WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Tuesday, April 6, 2021

ಸುಟ್ಟರೂ ಸುಡದವನು ಸುಡುವುದೆಲ್ಲಿಂದ?

👉 
 *ತಿನ್ನದವ ಪೂಜಿಸುವ ತಿನ್ನದವನವನು ತಿನ್ನುವರ ನೈವೇದ್ಯ ತಿನ್ನುವವನವನೂ...
ತಿನ್ನದವ ಪೂಜಿಸುವ ತಿನ್ನದವನವನು ತಿನ್ನುವರ ನೈವೇದ್ಯ ತಿನ್ನುವವನವನೂ.... 
ಕೊಂದವನು ತಿಂದಾಗ ಸತ್ತವನು ಅವನೂ...
ಕೊಂದವನು ತಿಂದಾಗ ಸತ್ತವನು ಅವನು
 ಸತ್ತವರು ಬಿಟ್ಟದ್ದು ತಿನ್ನುವನವನೂ.... 
ನೋವಿಲ್ಲದವನವ ನೋವ ಕೊಡಲಹುದೇ? ಸಾವಿಲ್ಲದವನಂತೆ ಅವ ಕೊಲ್ಲಲಾರನೂ...
ನೋವಿಲ್ಲದವನವ ನೋವ ಕೊಡಲಹುದೇ? ಸಾವಿಲ್ಲದವನಂತೆ ಅವ ಕೊಲ್ಲಲಾರನೂ... 
ಆದಿ ತಿರುಕನೂ ವನಂತೆ ಕೊಡುವುದೆಲ್ಲಿಂದ? 
ಬೂದಿ ಹಚ್ಚುನೂ ವನಂತೆ ಕೆಡುವುದೆಲ್ಲಿಂದ? 
ಸುಟ್ಟರೂ ಸುಡದವನು ಸುಡುವುದೆಲ್ಲಿಂದ? 
ಅಡಿನೆಡದ ಕಿತ್ತಡಿಯ ನಡಿಗೆಯೇ ಚಂದ
ಅಡಿನೆಡದ ಕಿತ್ತಡಿಯ ನಡಿಗೆಯೇ ಚಂದ  ಆರು ಮೂರರ ಮನೆಯ ಆಳುವವನವನು ಏಳೂರ ದಾಟಿದರೆ ಕಾಣುವವನವನು 
ಆರು ಮೂರರ ಮನೆಯ ಆಳುವವನವನು ಏಳೂರ ದಾಟಿದರೆ ಕಾಣುವವನವನು ಎಂಟೆದೆಯ ಭಂಟನವ ಗಂಟುಬಿಡಿಸುವನೂ... 
 ಎಂಟೆದೆಯ ಭಂಟನವ ಗಂಟುಬಿಡಿಸುವನೂ ನಾಕೈದು ಸೇರಿಸಿ
ನಾಕೈದು ಸೇರಿಸಿ  ನಕ್ಕು ನಗಿಸುವನು ನಾಕೈದು ಸೇರಿಸಿ  ನಕ್ಕು ನಗಿಸುವನೂ...
ಆರು ಮೂರರ ಮನೆಯ ಆಳುವವನವನು ಏಳೂರ ದಾಟಿದರೆ ಕಾಣುವವನವನು ಎಂಟೆದೆಯ ಭಂಟನವ        ಗಂಟುಬಿಡಿಸುವನೂ
ನಾಕೈದು ಸೇರಿಸಿ.... ನಕ್ಕು ನಗಿಸುವನೂ...
ನಾಕೈದು ಸೇರಿಸಿ.... ನಕ್ಕು ನಗಿಸುವನೂ...
ನಕ್ಕು ನಗಿಸುವನೂ... ನಕ್ಕು ನಗಿಸುವನೂ...


 : ಅಹೋರಾತ್ರ ವಾಧ್ಯ ಸಂಯೋಜನೆ ಮತ್ತು ಕೊಳಲು ಸಾಮೀರ್ ರಾವ್. 
ತಾಂತ್ರಿಕ ಸಂಯೋಜನೆ ವಿನಯ್ ರಂಗದೋಳ್.
  ಗಾಯನ ಮತ್ತು ರಾಗ ಸಂಯೋಜನೆ ರಾಘವೇಂದ್ರ ಬೀಜಾಡಿ,,,,,,


ಏನನ್ನೂ ತಿನ್ನದೇ ಉಪವಾಸವಿದ್ದು ಪೂಜಿಸುವವನ ಪೂಜೆಗೆ ತಿನ್ನದೇ ನಿಲ್ಲುವವನು ದೇವರು. ಹಾಗೆಯೇ ಪೂಜಿಸುವವ ತಿನ್ನುವ ಪದಾರ್ಥವೆಲ್ಲವನ್ನೂ ನೈವೇದ್ಯವೆಂದು ಅರ್ಪಿಸಿದಾಗ ತಿನ್ನುವವನೂ ಅದೇ ದೇವರೇರೀ. ಬೇಡರ ಕಣ್ಣಪ್ಪ ಜಿಂಕೆಯನ್ನು ಕೊಂದಾಗ ಸಾವಿಗೆ ಮುನ್ನ ನೋವನುಭವಿಸಿದ್ದು ಆ ಜಿಂಕೆಯೊಳಗಿನ ಶಿವನೇ ಮತ್ತು ಆ ಜಿಂಕೆಯ ಮಾಂಸವನ್ನು ನೈವೇದ್ಯವೆಂದು ಆ ಕಣ್ಣಪ್ಪ ಅರ್ಪಿಸಿದಾಗ ಸ್ವೀಕರಿಸಿದವನೂ ಆ ಕಾಳಹಸ್ತೀಶ್ವರನೇ. ಸತ್ತ ಜೀವಿಗಳೆಲ್ಲ ಬಿಟ್ಟ ಪ್ರೇತದೇಹಗಳನ್ನು ಪಂಚಭೂತಗಳಾಗಿ ಲೀನಮಾಡಿಕೊಂಡಿದ್ದೂ ಆ ಪಂಚಲಿಂಗನೇ ಕಣ್ರೀ. ಕೊಡುವವರ ಜೋಳಿಗೆಯಲ್ಲಿ ಏನಿದೆಯೋ ಅದನ್ನು ಮತ್ರವೇ ಅವರು ಕೊಡಲು ಸಾಧ್ಯ ಅಲ್ಲವೇ ಹಾಗಿದ್ದಲ್ಲಿ ಆ ಶಿವನಲ್ಲಿ ನೋವೇ ಇಲ್ಲದಿರುವಾಗ ಅವ ನಮಗೆ ನೋವ ಕೊಡಲು ಹೇಗೆ ಸಾಧ್ಯ? ಅವ ಸಾವಿಲ್ಲದವನಾದುದರಿಂದ ಅವ ಯಾರನ್ನೂ ಕೊಲ್ಲುವುದಿಲ್ಲ. ಅವ ಈ ಜಗದ ಆದಿ ತಿರುಕನಲ್ಲವೇ? ಆ ಹೊತ್ತಿಗೆ ಸಿಕ್ಕಷ್ಟು ತಾ ಬಳಸಿ ಮಿಕ್ಕದ್ದು ಇತರರೊಂದಿಗೆ ಹಂಚಿ ತಿನ್ನುವವನನ್ನು ನಾವು ಬೇಡುವುದಾದರೂ ಏನನ್ನು ಗೆಳೆಯರೇ, ಮತ್ತು ಅವ ಕೊಡುವುದಾದರೂ ಎಲ್ಲಿಂದ? ಅವನು ಸತ್ತದ್ದನ್ನೆಲ್ಲ ಸುಟ್ಟು ಉಳಿದ ವಿಭೂತಿಯನ್ನು ಮೈಗೆಲ್ಲಾ ಹಚ್ಚುತ್ತಾನಂತೆ! ಇತ್ತೀಚಿನ ವೈಜ್ಞಾನಿಕ ಸಂಶೋಧನೆಯ ಪ್ರಕಾರ ಶವ ಸುಟ್ಟ ಭಸ್ಮದಲ್ಲಿ ಹನ್ನೆರಡು ಮೂಲ ಅಜೈವಿಕ ಲವಣಗಳು ಇರುತ್ತವೆ, ಅವು ಜೀವಿಸಿರುವವರ ಆರೋಗ್ಯದ ಮೇಲೆ ಮಹತ್ವದ ಪರಿಣಾಮ ಬೀರುತ್ತವೆ. ಹಾಗಾಗಿ ಮೈಯೆಲ್ಲಾ ಬೂದಿ ಹಚ್ಚಿಕೊಳ್ಳುವ ಭಸ್ಮಧಾರಿ ಕೆಡುವುದಾದರೂ ಎಲ್ಲಿಂದ? ಅಗ್ನಿ ಯಾವುದನ್ನಾದರೂ ಭಸ್ಮವಾಗುವವರೆಗೆ ಸುಡಬಹುದು ಅದಕ್ಕೂ ಮೀರಿ ಸುಡಲಾಗುವುದಿಲ್ಲ. ಆ ಭೂತನಾಥ ಅಗ್ನಿ ಸುಡದಷ್ಟು ಸುಟ್ಟುಹೋಗಿದ್ದಾನೆ ಅಲ್ಲವೇ ? ಇನ್ನು ಸುಡುವುದಾದರೂ ಎಲ್ಲಿಂದ? ಅವನು ಅಡಿನೆಟ್ಟು ಒಂದು ಕಡೆ ನಿಲ್ಲದ ಕಿತ್ತಡಿಯವನು ಹಾಗಾಗಿ ಅವನ ನಡಿಗೆಯೇ ಚಂದ! ನಮ್ಮೆಲ್ಲರ ಕೊನೆಯ ಮನೆ ಆರುಮೂರರ ಗುಂಡಿ ಅವನ ರಾಜ್ಯದಾನಿ. ನಮ್ಮ ಏಳು ಚಕ್ರಗಳು ದಾಟಿದರೇ ಅವ ಕಾಣುವನು. ಎಂಟೆದೆಯ ಭಂಟನವನು ನಮ್ಮೆಲ್ಲರ ಚಿಂತೆಯ ಗಂಟು ಬಿಡಿಸುವನು. ಕಡೆಗೆ ಹೆಣ್ಣಿನ ಐದುಭಾಗ ಮತ್ತು ಗಂಡಿನ ನಾಲ್ಕುಭಾಗ ಸೇರಿಸಿ ಒಂಬತ್ತು ಭಾಗದ ಮಗುವನ್ನು ಹುಟ್ಟಿಸಿ ನಮ್ಮನ್ನೆಲ್ಲಾ ನಕ್ಕು ನಗಿಸುವನವನು. 





No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ