ಬೆಂಗಳೂರು: ಬೆಂಗಳೂರಿನಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿರುವ ಪೊಲೀಸರು ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಸೋಂಕಿತರ ಹೆಸರಲ್ಲಿ ಬೆಡ್ ಕಾಯ್ದಿರಿಸಿ ಬೇರೆಯವರಿಂದ ಹಣ ಪಡೆದು ಬೆಡ್ ಗಳನ್ನು ಕೊಡುತ್ತಿದ್ದ ತಂಡ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದು, ಜಾಲದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಗಮನಸೆಳೆದಿದ್ದರು. ಬೆಂಗಳೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿದ್ದು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ.
ತನಿಖೆ ಕೈಗೊಂಡ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದ್ದಾರೆ.
ಬೊಮ್ಮನಹಳ್ಳಿ ವಲಯ ಕೋವಿಡ್ ವಾರ್ ರೂಮ್ ಉಸ್ತುವಾರಿ ಡಾ. ಸುರೇಶ್, ದಕ್ಷಿಣ ವಲಯ ವಾರ್ ರೂಮ್ ಉಸ್ತುವಾರಿ ಡಾ. ರೆಹಾನ್ ಭಾಗಿಯಾಗಿರುವ ಮಾಹಿತಿ ಗೊತ್ತಾಗಿದ್ದು, ಸುರೇಶ್ ಸೋಂಕು ತಗುಲಿ ಹೋಮ್ ಐಸೋಲೇಷನ್ ನಲ್ಲಿರುವುದರಿಂದ ರೆಹಾನ್ ಅವರನ್ನು ವಶಕ್ಕೆ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಲಾಗಿದೆ.
(ಮಾಹಿತಿ ಕೃಪೆ ಕನ್ನಡದುನಿಯಾ )
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ