WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Showing posts with label ಭಕ್ತಿ. Show all posts
Showing posts with label ಭಕ್ತಿ. Show all posts

Sunday, May 28, 2023

"ನಿತ್ಯ ಈ ಶ್ಲೋಕ, ಮಂತ್ರಗಳನ್ನು ಪಠಿಸಿ, ಅದರ ಚಮತ್ಕಾರ ನಿಮಗೆ ಗೊತ್ತಾಗಲಿದೆ"

ಶ್ರೀ ಗಣಪತಿ ಶ್ಲೋಕ
ಅಗಜಾನನ ಪದ್ಮಾರ್ಕಂ ಗಜಾನನಂ ಅಹರ್ನಿಶಂ |
ಅನೇಕದಂ ತಂ ಭಕ್ತಾನಾಂ ಏಕದಂತಮುಪಾಸ್ಮಹೇ ||

 

ಶ್ರೀ ಕೃಷ್ಣ ಶ್ಲೋಕ

ವಸುದೇವಸುತಂ ದೇವಂ ಕಂಸ ಚಾಣೂರ ಮರ್ದನಂ |
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ ||

ಶ್ರೀ ಶಾರದಾ ಶ್ಲೋಕ

ಯಾ ಕುಂದೇಂದುತುಷಾರಹಾರಧವಲಾ ಯಾ ಶುಭ್ರವಸ್ತ್ರಾವೃತಾ
ಯಾ ವೀಣಾವರದಂಡಮಂಡಿತಕರಾ ಯಾ ಶ್ವೇತಪದ್ಮಾಸನಾ |
ಯಾ ಬ್ರಹ್ಮಾಚ್ಯುತಶಂಕರಪ್ರಭೃತಿಭಿರ್ದೇವ್ಯೈ: ಸದಾ ಪೂಜಿತಾ
ಸಾ ಮಾಂ ಪಾತು ಸರಸ್ವತೀ ಭಗವತೀ ನಿ:ಶೇಷಜಾಡ್ಯಾಪಹಾ ||

ಶ್ರೀ ಗುರುಸ್ತುತಿ
ಗುರುರ್ಬ್ರಹ್ಮಾ ಗುರುರ್ವಿಷ್ಣು: ಗುರುರ್ದೇವೋ ಮಹೇಶ್ವರ: |
ಗುರುಸ್ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮ: ||

ನವಗ್ರಹ ಶ್ಲೋಕ
ನಮ: ಸೂರ್ಯಾಯ ಚಂದ್ರಾಯ ಮಂಗಲಾಯ ಬುಧಾಯ ಚ |
ಗುರುಶುಕ್ರಶ್ಯನಿಭ್ಯಶ್ಚ ರಾಹವೇ ಕೇತವೇ ನಮ: ||

ಶ್ರೀ ಲಕ್ಷ್ಮೀ ಶ್ಲೋಕ
ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |
ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮೀ ನಮೋಸ್ತುತೇ ||

 

ಶ್ರೀ ಲಕ್ಷ್ಮೀನರಸಿಂಹ ಶ್ಲೋಕ

 

ಶ್ರೀಮತ್ಪಯೋನಿಧಿನಿಕೇತನ ಚಕ್ರಪಾಣೇ
ಭೋಗೀಂದ್ರಭೋಗಮಣಿರಂಜಿತ-ಪುಣ್ಯಮೂರ್ತೇ |
ಯೋಗೀಶ ಶಾಶ್ವತ ಶರಣ್ಯ ಭವಾಬ್ಧಿಪೋತ
ಲಕ್ಷ್ಮೀನರಸಿಂಹ ಮಮ ದೇಹಿ ಕರಾವಲಂಬಮ್ ||

ಶ್ರೀ ದತ್ತಾತ್ರೇಯ ಶ್ಲೋಕ

ಜಟಾಧರಂ ಪಾಂಡುರಂಗಂ ಶೂಲಹಸ್ತ ಕೃಪಾನಿಧಿಂ |
ಸರ್ವರೋಗ ಹರಂ ದೇವಂ ದತ್ತಾತ್ರೇಯಮಹಂ ಭಜೇ ||

ಶ್ರೀ ರಾಘವೇಂದ್ರ ಶ್ಲೋಕ

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯ ಚ |ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||

ಶ್ರೀ ದೇವೀ ಶ್ಲೋಕ
ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣಿ ನಮೋಸ್ತುತೇ ||

ಶ್ರೀ ಶಿವ ಶ್ಲೋಕ

ಪ್ರಭೋ ಶೂಲಪಾಣಿ ವಿಭೋ ವಿಶ್ವನಾಥ
ಮಹಾದೇವಶಂಭೋ ಮಹೇಶ: ತ್ರಿನೇತ್ರ: |
ಶಿವಾಕಾಂತ: ಶಾಂತಸ್ಸ್ಮರಾರೇ ಪುರಾರೇ
ತ್ವದನ್ಯೋ ವರೇಣ್ಯೋ ನ ಮಾಸೇ ನ ಗಣ್ಯ: ||

ಶ್ರೀ ಶಿವ ಶ್ಲೋಕ

ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ |
ಅಮೃತೇಶಾಯ ಶರ್ವಾಯ ಮಹಾದೇವಾಯ ತೇ ನಮ: ||

ಶ್ರೀ ಆಂಜನೇಯ ಶ್ಲೋಕ

ಬುದ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಂ ಅರೋಗತಾ |
ಅಜಾಡ್ಯಂ ವಾಕ್ಪಟುತ್ವಂ ಚ ಹನೂಮತ್ ಸ್ಮರಣಾದ್‍ಭವೇತ್ ||

ಶ್ರೀ ರಾಮ ಶ್ಲೋಕ

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ ಸೀತಾಯಾ: ಪತಯೇ ನಮ: ||

ಶ್ರೀ ವಿಷ್ಣು ಶ್ಲೋಕ

ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ |
ವಿಶ್ವಾಧಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಂ ||
ಲಕ್ಷ್ಮೀಕಾಂತಂ ಕಮಲನಯನಮ್ ಯೋಗಿಭಿರ್ಧ್ಯಾನ ಗಮ್ಯಂ |
ವಂದೇ ವಿಷ್ಣುಂ ಭವಭಯ ಹರಂ ಸರ್ವಲೋಕೈಕನಾಥಂ ||

ಶ್ರೀ ಆಂಜನೇಯ ಶ್ಲೋಕ

ಮನೋಜವಂ ಮಾರುತತುಲ್ಯವೇಗಂ |
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ ||
ವಾತಾತ್ಮಜಂ ವಾನರಯೂಥ ಮುಖ್ಯಂ |
ಶ್ರೀರಾಮದೂತಂ ಶಿರಸಾ ನಮಾಮಿ ||

ಶ್ರೀ ದ್ವಾದಶ ಜ್ಯೋತಿರ್ಲಿಂಗ ಶ್ಲೋಕ

ಸೋಮನಾಥಂ ಮಹಾಕಾಲಂ ಮಲ್ಲಿಕಾರ್ಜುನ ಮೇವ ಚ
ಓಂಕಾರೇಶಂ ವೈದ್ಯನಾಥಂ ನಾಗನಾಥಂ ತ್ರ್ಯಂಬಕಂ |
ಕೇದಾರೇಶಂ ವಿಶ್ವನಾಥಂ ರಾಮನಾಥಂ ಇಲೇಶ್ವರಂ
ಭೀಮಾಶಂಕರ ನಾಮಾನಂ ದ್ವಾದಶಾದ್ಯಾ: ಪ್ರಕೀರ್ತಿತಾ: ||

ಮಹಾ ಮೃತ್ಯುಂಜಯ ಮಂತ್ರ

ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ |
ಉರ್ವಾರುಕಮಿವ ಬಂಧನಾತ್ ಮೃತ್ಯೋರ್ಮುಕ್ಷೀಯಮಾಮೃತಾತ್ ||

ಶ್ರೀ ರಾಮ ಶ್ಲೋಕ

ವೈದೇಹಿಸಹಿತಂ ಸುರದ್ರುಮತಲೇ ಹೈಮೇ ಮಹಾಮಂಟಪೇ
ಮಧ್ಯೇ ಪುಷ್ಪಕಮಾಸನೇ ಮಣಿಮಯೇ ವೀರಾಸನೇ ಸುಸ್ಥಿತಮ್ |
ಅಗ್ರೇ ವಾಚಯತಿ ಪ್ರಭಂಜನಸುತೇ ತತ್ತ್ವಂ ಮುನಿಭ್ಯ: ಪರಂ
ವ್ಯಾಖ್ಯಾಂತಂ ಭರತಾದಿಭಿ: ಪರಿವೃತಂ ರಾಮಂ ಭಜೇ ಶ್ಯಾಮಲಮ್ ||

ಶಾಂತಿ ಮಂತ್ರಗಳು

ಓಂ ಅಸತೋಮಾ ಸದ್ಗಮಯ | ತಮಸೋಮಾ ಜ್ಯೋತಿರ್ಗಮಯ | ಮೃತ್ಯೋರ್ಮಾ ಅಮೃತಂ ಗಮಯ |

|| ಓಂ ಶಾಂತಿ: ಶಾಂತಿ: ಶಾಂತಿ: ||

ಓಂ ಪೂರ್ಣಮದ: ಪೂರ್ಣಮಿದಂ | ಪೂರ್ಣಾತ್ ಪೂರ್ಣಮುದಚ್ಯತೇ |

ಪೂರ್ಣಸ್ಯ ಪೂರ್ಣಮಾದಾಯ | ಪೂರ್ಣಮೇವಾವಶಿಷ್ಯತೇ ||

|| ಓಂ ಶಾಂತಿ: ಶಾಂತಿ: ಶಾಂತಿ: ||

ಓಂ ಸಹನಾವವತು | ಸಹನೌ ಭುನಕ್ತು | ಸಹವೀರ್ಯಂಕರವಾವಹೈ |

ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ |

|| ಓಂ ಶಾಂತಿ: ಶಾಂತಿ: ಶಾಂತಿ: ||

ಓಂ ಶಂ ನೋ ಮಿತ್ರ: ಶಂ ವರುಣ: | ಶಂ ನೋ ಭವತ್ವರ್ಯಮಾ | ಶಂ ನ ಇಂದ್ರೋ ಬೃಹಸ್ಪತಿ: | ಶಂ ನೋ ವಿಷ್ಣುರುರುಕ್ರಮ: | ನಮೋ ಬ್ರಹ್ಮಣೇ | ನಮಸ್ತೇ ವಾಯೋ | ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ | ತ್ವಮೇವ ಪ್ರತ್ಯಕ್ಷಂ ಬ್ರಹ್ಮವದಿಷ್ಯಾಮಿ | ಋತಂ ವದಿಷ್ಯಾಮಿ | ಸತ್ಯಂ ವದಿಷ್ಯಾಮಿ | ತನ್ಮಾಮವತು ತದ್ವಕ್ತಾರಮವತು | ಅವತು ಮಾಮ್ | ಅವತು ವಕ್ತಾರಮ್ ||

|| ಓಂ ಶಾಂತಿ: ಶಾಂತಿ: ಶಾಂತಿ: ||

ಓಂ ಭದ್ರಂ ಕರ್ಣೇಭಿ: ಶೃಣುಯಾಮ ದೇವಾ | ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾ: | ಸ್ಥಿರೈರಂಗೈ ಸ್ತುಷ್ಟುವಾಗಂ ಸಸ್ತನೂಭೀರ್ವ್ಯಶೇಮ ದೇವಹಿತಂ ಯದಾಯು: | ಸ್ವಸ್ತಿ ನ ಇಂದ್ರೋ ವೃದ್ಧಶ್ರವಾ: | ಸ್ವಸ್ತಿ ನ: ಪೂಷಾ ವಿಶ್ವವೇದಾ: | ಸ್ವಸ್ತಿ ನಸ್ತಾರ್ಕ್ಷೋ ಅರಿಷ್ಟನೇಮಿ: | ಸ್ವಸ್ತಿನೋ ಬೃಹಸ್ತಿರ್ದದಾತು |

|| ಓಂ ಶಾಂತಿ: ಶಾಂತಿ: ಶಾಂತಿ: ||



 

Friday, September 3, 2021

ದೇವಾಲಯದಲ್ಲಿ ನಾವು ಮಾಡಬಾರದ ಅಪಚಾರಗಳು

 


" *ದೇವಾಲಯದಲ್ಲಿ ನಾವು ಮಾಡೋ ಅಪರಾಧಗಳು*..


೧. ದೇವರ ಮಂದಿರಕ್ಕೆ ಕೈಕಾಲು ತೊಳೆಯದೇ ಪ್ರವೇಶ ಮಾಡುವುದು.


೨. ಭಗವಂತನ ಮಂದಿರಕ್ಕೆ ಸಾಕ್ಸ್ ಹಾಕಿಕೊಂಡು ಪ್ರವೇಶ ಮಾಡುವುದು.


೩. ಭಗವಂತನ ಮಂದಿರಕ್ಕೆ ಪ್ರವೇಶಮಾಡುವಾಗ ಶೂ,ಸಾಕ್ಸ್ ಕೈಯಿಂದ ತೆಗೆದು,ಕೈ ತೊಳೆಯದೇ ಪ್ರವೇಶ ಮಾಡುವುದು.


೪. ಭಗವಂತನ ಮಂದಿರಕ್ಕೆ ಸಿಗರೇಟು, ಬೀಡಾ, ಸಾರಾಯಿ, ಮಾಂಸ ಸೇವಿಸಿ ಪ್ರವೇಶಿಸುವುದು.


೫. ಭಗವಂತನ ಮಂದಿರಕ್ಕೆ ಚರ್ಮದ ಬೆಲ್ಟ್, ಚಪ್ಪಲಿ, ಕೈ ಚೀಲ ಧರಿಸಿ ಕೊಂಡು ಹೋಗುವುದು.


೬. ಭಗವಂತನ ಎದುರು ಸನ್ಮಾನ ಮಾಡಿಸಿಕೊಳ್ಳುವುದು.


೭. ಭಗವಂತನಿಗೆ ಕೆಟ್ಟ/ಕೊಳೆತ/ಒಣಗಿದ ಹಣ್ಣುಗಳನ್ನು ಅರ್ಪಿಸುವುದು.


೮. ಭಗವಂತನ ಮಂದಿರದಲ್ಲಿ ಭಕ್ತರಿಂದ ಹಣ ಪಡೆದು ಕಳಪೆ/ಕಡಿಮೆ ಗುಣ ಮಟ್ಟದ ಪೂಜಾ ಸಾಮಗ್ರಿಗಳನ್ನು ದೇವರಿಗೆ ಅರ್ಪಿಸುವುದು.


೯. ದೇವಾಲಯದ ಹೊಸ್ತಿಲು,ಕಿಟಕಿಗಳಲ್ಲಿ ಕರ್ಪೂರ ಹಚ್ಚುವುದು.


೧೦. ದೇವಾಲಯಕ್ಕೆ ಅರ್ಪಿಸಿದ ಸಾಮಾಗ್ರಿಗಳನ್ನು ಅಂಗಡಿಗಳಿಗೆ ಮಾರಿ ಮತ್ತೆ ಅದೇ ಸಾಮಾಗ್ರಿಗಳನ್ನು ಬೇರೆ ಭಕ್ತರ ಮೂಲಕ ದೇವರಿಗೆ ಅರ್ಪಿಸುವುದು.


೧೧. ದೇವಾಲಯದ ಆಸ್ತಿಗಳನ್ನು ಪರಭಾರೆ ಮಾಡುವುದು. ದೇವರ ಹುಂಡಿ, ಕಾಣಿಕೆ ಹಣ ದುರುಪಯೋಗ ಮಾಡಿಕೊಳ್ಳುವುದು.


೧೨. ದೇವರಿಗೆ ಸಂಬಂಧಿಸಿದ ಉತ್ಸವ, ರಥಯಾತ್ರೆಗಳಲ್ಲಿ ಭಾಗವಹಿಸದಿರುವುದು ಮತ್ತು ಅವುಗಳ ದರ್ಶನ ಪಡೆಯದಿರುವುದು..


೧೩. ಭಗವಂತನ ಸಮ್ಮುಖ ಹೋಗಿ ದೇವರ ದರ್ಶನ ಪಡೆಯದಿರುವುದು.


 ೧೪. ಒಂದೇ ಹಸ್ತದಿಂದ ನಮಸ್ಕರಿಸುವುದು.


೧೫. ಭಗವಂತನ ಸಮ್ಮುಖದಲ್ಲಿ ನಿಂತಂತೆಯೇ ಪ್ರದಕ್ಷಿಣೆ ಮಾಡುವುದು. ನೆಲಕ್ಕೆ ಬಾಗಿ ನಮಸ್ಕಾರ ಮಾಡದೇ ಇರುವುದು.


೧೬. ದೇವಾಲಯಕ್ಕೆ ಪ್ರದಕ್ಷಿಣೇ ಬರದೇ ಇರುವುದು..


೧೭. ಭಗವಂತನ ಎದುರು ಕಾಲುಚಾಚಿ ಕುಳಿತುಕೊಳ್ಳುವುದು ಮತ್ತು ಕುರ್ಚಿ , ಆಸನಗಳ ಮೇಲೆ ಕುಳಿತುಕೊಳ್ಳುವುದು..


೧೮. ಭಗವಂತನ ಸಮ್ಮುಖ ಭೋಜನ ಮಾಡುವುದು..


೧೯. ದೇವಾಲಯದಲ್ಲಿ ಅಸತ್ಯ ನುಡಿಯುವುದು ಮತ್ತು ಅನಗತ್ಯ ವಿಚಾರ ಮಾತಾಡುವುದು..


೨೦. ದೇವಾಲಯದಲ್ಲಿ ಜೋರಾಗಿ ಮಾತಾಡೋದು , ಅಪಭ್ರಂಶ ಮಾತನಾಡುವುದು..


೨೧. ದೇವಾಲಯದಲ್ಲಿ ಬೇರೆಯವರಿಗೆ ಕೆಡುಕನ್ನು ಬಯಸುವುದು..


೨೨. ವಸ್ತುಗಳನ್ನು ದೇವಾಲಯಕ್ಕೆ ಕೊಟ್ಟು , ದಾನಿಗಳು ಅಂತ ತಮ್ಮ ಹೆಸರು ಹಾಕಿಸಿಕೊಳ್ಳುವುದು..


೨೩. ಭಗವಂತನ ಸಮ್ಮುಖ ಆಕಳಿಸುವುದು ಮತ್ತು ಅಧೋವಾಯುವನ್ನು ತ್ಯಜಿಸುವುದು..


೨೪. ಸಾಮರ್ಥ್ಯವಿದ್ದರೂ ಯಾವುದೇ ಸೇವೆ ಮಾಡದೇ ಇರುವುದು..


೨೫. ಯಾವ ಋತುವಿನ ಫಲವೇ ಆಗಲಿ ದೇವರಿಗೆ ಅರ್ಪಿಸದೇ ಸೇವಿಸುವುದು..


೨೬. ಭಗವಂತನ ಸಮ್ಮುಖ ದೇವರಿಗೆ ನಮಸ್ಕರಿಸದೇ ಅನ್ಯರಿಗೇ ನಮಸ್ಕರಿಸುವುದು..


೨೭.  ನಿಮ್ಮನ್ನು ನೀವೇ ಪ್ರಶಂಸೆ ಮಾಡಿಕೊಳ್ಳುವುದು..


೨೮. ದೇವರ ಪ್ರಸಾದ ಸ್ವೀಕರಿಸದೇ ಬರುವುದು.


೨೯. ಯಾವುದೇ ದೇವರನ್ನು ನಿಂದಿಸುವುದು..


೩೦.  ಭಗವಂತನ ವಿಗ್ರಹಕ್ಕೆ ಬೆನ್ನು ತೋರಿಸಿ ಕೂಡುವುದು..


೩೧. ಗುರುಗಳ ಸ್ಮರಣೆ ಮಾಡದೇ ಇರುವುದು..


೩೨. ಅಶೌಚವಿದ್ದಾಗ ದೇವಾಲಯ ಪ್ರವೇಶ ಮಾಡುವುದು..


೩೩. ದೇವಾಲಯದಲ್ಲಿ ಕಣ್ಣು, ಕಿವಿ, ಮೂಗುಗಳಲ್ಲಿ ಬೆರಳು ಹಾಕಿ ಕಸ ತೆಗೆಯುವುದು.


೩೪. ದೇವಾಲಯದಲ್ಲಿ ಉಗುರು ಕಡಿಯುವುದು, ಕತ್ತರಿಸುವುದು.


೩೫. ದೇವಾಲಯದಲ್ಲಿ ನೀಡಿದ ಪ್ರಸಾದ ರೂಪದ ಹಣ್ಣು, ಕಾಯಿ, ಹೂವು, ಇತ್ಯಾದಿಗಳನ್ನು ಅಲ್ಲಿಯೇ ದೊಡ್ಡಸ್ತಿಕೆಯಿಂದ ಬೇರೆಯವರಿಗೆ, ಭಿಕ್ಷುಕರಿಗೆ ನೀಡುವುದು.


೩೬. ದೇವಾಲಯದ ಹೊರಗೆ ಕುಳಿತಿರುವ ಭಿಕ್ಷುಕರಿಗೆ ಭಿಕ್ಷೆ ನೀಡಿ ಭಿಕ್ಷಾ ವೃತ್ತಿಯನ್ನು ಉತ್ತೇಜಿಸುವುದು.


೩೭. ದೇವಾಲಯದ ದರ್ಶನದ ಅವಧಿ ಮುಗಿದಿದ್ದರೂ ಬಾಗಿಲು ತೆರೆಸಿ ದರ್ಶನ ಪಡೆಯುವುದು.


೩೮. ದೇವಾಲಯದ/ಧಾರ್ಮಿಕ ಸಂಸ್ಥೆಗಳ ಅಭಿವೃಧ್ದಿ ಕಾರ್ಯಗಳಿಗೆ ಅಡ್ಡಿ ಬರುವುದು.


೩೯. ದೇವರ ಸನ್ನಿಧಾನದಲ್ಲಿ ಪೂಜೆಗಳು ನಡೆಯುವಾಗ ಮುಂದಿನ ಸ್ಥಾನಗಳನ್ನು ಆಕ್ರಮಿಸಿ ಬೇರೆ ಭಕ್ತಾದಿಗಳಿಗೆ ದರ್ಶನಕ್ಕೆ ಅಡ್ಡಿಪಡಿಸುವುದು.


೪೦. ದೇವಾಲಯದ ಗರ್ಭಗುಡಿಯ ಮೂರ್ತಿಗಳನ್ನು ಮಡಿ ಉಡದೆ  ಮುಟ್ಟುವುದು/ ಅದಕ್ಕೆ ಅವಕಾಶ ಮಾಡಿ ಕೊಡುವುದು.


೪೧. ದೇವಾಲಯದ ಗರ್ಭಗುಡಿ ಬಾಗಿಲು ಹಾಕುವಾಗ ನಂದಾ ದೀಪ ಆರಿಸಿ ಎಣ್ಣೆ ಉಳಿಸುವುದು.


೪೨. ದೇವರಿಗೆ ಅರ್ಪಿಸುವ ಮೊದಲು ಹೂವು, ಹಣ್ಣು, ಊದು ಬತ್ತಿಗಳನ್ನು ಆಘ್ರಾಣಿಸುವುದು (ಮೂಸಿ ನೋಡುವುದು).


೪೩. ದೇವಾಲಯದ ಆಸ್ತಿಗಳನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬಾಡಿಗೆಗೆ ಪಡೆಯುವುದು/ಕೊಡುವುದು. ಕಡಿಮೆ ಬಾಡಿಗೆಗೆ ಪಡೆದು ಹೆಚ್ಚಿನ ಬಾಡಿಗೆಗೆ ಬೇರೆಯವರಿಗೆ ನೀಡುವುದು.


೪೪. ದೇವಾಲಯದ ಆಸ್ತಿಗಳ ಮೇಲೆ ಹಕ್ಕು ಸಾಧಿಸುವುದು.


೪೫. ದೇವರ ಆಭರಣ ದುರುಪಯೋಗ ಮಾಡಿಕೊಳ್ಳುವುದು.

Sunday, August 8, 2021

ವಿಭೂತಿ,ಕುಂಕುಮ ಧರಿಸುವುದರಿಂದ ಉತ್ತಮ ಫಲ....

 

ವಿಭೂತಿ,ಕುಂಕುಮ ಧರಿಸುವುದರಿಂದ ಉತ್ತಮ ಫಲ.... 
*ವಿಭೂತಿ ಮಹಿಮೆಯ ಕಥೆ* 
ಸರಸ್ವತಿ , ಲಕ್ಷ್ಮಿ   ಬಂಗಾರ ಹಾಕಿಕೊಂಡಿದ್ದಾರೆ.  ಪಾರ್ವತಿ ತಾನು ಯಾಕೆ ಹಾಕಿಕೊಳ್ಳಬಾರದೆಂದು ಸ್ವಾಮಿ ನನಗೆ ಬಂಗಾರ
ಹಾಕಿಕೊಳ್ಳುವ ಬಯಕೆಯಾಗಿದೆ.  ನನಗೆ ಅನುಗ್ರಹಿಸು ಎಂದು.
ಆಗ ಈಶ್ವರ ಒಂದು ಚಿಟಿಕೆ ಭಸ್ಮವನ್ನು ತೆಗೆದು ಪಾರ್ವತಿ ಕೈಗೆ ಕೊಟ್ಟ

ಇದೇನು ಸ್ವಾಮಿ ಬಂಗಾರ ಕೊಡಿ ಎಂದರೆ ಭಸ್ಮ ಕೊಟ್ಟಿದ್ದೀರಿ!
ನನ್ನಲ್ಲಿರುವುದು ಇದೆ. ಇದನ್ನು ತೆಗೆದುಕೊಂಡು ಹೋಗಿ ಕುಬೇರನಲ್ಲಿ ಕೇಳು ಇದರ ತೂಕದ ಬಂಗಾರ ಕೊಡುತ್ತಾನೆ ಎಂದ.

ಪಾರ್ವತಿಯು ಅದನ್ನು ಅಲಕಪುರಕ್ಕೆ (ಕುಬೇರನ ವಾಸಸ್ಥಳ)  ಈ ಭಸ್ಮದ ತೂಕಕ್ಕೆ ಬಂಗಾರ ಕೊಡಬೇಕು ಎಂದು ಕೇಳಿದಳು. ಆಗ ಕುಬೇರ ನಗುತ್ತಾ ಇದಕ್ಕೆ ಏನು ತೂಕದ ಬಂಗಾರ ಕೊಡಲಾಗುತ್ತದೆ.
ನಿಮಗೆಷ್ಟು ಬೇಕು ತೆಗೆದುಕೊಳ್ಳಿ ಎಂದ. 

ಇಲ್ಲ ನನಗೆ ಇದರ ತೂಕವೇ ಬೇಕು. ಎಂದು ಪಾರ್ವತಿ ಕೇಳಿದಾಗ ಕುಬೇರನು ಪಾರ್ವತಿಯ ಅಣತಿಯಂತೆ,  ತಕ್ಕಡಿಯಲ್ಲಿ ಭಸ್ಮವನ್ನು ಒಂದೆಡೆ ಇಟ್ಟ. ಮತ್ತೊಂದೆಡೆಗೆ
ಬಂಗಾರ ಹಾಕಿದ. ಎಷ್ಟು ಬಂಗಾರ ಹಾಕಿದರೂ ತೂಕ ಮೇಲೆಳಲಿಲ್ಲ..  ಕೊನೆಗೆ ಕುಬೇರನು ತನ್ನ ಹೆಂಡತಿಯ ಬಂಗಾರವನ್ನು ಹಾಕತೊಡಗಿದ.

ಕುಬೇರನಿಗೂ ನಾನೆಂಬ ಅಹಂ ಭಾವವಿತ್ತು ಅದಕ್ಕೆ ಹೀಗಾಯಿತು. ಕೊನೆಗೆ ಕುಬೇರನು ತನ್ನ ಹೆಂಡತಿಯ ತಾಳಿಯನ್ನು ತಕ್ಕಡಿಯಲ್ಲಿ ಹಾಕಿದ ಆಗ ತಕ್ಕಡಿ ಸ್ವಲ್ಪ ಮೇಲೇರಿತು.

ಆಗ ಕುಬೇರನು ತಾಯಿ ನಾನು ಅಹಂಕಾರದಿಂದ ನುಡಿದೆ ಕ್ಷಮಿಸಿ. ಈ ಚಿಟಿಕೆ ಭಸ್ಮವು ಎಷ್ಟು ಬಂಗಾರ. ಹಾಕಿದರೂ, ಸರಿದೂಗಲಾರದು ಎಂದು
ಕೈ ಮುಗಿದ. 

ಪಾರ್ವತಿ ತನ್ನ ಪತಿಯ ಭಸ್ಮದ ಮಹತ್ವವನ್ನು ಗಮನಿಸಿ, ನನಗೆ ಬಂಗಾರ ಬೇಡ  "ಶಿವ ಕೊಟ್ಟ ಭಸ್ಮವೇ ಬಂಗಾರ" ಎಂದು ಧರಿಸಿಕೊಂಡಳು.

*ಓಂ ನಮಃ ‌ಶಿವಾಯ*

Thursday, April 29, 2021

ಮಾನವೀಯತೆಯ ಕಥೆ...😥👌🙏

 

ಒಬ್ಬಳು ಮಂಗಳಮುಖಿ ಭಿಕ್ಷೆ ಬೇಡಲೆಂದು ಶ್ರೀಮಂತ ವ್ಯಕ್ತಿಯ ಮನೆಗೆ ಹೋದಳು.

ಅಲ್ಲಿ ಒಳಗಡೆ ಆಗಷ್ಟೇ ಮದುವೆಯಾದ ದಂಪತಿಗಳಿಬ್ಬರು ಈ ಜಗಳವಾಡುತ್ತಿದ್ದರು.ಹೆಂಡತಿ ತನ್ನ ಗಂಡನಿಗೆ ಅತ್ತೆ ಮಾವನವರನ್ನು ಇದೆ ವಾರಾಂತ್ಯದೊಳಗೆ ವೃದ್ದಾಶ್ರಮ ಸೇರಿಸಿ ನನಗೆ ಮುಕ್ತಿ ಕೊಡಿ ಅಂತಾ ಬೇಡಿಕೊಳ್ಳುತ್ತಿದ್ದಾಗ ಗಂಡ ಈ ವಾರಾಂತ್ಯದೊಳಗೆ ಆಗದ ಮಾತು ಆದರೆ ತಿಂಗಳಾಂತ್ಯದೊಳಗೆ ವೃದ್ದಾಶ್ರಮಕ್ಕೆ ಕಳುಹಿಸುವೆ ಅನ್ನುತ್ತಾ ಹೆಂಡತಿಯನ್ನ ಪ್ರೀತಿಯಿಂದ ಓಲೈಸುತ್ತಾನೆ....ಈ ವಾದ ವಿವಾದ ಮುಗಿದು ಮನೆಗೆ ಬಂದ ಮಂಗಳಮುಖಿಗೆ ಕೈ ತುಂಬಾ ಹಣ ನೀಡುತ್ತಾ ತಮ್ಮ ಅದ್ಭುತ ಜೀವನಕ್ಕೆ ಆಶೀರ್ವಾದ ಮಾಡು ಎಂದು ನಗುನಗುತ್ತಾ ಕೋರಿಕೆಯನ್ನ ಮುಂದಿಡುತ್ತಾರೆ.....

ಆಗ ಆ ಮಂಗಳಮುಖಿ ನಗುತ್ತಾ ಹೇಳುವಳು ತಂದೆ ತಾಯಿಯನ್ನು ಪ್ರೀತಿಸದ ಜೀವಕ್ಕೆ ಆ ದೇವರು ಸಹ ಆಶೀರ್ವಾದ ನೀಡಲು ಹಿಂಜರಿಯುವನು...ಆದರೂ ಅರ್ಧನಾರೀಶ್ವರನ ಅವತಾರ ತಾಳಿದ ನಾನು ನಿಮಗೆ ಮನಸೋ ಇಚ್ಛೆ ಹರಸುವೆನು ಎಂದಾಗ ಆ ದಂಪತಿಗಳಿಬ್ಬರು ತಮ್ಮ ಶಿರಭಾಗಿ ಅವಳ ಮುಂದೆ ನಿಲ್ಲುತ್ತಾರೆ....

ಆಗ ಅವಳು ಹೇಳಿದ ಮಾತು ಏನು ಗೊತ್ತಾ......

ಮುಂದಿನ ಜನ್ಮದಲ್ಲಿ ನನಗಿಂತಲೂ ಸುಂದರವಾದ ಮಂಗಳಮುಖಿ ಆಗಿ ಇದೆ ಭೂಮಿಯಲ್ಲಿ ಜನಿಸಿರಿ ಆಗ ನಿಮ್ಮವರನ್ನು ದೂರ ಸರಿಸೋ ಪ್ರಮೇಯವೇ ಬರೋದಿಲ್ಲ

ಪ್ರಪಂಚವೇ ನಿಮ್ಮನ್ನ ದೂರ ಸರಿಸುತ್ತದೆ....ಈ ಜನ್ಮದಲ್ಲಿ ತಂದೆ ತಾಯಿಯರನ್ನು ವೃದ್ದಾಶ್ರಮಕ್ಕೆ ತಳ್ಳುವ ನಿಮಗೆ ಮುಂದಿನ ಜನ್ಮದಲ್ಲಿ ಅವರು ತಮ್ಮ ಮಕ್ಕಳೆಂಬ ಕರುಣೆ ಮರೆತು ನಿಮ್ಮನ್ನ ಯಾರು ವಾಸಿಸಲು ಯೋಗ್ಯವಾದ ಜಾಗದಲ್ಲಿ ಬಿಟ್ಟು ಹೋಗುವರು... 

ನಿಮಗೆ ಶುಭವಾಗಲಿ ಅನ್ನುತ್ತಾ ಅವಳು ಅಲ್ಲಿಂದ ಸಾಗುವಳು. 

ತಂದೆ ತಾಯಿಯರನ್ನು ದೂರ ಮಾಡೋ ಪ್ರತಿ ವ್ಯಕ್ತಿಗೂ ಈ ಸಣ್ಣ ಕಥೆ ಸಮರ್ಪಣೆ...

Thursday, April 8, 2021

ಶ್ರೀ ಕೃಷ್ಣ ದ್ರೌಪದಿ ಗೆ ಹೇಳುವ ಮಾತುಗಳು

 


*#ನಮ್ಮ_ಶಬ್ದಗಳು_ಸಹ_ನಮ್ಮ #ಕರ್ಮ_ಗಳಾಗಿರುತ್ತವೆ*


ಅದೇ ತಾನೇ ಮಹಾಭಾರತ ಯುದ್ಧ ಮುಗಿದಿತ್ತು. 18 ದಿನಗಳ ಯುದ್ಧ ದ್ರೌಪತಿಯನ್ನು 80 ನೇ ವಯಸ್ಸಿನವರೆಗೂ ಕೊಂಡೊಯ್ದಿತ್ತು. ಮಾನಸಿಕ ಮತ್ತು ದೈಹಿಕ ರೂಪದಲ್ಲಿ. 


ಊರಲ್ಲಿ ಎಲ್ಲಿ ನೋಡಿದರಲ್ಲಿ ವಿಧವೆಯರೇ ಕಾಣಿಸುತ್ತಿದ್ದರು. ಕೈ ಕಾಲು ಮುರಿದುಕೊಂಡು ಅಂಗವೈಕಲ್ಯಗೊಂಡ ಪುರುಷರು. ಅನಾಥ ಮಕ್ಕಳು ಓಡಾಡುತ್ತಿದ್ದರು. ಸ್ಮಶಾನ ಮೌನಗೊಂಡಿತ್ತು ನಂದನವನದಂತಿದ್ದ ಹಸ್ತಿನಾಪುರ. 


ರಾಣಿ ದ್ರೌಪತಿ ಶೂನ್ಯಮನಸ್ಕಳಾಗಿ ತದೇಕ ಚಿತ್ತದಿಂದ ಗೋಡೆಯನ್ನು ನೋಡುತ್ತಾ ಕುಳಿತಿದ್ದಳು. ಶ್ರೀ ಕೃಷ್ಣ ಪರಮಾತ್ಮ ಅಲ್ಲಿಗೆ ಬಂದ. ದ್ರೌಪತಿ ಓಡಿ ಹೋಗಿ ಕೃಷ್ಣನನ್ನು ತಬ್ಬಿಕೊಳ್ಳುತ್ತಾಳೆ ಮತ್ತು ಅಳಲು ಪ್ರಾರಂಭಿಸುತ್ತಾಳೆ. ಕೃಷ್ಣ ದ್ರೌಪದಿಯ ತಲೆಯನ್ನು ಸವರುತ್ತಾನೆ. ಮತ್ತು ಸಮೀಪದ ಪಲ್ಲಂಗದ ಮೇಲೆ ಕೂರಿಸುತ್ತಾನೆ.


ದ್ರೌಪದಿ:- ಕೃಷ್ಣ ಏನಿದೆಲ್ಲ? ಹೀಗೆಲ್ಲ ಆಗುತ್ತೆ ಅಂತ ನಾನು ಅಂದುಕೊಂಡೇ ಇರಲಿಲ್ಲ


ಕೃಷ್ಣ:- ಕರ್ತವ್ಯ ಮತ್ತು ನಿಯತ್ತು ಬಹು ಕ್ರೂರಿ ಪಾಂಚಾಲಿ, ಅದು ನಾವು ಯೋಚಿಸಿಯಂತೆ ಇರುವುದಿಲ್ಲ. ನಮ್ಮ ಕರ್ಮಗಳನ್ನು ಪರಿಣಾಮಗಳಲ್ಲಿ ಬದಲಿಸಿಬಿಡುತ್ತದೆ.....

ನೀನು ಸೇಡು ತೀರಿಸಿಕೊಳ್ಳಬೇಕು ಅಂದುಕೊಂಡಿದ್ದೆ, ನಿನ್ನ ಸೇಡು ತೀರಿತು ದುಶ್ಯಾಸನ ದುರ್ಯೋಧನರಷ್ಟೇ ಅಲ್ಲ ಇಡೀ ಕೌರವ ವಂಶವೇ ನಿರ್ವಂಶವಾಯ್ತು. ಇದು ನೀನು ಖುಷಿ ಪಡುವ ವಿಚಾರ. ಯಾಕೆ ...ನಿನಗೆ ಆನಂದವಾಗುತ್ತಿಲ್ಲವೇ?


ದ್ರೌಪತಿ:- ಕೃಷ್ಣಾ....ನೀನು ನನ್ನ ದುಃಖವನ್ನು ಒರಿಸಲು ಬಂದಿರುವೆಯ ಅಥವಾ ನನ್ನ ಗಾಯಗಳ ಮೇಲೆ ಉಪ್ಪು ಸುರಿಯಲು ಬಂದಿರುವೆಯಾ?


ಕೃಷ್ಣ:- ಇಲ್ಲ ದ್ರೌಪತಿ, ನಾನು ವಾಸ್ತವಿಕತೆಯನ್ನು ಅರ್ಥೈಸಲು ಬಂದಿದ್ದೇನೆ. ನಮ್ಮ ಕರ್ಮದ ಫಲಗಳ ಪರಿಣಾಮಗಳು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಅವು ಹತ್ತಿರವಾದಾಗ ನಮ್ಮ ಕೈಯಲ್ಲಿ ಏನೂ ಇರುವುದಿಲ್ಲ. 


ದ್ರೌಪತಿ:- ಅಂದ್ರೆ ......ಇದಕ್ಕೆಲ್ಲ ನಾನೇ ಕಾರಣನಾ ಕೃಷ್ಣ?


ಕೃಷ್ಣ:- ಇಲ್ಲ ದ್ರೌಪತಿ...ನಿನ್ನನ್ನು ನೀನು ಇಷ್ಟೊಂದು ಮಹತ್ವಪೂರ್ಣಳು ಎಂದು ತಿಳಿದುಕೊಳ್ಳಬೇಡ ಆದರೆ ನೀನು ನಿನ್ನ ಕರ್ಮಗಳಲ್ಲಿ ಕಿಂಚಿತ್ತಾದರೂ ದೂರದೃಷ್ಟಿ ಇಟ್ಟಿದ್ದಿದ್ದರೆ ಇಂದು ನೀನು ದುಃಖಿಸುವ ಈ ಪರಿಸ್ಥಿತಿ ಬರುತ್ತಿರಲಿಲ್ಲ.


ದ್ರೌಪತಿ:- ???????


ಕೃಷ್ಣ:- ಅಂದು ಸ್ವಯಂವರದಲ್ಲಿ ಕರ್ಣನಿಗೆ ನೀನು ಅವಮಾನಿಸದೇ ಇದ್ದಿದ್ದರೆ, ಭಾಗವಹಿಸಲು ಅವಕಾಶ ಕೊಟ್ಟಿದ್ದರೆ ಅದರ ಪರಿಣಾಮ ಬೇರೆನೇ ಇರುತ್ತಿತ್ತು. ನಂತರ ಕುಂತಿ ಮಾತಾ ನಿನಗೆ ಐದೂ ಪಾಂಡವರನ್ನು ವಿವಾಹವಾಗಲು ಆಹ್ವಾನಿಸಿದಾಗ ನೀನು ತಿರಸ್ಕರಿಸಿದ್ದರೆ ಅದರ ಪರಿಣಾಮವೂ ಇಂದು ಬೇರೆನೇ ಇರುತ್ತಿತ್ತು. ನಂತರ ನಿನ್ನ ಮಹಲಿನಲ್ಲಿ ದುರ್ಯೋಧನನಿಗೆ ಅವಮಾನ ಮಾಡಿರದೆ ಇದ್ದಿದ್ದರೆ. ನಿನ್ನ ವಸ್ತ್ರಾಪಹರಣವೇ ಆಗುತ್ತಿರಲಿಲ್ಲ. ಆಗಲೂ ಪರಿಸ್ಥಿತಿ ಬೇರೆನೇ ಆಗುತ್ತಿತ್ತು. 


#ನಮ್ಮ_ಶಬ್ದಗಳು_ಸಹ_ನಮ್ಮ #ಕರ್ಮ #ಗಳಾಗಿರುತ್ತವೆ_ದ್ರೌಪದಿ. 


ನಾವು ಶಬ್ದಗಳನ್ನು ಆಡುವ ಮುಂಚೆ ಅವುಗಳನ್ನು ಅಳತೆಮಾಡಬೇಕಾಗುತ್ತದೆ. ಇಲ್ಲವಾದರೆ ಅದರ ದುಷ್ಪರಿಣಾಮವನ್ನು ನಾವು ಮಾತ್ರ ಅಲ್ಲ ನಮ್ಮ ಸುತ್ತಮುತ್ತಲಿನ ವಾತಾವರಣವೂ ಅನುಭವಿಸಬೇಕಾಗುತ್ತದೆ. 


ಎಲ್ಲ ಜೀವರಾಶಿಗಳಲ್ಲಿ ಮನುಷ್ಯ ಏಕಮಾತ್ರ ಜೀವಿಯ ವಿಷ ಹಲ್ಲಿನಲ್ಲಿರಲ್ಲ ಬದಲಾಗಿ ಆತನ ಶಬ್ದಗಳಲ್ಲಿ ಇರುತ್ತದೆ. 

ಅದಕ್ಕಾಗಿಯೇ *ನಾವು ಆಡುವ ಶಬ್ದಗಳು ಇತರರಿಗೆ ನಾಟದಂತೆ ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ಆಡಬೇಕು*. ಅಂತಹ ಶಬ್ದಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಆಗ ಜೀವನ ಚರಿತಾರ್ಥವಾಗಿರುತ್ತದೆ.


*ಕೃಷ್ಣಂ ವಂದೇ ಜಗದ್ಗುರುಂ🙏*.

Wednesday, March 31, 2021

ವೇದಗಳು ಮತ್ತು ವೇದ ಕಾಲದ ನಾಗರಿಕತೆ

 


# ಪ್ರಾಚೀನ ಭಾರತದ ವಾಯುವ್ಯ ಭಾಗದಲ್ಲಿ ಪ್ರಚಲಿತವಿದ್ದ ಮತ್ತೊಂದು ಪ್ರಬುದ್ಧ ಜೀವನ ಕ್ರಮವೇ ವೇದಕಾಲದ ನಾಗರಿಕತೆಯಾಗಿದೆ.

# ಇದರ ಕರ್ತೃಗಳು “ಆರ್ಯರು” ಎಂದು ಹೇಳಲಾಗಿದೆ. ಆದರೆ ಆರ್ಯರು ಎಂಬುದು ಜನಾಂಗವಾಚಕ ಶಬ್ದವಲ್ಲ. ಕೇವಲ ಗೌರವ ಸೂಚಕ ಶಬ್ದ ಎಂಬ ಅಭಿಪ್ರಾಯವು ಇದೆ.
# ಇವರು ‘ಮಧ್ಯ ಏಷ್ಯಾ’ದಿಂದ ಭಾರತಕ್ಕೆ ವಲಸೆ ಬಂದವರೆಂದೂ ಹೇಳಲಾಗಿದೆ.
# ಅವರು ‘ಕೃಷಿ’ ಪ್ರಧಾನ ಕುಸುಬು ಹೊಂದಿದವರೆಂದೂ ಹೇಳಲಾಗಿದೆ.
# ವೇದಕಾಲದ ನಾಗರಿಕತೆಯ ಪೂರ್ಣ ವಿವರಣೆಯನ್ನು ‘ವೇದ’ಗಳ ಆಧಾರದಿಂದ ತಿಳಿಯಲಾಗಿದೆ. ಇವು ಪ್ರಪಂಚದ ಪ್ರಾಚೀನ ಗ್ರಂಥಗಳಾಗಿವೆ.
# ವೇದ ಎಂದರೆ”ಜ್ಞಾನ” ಎಂದರ್ಥ.
# ಒಟ್ಟು ನಾಲ್ಕು ವೇದಗಳಿವೆ. ಋಗ್ವೇದ, ಯಜುರ್ವೇದ , ಸಾಮವೇದ, ಅಥರ್ವಣವೇದ.
# ವೇದಗಳು ‘ಸಂಸ್ಕøತ’ ಭಾಷೆಯಲ್ಲಿ ರಚಿಸಲ್ಪಟ್ಟಿವೆ.

# ವೇದಕಾಲದ ಇತಿಹಾಸದ ಆಕರಗಳು
1. ಸಾಹಿತ್ಯಕ
# ಸಾಹಿತ್ಯಕ ಆಧಾರಗಳಲ್ಲಿ ಚತುರ್ ವೇದಗಳು ಬರುತ್ತವೆ.
# ವೇದ ಎಂಬುದು “ವಿದ್” ಎಂಬ ಧಾತುವಿನಿಂದ ಬಂದಿದೆ. “ವಿದ್” ಎಂದರೆ ತಿಳಿ ಎಂದರ್ಥ.
# ವೇದಗಳು ಪ್ರಾರ್ಥನೆಗಳ ಹಾಗೂ ಸ್ತೋತ್ರಗಳ ಸಮುಚ್ಚಯವಾಗಿದೆ.
# ಮೌಖಿಕವಾಗಿ ಬೆಳೆದು ಬಂದದ್ದರಿಂದ ‘ಶ್ರುತಿ’ಯೆಂದು ಕರೆಯುವರು. ನಾಲ್ಕು ವೇದಗಳನ್ನು “ಸಂಹಿತಗಳೆಂದು” ಕರೆಯುವರು.

# ನಾಲ್ಕು ವೇದಗಳು
1. ಋಗ್ವೇದ
* ಋಗ್ವೇದ 1028 ಸ್ತ್ರೋತ್ರಗಳನ್ನು ಒಳಗೊಂಡಿದೆ.
* ಹೋತ್ರಿ ಎಂಬ ಪುರೋಹಿತ ಇದನ್ನು ಹಾಡುತ್ತಿದ್ದ.
* ‘ ಗಾಯತ್ರಿ ಮಂತ್ರ’ ಋಗ್ವೇದದ ಪ್ರಮುಖ ಮಂತ್ರ.
* ಋಗ್ವೇದವನ್ನು ಪ್ರಥಮ ವೈದಿಕ ಸಾಹಿತ್ಯ ಎಂದು ಪರಿಗಣಿಸಲಾಗಿದೆ.
2. ಯಜುರ್ವೇದ
• ಇದು ಸಂಸ್ಕಾರ ವೇದವಾಗಿ ಯಜ್ಞದ ಸಮಯದಲ್ಲಿ ಉಚ್ಛರಿಸಬೇಕಾದ ಹಲವು ಮಂತ್ರಗಳನ್ನು ಹೊಂದಿತ್ತು.
• “ಅದ್ವರ್ಯ” ಎಂಬ ಪುರೋಹಿತ ಇದನ್ನು ಹಾಡುತ್ತಿದ್ದನು.
3. ಸಾಮವೇದ
• “ಸಮನ್” ಎಂಬ ಮೂಲ ಧಾತುವಿನಿಂದ ಬಂದಿದೆ.
• “ಸಮನ್” ಎಂದರೆ ಸುಮುಧರ ಗಾಯನವಾಗಿದೆ.
• ಒಟ್ಟು 1603 ಸ್ತ್ರೋತ್ರಗಳಿದ್ದವು.
• ಇದನ್ನು “ ಉದ್ಗಾತ್ರಿ” ಎಂಬ ಪುರೋಹಿತನು ಹಾಡುತ್ತಿದ್ದನು.
4. ಅಥರ್ವಣವೇದ
• ಅಥರ್ವಣವೇದ ಅಂದರೆ ‘ರುಕ್ಮಿಣ’Â ಅಥವಾ ‘ಇಂದ್ರಜಾಲದ ಜ್ಞಾನ’
• ಇದು 20 ಖಂಡಗಳಾಗಿ ಭಾಗಗೊಂಡಿದ್ದು, 711 ಸ್ತ್ರೋತ್ರಗಳನ್ನೊಳಗೊಂಡಿದೆ.

2. ಪ್ರಾಕ್ತನ ಆಧಾರಗಳು
# ಪಂಜಾಬ್, ಉತ್ತರಪ್ರದೇಶ, ಉತ್ತರ ರಾಜಸ್ಥಾನ, ಹಾಗೂ ಸಿಂಧೂ ನದಿಗಳ ದಂಡೆಗಳ ಮೇಲೆ ದೊರೆತ ಉತ್ಖನನ ಆಧಾರಗಳು ಆ ಕಾಲದ ವಸತಿಗಳನ್ನು ಹೊಂದಿವೆ.
# ನಾಲ್ಕು ವೇದಗಳ ಜೊತೆಗೆ ಇಲ್ಲಿ ಅನೇಕ ಇನ್ನಿತರ ಸಾಹಿತ್ಯಗಳು ದೊರೆತಿವೆ. ಬ್ರಾಹ್ಮಣಗಳು, ಉಪನಿಷತ್‍ಗಳು, ಅರಣ್ಯಗಳು, ಸ್ಮøತಿಗಳು, ವೇದಾಂಗಗಳು, ದರ್ಶನಗಳು, ಮತ್ತು ಉಪವೇದಗಳು
# ಪ್ರಾರಂಭದ ವೇದಕಾಲವನ್ನು “ಪೂರ್ವ ವೇದಕಾಲ” ಅಥವಾ “ಋಗ್ವೇದ ಕಾಲ “ ಎಂದು ಕರೆಯಲಾಗುತ್ತದೆ. ಅನಂತರದ ವೇದಕಾಲವನ್ನು “ ಉತ್ತರ ವೇದಕಾಲ“ ಎನ್ನುವರು.

# ಪೂರ್ವ ವೇದಕಾಲ ಅಥವಾ ಋಗ್ವೇದ ಕಾಲ
* ಋಗ್ವೇದದ ಪ್ರಕಾರ ಆರ್ಯರು ವಾಸವಾಗಿದ್ದ ಪ್ರದೇಶವನ್ನು “ಸಪ್ತ-ಸಿಂಧೂ” ಅಥವಾ ‘ಏಳು ನದಿಗಳ ನಾಡೆಂದೂ’ ಕರೆಯುತ್ತಿದ್ದರು.
* ಋಗ್ವೇದದ ಪ್ರಕಾರ ಆರ್ಯ ಎಂದರೆ “ಶ್ರೇಷ್ಠ” ಅಥವಾ ಸುಸಂಸ್ಕøತಿಯುಳ್ಳ ವಿಚಾರಯುತ ಜನ ಎಂದರ್ಥ.
* ಆರ್ಯರಿಗೆ “ಸುರ” ಮತ್ತು ಸೋಮ ಎಂಬ ಪಾನೀಯಗಳ ಪರಿಚಯವಿತ್ತು.
* ವೇದ ಕಾಲದಲ್ಲಿ ಅನೇಕ ದೇವ – ದೇವಿಯರ ಪೂಜೆಯ ಉಲ್ಲೇಖವಿದ್ದರೂ, ಮೂರ್ತಿಯಾಗಲಿ ದೇವಾಲಯವಾಗಲಿ ದೊರೆತಿಲ್ಲ.
* ಇವರ ಕಾಲದಲ್ಲಿ ಪ್ರಕೃತಿಗೆ ಸಂಬಂಧಿಸಿದ ದೇವರುಗಳ ಆರಾಧಕರಾಗಿದ್ದರು.
* “ನಿಷ್ಕಾ” ಎಂಬ ಬಂಗಾರದ ನಾಣ್ಯ ರೂಡಿಯಲ್ಲಿತ್ತು..
* ಋಗ್ವೇದದಲ್ಲಿ ಅತಿ ಹೆಚ್ಚು ಬಾರಿ ಉಲ್ಲೇಖವಾಗಿರುವ ನದಿ “ಸರಸ್ವತಿ”.
* ಋಗ್ವೇದ ಯುಗದ ಪ್ರಮುಖ ದೇವತೆ “ಇಂದ್ರ” ಮತ್ತು “ಅಗ್ನಿ”.
* ಅದರ ಜೊತೆಗೆ ಅವರು ಸೂರ್ಯ,( ಬೆಳಕಿನ ದೇವತೆ) ಸೋಮ( ಸಸ್ಯ ದೇವತೆ) ವರುಣ( ಜಲದೇವತೆ) ಮಿತ್ರ, ಯಮ (ಮೃತ್ಯು ದೇವತೆ), ರುದ್ರ( ಉಗ್ರ ಬಿರುಗಾಳಿ ದೇವತೆ), ಪ್ರಷನ್(ವಿವಾಹ ದೇವತೆ), ದಿಶಾನ( ವೃಕ್ಷ ದೇವತೆ), ಅರಣ್ಮನಿ( ವನ ದೇವತೆ), ಇಲಾ( ಕಾಣಿಕೆ ದೇವತೆ), ದ್ಯುಹಸ್( ಸ್ವರ್ಗದ ಅಧಿದೇವತೆ), ಅಶ್ವಿನಿ ಮುಂತಾದವನ್ನು ಆರಾಧಿಸುತ್ತಿದ್ದರು.
* ಋಗ್ವೇದ ಕಾಲದ ರಾಜ್ಯದ ಮುಖ್ಯಸ್ಥ – “ರಾಜನ್”
* ಋಗ್ವೇದ ಕಾಲದಲ್ಲಿ ಆಡಳಿತದ ಭಾಗಗಳು- ಸಭಾ ಮತ್ತು ಸಮಿತಿ, ವಿಧಾತಾ ಮತ್ತು ಗಣ. ಇವುಗಳಲ್ಲಿ ಸಭಾ ಮತ್ತು ಸಮಿತಿ ಪ್ರಮುಖ ಆಡಳಿತ ಭಾಗಗಳು.
* ಋಗ್ವೇದ ಕಾಲದ ತೆರಿಗೆಯ ಹೆಸರು –“ ಬಲಿ”
* ಋಗ್ವೇದ ಕಾಲದಲ್ಲಿ ಬೇಸಾಯ ಪ್ರಮುಖ ವೃತ್ತಿಯಾಗಿತ್ತು. “ ಪಶು ಸಂಗೋಪನೆ” ಪೂರಕ ವೃತ್ತಿಯಾಗಿತ್ತು.
* ಅವರ ಆಹಾರ ಬಾರ್ಲಿ, ಅಕ್ಕಿ, ಮೀನು ಮಾಂಸಗಳನ್ನು ಒಳಗೊಂಡಿತ್ತು.
* ಕಬ್ಬಿಣ ಮುಂತಾದ ಲೋಹಗಳ ಉಪಯೋಗವನ್ನು ಅವರು ಅರಿತಿದ್ದರು.
* ವೃತ್ತಿಗಳಲ್ಲಿ ವೈದ್ಯಕೀಯ ಮತ್ತು ಪುರೋಹಿತ ವೃತ್ತಿಗಳು ಮುಖ್ಯವಾಗಿದ್ದವು. ಯಾರು ಯಾವ ವೃತ್ತಿಯನ್ನಾದರೂ ಮಾಡಬಹುದಿತ್ತು.
* ಸ್ತ್ರೀಯರಿಗೆ ಉನ್ನತ ಸ್ಥಾನವನ್ನು ನೀಡಲಾಗಿತ್ತು.
* ಹಸುಗಳ (ಗೋಧನ)ಸಂಖ್ಯೆಯ ಆಧಾರದ ಮೇಲೆ ಆ ಕಾಲದ ಸಂಪತ್ತನ್ನು ಅಳೆಯಲಾಗುತ್ತಿತ್ತು. ಗೋವುಗಳನ್ನು ಕೊಲ್ಲಬಾರದು ಎಂಬ ನಂಬಿಕೆಯಿತ್ತು.
* ಗೋವುಗಳ ನಂತರ ಕುದುರೆಗೆ ಪ್ರಾಶಸ್ತ್ಯವಿತ್ತು. ರಥವನ್ನು ಎಳೆಯಲು ಕುದುರೆಗಳನ್ನು ಬಳಸುತ್ತಿದ್ದರು.
* ಈ ಕಾಲದಲ್ಲಿ ಯಜ್ಞಗಳ ಆಚರಣೆ ಸರಳವಾಗಿತ್ತು.
# ಸೃಷ್ಟಿಕರ್ತನ ವಿವಿಧ ಅಂಗಗಳಿಂದ ಉಗಮಿಸಿದವರು
* ಬಾಯಿಂದ- ಬ್ರಾಹ್ಣಣ
* ತೋಳುಗಳಿಂದ – ಕ್ಷತ್ರಿಯ
* ತೊಡೆಗಳಿಂದ -ವೈಶ್ಯ
* ಪಾದಗಳಿಂದ – ಶೂದ್ರ
 *ಉತ್ತರ ವೇದಕಾಲ ಅಥವಾ ಋಗ್ವೇದದ ನಂತರದ ವೇದಗಳ ಕಾಲ

* ಋಗ್ವೇದದ ನಂತರದ ತ್ರಿವೇದಗಳು ಭಾರತದ ಮೂರು ಪ್ರದೇಶದ ಮುಖ್ಯ ವಿಭಾಗಗಳನ್ನು ಹೇಳಿದೆ. ಅವುಗಳುಸ ಉತ್ತರ ಭಾರತ, ಮಧ್ಯ ಬಾರತ, ದಕ್ಷಿಣ ಭಾರತ.
* ಉತ್ತರ ವೇದಕಾಲದಲ್ಲಿ ಜೀವನ ಕ್ರಮದಲ್ಲಿ ಬದಲಾವಣೆಗಳಾದವು. ವೇದಕಾಲದ ಪಂಗಡಗಳು ಹಂತಹಂತವಾಗಿ ಗಂಗಾ ಯಮುನಾ ನದಿ ಬಯಲಿಗೆ ವಲಸೆಹೋದವು. ಅವರು ಪೂರ್ವ ರಾಜಸ್ಥಾನ, ಪೂರ್ವ ಉತ್ತರಪ್ರದೇಶ, ಉತ್ತರ ಬಿಹಾರಕ್ಕೆ ವಿಸ್ತರಣಗೊಂಡರು.
* ಉತ್ತರ ವೇದಕಾಲದ ರಾಜರು ತಮ್ಮ ರಾಜ್ಯವನ್ನು ವಿಸ್ತರಿಸಲು ಬಯಸಿದರು. ಅವರು ‘ಸಾಮ್ರಾಟ್’, ಚಕ್ರವರ್ತಿಗಳೆಂಬ ಬಿರುದುಗಳನ್ನು ಧರಿಸತೊಡಗಿದರು.
* ಕಾಲಕ್ರಮೇಣದಲ್ಲಿ ಸಮಾಜದಲ್ಲಿ ವೃತ್ತಿ ಆಧಾರಿತ ಬ್ರಾಹ್ಮಣ (ಪುರೋಹಿತ), ಕ್ಷತ್ರಿಯ( ರಾಜ ಮತ್ತು ಸೈನಿಕ), ವೈಶ್ಯ( ವ್ಯಾಪಾರಿ ಮತ್ತು ಕೃಷಿಕ), ಶೂದ್ರ( ಊಳಿಗದವರು). ಎಂಬ ನಾಲ್ಕು ವರ್ಣಗಳಿದ್ದವು. ಇದನ್ನು “ ವರ್ಣವ್ಯವಸ್ಥೆ” ಎನ್ನುವರು. ವರ್ಣವ್ಯವಸ್ಥೆ ಋಗ್ವೇದ ಕಾಲಕ್ಕಿಂತ ಕಟ್ಟುನಿಟ್ಟಾಗಿತ್ತು.
* ಕಾಲಾಂತರದಲ್ಲಿ ಸ್ತ್ರೀಯರಿಗಿದ್ದ ಸ್ಥಾನಮಾನ ಕಡಿಮೆಯಾಯಿತು. ಸ್ತ್ರೀಯರಿಗೆ ಅಷ್ಟೋಂದು ಸ್ವಾತಂತ್ರರವಿರಲಿಲ್ಲ. ಗಂಡು ಸಂತಾನವೇ ತಮ್ಮ ಉನ್ನತಿಗೆ ಸಾಧನವೆಂಬ ಭಾವನೆ ಅವರಲ್ಲಿತ್ತು.
* ಕುಟುಂಬ ಅಥವಾ ಕುಲ ಸಾಮಾಜಿಕ ವ್ಯವಸ್ಥೆಯ ಮೂಲವಾಗಿತ್ತು.
* ಉತ್ತರ ವೈದಿಕ ಕಾಲದಲ್ಲಿ “ಪ್ರಜಾಪತಿ” (ಸೃಷ್ಟಿಕರ್ತ) ಆರಾಧಿಸುತ್ತಿದ್ದರು. ರುದ್ರ (ಶಿವ), ವಿಷ್ಣು ( ವಿಶ್ವರಕ್ಷಕ)ಅವರು ಆರಾಧಿಸುವ ಪ್ರಮುಖ ದೇವತೆಗಳಾಗಿದ್ದವು.
* ಪಶು ಸಂಗೋಪನೆ ಪ್ರಮುಖ ಕಸುಬಾಗಿತ್ತು.
* ಕುಶಲ ಕಸುಬುಗಳಾದ ಮರಗೆಲಸ, ಲೋಹಗಾರಿಕೆ, ನೇಯ್ಗೇ, ಮಡಕೆ ತಯಾರಿಕೆ, ಋಗ್ವೇದ ಕಾಲದಿಂದ ಬಳಕೆಯಲ್ಲಿತ್ತು.
* ಕಮ್ಮಾರ- ಆಯಾಸ್, ಅಕ್ಕಸಾಲಿಕ -ಹಿರಣ್ಯಕಾರ, ಕ್ಷೌರಿಕ- ವ್ಯಾಪ್ತ್ರಿ, ವೈದ್ಯ – ಬೀಷಿಕ ಎಂದು ಕರೆಯುತ್ತಿದ್ದರು.
* ಸಂಪತ್ತಿನ ಮೌಲ್ಯವಾದ ದನಗಳು ವ್ಯಾಪಾರ ವಿನಿಮಯದ ಮೂಲವಾಗಿದ್ದವು.
* ವಸ್ತು ವಿನಿಮಯ ವ್ಯಾಪರವೇ ಹೆಚ್ಚು ಪ್ರಚಲಿತದಲ್ಲಿತ್ತು.
* ಭತ್ತ ( ವ್ರಿಹಿ), ಬಾರ್ಲಿ( ಯವ), ದ್ವಿದಳ ಧಾನ್ಯಗಳು, ಎಳ್ಳು(ತಿಲ) ಮತ್ತು ಗೋಧಿಯನ್ನು ( ಗೋದಾಮ) ಬೆಳೆಯುತ್ತಿದ್ದರು. ಹಣ್ಣಿನ ಮರಗಳನ್ನು ಬೆಳೆಸಲಾಗುತ್ತಿತ್ತು.
* ಗಾರ್ಗಿ ಮತ್ತು ಮೈತ್ರೇಯಿ ಈ ಕಾಲದ ಶ್ರೇಷ್ಠ ವಿದ್ವಾಂಸರಾಗಿದ್ದರು..
* ಆಶ್ರಮ ಅಥವಾ ಜೀವನದ ಹಂತಗಳು-
1. ಬ್ರಹ್ಮಚರ್ಯ
2. ಗೃಹಸ್ಥ
3. ವಾನಪ್ರಸ್ಥ
4. ಸನ್ಯಾಸ
* ನಾಲ್ಕನೇ ಆಶ್ರಮ “ ಸನ್ಯಾಸ” ಉತ್ತರ ವೈದಿಕ ಕಾಲದಲ್ಲಿ ಹೆಚ್ಚು ಪ್ರಚಲಿತವಾಯಿತು.