WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Saturday, December 27, 2025

ಗಂಗಾವತಿಯ ವಾಸ್ತು ತಜ್ಞರಾಗಿರುವ ಮಂಜುನಾಥ ಕುರುಗೋಡು ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ







ಗಂಗಾವತಿಯ ವಾಸ್ತು ತಜ್ಞರಾಗಿರುವ ಮಂಜುನಾಥ ಕುರುಗೋಡು ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ,,, ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ವಾಸ್ತು ತಜ್ಞರಾಗಿರುವ ಶ್ರೀ ಮಂಜುನಾಥ ಕುರುಗೋಡು ಅವರಿಗೆ ಏಶಿಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿಯಿಂದ ವಾಸ್ತು ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಬೆಂಗಳೂರು ಹಾಗೂ ತಮಿಳುನಾಡು ಭಾಗದ ಹೊಸೂರು ನಗರದ ಯೂನಿವರ್ಸಿಟಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಿ ಗೌರವಿಸಲಾಯಿತು ಎಸಿಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿಯ ವಾಯ್ಸ್ ಚಾನ್ಸಲರ್ ಮತ್ತು ಗಣ್ಯರು ಹಾಗೂ ಸಮಾಜಸೇವಕರಾದಹಾಗೂ ಹೈ ಕೋರ್ಟ್ ವಕೀಲರು ಶ್ರೀಯುತ ಆರ್ ಬಿ ಪಾಟೀಲರು ಗೌರವ ಡಾಕ್ಟರೇಟ್ ಅನ್ನು ನೀಡಿ ಪ್ರಧಾನ ಮಾಡಿದರು ಗೌರವ ಡಾಕ್ಟರೇಟ್ ಪದವಿ ಪಡೆದಿರುವ ಶ್ರೀ ಮಂಜುನಾಥ ಕುರುಗೋಡು ಅವರು ಎರಡು ತಿಂಗಳ ಹಿಂದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು  ಪಡೆದಿದ್ದರು,,, ಗೌರವ ಡಾಕ್ಟರೇಟ್ ಪದವಿ ಪಡೆದಿರುವ ಶ್ರೀ ಮಂಜುನಾಥ ಕುರುಗೋಡು ಅವರನ್ನು ಕುರುಹಿನ ಶೆಟ್ಟಿ  ಸಮಾಜದ ಯಜಮಾನರು ಹಾಗೂ ಹಿರಿಯರಾಗಿರುವ ಶ್ರೀ ಏಳುಬಾವಿ ಕುಬೇರಪ್ಪ ಅವರು ಹಾಗೂ ಹಿರಿಯ ಪತ್ರಕರ್ತರಾಗಿರುವ ಪಿ ದಶರಥ ಸಮಾಜಮುಖಿ ಪತ್ರಿಕೆಯ ಸಂಪಾದಕರಾಗಿರುವ ಮಂಜುನಾಥ ನವಲಿ ಹಾಗೂ ಬೆಂಗಳೂರಿನ ಸಮಾಜ ಸೇವಕರು ಶ್ರೀಧರ BSNL  ಅವರುಗಳು ಆತ್ಮೀಯವಾಗಿ ಅಭಿನಂದಿಸಿ ಶುಭ ಹಾರೈಸಿದ್ದಾರೆ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿರುವ ವಾಸ್ತು ತಜ್ಞರಾಗಿರುವ ಡಾಕ್ಟರ್ ಮಂಜುನಾಥ ಕುರುಗೋಡು ಅವರು ನಮ್ಮ ಕಿಷ್ಕಿಂದ ಚಾನಲ್ ನೊಂದಿಗೆ ಮಾತನಾಡಿ ಶ್ರೀ ನೀಲಕಂಠೇಶ್ವರ ಕೃಪಾಶೀರ್ವಾದದೊಂದಿಗೆ ಹಾಗೂ ಪೂಜ್ಯ ನಮ್ಮ ತಂದೆಯವರಾಗಿರುವ ಸನ್ಮಾನ್ಯ ಶ್ರೀ ಕುರುಗೋಡು ಸಣ್ಣಬಸಣ್ಣನವರ ಆಶೀರ್ವಾದದಿಂದ ಮತ್ತು ಕುರುಹಿನಶೆಟ್ಟಿ ಸಮಾಜದ ದೈವದವರ ಮತ್ತು ಯಜಮಾನರ ಆಶೀರ್ವಾದದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದ್ದು ಪ್ರಶಸ್ತಿಗಳು ಮತ್ತು ಗೌರವ ಡಾಕ್ಟರೇಟ್ ಪದವಿಯನ್ನು ಕುರುಹೀನ ಶೆಟ್ಟಿ ಸಮಾಜಕ್ಕೆ ಅರ್ಪಿಸಲಾಗುವುದು ಎಂದು ಧನ್ಯತಾ ಭಾವದಿಂದ ತಿಳಿಸಿದರು ಗೌರವ ಡಾಕ್ಟರೇಟ್ ಪದವಿ ಪ್ರಧಾನ ಸಮಾರಂಭದಲ್ಲಿ ಉಪಸ್ಥಿತರಿದ್ದ ಸಮಾಜದ ಯಜಮಾನರಾದ ಶ್ರೀ ಏಳುಬಾವಿ ಕುಬೇರಪ್ಪ ಅವರು ಮಾತನಾಡಿ ಮಂಜುನಾಥ್ ಕುರುಗೋಡು ಅವರು ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿರುವುದು ಕುರಿಹೀನ ಶೆಟ್ಟಿ ಸಮಾಜಕ್ಕೆ ಹೆಮ್ಮೆ ಎಂದು ಸಂತಸ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದರು ಈ ಸಮಯದಲ್ಲಿ ಗಂಗಾವತಿಯಿಂದ ಆಗಮಿಸಿದ್ದ ಗೆಳೆಯರು ಹಾಗೂ ಸರ್ವ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂತಸ ವ್ಯಕ್ತಪಡಿಸಿದರು

 

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ