ರಿಯೊ ಡಿ ಜನೈರೊ ನಗರದ ಉತ್ತರಕ್ಕಿರುವ ಪೆಟ್ರೋಪೊಲಿಸ್‌ನಲ್ಲಿ ಕನಿಷ್ಠ 60 ಮನೆಗಳು ನಾಶಗೊಂಡಿವೆ.
ಮನೆಗಳು ನಾಶಗೊಂಡಿದ್ದು, ಇಲ್ಲಿ ಸಾಕಷ್ಟು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ. ನಾಗರಿಕ ರಕ್ಷಣಾ ಸೇವೆಯ ಸಿಬ್ಬಂದಿ ಜನರನ್ನು ರಕ್ಷಿಸುವ ಕಾರ್ಯ ಜಾರಿಯಲ್ಲಿದೆ. ನಿನ್ನೆ ಮಧ್ಯಾಹ್ನ ಮಳೆ ಅಬ್ಬರ ತೀವ್ರಗೊಂಡಿದ್ದು, ಪೆಟ್ರೊಪೊಲಿಸ್ ನಗರವೊಂದರಲ್ಲೇ ಆರು ಸೆಂಟಿಮೀರ್ ಮಳೆ ಸುರಿದಿದೆ.
ಸುಮಾರು 700 ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದು ಸ್ಥಳೀಯ ಶಾಳೆಗಳು ಮತ್ತು ಸರ್ಕಾರ ಸ್ಥಾಪಿಸಿರುವ ತಾತ್ಕಾಲಿಕ ವಸತಿ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.