👉*
ಯಾರಿಲ್ಲಿ ಈ ತರಹಾ....
ಬರೆದೋರು ಹಣೆಬರಹಾ
ನೀ ಮೆಟ್ಟಿದ ಮಣ್ಣ ಮರೆತಿರುವೆ
ಎಲ್ಲಿಗೆ ಅಂತ ಹೊರಟಿರುವೆ
ಕೋಟಿಗೊಬ್ಬರಿಗೆ ಗಳಿಸಿದರು.
ಜನರಿಗಾಗಿ ನೀ ತ್ಯಜಿಸಿರುವೆ
ತ್ಯಾಗದ ಅರಮನೆಯ ಓ ಒಡೆಯ
ಹೇಗಯ್ಯ ಸಿಡಿಲಿನ ಒಳಗಿಟ್ಟೆ ಗುಂಡಿಗೆಯ
ಕಾಯುವ ಮಹಾರಾಜ
ಗುಣದಲ್ಲಿ ಗುರು ನೀನು
ಕಾವಿಯ ಮೊರೆ ಹೋದೆ
ನ್ಯಾಯವೇ ಹೇಳಿನ್ನೂ
ಕಾಯುವ ಮಹಾರಾಜ
ಗುಣದಲ್ಲಿ ಗುರು ನೀನು
ಕಾವಿಯ ಮೊರೆ ಹೋದೆ
ನ್ಯಾಯವೇ ಹೇಳಿನ್ನೂ
ಬೇರೆ ಬದುಕನ್ನ ನೀನೆ ಹುಡುಕಿದರೆ
ನಮಗಿಲ್ಲಿ ಯಾರು ದೊರೆ
ಕೇಳದೆ ನಮ್ಮೀ ಕರೆ
*****
ಹೃದಯಗಳ ಯಜಮಾನ
ನಿನಗ್ಯಾಕೆ ಅವಮಾನ
ಒಳ್ಳೆತನಕ್ಕೆ ಈ ಭೂಮೀಲಿ
ಕಷ್ಟ ಕಟ್ಟಿಟ್ಟ ಬುತ್ತಿ ಕಣೋ
ಎಲ್ಲವಾ ತಡೆಯುವಾ ಶಕ್ತಿ
ಒಳ್ಳೆ ಮನಸ್ಸೂರಿಗಷ್ಟೇ ಕಣೋ
ಎಲ್ಲಾ ನಿನ್ನವರು ಹಣವಿರಲು...
ಆದರೂ ಚಿಂತೆಯು ಬರದಯ್ಯ ಗುಣವಿರಲು
ಬೇಲಿಯೇ ಹೊಲವನ್ನು ಮೇಯುವ ಹಾಗೆ
ಲಾಲಿಯೇ ತೊಟ್ಟಿಲ ಮುರಿಯುವ ಹಾಗೆ
ಬೇಲಿಯೇ ಹೊಲವನ್ನು ಮೇಯುವ ಹಾಗೆ
ಲಾಲಿಯೇ ತೊಟ್ಟಿಲ ಮುರಿಯುವ ಹಾಗೆ
ನಂಬಿದಾ ಜನರೆಲ್ಲ ನಾಲಿಗೆ ಮರೆತಾಗ
ಅವನ ಮುಂದೆಂದೂ
ನೀ ಮನಸ್ಸಿನ ಸಾಹುಕಾರ
*****ಯಾರಿಲ್ಲಿ..... ಈ ತರಹಾ...
ಬರೆದೋರು ಹಣೆಬರಹಾ...
ಬಂದು ಬೀಳುವ ಮಳೆಹನಿಯು
ಸೇರೋ ಸ್ಥಳ ಯಾರು ಬಲ್ಲೋರು
ನೂರು ಬಂಧ ಅನುಬಂಧದಲ್ಲಿ
ಯಾರ ಮನಸಿಗೆ ಯಾರ್ಯಾರೋ
ಏನೆಂದು ಕೇಳಲು ಯಾರು ಇಲ್ಲಾ...
ಬಡವನಾ ನೀತಿಗೆ ಕಣ್ಣುಂಟು ನೋಟವಿಲ್ಲಾ...
ಅವನಿಗೆ ಅವಳೆಂದು ಅವ ಬರೆದಾ ಲೆಕ್ಕಾ......
ಲೆಕ್ಕವೇ ತಿಳಿದೇನೇ ಮನಸ್ಸಿಗೆ ಈ ದುಃಖ
ಅವನಿಗೆ ಅವಳೆಂದು ಅವ ಬರೆದಾ ಲೆಕ್ಕ
ಲೆಕ್ಕವೇ ತಿಳಿದೇನೇ ಮನಸ್ಸಿಗೆ ಈ ದುಃಖ
ಬಂಧಕೆ ಬಾಯಿಲ್ಲ ನ್ಯಾಯಕೆ ಕಣ್ಣಿಲ್ಲ
ಎರಡಕ್ಕೂ ಕೊನೆಯಲ್ಲಿ...
ಸೇರುವಾ ಮನೆಯೆಲ್ಲಿ ???
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ