WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Monday, June 15, 2026

ವಿಜಯನಗರ : ಎಫ್ಐಡಿ ರದ್ದು ಮಾಡಿ, ರೈತರ ಸಾಲಮನ್ನಾಗೆ ಆಗ್ರಹ


ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಡಿಎಪಿ ಮತ್ತು ರಸಗೊಬ್ಬರ ಬೆಲೆ ಏರಿಕೆ ವಿರುದ್ಧ ಪಾದಯಾತ್ರೆ ನಡೆಸಲಾಯಿತು. ಕರ್ನಾಟಕ‌ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜೆ. ಕಾರ್ತಿಕ್ ಬಣದಿಂದ ಸಾಯಿಬಾಬಾ ಸರ್ಕಲ್ ನಿಂರ ಜಿಲ್ಲಾಧಿಕಾರಿ ಕಚೇರಿವರೆಗೆ ರೈತರು ಮೆರವಣಿಗೆ ನಡೆಸಿದರು. 

ಮುಂಬರುವ ದಿನಗಳಲ್ಲಿ ಎಫ್ಐಡಿ  ಗೊಂದಲ ಮತ್ತು ಯೂರಿಯಾ ಡಿಎಪಿ ಗೊಬ್ಬರವನ್ನು ಮಾರುಕಟ್ಟೆಗಳಲ್ಲಿ ಮತ್ತು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಇಲಾಖೆಯಲ್ಲಿ ಎಫ್ಐಡಿ ಮೂಲಕ ಗೊಬ್ಬರ ಕೊಡುವುದನ್ನು  ತಕ್ಷಣ ಕೈಬಿಡಬೇಕು ಆಗ್ರಹಿಸಿದರು. ಅಲ್ಲದೇ, ಮುಂಬರುವ ದಿನಗಳಲ್ಲಿ ಎಫ್ಐಡಿ ಲಿಂಕ್ ಆಧಾರಿತ ಔಷಧಿ ಕೊಡುವುದನ್ನು ರದ್ದು ಮಾಡಬೇಕು ಅಂತಾ ಆಗ್ರಹಿಸಿದರು. ರಸಗೊಬ್ಬರಗಳ ಬೆಲೆ ಇಳಿಕೆ ಮಾಡಬೇಕು ಮತ್ತು ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಅಂತಾ ಒತ್ತಾಯಿಸಬೇಕು.




ರೈತ ಹೋರಾಟಗಾರ ದಿವಂಗತ ಜೆ. ಕಾರ್ತಿಕ್ ಅವರ ಸಹೋದರಿ ಉಮಾದೇವಿ ಮಾತನಾಡಿ, ಎಫ್ಐಡಿಯಿಂದ ಗ್ರಾಮೀಣ ಭಾಗದ ರೈತರಿಗೆ ತೊಂದರೆ ಆಗುತ್ತಿದೆ. ಮೊದಲೆಲ್ಲ ರೈತರು ಕೆಮಿಕಲ್ ಗೊಬ್ಬರ ಬಳಸುತ್ತಿರಲಿಲ್ಲ.‌ ರೈತರಿಗೆ ಈ ಗೊಬ್ಬರದ ರುಚಿ ಹಚ್ಚಿದ್ದೇ ಸರ್ಕಾರ. ಈಗ ಗೊಬ್ಬರ ವಿತರಣೆ ಮಿತಿಯನ್ನು ಕಡಿತಗೊಳಿಸಿದ್ದು ತುಂಬಾ ಬೇಸರದ ವಿಷಯ. ಅಲ್ಲದೇ, ಜಿಲ್ಲೆಯಲ್ಲಿ ಗೊಬ್ಬರದ ಕೊರತೆ ಇದ್ದರೂ ಯಾವುದೇ ಪ್ರಾಬ್ಲಂ ಇಲ್ಲ ಅಂತಾ ಹೇಳ್ತಿದ್ದಾರೆ ಅಂದರು. ವಿದ್ಯುತ್ ಖಾಸಗೀಕರಣ ಮಾಡುವುದು ಖಂಡನೀಯ. ಖಾಸಗಿಯವರು ಇದನ್ನು ಆಕ್ರಮಣ ಮಾಡಿದರೆ ರೈತರಿಗೆ ಉಚಿತ ವಿದ್ಯುತ್ ದೊರಕುವುದಿಲ್ಲ. ಹೀಗಾಗಿ, ಸಿಎಂ ಡಿಕೆಶಿಯವರು ರೈತರಿಗೆ 24*7 ವಿದ್ಯುತ್ ಪೂರೈಸಬೇಕೆಂದು ಆಗ್ರಹಿಸಿದರು. 

ಮತ್ತೊಬ್ಬ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಸರ್ಕಾರ ಕೂಡಲೇ ಎಫ್ಐಡಿ ಕೈಬಿಡಬೇಕು. ಖಾಸಗಿ ಅಂಗಡಿಗಳಲ್ಲಿ ಗೊಬ್ಬರ ಯಥೇಚ್ಛವಾಗಿ ಸಿಗುತ್ತಿದೆ. ಆದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಸಮರ್ಪಕವಾಗಿ ಗೊಬ್ಬರ ಸಿಗುತ್ತಿಲ್ಲ. ಈಗಾಗಲೇ ಮುಂಗಾರು ಕೈಕೊಟ್ಟಿದೆ. ಮುಖ್ಯಮಂತ್ರಿ ಡಿಕೆಶಿಯವರು, ರೈತರಿಗೆ ಅನುಕೂಲ ಆಗುವಂತೆ ಕ್ರಮ ಕೈಗೊಳ್ಳಬೇಕು ಅಂತಾ ಆಗ್ರಹಿಸಿದರು.

ರೈತರ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಕವಿತಾ ಎಸ್.‌ಮನ್ನಿಕೇರಿ, ಸಂಬಂಧಪಟ್ಟವರ ಜೊತೆ ಮಾತನಾಡಿ ರೈತರಿಗೆ ಅನುಕೂಲ ಮಾಡಿ ಕೊಡುತ್ತೇನೆ ಅಂದರು.

ಇನ್ನು, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ  ನಾಗರಾಜ್ ಮಾತನಾಡಿ, ಕೂಡಲೇ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.