WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Sunday, June 7, 2020

ನಟ ಚಿರಂಜೀವಿ ಸರ್ಜಾ ವಿಧಿವಶ

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 39 ವರ್ಷದ ಚಿರಂಚೀವಿ ಸರ್ಜಾ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
1980 ರಂದು ಆಕ್ಟೋಬರ್​ 17ರಂದು ಬೆಂಗಳೂರಿನಲ್ಲಿ ಜನಿಸಿದ್ದ ಅವರು, ಹಿರಿಯ ನಟ ಶಕ್ತಿ ಪ್ರಸಾದ್ ಅವರ​ ಮೊಮ್ಮಗ ಮತ್ತು ನಟ ಅರ್ಜುನ್​ ಸರ್ಜಾ ಅಳಿಯ. ಬಾಲ್ಡವಿನ್​ ಬಾಲಕರ ಹೈ ಸ್ಕೂಲ್​ನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದರು. ಬಳಿಕ ವಿಜಯ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಅಲ್ಲದೇ 4 ವರ್ಷ ಅರ್ಜುನ್​ ಸರ್ಜಾ ಜೊತೆ ಸಹ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದ್ದರು.
ವಾಯುಪುತ್ರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಚಿರಂಜೀವಿ ಸರ್ಜಾ ಅವರು 22ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿರಂಜೀವಿ ಸರ್ಜಾ ಅಭಿನಯದ ಚಿತ್ರಗಳು
ವಾಯುಪುತ್ರ, ಗಂಡೆದೆ, ಚಿರು, ದಂಡಂ ದಶಗುಣಂ, ಕೆಂಪೇಗೌಡ, ವರದನಾಯಕ, ವಿಶಲ್, ಚಂದ್ರಲೇಖ, ಅಜಿತ್​,
ರುದ್ರತಾಂಡವ, ಆಟಗಾರ, ರಾಮ್​ಲೀಲಾ, ಆಕೆ, ಭರ್ಜರಿ, ಪ್ರೇಮ ಬರಹ, ಸಂಹಾರ, ಅಮ್ಮ ಐ ಲವ್​ ಯೂ,
ಸಿಂಗ, ಖಾಕಿ, ಆದ್ಯಾ, ಶಿವಾರ್ಜುನ, ರಾಜಮಾರ್ತಾಂಡ, ಏಪ್ರಿಲ್​, ರಣಂ, ಕ್ಷತ್ರಿಯಾ ಸಿನಿಮಾಗಳು ಶೂಟಿಂಗ್​ ಹಂತದಲ್ಲಿದೆ.
2018ರಲ್ಲಿ ನಟಿ ಮೇಘನಾ ರಾಜ್ ಜೊತೆ ಚಿರಂಜೀವಿ ಸರ್ಜಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಟ್ರ್ಯಾಕ್ಟರ್‌, ವಾಹನ ಇರುವ ರೈತರು ಬಿಪಿಎಲ್‌ ಕಾರ್ಡ್ ಹಿಂತಿರುಗಿಸಿ: ಸರ್ಕಾರದ ನಿಲುವಿಗೆ ಕುಮಾರಸ್ವಾಮಿ ಗರಂ


ಬೆಂಗಳೂರು: ಟ್ರ್ಯಾಕ್ಟರ್‌, ವಾಹನ ಇರುವ ರೈತರು ಬಿಪಿಎಲ್‌ ಕಾರ್ಡ್‌ಗಳನ್ನು ಹಿಂದಿರುಗಿಸಬೇಕು, ಇಲ್ಲವಾದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎನ್ನುವ ಸಿಎಂ ಯಡಿಯೂರಪ್ಪ ಅವರ ಸೂಚನೆ ಮೂರ್ಖತನದಿಂದ ಕೂಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ರೈತರ ಪರವಾಗಿ ಸರ್ಕಾರ ನಡೆಸುವೆನೆಂದ ಯಡಿಯೂರಪ್ಪ ಅವರ ನಿಲುವಿನ ವಿರುದ್ಧ ಕಿಡಿ ಕಾರಿರುವ ಕುಮಾರಸ್ವಾಮಿ ಈ ಸಂಬಂಧ ಸರಣಿ ಟ್ವೀಟ್ ಮಾಡಿದ್ದಾರೆ. "ಟ್ರ್ಯಾಕ್ಟರ್‌, ವಾಹನ ಇರುವ ರೈತರು ಬಿಪಿಎಲ್‌ ಕಾರ್ಡ್‌ಗಳನ್ನು ಹಿಂದಿರುಗಿಸಬೇಕು, ಇಲ್ಲವಾದರೆ ಕಾನೂನು... 
 (ಮಾಹಿತಿ ಕನ್ನಡ ಪ್ರಭ ಕೃಪೆ )

'25 ಸಾವಿರಕ್ಕಿಂತ ಕಡಿಮೆ ಸಂಬಳ ಇರುವವರಿಗೆ ಕೇಂದ್ರದಿಂದ ಹಣ ನೀಡಲಿ'

ಯಾರೆಲ್ಲ 25 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುತ್ತಿದ್ದಾರೋ ಹಾಗೂ ಈಗಿನ ಕೊರೊನಾ ಸಂಕಷ್ಟದ ಕಾಲದಲ್ಲಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೋ ಅಂಥವರಿಗೆ ಸರ್ಕಾರ ನಗದು ವರ್ಗಾವಣೆ ಅನುಕೂಲ ನೀಡಬೇಕು ಎಂದು ಉದ್ಯಮಿ ಹಾಗೂ ಸಿಐಐ (ಕಾನ್ಫಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ) ಅಧ್ಯಕ್ಷ ಉದಯ್ ಕೊಟಕ್ ಅಭಿಪ್ರಾಯ ಪಟ್ಟಿದ್ದಾರೆ.
ಕೊರೊನಾ ಸಂಕಷ್ಟದಲ್ಲಿ ಕೆಲಸ ಕಳೆದುಕೊಂಡಂಥವರಿಗೆ ನಗದು ವರ್ಗಾವಣೆ ಮಾಡಲು ಕೇಂದ್ರ ಸರ್ಕಾರ ಆರಂಭಿಸಬೇಕು. ಯಾರಿಗೆ 25 ಸಾವಿರಕ್ಕಿಂತ ಕಡಿಮೆ ಸಂಬಳ ಇರುತ್ತದೋ ಹಾಗೂ ಯಾರ ಉದ್ಯೋಗ ಅಪಾಯದಲ್ಲಿ ಇರುತ್ತದೋ ಅಂಥವರಿಗೆ ಸಂಬಳದ 50ರಿಂದ 75 ಪರ್ಸೆಂಟ್ ಹಣವನ್ನು ಸರ್ಕಾರ ನೀಡಬೇಕು ಎಂದು ಸಲಹೆ ಮಾಡಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಆರು ತಿಂಗಳ ಸಾಲ ಮರುಪಾವತಿಗೆ ಬಡ್ಡಿ ಮನ್ನಾ ಮಾಡಿದರೆ ಆರ್ಥಿಕ ವ್ಯವಸ್ಥೆಯೇ ಛಿದ್ರವಾಗುತ್ತದೆ ಎಂದಿರುವ ಅವರು, ಸರ್ಕಾರವು ಭೂ ಹಾಗೂ ಕಾರ್ಮಿಕ ಸುಧಾರಣೆ ಕಡೆಗೆ ಗಮನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅಮೆರಿಕ- ಚೀನಾ ವಾಣಿಜ್ಯ ಸಮರದಲ್ಲಿ ಚೀನಾ ಬಿಟ್ಟು ಹೊರಬರುತ್ತಿರುವ ಕಂಪೆನಿಗಳನ್ನು ಆಕರ್ಷಿಸಲು ಭಾರತದಲ್ಲಿ ವ್ಯಾಪಾರ- ಉದ್ಯಮ ಮಾಡುವುದು ಸಲೀಸಾಗಬೇಕು ಎಂದಿದ್ದಾರೆ.
(ಮಾಹಿತಿOneindiaಕೃಪೆ ) 

ಕೇಂದ್ರದ ತೀರ್ಮಾನ; ರೈತರಿಗೆ ವರದಾನ

ಬೆಂಗಳೂರು: ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡಲು ಸುಗ್ರೀವಾಜ್ಞೆ ಹಾಗೂ ಧಾನ್ಯ, ಬೇಳೆಕಾಳು, ಈರುಳ್ಳಿ, ಆಲೂಗಡ್ಡೆ ದರ ನಿಯಂತ್ರಣ ವ್ಯಾಪ್ತಿಯಿಂದ ಹೊರಗಿಡುವ ಕೇಂದ್ರ ಸರ್ಕಾರದ ತೀರ್ಮಾನ ರಾಜ್ಯದ ಮಟ್ಟಿಗೆ ಕೃಷಿಯತ್ತ ಒಲವು ತೋರುತ್ತಿರುವವರಿಗೆ ವರದಾನವಾಗಲಿದೆ.
ಜತೆಗೆ, ಒಂದು ದೇಶ ಒಂದು ಮಾರುಕಟ್ಟೆ ವ್ಯವಸ್ಥೆಯಡಿ ರೈತರಿಗೂ ತಮ್ಮ ಉತ್ಪನ್ನ ಯಾರಿಗೆ ಬೇಕಾದರೂ ಮಾರುವ ವ್ಯವಸ್ಥೆಯಿಂದ ಸ್ಪರ್ಧಾತ್ಮಕ ಮಾರುಕಟ್ಟೆ ನಿರ್ಮಾಣವಾಗಲಿದ್ದು, ವ್ಯವಸ್ಥಿತವಾಗಿ ನಿರ್ವಹಣೆ ಮಾಡಿದರೆ ಕೃಷಿ ಲಾಭದಾಯಕವಾಗಲಿದೆ ಎಂಬ ಆಶಾಭಾವನೆಯೂ ಮೂಡಿದೆ. ಪ್ಯಾನ್‌ಕಾರ್ಡ್‌ ಇದ್ದರೆ ಕೃಷಿ ಉತ್ಪನ್ನ ಖರೀದಿಗೆ ಅವಕಾಶ ಹಾಗೂ ಯಾರು ಬೇಕಾದರೂ ಇ ಪ್ಲಾಟ್‌ ಫಾರ್ಮ್ಗಳನ್ನು ಸೃಷ್ಟಿಸಿ ಅಲ್ಲಿ ರೈತರು ಉತ್ಪನ್ನ ಮಾರಾಟ ಮಾಡುವುದರಿಂದ ಕೃಷಿ ಉತ್ಪನ್ನಗಳ ಮಾರುಕಟ್ಟೆ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಹೊಸ ಅವಕಾಶ ಸಿಗಲಿದೆ.
ಎಪಿಎಂಸಿ ಕಾಯ್ದೆ ತಿದ್ದುಪಡಿ ನಂತರ ಗ್ರಾಮೀಣ ಯುವಕರಿಗೆ ಮಾರುಕಟ್ಟೆ ಮಾಲೀಕರನ್ನಾಗಿಸಲು ಅವಕಾಶ ಕಲ್ಪಿಸುವ ರಾಜ್ಯ ಸರ್ಕಾರದ ಯೋಜನೆಗೂ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ. ಆದರೆ, ಇತ್ತೀಚೆಗೆ ರಾಜ್ಯ ಸರ್ಕಾರದ ಸುಗ್ರೀವಾಜ್ಞೆ ಹಾಗೂ ಕೇಂದ್ರ ಸರ್ಕಾರದ ಪ್ರಸ್ತುತ ತೀರ್ಮಾನದಿಂದ ಎಪಿಎಂಸಿ ವ್ಯವಸ್ಥೆ ಅಸ್ತಿತ್ವ ಕಳೆದುಕೊಳ್ಳುವ ಆತಂ  ಕವೂ ಇದೆ. ದರ ನಿಯಂತ್ರಣ ವ್ಯಾಪ್ತಿಯಿಂದ ಕೆಲವು ಉತ್ಪನ್ನ ಹೊರಗಿಡುವ ತೀರ್ಮಾನದಿಂದ ರೈತರು ತಾವು ಬೆಳೆದ ಉತ್ಪನ್ನಕ್ಕೆ ದರ ನಿಗದಿ ಮಾಡಿಕೊಳ್ಳುವ ಅವಕಾಶ ಸಿಕ್ಕರೂ ಈ ವಿಚಾರದಲ್ಲಿ ರೈತರು, ಗ್ರಾಹಕರು, ವರ್ತಕರ ನಡುವೆ ಸಂಘರ್ಷಕ್ಕೂ ಕಾರಣವಾಗಬಹುದು. ಆಗತ್ಯ ವಸ್ತುಗಳ ಕಾಯ್ದೆಯ ಮೂಲ ಉದ್ದೇಶ ವಿಫ‌ಲವಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಬೆಲೆ ನಿಗದಿ ಅಧಿಕಾರ: ಕೃಷಿ ಉತ್ಪನ್ನ ಮಾರಾಟ (ಉತ್ತೇಜನ ಮತ್ತು ನೆರವು) 2020 ಸುಗ್ರೀವಾಜ್ಞೆ ಯಿಂದಾಗಿ ಧಾನ್ಯಗಳು, ಬೇಳೆ ಕಾಳುಗಳು, ಈರುಳ್ಳಿ, ಆಲೂಗಡ್ಡೆ ಸೇರಿ ಹಲವು ಆಹಾರ ಉತ್ಪನ್ನ ಅಗತ್ಯವಸ್ತುಗಳ ಕಾಯ್ದೆಯಿಂದ ಹೊರಗಿಡುವುದರಿಂದ ರೈತರು ತಾವು ಬೆಳೆದ ಉತ್ಪನ್ನಕ್ಕೆ ತಾವೇ ದರ ನಿಗದಿ ಮಾಡುವ ಅಧಿಕಾರ ಸಿಗಲಿದೆ. ಇದರಿಂ ದ ರೈತನಿಗೆ ದರದ ಖಾತರಿ ಸಿಗಲಿದೆ.
ಬೆಳೆ ಹಾಕುವ ಮುನ್ನವೇ ಖರೀದಿ ಒಪ್ಪಂದವೂ ಮಾಡಿಕೊಳ್ಳುವುದರಿಂದ ರೈತರಿಗೆ ಕೃಷಿ ಲಾಭದಾಯಕ ಎಂಬ ಭರವಸೆ ಸಿಗಲಿದ್ದು, ಕೃಷಿಯತ್ತ ಮುಖ ಮಾಡಿರುವವರಿಗೂ ಇದರಿಂದ ಮತ್ತಷ್ಟು ಉತ್ತೇಜನ ಸಿಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಮಂಡ್ಯದಲ್ಲಿ ಕುಳಿತು ಮುಂಬೈ, ಕೋಲ್ಕತ್ತಾ, ದೆಹಲಿ, ಹೈದರಾಬಾದ್‌ನ ಮಾರುಕಟ್ಟೆಗೆ ತಮ್ಮ ಉತ್ಪನ್ನ ಮಾರಾಟ ಮಾಡಬಹುದು. ವರ್ತಕರಿಗೂ ದಾಸ್ತಾನು ಮಿತಿ ತೆಗೆದಿರುವ ಕಾರಣ ಹೆಚ್ಚು ಖರೀದಿಯೂ ಆಗಲಿದೆ ಎಂದು ಹೇಳಲಾಗಿದೆ.
ರೈತ ಎಲ್ಲಿ ಬೇಕಾದರೂ ತಮ್ಮ ಉತ್ಪನ್ನ ಮಾರಾಟ ಮಾಡಲು ಅವಕಾಶ ಕಲ್ಪಿಸುವುದರಿಂದ ಸ್ಪರ್ಧಾತ್ಮಕ ಮಾರುಕಟ್ಟೆ ಸಿಗಬಹುದು. ಆದರೆ, ಎಪಿಎಂಸಿ ವ್ಯವಸ್ಥೆ ಅಸ್ತಿತ್ವ ಕಳೆದುಕೊಳ್ಳುತ್ತದೆ. ಇನ್ಮುಂದೆ ರೈತರಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡಲು ರಚನೆಯಾದ ಎಪಿಎಂಸಿಗಳಿಗೆ ಯಾರೂ ಬರುವುದಿಲ್ಲ. ಹಲವು ಉತ್ಪನ್ನ ದರ ನಿಯಂತ್ರಣ ವ್ಯಾಪ್ತಿಯಿಂದ ಹೊರಗಿಟ್ಟರೆ ಅಗತ್ಯ ವಸ್ತುಗಳ ಕಾಯ್ದೆ ಯಾಕೆ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಸುಗ್ರೀವಾಜ್ಞೆಯ ಸಂಪೂರ್ಣ ವಿವರ ದೊರೆತ ನಂತರವೇ ಸ್ಪಷ್ಟತೆ ಸಿಗಲಿದೆ. -ಪ್ರಕಾಶ್‌ ಕಮ್ಮರಡಿ, ಕೃಷಿ ಬೆಲೆ ಆಯೋಗ ಮಾಜಿ ಅಧ್ಯಕ್ಷ
ಅಗತ್ಯ ವಸ್ತುಗಳ ಕಾಯ್ದೆ ಕಾಯ್ದೆಯಿಂದ ಕೆಲವು ಕೃಷಿ ಉತ್ಪನ್ನ ಹೊರಗಿಡುವ ತೀರ್ಮಾನ ಸ್ವಾಗತಾರ್ಹ. ಇದರಿಂದ ಸ್ಪರ್ಧಾತ್ಮಕ ಮಾರುಕಟ್ಟೆ ಸಿಗಲಿದ್ದು ರೈತರಿಗೂ ಅನುಕೂಲವಾಗಲಿದೆ. ಆದರೆ, ಎಪಿಎಂಸಿ ಹೊರಗೆ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂದಾಗ ಮತ್ತಷ್ಟು ದಲ್ಲಾಳಿಗಳು ಹುಟ್ಟಿಕೊಳ್ಳುವ ಆತಂಕ ಇದ್ದು ಅದನ್ನು ನಿಯಂತ್ರಿಸಬೇಕು. -ಕುರುಬೂರು ಶಾಂತಕುಮಾರ್‌, ರೈತ ಮುಖಂಡ
* ಎಸ್.ಲಕ್ಷ್ಮಿನಾರಾಯಣ
 (ಮಾಹಿತಿ
ಉದಯವಾಣಿ ಕೃಪೆ )

ದುಬೈನಲ್ಲಿ ಐಪಿಎಲ್? ನಾವು ರೆಡಿ ಎಂದ ಯುಎಇ ಕ್ರಿಕೆಟ್ ಬೋರ್ಡ್

ಮುಂಬೈ: ವರ್ಣರಂಜಿತ ಕ್ರಿಕೆಟ್ ಕೂಟ ಇಂಡಿಯನ್ ಪ್ರೀಮಿಯರ್ ಲೀಗ್ ಈ ಬಾರಿ ಕೋವಿಡ್-19 ಸೋಂಕಿನ ಕಾರಣದಿಂದ ಅನಿರ್ಧಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಮಾರ್ಚ್ ಅಂತ್ಯದಲ್ಲಿ ಆರಂಭವಾಗಬೇಕಿದ್ದ ಕೂಟವನ್ನು ಅಕ್ಟೋಬರ್ ನಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಇದೇ ಸಮಯದಲ್ಲಿ ಭಾರತದ ಹೊರಗೆ ಐಪಿಎಲ್ ನಡೆಸುವುದಾದರೆ ನಾವು ರೆಡಿ ಎಂದು ಯುಎಇ ಹೇಳಿದೆ.
ಅಕ್ಟೋಬರ್ ನಲ್ಲಿ ಟಿ20 ವಿಶ್ವಕಪ್ ನಡೆಯಬೇಕಿದೆ. ಒಂದು ವೇಳೆ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಈ ಕೂಟ ಮುಂದೂಡಿಕೆಯಾದರೆ ಐಪಿಎಲ್ ನಡೆಯುವುದು ನಿಶ್ಚಿತ ಎನ್ನಲಾಗಿದೆ. ಜೂನ್ 10ರಂದು ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ.
ಒಂದು ವೇಳೆ ಭಾರತದ ಹೊರಗೆ ಐಪಿಎಲ್ ನಡೆಸಲು ಉತ್ಸುಕವಾದರೆ, ಆತಿಥ್ಯ ವಹಿಸಿಕೊಳ್ಳಲು ನಾವು ಸಿದ್ದರಿದ್ದೇವೆ ಎಂದು ಯುಎಇ ಕ್ರಿಕೆಟ್ ಬೋರ್ಡ್ ಹೇಳಿದೆ. ಬೋರ್ಡ್ ನ ಕಾರ್ಯದರ್ಶಿ ಮುಬಾಶ್ಶಿರ್ ಉಸ್ಮಾನಿಯವರ ಮಾತನ್ನು ಗಲ್ಫ್ ನ್ಯೂಸ್ ಪತ್ರಿಕೆ ಪ್ರಕಟಿಸಿದೆ.
ಈ ಹಿಂದೆಯೂ ಯಶಸ್ವಿಯಾಗಿ ಐಪಿಎಲ್ ನಡೆಸಿರುವ ಅನುಭವ ನಮಗಿದೆ. ಈ ಬಹುರಾಷ್ಟ್ರೀಯ ಟೂರ್ನಮೆಂಟ್ ಗಳನ್ನೂ ನಡೆಸಿರುವ ನಮಗೆ ಈ ಬಾರಿ ಐಪಿಎಲ್ ನಡೆಸುವ ವಿಶ್ವಾಸವಿದೆ ಎಂದು ಮುಬಾಶ್ಶಿರ್ ಉಸ್ಮಾನಿ ಹೇಳಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿಯೂ ಈ ಬಾರಿ ಐಪಿಎಲ್ ಗೆ ಆತಿಥ್ಯ ವಹಿಸಲು ಉತ್ಸುಕತೆ ತೋರಿದೆ. ಆದರೆ ಬಿಸಿಸಿಐ ಏನು ನಿರ್ಧಾರ ಮಾಡುತ್ತದೆ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.
 (ಮಾಹಿತಿ
ಉದಯವಾಣಿ ಕೃಪೆ )