,👉
*ಗಾಯನ : ರಾಘವೇಂದ್ರ ರಾಜ್ ಕುಮಾರ್ & ಮಂಜುಳ ಗುರುರಾಜ್
ಸಂಗೀತ : ಉಪೇಂದ್ರ ಕುಮಾರ್
ಹೆಣು:-ನಿಜವ ನುಡಿಯಲೆ ನನ್ನಾಣೆ ನಲ್ಲ ಪ್ರೀತಿಯ ರಂಗು ಚೆಲ್ಲಿದೆ
ನಿಜವ ನುಡಿಯಲೆ ನನ್ನಾಣೆ ನಲ್ಲ ಪ್ರೀತಿಯ ರಂಗು ಚೆಲ್ಲಿದೆ
ಬಾನಿನ ರಂಗು ಭೂಮಿಯ ರಂಗು ಏನನು ಹೇಳುತಿದೆ ಹೆ ಹೇ ಹೇ.
ಗಂಡು:-ನಿಜವ ನುಡಿಯಲೆ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ
ನಿಜವ ನುಡಿಯಲೆ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ
ಕೆನ್ನೆಯ ರಂಗು ತುಟಿಯ ರಂಗು ಕಣ್ಣನು ಕಾಡುತಿದೆ ಹೆ ಹೇ ಹೇ.
ನಿಜವ ನುಡಿಯಲೆ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ
ಹೆಣು:-ಒಯ್ ಒಯ್ ಒಯ್....ನಿಜವ ನುಡಿಯಲೆ ನನ್ನಾಣೆ ನಲ್ಲ ಪ್ರೀತಿಯ ರಂಗು ಚೆಲ್ಲಿದೆ
******
ಗಂಡು:-ನಲ್ಲೆಯ ತೋಳಿನ ಸೆರೆ ಸೇರುವ ಆಸೆಯಲಿರೆ
ಹೆಣು:-ನಲ್ಲನ ತೋಳಿನ ಸೆರೆ ಸೇರುವ ಆಸೆಯಲಿರೆ
ಓ.....ಪ್ರೀತಿಯ ಜೇನಿನ ತೊರೆ ವೇಗದಿ ಹರಿಯುತಲಿರೆ
ತನುವು ಅರಳಿ ಮನವು ಕೆರಳೀ ವಿರಹದುರಿಗೆ ನರಳಿ ನರಳಿ
ಬಳಿಗೆ ಬಂದಿರುವೆ......ಹೆ ಹೇ ಹೇ.
ಹೆಣು:-ನಿಜವ ನುಡಿಯಲೆ ನನ್ನಾಣೆ ನಲ್ಲ ಪ್ರೀತಿಯ ರಂಗು ಚೆಲ್ಲಿದೆ
ಗಂಡು:-ಓ...ನಿಜವ ನುಡಿಯಲೆ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ
******
ಹೆಣು:-ಸಂಜೆಯು ಜಾರುತಲಿರೆ ಗಾಳಿಯು ಬೀಸುತಲಿರೆ
ಗಂಡು:-ಸಂಜೆಯು ಜಾರುತಲಿರೆ ಗಾಳಿಯು ಬೀಸುತಲಿರೆ
ಆ....ಆ....ನಲ್ಲೆಯ ಪ್ರೀತಿಸುತಿರೆ ಸ್ವರ್ಗವ ಕಾಣುತಲಿರೆ
ಹಾಡುತಿರಲು ಪ್ರಣಯ ದುಂಬಿ ಬಾಳ ತುಂಬ ಹರುಷ ತುಂಬಿ
ನಾನು ನಲಿದಿರುವೆ.....ಹೆ ಹೇ ಹೇ...
ಗಂಡು:-ನಿಜವ ನುಡಿಯಲೆ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ
ಹೆಣು:-ಓ....ನಿಜವ ನುಡಿಯಲೆ ನನ್ನಾಣೆ ನಲ್ಲ ಪ್ರೀತಿಯ ರಂಗು ಚೆಲ್ಲಿದೆ
ಗಂಡು:-ಓ.....ಕೆನ್ನೆಯ ರಂಗು ತುಟಿಯ ರಂಗು ಕಣ್ಣನು ಕಾಡುತಿದೆ ಹೆ ಹೇ ಹೇ...
ನಿಜವ ನುಡಿಯಲೆ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ
ಹೆಣು:-ಓ....ನಿಜವ ನುಡಿಯಲೆ ನನ್ನಾಣೆ ನಲ್ಲ ಪ್ರೀತಿಯ ರಂಗು ಚೆಲ್ಲಿದೆ.....
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ