಿ ಹೆಚ್ಚು ಸಮಯ ಬಳಕೆ ಮಾಡೋದ್ರಿಂದ ನಿಮ್ಮ ಕಿವಿಯ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚಿದೆ. ಇದು ನಿಮ್ಮನ್ನ ಶಾಶ್ವತ ಕಿವುಡರನ್ನಾಗಿ ಮಾಡಲೂಬಹುದು.

ಸೋಂಕು ತಗಲುವ ಸಾಧ್ಯತೆ:

ಬಹಳ ಸಮಯದವರೆಗೆ ಇಯರ್ ​ಫೋನ್​ಗಳನ್ನ ಕಿವಿಗೆ ಹಾಕಿಕೊಂಡೇ ಇರೋದ್ರಿಂದ ಕಿವಿಯಲ್ಲಿ ಸೋಂಕು ಉಂಟಾಗಬಹುದು.  ಹೀಗಾಗಿ ಯಾರ ಜೊತೆಯಾದರು ನೀವು ಇಯರ್ ​ಫೋನ್​ ಹಂಚಿಕೊಳ್ಳುವ ಅಭ್ಯಾಸ ಹೊಂದಿದ್ದರೆ ಪ್ರತಿ ಬಾರಿ ಇಯರ್​ ಫೋನ್ ಬಡ್​ಗೆ ಸ್ಯಾನಿಟೈಸರ್ ಹಾಕಲು ಮರೆಯದಿರಿ.

ಕಿವುಡತನ ಉಂಟಾಗುವ ಸಾಧ್ಯತೆ:

ಇಯರ್​​ ಫೋನ್​ ಗಳನ್ನ ದಿನವಿಡಿ ಬಳಕೆ ಮಾಡೋದ್ರಿಂದ ಶ್ರವಣ ಸಾಮರ್ಥ್ಯ 40 ರಿಂದ 50 ಡೆಸಿಬಲ್​ವರೆಗೆ ಕಡಿಮೆಯಾಗಬಹುದು. ಕಿವಿಯ ಪರದೆ ವೈಬ್ರೇಟ್​ ಆಗಲು ಶುರುವಾಗುತ್ತೆ. ದೂರದ ಶಬ್ದಗಳು ನಿಮಗೆ ಕೇಳದೆಯೂ ಇರಬಹುದು. ಅಲ್ಲದೇ ಶಾಶ್ವತ ಕಿವುಡುತನ ಕೂಡ ಉಂಟಾಗಬಹುದು.

ಮಾನಸಿಕ ಸಮಸ್ಯೆ:

ದೊಡ್ಡ ಧ್ವನಿಯಲ್ಲಿ ಹಾಡುಗಳನ್ನ ಕೇಳೋದ್ರಿಂದ ಮಾನಸಿಕ ಸಮಸ್ಯೆ, ಹೃದ್ರೋಗ ಹಾಗೂ ಕ್ಯಾನ್ಸರ್​​ ಉಂಟಾಗುವ ಸಾಧ್ಯತೆ ಇದೆ.

ಮೆದುಳಿನ ಮೇಲೆ ದುಷ್ಪರಿಣಾಮ: ದೀರ್ಘಕಾಲದವರೆಗೆ ಇಯರ್​ ಫೋನ್ ​ಗಳನ್ನ ಬಳಕೆ ಮಾಡೋದ್ರಿಂದ ಮೆದುಳಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಲ್ಲದು. ಈ ಎಲ್ಲಾ ಗಂಭೀರ ಪರಿಣಾಮಗಳಿಂದ ಪಾರಾಗಲು ಇಯರ್ ​ಫೋನ್​ಗಳ ಬಳಕೆ ಆದಷ್ಟು ಕಡಿಮೆ ಮಾಡಿ.

(ಮಾಹಿತಿ ಕೃಪೆ ಕನ್ನಡ ದುನಿಯಾ) Date:- 21/03/2021