ಮಾಲೂರು - ನನ್ನನ್ನು ಮನೆಗೆ ಸೇರಿಸಿಕೊಳ್ಳಿ ಎಂದು ಗಂಡನ ಮನೆ ಮುಂದೆ ಹೆಂಡತಿ ಉಪವಾಸ
ಸತ್ಯಗ್ರಹ ಮಾಡಿಕೊಂಡಿರುವ ಘಟನೆ ಮಾಲೂರಿನ ತಿಪ್ಪಸಂದ್ರ ಗ್ರಾಮದಲ್ಲಿ ನಡೆದಿದೆ
ವೆಂಕಟೇಶಪ್ಪ ಮತ್ತು ನಾರಾಯಣಮ್ಮ ದಂಪತಿಯ ಪುತ್ರಿ ವೀಣಾ ಅದೇ ಗ್ರಾಮದ ಮಂಜುನಾಥ್ ಎಂಬಾತನನ್ನು ಪ್ರೀತಿಸಿ ಕಳೆದ ವಾರದಲ್ಲಿ ಮದುವೆಯಾಗಿದ್ದರು. ನವದಂಪತಿ ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಆರಂಭಿಸಿದ್ದರು.
ಕೋವಿಡ್-19 ಹಿನ್ನೆಲೆಯಲ್ಲಿ ಮೈಸೂರಿನಿಂದ ತಿಪ್ಪಸಂದ್ರ ಗ್ರಾಮಕ್ಕೆ ವೀಣಾ ದಂಪತಿ ನಾಲ್ಕು ತಿಂಗಳ ಹಿಂದೆ ಹಿಂತಿರುಗಿದ್ದರು.
ತನ್ನ ತಂದೆ, ತಾಯಿಯ ಮನವೊಲಿಸಿ ವೀಣಾಳನ್ನು ಮನೆಗೆ ಕರೆದುಕೊಂಡು
ಹೋಗುವುದಾಗಿ ತಿಳಿಸಿ ಪತ್ನಿಯನ್ನು ಅವರ ಪೋಷಕರ ಮನೆಯಲ್ಲಿಯೇ ಮಂಜುನಾಥ್ ಬಿಟ್ಟಿದ್ದರು.
'ಮಂಜುನಾಥ್ ವಾಪಸ್ ಬಾರದ ಕಾರಣ ವೀಣಾ ಅವರು ಪತಿಯ ಮನೆಗೆ ಹೋಗಿದ್ದರು. ಮಂಜುನಾಥ್ ಅವರ
ತಂದೆ ಗೋಪಾಲಪ್ಪ ಮತ್ತು ತಾಯಿ ಸರೋಜಮ್ಮ ವೀಣಾಳನ್ನು ಮನೆಗೆ ಸೇರಿಸಿಕೊಂಡಿಲ್ಲ. ಮನೆಗೆ
ಬೀಗ ಜಡಿದಿದ್ದಾರೆ' ಎಂದು ವೀಣಾ ಅವರ ಚಿಕ್ಕಪ್ಪ ಶ್ರೀನಿವಾಸ್ ತಿಳಿಸಿದರು.ಈ ಸಂಬಂಧ ಮಾಸ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸಬ್ ಇನ್‌ಸ್ಪೆಕ್ಟರ್ ಪ್ರದೀಪ್ ಭೇಟಿ ನೀಡಿ ವೀಣಾ ಅವರ ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಅವರು ಧರಣಿ ಮುಂದುವರಿಸಿದ್ದಾರೆ.
(ಮಾಹಿತಿ ಕೃಪೆ News Alert 24 x 7)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ