WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Saturday, May 30, 2020

ಕೋವಿಡ್ ನಿರ್ವಹಣೆಗೆ ನ್ಯಾಸ್ಕಾಮ್ ಟೂಲ್: ತಂತ್ರಜ್ಞಾನಕ್ಕೆ ಚಾಲನೆ ನೀಡಿದ ಡಿಸಿಎಂ

ಬೆಂಗಳೂರು: ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕೊವಿಡ್‌ ಪರಿಸ್ಥಿತಿ ನಿರ್ವಹಿಸಲು ಮುಂದಾಗಿರುವ ರಾಜ್ಯ ಸರ್ಕಾರ, ನ್ಯಾಸ್ಕಾಮ್‌ ಸಹಯೋಗದಲ್ಲಿ ದತ್ತಾಂಶ ವಿಶ್ಲೇಷಣೆ ಸಾಧನವನ್ನು ಅಭಿವೃದ್ಧಿಪಡಿಸಿದ್ದು, ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಇದನ್ನು ಶನಿವಾರ ಬಿಡುಗಡೆ ಮಾಡಿದರು.
ಐಟಿ-ಬಿಟಿ ವಲಯದ ಪ್ರಮುಖರ ಜತೆ ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್‌ವೇರ್ ಆಯಂಡ್ ಸರ್ವೀಸಸ್ ಕಂಪನೀಸ್ (ನ್ಯಾಸ್ಕಾಮ್‌) ಅಭಿವೃದ್ಧಿ ಪಡಿಸಿದ ದತ್ತಾಂಶ ವಿಶ್ಲೇಷಣೆ ಸಾಧನವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
'ಕೊರೊನಾ ಸೋಂಕು ಹರಡುವ ಸಾಧ್ಯತೆ ವಿವರ, ಸೋಂಕಿನ ಮೂಲ, ಅದರ ವರ್ಗೀಕರಣ, ಸೋಂಕಿನ ಪ್ರಮಾಣ, ಅಂಕಿ ಅಂಶದ ಮಾಹಿತಿ, ಸೋಂಕು ಪತ್ತೆ ಪರೀಕ್ಷೆ ವಿವರ, ಚಿಕಿತ್ಸೆ ಹಾಗೂ ಲಭ್ಯ ಇರುವ ಮೂಲಸೌಕರ್ಯ, ಮಾನವ ಸಂಪನ್ಮೂಲದ ರಿಯಲ್‌ ಟೈಮ್‌ ಮಾಹಿತಿ ಒದಗಿಸುವ ಈ ಸಾಧನ ಕೊವಿಡ್‌ ನಿಯಂತ್ರಣದಲ್ಲಿ ದೊಡ್ಡ ಮಟ್ಟದ ಸುಧಾರಣೆಗೆ ನೆರವಾಗಬಲ್ಲುದು. ನ್ಯಾಸ್ಕಾಮ್‌ ಬಹಳ ಒಳ್ಳೆಯ ಕೆಲಸ ಮಾಡಿದ್ದು, ನಾನಾ ಇಲಾಖೆಗಳು ಸಹಕರಿಸಿವೆ. ಎಲ್ಲರಿಗೂ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ' ಎಂದು ಉಪಮುಖ್ಯಮಂತ್ರಿ ತಿಳಿಸಿದರು.
'ತಂತ್ರಜ್ಞಾನವನ್ನು ಬಳಸಿಕೊಂಡು ಕೊವಿಡ್‌ ಪರಿಸ್ಥಿತಿಯನ್ನು ಕರ್ನಾಟಕ ಅತ್ಯಂತ ಸಮರ್ಥವಾಗಿ ನಿಭಾಯಿಸಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲರೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಬಿಬಿಎಂಪಿ ಹೆಲ್ತ್‌ಕೇರ್‌, ಆಪ್ತಮಿತ್ರ ಸಹಾಯವಾಣಿಯ ಕೆಲಸದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಕೊವಿಡ್‌ ನಿಯಂತ್ರಣದಲ್ಲಿ ಬೆಂಗಳೂರನ್ನು ಮಾದರಿ ನಗರ ಎಂದು ಭಾರತ ಸರ್ಕಾರ ಗುರುತಿಸಿದೆ. ಈ ನಿಟ್ಟಿನಲ್ಲಿ ಐಟಿ-ಬಿಟಿ ವಲಯದ ಕೊಡುಗೆ ಬಗ್ಗೆ ಇಡೀ ದೇಶ ಮೆಚ್ಚುಗೆ ವ್ಯಕ್ತಪಡಿಸಿದೆ' ಎಂದು ಪ್ರಶಂಸಿಸಿದರು.
'ಕೊವಿಡ್ ಸೋಂಕು ಬಹು ದಿನಗಳವರೆಗೆ ನಮ್ಮ ನಡುವೆ ಇರುವುದರಿಂದ ಅರೋಗ್ಯ ಕ್ಷೇತ್ರದ ಮೂಲಸೌಕರ್ಯ ಹೆಚ್ಚಿಸಿಕೊಳ್ಳಬೇಕು. ಆರೋಗ್ಯ ಸೇವೆಯನ್ನು ಡಿಜಿಟಲೈಸ್‌ ಮಾಡುವುದು ಬಹಳ ಮುಖ್ಯವಾಗಿದ್ದು, ಇದಕ್ಕೆ ಐಟಿ-ಬಿಟಿ ವಲಯದವರ ನೆರವು ಅಗತ್ಯ. ಲಭ್ಯ ಇರುವ ಎಲ್ಲ ಸಂಪನ್ಮೂಲ ಬಳಸಿ ನಗರದಲ್ಲಿ 24/7 ಆರೋಗ್ಯ ಸೇವೆ ಒದಗಿಸಬೇಕು. ನಮ್ಮ ಎಲ್ಲ ಕೆಲಸಗಳು ಇತರ ರಾಜ್ಯಗಳಿಗೆ ಮಾದರಿಯಾಗುವಂತೆ ಇರಬೇಕು. ವೈದ್ಯನಾಗಿ ಎಲ್ಲ ರೀತಿಯ ಸಹಕಾರ ನೀಡಲು ನಾನು ಸಿದ್ಧವಿದ್ದು, ಉತ್ತಮ ಕಾರ್ಯಕ್ಕೆ ಎಲ್ಲ ಕಂಪನಿಗಳು ಕೈ ಜೋಡಿಸಬೇಕು' ಎಂದು ಮನವಿ ಮಾಡಿದರು.
ಜೈವಿಕ ತಂತ್ರಜ್ಞಾನ ವಿಷನ್‌ ಗ್ರೂಪ್‌ ಅಧ್ಯಕ್ಷೆ ಕಿರಣ್‌ ಮಜೂಂದಾರ್‌, ಮಾಹಿತಿ ತಂತ್ರಜ್ಞಾನದ ವಿಷನ್‌ ಗ್ರೂಪ್‌ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣ, ನ್ಯಾಸ್ಕಾಮ್‌ ಅಧ್ಯಕ್ಷೆ ದೇಬ್ಜಾನಿ ಘೋಷ್, ನ್ಯಾಸ್ಕಾಮ್‌ ಉಪಾಧ್ಯಕ್ಷ ವಿಶ್ವನಾಥನ್‌, ಇಂಟೆಲ್‌ ಮುಖ್ಯಸ್ಥೆ ನಿವೃತ್ತಿ ರಾಯ್‌, ಇನ್‌ಫೋಸಿಸ್‌ ಸಿಇಓ ಪ್ರವೀಣ್‌ ರಾವ್, ಫ್ರಾಕ್ಟಲ್‌ ಸಿಇಓ ಶ್ರೀಕಾಂತ್‌, ಮೈಕ್ರೊಸಾಫ್ಟ್‌ನ ರೋಹೀಣಿ ಶ್ರೀವತ್ಸ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದರು.
(ಮಾಹಿತಿ ಕೃಪೆ ಪ್ರಜಾವಾಣಿ....)

ಕರೊನಾ ಲಾಕ್​ಡೌನ್​ ಅವಧಿ-ಜಲಮಂಡಳಿ ಬಿಲ್ ಸಂಗ್ರಹದಲ್ಲಿ ಏರಿಕೆ

ಬೆಂಗಳೂರು: ಲಾಕ್​ಡೌನ್ ಸಡಿಲಿಕೆಯಿಂದ ಜಲಮಂಡಳಿ ಬಾಕಿ ಬಿಲ್​ನ ಹಣ ಸಂಗ್ರಹದಲ್ಲಿ ಏರಿಕೆ ಕಂಡಿದೆ. ಪ್ರತಿ ತಿಂಗಳು ಗೃಹಬಳಕೆ, ವಾಣಿಜ್ಯ ಕಟ್ಟಡಗಳಿಂದ 120 ಕೋಟಿ ರೂ.ಗೂ ಅಧಿಕ ಮೊತ್ತ ಸಂಗ್ರಹವಾಗುತ್ತಿತ್ತು. ಈ ತಿಂಗಳು ಗ್ರಾಹಕರಿಂದ 103 ಕೋಟಿ ರೂ. ಬಿಲ್ ಮೊತ್ತ ಪಾವತಿಯಾಗಿದೆ.
ಕಳೆದೆರಡು ತಿಂಗಳಿಂದ ಸರಿಯಾಗಿ ಪಾವತಿಯಾಗದೆ ಜಲಮಂಡಳಿಗೆ ಆದಾಯ ಕೊರತೆಯಾಗಿತ್ತು. ಲಾಕ್​ಡೌನ್ ಘೋಷಣೆ ನಂತರ ಲಕ್ಷಾಂತರ ಜನರು ಸ್ವಂತ ಊರಿನತ್ತ ಪ್ರಯಾಣ ಬೆಳೆಸಿದ್ದರು. ಇದರಿಂದ ಫೆಬ್ರವರಿ, ಮಾರ್ಚ್ ಬಾಕಿ ನೀರಿನ ಬಿಲ್ ಪಾವತಿ ಸರಿಯಾಗಿ ಆಗಿರಲಿಲ್ಲ ಎಂದು ಜಲಮಂಡಳಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.'
ಆನ್​ಲೈನ್ ಮೂಲಕ 40 ಕೋಟಿ ರೂ.: ನೀರಿನ 'ಮೀಟರ್ ರೀಡರ್ 'ಗಳು ಮನೆಮನೆಗೆ ತೆರಳಿ ರಸೀದಿ ನೀಡುತ್ತಿದ್ದರು. ಗ್ರಾಹಕರು ಜಲಮಂಡಳಿಯ ಕಿಯೋಸ್ಕ್​ಗಳಲ್ಲಿ ಬಿಲ್ ಪಾವತಿಸುತ್ತಿದ್ದರು.
ಇನ್ನು ಕೆಲವರು ಬೆಂಗಳೂರು ಒನ್ ಸೇವಾ ಕೇಂದ್ರದಲ್ಲಿ ಬಾಕಿ ಬಿಲ್ ಶುಲ್ಕ ಪಾವತಿಸುತ್ತಿದ್ದರು. ಕರೊನಾ ಸೋಂಕು ಅತಂಕದಿಂದಾಗಿ ಮೀಟರ್ ರೀಡರ್​ಗಳು ಏಪ್ರಿಲ್​ನಲ್ಲಿ ಮನೆಮನೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಆನ್​ಲೈನ್​ನಲ್ಲಿ ಪ್ರತಿ ತಿಂಗಳು 20ರಿಂದ 25 ಕೋಟಿ ರೂ. ಸಂಗ್ರಹವಾಗುತ್ತಿತ್ತು. ಲಾಕ್​ಡೌನ್ ಹಿನ್ನೆಲೆ ಏಪ್ರಿಲ್​ನಲ್ಲಿ ಆನ್​ಲೈನ್ ಮೂಲಕ 40 ಕೋಟಿ ರೂ. ಸಂಗ್ರಹವಾಗಿದೆ.
(ಮಾಹಿತಿ ಕೃಪೆ ವಿಜಯವಾಣಿ....)

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆ, ಉಗುಳುವಿಕೆಗೆ ನಿಷೇಧ

ಬೆಂಗಳೂರು: ಕೋವಿಡ್‌-19 ಹರಡುವಿಕೆ ತಡೆಯುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳು ಹಾಗೂ ಪಾನ್‌ ಮಸಾಲ ಉತ್ಪನ್ನಗಳ ಸೇವಿಸುವುದು ಮತ್ತು ಉಗುಳುವುದನ್ನು ರಾಜ್ಯ ಸರ್ಕಾರ ನಿಷೇಧಿಸಿದೆ.
ಬಿಹಾರ, ಜಾರ್ಖಂಡ್‌ ರಾಜ್ಯಗಳಲ್ಲಿ ಈಗಾಗಲೇ ಎಲ್ಲ ರೀತಿಯ ಜಗಿಯುವ ತಂಬಾಕು, ಪಾನ್‌ ಮಸಾಲ ಉತ್ಪನ್ನಗಳನ್ನು ಸಾಂಕ್ರಾಮಿಕ ರೋಗ ಕಾಯ್ದೆ ಸೆಕ್ಷನ್‌ (2) ಅಡಿ ನಿಷೇಧಿಸಲಾಗಿದೆ.
ಇದೀಗ, ಶುಕ್ರವಾರ ಆದೇಶ ಹೊರಡಿಸಿರುವ ಆರೋಗ್ಯ ಇಲಾಖೆ, ತಂಬಾಕು ಜಗಿದು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದಿಂದ ಕೋವಿಡ್‌-19 ಮತ್ತು ಇತರ ಸಾಂಕ್ರಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ರಾಜ್ಯದಲ್ಲಿ ಕೋವಿಡ್‌-19 ಹೆಚ್ಚುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಐಸಿಎಂಆರ್‌ ಕೂಡಾ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಸಾಂಕ್ರಮಿಕ ರೋಗ ಹರಡುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ.  ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದ್ದ ಕೇಂದ್ರ ಸರ್ಕಾರ, ಸಾರ್ವಜನಿಕ ಸ್ಥಳಗಳಲ್ಲಿ ಜಗಿಯುವ ತಂಬಾಕು ಉತ್ಪನ್ನಗಳ ಸೇವನೆ ಮತ್ತು ಉಗಿಯುವುದನ್ನು ನಿಷೇಧಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿತ್ತು.
ಈ ಆದೇಶವನ್ನು ಉಲ್ಲಂಘಿಸಿದರೆ, ಐಪಿಸಿ ಸೆಕ್ಷನ್‌ 188 (ಸಾರ್ವಜನಿಕ ಅಧಿಕಾರಿಯ ಆದೇಶ ಉಲ್ಲಂಘನೆ), 268, 269, 279 (ಜೀವಕ್ಕೆ ಅಪಾಯಕಾರಿಯಾದ ರೋಗವನ್ನು ನಿರ್ಲಕ್ಷ್ಯದಿಂದ ಹರಡುವುದು) ಅಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
(ಮಾಹಿತಿ ಕೃಪೆ ಪ್ರಜಾವಾಣಿ...)

Thursday, May 28, 2020

ರೈತರ ಖಾತೆಗೆ ಶೀಘ್ರ 5 ಸಾವಿರ: ಬಿ.ಸಿ. ಪಾಟೀಲ

ಕೊಪ್ಪಳ: ಮೆಕ್ಕೆಜೋಳ ಬೆಳೆದು ಸಂಕಷ್ಟದಲ್ಲಿರುವ ರೈತರ ಖಾತೆಗೆ ಸರ್ಕಾರ ಐದು ಸಾವಿರ ರೂ. ಪರಿಹಾರ ಜಮೆ ಮಾಡಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು. ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಸಿಎಂ ಯಡಿಯೂರಪ್ಪ ರಾಜ್ಯದ 10 ಲಕ್ಷ ರೈತರಿಗೆ 500 ಕೋಟಿ ರೂ.ಗಳಲ್ಲಿ ಮೆಕ್ಕೆಜೋಳಕ್ಕೆ ಪರಿಹಾರ ನೀಡುವ ಐತಿಹಾಸಿಕ ಘೋಷಣೆ ಮಾಡಿದ್ದಾರೆ.
ರಾಜ್ಯದಲ್ಲಿ ರೈತರು ಕಳೆದ ಬಾರಿ ಮುಂಗಾರಿನಲ್ಲಿ 45,25,185 ಕ್ವಿಂಟಲ್‌, ಹಿಂಗಾರಿನಲ್ಲಿ 6,97,597 ಕ್ವಿಂಟಲ್‌ ಮೆಕ್ಕೆಜೋಳ ಬೆಳೆದಿದ್ದಾರೆ. ಈ ರೈತರಿಗೆ ತಲಾ ಐದು ಸಾವಿರ ರೂ. ಪರಿಹಾರ ಬರಲಿದೆ. ಇದಕ್ಕೆ ಮಾರ್ಗಸೂಚಿ ಸಿದ್ಧವಾಗಿದೆ ಎಂದರು. ರೈತರ ಪಂಪ್‌ ಸೆಟ್‌ಗೆ ಮೀಟರ್‌ ಅಳವಡಿಸುವ ಕುರಿತಂತೆ ವಿದ್ಯುತ್‌ ಬಿಲ್‌ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸರ್ಕಾರ ಕೊಟ್ಟ ಎಲ್ಲ ಸಲಹೆಗಳನ್ನು ಒಪ್ಪಲು ಸಾಧ್ಯವಾಗಲ್ಲ.
ಅದಕ್ಕೆ ಪ್ರತ್ಯೇಕತೆಗೆ ನಮ್ಮತನ ಉಳಿಸಿಕೊಳ್ಳುತ್ತೇವೆ. ಸಿಎಂ ಬಿಎಸ್‌ವೈ ಅದಕ್ಕೆ ಸಮಿತಿ ರಚಿಸಿದ್ದಾರೆ. ಸಮಿತಿ ವರದಿಯನ್ನು ಕೇಂದ್ರಕ್ಕೆ ಕಳುಹಿಸಲಿದ್ದಾರೆ ಎಂದರಲ್ಲದೇ, ಗ್ರಾಪಂಗೆ ಸದಸ್ಯರ ನಾಮನಿರ್ದೇಶನ ವಿಚಾರ ಕ್ಯಾಬಿನೆಟ್‌ ಮುಂದೆ ಬರಲಿದೆ ಎಂದರು.
(ಮಾಹಿತಿ ಕೃಪೆ ಉದಯವಾಣಿ....)

ಪರಿಶಿಷ್ಟ ಜಾತಿ, ಪಂಗಡಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲು ಯಡಿಯೂರಪ್ಪ ಸೂಚನೆ

ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೂಚನೆ ನೀಡಿದರು.
ಗುರುವಾರ ಇಲ್ಲಿ ನಡೆದ ರಾಜ್ಯ ಪರಿಶಿಷ್ಟ ಜಾತಿಗಳು, ಅನುಸೂಚಿತ ಪಂಗಡಗಳ ರಾಜ್ಯ ಅಭಿವೃದ್ಧಿ ಪರಿಷತ್ತು ಸಭೆಯಲ್ಲಿ ಅವರು ಮಾತನಾಡಿದರು.
2020-21ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯವರ ಅಭಿವೃದ್ಧಿಗಾಗಿ ₹ 19432.22 ಕೋಟಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ₹ 8267.30 ಕೋಟಿಗಳು ಒಟ್ಟಾರೆಯಾಗಿ ₹ 27,699.52 ಕೋಟಿ ಅನುದಾನ ಒದಗಿಸಲಾಗಿದ್ದು, ಎಲ್ಲಾ ಇಲಾಖೆಗಳ ಕ್ರಿಯಾ ಯೋಜನೆಗಳ ಬಗ್ಗೆ ಚರ್ಚಿಸಿ ಅನುಮೋದನೆ ನೀಡಲಾಯಿತು.

ನಿಗದಿತ ಅವಧಿಯೊಳಗೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು. ಪ್ರಸಕ್ತ ವರ್ಷದ ಪರಿಸ್ಥಿತಿಯನ್ನು ಗಮನಿಸಿ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಜನರಿಗೆ ಸಹಾಯವಾಗುವಂತಹ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಕೋವಿಡ್ 19 ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳಿಗೆ 25 - 30 ಸಾವಿರ ಜನ ಹಿಂದಿರುಗಿದ್ದಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾರ್ಯಕ್ರಮದಡಿ ಪ್ರತಿಯೊಂದು ಪರಿಶಿಷ್ಟ ಜಾತಿ/ಪಂಗಡದ ಕುಟುಂಬಕ್ಕೆ ಜಾಬ್ ಕಾರ್ಡ್‌ಗಳನ್ನು ಕಡ್ಡಾಯವಾಗಿ ವಿತರಿಸುವಂತೆ ಸೂಚಿಸಿದ ಅವರು, ಉದ್ಯೋಗ ಖಾತರಿ ಯೋಜನೆಯಡಿ, ಕಾರ್ಮಿಕರಿಗೆ ಪ್ರಸ್ತುತ ಕನಿಷ್ಠ 100 ದಿನಗಳಿರುವ ಕೆಲಸದ ದಿನಗಳನ್ನು 150 ಕೆಲಸದ ದಿನಗಳಿಗೆ ಹೆಚ್ಚಿಸಲು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಸೂಚಿಸಿದರು.
ಈ ವಿಶೇಷ ಉಪಯೋಜನೆಗಳಡಿ ನಿಗಧಿಪಡಿಸಿದ ಅನುದಾನ ಸದ್ಬಳಕೆಯಾಗಬೇಕು ಎಂದ ಮುಖ್ಯಮಂತ್ರಿಗಳು, ಪರಿಶಿಷ್ಟ ಜಾತಿ/ಪಂಗಡದವರು ಸ್ವಾಭಿಮಾನದಿಂದ ಬದುಕುವ ಎಲ್ಲ ಅವಕಾಶಗಳನ್ನು ಕಲ್ಪಿಸಬೇಕು ಎಂದರು.
ಉಪಮುಖ್ಯಮಂತ್ರಿಗಳು ಹಾಗೂ ರಾಜ್ಯ ಅಭಿವೃದ್ಧಿ ಪರಿಷತ್ ಉಪಾಧ್ಯಕ್ಷರಾದ ಗೋವಿಂದ ಕಾರಜೋಳ ಮಾತನಾಡಿ, ಕೋವಿಡ್ 19 ಹಿನ್ನೆಲೆಯಲ್ಲಿ ಮಂಡಿಸಿರುವ ಬಜೆಟ್‍ಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಂಪನ್ಮೂಲ ಕ್ರೋಡೀಕರಣ ಹಾಗೂ ಅನುದಾನ ಲಭ್ಯತೆಯ ಆಧಾರದ ಮೇಲೆ ಕ್ರಿಯಾಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದರು.
ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ, ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ..ಮಾಧುಸ್ವಾಮಿ, ಕಂದಾಯ ಸಚಿವ ಆರ್. ಅಶೋಕ, ಅಭಿವೃದ್ದಿ ಪರಿಷತ್ತಿನ ಸದಸ್ಯರಾದ ದುರ್ಯೋಧನ ಐಹೊಳೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ. ಎಸ್. ಈಶ್ವರಪ್ಪ, ಸಂಸದ ಉಮೇಶ್ ಜಾದವ್, ಶಾಸಕರಾದ ಎನ್.ಮಹೇಶ್ ಹಾಗೂ ನರಸಿಂಹ ನಾಯಕ್ , ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಕುಮಾರ ನಾಯಕ್ ಉಪಸ್ಥಿತರಿದ್ದರು.
(ಮಾಹಿತಿ ಕೃಪೆ ಪ್ರಜಾವಾಣಿ)

ದೇವರನ್ನು ಸಮಾಧಾನಪಡಿಸಿ ಕೋವಿಡ್ ಕೊನೆಗಾಣಿಸಲು ವ್ಯಕ್ತಿಯ ತಲೆ ಕತ್ತರಿಸಿದ ಪೂಜಾರಿ!


ಕಟಕ್‌: ದೇವರನ್ನು ಸಮಾಧಾನಪಡಿಸಿದರೆ, ಕೋವಿಡ್‌-19 ಸಂಕಷ್ಟವನ್ನು ನಿವಾರಿಸಬಹುದು ಎಂದು ಭಾವಿಸಿ ವ್ಯಕ್ತಿಯ ತಲೆ ಕತ್ತರಿಸಿರುವುದಾಗಿ ಇಲ್ಲಿನ ದೇವಾಲಯದ ಪೂಚಾರಿಯೊಬ್ಬ ಹೇಳಿಕೆ ನೀಡಿದ್ದಾನೆ. ಒಡಿಶಾದ ಕಟಕ್‌ ಜಿಲ್ಲೆಯ ನರಸಿಂಗಪುರ ಪೊಲೀಸ್‌ ಠಾಣೆ ವ್ಯಾಪ್ತಿಗೆ ಬರುವ ಬಂಧಹುಡ ಬಳಿಯ ಬಂಧಾ ಮಾ ಬುಧ ಬ್ರಾಹ್ಮಣಿ ದೇವಾಲದಲ್ಲಿ ಬುಧವಾರ ರಾತ್ರಿ ಈ ಕೃತ್ಯವೆಸಗಲಾಗಿದೆ.
ಪೂಜಾರಿಯನ್ನು ಸನ್ಸಾರಿ ಓಜಾ (72) ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಆತನೇ ಪೊಲೀಸರಿಗೆ ಶರಣಾಗಿದ್ದಾನೆ.
ಆರೋಪಿ ಹೇಳಿಕೆ ಪ್ರಕಾರ, ಮೃತ ವ್ಯಕ್ತಿಯನ್ನು ಸರೋಜ್‌ ಕುಮಾರ್‌ ಪ್ರಧಾನ್‌ (52) ಎನ್ನಲಾಗಿದೆ. 'ಕೃತ್ಯಕ್ಕೂ ಮೊದಲು, ಪ್ರಧಾನ್‌ ಮತ್ತು ತನ್ನ ನಡುವೆ 'ಪ್ರಾಣ ತ್ಯಾಗ'ಕ್ಕೆ ಸಂಬಂಧಿಸಿದಂತೆ ವಾದ ನಡೆಯಿತು' ಎಂದು ಆತ ಹೇಳಿಕೆ ನೀಡಿದ್ದಾನೆ.
ವಾದವು ಮಿತಿಮೀರುತ್ತಿದ್ದಂತೆ, ಓಜಾ ಹರಿತವಾದ ಆಯುಧದಿಂದ ಪ್ರಧಾನ್‌ ಅವರ ತಲೆಗೆ ಹೊಡೆದಿದ್ದಾನೆ. ಹೀಗಾಗಿ ಪ್ರಧಾನ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಚಾರಣೆ ವೇಳೆ ಪೂಜಾರಿಯು, 'ನನ್ನ ಕನಸಿನಲ್ಲಿ ದೇವರು ಬಂದು ಆದೇಶ ನೀಡಿದ್ದರಿಂದ ಕೊಲೆ ಮಾಡಿದೆ. 'ಮಾನವ ಪ್ರಾಣ ತ್ಯಾಗ'ದ ಬಳಿಕ ಕೊರೊನಾವೈರಸ್‌ ಸೋಂಕು ನಿವಾರಣೆಯಾಗುವುದನ್ನೂ ಅದೇ ಕನಸಿನಲ್ಲಿ ಕಂಡೆ' ಎಂದು ಹೇಳಿಕೆ ನೀಡಿದ್ದಾನೆ.
ಆದರೆ, ಗ್ರಾಮದಲ್ಲಿರುವ ಮಾವಿನ ತೋಟದ ವಿಚಾರವವಾಗಿ ಪೂಚಾರಿ ಮತ್ತು ಪ್ರಧಾನ್‌ ನಡುವೆ ಬಹುದಿನಗಳಿಂದ ವಿವಾದವಿತ್ತು ಎಂದು ಬಂಧಹುಡ ನಿವಾಸಿಗಳು ಹೇಳಿದ್ದಾರೆ.
ಕೊಲೆಗೆ ಬಳಸಲಾದ ಆಯುಧವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಶವವನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
'ಘಟನಾ ಸಂದರ್ಭ ಆರೋಪಿ ಅತಿಯಾಗಿ ಮದ್ಯ ಸೇವಿಸಿದ್ದ. ಮರುದಿನ ಬೆಳಿಗ್ಗೆ ತನ್ನ ತಪ್ಪಿನ ಅರಿವಾಗಿ ಆತ ಪೊಲೀಸರಿಗೆ ಶರಣಾಗಿದ್ದಾನೆ ಎಂಬುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ' ಎಂದು ಡಿಐಜಿ ಆಶಿಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಸತ್ಯ ಪ್ರಕಾಶ್‌ ಪಾಟಿ ಎನ್ನುವವರು, '21ನೇ ಶತಮಾನದಲ್ಲಿಯೂ ಜನರು ಈ ರೀತಿ ಇದ್ದಾರೆ ಎಂಬುದು ನಂಬಲಸಾಧ್ಯವಾಗಿದೆ. ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸುತ್ತೇವೆ' ಎಂದಿದ್ದಾರೆ.
(ಮಾಹಿತಿ ಕೃಪೆ ಪ್ರಜಾವಾಣಿ..)

ಕೊರೊನಾ ಭವಿಷ್ಯವೇಕೆ ನುಡಿಯಲಿಲ್ಲ? ಬ್ರಹ್ಮಾಂಡ ಗುರೂಜಿಗೆ ಸಾಣೇಹಳ್ಳಿಶ್ರೀ ಪ್ರಶ್ನೆ

ಚಿತ್ರದುರ್ಗ: 'ಕೊಡಗು ಜಿಲ್ಲೆ ನೆಲಸಮವಾಗುವುದಾಗಿ ಭವಿಷ್ಯ ನುಡಿಯುವ ಬ್ರಹ್ಮಾಂಡ ಗುರೂಜಿ, ಕೊರೊನಾ ವೈರಸ್‌ ಬಗ್ಗೆ ಏಕೆ ಮುನ್ಸೂಚನೆ ನೀಡಲಿಲ್ಲ' ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರಶ್ನಿಸಿದ್ದಾರೆ.
'ಕೊರೊನಾ ಕಾರಣಕ್ಕೆ ಮೂಲೆಗುಂಪಾಗಿದ್ದ ಮೌಢ್ಯಪ್ರಚಾರಕರು ಮತ್ತೆ ಬಾಲ ಬಿಚ್ಚುತ್ತಿದ್ದಾರೆ. ಜನರ ಮನೋದೌರ್ಬಲ್ಯಗಳನ್ನು ಗುರುಗಳು, ಬಾಬಾಗಳು, ಶಾಸ್ತ್ರಕಾರರು, ಪಂಚಾಂಗದವರು, ಹಸ್ತಸಾಮುದ್ರಿಕೆ ಹೇಳುವವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬ್ರಹ್ಮಾಂಡ ಸುಳ್ಳನ್ನು ಸೃಷ್ಟಿಸುವ ಭವಿಷ್ಯಕಾರರ ದೊಡ್ಡ ದಂಡೇ ಹುಟ್ಟಿಕೊಂಡಿದೆ' ಎಂದು ಹೇಳಿದ್ದಾರೆ.
'ಭಾರಿ ಭೂಕಂಪದಿಂದ ಕೊಡಗು ಜಿಲ್ಲೆ ನೆಲಸಮವಾಗಲಿದೆ' ಎಂದು ಅದಾವ ಮುಖ ಇಟ್ಟುಕೊಂಡು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದರೋ ಗೊತ್ತಿಲ್ಲ. ಇವರು ಹೇಳುವ ಭವಿಷ್ಯ ಸತ್ಯವಾಗುವುದಾದಲ್ಲಿ ಕಳೆದ ಎರಡು ವರ್ಷ ನೆರೆ ಹಾವಳಿ ವಿಚಾರವನ್ನು ಮೊದಲೇ ಏಕೆ ಹೇಳಲಿಲ್ಲ. ಜನರು ದಡ್ಡರಾದಾಗ ಇವರು ಬೇಳೆ ಬೇಯಿಸಿಕೊಳ್ಳುತ್ತಾರೆ. ಇಂಥವರನ್ನು ಮೈಬಗ್ಗಿಸಿ ದುಡಿಯುವಂತೆ ಮಾಡುವ ಹೊಣೆಗಾರಿಕೆ ಜನರ ಮೇಲಿದೆ' ಎಂದು ಹೇಳಿದ್ದಾರೆ.
(ಮಾಹಿತಿ ಕೃಪೆ ಪ್ರಜಾವಾಣಿ...)

ಫಲ ಕೊಡಲಿಲ್ಲ ಹೊರತೆಗೆಯುವ ಪ್ರಯತ್ನ: ತೆಲಂಗಾಣದಲ್ಲಿ ಕೊಳವೆ ಬಾವಿಗೆ ಬಿದ್ದ 3 ವರ್ಷದ ಮಗು ಸಾವು

ಮೆಡಕ್ : ಪಾಳುಬಿದ್ದ ಕೊಳವೆ ಬಾವಿಗೆ ಪುಟ್ಟ ಮಕ್ಕಳು ಬಿದ್ದು ಸಾಯುವ ಪ್ರಕರಣ ಕೊನೆಯಾಗುತ್ತಲೇ ಇಲ್ಲ. ತೆಲಂಗಾಣ ರಾಜ್ಯದ ಮೆಡಕ್ ಜಿಲ್ಲೆಯ ಪಪನ್ನಪೆಟ್ ಮಂಡಲ್ ಸಮೀಪ ಪೊಡ್ಚನಂಪಲ್ಲಿ ಗ್ರಾಮದಲ್ಲಿ ಆಟವಾಡುತ್ತಿದ್ದ 3 ವರ್ಷದ ಮಗು ಕಾಲು ಜಾರಿ 120 ಅಡಿ ಆಳದ ಕೊಳವೆ ಬಾವಿಗೆ ಆಕಸ್ಮಿಕವಾಗಿ ಬಿದ್ದು ಇಂದು ಬೆಳಗ್ಗೆ ಮೃತದೇಹವನ್ನು ಹೊರತೆಗೆಯಲಾಗಿದೆ.
ನಡೆದಿದ್ದೇನು: ಗ್ರಾಮದ ಗದ್ದೆಯಲ್ಲಿ ಇತ್ತೀಚೆಗೆ ಕೊಳವೆ ಬಾವಿ ಕೊರೆಸಲಾಗಿತ್ತು. ನೀರು ಸಿಗದಿದ್ದಾಗ ಅದನ್ನು ಮುಚ್ಚದೆ ಹಾಗೆಯೇ ಬಿಡಲಾಗಿತ್ತು. ಗದ್ದೆ ಪಕ್ಕದ ಮನೆಯೊಂದರಲ್ಲಿ 3 ವರ್ಷದ ಬಾಲಕ ಸಾಯಿ ವರ್ಧನ್ ತನ್ನ ತಂದೆ ಮಂಗಲಿ ಭಿಕ್ಷಪತಿ ಮತ್ತು ತಾಯಿ ನವೀನಾ ಜೊತೆ ಗದ್ದೆಯ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದರು.
ನಿನ್ನೆ ಸಾಯಂಕಾಲ 5 ಗಂಟೆ ಹೊತ್ತಿಗೆ ದಂಪತಿ ಮಗುವಿನೊಂದಿಗೆ ಹೊರಗೆ ಹೋಗಲು ನಡೆದುಕೊಂಡು ಹೋಗುತ್ತಿದ್ದಾಗ ಮಗು ಜಾರಿ ತೆರೆದ ಕೊಳವೆ ಬಾವಿಗೆ ಬಿದ್ದಿದೆ.
ಕೂಡಲೇ ತಾಯಿ ನವೀನ ತಾನು ಉಟ್ಟಿದ್ದ ಸೀರೆಯನ್ನು ಕಳಚಿ ಕೊಳವೆ ಬಾವಿಯೊಳಗೆ ಇಳಿಸಿ ಮಗು ಅದನ್ನು ಹಿಡಿದುಕೊಂಡು ಮೇಲೆ ಬರಬಹುದು ಎಂದು ಪ್ರಯತ್ನಪಟ್ಟಳು. ಆದರೆ ಸಾಧ್ಯವಾಗಲಿಲ್ಲ. ಮಗು ಆಗಲೇ ಬಾವಿಯೊಳಗೆ ಬಹಳ ಆಳದವರೆಗೆ ಹೋಗಿದ್ದು ಸೀರೆಯನ್ನು ಹಿಡಿದು ಎಳೆಯಲು ಸಾಧ್ಯವಾಗಲಿಲ್ಲ. 17 ಅಡಿ ಆಳಕ್ಕೆ ಮಗು ಆಗಲೇ ಜಾರಿ ಬಿದ್ದು ಹೋಗಿತ್ತು.
ಜಿಲ್ಲಾಡಳಿತಕ್ಕೆ ಗ್ರಾಮಸ್ಥರು ವಿಷಯ ತಲುಪಿಸಿದರು. ಕೂಡಲೇ ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆ, ಜಿಲ್ಲಾಡಳಿತ ಪಕ್ಕದಲ್ಲಿ ಮಣ್ಣನ್ನು ಅಗೆದು ಕೊಳವೆ ಬಾವಿಯಿಂದ ಮಗುವನ್ನು ಸುರಕ್ಷಿತವಾಗಿ ತೆಗೆಯಲು ರಾತ್ರಿಯಿಡೀ ಪ್ರಯತ್ನಪಟ್ಟಿತ್ತು. ಆದರೆ ಆಮ್ಲಜನಕ ಸರಿಯಾಗಿ ಸಿಗದೆ ಮಗು ಮೃತಪಟ್ಟಿದ್ದು ಮೃತದೇಹವನ್ನು ಹೊರತೆಗೆಯಲಾಗಿದೆ.
ಮೆಡಕ್ ಜಿಲ್ಲಾಧಿಕಾರಿ ಕೆ ಧರ್ಮ ರೆಡ್ಡಿ ಪ್ರತಿಕ್ರಿಯೆ ನೀಡಿ, ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿದೆ. ಗದ್ದೆಯಲ್ಲಿ ಅನುಮತಿ ಪಡೆಯದೆ ಮೂರು ಕೊಳವೆಬಾವಿಗಳನ್ನು ಕೊರೆದು ನೀರು ಸಿಗದೆ ಹಾಗೆಯೇ ಬಿಡಲಾಗಿದೆ. ಅಕ್ರಮವಾಗಿ ಕೊಳವೆ ಬಾವಿ ತೆಗೆಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
(ಮಾಹಿತಿ ಕೃಪೆ ಕನ್ನಡಪ್ರಭ....)

Wednesday, May 27, 2020

ರಾಜಮೌಳಿ ರಾಮಾಯಣದಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು, ಫಸ್ಟ್ ಲುಕ್ ರಿವೀಲ್!

ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.ಈ ನಡುವೆ ಅಭಿಮಾನಿಗಳು ರಾಜಮೌಳಿಗೆ ರಾಮಾಯಣ ಮತ್ತು ಮಹಾಭಾರತ ಸಿನಿಮಾ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ.ಬಾಹುಬಲಿ ಸಿನಿಮಾ ನಂತರ ರಾಜಮೌಳಿ ಸಿನಿಮಾಗಳ ಮೇಲಿನ ನಿರೀಕ್ಷೆ ಹೆಚ್ಚಾಗಿದ್ದು, ಪೌರಾಣಿಕ ಸಿನಿಮಾಗಳನ್ನು ಅದ್ಭುತವಾಗಿ ಕಟ್ಟಿಕೊಡಲಿದ್ದಾರೆ ಎನ್ನುವುದು ಅಭಿಮಾನಿಗಳ ನಂಬಿಕೆ.
ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸಿ ಟಾಲಿವುಡ್ ನಲ್ಲಿ ಸರಿಲೆರು ನೀಕೇವರು ಎಂಬ ಬ್ಲಾಕ್ ಬ್ಲಸ್ಟರ್ ಸಿನಿಮಾ ನೀಡಿದ ಸೂಪರ್ ಸ್ಟಾರ್ ಮಹೇಶ್ ಬಾಬು ಅವರಿಗೆ ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ಆಕ್ಷನ್ ಕಟ್ ಹೇಳ್ತಾರಾ ?ಸದ್ಯ ರಾಮಚರಣ್ ಮತ್ತು ಜೂನಿಯರ್ ಎನ್ ಟಿ ಆರ್ ಜೊತೆಯಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಆರ್ ಆರ್ ಆರ್ ಸಿನಿಮಾದ ನಿರ್ದೇಶನದಲ್ಲಿ ಬ್ಯುಸಿಯಾಗಿರುವ ರಾಜಮೌಳಿ ಅವರು ಇದೀಗ ಅವರ ಮುಂದಿನ ಚಿತ್ರಕ್ಕೆ ತಯಾರಿ ಮಾಡುಕೊಳ್ಳುತ್ತಿದ್ದಾರಾ?
ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಪೋಸ್ಟರ್ ಒಂದು ಸಾಕಷ್ಟು ಸದ್ದು ಮಾಡುತ್ತಿದ್ದು ಆರ್ ಆರ್ ಆರ್ ಸಿನಿಮಾದ ನಂತರ ನಿರ್ದೇಶಕ ರಾಜಮೌಳಿ ಅವರು ಮತ್ತೊಂದು ಬಿಗ್ ಬಜೆಟ್ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರಾ?ಆ ಸಿನಿಮಾದಲ್ಲಿ ಮಹೇಶ್ ಬಾಬು ಅವರು ರಾಮನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರಾ?
ನಟನ ಮಗನಿಗೆ ರಾಜಮೌಳಿ ಹೆಸರು
ಈ ಹಿಂದೆ ಸಂದರ್ಶನವೊಂದರಲ್ಲಿ 'ರಾಮಾಯಣ ಮತ್ತು ಮಹಾಭಾರತ' ವನ್ನು ಸಿನಿಮಾ ಮಾಡುವುದರ ಬಗ್ಗೆ ಮಾತನಾಡಿದ್ದ ರಾಜಮೌಳಿ ಅವರ ಮಾತಿಗೆ ಪುಷ್ಟಿ ನೀಡುವಂತೆ ಈಗ ಬಿಡುಗಡೆಯಾಗಿರುವ ಪೋಸ್ಟರ್ ಅಭಿಮಾನಿಗಳಿಗೆ ರೋಮಾಂಚನವುಂಟುಮಾಡಿದೆ. ರಾಜಮೌಳಿ ರಾಮಾಯಣ ಸಿನಿಮಾ ಮಾಡಲಿ ಎನ್ನುವುದು ಇಡೀ ಭಾರತೀಯ ಚಿತ್ರರಂಗ ಹೇಳುವ ಮಾತು ಅದರಂತೆ ಇದರಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯಿಸಲಿ ಎಂದು ಅಭಿಮಾನಿಗಳು ಆಸೆ ಪಡುತ್ತಿದ್ದಾರೆ.ಈಗಾಗಲೆ ಫ್ಯಾನ್ಸ್ ರಾಜಮೌಳಿ ರಾಮಾಯಣದಲ್ಲಿ ಮಹೇಶ್ ಬಾಬು ರಾಮನಾಗಿ ಕಾಣಸಿಕೊಳ್ಳಲಿದ್ದಾರೆ ಎಂದು ವೈರಲ್ ಮಾಡುತ್ತಿದ್ದಾರೆ.
ಮಹೇಶ್ ಬಾಬು ಫೋಟೋಗೆ ರಾಮನ ಗೆಟಪ್ ಹಾಕಿ ಡಿಸೈನ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಈ ಪೋಸ್ಟರ್ ಹಿಂದಿನ ಅಸಲಿ ಕಥೆ ಏನೆಂದರೆ ಅಭಿಮಾನಿ ಕಿರಣ್ ಎನ್ನುವವರು ಡಿಸೈನ್ ಮಾಡಿರುವ ಪೋಟೋ ಇದಾಗಿದೆ.
ಮಹೇಶ್ ಬಾಬು ರಾಮನ ಅವತಾರದಲ್ಲಿರುವ ಈ ಪೋಸ್ಟರ್ ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು ಭಾರತೀಯ ಚಿತ್ರರಂಗದಲ್ಲಿ ಹೊಸದೊಂದು ಸಂಚಲನ ಮೂಡಿಸುವ ಸೂಚನೆ ನೀಡಿದೆ.
ನೆಲ ಒರೆಸಿ ಜೂ.ಎನ್‌ಟಿಆರ್‌ಗೆ ರಾಜಮೌಳಿ ಚಾಲೆಂಜ್
ಲಾಕ್ ಡೌನ್ ಸಮಯದಲ್ಲಿ ದೂರದರ್ಶನದಲ್ಲಿ ಮರುಪ್ರಸಾರಗೊಂಡ 'ರಾಮಾಯಣ' ಧಾರಾವಾಹಿ ಜನಮೆಚ್ಚುಗೆ ಪಡೆದ ಈ ಸಮಯದಲ್ಲಿ ಇಂಥದೊಂದು ಸುದ್ದಿ ಸದ್ದು ಮಾಡುತ್ತಿರುವುದು ಸಿನಿರಸಿಕರು ಮತ್ತೊಂದು ಭರ್ಜರಿ ಮನರಂಜನೆಗೆ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.
ರಾಮನ ಅವತಾರದಲ್ಲಿ ಮಹೇಶ್ ಬಾಬು ಅವರನ್ನು ಕಂಡು ಪುಳಕಿತರಾಗಿರುವ ಅಭಿಮಾನಿಗಳು ಆರ್ ಆರ್ ಆರ್ ಸಿನಿಮಾದ ನಂತರ ರಾಜಮೌಳಿ ಅವರು ಅದ್ಧೂರಿಯಾಗಿ ರಾಮಾಯಣ ನಿರ್ದೇಶನ ಮಾಡಲಿ ಎಂದು ಆಶಿಸುತ್ತಿದ್ದಾರೆ.
(ಮಾಹಿತಿ ಕೃಪೆ ಸುವರ್ಣ ನ್ಯೂಸ್.....)

ಸತ್ತವ ಎದ್ದು ಬಂದ; ಮತ್ತೆ ಸತ್ತ!

ರಾಂಚಿ: ಆತ ಸತ್ತು ಹೋಗಿದ್ದಾನೆ ಎಂದು ಮರಣೋತ್ತರ ಪರೀಕ್ಷೆಗಾಗಿ ಆತನ ಶವವನ್ನು ಆಸ್ಪತ್ರೆಗೆ ತರಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷಾ ಕೊಠಡಿಯಿಂದ ಆ ಸತ್ತ ವ್ಯಕ್ತಿ ಎದ್ದು ಹೊರಗೆ ಬಂದ.. ಅಷ್ಟೇ ಅಲ್ಲೇ ಕುಸಿದು ಕುಳಿತ.. ಆಗ ಪ್ರಾಣಪಕ್ಷಿ ಹಾರಿತು!
ಈ ವಿಲಕ್ಷಣ ಘಟನೆ ಜಾರ್ಖಂಡ್​ನ ರಾಂಚಿಯ ರಾಜೇಂದ್ರ ಇನ್​ಸ್ಟಿಟ್ಯೂಟ್ ಆಫ್​ ಮೆಡಿಕಲ್ ಸೈನ್ಸ್​ನಲ್ಲಿ ಮಂಗಳವಾರ ನಡೆದಿದೆ. ಸತ್ತು ಬದುಕಿ ಸತ್ತ ವ್ಯಕ್ತಿಯನ್ನು ಜಿತೇಂದ್ರ ಓರನ್ ಎಂದು ಗುರುತಿಸಲಾಗಿದೆ. ಈ ವ್ಯಕ್ತಿಯನ್ನು ಆಸ್ಪತ್ರೆಗೆ ತಂದ ಕೂಡಲೇ ಡಾಕ್ಟರ್​ಗಳು ಪರಿಶೀಲಿಸಿ ಆಸ್ಪತ್ರೆಗೆ ಬರುವಾಗಲೇ ಪ್ರಾಣ ಹೋಗಿತ್ತು ಎಂದು ಪ್ರಮಾಣೀಕರಿಸಿ ಶವಪರೀಕ್ಷೆಗೆ ಕಳುಹಿಸುವಂತೆ ಸೂಚಿಸಿದ್ದರು. ಟೆಕ್ನೀಷಿಯನ್ಸ್​ ಈ ಶವವನ್ನು ಟ್ರಾಲಿಯಲ್ಲಿ ಹಾಕಿ ಮರಣೋತ್ತರ ಪರೀಕ್ಷಾ ಕೊಠಡಿಗೆ ಕೊಂಡೊಯದ್ದ ವೇಳೆ ಆತ ಅಲ್ಲಿಂದ ಎದ್ದು ಹೊರಗೆ ಬಂದಿದ್ದ!  ಕೂಡಲೇ ಆತನನ್ನು ಹಿಡಿದು ತುರ್ತುಚಿಕಿತ್ಸಾ ಘಟಕಕ್ಕೆ ವರ್ಗಾಯಿಸಲು ಪ್ರಯತ್ನಿಸಿದ್ದರು. ಆದರೆ, ಅಷ್ಟು ಹೊತ್ತಿಗೆ ಆತ ಕುಸಿದು ಕುಳಿತ. ಅಲ್ಲೇ ಪ್ರಾಣವಾಯು ಹೊರಟುಹೋಗಿತ್ತು.
ಘಟನೆಯ ಹಿನ್ನೆಲೆ: ಜಿತೇಂದ್ರ ಓರನ್ ಖರ್ತಾ ಗ್ರಾಮದ ನಿವಾಸಿ. ಅಲ್ಲಿ ಹಾಕಿದ್ದ ಟೆಂಟ್ ಒಂದನ್ನು ತೆಗೆಯುವ ವೇಳೆ ಹೈ ಟೆನ್ಶನ್​ ವಿದ್ಯುತ್ ತಂತಿ ತಾಗಿ ವಿದ್ಯುದಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಕುಸಿದು ಹೋಗಿದ್ದ. ಕೂಡಲೇ ಆತನನ್ನು ಚನ್ಹೋ ಬ್ಲಾಕ್​ನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಕರೆದೊಯ್ಯಲಾಗಿದೆ. ಮಂಗಳವಾರ ಬೆಳಗ್ಗೆ 7.30ಕ್ಕೆ ಈ ದುರಂತ ನಡೆದಿತ್ತು ಎಂದು ಜಿತೇಂದ್ರನ ಸಹೋದರ ಸಿಕಂದರ್ ಓರನ್​ ಪೊಲೀಸರಿಗೆ ತಿಳಿಸಿದ್ದಾರೆ.
ಜಿತೇಂದ್ರನನ್ನು ಬೆಳಗ್ಗೆ 11 ಗಂಟೆಗೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಮತ್ತೆ ಅಪರಾಹ್ನ 1 ಗಂಟೆಗೆ ರಾಂಚಿಯ ರಿಮ್ಸ್​ಗೆ ಕರೆತರಲಾಗಿತ್ತು. ಸ್ವಲ್ಪ ಮುಂಚಿತವಾಗಿಯೇ ರಿಮ್ಸ್​ಗೆ ಕರೆತಂದಿದ್ದರೆ ರಾಜೇಂದ್ರ ಬದುಕುತ್ತಿದ್ದ ಎಂದು ಡಾಕ್ಟರ್​ಗಳು ಹೇಳಿದ್ದಾರೆ ಎಂದು ಕುಟುಂಬದ ಸದಸ್ಯರು ವಿಷಾದದಿಂದ ಹೇಳುತ್ತಿದ್ದಾರೆ. (ಏಜೆನ್ಸೀಸ್​) (ಮಾಹಿತಿ ಕೃಪೆ ವಿಜಯವಾಣಿ....) 

ಭೀಕರ ಕರಡಿ ದಾಳಿಗೆ ತತ್ತರಿಸಿದ ಚನ್ನಪಟ್ಟಣ: ನಗರಸಭೆ ಮಾಜಿ ಸದಸ್ಯೆ ಸ್ಥಿತಿ ಗಂಭೀರ


ರಾಮನಗರ: ಚನ್ನಪಟ್ಟಣ ನಗರದಲ್ಲಿ ಇದೇ ಮೊದಲ ಸಲ ಕರಡಿಗಳ ದಾಳಿ ನಡೆದಿದ್ದು, ಬುಧವಾರ ಬೆಳಗ್ಗೆ ರಂಗೋಲಿ ಹಾಕುತ್ತಿದ್ದ ನಗರಸಭೆಯ ಮಾಜಿ ಸದಸ್ಯೆ ಸಾಕಮ್ಮ ಅವರ ಮೇಲೆ ದಾಳಿ ಎಸಗಿವೆ. ಗಂಭೀರ ಗಾಯಗೊಂಡಿರುವ ಅವರನ್ನು ಕೂಡಲೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ನಗರದ ಡೂಮ್​ಲೈಡ್ ಸರ್ಕಲ್ ಬಳಿ ಸಾಕಮ್ಮ ಅವರ ಮನೆ ಇದ್ದು, ಮುಂಜಾನೆ 5 ಗಂಟೆಗೆ ಮನೆ ಬಾಗಿಲಿಗೆ ರಂಗೋಲಿ ಹಾಕುತ್ತಿದ್ದ ವೇಳೆ ಕರಡಿಗಳು ದಾಳಿ ನಡೆಸಿವೆ. ಕೂಡಲೇ ಸಾಕಮ್ಮ ಕಿರುಚಾಡಿದ್ದು, ಜನ ಸೇರುವ ಹೊತ್ತಿಗೆ ಕರಡಿಗಳು ಬಳಿಕ ಅಲ್ಲಿಂದ ಮುಂದೆ ಯಾವ ಕಡೆ ಹೋಗಿವೆ ಎಂಬುದು ಗೊತ್ತಾಗಿಲ್ಲ. ಸಾಕಮ್ಮ ಮುಖವನ್ನು ಸಂಪೂರ್ಣ ಘಾಸಿಗೊಂಡಿದ್ದು, ಸ್ಥಿತಿ ಗಂಭೀರವಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಏಳು ಕರಡಿಗಳ ಗುಂಪು ಈ ದಾಳಿ ನಡೆಸಿದ್ದು ಅವು ಬಂದಿರುವುದು ಎಲ್ಲಿಂದ ಎಂಬುದೂ ಗೊತ್ತಿಲ್ಲ.
ಚನ್ನಪಟ್ಟಣ ಸುತ್ತಮುತ್ತ ದಟ್ಟಾರಣ್ಯಗಳು ಇಲ್ಲದ ಅವುಗಳ ಆಗಮನದ ಮೂಲ ಪತ್ತೆ ಕಷ್ಟವಾಗಿದೆ. ಈ ಭೀಕರ ದಾಳಿ ನಗರವಾಸಿಗಳಲ್ಲಿ ಭಯ, ಆತಂಕ ಸೃಷ್ಟಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಈಗ ಈ ಕರಡಿಗಳ ಸೆರೆಗಾಗಿ ಶೋಧ ಕಾರ್ಯ ಶುರುಮಾಡಿದ್ದಾರೆ.
(ಮಾಹಿತಿ ಕೃಪೆ ವಿಜಯವಾಣಿ...)

50 ಮಂದಿಗೆ ತಹಸೀಲ್ದಾರ್ ಹುದ್ದೆ ಕೆಪಿಎಸ್ಸಿ 2015ರ ಬ್ಯಾಚ್​ನ 50 ಅಭ್ಯರ್ಥಿಗಳಿಗೆ ಅವಕಾಶ

ಬೆಂಗಳೂರು: ಕರ್ನಾಟಕ ನಾಗರಿಕ ಸೇವೆಯ ಪ್ರತಾಂಕಿತ ಹುದ್ದೆಗಳ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಷರತ್ತುಬದ್ಧವಾಗಿ ನೇಮಕ ಮಾಡಿರುವ ಅಧಿಸೂಚನೆಯನ್ನು ಮಂಗಳವಾರ ಹೊರಡಿಸಿದೆ.
ಕರ್ನಾಟಕ ಲೋಕ ಸೇವಾ ಆಯೋಗವು 2015ನೇ ಸಾಲಿನಲ್ಲಿ ತಹಸೀಲ್ದಾರ್ ಗ್ರೇಡ್-2 ವೃಂದ ಗ್ರೂಪ್ ಬಿ ಹುದ್ದೆಗೆ 66 ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಿ ಪ್ರಕಟಿಸಿದ್ದ ಪಟ್ಟಿಯಲ್ಲಿನ 50 ಅಭ್ಯರ್ಥಿಗಳಿಗೆ ನೇಮಕ ಭಾಗ್ಯ ಲಭಿಸಿದೆ.
ಪರಿವೀಕ್ಷಣೆ (ಪ್ರೊಬೆಷನರಿ) ಮೇಲೆ ನೇಮಕವಾದ ತಹಸೀಲ್ದಾರ್ ಗ್ರೇಡ್-2 ಗ್ರೂಪ್ ಬಿ ವೃಂದದ ಅಭ್ಯರ್ಥಿಗಳಿಗೆ ಈ ನೇಮಕಾತಿಯು ತಾತ್ಕಾಲಿಕವಾಗಿದ್ದು, ಕಾಲಕಾಲಕ್ಕೆ ಜಾರಿಯಲ್ಲಿರುವ ನಿಯಮ ಅಥವಾ ಆದೇಶಗಳ ಅಧೀನಕ್ಕೆ ಒಳಪಟ್ಟಿರುತ್ತದೆ. ಈ ಆಯ್ಕೆ ಬಗ್ಗೆ ಯಾವುದೇ ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿದ್ದಲ್ಲಿ, ನ್ಯಾಯಾಲಯಗಳು ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತವೆ.
ನೇಮಕ ಆದೇಶವನ್ನು ನೋಂದಾಯಿತ ಅಂಚೆ ಮೂಲಕ ರವಾನಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಅಭ್ಯರ್ಥಿಗಳು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬಳಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವುದು ಸೇರಿ ಹಲವು ಷರತ್ತುಗಳನ್ನು ವಿಧಿಸಲಾಗಿದೆ.
(ಮಾಹಿತಿ ಕೃಪೆ ವಿಜಯವಾಣಿ.....)

ಕಾರ್ಡ್‌ ಇಲ್ಲದವರಿಗೂ ಪಡಿತರ ವಿಸ್ತರಣೆ

ಬೆಂಗಳೂರು: ಪಡಿತರ ಚೀಟಿ ಇಲ್ಲದ ಕುಟುಂಬಗಳಿಗೆ ಮೇ ತಿಂಗಳ ಕೋಟಾದಡಿ ತಲಾ ಹತ್ತು ಕೆಜಿ ಅಕ್ಕಿ ಮೇ 31ರ ವರೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಸಿಗಲಿದೆ.
ಬಿಪಿಎಲ್‌ ಕಾರ್ಡ್‌ಗಳಿಗಾಗಿ ಅರ್ಜಿ ಸಲ್ಲಿಸಿ ಇನ್ನೂ ಕಾರ್ಡ್‌ ಪಡೆಯದವರು ಸ್ವೀಕೃತಿ ಪತ್ರ ಮತ್ತು ಆಧಾರ್‌ ತೋರಿಸಿ ಅಕ್ಕಿ ಪಡೆಯಬಹುದಾಗಿದೆ.
ಕೇಂದ್ರ ಯೋಜನೆಯಡಿ ವಲಸೆ ಕಾರ್ಮಿಕರೂ ಆಧಾರ್‌ ತೋರಿಸಿ ಪಡಿತರ ಪಡೆಯಬಹುದು. ಅವರಿಗೂ ಒಂದು ಕುಟುಂಬಕ್ಕೆ ತಲಾ ಐದು ಕೆಜಿ ಅಕ್ಕಿ, ಎರಡು ಕೆಜಿ ಕಡಲೆಬೇಳೆ ವಿತರಿಸಲಾಗುವುದು.
ಈ ಯೋಜನೆಯಡಿ ರಾಜ್ಯಕ್ಕೆ ಬರಬೇಕಾದ ಅಕ್ಕಿ ದಾಸ್ತಾನು ಬಂದಿದೆ. ಬುಧವಾರ ಕಡಲೆಕಾಳು ಬರಲಿದೆ ಎಂದು ಎಂದು ಸಚಿವ ಗೋಪಾಲಯ್ಯ ತಿಳಿಸಿದರು.
(ಮಾಹಿತಿ ಕೃಪೆ ಉದಯವಾಣಿ....)

ಕೊರೊನಾ ವೈರಸ್ ಅಲ್ಲ ಭಾರತಕ್ಕೆ ಮಿಡತೆಗಳೇ ದೊಡ್ಡ ಸವಾಲು!

Locusts Attacks Are More Dangerous Than The Coronavirus For Indians; Read Here For Reason. ಭಾರತೀಯರಿಗೆ ಕರೋನಾ ವೈರಸ್‌ಗಿಂತ ಮಿಡತೆಗಳ ದಾಳಿ ಹೆಚ್ಚು ಅಪಾಯಕಾರಿ; ಕಾರಣಕ್ಕಾಗಿ ಇಲ್ಲಿ ಓದಿ.
ನವದೆಹಲಿ, ಮೇ.27: ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್ ಸೋಂಕು ವಿಶ್ವಕ್ಕೆ ದೊಡ್ಡ ಸವಾಲಾಗಿದೆ. ಭಾರತದಲ್ಲೂ ಕೊವಿಡ್-19 ಸೋಂಕಿತರ ಸಂಖ್ಯೆ ಒಂದೂವರೆ ಲಕ್ಷದ ಗಡಿ ದಾಟಿದ್ದು, ಇದರ ನಡುವೆ ಭಾರತೀಯರಿಗೆ ಹೊಸ ಸವಾಲು ಎದುರಾಗಿದೆ.
ವಿಶ್ವವೇ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಅಣಿಯಾಗುತ್ತಿದ್ದರೆ ಭಾರತದಲ್ಲಿ ಸರ್ಕಾರವು ಮಿಡತೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವಂತಾ ವಾತಾವರಣ ನಿರ್ಮಾಣವಾಗಿದೆ.  ರಾಜಸ್ಥಾನ, ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಗುಜರಾತ್ ರಾಜ್ಯಗಳ 24 ಜಿಲ್ಲೆಗಳಲ್ಲಿನ ಸುಮಾರು 50,000 ಹೆಕ್ಟರ್ ಪ್ರದೇಶದಲ್ಲಿ ಬೆಳೆದ ಬೆಳೆಯು ಮಿಡತೆಗಳ ಬಾಯಿಗೆ ಸಿಕ್ಕು ಖಾಲಿಯಾಗಿದೆ. ಅವಧಿ ಪೂರ್ವ ಮಿಡತೆ ದಾಳಿ ಭಾರತಕ್ಕೆ ಮತ್ತೊಂದು ಸವಾಲನ್ನು ತಂದೊಡ್ಡಿದೆ. ದೇಶದಲ್ಲಿ ನಿರೀಕ್ಷೆಗಿಂತ ಮೊದಲು ದಾಳಿಯಿಟ್ಟವಾ ಮಿಡತೆಗಳು?
ದೇಶದಲ್ಲಿ ನಿರೀಕ್ಷೆಗಿಂತ ಮೊದಲು ದಾಳಿಯಿಟ್ಟವಾ ಮಿಡತೆಗಳು?
ಕೊರೊನಾ ವೈರಸ್ ಅಟ್ಟಹಾಸ ನಡೆಸುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಮಿಡತೆ ದಾಳಿ ಕೂಡಾ ನಿರೀಕ್ಷೆಗಿಂತಲೂ ಮೊದಲೇ ನಡೆದಿದೆ ಎಂದು ಮಿಡತೆ ಎಚ್ಚರಿಕೆ ಸಂಸ್ಥೆ(ಎಲ್ ಡಬ್ಲ್ಯುಓ) ಡೆಪ್ಯುಟಿ ಡೈರೆಕ್ಟರ್ ಕೆ.ಎಲ್. ಗುರ್ಜರ್ ಹೇಳಿದ್ದಾರೆ. ಏಪ್ರಿಲ್.30ರ ಆಸುಪಾಸಿನಲ್ಲೇ ಭಾರತದಲ್ಲಿ ಮಿಡತೆಗಳ ದಾಳಿ ಶುರುವಿಟ್ಟುಕೊಂಡಿದ್ದು, ಇಂದಿಗೂ ಪಂಜಾಬ್ ಮತ್ತು ಮಧ್ಯಪ್ರದೇಶಗಳಲ್ಲಿನ ಐದು ಜಿಲ್ಲೆಗಳಲ್ಲಿ ಮಿಡತೆಗಳ ಹಾವಳಿ ನಿರಂತರವಾಗಿದೆ ಎಂದು ತಿಳಿಸಿದ್ದಾರೆ.
ಮಿಡತೆಗಳಲ್ಲೂ ನಾಲ್ಕು ವಿಧಗಳು
ಮಿಡತೆಗಳಲ್ಲೂ ನಾಲ್ಕು ವಿಧಗಳು
ಇನ್ನು, ಸಾಮಾನ್ಯವಾಗಿ ಮಿಡತೆಗಳಲ್ಲಿ ನಾಲ್ಕು ವಿಧಗಳು ಇರುತ್ತವೆ. ಮರುಭೂಮಿ ಮಿಡತೆ, ಮರ ಮಿಡತೆ, ಬಾಂಬೆ ಮಿಡತೆ ಹಾಗೂ ವಲಸೆ ಮಿಡತೆ. ಇದೀಗ ಭಾರತದಲ್ಲಿ ಮರುಭೂಮಿ ಮಿಡತೆಯು ಹಾವಳಿ ಎಬ್ಬಿಸುತ್ತಿದೆ. ದೇಶದಲ್ಲಿ ಅವಧಿಗೂ ಮುನ್ನ ಸುರಿದ ಮಳೆಯು ಮರುಭೂಮಿ ಮಿಡತೆಗಳ ಸಂತಾನೋತ್ಪತ್ತಿಗೆ ಹೆಚ್ಚು ಸಹಕಾರಿಯಾಗಿದ್ದು, ಅವಧಿಗೂ ಪೂರ್ವದಲ್ಲಿ ಮಿಡತೆ ದಾಳಿ ನಡೆಯಲು ಇದೊಂದು ಕಾರಣವಾಗಿದೆ ಎನ್ನುವುದು ತಜ್ಞರು ಅಭಿಪ್ರಾಯವಾಗಿದೆ.
35,000 ಜನರ ಆಹಾರ = ಒಂದು ಮಿಡತೆ ಸಮೂಹದ ಆಹಾರ
35,000 ಜನರ ಆಹಾರ = ಒಂದು ಮಿಡತೆ ಸಮೂಹದ ಆಹಾರ
ಒಂದು ಮಿಡತೆ ಸಮೂಹದ ಆಹಾರ = 35,000 ಜನರ ಆಹಾರ ಎಂಬ ಸಾಲಿನ ಅರ್ಥವಿಷ್ಟೇ. 35,000 ಜನರ ಆಹಾರಕ್ಕೆ ಸಾಕಾಗುವಷ್ಟು ಬೆಳೆಯನ್ನು ಒಂದು ಮಿಡತೆಯ ಸಮೂಹವು ಒಂದೇ ದಿನದಲ್ಲಿ ತಿಂದು ಹಾಳು ಮಾಡುತ್ತದೆ ಎಂದರ್ಥ. ಕೊರೊನಾ ವೈರಸ್ ಭೀತಿಯಿಂದಾಗಿ ಆಹಾರ ಉತ್ಪಾದನೆಯಲ್ಲಿ ಕೊರತೆ ಉಂಟಾಗಿದ್ದು, ಮಿಡತೆಗಳಿಗೂ ಆಹಾರ ಸಿಗುತ್ತಿಲ್ಲ. ಹೀಗಾಗಿ ಎಲೆ, ಹೂವು, ಹಣ್ಣು ಸೇರಿದಂತೆ ಹಸಿರು ತರಕಾರಿಗಳನ್ನು ಮಿಡತೆಗಳು ತಿನ್ನುತ್ತಿವೆ.
3 ರಾಜ್ಯಗಳು 27 ವರ್ಷಗಳಲ್ಲಿ ಹೀಗೆಲ್ಲ ಆಗಿರಲಿಲ್ಲ
3 ರಾಜ್ಯಗಳು 27 ವರ್ಷಗಳಲ್ಲಿ ಹೀಗೆಲ್ಲ ಆಗಿರಲಿಲ್ಲ
ಕಳೆದ 27 ವರ್ಷಗಳಲ್ಲೇ ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಇಷ್ಟೊಂದು ಪ್ರಮಾಣದ ಮಿಡತೆಗಳ ದಾಳಿಯನ್ನು ನೋಡಿರಲಿಲ್ಲ. ರಾಜಸ್ಥಾನದ 16, ಉತ್ತರ ಪ್ರದೇಶದ 17 ಹಾಗೂ ಮಧ್ಯ ಪ್ರದೇಶದ ಒಂದು ಜಿಲ್ಲೆಗಳಲ್ಲಿ ಮಿಡತೆಗಳ ದಾಳಿಯಿಂದ ಅಪಾರ ಪ್ರಮಾಣದ ಬೆಳೆಗಳು ಹಾನಿಯಾಗಿವೆ. ಇನ್ನು, ಒಂದು ಮಿಡತೆಯು ಕನಿಷ್ಠ ಒಂದು ದಿನಕ್ಕೆ 150 ಕಿಲೋ ಮೀಟರ್ ಸಂಚರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಭಾರತದಲ್ಲಿ ನಿಗದಿತ ಸಮಯಕ್ಕಿಂತ ಮೊದಲೇ ಮಿಡತೆಗಳ ಅಟ್ಟಹಾಸ ಹೆಚ್ಚಾಗುವುದರಲ್ಲಿ ಪಾಕಿಸ್ತಾನದ ಅಸಹಕಾರವೂ ಕೂಡಾ ಒಂದು ರೀತಿಯಲ್ಲಿ ಕಾರಣ ಎಂದೆನಿಸುತ್ತದೆ.

ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಸರ್ಕಾರ
ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಸರ್ಕಾರ
ನೆರೆಯ ರಾಷ್ಟ್ರ ಪಾಕಿಸ್ತಾನ ಕೊರೊನಾ ವೈರಸ್ ಅಟ್ಟಹಾಸದ ನಡುವೆ ಮಿಡತೆಗಳ ದಾಳಿಗೆ ತತ್ತರಿಸಿದೆ. ಕಳೆದ ಎರಡು ದಶಕಗಳನ್ನೇ ಮೀರಿಸುವ ಮಟ್ಟಿಗೆ ಈ ಬಾರಿ ಮಿಡತೆಗಳು ದಾಳಿ ನಡೆಸಿದ್ದು ಫೆಬ್ರವರಿ ತಿಂಗಳಿನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಇನ್ನು, ಪಾಕಿಸ್ತಾನ ರೈತರ ಪ್ರಕಾರ ಕಳೆದ ಮೂರು ದಶಕಗಳಲ್ಲಿ ದೇಶದಲ್ಲಿ ಈ ರೀತಿ ಮಿಡತೆಗಳ ದಾಳಿ ನಡೆದಿರಲಿಲ್ಲ ಎಂದು ತಿಳಿದು ಬಂದಿದೆ.
ಪಾಕಿಸ್ತಾನವೇ ಮಿಡತೆಗಳ ಸಂತಾನೋತ್ಪತ್ತಿಗೆ ಸೂಕ್ತ
ಪಾಕಿಸ್ತಾನವೇ ಮಿಡತೆಗಳ ಸಂತಾನೋತ್ಪತ್ತಿಗೆ ಸೂಕ್ತ
ಪಾಕಿಸ್ತಾನದಲ್ಲಿ ಅಟ್ಟಹಾಸ ತೋರುತ್ತಿರುವ ಮಿಡತೆಗಳ ಪೈಕಿ ಶೇ.38ರಷ್ಟು ಮಿಡತೆಗಳಿಗೆ ಬಲೂಚಿಸ್ತಾನ್, ಸಿಂಧ್ ಹಾಗೂ ಪಂಜಾಬ್ ಪ್ರದೇಶವು ಸಂತಾನೋತ್ಪತ್ತಿಯ ಕೇಂದ್ರವಾಗಿದ್ದವು ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ತಿಳಿಸಿದೆ. ಕಳೆದ ಏಪ್ರಿಲ್ ತಿಂಗಳಿನಿಂದ ಪಾಕಿಸ್ತಾನದಲ್ಲಿ ಮಿಡತೆಗಳ ದಾಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತ ಮತ್ತು ಪಾಕಿಸ್ತಾನ್ ನಡುವೆ ಸ್ಕೈಪ್ ಮೂಲಕ 9 ಬಾರಿ ಸಭೆಗಳನ್ನು ನಡೆಸಲಾಗಿತ್ತು. ಅಫ್ಘಾನಿಸ್ತಾನ್ ಮತ್ತು ಇರಾನ್ ರಾಷ್ಟ್ರಗಳ ಮುಖ್ಯಸ್ಥರು ಕೂಡಾ ಈ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಭಾರತದ ಜೊತೆಗಿನ ಮಾತುಕತೆಗೆ ಪಾಕಿಸ್ತಾನ ಒಪ್ಪಿಗೆ ಸೂಚಿಸಿರಲಿಲ್ಲ ಎಂದು ಹೇಳಲಾಗುತ್ತಿದೆ.
(ಮಾಹಿತಿ ಕೃಪೆ ಒನ್ ಇಂಡಿಯಾ ಕನ್ನಡ...)

ಮಾರ್ಗಸೂಚಿ ಪಾಲನೆ ಬಗ್ಗೆ ವಿವರಣೆ ನೀಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ಸೂಚನೆ

ಬೆಂಗಳೂರು: ಪಿಪಿಇ ಕಿಟ್​ಗಳ ತಯಾರಿಕೆ, ಖರೀದಿ ಹಾಗೂ ವಿತರಣೆ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿ ಪಾಲಿಸುತ್ತಿರುವ ಬಗ್ಗೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಡಾ. ರಾಜೀವ್ ರಮೇಶ್ ಗೋಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ಪೀಠ ಈ ಸೂಚನೆ ನೀಡಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ರಾಜ್ಯದಲ್ಲಿ ಪಿಪಿಇ ಕಿಟ್​ಗಳ ತಯಾರಿಕೆ, ಖರೀದಿ ಮತ್ತು ವಿತರಣೆಗೆ ನಿರ್ದಿಷ್ಟ ಮಾನದಂಡಗಳಿಲ್ಲ. ಈ ವಿಚಾರದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿ ಪಾಲಿಸಲಾಗುತ್ತಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಕುರಿತು ವಿವರಣೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿದ ಪೀಠ, ಮೇ 28ಕ್ಕೆ ವಿಚಾರಣೆ ಮುಂದೂಡಿತು. ರಾಜ್ಯ ಸರ್ಕಾರಕ್ಕೆ ಕೋರ್ಟ್ ನೋಟಿಸ್: ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿ ನೆರೆ ರಾಜ್ಯಗಳಲ್ಲಿರುವ ಕಲಬುರಗಿಯ ವಲಸಿಗರನ್ನು ವಾಪಸ್ ಕರೆತರಲು ನಿರ್ದೇಶಿಸುವಂತೆ ಕೋರಿ ಶಾಸಕ ಪ್ರಿಯಾಂಕ್ ಖರ್ಗೆ ಸಲ್ಲಿಸಿರುವ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.ಲಾಕ್​ಡೌನ್​ನಿಂದಾಗಿ ನೆರೆ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ಕಲಬುರಗಿ ಮೂಲದ ಕಾರ್ವಿುಕರು, ವಿದ್ಯಾರ್ಥಿಗಳು ಹಾಗೂ ಇತರ ದುರ್ಬಲ ವರ್ಗದ ಜನರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಅಗತ್ಯ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ನಿದೇಶಿಸುವಂತೆ ಕೋರಿ ಪ್ರಿಯಾಂಕ್ ಖರ್ಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಎಂ. ನವಾಜ್ ಅವರಿದ್ದ ಪೀಠ ಮಂಗಳವಾರ ವಿಚಾರಣೆ ನಡೆಸಿತು. ಮುಖ್ಯ ಕಾರ್ಯದರ್ಶಿ, ಕಲಬುರಗಿ ಜಿಲ್ಲಾಧಿಕಾರಿ, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಈಶಾನ್ಯ ಸಾರಿಗೆ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜೂ.1ಕ್ಕೆ ಮುಂದೂಡಿತು.
ರಾಜ್ಯದ ಸುಗ್ರೀವಾಜ್ಞೆ ಸಾಮ್ಯತೆ ಹೊಂದಿಲ್ಲ: ಕೋವಿಡ್-19 ತಡೆ ಹಾಗೂ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿ ಮೇಲಿನ ಹಲ್ಲೆ ತಡೆಗಟ್ಟಲು ರಾಜ್ಯ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯು ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯೊಂದಿಗೆ ಸಾಮ್ಯತೆ ಹೊಂದದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಹೈಕೋರ್ಟ್​ಗೆ ಕೇಂದ್ರ ತಿಳಿಸಿದೆ. ರಾಜ್ಯ ಸರ್ಕಾರದ ಸುಗ್ರಿವಾಜ್ಞೆ ಕೇಂದ್ರದ ಸುಗ್ರೀವಾಜ್ಞೆಗೆ ತದ್ವಿರುದ್ಧವಾಗಿದೆ ಎಂದು ಆಕ್ಷೇಪಿಸಿ ಸಲ್ಲಿಸಿರುವ ಪಿಐಎಲ್ ವಿಚಾರಣೆ ವೇಳೆ ಕೇಂದ್ರ ಪರ ವಕೀಲರು ಲಿಖಿತ ಹೇಳಿಕೆ ಸಲ್ಲಿಸಿದರು. 
(ಮಾಹಿತಿ ಕೃಪೆ ವಿಜಯವಾಣಿ...)

ಆಹಾರ,ನೀರಿಲ್ಲದೆ ಬದುಕುಳಿದಿರುವುದಾಗಿ ಹೇಳಿಕೊಂಡಿದ್ದ ಚುನ್ರಿವಾಲಾ ಮಾತಾಜಿ ಇನ್ನಿಲ್ಲ!

ಅಹಮದಾಬಾದ್: ಆಹಾರ ಮತ್ತು ನೀರಿಲ್ಲದೆ 70 ವರ್ಷಗಳಿಗೂ ಹೆಚ್ಚು ಕಾಲ ಬದುಕುಳಿದಿರುವುದಾಗಿ ಹೇಳಿಕೊಂಡಿದ್ದ ಪ್ರಹ್ಲಾದ್ ಜಾನಿ ಆಲಿಯಾಸ್ ಚುನ್ರಿವಾಲಾ ಮಾತಾಜಿ ಮಂಗಳವಾರ ಗುಜರಾತ್ ಜಿಲ್ಲೆಯ ಗಾಂಧಿನಗರ ಜಿಲ್ಲೆಯಲ್ಲಿ ನಿಧನರಾಗಿದ್ದಾರೆ. ಚುನ್ರಿವಾಲ್ ಅವರಿಗೆ 90 ವರ್ಷ ವಯಸ್ಸಾಗಿತ್ತು. ಅವರ ಸ್ವಗ್ರಾಮ ಚರಾಡದಲ್ಲಿ ನಿಧನರಾಗಿದ್ದಾರೆ ಎಂದು ಅವರು ಶಿಷ್ಯರು ಹೇಳಿದ್ದಾರೆ.
ಚುನ್ರಿವಾಲ್ ಗುಜರಾತ್ ದೊಡ್ಡ ಶಿಷ್ಯ ಬಳಗವನ್ನು ಹೊಂದಿದ್ದಾರೆ. ಅನ್ನ, ನೀರು ಇಲ್ಲದೆ ಬದುಕುಳಿಯಬಹುದು ಎಂಬ ಯೋಗಿ ಹೇಳಿಕೆ ಸಾಕಷ್ಟು ಕುತುಹೂಲವನ್ನುಂಟು ಮಾಡಿತ್ತು. ವಿಜ್ಞಾನಿಗಳು ಕೂಡಾ ಈ ಬಗ್ಗೆ 2003 ಮತ್ತು 2010ರಲ್ಲಿ ಪರೀಕ್ಷೆ ಕೂಡಾ ನಡೆಸಿದ್ದರು.
ದೇವರು ನನ್ನನ್ನು ಜೀವಂತವಾಗಿಟ್ಟಿರುವ ಕಾರಣ ಅನ್ನ, ನೀರು ಸೇವಿಸುವ ಅಗತ್ಯವಿಲ್ಲ ಎಂದಿದ್ದರು. ಈ ಮಧ್ಯೆ ಜಾನಿ ಅವರ ಪಾರ್ಥಿವ ಶರೀರವನ್ನು ಬಾನಸ್ಕಾಂತಾ ಜಿಲ್ಲೆಯ ಅಂಬಾಜಿ ದೇವಾಲಯ ಬಳಿ ಇರುವ ನಿರ್ಮಿಸಲಾಗಿರುವ ಆಶ್ರಮ ಕಮ್ ಗುಹೆಗೆ ಕೊಂಡೊಯ್ಯಲಾಗಿದೆ.
ತನ್ನ ಮೂಲ ಸ್ಥಳದಲ್ಲಿ ಸ್ವಲ್ಪ ಸಮಯ ಕಳೆಯುವ ಇಚ್ಚೆ ವ್ಯಕ್ತಪಡಿಸಿದ್ದರಿಂದ ಮಾತಾಜಿ ಅವರನ್ನು ಚರಡಾ ಗ್ರಾಮಕ್ಕೆ ತರಲಾಗಿತ್ತು. ಇಂದು ಪ್ರಾತ: ಕಾಲದಲ್ಲಿ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ. ಆಶ್ರಮದಲ್ಲಿ ಸ್ವಲ್ಪ ದಿನಗಳ ಕಾಲ ಭಕ್ತಾಧಿಗಳ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಗುರುವಾರ ಆಶ್ರಮದಲ್ಲಿ ಸಮಾಧಿ ನಿರ್ಮಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ದೇವಿ ಅಂಬಾಬಾಯಿಯಾ ಮೇಲೆ ತುಂಬಾ ಭಕ್ತಿ ಹೊಂದಿದ್ದ ಜಾನಿ, ಎಲ್ಲಾ ಸಮಯದಲ್ಲಿ ಚುನರಿ(ಕೆಂಪು ಸೀರೆ) ಧರಿಸಿ ಮಹಿಳೆಯರಂತೆ ಬಧುಕುತ್ತಿದ್ದರು. ಇದಕ್ಕಾಗಿ ಅವರನ್ನು ಚುನರಿವಾಲಾ ಮಾತಾಜಿ ಎಂದೂ ಕೂಡ ಸಂಬೋಧಿಸಲಾಗುತಿತ್ತು. ಅನ್ನ ನೀರಿಲ್ಲದೆ 76 ವರ್ಷ ಕಳೆದಿರುವುದಾಗಿ ಅವರು ಹೇಳಿಕೊಂಡಿದ್ದರು. ಆಧ್ಯಾತ್ಮಿಕ ಅನುಭೂತಿಯ ಹುಡುಕಾಟದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಮನೆಯನ್ನು ತ್ಯಜಿಸಿ, 14ನೇ ವಯಸ್ಸಿನಿಂದಲೇ ಜಾನಿ ಆಹಾರ ಮತ್ತು ನೀರು ಕೂಡ ತ್ಯಜಿಸಿದ್ದರು ಎಂದು ಅವರ ಅನುಯಾಯಿಗಳು ಹೇಳುತ್ತಾರೆ.
ಅಂಬಾಜಿ ದೇವಸ್ಥಾನದ ಬಳಿ ಇದ್ದ ಒಂದು ಚಿಕ್ಕ ಗುಹೆಯನ್ನು ತನ್ನ ಮನೆಯನ್ನಾಗಿ ಮಾಡಿಕೊಂಡಿದ್ದರು. ಬಳಿಕ ಅವರು 'ಗಾಳಿಯ ಮೇಲೆ ಬದುಕುವ' ಯೋಗಿ ಎಂದೇ ಅವರು ಖ್ಯಾತಿ ಪಡೆದುಕೊಂಡಿದ್ದರು. 2010 ರಲ್ಲಿ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಗೆ ಸೇರಿದ ಇನ್ಸ್ಟಿಟ್ಯೂಟ್ ಆಫ್ ಫಿಸಿಯಾಲಾಜಿ ಅಂಡ್ ಅಲೈಡ್ ಸೈನ್ಸಸ್ ವಿಜ್ಞಾನಿಗಳು ಹಾಗೂ ವೈದ್ಯರು, ಜಾನಿ ಆಹಾರ ಮತ್ತು ನೀರಿಲ್ಲದೆ ಹೇಗೆ ಬದುಕುತ್ತಾರೆ ಎಂಬುದನ್ನು ತಿಳಿದುಕೊಳ್ಳಲು 15 ದಿನಗಳ ಕಾಲ ಅವರ ಅಬ್ಸರ್ ವೇಸನ್ ಸ್ಟಡಿ ನಡೆಸಿದ್ದರು. ಬಳಿಕೆ ಹೇಳಿಕೆ ಪ್ರಕಟಿಸಿದ್ದ DIPAS, ಹಸಿವು ಮತ್ತು ನೀರಿನ ಸೇವನೆಯಿಂದ ಪಾರಾಗಲು ಕೆಲ ಪುನರುಕ್ತಿ ಹೊಂದಾಣಿಕೆ ಅನುಸರಿಸುತ್ತಾರೆ ಎಂದು ಹೇಳಿತ್ತು.
(ಮಾಹಿತಿ ಕೃಪೆ ಕನ್ನಡಪ್ರಭ...)

Tuesday, May 26, 2020

ಸಂಕಷ್ಟದಲ್ಲಿ ವಲಸೆ ಕಾರ್ಮಿಕರು: ಕೇಂದ್ರ, ರಾಜ್ಯ ಸರಕಾರಗಳಿಂದ ಲೋಪಗಳಾಗಿವೆ ಎಂದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಕೊರೋನ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರಿಗೆ ನೆರವಾಗಲು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುವ ಬಗ್ಗೆ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಆದೇಶಿಸಿದೆ.
ಗುರುವಾರದೊಳಗೆ ಈ ಬಗ್ಗೆ ವರದಿ ಸಲ್ಲಿಸಬೇಕು ಎಂದ ಜಸ್ಟಿಸ್ ಕಿಶನ್ ಕೌಲ್ ಮತ್ತು ಎಂಆರ್ ಶಾ ಅವರಿದ್ದ ನ್ಯಾಯಪೀಠ, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಕ್ರಮಗಳನ್ನು ಕೈಗೊಂಡಿದ್ದರೂ , ಅಸಮರ್ಪಕತೆ ಮತ್ತು ಕೆಲವು ಲೋಪಗಳಿವೆ ಎಂದು ಹೇಳಿದೆ.
'ಎಲ್ಲೆಲ್ಲೋ ಸಿಲುಕಿರುವ ಕಾರ್ಮಿಕರಿಗೆ ಆಡಳಿತಗಳು ಊಟ, ನೀರು ನೀಡುತ್ತಿಲ್ಲ ಎನ್ನುವ ವರದಿಗಳನ್ನು ಮಾಧ್ಯಮಗಳು ಪ್ರಕಟಿಸಿವೆ' ಎಂದು ಸುಪ್ರೀಂ ಹೇಳಿದೆ.
ತನಗೆ ನೆರವಾಗುವಂತೆ ಮತ್ತು ಭಾರತ ಸರಕಾರವು ತೆಗೆದುಕೊಂಡಿರುವ ಮತ್ತು ತೆಗೆದುಕೊಳ್ಳಲಿರುವ ಎಲ್ಲ ಕ್ರಮಗಳನ್ನು ತನ್ನ ಗಮನಕ್ಕೆ ತರುವಂತೆ ಸಾಲಿಸಿಟರ್ ಜನರಲ್‌ಗೆ ಸೂಚಿಸಿದ ಸರ್ವೋಚ್ಚ ನ್ಯಾಯಾಲಯವು,ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ನೋಟಿಸ್‌ಗಳನ್ನು ಹೊರಡಿಸಿತು.
(ಮಾಹಿತಿ ಕೃಪೆ ವಾರ್ತಾಭಾರತಿ...)

ಕಂದಾಯ, ಮುಜರಾಯಿ ಇಲಾಖೆ ಪ್ರಗತಿ ಪರಿಶೀಲಿಸಿದ ಸಿಎಂ ಯಡಿಯೂರಪ್ಪ

ಬೆಂಗಳೂರು, ಮೇ 26: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಕಂದಾಯ ಹಾಗೂ ಮುಜರಾಯಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ವಿಧಾನಸೌಧದಲ್ಲಿ ಜರುಗಿತು.
ಸಭೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ, ಅನುಭವ ಮಂಟಪ ಸ್ಥಾಪನೆಗೆ 100 ಕೋಟಿ ರೂ.ಗಳನ್ನು ಒದಗಿಸಲು ನಿರ್ಧರಿಸಲಾಯಿತು. ಭೂ ಸುಧಾರಣೆಯ ಅಡಿಯಲ್ಲಿ 164 ತಾಲ್ಲೂಕುಗಳಲ್ಲಿ ಭೂ ನ್ಯಾಯ ಮಂಡಳಿ ರಚಿಲು ಮುಖ್ಯಮಂತ್ರಿ ಸೂಚಿಸಿದರು.
ಡ್ರೋನ್ ಆಧಾರಿತ ಸರ್ವೆ ಸಮಿತ್ವ ಯೋಜನೆಯಡಿ 16000 ಗ್ರಾಮಗಳನ್ನು ಗುರುತಿಸಲಾಗಿದೆ. ಗ್ರಾಮ ನಿವಾಸಿಗಳಿಗೆ ಅವರ ವಾಸಸ್ಥಳದ ಆಸ್ತಿಗಳಿಗೆ ಪ್ರಾಪರ್ಟಿ ಕಾರ್ಡ್ ವಿತರಿಸುವ ಯೋಜನೆ ಇದಾಗಿದೆ. ದೇಶದ 7 ರಾಜ್ಯಗಳ ಪೈಕಿ ಕರ್ನಾಟಕ ರಾಜ್ಯದಲ್ಲಿಯೂ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಯ ಅನುಷ್ಠಾನವನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ಮುಖ್ಯಮಂತ್ರಿ ಸೂಚಿಸಿದರು.
ಮುಜರಾಯಿ ಇಲಾಖೆ
ಮುಜರಾಯಿ ಇಲಾಖೆಗೆ ಸಂಬಂಧಿಸಿದಂತೆ, ಆಂಧ್ರಪ್ರದೇಶದ ತಿರುಮಲ ಕರ್ನಾಟಕ ಛತ್ರಕ್ಕೆ ಸೇರಿದ ಸ್ಥಳಗಳಲ್ಲಿ ನೂತನ ವಸತಿ ಗೃಹಗಳ ನಿರ್ಮಾಣಕ್ಕೆ 200 ಕೋಟಿ ರೂ.ಗಳ ಅನುದಾನ ಮಂಜೂರು ಮಾಡುವ ಬಗ್ಗೆ ಚರ್ಚಿಸಲಾಯಿತು. ಕೂಡಲೇ ಕಾಮಗಾರಿ ಪ್ರಾರಂಭಕ್ಕೆ ಕ್ರಮವಹಿಸಲು ಸೂಚನೆ ನೀಡಲಾಯಿತು. ಕಾಮಗಾರಿಯ ಅಂದಾಜು ವೆಚ್ಚ ಹಾಗೂ ಕೊಠಡಿಗಳ ಅಳತೆಯನ್ನು ಮತ್ತೊಮ್ಮೆ ಪರಿಶೀಲಿಸಲು ಮುಖ್ಯಮಂತ್ರಿಗಳು ಆದೇಶಿಸಿದರು. ಆನ್ ಲೈನ್ ಬುಕಿಂಗ್ ಸೇವೆಯ ವಿಸ್ತರಣೆ
50 ದೇವಸ್ಥಾನಗಳಿಗೆ ಆನ್ ಲೈನ್ ಬುಕಿಂಗ್ ಸೇವೆಯ ವಿಸ್ತರಣೆ ಮಾಡಲಾಗಿದೆ. ಸರಳ ವಿವಾಹ ಯೋಜನೆಯಲ್ಲಿ 50 ಜನರಿಗೆ ಸೀಮಿತಗೊಳಿಸಿ ಮದುವೆ ಮಾಡಿಸಲು ತೀರ್ಮಾನ ಮಾಡಲಾಯಿತು.  ನೋಂದಣಿ ಮತ್ತು ಮುದ್ರಾಂಕ ಇಲಾಖೆ
ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂಧಿಸಿದಂತೆ ಕೋವಿಡ್ 19 ಹಿನ್ನೆಲೆಯಲ್ಲಿ 2020-21 ನೇ ಸಾಲಿನಲ್ಲಿ 3524 ಕೋಟಿ ರೂ.ಗಳಷ್ಟು ಕಡಿಮೆ ರಾಜಸ್ವ ಸಂಗ್ರಹವಾಗಬಹುದೆಂದು ಅಂದಾಜಿಸಲಾಗಿದೆ. ಮುದ್ರಾಂಕ ಶುಲ್ಕ ಶೇ 5 ರಿಂದ 2 ಕ್ಕೆ
ಕೈಗೆಟಕುವ ದರಗಳ ಮನೆಗಳನ್ನು ಪ್ರೋತ್ಸಾಹಿಸಲು ರೂ.20 ಲಕ್ಷ ಮೌಲ್ಯದ ಅಪಾರ್ಟ್‍ಮೆಂಟ್‍ಗಳ ಮೊದಲ ನೊಂದಣಿಗೆ ಮುದ್ರಾಂಕ ಶುಲ್ಕವನ್ನು ಶೇ 5 ರಿಂದ 2 ಕ್ಕೆ ಇಳಿಸಲು ಹಾಗೂ ರೂ.35 ಲಕ್ಷ ಮೌಲ್ಯದವರೆಗಿನ ನೊಂದಣಿಗೆ ಶೇ 5 ರಿಂದ ಶೇ. 3 ಕ್ಕೆ ಇಳಿಸಲು ಮುಖ್ಯಮಂತ್ರಿಗಳು ಸೂಚಿಸಿದರು. ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್, ಮೀನುಗಾರಿಕೆ, ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಎಸ್.ಆರ್.ವಿಶ್ವನಾಥ್, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು.
(ಮಾಹಿತಿ ಕೃಪೆ ಒನ್ಇಂಡಿಯಕನ್ನಡ....)

'ಬುದ್ಧಿವಂತ' ನಿರ್ದೇಶಕನ ಹೊಸ ಚಿತ್ರಕಥೆ ಸಿದ್ಧ

ಉಪೇಂದ್ರ ನಟನೆಯ 'ಬುದ್ಧಿವಂತ 2' ಚಿತ್ರದಿಂದ ಹೊರಬಂದ ಮೇಲೆ ನಿರ್ದೇಶಕ ಬಿ.ಎನ್‌. ಮೌರ್ಯ ಮತ್ತೊಂದು ಚಿತ್ರಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಸದ್ದಿಲ್ಲದೇ ಅವರು ಚಿತ್ರಕಥೆಯೊಂದನ್ನು ಸಿದ್ಧಪಡಿಸಿದ್ದಾರೆ.
ಬ್ರಿಟಿಷರ ಆಡಳಿತ ಅವಧಿಯಲ್ಲಿದ್ದ ಒಂದು ಕ್ರೂರ ಪದ್ಧತಿ ಆಧರಿಸಿ ಅವರು ತಮ್ಮ ಹೊಸ ಚಿತ್ರಕ್ಕೆ ಸ್ಕ್ರಿಪ್ಟ್‌ ಬರೆದಿದ್ದಾರೆ. ಈ ಸ್ಕ್ರಿಪ್ಟ್‌ ಅನ್ನು ಅವರು 14 ಬಗೆಯಲ್ಲಿ ಬರೆದಿಟ್ಟಿದ್ದಾರಂತೆ. 'ಲಾಕ್‌ಡೌನ್‌ ಅವಧಿ ನನ್ನ ಪಾಲಿಗೆ ವ್ಯರ್ಥವಾಗಲು ಬಿಡಲಿಲ್ಲ. ಚಿತ್ರಕಥೆಗಳ ಮೇಲೆ ಅಧ್ಯಯನ ನಡೆಸುತ್ತಿದ್ದಾಗಲೇ ಕಥೆಯ ಒಂದು ಎಳೆ ಹೊಳೆದಿತ್ತು. ಆಪ್ತರ ಬಳಿ ಚರ್ಚಿಸಿದಾಗ ಉತ್ತಮ ಸಿನಿಮಾ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿ, ಚಿತ್ರಕಥೆ ಹೆಣೆಯುವಂತೆ ಹುರಿದುಂಬಿಸಿದ್ದರು. ಈ ಮೂರು ತಿಂಗಳ ಅವಧಿಯನ್ನು ಹೊಸ ಚಿತ್ರದ ಕಥೆ ಮತ್ತು ಚಿತ್ರಕಥೆ ಹೆಣೆಯಲು ಬಳಸಿಕೊಂಡೆ. ಒಂದು ಒಳ್ಳೆಯ ಸ್ಕ್ರಿಪ್ಟ್‌ ಸಿದ್ಧಪಡಿಸಿದ ತೃಪ್ತಿಯೂ ಸಿಕ್ಕಿದೆ' ಎಂದು ಮಾತು ವಿಸ್ತರಿಸಿದರು ಮೌರ್ಯ.
'ಬ್ರಿಟಿಷ್‌ ಆಳ್ವಿಕೆಯಲ್ಲಿದ್ದ, ಮನುಕುಲವೇ ಬೆಚ್ಚಿಬೇಳುವಂತೆ ಇದ್ದ ಆ ಪದ್ಧತಿ ಕಾಲಾನಂತರ ಕಾನೂನಿನ ವ್ಯಾಪ್ತಿಯಿಂದ ತೆಗೆದು ಹಾಕಲ್ಪಟ್ಟಿದೆ. ಆದರೆ, ಆ ‍ಪದ್ಧತಿ ಒಂದು ವೇಳೆ ಈಗ ಅನಧಿಕೃತವಾಗಿ ಆಚರಣೆಯಲ್ಲಿದ್ದರೆ ಹೇಗಿರುತ್ತೆಂದು ಕಲ್ಪಿಸಿಕೊಂಡು ಈ ಕಾಲಘಟ್ಟಕ್ಕೆ ಅನ್ವಯಿಸಿ ಕಥೆ ಹೇಳಲು ಹೊರಟಿದ್ದೇನೆ. ಆ ಕ್ರೂರ ಪದ್ಧತಿಯ ಸಾರಾಂಶ ವಿಸ್ತರಿಸಿ ಹೇಳಿದರೆ, ಇಡೀ ಕಥೆಯ ಕುತೂಹಲ ಹೊರಟುಹೋಗುತ್ತದೆ' ಎನ್ನುವ ಅವರು ಕಥೆಯ ಗುಟ್ಟು ಕಾಯ್ದುಕೊಳ್ಳುವ ಜಾಣ್ಮೆ ತೋರಿದರು.
'ಸ್ಟಾರ್‌ ನಟರು ಮತ್ತು ನಿರ್ಮಾಪಕರೊಂದಿಗೆ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲೇ ಹೊಸ ಚಿತ್ರವನ್ನು ಘೋಷಣೆ ಮಾಡಲಿದ್ದೇನೆ. ಇದೊಂದು ಬಿಗ್‌ ಬಜೆಟ್‌ ಸಿನಿಮಾ ಆಗುವುದರಲ್ಲಿ ಅನುಮಾನವೇ ಇಲ್ಲ' ಎನ್ನುವ ಮಾತು ಸೇರಿಸಿದರು.
ಸೃಜನ್‌ ಲೋಕೇಶ್‌ ನಟನೆಯ 'ಟಿಪಿಕಲ್‌ ಕೈಲಾಸ್‌' ಚಿತ್ರವನ್ನು ನಿರ್ದೇಶಿಸಿದ್ದ ಮೌರ್ಯ ಅವರಿಗೆ 'ಬುದ್ಧಿವಂತ 2' ಚಿತ್ರ ಎರಡನೇ ಚಿತ್ರ ಆಗಬೇಕಿತ್ತು. ಈ ಚಿತ್ರದ ಕಥೆ ಮತ್ತು ಚಿತ್ರಕಥೆ ಮೌರ್ಯ ಅವರದ್ದೇ. ಕಥೆ- ಚಿತ್ರಕಥೆಯಲ್ಲಿ ಸ್ವಲ್ಪ ಮಾರ್ಪಾಡು ಮಾಡಿಕೊಳ್ಳಬೇಕೆಂಬ ಒತ್ತಡ ಬಂದಿದ್ದಕ್ಕೆ ಚಿತ್ರತಂಡದಿಂದಲೇ ಹೊರ ನಡೆದಿದ್ದಕ್ಕೆ ಅವರಲ್ಲಿ ಬೇಸರವಿಲ್ಲ. 'ಕಥೆಗಾರ- ನಿರ್ದೇಶಕನಿಗೆ ಸ್ವಾಭಿಮಾನ ಬಹಳ ಮುಖ್ಯ. ನಮ್ಮ ಮಾತು- ಕೃತಿಯಲ್ಲಿ ರಾಜೀಮಾಡಿಕೊಳ್ಳಬಾರದು' ಎನ್ನುವ ಮಾತು ಹೇಳಲು ಅವರು ಮರೆಯಲಿಲ್ಲ.
'ಬುದ್ಧಿವಂತ 2' ಚಿತ್ರಕ್ಕೆ ಈಗ ನಿರ್ದೇಶಕ ಭದ್ರಾವತಿಯ ಜಯರಾಮ್‌ ಆಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.
(ಮಾಹಿತಿ ಕೃಪೆ ಪ್ರಜಾವಾಣಿ...)

ರಾಜ್ಯದಲ್ಲಿ ಕೊರೋನಾ ಮಾತ್ರ ಇದ್ದವರಾರೂ ಸತ್ತಿಲ್ಲ!

ಬೆಂಗಳೂರು(ಮೇ.26): ರಾಜ್ಯದಲ್ಲಿ ಯಾವುದೇ ಆರೋಗ್ಯವಂತ ಹಾಗೂ ದೀರ್ಘಕಾಲೀನ, ಗಂಭೀರ ಅನಾರೋಗ್ಯ ಸಮಸ್ಯೆ ಹೊಂದಿರದ ಯಾವೊಬ್ಬ ಕೊರೋನಾ ಸೋಂಕಿತರೂ ಮೃತಪಟ್ಟಿಲ್ಲ. ಆದರೆ, ಮೃತಪಟ್ಟವರಲ್ಲಿ ಬಹುತೇಕರು ಸೋಂಕು ತಗುಲಿದ ನಂತರ ತಾವು ಈ ಮೊದಲೇ ಹೊಂದಿದ್ದ ರೋಗಗಳು ಉಲ್ಬಣಗೊಂಡು ಜೀವ ಕಳೆದುಕೊಂಡಿದ್ದಾರೆ.
ರಾಜ್ಯದಲ್ಲಿ ಕರೋನಾ ಸಂಪೂರ್ಣ ಆರೋಗ್ಯವಂತ ವ್ಯಕ್ತಿ ಮೇಲೆ ಅಂತಹ ಪರಿಣಾಮ ಬೀರಿಲ್ಲ. ಈವರೆಗೂ ವರದಿಯಾಗಿರುವ 2,182 ಪ್ರಕರಣಗಳಲ್ಲಿ 1912 ಮಂದಿಗೆ ಸೋಂಕಿನ ಲಕ್ಷಣಗಳೂ ಸಹ ವರದಿಯಾಗಿಲ್ಲ.
ದೇಶದ ಸರಾಸರಿಗೆ ಹೋಲಿಸಿಕೊಂಡರೆ ಸೋಂಕಿತರ ಸಾವಿನ ಸಂಖ್ಯೆ ತೀವ್ರ ಕಡಿಮೆ ಇದೆ. ದೇಶದಲ್ಲಿ ಪ್ರತಿ 10 ಲಕ್ಷ ಮಂದಿಗೆ 33.3 ರಷ್ಟುಮಂದಿ ಸೋಂಕಿತರು ಸಾವನ್ನಪ್ಪಿದ್ದರೆ ರಾಜ್ಯದಲ್ಲಿ 6.9 ಮಂದಿ ಮಾತ್ರ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ ಬರೋಬ್ಬರಿ 155 ಮಂದಿ ಸಾವನ್ನಪ್ಪಿದ್ದಾರೆ.
ಕೊರೋನಾ ಕೇಸ್ ಹೆಚ್ಚಳ: 50ನೇ ಸ್ಥಾನದಲ್ಲಿದ್ದ ಭಾರತ, ವಿಶ್ವದಲ್ಲೇ ನಂ.10!
ರಾಜ್ಯದಲ್ಲಿ ಈವರೆಗೂ 45 ಮಂದಿ ಕೊರೋನಾ ಸೋಂಕಿತರು ಮೃತಪಟ್ಟಿದ್ದು, ಇದರಲ್ಲಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಳಿದ 43 ಮಂದಿಯಲ್ಲಿ ಎಲ್ಲರೂ ಸಾರಿ (ತೀವ್ರ ಉಸಿರಾಟ), ಕಿಡ್ನಿ ವೈಫಲ್ಯ, ಹೃದಯ ಸಮಸ್ಯೆ, ಎಚ್‌ಐವಿ, ಕ್ಯಾನ್ಸರ್‌ನಂತಹ ದೀರ್ಘಕಾಲೀನ ಅನಾರೋಗ್ಯಗಳು ಇದ್ದವು. ಹೀಗಾಗಿ ಮೃತಪಟ್ಟವರಲ್ಲಿ ಬಹುತೇಕರು ವೃದ್ಧರಾಗಿದ್ದು, ರೋಗ ನಿರೋಧಕ ಶಕ್ತಿ ಇಲ್ಲದೆ ಹಾಗೂ ಬೇರೆ ಅನಾರೋಗ್ಯ ಸಮಸ್ಯೆಗಳಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
60 ವರ್ಷ ಮೇಲ್ಪಟ್ಟವರು 27ಮಂದಿ:
ರಾಜ್ಯದಲ್ಲಿ ಕೊರೋನಾದಿಂದ ಮೃತಪಟ್ಟವರ ಪೈಕಿ 10 ಮಂದಿ 70 ವರ್ಷ ಮೇಲ್ಪಟ್ಟವರು, 17 ಮಂದಿ 60ರಿಂದ 70 ವರ್ಷ ವಯಸ್ಸಿನವರು, 12 ಮಂದಿ 50ರಿಂದ 60 ವರ್ಷ, 4 ಮಂದಿ 40ರಿಂದ 50 ವರ್ಷ ವಯಸ್ಸಿನವರಾಗಿದ್ದಾರೆ. ಉಳಿದಂತೆ 30 ವರ್ಷ ಮೇಲ್ಪಟ್ಟಒಬ್ಬ ವ್ಯಕ್ತಿ ಮಾತ್ರ ಮೃತಪಟ್ಟಿದ್ದು, ಅವರಿಗೆ ಎಚ್‌ಐವಿಯಂತಹ ದೀರ್ಘಕಾಲೀನ ಗಂಭೀರ ಅನಾರೋಗ್ಯ ಸಮಸ್ಯೆ ಇತ್ತು. ಹೀಗಾಗಿ ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲೇ ಅಧಿಕ ಸಾವು:
ಒಟ್ಟು ಸಾವಿನಲ್ಲಿ ಬೆಂಗಳೂರಿನಲ್ಲಿ 9, ಕಲಬುರಗಿ 7, ದಕ್ಷಿಣ ಕನ್ನಡ 7, ದಾವಣಗೆರೆ, ವಿಜಯಪುರ ತಲಾ 4, ತುಮಕೂರು, ಚಿಕ್ಕಬಳ್ಳಾಪುರ, ಬೀದರ್‌ ತಲಾ 2, ಬೆಳಗಾವಿ, ಉಡುಪಿ, ಬಾಗಲಕೋಟೆ, ಬಳ್ಳಾರಿ, ಗದಗ, ಬೆಂಗಳೂರು ಗ್ರಾಮಾಂತರದಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾಗಿದೆ.
ರಾಜ್ಯದ 8 ಜಿಲ್ಲೆಗಳಲ್ಲಿ ಈಗ ಕೊರೋನಾ ಶತಕ!
357 ವೃದ್ಧರಿಗೆ ಸೋಂಕು, ಐಸಿಯುನಲ್ಲಿ 17 ಮಂದಿ
ಒಟ್ಟು 2183 ಪ್ರಕರಣಗಳಲ್ಲಿ 357 ಮಂದಿ ವೃದ್ಧರಿದ್ದಾರೆ. 60 ವರ್ಷ ಮೇಲ್ಪಟ್ಟವರು 181 ಮಂದಿ, 50ರಿಂದ 60 ವರ್ಷ ವಯಸ್ಸಿನ 176 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಅರ್ಧದಷ್ಟುಮಂದಿ ಇನ್ನೂ ಆಸ್ಪತ್ರೆಗಳಲ್ಲೇ ಇದ್ದಾರೆ. ಈ ಪೈಕಿ 17 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
(ಮಾಹಿತಿ ಕೃಪೆ ಸುವರ್ಣ ನ್ಯೂಸ್....)

ಮದುವೆ ಮುಂದೂಡಿದ್ದಕ್ಕೆ ಕೆರೆಗೆ ಹಾರಿ ಯುವಕ ಆತ್ಮಹತ್ಯೆ

ಕೋವಿಡ್ 19 ಲಾಕ್ಡೌನ್ ಹಿನ್ನೆಲೆಯಲ್ಲಿ ಮದುವೆ ದಿನಾಂಕ ಮುಂದೂಡಿದಕ್ಕೆ ಯುವಕನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ ಸೋಮವಾರ ನಡೆದಿದೆ.
ದೇವಾಂಗಪೇಟೆ ನಿವಾಸಿಯಾಗಿರುವ 30 ವರ್ಷದ ಶರಣಪ್ಪ ಹಡಪದ ನಗರದ ಸಂತೋಷ ನಗರದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮದುವೆ ನಿಶ್ಚಿತಾರ್ಥ ನೇರವೇರಿದ್ದರೂ ಮದುಗೆ ದಿನಾಂಕ ನಿಗದಿಯಾಗಿರಲಿಲ್ಲ.
ಕೋವಿಡ್ 19 ಲಾಕ್ ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಮದುವೆ ದಿನಾಂಕ ನಿಗದಿ ಮಾಡದೇ ಮದುವೆ ಮುಂದೂಡಲಾಗಿತ್ತು. ಇದರಿಂದ ಮನನೊಂದಿದ್ದ ಯುವಕ, ಈ ವಿಚಾರವನ್ನು ತನ್ನ ಆಪ್ತರ ಜೊತೆ ಹೇಳಿಕೊಂಡಿದ್ದ ಎಂದು ತಿಳಿದು ಬಂದಿದೆ.
ಪ್ರಕರಣ ಬೆಳಕಿಗೆ ಬಂದ ನಂತ ಅಗ್ನಿ ಶಾಮಕ ದಳದ ಸಿಬ್ಬಂದಿ ಮೃತದೇಹ ಹೊರಗೆ ತೆಗೆದಿದ್ದಾರೆ. ಘಟನೆಯ ಕುರಿತು ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
(ಮಾಹಿತಿ ಕೃಪೆ ಕನ್ನಡವಾಯಿನಿ...)

ವಲಸೆ ಕಾರ್ಮಿಕರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 10 ಸಾವಿರ ಹಾಕಿ: ಕೇಂದ್ರಕ್ಕೆ ಖರ್ಗೆ ಆಗ್ರಹ

ಬೆಂಗಳೂರು: ಕೇಂದ್ರ ಸರ್ಕಾರ ಕೋವಿಡ್-19 ಸಂಕಷ್ಟದಿಂದ ಜನರನ್ನು ಪಾರು ಮಾಡಲು ಘೋಷಿಸಿರುವ 20 ಲಕ್ಷ ಕೋಟಿ ಪರಿಹಾರ ಯಾರಿಗೂ ಪ್ರಯೋಜನಕ್ಕೆ ಬರದಂತಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ವಲಸೆ ಕಾರ್ಮಿಕರ ಖಾತೆಗೆ ನೇರವಾಗಿ ಹಣ ಹಾಕುವುದರಿಂದ ಅವರಿಗೆ ಸಹಾಯವಾದಂತಾಗುತ್ತದೆ. ಮುಂದಿನ ಆರು ತಿಂಗಳುಗಳ ಕಾಲ ಪ್ರತಿ ತಿಂಗಳು 10 ಸಾವಿರ ರು.ಗಳನ್ನು ವಲಸೆ ಕಾರ್ಮಿಕರಿಗೆ ನೇರವಾಗಿ ನೀಡಿ ಎಂದು ಸಲಹೆ ಕೊಟ್ಟಿದ್ದಾರೆ.
ಇದರಿಂದ ವಲಸೆ ಕಾರ್ಮಿಕರು ಅಗತ್ಯ ವಸ್ತುಗಳನ್ನು ಖರೀದಿಸಲು ಸಹಾಯವಾಗುವುದಲ್ಲದೇ ಆರ್ಥಿಕತೆಗೆ ಉತ್ತೇಜನವೂ ದೊರೆಯಲಿದೆ ಎಂದು ಹೇಳಿದ್ದಾರೆ. ವಲಸೆ ಕಾರ್ಮಿಕರ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಅವರ ಖಾತೆಗೆ ನೇರವಾಗಿ ಹಣ ವರ್ಗಾಯಿಸುವಂತೆ ದೇಶದ ಪ್ರಮುಖ ಉದ್ಯಮಿಗಳು ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿದ್ದಾರೆ,
''ಹಣಕಾಸು ಸಚಿವಾಲಯ ಸಿದ್ಧತೆಯೇ ಇಲ್ಲದೆ ಪ್ರಧಾನಿ ಪ್ರಚಾರಕ್ಕಾಗಿ ಪ್ಯಾಕೇಜ್‌ ಘೋಷಿಸಿದರು. ವಲಸೆ ಕಾರ್ಮಿಕರ ಸ್ಥಿತಿ ಶೋಚನೀಯ ಸ್ಥಿತಿ ತಲುಪಿದರೂ ಸರಕಾರ ಸ್ಪಂದಿಸಲಿಲ್ಲ. ನೂರಾರು ಕಿ.ಮೀ. ನಡೆದೇ ಕಾರ್ಮಿಕರು ಊರು ತಲುಪಬೇಕಾಯಿತು, ಲಾಕ್ ಡೌನ್ ಘೋಷಿಸುವ ಮೊದಲು ವಲಸೆ ಕಾರ್ಮಿಕರು ತಮ್ಮ ತಮ್ಮ ಸ್ಥಳಗಳಿಗೆ ತೆರಳಲು ಅವಕಾಶ ನೀಡಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯಗಳಿಗೆ ಡಿಸೆಂಬರ್‌, ಜನವರಿ ತಿಂಗಳ ಜಿಎಸ್‌ಟಿ ಪರಿಹಾರದ ಸುಮಾರು 34 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಕೊರೊನಾ ನೆಪದಲ್ಲಿ ಸುಧಾರಣೆ ಕಾರಣ ನೀಡಿ ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡುವ ಪ್ರಯತ್ನದಲ್ಲಿ ಕೇಂದ್ರ ಸರಕಾರ ತೊಡಗಿದೆ,'' ಎಂದು ಖರ್ಗೆ ಕಿಡಿಕಾರಿದ್ದಾರೆ.
ಕೇಂದ್ರದ ಆರ್ಥಿಕ ಪರಿಹಾರ ರೈತರಿಗೆ ತಕ್ಷಣಕ್ಕೆ ಅನುಕೂಲಕ್ಕೆ ಬರುವಂತಾಗಿದ್ದರೆ ಆಹಾರ ಉತ್ಪಾದನೆ ಹೆಚ್ಚಳಕ್ಕೆ ಅನುಕೂಲವಾಗುತ್ತಿತ್ತು. ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಅಡಿಯಲ್ಲಿ ನಾಲ್ಕು ತಿಂಗಳಿಗೊಮ್ಮೆ ನೀಡುವ 2 ಸಾವಿರ ರೂ. ಯಾವುದಕ್ಕೂ ಪ್ರಯೋಜನ ಬರುವುದಿಲ್ಲ ಎಂದು ಖರ್ಗೆ ಆರೋಪಿಸಿದ್ದಾರೆ.
ಅಲ್ಲದೆ ಕೇಂದ್ರ ಸರ್ಕಾರ ನರೆಗಾ ಯೋಜನೆಗೆ ನೀಡಿರುವ 40 ಸಾವಿರ ಕೋಟಿ ಹೆಚ್ಚುವರಿ ಪರಿಹಾರ 10 ಕೃಷಿ ಕಾರ್ಮಿಕರ ಜೊತೆಗೆ 8 ಕೋಟಿ ವಲಸೆ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಕಾರ್ಮಿಕರಿಗೆ ಕನಿಷ್ಟ 20 ದಿನ ಮಾತ್ರ ಉದ್ಯೋಗ ನೀಡಬಹುದು ಎಂದು ಖರ್ಗೆ ಹೇಳಿದ್ದಾರೆ.
(ಮಾಹಿತಿ ಕೃಪೆ ಕನ್ನಡಪ್ರಭ...)

ಹೆಚ್ಚು ಸಂಖ್ಯೆಯಲ್ಲಿ ರಸ್ತೆಗಿಳಿಯದ ಬಿಎಂಟಿಸಿ: ಪ್ರಯಾಣಿಕರ ಪರದಾಟ

ಬೆಂಗಳೂರು: ಮಂಗಳವಾರದಿಂದ ಬಿಎಂಟಿಸಿ ಪಾಸ್ ದರವನ್ನು ತಗ್ಗಿಸಿ ಟಿಕೆಟ್ ವ್ಯವಸ್ಥೆ ಮಾಡಿದೆಯಾದರೂ ಸಮರ್ಪಕ ಬಸ್‌ಗಳನ್ನು ಮಾತ್ರ ಪೂರೈಸಿಲ್ಲ‌. ಬಸ್‌ಗಳ ಕೊರತೆಯಿಂದ ಪ್ರಯಾಣಿಕರು ಪರದಾಡುತ್ತಿದ್ದ ದೃಶ್ಯ ನಗರದೆಲ್ಲೆಡೆ ಇಂದು ಕಂಡುಬಂತು.
ಮತ್ತೊಂದೆಡೆ ಸಂದರ್ಭದ ಲಾಭ ಪಡೆದ ಕೆಲ ಆಟೋ ಚಾಲಕರು ಸಾಮಾಜಿಕ ಅಂತರ ನಿಯಮವನ್ನು ಪಾಲಿಸದೇ ಪ್ರಯಾಣಿಕರನ್ನು ಬೇಕಾಬಿಟ್ಟಿ ತುಂಬಿಸಿಕೊಂಡು ಹೆಚ್ಚುಹಣ ಪೀಕಿಸುತ್ತಿದ್ದರು.
ದಿನನಿತ್ಯದ ಕೆಲಸಗಳಿಗೆ ತೆರಳಲು ಜನರು ಬಿಎಂಟಿಸಿ ಬಸ್ ಕೊರತೆಯಿಂದಾಗಿ ಪರದಾಡಿದರು. ರಾಷ್ಟ್ರೀಯ ಹೆದ್ದಾರಿ 4 ಬೆಂಗಳೂರಿನ 8ಮೈಲಿಯಲ್ಲಿ ಜನ ಸಾಮಾನ್ಯರ ಪರದಾಟ ಹೆಚ್ಚಾಗಿತ್ತು.
ಇನ್ನು ಬಹುತೇಕ ಜನರು ತಮ್ಮ ತಮ್ಮ ವಾಹನಗಳಲ್ಲಿ ಕೆಲಸ ಕಾರ್ಯಗಳಿಗೆ ತೆರಳಿದರು. ಹೀಗೆ ಖಾಸಗಿ ವಾಹನ ಬಳಸುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರ ಹೆಚ್ಚಾಗಿತ್ತು. ಇನ್ನು ಸಂಚರಿಸುವ ಒಂದೆರಡು ಬಸ್ಸುಗಳು ನಿಲ್ದಾಣಗಳಲ್ಲಿ ನಿಲ್ಲಿಸುತ್ತಿಲ್ಲ ಎಂದು ಪ್ರಯಾಣಿಕರು ಗೋಗರೆದರು. ಕೆಲವು ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿತ್ತು.
ಬಸ್ಸುಗಳ ಸಂಖ್ಯೆ ಕಡಿಮೆಯಿದ್ದ ಕಾರಣ ಪ್ರಯಾಣಿಕರು ಆಟೋಗಳತ್ತ ಮುಖ ಮಾಡುತ್ತಿರುವುದು ಸಾಮಾನ್ಯವಾಗಿತ್ತು. ಆಟೋಗಳಲ್ಲಿ ಹಣಗಳಿಕೆ ಉದ್ದೇಶದಿಂದ ಸಾಮಾಜಿಕ ಅಂತರ ಮಾಯವಾಗಿ ಒಂದು ಅಟೋದಲ್ಲಿ ಮೂವರು ನಾಲ್ಕು ಜನರು ಪ್ರಯಾಣಿಸಿದರು.
ಇನ್ನು ನಗರದ ಮುಖ್ಯ ಕೇಂದ್ರ ಕೆ.ಆರ್.ಮಾರುಕಟ್ಟೆ ಯಲ್ಲಿಯೂ ಬಿಎಂಟಿಸಿ ಬಸ್ ಗಳಿಗಾಗಿ ಜನರ ಪರದಾಡಿದರು. ಬೆರಳೆಣಿಕೆಯಷ್ಟು ಬಸ್ ಗಳು ಮಾತ್ರ ಮಾರ್ಕೆಟ್ ನಿಂದ ಸಂಚರಿಸಿದ್ದರಿಂದ ಬಸ್‌ಗಾಗಿ ಪ್ರಯಾಣಿಕರು ಕಾದುಕುಳಿತರು. ಬೆಳಗ್ಗೆಯಿಂದ ಬೆರಳೆಣಿಕೆಯಷ್ಟು ಮಾರ್ಗಗಳಿಗೆ ಮಾರ್ಕೆಟ್ ನಿಂದ ಬಸ್ ಸಂಚಾರವಿತ್ತು ಇನ್ನು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ‌. ಸೋಮವಾರದವರೆಗೆ ಎರಡು ಸಾವಿರ ಬಸ್ ಸಂಚಾರವಿತ್ತು. ಆದರೆ ಪ್ರಯಾಣಿಕರ ನಿರುತ್ಸಾಹದಿಂದ ಕಡಿಮೆ ಬಸ್‌ ಸಂಚಾರವಿತ್ತು‌. ಬಸ್ ದರ ಪರಿಷ್ಕಾರದ ನಂತರ ಮಂಗಳವಾರದಿಂದ ಬಸ್ ಸಂಖ್ಯೆಯಲ್ಲಿ‌ ಹೆಚ್ಚಳವಾಗಿದ್ದು,1500 ಸಾವಿರ ಬಿಎಂಟಿಸ್ ಬಸ್ ಸೇವೆ ಹೆಚ್ಚಳವಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳೊಬ್ಬರು ಮಾಹಿತಿ ನೀಡಿದ್ದಾರೆ.
ಬಸ್‌ ಕೊರತೆ ಸಮಸ್ಯೆ ಗಮನಕ್ಕೆ ಬಂದಿದೆ, ಇಂದೇ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಭರವಸೆ ನೀಡಿದ್ದಾರೆ.
(ಮಾಹಿತಿ ಕೃಪೆ ಕನ್ನಡಪ್ರಭ...)

ರಾಜ್ಯದಲ್ಲಿ ಇಂದು ಕೊರೋನಾ ಶತಕ! ಸೋಂಕಿತರ ಸಂಖ್ಯೆ 2,282ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು ಮಧ್ಯಾಹ್ನದವರೆಗೆ ಒಟ್ಟು ನೂರು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ, 2,282ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಸೋಮವಾರ ಸಂಜೆಯಿಂದ ಮಂಗಳವಾರ ಮಧ್ಯಾಹ್ನದವರೆಗೆ ಬರೋಬ್ಬರಿ 100 ಕೊರೋನಾ ಪ್ರಕರಣಗಳು ವರದಿಯಾಗಿವೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 2282ಕ್ಕೇರಿಕೆಯಾಗಿದೆ.
ಕೋಲಾರದಲ್ಲಿ 2, ಯಾದಗಿರಿ 14, ದಕ್ಷಿಣ ಕನ್ನಡದಲ್ಲಿ 3, ಬಾಗಲಕೋಟೆಯಲ್ಲಿ 1, ವಿಜಯಪುರದಲ್ಲಿ 5, ದಾವಣಗೆರೆಯಲ್ಲಿ 11, ಬೀದರ್ ನಲ್ಲಿ 10, ಹಾಸನ 13, ಉಡುಪಿ 3, ಚಿಕ್ಕಬಳ್ಳಾಪುರದಲ್ಲಿ 1, ಚಿತ್ರದುರ್ಗದಲ್ಲಿ 19, ಕೊಪ್ಫಳದಲ್ಲಿ1, ಬಳ್ಳಾರಿಯಲ್ಲಿ 1, ಬೆಂಗಳೂರು ನಗರ 2, ಬೆಳಗಾವಿ 11 ಪ್ರಕರಣಗಳು ವರದಿಯಾಗಿವೆ.
ಇವರಲ್ಲಿ ಬಹುತೇಕರು ಹೊರರಾಜ್ಯಗಳ ಪ್ರಯಾಣದ ಇತಿಹಾಸ ಹೊಂದಿದ್ದಾರೆ.  ಮಹಾರಾಷ್ಟ್ರ, ತಮಿಳುನಾಡು ಮತ್ತು ಜಾರ್ಖಂಡ್ ಪ್ರವಾಸ ಕೈಗೊಂಡ ಹಲವರಲ್ಲಿ ಸೋಂಕು ಕಾಣಿಸಿಕೊಂಡಿದೆ.

Monday, May 25, 2020

ಜಾಗತಿಕ ಉತ್ಪಾದನಾ ಕೇಂದ್ರವಾಗಬಲ್ಲದೇ ಭಾರತ?

ಕೋವಿಡ್ 19 ಹಾವಳಿ ಅಧಿಕವಾದಾಗಿನಿಂದ ಜಗತ್ತಿಗೆ ಚೀನಾದ ಮೇಲೆ ಮುನಿಸು ಹೆಚ್ಚಾಗಿದೆ. ಈ ರೋಗದಿಂದ ಉದ್ಭವವಾದ ಕೆಲವು ಸಂಕಷ್ಟಗಳು ಔದ್ಯಮಿಕ ವಲಯದ ದೃಷ್ಟಿಕೋನವನ್ನೂ ಬದಲಿಸಲಾರಂಭಿಸಿದೆ. ಕೇವಲ ಒಂದೇ ರಾಷ್ಟ್ರದ ಮೇಲೆ ಅವಲಂಬಿತವಾಗುವ ಅಪಾಯದ ಬಗ್ಗೆ ಅರಿತು ಅನೇಕ ಬಹುರಾಷ್ಟ್ರೀಯ ಕಂಪನಿಗಳೀಗ ತಮ್ಮ ನೆಲೆಯನ್ನು ಚೀನಾದಿಂದ ಬದಲಿಸಲು ಯೋಚಿಸುತ್ತಿದ್ದು, ಅವುಗಳ ಚಿತ್ತವೀಗ ಭಾರತದತ್ತಲೂ ಹರಿದಿದೆ. ಹಾಗಿದ್ದರೆ, ಮುಂಬರುವ ವರ್ಷಗಳಲ್ಲಿ ಭಾರತ ಜಾಗತಿಕ ಉತ್ಪಾದನಾ ಹಬ್‌ ಆಗಿ ಹೊರಹೊಮ್ಮಲಿದೆಯೇ? ಅತ್ಯಂತ ಬಲಿಷ್ಠ ಪೂರೈಕೆ ಸರಪಳಿಯನ್ನು ಹೊಂದಿರುವ ಚೀನಾವನ್ನು ಹಿಂದಿಕ್ಕಿ ಮುಂದಡಿಯಿಡಲು ನಮಗೆ ಸಾಧ್ಯವೇ ಎನ್ನುವ ಪ್ರಶ್ನೆ ಎದುರಾಗುತ್ತಿದೆ.
ಮೊದಲಿಂದಲೂ
ಚೀನ ಪಾರಮ್ಯ
2010ರಲ್ಲಿ ಚೀನಾ ಅಮೆರಿಕವನ್ನು ಹಿಂದಿಕ್ಕಿ ಜಗತ್ತಿನ ಅತಿದೊಡ್ಡ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಿತು.
ಆದಾಗ್ಯೂ, 1980ರಿಂದಲೇ ಚೀನ “ಲೋ ಎಂಡ್‌’ ಪ್ರಾಡಕ್ಟ್ ಗಳ ಪ್ರಮುಖ ಉತ್ಪಾದನಾ ರಾಷ್ಟ್ರವಾಗಿತ್ತಾದರೂ ಮುಂದಿನ ಮೂರು ದಶಕಗಳಲ್ಲಿ ಔಷಧದಿಂದ ಹಿಡಿದು ಎಲೆಕ್ಟ್ರಾನಿಕ್‌ ಉತ್ಪನ್ನಗಳ ತಯ್ನಾರಿಯವರೆಗೂ ಅದರ ಉತ್ಪಾದನಾ ಸಾಮರ್ಥ್ಯ ವಿಸ್ತರಿಸಿತು. ಅಷ್ಟೇಕೆ, ಭಾರತಕ್ಕೆ ಅದು ಎಲೆಕ್ಟ್ರಾನಿಕ್, ವೈದ್ಯಕೀಯ ಪರಿಕರಗಳು, ಔಷಧಗಳ ಜತೆಗೆ, ಕುಂಕುಮ, ಗಣಪತಿ ಮೂರ್ತಿಗಳು, ಪ್ಲಾಸ್ಟಿಕ್‌ ಆಟಿಕೆಗಳಂಥ ಚಿಕ್ಕ ಪುಟ್ಟ ವಸ್ತುಗಳನ್ನೂ ಭಾರೀ ಪ್ರಮಾಣದಲ್ಲಿ ರಫ್ತು ಮಾಡುತ್ತದೆ! ವಿಶ್ವಸಂಸ್ಥೆಯ ಸಾಂಖೀÂಕ ವಿಭಾಗದ ಅಂದಾಜಿನ ಪ್ರಕಾರ 2018ರ ವೇಳೆಗೆ ಜಾಗತಿಕ ಉತ್ಪಾದನೆಯಲ್ಲಿ ಕೇವಲ ಚೀನಾವೊಂದರ ಪಾಲು 28 ಪ್ರತಿಶತದಷ್ಟಿತ್ತು!
ಭಾರತದೊಂದಿಗೆ
ಮಾತುಕತೆ
ಭಾರತದಲ್ಲಿ ಉತ್ಪಾದನೆಯನ್ನು ಆರಂಭಿಸಲು ಯೋಚಿಸುತ್ತಿರುವ ಸಾವಿರಕ್ಕೂ ಅಧಿಕ ಕಂಪೆನಿಗಳು ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಸ್ತರದ ಅಧಿಕಾರ ವರ್ಗದೊಂದಿಗೆ ಮಾತುಕತೆಯಲ್ಲಿ ತೊಡಗಿವೆ. ಅಲ್ಲದೇ, ಈ ಕಂಪನಿಗಳ ಅವಶ್ಯಕತೆಗಳನ್ನು ಅರಿಯಲು ಹಾಗೂ ಅವುಗಳಿಗೆ ನಿಯಮಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ವಿಶೇಷ ಟಾಸ್ಕ್ ಫೋರ್ಸ್‌ ಸ್ಥಾಪಿಸಿದ್ದು, ಈ ತಂಡ ಅಮೆರಿಕ, ಜಪಾನ್‌, ಬ್ರಿಟನ್‌, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಮತ್ತು ಸಿಂಗಾಪುರದ ಬಹುರಾಷ್ಟ್ರೀಯ ಕಂಪೆನಿಗಳ ಸಂಪರ್ಕದಲ್ಲಿ ಇದೆ. ಭಾರತದ ಜತೆಗೆ ಮಾತುಕತೆ ನಡೆಸಿರುವ ಸಾವಿರಕ್ಕೂ ಅಧಿಕ ಕಂಪೆನಿಗಳಲ್ಲಿ ಸುಮಾರು ಮುನ್ನೂರು ಕಂಪೆನಿಗಳು ಮೊಬೈಲ್ ,ಎಲೆಕ್ಟ್ರಾನಿಕ್‌ ವೈದ್ಯಕೀಯ ಪರಿಕರಗಳು, ಟೆಕ್ಸ್‌ಟೈಲ್ಸ್‌ ಮತ್ತು ಸಿಂಥೆಟಿಕ್‌ ಫ್ಯಾಬ್ರಿಕ್‌ ಕ್ಷೇತ್ರದಲ್ಲಿ ಹೆಸರುವಾಸಿಯಾಗಿವೆ.
ನೆಲೆ ಬದಲಿಸಲು ಜಪಾನ್‌,
ಅಮೆರಿಕ ತಯ್ಯಾರಿ
ಏಪ್ರಿಲ್‌ 13ರಂದು ಅಮೆರಿಕನ್‌ ಸಂಸದ ಮಾರ್ಕ್‌ ಗ್ರೀನ್‌ ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್‌ನಲ್ಲಿ ಹೊಸ ಬಿಲ್‌ ಎದುರಿಟ್ಟಿದ್ದಾರೆ. ಚೀನದಿಂದ ನೆಲೆ ಬದಲಿಸಲು ಸಿದ್ಧವಿರುವ ಅಮೆರಿಕನ್‌ ಕಂಪನಿಗಳಿಗೆ ಆರ್ಥಿಕ ಸಹಾಯ ಮಾಡಬೇಕು ಎನ್ನುವ ಪ್ರಸ್ತಾವ ಇದರಲ್ಲಿದೆ. ಇನ್ನೊಂದೆಡೆ, ಜಪಾನ್‌ ಈಗಾಗಲೇ ಈ ನಿಟ್ಟಿನಲ್ಲಿ ಹೆಜ್ಜೆಯನ್ನೂ ಇಟ್ಟಿದೆ. ಮಾರ್ಚ್‌ ತಿಂಗಳಿಂದಲೇ ಆ ದೇಶವು ಚೀನದಿಂದ ನೆಲೆ ಬದಲಿಸುವಂತೆ ತನ್ನ ಕಂಪನಿಗಳ ಮನವೊಲಿಸುತ್ತಿದ್ದು, ಈ ನಿಟ್ಟಿನಲ್ಲಿ 2.2 ಶತಕೋಟಿ ಡಾಲರ್‌ಗಳಷ್ಟು ಸಹಾಯವನ್ನೂ ಘೋಷಿಸಿದೆ.
ಇವೆ ಅನೇಕ ಅಡ್ಡಿಗಳು
ಭಾರತದಲ್ಲಿ ವಸ್ತುವೊಂದರ ಉತ್ಪಾದನಾ ವೆಚ್ಚ ಚೀನಕ್ಕಿಂತಲೂ 10-12 ಪ್ರತಿಶತ ಅಧಿಕವಾಗುತ್ತದೆ ಎನ್ನುತ್ತಾರೆ ಉದ್ಯಮ ಪರಿಣತರು. ಚೀನ ಎಂದಷ್ಟೇ ಅಲ್ಲ, ಬಾಂಗ್ಲಾದೇಶ, ವಿಯೆಟ್ನಾಂ ಸೇರಿದಂತೆ ಅನೇಕ ಏಷ್ಯನ್‌ ರಾಷ್ಟ್ರಗಳಲ್ಲೂ ಉತ್ಪಾದನಾ ವೆಚ್ಚ ಭಾರತಕ್ಕಿಂತ ಕಡಿಮೆ ಇದೆ. ಆದರೆ, ಭಾರತ ಮತ್ತು ಚೀನದಲ್ಲಿ ಜನಸಂಖ್ಯೆ ಅತ್ಯಧಿಕವಿರುವುದರಿಂದಾಗಿ, ಉತ್ಪಾದಕ ಕಂಪೆನಿಗ‌ಳಿಗೆ ದೇಶೀಯ ಸ್ತರದಲ್ಲೇ ಭಾರೀ ಪ್ರಮಾಣದಲ್ಲಿ ಗ್ರಾಹಕರು ಲಭ್ಯವಾಗುತ್ತಾರೆ ಎನ್ನುವುದನ್ನೂ ಮರೆಯುವಂತಿಲ್ಲ. ಆದಾಗ್ಯೂ ಕೇಂದ್ರ ಸರ್ಕಾರವು ಉತ್ಪಾದನಾ ಘಟಕಗಳಿಗಾಗಿಯೇ ಬೃಹತ್‌ ಪ್ರಮಾಣದಲ್ಲಿ ಲ್ಯಾಂಡ್‌ ಬ್ಯಾಂಕ್‌(ಭೂಪ್ರದೇಶವನ್ನು ಮೀಸಲಿಡುವ) ಸ್ಥಾಪನೆಗೆ ಮುಂದಾಗಿದೆಯಾದರೂ, ಇದೊಂದರಿಂದಲೇ ಎಲ್ಲವೂ ಸಾಧ್ಯವಾಗದು ಎನ್ನುತ್ತಾರೆ ಹಾಂಕಾಂಗ್‌ನಲ್ಲಿನ ಫೈನಾನ್ಶಿಯಲ್‌ ಟೈಮ್ಸ್ ಬ್ಯೂರೋ ಮುಖ್ಯಸ್ಥ ರಾಹುಲ್‌ ಜಾಕೋಬ್‌. “ಚೀನ ಇಂಟಿಗ್ರೇಟೆಡ್‌ ಇನ್‌ಫ್ರಾಸ್ಟ್ರಕ್ಚರ್‌ ಅಂದರೆ, ಬಂದರುಗಳು, ಹೈವೇಗಳು, ಕೌಶಲ್ಯಭರಿತ ಕೆಲಸಗಾರರು, ಅತ್ಯಾಧುನಿಕ ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ. ಈ ಕಾರಣದಿಂದಾಗಿ ಅದರ ಪೂರೈಕೆ ಸರಪಳಿಯು ಅತ್ಯಂತ ಸುಗಮವಾಗಿ ಸಾಗುತ್ತದೆ. ಈ ಹಾದಿಯಲ್ಲಿ ಭಾರತ ಸಾಗಬೇಕಾದ ದಾರಿಯಿನ್ನೂ ದೊಡ್ಡದಿದೆ. ಬರೀ ಜಾಗ ಕೊಟ್ಟಾಕ್ಷಣ ದೊಡ್ಡ ಕಂಪನಿಗಳು ರಾತ್ರೋರಾತ್ರಿ ಬರುತ್ತವೆ ಎಂದಲ್ಲ. ಮುಖ್ಯವಾಗಿ ಚೀನಾ ದಶಕಗಳಿಂದ ಜಾಗತಿಕ ಪೂರೈಕೆ ಜಾಲದಲ್ಲಿ ತನ್ನ ಬಲಿಷ್ಠ ಅಸ್ತಿತ್ವ ರೂಪಿಸಿಕೊಂಡಿದೆ” ಎನ್ನುತ್ತಾರೆ ರಾಹುಲ್…
ಕಾರ್ಪೊರೇಟ್‌ ತೆರಿಗೆಯಲ್ಲಿ ಇಳಿಕೆ
ಭಾರತ ಸರ್ಕಾರವು ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು ಹಲವಾರು ಸುಧಾರಣೆಗಳನ್ನು ಜಾರಿಗೆ ತಂದಿದೆ. ಉದಾಹರಣೆಗೆ, ಕೇಂದ್ರ ಸರ್ಕಾರ ಕಾರ್ಪೊರೇಟ್‌ ತೆರಿಗೆಯನ್ನು 25.27 ಪ್ರತಿಶತಕ್ಕೆ ಇಳಿಸಿದ್ದಷ್ಟೇ ಅಲ್ಲದೇ, ಹೊಸ ಉತ್ಪಾದಕರಿಗೆ ಈ ಪ್ರಮಾಣವನ್ನು 17 ಪ್ರತಿಶತಕ್ಕೆ ತಗ್ಗಿಸಿದೆ! 17 ಪ್ರತಿಶತ ಕಾರ್ಪೊರೇಟ್‌ ತೆರಿಗೆ ಆಗ್ನೇಯ ಏಷ್ಯಾದಲ್ಲೇ ಅತ್ಯಂತ ಕಡಿಮೆ ಎನ್ನುವುದು ಉಲ್ಲೇಖನೀಯ. ತೆರಿಗೆ ದರಗಳಲ್ಲಿ ಇಳಿಕೆ ಹಾಗೂ ಜಿಎಸ್ಟಿಯ ರೂಪದಲ್ಲಿ ಏಕ ತೆರಿಗೆಯ ಮೂಲಕ ಉತ್ಪಾದನಾ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದೇಶ ಬಂಡವಾಳವನ್ನು ಆಕರ್ಷಿಸುವ ಗುರಿ ಭಾರತಕ್ಕಿದೆ. ಈ ಹಿನ್ನೆಲೆಯಲ್ಲಿ ವಿದೇಶಗಳಲ್ಲಿರುವ ರಾಜತಾಂತ್ರಿಕರು ಕೂಡ ಆ ದೇಶದಲ್ಲಿನ ಎಂಎನ್‌ಸಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
ಭಾರತಕ್ಕೆ ಪೈಪೋಟಿ
ನೀಡುತ್ತಿರುವ ರಾಷ್ಟ್ರಗಳು
ಸದ್ಯಕ್ಕೆ ಭಾರತಕ್ಕೆ ವಿಯೆಟ್ನಾಂ, ಬಾಂಗ್ಲಾದೇಶ, ದಕ್ಷಿಣ ಕೊರಿಯಾ ಮತ್ತು ತೈವಾನ್‌ ಪ್ರಮುಖ ಪ್ರತಿಸ್ಪರ್ಧಿಗಳಾಗಿ ಬದಲಾಗಿವೆ. ಅದರಲ್ಲೂ ವಿಯೆಟ್ನಾಂ ಮತ್ತು ಬಾಂಗ್ಲಾದೇಶ ಉತ್ಪಾದನಾ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ತೋರಿಸುತ್ತಿದ್ದು, ಅವುಗಳೇ ಎಂಎನ್ಸಿಗಳಿಗೆ ನೆಚ್ಚಿನ ಪ್ರದೇಶಗಳು ಎನ್ನುತ್ತಾರೆ ಪರಿಣತರು. ಗಮನಾರ್ಹ ಸಂಗತಿಯೆಂದರೆ, ಬಾಂಗ್ಲಾದೇಶ, ತೈವಾನ್‌ ಮತ್ತು ವಿಯೆಟ್ನಾಂನಲ್ಲಿ ಕಾರ್ಮಿಕ ಕಾನೂನುಗಳು ದುರ್ಬಲವಾಗಿವೆ. ಹೀಗಾಗಿ, ಕಂಪನಿಗಳಿಗೆ ಆ ರಾಷ್ಟ್ರಗಳು ನೆಚ್ಚಿನ ತಾಣಗಳೂ ಹೌದು!
ಅಮೆರಿಕದ ಚಿತ್ತ ವಿಯೆಟ್ನಾಂನತ್ತ
ಜೂನ್‌ 2018ರಿಂದ ಅಮೆರಿಕ-ಚೀನಾ ನಡುವೆ ವ್ಯಾಪಾರ ಸಮರ ಆರಂಭವಾದಾಗಿನಿಂದಲೂ ಅಮೆರಿಕ ವಿಯೆಟ್ನಾಂನೊಂದಿಗೆ ವ್ಯಾಪಾರ ಹೆಚ್ಚಿಸಿದೆ. ಈ ಎರಡು ವರ್ಷದಲ್ಲಿ ವಿಯೆಟ್ನಾಂನಿಂದ ಅಮೆರಿಕದ ಆಮದು ಪ್ರಮಾಣ 50 ಪ್ರತಿಶತದಷ್ಟು ಏರಿಕೆಯಾದರೆ, ತೈವಾನ್‌ನಿಂದ ಅದರ ಆಮದು ಪ್ರಮಾಣದಲ್ಲಿ 30 ಪ್ರತಿಶತ ಏರಿಕೆಯಾಗಿದೆ.

(ಮಾಹಿತಿ ಕೃಪೆ ಉದಯವಾಣಿ....)