WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Saturday, April 10, 2021

ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು....

 


👉 
 *ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು....
ಇನ್ನಿಲ್ಲವಾಯಿತೆ ಆ ಹಕ್ಕಿ ಹಾಡು...
ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು....
ಇನ್ನಿಲ್ಲವಾಯಿತೆ ಆ ಹಕ್ಕಿ ಹಾಡು...
ಹಸಿರೆಲೆ ಹೂವಿನ ನಡುವೆ ಹುಲ್ಲು ಹಾಸಿಗೆ ಹೆ ಹೇ...
ಮುರಿದು ಹೋಯಿತೇ ಈಗ ಆ ಚುಕ್ಕಿ ಗೂಡು...
ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು....
ಇನ್ನಿಲ್ಲವಾಯಿತೆ ಆ ಹಕ್ಕಿ ಹಾಡು...
           ***
ಹನಿ ಹನಿಯಾಗಿ ತೊನೆದು ತೂಗಿದ ಪ್ರೀತಿ....
ಹರಿದು ಚೂರಾಯಿತೆ ಎದೆಯ ಒಲವಿನ ಬೀಡು...
ಹನಿ ಹನಿಯಾಗಿ ತೊನೆದು ತೂಗಿದ ಪ್ರೀತಿ....
ಹರಿದು ಚೂರಾಯಿತೆ ಎದೆಯ ಒಲವಿನ ಬೀಡು...
ರೆಕ್ಕೆ ಬಡಿದೊತ್ತಿ ಎತ್ತಿಕೊಳ್ಳುವ ಹಕ್ಕಿ..
ಕಾಡಿನ ಜಾಡು ಹಿಡಿಯುತ್ತ ನನ್ನ ಪಾಡು...
ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು....
ಇನ್ನಿಲ್ಲವಾಯಿತೆ ಆ ಹಕ್ಕಿ ಹಾಡು... 
           ***
ಎಲ್ಲಿ ಹೋಯಿತೆ ವಲಸೆ ಗೂಡು ತೊರೆದಾ ಹಕ್ಕಿ...
ಸೇರಿ ಹೋಯಿತೆ ನೀಲಿ ಮುಗಿಲ ಮರೆಯ ಹಾಡು...
ಎಲ್ಲಿ ಹೋಯಿತೆ ವಲಸೆ ಗೂಡು ತೊರೆದಾ ಹಕ್ಕಿ...
ಸೇರಿ ಹೋಯಿತೆ ನೀಲಿ ಮುಗಿಲ ಮರೆಯ ಹಾಡು...
ಕಾಡ ನೆನಪಿಗೆ ಹಿಂಡಿ ತೆವಳುತಿದೆ ಜೀವ
ಮುಂದೆ ಬಯಲು ಹಿಂದೆ ಬಿದ್ದಿತ್ತು ಕಾಡು ಮೇಡು...
ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು....
ಇನ್ನಿಲ್ಲವಾಯಿತೆ ಆ ಹಕ್ಕಿ ಹಾಡು...
ಹಸಿರೆಲೆ ಹೂವಿನ ನಡುವೆ ಹುಲ್ಲು ಹಾಸಿಗೆ..
ಮುರಿದು ಹೋಯಿತೇ  ಈಗ ಆ ಚುಕ್ಕಿ ಗೂಡು...
ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು....
ಇನ್ನಿಲ್ಲವಾಯಿತೆ ಆ ಹಕ್ಕಿ ಹಾಡು...
ಇನ್ನಿಲ್ಲವಾಯಿತೆ ಆ ಹಕ್ಕಿ ಹಾಡು...
ಇನ್ನಿಲ್ಲವಾಯಿತೆ ಆ ಹಕ್ಕಿ ಹಾಡು.........,


ಸಾಹಿತ್ಯ-ದೇಶ್ ಕುಲಕರ್ಣಿ
ಸಂಗೀತ-ಸಿ ಅಶ್ವಥ್ 
ಗಾಯನ-ಬಿ.ಆರ್ ಛಾಯ




Thursday, April 8, 2021

ಶ್ರೀ ಕೃಷ್ಣ ದ್ರೌಪದಿ ಗೆ ಹೇಳುವ ಮಾತುಗಳು

 


*#ನಮ್ಮ_ಶಬ್ದಗಳು_ಸಹ_ನಮ್ಮ #ಕರ್ಮ_ಗಳಾಗಿರುತ್ತವೆ*


ಅದೇ ತಾನೇ ಮಹಾಭಾರತ ಯುದ್ಧ ಮುಗಿದಿತ್ತು. 18 ದಿನಗಳ ಯುದ್ಧ ದ್ರೌಪತಿಯನ್ನು 80 ನೇ ವಯಸ್ಸಿನವರೆಗೂ ಕೊಂಡೊಯ್ದಿತ್ತು. ಮಾನಸಿಕ ಮತ್ತು ದೈಹಿಕ ರೂಪದಲ್ಲಿ. 


ಊರಲ್ಲಿ ಎಲ್ಲಿ ನೋಡಿದರಲ್ಲಿ ವಿಧವೆಯರೇ ಕಾಣಿಸುತ್ತಿದ್ದರು. ಕೈ ಕಾಲು ಮುರಿದುಕೊಂಡು ಅಂಗವೈಕಲ್ಯಗೊಂಡ ಪುರುಷರು. ಅನಾಥ ಮಕ್ಕಳು ಓಡಾಡುತ್ತಿದ್ದರು. ಸ್ಮಶಾನ ಮೌನಗೊಂಡಿತ್ತು ನಂದನವನದಂತಿದ್ದ ಹಸ್ತಿನಾಪುರ. 


ರಾಣಿ ದ್ರೌಪತಿ ಶೂನ್ಯಮನಸ್ಕಳಾಗಿ ತದೇಕ ಚಿತ್ತದಿಂದ ಗೋಡೆಯನ್ನು ನೋಡುತ್ತಾ ಕುಳಿತಿದ್ದಳು. ಶ್ರೀ ಕೃಷ್ಣ ಪರಮಾತ್ಮ ಅಲ್ಲಿಗೆ ಬಂದ. ದ್ರೌಪತಿ ಓಡಿ ಹೋಗಿ ಕೃಷ್ಣನನ್ನು ತಬ್ಬಿಕೊಳ್ಳುತ್ತಾಳೆ ಮತ್ತು ಅಳಲು ಪ್ರಾರಂಭಿಸುತ್ತಾಳೆ. ಕೃಷ್ಣ ದ್ರೌಪದಿಯ ತಲೆಯನ್ನು ಸವರುತ್ತಾನೆ. ಮತ್ತು ಸಮೀಪದ ಪಲ್ಲಂಗದ ಮೇಲೆ ಕೂರಿಸುತ್ತಾನೆ.


ದ್ರೌಪದಿ:- ಕೃಷ್ಣ ಏನಿದೆಲ್ಲ? ಹೀಗೆಲ್ಲ ಆಗುತ್ತೆ ಅಂತ ನಾನು ಅಂದುಕೊಂಡೇ ಇರಲಿಲ್ಲ


ಕೃಷ್ಣ:- ಕರ್ತವ್ಯ ಮತ್ತು ನಿಯತ್ತು ಬಹು ಕ್ರೂರಿ ಪಾಂಚಾಲಿ, ಅದು ನಾವು ಯೋಚಿಸಿಯಂತೆ ಇರುವುದಿಲ್ಲ. ನಮ್ಮ ಕರ್ಮಗಳನ್ನು ಪರಿಣಾಮಗಳಲ್ಲಿ ಬದಲಿಸಿಬಿಡುತ್ತದೆ.....

ನೀನು ಸೇಡು ತೀರಿಸಿಕೊಳ್ಳಬೇಕು ಅಂದುಕೊಂಡಿದ್ದೆ, ನಿನ್ನ ಸೇಡು ತೀರಿತು ದುಶ್ಯಾಸನ ದುರ್ಯೋಧನರಷ್ಟೇ ಅಲ್ಲ ಇಡೀ ಕೌರವ ವಂಶವೇ ನಿರ್ವಂಶವಾಯ್ತು. ಇದು ನೀನು ಖುಷಿ ಪಡುವ ವಿಚಾರ. ಯಾಕೆ ...ನಿನಗೆ ಆನಂದವಾಗುತ್ತಿಲ್ಲವೇ?


ದ್ರೌಪತಿ:- ಕೃಷ್ಣಾ....ನೀನು ನನ್ನ ದುಃಖವನ್ನು ಒರಿಸಲು ಬಂದಿರುವೆಯ ಅಥವಾ ನನ್ನ ಗಾಯಗಳ ಮೇಲೆ ಉಪ್ಪು ಸುರಿಯಲು ಬಂದಿರುವೆಯಾ?


ಕೃಷ್ಣ:- ಇಲ್ಲ ದ್ರೌಪತಿ, ನಾನು ವಾಸ್ತವಿಕತೆಯನ್ನು ಅರ್ಥೈಸಲು ಬಂದಿದ್ದೇನೆ. ನಮ್ಮ ಕರ್ಮದ ಫಲಗಳ ಪರಿಣಾಮಗಳು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಅವು ಹತ್ತಿರವಾದಾಗ ನಮ್ಮ ಕೈಯಲ್ಲಿ ಏನೂ ಇರುವುದಿಲ್ಲ. 


ದ್ರೌಪತಿ:- ಅಂದ್ರೆ ......ಇದಕ್ಕೆಲ್ಲ ನಾನೇ ಕಾರಣನಾ ಕೃಷ್ಣ?


ಕೃಷ್ಣ:- ಇಲ್ಲ ದ್ರೌಪತಿ...ನಿನ್ನನ್ನು ನೀನು ಇಷ್ಟೊಂದು ಮಹತ್ವಪೂರ್ಣಳು ಎಂದು ತಿಳಿದುಕೊಳ್ಳಬೇಡ ಆದರೆ ನೀನು ನಿನ್ನ ಕರ್ಮಗಳಲ್ಲಿ ಕಿಂಚಿತ್ತಾದರೂ ದೂರದೃಷ್ಟಿ ಇಟ್ಟಿದ್ದಿದ್ದರೆ ಇಂದು ನೀನು ದುಃಖಿಸುವ ಈ ಪರಿಸ್ಥಿತಿ ಬರುತ್ತಿರಲಿಲ್ಲ.


ದ್ರೌಪತಿ:- ???????


ಕೃಷ್ಣ:- ಅಂದು ಸ್ವಯಂವರದಲ್ಲಿ ಕರ್ಣನಿಗೆ ನೀನು ಅವಮಾನಿಸದೇ ಇದ್ದಿದ್ದರೆ, ಭಾಗವಹಿಸಲು ಅವಕಾಶ ಕೊಟ್ಟಿದ್ದರೆ ಅದರ ಪರಿಣಾಮ ಬೇರೆನೇ ಇರುತ್ತಿತ್ತು. ನಂತರ ಕುಂತಿ ಮಾತಾ ನಿನಗೆ ಐದೂ ಪಾಂಡವರನ್ನು ವಿವಾಹವಾಗಲು ಆಹ್ವಾನಿಸಿದಾಗ ನೀನು ತಿರಸ್ಕರಿಸಿದ್ದರೆ ಅದರ ಪರಿಣಾಮವೂ ಇಂದು ಬೇರೆನೇ ಇರುತ್ತಿತ್ತು. ನಂತರ ನಿನ್ನ ಮಹಲಿನಲ್ಲಿ ದುರ್ಯೋಧನನಿಗೆ ಅವಮಾನ ಮಾಡಿರದೆ ಇದ್ದಿದ್ದರೆ. ನಿನ್ನ ವಸ್ತ್ರಾಪಹರಣವೇ ಆಗುತ್ತಿರಲಿಲ್ಲ. ಆಗಲೂ ಪರಿಸ್ಥಿತಿ ಬೇರೆನೇ ಆಗುತ್ತಿತ್ತು. 


#ನಮ್ಮ_ಶಬ್ದಗಳು_ಸಹ_ನಮ್ಮ #ಕರ್ಮ #ಗಳಾಗಿರುತ್ತವೆ_ದ್ರೌಪದಿ. 


ನಾವು ಶಬ್ದಗಳನ್ನು ಆಡುವ ಮುಂಚೆ ಅವುಗಳನ್ನು ಅಳತೆಮಾಡಬೇಕಾಗುತ್ತದೆ. ಇಲ್ಲವಾದರೆ ಅದರ ದುಷ್ಪರಿಣಾಮವನ್ನು ನಾವು ಮಾತ್ರ ಅಲ್ಲ ನಮ್ಮ ಸುತ್ತಮುತ್ತಲಿನ ವಾತಾವರಣವೂ ಅನುಭವಿಸಬೇಕಾಗುತ್ತದೆ. 


ಎಲ್ಲ ಜೀವರಾಶಿಗಳಲ್ಲಿ ಮನುಷ್ಯ ಏಕಮಾತ್ರ ಜೀವಿಯ ವಿಷ ಹಲ್ಲಿನಲ್ಲಿರಲ್ಲ ಬದಲಾಗಿ ಆತನ ಶಬ್ದಗಳಲ್ಲಿ ಇರುತ್ತದೆ. 

ಅದಕ್ಕಾಗಿಯೇ *ನಾವು ಆಡುವ ಶಬ್ದಗಳು ಇತರರಿಗೆ ನಾಟದಂತೆ ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ಆಡಬೇಕು*. ಅಂತಹ ಶಬ್ದಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಆಗ ಜೀವನ ಚರಿತಾರ್ಥವಾಗಿರುತ್ತದೆ.


*ಕೃಷ್ಣಂ ವಂದೇ ಜಗದ್ಗುರುಂ🙏*.

ಮುಂಬರುವ ಕಾಲದಲ್ಲಿ ೧ ಸಾವಿರ ವರ್ಷಗಳಿಗಾಗಿ ಸತ್ಯಯುಗದ ಆಗಮನವಾಗುವುದು !

ಮುಂಬರುವ ಕಾಲದ ಬಗ್ಗೆ ಮಥುರಾದ ಸಂತರಾದ ಬಾಬಾ ಜಯ ಗುರುದೇವ ಇವರ ಭವಿಷ್ಯವಾಣಿ !

ಸಂತ ಬಾಬಾ ಜಯ ಗುರುದೇವ

ಮಥುರಾದ ಸಂತರಾದ ಬಾಬಾ ಜಯ ಗುರುದೇವ ಇವರು ೨೦೧೨ ರಲ್ಲಿ ದೇಹ ತ್ಯಾಗ ಮಾಡಿದರು. ಉತ್ತರ ಭಾರತದಲ್ಲಿ ಅವರ ದೊಡ್ಡ ಭಕ್ತ ಪರಿವಾರವಿದೆ. ಅವರು ಬೇರೆ ಬೇರೆ ಸ್ಥಳಗಳಿಗೆ ಹೋಗಿ ಪ್ರವಚನಗಳನ್ನು ನೀಡುತ್ತಿದ್ದರು. ಮಥುರಾದಲ್ಲಿ ಅವರ ಜಯ ಗುರುದೇವ ನಾಮಯೋಗ ಸಾಧನಾ ಮಂದಿರ ಎಂಬ ಹೆಸರಿನ ಆಶ್ರಮವಿದೆ. ಅವರು ಸಂಪೂರ್ಣ ದೇಶದಲ್ಲಿ ತಿರುಗಾಡಿ ಜಯ ಗುರುದೇವ ಹೆಸರಿನ ಪ್ರಚಾರವನ್ನು ಮಾಡಿದರು. ಯುಟ್ಯೂಬ್‌ನಲ್ಲಿನ ಅವರ ಅನೇಕ ಪ್ರವಚನಗಳಲ್ಲಿ ಒಂದು ಪ್ರವಚನದಲ್ಲಿ ಅವರು ಆಪತ್ಕಾಲ ಮತ್ತು ಅದರ ನಂತರ ಬರುವ ಸತ್ಯಯುಗದ ಬಗ್ಗೆ ಮಾಹಿತಿಯನ್ನು ಹೇಳಿದ್ದಾರೆ. ಅದನ್ನು ಇಲ್ಲಿ ಲೇಖನದ ಸ್ವರೂಪದಲ್ಲಿ ನೀಡುತ್ತಿದ್ದೇವೆ.

ಕಲಿಯುಗದಲ್ಲಿ ಮನುಷ್ಯನು ಪಾಪ ಮತ್ತು ಅಧರ್ಮದ ಗಡಿಯನ್ನು ದಾಟಿ ವಿನಾಶದ ಮಾರ್ಗವನ್ನು ಶೋಧಿಸುವನು !

ಬಾಬಾ ಜಯ ಗುರುದೇವ ಇವರು ಹೇಳಿದುದೇನೆಂದರೆ ಕಲಿಯುಗಾಂತರ್ಗತ ಕಲಿಯುಗ ಬರಲಿದೆ. ಕಲಿಯುಗವು ಇನ್ನೂ ಮುಗಿದಿಲ್ಲ; ಆದರೆ ಮಧ್ಯದಲ್ಲಿ ೧ ಸಾವಿರ ವರ್ಷಗಳ ಸತ್ಯಯುಗ ಬರಲಿದೆ. ಈಗ ಕಲಿಯುಗವು ಪ್ರಾರಂಭವಾಗಿ ಕೇವಲ ೫ ಸಾವಿರದ ೫೦೦ ವರ್ಷಗಳ ಕಾಲಾವಧಿ ಮಾತ್ರ ಮುಗಿದಿದೆ, ಅಂದರೆ ಕಲಿಯುಗವು ಕೊನೆಗೊಳ್ಳಲು ಇನ್ನೂ ನಾಲ್ಕು ಕಾಲು ಲಕ್ಷಗಳಿಗಿಂತ ಹೆಚ್ಚು ವರ್ಷಗಳ ಕಾಲಾವಧಿ ಬಾಕಿಯಿದೆ; ಆದರೆ ಈ ಕಡಿಮೆ ಕಾಲಾವಧಿಯಲ್ಲಿಯೇ ಮನುಷ್ಯನು ಪಾಪ ಮತ್ತು ಅಧರ್ಮದ ಸೀಮೆಯನ್ನು ದಾಟಿ ತನ್ನ ವಿನಾಶದ ಮಾರ್ಗವನ್ನು ಕಂಡು ಹಿಡಿದಿದ್ದಾನೆ. ಪಾಪ ಮತ್ತು ಅಧರ್ಮದ ಪ್ರಮಾಣವು ಕಲಿಯುಗದ ಕೊನೆಯ ಹಂತದಲ್ಲಿ ಎಷ್ಟು ಇರಬೇಕಾಗಿತ್ತೋ, ಅದನ್ನು ಮನುಷ್ಯನು ಈಗಲೇ ನಿರ್ಮಾಣ ಮಾಡಿದ್ದಾನೆ.

ಮುಂದೆ ಎಂತಹ ರೋಗಗಳು ಬರುತ್ತವೆ ಎಂದರೆ, ಆಧುನಿಕ ವೈದ್ಯರಿಗೂ ಅವುಗಳಿಗೆ ಪರಿಹಾರ ಕೊಡಲಾಗುವುದಿಲ್ಲ !

ಸಂಪೂರ್ಣ ವಿಶ್ವದಲ್ಲಿ ಮಳೆಯ ಅಭಾವದಿಂದ ನದಿ ಮತ್ತು ಝರಿಗಳು ಒಣಗಿ ಹೋಗುವವು. ನದಿ, ಸರೋವರ, ಝರಿಗಳಲ್ಲಿ ಸ್ವಲ್ಪವೂ ನೀರು ಉಳಿಯುವುದಿಲ್ಲ. ಇದರಿಂದ ವಿದ್ಯುತ್ ತಯಾರಿಸಲು ಸಾಧ್ಯವಾಗುವುದಿಲ್ಲ. ಕಾರ್ಖಾನೆಗಳು ಮುಚ್ಚುವವು, ಕೆಲಸಗಳು ಮುಚ್ಚಲ್ಪಡುವುದು, ನೀರಿನ ಮಟ್ಟವು ಕೆಳಗೆ ಹೋಗುವುದು. ಆದ್ದರಿಂದ ರೈತರಿಗೆ ಕೃಷಿಗಾಗಿ ನೀರು ಸಿಗಲಾರದು. ನೀರಿನ ಅಭಾವದಿಂದ ರೈತರಿಗೆ ಧಾನ್ಯಗಳನ್ನು ಬೆಳೆಯಲು ಅಡಚಣೆಗಳು ಬರುವವು. ಸದ್ಯ ನಿಮಗೆ ಹೊಟ್ಟೆ ತುಂಬಾ ಆಹಾರ ಸಿಗುತ್ತಿದೆ. ಆದ್ದರಿಂದ ನೀವು ಕೇಳುವುದಿಲ್ಲ. ಯಾವಾಗ ರೈತರಿಗೆ ಹೊಲದಲ್ಲಿ ಧಾನ್ಯಗಳನ್ನು ಬೆಳೆಸಲು ಸಾಧ್ಯವಾಗುವುದಿಲ್ಲವೋ, ಆಗ ನಿಮ್ಮಲ್ಲಿರುವ ಹಣ ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಭೀಕರ ಹಸಿವಿನಿಂದ ಅನೇಕ ಜನರು ಸಾಯುವರು. ಸಂಪೂರ್ಣ ವಿಶ್ವದಲ್ಲಿ ಹಾಹಾಕಾರ ಏಳುವುದು. ಒಂದು ಸಮಯ ಹೇಗೆ ಬರುವುದೆಂದರೆ, ಕಳ್ಳರು ನಿಮ್ಮ ಹಣ ಅಥವಾ ಬಂಗಾರವನ್ನಲ್ಲ, ಧಾನ್ಯಗಳ ಕಳ್ಳತನ ಮಾಡುವರು. ಧಾನ್ಯಗಳನ್ನು ಕದಿಯಲು ಜನರು ಪರಸ್ಪರರ ಹತ್ಯೆಯನ್ನು ಮಾಡುವರು, ರೋಗರುಜಿನಗಳು ಹರಡುವವು. ಇವೆಲ್ಲವುಗಳು ನೀವೇ ಮಾಡಿದ ಪಾಪಗಳ ಫಲವಾಗಿರಲಿವೆ. ಮುಂದೆ ಎಂತಹ ರೋಗಗಳು ಬರುವವೆಂದರೆ, ಆಧುನಿಕ ವೈದ್ಯರಿಗೂ ರೋಗಕ್ಕೆ ಪರಿಹಾರ ಕೊಡಲು ಸಾಧ್ಯವಾಗುವುದಿಲ್ಲ.

ಮುಂಬರುವ ಕಠಿಣ ಕಾಲದಲ್ಲಿ ಗುರುಕೃಪೆ, ಸತ್ಸಂಗ ಮತ್ತು ಸೇವೆ ಇವುಗಳ ಆಧಾರದಿಂದಲೇ ಮನುಷ್ಯನ ರಕ್ಷಣೆಯಾಗುವುದು !

ಮಾಂಸಾಹಾರ, ಗೋಹತ್ಯೆ, ಮದ್ಯಪಾನ, ಭ್ರಷ್ಟಾಚಾರ, ವ್ಯಭಿಚಾರ, ಅನಾಚಾರ, ದುರಾಚಾರಗಳನ್ನು ಬಿಡುವುದು ಆವಶ್ಯಕವಾಗಿದೆ, ಇಲ್ಲದಿದ್ದರೆ ವಿನಾಶ ನಿಶ್ಚಿತವಾಗಿದೆ. ನಾವು ಯಾವುದರ ಕಲ್ಪನೆಯನ್ನು ಸಹ ಮಾಡಿರಲಿಕ್ಕಿಲ್ಲವೋ, ಅಂತಹ ಬಹಳ ದೊಡ್ಡ ಪ್ರಮಾಣದಲ್ಲಿ ಭೂಕಂಪಗಳು ಆಗಲಿವೆ. ಯಾವಾಗ ಪಾಪಗಳ ಪ್ರಮಾಣವು ಬಹಳ ಹೆಚ್ಚಾಗುತ್ತದೆಯೋ, ಆಗ ನಿಸರ್ಗವು ಅಪ್ರಸನ್ನವಾಗಿ ಹಾಹಾಕಾರವೇಳುತ್ತದೆ. ಕೆಲವು ಮಹಾತ್ಮರು ಈ ಪರಿಸ್ಥಿತಿಯನ್ನು ತಡೆಹಿಡಿದಿದ್ದಾರೆ; ಆದರೆ ಸಮಯವು ಕಡಿಮೆ ಉಳಿದಿದೆ. ಪರಿವರ್ತನೆಯ ದಿನಗಳು ಹತ್ತಿರ ಬಂದಿವೆ. ಯಾರು ಮಹಾತ್ಮರ ಅಥವಾ ಸಂತರ ಮಾತುಗಳನ್ನು ಕೇಳುವುದಿಲ್ಲವೋ, ಅವರ ಸ್ಥಿತಿಯು ಕಲಿಯುಗ ಮತ್ತು ಸತ್ಯಯುಗದ ನಡುವಿನ ಬೀಸುಕಲ್ಲಿನಲ್ಲಿ ಸಿಕ್ಕ ಧಾನ್ಯದಂತೆ ಒಡೆದು ನುಚ್ಚು ನೂರಾಗುವುದು (ತುಂಬಾ ತೊಂದರೆಗಳಲ್ಲಿ ಸಿಲುಕುವರು). ಯಾರು ಧರ್ಮದೊಂದಿಗೆ ಏಕನಿಷ್ಠರು, ಅವರೇ ಇದರಲ್ಲಿ ಉಳಿಯುವರು. ಅಮೇರಿಕಾ, ಚೀನಾ, ಇಂಗ್ಲಂಡ್, ಭಾರತ, ಅರಬ್ ದೇಶಗಳಿಗೆ ಅಳುವ ಪ್ರಸಂಗ ಬರುವುದು (ತುಂಬಾ ದುಃಖಗಳು ಬರುವವು). ಮುಂಬರುವ ಕಾಲದಲ್ಲಿ ಜೀವಂತವಾಗಿರಲು ಗುರುಕೃಪೆ, ಸತ್ಸಂಗ ಮತ್ತು ಸೇವೆಯ ಆಧಾರ ಪಡೆಯುವುದು ಆವಶ್ಯಕವಾಗಿದೆ. ಈಗಲೇ ಸಮಯವಿದೆ. ಶುದ್ಧ ಶಾಕಾಹಾರಿಯಾಗಿರಿ. ಮಾಂಸಾಹಾರವನ್ನು ಮಾಡಬೇಡಿರಿ. ಧರ್ಮದ ಮಾರ್ಗದಲ್ಲಿ ನಡೆಯಿರಿ, ಮಹಾತ್ಮರು ಹೇಳಿದಂತೆ ಆಚರಣೆಯನ್ನು ಮಾಡಿರಿ. ಪುನಃ ಅವಕಾಶ ಸಿಗಲಾರದು ಇಲ್ಲವಾದರೆ ನಿಮ್ಮ ವಿನಾಶ ನಿಶ್ಚಿತವಾಗಿದೆ.

ಕಲಿಯುಗದಲ್ಲಿ ವಿಶ್ವಯುದ್ಧವು ಕೇವಲ ೧೮ ನಿಮಿಷಗಳದ್ದಾಗಬಹುದು !

ಅಧರ್ಮದ ನಾಶಕ್ಕಾಗಿ ಪುನಃ ಮಹಾಭಾರತವಾಗಲಿದೆ. ಈ ವಿನಾಶದಲ್ಲಿ ಒಂದೇ ಬಾರಿಗೆ ಕೋಟ್ಯಾವದಿ ಜನರು ಸಾಯಬಹುದು. ಮೊದಲು ಸಂಪೂರ್ಣ ವಿಶ್ವವು ಆರ್ಥಿಕ ಸಂಕಟದಲ್ಲಿ ಸಿಲುಕುವುದು, ಧಾನ್ಯಗಳ ಕೊರತೆಯಿಂದ ಹಾಹಾಕಾರವೇಳುವುದು. ಎಲ್ಲ ದೇಶಗಳು ಪರಸ್ಪರರ ವಿರೋಧ ಮಾಡುವವು. ಅನೇಕ ದೇಶಗಳು ಯುದ್ಧಕ್ಕಾಗಿ ವಿಧ್ವಂಸಕ ಉಪಕರಣಗಳ ಸಿದ್ಧತೆಯನ್ನು ಮಾಡಿವೆ. ಸಾವಿರಾರು ಮೈಲು ದೂರದಿಂದ ಕ್ಷೇಪಣಾಸ್ತ್ರವು ಬಂದು ಯಾವ ದೇಶದ ಮೇಲೆ ಬೀಳುವುದೋ, ಆ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ವಿನಾಶವಾಗಲಿದೆ. ಈ ವಿಧ್ವಂಸವು ಎಷ್ಟು ತೀವ್ರವಾಗಿರುವುದೆಂದರೆ, ರಾತ್ರಿ ಮಲಗುವಾಗಿನ ದೃಶ್ಯ ಬೇರೆ ಇರುವುದು ಮತ್ತು ಬೆಳಗ್ಗೆ ಎಚ್ಚರವಾದಾಗ ಪೂರ್ತಿ ದೃಶ್ಯವೇ ಬದಲಾಗಿರುವುದು. ದ್ವಾಪರಯುಗದ ಮಹಾಭಾರತದ ಯುದ್ಧವು ೧೮ ದಿನಗಳದ್ದಾಗಿತ್ತು, ಕಲಿಯುಗದಲ್ಲಿನ ಯುದ್ಧವು ಕೇವಲ ೧೮ ನಿಮಿಷಗಳದ್ದಾಗಬಹುದು; ಆದರೆ ಆ ೧೮ ನಿಮಿಷಗಳಲ್ಲಿ ಬಹಳ ನರಸಂಹಾರವಾಗುವುದು. ಬಹಳಷ್ಟು ಅಕಾಲ ಮೃತ್ಯುಗಳಾಗುವವು. ಸಾಧು-ಸಂತರಿಗೆ (ಮಹಾತ್ಮರಿಗೆ) ನಿಮ್ಮ ರಕ್ಷಣೆಯನ್ನು ಮಾಡಬೇಕೆಂದೆನಿಸುತ್ತದೆ; ಆದರೆ ನೀವು ಅವರ ಸಂಪರ್ಕಕ್ಕೆ ಬರುವುದಿಲ್ಲ.

(ಮಾಹಿತಿ ಕೃಪೆ ಸನಾತನ ಪ್ರಭಾತ ಕನ್ನಡ)

ಕೃಷಿ ಹೊಂಡದಲ್ಲಿ ಮುಳುಗಿ ಮೂವರು ಬಾಲಕರ ಸಾವು

 

ಪಾಂಡವಪುರ (ಮಂಡ್ಯ ಜಿಲ್ಲೆ): ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ಒಂದೇ ಕುಟುಂಬದ ಇಬ್ಬರು ಹಾಗೂ ಮತ್ತೊಬ್ಬ ಬಾಲಕ ಮುಳುಗಿ ಮೃತಪಟ್ಟಿರುವ ಧಾರುಣ ಘಟನೆ ತಾಲ್ಲೂಕಿನ ಬಳೇಹತ್ತಿಗುಪ್ಪೆ ಗ್ರಾಮದಲ್ಲಿ ಗುರುವಾರ ನಡೆದಿದೆ.

ಮಹದೇವಪ್ಪ-ಭಾರತಿ ದಂಪತಿಯ ಪುತ್ರರಾದ ಕಾರ್ತಿಕ್‌ (10), ಚಂದನ್‌ (11) ಹಾಗೂ ಮಲ್ಲಿಕಾರ್ಜುನ್‌-ಸುಮಾ ದಂಪತಿಯ ಪುತ್ರ ರಿತೇಶ್‌ (8) ಮೃತಪಟ್ಟವರು. ಕಾರ್ತಿಕ್‌ ಹಾಗೂ ಚಂದನ್‌ ಪಾಂಡವಪುರದ ನಿರ್ಮಲಾ ಕಾನ್ವೆಂಟ್‌ ವಿದ್ಯಾರ್ಥಿಗಳಿದ್ದು ಕ್ರಮವಾಗಿ 5, 6ನೇ ತರಗತಿಯಲ್ಲಿ ಓದುತ್ತಿದ್ದರು. ರಿತೇಶ್‌ ಬಳೇಹತ್ತಿಗುಪ್ಪೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ.

ಶಾಲೆಗೆ ರಜೆ ಇರುವ ಕಾರಣ ಬಾಲಕರು ಗ್ರಾಮದ ಹೊರಹೊಲಯದಲ್ಲಿರುವ ಕೃಷಿ ಹೊಂಡಕ್ಕೆ ಈಜಲು ತೆರಳಿದ್ದರು. ಹೊಂಡದಲ್ಲಿ ತುಂಬಿದ್ದ ಕೆಸರಿನಲ್ಲಿ ಸಿಲುಕಿ ಮಕ್ಕಳು ಮೃತಪಟ್ಟಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪಾಂಡವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಮಾಹಿತಿ ಕೃಪೆ ಪ್ರಜಾವಾಣಿ)

ಸರ್ಕಾರಕ್ಕೆ ಮೇ 2ರವರೆಗೆ ಕಾಲಾವಕಾಶ ನೀಡಬೇಕು: ಸಿ.ಟಿ. ರವಿ ಮನವಿ

 

ಚಿಕ್ಕಮಗಳೂರು: 'ಕೆಎಸ್‌ಆರ್‌ಟಿಸಿ ನೌಕರರು ಬೇಡಿಕೆ ಈಡೇರಿಕೆಗೆ ಮೇ 2ರವರೆಗೆ ಸರ್ಕಾರಕ್ಕೆ ಕಾಲಾವಕಾಶ ನೀಡಬೇಕು. ಆಗಲೂ ಈಡೇರದಿದ್ದರೆ ನೌಕರರ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡುತ್ತೇವೆ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ.ರವಿ ತಿಳಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮುಷ್ಕರದಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಸರ್ಕಾರವು ಪರ್ಯಾಯವಾಗಿ ಖಾಸಗಿ ಬಸ್‌ಗಳನ್ನು ವ್ಯವಸ್ಥೆ ಮಾಡಿದ್ದರೂ ಮಾಮೂಲಿಯಂತೆ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ನೌಕರರು ಯಾರ ರಾಜಕೀಯ ದಾಳವೂ ಆಗಬಾರದು. ಹಠಮಾರಿ ಧೋರಣೆ ತಳೆಯಬಾರದು' ಎಂದು ಮನವಿ ಮಾಡಿದರು.

'ಸಿದ್ದರಾಮಯ್ಯ ಅವರಿಗೆ ಆಡಳಿತ ಎಂದರೆ ಜಾತಿಗಳನ್ನು ಒಡೆಯುವುದು. ವೀರಶೈವ ಮತ್ತು ಲಿಂಗಾಯತ ಸಮುದಾಯಗಳನ್ನು ಒಡೆಯುವ ಕೆಲಸ ಮಾಡಿದ್ದು ಅವರ ಆಡಳಿತ ಅವಧಿಯಲ್ಲೇ. ರುದ್ರೇಶ್‌, ರಾಜು, ಪ್ರಶಾಂತ್‌ಪೂಜಾರಿ ಸಹಿತ 46 ಜನರ ಕೊಲೆಗಳು ನಡೆದದ್ದು ಅವರ ಅವಧಿಯಲ್ಲೇ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

'ವಿದ್ಯಮಾನಗಳನ್ನು ಹೈಕಮಾಂಡ್‌ ಗಮನಿಸುತ್ತಿದೆ'
'ಸಚಿವ ಕೆ.ಎಸ್‌.ಈಶ್ವರಪ್ಪ ಅವರು ರಾಜ್ಯಪಾಲರಿಗೆ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಹಳಷ್ಟು ಚರ್ಚೆಗಳು ನಡೆದಿವೆ. ವಿಚಾರ ಗಮನಕ್ಕೆ ತರುವ ಕೆಲಸ ಮಾಡಿದ್ದೇನೆ, ಯಡಿಯೂರಪ್ಪ ನಮ್ಮ ನಾಯಕ ಎಂದು ಈಶ್ವರಪ್ಪ ಅವರೇ ಸ್ಪಷ್ಟಪಡಿಸಿದ್ದಾರೆ' ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಪ್ರತಿಕ್ರಿಯಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಪಕ್ಷಕ್ಕೆ ಮುಜುಗರ ಉಂಟುಮಾಡುವ ಕೆಲ ವಿದ್ಯಮಾನಗಳು ಈಚೆಗೆ ನಡೆದಿವೆ. ಎಲ್ಲವನ್ನು ವರಿಷ್ಠರು ಗಮನಿಸುತ್ತಿದ್ದು, ಸಂದರ್ಭ ಬಂದಾಗ ತಕ್ಕ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ' ಎಂದು ಉತ್ತರಿಸಿದರು.

(ಮಾಹಿತಿ ಕೃಪೆ ಪ್ರಜಾವಾಣಿ)

ಬಸ್ ಬಂದ್ ಬಿಸಿ : ವಿಶೇಷ ರೈಲು ವ್ಯವಸ್ಥೆ ಮಾಡಿದ ಕೇಂದ್ರ ರೈಲ್ವೆ

 

ಬೆಂಗಳೂರು : ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ನೌಕರರು ಏಪ್ರಿಲ್ 7 ರಿಂದ ಮುಷ್ಕರ ಕೈಗೊಂಡಿದ್ದಾರೆ. ಸಾರಿಗೆ ಸಿಬ್ಬಂದಿ ಪ್ರತಿಭಟನೆಯಿಂದ ಪ್ರಯಾಣಿಕರಿಗೆ ಮತ್ತು ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ವಿಶೇಷ ರೈಲು ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದೆ.

ಭಾರತೀಯ ರೈಲ್ವೇ ಇಲಾಖೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಪತ್ರ ಬರೆದಿದ್ದು, ಇದಕ್ಕೆ ಒಪ್ಪಿಗೆ ನೀಡಿರುವ ಕೇಂದ್ರ ರೈಲ್ವೇ ಇಲಾಖೆಯು ಬೀದರ್, ವಿಜಯಪುರ, ಮೈಸೂರು, ಬಾಗಲಕೋಟೆ, ಕಾರವಾರ, ಶಿವಮೊಗ್ಗ ಜಿಲ್ಲೆಗಳಿಗೆ ವಿಶೇಷ ರೈಲು ವ್ಯವಸ್ಥೆ ಮಾಡಿದೆ.

ಇದೇ ತಿಂಗಳು ಯುಗಾದಿ ಹಬ್ಬ ಕೂಡ ಇದ್ದು, ಜನರ ಪ್ರಯಾಣಕ್ಕೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಈ ನಿರ್ಣಯವನ್ನು ತೆಗೆದುಕೊಂಡಿದೆ. ಗುರುವಾರದಿಂದ ಏಪ್ರಿಲ್ 14ರ ವರೆಗೆ ಹೆಚ್ಚಿನ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ.

(ಮಾಹಿತಿ ಕೃಪೆ ಉದಯವಾಣಿ)

ಸಾರಿಗೆ ನೌಕರರಿಗೆ ಸಿಎಂ ವಾರ್ನಿಂಗ್: ಕೆಲಸಕ್ಕೆ ಹಾಜರಾಗದಿದ್ರೆ ಕಠಿಣ ಕ್ರಮದ ಎಚ್ಚರಿಕೆ

 

ಬೆಂಗಳೂರು: ಸಾರಿಗೆ ನೌಕಕರು ಕೆಲಸಕ್ಕೆ ಹಾಜರಾಗದಿದ್ರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ.. ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ, 'ನೌಕರರನ್ನ ಮನವೊಲಿಸುವ ಯಾವುದೇ ಕೆಲಸವನ್ನ ನಾವು ಮಾಡೋದಿಲ್ಲ. ಸಾರಿಗೆ ನೌಕರರ ಒಂಭತ್ತು ಬೇಡಿಕೆಗಳಲ್ಲಿ ಎಂಟು ಬೇಡಿಕೆಗಳನ್ನ ಇಡೇರಿಸಿದ್ದೇವೆ. ಕೆಲಸಕ್ಕೆ ಹಾಜರಾಗದಿದ್ರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ.. ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ' ಎಂದು ಎಚ್ಚರಿಸಿದರು.

(ಮಾಹಿತಿ ಕೃಪೆ Kannada News Now)

ದೇಶದ ಎಲ್ಲ ರಾಜ್ಯಗಳ ಸಿಎಂಗಳೊಂದಿಗೆ ಸಂಜೆ ಪಿಎಂ ಮೋದಿ ತುರ್ತು ಸಭೆ: ಮತ್ತೆ ಲಾಕ್ ಡೌನ್ ಘೋಷಣೆ?

 

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಕೋವಿಡ್-19 ಮತ್ತು ವಿವಿಧ ರಾಜ್ಯಗಳಲ್ಲಿ ಲಾಕ್ ಡೌನ್ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಅದರಂತೆ, ಸಂಜೆ 6.30ಕ್ಕೆ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಸಂವಾದ ನಡೆಸುವ ಸಾಧ್ಯತೆ ಇದೆ.

ಭಾರತವು 1.15 ಲಕ್ಷಕ್ಕೂ ಹೆಚ್ಚು ಹೊಸ ಕೊರೊನಾ ವೈರಸ್ ಪ್ರಕರಣಗಳನ್ನ ವರದಿ ಮಾಡಿದ ಒಂದು ದಿನದ ನಂತರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದೆ. ಇದು ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ನಂತರ ಪ್ರತಿದಿನ ದಾಖಲೆಯ ಏರಿಕೆಯಾಗಿದೆ. ಇದು ರಾಷ್ಟ್ರವ್ಯಾಪಿ ಸಂಖ್ಯೆಯನ್ನ 1,28,01,785ಕ್ಕೆ ತಳ್ಳಿದೆ. ಕೊರೊನಾ ವೈರಸ್ ಪ್ರಕರಣಗಳಲ್ಲಿ ಒಂದು ದಿನದ ಹೆಚ್ಚಳವು ಮೂರು ದಿನಗಳಲ್ಲಿ ಎರಡನೇ ಬಾರಿಗೆ ಬುಧವಾರ ೧ ಲಕ್ಷದ ಗಡಿಯನ್ನು ದಾಟಿದೆ.

ಪ್ರಧಾನಮಂತ್ರಿಯವರು ಮಾರ್ಚ್ 17 ರಂದು ಕೊನೆಯ ಬಾರಿಗೆ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಿದ್ದರು. ಈ ಸಂದರ್ಭದಲ್ಲಿ ಅವರು ದೇಶದ ಕೆಲವು ಭಾಗಗಳಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಮತ್ತು '2ನೇ ಅಲೆಯನ್ನ ಪರಿಶೀಲಿಸಲು ತ್ವರಿತ ಮತ್ತು ನಿರ್ಣಾಯಕ' ಕ್ರಮಗಳಿಗೆ ಕರೆ ನೀಡಿದ್ದರು. ಸೋಂಕುಗಳು ಮತ್ತು ಸಾವುಗಳ 'ಆತಂಕಕಾರಿ ಬೆಳವಣಿಗೆಯ ದರ'ದ ನಡುವೆ ದೇಶದಲ್ಲಿ ಕೋವಿಡ್-19 ಪರಿಸ್ಥಿತಿ ಮತ್ತು ಲಸಿಕೆ ಅಭ್ಯಾಸವನ್ನು ಪರಿಶೀಲಿಸಲು ಪ್ರಧಾನಿ ಮೋದಿ ಅವರು ಭಾನುವಾರ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದರು.

ಪರೀಕ್ಷೆ, ಪತ್ತೆ, ಚಿಕಿತ್ಸೆ, ಕೋವಿಡ್ ಸೂಕ್ತ ನಡವಳಿಕೆ ಮತ್ತು ಲಸಿಕೆಯ ಐದು ಪಟ್ಟು ಕಾರ್ಯತಂತ್ರವನ್ನ ಅತ್ಯಂತ ಗಂಭೀರತೆ ಮತ್ತು ಬದ್ಧತೆಯಿಂದ ಜಾರಿಗೆ ತಂದರೆ, ಸಾಂಕ್ರಾಮಿಕ ರೋಗ ಹರಡುವುದನ್ನ ತಡೆಯಲು ಪರಿಣಾಮಕಾರಿ ಎಂದು ಪ್ರಧಾನಿ ಮೋದಿ ಅವರು ಸಭೆಯ ನಂತರ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ರು.

ಕೋವಿಡ್-ಸೂಕ್ತ ನಡವಳಿಕೆಯ ಅನುಸರಣೆಯ ತೀವ್ರ ಕುಸಿತ, ವಿಶೇಷವಾಗಿ ಮುಖವಾಡಗಳ ಬಳಕೆ ಮತ್ತು ಸಾಮಾಜಿಕ ಅಂತರ, ಸಾಂಕ್ರಾಮಿಕ ಆಯಾಸ ಮತ್ತು ಕ್ಷೇತ್ರ ಮಟ್ಟದಲ್ಲಿ ನಿಯಂತ್ರಣ ಕ್ರಮಗಳ ಪರಿಣಾಮಕಾರಿ ಅನುಷ್ಠಾನದ ಕೊರತೆಯೇ ಪ್ರಕರಣಗಳ ತೀವ್ರ ಏರಿಕೆಗೆ ಕಾರಣ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.      

(ಮಾಹಿತಿ ಕೃಪೆ Kannada News Now)           

ಕೊರೊನಾ ಎರಡನೇ ಅಲೆ: ಜ್ವರ ಬಾರದೇ ಇದ್ದರೂ ಸಹ ದೇಹದಲ್ಲಾಗುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

 

ಶೀತ, ಕಫ, ಜ್ವರ, ವಾಸನೆ ಗ್ರಹಿಕೆ ಕಳೆದುಕೊಳ್ಳುವುದು, ರುಚಿ ಗ್ರಹಿಸಲು ಆಗದೇ ಇರೋದು ಇವೆಲ್ಲ ಕೊರೊನಾ ಸೋಂಕಿನ ಸಾಮಾನ್ಯ ಲಕ್ಷಣಗಳು ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಇದೀಗ ಎಲ್ಲೆಡೆ ಕೊರೊನಾದ ಎರಡನೆ ಅಲೆಯ ಆರ್ಭಟ ನಡೆಯುತ್ತಿದ್ದು ಇದೀಗ ಕೊರೊನಾ ಸೋಂಕಿನ ಲಕ್ಷಣಗಳೂ ಹೆಚ್ಚಾಗುತ್ತಿವೆ. ಆಹಾರ ತಜ್ಞರು 8 ಹೆಚ್ಚುವರಿ ಲಕ್ಷಣಗಳನ್ನ ಗುರುತಿಸಿದ್ದು ಈ ಲಕ್ಷಣಗಳು ಕಂಡಲ್ಲಿ ಕೂಡಲೇ ಐಸೋಲೇಟ್​ ಆಗುವಂತೆ ಸೂಚನೆ ನೀಡಿದ್ದಾರೆ.

ಅಸಾಮಾನ್ಯ ಕೆಮ್ಮು : ಕೆಮ್ಮು ಕೊರೊನಾದ ಮುಖ್ಯ ಲಕ್ಷಣಗಳಲ್ಲಿ ಒಂದು. ಆದರೆ ಈ ಕೆಮ್ಮಿನ ಶಬ್ದ ಸಾಮಾನ್ಯ ಕೆಮ್ಮಿಗಿಂತ ವಿಭಿನ್ನವಾಗಿರುತ್ತೆ. ಧೂಮಪಾನಿಯ ಕೆಮ್ಮಿಗೆ ಈ ಕೆಮ್ಮಿನ ಶಬ್ದ ಹೋಲಿಕೆ ಹೊಂದಿದೆ.

ಗುಲಾಬಿ ಬಣ್ಣದ ಕಣ್ಣು : ಚೀನಾದಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ ಕಣ್ಣು ಗುಲಾಬಿ ಬಣ್ಣಕ್ಕೆ ತಿರುಗಿದ್ರೆ ಅದು ಕೂಡ ಕೊರೊನಾದ ಲಕ್ಷಣವಂತೆ. ಕಣ್ಣು ಕೆಂಪಗಾಗೋದು, ಊದಿಕೊಳ್ಳೋದು ಹಾಗೂ ಕಣ್ಣಿನಲ್ಲಿ ನೀರು ತುಂಬಿಕೊಳ್ಳೋದು ಇದು ಕೂಡ ಕೊರೊನಾದ ಹೊಸ ಲಕ್ಷಣವಾಗಿದೆ.

ಉಸಿರಾಟದ ತೊಂದರೆ : ಎದೆಯಲ್ಲಿ ನೋವು ಉಂಟಾಗೋದ್ರ ಜೊತೆಯಲ್ಲಿ ಉಸಿರಾಡಲು ತೊಂದರೆಯಾಗುತ್ತೆ. ಅಲ್ಲದೇ ಹೃದಯ ಬಡಿತದಲ್ಲೂ ಏರಿಳಿತ ಉಂಟಾಗುತ್ತದೆ.

ಹೊಟ್ಟೆ ಆರೋಗ್ಯದಲ್ಲಿ ಏರುಪೇರು : ಸಂಶೋಧಕರು ನೀಡಿರುವ ಮಾಹಿತಿಯ ಪ್ರಕಾರ ಹೊಟ್ಟೆ ನೋವು, ಅತಿಸಾರ, ವಾಕರಿಕೆ ಇವೆಲ್ಲವೂ ಕೊರೊನಾದ ಲಕ್ಷಣಗಳಾಗಿದೆ. ಈ ಯಾವುದೇ ಸಮಸ್ಯೆಗಳು ನಿಮಗೆ ಕಂಡುಬಂದಲ್ಲಿ ಕೂಡಲೇ ಕೊರೊನಾ ಪರೀಕ್ಷೆಗೆ ಒಳಗಾಗೋದು ಒಳಿತು.

(ಮಾಹಿತಿ ಕೃಪೆ ಕನ್ನಡದುನಿಯಾ)

ನಾವು ಜಾತಿ ಮೇಲೆ ರಾಜಕಾರಣ ಮಾಡಲ್ಲ, ನಮ್ಮದು 'ನೀತಿ' ರಾಜಕಾರಣ: ಡಿ.ಕೆ.ಶಿವಕುಮಾರ್

 

ಬೆಳಗಾವಿ: ಕಾಂಗ್ರೆಸ್ ಪಕ್ಷ ಜಾತಿಯ ಮೇಲೆ ರಾಜಕೀಯ ಮಾಡುವುದಿಲ್ಲ. ಏನೇ ಇದ್ದರೂ ನಾವು ನೀತಿ ಮೇಲೆ ರಾಜಕಾರಣ ‌ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.

ಬೆಳಗಾವಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾನದ ಹಕ್ಕು ಹೊಂದಿರುವ ಲಿಂಗಾಯತರು ನಮ್ಮವರೇ. ಮರಾಠರು ನಮ್ಮ ಅಣ್ಣ-ತಮ್ಮಂದಿರಂತೆ. ನಮಗೆ ಎಲ್ಲರೂ ಒಂದೇ. ಆದರೆ ಬಿಜೆಪಿಯವರೇ ಅವರನ್ನು ಬೇರೆ ಬೇರೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವಂತೆ ಕಮ್ಯುನಿಷ್ಟ್ ಪಕ್ಷಗಳ ನಾಯಕರು, ರೈತ ಸಂಘಟನೆಗಳನ್ನು ಸಂಪರ್ಕಿಸುತ್ತಿದ್ದೇನೆ. ನಮ್ಮ ಅಭ್ಯರ್ಥಿ ಸತೀಶ ಜಾರಕಿಹೊಳಿಗೆ ಬೆಂಬಲ ನೀಡುವುದಾಗಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ದೆಹಲಿಯಲ್ಲಿ ನೂರಾರು ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ನೀತಿ ಬಗ್ಗೆ ರೈತರಿಗೆ ಆಕ್ರೋಶವಿದೆ. ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಇದನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಬೆಂಬಲಿಸುವಂತೆ ಕೋರಿದ್ದೇವೆ ಎಂದು ಹೇಳಿದರು.

ಸಾರಿಗೆ ನೌಕರರ ಮುಷ್ಕರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ನೌಕರರ ಮುಷ್ಕರಕ್ಕೆ ನಾವು ಬೆಂಬಲ ಸೂಚಿಸಿದ್ದೇವೆ. ಸರ್ಕಾರ ಅವರೊಂದಿಗೆ ವರ್ತಿಸುತ್ತಿರುವ ರೀತಿ ಸರಿಯಲ್ಲ.‌ ಅವರ ನೋವು ಆಲಿಸಬೇಕು.‌ ಕೂಡಲೇ ನೌಕರರನ್ನು ಕರೆದು ಮಾತನಾಡಬೇಕು ಎಂದರು. ಬೆಳಗಾವಿ ಜಿಲ್ಲೆಗೆ ಕಾಂಗ್ರೆಸ್ ಕೊಡುಗೆ ಏನು ಎಂದಿದ್ದ ಸಚಿವ ಜಗದೀಶ್ ಶೆಟ್ಟರ್ ಗೆ ತಿರುಗೇಟು ನೀಡಿದ ಶಿವಕುಮಾರ ಶೆಟ್ಟರ್ ಗೆ ಮಾತನಾಡಲು ಶಕ್ತಿ ಕೊಟ್ಟಿದ್ದೇ ನಾವು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟಿದ್ದೆ ನಾವು. ಅವರು ಹೀಗೆ ಮಾತನಾಡಲಿ ಎಂದು ಟಾಂಗ್ ನೀಡಿದರು.

(ಮಾಹಿತಿ ಕೃಪೆ ಉದಯವಾಣಿ)

Wednesday, April 7, 2021

ಮುಚ್ಚಿಬಿಡು ಮನಸಿನ ಕದವನ್ನು ಬೇಗ ಹೊರಗೆ ಉಳಿಯಲಿ ಎಲ್ಲ ಜಗವೆ ಸೋತು..


👉 *
ಮುಚ್ಚಿಬಿಡು ಮನಸಿನ ಕದವನ್ನು ಬೇಗ 
ಹೊರಗೆ ಉಳಿಯಲಿ ಎಲ್ಲ ಜಗವೆ ಸೋತು..
ಮುಚ್ಚಿಬಿಡು ಮನಸಿನ ಕದವನ್ನು ಬೇಗ 
ಹೊರಗೆ ಉಳಿಯಲಿ ಎಲ್ಲ ಜಗವೆ ಸೋತು..
ಬಿಚ್ಚಿಬಿಡು ಬಚ್ಚಿಟ್ಟ ಮಾತೆಲ್ಲ ಒಮ್ಮೆ ಹೇ ಹೇ...
ಬಿಚ್ಚಿಬಿಡು ಬಚ್ಚಿಟ್ಟ ಮಾತೆಲ್ಲ ಒಮ್ಮೆ 
ಹೃದಯಕೇಳಲಿ ಈಗ ಬಳಿಯೆ ಕೂತು!!
ಹೃದಯಕೇಳಲಿ ಈಗ ಬಳಿಯೆ ಕೂತು!!
ಮುಚ್ಚಿಬಿಡು ಮನಸಿನ ಕದವನ್ನು ಬೇಗ 
ಹೊರಗೆ ಉಳಿಯಲಿ ಎಲ್ಲ ಜಗವೆ ಸೋತು..
***
ಮೆಚ್ಚಿಸುವ ಹಂಗಿಲ್ಲ, ವಂಚನೆಯ ಸೊಂಕಿಲ್ಲ
ತನ್ನ ಹಮ್ಮನು ಮೆರೆಸೊ ಹಂಬಲವು ಇಲ್ಲ.
ಮೆಚ್ಚಿಸುವ ಹಂಗಿಲ್ಲ, ವಂಚನೆಯ ಸೊಂಕಿಲ್ಲ
ತನ್ನ ಹಮ್ಮನು ಮೆರೆಸೊ ಹಂಬಲವು ಇಲ್ಲ. 
ಯಾರಕಿಚ್ಚಿಗೆ ಯಾರೊ ಬೀಸಿದ ಕಲ್ಲಿಗೆ!!
ಯಾರಕಿಚ್ಚಿಗೆ ಯಾರೊ ಬೀಸಿದ ಕಲ್ಲಿಗೆ!!
ಎದೆಗೊಳವು ಕದಡುವ ಭಯವು ಇಲ್ಲ.
ಎದೆಗೊಳವು ಕದಡುವ ಭಯವು ಇಲ್ಲ.
ಮುಚ್ಚಿಬಿಡು ಮನಸಿನ ಕದವನ್ನು ಬೇಗ 
ಹೊರಗೆ ಉಳಿಯಲಿ ಎಲ್ಲ ಜಗವೆ ಸೋತು..
***
ನಿನ್ನೊಂದಿಗಿರು ನೀನು,ಮರೆತು ಹೋಗಲಿ ಹಾಡು 
ಮೌನವಿಲ್ಲದೆ ಇಲ್ಲ ಹೊಸತು ಹುಟ್ಟು..
ನಿನ್ನೊಂದಿಗಿರು ನೀನು,ಮರೆತು ಹೋಗಲಿ ಹಾಡು 
ಮೌನವಿಲ್ಲದೆ ಇಲ್ಲ ಹೊಸತು ಹುಟ್ಟು..
ಕೋಶದೊಳಗೆ ಕೂತು ಕಾಯುವ ಸಹನೆಗೆ ಹೇ ಹೇ..
ಕೋಶದೊಳಗೆ ಕೂತು ಕಾಯುವ ಸಹನೆಗೆ 
ದಕ್ಕುವುದು ಚಿಟ್ಟೆಯ ಹಾರುವ ಗುಟ್ಟು.
ದಕ್ಕುವುದು ಚಿಟ್ಟೆಯ ಹಾರುವ ಗುಟ್ಟು.
ಮುಚ್ಚಿಬಿಡು ಮನಸಿನ ಕದವನ್ನು ಬೇಗ 
ಹೊರಗೆ ಉಳಿಯಲಿ ಎಲ್ಲ ಜಗವೆ ಸೋತು..
ಮುಚ್ಚಿಬಿಡು ಮನಸಿನ ಕದವನ್ನು ಬೇಗ 
ಹೊರಗೆ ಉಳಿಯಲಿ ಎಲ್ಲ ಜಗವೆ ಸೋತು..
ಬಿಚ್ಚಿಬಿಡು ಬಚ್ಚಿಟ್ಟ ಮಾತೆಲ್ಲ ಒಮ್ಮೆ ಹೇ ಹೇ...
ಬಿಚ್ಚಿಬಿಡು ಬಚ್ಚಿಟ್ಟ ಮಾತೆಲ್ಲ ಒಮ್ಮೆ 
ಹೃದಯಕೇಳಲಿ ಈಗ ಬಳಿಯೆ ಕೂತು!!
ಹೃದಯಕೇಳಲಿ ಈಗ ಬಳಿಯೆ ಕೂತು!!
ಮುಚ್ಚಿಬಿಡು ಮನಸಿನ ಕದವನ್ನು ಬೇಗ 
ಹೊರಗೆ ಉಳಿಯಲಿ ಎಲ್ಲ ಜಗವೆ ಸೋತು..





 

Tuesday, April 6, 2021

ಸುಟ್ಟರೂ ಸುಡದವನು ಸುಡುವುದೆಲ್ಲಿಂದ?

👉 
 *ತಿನ್ನದವ ಪೂಜಿಸುವ ತಿನ್ನದವನವನು ತಿನ್ನುವರ ನೈವೇದ್ಯ ತಿನ್ನುವವನವನೂ...
ತಿನ್ನದವ ಪೂಜಿಸುವ ತಿನ್ನದವನವನು ತಿನ್ನುವರ ನೈವೇದ್ಯ ತಿನ್ನುವವನವನೂ.... 
ಕೊಂದವನು ತಿಂದಾಗ ಸತ್ತವನು ಅವನೂ...
ಕೊಂದವನು ತಿಂದಾಗ ಸತ್ತವನು ಅವನು
 ಸತ್ತವರು ಬಿಟ್ಟದ್ದು ತಿನ್ನುವನವನೂ.... 
ನೋವಿಲ್ಲದವನವ ನೋವ ಕೊಡಲಹುದೇ? ಸಾವಿಲ್ಲದವನಂತೆ ಅವ ಕೊಲ್ಲಲಾರನೂ...
ನೋವಿಲ್ಲದವನವ ನೋವ ಕೊಡಲಹುದೇ? ಸಾವಿಲ್ಲದವನಂತೆ ಅವ ಕೊಲ್ಲಲಾರನೂ... 
ಆದಿ ತಿರುಕನೂ ವನಂತೆ ಕೊಡುವುದೆಲ್ಲಿಂದ? 
ಬೂದಿ ಹಚ್ಚುನೂ ವನಂತೆ ಕೆಡುವುದೆಲ್ಲಿಂದ? 
ಸುಟ್ಟರೂ ಸುಡದವನು ಸುಡುವುದೆಲ್ಲಿಂದ? 
ಅಡಿನೆಡದ ಕಿತ್ತಡಿಯ ನಡಿಗೆಯೇ ಚಂದ
ಅಡಿನೆಡದ ಕಿತ್ತಡಿಯ ನಡಿಗೆಯೇ ಚಂದ  ಆರು ಮೂರರ ಮನೆಯ ಆಳುವವನವನು ಏಳೂರ ದಾಟಿದರೆ ಕಾಣುವವನವನು 
ಆರು ಮೂರರ ಮನೆಯ ಆಳುವವನವನು ಏಳೂರ ದಾಟಿದರೆ ಕಾಣುವವನವನು ಎಂಟೆದೆಯ ಭಂಟನವ ಗಂಟುಬಿಡಿಸುವನೂ... 
 ಎಂಟೆದೆಯ ಭಂಟನವ ಗಂಟುಬಿಡಿಸುವನೂ ನಾಕೈದು ಸೇರಿಸಿ
ನಾಕೈದು ಸೇರಿಸಿ  ನಕ್ಕು ನಗಿಸುವನು ನಾಕೈದು ಸೇರಿಸಿ  ನಕ್ಕು ನಗಿಸುವನೂ...
ಆರು ಮೂರರ ಮನೆಯ ಆಳುವವನವನು ಏಳೂರ ದಾಟಿದರೆ ಕಾಣುವವನವನು ಎಂಟೆದೆಯ ಭಂಟನವ        ಗಂಟುಬಿಡಿಸುವನೂ
ನಾಕೈದು ಸೇರಿಸಿ.... ನಕ್ಕು ನಗಿಸುವನೂ...
ನಾಕೈದು ಸೇರಿಸಿ.... ನಕ್ಕು ನಗಿಸುವನೂ...
ನಕ್ಕು ನಗಿಸುವನೂ... ನಕ್ಕು ನಗಿಸುವನೂ...


 : ಅಹೋರಾತ್ರ ವಾಧ್ಯ ಸಂಯೋಜನೆ ಮತ್ತು ಕೊಳಲು ಸಾಮೀರ್ ರಾವ್. 
ತಾಂತ್ರಿಕ ಸಂಯೋಜನೆ ವಿನಯ್ ರಂಗದೋಳ್.
  ಗಾಯನ ಮತ್ತು ರಾಗ ಸಂಯೋಜನೆ ರಾಘವೇಂದ್ರ ಬೀಜಾಡಿ,,,,,,


ಏನನ್ನೂ ತಿನ್ನದೇ ಉಪವಾಸವಿದ್ದು ಪೂಜಿಸುವವನ ಪೂಜೆಗೆ ತಿನ್ನದೇ ನಿಲ್ಲುವವನು ದೇವರು. ಹಾಗೆಯೇ ಪೂಜಿಸುವವ ತಿನ್ನುವ ಪದಾರ್ಥವೆಲ್ಲವನ್ನೂ ನೈವೇದ್ಯವೆಂದು ಅರ್ಪಿಸಿದಾಗ ತಿನ್ನುವವನೂ ಅದೇ ದೇವರೇರೀ. ಬೇಡರ ಕಣ್ಣಪ್ಪ ಜಿಂಕೆಯನ್ನು ಕೊಂದಾಗ ಸಾವಿಗೆ ಮುನ್ನ ನೋವನುಭವಿಸಿದ್ದು ಆ ಜಿಂಕೆಯೊಳಗಿನ ಶಿವನೇ ಮತ್ತು ಆ ಜಿಂಕೆಯ ಮಾಂಸವನ್ನು ನೈವೇದ್ಯವೆಂದು ಆ ಕಣ್ಣಪ್ಪ ಅರ್ಪಿಸಿದಾಗ ಸ್ವೀಕರಿಸಿದವನೂ ಆ ಕಾಳಹಸ್ತೀಶ್ವರನೇ. ಸತ್ತ ಜೀವಿಗಳೆಲ್ಲ ಬಿಟ್ಟ ಪ್ರೇತದೇಹಗಳನ್ನು ಪಂಚಭೂತಗಳಾಗಿ ಲೀನಮಾಡಿಕೊಂಡಿದ್ದೂ ಆ ಪಂಚಲಿಂಗನೇ ಕಣ್ರೀ. ಕೊಡುವವರ ಜೋಳಿಗೆಯಲ್ಲಿ ಏನಿದೆಯೋ ಅದನ್ನು ಮತ್ರವೇ ಅವರು ಕೊಡಲು ಸಾಧ್ಯ ಅಲ್ಲವೇ ಹಾಗಿದ್ದಲ್ಲಿ ಆ ಶಿವನಲ್ಲಿ ನೋವೇ ಇಲ್ಲದಿರುವಾಗ ಅವ ನಮಗೆ ನೋವ ಕೊಡಲು ಹೇಗೆ ಸಾಧ್ಯ? ಅವ ಸಾವಿಲ್ಲದವನಾದುದರಿಂದ ಅವ ಯಾರನ್ನೂ ಕೊಲ್ಲುವುದಿಲ್ಲ. ಅವ ಈ ಜಗದ ಆದಿ ತಿರುಕನಲ್ಲವೇ? ಆ ಹೊತ್ತಿಗೆ ಸಿಕ್ಕಷ್ಟು ತಾ ಬಳಸಿ ಮಿಕ್ಕದ್ದು ಇತರರೊಂದಿಗೆ ಹಂಚಿ ತಿನ್ನುವವನನ್ನು ನಾವು ಬೇಡುವುದಾದರೂ ಏನನ್ನು ಗೆಳೆಯರೇ, ಮತ್ತು ಅವ ಕೊಡುವುದಾದರೂ ಎಲ್ಲಿಂದ? ಅವನು ಸತ್ತದ್ದನ್ನೆಲ್ಲ ಸುಟ್ಟು ಉಳಿದ ವಿಭೂತಿಯನ್ನು ಮೈಗೆಲ್ಲಾ ಹಚ್ಚುತ್ತಾನಂತೆ! ಇತ್ತೀಚಿನ ವೈಜ್ಞಾನಿಕ ಸಂಶೋಧನೆಯ ಪ್ರಕಾರ ಶವ ಸುಟ್ಟ ಭಸ್ಮದಲ್ಲಿ ಹನ್ನೆರಡು ಮೂಲ ಅಜೈವಿಕ ಲವಣಗಳು ಇರುತ್ತವೆ, ಅವು ಜೀವಿಸಿರುವವರ ಆರೋಗ್ಯದ ಮೇಲೆ ಮಹತ್ವದ ಪರಿಣಾಮ ಬೀರುತ್ತವೆ. ಹಾಗಾಗಿ ಮೈಯೆಲ್ಲಾ ಬೂದಿ ಹಚ್ಚಿಕೊಳ್ಳುವ ಭಸ್ಮಧಾರಿ ಕೆಡುವುದಾದರೂ ಎಲ್ಲಿಂದ? ಅಗ್ನಿ ಯಾವುದನ್ನಾದರೂ ಭಸ್ಮವಾಗುವವರೆಗೆ ಸುಡಬಹುದು ಅದಕ್ಕೂ ಮೀರಿ ಸುಡಲಾಗುವುದಿಲ್ಲ. ಆ ಭೂತನಾಥ ಅಗ್ನಿ ಸುಡದಷ್ಟು ಸುಟ್ಟುಹೋಗಿದ್ದಾನೆ ಅಲ್ಲವೇ ? ಇನ್ನು ಸುಡುವುದಾದರೂ ಎಲ್ಲಿಂದ? ಅವನು ಅಡಿನೆಟ್ಟು ಒಂದು ಕಡೆ ನಿಲ್ಲದ ಕಿತ್ತಡಿಯವನು ಹಾಗಾಗಿ ಅವನ ನಡಿಗೆಯೇ ಚಂದ! ನಮ್ಮೆಲ್ಲರ ಕೊನೆಯ ಮನೆ ಆರುಮೂರರ ಗುಂಡಿ ಅವನ ರಾಜ್ಯದಾನಿ. ನಮ್ಮ ಏಳು ಚಕ್ರಗಳು ದಾಟಿದರೇ ಅವ ಕಾಣುವನು. ಎಂಟೆದೆಯ ಭಂಟನವನು ನಮ್ಮೆಲ್ಲರ ಚಿಂತೆಯ ಗಂಟು ಬಿಡಿಸುವನು. ಕಡೆಗೆ ಹೆಣ್ಣಿನ ಐದುಭಾಗ ಮತ್ತು ಗಂಡಿನ ನಾಲ್ಕುಭಾಗ ಸೇರಿಸಿ ಒಂಬತ್ತು ಭಾಗದ ಮಗುವನ್ನು ಹುಟ್ಟಿಸಿ ನಮ್ಮನ್ನೆಲ್ಲಾ ನಕ್ಕು ನಗಿಸುವನವನು.