ನಿಡಗುಂದಿ(ವಿಜಯಪುರ): ಲಾಕ್‌ಡೌನ್ ಅವಧಿಯಲ್ಲಿ ಕಳೆದ ತಿಂಗಳು ಎಂಟು ಎಕರೆ ತೋಟದಲ್ಲಿ ಕಟಾವಿಗೆ ಬಂದಿದ್ದ ಚೆಂಡು ಹೂ ಮಾರಾಟ ಮಾಡಲು ಸಾಧ್ಯವಾಗದೇ ನಷ್ಟ ಅನುಭವಿಸಿದ್ದ ರೈತ ಆಂಜನೇಯ ಅವರು, ಆರು ಎಕರೆಯಲ್ಲಿ ಬೆಳೆದ ಕರಬೂಜ ಹಾಗೂ 10 ಎಕರೆಯಲ್ಲಿ ಬೆಳೆದ ಕಲ್ಲಂಗಡಿ ಹಣ್ಣುಗಳಿಗೆ ಕೂಡ ಸರಿಯಾಗಿ ಮಾರುಕಟ್ಟೆ ದೊರೆಯದೇ ಲಕ್ಷಾಂತರ ರೂಪಾಯಿ ನಷ್ಟ
ಅನುಭವಿಸಿದ್ದಾರೆ.
ಅನುಭವಿಸಿದ್ದಾರೆ.
ಪಟ್ಟಣದ ಹೊರವಲಯದ ಯಲಗೂರ ಕ್ರಾಸ್ ಬಳಿ 24 ಎಕರೆ ಕೃಷಿ ಭೂಮಿಯನ್ನು ಲಾವಣಿ ಪಡೆದು ಆಧುನಿಕ ತಂತ್ರಜ್ಞಾನ ಅಳವಡಿಸಿ, ಚೆಂಡು ಹೂ, ಹೂಕೋಸು, ಕಲ್ಲಂಗಡಿ, ಮೆಣಸಿನಕಾಯಿ ಮಿಶ್ರ ಬೆಳೆ ಬೆಳೆದಿದ್ದರು. ಈಗಾಗಲೇ ಚೆಂಡು ಹೂ ಹೊಲದಲ್ಲಿಯೇ ಬಾಡಿ ಹೋಗಿದೆ. ಮೆಣಸಿನಕಾಯಿ, ಹೂಕೋಸು ಮಾರುಕಟ್ಟೆಯಿಲ್ಲದೇ ಹಾಳಾಗಿವೆ.
'ಸದ್ಯ ಬೆಳೆದಿರುವ ಕರಬೂಜ ಹಾಗೂ ಕಲ್ಲಂಗಡಿ ಹಣ್ಣು ಕಟಾವಿಗೆ ಬಂದಿವೆ. ಆದರೆ ಸೂಕ್ತ ಮಾರುಕಟ್ಟೆ ಇಲ್ಲದೇ ನಷ್ಟವಾಗಿವೆ. ಕರಬೂಜದ ಬೆಲೆ ಈಗ ಕೆ.ಜಿ.ಯೊಂದಕ್ಕೆ ₹ 6ಕ್ಕೆ ಕುಸಿದಿದೆ. ಹಾಕಿದ ಬಂಡವಾಳವೂ ಗಿಟ್ಟಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.
'ಎರಡು ಲಾರಿ ಕರಬೂಜ, ಅಂದಾಜು 20 ಟನ್ ಹೈದರಾಬಾದ್‌ಗೆ ಕಳುಹಿಸಿದ್ದೆ. ಸೂಕ್ತ ಸಮಯದಲ್ಲಿ ಮಾರುಕಟ್ಟೆ ದೊರೆಯದ ಕಾರಣ ಒಂದು ಲಾರಿ ಕರಬೂಜ ಅಲ್ಲಿಯೇ ನಷ್ಟವಾಯಿತು. ಇನ್ನೊಂದು ಲಾರಿ ಕರಬೂಜ ಕೆ.ಜಿ ಗೆ ₹6 ರಂತೆ ಮಾರಿದೆ, ಅದು ಬಾಡಿಗೆ ಹಣಕ್ಕೂ ಸರಿಯಾಗಲಿಲ್ಲ. ಅಳಿದುಳಿದ ಕರಬೂಜ ಇಲ್ಲಿಯೇ ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದೇನೆ' ಎಂದರು.
'10 ಎಕರೆಯಲ್ಲಿ ಬೆಳೆದಿದ್ದ ಕಲ್ಲಂಗಡಿಗೆ ಕೂಡ ಸೂಕ್ತ ಮಾರುಕಟ್ಟೆ ದೊರೆಯದೇ ಹೊಲದಲ್ಲಿಯೇ ಕೊಳೆಯುತ್ತಿದೆ' ಎಂದು ಅವರು ವಿಷಾದಿಸಿದರು.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ