WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Saturday, May 22, 2021

ಹಾಯಾಗಿದೆ ಎದೆಯೊಳಗೆ ಝಲ್ಲೆಂದಿದೆ ಈ ಗಳಿಗೆ

 



👉 
 *ತನನ ನನ್ನಾನೆ...ಹೇ ತನನ ನನ್ನಾನೆ...ಹೇ
ತನನ ನನ್ನಾನೆ...ಹೇ ತನನ ನನ್ನಾನೆ...ಹೇ
ಹಾಯಾಗಿದೆ ಎದೆಯೊಳಗೆ...
ಝಲ್ಲೆಂದಿದೆ ಈ ಗಳಿಗೆ...
ನೀ ನೋಡೋ ನೋಟವೆಲ್ಲಾ
ನನ್ನನ್ನೇ ಕೊಲ್ಲೊ ಹಾಗೆ
ನೀ ಮೋಡಿ ಮಾಡುವಾಗ
ನಾ ಸೋತು ನಿಂತ ಹಾಗೆ
ನೀನೆಂತ ಮಾಯಾಗಾರ್ತಿಯೇ...
ಹಾಯಾಗಿದೆ ಎದೆಯೊಳಗೆ...ಹೇ
ಝಲ್ಲೆಂದಿದೆ (ಈ ಗಳಿಗೆ)
ಆ ಆ ಆ ಆ ಆ
ಆ ಆ ಆ ಆ ಆ ಆ
ಈಗೀಗ ಏನೋ ನನ್ನನ್ನು ನೀನೆ
ದೋಚಿಟ್ಟ ಹಾಗೆ ಒಳಗೊಳಗೆ
ಲೈಲಾಮಜುನು ಆಗೋದೆ ನಾನು
ಬೇಜಾನು ಬ್ಯೂಟಿ ನೀ ನಗುವಾಗ
ಕೈಬೀಸಿ ನಿಂತಾಗ……ಹಾ
ಏನಾದೆ ನಾನೀಗ…..ಹಾ
ನೀ smile ಕೊಟ್ಟಾಗ....ಹಾಹಾ
ಕಳೆದೋದ ನಾನೀಗ...
ಹಾಯಾಗಿದೆ ಎದೆಯೊಳಗೆ...
ಝಲ್ಲೆಂದಿದೆ ಈ ಗಳಿಗೆ...
ನೀ ನೋಡೋ ನೋಟವೆಲ್ಲಾ
ನನ್ನನ್ನೇ ಕೊಲ್ಲೋ ಹಾಗೆ
ನೀ ಮೋಡಿ ಮಾಡುವಾಗ
ನಾ ಸೋತು ನಿಂತ ಹಾಗೆ
ನೀನೆಂತ ಮಾಯಾಗಾರ್ತಿಯೆ...
ಹಾಯಾದ ಎದೆಯೊಳಗೆ ಝಲ್ಲಂದಿದೆ…….
ಆ ಆ ಆ ಆ ಆ ಆ
ತನನ ನನ್ನಾನೆ ತನನ ನನ್ನಾನೆ

ಸ್ಮಾರ್ಟ್ ಫೋನಿನಲ್ಲಿ Instagram Reels ಡೌನ್ ಲೋಡ್ ಮಾಡುವ ಸರಳ ವಿಧಾನ ತಿಳಿಯಿರಿ

 

ನವದೆಹಲಿ : ಫೋಟೋ ಮತ್ತು ವೀಡಿಯೊ ಶೇರ್ ಮಾಡಲು ಇರುವ ಜನಪ್ರಿಯ ಅಪ್ಲಿಕೇಶನ್ ಗಳಲ್ಲಿ ಇನ್ಸ್ಟಾಗ್ರಾಮ್ ಕೂಡಾ ಒಂದು. ಹೆಚ್ಚಿನ ಸಂಖ್ಯೆಯ ಜನರು ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ವೀಕ್ಷಿಸುವುದರಲ್ಲೇ ಕಾಲ ಕಳೆಯುತ್ತಾರೆ. ಇನ್‌ಸ್ಟಾಗ್ರಾಮ್ ಇದರಲ್ಲಿರುವ ಕಂಟೆಂಟ್ ಗಳನ್ನು ಡೌನ್‌ಲೋಡ್ ಮಾಡಲು ಅನುಮತಿಸುವುದಿಲ್ಲ. ಆದರೂ ಕೆಲ ವಿಧಾನಗಳನ್ನು ಅನುಸರಿಸುವ ಮೂಲಕ Instagram ಕಂಟೆಟ್ ಗಳನ್ನು ಡೌನ್‌ಲೋಡ್ ಮಾಡಬಹುದು. 

ಬಳಕೆದಾರರು Instagram ಪೋಸ್ಟ್‌ಗಳು ಮತ್ತು ಸ್ಟೋರಿಗಳನ್ನು ಸೇವ್ ಮಾಡಿಕೊಳ್ಳಬಹುದು. ಹೀಗೆ ಸೇವ್ ಮಾಡಿಕೊಂಡ ವಿಡಿಯೋಗಳನ್ನು ಯಾವಾಗ ಬೇಕಾದರೂ ವೀಕ್ಷಿಸಬಹುದು. ಅದೇ ರೀತಿ, ಅದೇ ರೀತಿ, ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು (Instagram Reels) ಸಹ ಸೇವ್ ಮಾಡಿಕೊಳ್ಳಬಹುದು, ಮಾತ್ರವಲ್ಲ ನಿಮ್ಮ ಸ್ಮಾರ್ಟ್‌ಫೋನ್‌ ನಲ್ಲಿ ಅದನ್ನು ಡೌನ್‌ಲೋಡ್ ಕೂಡಾ ಮಾಡಿಕೊಳ್ಳಬಹುದು. ಮತ್ತು ವೀಡಿಯೊ ಪ್ಲೇಯರ್ ಅಪ್ಲಿಕೇಶನ್‌ ಸಹಾಯದಿಂದ ಅವುಗಳನ್ನು ಯಾವಾಗ ಬೇಕಾದರೂ ವೀಕ್ಷಿಸಬಹುದು. 

ಇದನ್ನೂ ಓದಿ : face book ಡಾಟಾ ಲೀಕ್ ಆಗುವುದನ್ನು ತಡೆಯಲು ಈ setting ಇಟ್ಟುಕೊಳ್ಳಿ.. 


ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಸೇವ್ ಮಾಡುವುದು ಹೇಗೆ ? 

- Instagram ರೀಲ್‌ಗಳನ್ನು ಸೇವ್ ಮಾಡಲು ಯಾವ Reels Video ಸೇವ್ ಮಾಡಬೇಕೋ ಅದನ್ನು ಒಪನ್ ಮಾಡಿ 

- ನಂತರ ಅಲ್ಲಿ ಕಾಣುವ ಮೂರು ಡಾಟ್ ಐಕಾನ್ ಮೇಲೆ ಕ್ಲಿಕ್ ಮಾಡಿ. 

- ನಂತರ ಸೇವ್ ಬಟನ್ ಕ್ಲಿಕ್ ಮಾಡಿ. 

- ಈಗ ಈ Reels ನೋಡಲು, ಸೆಟ್ಟಿಂಗ್‌ಗೆ ಹೋಗಿ ಮತ್ತು Account ಮೇಲೆ ಕ್ಲಿಕ್ ಮಾಡಿ ಮತ್ತು Save ವಿಭಾಗಕ್ಕೆ ಹೋಗಿ. 

- ಇಲ್ಲಿ ನೀವು ಸೇವ್ ಮಾಡಿರುವ ಎಲ್ಲಾ Reels ನೋಡಬಹುದು 

ಇದನ್ನೂ ಓದಿ : Xiaomi Mi 10i 5G: 108MP ಕ್ಯಾಮೆರಾ ಸ್ಮಾರ್ಟ್‌ಫೋನ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸುವ ಅವಕಾಶ 

Instagram Reels ಡೌನ್‌ಲೋಡ್ ಮಾಡುವುದು ಹೇಗೆ? 

Instagram Reels ಡೌನ್‌ಲೋಡ್ ಮಾಡುವ ವಿಧಾನವೂ ತುಂಬಾ ಸುಲಭ. ಆನ್‌ಲೈನ್ ಟೂಲ್ಸ್ ಗಳನ್ನು ಬಳಸಿಕೊಂಡು ನೀವು ಅದನ್ನು ಸುಲಭವಾಗಿ ನಿಮ್ಮ ಸ್ಮಾರ್ಟ್‌ಫೋನ್‌ಗೆ ಡೌನ್‌ಲೋಡ್ ಮಾಡಬಹುದು. 

- ಇದಕ್ಕಾಗಿ, ನೀವು ಮಾಡಬೇಕಾಗಿರುವುದು ಇಷ್ಟೇ.. Reels Videoದ URL ಅನ್ನು ಆನ್‌ಲೈನ್ ಟೂಲ್ಸ್ ಗೆ ಪೇಸ್ಟ್ ಮಾಡಿ. ಇಷ್ಟಾದರೆ ನಿಮ್ಮ ಸ್ಮಾರ್ಟ್‌ಫೋನ್‌ ನಲ್ಲಿ ವಿಡಿಯೋ ಡೌನ್‌ಲೋಡ್ ಆಗಿರುತ್ತದೆ. 

- ಇದಕ್ಕಾಗಿ ನೀವು Instafista ಮತ್ತು Ingrammer ಸೇರಿದಂತೆ ಇತರ ಆನ್‌ಲೈನ್ ಟೂಲ್ಸ್ ಗಳನ್ನು ಬಳಸಬಹುದು. 

- ಇನ್‌ಸ್ಟಾಗ್ರಾಮ್ ರೀಲ್ಸ್ URL ಪಡೆಯಲು, ನೀವು Reels Videoದಲ್ಲಿನ ಮೂರು ಡಾಟ್ ಐಕಾನ್‌ಗೆ ಹೋಗಿ Copy Link Option ಮೇಲೆ ಕ್ಲಿಕ್ ಮಾಡಿ. URL ಕಾಪಿಯಾಗುತ್ತದೆ. 

- ಇದಲ್ಲದೆ, Google Play Storeಗೆ ಹೋಗಿ, ಥರ್ಡ್ ಪಾರ್ಟಿ ಆಯಪ್ ಮೂಲಕ ಕೂಡಾ Instagram Reelsಗಳನ್ನು ಡೌನ್‌ಲೋಡ್ ಮಾಡಬಹುದು. 

ಇದನ್ನೂ ಓದಿ : WhatsApp New Feature: WhatsAppನಲ್ಲಿ ಬಂತು ಮತ್ತೊಂದು ಹೊಸ ವೈಶಿಷ್ಟ್ಯ, ಇಲ್ಲಿದೆ ಡೀಟೇಲ್ಸ್ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... 

Android Link - https://bit.ly/3hDyh4G 

Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

(ಮಾಹಿತಿ ಕೃಪೆ Zee News ಕನ್ನಡ)

ಆಮ್ಲಜನಕ ಉತ್ಪಾದನಾ ಘಟಕಕ್ಕೆ ಭೂಮಿಪೂಜೆ

 

ಚನ್ನಗಿರಿ: 'ರಾಜ್ಯದಾದ್ಯಾಂತ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ಮನಗಂಡು ಕೆಎಸ್‌ಡಿಎಲ್‌ನಿಂದ ₹ 1 ಕೋಟಿ ವೆಚ್ಚದಲ್ಲಿ 500 ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ತಯಾರಿಕಾ ಘಟಕವನ್ನು ಇಲ್ಲಿ ಪ್ರಾರಂಭಿಸುತ್ತಿರುವುದು ಸ್ವಾಗತಾರ್ಹ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ. ಸುಧಾಕರ್ ತಿಳಿಸಿದರು. 


ಪಟ್ಟಣದ ಸರ್ಕಾರಿ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಕೆಎಸ್‌ಡಿಎಲ್‌ನಿಂದ ಆಮ್ಲಜನಕ ತಯಾರಿಕಾ ಘಟಕದ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. 


ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಸ್ವಂತ ಖರ್ಚಿನಿಂದ 30 ಹಾಸಿಗೆ, ದಿಂಬು, ಮಂಚಗಳನ್ನು ವ್ಯವಸ್ಥೆ ಮಾಡಿದ್ದಾರೆ. ಈ ಎಲ್ಲಾ ಹಾಸಿಗಗಳಿಗೂ ಅತಿ ಶೀಘ್ರದಲ್ಲಿ ಆಮ್ಲಜನಕ ಪೂರೈಸುವ ವ್ಯವಸ್ಥೆ ಮಾಡಲಾಗುವುದು. ವೈದ್ಯರು ಹಾಗೂ ದಾದಿಯರ ಕೊರತೆ ಬಗ್ಗೆ ಗಮನಹರಿಸಲಾಗುವುದು. 6 ವೆಂಟಿಲೇಟರ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಇದ್ದು, ನಾಲ್ಕೈದು ದಿನಗಳಲ್ಲಿ ವೆಂಟಿಲೇಟರ್‌ಗಳನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. 


ಇನ್ನೊಂದು ವಾರದೊಳಗೆ ಇಲ್ಲಿನ ಆರೋಗ್ಯ ಕೇಂದ್ರಕ್ಕೆ ಅಗತ್ಯವಾದ ಎಲ್ಲ ರೀತಿಯ ಸಲಕರಣೆಗಳನ್ನು ಇಲಾಖೆಯಿಂದ ಪೂರೈಸಲಾಗುವುದು. 30 ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳನ್ನು ವ್ಯವಸ್ಥೆ ಮಾಡಿರುವುದು ಸ್ವಾಗತಾರ್ಹ. ತಕ್ಷಣ ದಾವಣಗೆರೆ ಚಿಗಟೇರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಸತೀಶ್ ಅವರನ್ನು ಶಾಸಕರ ಮನವಿ ಮೇರೆಗೆ ನಿಯೋಜನೆ ಮಾಡಲು ಆದೇಶಿಸಲಾಗಿದೆ. ಆರೋಗ್ಯ ಕೇಂದ್ರಕ್ಕೆ 50 ಹಾಸಿಗೆಗಳಿಗೆ ಆಮ್ಲಜನಕ ಪೂರೈಸಲು ಹಾಗೂ 30 ಜಂಬೋ ಸಿಲಿಂಡರ್‌ಗಳನ್ನು ನೀಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. 

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಒ ವಿಜಯ ಮಹಾಂತೇಶ ದಾನಮ್ಮನವರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಡಿಎಚ್‌ಒ ಡಾ. ನಾಗರಾಜ್, ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಿ, ತಹಶೀಲ್ದಾರ್ ಪಟ್ಟರಾಜಗೌಡ, ತಾಲ್ಲೂಕು ವೈದ್ಯಾಧಿಕಾರಿ ಡಾ. ಪ್ರಭು ಇದ್ದರು.

(ಮಾಹಿತಿ ಕೃಪೆ ಪ್ರಜಾವಾಣಿ)


ಹ್ಯಾಪಿ ಬರ್ತ್​ಡೇ ಷೆರ್ಲಾಕ್ ಹೋಮ್ಸ್​!

 

ಸಾಮಾನ್ಯವಾಗಿ ಮಕ್ಕಳಿಗೆ ಓದುವ ಹವ್ಯಾಸ ಶುರುವಾಗುವುದು ಪತ್ತೆದಾರಿ ಪುಸ್ತಕಗಳ ಮೂಲಕ. ಇದರಲ್ಲಿ ಬರುವ ಕ್ಲಿಷ್ಟ ಸನ್ನಿವೇಶ, ವೈಜ್ಞಾನಿಕ ವಿವರ, ಅತ್ಯಾಧುನಿಕ ತಂತ್ರಜ್ಞಾನ… ಮುಂತಾದವು ಎಳೆಯ ಮನಸ್ಸಿಗೆ ಮುದ ನೀಡುವ ಕಾರಣ ಬಾಲ್ಯದ ಓದಿಗೆ ಎಲ್ಲಕ್ಕಿಂತ ಹೆಚ್ಚು ರುಚಿಸುವುದೇ ಇಂಥ ಪುಸ್ತಕಗಳು. ಇವುಗಳ ಪೈಕಿ ಶತಮಾನಗಳಿಂದಲೂ ಅತಿ ಹೆಚ್ಚು ಚಲಾವಣೆಯಲ್ಲಿ ಇರುವುದು ಡಿಟೆಕ್ಟಿವ್ ಷೆರ್ಲಾಕ್ ಹೋಮ್ಸ್. 

ಷೆರ್ಲಾಕ್‌ ಹೋಮ್ಸ್‌ ಪುಸ್ತಕದ ಲೇಖಕ ಸರ್ ಆರ್ಥರ್ ಕಾನನ್ ಡಾಯ್ಲ್ ಅವರ ಹುಟ್ಟಿದ ದಿನವಾದ ಮೇ 22. ಈ ದಿನವನ್ನು ಷೆರ್ಲಾಕ್ ಹೋಮ್ಸ್‌ ಬರ್ತ್‌ಡೇ ಎಂದು ಆಚರಿಸಲಾಗುತ್ತದೆ 

ಮನು ಎಚ್.ಎಸ್. ಹೆಗ್ಗೋಡು 

ಲಂಡನ್ ನಗರದ ಬೇಕರ್ ರಸ್ತೆಯ ಮನೆ ನಂಬರ್ 221B ಯಲ್ಲಿ ವಾಸಿಸುತ್ತಿರುವ, ಸದಾ ಕಪ್ಪು ಕನ್ನಡಕ ಧರಿಸಿರುವ ನುಣುಪು ಕೆನ್ನೆಯ ಷೆರ್ಲಾಕ್‌ ಹೋಮ್ಸ್‌ಗೆ ಈಗ ಹತ್ತಿರ 135 ವರ್ಷಗಳು! ಮೇ 22 ಈತನ ಜನ್ಮದಿನ. ಈ ವಿಳಾಸಕ್ಕೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಶತಮಾನದಿಂದಲೂ ಬರುತ್ತಿರುವ ಪತ್ರಗಳಿಗೆ ಲೆಕ್ಕವೇ ಇಲ್ಲ. ಆದರೆ ಈಗ ಯಾರಾದರೂ ಪತ್ರ ಬರೆದರೆ, ಷೆರ್ಲಾಕ್‌ ಅಭಿಮಾನಿಗಳು 'ಹೋಮ್ಸ್ ಈಗ ವೃದ್ಧಾಪ್ಯದಲ್ಲಿರುವ ಕಾರಣ, ಪತ್ತೇದಾರಿಕೆಯಿಂದ ನಿವೃತ್ತರಾಗಿದ್ದಾರೆ, ಯಾವ ಹೊಸ ಕೇಸ್‌ಗಳನ್ನೂ ತೆಗೆದುಕೊಳ್ಳುತ್ತಿಲ್ಲ. ಕ್ಷಮಿಸಿ' ಎಂದು ರಿಪ್ಲೈ ಬರೆಯಬಹುದಷ್ಟೆ! 

ಯೌವನದ ದಿನಗಳಲ್ಲಿ ಇದೇ ಷೆರ್ಲಾಕ್‌ ಅದೆಷ್ಟು ಸಾಹಸಗಳನ್ನು ಮಾಡಿದ್ದಾನೋ ಲೆಕ್ಕವೇ ಇಲ್ಲ. ಸಮಸ್ಯೆ ಹೇಳಿಕೊಂಡು ಒಂದು ಪತ್ರ ಬರೆದಿದ್ದರೂ ಸಾಕು, ಅವರ ಗಮನಕ್ಕೆ ಬರುವ ಮೊದಲೇ ಸಮಸ್ಯೆಯ ಮೂಲವನ್ನು ಕೆದಕಿ ಅದಕ್ಕೆ ಕಾರಣರಾದವರಿಗೆ ಒಂದು ಗತಿ ಕಾಣಿಸಿದ ಮೇಲೆ 'ಹೆದರಬೇಡಿ, ನಿಮ್ಮ ಸಮಸ್ಯೆ ಬಗೆಹರಿದಿದೆ. ಇಂತಿಂಥ ವ್ಯವಸ್ಥೆ ಮಾಡಿದ್ದೇನೆ' ಎನ್ನುವ ಅಭಯವನ್ನು ಕೊಡುವಂಥ ಆಪದ್ಬಾಂಧವ. 

ಈಗ ಮನೆ ನಂಬರ್ 221B ಹುಡುಕಿ ಹೋದರೂ ವೃದ್ಧ ಹೋಮ್ಸ್‌ನ ಭೇಟಿಗೆ ಅವಕಾಶ ಸಿಗುವುದಿಲ್ಲ. ಈತ ಬಳಸುತ್ತಿದ್ದ ಉದ್ದನೆಯ ಕೋಟು, ಕಪ್ಪು ಕನ್ನಡಕ, ಸದಾ ಧರಿಸುತ್ತಿದ್ದ ಹ್ಯಾಟ್, ಹೊರಗೆ ಹೋಗುವಾಗ ರಕ್ಷಣೆಗೆ ಬಳಸುತ್ತಿದ್ದ ಬೆತ್ತದ ಕೋಲು, ಪತ್ತೇದಾರಿಕೆ ಕೆಲಸದಲ್ಲಿ ಬಳಸುತ್ತಿದ್ದ ಭೂತಗನ್ನಡಿ… ಇವೆಲ್ಲವನ್ನೂ ಅಲ್ಲಿ ನೋಡಬಹುದು. ಆತನ ಮನೆ ಈಗ ಮ್ಯೂಸಿಯಂ! 

ಯಾರು ಈ ಷೆರ್ಲಾಕ್‌? 

ಸರ್‌ ಆರ್ಥರ್ ಕಾನನ್ ಡಾಯ್ಲ್ ಎಂಬ ಬ್ರಿಟಿಷ್ ಲೇಖಕ ಸೃಷ್ಟಿಸಿರುವ ಕಾಲ್ಪನಿಕ ಪಾತ್ರ ಈ ಷೆರ್ಲಾಕ್ ಹೋಮ್ಸ್‌. 56 ಸಣ್ಣ ಕತೆಗಳಲ್ಲಿ ಹಾಗೂ ನಾಲ್ಕು ಕಾದಂಬರಿಗಳಲ್ಲಿ ಪತ್ತೇದಾರನಾಗಿ ಷೆರ್ಲಾಕ್‌ ಕಾಣಿಸಿಕೊಂಡಿದ್ದಾನೆ. ಕನ್ನಡವೂ (ಅನುವಾದ: ವಾಸುದೇವರಾವ್‌) ಸೇರಿದಂತೆ 84 ಭಾಷೆಗಳಲ್ಲಿ ಈತನ ಎಲ್ಲ ಪುಸ್ತಕಗಳು ಭಾಷಾಂತರಗೊಂಡಿವೆ. ದೊಡ್ಡ ಸಂಖ್ಯೆಯ ಅಭಿಮಾನಿಗಳೂ ಜಗತ್ತಿನಾದ್ಯಂತ ಇದ್ದಾರೆ. ಈ ಅಭಿಮಾನ ಎಷ್ಟರಮಟ್ಟಿಗೆ ಎಂದರೆ, ವಾಸ್ತವದಲ್ಲಿ ಇಲ್ಲದಿದ್ದರೂ ಷೆರ್ಲಾಕ್‌ನನ್ನು ನೋಡುವ ಹಂಬಲ ಈ ಅಭಿಮಾನಿಗಳಿಗೆ… 

ಷೆರ್ಲಾಕ್‌ ಕತೆಗಳಲ್ಲಿ ಬರುವ ಕಾಲ್ಪನಿಕ ಪಾತ್ರದ ವಿಳಾಸ ಲಂಡನ್ ನಗರದ ಬೇಕರ್ ರಸ್ತೆ. ಬೇಕರ್‌ ಎನ್ನುವ ರಸ್ತೆಯೇನೋ ಇದೆ, ಆದರೆ ಅಲ್ಲಿ 221B ನಂಬರ್‌ನ ಯಾವ ಮನೆಯೂ ಇರಲಿಲ್ಲ. ಓದುಗರು ತಮ್ಮ ಸಮಸ್ಯೆಗಳನ್ನು ಈತ ಬಗೆಹರಿಸಬಲ್ಲ ಎಂದು ನಂಬಿ ಈ ವಿಳಾಸಕ್ಕೆ ಪತ್ರ ಬರೆಯುತ್ತಿದ್ದರು! ಇದರ ಬಗ್ಗೆ ಅರಿವಿದ್ದ ಪೋಸ್ಟ್‌ಮ್ಯಾನ್‌ಗಳು ಈ ಪತ್ರಗಳನ್ನು ಲೇಖಕ ಕಾನನ್‌ಗೆ ತಲುಪಿಸುತ್ತಿದ್ದರು. 

1930ರಲ್ಲಿ ಕಾನನ್ ಡಾಯ್ಲ್ ತೀರಿಕೊಂಡ ನಂತರ ಈ ವಿಳಾಸಕ್ಕೆ ಬರುವ ಪತ್ರಗಳನ್ನು ಏನು ಮಾಡುವುದು ಎಂದು ಅಂಚೆ ಇಲಾಖೆಯವರಿಗೆ ತಿಳಿಯದಾಯಿತು. ಆಗ ಅಭಿಮಾನಿಗಳು 'ಹೋಮ್ಸ್ ಅಭಿಮಾನಿ ಸಂಘ' ಹುಟ್ಟುಹಾಕಿದರು. ಕತೆಗಳಲ್ಲಿ ಬರುವ ವಿವರಗಳನ್ನೆಲ್ಲ ಒಳಗೊಂಡ ಮನೆಯನ್ನೇ ಲಂಡನ್‌ನ ಬೇಕರ್ ರಸ್ತೆಯಲ್ಲಿ ಕಟ್ಟಿಸಿದರು. ಅದೇ ಈಗ 'ಷೆರ್ಲಾಕ್‌ ಹೋಮ್ಸ್ ಮ್ಯೂಸಿಯಂ'. ಕಾಲ್ಪನಿಕ ಪಾತ್ರಕ್ಕೆ ಒಂದು ಮ್ಯೂಸಿಯಂ ಸ್ಥಾಪಿಸಿರುವುದು ಜಗತ್ತಿನಲ್ಲಿ ಏಕೈಕ ಎನ್ನಲಾಗಿದೆ. 

ಏನು ಈ ಪುಸ್ತಕಗಳ ವೈಶಿಷ್ಟ್ಯ? 

ಷೆರ್ಲಾಕ್‌ ಹೋಮ್ಸ್‌ ಪುಸ್ತಕಗಳಲ್ಲಿ ಡಾ. ವಾಟ್ಸನ್‌ ಎಂಬ ಪಾತ್ರ ಇರುತ್ತದೆ. ವೈದ್ಯನಾಗಿರುವ ಈತ ಷೆರ್ಲಾಕ್‌ನ ಸಹಾಯಕ ಹಾಗೂ ರೂಮ್‌ಮೇಟ್‌. ಬಿಡುವಿದ್ದಾಗ ಪತ್ತೇದಾರಿ ಕೆಲಸಕ್ಕೆ ಸಹಾಯ ಮಾಡುತ್ತಿದ್ದ. ನಮಗೆ ಆತ ಅಷ್ಟೇನೂ ಬುದ್ಧಿವಂತನಲ್ಲದ ಪಾತ್ರವಾಗಿ ಕಾಣಿಸುತ್ತಾನೆ. ಇಲ್ಲಿ ಓದುಗರಿಗೆ ಬರುವ ಸಂದೇಹಗಳೆಲ್ಲವೂ ವಾಟ್ಸನ್‌ಗೆ ಬರುತ್ತಿರುತ್ತದೆ. ಆತ ಷೆರ್ಲಾಕ್‌ಗೆ ಪ್ರಶ್ನೆ ಕೇಳುತ್ತಿರುತ್ತಾನೆ, ಅದಕ್ಕೆ ಷೆರ್ಲಾಕ್‌ ಉತ್ತರಿಸುತ್ತಾ ಹೋದಂತೆ ಅಲ್ಲಿರುವ ಡಾ. ವಾಟ್ಸನ್ ನಾವಾಗಿಬಿಡುತ್ತೇವೆ. ಷೆರ್ಲಾಕ್‌ ನಿಜವಾಗಿಯೂ ನಮ್ಮ ಮುಂದೆಯೇ ಕುಳಿತು ನಮ್ಮ ಜತೆ ಸಂಭಾಷಿಸುತ್ತಿರುವಂತೆ ಭಾಸವಾಗುತ್ತದೆ. ಆದ್ದರಿಂದ ಈ ಸನ್ನಿವೇಶದಲ್ಲಿ ನಾವೂ ಭಾಗಿಯಾಗಿಬಿಡುತ್ತೇವೆ. 

'ಸತ್ತ' ಷೆರ್ಲಾಕ್‌ನಿಗೆ ಜೀವ ಬಂತು! 

ನೌಕಾದಳದಲ್ಲಿ ವೈದ್ಯಾಧಿಕಾರಿಯಾಗಿದ್ದ ಕಾನನ್ ಡಾಯ್ಲ್, ಅನ್ಯ ಕೆಲಸದ ನಿಮಿತ್ತ ಷೆರ್ಲಾಕ್‌ ಹೋಮ್ಸ್‌ನ ಸರಣಿಯನ್ನು 'ದಿ ಫೈನಲ್‌ ಪ್ರಾಬ್ಲೆಮ್‌' ಎಂಬ ಪುಸ್ತಕದ ಮೂಲಕ ನಿಲ್ಲಿಸಿಬಿಟ್ಟರು. ಇದನ್ನು ಅಭಿಮಾನಿಗಳು ಅರಗಿಸಿಕೊಳ್ಳಲಾಗದೇ ಭಾರಿ ಪ್ರತಿಭಟನೆ ಮಾಡಿದರು. ಸತ್ತು ಹೋದ ಷೆರ್ಲಾಕ್‌ಗೆ ಮರುಜೀವ ನೀಡುವಂತೆ ಕಾನನ್‌ ಅವರಿಗೆ ಒತ್ತಾಯಿಸಿ ದೊಡ್ಡ ಪ್ರಮಾಣದ ಪತ್ರ ಚಳವಳಿಯೇ ನಡೆದುಹೋಯಿತು. ಎಂಟು ವರ್ಷಗಳ ನಿರಂತರ ಒತ್ತಡಕ್ಕೆ ಮಣಿದು ಕಾನನ್‌ ಅವರು 'ದಿ ರಿಟರ್ನ್‌ ಆಫ್‌ ಷೆರ್ಲಾಕ್‌ ಹೋಮ್ಸ್‌' ಪುಸ್ತಕದ ಮೂಲಕ ಸರಣಿ ಮುಂದುವರೆಸಿದರು. ಈ ಪುಸ್ತಕ ಇನ್ನೂ ಹೆಚ್ಚಿನ ಹುಚ್ಚೆಬ್ಬಿಸಿತು.

(ಮಾಹಿತಿ ಕೃಪೆ ವಿಜಯವಾಣಿ)

Tuesday, May 18, 2021

ಯಾರಿಲ್ಲಿ ಈ ತರಹಾ.... ಬರೆದೋರು ಹಣೆಬರಹಾ

 

👉*

 

ಯಾರಿಲ್ಲಿ ಈ ತರಹಾ.... 

ಬರೆದೋರು ಹಣೆಬರಹಾ 

ನೀ ಮೆಟ್ಟಿದ ಮಣ್ಣ ಮರೆತಿರುವೆ 

ಎಲ್ಲಿಗೆ ಅಂತ ಹೊರಟಿರುವೆ 

ಕೋಟಿಗೊಬ್ಬರಿಗೆ ಗಳಿಸಿದರು. 

ಜನರಿಗಾಗಿ ನೀ ತ್ಯಜಿಸಿರುವೆ 

ತ್ಯಾಗದ ಅರಮನೆಯ ಓ ಒಡೆಯ 

ಹೇಗಯ್ಯ ಸಿಡಿಲಿನ ಒಳಗಿಟ್ಟೆ ಗುಂಡಿಗೆಯ 

ಕಾಯುವ ಮಹಾರಾಜ 

ಗುಣದಲ್ಲಿ ಗುರು ನೀನು 

ಕಾವಿಯ ಮೊರೆ ಹೋದೆ 

ನ್ಯಾಯವೇ ಹೇಳಿನ್ನೂ 

ಕಾಯುವ ಮಹಾರಾಜ 

ಗುಣದಲ್ಲಿ ಗುರು ನೀನು 

ಕಾವಿಯ ಮೊರೆ ಹೋದೆ 

ನ್ಯಾಯವೇ ಹೇಳಿನ್ನೂ 

ಬೇರೆ ಬದುಕನ್ನ ನೀನೆ ಹುಡುಕಿದರೆ 

ನಮಗಿಲ್ಲಿ ಯಾರು ದೊರೆ 

ಕೇಳದೆ ನಮ್ಮೀ ಕರೆ 

***** 

ಹೃದಯಗಳ ಯಜಮಾನ 

ನಿನಗ್ಯಾಕೆ ಅವಮಾನ 

ಒಳ್ಳೆತನಕ್ಕೆ ಈ ಭೂಮೀಲಿ 

ಕಷ್ಟ ಕಟ್ಟಿಟ್ಟ ಬುತ್ತಿ ಕಣೋ 

ಎಲ್ಲವಾ ತಡೆಯುವಾ ಶಕ್ತಿ 

ಒಳ್ಳೆ ಮನಸ್ಸೂರಿಗಷ್ಟೇ ಕಣೋ 

ಎಲ್ಲಾ ನಿನ್ನವರು ಹಣವಿರಲು... 

ಆದರೂ ಚಿಂತೆಯು ಬರದಯ್ಯ ಗುಣವಿರಲು 

ಬೇಲಿಯೇ ಹೊಲವನ್ನು ಮೇಯುವ ಹಾಗೆ 

ಲಾಲಿಯೇ ತೊಟ್ಟಿಲ ಮುರಿಯುವ ಹಾಗೆ 

ಬೇಲಿಯೇ ಹೊಲವನ್ನು ಮೇಯುವ ಹಾಗೆ 

ಲಾಲಿಯೇ ತೊಟ್ಟಿಲ ಮುರಿಯುವ ಹಾಗೆ 

ನಂಬಿದಾ ಜನರೆಲ್ಲ ನಾಲಿಗೆ ಮರೆತಾಗ 

ಅವನ ಮುಂದೆಂದೂ 

ನೀ ಮನಸ್ಸಿನ ಸಾಹುಕಾರ

                                  *****

 ಯಾರಿಲ್ಲಿ..... ಈ ತರಹಾ... 

ಬರೆದೋರು ಹಣೆಬರಹಾ... 

ಬಂದು ಬೀಳುವ ಮಳೆಹನಿಯು 

ಸೇರೋ ಸ್ಥಳ ಯಾರು ಬಲ್ಲೋರು 

ನೂರು ಬಂಧ ಅನುಬಂಧದಲ್ಲಿ 

ಯಾರ ಮನಸಿಗೆ ಯಾರ್ಯಾರೋ 

ಏನೆಂದು ಕೇಳಲು ಯಾರು ಇಲ್ಲಾ... 

ಬಡವನಾ ನೀತಿಗೆ ಕಣ್ಣುಂಟು ನೋಟವಿಲ್ಲಾ... 

ಅವನಿಗೆ ಅವಳೆಂದು ಅವ ಬರೆದಾ ಲೆಕ್ಕಾ...... 

ಲೆಕ್ಕವೇ ತಿಳಿದೇನೇ ಮನಸ್ಸಿಗೆ ಈ ದುಃಖ 

ಅವನಿಗೆ ಅವಳೆಂದು ಅವ ಬರೆದಾ ಲೆಕ್ಕ 

ಲೆಕ್ಕವೇ ತಿಳಿದೇನೇ ಮನಸ್ಸಿಗೆ ಈ ದುಃಖ 

ಬಂಧಕೆ ಬಾಯಿಲ್ಲ ನ್ಯಾಯಕೆ ಕಣ್ಣಿಲ್ಲ 

ಎರಡಕ್ಕೂ ಕೊನೆಯಲ್ಲಿ... 

ಸೇರುವಾ ಮನೆಯೆಲ್ಲಿ ???