ರಾಂಚಿ: ಆತ ಸತ್ತು ಹೋಗಿದ್ದಾನೆ ಎಂದು ಮರಣೋತ್ತರ ಪರೀಕ್ಷೆಗಾಗಿ ಆತನ ಶವವನ್ನು ಆಸ್ಪತ್ರೆಗೆ ತರಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷಾ ಕೊಠಡಿಯಿಂದ ಆ ಸತ್ತ ವ್ಯಕ್ತಿ ಎದ್ದು ಹೊರಗೆ ಬಂದ.. ಅಷ್ಟೇ ಅಲ್ಲೇ ಕುಸಿದು ಕುಳಿತ.. ಆಗ ಪ್ರಾಣಪಕ್ಷಿ ಹಾರಿತು!
ಈ ವಿಲಕ್ಷಣ ಘಟನೆ ಜಾರ್ಖಂಡ್ನ ರಾಂಚಿಯ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಮಂಗಳವಾರ ನಡೆದಿದೆ. ಸತ್ತು ಬದುಕಿ ಸತ್ತ ವ್ಯಕ್ತಿಯನ್ನು ಜಿತೇಂದ್ರ ಓರನ್ ಎಂದು ಗುರುತಿಸಲಾಗಿದೆ. ಈ ವ್ಯಕ್ತಿಯನ್ನು ಆಸ್ಪತ್ರೆಗೆ ತಂದ ಕೂಡಲೇ ಡಾಕ್ಟರ್ಗಳು ಪರಿಶೀಲಿಸಿ ಆಸ್ಪತ್ರೆಗೆ ಬರುವಾಗಲೇ ಪ್ರಾಣ ಹೋಗಿತ್ತು ಎಂದು ಪ್ರಮಾಣೀಕರಿಸಿ ಶವಪರೀಕ್ಷೆಗೆ ಕಳುಹಿಸುವಂತೆ ಸೂಚಿಸಿದ್ದರು. ಟೆಕ್ನೀಷಿಯನ್ಸ್ ಈ ಶವವನ್ನು ಟ್ರಾಲಿಯಲ್ಲಿ ಹಾಕಿ ಮರಣೋತ್ತರ ಪರೀಕ್ಷಾ ಕೊಠಡಿಗೆ ಕೊಂಡೊಯದ್ದ ವೇಳೆ ಆತ ಅಲ್ಲಿಂದ ಎದ್ದು ಹೊರಗೆ ಬಂದಿದ್ದ! ಕೂಡಲೇ ಆತನನ್ನು ಹಿಡಿದು ತುರ್ತುಚಿಕಿತ್ಸಾ ಘಟಕಕ್ಕೆ ವರ್ಗಾಯಿಸಲು ಪ್ರಯತ್ನಿಸಿದ್ದರು. ಆದರೆ, ಅಷ್ಟು ಹೊತ್ತಿಗೆ ಆತ ಕುಸಿದು ಕುಳಿತ. ಅಲ್ಲೇ ಪ್ರಾಣವಾಯು ಹೊರಟುಹೋಗಿತ್ತು.
ಘಟನೆಯ ಹಿನ್ನೆಲೆ: ಜಿತೇಂದ್ರ ಓರನ್ ಖರ್ತಾ ಗ್ರಾಮದ ನಿವಾಸಿ. ಅಲ್ಲಿ ಹಾಕಿದ್ದ ಟೆಂಟ್ ಒಂದನ್ನು ತೆಗೆಯುವ ವೇಳೆ ಹೈ ಟೆನ್ಶನ್ ವಿದ್ಯುತ್ ತಂತಿ ತಾಗಿ ವಿದ್ಯುದಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಕುಸಿದು ಹೋಗಿದ್ದ. ಕೂಡಲೇ ಆತನನ್ನು ಚನ್ಹೋ ಬ್ಲಾಕ್ನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಕರೆದೊಯ್ಯಲಾಗಿದೆ. ಮಂಗಳವಾರ ಬೆಳಗ್ಗೆ 7.30ಕ್ಕೆ ಈ ದುರಂತ ನಡೆದಿತ್ತು ಎಂದು ಜಿತೇಂದ್ರನ ಸಹೋದರ ಸಿಕಂದರ್ ಓರನ್ ಪೊಲೀಸರಿಗೆ ತಿಳಿಸಿದ್ದಾರೆ.
ಜಿತೇಂದ್ರನನ್ನು ಬೆಳಗ್ಗೆ 11 ಗಂಟೆಗೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಮತ್ತೆ ಅಪರಾಹ್ನ 1 ಗಂಟೆಗೆ ರಾಂಚಿಯ ರಿಮ್ಸ್ಗೆ ಕರೆತರಲಾಗಿತ್ತು. ಸ್ವಲ್ಪ ಮುಂಚಿತವಾಗಿಯೇ ರಿಮ್ಸ್ಗೆ ಕರೆತಂದಿದ್ದರೆ ರಾಜೇಂದ್ರ ಬದುಕುತ್ತಿದ್ದ ಎಂದು ಡಾಕ್ಟರ್ಗಳು ಹೇಳಿದ್ದಾರೆ ಎಂದು ಕುಟುಂಬದ ಸದಸ್ಯರು ವಿಷಾದದಿಂದ ಹೇಳುತ್ತಿದ್ದಾರೆ. (ಏಜೆನ್ಸೀಸ್) (ಮಾಹಿತಿ ಕೃಪೆ ವಿಜಯವಾಣಿ....)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ