ಕೊಪ್ಪಳ: ಮೆಕ್ಕೆಜೋಳ ಬೆಳೆದು ಸಂಕಷ್ಟದಲ್ಲಿರುವ ರೈತರ ಖಾತೆಗೆ ಸರ್ಕಾರ ಐದು ಸಾವಿರ ರೂ. ಪರಿಹಾರ ಜಮೆ ಮಾಡಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು. ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಸಿಎಂ ಯಡಿಯೂರಪ್ಪ ರಾಜ್ಯದ 10 ಲಕ್ಷ ರೈತರಿಗೆ 500 ಕೋಟಿ ರೂ.ಗಳಲ್ಲಿ ಮೆಕ್ಕೆಜೋಳಕ್ಕೆ ಪರಿಹಾರ ನೀಡುವ ಐತಿಹಾಸಿಕ ಘೋಷಣೆ ಮಾಡಿದ್ದಾರೆ.
ರಾಜ್ಯದಲ್ಲಿ ರೈತರು ಕಳೆದ ಬಾರಿ ಮುಂಗಾರಿನಲ್ಲಿ 45,25,185 ಕ್ವಿಂಟಲ್, ಹಿಂಗಾರಿನಲ್ಲಿ 6,97,597 ಕ್ವಿಂಟಲ್ ಮೆಕ್ಕೆಜೋಳ ಬೆಳೆದಿದ್ದಾರೆ. ಈ ರೈತರಿಗೆ ತಲಾ ಐದು ಸಾವಿರ ರೂ. ಪರಿಹಾರ ಬರಲಿದೆ. ಇದಕ್ಕೆ ಮಾರ್ಗಸೂಚಿ ಸಿದ್ಧವಾಗಿದೆ ಎಂದರು. ರೈತರ ಪಂಪ್ ಸೆಟ್‌ಗೆ ಮೀಟರ್ ಅಳವಡಿಸುವ ಕುರಿತಂತೆ ವಿದ್ಯುತ್ ಬಿಲ್ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸರ್ಕಾರ ಕೊಟ್ಟ ಎಲ್ಲ ಸಲಹೆಗಳನ್ನು ಒಪ್ಪಲು ಸಾಧ್ಯವಾಗಲ್ಲ.
ಅದಕ್ಕೆ ಪ್ರತ್ಯೇಕತೆಗೆ ನಮ್ಮತನ ಉಳಿಸಿಕೊಳ್ಳುತ್ತೇವೆ. ಸಿಎಂ ಬಿಎಸ್‌ವೈ ಅದಕ್ಕೆ ಸಮಿತಿ ರಚಿಸಿದ್ದಾರೆ. ಸಮಿತಿ ವರದಿಯನ್ನು ಕೇಂದ್ರಕ್ಕೆ ಕಳುಹಿಸಲಿದ್ದಾರೆ ಎಂದರಲ್ಲದೇ, ಗ್ರಾಪಂಗೆ ಸದಸ್ಯರ ನಾಮನಿರ್ದೇಶನ ವಿಚಾರ ಕ್ಯಾಬಿನೆಟ್ ಮುಂದೆ ಬರಲಿದೆ ಎಂದರು.
(ಮಾಹಿತಿ ಕೃಪೆ ಉದಯವಾಣಿ....)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ