WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Wednesday, March 2, 2022

ಜನಾರ್ದನ್ ರೆಡ್ಡಿ ಮಗನ ಚಿತ್ರಕ್ಕೆ ರಾಜಮೌಳಿ ಪವರ್ -ರೆಡ್ಡಿ ಮಗ 'ಕಿರೀಟಿ' ಚೊಚ್ಚಲ ಚಿತ್ರಕ್ಕೆ ಮುಹೂರ್ತ ಫಿಕ್ಸ


ಐದಾರು ತಿಂಗಳಿನಿಂದ ಒಂದು ಸುದ್ದಿ ಒಡಾಡುತ್ತಿದೆ. ಗಾಲಿ ಜನಾರ್ದನ್ ರೆಡ್ಡಿ ಅವರ ಮಗ ಸಿನಿಮಾ ರಂಗಕ್ಕೆ ಹೀರೋ ಆಗಿ ಬರಲಿದ್ದಾರೆ ಅಂತ. ಆದ್ರೆ ಯಾವಾಗ ಯಾವ ಸಿನಿಮಾ, ಯಾರ ಡೈರೆಕ್ಷನ್​​ನಲ್ಲಿ ಅನ್ನೋದೇ ಸರಿಯಾಗಿ ಮಾಹಿತಿ ಸಿಕ್ಕಿರಲಿಲ್ಲ. ರೆಡ್ಡಿ ಪುತ್ರರ ಸಿನಿಮಾಕ್ಕೆ ಟಾಲಿವುಡ್​​ನ ಚಿತ್ರಬ್ರಹ್ಮ ಎಸ್.ಎಸ್.ರಾಜಮೌಳಿ ಅವರ ಸೂಪರ್​ ಸಾಥ್ ಸಿಗುತ್ತಿದೆ.
ರಾಜಕೀಯ ರಂಗಕ್ಕೂ ಸಿನಿಮಾ ರಂಗಕ್ಕೂ ಹಿಂದಿನಿಂದಲೂ ನೆಂಟಸ್ತಿಕೆ ಇದೆ. ಆ ಸಂಪ್ರದಾಯದಂತೆ ಈಗ ಗಾಲಿ ಜನಾರ್ದನ್ ರೆಡ್ಡಿ ಅವರ ಸುಪುತ್ರ ಹೀರೋ ಆಗಲು ಸಜ್ಜಾಗುತ್ತಿದ್ದಾರೆ. ಕಿರೀಟಿ ಜನಾರ್ದನ್ ರೆಡ್ಡಿಯ ಹೊಸ ಚಿತ್ರಕ್ಕೆ ಟಾಲಿವುಡ್ ಜಕ್ಕಣ್ಣ ಸಾಥ್ ನೀಡ್ತಿದ್ದಾರೆ.
ರೆಡ್ಡಿ ಪುತ್ರ ಕಿರೀಟಿ ಹೊಸ ಚಿತ್ರಕ್ಕೆ ರಾಜಮೌಳಿ ಅನುಮೋದನೆ
ಕೆಲ ದಿನಗಳಿಂದ ಬಳ್ಳಾರಿಯಿಂದ ಗಾಂಧಿನಗರ ತನಕ ಗಾಂಧಿನಗರದಿಂದ ಟಾಲಿವುಡ್​ನ ಮಾಯ ಸಿನಿ ಬಜಾರ್ ತನಕ ಗಾಳಿ ಸುದ್ದಿಯಾಗಿ ಹಬ್ಬಿತ್ತು. ಈಗ ಆ ಗಾಳಿ ಸುದ್ದಿಗೆ ಜೀವ ಬಂದಿದೆ. ಮಾಜಿ ಸಚಿವ ಜನಾರ್ದನ್ ರೆಡ್ಡಿ ಅವರ ಸುಪುತ್ರ ಕಿರೀಟಿ ಹೀರೋ ಸಿನಿಮಾ ರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡ್ತಿದ್ದಾರೆ.
ಹೌದು, ಜನಾರ್ಧನ್ ರೆಡ್ಡಿ ಅವರ ಪುತ್ರ ಸಿನಿಮಾ ರಂಗಕ್ಕೆ ಬರೋದು ಪಕ್ಕಾ ಆಗಿದೆ. ಸಿನಿಮಾ ಬ್ಯಾನರು, ಡೈರೆಕ್ಟರು ಎಲ್ಲವೂ ಫೈನಲ್ ಆಗಿದೆ.. ಶಿವರಾತ್ರಿ ಹಬ್ಬದ ಪ್ರಯುಕ್ತ ರೆಡ್ಡಿ ಫ್ಯಾಮಿಲಿಯಿಂದ ಈ ಗುಟ್ಟದಾ ಸಿನಿಮಾ ವಿಚಾರ ಚಿತ್ರಪ್ರೇಮಿಗಳೇ ತಂಡಕ್ಕೆ ಸಿಕ್ಕಿದೆ.
ಹೀರೋ ಆಗಿ ಲಾಂಚ್ ಆಗ್ತಿದ್ದಾರೆ ರೆಡ್ಡಿ ಪುತ್ರ ಕಿರೀಟಿ
ಟಾಲಿವುಡ್‌ನ ಜನಪ್ರಿಯ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಹೈ ಬಜೆಟ್ ಹಾಗೂ ಕಂಟೆಂಟ್ ಸಿನಿಮಾಗಳನ್ನು ಪ್ರೇಕ್ಷಕರ ಮಡಿಲಿಗೆ ಹಾಕ್ತಿದೆ. ಇದೀಗ ವಾರಾಹಿ ರಾಧಾ ಕೃಷ್ಣ ಸಾರಥ್ಯದಲ್ಲಿ ತೆಲುಗು-ಕನ್ನಡ ಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡ್ತಿದ್ದು, ಈ ಚಿತ್ರದ ಮೂಲಕ ಜನಾರ್ಧನ ರೆಡ್ಡಿ ಪುತ್ರ ಕಿರೀಟಿಯನ್ನು ನಾಯಕನಾಗಿ ಪರಿಚಯಿಸ್ತಿದೆ.
ಕಿರೀಟಿ ರೆಡ್ಡಿ ನಟಿಸಲಿರುವ ಹೆಸರಿಡದ ಈ ಸಿನಿಮಾವನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಲಾಗ್ತಿದ್ದು, ಲವ್ ಮತ್ತು ಫ್ಯಾಮಿಲಿ ಎಂಟರ್‌ಟೈನರ್ ಕಥಾಹಂದರದ ಚಿತ್ರವಾಗಿರಲಿದೆ. ಕಿರೀಟಿ ನಟನೆಯ ಮೊದಲ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇರಲಿದ್ದು,‌ ಹಲವು ಸೂಪರ್ ಹಿಟ್ ಸಿನಿಮಾಗಳ ತಂತ್ರಜ್ಞರನ್ನು ಈ ಸಿನಿಮಾದ ಭಾಗವಾಗಿದ್ದಾರೆ.
ಸಾಯಿ ಕೊರಪಾಠಿ ನಿರ್ಮಿಸಲಿರುವ ಚಿತ್ರಕ್ಕೆ ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಲಿದ್ದು, ಬಾಹುಬಲಿ ಸಿನಿಮಾದ ಕಣ್ಣು ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣವನ್ನು ವಹಿಸಲಿದ್ದಾರೆ. ರವೀಂದರ್ ಆರ್ಟ್ ಡೈರೆಕ್ಟರ್ ಆಗಿ, ಭಾರತದ ಟಾಪ್ ಸ್ಟಂಟ್ ನಿರ್ದೇಶಕ ಪೀಟರ್ ಹೆನ್ ಆಕ್ಷನ್ ಸೀಕ್ವೆನ್ಸ್‌ಗಳಿಗೆ ನೃತ್ಯ ಸಂಯೋಜನೆ ಮಾಡಲಿದ್ದಾರೆ. ಮಾರ್ಚ್ 4 ರಂದು ಚಿತ್ರದ ಅದ್ಧೂರಿ ಲಾಂಚ್ ಕಾರ್ಯಕ್ರಮ ನಡೆಯಲಿದ್ದು ಈ ಚಿತ್ರವನ್ನ ರಾಜಮೌಳಿ ಕ್ಲಾಪ್ ಮಾಡುವ ಮೂಲಕ ಶುಭ ಕೊರಲಿದ್ದಾರೆ.
newsfirstlive-epaper-firnew





 

ಜೀವ ಉಳಿಸಿಕೊಳ್ಳಲು ಹೋದಾತ ಜೀವನವನ್ನೇ ಕಳೆದುಕೊಂಡ

ದಾವಣಗೆರೆ: ಹೊರಗಡೆ ಜೀವ ಕಳೆದುಕೊಳ್ಳುವ ಭಯ. ಒಳಗಡೆ ಜೀವ ಉಳಿಸಿಕೊಳ್ಳುವ ಭಯ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಹಸಿವು ನೀಗಿಸಿಕೊಳ್ಳಲು ಹೊರಗೆ ಕಾಲಿಟ್ಟವನು ಕೊನೆಗೂ ಶೆಲ್‌ ದಾಳಿಗೆ ಗುರಿಯಾದ.
ಬಂಕರ್‌ನಲ್ಲಿ ತಿನ್ನಲು ಏನೂ ಇಲ್ಲದ್ದರಿಂದ ಮಂಗಳವಾರ ಬೆಳಗ್ಗೆ ನವೀನ, ತನಗೆ ಹಾಗೂ ತನ್ನೊಟ್ಟಿಗೆ ಇರುವ ಇಬ್ಬರು ಸ್ನೇಹಿತರಿಗಾಗಿ ತಿಂಡಿ ತರಲು ಬಂಕರ್‌ನಿಂದ ಹೊರಗಡೆ ಬಂದ. ಅಣತಿ ದೂರ ಹೋಗುತ್ತಿದ್ದಂತೆ ಆ ವೇಳೆ ನಡೆಯುತ್ತಿದ್ದ ಶೆಲ್‌ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡೇ ಬಿಟ್ಟ. ಹಸಿವಿನಿಂದ ಜೀವ ಉಳಿಸಿಕೊಳ್ಳಲು ಹೊರಟವನ ಪ್ರಾಣ, ಶೆಲ್‌ಗ‌ಳ ದಾಹಕ್ಕೆ ಆಹುತಿಯಾಯಿತು.
ರಷ್ಯಾ-ಉಕ್ರೇನ್‌ ಯುದ್ಧ ಆರಂಭ
ವಾಗುತ್ತಿದ್ದಂತೆ ಖಾರ್ಕಿವ್‌ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದ ನೂರಾರು ವಿದ್ಯಾರ್ಥಿಗಳನ್ನು ಬಂಕರ್‌ಗಳಲ್ಲಿ ರಕ್ಷಣೆ ಮಾಡಲಾಗಿತ್ತು. ಅದೇ ರೀತಿ ರಾಣಿಬೆನ್ನೂರು ತಾಲೂಕಿನ ಚಳಗೇರಿಯ ಮೂವರು (ಅಮಿತ್‌, ನವೀನ್‌, ಸುಮನ್‌) ವಿದ್ಯಾರ್ಥಿಗಳು ಒಂದೇ ಬಂಕರ್‌ನಲ್ಲಿದ್ದರು. ಕಳೆದ ಮೂರ್‍ನಾಲ್ಕು ದಿನಗಳಿಂದ ಆಹಾರ ಸಿಗದೆ ಪರಿತಪಿಸುತ್ತಿದ್ದು ಒಣಹಣ್ಣು, ಬಿಸ್ಕೆಟ್‌ನಂಥ ತಿಂಡಿ ತಿಂದು ದಿನ ಕಳೆಯುತ್ತಿದ್ದರು. ಇದ್ದಷ್ಟು ತಿಂಡಿ ಖಾಲಿಯಾಗಿದ್ದರಿಂದ ಅಮಿತ್‌, ತಿಂಡಿ ತರಲು ಹೊರಗಡೆ ಹೋಗಲು ಸಿದ್ಧನಾದ. ಆಗ ನವೀನ್‌, ನೀನು ಬೇಡ. ಹೊರಗೆ ಎಚ್ಚರಿಕೆಯಿಂದ ಹೋಗಬೇಕು. ನಾನೇ ಹೋಗುತ್ತೇನೆ’ ಎಂದು ಆತನನ್ನು ತಡೆದು ತಾನೇ ಬಂಕರ್‌ ಹೊರಗೆ ಕಾಲಿಟ್ಟ.
ಕರೆ ಸ್ವೀಕರಿಸಲಿಲ್ಲ
ಒಂದು ಗಂಟೆಯಾದರೂ ಮರಳಿ ಬಾರದೇ ಇರುವುದರಿಂದ ಸ್ನೇಹಿತರು ನವೀನ್‌ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಮೊಬೈಲ್‌ ರಿಂಗಣಿಸಿತ್ತಾದರೂ ಕರೆ ಸ್ವೀಕರಿಸಲಿಲ್ಲ. ಇದರಿಂದ ಭಯಗೊಂಡ ಸ್ನೇಹಿತರು ಚಳಗೇರಿಗೆ ಕರೆ ಮಾಡಿ ಪಾಲಕರಿಗೆ ವಿಷಯ ಮುಟ್ಟಿಸಿದರು. ಪಾಲಕರು ವಿಚಾರ ಮಾಡುವಷ್ಟರಲ್ಲಿ ವಿದೇಶಾಂಗ ಸಚಿವಾಲಯದಿಂದ ನವೀನ್‌ ಮೃತಪಟ್ಟ ಅಧಿಕೃತ ಮಾಹಿತಿ ಬಂದಿತ್ತು. ವಿಷಯ ತಿಳಿದ ತಂದೆ-ತಾಯಿ ಇದ್ದಲ್ಲೇ ಕುಸಿದು ಬಿದ್ದರು. ಇತ್ತ ಬಂಕರ್‌ನಲ್ಲಿರುವ ಸ್ನೇಹಿತರಿಗೆ ನವೀನ್‌ ಶೆಲ್‌ ದಾಳಿಗೆ ತುತ್ತಾಗಿರುವ ಸುದ್ದಿ ತಿಳಿದು ಜೀವ ಭಯದಲ್ಲೇ ಮುದುಡಿಕೊಂಡಿದ್ದಾರೆ.
ಯುದ್ಧ ಸಂದರ್ಭ ಶೆಲ್‌ ದಾಳಿಗೆ ತುತ್ತಾದ ಸಹೋದರನ ಮಗ ನವೀನನ ಸಾವಿನ ಘಟನೆಯನ್ನು ಮಾಧ್ಯಮದವರ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟ ಉಜ್ಜನಗೌಡ ಗ್ಯಾನಗೌಡರ ಕಣ್ಣುಗಳಲ್ಲಿ ನೀರಿನ ಹರಿವು ನಿಲ್ಲಲೇ ಇಲ್ಲ.
ಸ್ನೇಹಿತ ನವೀನ್‌ ಸಾವಿನ ಸುದ್ದಿ ಕೇಳಿ ನಮ್ಮ ಮಕ್ಕಳು ಬಹಳ ಆತಂಕಗೊಂಡಿದ್ದಾರೆ. ಬಹಳ ಸಂಕಷ್ಟದಲ್ಲಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರಲು ಸರಕಾರ ಕೂಡಲೇ ಕ್ರಮ ವಹಿಸಬೇಕು.
– ಶ್ರೀಧರ ವೈಶ್ಯರ, ವೆಂಕಟೇಶ ವೈಶ್ಯರ (ಅಮಿತ್‌, ಸುಮನ್‌ ಅವರ ಪಾಲಕರು)


 ಮಾಹಿತಿ ಕೃಪೆ kannada/udayavani-epaper-udayavani


 

BIG NEWS : ಝೈಟೋಮಿರ್ ಪ್ರದೇಶದಲ್ಲಿ ರಷ್ಯಾ ಅಟ್ಯಾಕ್‌ , 10 ಮನೆಗಳಿಗೆ ಹಾನಿ, 2 ಮಂದಿ ಸಾವು, 3 ಮಂದಿಗೆ ಗಂಭೀರ ಗಾಯ


ಹೊಸದಿಲ್ಲಿ: ಝೈಟೊಮಿರ್ ಮೇಲೆ ರಷ್ಯಾ ನಡೆಸಿದ ವೈಮಾನಿಕ ದಾಳಿಯ ಪರಿಣಾಮವಾಗಿ 10 ಖಾಸಗಿ ವಸತಿ ಗೃಹಗಳು ಮತ್ತು ನಗರದ ಆಸ್ಪತ್ರೆಗೆ ಹಾನಿಯಾಗಿದೆ. ಈ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, 'ಮಾರ್ಚ್ 1 ರಂದು ನಡೆದ ವೈಮಾನಿಕ ದಾಳಿಯ ಪರಿಣಾಮವಾಗಿ 22:16 ರ ಸುಮಾರಿಗೆ, 10 ಖಾಸಗಿ ವಸತಿ ಮನೆಗಳು ನಾಶವಾದವು (ಅವುಗಳಲ್ಲಿ 3 ಬೆಂಕಿ ಹೊತ್ತಿಕೊಂಡವು) ಮತ್ತು ನಗರದ ಆಸ್ಪತ್ರೆ ಕಟ್ಟಡದಲ್ಲಿ ಕಿಟಕಿಗಳು ಹಾನಿಗೊಳಗಾದವು.
ಇಬ್ಬರು ಸಾವನ್ನಪ್ಪಿದರು, ಮೂವರು ಗಾಯಗೊಂಡರು. 'ಹಾನಿಗೊಳಗಾದ ಖಾಸಗಿ ಮನೆಗಳ ಅವಶೇಷಗಳಡಿಯಲ್ಲಿ ಜನರು ಸಿಲುಕಿರುವ ಸಾಧ್ಯತೆಯಿದೆ' ಎಂದು ಉಕ್ರೇನ್‌ನ ರಾಜ್ಯ ತುರ್ತು ಸೇವೆ ಟೆಲಿಗ್ರಾಮ್‌ನಲ್ಲಿ ಪೋಸ್ಟ್ ಮಾಡಿದೆ. ರಷ್ಯಾದ ಸೇನೆಯು ಝಪೋರಿಜ್ಝಿಯಾ ಪ್ರದೇಶದಲ್ಲಿ ನಾಗರಿಕ ಮೂಲಸೌಕರ್ಯಗಳ ಮೇಲೆ ವಾಯುದಾಳಿಗಳನ್ನು ನಡೆಸಿತು.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಫೆಬ್ರವರಿ 24 ರಂದು ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದರು ಮತ್ತು ಬೃಹತ್ ಆಕ್ರಮಣವನ್ನು ಪ್ರಾರಂಭಿಸಿದರು. ರಷ್ಯಾದ ಪಡೆಗಳು ಶೆಲ್ ದಾಳಿ ನಡೆಸುತ್ತಿವೆ ಮತ್ತು ಪ್ರಮುಖ ಮೂಲಸೌಕರ್ಯ ಸೌಲಭ್ಯಗಳನ್ನು ನಾಶಪಡಿಸುತ್ತಿವೆ.
ಉಕ್ರೇನ್‌ನಲ್ಲಿ ಮಾರ್ಷಲ್ ಕಾನೂನನ್ನು ಘೋಷಿಸಲಾಯಿತು. ಉಕ್ರೇನ್ ರಷ್ಯಾದ ಒಕ್ಕೂಟದ ವಿರುದ್ಧ ಹೇಗ್‌ನಲ್ಲಿರುವ ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಅಧಿಕೃತವಾಗಿ ಮೊಕದ್ದಮೆ ಹೂಡಿತು. ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಪ್ರಾಸಿಕ್ಯೂಟರ್ ಕರೀಮ್ ಖಾನ್ ಉಕ್ರೇನ್ ಪರಿಸ್ಥಿತಿಯ ಬಗ್ಗೆ ತನಿಖೆಯನ್ನು ವಿವರಿಸಿದ್ದಾರೆ

 ಮಾಹಿತಿ ಕೃಪೆ  kannada/kannadanewsnow-epaper


 

Modi: ನರೇಂದ್ರ ಮೋದಿಯವರ ತಾಯಿಯ ತೂಕದಷ್ಟು ಚಿನ್ನದಿಂದ ಕಾಶಿ ವಿಶ್ವನಾಥ ದೇಗುಲಕ್ಕೆ ಅಲಂಕಾರ!




ವಾರಾಣಸಿ, ಉತ್ತರ ಪ್ರದೇಶ: ಕೆಲ ತಿಂಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಕಾಶಿ ವಿಶ್ವನಾಥ ಸ್ವಾಮಿ (Kashi Vishwanatha Swamy) ದೇಗುಲದ (Temple) ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಮಾಡಿದ್ದರು. ಅದಾದ ಬಳಿಕ ಕಾಶಿ ವಿಶ್ವನಾಥನ ಸನ್ನಿಧಿಗೆ ಬರುವ ಭಕ್ತರು (Devotees), ಪ್ರವಾಸಿಗರ (Tourists) ಸಂಖ್ಯೆಯೂ ಜಾಸ್ತಿಯಾಗಿತ್ತು.
ಇದೀಗ ಕಾಶಿ ವಿಶ್ವನಾಥ ದೇವಸ್ಥಾನದಿಂದ ಮತ್ತೊಂದು ಹೊಸ ಸುದ್ದಿ ಬಂದಿದೆ. ಅದೇನಪ್ಪಾ ಅಂದ್ರೆ ದಕ್ಷಿಣ ಭಾರತದ (South India) ಉದ್ಯಮಿಯೊಬ್ಬರು (Industrialist) ಕಾಶಿ ವಿಶ್ವನಾಥ ದೇವಸ್ಥಾನಕ್ಕೆ 60 ಕೆಜಿ ಚಿನ್ನವನ್ನು (60 KG Gold) ದಾನ ಮಾಡಿದ್ದಾರಂತೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ (Mother) ಹೀರಾಬೆನ್‌ (Heera Ben) ಅವರ ತೂಕಕ್ಕೆ ಸಮನಾದ ಅಂದರೆ 37 ಕೆಜಿಯಷ್ಟು ಚಿನ್ನವನ್ನು ಬಳಸಿ, ವಿಶ್ವನಾಥನ ಸನ್ನಿಧಿಯ ಗರ್ಭಗುಡಿಯ ಒಳ ಗೋಡೆಗಳನ್ನು ಅಲಂಕರಿಸಲಾಗಿದೆ.
ಇತ್ತೀಚೆಗೆ ನವೀಕರಣಗೊಂಡಿರುವ ಕಾಶಿ ವಿಶ್ವನಾಥ ದೇವಾಲಯಕ್ಕೆ ಅನಾಮಧೇಯ ವ್ಯಕ್ತಿಯೊಬ್ಬರು 60 ಕೆಜಿ ಚಿನ್ನವನ್ನು ದೇಣಿಗೆಯಾಗಿ ನೀಡಿದ್ದು, ಈ ಪೈಕಿ 37 ಕೆ.ಜಿ. ಚಿನ್ನವನ್ನು ಗರ್ಭಗಡಿಯ ಒಳಗೋಡೆಗಳಿಗೆ ಲೇಪನ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.
ದೇಗುಲ ಆಡಳಿತ ಮಂಡಳಿಯಿಂದ ಫೋಟೋ ರಿಲೀಸ್
ಗೋಡೆಗಳ ಮೇಲೆ ಹೊಳೆಯುವ ಚಿನ್ನದ ಲೇಪನವನ್ನು ಪ್ರಧಾನಿ ಮೋದಿ ಅವರು ಕಳೆದ ಭಾನುವಾರ ಪ್ರಚಾರದ ವೇಳೆ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಖುದ್ದು ನೋಡಿದರು. ಈ ಚಿತ್ರಗಳನ್ನು ಕಾಶಿ ವಿಶ್ವನಾಥ ದೇಗುಲದ ಆಡಳಿತ ಮಂಡಳಿ ಬಿಡುಗಡೆ ಮಾಡಿದೆ.
ದಕ್ಷಿಣ ಭಾರತದ ಅನಾಮಧೇಯ ಉದ್ಯಮಿಯಿಂದ ದಾನ
ಬರೋಬ್ಬರಿ 60 ಕೆಜಿ ತೂಕದ ಚಿನ್ನವನ್ನು ಕಾಶಿ ವಿಶ್ವನಾಥ ದೇವಾಲಯಕ್ಕೆ ದಕ್ಷಿಣ ಭಾರತದ ಅನಾಮಧೇಯ ಉದ್ಯಮಿಯೊಬ್ಬರು ದಾನವಾಗಿ ನೀಡಿದ್ದಾರೆ ಎನ್ನಲಾಗಿದೆ. 60 ಕೆ.ಜಿ. ಚಿನ್ನದ ಪೈಕಿ 37 ಕೆಜಿ ಚಿನ್ನವನ್ನು ಗರ್ಭಗುಡಿ ಒಳಗೋಡೆಗೆ ಲೇಪನ ಮಾಡಲು ಬಳಸಲಾಗಿದೆ. ಉಳಿದ 23 ಕೆ.ಜಿ. ಚಿನ್ನವನ್ನು ಕಾಶಿ ವಿಶ್ವನಾಥ ದೇವಾಲಯದ ಗುಮ್ಮಟದ ಕೆಳಭಾಗವನ್ನು ಅಲಂಕರಿಸಲು ಬಳಸಲಾಗುವುದು ಅಂತ ದೇಗುಲದ ಆಡಳಿತ ಮಂಡಳಿ ತಿಳಿಸಿದೆ.
37 ಕೆಜಿ ಚಿನ್ನವನ್ನಷ್ಟೇ ಬಳಸಿದ್ದು ಯಾಕೆ?
37 ಕೆ.ಜಿಯನ್ನೇ ಬಳಸಿದ್ದರ ಹಿಂದೆ ವಿಶೇಷ ಉದ್ದೇಶವಿದೆ. ಇದು ಇತ್ತೀಚೆಗೆ 100 ವರ್ಷ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ರ ಈಗಿನ ತೂಕ. ಹೀಗಾಗಿ ಅವರ ಗೌರವಾರ್ಥ 37 ಕೆಜಿ ತೂಕದ ಚಿನ್ನವನ್ನಷ್ಟೇ ಬಳಸಿ ಕಾಶಿ ವಿಶ್ವನಾಥನ ಗರ್ಭಗುಡಿಯ ಒಳಗೋಡೆ ಅಲಂಕರಿಸಲಾಗಿದೆ.
ಈ ಹಿಂದೆಯೇ ದೇಗುಲಕ್ಕೆ ಚಿನ್ನದ ಲೇಪನ
18ನೇ ಶತಮಾನದ ಬಳಿಕ ಮೊದಲ ಬಾರಿಗೆ ದೇವಾಲಯದಲ್ಲಿ ದೊಡ್ಡ ಪ್ರಮಾಣದಲ್ಲಿ ಚಿನ್ನದ ಲೇಪನ ಮಾಡಲಾಗಿತ್ತು. 1777ರಲ್ಲಿ ಇಂದೋರಿನ ಮಹಾರಾಣಿ ಅಹಲ್ಯಾ ಬಾಯಿ ಹೋಳ್ಕರ್‌ ಹಾಗೂ ಪಂಜಾಬಿನ ಮಹಾರಾಜ ರಣಜೀತ್‌ ಸಿಂಗ್‌ ಕಾಶಿ ವಿಶ್ವನಾಥ ದೇವಾಲಯದ ಗುಮ್ಮಟ ನಿರ್ಮಾಣಕ್ಕೆ 1 ಟನ್‌ ಚಿನ್ನವನ್ನು ದೇಣಿಗೆಯಾಗಿ ನೀಡಿದ್ದರು.
2017ರಿಂದಲೂ ಅಭಿವೃದ್ಧಿ ಕಾರ್ಯ
2017ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇವಾಲಯದ ಜೀರ್ಣೋದ್ಧಾರ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿತ್ತು. ಸುಮಾರು 900 ಕೋಟಿ ರು. ವೆಚ್ಚದಲ್ಲಿ ಜೀರ್ಣೋದ್ದಾರ ಮಾಡಲಾಗಿದೆ. ಸುತ್ತ ಮುತ್ತಲಿನ ಸುಮಾರು 300 ಕಟ್ಟಡಗಳನ್ನು ಖರೀದಿಸಿ ದೇವಾಸ್ಥಾನದ ಪ್ರಾಕಾರವನ್ನು 2700 ಚದರ ಅಡಿಯಿಂದ 5 ಲಕ್ಷ ಚದರ ಅಡಿಗೆ ಹೆಚ್ಚಿಸಲಾಗಿದೆ.
  
ಮಾಹಿತಿ ಕೃಪೆ   kannada/news18kannada-epaper


 

ಚನ್ನಪಟ್ಟಣ: ಮಾಂಸದೂಟ ಸವಿದು ಶಿವನನ್ನು ಆರಾಧಿಸುವ ಶಿವರಾತ್ರಿಯ ವಿಶಿಷ್ಟ ಆಚರಣೆ

ರಾಮನಗರ, ಮಾರ್ಚ್ 1: ನಾಡಿನೆಲ್ಲಡೆ ಶಿವರಾತ್ರಿ ಹಬ್ಬವನ್ನು ಕಠಿಣ ವ್ರತಾಚರಣೆಯ ಮೂಲಕ ಸಂಭ್ರಮ, ಸಡಗರ, ಭಕ್ತಿಯಿಂದ ಆಚರಿಸಲಾಗುತ್ತದೆ. ಅನೇಕ ಭಕ್ತರು ಉಪವಾಸವಿದ್ದು, ರಾತ್ರಿ ಇಡೀ ಜಾಗರಣೆ ಮಾಡಿ ಶಿವನನ್ನು ಭಕ್ತಿಯಿಂದ ಆರಾಧಿಸುತ್ತಾರೆ.
ಚನ್ನಪಟ್ಟಣ ತಾಲ್ಲೂಕಿನ ಗ್ರಾಮದಲ್ಲಿ ಒಂದರಲ್ಲಿ ಶಿವರಾತ್ರಿ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಾರೆ.
ಗ್ರಾಮದಲ್ಲಿರುವ ದೇವಸ್ಥಾನದ ಆವಣರದಲ್ಲಿ ಮಾಂಸದೂಟ ಮಾಡಿ, ಎಲ್ಲರೂ ಒಟ್ಟಿಗೆ ಕುಳಿತು ಮಾಂಸದೂಟ ಸವಿದು ನಂತರ ಇಡೀ ರಾತ್ರಿ ಶಿವನನ್ನು ಆರಾಧಿಸುತ್ತಾ, ಹಬ್ಬವನ್ನು ಆಚರಣೆ ಮಾಡುತ್ತಾರೆ.
ಚನ್ನಪಟ್ಟಣ ತಾಲ್ಲೂಕಿನ ಮಂಗಾಡಹಳ್ಳಿ ಗ್ರಾಮದ ಸಿದ್ದಪ್ಪಾಜಿ ದೇವಾಲಯದಲ್ಲಿ ಹಬ್ಬದ ದಿನದಂದೇ ದೇವಸ್ಥಾನದ ಭಕ್ತರೆಲ್ಲ ಸೇರಿ ಮಾಂಸದೂಟ ತಯಾರು ಮಾಡಿ, ದೇವಸ್ಥಾನದ ಬಳಿಯೇ ಪ್ರಸಾದವನ್ನು ಸವಿದು ನಂತರ ಇಡೀ ರಾತ್ರಿ ಎಚ್ಚರವಾಗಿದ್ದು, ಶಿವರಾತ್ರಿಯ ಜಾಗರಣೆ ಮಾಡುತ್ತಾರೆ.
ಸುಮಾರು 70 ಗ್ರಾಮಗಳಲ್ಲಿನ ಭಕ್ತರೆಲ್ಲರೂ ಸೇರಿ ಕುರಿ, ಕೋಳಿ, ತಂದು ಬಲಿಕೊಟ್ಟು ಅಲ್ಲಿಯೇ ಪ್ರಸಾದವನ್ನು ತಯಾರು ಮಾಡುತ್ತಾರೆ. ಆನಂತರ ದೇವರಿಗೆ ಪ್ರಸಾದ ಸಮರ್ಪಣೆ ಮಾಡಿ, ನಂತರ ದೇವಸ್ಥಾನದ ಮುಂಭಾಗದ ಕುಳಿತ ಪ್ರಸಾದ ಸೇವಿಸುತ್ತಾರೆ. ಈ ಬಾರಿ ಸುಮಾರು 300 ಕೋಳಿಗಳನ್ನು ಹಬ್ಬಕ್ಕೆಂದು ಸಮರ್ಪಣೆ ಮಾಡಿದ್ದಾರೆ. ಸುಮಾರು ಮೂರು ಸಾವಿರ ಭಕ್ತರು ಒಟ್ಟಿಗೆ ಕುಳಿತು ಮಾಂಸದ ಪ್ರಸಾದವನ್ನು ಸೇವಿಸಿದರು.
ಶಿವರಾತ್ರಿಯ ಮಾಂಸದೂಟದ ಪದ್ಧತಿ ಕಳೆದ ಎಂಟು ತಲೆಮಾರುಗಳಿಂದ ನಡೆದುಕೊಂಡು ಬಂದಿದೆ. ದೇವಾಲಯಕ್ಕೆ ಬರುವ ಭಕ್ತರು ತಮ್ಮ ಕಷ್ಟ ಕಾರ್ಪಣ್ಯ ದೂರವಾಗಲಿ ಎಂದು ದೇವಸ್ಥಾನಕ್ಕೆ ಬಂದು ಹರಕೆ ಮಾಡಿಕೊಳ್ಳುತ್ತಾರೆ. ತಮ್ಮ ಇಷ್ಠಾರ್ಥಗಳು ನೆರೆವೇರಿದ ಬಳಿಕ ಶಿವರಾತ್ರಿ ದಿನದಂದು ಕೋಳಿ, ಕುರಿ ನೀಡುವ ಮೂಲಕ ತಮ್ಮ ಹರಕೆ ತೀರಿಸುತ್ತಾರೆ.
ಇನ್ನು ಕೇವಲ ಶಿವರಾತ್ರಿ ದಿನದಂದು ಮಾತ್ರ ಅಲ್ಲ. ಗೌರಿ ಹಬ್ಬ ಸೋಮವಾರದಂದು ಬಂದರೂ ಅಂದು ಸಹ ಮಾಂಸದೂಟವನ್ನು ಮಾಡಲಾಗುತ್ತದೆ. ಈ ರೀತಿಯ ವಿಭಿನ್ನ ಆಚರಣೆಗೆ ಕೇವಲ ಚನ್ನಪಟ್ಟಣ ತಾಲ್ಲೂಕಿನ ಮಂಗಾಡಹಳ್ಳಿ ಗ್ರಾಮದ ಭಕ್ತರು ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮದ ಭಕ್ತರು ಭಾಗಿಯಾಗಿ ಮಂಸದೂಟ ಸವಿದರು.
"ಕಳೆದ 15 ವರ್ಷಗಳ ಹಿಂದೆ ಮಾಂಸದೂಟದ ಪದ್ಧತಿಯನ್ನು ನಿಲ್ಲಿಸಬೇಕೆಂದು ಗ್ರಾಮಸ್ಥರು ಚಿಂತನೆ ಮಾಡಿ, ಶಿವರಾತ್ರಿ ದಿನ ಸಿಹಿಯೂಟ ಮಾಡಿ ಶಿವರಾತ್ರಿಯ ಜಾಗರಣೆ ಪ್ರಾರಂಭಿಸಿದ್ದರು. ಆದರೆ ಮಧ್ಯರಾತ್ರಿ ಸುಮಾರಿಗೆ ಭಕ್ತರು ನೀಡಿದ್ದ ಹರಕೆಯ ಕೋಳಿಗಳು ದೇವಸ್ಥಾನದ ಗರ್ಭಗುಡಿ ಒಳಗೆ ನುಗ್ಗಿದ್ದವು. ಹೀಗಾಗಿ ಮತ್ತೆ ಆಚರಣೆ ಮುಂದುವರೆಸಿಕೊಂಡು ಬಂದಿದ್ದೇವೆ," ಎನ್ನುತ್ತಾರೆ ದೇವಾಲಯದ ಅರ್ಚಕ ಬೆಟ್ಟದ್ದಪ್ಪ ಸ್ವಾಮಿ.

kannada/oneindiakannada-epaper

ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರಾ ರಶ್ಮಿಕಾ - ವಿಜಯ್​ ದೇವರಕೊಂಡ ಜೋಡಿ...? ಸಂದರ್ಶನದಲ್ಲಿ ಮದುವೆ ವಿಚಾರ ಹೇಳಿದ್ದೇನು 'ಪುಷ್ಪಾ' ನಟಿ

ಕಳೆದ ವಾರದಿಂದ ನಟ ವಿಜಯ್​ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣರ ಮದುವೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದಾಗಿ ಒಂದು ವಾರದ ಬಳಿಕ ನಟಿ ರಶ್ಮಿಕಾ ಮಂದಣ್ಣ ತೆಲುಗು ಸಂದರ್ಶನವೊಂದರಲ್ಲಿ ನಮ್ಮ ಮದುವೆಯ ಪ್ಲಾನ್​ಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ನಟ ವಿಜಯ್​ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಡೇಟಿಂಗ್​ನಲ್ಲಿದ್ದು ಇವರಿಬ್ಬರು ಜೊತೆಯಾಗಿ ಹೊರಗಡೆ ಸುತ್ತಾಡುತ್ತಿರುವ ಫೋಟೋಗಳು ಆಗಾಗ ಕ್ಯಾಮರಾ ಕಣ್ಣಿಗೆ ಬೀಳುತ್ತಲೇ ಇರುತ್ತದೆ.
ಕಳೆದ ವಾರ, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಈ ವರ್ಷದ ಕೊನೆಯಲ್ಲಿ ಮದುವೆಯಾಗುತ್ತಾರೆ ಎಂಬ ವದಂತಿಗಳು ಹರಿದಾಡಿದ್ದವು. ಸುದ್ದಿ ವೈರಲ್ ಆದ ನಂತರ, ನಟ ಅರ್ಜುನ್ ರೆಡ್ಡಿ ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್ ಮೂಲಕ ವದಂತಿಗಳನ್ನು ತಳ್ಳಿಹಾಕಿದರು.
ಇದೀಗ ನಟಿ ರಶ್ಮಿಕಾ ಮಂದಣ್ಣ ಕೂಡ ಸಂದರ್ಶನವೊಂದರಲ್ಲಿ ತಮ್ಮ ಮದುವೆಯ ವದಂತಿಗಳನ್ನು ತಳ್ಳಿ ಹಾಕಿದ್ದಾರೆ. ನಿಮ್ಮ ಮುಂದಿನ ಯೋಜನೆಗಳು ಏನು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ನಟಿ ರಶ್ಮಿಕಾ, ಇವೆಲ್ಲವು ಒಂದು ಟೈಮ್​ ಪಾಸ್​ ವದಂತಿ. ನಾನು ಮದುವೆಯಾಗಲು ಇನ್ನೂ ಸಾಕಷ್ಟು ಸಮಯವಿದೆ. ಸಮಯ ಬಂದಾಗ ನಾನು ಖಂಡಿತವಾಗಿಯೂ ಮದುವೆಯಾಗ್ತೇನೆ. ಈ ರೀತಿಯ ವದಂತಿಗಳನ್ನು ನೋಡಿ ನಾನು ಅದನ್ನು ಸುಮ್ಮನೇ ಬಿಟ್ಟುಬಿಡುತ್ತೇನೆ ಎಂದು ಹೇಳಿದರು.
ನಿರ್ದೇಶಕ ಪರಶುರಾಮ್​ರ ಗೀತ ಗೋವಿಂದಂ ಸಿನಿಮಾ ಮೂಲಕ ನಟ ವಿಜಯ್​ ದೇವರಕೊಂಡ ಹಾಗು ರಶ್ಮಿಕಾ ಮಂದಣ್ಣ ಮೊಟ್ಟ ಮೊದಲ ಬಾರಿಗೆ ತೆರೆ ಮೇಲೆ ಒಂದಾಗಿ ಕಾಣಿಸಿಕೊಂಡಿತ್ತು. ಈ ಸಿನಿಮಾ ಬಾಕ್ಸಾಫೀಸಿನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು, ಅಲ್ಲದೇ ಇದು ನಟಿ ರಶ್ಮಿಕಾಗೆ ತೆಲುಗು ಚಿತ್ರರಂಗದಲ್ಲಿ ಬಲವಾಗಿ ಬೇರೂರುವಂತೆ ಮಾಡಿತು. ಇಬ್ಬರ ತೆರೆ ಮೇಲಿನ ಕೆಮಿಸ್ಟ್ರಿಗೆ ಒಂದು ದೊಡ್ಡ ಅಭಿಮಾನಿ ಬಳಗವೇ ಹುಟ್ಟುಕೊಂಡಿತು.
kannada/kannadadunia-epaper


 

Baba Vanga : `ರಷ್ಯಾ - ಉಕ್ರೇನ್' ಯುದ್ಧದ ಬಗ್ಗೆ ಬಾಬಾ ವಾಂಗಾ `ಸ್ಪೋಟಕ' ಭವಿಷ್ಯ!

 

ನವದೆಹಲಿ: ಉಕ್ರೇನ್ ಮತ್ತು ರಷ್ಯಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಗಳ ನಡುವೆ, ಬಲ್ಗೇರಿಯಾದ ಬಾಬಾ ವಂಗಾ ಅವರು ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಹಳೆಯ ಭವಿಷ್ಯ ನುಡಿದಿರುವುದು ವೈರಲ್ ಆಗುತ್ತಿದೆ.
ಬಾಬಾ ವಾಂಗಾ ಭವಿಷ್ಯದ ಪ್ರಕಾರ ರಷ್ಯಾ ಅಧ್ಯಕ್ಷ ಉಕ್ರೇನ್​ ಯುದ್ಧದ ಬಳಿಕ ಇನ್ನಷ್ಟು ಬಲಶಾಲಿಯಾಗಲಿದ್ದಾರೆ.
ರಷ್ಯಾ ಮುಂದಿನ ದಿನಗಳಲ್ಲಿ ಜಗತ್ತನ್ನೇ ಆಳಲಿದೆ. ಭವಿಷ್ಯದಲ್ಲಿ ರಷ್ಯಾ ಜಗತ್ತಿನ ರಾಜನಾಗಲಿದೆ. ಆದರೆ ಯುರೋಪ್​ ಪಾಳುಭೂಮಿಯಾಗಲಿದೆ. ಎಲ್ಲವೂ ಹಿಮದಂತೆ ಕರಗುತ್ತದೆ, ವ್ಲಾಡಿಮಿರ್ ಪುಟಿನ್ ಅವರ ವೈಭವ, ರಷ್ಯಾದ ವೈಭವ. ರಷ್ಯಾವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ರಷ್ಯಾ ಇಡೀ ಜಗತ್ತನ್ನು ಆಳುತ್ತದೆ ಎಂದಿದ್ದಾರೆ.
ಬಾಬಾ ವಂಗಾ 9/11 ಭಯೋತ್ಪಾದಕ ದಾಳಿ ಗಳು ಮತ್ತು ಬ್ರೆಕ್ಸಿಟ್ ನಂತಹ ಪ್ರಮುಖ ಘಟನೆಗಳ ಬಗ್ಗೆ ಈ ಹಿಂದೆ ಭವಿಷ್ಯ ನುಡಿದಿದ್ದರು. ಗಮನಾರ್ಹವಾಗಿ, ವ್ಯಾಂಜೆಲಿಯಾ ಗುಶ್ಟೆರೋವಾ ಎಂಬ ಅನುಭಾವಿ ತನ್ನ 12 ನೇ ವಯಸ್ಸಿನಲ್ಲಿ ತನ್ನ ದೃಷ್ಟಿಯನ್ನು ಕಳೆದುಕೊಂಡಳು ಮತ್ತು ಅದೇ ಸಮಯದಲ್ಲಿ ಭವಿಷ್ಯವನ್ನು ನೋಡಲು ದೇವರು ನೀಡಿದ ಉಡುಗೊರೆಯಿಂದ ತನಗೆ ನೀಡಲಾಯಿತು ಎಂದು ಹೇಳಿಕೊಂಡಳು. ಸೋವಿಯತ್ ಒಕ್ಕೂಟದ ವಿಸರ್ಜನೆ, 2001ರ ಸೆಪ್ಟೆಂಬರ್ 11ರ ದಾಳಿ, ರಾಜಕುಮಾರಿ ಡಯಾನಾ ಸಾವು ಮತ್ತು ಚೆರ್ನೊಬಿಲ್ ದುರಂತದ ಬಗ್ಗೆ ಅವರ ಹೇಳಿಕೆಗಳು ನಿಜವಾದವು.

kannadanewsnow-epaper