WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Tuesday, September 21, 2021

ದಸರಾ ಉದ್ಘಾಟನೆ: ಸಾಲುಮರದ ತಿಮ್ಮಕ್ಕನ ಆಯ್ಕೆಗೆ ಸಾಮಾಜಿಕ ಜಾಲತಾಣ ಅಭಿಯಾನ

 

ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಸರಳ ದಸರಾ ಆಚರಿಸಲು ಸರ್ಕಾರ ನಿರ್ಧರಿಸಿದೆ. ಏತನ್ಮಧ್ಯೆ ಈ ಬಾರಿಯ ದಸರಾ ಉದ್ಘಾಟಕರಾಗಿ ಪರಿಸರವಾದಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶತಾಯುಷಿ ಸಾಲುಮರದ ತಿಮ್ಮಕ್ಕ ಅವರನ್ನು ಆಯ್ಕೆ ಮಾಡುವ ಕುರಿತ ಸಾಮಾಜಿಕ ಜಾಲತಾಣ ಅಭಿಯಾನಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಳೆದ ವರ್ಷ ಮೈಸೂರು ದಸರಾವನ್ನು ಜಯದೇವ ಆಸ್ಪತ್ರೆ ಮುಖ್ಯಸ್ಥರಾದ ಡಾ.ಸಿ.ಎನ್.ಮಂಜುನಾಥ್ ಅವರು ನೆರವೇರಿಸಿದ್ದರು. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಡಾ.ಮಂಜುನಾಥ್ ಅವರ ಆಯ್ಕೆ ನಡೆದಿತ್ತು. ಈ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಸರಾ ಉದ್ಘಾಟಕರ ನೇಮಕದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಾಲುಮರದ ತಿಮ್ಮಕ್ಕ ಅವರನ್ನು ಈ ಬಾರಿ ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡಿದರೆ ಹೇಗೆ ಎಂಬ ಅಭಿಯಾನಕ್ಕೆ ಸಾವಿರಾರು ಮಂದಿ ಬೆಂಬಲಿಸಿ ಕಮೆಂಟ್ ಮಾಡಿದ್ದು, ಅದರಲ್ಲಿ ಆಯ್ದ ಕೆಲವು ಕಮೆಂಟ್ ಗಳು ಇಲ್ಲಿವೆ.
"ಮರಗಳನ್ನು ಹೆತ್ತ ಮಕ್ಕಳಂತೆ ಕಂಡ ಮಹಾತಾಯಿ ನಮ್ಮ ಸಾಲುಮರದ ತಿಮ್ಮಕ್ಕನವ್ರು. ಇವರು ನಮ್ಮ ನಾಡಹಬ್ಬ ದಸರಾ ಉದ್ಘಾಟನೆ ಮಾಡಿದ್ರೆ. ಅದರ ಘಟತೆ ಇನ್ನೂ ಇಮ್ಮಡಿಯಾಗುತ್ತೆ. ಅರ್ಹ ವ್ಯಕ್ತಿ" ಎಂಬುದಾಗಿ ರಾಜಶ್ರೀ ಢವಳೆ ಎಂಬವರು ಫೇಸ್ ಬುಕ್ ಕಮೆಂಟ್ ನಲ್ಲಿ ತಿಳಿಸಿದ್ದಾರೆ.
'ಅರ್ಹ ಮತ್ತು ಸೂಕ್ತ ವ್ಯಕ್ತಿ. ದಸರಾ ಹಬ್ಬಕ್ಕೂ ಮೆರಗು" ಎಂದು ಮತ್ತೊಬ್ಬ ಓದುಗರಾದ ಶಿವಕುಮಾರ್ ದೊಡ್ಮನಿ ತಿಳಿಸಿದ್ದಾರೆ. ಪರಿಸರ ಬಗ್ಗೆ ಅಪಾರ ಗೌರವವಿದೆ. ಹಾಗೂ ಅವರ ಕೊಡುಗೆ ಕರ್ನಾಟಕಕ್ಕೆ ಅಪಾರ. ನಿಜವಾದ ದೇವರು ಅವರಿಂದ ಉದ್ಘಾಟನೆ ಮಾಡಿ.ನಾಡಪ್ರೇಮ, ದೇಶಪ್ರೇಮ"ಕ್ಕೆ ಇವರೇ ಸಾಟಿ" ಎಂದು ಆನಂದ್ ಎಚ್ ಆರ್ ಎಂಬ ಓದುಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಾರಿ ದಸರಾ ಮಹೋತ್ಸವಕ್ಕೆ ಅಕ್ಟೋಬರ್ 7ರಂದು ಚಾಮುಂಡಿಬೆಟ್ಟದಲ್ಲಿ ವಿಧ್ಯುಕ್ತವಾಗಿ ಚಾಲನೆ ಸಿಗಲಿದೆ. ಅಕ್ಟೋಬರ್ 15ರಂದು ವಿಜಯದಶಮಿ ದಿನ ಸಂಜೆ 4.36 ರಿಂದ 4.46ರವರೆಗೆ ನಂದಿಧ್ವಜ ಪೂಜೆ ನಡಯಲಿದೆ. 5ರಿಂದ 5.30ರೊಳಗೆ ಜಂಬೂ ಸವಾರಿ ನಡೆಯಲಿದ್ದು, ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿರಲಿದೆ.
(ಮಾಹಿತಿ ಕೃಪೆ ಉದಯವಾಣಿ)

ದಾರಿ ಯಾವುದಯ್ಯ ಶಾಲೆಗೆ ? ಕೆಸರು ತುಂಬಿದ ರಸ್ತೆಯಲ್ಲಿ ವಿದ್ಯಾರ್ಥಿಗಳ ನಿತ್ಯ ನರಕಯಾತನೆ

 

ಸಿಂದಗಿ: ಶಾಲೆ ಮಂಜೂರಾಗಿ 11 ವಸಂತಗಳನ್ನು ಕಂಡಿದೆ. 2016ರಲ್ಲಿ ಸುಸಜ್ಜಿತವಾದ ಕಟ್ಟದಹೊಂದಿದೆ. ವಿಶಾಲವಾದ ಆಟದ ಮೈದಾನವಿದೆ ಆದರೆ ಈ ಶಾಲೆಗೆ ಹೋಗುವ ರಸ್ತೆ ಸುಧಾರಣೆಯಾಗದೇ ಕೆಸರು ಗದ್ದೆಯಾಗಿದೆ. ಮಾರ್ಗ ಮಧ್ಯ ಇರುವ ತಗ್ಗು ಪ್ರದೇಶದಲ್ಲಿ ರಾಡಿ ನೀರು ನಿಲ್ಲುತ್ತದೆ. ಮಳೆಗಾಲದಲ್ಲಂತೂ ಹೇಳ ತೀರದ ಪೇಚಾಟ ವಿದ್ಯಾರ್ಥಿಗಳದ್ದು.
ಪಟ್ಟಣದಲ್ಲಿನ ಸರಕಾರಿ ಆದರ್ಶ ವಿದ್ಯಾಲಯಕ್ಕೆ ಹೋಗುವ ರಸ್ತೆಯ ದುಸ್ಥಿಯಾಗಿದೆ. ಮಳೆಗಾಲದಲ್ಲಿ ಆದರ್ಶ ವಿದ್ಯಾಲಯಕ್ಕೆ ಹೋಗುವ ವಿದ್ಯಾರ್ಥಿಗಳ ಪೇಚಾಟ ಕಂಡು ವಿದ್ಯಾಲಯದ ಹತ್ತಿರ ಇರುವ ಗೌಡರು ತಮ್ಮ ಸ್ವಂತ ಖರ್ಚಿನಿಂದ ಎರಡು ಸಲ ಮುರುಮು ಹಾಕಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ತಪ್ಪದ್ದರೂ ಮಳೆಗಾಲದಲ್ಲಿ ಪೇಚಾಟ ತಪ್ಪಿದ್ದಲ್ಲ.
ಪುರಸಭೆಯ ಕೆಲ ಸದಸ್ಯರಿಗೆ ಸಮಸ್ಯೆ ಕುರಿತು ಹೇಳಿದಾಗ ಪುರಸಭೆಯಲ್ಲಿ ಹಣವಿಲ್ಲ. ಯಾರಿದಂದಲಾದರು ಸಾಲ ಕೊಡಿಸಿ ನಾನು ಈ ವಾರ್ಡಿನ ಸದಸ್ಯನಲ್ಲದಿದ್ದರೂ ನಾನು ಈ ರಸ್ತೆ ಕೆಲಸ ಮಾಡುತ್ತೇನೆ. ಬಿಲ್ ಬಂದ ಮೇಲೆ ನಾನು ಅವರಿಗೆ ಹಣ ನೀಡುತ್ತೇನೆ ಎಂದು ಹೆಸರು ಹೇಳಲು ಇಚ್ಚಿಸದ ಪುರಸಭೆ ಹಾಲಿ ಸದಸ್ಯ ನೀಡುವ ಉತ್ತರವಾಗಿದೆ.

ಸರಕಾರಿ ಆದರ್ಶ ವಿದ್ಯಾಲಯದಲ್ಲಿ 6 ರಿಂದ 10ನೇ ವರ್ಗದವರೆಗೆ 400 ವಿದ್ಯಾರ್ಥಿಗಳು ಕಲಿಯುತ್ತಾರೆ. ಇವರೆಲ್ಲರೂ ಶಾಲೆಗೆ ಬರಲು ಒಂದೇ ಮಾರ್ಗವಿದೆ. ಅದು ಸಂಪೂರ್ಣ ತಗ್ಗುಗಳಿಂದ ಕೂಡಿ ಹಾಳಾಗಿದೆ.
ಸ್ಥಳಿಯ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಕಲಿಯುತ್ತಾರೆ. ಅವರು ವಿದ್ಯಾಲಯಕ್ಕೆ ಹೋಗಬೇಕಾಗದಲ್ಲಿ ಕೆಸರು ತುಂಬಿದ ರಸ್ತೆಯೊಂದೇ ಮಾರ್ಗವಾಗಿದೆ. ಮಳೆಗಾಳದಲ್ಲಿ ಕೆಸರು ರಸ್ತೆಯಲ್ಲಿ ಶಾಲೆಗೆ ಹೋಗುವುದರಿಂದ ನಿತ್ಯ ಸಮವಸ್ತ್ರಗಳು ಕೆಸರಾಗುತ್ತವೆ. ಇನ್ನಾದರು ಜನಪ್ರತಿನಿಧಿಗಳು, ಅಧಿಕಾರಿಗಳು ರಸ್ತೆ ದುರಸ್ಥಿಗೆ ಮುಂದಾಗಬೇಕು ಎಂದು ಪಾಲಕರ ಮನವಿಯಾಗಿದೆ.
ರಸ್ತೆ ದುರಸ್ತಿಗೆ ಅನೇಕ ಬಾರಿ ಸಂಬಂಧಿಸಿದವರಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಶಾಲೆಯವರು ಹೇಳುತ್ತಾರೆ. ಆದರೆ ನಿತ್ಯ ನರಕಯಾತನೆ ಅನುಭವಿಸಬೇಕಾದ ಪರಿಸ್ಥಿತಿ ನಮಗೆ ಎದುರಾಗಿದೆ ಎಂದು ಸರಕಾರಿ ಆದರ್ಶ ವಿದ್ಯಾರ್ಥಿಗಳ ಅಳಲಾಗಿದೆ. ಸ್ವಲ್ಪ ಮಳೆ ಬಂದರಾಯಿತು ವಿದ್ಯಾರ್ಥಿಗಳು ಶಾಲೆಗೆ ಹೋಗುವಾಗ ನರಕಯಾತೆ ಪಡೆಯುವಂತಾಗಿದೆ. ಅಲ್ಲದೇ ಪ್ರತಿ ದಿನ ಸಮವಸ್ತ್ರ ರಾಡಿಯಾಗುತ್ತವೆ ಅವುಗಳನ್ನು ತೊಳೆದು ಸಾಕಾಗಿದೆ ಎಂದು ವಿದ್ಯಾರ್ಥಿಗಳ ತಾಯಂದಿರ ಮನದಾಳದ ಮಾತಾಗಿದೆ.

ರಸ್ತೆ ಸಂಪೂರ್ಣ ತೆಗ್ಗುಗಳಿಂದ ಕೂಡಿದೆ. ಮಳೆ ಬಂತೆಂದರೆ ತಗ್ಗುಗಳಲ್ಲಿ ನೀರು ನಿಲ್ಲುತ್ತವೆ. ಆಗ ರಸ್ತೆಯಾವುದೋ ಗುಂಡಿ ಯಾವುದೋ ಗೊತ್ತಾಗುವುದಿಲ್ಲ. ಮಕ್ಕಳಿಗೆ ಬೈಕ್ ಮೇಲೆ ಶಾಲೆಗೆ ಬಿಡುವ ಸಂದರ್ಭದಲ್ಲಿ ಸಾಕಷ್ಟು ಅಪಘಾತಗಳಾಗಿವೆ. ನಮಗೂ, ಮಕ್ಕಳಿಗೂ ಗಾಯಗಳಾಗಿವೆ. ನಮ್ಮ ಕಷ್ಟ ಯಾರಿಗೆ ಹೇಳಬೇಕು.
ಸ್ಥಳಿಯ ಸರಕಾರಿ ಆದರ್ಶ ವಿದ್ಯಾಲಯಕ್ಕೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಅಲ್ಲದೇ ರಸ್ತೆ ಮಳೆಗಾಲದಲ್ಲಿ ರಸ್ತೆಯ ಗುಂಡಿಗಳಲ್ಲಿ ನೀರು ನಿಲ್ಲುತ್ತದೆ. ಇದರಿಂದ ಅಲ್ಲಿ ಕೊಳಚೆ ನಿರ್ಮಾಣವಾಗಿ ಸಾಂಕ್ರಾಮಿಕ ರೋಗ ಹರಡುವ ತಾಣವಾಗಿ ಪರಿವರ್ತನೆಯಾಗುತ್ತದೆ. ಶಾಲೆಯ ಸುತ್ತಮುತ್ತಲಿನ ವಾತಾವರಣ ಆರೋಗ್ಯಕರವಾಗಿರಬೇಕು. ಆದ್ದರಿಂದ ಸಂಬಂಧಿಸಿದ ಇಲಾಖೆ ಶಾಲೆಯ ರಸ್ತೆ ದುರಸ್ಥಿ ಮಾಡಬೇಕು.
-ಡಾ.ಮಹೇಶ ಹಿರೇಮಠ, ವೈಧ್ಯರು, ಸಿಂದಗಿ.

ಮಳೆಗಾಲದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬರಬೇಕಾದರೆ ನರಕಯಾತನೆ ಪಡುತ್ತಾರೆ. ಈ ರಸ್ತೆ ದುರಸ್ಥಿ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಮತ್ತು ಶಾಲೆಯಿಂದ ಪುರಸಭೆಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರು ರಸ್ತೆ ದುರಸ್ಥಿಗೆ ಪುರಸಭೆ ಆಢಳಿತ ಮುಂದಾಗಬೇಕು.
-ರಮೇಶ ಚಟ್ಟರಕಿ, ಪ್ರಭಾರಿ ಮುಖ್ಯೋಧ್ಯಾಪಕ, ಸರಕಾರಿ ಆದರ್ಶ ವಿದ್ಯಾಲಯ, ಸಿಂದಗಿ.
ರಸ್ತೆ ದುರಸ್ತಿಗೆ ಅನೇಕ ಬಾರಿ ಸಂಬಂಧಿಸಿದವರಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಆದರೆ ನಿತ್ಯ ನರಕಯಾತನೆ ಅನುಭವಿಸಬೇಕಾದ ಪರಿಸ್ಥಿತಿ ನಮ್ಮ ಶಾಳೆಯ ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ. ಮಳೆಗಾಲದಲ್ಲಿ ಕೆಸರಿನಿಂದ ಕೂಡಿದ ರಸ್ತೆಯಲ್ಲಿ ಶಾಲೆಗೆ ಹೋದರೆ ಸಾಕು ಸಮವಸ್ತ್ರಗಳು ರಾಡಿಮಯವಾಗುತ್ತವೆ. ಪಾಲಕರು ಸಾಕಷ್ಟು ಬಾರಿ ತಮ್ಮ ಸಂಕಷ್ಟ ತೊಡಿಕೊಂಡಿದ್ದಾರೆ. ವಿದ್ಯಾರ್ಥಿಗಳ ಸಂಕಷ್ಟ ಅರಿತು ಇನ್ನಾದರೂ ರಸ್ತೆ ದುರಸ್ಥಿ ಮಾಡಲು ಪುರಸಭೆ ಮುಂದಾಗಬೇಕು.
-ಎಸ್.ಎಸ್. ಕುಂಬಾರ, ಅಧ್ಯಕ್ಷರು, ಎಸ್‌ಡಿಎಂಸಿ, ಸರಕಾರಿ ಆದರ್ಶ ವಿದ್ಯಾಲಯ ಸಿಂದಗಿ.

– ರಮೇಶ ಪೂಜಾರ

(ಮಾಹಿತಿ ಕೃಪೆ)

(ಮಾಹಿತಿ ಕೃಪೆ ಉದಯವಾಣಿ)