WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Thursday, February 10, 2022

ರಾಜಕೀಯ ಮುಗ್ಧ ಮಕ್ಕಳ ಮನಸ್ಸಿನಲ್ಲಿ ವಿಷ ಬಿತ್ತುತ್ತಿದೆ: ಹಿಜಾಬ್ ಪ್ರಕರಣಕ್ಕೆ ಸುಮಲತಾ ಪ್ರತಿಕ್ರಿಯೆ

ಕರ್ನಾಟಕ ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆಯಲ್ಲಿದೆ. ಬೇಡದ ವಿಷಯಕ್ಕೆ ವಿಶ್ವದಾದ್ಯಂತ ಕರ್ನಾಟಕವನ್ನು ಚರ್ಚೆಗೀಡು ಮಾಡುವಂತೆ ಮಾಡಿದೆ. ಅದಕ್ಕೆ ಕಾರಣ ಮತ್ತೀನೇನು ಅಲ್ಲ 'ವಸ್ತ್ರ ರಾಜಕಾರಣ'. ಈ ದೇಶದಲ್ಲಿ ಯಾವೆಲ್ಲಾ ವಿಷಯಗಳನ್ನು ಇಟ್ಟುಕೊಂಡು, ಯಾರನ್ನು ಬಳಸಿಕೊಂಡು ರಾಜಕೀಯ ಮಾಡಬೇಕು ಅನ್ನುವುದು ಚೆನ್ನಾಗಿ ಗೊತ್ತಿದೆ.
ಅದರ ಭಾಗವೇ ಈ ಕೆಲಸಕ್ಕೆ ಬಾರದ ಹಿಜಾಬ್ Vs ಕೇಸರಿ ಶಾಲು. ಈ ಪ್ರಕರಣ ತಾರಕ್ಕೇರಿದೆ. ಸ್ಥಳೀಯ ಮಟ್ಟದಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದ ವರೆಗೂ ಈ ಹಿಜಾಬ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲಾಗುತ್ತಿದೆ.
ಹಿಜಾಬ್ ಪ್ರಕರಣ ಕರ್ನಾಟಕ ರಾಜ್ಯದಲ್ಲಿ ಶಾಂತಿ ಕದಡಿದೆ. ಎರಡು ಧರ್ಮಗಳ ನಡುವೆ ವಿಷ ಬೀಜವನ್ನು ಬಿತ್ತಿದೆ. ರಾಜಕೀಯ ದಾಳಕ್ಕೆ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಕೆಲವು ದಿನಗಳಿಂದ ಹೊತ್ತಿ ಉರಿಯುತ್ತಿರುವ ಈ ಹಿಜಾಬ್ ಪ್ರಕರಣದ ಬಗ್ಗೆ ನವದೆಹಲಿಯಲ್ಲಿ ಮಂಡ್ಯ ಲೋಕಸಭೆಯ ಸದಸ್ಯೆ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ಸುಮಲತಾ ಏನು ಹೇಳಿದ್ದಾರೆ? ತಿಳಿದುಕೊಳ್ಳಲು ಮುಂದೆ ಓದಿ.
ಮುಗ್ಧ ಮಕ್ಕಳಲ್ಲಿ ರಾಜಕೀಯ ವಿಷ
ಹಿಜಾಬ್ ಪ್ರಕರಣ ದಿನದಿಂದ ದಿನಕ್ಕೆ ಚರ್ಚೆಯಾಗುತ್ತಿದೆ. ಪ್ರತಿಭಟನೆಯಿಂದ ಆರಂಭವಾಗಿದ್ದ ಈ ಪ್ರಕರಣ ಈಗ ಹಿಂಸಾಚಾರಕ್ಕೆ ತಿರುಗಿದೆ. ಒಂದು ನಗರದಿಂದ ಆರಂಭ ಆಗಿದ್ದು, ಇಡೀ ದೇಶದೆಲ್ಲಡೆ ಹರಡುತ್ತಿದೆ. ಕೆಲವೇ ದಿನಗಳಲ್ಲಿ ಇಷ್ಟೊಂದು ವ್ಯಪಕವಾಗಿ ಹರಡುತ್ತಿರುವ ಹಿಜಾಬ್ ಪ್ರಕರಣದ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ. ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಸುಮಲತಾ ಮುಗ್ಧ ಮಕ್ಕಳಲ್ಲಿ ರಾಜಕೀಯ ವಿಷ ಬಿತ್ತಲಾಗುತ್ತಿದೆ ಎಂದು ಹೇಳಿದ್ದಾರೆ.
ಹಿಜಾಬ್ ಪ್ರಕರಣದಲ್ಲಿ ರಾಜಕೀಯ
ಸುಮಲತಾ ಎಎನ್‌ಐಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಹಿಜಾಬ್ ಪ್ರಕರಣ ಆರಂಭ ಆಗಲು ರಾಜಕೀಯದ ಪಾತ್ರ ಬಹಳ ದೊಡ್ಡದಿದೆ ಎಂದು ಹೇಳಿದ್ದಾರೆ. "ಈ ಪ್ರಕರಣದಲ್ಲಿ ರಾಜಕೀಯ ಪ್ರಮುಖ ಪಾತ್ರ ವಹಿಸಿದೆ ಎಂದು ಅನಿಸುತ್ತಿದೆ. ಮುಗ್ಧ ಮಕ್ಕಳಲ್ಲಿ ವಿಷ ಬಿತ್ತಲು ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ. ನನಗೆ ಈ ಪ್ರಕರಣದಲ್ಲಿ ಬಹಳಷ್ಟು ರಾಜಕೀಯವಿರುವುದು ಎದ್ದು ಕಾಣುತ್ತಿದೆ. " ಎಂದು ಯಾವುದೇ ರಾಜಕೀಯ ಪಕ್ಷದ ಕಡೆ ಬೊಟ್ಟು ಮಾಡದೆ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಿಯಾಂಕಾ ಗಾಂಧಿ ಬಗ್ಗೆ ಸುಮಲತಾ ಹೇಳಿದ್ದೇನು
ಹಿಜಾಬ್ ಪ್ರಕರಣ ತಾರಕಕ್ಕೇರುತ್ತಿದ್ದಂತೆ ಪ್ರಿಯಾಂಕಾ ಗಾಂಧಿ ತಮಗೆ ಬೇಕಾದ ವಸ್ತ್ರ ತೊಡುವುದು ನಮ್ಮ ಹಕ್ಕು ಎಂದು ಹೇಳಿದ್ದರು. ಈ ಹೇಳಿಕೆಗೂ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ. "ನಾವೇನು ಧರಿಸಬೇಕು ಅನ್ನುವುದು ನಮ್ಮ ಹಕ್ಕು. ಇದು ಖಂಡಿತವಾಗಿಯೂ ಒಪ್ಪುವಂತಹದ್ದೇ. ಆದರೆ, ನೀವು ಬಿಕಿನಿಯನ್ನು ಬೀಚ್ ಅಥವಾ ಸ್ವಿಮ್ಮಿಂಗ್ ಪೂಲ್‌ನಲ್ಲಿ ಧರಿಸುತ್ತೀರ. ಅದನ್ನು ಸ್ಕೂಲ್‌ನಲ್ಲಿ ಬಳಸಲು ಸಾಧ್ಯವಿಲ್ಲ ಅಲ್ಲವೇ. ನೀವು ಕೆಲಸ ಮಾಡುವ ಜಾಗದಲ್ಲಿ ಜೀನ್ಸ್ ಬಳಸಲು ಸಾಧ್ಯವಿಲ್ಲ. ಅಲ್ಲಿ ನೀವು ಕಂಪನಿ ಏನು ಹೇಳುತ್ತದೆಯೋ ಅದನ್ನು ಧರಿಸಬೇಕಾಗುತ್ತೆ. " ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನೆಗೆ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ.

ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದ ಸುದೀಪ್ ಅಭಿಮಾನಿ ಬಾಲಕಿ ರೆಚೆಲ್

ನಟ ಸುದೀಪ್ ಹೃದಯ ವೈಶಾಲ್ಯಕ್ಕೆ ಈಗಾಗಲೇ ಹಲವು ಸಾಕ್ಷಿಗಳಿವೆ. ಹಲವಾರು ಮಂದಿಗೆ ಸುದೀಪ್ ಸ್ವತಃ ತಾವೇ ಹಾಗೂ ತಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಹಾಯ ಮಾಡಿದ್ದಾರೆ. ಮಾಡುತ್ತಲೇ ಇದ್ದಾರೆ.
ಅಪಘಾತವೊಂದಕ್ಕೆ ತುತ್ತಾಗಿ ತೀವ್ರ ಸಂಕಷ್ಟದಲ್ಲಿದ್ದ ಬಾಲಕಿಗೆ ವಿಡಿಯೋ ಕರೆ ಮಾಡಿ ಸುದೀಪ್ ಮಾತನಾಡಿದ್ದರು.
ಚಿಕಿತ್ಸೆಗೆ ನೆರವು ನೀಡುವ ಭರವಸೆ ನೀಡಿದ್ದರು. ಆದರೆ ಆ ಬಾಲಕಿ ನಿಧನರಾಗಿದ್ದಾರೆ.
ಚೆನ್ನಾಗಿ ಆಟವಾಡಿಕೊಂಡು ಇದ್ದ ಪ್ರತಿಭಾವಂತ ಬಾಲಕಿ ಮೇಲೆ ಮರದ ಕೊಂಬೆ ಬಿದ್ದು ಬಾಲಕಿ ಕಳೆದ ಎರಡು ವರ್ಷದಿಂದಲೂ ನಡೆಯಲಾರದ ಸ್ಥಿತಿ ತಲುಪಿದ್ದು, ಹಾಸಿಗೆ ಹಿಡಿದ್ದಳು. ಆ ಪುಟ್ಟ ಬಾಲಕಿ ಹಾಗೂ ಪೋಷಕರು ಸುದೀಪ್ ಅಭಿಮಾನಿಗಳಾಗಿದ್ದರು, ಈ ವಿಷಯ ಸುದೀಪ್‌ಗೆ ತಿಳಿದು ಬಾಲಕಿಯ ಪೋಷಕರಿಗೆ ವಿಡಿಯೋ ಕರೆ ಮಾಡಿ ಸುದೀಪ್ ಮಾತನಾಡಿದ್ದರು.
ಅಸ್ವಸ್ಥಳಾಗಿದ್ದ ಬಾಲಕಿಯನ್ನು ಕಂಡು ಭಾವುಕರಾದ ಸುದೀಪ್ ಆಕೆಯ ಪೋಷಕರೊಂದಿಗೆ ಮಾತನಾಡಿದ್ದರು. ಹತ್ತು ವರ್ಷದ ಬಾಲಕಿ, ತರಗತಿಗಳಲ್ಲಿಯೂ ಚೆನ್ನಾಗಿ ಕಲಿಯುತ್ತಿದ್ದಳು. ಅದ್ಭುತವಾಗಿ ಹಾಡು, ಡ್ಯಾನ್ಸ್ ಮಾಡುತ್ತಿದ್ದಳು. ಆದರೆ ಅಚಾನಕ್ಕಾಗಿ ಹೀಗೆ ಆಗಿಬಿಟ್ಟಿತು ನಮಗೆ ದಿಕ್ಕೆ ತೋಚದಂತಾಗಿದೆ ಎಂದು ಕಣ್ಣೀರು ಹಾಕಿದ್ದರು ಆಕೆಯ ಪೋಷಕರು.
ಅಂದು ಸುದೀಪ್ ಜೊತೆ ಮಾತನಾಡಿದ್ದ ಬಾಲಕಿಯ ತಾಯಿ, ಮಗಳಿಗೆ ನೀವೆಂದರೆ ಬಹಳ ಪ್ರೀತಿಯಿತ್ತು, ಸುದೀಪ್ ಮಾಮ ಸುದೀಪ್ ಮಾಮ ಎಂದು ಕರೆಯುತ್ತಿದ್ದಳು. ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ನೀವು ಬರುವ ದಿನಕ್ಕೆಂದು ಕಾದಿದ್ದು ಕಾರ್ಯಕ್ರಮ ನೋಡುತ್ತಿದ್ದಳು. ಆಕೆ ಚೆನ್ನಾಗಿದ್ದಾಗ ಕೆಲವು ಬಾರಿ ನಿಮ್ಮ ಮನೆಯ ಬಳಿ ಬಂದು ಭೇಟಿಯಾಗಲು ಯತ್ನಿಸಿದ್ದೆವು. ಆದರೆ ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದರು. ಇದು ಸುದೀಪ್ ಅವರನ್ನು ಇನ್ನಷ್ಟು ಭಾವುಕಗೊಳಿಸಿತ್ತು.
ಕೂಡಲೇ ಕ್ಷಮೆ ಕೇಳಿದ್ದ ಸುದೀಪ್, ''ಕ್ಷಮಿಸಿ ನಾನು ಆ ಸಮಯದಲ್ಲಿ ಎಲ್ಲಿದ್ದೆನೋ ಗೊತ್ತಿಲ್ಲ. ನಿಮ್ಮನ್ನು ಭೇಟಿ ಮಾಡಲು ಆಗದಿರುವುದಕ್ಕೆ ಕ್ಷಮಿಸಿ'' ಎಂದಿದ್ದರು. ''ನನಗೆ ಕೆಲವರ ಪರಿಚಯ ಇದೆ, ಮಗುವಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸುತ್ತೇನೆ. ನೀವು ಹೆದರುವುದು ಬೇಡ ಕೈಲಾದ ಪ್ರಯತ್ನವನ್ನು ಮಾಡೋಣ'' ಎಂದು ಸುದೀಪ್ ಭರವಸೆ ಸಹ ನೀಡಿದ್ದರು. ಆದರೆ ಆ ಬಾಲಕಿ ಮೃತಳಾಗಿದ್ದಾಳೆ.

filmibeatkannada-epaper


 

ಬಸ್ಸಿನಲ್ಲಿ ಪ್ರಯಾಣಿಸಲು ಹುಂಜಕ್ಕೆ ಟಿಕೆಟ್ ನೀಡಿದ ಕಂಡಕ್ಟರ್...!

ಬಸ್ಸಿನಲ್ಲಿ ಪ್ರಯಾಣಿಸಲು ಹುಂಜವೊಂದಕ್ಕೆ ಬಸ್ ಟಿಕೆಟ್ ನೀಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ‌. ಸರ್ಕಾರಿ ಸ್ವಾಮ್ಯದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಟಿಎಸ್‌ಆರ್‌ಟಿಸಿ) ಬಸ್‌ನಲ್ಲಿ ಪ್ರಯಾಣಿಸಲು ಹುಂಜಕ್ಕೆ 30 ರೂ. ಚಾರ್ಜ್ ಮಾಡಲಾಗಿದೆ.
ಘಟನೆಯ ವಿವರ ನೋಡುವುದಾದರೆ, ಮಂಗಳವಾರ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ಪ್ರಯಾಣಿಕರೊಬ್ಬರು ಟಿಎಸ್‌ಆರ್‌ಟಿಸಿ ಬಸ್ಸಿನಲ್ಲಿ ಹುಂಜವನ್ನು ಹೊತ್ತೊಯ್ಯುತ್ತಿದ್ದರು.
ಆ ಪ್ರಯಾಣಿಕನಿಗೆ ಕಂಡಕ್ಟರ್ ಜಿ.ತಿರುಪತಿ ಅವರು ಸುಲ್ತಾನಾಬಾದ್‌ನಲ್ಲಿ ಟಿಕೆಟ್ ವಿತರಿಸಿದ್ದಾರೆ. ಆ ವ್ಯಕ್ತಿ‌ ಪೆದ್ದಪಲ್ಲಿಯಿಂದ ಕರೀಂನಗರಕ್ಕೆ ಟಿಕೆಟ್ ಪಡೆದಿದ್ದಾನೆ. ಪ್ರಯಾಣದ ಅರ್ಧದಾರಿಯಲ್ಲಿ ಆತ, ಹುಂಜವನ್ನು ಬಟ್ಟೆಯಲ್ಲಿ ಸುತ್ತಿ ಬಚ್ಚಿಟ್ಟಿರುವುದನ್ನು ಕಡಕ್ಟರ್ ಗಮನಿಸಿದ್ದಾರೆ.
ಹುಂಜವನ್ನು ಹೊತ್ತೊಯ್ಯುತ್ತಿದ್ದ ವ್ಯಕ್ತಿಯನ್ನ ಮೊಹಮ್ಮದ್ ಅಲಿ ಎನ್ನಲಾಗಿದೆ. ಕಂಡಕ್ಟರ್ ಜಿ. ತಿರುಪತಿಯವರು, ಸರ್ಕಾರಿ ಬಸ್‌ಗಳಲ್ಲಿ ಪಕ್ಷಿಗಳು ಅಥವಾ ಪ್ರಾಣಿಗಳು ಪ್ರಯಾಣಿಸಲು ಶುಲ್ಕ ನೀಡಬೇಕು ಎಂದು ಹೇಳಿ, 30ರೂ. ಪಾವತಿಸುವಂತೆ ಕೇಳಿದ್ದಾರೆ‌. ಆದರೆ ಅಲಿ ಇದಕ್ಕೆ ವಿರೋಧಿಸಿದ್ದಾನೆ. ಕಡೆಗೆ ಕಂಡಕ್ಟರ್ ಒತ್ತಾಯಕ್ಕೆ ಮಣಿದ ಆತ ಹುಂಜಕ್ಕು ಟಿಕೆಟ್ ಪಡೆದಿದ್ದಾನೆ. ಇವರಿಬ್ಬರ ನಡುವೆ ನಡೆದ ವಾಗ್ವಾದವನ್ನು ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ, ಪ್ರಯಾಣಿಕರೊಬ್ಬರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈಗ ವಿಡಿಯೋ ವೈರಲ್ ಆಗಿದ್ದು, ಇಡೀ ಘಟನೆ TSRTC ಅಧಿಕಾರಿಗಳ ಗಮನಕ್ಕೆ ಬಂದಿದೆ‌.‌
ಘಟನೆಯ ಬಗ್ಗೆ ಟಿಎಸ್‌ಆರ್‌ಟಿಸಿಯ ಗೋದಾವರಿಖನಿ ಡಿಪೋ ಮ್ಯಾನೇಜರ್ ವಿ.ವೆಂಕಟೇಶಂ ಮಾತನಾಡಿ, ಇಲಾಖೆ ನಿಯಮಗಳ ಪ್ರಕಾರ ಬಸ್‌ಗಳಲ್ಲಿ ಪ್ರಾಣಿಗಳನ್ನು ಕೊಂಡೊಯ್ಯಲು ಅವಕಾಶವಿಲ್ಲ. ಆದ್ದರಿಂದ ಕಂಡಕ್ಟರ್ ಪ್ರಯಾಣಿಕರನ್ನು ಹುಂಜದೊಂದಿಗೆ ಕೆಳಗಿಳಿಸಬೇಕಾಗಿತ್ತು. ಪ್ರಯಾಣಿಕರು ಹುಂಜವನ್ನು ಬಟ್ಟೆ ಸುತ್ತಿ ಬಚ್ಚಿಟ್ಟಿದ್ದರಿಂದ ಕಂಡಕ್ಟರ್ ಗಮನಿಸದೇ ಇರಬಹುದು. ಆದರೂ ಕಂಡಕ್ಟರ್ ನಿರ್ಲಕ್ಷಕ್ಕಾಗಿ ಮತ್ತು ಹುಂಜ ಸಾಗಿಸಲು ಪ್ರಯಾಣಿಕರಿಗೆ ಶುಲ್ಕ ವಿಧಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ, ಅವರನ್ನ ವಿಚಾರಣೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.

 

ಕನ್ನಡ ಪುಸ್ತಕ ಕೊಳ್ಳಲೊಂದು ಹೊಸ ತಾಣ - ಹರಿವು ಬುಕ್ಸ್

ಕರ್ನಾಟಕವಷ್ಟೇ ಅಲ್ಲ ಭಾರತದ ಮೂಲೆ ಮೂಲೆಯಲ್ಲಿರುವ ಓದುಗರಿಗೆ ಪುಸ್ತಕಗಳನ್ನು ಸುಲಭವಾಗಿ ತಲುಪಿಸಬೇಕು, ಹಾಗೆಯೇ ಪುಸ್ತಕ ಪ್ರಕಾಶನದ ಮೂಲಕ, ಕನ್ನಡದ ಮೇರು ಬರಹಗಾರರ ಪುಸ್ತಕಗಳನ್ನು ಪ್ರಕಟಿಸಬೇಕು ಎಂಬ ಗುರಿಯೊಂದಿಗೆ ಹುಟ್ಟಿಕೊಂಡಿರುವುದೇ ಹರಿವು ಬುಕ್ಸ್! ಈಗಾಗಲೇ ಡಬ್ಬಿಂಗ್ ಹಾಗೂ ಅನುವಾದದ ಕ್ಷೇತ್ರದಲ್ಲಿ ತನ್ನದೆ ಆದ ಛಾಪನ್ನು ಮೂಡಿಸಿರುವ ಹರಿವು ಕ್ರಿಯೇಷನ್ಸ್ ಪ್ರೈವೇಟ್, ಲಿಮಿಟೆಡ್‌ನ ಭಾಗವಾಗಿ ಹರಿವು ಬುಕ್ಸ್ ಕಳೆದ ಡಿಸೆಂಬರ್ 5 ರಿಂದ ತನ್ನ ಕೆಲಸ ಆರಂಭಿಸಿದೆ.
ಬೆಂಗಳೂರಿನ ಬಸವನಗುಡಿಯ ಡಿ.ವಿ.ಜಿ. ರಸ್ತೆಯ ಒಂದು ತುದಿಗೆ ಹೆಸರುವಾಸಿಯಾದ ವಿದ್ಯಾರ್ಥಿ ಭವನ ಸಿಕ್ಕರೆ ಅದೇ ರಸ್ತೆಯ ಇನ್ನೊಂದು ತುದಿಗೆ ಹರಿವು ಬುಕ್ಸ್ ಸಿಗುವುದು! ಅಂದರೆ ಡಿ.ವಿ.ಜಿ ರಸ್ತೆ ನಾಗಸಂದ್ರ ರಸ್ತೆಯಲ್ಲಿರುವ ಹರಿವು ಬುಕ್ಸ್‌ ಮಳಿಗೆಗೆ ನೀವು ಭೇಟಿ ನೀಡಿದರೆ, ಕಣ್ಣೆದುರಿಗೆ ಕಾಣುವುದು ಸುಸಜ್ಜಿತವಾದ ಸ್ಥಳಾವಕಾಶದಲ್ಲಿ, ನಿಗದಿತ ಕಪಾಟಿನಲ್ಲಿ ಜೋಡಿಸಿಟ್ಟ ಹೊತ್ತಿಗೆಗಳ ಸಾಲು.
ಓದುಗರ ಅಭಿರುಚಿಗೆ ಅನುಗುಣವಾಗಿ, ಆಸಕ್ತಿ ಇರುವ ವಿಷಯದ ಪುಸ್ತಕಗಳನ್ನು ಇಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಕಾದಂಬರಿ, ಕಥೆ, ಇತಿಹಾಸ, ನಾಡು-ನುಡಿ, ವಿಜ್ಞಾನ ಹಾಗೂ ತಂತ್ರಜ್ಞಾನ, ಮಕ್ಕಳ ಪುಸ್ತಕಗಳು, ಆರೋಗ್ಯ, ಜೀವನಶೈಲಿ, ಅಡುಗೆ, ಪುರಾಣ, ಆಧ್ಯಾತ್ಮ, ನಾಟಕಗಳು, ಜೊತೆಗೆ ಕಲಿಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷಾಗೆ ಬೇಕಾದ ಹಲವಾರು ಬಗೆಯ ಪುಸ್ತಕಗಳು ಇಲ್ಲಿ ದೊರೆಯುತ್ತಿವೆ.
ಒಂದೇ ಸೂರಿನಡಿಯಲ್ಲಿ ನೂರಾರು ಬಗೆಯ ಸಾವಿರಾರು ಪುಸ್ತಕಗಳು ಸಿಗಬೇಕೆನ್ನುವುದು ಹರಿವು ಬುಕ್ಸ್‌ನ ಉದ್ದೇಶ, ಅದರಂತೆಯೇ ತಮಗೆ ಬೇಕಾದ ಪುಸ್ತಕಗಳನ್ನು ಹುಡುಕಿ ಹೊರಟ ಪುಸ್ತಕ ಪ್ರಿಯರಿಗೆ ಇಲ್ಲಿ ಖಂಡಿತಾ ನಿರಾಸೆಯಾಗುವುದಿಲ್ಲ!
ಹಿಜಾಬ್ ವಿವಾದದ ಬಗ್ಗೆ ಇಂದು ಹೈಕೋರ್ಟ್ ಹೇಳಿದ್ದೇನು? | 

ಬೆರಳ ತುದಿಯಲ್ಲಿ ಬುಕ್ ಆರ್ಡರ್ ಮಾಡಿ

ನೀವು ಭಾರತದ ಯಾವ ಊರಿನಲ್ಲಿ ಇದ್ದರೂ ಸರಿ harivubooks.com ವೆಬ್‌ತಾಣಕ್ಕೆ ಭೇಟಿಕೊಟ್ಟರೆ ನೆಚ್ಚಿನ ಪುಸ್ತಕಗಳ ಸಾಲು ನಿಮ್ಮ ಕಣ್ಣೆದುರು ತೆರೆದುಕೊಳ್ಳುವುದು. ಬೇಕಾದ ಪುಸ್ತಕವನ್ನು ಆಯ್ದು ನಿಮ್ಮ ವಿಳಾಸ, ಫೋನ್‌ ನಂಬರ್ ಕೊಟ್ಟು ಆರ್ಡರ್ ಮಾಡಿದರೆ ಕೆಲವೇ ದಿನಗಳಲ್ಲಿ, ಚೆಂದದ ಪೊಟ್ಟಣದಲ್ಲಿ ನೀವು ಆರ್ಡರ್ ಮಾಡಿದ ಪುಸ್ತಕ ನಿಮ್ಮ ಮನೆಬಾಗಿಲಿಗೆ ಬರುವುದು.
ಹೊಸತನದಿಂದ ಕೂಡಿರುವ harivubooks.com ವೆಬ್ ತಾಣದಲ್ಲಿ ಸಾವಿರಾರು ಪುಸ್ತಕಗಳಿವೆ, ಓದುಗರ ಆಸಕ್ತಿಗೆ ತಕ್ಕಂತೆ ಅಲ್ಲಿ ಕಾದಂಬರಿ, ಐತಿಹಾಸಿಕ ಕಾದಂಬರಿ, ಥ್ರಿಲ್ಲರ್‌ ಪುಸ್ತಕಗಳು ಹೀಗ ಹಲವಾರು ಕವಲುಗಳು ಕಾಣ ಸಿಗುತ್ತವೆ. ಬೇಕಾದ ಪುಸ್ತಕದ ಹೆಸರನ್ನು ಬರೆದು ಹುಡುಕುವುದು ತುಂಬಾ ಸುಲಭ. ಒಟ್ಟಿನಲ್ಲಿ ಆನ್‌ಲೈನ್ ಮೂಲಕ ಪುಸ್ತಕ ಕೊಳ್ಳುವವರು ಒಮ್ಮೆ ಈ ವೆಬ್‌ಸೈಟಿಗೆ ಭೇಟಿಕೊಟ್ಟು ನೋಡಬಹುದು. ಆಗಾಗ ಸಿಗುವ ಕೊಡುಗೆಗಳು ನಿಮ್ಮ ಖರೀದಿಗೆ ನೆರವಾಗಬಹುದು.
ಮನುಜ ಬೆಳೆದಂತೆಲ್ಲ ಅವನ ಅರಿವು ಬೆಳೆಯಬೇಕು
ಮನುಜ ಬೆಳೆದಂತೆಲ್ಲ ಅವನ ಅರಿವು ಬೆಳೆಯಬೇಕು-ಬಲಿಯಬೇಕು. ಅರಿವಿನ ಆಳಕ್ಕೆ ಇಳಿದು, ಗೆಲುವಿನ ಏತ್ತರಕ್ಕೆ ಏರುವ ದಾರಿಯಲ್ಲಿ ಪುಸ್ತಕಗಳ ಪಾತ್ರ ಬಹಳ ಹಿರಿದು. ಹಿರಿಯ ಜೀವಗಳಿಂದ ಹಿಡಿದು, ಕಿರಿಯ ಕಿನ್ನರರವರೆಗೂ, ಎಲ್ಲರಿಗೂ ಸಲ್ಲುವಂತಹ, ನಿರೀಕ್ಷೆಗೆ ನಿಲುಕುವಂತಹ, ಮನಸ್ಸು ಮೆಲುಕು ಹಾಕುವಂತಹ, ಅವರರವರೇ ಆಯ್ಕೆ ಮಾಡಿಕೊಳ್ಳಬಹುದಾದಷ್ಟು ಸಮೃದ್ಧ ಪುಸ್ತಕ ರಾಶಿ ಒಂದು ಕಡೆ ಸಿಗುವಂತಿದೆ.
ಅಂತರಂಗವನ್ನು ಸ್ಫುಟವಾಗಿಸುವ ಪುಸ್ತಕಗಳ ಭಂಡಾರ ಹರಿವು ಪುಸ್ತಕ ಮಳಿಗೆಯಲ್ಲಿ ನಿಮಗೆ ಕಾಣಸಿಗುತ್ತವೆ. ಬಲ್ಲವರಿಂದ ಕೆಲವನ್ನು ಕಲಿತರೆ, ಇನ್ನಷ್ಟನ್ನು ಪುಸ್ತಕಗಳನ್ನು ಓದುತ್ತಾ ನಮ್ಮ ಅಂತಃಕರಣವನ್ನು ಜ್ಞಾನ-ವಿಜ್ಞಾನದ ಸಾಣೆಕಲ್ಲಿಗೆ ಒರೆಹಚ್ಚಿ ಕಲಿತು ತೀಕ್ಷ್ಣವಾಗಿಸಿಕೊಳ್ಳಬೇಕು. ಲೇಖಕರ ಮೋಡಿಗೆ, ಅವನ ಪಾತ್ರ ಪೋಷಣೆಯ ಗಾಢತೆಗೆ, ಕೆಲವೊಮ್ಮೆ ಅಮೋಘ ಎನ್ನಿಸುವ ಕಥಾಹಂದರಕ್ಕೆ ಮೋಡಿಗೊಳಗಾಗದ ಓದುಗರೇ ಇಲ್ಲ ಎನ್ನಬಹುದು. ಶಿಲೆಗೆ ತಣಿ ಎರೆದಂತೆ, ಕಲೆಗೆ ಮಂತ್ರಮುಗ್ಧವಾದಂತೆ, ಪುಸ್ತಕ ಪ್ರೀತಿಗೆ ನಾವೆಲ್ಲ ನೀರೆರೆದು ಅಕ್ಷರ ಕ್ರಾಂತಿಗೆ ನಮ್ಮದೇ ಕೊಡುಗೆ ನೀಡದೇ ಹೋದರೆ ಹೇಗೆ?
ಬಹುವಿಷಯಗಳಿಗೆ ಸಂಬಂಧಪಟ್ಟ ಪುಸ್ತಕಗಳು
ಬೆಳೆವ ಪೈರು ಮೊಳಕೆಯಲ್ಲಿ ಎನ್ನುವಂತೆ, ಹಿರಿಯರನ್ನು ನೋಡಿಯೇ ಕಿರಿಯರು ಯಾವುದೇ ಅಭ್ಯಾಸ-ಹವ್ಯಾಸಗಳನ್ನು ರೂಢಿ ಮಾಡಿಕೊಳ್ಳುವುದು. ಇದು ಕಾಲಾನುಕ್ರಮವಾಗಿ ನಡೆದುಕೊಂಡು ಬಂದಿರುವಂತಹುದು. ಮಕ್ಕಳಿಗೆ ಸರಳವಾಗಿ ಅರ್ಥವಾಗುವ, ಬುದ್ಧಿವಂತ ಪ್ರಶ್ನೆಗಳನ್ನು ಕೇಳುವ ಹಾಗೆ ಮಾಡುವ ಒಳ್ಳೊಳ್ಳೆ ಅಪರೂಪದ ಕನ್ನಡ ನೆಲದ ಕಥೆಗಳು, ನೀತಿ ಕತೆಗಳು, ತೆನಾಲಿ ರಾಮ, ಈಸೋಪನ, ಪಂಚತಂತ್ರ ಕತೆಗಳು, ಅಕ್ಬರ್‌-ಬೀರ್‌ಬಲ್‌ ಕಥಾನಕಗಳು, ಇಂಗ್ಲೀಶ್‌ನಿಂದ ಕನ್ನಡಕ್ಕೆ ಅನುವಾದಗೊಂಡು ಬಹುವಿಷಯಗಳಿಗೆ ಸಂಬಂಧಪಟ್ಟ ಪುಸ್ತಕಗಳು ಹರಿವು ಬುಕ್ಸ್‌ನಲ್ಲಿ ದೊರೆಯುತ್ತವೆ. ಮಕ್ಕಳಿಗೆ ರತ್ನನ ಕಸ್ತೂರಿಯ ಸರಿಗಮವನ್ನು, ಕವಿಶಿಷ್ಯರ ಹಾಡುಗಳನ್ನು ಕಲಿಸದೇ ಹೋದರೆ ಕನ್ನಡದ ತನ್ನತನದ ಪರಿಚಯವಾಗಿಸುವುದಾದರೂ ಹೇಗೆ ಹೇಳಿ?
ಹದಿಹರೆಯದ ಆವೇಗ, ಆಸೆ, ನಂಬಿಕೆ, ಬೇಡಿಕೆ, ಸ್ಥಿತಿ-ಸ್ಥಿತ್ಯಂತರಗಳ ಲಯದ ಪರಿಚಯ ಮಾಡಿಸುವ ಅದೆಷ್ಟೋ ಕೇಳಿದ-ಕೇಳದ ಪುಸ್ತಕ ರಾಶಿ ಹರಿವು ಬುಕ್ಸ್‌ ಪುಸ್ತಕ ಸಂಗ್ರಹದಲ್ಲಿವೆ. ಎಲ್ಲಾ ತಲೆಮಾರುಗಳ ಅಕ್ಷರಪ್ರೀತಿಗೆ ಪೋಷಣೆಯಾಗಿ, ಎಲ್ಲಾ ಕಾಲಮಾನದ ಜ್ಞಾನ ಭಂಡಾರದ ದೊಡ್ಡ ಗೂಡಾಗಿ ಹರಿವು ಬುಕ್ಸ್‌ ರೂಪತಾಳಿದೆ. ಕತ್ತಲಿನ ದಾರಿಯಲ್ಲಿ ದೀಪವ ಕಂಡ ಕಾಳಿದಾಸನಿಂದ ಹಿಡಿದು, ಈಗಿನ ಹೊಸ ಲೇಖಕರು ಹರಕೆ ಮಾಡಿಕೊಂಡಿರುವ ಅಸಂಖ್ಯ ಹೊತ್ತಿಗೆಗಳ ಗೂಡಾಗಿದೆ ಹರಿವು ಬುಕ್ಸ್‌.
ನಿಮಗೆ ಬೇಕಾದ ಪುಸ್ತಕವನ್ನು ಕ್ಷಣಮಾತ್ರದಲ್ಲಿ ಲಭ್ಯ
ಆಫ್‌ಲೈನ್‌ನಲ್ಲೇ ಆಗಲಿ, ಆನ್‌ಲೈನ್‌ನಲ್ಲೇ ಆಗಲಿ ನಿಮಗೆ ಬೇಕಾದ ಪುಸ್ತಕವನ್ನು ಕ್ಷಣಮಾತ್ರದಲ್ಲಿ ಕೊಳ್ಳಲು, ಓದಿನ ಜೇನಿನಂತಹ ಸವಿಯನ್ನು ಯಾವುದೇ ಅಡಚಣೆ ಇಲ್ಲದೆ ಸವಿಯಲು, ಕೊಡುಗೆಗಳನ್ನು ನಿಮ್ಮದಾಗಿಸಲು, ಅರಿವನ್ನು ಸಮೃದ್ಧವಾಗಿಸಲು ಹರಿವು ಬುಕ್ಸ್‌ಗೆ ಎಷ್ಟು ಬಾರಿ ಬೇಕಾದರೂ ಭೇಟಿ ನೀಡಿ ಪುಸ್ತಕಗಳನ್ನು ಕೊಂಡುಕೊಳ್ಳಿ.
ಮುಂದಿನ ಹೆಜ್ಜೆ - ಪ್ರಕಾಶನ: ಈಗಾಗಲೇ ಇರುವ ಪುಸ್ತಕದ ಭಂಡಾರವನ್ನು ಹಿಗ್ಗಿಸುವುದು ಒಂದು ಗುರಿಯಾದರೆ, ನಾಡಿನ ಹಿರಿಯ ಹಾಗೂ ಕಿರಿಯ ಬರಹಗಾರ ಪುಸ್ತಕಗಳನ್ನು ಪ್ರಕಟಿಸುವುದು ಹರಿವು ಬುಕ್ಸ್‌ನ ಮತ್ತೊಂದು ದೊಡ್ಡ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ವಿಷಯವಿರುವ, ಜನಮೆಚ್ಚುವಂತಹ ಪುಸ್ತಕಗಳು ಪ್ರಕಟವಾಗಲಿವೆ, ಅದಕ್ಕೆ ಬೇಕಾದ ತಯಾರಿಗಳು ಈಗಾಗಲೇ ಆಗುತ್ತಿವೆ ಎಂದು ಹರಿವು ಬುಕ್ಸ್ ನಡೆಸುತ್ತಿರುವ ರತೀಶ ರತ್ನಾಕರ ಒನ್‌ಇಂಡಿಯಾಕ್ಕೆ ತಿಳಿಸಿದರು.
Oneindia Kannada


 

Tuesday, February 8, 2022

ಪ್ರೌಢ ಶಾಲೆ, ಕಾಲೇಜುಗಳಿಗೆ 3 ದಿನ ರಜೆ ಘೋಷಿಸಿದ ಸಿಎಂ: ಶಾಂತಿ ಕಾಪಾಡಲು ಮನವಿ


ಬೆಂಗಳೂರು: ರಾಜ್ಯದ ಪ್ರೌಢ ಶಾಲೆ, ಕಾಲೇಜುಗಳಿಗೆ ಮೂರು ದಿನ ರಜೆ ಘೋಷಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಂತಿ-ಸೌಹಾರ್ದತೆ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಸಿಎಂ ಆದೇಶದಂತೆ ಬುಧವಾರದಿಂದ ಮೂರು ದಿನ ರಾಜ್ಯದಲ್ಲಿ ಪ್ರೌಢಶಾಲೆ, ಕಾಲೇಜುಗಳಿಗೆ ರಜೆ ಇರಲಿದೆ.
ಟ್ವಿಟರ್‌ನಲ್ಲಿ ಈ ಬಗ್ಗೆ ಪೋಸ್ಟ್‌ ಪ್ರಕಟಿಸಿರುವ ಅವರು, 'ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ಹಾಗೂ ಕರ್ನಾಟಕದ ಜನತೆಗೆ ಮನವಿ ಮಾಡುತ್ತೇನೆ. ಮುಂದಿನ ಮೂರು ದಿನಗಳ ಕಾಲ ಎಲ್ಲಾ ಪ್ರೌಢಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲು ನಾನು ಆದೇಶಿಸಿದ್ದೇನೆ. ಎಲ್ಲರೂ ಸಹಕರಿಸಬೇಕಾಗಿ ವಿನಂತಿ,' ಎಂದು ಅವರು ಬರೆದುಕೊಂಡಿದ್ದಾರೆ.
ಇದಕ್ಕೂ ಮೊದಲು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿಎಂ ಬೊಮ್ಮಾಯಿ, 'ನಾವು ಕರ್ನಾಟಕ ಹೈಕೋರ್ಟ್‌ನ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ವಿದ್ಯಾರ್ಥಿಗಳಲ್ಲಿ ಮನವಿ ಮಾಡುತ್ತೇನೆ. ವಿದ್ಯಾರ್ಥಿಗಳಲ್ಲಿ ಯಾವುದೇ ಘರ್ಷಣೆಗಳು ನಡೆಯದಂತೆ ನೋಡಿಕೊಳ್ಳಲು ಶಾಲಾ ಆಡಳಿತಕ್ಕೆ ನಿರ್ದೇಶನ ನೀಡಿದ್ದೇನೆ. ಪ್ರಚೋದನಕಾರಿ ಹೇಳಿಕೆಗಳನ್ನು ನೀಡದಂತೆ ಎಲ್ಲ ವ್ಯಕ್ತಿಗಳಿಗೆ ಮನವಿ ಮಾಡುತ್ತೇನೆ'
ಇತ್ತ, ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.
(ಮಾಹಿತಿ ಕೃಪೆ ಪ್ರಜಾ ವಾಣಿ)


 

Ayushman Bharat-Arogya Karnataka Card : `APL-BPL' ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿ



ದಾವಣಗೆರೆ : ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ (ಎಬಿಎಆರ್‍ಕೆ) ಇದು ಒಂದು ಸರ್ವರಿಗೂ ಆರೋಗ್ಯ ಸೇವೆ ಒದಗಿಸುವ ಸಂಯೋಜಿತ ಯೋಜನೆಯಾಗಿದ್ದು, ಜಿಲ್ಲೆಯಲ್ಲಿನ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿ ಹೊಂದಿರುವ ಎಲ್ಲ ಕುಟುಂಬಗಳ ಸದಸ್ಯರು ಎಬಿಎಆರ್‍ಕೆ ಯೋಜನೆ ಕಾರ್ಡ್ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್ ಮನವಿ ಮಾಡಿದ್ದಾರೆ.
ಎಬಿಎಆರ್‍ಕೆ ಯೋಜನೆಯಲ್ಲಿ ಒಟ್ಟು 1650 ಬಗೆಯ ಚಿಕಿತ್ಸೆಗಳನ್ನು ಒದಗಿಸಲಾಗುತ್ತದೆ. ಸಾಮಾನ್ಯ ದ್ವೀತಿಯ ಹಂತದ 291 ಚಿಕಿತ್ಸಾ ವಿಧಾನಗಳು, 254 ಕ್ಲಿಷ್ಟಕರ ದ್ವೀತಿಯ ಹಂತದ ಚಿಕಿತ್ಸಾ ವಿಧಾನಗಳು, 900 ತೃತೀಯ ಹಂತದ ಚಿಕಿತ್ಸಾ ವಿಧಾನಗಳು, 169 ತುರ್ತು ಚಿಕಿತ್ಸೆಗಳು, 36 ಉಪ ಚಿಕಿತ್ಸಾ ವಿಧಾನಗಳು ಸೇರಿ ಒಟ್ಟು 1650 ಬಗೆಯ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ.
ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಒಂದು ವರ್ಷಕ್ಕೆ ಒಂದು ಕುಟುಂಬಕ್ಕೆ ರೂ.5 ಲಕ್ಷ ವರೆಗೂ ಮತ್ತು ಎಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬಕ್ಕೆ ರೂ. 1.5 ಲಕ್ಷ (ಶೇಕಡಾ 30 ರಷ್ಟು) ವರೆಗೂ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುತ್ತದೆ.
ಯೋಜನೆಯ ಸದುಪಯೋಗ ಪಡೆಯಲು ಸಾರ್ವಜನಿಕರು ಚಾಲ್ತಿಯಲ್ಲಿರುವ ಪಡಿತರ ಕಾರ್ಡ್ (ಬಿಪಿಎಲ್ ಅಥವಾ ಎಪಿಎಲ್), ಆಧಾರ್ ಕಾರ್ಡ್ ಸಲ್ಲಿಸಿ ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಕಾರ್ಡ್ ಪಡೆಯಬಹುದಾಗಿರುತ್ತದೆ. ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರ ಹಾಗೂ ಗ್ರಾಮಪಂಚಾಯ್ತಿಯಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ರೂ. 10ನ್ನು ಪಾವತಿಸಿದಲ್ಲಿ ಎ4 ಹಾಳೆಯಲ್ಲಿ ಆಯುಷ್ಮಾನ್ ಕಾರ್ಡನ್ನು ಪಡೆಯಬಹುದಾಗಿದೆ. ಅದೇ ರೀತಿ ಹತ್ತಿರದ ದಾವಣಗೆರೆ ಒನ್, ಐಟಿಐ ಸೇವಾ ಕೇಂದ್ರ, ಮತ್ತು ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿರುವ ಗ್ರಾಮ ಒನ್ ಕೇಂದ್ರಗಳಲ್ಲಿ ರೂ. 35 ನ್ನು ಪಾವತಿಸಿದಲ್ಲಿ ಎಬಿಎಆರ್‍ಕೆ ಯೋಜನೆಯ ಪ್ಲಾಸ್ಟಿಕ್ ಕಾರ್ಡ್‍ಗಳನ್ನು ಪಡೆಯಬಹುದಾಗಿದೆ. ಈ ಯೋಜನೆಯ ಸೌಲಭ್ಯ ಪಡೆಯಲು ಕುಟುಂಬದ ಪ್ರತಿ ಸದಸ್ಯರು ಕೂಡ ಕಾರ್ಡ್ ಪಡೆಯಬೇಕು.
ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಆಯುಷ್ಮಾನ್ ಕಾರ್ಡ್ ಪಡೆದ ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಯುಷ್ಮಾನ್ ಕಾರ್ಡ್‍ಗಳನ್ನು ತೆಗೆದುಕೊಂಡು ಹೋಗಬೇಕು. ಒಂದು ವೇಳೆ ಆಯುಷ್ಮಾನ್ ಕಾರ್ಡ್ ಇಲ್ಲದಿದ್ದ ಪಕ್ಷದಲ್ಲಿ ರೋಗಿಗಳು ತಮ್ಮ ಪಡಿತರ ಕಾರ್ಡ್ ಮತ್ತು ಆಧಾರ್ ಕಾರ್ಡ್‍ನ್ನು ಸಲ್ಲಿಸಿ ಯೋಜನೆಯ ಸೌಲಭ್ಯ ಪಡೆಯಬಹುದು. ರೋಗಿಗಳು ಮೊದಲು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬೇಕು. ಈ ಯೋಜನೆಯಡಿ ಲಭ್ಯವಿರುವ ಚಿಕಿತ್ಸೆಗಳನ್ನು ಅಲ್ಲಿಯೇ ಪಡೆಯಬೇಕು. ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ ರೆಫೆರಲ್ ಕಾರ್ಡ್ (ಶಿಫಾರಸು ಪತ್ರ) ಪಡೆದುಕೊಂಡು ನೀವು ಇಚ್ಚಿಸುವ ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. 169 ಬಗೆಯ ತುರ್ತು ಚಿಕಿತ್ಸೆಗಳಿಗೆ ರೆಫೆರಲ್ ಕಾರ್ಡ್ ಇಲ್ಲದೇ ನೇರವಾಗಿ ನೊಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಪಡಿತರ ಕಾರ್ಡ್, ಆಧಾರ್ ಕಾರ್ಡ್‍ಗಳು ಈ ಯೋಜನೆಯ ಮಾನದಂಡಗಳಾಗಿರುತ್ತವೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಅಥವಾ ಟೋಲ್ ಫ್ರೀ ನಂಬರ್ 18004258330 ಕ್ಕೆ ಕರೆ ಮಾಡಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Mahithi krupe kannada news now...

ಮುಖ್ಯಮಂತ್ರಿ ಪರಿಹಾರ ನಿಧಿ'ಗಾಗಿ ಅರ್ಜಿ ಸಲ್ಲಿಸೋರಿಗೆ ಬಹುಮುಖ್ಯ ಮಾಹಿತಿ: 'ಈ ದಾಖಲೆ'ಗೆಳು ಸಲ್ಲಿಸೋದು ಕಡ್ಡಾಯ.! | CM Relief Fund


'ಮುಖ್ಯಮಂತ್ರಿ ಪರಿಹಾರ ನಿಧಿ'ಗಾಗಿ ಅರ್ಜಿ ಸಲ್ಲಿಸೋರಿಗೆ ಬಹುಮುಖ್ಯ ಮಾಹಿತಿ: 'ಈ ದಾಖಲೆ'ಗೆಳು ಸಲ್ಲಿಸೋದು ಕಡ್ಡಾಯ.! | CM Relief Fund

ಬೆಂಗಳೂರು: ಮುಖ್ಯಮಂತ್ರಿ ಪರಿಹಾರ ನಿಧಿಗಾಗಿ ( Chief Minister Relief Fund ) ರಾಜ್ಯದ ಅನೇಕರು ಜನಪ್ರತಿನಿಧಿಗಳ ಮೂಲಕ ಅರ್ಜಿಯನ್ನು ಸಲ್ಲಿಸಲಾಗುತ್ತಿದೆ. ಇದು ಹಿಂದಿನಿಂದಲು ನಡೆಯುತ್ತಲೇ ಬಂದಿದೆ. ಬಡವರು, ನಿರ್ಗತಿಕರು ಹಾಗೂ ನೊಂದ ಜನತೆಗೆ ಈ ಸೌಲಭ್ಯದಡಿ ಅನುಕೂಲ ಕೂಡ ಆಗುತ್ತಿದೆ.

ಆದ್ರೇ ಇತ್ತೀಚಿಗೆ ಸಲ್ಲಿಕೆಯಾಗುತ್ತಿರುವಂತ ಅರ್ಜಿಗಳ ( Application ) ಜೊತೆಗೆ ಅನೇಕ ದಾಖಲೆಗಳನ್ನು ( Documents ) ಮಿಸ್ ಮಾಡಲಾಗುತ್ತಿದೆ. ಇದರಿಂದ ಕಡತ ವಿಲೇವಾರಿಗೆ ತೊಂದರೆ ಉಂಟಾಗುತ್ತಿದೆ ಅಂತ ತಿಳಿಸಿದ್ದು, ತಪ್ಪದೇ ಕೆಲ ಕಡ್ಡಾಯ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.

ಈ ಕುರಿತಂತೆ ರಾಜ್ಯದ ಎಲ್ಲಾ ಸಚಿವ ಸಂಪುಟದ ಸಚಿವರು, ಲೋಕಸಭಾ, ರಾಜ್ಯ ಸಭಾ ಸದಸ್ಯರಿಗೆ, ವಿಧಾನಸಭಾ, ಪರಿಷತ್ ಸದಸ್ಯರಿಗೆ ಪತ್ರ ಬರೆದಿರುವಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ( CM Basavaraj Bommai ), ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪರಿಹಾರ ಕೋರಿ, ಸಚಿವರು, ವಿಧಾನಸಭಾ, ಪರಿಷತ್ ಸದಸ್ಯರು, ಲೋಕಸಬಾ, ರಾಜ್ಯಸಭಾ ಸದಸ್ಯರ ಕಚೇರಿಗಳಿಂದ ಅರ್ಜಿಯನ್ನು ಸಲ್ಲಿಸಲಾಗುತ್ತಿದೆ.

ಬಹುತೇಕ ಅರ್ಜಿಗಳು ಸಮರ್ಪಕವಲ್ಲದ ದಾಖಲೆಗಳೊಂದಿಗೆ ಸಲ್ಲಿಕೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಇದರಿಂದ ಶೀಘ್ರಗತಿಯಲ್ಲಿ ಕಡತ ವಿಲೇವಾರಿ ಮಾಡಲು ತೊಂದರೆಯಾಗುತ್ತಿದ್ದು, ಬಡವರು, ನಿರ್ಗತಿಕರು ಹಾಗೂ ನೊಂದ ಜನರಿಗೆ ಸಕಾಲದಲ್ಲಿ ಪರಿಹಾರ ನೀಡಲು ವಿಳಂಬವಾಗುತ್ತಿರುವುದರಿಂದ, ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಮುಖ್ಯ ಉದ್ದೇಶ ಈಡೇರಿದಂತೆ ಆಗುತ್ತಿಲ್ಲ.


ಈ ಹಿನ್ನಲೆಯಲ್ಲಿ, ತಾವು ಇನ್ಮುಂದೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುವಾಗ, ಕಡ್ಡಾಯವಾಗಿ ಈ ಕೆಳಕಂಡ ಅಗತ್ಯ ದಾಖಲಾತಿಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.

ಮುಖ್ಯಮಂತ್ರಿಗಳ ಪರಿಹಾರ ನಿಧಿ ಅರ್ಜಿ ಜೊತೆಗೆ ಸಲ್ಲಿಸಬೇಕಾದ ದಾಖಲೆಗಳು

  1. ಅರ್ಜಿದಾರರ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  2. ಅರ್ಜಿದಾರರ ಬಿಪಿಎಲ್, ಪಡಿತರ ಚೀಟಿ
  3. ಆಧಾರ್ ಗುರುತಿನ ಚೀಟಿ. ಖ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಆಗಿರಬೇಕು.
  4. ಅರ್ಜಿದಾರರು ಚಿಕಿತ್ಸೆ ಪಡೆದಿದ್ದಲ್ಲಿ, ಚಿಕಿತ್ಸೆ ಪಡೆದಿರುವ ಆಸ್ಪತ್ರೆಯ ಮೋಹರು ಮತ್ತು ಸಹಿಯೊಂದಿರುವ ಆಸ್ಪತ್ರೆಯ ಅಂತಿಮ ಮೂಲ ಬಿಲ್ಲು
  5. ಆಸ್ಪತ್ರೆಯ ಬಿಡುಗಡೆ ಸಾರಾಂಶ ಪತ್ರ
  6. ಚಿಕಿತ್ಸೆ ಪಡೆಯಬೇಕಾದಲ್ಲಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಅಂದಾಜು ಪಟ್ಟಿ
  7. ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಮೊದಲ ಪುಟದ ಜೆರಾಕ್ಸ್ ಪ್ರತಿ
  8. ಅರ್ಜಿದಾರರ ಅಥವಾ ಕುಟುಂಬ ವರ್ಗದ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.