ಬೆಂಗಳೂರು: ಲಾಕ್ಡೌನ್ ಸಡಿಲಿಕೆಯಿಂದ ಜಲಮಂಡಳಿ ಬಾಕಿ ಬಿಲ್ನ ಹಣ ಸಂಗ್ರಹದಲ್ಲಿ ಏರಿಕೆ ಕಂಡಿದೆ. ಪ್ರತಿ ತಿಂಗಳು ಗೃಹಬಳಕೆ, ವಾಣಿಜ್ಯ ಕಟ್ಟಡಗಳಿಂದ 120 ಕೋಟಿ ರೂ.ಗೂ ಅಧಿಕ ಮೊತ್ತ ಸಂಗ್ರಹವಾಗುತ್ತಿತ್ತು. ಈ ತಿಂಗಳು ಗ್ರಾಹಕರಿಂದ 103 ಕೋಟಿ ರೂ. ಬಿಲ್ ಮೊತ್ತ ಪಾವತಿಯಾಗಿದೆ.
ಕಳೆದೆರಡು ತಿಂಗಳಿಂದ ಸರಿಯಾಗಿ ಪಾವತಿಯಾಗದೆ ಜಲಮಂಡಳಿಗೆ ಆದಾಯ ಕೊರತೆಯಾಗಿತ್ತು. ಲಾಕ್ಡೌನ್ ಘೋಷಣೆ ನಂತರ ಲಕ್ಷಾಂತರ ಜನರು ಸ್ವಂತ ಊರಿನತ್ತ ಪ್ರಯಾಣ ಬೆಳೆಸಿದ್ದರು. ಇದರಿಂದ ಫೆಬ್ರವರಿ, ಮಾರ್ಚ್ ಬಾಕಿ ನೀರಿನ ಬಿಲ್ ಪಾವತಿ ಸರಿಯಾಗಿ ಆಗಿರಲಿಲ್ಲ ಎಂದು ಜಲಮಂಡಳಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.'
ಆನ್ಲೈನ್ ಮೂಲಕ 40 ಕೋಟಿ ರೂ.: ನೀರಿನ 'ಮೀಟರ್ ರೀಡರ್ 'ಗಳು ಮನೆಮನೆಗೆ ತೆರಳಿ ರಸೀದಿ ನೀಡುತ್ತಿದ್ದರು. ಗ್ರಾಹಕರು ಜಲಮಂಡಳಿಯ ಕಿಯೋಸ್ಕ್ಗಳಲ್ಲಿ ಬಿಲ್ ಪಾವತಿಸುತ್ತಿದ್ದರು.
ಇನ್ನು ಕೆಲವರು ಬೆಂಗಳೂರು ಒನ್ ಸೇವಾ ಕೇಂದ್ರದಲ್ಲಿ ಬಾಕಿ ಬಿಲ್ ಶುಲ್ಕ ಪಾವತಿಸುತ್ತಿದ್ದರು. ಕರೊನಾ ಸೋಂಕು ಅತಂಕದಿಂದಾಗಿ ಮೀಟರ್ ರೀಡರ್ಗಳು ಏಪ್ರಿಲ್ನಲ್ಲಿ ಮನೆಮನೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಆನ್ಲೈನ್ನಲ್ಲಿ ಪ್ರತಿ ತಿಂಗಳು 20ರಿಂದ 25 ಕೋಟಿ ರೂ. ಸಂಗ್ರಹವಾಗುತ್ತಿತ್ತು. ಲಾಕ್ಡೌನ್ ಹಿನ್ನೆಲೆ ಏಪ್ರಿಲ್ನಲ್ಲಿ ಆನ್ಲೈನ್ ಮೂಲಕ 40 ಕೋಟಿ ರೂ. ಸಂಗ್ರಹವಾಗಿದೆ.
(ಮಾಹಿತಿ ಕೃಪೆ ವಿಜಯವಾಣಿ....)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ