ಲೈಟ್ ಬಾಯ್ ಆಗಿದ್ದ ಆಯುಷ್ ಮಲ್ಲಿ ಸಿನಿಮಾ ಸಾಹಸ
ಉತ್ತರ ಕರ್ನಾಟಕದ ಜನಜೀವನ ಕುರಿತ ಪಪ್ಪಿ ಸಿನಿಮಾ ಟ್ರೇಲರ್ ಬಹಳ ಸದ್ದು ಮಾಡುತ್ತಿದೆ. ಈ ಸಿನಿಮಾದ ನಿರ್ದೇಶಕ ಆಯುಷ್ ಮಲ್ಲಿ ತನ್ನ ಬದುಕಿನ ಕಥೆ, ಸಿನಿಮಾ ಮಾಡಿದ ಸಾಹಸಗಳನ್ನಿಲ್ಲಿ ವಿವರಿಸಿದ್ದಾರೆ.
* ಪ್ರಿಯಾ ಕೆರ್ವಾಶೆ
* ನನ್ನ ಹುಟ್ಟೂರು ಉತ್ತರ ಕರ್ನಾಟಕದ ಸಿಂಧನೂರು. ಪಿಯುಸಿಯಲ್ಲಿ ಡುಮ್ಮಿ ಹೊಡೆದೆ. ಆಮೇಲೆ ಸಿನಿಮಾ ಮಾಡಬೇಕು ಅಂತ ಬೆಂಗಳೂರಿ ಗೇನೋ ಬಂದೆ. ಐಬಿಎಂನಲ್ಲಿ ಇಟ್ಟಿಗೆ ಶಿಫ್ಟ್ ಮಾಡುವ ಕೆಲಸಕ್ಕೆ ಸೇರಿಕೊಂಡೆ. ಮುಂದೆ ಸೀರಿಯಲ್ ಸೆಟ್‌ನಲ್ಲಿ ಲೈಟ್ ಬಾಯ್ ಕೆಲಸ ಸಿಕ್ಕಿತು. ಆಮೇಲೆ ಅಲ್ಲೇ ಪ್ರೊಡಕ್ಷನ್ ಬಾಯ್, ಅಸಿಸ್ಟೆಂಟ್ ಡೈರೆಕ್ಟರ್ ತನಕ ಕೆಲಸ ಸಿಕ್ಕಿತು.
* ಕಳೆದ ನಾಲೈದು ವರ್ಷಗಳಿಂದ ಸರಿಯಾದ ಅವಕಾಶ ಸಿಗದೆ ಊರು, ಬೆಂಗಳೂರಿನ ನಡುವೆ ಅಲೆದಾಡುತ್ತಿದ್ದೆ. ತುಂಬಿದ ಬಸ್ಸಿನಲ್ಲಿ ನಮ್ಮೂರ ಜನರ ಜೊತೆ ಓಡಾಟ. ಡಾಬಾದಲ್ಲಿ ಊಟಕ್ಕೆ ಅಂತ ಬಸ್ ನಿಲ್ಲಿಸಿದರೆ ಜನ ಅಲ್ಲಿ ಊಟ ಮಾಡಲು ದುಡ್ಡಿಲ್ಲದೆ, ದೂರದಲ್ಲಿ ಕೂತು ತಾವು ಮನೆಯಿಂದ ಕಟ್ಟಿಕೊಂಡು ಬಂದ ಒಣರೊಟ್ಟಿ, ಖಾರಪುಡಿ ತಿನ್ನುತ್ತಿದ್ದರು. ಕೆಲವರು ಬಸ್ಸಿಗೂ ಕಾಸಿಲ್ಲದೆ ಟ್ರಕ್‌ನಲ್ಲಿ ಓಡಾಡುತ್ತಿದ್ದರು. ಆದರೂ ಬೆಂಗಳೂರಿಗೆ ಬಂದಿಳಿದಾಗ ಅವರ ಮುಖದಲ್ಲೊಂದು ಹುಮ್ಮಸ್ಸು, ವಿಧಾನಸೌಧ ಕಂಡಾಗ ಆಗುವ ಖುಷಿ ಇವೆಲ್ಲ ನನ್ನನ್ನು ಬಹಳ ಕಾಡಿಸಿತ್ತು. ಇದನ್ನೆಲ್ಲ ಸಿನಿಮಾ ಮೂಲಕ ಹೇಳಬೇಕು ಅಂತ ತೀವ್ರವಾಗಿ ಅನಿಸುತ್ತಿತ್ತು.
* ಸಿನಿಮಾ ಮಾಡೇ ಬಿಡಾಣ ಅನಿಸಿತು. ಕೆಲಸಕ್ಕಿಳಿದೆ. ಕಥೆ ತಲೆಯಲ್ಲಿತ್ತು. ಕ್ಯಾಮರಾಮೆನ್
ಸುರೇಶ್ ಬಾಬು ಹಾಗೂ ಸಿಂಕ್ ಸೌಂಡ್ ಕೆಲಸ ಮಾಡುತ್ತಿದ್ದ ಸ್ನೇಹಿತನ ಸಮೇತ ಸಿನಿಮಾ ಕೆಲಸ ಶುರು ಮಾಡಿದೆ. ನನಗೆ ಸೀರಿಯಸ್ ಸಿನಿಮಾ ಜನ ನೋಡುತ್ತಾರೆ ಅನ್ನುವ ನಂಬಿಕೆ ಇಲ್ಲ. ಜೊತೆಗೆ ದೊಡ್ಡವರ ಮೂಲಕ ಕಥೆ ಹೇಳೋದಕ್ಕಿಂತ ಹುಡುಗರ ಮೂಲಕ ಹೇಳಿದರೆ ಪರಿಣಾಮಕಾರಿ ಅನಿಸಿತು. ಹಾಗೆ ರೀಲ್ಸ್ ಮಾಡುತ್ತಿದ್ದ ಕೊಪ್ಪಳದ ಹುಡುಗ ಜಗದೀಶ ಮತ್ತು ನನ್ನ ಸಂಬಂಧಿ ಆದಿ