WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Thursday, June 24, 2021

BIG NEWS: ಜೊತೆಗಿದ್ದವರಿಂದಲೇ ನಡೆಯಿತಾ ಮಾಜಿ ಮಹಿಳಾ ಕಾರ್ಪೊರೇಟರ್ ಹತ್ಯೆ.?

 


ಬೆಂಗಳೂರು: ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಅವರ ಜೊತೆಗಿದ್ದವರೇ ಪಕ್ಕಾ ಪ್ಲಾನ್ ಮಾಡಿ ಹತ್ಯೆ ನಡೆಸಿದ್ದಾರಾ ಎಂಬ ಅನುಮಾನ ಶುರುವಾಗಿದೆ.
ಪ್ರಮುಖವಾಗಿ ರೇಖಾ ಕದಿರೇಶ್ ಅವರ ಬಾಡಿಗಾರ್ಡ್ ಹಾಗೂ ಸಹಚರನಿಂದಲೇ ಹತ್ಯೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ರೇಖಾ ಅವರ ಬಾಡಿಗಾರ್ಡ್ ಆಗಿದ್ದ ಪೀಟರ್ (21 ) ಹಾಗೂ ಆತನ ಸಹಚರ ಸೂರ್ಯ (19) ಎಂಬುವವರ ಮೇಲೆ ಶಂಕೆ ವ್ಯಕ್ತವಾಗಿದ್ದು, ಘಟನೆ ನಡೆಯುವ ವೇಳೆ ಜೊತೆಗಿದ್ದರು ಎನ್ನಲಾಗಿದೆ.
ಇಂದು ಬೆಳಿಗ್ಗೆ ಬಿಬಿಎಂಪಿ ವಾರ್ಡ್ ಕಚೇರಿಯಲ್ಲಿ ಫುಡ್ ಕಿಟ್ ವಿತರಣೆಗೆಂದು ರೇಖಾ ಬಂದಿದ್ದರು. ರೇಖಾ ಕೊಲೆಗೂ ಮೊದಲೇ ಕಚೇರಿಯಲ್ಲಿನ ಎರಡು ಸಿಸಿಟಿವಿ ಕ್ಯಾಮರಾಗಳನ್ನು ಸಾಕ್ಷಿ ಸಿಗದಂತೆ ಮೇಲ್ಭಾಗಕ್ಕೆ ತಿರುಗಿಸಲಾಗಿತ್ತು. ಆರೋಪಿಗಳು ಪಕ್ಕಾ ಪ್ಲಾನ್ ಮಾಡಿಯೇ ಕೃತ್ಯವೆಸಗಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಇನ್ನು ಬಿಬಿಎಂಪಿ ಮಾಜಿ ಸದಸ್ಯೆ ಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್, ಇಂದು ಬೆಳಿಗ್ಗೆ ಬಿಬಿಎಂಪಿ ವಾರ್ಡ್ ಕಚೇರಿಗೆ ಫುಡ್ ಕಿಟ್ ವಿತರಣೆಗೆ ಆಗಮಿಸಿದ್ದ ವೇಳೆ ರೇಖಾ ಅವರ ಮೇಲೆ ಇಬ್ಬರು ದಾಳಿ ನಡೆಸಿದ್ದಾರೆ. ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ತನಿಖೆ ನಡೆಯುತ್ತಿರುವುದರಿಂದ ಈ ಬಗ್ಗೆ ಯಾವುದೇ ಮಾಹಿತಿ ನೀಡಲಾಗದು ಎಂದು ತಿಳಿಸಿದ್ದಾರೆ.

(ಮಾಹಿತಿ ಕೃಪೆ ಕನ್ನಡದುನಿಯಾ)

ಇಂದಿನಿಂದ (ಜೂ.24) ಸಾರ್ವಜನಿಕ ವೀಕ್ಷಣೆಗೆ ಹಂಪಿ ಮುಕ್ತ

 


ವಿಜಯನಗರ, ಜೂನ್ 24: ದೇಶದೆಲ್ಲೆಡೆ ಕೊರೊನಾ ಸೋಂಕು 2ನೇ ಅಲೆ ವ್ಯಾಪಕವಾಗಿ ಹರಡಿದ್ದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಪ್ರವಾಸಿ ತಾಣಗಳನ್ನು ಮುಚ್ಚಲಾಗಿತ್ತು. ಕೊರೊನಾ ಸೋಂಕು ಪ್ರಕರಣಗಳು ಕಡಿಮೆಯಾದ ಕಾರಣ ಇದೀಗ ಹಂಪಿಯ ಸ್ಮಾರಕಗಳನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.
ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ವಿಶ್ವವಿಖ್ಯಾತ ಹಂಪಿ ಸ್ಮಾರಕಗಳನ್ನು ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ದೇಶ- ವಿದೇಶಗಳಿಂದ ಹಂಪಿ ನೋಡಲು ಬರುವ ಅತಿಥಿಗಳ ಮುಖದಲ್ಲೂ ಹಂಪಿಯ ಸ್ಮಾರಕ ವೀಕ್ಷಿಸಿದ ಸಂತಸ ಮೂಡಿದೆ.
ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಎಂದಿನಂತೆ ಪೂಜೆ ನೆರವೇರಲಿದೆ. ಆದರೆ ಸಾರ್ವಜನಿಕರ ದರ್ಶನಕ್ಕೆ ನಿರ್ಬಂಧ ಮುಂದುವರಿಸಲಾಗಿದೆ.


ಹಂಪಿಯ ಎಲ್ಲ ಸ್ಮಾರಕಗಳು, ಕಮಲಾಪುರದಲ್ಲಿನ ವಸ್ತು ಸಂಗ್ರಹಾಲಯಗಳು ಜೂ.24ರಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿವೆ. ಸಾರ್ವಜನಿಕರು ಆನ್‌ಲೈನ್ ಮತ್ತು ನಾಲ್ಕು ಕೌಂಟರ್‌ಗಳಲ್ಲಿ ನಗದು ಪಾವತಿಸಿ ಟಿಕೆಟ್ ಪಡೆಯಬಹುದು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆಯ ಉಪ ಅಧೀಕ್ಷಕ ಪಿ. ಕಾಳಿಮುತ್ತು ತಿಳಿಸಿದ್ದಾರೆ.

(ಮಾಹಿತಿ ಕೃಪೆ Oneindia)

BIG NEWS: ಐದು ಲಕ್ಷ ರೂ.ಗಿಂತ ಹೆಚ್ಚಿನ ಬೆಲೆ ಆಭರಣ, ವಾಹನ ಖರೀದಿ ವೇಳೆ ನೀಡ್ಬೇಕು 'ಆಧಾರ್'

 


ಆಧಾರ್‌ ಜೊತೆ ಪಾನ್ ಲಿಂಕ್ ಅನಿವಾರ್ಯವಾಗಿದೆ. ಜೂನ್ 30ರೊಳಗೆ ಪಾನ್-ಆಧಾರ್ ಲಿಂಕ್ ಆಗದೆ ಹೋದಲ್ಲಿ ಪಾನ್ ಕಾರ್ಡ್ ಅಮಾನ್ಯವಾಗಲಿದೆ. ಇದರಿಂದಾಗಿ ಬ್ಯಾಂಕಿಗೆ ಸಂಬಂಧಿಸಿದ ಅನೇಕ ಕೆಲಸಗಳಿಗೆ ಅಡ್ಡಿಯಾಗಲಿದೆ. ಅಮಾನ್ಯವಾದ ಪಾನ್ ಕಾರ್ಡ್ ಬಳಸಿದ್ರೆ ದಂಡ ವಿಧಿಸಲಾಗುವುದು. ಅಲ್ಲದೆ ಪಾನ್ ಇಲ್ಲದೆ ಅನೇಕ ಕೆಲಸಗಳು ನಿಲ್ಲಲಿವೆ.
ಪಾನ್-ಆಧಾರ್ ಲಿಂಕ್ ಆಗದೆ ಹೋದಲ್ಲಿ ಪಾನ್ ಅಮಾನ್ಯವಾಗುತ್ತದೆ. ಇದ್ರಿಂದ ಕೆವೈಸಿ ಸಹ ಅಮಾನ್ಯವಾಗಿರುತ್ತದೆ. ಅಮಾನ್ಯ ಪಾನ್ ಬಳಸುವುದು ಅಪರಾಧವಾಗುತ್ತದೆ. ಇದನ್ನು ಬಳಸಿದ್ರೆ 1 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ದಂಡ ತೆರಬೇಕಾಗುತ್ತದೆ. ಮ್ಯೂಚುವಲ್ ಫಂಡ್‌ನಲ್ಲಿ ಹಣ ಹೂಡಿಕೆ ಮಾಡಲು ಪಾನ್ ಕಡ್ಡಾಯವಾಗಿದೆ. ಪಾನ್ ಅಮಾನ್ಯವಾಗಿದ್ದರೆ ಎಸ್‌ಐಪಿ ಮೂಲಕ ಅಥವಾ ಬೇರೆ ಯಾವುದೇ ರೀತಿಯಲ್ಲಿ ಎಂಎಫ್‌ನಲ್ಲಿ ಹಣವನ್ನು ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ.
ಬ್ಯಾಂಕ್ ಖಾತೆ ತೆರೆಯಲು ಅಥವಾ 50,000 ರೂಪಾಯಿಗಿಂತ ಹೆಚ್ಚಿನ ಹಣವನ್ನು ಠೇವಣಿ ಇಡಲು ಮತ್ತು ಹಿಂಪಡೆಯಲು ಪಾನ್ ಅಗತ್ಯವಿದೆ. ಪಾನ್ ಅಮಾನ್ಯವಾದ್ರೆ ಇದು ಸಾಧ್ಯವಾಗುವುದಿಲ್ಲ.
ಐದು ಲಕ್ಷ ರೂಪಾಯಿಗಿಂತ ಹೆಚ್ಚಿನ ಆಭರಣಗಳನ್ನು ಖರೀದಿಸಿದರೆ, ಖರೀದಿಸುವ ವೇಳೆ ಪಾನ್ ವಿವರ ನೀಡಬೇಕು. ಪಾನ್ ಇಲ್ಲವೆಂದಾದ್ರೆ ಆಭರಣ ಖರೀದಿ ಸಾಧ್ಯವಿಲ್ಲ. 6. 5 ಲಕ್ಷ ರೂಪಾಯಿಗಿಂತ ಹೆಚ್ಚಿನ ಬೆಲೆಯ ವಾಹನವನ್ನು ಖರೀದಿಸಲು ಪಾನ್ ಕಾರ್ಡ್ ವಿವರಗಳನ್ನು ನೀಡಬೇಕಾಗುತ್ತದೆ. (ಮಾಹಿತಿ ಕೃಪೆ ಕನ್ನಡದುನಿಯಾ)

Wednesday, June 23, 2021

ಅಬಕಾರಿ ಸಚಿವರಿಗೆ ಪ್ರತಿ ಜಿಲ್ಲೆಯಿಂದ 5 ಲಕ್ಷ ರು ಹಫ್ತಾ: ಆಡಿಯೋ ಕ್ಲಿಪ್ ವೈರಲ್

 



ಕೊಪ್ಪಳ: ಅಬಕಾರಿ ಸಚಿವರಿಗೆ ಪ್ರತಿ ಜಿಲ್ಲೆಯಿಂದ 5 ಲಕ್ಷ ನೀಡಬೇಕು' ಎಂದು ಅಧಿಕಾರಿಯೊಬ್ಬರು ಕಿರಿಯ ಅಧಿಕಾರಿಯೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ವೈರಲ್ ಆಗಿದೆ.
ಪ್ರತಿ ಜಿಲ್ಲೆಯಿಂದ 5ಲಕ್ಷ ರು ಹಣ ನೀಡಲು ವಿಫಲವಾದರೇ ಅಂತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಡಿಯೋ ಟೇಪ್ ನಲ್ಲಿ ಮಾತನಾಡಲಾಗಿದೆ. ಪ್ರತಿ ಜಿಲ್ಲೆಯಿಂದ ಐದು ಲಕ್ಷ ನೀಡಬೇಕು ಎಂದು ಅಬಕಾರಿ ಸಚಿವರಿಂದ ಒತ್ತಡ ಇದೆ ಎಂದು ಉಲ್ಲೇಖಿಸಿ ಅಧಿಕಾರಿಯೊಬ್ಬರು ಹೇಳುತ್ತಿರುವ ಆಡಿಯೋ ಹರಿದಾಡಿದ
ಆಡಿಯೊ ಕ್ಲಿಪ್‌ಗೆ ಸಂಬಂಧಿಸಿದಂತೆ ಡಿಸಿಇಗೆ ಜಿಲ್ಲಾಧಿಕಾರಿ ಎಸ್ ವಿಕಾಸ್ ಕಿಶೋರ್ ಮಂಗಳವಾರ ಶೋ-ಕಾಸ್ ನೋಟಿಸ್ ನೀಡಿದ್ದಾರೆ, ಆದರೆ, ಇಲಾಖೆ ಅಧಿಕಾರಿಗಳು ಆಡಿಯೋ ಕ್ಲಿಪ್ ನಕಲಿ ಎಂದು ಹೇಳಿದ್ದಾರೆ.
(ಮಾಹಿತಿ ಕೃಪೆ ಕನ್ನಡ ಪ್ರಭ)

Tuesday, June 22, 2021

ಬಳ್ಳಾರಿಯಲ್ಲಿ ಮೆಣಸಿನಕಾಯಿ ಬೀಜಕ್ಕಾಗಿ ಮುಂದುವರಿದ ರೈತರ ಪರದಾಟ; ತೋಟಗಾರಿಕೆ ಇಲಾಖೆ ಕಚೇರಿಗೆ ನುಗ್ಗಿ ಆಕ್ರೋಶ

 ಬಳ್ಳಾರಿಯಲ್ಲಿ ಮೆಣಸಿನಕಾಯಿ ಬೀಜಕ್ಕಾಗಿ ಮುಂದುವರಿದ ರೈತರ ಪರದಾಟ; ತೋಟಗಾರಿಕೆ ಇಲಾಖೆ ಕಚೇರಿಗೆ ನುಗ್ಗಿ ಆಕ್ರೋಶ                      ಮೆಣಸಿನಕಾಯಿ ಬಿತ್ತನೆ ಬೀಜಕ್ಕಾಗಿ ಮುಗಿಬಿದ್ದ ರೈತರು


ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತಿಯೇ ಸ್ಥಳಕ್ಕೆ ತೋಟಗಾರಿಕೆ, ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಜೆಂಟಾ ಕಂಪನಿಯ ವಿತರಕರು ರೈತರ ಬಳಿ ಆಗಮಿಸಿ ಬೀಜದ ಕೊರತೆಯಿಂದ ಅಭಾವವಾಗಿದ್ದು, ಇನ್ನು ಒಂದು ದಿನದಲ್ಲಿ 110 ಕೆಜಿ ಬೀಜವನ್ನು ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ಬಳ್ಳಾರಿ: ಜಿಲ್ಲೆಯಲ್ಲಿ ಮೆಣಸಿನಕಾಯಿ ಬೆಳೆಯುವ ರೈತರ ಪರದಾಟ ಇನ್ನೂ ಕಡಿಮೆಯಾಗಿಲ್ಲ. ಕಳೆದ 10-15 ದಿನಗಳಿಂದ ಮೆಣಸಿನಕಾಯಿ ಬೀಜಕ್ಕಾಗಿ ರೈತರು ಅಲೆದಾಡುತ್ತಲೇ ಇದ್ದಾರೆ. ಆದರೆ ಬಿತ್ತನೆ ಬೀಜ ಮಾತ್ರ ಸಿಗುತ್ತಿಲ್ಲ. ಬೀಜಕ್ಕಾಗಿ ಗುಂಪು ಸೇರಿ ಪೊಲೀಸರ ಲಾಠಿ ಏಟು ತಿಂದಿದ್ದು ಆಯ್ತು, ಹೀಗಿದ್ದರೂ ಬೀಜ ಮಾತ್ರ ಇದುವರೆಗೆ ಸಿಕ್ಕಿಲ್ಲ. ಇತ್ತ ಅಧಿಕಾರಿಗಳು ಸೋಮವಾರ ಮೆಣಸಿನಕಾಯಿ ಬೀಜ ವಿತರಣೆ ಮಾಡುವುದಾಗಿ ಹೇಳಿದ್ದರಿಂದ ಬೆಳಗಿನ ಜಾವದಿಂದಲೇ ರೈತರು ತೋಟಗಾರಿಕೆ ಇಲಾಖೆ ಮುಂಭಾಗ ಜಮಾಯಿಸಿದ್ದರು. ಆದರೆ ಇವತ್ತು ಕೂಡ ಬಿತ್ತನೆ ಬೀಜ ಸಿಗೆ ರೈತರು ಪರದಾಡುವಂತಾಗಿದೆ.

ಬಳ್ಳಾರಿ ಜಿಲ್ಲೆಯ ರೈತರ ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ. ಕಳೆದ ವಾರ ಸಿಜೆಂಟಾ ಕಂಪನಿಯ ಮೆಣಸಿನಕಾಯಿಯ 120 ಕೆಜಿ ಬೀಜವನ್ನು ವಿತರಣೆ ಮಾಡಿದ ಅಧಿಕಾರಿಗಳು ಸ್ಟಾಕ್ ಬಂದ್ಮೇಲೆ ಇನ್ನುಳಿದ ಬೀಜ ವಿತರಣೆ ಮಾಡುವುದಾಗಿ ಹೇಳಿದ್ದಾರೆ. ಅದರಂತೆ ಅಧಿಕಾರಿಗಳು ಜೂನ್ 21 ರಂದು ಮತ್ತೆ ಮೆಣಸಿನಕಾಯಿ ಬೀಜ ವಿತರಣೆ ಮಾಡುವುದಾಗಿದೆ ತಿಳಿಸಿದ್ದಾರೆ. ಆದರೆ ಇವತ್ತು ಮತ್ತೆ ಬೀಜ ನೀಡದೆ ಸತಾಯಿಸುತ್ತಿದ್ದಾರೆ ಎಂದು ರೈತ ಯರಿಸ್ವಾಮಿ ತಿಳಿಸಿದ್ದಾರೆ.

ಜೂನ್ 21 ರಂದು ಕೂಡ ರೈತರು ಸೇರಿದಂತೆ ಮಹಿಳೆಯರು ಮೆಣಸಿನಕಾಯಿ ಬೀಜಕ್ಕಾಗಿ ಬಳ್ಳಾರಿಯ ತೋಟಗಾರಿಕೆ ಕಚೇರಿ ಎದುರು ಬೆಳಿಗ್ಗೆ 3 ಗಂಟೆಯಿಂದ ಕಾದರು ಯಾವುದೇ ಪ್ರಯೋಜನವಾಗಿಲ್ಲ. ಬೆಳಿಗ್ಗೆ 11 ಗಂಟೆಯಾದರೂ ಅಧಿಕಾರಿಗಳು ಬರದ ಹಿನ್ನೆಲೆ ರೈತರು ಆಕ್ರೋಶಗೊಂಡಿದ್ದರಿಂದ ಕೆಲಕಾಲ ಇಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿತ್ತು. ಈ ವೇಳೆ ರೈತರು ತೋಟಗಾರಿಕೆ ಕಚೇರಿಯ ಗೇಟ್ ತೆಗೆದು ಒಳಗಡೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ಆಗುತ್ತಿದ್ದರೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಸಿಜೆಂಟಾ ಕಂಪನಿಯ ವಿತರಕರು ಸ್ಥಳಕ್ಕೆ ಬಾರದೇ ನಿರ್ಲಕ್ಷ್ಯ ವಹಿಸಿದ್ದಾರೆ.

ಬಳಿಕ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತಿಯೇ ಸ್ಥಳಕ್ಕೆ ತೋಟಗಾರಿಕೆ, ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಜೆಂಟಾ ಕಂಪನಿಯ ವಿತರಕರು ರೈತರ ಬಳಿ ಆಗಮಿಸಿ ಬೀಜದ ಕೊರತೆಯಿಂದ ಅಭಾವವಾಗಿದ್ದು, ಇನ್ನು ಒಂದು ದಿನದಲ್ಲಿ 110 ಕೆಜಿ ಬೀಜವನ್ನು ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಬೀಜವನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ವಿತರಣೆ ಮಾಡಲು ತೀರ್ಮಾನ ಮಾಡಲಾಗಿದೆ. ಆದರೆ ಸಿಜೆಂಟಾ ಕಂಪನಿ ವಿತರಣೆ ಮಾಡುವ ಈ ಬೀಜ ರೈತರಿಗೆ ಸಾಕಾಗುವುದಿಲ್ಲ. ಹೀಗಾಗಿ ರೈತರು ಬೇರೆ ತಳಿಯ ಮೆಣಸಿನಕಾಯಿ ಬೀಜಗಳನ್ನು ಪಡೆಯಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಶರಣಪ್ಪ ಭೋಗಿ ತಿಳಿಸಿದ್ದಾರೆ.

ಸಿಜೆಂಟಾ ಕಂಪನಿ ಈಗಾಗಲೇ ಡೀಲರ್​ಗಳಿಗೆ ಮೆಣಸಿನಕಾಯಿ ಬೀಜ ಮಾರಾಟ ಮಾಡಿದ್ದರಿಂದ ಬೀಜದ ಅಭಾವ ಸೃಷ್ಟಿಯಾಗಲು ಕಾರಣವಾಗಿದೆ. ಇನ್ನೂ ಈ ವರ್ಷ ಹೆಚ್ಚಿನ ಪ್ರಮಾಣದ ರೈತರು ಮೆಣಸಿನಕಾಯಿ ಬೆಳೆಯಲು ಮುಂದಾಗಿದ್ದಾರೆ. ಇದರಿಂದಾಗಿ ಸಿಜೆಂಟಾ ಕಂಪನಿಯ ಮೆಣಸಿನಕಾಯಿ ಬೀಜಕ್ಕೆ ಭಾರಿ ಬೇಡಿಕೆಗೆ ಕಾರಣವಾಗಿದೆ. ಇನ್ನಾದರೂ ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ ಸಿಗಲಿ ಎನ್ನುವುದು ನಮ್ಮ ಆಶಯ.

(ಮಾಹಿತಿ ಕೃಪೆ tv9kannad)

ಮೊಮ್ಮಕ್ಕಳ ಎದುರೇ ಅಜ್ಜ-ಅಜ್ಜಿಯ ಮದುವೆ! 60 ದಾಟಿದವರ ವಿಶೇಷ ಮದುವೆಗೆ ಮಕ್ಕಳ ಕುಟುಂಬವೇ ಅತಿಥಿಗಳು!

 


ಲಖನೌ: ಹೆಣ್ಣು ಮಕ್ಕಳಿಗೆ 25 ವರ್ಷವಾಯಿತೆಂದರೆ ಸಾಕು, ಮದುವೆ ಆಗಿಬಿಡಬೇಕು ಎನ್ನುವಂತಹ ಅಘೋಷಿತ ಕಟ್ಟುಪಾಡಿನ ನಡುವೆಯೇ ಭಾರತೀಯರು ಬದುಕುತ್ತಿದ್ದಾರೆ. ಆದರೆ ಇಲ್ಲೊಂದು ಜೋಡಿ ವಿಶೇಷದರಲ್ಲಿ ವಿಶೇಷ. 28 ವರ್ಷಗಳಿಂದ ಒಟ್ಟಿಗೆ ಇರುವ ಈ ಪ್ರೇಮಿಗಳು ಇದೀಗ ಮೊಮ್ಮಕ್ಕಳು ಹುಟ್ಟಿದ ನಂತರ ಮದುವೆಯಾಗಿದ್ದಾರೆ.
ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯಲ್ಲಿ ಇಂತದ್ದೊಂದು ವಿಶೇಷ ಮದುವೆಯಾಗಿದೆ. 65 ವರ್ಷದ ಮೋತಿಲಾಲ್ ಮತ್ತು 60 ವರ್ಷದ ಮೋಹಿನಿ ದೇವಿ ಭಾನುವಾರ ಸಂಜೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂದ ಹಾಗೆ ಮೋತಿಲಾಲ್​ 28 ವರ್ಷಗಳ ಹಿಂದೆಯೇ ಮೋಹಿನಿಯನ್ನು ಇಷ್ಟಪಟ್ಟಿದ್ದು, ತನ್ನೊಂದಿಗೆ ಕರೆತಂದು ಆಕೆಯೊಂದಿಗೆ ಜೀವನ ಆರಂಭಿಸಿದ್ದನಂತೆ. ಆದರೆ ಅವರಿಬ್ಬರಿಗೆ ಮದುವೆಯಾಗಬೇಕು ಎನಿಸಿಲ್ಲ. ಅದಾದ ನಂತರ ಇಬ್ಬರು ಹೆಣ್ಣು ಮಕ್ಕಳು ಹುಟ್ಟಿದ್ದು, ಅವರ ಲಾಲನೆ ಪಾಲನೆಯಲ್ಲೇ ಸಮಯ ಕಳೆದಿದ್ದು, ಮದುವೆ ಮರೆತಿದ್ದಾರೆ.
ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟ ಈ ಜೋಡಿಗೆ ಈಗಾಗಲೇ ಮೊಮ್ಮಕ್ಕಳೂ ಇದ್ದಾರೆ. ಆದರೆ ಅವರಿಬ್ಬರ ಮದುವೆ ಕನಸು ಮಾತ್ರ ಇನ್ನೂ ಈಡೇರಿರಲಿಲ್ಲ. ಅಮ್ಮನಿಗೆ ಮದುವೆಯಾಗಬೇಕೆಂಬ ಆಸೆ ಇದೆ ಎನ್ನುವುದನ್ನು ಅರಿತಿದ್ದ ಹೆಣ್ಣು ಮಕ್ಕಳು ಅಪ್ಪ ಅಮ್ಮನಿಗೆ ಮದುವೆ ಮಾಡಿಸುವ ನಿರ್ಧಾರ ಮಾಡಿದ್ದಾರೆ. ಮುಹೂರ್ತ ನಿಶ್ಚಯಿಸಿ, ಆಮಂತ್ರಣ ಪತ್ರ ಮುದ್ರಿಸಿ, ಬಂಧುಗಳು ಹಾಗೂ ಗ್ರಾಮಸ್ಥರಿಗೆ ಹಂಚಲಾಗಿದೆ. ಶುಭ ಮುಹೂರ್ತದಲ್ಲಿ ಮೋತಿಲಾಲ್​, ಮೋಹಿನಿಯ ಕೊರಳಿಗೆ ತಾಳಿ ಕಟ್ಟಿದ್ದಾನೆ. ಮಕ್ಕಳು, ಮೊಮ್ಮಕ್ಕಳು ಹಾಗೂ ಬಂಧುಗಳು ಅಕ್ಷತೆ ಹಾಕಿ ಶುಭ ಹಾರೈಸಿದ್ದಾರೆ. ಮದುವೆಯಲ್ಲಿ ಮಂಗಳವಾದ್ಯಗಳ ಜತೆ ನೃತ್ಯವನ್ನೂ ಆಯೋಜಿಸಿದ್ದಾಗಿ ಹೇಳಲಾಗಿದೆ. (ಏಜೆನ್ಸೀಸ್)
(ಮಾಹಿತಿ ಕೃಪೆ ವಿಜಯವಾಣಿ)

ಕೋವಿಡ್; ರಾಜ್ಯದಲ್ಲಿ ಪೋಷಕರನ್ನು ಕಳೆದುಕೊಂಡ 52 ಮಕ್ಕಳು

 

ಚಿತ್ರದುರ್ಗ, ಜೂನ್ 22; "ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್‌ನಿಂದ 52 ಮಕ್ಕಳು ಇಬ್ಬರು ಪೋಷಕರನ್ನು ಕಳೆದುಕೊಂಡಿದ್ದಾರೆ" ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಮಂಗಳವಾರ ಚಿತ್ರದುರ್ಗದಲ್ಲಿ ಮಾತನಾಡಿದ ಸಚಿವರು, "ಚಿತ್ರದುರ್ಗ ಜಿಲ್ಲೆಯಲ್ಲಿ ಮೊದಲು ಹಾಗೂ ಎರಡನೇ ಕೋವಿಡ್ ಸಮಯದಲ್ಲಿ 3,308 ಮಕ್ಕಳು ಸೋಂಕಿತರಾಗಿದ್ದರು. ಯಾವುದೇ ಮಕ್ಕಳಿಗೆ ಅಪಾಯ ಸಂಭವಿಸಿಲ್ಲ" ಎಂದರು.
"ಮಕ್ಕಳು ಎ ಸಿಂಪ್ಟಾಮ್ಯಾಟಿಕ್ ಇದ್ದು ಎಲ್ಲರೂ ಆರಾಮಾಗಿ ಮನೆಗೆ ಬಂದಿದ್ದಾರೆ. ಇಬ್ಬರೂ ಪೋಷಕರನ್ನು ಕಳೆದುಕೊಂಡ 52 ಮಕ್ಕಳಿಗಾಗಿ ಮುಖ್ಯ ಮಂತ್ರಿ ಬಾಲ‌ಸೇವಾ ಯೋಜನೆಯಡಿ ಸಹಾಯ ಹಸ್ತ ನೀಡಲಾಗುತ್ತದೆ. ಅವರ ಬ್ಯಾಂಕ್ ಖಾತೆಗೆ ಸರ್ಕಾರ 3,500 ರೂಪಾಯಿಗಳನ್ನು ಹಾಕಲಿದೆ" ಎಂದು ಸಚಿವರು ಹೇಳಿದರು.
"ಯಾರೂ ಅವರನ್ನು ನೋಡಿಕೊಳ್ಳುವವರು ಇಲ್ಲದೆ ಹೋದರೆ ಅಂತರವನ್ನು ನಮ್ಮ ಇಲಾಖೆಯಡಿ ಎಲ್ಲಾ ಜವಾಬ್ದಾರಿ ತೆಗೆದುಕೊಂಡು ನೋಡಿಕೊಳ್ಳಲಾಗುತ್ತದೆ" ಎಂದು ಸಚಿವರು ವಿವರಿಸಿದರು.
"ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಸಜ್ಜಾಗಿದೆ. ಇದಕ್ಕಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಈಗಾಗಲೇ 600 ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಆಕ್ಸಿಜನೇಟ್ ಮತ್ತು ವೆಂಟಿಲೇಟರ್ ಸಹಿತ ಬೆಡ್ ಗಳನ್ನು ಈಗಾಗಲೇ ಸಿದ್ದಪಡಿಸಲಾಗಿದೆ" ಎಂದರು.
"ಮಗುವಿಗೆ ಎ ಸಿಂಪ್ಟಮಾಟಿಕ್ ಇದ್ದರೆ ಆಗ ತಾಯಿ ಮಗುವನ್ನು ಕೋವಿಡ್ ಕೇರ್ ಸೆಂಟರ್ ನಲ್ಲಿರಿಸಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಪ್ರತಿ ತಾಲೂಕಿನಲ್ಲೂ ಕೋವಿಡ್ ಕೇರ್ ಸೆಂಟರ್ ಗಳನ್ನು ಗುರುತಿಸಲಾಗಿದೆ" ಎಂದು ಸಚಿವರು ತಿಳಿಸಿದರು.
"ಖಾಸಗಿಯವರಿಂದ ತಯಾರಾದ ಆಸ್ಪತ್ರೆಗಳಲ್ಲಿ ಕೂಡ ಆಕ್ಸಿಜನೇಟ್ ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ಚಿಕಿತ್ಸೆಗೆ ಅಗತ್ಯವಾಗಿ ಬೇಕಾಗುವ ಎಲ್ಲಾ ರೀತಿಯ ವಸ್ತುಗಳು‌ ಮೆಡಿಸಿನ್ ಹಾಗೂ ಇನ್ನಿತರ ವಸ್ತುಗಳ ಪಟ್ಟಿ ಮಾಡಿ‌ಕಳುಹಿಸಿದರೆ ನಾನು ಆರೋಗ್ಯ ಮಂತ್ರಿಗಳ ಜೊತೆ ಚರ್ಚಿಸಿ ಸಹಕಾರ ನೀಡುತ್ತೇನೆ" ಎಂದರು.
(ಮಾಹಿತಿ ಕೃಪೆ Oneindia)

Monday, June 21, 2021

ಹಿಂದುಳಿದ ಸಮುದಾಯಗಳು ಮತ್ತು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಭವಿಷ್ಯಕ್ಕೆ NEET ಮಾರಕ: ನಟ ಸೂರ್ಯ

 


ಚೆನ್ನೈ: ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET)ಯು ಒಂದು ಬೆದರಿಕೆ ಎಂದು ಕಾಲಿವುಡ್​ ನಟ ಸೂರ್ಯ ಶಿವಕುಮಾರ್ ಟ್ವಿಟರ್​ ಮೂಲಕ ಕರೆ ನೀಡಿದರು.​ ಶಿಕ್ಷಣ ಎಂಬುದು ರಾಜ್ಯಗಳ ಜವಬ್ದಾರಿ ಮತ್ತು ಹಕ್ಕು ಆಗಿರಬೇಕು ಎಂದು ಸೂರ್ಯ ಹೇಳಿದ್ದಾರೆ.
ಶನಿವಾರ ಟ್ವೀಟ್​ ಮಾಡಿರುವ ಸೂರ್ಯ, ನೀಟ್​ ಅನ್ನು ರದ್ದುಪಡಿಸಿ ಎಂದು ಒತ್ತಾಯ ಮಾಡಿದ್ದಾರೆ. ಹಿಂದುಳಿದ ಸಮುದಾಯಗಳು ಮತ್ತು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಭವಿಷ್ಯವನ್ನು ನೀಟ್​ ಹಾನಿ ಮಾಡುತ್ತದೆ ಎಂದು ಸೂರ್ಯ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ವೈದ್ಯಕೀಯ ಪ್ರವೇಶದ ಮೇಲೆ ನೀಟ್‌ನ ಪ್ರಭಾವವನ್ನು ಅಧ್ಯಯನ ಮಾಡಲು ತಮಿಳುನಾಡು ಸರ್ಕಾರವು ನ್ಯಾಯಮೂರ್ತಿ ಎ.ಕೆ.ರಾಜನ್ ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು ನೇಮಕ ಮಾಡಿದ್ದು, ಈ ಸಮಿತಿಗೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೆರವು ನೀಡುವ ತಮ್ಮ ಅಗರಮ್​ ಫೌಂಡೇಶನ್​ ಪರವಾಗಿ ಸೂರ್ಯ ಪತ್ರವನ್ನು ಬರೆದಿದ್ದಾರೆ.
ನೀಟ್​ನಂತಹ ಪರೀಕ್ಷೆಗಳಲ್ಲಿನ ಕಾಳಜಿಗಳ ಬಗ್ಗೆ ಸರ್ಕಾರ ಮತ್ತು ಅದರ ಬದಲಾವಣೆ ಮಾಡುವವರಿಗೆ ನಾವು ಸರಿಯಾಗಿ ತಿಳಿಸುವುದು ಕಡ್ಡಾಯವಾಗಿದೆ, ಇಲ್ಲದಿದ್ದರೆ ಅಂತಹ ಸಾಮಾನ್ಯ ಪರೀಕ್ಷೆಗಳು ನಮ್ಮ ಮಕ್ಕಳ ಭವಿಷ್ಯವನ್ನು ಹಾಳುಮಾಡುತ್ತವೆ ಎಂದು ಸೂರ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಶಿಕ್ಷಣವನ್ನು ರಾಜ್ಯ ಜವಬ್ದಾರಿಯನ್ನಾಗಿ ಮಾಡಲು ಸೂರ್ಯ ಒತ್ತಾಯಿಸಿದ್ದಾರೆ. 'ಭಾಷೆ ಮತ್ತು ಸಂಸ್ಕೃತಿಯಲ್ಲಿ ವೈವಿಧ್ಯಮಯವಾಗಿರುವ ಭಾರತದಂತಹ ದೇಶಕ್ಕೆ, ಶಿಕ್ಷಣ ವ್ಯವಸ್ಥೆಯು ರಾಜ್ಯದ ಕೈಯಲ್ಲಿದ್ದರೆ ಮಾತ್ರ ನ್ಯಾಯ. ಇದರ ಮೂಲಕ ಶಾಶ್ವತ ಪರಿಹಾರವನ್ನು ನೋಡಬಹುದು. ಎಲ್ಲಾ ರಾಜ್ಯ ರಾಜಕೀಯ ಪಕ್ಷಗಳು ಒಂದಾಗಿ ಶಿಕ್ಷಣವನ್ನು ರಾಜ್ಯದ ಜವಾಬ್ದಾರಿ ಮತ್ತು ಹಕ್ಕನ್ನಾಗಿ ಮಾಡಲು ಕೆಲಸ ಮಾಡಬೇಕೆಂದು ನಾನು ವಿನಂತಿಸುತ್ತೇನೆ.' ಎಂದಿದ್ದಾರೆ.
ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳು ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಶಿಕ್ಷಣದ ಏಕೈಕ ಸಮರ್ಥ ಮೂಲವಾಗಿದೆ. ಶೇ 40% ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ ಮತ್ತು 25% ವಿದ್ಯಾರ್ಥಿಗಳು ತಮಿಳುನಾಡಿನ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿದ್ದಾರೆ. ಅದರಲ್ಲಿ ಕೇವಲ 20% ವಿದ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣವನ್ನು ಪಡೆಯುತ್ತಾರೆಂದು ಸೂರ್ಯ ತಿಳಿಸಿದ್ದಾರೆ.
ನೀಟ್‌ನಂತಹ ಸಾಮಾನ್ಯ ಪರೀಕ್ಷೆಗಳು ಹಿಂದುಳಿದ ಮತ್ತು ಸರ್ಕಾರಿ ಶಾಲೆಗಳಿಂದ ಉತ್ತಮ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳನ್ನು ವಂಚಿತಗೊಳಿಸುತ್ತವೆ. ವೈದ್ಯರಾಗಬೇಕೆಂದು ಕನಸು ಕಾಣುವ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳು ನೀಟ್ ಅನುಷ್ಠಾನದಿಂದ ತೀವ್ರವಾಗಿ ದುರ್ಬಲರಾಗುತ್ತಾರೆ ಎಂದು ಸೂರ್ಯ ಹೇಳಿದ್ದಾರೆ.
ನೀಟ್‌ನ ಪ್ರಭಾವದ ಬಗ್ಗೆ ತನಿಖೆ ನಡೆಸುತ್ತಿರುವ ಉನ್ನತ ಮಟ್ಟದ ಸಮಿತಿಯು ನೀಟ್‌ ಪ್ರವೇಶದ ಬಗ್ಗೆ ತಮ್ಮ ಅಭಿಪ್ರಾಯವನ್ನು neetimpact2021@gmail.com ಗೆ ಬರೆಯಲು ಸಾರ್ವಜನಿಕರನ್ನು ಆಹ್ವಾನಿಸಿದೆ. (ಏಜೆನ್ಸೀಸ್​)
(ಮಾಹಿತಿ ಕೃಪೆ ವಿಜಯವಾಣಿ)

ಇಂದಿನಿಂದ ಬಸ್ ಸಂಚಾರ ಪ್ರಾರಂಭ.! ಆದ್ರೆ ಕಂಡೀಷನ್ ಅಪ್ಲೆ.!

 


ಬೆಂಗಳೂರು : ರಾಜ್ಯ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಇಂದು ಬೆಳಗ್ಗೆ 6 ಗಂಟೆಯಿಂದಲೇ ಬಿಎಂಟಿಸಿ ಮತ್ತು ಕೆಎಸ್ ಆರ್ ಟಿಸಿ ಸಂಚಾರ ಹಸಿರು ನಿಶಾನೆ ತೋರಿಸಿದೆ ಆದ್ರೆ ಕಂಡೀನ್ ಅಪ್ಲೆ. ಶೇ. 50 ರಷ್ಟು ಪ್ರಯಾಣಿಕರಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಚಾಲಕರು ಮತ್ತು ನಿರ್ವಾಹಕರು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ನೆಗೆಟಿವ್ ರಿಪೋರ್ಟ್ ತರಬೇಕು. ಜೊತೆಗೆ ಕೊರೊನಾ ಲಸಿಕೆ ಮೊದಲ ಅಥವಾ ಎರಡನೇ ಡೋಸ್ ಪಡೆದಿರಬೇಕು. ಮಾಸ್ಕ್ ದೈಹಿಕ ಅಂತರ ಕಡ್ಡಾಯವಾಗಿದೆ ಎಂದು ಸಾರಿಗೆ ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಇಂದಿನಿಂದ ಶೇ.50 % ಪ್ರಯಾಣಿಕರೊಂದಿಗೆ ನಮ್ಮ ಮೆಟ್ರೋ ಪುನಾರಂಭಿಸುವ ಕುರಿತು BMRCL ಅಧಿಕೃತ ಮಾಹಿತಿ ನೀಡಿದೆ. ಅನ್ ಲಾಕ್ ಮಾರ್ಗಸೂಚಿಯಂತೆ ಮೆಟ್ರೋ ಸೇವೆ ಜೂನ್ 21 ರಿಂದ ವಾರದ ದಿನಗಳಲ್ಲಿ ಅಂದರೆ ಸೋಮವಾರದಿಂದ ಶುಕ್ರವಾರದವರೆಗೆ ಇರಲಿದೆ ಮತ್ತು ವಾರಾಂತ್ಯದಲ್ಲಿ ಕರ್ಪ್ಯೂ ಹಿನ್ನೆಲೆ ಶನಿವಾರ ಮತ್ತು ಭಾನುವಾರದಂದು ಯಾವುದೇ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ನಮ್ಮ ಮೆಟ್ರೋ ರೈಲುಗಳ ಸೇವೆಯನ್ನು ಎರಡೂ ಮಾರ್ಗಗಳಲ್ಲಿ ಬೆಳಗ್ಗೆ 7 ಗಂಟೆಯಿಂದ 11 ಗಂಟೆ ಹಾಗೂ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 5 ನಿಮಿಷಗಳ ಅಂತರದಲ್ಲಿ ಚಲಿಸುತ್ತದೆ. ಅದಾಗ್ಯೂ ಪ್ರಯಾಣಿಕರ ದಟ್ಟಣೆಯನ್ನು ಅವಲಂಬಿಸಿ ಕಾರ್ಯಾಚರಣೆಯಲ್ಲಿ ರೈಲುಗಳ ನಡುವಿನ ಅಂತವನ್ನು ಪರಿಶೀಲಿಸಲಾಗುವುದು, ಪ್ರಯಾಣಿಕರು ಕಟ್ಟು ನಿಟ್ಟಾಗಿ ಕೊರೊನಾ ಮಾರ್ಗಸೂಚಿ ಪಾಲನೆ ಮಾಡಬೇಕು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಪ್ರಕಟಣೆ ಹೊರಡಿಸಿದೆ.
(ಮಾಹಿತಿ ಕೃಪೆ ಬಿಸಿ ಸುದ್ದಿ)

ಆರೋಗ್ಯಕ್ಕಾಗಿ ಯೋಗ ಮೂಲಮಂತ್ರ ಆಗಬೇಕು: ಅಂತಾರಾಷ್ಟ್ರೀಯ ಯೋಗ ದಿನದಂದು ನಮೋ ಸಂದೇಶ

 


ನವದೆಹಲಿ: ಇಂದು ಅಂತಾರಾಷ್ಟ್ರೀಯ ಯೋಗ ದಿನದ ಏಳನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಆರೋಗ್ಯಕ್ಕಾಗಿ ಯೋಗ ಎಂಬುದು ಮೂಲಮಂತ್ರ ಆಗಬೇಕು ಎಂಬ ಸಂದೇಶ ಸಾರಿದರು.
ಪ್ರಧಾನಿ ಮೋದಿ ಭಾಷಣದ ಸಾರಾಂಶ ಹೀಗಿದೆ..
ದೇಶದ ಜನತೆಗೆ ಯೋಗ ದಿನದ ಶುಭಕೋರುವ ಮೂಲಕ ಪ್ರಧಾನಿ ಮೋದಿ ಭಾಷಣ ಆರಂಭಿಸಿದರು. ಕರೊನಾ ನಡುವೆಯೂ ಯೋಗ ದಿನ ಆಚರಣೆ ಮಾಡಲಾಗುತ್ತದೆ. ಆದರೂ ನಮ್ಮ ಉತ್ಸಾಹ ಕಡಿಮೆ ಆಗಿಲ್ಲ. ಯೋಗ ಮಾಡುವ ಮೂಲಕ ಎಲ್ಲರು ಸ್ವಾಸ್ಥ್ಯರಾಗಬೇಕು. ಕರೊನಾ ಸಮಯದಲ್ಲೂ ಜನರು ಯೋಗವನ್ನು ಮರೆತಿಲ್ಲ. ಯೋಗ ಆತ್ಮಬಲವನ್ನು ಹೆಚ್ಚಿಸುತ್ತದೆ. ಕರೊನಾ ನಡುವೆ ಯೋಗ ನಮ್ಮೆಲ್ಲರ ಆಶಾಕಿರಣವಾಗಿದೆ.
ದೈಹಿಕ ಸ್ವಾಸ್ಥ್ಯದ ಜತೆಗೆ ಮಾನಸಿಕ ಸಾಮರ್ಥ್ಯವು ಮುಖ್ಯ. ಯೋಗ ಮಾಡುವುದರಿಂದ ವಿಶ್ವದ ಯಾವುದೇ ನಕರಾತ್ಮಕ ಶಕ್ತಿ ನಮ್ಮನ್ನು ಏನು ಮಾಡುವುದಿಲ್ಲ. ನಕಾರಾತ್ಮಕ ಶಕ್ತಿಯನ್ನು ಸಕಾರಾತ್ಮಕ ಶಕ್ತಿಯನ್ನಾಗಿ ಮಾಡಬಹುದು. ಯೋಗದಿಂದ ನಮ್ಮ ವಿಚಾರ ಶಕ್ತಿಯು ಹೆಚ್ಚಾಗುತ್ತದೆ. ಆರೋಗ್ಯಕ್ಕಾಗಿ ಯೋಗ ಎಂಬುದು ಮೂಲಮಂತ್ರ ಆಗಬೇಕು.
ಇಂದು ವೈದ್ಯಕೀಯ ವಿಜ್ಞಾನವು ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಗುಣಪಡಿಸುವ ಪ್ರಕ್ರಿಯೆಗೆ ಒತ್ತು ನೀಡುತ್ತದೆ. ಗುಣಪಡಿಸುವ ಪ್ರಕ್ರಿಯೆಯಲ್ಲಿ ಯೋಗ ಸಹಾಯ ಮಾಡುತ್ತದೆ. 'ಯೋಗ ಫಾರ್ ವೆಲ್ನೆಸ್' ಎಂಬ ಧೇಯ್ಯ ವಾಕ್ಯದೊಂದಿಗೆ ಈ ಬಾರಿ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಜನರನ್ನು ಯೋಗ ಮಾಡಲು ಇನ್ನಷ್ಟು ಪ್ರೋತ್ಸಾಹಿಸಲಾಗುತ್ತಿದೆ. ಪ್ರತಿ ದೇಶ, ಪ್ರದೇಶ ಮತ್ತು ಜನರು ಆರೋಗ್ಯವಾಗಿರಲು ನಾನು ಪ್ರಾರ್ಥಿಸುತ್ತೇನೆ.

ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಯೋಗವನ್ನು ರಕ್ಷಾಕವಚವಾಗಿ ಬಳಸಿದ್ದಾರೆ. ವೈದ್ಯರು, ದಾದಿಯರು ಯೋಗವನ್ನು ಕಲಿಸುತ್ತಾ ಅನುಲೋಮ, ವಿಲೋಮ, ಪ್ರಾಣಾಯಾಮದಂತಹ ಉಸಿರಾಟದ ವ್ಯಾಯಾಮ ಮಾಡುತ್ತಾರೆ. ಈ ವ್ಯಾಯಾಮಗಳು ಉಸಿರಾಟದ ವ್ಯವಸ್ಥೆಯನ್ನು ಬಲಪಡಿಸುತ್ತವೆ ಎಂದು ಅಂತರರಾಷ್ಟ್ರೀಯ ತಜ್ಞರು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸಹಯೋಗದೊಂದಿಗೆ ಭಾರತ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಈಗ ಎಂ-ಯೋಗ ಅಪ್ಲಿಕೇಶನ್ ಬಿಡುಗಡೆ ಮಾಡಲಿದೆ. ಆಯಪ್​ನಲ್ಲಿ ವಿವಿಧ ಭಾಷೆಗಳಲ್ಲಿ ಯೋಗ ತರಬೇತಿ ವೀಡಿಯೊಗಳನ್ನು ಹೊಂದಿರುತ್ತದೆ. ಇದರಿಂದ ಯೋಗದ ಮಹತ್ವ ಮತ್ತಷ್ಟು ಜನರಿಗೆ ತಿಳಿಯಲಿದೆ. 'ಒಂದು ವಿಶ್ವ, ಒಂದು ಆರೋಗ್ಯ' ಧ್ಯೇಯವಾಕ್ಯದಲ್ಲಿ ಇದು ಸಹಾಯ ಮಾಡುತ್ತದೆ.
ಸ್ವಾಸ್ಥ್ಯಕ್ಕಾಗಿ ಯೋಗ
ವಿಶ್ವಸಂಸ್ಥೆಯ ವೆಬ್‌ಸೈಟ್‌ ಪ್ರಕಾರ, ಈ ವರ್ಷ 'ಸ್ವಾಸ್ಥ್ಯಕ್ಕಾಗಿ ಯೋಗ' ಎಂಬ ಥೀಮ್​ನೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ ಮತ್ತು ಯೋಗದ ಅಭ್ಯಾಸವು ಪ್ರತಿಯೊಬ್ಬ ವ್ಯಕ್ತಿಯ ಸಮಗ್ರ ಆರೋಗ್ಯವನ್ನು ಹೇಗೆ ಉತ್ತೇಜಿಸುತ್ತದೆ ಎಂಬುದು ಈ ದಿನದ ಪ್ರಮುಖ ವಿಷಯವಾಗಿದೆ.
ಪ್ರತಿವರ್ಷ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. 2014ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇದರ ಕರಡು ನಿರ್ಣಯವನ್ನು ಅಂಗೀಕರಿಸಿ, ಜೂನ್ 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿತು. 177 ದೇಶಗಳು ಈ ನಿರ್ಣಯವನ್ನು ಬೆಂಬಲಿಸಿದ್ದು ಒಂದು ದಾಖಲೆಯಾಗಿ ಉಳಿದಿದೆ.
(ಮಾಹಿತಿ ಕೃಪೆ ವಿಜಯವಾಣಿ)

ವಿಶ್ವ ಯೋಗ ದಿನ| ಆಯಾ ರೋಗಕ್ಕಾನುಗುಣವಾಗಿ 'ಯೋಗ'

 


ಯಾದಗಿರಿ: ಪತಂಜಲಿ ಯೋಗ ಸಮಿತಿ ಅಧ್ಯಕ್ಷರೂ ಆಗಿರುವ ಯೋಗ ಗುರು ಅನಿಲ್ ಗುರೂಜಿ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಕಳೆದ 11 ವರ್ಷಗಳಿಂದ ಯೋಗವನ್ನು ಉಚಿತವಾಗಿ ಕಲಿಸಿಕೊಡಲಾಗುತ್ತಿದೆ.
ಪ್ರತಿದಿನ ಬೆಳಿಗ್ಗೆ 5 ಗಂಟೆಯಿಂದ 7.30ರ ತನಕ ನಗರದ ಹಿಂದಿ ಪ್ರಚಾರ ಸಭಾ ಆವರಣದಲ್ಲಿ ಯೋಗಾಸನ ಹೇಳಿಕೊಡಲಾಗುತ್ತಿದೆ. ಈ ಹನ್ನೊಂದು ವರ್ಷಗಳಲ್ಲಿ ಸುಮಾರು ಒಂದು ಸಾವಿರ ಜನರು ಯೋಗಾಸನ ಕಲಿತುಕೊಂಡಿದ್ದಾರೆ. ಈಗ ಸ್ವತಃ ಅವರೇ ಮನೆಗಳಲ್ಲಿ, ವಾಕಿಂಗ್‌ ಸ್ಥಳಗಳಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ.
ಹಳ್ಳಿಗಳಲ್ಲಿ ಶಿಬಿರ: ಕೊರೊನಾ ಬರುವುದಕ್ಕಿಂತ ಮುಂಚೆ ಹಳ್ಳಿಗಳಲ್ಲಿ ಯೋಗ ಶಿಬಿರ ಹಮ್ಮಿಕೊಂಡು ಗ್ರಾಮಸ್ಥರಿಗೆ ಯೋಗದ ಬಗ್ಗೆ ತಿಳಿವಳಿಕೆ ಮೂಡಿಸುವ ಕೆಲಸವನ್ನು ಅನಿಲ್‌ ಗುರೂಜಿ ಮಾಡಿಕೊಂಡು ಬರುತ್ತಿದ್ದಾರೆ.
'ಜಿಲ್ಲೆಯ ವಿವಿಧ ಹಳ್ಳಿಗಳಲ್ಲಿ ಒಂದು ವಾರ ಕಾಲ ಯೋಗ ಕಲಿಸಿಕೊಡಲಾಗುತ್ತಿತ್ತು. ಯಾರೂ ಚೆನ್ನಾಗಿ ಕಲಿತುಕೊಂಡಿರುತ್ತಾರೊ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಿ ಮುಂದಿನ ಹಳ್ಳಿಗಳಿಗೆ ತೆರಳುತ್ತಿದ್ದೀವಿ. ಸುಮಾರು 20ರಿಂದ 25 ಹಳ್ಳಿಗಳಲ್ಲಿ ತರಬೇತಿ ಶಿಬಿರ ಮಾಡಲಾಗಿದೆ. ಈಗ ಕೊರೊನಾ ಬಂದಾಗಲಿಂದ ಹಳ್ಳಿಗಳಿಗೆ ತೆರಳುವುದನ್ನು ನಿಲ್ಲಿಸಿದ್ದೇವೆ. ಈಗ ನಗರ ಪ್ರದೇಶದಲ್ಲಿ ಮಾತ್ರ ಯೋಗ ತರಬೇತಿ ನೀಡಲಾಗುತ್ತಿದೆ' ಎನ್ನುತ್ತಾರೆ ಅನಿಲ್‌ ಗುರೂಜಿ.
ರೋಗಕ್ಕೆ ಅನುಗುಣವಾಗಿ ಯೋಗ: ಯೋಗವನ್ನು ಉತ್ತಮ ಆರೋಗ್ಯಕ್ಕಾಗಿ ಮಾಡಬೇಕಾಗುತ್ತದೆ. ಆದರೆ, ವಿವಿಧ ಕಾಯಿಲೆಗಳಿಂದ ಬಳಲುವವರಿಗೆ ಆಯಾ ಕಾಯಿಲೆಗೆ ಅನುಗುಣವಾಗಿ ಯೋಗಾಭ್ಯಾಸ ಮಾಡಿಸಬೇಕಾಗುತ್ತದೆ.
'ಯೋಗದಿಂದ ಮಾನಸಿಕ, ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಈಗಿನ ಸಂದರ್ಭದಲ್ಲಿ ಆಮ್ಲೀಯತೆ (ಆಯಸಿಡಿಟಿ), ಅಜೀರ್ಣ, ಹೃದಯಾಸ್ತಂಭನ, ಸೊಂಟನೋವು ಇನ್ನಿತರ ಕಾಯಿಲೆಗಳಿಗೆ ತಕ್ಕಂತೆ ಯೋಗ ತರಬೇತಿ ಮಾಡಿಸಲಾಗುತ್ತಿದೆ. ಕೊರೊನಾ ವೇಳೆ ಪ್ರಾಣಾಮಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ' ಎನ್ನುತ್ತಾರೆ ಯೋಗ ಗುರು ಅನಿಲ್‌ ಗುರೂಜಿ.
***
ಇಂದು ಲುಂಬಿನಿ ವನದಲ್ಲಿ 'ಯೋಗ'
ನಗರದ ಲುಂಬಿನಿ ವನದಲ್ಲಿ ಜೂನ್ 21 ರಂದು 'ಅಂತರರಾಷ್ಟ್ರೀಯ ಯೋಗ ದಿನಾಚರಣೆ' ಪ್ರಯುಕ್ತ 'ಯೋಗದೊಂದಿಗೆ ಮನೆಯಲ್ಲಿರಿ' ಎಂಬ ಘೋಷ ವಾಕ್ಯದೊಂದಿಗೆ ಯೋಗ ದಿನ ಆಚರಿಸಲಾಗುತ್ತಿದೆ.
ಯೋಗ ಗುರು ಅನಿಲ್ ಗುರೂಜಿ ನೇತೃತ್ವದಲ್ಲಿ ಯೋಗ ಮಾಡಿಸಲಾಗುತ್ತಿದೆ. ಈ ಮೂಲಕ ಯೋಗ ದಿನಕ್ಕೆ ಚಾಲನೆ ನೀಡಲಾಗುತ್ತಿದೆ. ಕಳೆದ ಒಂದು ವಾರದಿಂದ ಯೋಗ ತರಬೇತಿ ನಡೆಯುತ್ತಿದೆ. ಆಯುಷ್‌ ಇಲಾಖೆ ಮನೆಯಿಂದಲೇ ಯೋಗ ಮಾಡಿ ಎಂದು ಸೂಚಿಸಿದೆ. ಆದರೆ, ಸಾಂಕೇತಿಕವಾಗಿ ಯೋಗ ಮಾಡಲಾಗುತ್ತಿದೆ.
***
ಕೊರೊನಾ ಸಂದರ್ಭದಲ್ಲಿ ಯೋಗಕ್ಕೆ ಪ್ರಮುಖ್ಯತೆ ಬಂದಿದೆ. ಶ್ವಾಸಕೋಶ ಶುದ್ಧವಾಗಿಟ್ಟುಕೊಳ್ಳಲು ಯೋಗ ಸಹಾಯ ಮಾಡುತ್ತದೆ. ಯೋಗದಿಂದ ರೋಗನಿರೋಧಕ ಶಕ್ತಿ, ಸ್ವಾಸ್ಥ್ಯ ಜೀವನ ನಡೆಸಲು ಸಾಧ್ಯ
- ಅನಿಲ್ ಗುರೂಜಿ, ಯೋಗ ಗುರು

(ಮಾಹಿತಿ ಕೃಪೆ ಪ್ರಜಾವಾಣಿ)

Sunday, June 20, 2021

ಜೂನ್ 20: ಚಿನ್ನ, ಬೆಳ್ಳಿ ಬೆಲೆ ಕುಸಿತ, ಪ್ರಮುಖ ನಗರಗಳಲ್ಲಿ ದರ?

 


ಕೋವಿಡ್ ನಿರ್ಬಂಧದಿಂದ ಅಂಗಡಿ ಮಳಿಗೆಗಳು ಬಂದ್ ಆಗಿದ್ದ ಆಭರಣ ಮಳಿಗೆಗಳು ಓಪನ್ ಆಗುತ್ತಿವೆ. ಭಾರತೀಯ ಮಾರುಕಟ್ಟೆಯಲ್ಲಿ, ಖರೀದಿ ಇಲ್ಲದೆ ವಹಿವಾಟು ಕುಸಿತ ಕಾಣುತ್ತಿತ್ತು, ಈಗ ದೇಶದ ಹಲವೆಡೆ ನಿರ್ಬಂಧ ಸಡಿಲಗೊಳಿಸಲಾಗುತ್ತಿದ್ದು, ವಹಿವಾಟು ಹೆಚ್ಚಾಗುವ ನಿರೀಕ್ಷೆ ಹೊಂದಲಾಗಿದೆ. ಜೂನ್ 20ರಂದು ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಎಂಬುದರ ಸಚಿತ್ರ ವರದಿ ಇಲ್ಲಿದೆ.
ಎಂಸಿಎಕ್ಸ್‌ನಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ ಇಳಿಕೆಯಾಗಿ 46,800ರು ಆಗಿದೆ. ಬೆಳ್ಳಿ ದರ ಪ್ರತಿ 1 ಕೆ.ಜಿಗೆ ಬೇಡಿಕೆ ಹಿಗ್ಗಿ 67,580.00 ರು ನಷ್ಟಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.70ರಷ್ಟು ಇಳಿಕೆಯಾಗಿ 1,764.31ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.83ರಷ್ಟು ಇಳಿಕೆಯಾಗಿ 25.80ಯುಎಸ್ ಡಾಲರ್ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 10 ರು ಇಳಿಕೆ ಕಂಡು 43,990ರು ಬೆಲೆ ಹಾಗೂ ಅಪರಂಜಿ 10 ಗ್ರಾಂಗೆ 10 ರು ಇಳಿಕೆಯಾಗಿ 47,990ರು ನಷ್ಟಿದೆ. ಭಾರತದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ 1. ಕೆ.ಜಿಗೆ: ಚೆನ್ನೈ, ಹೈದರಾಬಾದ್‌ನಲ್ಲಿ73,100ರು, ಮುಂಬೈ, ದೆಹಲಿ, ಬೆಂಗಳೂರು ಪ್ರತಿ 1 ಕೆ.ಜಿಗೆ 67,600ರು ನಷ್ಟಿದೆ. ಉಳಿದ ನಗರಗಳ ಧಾರಣೆ ವಿವರ ಮುಂದಿದೆ.
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್ ಮುಂತಾದ ನಗರಗಳಲ್ಲಿ ಜೂನ್ 20ರಂದು 22 ಹಾಗೂ 24 ಕ್ಯಾರೆಟ್ ಚಿನ್ನದ ದರ ಹೀಗಿದೆ.. ಚಿತ್ರ ವಿನ್ಯಾಸ: ಭರತ್ ಎಚ್. ಸಿ.
(ಮಾಹಿತಿ ಕೃಪೆ Oneindia)

ಮಂಡ್ಯ: ಸಾವಿನಲ್ಲಿ ಒಂದಾದ ತಂದೆ-ಮಗಳು

 


ಮಂಡ್ಯ: ಖಾಸಗಿ ಕಾಲೇಜಿಗೆ ಸೇರಿಸಲಿಲ್ಲ ಎಂಬ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದ ಯುವತಿ ಭಾನುವಾರ ನಸುಕಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳ ಸಾವಿನಿಂದ ನೊಂದ ತಂದೆ ಕೆಲವೇ ಗಂಟೆಗಳಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಈ ಮನಕಲಕುವ ಘಟನೆ ಮಳವಳ್ಳಿ ತಾಲ್ಲೂಕು, ತಳಗವಾದಿ ಗ್ರಾಮದಲ್ಲಿ ನಡೆದಿದೆ. ಟಿ.ಆರ್‌.ಬಾಂಧವ್ಯ (17), ತಂದೆ ಕೆ.ರಾಜು (65) ಮೃತಪಟ್ಟ ತಂದೆ-ಮಗಳು. ತಂದೆಯ ದಿನವೇ ಈ ಘಟನೆ ನಡೆದಿದ್ದು ಇಡೀ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.

ರೈತರಾಗಿದ್ದ ಕೆ.ರಾಜು ಅವರಿಗೆ ಐವರು ಮಕ್ಕಳು, ನಾಲ್ವರು ಪುತ್ರಿಯರು, ಒಬ್ಬ ಪುತ್ರ. ಕಿರಿಯ ಪುತ್ರಿ ಬಾಂಧವ್ಯ ತಂದೆಯ ಪ್ರೀತಿಯ ಪುತ್ರಿಯಾಗಿದ್ದರು. ಪ್ರತಿಭಾವಂತೆಯಾಗಿದ್ದ ಈಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 93 ಅಂಕ ಗಳಿಸಿದ್ದರು. ಮೈಸೂರು ಜಿಲ್ಲೆ, ಬನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಮುಗಿಸಿದ್ದರು, ಈಗ ದ್ವಿತೀಯ ಪಿಯುಸಿಗೆ ದಾಖಲಾಗಬೇಕಾಗಿತ್ತು.

ಕೆ.ರಾಜು ಎಲ್ಲಾ ಮಕ್ಕಳನ್ನು ಖಾಸಗಿ ಶಾಲೆ, ಕಾಲೇಜುಗಳಲ್ಲೇ ಓದಿಸಿದ್ದರು. ಓದಿನಲ್ಲಿ ಮುಂದಿದ್ದ ಬಾಂಧವ್ಯ ದ್ವಿತೀಯ ಪಿಯುಸಿಗೆ ಉತ್ತಮ ಖಾಸಗಿ ಕಾಲೇಜಿಗೆ ಸೇರಿಸುವಂತೆ ತಂದೆಯನ್ನು ಕೇಳಿಕೊಂಡಿದ್ದರು. ಆಕೆ ವೈದ್ಯೆಯಾಗುವ ಕನಸು ಹೊಂದಿದ್ದರು. ಆದರೆ, ಇದೊಂದು ವರ್ಷ ಸರ್ಕಾರಿ ಕಾಲೇಜಿನಲ್ಲೇ ಓದು ಮುಗಿಸುವಂತೆ ತಂದೆ ತಿಳಿಸಿದ್ದರು. ಇದರಿಂದ ಖಿನ್ನತೆಗೆ ಒಳಗಾಗಿದ್ದ ಬಾಂಧವ್ಯ ಭಾನುವಾರ ನಸುಕಿನಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.



ಮಗಳ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುವಾಗ ಕೆ.ರಾಜು ಅಸ್ವಸ್ಥರಾದರು. ಮಳವಳ್ಳಿ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದರು. ಮಳವಳ್ಳಿ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಮಾಹಿತಿ ಕೃಪೆ ಪ್ರಜಾವಾಣಿ)

ನಿಮ್ಮ ಫೋನ್ ಕದ್ದು/ಕಳೆದು ಹೋಗಿದೆಯೇ? ಗೂಗಲ್​ನ ಈ ಫೀಚರ್​ನಿಂದ ಮರಳಿ ಪಡೆಯಬಹುದು!

 


ಹೌದು, ಗೆಳೆಯರೆ..ಆರಂಭದ ದಿನಗಳಲ್ಲಿ ಸರ್ಚ್ ಯಂತ್ರದಂತೆ ಆರಂಭಗೊಂಡ ಗೂಗಲ್ ಈಗ ಜಗತ್ತಿನ 4ನೇ ಶ್ರೀಮಂತ ಸಾಫ್ಟ್​ವೇರ್​ ಸಂಸ್ಥೆ. ಈ ಸಂಸ್ಥೆಯ ಭಾರತೀಯ ಮೂಲದವರಾದ ಸುಂದರ ಪಿಚಾಯ್ 9ನೇ ಶ್ರೀಮಂತ ಸಿ.ಇ.ಓ. ಇತರ ಅನೇಕ ಸರ್ಚ್ ವೆಬ್​ಸೈಟ್​ಗಳು ಗೂಗಲ್​​ ಜತೆಗಿನ ಸ್ಪರ್ಧೆಯಲ್ಲಿ ಆಸುಪಾಸು ಕೂಡ ಇಲ್ಲ. ಗೂಗಲ್ ಯಾತ್ರೆ ಸರ್ಚ್​ ಮುಲಕ ಆರಂಭಿಸಿ, ಇಮೇಲ್, ಡ್ರೈವ್, ಮ್ಯಾಪ್, ನ್ಯೂಸ್, ಚಾಟ್, ಕ್ಯಾಲೆಂಡರ್, ಟ್ರಾನ್ಸಲೇಟರ್, ಮೀಟ್, ಹ್ಯಾಂಗ ಔಟ್, ಯೂಟ್ಯೂಬ್, ಶಾಪಿಂಗ್ ಈಗ ಗೂಗಲ್ ಪೇ ತಲುಪಿದೆ. ಹೀಗೆ ಹತ್ತು ಹಲವು ಇತರ ಸೇವೆಗಳಿಗಾಗಿ ಗೂಗಲ್​ ಅನ್ನು ಜಗತ್ತಿನ ಅನೇಕ ದೇಶಗಳು ಅವಲಂಬಿಸಿವೆ.

| ಕಿರಣ್ ಪೈ
ಒಂದು ಸರ್ವೇ ಪ್ರಕಾರ ಜಗತ್ತಿನಲ್ಲಿ, ಇಮೇಲ್​ಗಾಗಿ, ಜೀಮೇಲ್ ಬಳಸುವವರ ಸಂಖ್ಯೆ ಶೇ.70% ಕ್ಕೂ ಹೆಚ್ಚು. ಒಂದು ರೀತಿಯ ಅನಭೀಷಿಕ್ತ ದೊರೆ. ಭಾರತದಲ್ಲಿ ಕೋಟಿಗಟ್ಟಲೆ ನಾಗರಿಕರು ಗೂಗಲ್ ಇಮೇಲ್ ಅನ್ನು ತಮ್ಮ ಆಧಾರ್ ನಂಬರ್ ಜೊತೆ ಲಿಂಕ್ ಮಾಡಿದ್ದಾರೆ. ಇಮೇಲ್ ಸ್ಪೀಡ್, ಫೀಚರ್​ಗಳ ಕಾರಣ ಜನರಿಗೆ ಲೈಕ್ ಆಗುತ್ತದೆ. ಇನ್ನು ಮ್ಯಾಪ್ ಬಗ್ಗೆ ಗೊತ್ತೇ ಇದೆ. ಎಂ.ಎನ್.ಸಿ ಕಂಪೆನಿಗಳಾದ ಓಲಾ, ಉಬರ್, ಸ್ವಿಗ್ಗೀ, ಜೋಮ್ಯಾಟೋ, ಇತರ ಸರ್ವಿಸ್ ಇಂಡಸ್ಟ್ರೀಸ್ ಗೂಗಲ್ ಮ್ಯಾಪನ್ನು ಅಧಿಕೃತವಾಗಿ ಬಳಸುತ್ತವೆ. ಹೊಸ ಹೊಸ ನಗರ, ಸ್ಥಳಗಳಿಗೆ ಭೇಟಿ ಕೊಟ್ಟಾಗ ನೀವು ಕೂಡ ಗೂಗಲ್ ಮ್ಯಾಪ್ ಬಳಸಿರುವಿರಿ.
ಮತ್ತೊಂದು ಗೂಗಲ್ ಅಂಗ ಸಂಸ್ಥೆ 'ಯೂಟ್ಯೂಬ್'….ವಿಡಿಯೋ ಕ್ರೀಯೆಟ್ ಮಾಡಿ, ಅನೇಕ ಜನ ತಮ್ಮ ಜೀವನವನ್ನೇ ಕಂಡುಕೊಂಡಿದ್ದಾರೆ. ಗೌಪ್ಯತೆ, ಸೆಕ್ಯೂರಿಟಿ, ಅಶ್ಲೀಲ ಹಾಗೂ ಅಪರಾಧಿ ವಿಷಯಗಳಿಗೆ ಕಡಿವಾಣ ಮತ್ತು ಸಾಮಾಜಿಕ ಹಿತದೃಷ್ಟಿಯಿಂದ ಅನೇಕ ರೀತಿಯ ಚೌಕಟ್ಟು, ನಿರ್ಬಂಧಗಳ ನಿಯಮಗಳನ್ನು ಯೂಟ್ಯೂಬ್ ಪಾಲಿಸುವುದು ಜಾಗತಿಕ ಮಟ್ಟದಲ್ಲಿ ಪ್ರಶಂಸೆಗಳಿಸಿದೆ. ಓ.ಟಿ.ಟಿ ಅಮೆಜಾನ್ ಪ್ರೈಮ್, ಜೀ ಫೈವ್, ನೆಟ್ ಪ್ಲೀಕ್ಸ್ ಇತ್ಯಾದಿ ಬರೋ ಮುಂಚೆ ಯೂಟ್ಯೂಬ್ ನಲ್ಲೇ ಜಾಸ್ತಿ ಸಿನಿಮಾವನ್ನು ವೀಕ್ಷಿಸುತ್ತಿದ್ದರು.
ಈ ರೀತಿ, ಗೂಗಲ್​ನ ಒಂದೊಂದು ಸೇವೆ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ಇತ್ತೀಚೆಗೆ ಯು.ಪಿ.ಐ ಸಂಖ್ಯೆ ಬಳಸಿ ಗೂಗಲ್ ಪೇ ಭಾರತದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ ಪೇಯ್ಮೇಂಟ್ ಅಪ್ಲಿಕೇಶನ್. ತಮ್ಮ ತಮ್ಮ ವಿಚಾರ, ಶೋಧ, ಅವಶ್ಯಕತೆಯ ಪರಿಧಿಯಲ್ಲಿ, ಸಾಮಾಜಿಕ ಅಪ್ಲಿಕೇಷನ್, ಇಂಟರ್ನೆಟ್ ಅನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿದರೆ, ಸಕಾರಾತ್ಮಕ ವಿಷಯಗಳೇ ಸಿಗುತ್ತದೆ. ಸರ್ವೇ ಪ್ರಕಾರ ಸ್ಮಾರ್ಟ್ ಫೋನ್, ಕಂಪ್ಯೂಟರ್ ಬಳಸುವ ವ್ಯಕ್ತಿ ದಿನಕ್ಕೆ ಬೇರೆ ಬೇರೆ ಕಾರಣಗಳಿಗೆ, ಕನಿಷ್ಟ 30ರಿಂದ 60 ನಿಮಿಷ ಗೂಗಲ್ ಹಾಗೂ ಅದರ ಇತರ ಸೇವೆಯನ್ನು ಬಳಸುತ್ತಾನೆ.
ನಿಮ್ಮ ಫೋನ್ ಕಳೆದು ಹೋಗಿದೆಯೇ? ಅದಕ್ಕೂ ಗೂಗಲ್ ಸೇವೆ ಇದೆ!
ಯಸ್…ಬೆಲೆಬಾಳುವ ಮೊಬೈಲ್ ಕಳೆದು/ ಕದ್ದು ಹೋಯಿತು ಏನು ಮಾಡಲಿ? ಅದೆಷ್ಟು ಡಾಟಾ, ಗೌಪ್ಯ, ವಿಷಯ, ಮೇಸೆಜ್, ಫ್ಯಾಮಿಲಿ ಚಿತ್ರ ಇತ್ಯಾದಿ ಇತ್ತು…. ಎಂದು ಕಳೆದುಕೊಂಡ ವ್ಯಕ್ತಿ ಟೆನ್ಷನ್ ಮಾಡಿಕೊಳ್ಳುವುದು ಸಹಜ. ಪೊಲೀಸ್ ಕಂಪ್ಲೇಂಟ್ ಕೂಡ ಕೊಡದೆ ಡಿಪ್ರೇಷನ್​ಗೆ ಹೋದದ್ದು ಇದೆ. ಒಂದು ವೇಳೆ ಕದ್ದು ಹೋಯಿತು, ಎಲ್ಲಿ ಬಿತ್ತೋ ಗೊತ್ತಿಲ್ಲ,…..ಗಾಬರಿ ಬೇಡ… ದೀರ್ಘ ಉಸಿರಾಟ ತೆಗೆದುಕೊಂಡು ಮೊದಲು ಯೋಚಿಸಿ… ಕೊನೆಗೆ ಹೋದದ್ದು ಎಲ್ಲಿ,? ಯಾರನ್ನು ಭೇಟಿಯಾದದ್ದು? ಟ್ರಾವೆಲ್ ಹಿಸ್ಟರಿ. ಇಲ್ಲ ಏನು ತಿಳಿತಾ ಇಲ್ಲ…. ಟೆನ್ಷನ್ ಬೇಡ… ಒಂದೆರಡು ಸಲ ನಿಮ್ಮ ನಂಬರ್​ಗೆ ಬೇರೆ ಮೊಬೈಲ್ ನಿಂದ ಕರೆ ಮಾಡಿ, ರಿಂಗ್ ಆಗಿ ಯಾರಾದರೂ ರಿಸೀವ್ ಮಾಡಿದಲ್ಲಿ ರಿಕ್ವೆಸ್ಟ್ ಮಾಡಿ.. ಸ್ವೀಚ್ ಆಫ್ ಬಂದಲ್ಲಿ ಗಡಿಬಿಡಿ ಬೇಡ, ಡೈರೆಕ್ಟ್ ಸಿಮ್ ಬ್ಲಾಕ್ ಮಾಡಿ. ಆನ್ಲೈನ್, ಕಸ್ಟಮರ್ ಕೇರ್,ಅಥವಾ ಹತ್ತಿರದ ನಿಮ್ಮ ಸಿಮ್ ಕಂಪೆನಿಯ ಕಛೇರಿಗೆ ಹೋಗಿ ಮಾಡಬಹುದು. ನಂತರ ಹತ್ತಿರದ ಪೋಲಿಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟು ಎಫ್.ಐ.ಆರ್ ಕಾಪಿ ಪಡೆದುಕೊಳ್ಳಿ ಇದು ಬಹಳ ಮುಖ್ಯ.
ಬ್ಲಾಕ್, ಕಂಪ್ಲೇಂಟ್ ಕೊಟ್ಟ ನಂತರ, ನಿಮಗೆ ಗೂಗಲ್​ನ ಅನೇಕರಿಗೆ ತಿಳಿಯದ ಸಹಾಯಕಾರಿ ಫೀಚರ್ ಬಗ್ಗೆ ಹೇಳಿ ಕೊಡುತ್ತೇನೆ. ಅದುವೇ ' ಫೈಂಡ್ ಮೈ ಡಿವೈಸ್' (ನನ್ನ ಉಪಕರಣ ಶೋಧಿಸು ). ಇದು ಒಂದು ರೀತಿಯ ಕಮಾಂಡ್. ನೀವು ಗೂಗಲ್​​ಗೆ ಕೊಡುವುದು. ಇದರಲ್ಲಿ ಯಾವುದೇ ರಾಕೆಟ್ ವಿಜ್ಞಾನ ಇಲ್ಲ. ಆದರೆ ನೀವು ಆಂಡ್ರಾಯ್ಡ್ ಫೋನ್ ಬಳಕೆದಾರರಾಗಿದ್ದಲ್ಲಿ ನಿಮ್ಮ ಫೋನ್ ನಲ್ಲಿ ಈ ಕೆಳಕಂಡ ಸೆಟ್ಟಿಂಗ್ ಮಾಡಿ, Settings>Google/Services>Find My Device>On. ಮೊಬೈಲ್ ಕಳೆದು ಹೋದಲ್ ಮೇಲೆ ಈ ಸೆಟ್ಟಿಂಗ್ ತುಂಬಾ ಹೇಗೆ ಕೆಲಸ ಮಾಡುತ್ತದೆ ಬನ್ನಿ ನೋಡುವ, ಕಂಪ್ಯೂಟರ್ ಮೂಲಕ ಗೂಗಲ್ ನಲ್ಲಿ ಫೈಂಡ್ ಮೈ ಡಿವೈಸ್ ಸರ್ಚ್ ಮಾಡಿ, ಪೇಜ್ ಓಪನ್ ಆದ ತಕ್ಷಣ ಗೂಗಲ್ ಇಮೇಲ್ ಲಾಗ್ ಇನ್ ಮಾಡಿಕೊಳ್ಳಿ. ಮೇಲಿನ ಸೆಟ್ಟಿಂಗ್ ನಿಮ್ಮ ಕಳೆದು ಹೋದ ಮೊಬೈಲ್ ನಲ್ಲಿ ಇರುವುದರಿಂದ ಮೊಬೈಲ್ ಮಾಡೆಲ್ ಪೇಜ್ ಮೇಲೆ ಕಾಣುತ್ತದೆ, ಅದನ್ನು ಕ್ಲಿಕ್ ಮಾಡಿದಂತೆ, 3 ಆಪ್ಶನ್ ಕಾಣುತ್ತೀರಿ,
* ಪ್ಲೇ ಸೌಂಡ್: ಕಳೆದುಕೊಂಡ ಮೊಬೈಲ್ ಯಾರಾದರೂ ಸೈಲೆಂಟ್ ಮಾಡಿದ್ರೂ ನೀವು ಇಲ್ಲಿ ಕ್ಲಿಕ್ಕಿಸಿದ ತಕ್ಷಣ ಅಲ್ಲಿ ಮೊಬೈಲ್ 5 ನಿಮಿಷ ರಿಂಗಣೀಸುತ್ತದೆ. ಒಂದು ವೇಳೆ ನಿಮ್ಮ ಆಸುಪಾಸು ನೀವೇ ಮರೆತು, ಸೈಲೆಂಟ್ ಇಟ್ಟುಕೊಂಡು ಮೊಬೈಲ್ ಹುಡುಕಲು ಸುಲಭ.
* ಸೆಕ್ಯೂರ್ ಡಿವೈಸ್: ಇಲ್ಲಿ ಕ್ಲಿಕ್ ಮಾಡಿದ ತಕ್ಷಣ ಮೇಸೆಜ್ ಕಳಿಸಲು ಅವಕಾಶವಿದೆ. ಯಾರಿಗಾದರೂ ಮೊಬೈಲ್ ಸಿಕ್ಕ ಪಕ್ಷದಲ್ಲಿ ವ್ಯಕ್ತಿಗೆ ಮೇಸೆಜ್ ಮಾಡಿ ರೀಡ್ ಲೊಕೆಷನ್ ಟ್ರೇಸ್ ಮಾಡಬಹುದು. ಹಾಗೂ ಫೋನ್ ಸ್ಕ್ರೀನ್ ಲಾಕ್ ಆಗುವುದು. ಸ್ಕ್ರೀನ್ ಲಾಕ್ ಇಲ್ಲದೆ ಮೊಬೈಲ್ ಆಪರೇಟ್ ಮಾಡೋದು ಕಷ್ಟ. ಅಲ್ಲದೆ ಆತನಿಗೆ ಸ್ವಲ್ಪ ಗಾಬರಿಯಾದಿತು. ಎಲ್ಲಿಂದ ಟ್ರಾಕ್ ಮಾಡಲಾಗುತ್ತಿದೆ ಎಂದು.
* ಇರೇಸ್ ಡಿವೈಸ್: ಕಳೆದುಕೊಂಡ ಮೊಬೈಲ್ ನಲ್ಲಿ ಯಾವುದೇ ಪರ್ಸನಲ್ ವಿಷಯಗಳು, ಗೌಪ್ಯತೆ ಲೀಕ್ ಆಗುತ್ತದೆ ಎಂಬ ಭಯ ಇರುವುದಿಲ್ಲ, ಈ ಆಪ್ಶನ್ ಒತ್ತಿದಂತೆ ನಿಮ್ಮ ಇಡೀ ಮೊಬೈಲ್ ನ ಪೂರ್ತಿ ಡಾಟಾ ಕ್ಲೀನ್ ಆಗುವುದು.
ಇಷ್ಟೆಲ್ಲಾ ಆದ ಮೇಲೆ ನಿಮಗೆ ಮತ್ತು ಸ್ವಲ್ಪ ಆಶಾದಾಯಕ ರಿಲೀಫ್. ಕೊನೆಯದಾಗಿ ನಿಮ್ಮ ಫೋನ್ ನಲ್ಲಿ ಜೀಮೇಲ್ ಆನ್ ಇದ್ದರೆ ಫೋನ್ಕೆ ಲಾಸ್ಟ್ ಲೊಕೆಷನ್ ಡಿಟೇಲ್ಸ್ ಪಕ್ಕದ ಮ್ಯಾಪ್ ನಲ್ಲಿ ಕಾಣಬಹುದು. ಈ ರೀತಿ ತಕ್ಕ ಮಟ್ಟಿಗೆ ಗೂಗಲ್ ನಿಮಗೆ ಕಳೆದು/ಕದ್ದು ಹೋದ ಮೊಬೈಲ್ ಸೇಫ್ ಇರುವಂತೆ ಮಾಡಲು ಸಹಾಯಕ. ಈ ಫೀಚರ್,ಫೋನ್ ನಿಮ್ಮ ಬಳಿ ಇದ್ದಾಗಲೇ ಲಾಗ್ ಇನ್ ಮಾಡಿ ಪ್ರಾಕ್ಟಿಕಲ್ ಆಗಿ ನೋಡಬಹುದು.ಒಮ್ಮೆಪ್ರಯತ್ನಿಸಿ
ಸಿ.ಇ.ಐ.ಆರ್.ಕಂಪ್ಲೇಂಟ್ ;
ಫೈಂಡ್ ಮೈ ಡಿವೈಸ್ ಪೇಜ್ ನ ಎಡಭಾಗದಲ್ಲಿ ಮೇಲೆ ನಿಮ್ಮ ಫೋನಿನ IMEI ನಂಬರ್ ಸೇವ್ ಆಗಿರುತ್ತದೆ. ಎಲ್ಲರ ಬಳಿ,ಪ್ರತಿ ಕ್ಷಣ ಮೊಬೈಲ್ ಬಿಲ್ ಇರುವುದಿಲ್ಲ, ಆಗಾಗಿ IMEI ನಂಬರ್ ಬಳಸಿಕೊಂಡು ನೀವು ನಿಮ್ಮ ಮೊಬೈಲ್ ಬ್ಲಾಕ್ ಮಾಡಬಹುದು.
ಹೌದು ಫ್ರೆಂಡ್ಸ್,….ಕದ್ದ ವ್ಯಕ್ತಿ ಅಥವಾ ಸಿಕ್ಕ ವ್ಯಕ್ತಿ ನಿಮ್ಮ ಮೊಬೈಲ್ ಏನು ಮಾಡದಂತೆ ಮಾಡಬಹುದು.ನೀವು ಮಾಡಬೇಕಿರುವುದು ಏನು?
ಮೊಬೈಲ್ ಕಳೆದು ಹೋಗಿದೆ, ಸಿಮ್ ಬ್ಲಾಕ್ ಆಯಿತು, ಪೋಲೀಸ್ ಕಂಪ್ಲೇಂಟ್ ಆಗಿದೆ, ಫೈಂಡ್ ಮೈ ಡಿವೈಸ್ ನಲ್ಲಿ ಯಾರೋ ಮೊಬೈಲ್ ಬಳಸುವ ಕ್ಲೂ ಸಿಕ್ಕಿದೆ, ವಾಟ್ ನೆಕ್ಸ್ಟ್? ತಕ್ಷಣ ಇಂಟರ್ನೆಟ್ ಮೂಲಕ www.Ceir.Gov.In ಗೆ ಲಾಗ್ ಇನ್ ಮಾಡಿ,CEIR ಸೆಂಟ್ರಲ್ ಇಕ್ವೀಪ್ ಮೆಂಟ್ ಐಡೆಂಟಿಟಿ ರಿಜಿಸ್ಟರ್. ಇದು ಕೇಂದ್ರದ ದೂರಸಂಪರ್ಕ, ಟೆಲಿಕಾಂ ವಿಭಾಗದ ವೆಬ್ಸೈಟ್. ಸರ್ಕಾರ ಕದ್ದು/ಕಳೆದು ಹೋದ ಮೊಬೈಲ್ ಬ್ಲಾಕ್ ಮಾಡೋ ಉದ್ದೇಶದಿಂದ ಈ ವೆಬ್ ಸೈಟ್ ಆರಂಭಿಸಿದೆ. ಪೇಜ್ ಓಪನ್ ಮಾಡಿದಾಕ್ಷಣ ಕೆಳಗೆ 3 ಆಪ್ಶನ್ ಕಾಣುತ್ತದೆ.
1) ಬ್ಲಾಕ್ ಸ್ಟೋಲ್ನ್/ಲಾಸ್ಟ್ ಮೊಬೈಲ್: IMEI ಬ್ಲಾಕ್ ಮಾಡಬೇಕು ಎಂದಾದರೆ ಇಲ್ಲಿ ಕೇಳಿದ ಎಲ್ಲಾ ಮಾಹಿತಿ ತುಂಬಿರಿ, ಬ್ರಾಂಡ್, ಬಿಲ್, ಮಾಡೆಲ್, ಕಳೆದುಕೊಂಡ ಸ್ಥಳ, ದಿನಾಂಕ, ಪೋಲಿಸ್ ಠಾಣೆ,ಎಫ್.ಐ.ಆರ್ ಕಾಪಿ,ಇತ್ಯಾದಿ. ಕೊನೆಗೆ ಸಬ್ಮಿಟ್ ಮಾಡಿ. ನಿಮಗೆ ಕಂಪ್ಲೇಂಟ್ ರಿಜಿಸ್ಟರ್ ಆದ ಮೇಸೆಜ್ ಬರುತ್ತದೆ. ಅದನ್ನು ನೋಟ್, ಸೇವ್ ಮಾಡಿ.ಒಂದು ವೇಳೆ ಮೊಬೈಲ್ ಸಿಕ್ಕಾಗ ಅನ್ಲಾಕ್ ಮಾಡಲು ಬೇಕಾಗುತ್ತದೆ.
2) ಅನ್ ಬ್ಲಾಕ್ / ಫೌಂಡ್ ಮೊಬೈಲ್: ಮೊಬೈಲ್ ಸಿಕ್ಕ ಬಳಿಕ, ಅನ್ ಲಾಕ್ ಮಾಡುವ ವಿಧಾನ, ಸೇವ್ ಮಾಡಿದ ಕಂಪ್ಲೇಂಟ್ ರಿಕ್ವೆಸ್ಟ್ ನಂಬರ್, ಮೊಬೈಲ್ ಸಂಖ್ಯೆ, ಅನ್ ಲಾಕ್ ಮಾಡುವ ಕಾರಣ ಇವುಗಳ ಮಾಹಿತಿ ಇಲ್ಲಿ ಕೊಡಬೇಕಾಗುತ್ತದೆ.
3) ರಿಕ್ವೆಸ್ಟ್ ಸ್ಟೇಟಸ್: ಕಂಪ್ಲೇಂಟ್ ರಿಕ್ವೆಸ್ಟ್ ಸಂಬಂಧಪಟ್ಟ ಸ್ಟೇಟಸ್ ಇಲ್ಲಿ ನೋಡಬಹುದು. ಈ ವಿಧಾನಗಳನ್ನು ಅನುಸರಿಸಿ ನೀವು ಕಳೆದುಕೊಂಡ ಬೆಲೆಬಾಳುವ ದುಬಾರಿ ಮೊಬೈಲ್ ಗಳನ್ನು ಸಿಂಪಲಾಗಿ ಟ್ರಾಕ್ ಮಾಡಬಹುದು.
ಇವು ಅನೇಕರಿಗೆ ತಿಳಿದಿದ್ದರೂ, ಬಹಳಷ್ಟು ಮಂದಿಗೆ ಗೊತ್ತೇ ಇಲ್ಲ. ಕೆಲವರಂತೂ ಪೋಲಿಸ್ ಕಂಪ್ಲೇಂಟ್ ಕೂಡ ಕೊಡುವುದಿಲ್ಲ. ಸ್ವಲ್ಪ ದಿನ ಗಡಿಬಿಡಿ, ಟೆನ್ಷನ್ ಮಾಡಿ ಸುಮ್ಮನಾಗುತ್ತಾರೆ. ಪರಿಣಾಮ ನಿಮ್ಮ ಮೊಬೈಲ್ ಇತರರ ಕೈಯಲ್ಲಿ ಮಿಸ್ ಯೂಸ್ ಆಗುತ್ತದೆ.ಒಮ್ಮೆ ಮೊಬೈಲ್ ಕಳೆದು ಹೋಯಿತು ಅಂದರೆ ಅದರ ಕಂಟ್ರೋಲ್ ನಿಮ್ಮ ಕೈಯಲ್ಲಿ ಇಲ್ಲ. ಕಾನೂನಿನ ಪ್ರಕಾರ ರೆಕಾರ್ಡ್ ನಿಮ್ಮ ಹೆಸರಲ್ಲಿ ಇರುವುದರಿಂದ ನಾಳೆ ಹೆಚ್ಚು ಕಡಿಮೆ ಆದಲ್ಲಿ ನಿಮ್ಮ ಕೈಯಲ್ಲಿ ಕಂಪ್ಲೇಂಟ್ ಕಾಪಿನೂ ಇಲ್ಲದಿದ್ದರೆ……. ಯಾರು ಹೊಣೆ???? ಅಂತಹ ಸನ್ನಿವೇಶದಲ್ಲಿ ಮೇಲಿನ ವಿಧಾನಗಳು ತುಂಬಾ ಸಹಾಯಕ ….ಟೆಕ್ನಾಲಜಿ ಎಷ್ಟು ಉಪಯುಕ್ತ ವೋ ಕೆಲವೊಂದು ಸಂದರ್ಭಗಳಲ್ಲಿ ಅಷ್ಟೇ ಡೆಂಜರ್, ಸೇಫ್ ಆಗಿರಿ ಹ್ಯಾಂಡಲ್ ವಿತ್ ಕೇರ್….!!
(ಮಾಹಿತಿ ಕೃಪೆ ವಿಜಯವಾಣಿ)

BIG NEWS: ಸೊಪ್ಪು, ತರಕಾರಿಗಳನ್ನು ಕಾಲಿನಿಂದ ಒದ್ದ ಪಿಎಸ್ ಐ; ಬೀದಿಬದಿ ವ್ಯಾಪಾರಿಗಳ ಮೇಲೆ ಪೊಲೀಸಪ್ಪನ ದರ್ಪ

 



ರಾಯಚೂರು: ಸೊಪ್ಪು, ತರಕಾರಿಗಳನ್ನು ಕಾಲಿನಿಂದ ಒದ್ದು, ಬೀದಿಬದಿ ವ್ಯಾಪಾರಸ್ಥರ ಮೇಲೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಓರ್ವರು ದರ್ಪ ಮೆರೆದಿರುವ ಘಟನೆ ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ.
ರಾಯಚೂರಿನ ಚಂದ್ರಮೌಳೇಶ್ವರ ವೃತ್ತದಲ್ಲಿ ಕೆಲ ಮಹಿಳೆಯರು ತರಕಾರಿ, ಸೊಪ್ಪುಗಳನ್ನು ರಸ್ತೆಬದಿಯಿಟ್ಟು ಮಾರಾಟ ಮಾಡುತ್ತಿದ್ದರು. ಏಕಾಏಕಿ ಸ್ಥಳಕ್ಕೆ ಆಗಮಿಸಿದ ಸದರ್ ಬಜಾರ್ ಠಾಣೆ ಪಿಎಸ್ ಐ ಅಜಂ ತರಕಾರಿ, ಸೊಪ್ಪು, ನಿಂಬೆ ಹಣ್ಣಿನ ಬುಟ್ಟಿಗಳನ್ನು ಕಾಲಿನಿಂದ ಒದ್ದು, ತರಕಾರಿಗಳನ್ನು ಚಲ್ಲಾಪಿಲ್ಲಿಗೊಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಕೊರೊನಾ ಲಾಕ್ ಡೌನ್ ನಿಂದಾಗಿ ಈಗಾಗಲೇ ಬೀದಿಬದಿ ವ್ಯಾಪಾಸ್ತರ ಬದುಕು ದುಸ್ಥರವಾಗಿದ್ದು, ಒಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹೊತ್ತಿನ ಊಟಕ್ಕಾಗಿ ತರಕಾರಿ ಮಾರುತ್ತಿದ್ದ ಬಡವರ ಮೇಲೆ ಪೊಲೀಸ್ ಇನ್ಸ್ ಪೆಕ್ಟರ್ ದರ್ಪಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

(ಮಾಹಿತಿ ಕೃಪೆ ಕನ್ನಡದುನಿಯಾ)