WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Saturday, May 23, 2020

ರಾಮತೀರ್ಥ ಹೊಂಡದಲ್ಲಿ ಸಾವಿರಾರು ಮೀನುಗಳ ಮಾರಣಹೋಮ!

ಬಾಗಲಕೋಟೆ: ಜಮಖಂಡಿ ನಗರದ ರಾಮೇಶ್ವರ ದೇವಸ್ಥಾನ ಮುಂಭಾಗ ಶನಿವಾರ ಬೆಳ್ಳಂಬೆಳಗ್ಗೆ ಶಾಕ್​ ಕಾದಿತ್ತು! ಇಲ್ಲಿನ ರಾಮತೀರ್ಥ ಹೊಂಡದಲ್ಲಿ ಸಾವಿರಾರು ಮೀನುಗಳ ಮಾರಣಹೋಮ ಕಂಡ ಜನರು ಕೆಲಕಾಲ ಆತಂಕಗೊಂಡಿದ್ದರು.
ಹೊಂಡದ ನೀರಿನಲ್ಲಿ ಸತ್ತಿರುವ ಸಾವಿರಾರು ಮೀನುಗಳು ತೇಲುತ್ತಿದ್ದ ದೃಶ್ಯ ಅರೆ ಕ್ಷಣ ಎಂತಹವರಿಗೂ ಗಾಬರಿ ತರಿಸುವಂತಿತ್ತು. ಮೀನುಗಳ ಮಾರಣಹೋಮಕ್ಕೆ ಕಾರಣ ತಿಳಿದು ಬಂದಿಲ್ಲ. ನಗರಸಭೆ ಕಾರ್ಮಿಕರು ಸತ್ತ ಮೀನುಗಳನ್ನು ಹೊರತೆಗೆದು ಹೊಂಡ ಸ್ವಚ್ಛಗೊಳಿಸಿದ್ದಾರೆ.
(ಮಾಹಿತಿ ಕೃಪೆ ವಿಜಯವಾಣಿ....)

karnataka: 2000 ಗಡಿಯಲ್ಲಿ ಕೊರೊನಾ: ದಾಖಲೆಯ 196 ಮಂದಿಗೆ ಸೋಂಕು ದೃಢ

ರಾಜ್ಯದಲ್ಲಿ ವಲಸಿಗರಿಂದ ಕೊರೊನಾ ಸೋಂಕು ಪ್ರಕರಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 196 ಹೊಸ ಸೋಂಕು ಪ್ರಕರಣ ದೃಢಪಟ್ಟಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರ ಬೆಳಿಗ್ಗೆ ಪ್ರಕಟಿಸಿದ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ 196 ಹೊಸ ಸೋಂಕು ಪ್ರಕರಣ ದಾಖಲಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 1939ಕ್ಕೆ ಕಾಲಿಟ್ಟಿದೆ.
ಬೆಂಗಳೂರು ಮತ್ತು ಬಾಗಲಕೋಟೆಯಲ್ಲಿ ಒಂದು ಸಾವು ಸಂಭವಿಸಿದೆ. ಈ ಮೂಲಕ ಸಾವಿನ ಸಂಖ್ಯೆ 41ಕ್ಕೆ ಏರಿಕೆಯಾದಂತಾಗಿದೆ.
ಯಾದಗಿರಿಯಲ್ಲಿ 72, ಮಂಡ್ಯದಲ್ಲಿ 28, ರಾಯಚೂರಿನಲ್ಲಿ 38, ಗದಗದಲ್ಲಿ 15, ಹಾಸನದಲ್ಲಿ 8, ಉಡುಪಿ 5 ಕೋಲಾರ 5, ಚಿಕ್ಕಬಳ್ಳಾಪುರದಲ್ಲಿ 20, ತುಮಕೂರಿನಲ್ಲಿ 11, ಬೆಂಗಳೂರಿನಲ್ಲಿ 4 ಪ್ರಕರಣಗಳು ಬೆಳಕಿಗೆ ಬಂದಿವೆ.

ತರಕಾರಿ ಖರೀದಿಸುವ ಮುನ್ನ ಎಚ್ಚರ!

ಕೊರೊನಾ ಸೋಂಕು ಪ್ರಕರಣ ನಿಯಂತ್ರಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿರುವ ನಡುವೆಯೆ ಮತ್ತೊಂದು ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಹೌದು ಕೊರೊನಾ ಬಗ್ಗೆ ಸಾಕಷ್ಟು ಕ್ರಮ ಕೈಗೊಂಡಿರುವ ನಡುವೆ ತರಕಾರಿ ಖರೀದಿಸುವ ಮುನ್ನ ಗ್ರಾಹಕರು ಸಾಕಷ್ಟು ಎಚ್ಚರ ವಹಿಸಬೇಕು ಎಂದು ಹೇಳಲಾಗಿದೆ.
ಹೌದು, ತರಕಾರಿ ಖರೀದಿಸುವ ಮುನ್ನ ಗ್ರಾಹಕರು ಎಚ್ಚರ ವಹಿಸಬೇಕಿದೆ. ಏಕೆಂದರೆ ತರಕಾರಿ ಬೆಳೆದು ಗ್ರಾಹಕರ ಕೈ ಸೇರುವ ಮುನ್ನ ಹಲವರ ಕೈ ಸೇರಲಿದೆ.
ಹೊಲದಿಂದ ಗ್ರಾಹಕರ ಮನೆ ತಲುಪುವ ಮುನ್ನ ತರಕಾರಿಯನ್ನು ಹಲವಾರು ಸ್ಪರ್ಶಿಸಿದ್ದು, ಸಿನುವುದು, ಕೆಮ್ಮುವುದು, ಅನಾರೋಗ್ಯ ಪೀಡಿತ ರು ಮುಟ್ಡಿರುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ತರಕಾರಿ ಖರೀದಿಸುವವರು ತರಕಾರಿ ಮನೆಗೆ ತಂದ ಕೂಡಲೇ ನೀರು ಅಥವ ಸ್ವಲ್ಪ ಬಿಸಿ ಇರುವ ನೀರಿನಲ್ಲಿ ಸ್ವಲ್ಪ ಸಮಯ ಇಟ್ಟು ತೊಳೆದು ಬಳಸುವಂತೆ ವೈದ್ಯರು ಸಲಹೆ ನೀಡಿದ್ಧಾರೆ.

Friday, May 22, 2020

ಕಲಬುರಗಿ: ಗ್ಯಾಸ್ ಸಿಲಿಂಡರ್ ಸ್ಫೋಟ, ಒಬ್ಬ ಸಾವು, ಮೂವರಿಗೆ ಗಂಭೀರ ಗಾಯ

ಕಲಬುರಗಿ: ನಸುಕಿನ ಜಾವ ಮನೆಯೊಂಡರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿ ಓರ್ವ ಸಾವನ್ನಪ್ಪಿದ್ದು ಮೂವರು ಗಂಭೀರ ಗಾಯಗೊಂಡಿರುವ ಘಟನೆ ಕಲಬುರಗಿಯ ಸೇಡಂ ಪಟ್ಟಣದಲ್ಲಿ ನಡೆದಿದೆ.
ಮೊಮಿನಪುರಾ ಬಡಾವಣೆಯ ರಾಜು ತಾಯಿತ್ ಎಂಬುವವರ ಮನೆಯಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದ್ದು ರಾಜು ತಾಯಿತ್ (48) ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಕುಟುಂಬದ ಮೂವರು ಸದಸ್ಯರು ಗಂಭೀರ ಗಾಯಗೊಂಡಿದ್ದು ಗಾಯಾಳುಗಳನ್ನು ಕಲಬುರಗಿಯ ಜಿಲ್ಲಾ ಯುನೈಟೆಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಫೊಟದ ರಭಸಕ್ಕೆ ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು ಘಟನಾ ಸ್ಥಳಕ್ಕೆ ಸೇಡಂ ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಾಸ್ಕ್ ಧರಿಸಿಲ್ಲ ಅಂದ್ರೆ ದಂಡ: ಬಿಬಿಎಂಪಿ ಸಂಗ್ರಹಿಸಿದ ಒಟ್ಟು ಹಣ ಎಷ್ಟು?

ಬೆಂಗಳೂರು, ಮೇ 22: ಕೊರೊನಾ ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು ಪ್ರಮುಖ. ಬೆಂಗಳೂರಿನಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿತ್ತು. ಒಂದು ವೇಳೆ ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡರೆ ಅಂತವರಿಗೆ ದಂಡ ಹಾಕಲಾಗುತ್ತಿದೆ.
ಮೇ 2ರಿಂದ ಬಿಬಿಎಂಪಿ ದಂಡ ಹಾಕುತ್ತಿದ್ದು, ಮೊದಲ ಮೂರು ದಿನ ಒಂದು ಸಾವಿರ ರೂಪಾಯಿ ದಂಡ ಸಂಗ್ರಹಿಸಲಾಯಿತು. ಬಳಿಕ, ದಂಡದ ಬೆಲೆಯಲ್ಲಿ ಇಳಿಕೆ ಮಾಡಿಕೊಂಡಿತ್ತು. 1000 ರೂಪಾಯಿಯಿಂದ 200 ರೂಪಾಯಿ ನಿಗದಿ ಮಾಡಿತ್ತು.
ಇದೀಗ, ಮಾಸ್ಕ್ ಹಾಕದ ನಾಗರಿಕರಿಂದ ಬಿಬಿಎಂಪಿ ಒಟ್ಟು ಎಷ್ಟು ದಂಡ ಸಂಗ್ರಹಿಸಿದೆ ಎಂಬ ವಿಷಯವನ್ನು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಬಹಿರಂಗಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಯಾವ ವಲಯದಲ್ಲಿ ಹೆಚ್ಚು ದಂಡ ಹಾಕಲಾಗಿದೆ ಎಂದು ಕೂಡ ಮಾಹಿತಿ ಬಿಟ್ಟುಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸಂಗ್ರಹಿಸಿದ ಹಣ
ಒಟ್ಟು ಸಂಗ್ರಹಿಸಿದ ದಂಡ ಎಷ್ಟು?

ಬೆಂಗಳೂರಿನ ಒಟ್ಟು ಏಂಟು ವಲಯಗಳಿಂದ ಮಾಸ್ಕ್ ಧರಿಸದ ಕಾರಣಕ್ಕಾಗಿ 1715 ಜನರಿಗೆ ದಂಡ ಹಾಕಲಾಗಿದೆ. ಮೇ 5ನೇ ತಾರೀಕಿನಿಂದ ಮೇ 21ನೇ ತಾರೀಕಿನವರೆಗು ಮಾಸ್ಕ್ ಹಾಕದ ವ್ಯಕ್ತಿಗಳಿಂದ ಒಟ್ಟು 3,43,000 ಹಣವನ್ನು ಸಂಗ್ರಹಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಯಾವ ವಲಯದಲ್ಲಿ ಹೆಚ್ಚು ದಂಡ
ಬೆಂಗಳೂರು ಪೂರ್ವ ವಲಯದಲ್ಲಿ ಹೆಚ್ಚು
ಬೆಂಗಳೂರಿನ ಏಂಟು ವಲಯಗಳ ಪೈಕಿ ಪೂರ್ವ ವಲಯದಲ್ಲಿ ಹೆಚ್ಚು ದಂಡ ಸಂಗ್ರಹಣೆ ಆಗಿದೆ. 1,16,800 ರೂಪಾಯಿ ಪೂರ್ವ ವಲಯದಲ್ಲಿ ವಸೂಲಿ ಮಾಡಲಾಗಿದೆ. ಪಶ್ಚಿಮ ವಲಯದಲ್ಲಿ 46,200, ದಕ್ಷಿಣ ವಲಯದಲ್ಲಿ 36,400, ಮಹಾದೇವಪುರ ವ್ಯಾಪ್ತಿ 55,400, ಆರ್ ಆರ್ ನಗರ ವ್ಯಾಪ್ತಿ 39,200, ಯಲಹಂಕ ವ್ಯಾಪ್ತಿ 8,400, ದಾಸರಹಳ್ಳಿ ವ್ಯಾಪ್ತಿ 19,400 ಹಾಗೂ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ 21,200 ರೂಪಾಯಿ ಸಂಗ್ರಹ ಮಾಡಲಾಗಿದೆ.

ಶುಲ್ಕ ಹೆಚ್ಚಿಸಿದ ಶಾಲೆಗಳಿಗೆ ಶಿಕ್ಷಣ ಇಲಾಖೆ ನೋಟಿಸ್ ಜಾರಿ

ಬೆಂಗಳೂರು : ಕೊರೊನಾ ಬಿಕ್ಕಟ್ಟಿನ ನಡುವೆ ಶಾಲೆಗಳ ಶುಲ್ಕ ಹೆಚ್ಚಿಸಿದ ಶಾಲೆಗಳಿಗೆ ಶಿಕ್ಷಣ ಇಲಾಖೆ ನೋಟಿಸ್ ಜಾರಿ ಮಾಡಿದೆ.

ಕೊರೊನಾ ಬಿಕ್ಕಟ್ಟಿನ ನಡುವೆ ಶಾಲೆಗಳ ಶುಲ್ಕ ಹೆಚ್ಚಿಸಿದಂತೆ ಶಾಲೆಗಳಿಗೆ ಶಿಕ್ಷಣ ಇಲಾಖೆ ಆದೇಶಿಸಿತ್ತು. ಆದರೆ ಶಿಕ್ಷಣ ಇಲಾಖೆಯ ಆದೇಶಕ್ಕೆ ಕ್ಯಾರೆ ಎನ್ನದ ಶಾಲೆಗಳು ಶುಲ್ಕ ಹೆಚ್ಚಿಸಿದ ಹಿನ್ನಲೆಯಲ್ಲಿ ಕಳೆದ 10 ದಿನದಿಂದ 800ಕ್ಕೂ ಹೆಚ್ಚು ಶಾಲೆಗಳ ವಿರುದ್ಧ ಪೋಷಕರು ದೂರು ದಾಖಲಿಸಿದ್ದಾರೆ.
ಈ ಹಿನ್ನಲೆಯಲ್ಲಿ 163 ಶಾಲೆಗಳಿಗೆ ನೋಟಿಸ್ ನೀಡಿದ ಶಿಕ್ಷಣ ಇಲಾಖೆ ಶುಲ್ಕ ಹೆಚ್ಚಳ ಮಾಡದಂತೆ ಆದೇಶಿಸಿದೆ ಎಂದು ಶಿಕ್ಷಣ ಇಲಾಖೆ ಉನ್ನತ ಮೂಲದಿಂದ ತಿಳಿದುಬಂದಿದೆ.

(ಮಾಹಿತಿ ಕೃಪೆ ವೆಬ್ದುನಿಯಾ...)

ಮಹಿಳೆಗೆ ಶಟಪ್ ರಾಸ್ಕಲ್ ಎಂದ ಮಾಧುಸ್ವಾಮಿ: ಸಚಿವರ ದುರ್ವರ್ತನೆಗೆ ಸಿಎಂ ವಾರ್ನಿಂಗ್; ರಾಜಿನಾಮೆಗೆ ವಿಪಕ್ಷಗಳ ಆಗ್ರಹ

ಬೆಂಗಳೂರು: ರೈತ ಮಹಿಳೆಗೆ ಅಶ್ಲೀಲವಾಗಿ ನಿಂದಿಸಿದ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ವರ್ತನೆಗೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಸಚಿವರ ವರ್ತನೆಗೆ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದು ಈ ರೀತಿ ಮಾತನಾಡಿದ್ದು ಸರಿಯಲ್ಲ ಎಂದಿದ್ದಾರೆ.
ಕೋಲಾರ ತಾಲೂಕಿನ ಎಸ್‌.ಅಗ್ರಹಾರ ಎಂಬಲ್ಲಿ ಕೆರೆ ವೀಕ್ಷಿಸಲು ಆಗಮಿಸಿದ್ದ ಸಚಿವ ಮಾಧುಸ್ವಾಮಿ ಅವರ ಬಳಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮಹಿಳಾ ಸದಸ್ಯರು ಕೆರೆ ಒತ್ತುವರಿ ತೆರವು ಸಂಬಂಧವಾಗಿ ಮನವಿ ಸಲ್ಲಿಸಲು ಬಂದಿದ್ದರು. ಸಮಸ್ಯೆಯನ್ನು ಸಚಿವರ ಗಮನಕ್ಕೆ ತರುವ ಸಂದರ್ಭದಲ್ಲಿ ಆಕ್ರೋಶಗೊಂಡ ಅವರು ಮಾತನಾಡುತ್ತಿದ್ದ ಮಹಿಳೆಯನ್ನು ತಡೆಯಲು ಯತ್ನಿಸಿದರು
ಈ ವೇಳೆ ಕೋಪಗೊಂಡ ಅವರು ಮಹಿಳೆಗೆ ರಾಸ್ಕಲ್‌ ಎಂಬ ಪದ ಬಳಸಿದ್ದಲ್ಲದೆ ಪೊಲೀಸರಿಗೆ ಅವರನ್ನು ಎಳೆದೊಯ್ಯುವಂತೆ ಹೇಳುವ ಮೂಲಕ ರೈತ ಮಹಿಳೆಯರನ್ನು ಅವಮಾನಿಸಿದ್ದರು. ಸಚಿವರ ಈ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ 'ಸಚಿವರು ಈ ರೀತಿ ಮಾತನಾಡಿದ್ದು ಸಹಿಸಲು ಸಾಧ್ಯವಿಲ್ಲ. ನಾವು ಅವರಿಗೆ ಎಚ್ಚರಿಕೆ ನೀಡುತ್ತೇನೆ. ಈ ರೀತಿ ಅಶ್ಲೀಲವಾಗಿ ಮಾತನಾಡುವುದು ಸರಿಯಲ್ಲ. ನಾನು ರೈತ ಮಹಿಳೆ ಹಾಗೂ ಮಾಧುಸ್ವಾಮಿ ಜೊತೆಗೆ ಮಾತನಾಡುತ್ತೇನೆ. ಇನ್ನು ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳುತ್ತೇನೆ' ಎಂದಿದ್ದಾರೆ.
ಹೆಣ್ಣು ಮಕ್ಕಳ ಮನಸ್ಸಿಗೆ ನೋವಾಗಿದ್ದರೆ, ನಾನು ಕ್ಷಮೆ ಕೇಳುತ್ತೇನೆ. ಆಕೆ ಹೆಣ್ಣು ಅಂತ ಆಗಲಿ ಅಥವಾ ರೈತ ಸಂಘದವರು ಎಂದು ಗುರುತಿಸಿ ಮಾತನಾಡಿಲ್ಲ. ವ್ಯಯಕ್ತಿಕವಾಗಿ ಮಿತಿ ಮೀರಿ ಮಾತನಾಡಿದ್ದಕ್ಕೆ ನಾನು ಪ್ರತಿಕ್ರಿಯಿಸಿದೆ. ನಾನು ಕೆಟ್ಟ ಪದ ಎಂದು ಹೇಳಿಲ್ಲ. ನೋವಾಗಿದ್ದರೆ ಕ್ಷಮೆ ಕೇಳುತ್ತೀನಿ ಎಂದು ಮಾಧುಸ್ವಾಮಿ ಹೇಳಿದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಹಿಳೆಯರನ್ನು ನಿಂದಿಸಿದ ಸಚಿವ ಮಾಧುಸ್ವಾಮಿಯವರ ದುರ್ವರ್ತನೆ ಅಕ್ಷಮ್ಯ. ಸಚಿವರು ಆ ರೈತ ಮಹಿಳೆಯ ಕ್ಷಮೆಯಾಚಿಸುವಂತೆ ಮುಖ್ಯಮಂತ್ರಿ ಸೂಚನೆ ಕೊಡಬೇಕು, ಸಂಪುಟದಿಂದ ಕೈಬಿಟ್ಟು ಸರಕಾರದ ಮಾನ ಉಳಿಸಬೇಕು ಎಂದು ಆಗ್ರಹಿಸಿದರು.
(ಮಾಹಿತಿ ಕೃಪೆ ಕನ್ನಡಪ್ರಭ...)

ಅಂಫಾನ್ ಚಂಡಮಾರುತಕ್ಕೆ 76 ಮಂದಿ ಬಲಿ: ವೈಮಾನಿಕ ಸಮೀಕ್ಷೆಗೆ ಪಶ್ಚಿಮ ಬಂಗಾಳಕ್ಕೆ ತೆರಳಿದ ಪ್ರಧಾನಿ ಮೋದಿ

ಕೋಲ್ಕತಾ: ಗಂಟೆಗೆ 190 ಕಿಲೋಮೀಟರ್ ವೇಗದ ಬಿರುಗಾಳಿ ಸಹಿತ ಮಳೆಯೊಂದಿಗೆ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಅಪ್ಪಳಿಸಿರುವ ಅಂಫಾನ್ ಚಂಡಮಾರುತ ಘೋರ ಅನಾಹುತವನ್ನೇ ಸೃಷ್ಟಿಸಿದೆ. ಪ್ರಮುಖವಾಗಿ ಕಳೆದ 100 ವರ್ಷಗಳ ಇತಿಹಾಸದಲ್ಲಿ ಬಂಗಾಳ ಕಂಡ ಅತ್ಯಂತ ತೀಕ್ಷ್ಣ ಸ್ವರೂಪದ ಚಂಡಮಾರುತ ಇದಾಗಿದ್ದು, ಕೊರೋನಾದಿಂದ ನಲುಗಿದ್ದ ರಾಜ್ಯವನ್ನು ಮತ್ತಷ್ಟು ಕಂಗೆಡಿಸಿದೆ.
ಚಂಡಮಾರುತದ ಅಬ್ಬರ ಬಂಗಾಳದಲ್ಲಿ 76 ಮಂದಿಯನ್ನು ಬಲಿ ಪಡೆದುಕೊಂಡಿದ್ದು, ಒಡಿಶಾದಲ್ಲಿ 6 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಅಂದಾಜು 1 ಕೋಟಿ ಜನರನ್ನು ತೀವ್ರ ಸಮಸ್ಯೆಯ ಮಡಿಲಿಗೆ ತಳ್ಳಿದೆ. ಈ ನಡುವೆ ಚಂಡಮಾರುತದಿಂದಾಗಿ ಸಂಕಷ್ಟಕ್ಕೆ ಸಿಕ್ಕಿರುವ ಬಂಗಾಳ ಹಾಗೂ ಒಡಿಶಾ ರಾಜ್ಯಗಳಿಗೆ ಎಲ್ಲಾ ರೀತಿಯ ನೆರವಿನ ಭರವಸೆಯನ್ನು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ನೀಡಿದ್ದಾರೆ.   ಜೊತೆಗೆ ಶುಕ್ರವಾರ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆಗೆ ಪ್ರಧಾನಿ ಮೋದಿಯವರು ನಿರ್ಧರಿಸಿದ್ದು, ಈಗಾಗಲೇ ವೈಮಾನಿಕ ಸಮೀಕ್ಷೆ ನಡೆಸುವ ಸಲುವಾಗಿ ಪಶ್ಚಿಮ ಬಂಗಾಳಕ್ಕೆ ದೆಹಲಿಯಿಂದ ತೆರಳಿದ್ದಾರೆಂದು ವರದಿಗಳು ತಿಳಿಸಿವೆ.
ಇದೇ ವೇಳೆ ಪಶ್ಚಿಮ ಬಂಗಾಳದಲ್ಲಿ 20 ಮತ್ತು ಒಡಿಶಾದಲ್ಲಿ 19 ಎನ್'ಡಿಆರ್‌ಎಫ್ ತುಡಕಿ ನಿಯೋಜಿಸಲಾಗಿದ್ದು, ಅವು ಭಾರೀ ಪ್ರಮಾಣದಲ್ಲಿ ರಕ್ಷಣಾ ಕಾರ್ಯ ಕೈಗೊಂಡಿವೆ. ಜೊತೆಗೆ ಪಶ್ಚಿಮ ಬಂಗಾಳಕ್ಕೆ ಹೆಚ್ಚುವರಿಯಾಗಿ ಇನ್ನೂ 4 ತುಕಟಿಗಳನ್ನು ರವಾನಿಸಲು ಎನ್'ಡಿಆರ್‌ಎಫ್ ನಿರ್ಧರಿಸಿದೆ. ಮತ್ತೊಂಡೆದೆ ಚಂಡಮಾರುತ ಬಾಂಗ್ಲಾದೇಶವನ್ನು ತಲುಪಿದ್ದು, ನಿಧಾನವಾಗಿ ತನ್ನ ತೀವರತೆಯನ್ನು ಕಳೆದುಕೊಳ್ಳುತ್ತಿದೆ.
(ಮಾಹಿತಿ ಕೃಪೆ ಕನ್ನಡಪ್ರಭ...)

Thursday, May 21, 2020

ಬಂಧುಗಳೇ ಹಾಗೂ ಎಲ್ಲಾ ಏಜೆನ್ಸಿ ಯವರಿಗೆ ಈ ಸುದ್ದಿಯನ್ನ ದಯವಿಟ್ಟು ನಿಮ್ಮ ಊರಿನ, ತಾಲೂಕಿನ ಎಲ್ಲರಿಗೂ ತಿಳಿಸಿ ಹಾಗೂ ಕೊರೋನಾ ಇರುವದರಿಂದ ಮೇ ತಿಂಗಳನಲ್ಲಿ ಅರ್ಜಿ ಪ್ರಾರಂಭವಾಗಿದೆ

ಕಾರ್ಮಿಕ ಕಾರ್ಡ್***
ಸೆಂಟ್ರಿಂಗ್ ಕೆಲಸ, ಗಾರೆ ಕೆಲಸ, ಸಿಮೆಂಟ್ ಕೆಲಸ, ಎಲೆಕ್ಟ್ರಿಷಿಯನ್ ಮತ್ತು ಎಲೆಕ್ಟ್ರಿಕಲ್ ಕೆಲಸ, ಪೆಂಟಿಂಗ್ ಕೆಲಸ, ಪ್ಲಮ್ಬರ್ ಕೆಲಸ, ಬಾರ ಬೆಂಡರ್ ಕೆಲಸ, ಟೆಲ್ಸ್ (Tails ) ಕೆಲಸ, ಬಡಗಿ ಕೆಲಸ, ವಯರಿಂಗ ಕೆಲಸ, ಟವರ್ ನಿರ್ಮಾಣ ಕಾರ್ಮಿಕರು, ಕೊಳವೆ ಮಾರ್ಗ, ಒಳ ಚರಂಡಿ, ಮೋರಿ ಸೇತುವೆ, ರಸ್ತೆ ನಿರ್ಮಾಣ, ಡಾಮಾರಿಕರಣ ಕಾರ್ಮಿಕರು   ಮುಂತಾದ ಕೆಲಸ ಕಾರ್ಮಿಕರಿಗೆ ಸರ್ಕಾರದ ಕಾರ್ಮಿಕ ಕಾರ್ಡ್ ನ್ನು ನೀಡುತ್ತಿದೆ

 *ಉಪಯೋಗಗಳು*
1) ಕೆಲಸ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಪಡೆಯಲು ವಿಶೇಷ ಸ್ಕಾಲರ್ಶಿಪ್ 2000 ದಿoದ 30000 ವರೆಗೆ  ಸಿಗುತ್ತದೆ. (ಕಲಿಕೆ ಭಾಗ್ಯ)
2) ಕಾರ್ಮಿಕರು ಮದುವೆ ಅಥವಾ ಅವರ ಮಕ್ಕಳು ಮದುವೆ ಸಮಯದಲ್ಲಿ ರೂ 50,000/- ದಷ್ಟು ಮೊತ್ತ ಸಹಾಯ ಧನ ಸಿಗುತ್ತದೆ.
3) ಕಾರ್ಮಿಕರಿಗೆ 60 ವರ್ಷ ಆದ ಮೇಲೆ ಪಿಂಚಣಿ ಸೌಲಭ್ಯ ಸಿಗಲಿದೆ.
4) ಕಾರ್ಮಿಕರಿಗೆ  ಕಾರ್ಮಿಕ ಆರೋಗ್ಯ ಭಾಗ್ಯ ಮತ್ತು ಕಾರ್ಮಿಕ ಚಿಕಿತ್ಸೆ ಭಾಗ್ಯಸಿಗಲಿದೆ.
 5) ಕೆಲಸ ನಿರ್ವಹಿಸುವಾಗ ಮರಣ ಹೊಂದಿದಲ್ಲಿ 5,00,000/-
 ಸಂಪೂರ್ಣ ಶಾಶ್ವತ ದುರ್ಬಲತೆ ಗೆ 2,00,000/-, ಭಾಗಶಃ ಶಾಶ್ವತ ದುರ್ಬಲತೆ ಗೆ 1,00,000/-

ಹೀಗೆ ಮುಂತಾದ ಪ್ರಯೋಜನಗಳನ್ನು ಕಾರ್ಮಿಕ ಕಾರ್ಡ್ ನಲ್ಲಿ ಪಡೆಯಬಹುದಾಗಿದೆ ..

ನಿಮ್ಮ ಹತ್ತಿರದ ಆಥವಾ ತಾಲ್ಲೂಕು  ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸಿ......

ವಯಸ್ಸಿನ ಮಿತಿ 18 ರಿಂದ 55 ವರ್ಷ.

ದಯವಿಟ್ಟು ಈ ಯೋಜನೆಯ ಬಗ್ಗೆ  ಜಾಗೃತಿ ಮೂಡಿಸಿ

 *ವಿದ್ಯಾವಂತ ಯುವಕರೆ ದಯವಿಟ್ಟು ಈ ಕೆಲಸ ಮಾಡಿರಿ*

*ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿಧ್ಯಾರ್ಥಿ ವೇತನ*

ನೊಂದಾಯಿತ ಕಟ್ಟಡ ಕಾರ್ಮಿಕರ ಎರಡು  ಮಕ್ಕಳಿಗೆ ದೊರೆಯುವ  ವಿಧ್ಯಾರ್ಥಿ ವೇತನ
      👇👇👇
• 1ನೇ ತರಗತಿ ಉತ್ತೀರ್ಣರಾದವರಿಗೆ 2000/-
• 2ನೇ ತರಗತಿ ಉತ್ತೀರ್ಣರಾದವರಿಗೆ 2000/-
• 3ನೇ ತರಗತಿ ಉತ್ತೀರ್ಣರಾದವರಿಗೆ 2000/-
• 4ನೇ ತರಗತಿ ಉತ್ತೀರ್ಣರಾದವರಿಗೆ 3000/-
• 5ನೇ ತರಗತಿ ಉತ್ತೀರ್ಣರಾದವರಿಗೆ 3000/-
• 6ನೇ ತರಗತಿ ಉತ್ತೀರ್ಣರಾದವರಿಗೆ 3000/-
• 7ನೇ ತರಗತಿ ಉತ್ತೀರ್ಣರಾದವರಿಗೆ 4000/-
• 8ನೇ ತರಗತಿ ಉತ್ತೀರ್ಣರಾದವರಿಗೆ 4000/-
• 9ನೇ ತರಗತಿ ಉತ್ತೀರ್ಣರಾದವರಿಗೆ 6000/-
• 10ನೇ ತರಗತಿ ಉತ್ತೀರ್ಣರಾದವರಿಗೆ 6000/-
• ಪ್ರಥಮ ಪಿಯುಸಿ ಉತ್ತೀರ್ಣರಾದವರಿಗೆ 6000/-
• ದ್ವಿತೀಯ ಪಿಯುಸಿ ಉತ್ತೀರ್ಣರಾದವರಿಗೆ 8000/-
• ಐಟಿಐ ಮತ್ತು ಡಿಪ್ಲೊಮೊ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 7000/-
• ಪದವಿ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 10,000/-
• ಇಂಜಿನಿಯರಿಂಗ್ ಕೋರ್ಸ್ ಸೇರ್ಪಡೆಗೆ ರೂ.25,000/- ಹಾಗು ಪ್ರತಿ ವರ್ಷ ತೇರ್ಗಡೆಗೆ ರೂ.20,000/-
• ವೈದ್ಯಕೀಯ ಕೋರ್ಸ್ ಸೇರ್ಪಡೆಗೆ ರೂ.30,000/- ಹಾಗು ಪ್ರತಿ ವರ್ಷ ತೇರ್ಗಡೆಗೆ ರೂ.25000/-
• ಸ್ನಾತಕೋತ್ತರ ಪದವಿ ಸೇರ್ಪಡೆಗೆ ರೂ.20,000/- ಹಾಗು ಪ್ರತಿ ವರ್ಷ ರೂ.10,000/- ಗಳಂತೆ (ಎರಡು ವರ್ಷಗಳಿಗೆ)
• ಪಿಹೆಚ್.ಡಿ ಕೋರ್ಸ್ ಪ್ರತಿ ವರ್ಷಕ್ಕೆ ರೂ.20000/- (ಗರಿಷ್ಠ ಎರಡು ವರ್ಷಗಳು) ಮತ್ತು ಪಿ.ಹೆಚ್.ಡಿ ಪ್ರಭಂಧ ಸ್ವೀಕಾರದ ನಂತರ ಹೆಚ್ಚುವರಿಯಾಗಿ ರೂ.20,000/-

ಪ್ರತಿಭಾವಂತ ಮಕ್ಕಳಿಗಾಗಿ

1. ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.5000/-
2. ಪಿಯುಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.7000/-
3. ಪದವಿ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಶೇ.75 ಅಂಕ ಪಡೆದವರಿಗೆ ರೂ.10,000/-
4. ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಶೇ.75 ಅಂಕ ಪಡೆದವರಿಗೆ ರೂ.15,000/-

🔎 ಹೆಚ್ಚಿನ ಮಾಹಿತಿಗಾಗಿ ತಮ್ಮ ವ್ಯಾಪ್ತಿಯಲ್ಲಿ ಬರುವ

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಚೇರಿಗೆ ಭೇಟಿ ನೀಡಿ.

ಅಥವಾ

ನಿಮ್ಮ ಹತ್ತಿರದ 'ಸಾಮಾನ್ಯ ಸೇವಾ ಕೇಂದ್ರ'/ ಸಿ.ಎಸ್.ಸಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:

*ಆಧಾರ್ ಕಾರ್ಡ್ (ಮೊಬೈಲ್ ನಂ. ಲಿಂಕ್ ಆಗಿರಬೇಕು)
*ರೇಷನ್ ಕಾರ್ಡ್ (ಇದ್ದರೆ)
*ಚುನಾವಣೆ ಗುರುತಿನ ಚೀಟಿ (ಇದ್ದರೆ)
*ಫೋಟೊ (ಒಂದು)
*ಬ್ಯಾಂಕ್ ಪಾಸ್ ಪುಸ್ತಕ
*ಗುತ್ತಿಗೆದಾರು/ಗಾರೆ ಕೆಲಸ ಮೇಸ್ತ್ರಿಯಿಂದ ಪಡೆದ ಅರ್ಜಿ ನಮೂನೆ

*ಅರ್ಜಿ ನಮೂನೆಯನ್ನು

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಚೇರಿ
ಅಥವಾ
'ಸಾಮಾನ್ಯ ಸೇವಾ ಕೇಂದ್ರ'/ ಸಿ.ಎಸ್.ಸಿ ಕೇಂದ್ರಗಳಲ್ಲಿ ಪಡೆಯಬಹುದು

 *ಇದನ್ನು ನಿರ್ಲಕ್ಷ್ಯ ಮಾಡಬೇಡಿರಿ*

ನಮ್ಮ ಸಮುದಾಯದ ಈ ತರದ ಕಟ್ಟಡ ನಿರ್ಮಾಣ ಸಂಬಂಧಿತ ಉಪ ಕಸಬುಗಳಲ್ಲಿ ತೊಡಗಿಸಿಕೊಳ್ಳಿ.. ಇವುಗಳು ಹೆಚ್ಚು ಆದಾಯ ತಂದು ಕೊಡುವ ಮತ್ತು  ಗೌರವ ಇರುವ ವೃತ್ತಿಗಳು..

ಇಂತಹ ವೃತ್ತಿಗಳ ತರಬೇತಿಯನ್ನು  ಆಯಾ ಜಿಲ್ಲೆಯ DC  ಆಫೀಸ್ ನ ಆವರಣದಲ್ಲಿರುವ ಕಾರ್ಮಿಕ ಸೇವಾ ಕೇಂದ್ರಗಳಲ್ಲಿ ನೀಡಲಾಗುತ್ತದೆ.ಮತ್ತು ತರಬೇತಿ ಅವಧಿಯಲ್ಲಿ ಭತ್ಯೆ ಇರುತ್ತದೆ.ನಂತರ ಸರ್ಟಿಫಿಕೇಟ್ ನೀಡಲಾಗುತ್ತದೆ..

ಬಿ.ಪ್ಯಾಕ್ ಸಮೀಕ್ಷಾ ವರದಿ | ಖಾಸಗಿ ಸಾರಿಗೆ ಬಳಕೆದಾರರೇ ಹೆಚ್ಚು

ಬೆಂಗಳೂರು: 'ಲಾಕ್‌ಡೌನ್ ತೆರವಾದ ನಂತರ ನಗರದಲ್ಲಿ ಸಾರ್ವಜನಿಕ ಸಾರಿಗೆ ಬಳಕೆದಾರರ ಸಂಖ್ಯೆ ಖಾಸಗಿ ಸಾರಿಗೆ ಬಳಕೆದಾರರಿಗಿಂತ ಶೇ 3ರಷ್ಟು ಕಡಿಮೆಯಾಗಿದೆ' ಎಂದು ಬಿ.ಪ್ಯಾಕ್ ಆನ್‌ಲೈನ್ ಸಮೀಕ್ಷೆ ಹೇಳಿದೆ.
ಸಾರ್ವಜನಿಕ ಸಾರಿಗೆಯನ್ನು ಸುರಕ್ಷಿತ ಸಂಚಾರ ಆಯ್ಕೆಯನ್ನಾಗಿ ಮಾಡಲು ಸಾರಿಗೆ ಸಂಸ್ಥೆಗಳು ಅನುಸರಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಅರ್ಥಮಾಡಿಕೊಳ್ಳವ ಉದ್ದೇಶದಿಂದ ಈ ಸಮೀಕ್ಷೆ ನಡೆಸಲಾಗಿದೆ ಎಂದು ಬಿ.ಪ್ಯಾಕ್ ತಿಳಿಸಿದೆ.
ಖಾಸಗಿ ಸಾರಿಗೆ ಬಳಕೆದಾರರು ಶೇ 51ರಷ್ಟಿದ್ದರೆ, ಸಾರ್ವಜನಿಕ ಸಾರಿಗೆ ಬಳಸುವವರು ಶೇ 48ರಷ್ಟು ಇದ್ದಾರೆ. ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸಾರಿಗೆ ಸಂಸ್ಥೆಗಳು ವ್ಯವಸ್ಥಿತ ಕಾರ್ಯತಂತ್ರಗಳನ್ನೂ ರೂಪಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ 71ರಷ್ಟು ಜನ ಸಾರ್ವಜನಿಕ ಸಾರಿಗೆ ಬಳಕೆದಾರರಾಗಿದ್ದು, ಶೇ 29ರಷ್ಟು ಜನ ಖಾಸಗಿ ವಾಹನ ಬಳಕೆದಾರರಾಗಿದ್ದಾರೆ. ಲಾಕ್‌ಡೌನ್‌ಗೆ ಮುಂಚಿತವಾಗಿ ಸಾರ್ವಜನಿಕ ಸಾರಿಗೆ ಬಳಸುತ್ತಿದ್ದ ಶೇ 50ರಷ್ಟು ಜನರು ಲಾಕ್‌ಡೌನ್ ತೆರವುಗೊಳಿಸಿದ ನಂತರ ಕನಿಷ್ಠ ಮೂರು ತಿಂಗಳವರೆಗೆ ಸಾರ್ವಜನಿಕ ಸಾರಿಗೆ ಬಳಸದಿರಲು ನಿರ್ಧರಿಸಿದ್ದಾರೆ. ಈ ಪೈಕಿ ಶೇ 36ರಷ್ಟು ಜನರು ಸಾರ್ವಜನಿಕ ಸಾರಿಗೆಯನ್ನು ಯಾವಾಗಿನಿಂದ ಬಳಸುತ್ತಾರೆ ಎಂಬುದನ್ನು ನಿರ್ದಿಷ್ಟವಾಗಿ ತಿಳಿಸಿಲ್ಲ.
ಸಮೀಕ್ಷೆಯಲ್ಲಿ ಭಾಗವಹಿಸಿದ ಜನರಲ್ಲಿ ಶೇ 58ರಷ್ಟು ಜನ 5 ಕಿಲೋ ಮೀಟರಿಗೂ ಕಡಿಮೆ ಪ್ರಯಾಣ ಮಾಡಿದರೆ, 49ರಷ್ಟು ಜನ 5 ಕಿ.ಮೀಗೂ ಹೆಚ್ಚು ಪ್ರಯಾಣ ಮಾಡುವವರಾಗಿದ್ದಾರೆ.
'ಈ ಸಮೀಕ್ಷೆಯಲ್ಲಿ ಭಾಗವಹಿಸಿದ 1,072 ಜನರಲ್ಲಿ ಬಹುತೇಕರು ಸಾರ್ವಜನಿಕ ಸಾರಿಗೆಯಲ್ಲಿ ಸುರಕ್ಷತಾ ಕ್ರಮಗಳನ್ನು ಹೆಚ್ಚಾಗಿ ಕೈಗೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ' ಎಂದು ಸಮೀಕ್ಷಾ ವರದಿ ಹೇಳಿದೆ.
'ಬಿಎಂಟಿಸಿ, ರೈಲ್ಚೆ ಮತ್ತು ಮೆಟ್ರೊ ರೈಲು ಸಂಚಾರ ಆರಂಭಿಸುವ ಮುನ್ನ ಸಾರ್ವಜನಿಕರ ಸುರಕ್ಷತೆ ಹಾಗೂ ಸೋಂಕು ಹರಡುವುದನ್ನು ತಡೆಯಲು ಮುನ್ನೆಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಜನರಲ್ಲಿ ಜಾಗೃತಿ ಮೂಡಿಸಬೇಕು' ಎಂದು ಬಿ.ಪ್ಯಾಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇವತಿ ಅಶೋಕ್ ತಿಳಿಸಿದ್ದಾರೆ.
ಆನ್‌ಲೈನ್ ಮೂಲಕ ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಗೆ ಕೆಎಸ್‌ಆರ್‌ಟಿಸಿ ಅವಕಾಶ ಮಾಡಿಕೊಟ್ಟಿದೆ. ಬಸ್‌ ನಿಲ್ದಾಣಗಳಲ್ಲಿ ಟಿಕೆಟ್ ಖರೀದಿಗೆ ಜನ ಅಲೆದಾಡುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಗುರುವಾರ ಪ್ರಯಾಣಕ್ಕೆ 5,626 ಮಂದಿ ಆಸನಗಳನ್ನು ಮುಂಗಡವಾಗಿ ಕಾಯ್ದಿರಿಸಿದ್ದಾರೆ ಎಂದು ನಿಗಮ ತಿಳಿಸಿದೆ.
www.ksrtc.inನಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಬಹುದು.
ಕೆಎಸ್‌ಆರ್‌ಟಿಸಿ ಬಸ್‌ಗಳ ಕಾರ್ಯಾಚರಣೆ ಸಮಯವನ್ನು ಸಂಜೆ 7ರ ತನಕ ವಿಸ್ತರಣೆ ಮಾಡಲಾಗಿದ್ದು, ಬುಧವಾರ 2,633 ಬಸ್‌ಗಳಲ್ಲಿ 81,593 ಜನ ಪ್ರಯಾಣ ಮಾಡಿದರು.
ಈ ಹಿಂದಿನ ನಿಯಮದಂತೆ ಸಂಜೆ 7 ಗಂಟೆಯೊಳಗೆ ಬಸ್‌ಗಳು ತಲುಪಬೇಕಿತ್ತು. ಈಗ ಸಂಜೆ 7 ಗಂಟೆ ತನಕ ಬೆಂಗಳೂರು ಹಾಗೂ ಇತರೆ ನಗರಗಳಿಂದ ಬಸ್‌ಗಳು ಸಂಚಾರ ಆರಂಭಿಸಬಹುದು. ಕಾರ್ಯಾಚರಣೆ ಮುಕ್ತಾಯದ ಸಮಯ ನಿಗದಿ ಮಾಡಿಲ್ಲ.
ಬುಧವಾರ 2 ಸಾವಿರ ಬಸ್‌ಗಳ ಕಾರ್ಯಾಚರಣೆ ಗುರಿಯನ್ನು ಕೆಎಸ್‌ಆರ್‌ಟಿಸಿ ಹೊಂದಿದ್ದರೂ, ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಕಾರಣ 633 ಬಸ್‌ಗಳನ್ನು ಹೆಚ್ಚುವರಿಯಾಗಿ ಕಾರ್ಯಾಚರಣೆ ಮಾಡಿತು.
ಬುಧವಾರ ಬೆಳಿಗ್ಗೆಯಿಂದಲೇ ಬೇರೆ ಊರುಗಳಿಗೆ ಪ್ರಯಾಣ ಮಾಡಲು ನಗರದ ಮೆಜೆಸ್ಟಿಕ್ ನಿಲ್ದಾಣದಲ್ಲಿ ಜನ ಜಮಾಯಿಸಿದ್ದರು. ಸರತಿ ಸಾಲಿನಲ್ಲಿ ನಿಂತು ಬಸ್‌ ಮುಂಗಡ ಟಿಕೆಟ್ ಖರೀದಿಸಿ ಪ್ರಯಾಣ ಮಾಡಿದರು.
ಲಾಕ್‌ಡೌನ್ ನಂತರ ದುಡಿಮೆಯೇ ಇಲ್ಲದ ಕಾರ್ಮಿಕರು ಬಸ್ ಟಿಕೆಟ್ ಖರೀದಿಗೂ ಹಣ ಇಲ್ಲದೆ ಪರದಾಡಿದರು. 'ಊರಿಗೆ ತಲುಪಲು ಅವಕಾಶ ಮಾಡಿಕೊಡಿ' ಎಂದು ಕಣ್ಣೀರಿಟ್ಟರು.
(ಮಾಹಿತಿ ಕೃಪೆ ಪ್ರಜಾವಾಣಿ...)

ಬೆಳಗಾವಿ, ಮೈಸೂರಿಗೆ ನಾಳೆಯಿಂದ ರೈಲು

ಬೆಳಗಾವಿ: 'ರಾಜ್ಯದಲ್ಲಿ ಮೇ 22ರಿಂದ ಪ್ರಾಯೋಗಿಕವಾಗಿ 2 ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸಲಾಗುವುದು' ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದರು.
'ಬೆಂಗಳೂರು-ಹುಬ್ಬಳ್ಳಿ-ಬೆಳಗಾವಿ ಹಾಗೂ ಮೈಸೂರಿನಿಂದ ಬೆಂಗಳೂರಿಗೆ ಈ ವಿಶೇಷ ರೈಲುಗಳು ಸಂಚರಿಸಲಿವೆ' ಎಂದರು.
'ಮೊದಲಿನಂತೆ ರೈಲು ನಿಲ್ದಾಣಕ್ಕೆ ಬಂದು ಜಮಾಯಿಸಬಾರದು. ಕಡ್ಡಾಯವಾಗಿ ಆನ್‌ಲೈನ್‌ನಲ್ಲಿಯೇ ಟಿಕೆಟ್ ಬುಕ್‌ ಮಾಡಬೇಕು. ಸೀಟು ಲಭ್ಯವಾಗುವುದು ದೃಢಪಟ್ಟ ಬಳಿಕವೇ ನಿಲ್ದಾಣಕ್ಕೆ ಬರಬೇಕು' ಎಂದು ತಿಳಿಸಿದರು.
'ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನವಿ ಮೇರೆಗೆ ರೈಲುಗಳ ಸಂಚಾರ ಆರಂಭಿಸುತ್ತಿದ್ದೇವೆ. ಜನರು ಅಂತರ ಕಾಪಾಡಿಕೊಳ್ಳಬೇಕು. ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸಂಚರಿಸಬೇಕು' ಎಂದು ಇಲ್ಲಿ ಬುಧವಾರ ತಿಳಿಸಿದರು.
(ಮಾಹಿತಿ ಕೃಪೆ ಪ್ರಜಾವಾಣಿ..)

ಆನ್‌ಲೈನ್‌ನಲ್ಲಿ ದೇವರ ದರ್ಶನ: ಸೇವೆ ಕಾಯ್ದಿರಿಸಲು ಆಯಪ್, ವೆಬ್‌ಸೈಟ್‌

ಬೆಂಗಳೂರು: ಕೊರೊನಾ ಕಾರಣಕ್ಕೆ ದೇವಸ್ಥಾನಗಳ ಬಾಗಿಲು ಮುಚ್ಚಿದ್ದು, ದೇವರ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ಅವಧಿಯಲ್ಲಿ ದರ್ಶನ ಮತ್ತು ಸೇವಾ ಕೈಂಕರ್ಯಗಳ ನೇರ ವೀಕ್ಷಣೆಗೆ ಆನ್‌ಲೈನ್‌ ಮೂಲಕ ವ್ಯವಸ್ಥೆ ಕಲ್ಪಿಸಲು ಮುಜರಾಯಿ ಇಲಾಖೆ ನಿರ್ಧರಿಸಿದೆ.
'ಎ' ವರ್ಗದ ದೇವಾಲಯಗಳಲ್ಲಿ ನಡೆಯುವ ಎಲ್ಲ ಸೇವೆಗಳ ವಿವರ ಮತ್ತು ಆನ್‌ಲೈನ್‌ ಮೂಲಕ ಕಾಯ್ದಿರಿಸಬಹುದಾದ ಸೇವೆಗಳ ಮಾಹಿತಿಯನ್ನು ಭಕ್ತರಿಗೆ ನೀಡುವ ಉದ್ದೇಶದಿಂದ ಮೊಬೈಲ್‌ ಆಯಪ್‌ ಮತ್ತು ವೆಬ್ ಆಧಾರಿತ ತಂತ್ರಾಂಶ ಅಭಿವೃದ್ಧಿಪಡಿಸಲೂ ಇಲಾಖೆ ತೀರ್ಮಾನಿಸಿದೆ.
ಆನ್‌ಲೈನ್‌ ನೇರ ಪ್ರಸಾರಕ್ಕೆ ಸಂಬಂಧಿಸಿದಂತೆ ಇಲಾಖೆಯ ಆಯುಕ್ತರು ಎಲ್ಲ ಜಿಲ್ಲಾಧಿಕಾರಿಗಳು ಮತ್ತು ದೇವಸ್ಥಾನಗಳ ಕಾರ್ಯನಿರ್ವಾಹಕರಿಗೆ ಪತ್ರ ಬರೆದಿದ್ದಾರೆ. ದೇವಾಲಯಗಳಲ್ಲಿ ನಡೆಯುವ ಸೇವೆ ಹಾಗೂ ಪೂಜಾ ಕೈಂಕರ್ಯಗಳನ್ನು ಆಯಾ ದೇವಾಲಯದ ರೂಢಿ, ಸಂಪ್ರದಾಯ ಮತ್ತು ಆಚರಣೆಗೆ ಒಳಪಟ್ಟು ಆನ್‌ಲೈನ್‌ ಮೂಲಕ ವೀಕ್ಷಣೆಯ ವ್ಯವಸ್ಥೆ ಒದಗಿಸಬಹುದಾದ ದೇವಾಲಯಗಳ ಪಟ್ಟಿ ನೀಡುವಂತೆ ಪತ್ರದಲ್ಲಿ ಕೋರಿದ್ದಾರೆ.
ಮೊಬೈಲ್‌ ಆಯಪ್‌, ವೆಬ್‌ಸೈಟ್‌: 15 ಜಿಲ್ಲೆಗಳ (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಬೆಳಗಾವಿ, ಮಂಡ್ಯ, ಚಾಮರಾಜನಗರ, ಯಾದಗಿರಿ, ಕೊಡಗು, ಗದಗ, ಚಿಕ್ಕಬಳ್ಳಾಪುರ, ಬಳ್ಳಾರಿ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಉಡುಪಿ)
ಜಿಲ್ಲಾಧಿಕಾರಿಗಳು ಮತ್ತು 'ಎ'ವರ್ಗದ ದೇವಸ್ಥಾನಗಳ ಕಾರ್ಯನಿರ್ವಹಣಾಧಿಕಾರಿಗಳಿಗೆ, ಆಡಳಿತಾಧಿಕಾರಿಗಳಿಗೆ ಮತ್ತು ಅನುವಂಶಿಕ ಮೊಕ್ತೇಸರರಿಗೆ ಪತ್ರ ಬರೆದಿರುವ ಆಯುಕ್ತರು, ಮೊಬೈಲ್‌ ಆಯಪ್‌ ಮತ್ತು ವೆಬ್‌ಸೈಟ್‌ಗೆ ಅಗತ್ಯವಾದ ಮಾಹಿತಿಗಳನ್ನು ತಕ್ಷಣ ನೀಡುವಂತೆ ತಿಳಿಸಿದ್ದಾರೆ.
ಆಯಪ್‌ ಮತ್ತು ವೆಬ್‌ಸೈಟ್‌ ಅಭಿವೃದ್ಧಿಪಡಿಸುವ ಯೋಜನೆಯನ್ನು ಉಚಿತವಾಗಿ ಒದಗಿಸಲು ಕೆಲವು ಷರತ್ತುಗಳನ್ನು ವಿಧಿಸಿ ಮೈಸೂರಿನ ಸ್ಪಿರಿಚುವಲ್‌ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಅನುಮತಿ ನೀಡಲಾಗಿದೆ. ದೇವಾಲಯಗಳಲ್ಲಿ ನಡೆಯುವ ಎಲ್ಲ ಸೇವೆಗಳ ವಿವರ ಮತ್ತು ದರ, ಪೂಜಾ ಕೈಂಕರ್ಯದ ಸಮಯ ಹಾಗೂ ಆನ್‌ಲೈನ್‌ ಮೂಲಕ ಕಾಯ್ದಿರಿಸಬಹುದಾದ ಸೇವೆಗಳು, ಕಾದಿರಿಸಲು ಲಭ್ಯವಿರುವ ದಿನ, ಈವರೆಗೆ ಬುಕ್ ಆಗಿರುವ ದಿನಾಂಕ, ದಿನಕ್ಕೆ ಎಷ್ಟು ಸೇವೆ ಮಾಡಬಹುದು, ಪ್ರಸಾದ ತಲುಪಿಸಲು ಸಾಧ್ಯವೇ ಎಂಬ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
(ಮಾಹಿತಿ ಕೃಪೆ ಪ್ರಜಾವಾಣಿ..)

ವಿಜಯಪುರ| ಕಲ್ಲಂಗಡಿ ತಂದ ಸಂಕಷ್ಟ

ನಿಡಗುಂದಿ(ವಿಜಯಪುರ): ಲಾಕ್‌ಡೌನ್‌ ಅವಧಿಯಲ್ಲಿ ಕಳೆದ ತಿಂಗಳು ಎಂಟು ಎಕರೆ ತೋಟದಲ್ಲಿ ಕಟಾವಿಗೆ ಬಂದಿದ್ದ ಚೆಂಡು ಹೂ ಮಾರಾಟ ಮಾಡಲು ಸಾಧ್ಯವಾಗದೇ ನಷ್ಟ ಅನುಭವಿಸಿದ್ದ ರೈತ ಆಂಜನೇಯ ಅವರು, ಆರು ಎಕರೆಯಲ್ಲಿ ಬೆಳೆದ ಕರಬೂಜ ಹಾಗೂ 10 ಎಕರೆಯಲ್ಲಿ ಬೆಳೆದ ಕಲ್ಲಂಗಡಿ ಹಣ್ಣುಗಳಿಗೆ ಕೂಡ ಸರಿಯಾಗಿ ಮಾರುಕಟ್ಟೆ ದೊರೆಯದೇ ಲಕ್ಷಾಂತರ ರೂಪಾಯಿ ನಷ್ಟ
ಅನುಭವಿಸಿದ್ದಾರೆ.
ಪಟ್ಟಣದ ಹೊರವಲಯದ ಯಲಗೂರ ಕ್ರಾಸ್‌ ಬಳಿ 24 ಎಕರೆ ಕೃಷಿ ಭೂಮಿಯನ್ನು ಲಾವಣಿ ಪಡೆದು ಆಧುನಿಕ ತಂತ್ರಜ್ಞಾನ ಅಳವಡಿಸಿ, ಚೆಂಡು ಹೂ, ಹೂಕೋಸು, ಕಲ್ಲಂಗಡಿ, ಮೆಣಸಿನಕಾಯಿ ಮಿಶ್ರ ಬೆಳೆ ಬೆಳೆದಿದ್ದರು. ಈಗಾಗಲೇ ಚೆಂಡು ಹೂ ಹೊಲದಲ್ಲಿಯೇ ಬಾಡಿ ಹೋಗಿದೆ. ಮೆಣಸಿನಕಾಯಿ, ಹೂಕೋಸು ಮಾರುಕಟ್ಟೆಯಿಲ್ಲದೇ ಹಾಳಾಗಿವೆ.
'ಸದ್ಯ ಬೆಳೆದಿರುವ ಕರಬೂಜ ಹಾಗೂ ಕಲ್ಲಂಗಡಿ ಹಣ್ಣು ಕಟಾವಿಗೆ ಬಂದಿವೆ. ಆದರೆ ಸೂಕ್ತ ಮಾರುಕಟ್ಟೆ ಇಲ್ಲದೇ ನಷ್ಟವಾಗಿವೆ. ಕರಬೂಜದ ಬೆಲೆ ಈಗ ಕೆ.ಜಿ.ಯೊಂದಕ್ಕೆ ₹ 6ಕ್ಕೆ ಕುಸಿದಿದೆ. ಹಾಕಿದ ಬಂಡವಾಳವೂ ಗಿಟ್ಟಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.
'ಎರಡು ಲಾರಿ ಕರಬೂಜ, ಅಂದಾಜು 20 ಟನ್‌ ಹೈದರಾಬಾದ್‌ಗೆ ಕಳುಹಿಸಿದ್ದೆ. ಸೂಕ್ತ ಸಮಯದಲ್ಲಿ ಮಾರುಕಟ್ಟೆ ದೊರೆಯದ ಕಾರಣ ಒಂದು ಲಾರಿ ಕರಬೂಜ ಅಲ್ಲಿಯೇ ನಷ್ಟವಾಯಿತು. ಇನ್ನೊಂದು ಲಾರಿ ಕರಬೂಜ ಕೆ.ಜಿ ಗೆ ₹6 ರಂತೆ ಮಾರಿದೆ, ಅದು ಬಾಡಿಗೆ ಹಣಕ್ಕೂ ಸರಿಯಾಗಲಿಲ್ಲ. ಅಳಿದುಳಿದ ಕರಬೂಜ ಇಲ್ಲಿಯೇ ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದೇನೆ' ಎಂದರು.
'10 ಎಕರೆಯಲ್ಲಿ ಬೆಳೆದಿದ್ದ ಕಲ್ಲಂಗಡಿಗೆ ಕೂಡ ಸೂಕ್ತ ಮಾರುಕಟ್ಟೆ ದೊರೆಯದೇ ಹೊಲದಲ್ಲಿಯೇ ಕೊಳೆಯುತ್ತಿದೆ' ಎಂದು ಅವರು ವಿಷಾದಿಸಿದರು.

Wednesday, May 20, 2020

22ಕ್ಕೆ ಸೋನಿಯಾ ನೇತೃತ್ವದಲ್ಲಿ ಸಭೆ

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಗುರಿಯಾದ ವಲಸಿಗರು, ಕಾರ್ಮಿಕ ಕಾನೂನಿನ ತಿದ್ದುಪಡಿ- ಇತ್ಯಾದಿ ವಿಚಾರಗಳ ಬಗ್ಗೆ ಚರ್ಚಿಸಲು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಮೇ 22ರಂದು ವಿರೋಧ ಪಕ್ಷಗಳ ಸಭೆ ಕರೆದಿದ್ದಾರೆ. ವೀಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ ನಡೆಯಲಿದ್ದು, ಎಸ್ಪಿ, ಬಿಎಸ್ಪಿ ಸೇರಿದಂತೆ 17 ಪಕ್ಷಗಳು ಸಮ್ಮತಿ ಸೂಚಿಸಿವೆ. ಶರದ್‌ ಪವಾರ್‌, ಸ್ಟಾಲಿನ್‌, ಮಮತಾ ಬ್ಯಾನರ್ಜಿ ಸೇರಿದಂತೆ ವಿಪಕ್ಷಗಳ ಹಲವು ಮುಖಂಡರು ಪಾಲ್ಗೊಳ್ಳುವ ಸಾಧ್ಯತೆ ಇದೆ.
ಏನೇನು ಚರ್ಚೆ?: ಲಾಕ್‌ಡೌನ್‌ ನಿರ್ವಹಿಸುವಲ್ಲಿ ಕೇಂದ್ರ ಸರಕಾರ‌ದ ವೈಫ‌ಲ್ಯ, ನಿರುದ್ಯೋಗ ಸಮಸ್ಯೆಗಳ ಬಗ್ಗೆ ಸಭೆ ಧ್ವನಿಯಾಗಲಿದೆ. ಕೇಂದ್ರ ಸರಕಾರ ಪರಿಷ್ಕರಿ ಸುತ್ತಿರುವ ಕಾರ್ಮಿಕ ನೀತಿಯಿಂದ, ಬಿಜೆಪಿ ಅಧಿಕಾರ ಹಿಡಿದಿರುವ ರಾಜ್ಯಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಆಗುವ ಸಾಧ್ಯತೆ ಇದೆ ಎನ್ನುವುದು ಕಾಂಗ್ರೆಸ್‌ನ ಆರೋಪ.
ಹೀಗಾಗಿ, ಸಭೆಯಲ್ಲಿ ಕಾರ್ಮಿಕ ಕಾನೂನಿನ ಕುರಿತು ಚರ್ಚೆಗಳೂ ನಡೆಯಲಿವೆ.
(ಮಾಹಿತಿ ಕೃಪೆ ಉದಯವಾಣಿ...)

ಬಸ್ ಸಂಚಾರವೇನೋ ಆರಂಭವಾಗಿದೆ, ಕೊರೋನಾದಿಂದ ಪ್ರಯಾಣಿಕರಿಗೆ ಓಡಾಟ ಭಯ!

ಬೆಂಗಳೂರು: ಲಾಕ್ ಡೌನ್ ಆದ ಸುಮಾರು ಎರಡು ತಿಂಗಳ ನಂತರ ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಲ್ಲಿ ಸಾರ್ವಜನಿಕ ಸಾರಿಗೆ ಸಂಚಾರ ಆರಂಭವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಆಟೋರಿಕ್ಷಾ, ಕ್ಯಾಬ್, ಬಸ್ ಗಳ ಓಡಾಟ ಆರಂಭವಾಗಿದೆ.
ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ಸುಗಳ ಓಡಾಟ ಭಾಗಶಃ ಆರಂಭವಾಗಿದ್ದು ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಸಬೇಕೆಂದು ನಿಯಮ ಹೊರಡಿಸಲಾಗಿದೆ. ಆದರೆ ಬಸ್ಸುಗಳ ಸಂಚಾರದಲ್ಲಿ ಜನರಿಂದ ನೀರವ ಪ್ರತಿಕ್ರಿಯೆ ನಿನ್ನೆ ಮೊದಲ ದಿನ ಕಂಡಿದೆ. ನಿರೀಕ್ಷಿತ ಪ್ರಮಾಣದಲ್ಲಿ ಜನರ ಬಸ್ ಸಂಚಾರ ಇರಲಿಲ್ಲ.
ಈ ಬಗ್ಗೆ ಮಾತನಾಡಿದ ಬಿಎಂಟಿಸಿ ವಕ್ತಾರರೊಬ್ಬರು, ನಿನ್ನೆ 1,500 ಬಸ್ಸುಗಳ ಸಂಚಾರ ನಡೆಸಲಾಗಿತ್ತು. ಪ್ರಯಾಣಿಕರನ್ನು ಸಂಚರಿಸುವಾಗ ನಿಂತುಕೊಳ್ಳಲು ಬಿಡಲಿಲ್ಲ. ಟಿಕೆಟ್ ಗೆ ಬದಲಾಗಿ ಪ್ರಯಾಣಿಕರು 70 ರೂಪಾಯಿಯ ದಿನದ ಪಾಸು ಅಥವಾ 300 ರೂಪಾಯಿಯ ವಾರದ ಪಾಸ್ ತೆಗೆದುಕೊಳ್ಳಬೇಕು. ಬಸ್ಸುಗಳನ್ನು ಮತ್ತು ಕೆಂಪೇಗೌಡ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಲಾಗಿದೆ. ಪ್ಲಾಟ್ ಫಾರಂಗಳಲ್ಲಿ ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್ ಗಳ ಪೈಂಟಿಂಗ್ ಮಾಡಲಾಗಿದೆ. ಅದರೊಳಗೆ ಪ್ರಯಾಣಿಕರು ನಿಂತು ಬಸ್ಸಿಗೆ ಹತ್ತಬೇಕು ಎಂದರು.
ಇನ್ನು ಕೆಎಸ್ ಆರ್ ಟಿಸಿ ಬಸ್ಸುಗಳು ಯಾವುದೇ ಊರಿಗೆ ಹೋಗುವುದಿದ್ದರೂ ಸಂಜೆ 7 ಗಂಟೆಯೊಳಗೆ ಅಲ್ಲಿಗೆ ತಲುಪಬೇಕು. ಕೊನೆಯ ಬಸ್ಸು ಹೊರಡುವುದು ಸಂಜೆ 7 ಗಂಟೆಗೆ. ಬೆಂಗಳೂರು-ಬೀದರ್ ಮತ್ತು ಕಲಬುರಗಿಗಳಂತಹ ಮಾರ್ಗಗಳಲ್ಲಿ ಬಸ್ಸುಗಳು ಮರುದಿನ ತಲುಪುತ್ತವೆ. ಮೈಸೂರಿನಲ್ಲಿ ಕೇವಲ 80 ನಾನ್ ಸ್ಟಾಪ್ ಬಸ್ ಸೇವೆಗಳನ್ನು ಆರಂಭಿಸಿದ್ದು ಬೆಂಗಳೂರು, ಕೊಡಗು, ಹಾಸನ, ಚಾಮರಾಜನಗರ, ಶಿವಮೊಗ್ಗ, ತುಮಕೂರು ಮತ್ತು ಮಂಗಳೂರುಗಳಿಗೆ ಹೋಗುತ್ತದೆ. ಸಿಟಿ ಬಸ್ ಸೇವೆಗಳಿಗೆ ಹೆಚ್ಚಿನ ಬೇಡಿಕೆಯಿಲ್ಲ. ಸಾಮಾನ್ಯ ದಿನಗಳಲ್ಲಿ 423 ಶೆಡ್ಯೂಲ್ ಗಳಲ್ಲಿ ಬಸ್ ಸಂಚರಿಸಿದರೆ ಈಗ 69 ಶೆಡ್ಯೂಲ್ ಗಳು ಮಾತ್ರ. ಹಾಸನದಲ್ಲಿ ಕೂಡ ಬಸ್ ಸೇವೆಗೆ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಶಿವಮೊಗ್ಗದಿಂದ ರಾಜ್ಯದ ವಿವಿಧ ಭಾಗಗಳಿಗೆ 120 ಬಸ್ಸುಗಳು ಸಂಚರಿಸಿದವು. ಚಿತ್ರದುರ್ಗದಿಂದ ಹೊರಟ 67 ಬಸ್ಸುಗಳಲ್ಲಿ ಬಹುತೇಕ ಬೆಂಗಳೂರಿಗೆ ಮತ್ತು ದಾವಣಗೆರೆ, ಹಾಸನ, ಹೊಸಪೇಟೆ ಮತ್ತು ಶಿವಮೊಗ್ಗಗಳಿಗೆ ಇದ್ದವು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇರಲಿಲ್ಲ.
ಹುಬ್ಬಳ್ಳಿಯಲ್ಲಿ ವಾಯವ್ಯ ಸಾರಿಗೆ ವಿಭಾಗದ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ್ ಕುಮಾರ್ ವಿ ಎಚ್, 1200 ಶೆಡ್ಯೂಲ್ ಗಳಲ್ಲಿ ಸಂಚಾರ ಮಾಡಲು ನಿನ್ನೆ ನಿರ್ಧರಿಸಲಾಗಿತ್ತಾದರೂ ಕೊನೆಗೆ 1,100 ಶೆಡ್ಯೂಲ್ ಮಾತ್ರ ನಿರ್ವಹಿಸಲಾಯಿತು. ಇಂದಿನಿಂದ ಜನರ ಬೇಡಿಕೆ ನೋಡಿಕೊಂಡು ಹೆಚ್ಚಿನ ಶೆಡ್ಯೂಲ್ ಮಾಡಲಾಗುವುದು ಎಂದರು. ಬೆಳಗಾವಿಯಲ್ಲಿ ಜನರು ಕೊರೋನಾ ಭಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮನೆ ಬಿಟ್ಟು ಹೊರ ಬರಲಿಲ್ಲ. ಬೆಳಗಾವಿಯಿಂದ ನಿನ್ನೆ ಎರಡು ಬಸ್ಸುಗಳು ಬೆಂಗಳೂರು, ವಿಜಯಪುರಕ್ಕೆ ಮೂರು ಬಸ್ಸುಗಳು ಹುಬ್ಬಳ್ಳಿ-ಧಾರವಾಡ ನಗರಗಳಿಗೆ ಸಂಚರಿಸಿದವು.
(ಮಾಹಿತಿ ಕೃಪೆ ಕನ್ನಡಪ್ರಭ....)

ಪಾರ್ಕ್'ಗಳಿಗೆ ವಾಯುವಿಹಾರಿಗಳ ದಂಡು: ಅಧಿಕಾರಿಗಳಿಗೆ ಶುರುವಾಯ್ತು ಹೊಸ ತಲೆನೋವು

ಬೆಂಗಳೂರು: ಕಳೆದ 55 ದಿನಗಳಿಂದ ಜಾರಿಯಲ್ಲಿದ್ದ ಲಾಕ್'ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಲಾಲ್'ಬಾಗ್, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಹಲವು ಉದ್ಯಾನವನಗಳಿಗೆ ಮಂಗಳವಾರ ಸಾವಿರಾರು ವಾಯುವಿಹಾರಿಗಳು ಲಗ್ಗೆಯಿಟ್ಟಿದ್ದು, ಈಗಾಗಲೇ ಕೊರೋನಾ ಸೋಂಕಿ ಹರಡದಂತೆ ಸಾಕಷ್ಟು ಕ್ರಮ ಕೈಗೊಳ್ಳುತ್ತಿರುವ ಅಧಿಕಾರಿಗಳಿಗೆ ಹೊಸ ತಲೆನೋವು ಶುರುವಾದಂತಾಗಿದೆ.
ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಎಲ್ಲಾ ಉದ್ಯಾನವನಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಸರ್ಕಾರ ಅವಕಾಶ ಕಲ್ಪಿಸಿಕೊಡಲಾಗಿದೆ.
ತೋಟಗಾರಿಕಾ ಇಲಾಖೆ ವ್ಯಾಪ್ತಿಯಲ್ಲಿರುವ ಲಾಲ್'ಬಾಗ್ ಮತ್ತು ಕಬ್ಬನ್ ಪಾರ್ಕ್ ಗಳಲ್ಲಿ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಉದ್ಯಾನವನಗಳಲ್ಲಿ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಕಂಡು ಬಂದಿತ್ತು. ಲಾಲ್ಬಾಗ್ ನಲ್ಲಿ ಆಟೋರಿಕ್ಷಾಗಳಿಗೆ ಲೌಡ್ಸ್ಪೀಕರ್ ಗಳನ್ನು ಅಳವಡಿಸಿ 9 ಗಂಟೆಗಳ ಬಳಿಕ ಉದ್ಯಾನವನ ತೊರೆಯುವಂತೆ ವಾಯುವಿಹಾರಿಗಳಿಗೆ ತಿಳಿಸಲಾಗುತ್ತಿತ್ತು. ಇದೇ ರೀತಿಯ ಕಬ್ಬನ್ ಪಾರ್ಕ್ ನಲ್ಲಿಯೂ ಮಾಡಲಾಗಿತ್ತು.
ತೋಟಗಾರಿಕ ಇಲಾಖೆ ವತಿಯಿಂದ ಎಲ್ಲಾ ನಾಗರಿಕರಿಗೂ ಥರ್ಮಲ್ ಸ್ಕ್ರೀನ್ ಪರೀಕ್ಷೆ ನಡೆಸಿ ಒಳ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಅಲ್ಲದೆ, ಸ್ಯಾನಿಟೈಸರ್ ವ್ಯವಸ್ಥೆ ಕೂಡ ಮಾಡಲಾಗಿತ್ತು. ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚನೆಗಳನ್ನು ನೀಡಲಾಗುತ್ತಿತ್ತು. ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳುವಂತೆ ಮನವರಿಕೆ ಮಾಡಲಾಗುತ್ತಿತ್ತು.
ವಾಯು ವಿಹಾರ ಮಾಡವುದಕ್ಕೆ ಸಾಧ್ಯವಾಗದ ಹಿರಿಯರು ಉದ್ಯಾನದಲ್ಲಿ ನಿಧಾರವಾಗಿ ಒಂದು ಸುತ್ತು ಹಾಸಿ ಪರಿಸರವನ್ನು ಆನಂದಿಸಿ ಮನೆಗೆ ವಾಪಸ್ ಆಗುತ್ತಿರುವುದು ಕಂಡು ಬಂದಿತ್ತು.
ಇನ್ನು ಕಬ್ಬನ್ ಪಾರ್ಕ್ ನಲ್ಲಿಯೂ ಇದೇ ರೀತಿಯ ಬೆಳವಣಿಗೆಗಳೇ ಕಂಡು ಬಂದಿತ್ತು. ಉದ್ಯಾನವನಕ್ಕೆ ಸುಮಾರು 4 ಸಾವಿರ ವಾಯುವಿಹಾರಿಗಳು ಸಾಲಿನಲ್ಲಿ ನಿಂತಿರುವುದು ಕಂಡು ಬಂದಿತ್ತು. ಸಾಲಿನಲ್ಲಿ ಕೆಲವರು ಮಾಸ್ಕ್ ಧರಿಸದೇ ಇರುವುದೂ ಕೂಡ ಕಂಡಿತ್ತು. ಈ ವೇಳೆ ಅಧಿಕಾರಿಗಳು ಅವರನ್ನು ಹಿಂದಕ್ಕೆ ಕಳುಹಿಸಿದ್ದರು.
ಈ ನಡುವೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿರುವ ಅಧಿಕಾರಿಗಳು ಸಂಜೆ ಸಮಯವನ್ನು 5-7ರ ಬದಲಿಗೆ 4.30-6.30ಕ್ಕೆ ಬದಲಿಸುವಂತೆ ತಿಳಿಸಿದ್ದಾರೆ.
ಸಂಜೆ ಸಮಯದಲ್ಲಿ ಜನರನ್ನು ನಿಯಂತ್ರಿಸುವುದು ಅತ್ಯಂತ ಕಠಿಣವಾಗಿರುತ್ತದೆ. ಲಾಲ್ ಬಾಗ್ ನಲ್ಲಿ ಪರಿಸ್ಥಿತಿ ನಿಭಾಯಿಸಬಹುದು. ಆದರೆ, ಕಬ್ಬನ್ ಪಾರ್ಕ್ ನಲ್ಲಿ 7 ಮುಖ್ಯದ್ವಾರಗಳಿರುವ ಪರಿಣಾಮ ಅತ್ಯಂತ ಕಠಿಣವಾಗಿರುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
(ಮಾಹಿತಿ ಕೃಪೆ ಕನ್ನಡಪ್ರಭ...)

ಅಂಫನ್ ಸೂಪರ್ ಸೈಕ್ಲೋನ್: ಚಂಡಮಾರುತ ಅಪ್ಪಳಿಸುವ ಮುನ್ನವೇ ಒಡಿಶಾದಲ್ಲಿ ಭಾರೀ ಮಳೆ, ಬಿರುಗಾಳಿಯ ಆರ್ಭಟ

ನವದೆಹಲಿ: 185 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿರುವ ಅಂಫನ್ ಸೂಪರ್ ಸೈಕ್ಲೋನ್ ಬುಧವಾರ ಮಧ್ಯಾಹ್ನ ಬಂಗಾಳ ಕರಾವಳಿಗೆ ಅಪ್ಪಳಿಸಲಿದ್ದು, ಈ ನಡುವಲ್ಲೇ ಒಡಿಶಾದ ಹಲವೆಡೆ ಈಗಾಗಲೇ ಭಾರೀ ಮಳೆ ಹಾಗೂ ಬಿರುಗಾಳಿಯ ಆರ್ಭಟ ಆರಂಭವಾಗಿದೆ.
ಒಡಿಶಾದ ಭದ್ರಕ್, ಪಾರಾದೀಪ್, ಬಾಲಾಸೋರ್, ಚಂಡೀಪುರ್ ಸೇರಿದಂತೆ ಹಲವೆಡೆ ಬೆಳಿಗ್ಗೆ 4 ಗಂಟೆಯಿಂದಲೇ ಮಳೆ ಆರಂಭವಾಗಿದೆ. ಅಂಪನ್ ಚಂಡಮಾರುತದ ಪೂರ್ವಭಾವಿಯಂತೆ ಪ್ರಬಲ ಗಾಳಿಯೂ ಬೀಸುತ್ತಿದೆ. ಸಮುದ್ರದ ಅಲೆಗಳು ಉಕ್ಕೇರುತ್ತಿದೆ.
ಕೆಲ ಕರಾವಳಿ ಪ್ರದೇಶಗಳಲ್ಲಿ 4-5 ಮೀಟರ್ ಎತ್ತರದ ಸಮುದ್ರದ ಅಲೆಗಳು ನಿರ್ಮಾಣವಾಗುತ್ತಿದ್ದು, ಕೆಲ ಮಟ್ಟದ ಪ್ರದೇಶಗಳಿಗೆ ಸಮುದ್ರದ ನೀರು ಉಕ್ಕೇರಿ ಪ್ರವಹಿಸುವ ಸಂಭವನೀಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈ ನಡುವೆ ಕೇಂದ್ರ ಸರ್ಕಾರ ಕೂಡ ಅಗತ್ಯ ನೆರವು ನೀಡುವುದಾಗಿ ಎರಡೂ ರಾಜ್ಯಗಳಿಗೆ ಭರವಸೆ ನೀಡಿದೆ.
ಇಂದು ಅಪ್ಪಳಿಸಲಿರುವ ಅಂಫನ್ ಚಂಡಮಾರುತದ ವೇಗ ಅದೃಷ್ಟವಶಾತ್ ಕೊಂತೆ ಕಡಿಮೆಯಾಗಲಿದ್ದು, ಈಗ ಅದು ಸೂಪರ್ ಸೈಕ್ಲೋನ್ ಬದಲು ಅತ್ಯಂತ ತೀವ್ರ ವೇಗದ ಚಂಡಮಾರುತವಾಗಿ ಬದಲಾಗಲಿದೆ ಅಧಿಕಾರಿಗಳು ತಿಳಿಸಿದ್ದಾರೆ.
ಗಂಟೆಗೆ 195-200 ಕಿಲೋಮೀಟರ್ ವೇಗದ ಬದಲು ಅಂಫನ್ ಚಂಡಮಾರುತ 155-165 ಕಿಲೋಮೀಟರ್ ವೇಗದಲ್ಲಿ ಬಂಗಾಳ ಹಾಗೂ ಒಡಿಶಾದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಗಳಿವೆ. ಈಗಾಗಲೇ ಮುಂಜಾಗ್ರತಾ ಕ್ರಮವಾಗಿ 3 ಲಕ್ಷ ಜನರನ್ನು ಸೈಕ್ಲೋನ್ ಶೆಲ್ಟರ್ ಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
1999ರಲ್ಲಿ ಒಡಿಶಾಕ್ಕೆ ಅಪ್ಪಳಿಸಿದ ಸೂಪರ್ ಸೈಕ್ಲೋನ್'ಗೆ 10,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು. ಹೀಗಾಗಿ ಆತಂಕ ಹೆಚ್ಚಿತ್ತು. ಮಂಗಳವಾರ ಮಧ್ಯಾಹ್ನದ ವೇಳೆಗೆ ಚಂಡಮಾರುತ ಕೊಂಚ ವೇಗ ಕಳೆದುಕೊಂಡಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಚಂಡಮಾರುತದ ಪರಿಣಾಮ ಉಭಯ ರಾಜ್ಯಗಳ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ.
(ಮಾಹಿತಿ ಕೃಪೆ ಕನ್ನಡ ಪ್ರಭ....)
ಸೈಕ್ಲೋನ್ ಅಪ್ಪಳಸುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ 1 ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರ ಮಾಡಲಾಗಿದೆ.

Tuesday, May 19, 2020

ಕಾಡುಪ್ರಾಣಿ ದಾಳಿ: 24 ಕುರಿಗಳ ಸಾವು

ಮರಿಯಮ್ಮನಹಳ್ಳಿ: ಕಾಡುಪ್ರಾಣಿ ದಾಳಿಗೆ 24 ಕುರಿಗಳು ಮೃತಪಟ್ಟಿದ್ದು ಸುಮಾರು 1.50 ಲಕ್ಷ ರೂಪಾಯಿಗಳಷ್ಟು ನಷ್ಟ ಸಂಭವಿಸಿದ ಘಟನೆ ಸಮೀಪದ ವೆಂಕಟಾಪುರ ಗ್ರಾಮದ ಹೊರವಲಯದಲ್ಲಿ ಜರುಗಿದೆ. ವೆಂಕಟಾಪುರ ಗ್ರಾಮದ ಅಂಬಣ್ಣ ತಂದೆ ತಳವಾರ್‌ ಭೀಮಪ್ಪ ಇವರಿಗೆ ಸೇರಿದ 10 ಕುರಿಗಳು, ಟಿ. ಪಂಪಾಪತಿ ತಂದೆ ದೊಡ್ಡ ಜಂಬಪ್ಪ ಇವರಿಗೆ ಸೇರಿದ 11 ಕುರಿಗಳು, ನಾಗಪ್ಪ ತಾಯಿ ಹನುಮವ್ವ ಇವರಿಗೆ ಸೇರಿದ 3 ಕುರಿಗಳು ಸಾವನ್ನಪ್ಪಿವೆ.
ಕುರಿಗಾಹಿಗಳು ದೊಡ್ಡ ಕುರಿಗಳನ್ನು ಮೇಯಿಸಲು ಹೋದ ವೇಳೆ ಹಟ್ಟಿಯಲ್ಲೇ ಬಿಟ್ಟಿದ್ದ 24 ಮರಿಕುರಿಗಳಿಗೆ ಸೋಮವಾರ ಹಟ್ಟಿಯ ಬಳಿ ಯಾರೂ ಕಾವಲು ಇಲ್ಲದ ವೇಳೆ ನಾಯಿ ಜಾತಿಗೆ ಸೇರಿದ ಕಾಡು ಪ್ರಾಣಿ ದಾಳಿಮಾಡಿ ಕುರಿಗಳ ಕತ್ತಿಗೆ ಕಚ್ಚಿ ರಕ್ತಹೀರಿದೆ. ಕೆಲಕುರಿಗಳ ಕತ್ತುತುಂಡರಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ ಕುರಿಗಳ ಸಾವಿನಿಂದ ಕುರಿಗಾಹಿಗಳಿಗೆ ಸುಮಾರು ಒಂದೂವರೆ ಲಕ್ಷರೂಪಾಯಿಗಳ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಘಟನಾಸ್ಥಳಕ್ಕೆ ಕಂದಾಯ ಇಲಾಖೆ ಉಪತಹಸೀಲ್ದಾರ್‌ರಾದ ಎಂ.ಲಾವಣ್ಯ, ಕಂದಾಯ ನಿರೀಕ್ಷಕ ಅಂದಾನಗೌಡ, ಗ್ರಾಮಲೆಕ್ಕಿಗರಾದ ಶಾರದಾ, ಡಣಾಪುರ ಪಶುವೈದ್ಯಾಧಿ  ಕಾರಿ ಡಾ| ಗುರುಬಸವರಾಜ, ಹೊಸಪೇಟೆಯ ಉಪವಲಯ ಅರಣ್ಯಾಧಿಕಾರಿ ಶಿವಕುಮಾರ್‌, ಜಿ. ಪೊಲೀಸ್‌ ಇಲಾಖೆ ಮುಖ್ಯಪೇದೆ ಮಂಜುನಾಥ ಪೇದೆ ಸಿದ್ದೇಶ್‌ ಭೇಟಿ ನೀಡಿ ಪರಿಶೀಲಿಸಿದರು. ಕಳೆದ ಎರಡು ತಿಂಗಳ ಹಿಂದೆ ಡಣಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಇದೇ ತರಹದ ಘಟನೆ ಜರುಗಿದ್ದು ಆಗ 47 ಕುರಿಗಳು ಮೃತಪಟ್ಟಿದ್ದವು. ಆ ಘಟನೆ ಮಾಸುವ ಮುನ್ನವೇ ಮತ್ತೂಂದು ದುರ್ಘ‌ಟನೆ ಜರುಗಿರುವುದು ಈ ಭಾಗದ ಕುರಿಗಾಹಿಗಳು ಆತಂಕಕ್ಕೊಳಗಾಗಿದ್ದಾರೆ.
(ಮಾಹಿತಿ ಕೃಪೆ ಉದಯವಾಣಿ....)

Sunday, May 17, 2020

BPL - ಆಧಾರ್ ಕಾರ್ಡ್ ಹೊಂದಿದ ರೈತರಿಗೆ ಇಲ್ಲಿದೆ ಗುಡ್ ನ್ಯೂಸ್

ಬಳ್ಳಾರಿ: ತೋಟಗಾರಿಕೆ ಇಲಾಖೆ ವತಿಯಿಂದ 2020-21ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಿವಿಧ ತೋಟಗಾರಿಕೆ ಹಾಗೂ ಮಣ್ಣು ಮತ್ತು ನೀರು ಸಂರಕ್ಷಣೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಇದಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಾವು, ಸಪೋಟ, ನುಗ್ಗೆ, ಅಂಜೂರ, ನೇರಳೆ, ಹುಣಸೆ, ನಿಂಬೆ, ಸೀಬೆ, ಕರಿಬೇವು, ತೆಂಗು ಹಾಗೂ ಇತರೆ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಮತ್ತು ವೈಯಕ್ತಿಕ ಕೃಷಿಹೊಂಡ ಬದು ನಿರ್ಮಾಣ, ಈರುಳ್ಳಿ ಶೇಖರಣೆ ಘಟಕ, ಕೊಳವೆಬಾವಿ ಮರುಪೂರ್ಣ, ಕೃಷಿಹೊಂಡ ಹಾಗೂ ಬದು ನಿರ್ಮಾಣ ಕಾಮಗಾರಿಗಳನ್ನು ವೈಯಕ್ತಿಕ ಫಲಾನುಭವಿ ಆಧಾರಿತವಾಗಿ ಅನುಷ್ಠಾಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಅರ್ಹ ಫಲಾನುಭವಿಗಳು ಸಣ್ಣ ಮತ್ತು ಅತಿಸಣ್ಣ ರೈತರು, ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡ, ಬಿ.ಪಿ.ಎಲ್ ಕಾರ್ಡ್‍ದಾರರು, ಐ.ಎ.ವೈ.
ಫಲಾನುಭವಿಗಳು ಅಗತ್ಯ ದಾಖಲಾತಿಗಳಾದ ಪ್ರಸ್ತುತ ಸಾಲಿನ ಪಹಣಿ, ಆಧಾರ್ ಕಾರ್ಡ್ ಜೆರಾಕ್ಸ್, ಉದ್ಯೋಗ ಚೀಟಿ ಜೆರಾಕ್ಸ್, ಚೆಕ್ ಬಂದಿ, 20 ರೂ. ಛಾಪಾ ಕಾಗದ, ಅನುಮೊದಿತ ಕ್ರಿಯಾಯೋಜನೆ ಪ್ರತಿ ಇತರೆ ಅಗತ್ಯ ದಾಖಲೆ ಸಮೇತ ಬಳ್ಳಾರಿ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಖುದ್ದಾಗಿ ಅಥವಾ ದೂರವಾಣಿ ಮುಖಾಂತರ ಸಂಪರ್ಕಿಸಿ ತಮ್ಮ ವಿವರಗಳನ್ನು ನೋಂದಾಯಿಸಿಕೊಳ್ಳಲು ಹಾಗೂ ನರೇಗಾ ಯೋಜನೆಯ ವಿವಿಧ ಸವಲತ್ತುಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕರು ತಿಳಿಸಿದ್ದಾರೆ.
ಬಳ್ಳಾರಿ ಮೊ:9742966767, ಕೋಳೂರು ಮೊ:9538581658, ಕುರುಗೋಡು ಮೊ:8105587313, ಮೋಕ ಮೊ:9740775129, ರೂಪನಗುಡಿ ಮೊ:7411210081, ತಾಂತ್ರಿಕ ಸಹಾಯಕರು ಮೊ:9164447511 ಕರೆಮಾಡಿ ತಮ್ಮ ವಿವರಗಳನ್ನು ನೋಂದಾಯಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
(ಮಾಹಿತಿ ಕೃಪೆ ಕನ್ನಡದುನಿಯಾ..)

ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ನಲ್ಲಾಪುರ ಗ್ರಾಮದ ರೈತನ ಗೋಳು