WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Monday, October 19, 2026

ಕನ್ನಡಿಗರಲ್ಲಿ ಕ್ಷಮೆಯಾಚಿಸಿದ ಸೋನು ನಿಗಮ್ ಇದನ್ನು ಇಲ್ಲಿಗೆ ಮುಗಿಸೋಣ ಎಂದ ಕರವೇ ನಾರಾಯಣಗೌಡ

 


ಕನ್ನಡಿಗರಲ್ಲಿ ಕ್ಷಮೆಯಾಚಿಸಿದ ಸೋನು ನಿಗಮ್ ಇದನ್ನು ಇಲ್ಲಿಗೆ ಮುಗಿಸೋಣ ಎಂದ ಕರವೇ ನಾರಾಯಣಗೌಡ

ಕನ್ನಡ ಭಾಷೆ ಕುರಿತು ಹೇಳಿಕೆಯಿಂದ ವಿವಾದಕ್ಕೆ ಸಿಲುಕಿದ್ದ ಖ್ಯಾತ ಗಾಯಕ ಸೋನು ನಿಗಮ್ ಈಗ ಕನ್ನಡಿಗರಲ್ಲಿ ಮತ್ತೆ ಕ್ಷಮೆಯಾಚಿಸಿದ್ದಾರೆ.

ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ತಿಲಿಸಿದ್ದಾರೆ

ಗಾಯಕ ಸೋನು ನಿಗಮ್ ಇಂದು ನನ್ನೊಂದಿಗೆ ಮಾತಾನಡಿದರು. ತಾವು ಹಿಂದೆ ಮಾಡಿದ ಒಂದು ಮಾತು ಕನ್ನಡಿಗರನ್ನು ಹೇಗೆ ನೋಯಿಸಿದೆ ಎಂಬುದು ಅವರಿಗೆ

ಅರ್ಥವಾಗಿದೆ. ಬೇಷರತ್ತಾಗಿ ಕ್ಷಮೆ ಯಾಚಿಸಿವುದಾಗಿ ಅವರು ಹೇಳಿದರು.

ನಾನು ಹಿಂದೆಯೂ ಹೇಳಿದ್ದೇನೆ. ನಾವೆಲ್ಲರೂ ಸೋನು ನಿಗಮ್ ಅವರ ಹಾಡುಗಳನ್ನು ಇಷ್ಟಪಟ್ಟವರು. ಅವರ ಕುರಿತು ವೈಯಕ್ತಿಕವಾಗಿ ಯಾವ ದ್ವೇಷ

ಮುನಿಸು ನಮಗೆ ಇರಲಿಲ್ಲ. ಆ ಒಂದು ಮಾತನ್ನು ಅರಗಿಸಿಕೊಳ್ಳಲು ನಮ್ಮಿಂದ ಆಗಿರಲಿಲ್ಲ. ಅದಕ್ಕಾಗಿ ನಮ್ಮ ಪ್ರತಿಭಟನೆ. ಆಕ್ರೊಶ ಸಹಜವಾಗೆ ಇತ್ತು.

ಇದೀಗ ಅವರು ಕ್ಷಮೆ ಯಾಚಿಸಿದ್ದಾರೆ. ಇಲ್ಲಿಗೆ ಇದನ್ನು ಮುಗಿಸುವುದು ಒಳ್ಳೆಯಾದು. ಕ್ಷಮೆ ಕೇಳಿದವರನ್ನು ಕ್ಷಮಿಸುವುದು ಕನ್ನಡಿಗರ ಔದಾರ್ಯ

ಗೀತೆ ತನುವು ನಿನ್ನದು ಮನವು ನಿನ್ನದು kannada lyrics

 ಗೀತೆ ತನುವು ನಿನ್ನದು ಮನವು ನಿನ್ನದು

ಸಂಗೀತ: ಮೈಸೂರು ಅನಂತಸ್ವಾಮಿ
ಸಾಹಿತ್ಯ: ಕುವೆಂಪು 
ಗಾಯಕರು: ಮೈಸೂರು ಅನಂತಸ್ವಾಮಿ

 

ತನುವು ನಿನ್ನದು ಮನವು ನಿನ್ನದು
ತನುವು ನಿನ್ನದು ಮನವು ನಿನ್ನದು
ಎನ್ನ ಜೀವನ ಧನವು ನಿನ್ನುದು
ನಾನು ನಿನ್ನವನೆಂಬ  ಹೆಮ್ಮೆಯ
ಋಣವು ಮಾತ್ರವೇ ನನ್ನದು
ತನುವು ನಿನ್ನದು ಮನವು ನಿನ್ನದು
ನೀನು ಹೊಳೆದರೆ ನಾನು ಹೊಳೆವೆನು
ನೀನು ಹೊಳೆದರೆ ನಾನು ಹೊಳೆವೆನು
ನೀನು ಬೆಳೆದರೆ ನಾನು ಬೆಳೆವೆನು
ನೀನು ಹೊಳೆದರೆ ನಾನು ಹೊಳೆವೆನು
ನೀನು ಬೆಳೆದರೆ ನಾನು ಬೆಳೆವೆನು
ನನ್ನ ಹರಣದ ಹರಣ ನೀನು
ನನ್ನ ಮರಣದ ಮರಣವು ನೀನು
ತನುವು ನಿನ್ನದು ಮನವು ನಿನ್ನದು
ನನ್ನ ಮನದಲಿ ನೀನೆ ಯುಕ್ತಿ 
ನನ್ನ ಹೃದಯದಿ ನೀನೆ ಭಕ್ತಿ
ನನ್ನ ಮನದಲಿ ನೀನೆ ಯುಕ್ತಿ
ನನ್ನ ಹೃದಯದಿ ನೀನೆ ಭಕ್ತಿ
ನೀನೆ ಮಾಯಾ ಮೋಹ ಶಕ್ತಿಯು
ನನ್ನ ಜೀವನ ಮುಕ್ತಿಯು
ನನ್ನ ಜೀವನ ಮುಕ್ತಿಯು
ತನುವು ನಿನ್ನದು ಮನವು ನಿನ್ನದು
ತನುವು ನಿನ್ನದು ಮನವು ನಿನ್ನದು

ತನುವು ನಿನ್ನದು ಮನವು ನಿನ್ನದು

ಕಬ್ಬು ಬೆಳೆಗಾರರ ಹೋರಾಟಕ್ಕೆ ರಾಜಕೀಯ ಬಣ್ಣ ಆರೋಪ ಪ್ರತ್ಯಾರೋಪ


ರಾಜ್ಯದ 217 ತಾಲೂಕುಗಳಲ್ಲಿಭೀಕರ ಬರಗಾಲ ಎದುರಾಗಿ ಸುಮಾರು 20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿಬೆಳೆ ನಾಶವಾಗಿದೆ. ರೈತರಿಗೆ ಸರಕಾರದ ಭಿಕ್ಷೆ ರೂಪದ ಹಣ ಬೇಕಿಲ್ಲ. ಕೃಷಿ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದ್ದು, ಲಕ್ಷಾಂತರ ರೈತ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಮಳೆಯ ಕೊರತೆ ಬೆಳೆ ನಾಶ, ಕೃಷಿ ಉತ್ಪಾನ್ನ ವೆಚ್ಚದ ಏರಿಕ, ವಿದ್ಯುತ್ ಸಮಸ್ಯೆ ಹಾಗೂ ಸಾಲದ ಹೊರೆಯಿಂದ ರೈತರು ಕಂಗಾಲಾಗಿದ್ದಾರೆ. ರೈತರ ನೆರವಿಗೆ ಧಾವಿಸಬೇಕಾದ ಸರಕಾರಗಳು ಕೇವಲ 

ತಾತ್ಕಾಲಿಕ ಪರಿಹಾರಕ್ಕೆ ಸೀಮಿತವಾಗದೆ, ರೈತರ ಸಂಕಷ್ಟಕ್ಕೆ ಶಾಶ್ವತ ಪರಿಹಾರವಾಗಿ ರೈತರ ಸಾಲ ಮನ್ನಾ ಮಾಡಬೇಕು ಎಂದು ರೈತ ಮುಖಂಡ ಕುರುಬರ 

ಶಾಂತಕುಮಾರ್ ಆಗ್ರಹಿಸಿದರು.

40 ಸಾವಿರ ಅನರ್ಹ ಪಡಿತರದಾರರು ಪತ್ತೆ, ಅನರ್ಹ ಪಡಿತರ ಚೀಟಿ ಹಿಂದಿರುಗಿಸಲು ಕೇರಳದಲ್ಲಿ 2 ತಿಂಗಳು ಗಡುವು ವಿಸ್ತರಣೆ....

40 ಸಾವಿರ ಅನರ್ಹ ಪಡಿತರ ಚೀಟಿ ಪತ್ತೇ

ಕೇರಳದಲ್ಲಿ ಸುಮಾರು 40 ಸಾವಿರ ಮಂದಿ ಅನರ್ಹವಾಗಿ ಆದ್ಯತಾ ಪಡಿತರ ಚೀಟಿಗಳನ್ನು ಹೊಂದಿದ್ದಾರೆ. ಅನರ್ಹ ಫಲಾನುಭವಿಗಳ ನಿಖರವಾದ ಮಹಿತಿಯನ್ನು

ಎರಡು ತಿಂಗಳೊಳಗೆ ಪಡಿತರ ಅಂಗಡಿಗಳ ಮೂಲಕ ಸಂಗ್ರಹಿಸಲಾಗುವುದು.

ಅನರ್ಹವಾಗಿ ಎವೈವೈ ಕಾರ್ಡ್ಗಳು ಮತ್ತು ಆದ್ಯತಾ ಪಡಿತರ ಚೀಟಿಗಳನ್ನು ಹೊಂದಿರುವವರು ಅವುಗಳನ್ನು ಸ್ವಯಂಪ್ರೇರಿತವಾಗಿ ಹಿಂದಿರುಗಿಸಲು ಇನ್ನೂ ಎರಡು

ತಿಂಗಳ ಕಾಲವಕಾಶ ನೀಡಲಾಗುವುದು. ಪ್ರಧಾನವಾಗಿ ಸರ್ಕಾರಿ ಉದ್ಯೋಗ ದೊರೆಯುವುದು, ಆದಾಯ ಹೆಚ್ಚಾಗುವುದು ಅಥವಾ ಜೀವನ ಪರಿಸ್ಥಿತಿಗಳು 

ಸುಧಾರಿಸುವುದರಿಂದ ಕೆಲವರು ಆದ್ಯತಾ ಪಡಿತರ ಚೀಟಿಗಳಿಗೆ ಅನರ್ಹರಾಗಬಹುದು.

ಇಂತಹವರು ಸ್ವಯಂ ಪ್ರೇರಿತವಾಗಿ ತಮ್ಮ ಕಾರ್ಡ್ಗಳನ್ನು ಹಿಂದಿರುಗಿಸಬೇಕು. ಆದರೆ ಸ್ವಯಂ ಪ್ರೇರಿತವಾಗಿ ಕಾರ್ಡ್ಗಳನ್ನು ಹಿಂದಿರುಗಿಸದೆ ಇರುವವರ ವಿರುದ್ದ 

ಕೆಟಿಪಿಡಿಎಸ್ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತದೆ. ಇದರಡಿ ಬಾರೀ ದಂಡ ವಿಧಿಸುವ ಸಾಧ್ಯತೆಯೂ ಇದೆ.

ಕೆಲವರು ಅರಿವಿಲ್ಲದೆ ಅಥವಾ ಉದ್ದೇಶಪೂರ್ವಕವಲ್ಲದ ಕಾರಣಗಳಿಂದ ಅನರ್ಹ ಕಾರ್ಡ್ಗಳನ್ನು ಹೊಂದಿರಬಹುದು. ಈ ಎಲ್ಲ ಅಂಶಗಳನ್ನು ಪರಿಗಣಿಸಿ. ಪ್ರಸ್ತುತ

ಅನರ್ಹವಾಗಿ ಹೊಂದಿರುವ ಪಡಿತರ ಚೀಟಿಗಳನ್ನು ಸ್ವಯಂ ಪ್ರೇರಿತವಾಗಿ ಹಿಂದಿರುಗಿಸಲು ಮತ್ತೆರಡು ತಿಂಗಳ ಕಾಲಾವಕಾಶ ನೀಡಲಾಗಿರುವುದು