WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Wednesday, January 13, 2021

ಮತ್ತೆ ಇಂಧನ ದರ ಏರಿಕೆ, ದಾಖಲೆ ಮಟ್ಟಕ್ಕೇರಿದ ಪೆಟ್ರೋಲ್, ಡೀಸಲ್ ದರ

 

ನವದೆಹಲಿ: ದೇಶಾದ್ಯಂತ ತೈಲೋತ್ಪನ್ನಗಳ ದರ ಮತ್ತೆ ಏರಿಕೆಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರಗಳು ಮತ್ತೆ ದಾಖಲೆ ಪ್ರಮಾಣಕ್ಕೆ ಏರಿಕೆಯಾಗಿವೆ.

ಪೆಟ್ರೋಲ್, ಡೀಸಲ್ ದರ ಮತ್ತೆ ಹೆಚ್ಚಳವಾಗಿದ್ದು. ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಐದು ದಿನಗಳ ನಂತರ ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿದೆ. ಪ್ರತೀ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ತಲಾ 25 ಪೈಸೆ ಏರಿಕೆಯಾಗಿದ್ದು. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 91.07 ರೂ ಗೆ ಏರಿಕೆಯಾಗಿದ್ದು, ಡೀಸೆಲ್ 81.34 ರೂಗಳನ್ನು ತಲುಪಿದೆ.

ಇನ್ನು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 84.45ರೂ ಗೆ ಏರಿಕೆಯಾಗಿದ್ದು, ಡೀಸೆಲ್ ದರ 74.63 ರೂಗೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 85.92 ಮತ್ತು ಡೀಸೆಲ್ 78.22 ರೂ ಮತ್ತು ಚೆನ್ನೈನಲ್ಲಿ ಪೆಟ್ರೋಲ್ 87.18 ಮತ್ತು ಡೀಸೆಲ್ 79.95 ರೂ. ಗಳಷ್ಟಿದೆ.

ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 26 ಪೈಸೆ ಏರಿಕೆಯಾಗಿದ್ದು, ಆ ಮೂಲಕ ಪೆಟ್ರೋಲ್ ದರ 87.28ಕ್ಕೆ ಏರಿಕೆಯಾಗಿದೆ. ಅಂತೆಯೇ ಡೀಸೆಲ್ ದರದಲ್ಲಿ ಕೂಡ 26 ಪೈಸೆ ಏರಿಕೆಯಾಗಿದ್ದು,, ಪ್ರತೀ ಲೀಟರ್ ಡೀಸೆಲ್ ದರ 79.12 ರೂಗೆ ಏರಿಕೆಯಾಗಿದೆ.

ಇದು 2018 ರ ಅಕ್ಟೋಬರ್ 4 ರಂದು ದಾಖಲೆಯ ಬೆಲೆ 91.34 ರೂ.ಗಿಂತ ಕೇವಲ 27 ಪೈಸೆ ಕಡಿಮೆಯಾಗಿದೆ. 29 ದಿನಗಳವರೆಗೆ ಬೆಲೆಗಳು ಸ್ಥಿರವಾಗಿದ್ದ ನಂತರ ತೈಲ ಕಂಪನಿಗಳು ಜನವರಿ 06 ಮತ್ತು 07 ರಂದು ಎರಡೂ ಇಂಧನಗಳ ಬೆಲೆಯನ್ನು ಹೆಚ್ಚಿಸಿದ್ದವು. ಜನವರಿ 6 ಮತ್ತು 7 ರಂದು ಪೆಟ್ರೋಲ್ ಬೆಲೆ 49 ಪೈಸೆ ಆಗಿದ್ದರೆ, ಡೀಸೆಲ್ ಬೆಲೆಯನ್ನು 51 ಪೈಸೆ ಹೆಚ್ಚಿಸಿದೆ. ಬುಧವಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 25 ಪೈಸೆ ಹೆಚ್ಚಿದ್ದು, ಪೆಟ್ರೋಲ್ ಹೊಸ ದಾಖಲೆಯ ಮಟ್ಟವನ್ನು 84.45 ರೂ.ಗೆ ತಲುಪಿದೆ. ಡೀಸೆಲ್ ಲೀಟರ್‌ಗೆ 74.63 ರೂ.ಗೆ ಏರಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಹೊಸ ವರ್ಷದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಬಲವಾದ ಪ್ರವೃತ್ತಿ ಕಂಡುಬಂದಿದೆ. ತೈಲ ರಫ್ತು ದೇಶಗಳ ಸಂಸ್ಥೆ ಒಪೆಕ್ ಮಾರ್ಚ್‌ನಲ್ಲೂ ಉತ್ಪಾದನಾ ಕಡಿತವನ್ನು ಮುಂದುವರಿಸಲು ಒಪ್ಪಿಕೊಂಡಿದ್ದು, ಇದು ಬೆಲೆಗಳನ್ನು ಹೆಚ್ಚಿಸಿದೆ.

(ಮಾಹಿತಿ ಕೃಪೆ ಕನ್ನಡ ಪ್ರಭ)

ಕೆಜಿಎಫ್2: ಬಂದೂಕಿನಿಂದ ಸಿಗರೇಟ್ ಹಚ್ಚಿದ್ದಕ್ಕೆ ರಾಕಿಂಗ್ ಸ್ಟಾರ್ ಯಶ್'ಗೆ ಆರೋಗ್ಯ ಇಲಾಖೆ ನೋಟಿಸ್

 ಬೆಂಗಳೂರು: ಕೆಜಿಎಫ್-2 ಚಿತ್ರದ ಟೀಸರ್ ನಲ್ಲಿ ನಟ ಯಶ್ ಅವರು ಬಂದೂಕಿನಿಂದ ಸಿಗರೇಟ್ ಹಚ್ಚಿಕೊಂಡ ದೃಶ್ಯಗಳು ಕಂಡು ಬಂದ ಹಿನ್ನೆಲೆಯಲ್ಲಿ ನಟ ಯಶ್ ಅವರಿಗೆ ರಾಜ್ಯ ಆರೋಗ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ.

ಕೆಜಿಎಫ್-2 ಟೀಸರ್ ನಲ್ಲಿ ಯಶ್ ಅವರು ಬಂದೂಕಿನಿಂದ ಸಿಗರೇಟ್ ಹಚ್ಚಿಕೊಂಡ ದೃಶ್ಯ ಸಾಕಷ್ಟು ಜನರ ಮನ ಗೆದ್ದಿದೆ. ಹೀಗಾಗಿ ಧೂಮಪಾನ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಇಂತಹ ದೃಶ್ಯಗಳು ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗಲಿದೆ ಎಂದು ಹೇಳಿ ಆರೋಗ್ಯ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ದೃಶ್ಯವನ್ನು ತೆಗೆದು ಹಾಕುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ.

ಚಿತ್ರದಲ್ಲಿನ ಈ ದೃಶ್ಯ ಯುವ ಸಮುದಾಯವನ್ನ ಸಿಗರೇಟ್ ಸೇದುವಂತೆ ಪ್ರಚೋದಿಸುತ್ತದೆ. ಅಲ್ಲದೇ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಕಾಯ್ದೆ 2003, ಸೆಕ್ಷನ್ 5 ರ ಪ್ರಕಾರ ನಿಬಂಧನೆಗಳ ಉಲ್ಲಂಘನೆಯಾಗಿದೆ. ಲಕ್ಷಾಂತರ ಜನ ಯುವ ಅಭಿಮಾನಿಗಳನ್ನ ನೀವು ಹೊಂದಿದ್ದೀರಾ ಹಾಗೂ ಆ ಯುವ ಸಮುದಾಯ ನಿಮ್ಮನ್ನ ಅನುಸರಿಸುತ್ತದೆ.

ಯುವ ಸಮುದಾಯ ಸಿಗರೇಟ್ ಸೇದುವ ಪ್ರಚೋದನೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಇರುವ ಟೀಸರ್​ನಲ್ಲಿ ಸಿಗರೇಟ್ ಸೇದುವ ದೃಶ್ಯ ತೆಗೆಯಿರಿ ಎಂದು ಆರೋಗ್ಯ ಇಲಾಖೆ ಸೂಚಿಸಿದೆ ಎಂದು ವರದಿಗಳು ತಿಳಿಸಿವೆ.

ನೋಟಿಸ್ ಸಂಬಂಧ ಇದೀಗ ಆರೋಗ್ಯ ಸಚಿವ ಸುಧಾಕರ್ ಅವರು ಸ್ಪಷ್ಟನೆ ನೀಡಿದ್ದು, ಯಶ್ ಅವರಿಗೆ ನೀಡಿರುವುದು ನೋಟಿಸ್ ಅಲ್ಲ, ಮನವಿ ಅಷ್ಟೇ ಎಂದು ತಿಳಿಸಿದ್ದಾರೆ.

ಕೇವಲ ನಟ ಯಶ್ ಅವರಿಗಷ್ಟೇ ಅಲ್ಲ, ಎಲ್ಲಾ ನಟರಿಗೂ ಮನವಿ ಮಾಡಿಕೊಳ್ಳುತ್ತೇವೆ. ಸಾವಿರಾರು ಅಭಿಮಾನಿಗಳು ನಿಮ್ಮನ್ನು ಫಾಲೋ ಮಾಡುತ್ತಿರುತ್ತಾರೆ. ಹಾಗಿರುವಾಗ ಸಿಗರೇಟ್ ಸೇದುವುದು ಎಲ್ಲಾ ತೋರಿಸಬಾರದು. ಏಕೆಂದರೆ ಕ್ಯಾನ್ಸರ್ ಪೀಡಿತರು ದೇಶದಲ್ಲಿ ಹೆಚ್ಚಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂತಹ ದೃಶ್ಯಗಳನ್ನು ತೋರಿಸದೆ, ಜಾಗೃತಿ ಮೂಡಿಸಬೇಕೆಂದಿದ್ದಾರೆ.

(ಮಾಹಿತಿ ಕೃಪೆ ಕನ್ನಡ ಪ್ರಭ) 

ಪತಿ ಬೇಕೆಂದು ಪತ್ನಿ ಉಪವಾಸ ಸತ್ಯಗ್ರಹ...!

 ಮಾಲೂರು - ನನ್ನನ್ನು ಮನೆಗೆ ಸೇರಿಸಿಕೊಳ್ಳಿ ಎಂದು ಗಂಡನ ಮನೆ ಮುಂದೆ ಹೆಂಡತಿ ಉಪವಾಸ ಸತ್ಯಗ್ರಹ ಮಾಡಿಕೊಂಡಿರುವ ಘಟನೆ ಮಾಲೂರಿನ ತಿಪ್ಪಸಂದ್ರ ಗ್ರಾಮದಲ್ಲಿ ನಡೆದಿದೆ 

ವೆಂಕಟೇಶಪ್ಪ ಮತ್ತು ನಾರಾಯಣಮ್ಮ ದಂಪತಿಯ ಪುತ್ರಿ ವೀಣಾ ಅದೇ ಗ್ರಾಮದ ಮಂಜುನಾಥ್ ಎಂಬಾತನನ್ನು ಪ್ರೀತಿಸಿ ಕಳೆದ ವಾರದಲ್ಲಿ ಮದುವೆಯಾಗಿದ್ದರು. ನವದಂಪತಿ ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಆರಂಭಿಸಿದ್ದರು.

 ಕೋವಿಡ್-19 ಹಿನ್ನೆಲೆಯಲ್ಲಿ ಮೈಸೂರಿನಿಂದ ತಿಪ್ಪಸಂದ್ರ ಗ್ರಾಮಕ್ಕೆ ವೀಣಾ ದಂಪತಿ ನಾಲ್ಕು ತಿಂಗಳ ಹಿಂದೆ ಹಿಂತಿರುಗಿದ್ದರು. ತನ್ನ ತಂದೆ, ತಾಯಿಯ ಮನವೊಲಿಸಿ ವೀಣಾಳನ್ನು ಮನೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ ಪತ್ನಿಯನ್ನು ಅವರ ಪೋಷಕರ ಮನೆಯಲ್ಲಿಯೇ ಮಂಜುನಾಥ್‌ ಬಿಟ್ಟಿದ್ದರು. 'ಮಂಜುನಾಥ್ ವಾಪಸ್ ಬಾರದ ಕಾರಣ ವೀಣಾ ಅವರು ಪತಿಯ ಮನೆಗೆ ಹೋಗಿದ್ದರು. ಮಂಜುನಾಥ್ ಅವರ ತಂದೆ ಗೋಪಾಲಪ್ಪ ಮತ್ತು ತಾಯಿ ಸರೋಜಮ್ಮ ವೀಣಾಳನ್ನು ಮನೆಗೆ ಸೇರಿಸಿಕೊಂಡಿಲ್ಲ. ಮನೆಗೆ ಬೀಗ ಜಡಿದಿದ್ದಾರೆ' ಎಂದು ವೀಣಾ ಅವರ ಚಿಕ್ಕಪ್ಪ ಶ್ರೀನಿವಾಸ್ ತಿಳಿಸಿದರು.

ಈ ಸಂಬಂಧ ಮಾಸ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸಬ್ ಇನ್‌ಸ್ಪೆಕ್ಟರ್ ಪ್ರದೀಪ್ ಭೇಟಿ ನೀಡಿ ವೀಣಾ ಅವರ ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಅವರು ಧರಣಿ ಮುಂದುವರಿಸಿದ್ದಾರೆ.
(ಮಾಹಿತಿ ಕೃಪೆ News Alert 24 x 7)

ಹೊಸಪೇಟೆ: ಜೋಳದರಾಶಿ ಗುಡ್ಡದ ಮೇಲೆ ಬುದ್ಧನ ಪುತ್ಥಳಿಗೆ ಆಗ್ರಹ

 ಹೊಸಪೇಟೆ: ನಗರದ ಜೋಳದರಾಶಿ ಗುಡ್ಡದ ಮೇಲೆ ಭಗವಾನ್‌ ಗೌತಮ ಬುದ್ಧನ ಏಕಶಿಲಾ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಬೇಕು ಎಂದು ಹಂಪಿ-ವಿಜಯನಗರ ಬುದ್ಧ ವಿಹಾರ ನಿರ್ಮಾಣ ಟ್ರಸ್ಟ್ ಆಗ್ರಹಿಸಿದೆ.

ಈ ಸಂಬಂಧ ಟ್ರಸ್ಟ್‌ ಮುಖಂಡರು ಮಂಗಳವಾರ ನಗರದಲ್ಲಿ ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.

'ನಗರದ ಮುಕುಟ ಪ್ರಾಯವಾಗಿರುವ ಜೋಳದರಾಶಿ ಗುಡ್ಡವು ಜನಪದೀಯ ಹಾಗೂ ಐತಿಹಾಸಿಕವಾದ ಸ್ಥಳ. ಸ್ಥಳೀಯರು ಈ ಗುಡ್ಡ ಹುಲಿಗೆಮ್ಮನ ಗುಡ್ಡವೆಂದೂ ಕರೆಯುತ್ತಾರೆ. ಅನೇಕ ಪುರಾಣ ಹೆಸರುಗಳಿಂದ ಕೂಡ ಕರೆಯುತ್ತಾರೆ. ಆದರೆ, ಗುಡ್ಡದ ಮೇಲೆ ಸ್ವಾಮಿ ವಿವೇಕಾನಂದ ಅಥವಾ ಕೃಷ್ಣದೇವರಾಯನ ಪುತ್ಥಳಿ ಪ್ರತಿಷ್ಠಾಪಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಹಂಪಿ ಪರಿಸರದಲ್ಲಿ ಕೃಷ್ಣದೇವರಾಯನ ಪುತ್ಥಳಿ ಸ್ಥಾಪಿಸಿದರೆ ಸೂಕ್ತ. ಇನ್ನು ಬೇರೆ ಗುಡ್ಡದ ಮೇಲೆ ವಿವೇಕಾನಂದರದ್ದು ಪ್ರತಿಷ್ಠಾಪಿಸಬೇಕು. ಇಡೀ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಬುದ್ಧನ ಪುತ್ಥಳಿ ಪ್ರತಿಷ್ಠಾಪಿಸಿದರೆ ಬಹಳ ಅರ್ಥಪೂರ್ಣ' ಎಂದು ತಿಳಿಸಿದರು.

'ಹಂಪಿ, ಆನೆಗೊಂದಿ, ಕಂಪ್ಲಿ, ಕೊಪ್ಪಳ, ಗಂಗಾವತಿ ಪ್ರಾಗೈತಿಹಾಸಿಕ ಹಾಗೂ ಚಾರಿತ್ರಿಕ ನೆಲೆಗಳು. ಆರಂಭದಿಂದಲೂ ಬುದ್ಧನ ಹಾಗೂ ಬೌದ್ಧ ಧರ್ಮದ ತತ್ವಸಿದ್ದಾಂತಗಳನ್ನು ಅಳವಡಿಸಿಕೊಂಡ ಪ್ರದೇಶಗಳೇ ಆಗಿವೆ. ಕೊಪ್ಪಳ, ಮಸ್ಕಿ, ಸಂಗನಕಲ್ಲು, ಜಟ್ಟಿಗರಾಮೇಶ್ವರ, ಸನ್ನತ್ತಿಗಳಂತಹ ಐತಿಹಾಸಿಕ ಸ್ಥಳಗಳಲ್ಲಿ ದೇವನಾಂಪ್ರಿಯ ಪ್ರಿಯದರ್ಶಿನಿ ಅಶೋಕ ಮಹಾರಾಜನ ಬೌದ್ಧ ಧರ್ಮದ ತತ್ವ ಸಿದ್ದಾಂತಗಳನ್ನು ವ್ಯಕ್ತಪಡಿಸುವ ಶಾಸನಗಳು ನಿರ್ಮಾಣಗೊಂಡಿರುವುದು ಐತಿಹಾಸಿಕ ಸತ್ಯ. ಹಂಪಿಯಲ್ಲಿ ಬೌದ್ಧ ಧರ್ಮದ ಮಹತ್ವದ ಕುರುಹುಗಳು ದೊರಕಿರುವುದು ಚಾರಿತ್ರಿಕವಾಗಿ ಸತ್ಯವಾಗಿದೆ. ಹಾಗಾಗಿ ಬುದ್ಧನ ಪುತ್ಥಳಿ ಪ್ರತಿಷ್ಠಾಪಿಸುವುದು ಸೂಕ್ತ' ಎಂದು ವಿವರಿಸಿದರು.

ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಬಣ್ಣದಮನೆ, ದುರುಗಪ್ಪ ಪೂಜಾರ್, ರವಿ, ಮಧು, ರಮೇಶ್, ಎಚ್.ಎಲ್.ಸಂತೋಷ್, ನೀಲಕಂಠ, ಪ್ರಕಾಶ್, ಬಿ.ರಮೇಶ್ ಇದ್ದರು.

(ಮಾಹಿತಿ ಕೃಪೆ ಪ್ರಜಾವಾಣಿ)

ಮುನಿರತ್ನಗಿಲ್ಲ ಸಚಿವ ಸ್ಥಾನ, 7 ನೂತನ ಸಚಿವರ ಪಟ್ಟಿ ಪ್ರಕಟಿಸಿದ ಯಡಿಯೂರಪ್ಪ

 ಬೆಂಗಳೂರು: ಇಂದು ಸಂಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ 7 ಶಾಸಕರ ಹೆಸರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿದ್ದಾರೆ.

ಉಮೇಶ್ ಕತ್ತಿ, ಎಸ್. ಅಂಗಾರ, ಸಿ.ಪಿ. ಯೋಗೀಶ್ವರ್, ಅರವಿಂದ ಲಿಂಬಾವಳಿ, ಎಂಟಿಬಿ ನಾಗರಾಜ್, ಆರ್. ಶಂಕರ್, ಮುರುಗೇಶ್ ನಿರಾಣಿ ಅವರ ಹೆಸರುಗಳನ್ನು ರಾಜಭವನಕ್ಕೆ ಕಳುಹಿಸಲಾಗಿದ್ದು, ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮಾಧ್ಯಮಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಉಪಚುನಾವಣಾ ಪ್ರಚಾರದಲ್ಲಿ ಮುನಿರತ್ನ ಮುಂದಿನ ಮಂತ್ರಿ ಎಂದು ಪ್ರಚಾರ ಮಾಡಿದ್ದ ಸಿಎಂ ಯಡಿಯೂರಪ್ಪ ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಲಿರುವ ಶಾಸಕರ ಪಟ್ಟಿಯಿಂದ ಅವರ ಹೆಸರನ್ನು ಕೈಬಿಟ್ಟಿದ್ದಾರೆ. ಮುನಿರತ್ನಗೆ ಸಚಿವ ಸ್ಥಾನದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಯಾವುದೇ ಉತ್ತರ ಕೊಡದೆ ಯಡಿಯೂರಪ್ಪ ಮುಂದೆ ನಡೆದಿದ್ದಾರೆ.

(ಮಾಹಿತಿ ಕೃಪೆ ಪ್ರಜಾವಾಣಿ)                

Tuesday, January 12, 2021

ಹೃದಯದ ಆರೋಗ್ಯ ಸುಧಾರಿಸಲು ದಿನದಲ್ಲಿ ಮೂರು ಬಾರಿ ಹೀಗೆ ಮಾಡಿ


 ಹಲ್ಲುಗಳಿಗೂ ಹೃದಯಕ್ಕೂ ನೇರ ಸಂಬಂಧವಿದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇಲ್ಲ ತಾನೆ, ಹಾಗಿದ್ದರೆ ಈ ಸ್ಟೋರಿಯನ್ನು ಪೂರ್ತಿ .

ನಿಮ್ಮ ಹಲ್ಲಿನ ನೈರ್ಮಲ್ಯವನ್ನು ಶುಚಿಗೊಳಿಸುತ್ತಿದ್ದರೆ, ಹೃದ್ರೋಗದ ಸಮಸ್ಯೆ ಸಾಧ್ಯತೆಯನ್ನು ನೀವು ಶೇ.10 ರಷ್ಟು ಕಡಿಮೆಗೊಳಿಸಿದ್ದೀರಿ ಎಂದೇ ಅರ್ಥ. ಹೌದು,

ದಿನಕ್ಕೆ ಎರಡು ಬಾರಿ ಹೆಚ್ಚು ಹಲ್ಲುಜ್ಜುವುದು ಹೃದಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದನ್ನು ಸಂಶೋಧಕರು ತಿಳಿಸಿದ್ದಾರೆ. ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿಯಲ್ಲಿ ಪ್ರಕಟವಾದ ಹೊಸ ಸಂಶೋಧನಾ ವರದಿಯಲ್ಲಿ ಈ ವಿಷಯವನ್ನು ಸಂಶೋಧಕರು ದೃಢಪಡಿಸಿದ್ದಾರೆ.

ದಕ್ಷಿಣ ಕೊರಿಯಾದ ಐವಾ ಮಹಿಳಾ ವಿಶ್ವವಿದ್ಯಾಲಯದ ಸಂಶೋಧಕರು ಈ ಸಂಶೋಧನೆ ನಡೆಸಿದ್ದು, ಈ ಅಧ್ಯಯನದಲ್ಲಿ ಮೌಖಿಕ ನೈರ್ಮಲ್ಯ ಮತ್ತು ಹೃದಯದ ಆರೋಗ್ಯದ ನಡುವೆ ಯಾವುದೇ ನೇರ ಸಂಬಂಧವಿದೆಯೇ ಎಂದು ಅಧ್ಯಯನ ನಡೆಸಲಾಗಿದೆ.  ಈ ವೇಳೆ ಬಾಯಿಯನ್ನು ಸ್ವಚ್ಛವಾಗಿಡುವುದರಿಂದ ಹೃದಯದ ಸಮಸ್ಯೆಗಳ ಅಪಾಯವನ್ನು ದೂರ ಮಾಡಿಕೊಳ್ಳಬಹುದು ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಈ ಅಧ್ಯಯನಕ್ಕಾಗಿ ಕೊರಿಯಾದ ರಾಷ್ಟ್ರೀಯ ಆರೋಗ್ಯ ವಿಮಾ ವ್ಯವಸ್ಥೆಯ ಮೂಲಕ 40 ರಿಂದ 79 ವರ್ಷದೊಳಗಿನ ಒಂದು ಲಕ್ಷ ಅರವತ್ತು ಸಾವಿರ ಮಂದಿಯ ಮಾಹಿತಿಯನ್ನು ಸಂಶೋಧಕರ ತಂಡ ಸಂಗ್ರಹಿಸಿದೆ.

2003 ಮತ್ತು 2004 ರ ನಡುವಿನ ಅವರ ಮೊದಲ ಪರೀಕ್ಷೆಯ ವೇಳೆ ಇವರಿಗೆ ಯಾವುದೇ ರೀತಿಯ ಹೃದ್ರೋಗದ ಸಮಸ್ಯೆಗಳಿರಲಿಲ್ಲ. ಮುಂದಿನ ಹತ್ತು ವರ್ಷಗಳವರೆಗೆ ಅವರನ್ನು ನಿಯಮಿತವಾಗಿ ಇವರನ್ನು ಪರಿಶೀಲಿಸಲಾಯಿತು.

ಈ ಅವಧಿಯಲ್ಲಿ, ಶೇ. 3ರಷ್ಟು ಜನರು ಅಪಧಮನಿಯ ಕಂಪನದಿಂದ ಬಳಲುತ್ತಿರುವುದು ಕಂಡು ಬಂತು. ಹಾಗೆಯೇ ಶೇ. 5 ರಷ್ಟು ಜನರು ಹೃದಯ ವೈಫಲ್ಯದಿಂದ ಬಳಲುತ್ತಿದ್ದರು.

ಇವರಲ್ಲಿ ದಿನಕ್ಕೆ ಎರಡು ಬಾರಿ ಹೆಚ್ಚು ಹಲ್ಲುಜ್ಜುವ ವ್ಯಕ್ತಿಗಳಲ್ಲಿ ಹೃದ್ರೋಗದ ಸಮಸ್ಯೆಯು ಶೇ. 10 ರಷ್ಟು ಕಡಿಮೆಯಾಗಿರುವುದು ಕೂಡ ಇದೇ ವೇಳೆ ಸಂಶೋಧಕರು ಪತ್ತೆಹಚ್ಚಿದ್ದರು. ಹಾಗೆಯೇ ಇತರ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವು ಶೇ.12 ರಷ್ಟು ಕಡಿಮೆಯಾಗಿರುವುದು ಈ ಅಧ್ಯಯನದಿಂದ ತಿಳಿದು ಬಂದಿದೆ.

ನಾವು ಬಾಯಿಯನ್ನು ಶುಚಿಯಾಗಿಟ್ಟುಕೊಳ್ಳದಿದ್ದರೆ, ಹಲ್ಲುಗಳ ನಡುವೆ ಬ್ಯಾಕ್ಟೀರಿಯಾಗಳು ಕಾಣಿಸಿಕೊಳ್ಳುತ್ತವೆ. ಇದು ಮುಂದೆ ಸಣ್ಣ ಪ್ರಮಾಣದಲ್ಲಿ ನಿಮ್ಮ ರಕ್ತ ಕಣಗಳನ್ನು ಪ್ರವೇಶಿಸುತ್ತದೆ. ಇದರಿಂದ ಹೃದಯದ ಸಮಸ್ಯೆ ಸೇರಿದಂತೆ ಅನಾರೋಗ್ಯ ಕಂಡು ಬರುವ ಸಾಧ್ಯತೆ ಹೆಚ್ಚಿದೆ.

ಹೀಗಾಗಿ ದಿನದಲ್ಲಿ ಕನಿಷ್ಠ ಮೂರು ಬಾರಿ ಹಲ್ಲುಜ್ಜುದರಿಂದ ಹೃದಯ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

(ಮಾಹಿತಿ ಕೃಪೆ news18)

Sunday, January 10, 2021

ಯಾರ್ರಿ ಅದು ರಾಧಿಕಾ? ನನಗೆ ಯಾರೆಂದು ಗೊತ್ತಿಲ್ಲ ಎಂದ ಮಾಜಿ ಸಿಎಂ ಕುಮಾರಸ್ವಾಮಿ!

 

ಮಂಡ್ಯ: ರಾಧಿಕಾ ಕುಮಾರಸ್ವಾಮಿ ಯಾರ್ರಿ ಅದು? ಅವರ್ಯಾರೆಂದು ನನಗೆ ಗೊತ್ತಿಲ್ಲ… ಅದೇನೋ ಕೇಸ್​ ಅನ್ನುತ್ತಿದ್ದೀರಲ್ಲ, ಗೊತ್ತಿಲ್ಲದವರ ಬಗ್ಗೆ ನಾನ್ಯಾಕೆ ಪ್ರತಿಕ್ರಿಯೆ ನೀಡಬೇಕು…?

ಹೀಗೆಂದು ಹೇಳಿದವರು ಬೇರ್ಯಾರೂ ಅಲ್ಲ…. ಖುದ್ದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ!

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನೇರಳೆಕೆರೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ಪತ್ರಕರ್ತರು ಪ್ರಶ್ನಿಸಿದಾಗ ರಾಧಿಕಾ ಕುಮಾರಸ್ವಾಮಿ ಅವರ ಕುರಿತಂತೆ ಈ ರೀತಿ ಪ್ರತಿಕ್ರಿಯೆ ನೀಡಿದರು. ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್ ಕೊಟ್ಟಿದ್ದಾರೆ. ಅದರ ಬಗ್ಗೆ ಏನ್ ಹೇಳ್ತೀರಿ ಎಂದು ಮಾಧ್ಯಮದವರು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರವಾಗಿ ಕುಮಾರಸ್ವಾಮಿ ಅವರು, ಅವರ್ಯಾರು ಎಂದೇ ನನಗೆ ಗೊತ್ತಿಲ್ಲ. ಗೊತ್ತಿಲ್ಲದಿದ್ದವರ ಬಗ್ಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ? ಗೊತ್ತಿಲ್ಲದ ಕುಟುಂಬದವರ ಬಗ್ಗೆ ನನಗೆ ಕೇಳಬೇಡಿ ಎಂಬುದಾಗಿ ಪ್ರತಿಕ್ರಿಯಿಸಿ, ಏನೊಂದು ವಿಷಯ ತಿಳಿಸಲು ನಿರಾಕರಿಸಿದರು.
ಅದೇ ವೇಳೆ ರಾಜಕೀಯದ ಈಗಿನ ಸ್ಥಿತಿಯ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಸದ್ಯದ ರಾಜಕೀಯ ಪರಿಸ್ಥಿತಿ, ಹಾಗೂ ರಾಜ್ಯ ಸರ್ಕಾರದ ಬಗ್ಗೆ ನಾನೇನೂ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ನನ್ನ ಉದ್ದೇಶ ಏನಿದ್ದರೂ ಇನ್ನೂ ಎರಡೂವರೆ ವರ್ಷಗಳ ನಂತರ. ಈಗಿನ ಸರ್ಕಾರದ ಅವಧಿ ಮುಕ್ತಾಯಗೊಂಡ ನಂತರವೇ ಅದರ ಬಗ್ಗೆ ಯೋಚನೆ ಮಾಡುತ್ತೇನೆ ಎಂದರು.

(ಮಾಹಿತಿ ಕೃಪೆ ವಿಜಯವಾಣಿ)