WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Thursday, December 9, 2021

ಕಂಪ್ಲಿ'ಯನ್ನು ವಿಜಯನಗರ ಜಿಲ್ಲೆ ಸೇರ್ಪಡೆ ವಿಚಾರಣೆ ಫೆಬ್ರವರಿ 15 ಕ್ಕೆ

 ಬೆಂಗಳೂರು, 9 ಡಿಸೆಂಬರ್(ಹಿ.ಸ):

ಬಳ್ಳಾರಿ ಜಿಲ್ಲೆಯಲ್ಲಿ ಇರುವ `ಕಂಪ್ಲಿ' ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರ್ಪಡಿಸಲು ಆಗ್ರಹಿಸಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಾಗಿಸಲಾಗಿತ್ತು.

ಪಿಐಎಲ್ ನ ಪ್ರಕರಣವು ಮುಖ್ಯ ನ್ಯಾಯಾಧೀಶರಾದ ರಿತುರಾಜು ಅವಸ್ಥಿ ಮತ್ತು ಸಚಿನ್ ಶಂಕರ್ ಮಗದುಮ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.ಈ ಪ್ರಕರಣದ ವಿಚಾರಣೆಯನ್ನ ನ್ಯಾಯಾಧೀಶರ ಪೀಠವು ಫೆಬ್ರವರಿ 15 ಕ್ಕೆ ಮುಂದೂಡಿದೆ.

(ಮಾಹಿತಿ ಕೃಪೆ Hindusthan Samachar)

Arogya Karnataka Scheme : ಚಿಕಿತ್ಸೆಗೆ ಆರೋಗ್ಯ ಕಾರ್ಡ್ ಬಿಟ್ಟು ಮತ್ತೇನು ಕೇಳುವಂತಿಲ್ಲ


  ಬೆಂಗಳೂರು (ಡಿ.09): ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ (Arogya karnataka) ಯೋಜನೆಯಡಿ ಸರ್ಕಾರಿ ಮತ್ತು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ (Hospital) ಚಿಕಿತ್ಸೆ (Treatment) ಪಡೆಯಲು ಆಗಮಿಸುವ ಫಲಾನುಭವಿಗಳಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ (Ayushman Arogya Card) ಬಿಟ್ಟು ಇತರೆ ಯಾವುದೇ ದಾಖಲೆ ಕೇಳಬಾರದೆಂದು ಆರೋಗ್ಯ ಇಲಾಖೆ (Health Department) ಎಚ್ಚರಿಕೆ ನೀಡಿದೆ.

ಬಿಪಿಎಲ್ (BPL) ಮತ್ತು ಎಪಿಎಲ್(APL) ಕುಟುಂಬದ ಸದಸ್ಯರಿಗೆ ಶೀಘ್ರ ಹಾಗೂ ಶುಲ್ಕ ರಹಿತ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಆಯುಷ್ಮಾನ್ ಆರೋಗ್ಯ ಯೋಜನೆ ಪ್ರಾರಂಭಿಸಲಾಗಿದೆ. ಸರ್ಕಾರಿ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಅವಶ್ಯಕತೆ ಆಧರಿಸಿ ಚಿಕಿತ್ಸೆ ಒದಗಿಸಲಾಗುತ್ತದೆ. ರಾಜ್ಯದಲ್ಲಿ 1.5 ಕೋಟಿ ಆರೋಗ್ಯ ಕಾರ್ಡ್ ವಿತರಿಸಲಾಗಿದೆ.

ಫಲಾನು ಭವಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಬಂದಾಗ ಹಾಗೂ ಒಳರೋಗಿಯಾಗಿ ದಾಖಲಾದಾಗ ಆರೋಗ್ಯ ಕಾರ್ಡ್ ತೋರಿಸಿದರೂ ಪಡಿತರ ಚೀಟಿ (Ration Card), ಇತರೆ ಕೆಲ ಪೂರಕ ದಾಖಲೆಗಳನ್ನು ನೀಡುವಂತೆ ಸೂಚಿಸಲಾಗುತ್ತಿದೆ. ಆಸ್ಪತ್ರೆಗಳ ಆರೋಗ್ಯ ಮಿತ್ರ ಸಹಾಯಕರು ಚಿಕಿತ್ಸೆಗೆ ಅವಕಾಶ ನೀಡದಿರುವ ಬಗ್ಗೆ ಇಲಾಖೆಗೆ ದೂರುಗಳು (Complaints) ಬಂದಿದ್ದವು. ಈ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಡ್ ಇರುವವರು ಬೇರೆ ಯಾವುದೇ ದಾಖಲಾತಿಗಳನ್ನು ಹಾಜರುಪಡಿಸುವ ಅಗತ್ಯವಿಲ್ಲ. ಪೂರಕ ದಾಖಲೆಗಳಗೆ ಒತ್ತಾಯಿಸುವುದನ್ನು ನಿಷೇಧಿಸಲಾಗಿದೆ.

ಆರೋಗ್ಯ ಕಾರ್ಡ್ ಹೊಂದಿರುವವರಿಗೆ ಚಿಕಿತ್ಸೆ ನೀಡದಿದ್ದಲ್ಲಿ ನಿಯಮಾನುಸಾರ ದುರ್ನಡತೆಯೆಂದು ಪರಿಗಣಿಸಿ, ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ (Health Department) ಆಯುಕ್ತ ಡಿ.ರಂದೀಪ್ ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕಾರ್ಯಕಾರಿ ನಿರ್ದೇಶಕಿ ಎನ್.ಟಿ.ಆಬ್ರು ಜಂಟಿ ಸುತ್ತೋಲೆ ಹೊರಡಿಸಿದ್ದಾರೆ.

ನಿಮ್ಮ ಆರೋಗ್ಯ ಐಡಿ ಕಾರ್ಡ್ ಹೀಗೆ ಪಡೆಯಿರಿ:

ದೇಶದ ಪ್ರತಿ ಪ್ರಜೆಗೂ ಅವರ ಆರೋಗ್ಯದ(health) ಸಂಪೂರ್ಣ ಮಾಹಿತಿ ಒಳಗೊಂಡ ಡಿಜಿಟಲ್‌ ಕಾರ್ಡ್‌(Digital Card) ವಿತರಿಸುವ 'ಪ್ರಧಾನಿ ಮಂತ್ರಿ ಡಿಜಿಟಲ್‌ ಹೆಲ್ತ್‌ ಮಿಷನ್‌'(Pradhan Mantri Jan Arogya Yojana) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದ್ದಾರೆ. ಇದರೊಂದಿಗೆ ಪ್ರಾಯೋಗಿಕವಾಗಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತರಲಾಗಿದ್ದ ಯೋಜನೆ ಇದೀಗ ದೇಶವ್ಯಾಪಿ ವಿಸ್ತರಣೆಯಾಗಿದೆ. ದೇಶದ ಪ್ರತಿ ಪ್ರಜೆಗೂ ಗುಣಮಟ್ಟದ, ಸುಲಲಿತ, ಸಮಗ್ರ, ಅಗ್ಗದ ಮತ್ತು ಸುರಕ್ಷಿತ ಆರೋಗ್ಯ ಸೇವೆ ಒದಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಯೋಜನೆ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಏನಿದು ಯೋಜನೆ?

ಪ್ರಧಾನಮಂತ್ರಿ ಡಿಜಿಟಲ್‌ ಆರೋಗ್ಯ ಮಿಷನ್‌ ಯೋಜನೆಯಡಿ (ಎನ್‌ಡಿಎಚ್‌ಎಂ) ದೇಶದ ಪ್ರತಿಯೊಬ್ಬರಿಗೂ ಆಧಾರ್‌(Aadhar) ಮತ್ತು ಮೊಬೈಲ್‌ ಸಂಖ್ಯೆ ರೀತಿ ವಿಶೇಷ ಗುರುತಿನ ಸಂಖ್ಯೆ ಮತ್ತು ಕಾರ್ಡ್‌ ವಿತರಿಸಲಾಗುತ್ತದೆ. ಈ ಗುರುತಿನ ಚೀಟಿಯು ವ್ಯಕ್ತಿಯೊಬ್ಬರ ಆರೋಗ್ಯ ಕುರಿತಾದ ಎಲ್ಲಾ ಮಾಹಿತಿಯನ್ನು ಒಳಗೊಂಡಿರಲಿದೆ. ಅಂದರೆ ಕಾರ್ಡ್‌ ವಿತರಿಸಿದ ಬಳಿಕ ಆ ವ್ಯಕ್ತಿ ದೇಶದ ಯಾವುದೇ ವೈದ್ಯರನ್ನು ಭೇಟಿ ಮಾಡಿದ ವಿಷಯ, ಅವರು ಆತನಿಗೆ ನೀಡಿದ ಚಿಕಿತ್ಸೆ, ವೈದ್ಯಕೀಯ ವರದಿಗಳು, ಕಾಯಿಲೆಗಳು ಸೇರಿದಂತೆ ಆತನ ಎಲ್ಲಾ ಆರೋಗ್ಯದ ಮಾಹಿತಿ ಒಳಗೊಂಡಿರುತ್ತದೆ.

ಏನಿದರ ಉಪಯೋಗ?

ಡಿಜಿಟಲ್‌ ಆರೋಗ್ಯ ಕಾರ್ಡಲ್ಲಿ(Digital Health card) ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಹೀಗಾಗಿ ವ್ಯಕ್ತಿಯೊಬ್ಬ ಭವಿಷ್ಯದಲ್ಲಿ ಯಾವುದೇ ವೈದ್ಯರ ಭೇಟಿ ವೇಳೆ ಈ ಕಾರ್ಡ್‌ ತೋರಿಸಿದರೆ ಅವರಿಗೆ ರೋಗಿಯ ಎಲ್ಲಾ ಪೂರ್ವಾಪರ ತಿಳಿಯುತ್ತದೆ. ಇದರಿಂದ ತಮ್ಮ ಹಳೆಯ ಚಿಕಿತ್ಸೆಯ ಮಾಹಿತಿಯ ಕಡತಗಳನ್ನು ರೋಗಿ ಎಲ್ಲೆಡೆ ತೆಗೆದುಕೊಂಡು ಹೋಗಬೇಕಿಲ್ಲ. ರೋಗಿಯ ಈ ಆರೋಗ್ಯ ಗುರುತಿನ ಚೀಟಿಯನ್ನು ನೋಡಿದರೆ, ವೈದ್ಯರು ಆರೋಗ್ಯ ಪರಿಸ್ಥಿತಿಯನ್ನು ತಿಳಿದುಕೊಳ್ಳಬಹುದು. ಜೊತೆಗೆ ಹೆಚ್ಚಿನ ಚಿಕಿತ್ಸೆಯನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಈ ಕಾರ್ಡ್‌ ಮೂಲಕ ರೋಗಿಗಳು ಆಯುಷ್ಮಾನ್‌ ಭಾರತ್‌ ಯೋಜನೆಯಂತಹ ಸರ್ಕಾರಿ ಯೋಜನೆಗಳಿಂದ ಪ್ರಯೋಜನಗಳನ್ನು ಪಡೆಯಲೂ ಸಾಧ್ಯವಾಗಲಿದೆ. ಸರ್ಕಾರಕ್ಕೆ ನಿರ್ದಿಷ್ಟಯೋಜನೆ ರೂಪಿಸಲು ಸಾಧ್ಯವಾಗುತ್ತದೆ.

ವೈದ್ಯರಿಗೂ ಸಹಾಯಕ

ಸರ್ಕಾರ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಡೇಟಾಬೇಸ್‌ ಅನ್ನು ಈ ಕಾರ್ಡ್‌ ಮೂಲಕ ಸಿದ್ಧಪಡಿಸುತ್ತದೆ. ಎಲ್ಲಾ ವಿವರಗಳನ್ನು ಆ ವ್ಯಕ್ತಿಯ ವೈದ್ಯಕೀಯ ದಾಖಲೆಯಲ್ಲಿ ಇರಿಸಲಾಗುವುದು. ಈ ಐಡಿಯ ಸಹಾಯದಿಂದ, ಒಬ್ಬ ವ್ಯಕ್ತಿಯ ಸಂಪೂರ್ಣ ವೈದ್ಯಕೀಯ ದಾಖಲೆಯನ್ನು ನೋಡಬಹುದು. ಇದರಿಂದ ವೈದ್ಯರಿಗೂ ನೆರವಾಗಲಿದೆ. ವ್ಯಕ್ತಿಯ ಹಿಂದಿನ ಆರೋಗ್ಯ ಸ್ಥಿತಿ, ಆತನ ವೈದ್ಯಕೀಯ ಚಿಕಿತ್ಸೆ ಬಗ್ಗೆ ಸುಲಭವಾಗಿ ಎಲ್ಲಾ ಮಾಹಿತಿ ಸಿಗಲಿದೆ. ಈ ಸೌಲಭ್ಯದ ಮೂಲಕ ಹೆಚ್ಚು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.

ಐಡಿ ಪಡೆಯುವುದು ಹೇಗೆ?

ಈ ಆರೋಗ್ಯಕಾರ್ಡ್‌ ಐಡಿಯನ್ನು ವ್ಯಕ್ತಿಯೊಬ್ಬರ ಮೊಬೈಲ್‌ ಸಂಖ್ಯೆ ಮತ್ತು ಆಧಾರ್‌ ಸಂಖ್ಯೆಯನ್ನು ಬಳಸಿ ರಚಿಸಲಾಗುತ್ತದೆ. ಇದಕ್ಕಾಗಿ, ಸರ್ಕಾರವು ಆರೋಗ್ಯ ಪ್ರಾಧಿ​ಕಾರವನ್ನು ರಚಿಸಲಿದ್ದು, ಈ ಮೂಲಕ ವ್ಯಕ್ತಿಯ ಎಲ್ಲಾ ದಾಖಲೆಯನ್ನು ಸಂಗ್ರಹಿಸುತ್ತದೆ. ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ರಾಷ್ಟ್ರೀಯ ಆರೋಗ್ಯ ಮೂಲಸೌಕರ್ಯ ನೋಂದಾವಣೆಗೆ ಸಂಪರ್ಕಿಸಬಹುದು. ನಿಮ್ಮ ದಾಖಲೆಗಳನ್ನು https://healthid.ndhm.gov.in/ ನಲ್ಲಿ ನೋಂದಾಯಿಸುವ ಮೂಲಕ, ನಿಮ್ಮ ಆರೋಗ್ಯ ಐಡಿಯನ್ನು ನೀವೂ ರಚಿಸಬಹುದು. ಅಥವಾ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಎಬಿಡಿಎಂ ಹೆಲ್ತ್‌ ರೆಕಾರ್ಡ್‌ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡುವ ಮೂಲಕ ಆರೋಗ್ಯ ಐಡಿಯನ್ನು ಪಡೆಯಬಹುದು. ಮೂಲ ವಿವರಗಳನ್ನು ಪಡೆಯಲು ಮೊಬೈಲ್‌ ಸಂಖ್ಯೆ ಅಥವಾ ಆಧಾರ್‌ ಸಂಖ್ಯೆ ದೃಢೀಕರಿಸಲು ಮಾತ್ರ ಸಮಯ ಹಿಡಿಯುತ್ತದೆ. ಇದರ ಹೊರತಾಗಿ 10 ನಿಮಿಷಗಳಲ್ಲಿ ನೋಂದಣಿ ಪ್ರಕ್ರಿಯೆ ಮುಗಿಯಲಿದೆ.

ಆನ್‌ಲೈನ್‌ ಅರ್ಜಿ ಸಲ್ಲಿಕೆ ಹೇಗೆ?

https://healthid.ndhm.gov.in/ ವೆಬ್‌ಸೈಟ್‌ಗೆ ಲಾಗಿನ್‌ ಆಗಿ

(

-ಎನ್‌ಡಿಎಚ್‌ಎಂ ಐಡಿ ಆಯಪ್‌ ತೆರೆಯಿರಿ. ನೋಂದಣಿ ಪುಟ ತೆರೆಯುತ್ತದೆ.

-ರಿಜಿಸ್ಟರ್‌ ಬಟನ್‌ ಮೇಲೆ ಕ್ಲಿಕ್‌ ಮಾಡಿ

-ಆಧಾರ್‌ ಮತ್ತು ಮೊಬೈಲ್‌ ಸಂಖ್ಯೆ ನಮೂದಿಸಿ

-ನೀವು ನಮೂದಿಸಿದ ಮೊಬೈಲ್‌ ಸಂಖ್ಯೆಗೆ ಬಂದ ಒಟಿಪಿಯನ್ನು ಟೈಪ್‌ ಮಾಡಿ.

-ಅರ್ಜಿಯ ಅಂತಿಮ ಸಲ್ಲಿಕೆಗೆ 'ಸಬ್ಮಿಟ್‌' ಬಟನ್‌ ಮೇಲೆ ಕ್ಲಿಕ್‌ ಮಾಡಿ.

(ಮಾಹಿತಿ ಕೃಪೆ ಸುವರ್ಣ ನ್ಯೂಸ್)

ಕಾಪ್ಟರ್ ಪತನ: ಘಟನಾ ಸ್ಥಳದಲ್ಲಿ CRPF ಕೋಬ್ರಾ ಪಡೆಯಿಂದ ಶಂಕಿತ ವ್ಯಕ್ತಿ ಅರೆಸ್ಟ್

 

ಚೆನ್ನೈ: ಸೇನಾಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಪತನಗೊಂಡ ಘಟನಾ ಸ್ಥಳದಲ್ಲಿ ಅನುಮಾನಾಸ್ಪದವಾಗಿ ಕಂಡು ಬಂದ ವ್ಯಕ್ತಿಯೊಬ್ಬನನ್ನು ಸಿಆರ್‌ಪಿಎಫ್‌ನ ಕೋಬ್ರಾ ಪಡೆ ಬಂಧಿಸಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ನೀಲಗೀರಿ ಅರಣ್ಯದ ಪರ್ವತ ಪ್ರದೇಶಗಳ ವೆಲ್ಲಿಂಗ್‌ಟನ್ ಬಳಿ ಈ ದುರ್ಘಟನೆ ನಡೆದಿದೆ.

ಸೇನಾಪಡೆಗಳ ಉನ್ನತ ನಾಯಕರೊಬ್ಬರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ ಹೇಗಾಯಿತು ಎಂದು ಹಲವರು ಪ್ರಶ್ನಿಸುತ್ತಿದ್ದು ನೀಲಗೀರಿ ಕಾಡಿನಲ್ಲಿ ಪತನವಾಗಿದ್ದರ ಬಗ್ಗೆ ನೆಟ್ಟಿಗರು ಚರ್ಚಿಸುತ್ತಿದ್ದಾರೆ.

ಇನ್ನು ಘಟನಾ ಸ್ಥಳದಲ್ಲಿ 11 ಮೃತದೇಹಗಳು ಪತ್ತೆಯಾಗಿವೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಗಂಭೀರವಾಗಿ ಗಾಯಗೊಂಡು ಪತ್ತೆಯಾಗಿರುವ ಮೂವರನ್ನು ನೀಲಗಿರೀಸ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ರಕ್ಷಣೆ ಮಾಡಿದವರಲ್ಲಿ ಬಿಪಿನ್ ರಾವತ್ ಕೂಡ ಒಬ್ಬರಾಗಿದ್ದು ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.

ಘಟನೆ ನಡೆದ ಸ್ಥಳ ವೆಲ್ಲಿಂಗ್‌ಟನ್‌ನಿಂದ ಏಳು ಕಿಮೀ ಪರ್ವತ ಪ್ರದೇಶದಲ್ಲಿದೆ ಎಂದು ತಿಳಿದು ಬಂದಿದೆ.

ಹೆಲಿಕಾಪ್ಟರ್ ಕೂನೂರಿನಿಂದ ಕೊಯಮತ್ತೂರು ಸೇನಾ ಕಾರ್ಯಕ್ರಮಕ್ಕೆ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಮತ್ತು ಇತರ 12 ಜನರನ್ನು (ಸೇನಾಧಿಕಾರಿಗಳೂ ಒಳಗೊಂಡಂತೆ) ಹೊತ್ತು ತೆರಳುತ್ತಿತ್ತು.

ತುರ್ತು ರಕ್ಷಣಾ ಪಡೆಗಳು ಸ್ಥಳದಲ್ಲಿ ತೀವ್ರ ಪರಿಹಾರ ಕಾರ್ಯಾಚರಣೆ ಕೈಗೊಂಡಿದ್ದು ಬುಧವಾರ ಮಧ್ಯಾಹ್ನ ಸೇನಾ ಹೆಲಿಕಾಪ್ಟರ್‌ ಪತನಗೊಂಡಿರುವುದಾಗಿ ಐಎಎಫ್ ತಿಳಿಸಿತ್ತು.

(ಮಾಹಿತಿ ಕೃಪೆ ಪ್ರಜಾವಾಣಿ)

ಉದ್ಯೋಗ ವಾರ್ತೆಗಳು: ಐಐಎಸ್‌ಸಿಯಲ್ಲಿ ಹುದ್ದೆಗಳು

 

ಐಐಎಸ್‌ಸಿಯಲ್ಲಿ ಹುದ್ದೆಗಳು

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳು: ಎಲೆಕ್ಟ್ರಾನಿಕ್‌ ಸಂಪನ್ಮೂಲ ನಿರ್ವಹಣೆ, ಪ್ರಾಜೆಕ್ಟ್‌ ಟ್ರೈನಿ, ಲೈಬ್ರರಿ ಇನ್ಫರ್ಮೇಷನ್‌ ಮ್ಯಾನೇಜ್‌ಮೆಂಟ್ ಟ್ರೈನಿ

ಹುದ್ದೆಗಳ ಸಂಖ್ಯೆ: 14

ಸ್ಥಳ: ಬೆಂಗಳೂರು

ವಿದ್ಯಾರ್ಹತೆ: ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಬಿಇ, ಬಿಟೆಕ್‌, ಪದವಿ, ಸ್ನಾತಕೋತ್ತರ ಪದವಿ ಪಡೆದಿರಬೇಕು. 

ವಯೋಮಿತಿ: ಗರಿಷ್ಠ 30 ವರ್ಷ.

ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಹಾಗೂ ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್‌ 14, 2021

ಹೆಚ್ಚಿನ ಮಾಹಿತಿಗೆ: https://iisc.ac.in/opportunities/

***

ಕರೂರ್ ವೈಶ್ಯ ಬ್ಯಾಂಕ್‌ನಲ್ಲಿ ಹುದ್ದೆಗಳು

ಕರೂರ್ ವೈಶ್ಯ ಬ್ಯಾಂಕ್ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ: ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಮ್ಯಾನತೆ ಪಡೆದ ವಿಶ್ವವಿದ್ಯಾಲಯದಿಂದ ಶೇ 50 ಅಂಕಗಳೊಂದಿಗೆ ಪದವಿ ಮುಗಿಸಿರಬೇಕು.

ವಯೋಮಿತಿ: ಅಭ್ಯರ್ಥಿಗಳಿಗೆ ನವೆಂಬರ್‌ 30ಕ್ಕೆ ಅನ್ವಯವಾಗುವಂತೆ ಕನಿಷ್ಠ 21 ವರ್ಷ ಹಾಗೂ ಗರಿಷ್ಠ 28 ಆಗಿರಬೇಕು. ನೇಮಕಾತಿ ನಿಯಮಗಳ ಅನ್ವಯ ವಯೋಮಿತಿ ಸಡಿಲಿಕೆ ಇದೆ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್‌ 31, 2021

ಹೆಚ್ಚಿನ ಮಾಹಿತಿಗೆ: https://www.kvb.co.in/

***

ಸೆಂಟ್ರಲ್ ಬ್ಯಾಂಕ್ ಆಫ್‌ ಇಂಡಿಯಾದಲ್ಲಿ ಹುದ್ದೆಗಳು

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2021-22 ಸಾಲಿನ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ಸಂಖ್ಯೆ: 115

ಸ್ಥಳ: ಭಾರತದೆಲ್ಲೆಡೆ

ವಿದ್ಯಾರ್ಹತೆ: ಪದವಿ, ಸ್ನಾತಕೋತ್ತರ ಪದವಿ, ಎಂಬಿಎ, ಬಿಟೆಕ್‌, ಎಂಎಸ್‌ಸಿ, ಸಿಎ ಹಾಗೂ ಇತ್ಯಾದಿ.

ವಯೋಮಿತಿ: ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗೆ ಕನಿಷ್ಠ 20 ವರ್ಷ ಹಾಗೂ ಗರಿಷ್ಠ 45 ವರ್ಷಗಳಾಗಿರಬೇಕು.

ನೇಮಕಾತಿ ಪ್ರಕ್ರಿಯೆ: ಆನ್‌ಲೈನ್ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ.

ಅರ್ಜಿ ಶುಲ್ಕ: ₹ 850, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ₹ 175

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 17, 2021

ಹೆಚ್ಚಿನ ಮಾಹಿತಿಗೆ: https://www.centralbankofindia.co.in/en/recruitments

***

ಎಐಐಎಂಎಸ್‌ನಲ್ಲಿ ಹುದ್ದೆಗಳು

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮಂಗಳಗಿರಿಯಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್‌), ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸ್ತಕರು ನೇರ ನೇಮಕಾತಿಯಲ್ಲಿ ಪಾಲ್ಗೊಳ್ಳಬಹುದು.

ಹುದ್ದೆ: ಜ್ಯೂನಿಯರ್ ರೆಸಿಡೆಂಟ್‌

ಹುದ್ದೆಗಳ ಸಂಖ್ಯೆ: 24

ಸ್ಥಳ: ಆಂಧ್ರಪ್ರದೇಶದ ಗುಂಟೂರು

ವಿದ್ಯಾರ್ಹತೆ: ಈ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ ಪಡೆದ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ವಯೋಮಿತಿ: ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗೆ ಗರಿಷ್ಠ 33 ವರ್ಷ ಮೀರಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲರಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ₹ 1000, ಎಸ್‌ಸಿ, ಎಸ್‌ಸಿ ಅಭ್ಯರ್ಥಿಗಳಿಗೆ ₹ 500 ಹಾಗೂ ಅಂಗವಿಕಲರಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

ಆಯ್ಕೆ ಪ್ರಕ್ರಿಯೆ: ದಾಖಲಾತಿ ಪರಿಶೀಲನೆ ಹಾಗೂ ವೈಯಕ್ತಿಕ ಸಂದರ್ಶನ

ಸಂದರ್ಶನ ದಿನಾಂಕ: ಜನವರಿ 5, 2022

ಸಂದರ್ಶನ ನಡೆಯುವ ಸ್ಥಳ: ಧರ್ಮಶಾಲಾ ಕಟ್ಟಡ, ಏಮ್ಸ್ ಮಂಗಳಗಿರಿ ಮೇನ್ ಕ್ಯಾಂಪಸ್.

ಹೆಚ್ಚಿನ ಮಾಹಿತಿಗೆ: https://www.aiimsexams.ac.in/info/Recruitments_new.html

(ಮಾಹಿತಿ ಕೃಪೆ ಪ್ರಜಾವಾಣಿ)