ಬೆಂಗಳೂರು, ಮೇ 22: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು ಪ್ರಮುಖ. ಬೆಂಗಳೂರಿನಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿತ್ತು. ಒಂದು ವೇಳೆ ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡರೆ ಅಂತವರಿಗೆ ದಂಡ ಹಾಕಲಾಗುತ್ತಿದೆ.
ಮೇ 2ರಿಂದ ಬಿಬಿಎಂಪಿ ದಂಡ ಹಾಕುತ್ತಿದ್ದು, ಮೊದಲ ಮೂರು ದಿನ ಒಂದು ಸಾವಿರ ರೂಪಾಯಿ ದಂಡ ಸಂಗ್ರಹಿಸಲಾಯಿತು. ಬಳಿಕ, ದಂಡದ ಬೆಲೆಯಲ್ಲಿ ಇಳಿಕೆ ಮಾಡಿಕೊಂಡಿತ್ತು. 1000 ರೂಪಾಯಿಯಿಂದ 200 ರೂಪಾಯಿ ನಿಗದಿ ಮಾಡಿತ್ತು.
ಇದೀಗ, ಮಾಸ್ಕ್ ಹಾಕದ ನಾಗರಿಕರಿಂದ ಬಿಬಿಎಂಪಿ ಒಟ್ಟು ಎಷ್ಟು ದಂಡ ಸಂಗ್ರಹಿಸಿದೆ ಎಂಬ ವಿಷಯವನ್ನು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಬಹಿರಂಗಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಯಾವ ವಲಯದಲ್ಲಿ ಹೆಚ್ಚು ದಂಡ ಹಾಕಲಾಗಿದೆ ಎಂದು ಕೂಡ ಮಾಹಿತಿ ಬಿಟ್ಟುಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸಂಗ್ರಹಿಸಿದ ಹಣ
ಒಟ್ಟು ಸಂಗ್ರಹಿಸಿದ ದಂಡ ಎಷ್ಟು?
ಒಟ್ಟು ಸಂಗ್ರಹಿಸಿದ ದಂಡ ಎಷ್ಟು?
ಬೆಂಗಳೂರಿನ ಒಟ್ಟು ಏಂಟು ವಲಯಗಳಿಂದ ಮಾಸ್ಕ್ ಧರಿಸದ ಕಾರಣಕ್ಕಾಗಿ 1715 ಜನರಿಗೆ ದಂಡ ಹಾಕಲಾಗಿದೆ. ಮೇ 5ನೇ ತಾರೀಕಿನಿಂದ ಮೇ 21ನೇ ತಾರೀಕಿನವರೆಗು ಮಾಸ್ಕ್ ಹಾಕದ ವ್ಯಕ್ತಿಗಳಿಂದ ಒಟ್ಟು 3,43,000 ಹಣವನ್ನು ಸಂಗ್ರಹಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಯಾವ ವಲಯದಲ್ಲಿ ಹೆಚ್ಚು ದಂಡ
ಬೆಂಗಳೂರು ಪೂರ್ವ ವಲಯದಲ್ಲಿ ಹೆಚ್ಚು
ಬೆಂಗಳೂರು ಪೂರ್ವ ವಲಯದಲ್ಲಿ ಹೆಚ್ಚು
ಬೆಂಗಳೂರಿನ ಏಂಟು ವಲಯಗಳ ಪೈಕಿ ಪೂರ್ವ ವಲಯದಲ್ಲಿ ಹೆಚ್ಚು ದಂಡ ಸಂಗ್ರಹಣೆ ಆಗಿದೆ. 1,16,800 ರೂಪಾಯಿ ಪೂರ್ವ ವಲಯದಲ್ಲಿ ವಸೂಲಿ ಮಾಡಲಾಗಿದೆ. ಪಶ್ಚಿಮ ವಲಯದಲ್ಲಿ 46,200, ದಕ್ಷಿಣ ವಲಯದಲ್ಲಿ 36,400, ಮಹಾದೇವಪುರ ವ್ಯಾಪ್ತಿ 55,400, ಆರ್ ಆರ್ ನಗರ ವ್ಯಾಪ್ತಿ 39,200, ಯಲಹಂಕ ವ್ಯಾಪ್ತಿ 8,400, ದಾಸರಹಳ್ಳಿ ವ್ಯಾಪ್ತಿ 19,400 ಹಾಗೂ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ 21,200 ರೂಪಾಯಿ ಸಂಗ್ರಹ ಮಾಡಲಾಗಿದೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ