ಗರ್ಭವೆಂಬ ಸ್ವರ್ಗದೊಳು
ನವಮಾಸ ಹೊತ್ತುಕೊಂಡು
ಧರೆಯ ನಿಸರ್ಗಕ್ಕೆ ನನ್ನ ತಂದಾಕೆ.
ತಾರೆಗಳ ಊರಿನೊಳು
ನಲಿವ ಚಂದಿರನ ತೋರಿಸಿ
ಒಡಲಿಗೆ ಕೈತುತ್ತನು, ತಿನಿಸಿದಾಕೆ.
ಕಲ್ಲು ದೇವರಿಗಿಂತ
ಕಲ್ಲು ಸಕ್ಕರೆಯಂತ ಸಿಹಿ
ಗುಣದ ಮೃದು ಮನಸ್ಸುಳ್ಳಾಕೆ
ಕೆಟ್ಟ ದೃಷ್ಟಿಯ ಕಣ್ಣು
ಕಂದನಿಗೆ ಕಾಡದಿರಲೆಂದು
ಸೆರಗಿನ ಮರೆ ಅಮೃತ ಕೊಟ್ಟಾಕೆ
ಅತ್ತಾಗ ರಮಿಸಲು ನಡು
ಇರುಳು ನಿದ್ರೆಯ ತೊರೆದು
ಮಲ ಮೂತ್ರವನ್ನ ತೊಳೆದಾಕೆ
ಮನೆಯನ್ನು, ಶಾಲೆ ಮಾಡಿ
ಕಂದಗೆ ಮೊದಲ ಗುರುವಾಗಿ
ಈ. ಜಗದಿ ನಗುನಗುತ ಮೆರೆದಾಕೆ
ಎಷ್ಷೇ ಹುಟ್ಟು ತಾಳಿದರು
ಈ.ನಿನ್ನ ಮಮತೆ ಋಣವು
ತೀರಿಸಲಾಗದು ನಮ್ಮ ಜನುಮಕೆ.!
ಎಲ್ಲರಿಗೂ ವಿಶ್ವ ಮಹಿಳಾ
ದಿನಾಚರಣೆಯ ಶುಭಾಶಯಗಳು