WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Saturday, June 20, 2020

ಕುಡುಕರೇ ಎಚ್ಚರ: ಎಣ್ಣೆ ಗುಂಗಲ್ಲಿ ಅವಧಿ ಮುಗಿದ ಬಿಯರ್‌ ಕುಡಿದ್ರೆ ಮುಗೀತು ಕಥೆ..!

ಶಿವಕುಮಾರ ಕುಷ್ಟಗಿ
ಗದಗ(ಜೂ.20): ನಗರ ಸೇರಿದಂತೆ ಜಿಲ್ಲೆಯಲ್ಲಿ ಬಾರ್‌ಗಳಲ್ಲಿ ಲಾಕ್‌ಡೌನ್‌ನಲ್ಲಿ ಸ್ಟಾಕ್‌ ಉಳಿದು ಅವಧಿ ಮುಗಿದ ಬೀಯರ್‌ ಮಾರಾಟ ಮಾಡಲಾಗುತ್ತಿದೆ. ಅದೂ ಎಂಆರ್‌ಪಿ ದರಕ್ಕಿಂತ ಶೇ.25 ರಷ್ಟು ಹೆಚ್ಚಿನ ಬೆಲೆಗೆ. ಇಂಥ ಬಿಯರ್‌ ಕುಡಿದವರ ಆರೋಗ್ಯ ದೇವರಿಗೇ ಪ್ರೀತಿ ಎನ್ನುವಂತಾಗಿದೆ.
ನಗರದ ಹೃದಯ ಭಾಗದಲ್ಲಿರುವ ಬಾರ್‌ಗಳಲ್ಲಿಯೇ ಹೀಗೆ ಅವಧಿ ಮುಗಿದ ಬೆಡ್‌ವೈಜರ್‌ ಕಂಪನಿಯ ಬಿಯರ್‌ ಬಾಟಲ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. 2019 ರ ಡಿಸೆಂಬರ್‌ 17 ರಂದು ಈ ಬಿಯರ್‌ ತಯಾರಾಗಿದ್ದು ಅವಧಿ ಮುಗಿಯುವುದು ಜೂನ್‌ 13, 2020 ಎಂದು ನಮೂದಿಸಲಾಗಿದೆ. ಆದರೆ ಇಲ್ಲಿನ ಬಹುತೇಕ ಬಾರ್‌ಗಳಲ್ಲಿ ಜೂನ್‌ 19ರವರೆಗೂ ಅದೇ ಬೀಯರ್‌ನ್ನೇ ಮಾರಾಟ ಮಾಡುತ್ತಿದ್ದಾರೆ.
ಸಾವು ಸಂಭವಿಸುತ್ತದೆ:
ಈ ರೀತಿ ಅವಧಿ ಪೂರ್ಣಗೊಂಡಿರುವ ಬಿಯರ್‌ ಮಾರಾಟ ಮಾಡುವುದರಿಂದ ಮದ್ಯಪ್ರಿಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಕೆಲವೊಮ್ಮೆ ಸಾವು ಕೂಡಾ ಸಂಭವಿಸುವ ಸಾಧ್ಯತೆ ಇರುತ್ತದೆ. ಇದಕ್ಕಾಗಿಯೇ ಕಂಪನಿಗಳು ಅದರ ಮೇಲೆ ಅವಧಿಯನ್ನು ನಮೂದಿಸಿರುತ್ತಾರೆ. ಆದರೆ ಇಲ್ಲಿನ ಮದ್ಯದ ಅಂಗಡಿಗಳ ಮಾಲೀಕರು ಮಾತ್ರ ಕೇವಲ ಹಣ ಬಂದರೆ ಸಾಕು ಎನ್ನುವ ರೀತಿಯಲ್ಲಿ ವರ್ತಿಸುತ್ತಾ, ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.
ಭಾರತೀಯ ಯೋಧರನ್ನ ಚೀನಾ ಕೊಲ್ಲಲಿ ಎಂದಿದ್ದ ದೇಶದ್ರೋಹಿಯ ಬಂಧನ
ಶೇ. 25 ರಷ್ಟು ಹೆಚ್ಚಿಗೆ ವಸೂಲಿ:
ಜಿಲ್ಲೆಯಾದ್ಯಂತ ಇರುವ ಎಲ್ಲಾ ಬಾರ್‌ಗಳಲ್ಲಿ ಸರ್ಕಾರ ಅಬಕಾರಿ ಇಲಾಖೆ ಮೂಲಕ ನಿಗದಿ ಪಡಿಸಿದ ದರಕ್ಕಿಂತಲೂ ಶೇ. 25ರಷ್ಟುಹೆಚ್ಚಿಗೆ ಹಣ ಪಡೆಯುತ್ತಾರೆ. ಇದನ್ನು ಪ್ರಶ್ನೆ ಮಾಡಿದರೆ ನಿಮಗೆ ಬೇಕೋ? ಬೇಡವೋ? ನಾವು ಮಾರುವುದು ಇಷ್ಟಕ್ಕೆ ಎಂದು ಮದ್ಯಪ್ರೀಯರನ್ನೇ ಗದರಿಸಿ ಕಳಿಸುವ ಮಟ್ಟಕ್ಕೆ ಬಾರ್‌ ಮಾಲೀಕರು ಬಂದಿದ್ದಾರೆ.
ಜಾಣ ಕುರುಡುತನ
ಜಿಲ್ಲಾ ಅಬಕಾರಿ ಇಲಾಖೆಗೆ ಇದೆಲ್ಲಾ ಗೊತ್ತಿಲ್ಲ ಎಂದೇನಿಲ್ಲ, ಇಂಚಿಂಚು ಮಾಹಿತಿ ಕೂಡಾ ಗೊತ್ತಿದೆ. ಆದರೆ ಅಧಿಕಾರಿಗಳು ಮಾತ್ರ ಏನೂ ಗೊತ್ತಿಲ್ಲದಂತೆ ವರ್ತಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಅವರಿಗೂ ಸಲ್ಲಿಕೆಯಾಗಬೇಕಾದದ್ದು ಬಂದು ಬೀಳುವ ಕಾರಣಕ್ಕಾಗಿ ಅವರೆಲ್ಲಾ ಯಾರ ಮೇಲೆ ಕ್ರಮ ತೆಗೆದುಕೊಳ್ಳುವ ಗೋಜಿಗೆ ಹೋಗದೇ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ ಎನ್ನುವುದು ಗುರುವಾರ ರಾತ್ರಿ ಅವಧಿ ಮುಗಿದ ಬೀಯರ್‌ ಪಡೆದು ಪರದಾಡಿ, ಬಾರ್‌ ಅಂಗಡಿ ಮಾಲೀಕರಿಂದ ಬೈಗುಳ ತಿಂದು, ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ಮದ್ಯಪ್ರಿರೊಬ್ಬರು.
(ಮಾಹಿತಿ ಕೃಪೆ ಸುವರ್ಣ ನ್ಯೂಸ್)

ಕಟ್ಟಡ, ಮನೆ ನಿರ್ಮಿಸುವವರಿಗೆ ಭರ್ಜರಿ ಸಿಹಿ ಸುದ್ದಿ

ಬೆಂಗಳೂರು: ಅತಿ ಕಡಿಮೆ ದರಕ್ಕೆ ಮರಳು ಸಿಗುವ ವ್ಯವಸ್ಥೆ ರೂಪಿಸಲಾಗಿದೆ. ರಾಜ್ಯದಲ್ಲಿ ಮರಳು ನೀತಿ ಜಾರಿಯಾದ ನಂತರ ನೈಸರ್ಗಿಕ ಮರಳಿಗೆ ಏಕರೂಪ ದರ ನಿಗದಿಪಡಿಸಲು ಸಿದ್ಧತೆ ನಡೆದಿದೆ. ಅಲ್ಲದೇ ಮರಳು ಸಾಗಣೆಗೂ ಕೂಡ ಏಕರೂಪ ದರ ನಿಗದಿಪಡಿಸಲು ಕ್ರಮಕೈಗೊಳ್ಳಲಾಗಿದ್ದು ಮಧ್ಯವರ್ತಿಗಳ ಹಾವಳಿ ಇಲ್ಲದೇ ಖರೀದಿದಾರರಿಗೆ ಬೇಕಾದಷ್ಟು ಮರಳನ್ನು ನಿಗದಿತ ದರದಲ್ಲಿ ಪಡೆಯಲು ವ್ಯವಸ್ಥೆ ಮಾಡಲಾಗುವುದು.
ಗುರುತಿಸಲಾದ ಮರಳು ಬ್ಲಾಕ್ ಗಳಲ್ಲಿ ಪ್ರತಿಟನ್ ಗೆ 700 ರೂ., ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 300 ರೂಪಾಯಿ ದರ ನಿಗದಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಸರ್ಕಾರದ ಮಟ್ಟದಲ್ಲಿ ಮರಳು ದರ ನಿಗದಿಗೆ ಚರ್ಚೆ ನಡೆದಿದ್ದು ಒಂದು ವೇಳೆ ದರ ನಿಗದಿಯಾದಲ್ಲಿ ಎಂಎಸ್‌ಐಎಲ್ ಮಾರಾಟ ಮಾಡುವ ಮಲೇಷ್ಯಾ ಮರಳಿಗಿಂತಲೂ ಕಡಿಮೆ ದರದಲ್ಲಿ ನೈಸರ್ಗಿಕ ಮರಳು ಸಿಗಲಿದೆ ಎನ್ನಲಾಗಿದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆ, ಸಾರಿಗೆ ಇಲಾಖೆ ನಡುವೆ ಮಹತ್ವದ ಚರ್ಚೆ ನಡೆದಿದ್ದು ಗ್ರಾಹಕರಿಗೆ ಹೊರೆಯಾಗದಂತೆ ಮರಳಿನ ದರ ಮತ್ತು ಸಾಗಣೆ ವೆಚ್ಚವನ್ನು ನಿಗದಿ ಮಾಡಿ ಗ್ರಾಹಕರಿಗೆ ಅನುಕೂಲಕರವಾದ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಲಾಗಿದೆ.
(ಮಾಹಿತಿ ಕೃಪೆ ಕನ್ನಡದುನಿಯಾ)

Friday, June 19, 2020

2020-21ನೇ ಸಾಲಿನಲ್ಲಿ ಖಾಸಗಿ ಶಾಲೆಗಳು ಶುಲ್ಕ ಏರಿಸುವಂತಿಲ್ಲ : ಸರ್ಕಾರ ಆದೇಶ

ಬೆಂಗಳೂರು : 2020-21ನೇ ಸಾಲಿನಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳು ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ಏರಿಸುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರ ಆದೇಶ‌ಲಾಕ್​ಡೌನ್​ ಹಿನ್ನೆಲೆ ಕೈಗಾರಿಕೆಗಳು ಹಾಗೂ ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿದ್ದು, ಸಾರ್ವಜನಿಕರು ಸಂಕಷ್ಟಕ್ಕೀಡಾಗಿದ್ದಾರೆ.‌
ಈ ಹಿನ್ನೆಲೆ ಅನುದಾನ ರಹಿತ ಶಾಲೆಗಳ ಪೋಷಕರು ಈ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳ ಬೋಧನಾ ಶುಲ್ಕವನ್ನು ಹೆಚ್ಚಿಸದಂತೆ ಶಾಲಾ ಸಂಸ್ಥೆಗಳಿಗೆ ನಿರ್ದೇಶನ ನೀಡುವಂತೆ ಸರ್ಕಾರಕ್ಕೆ ಸಾಕಷ್ಟು ಮನವಿಗಳನ್ನು ಸಲ್ಲಿಸಿದ್ದಾರೆ.‌
ಈ ಹಿನ್ನೆಲೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.ಸದ್ಯ ಸಾರ್ವಜನಿಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವುದನ್ನು ಪರಿಗಣಿಸಿ ಕರ್ನಾಟಕ ಶಿಕ್ಷಣ ಕಾಯ್ದೆ-1983, ಸೆಕ್ಷನ್-133, ಉಪ ನಿಯಮ-(2)ರ ಅಡಿಯಲ್ಲಿ, ಎಲ್ಲಾ ಖಾಸಗಿ ಅನುದಾನ ರಹಿತ ಶಾಲೆಗಳು 2020-21ನೇ ಶೈಕ್ಷಣಿಕ ಸಾಲಿನಲ್ಲಿ ಯಾವುದೇ ಬೋಧನಾ ಶುಲ್ಕವನ್ನು ಹೆಚ್ಚಿಸಬಾರದೆಂದು ಸೂಚಿಸಿದೆ.
ಒಂದು ವೇಳೆ ಶಾಲಾ ಆಡಳಿತ ಮಂಡಳಿಯವರು 2019-20ನೇ ಶೈಕ್ಷಣಿಕ ಸಾಲಿಗಿಂತ ಹೆಚ್ಚಿನ ಬೋಧನಾ ಶುಲ್ಕವನ್ನು ಮಕ್ಕಳು/ಪೋಷಕರಿಂದ ಸಂಗ್ರಹಿಸಿದಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ-124[ಎ]ರ ಅಡಿಯಲ್ಲಿ ಕ್ರಮ ಜರುಗಿಸಲಾಗುವುದೆಂದು ಈ ಮೂಲಕ ಸೂಚಿಸಿದೆ.
(ಮಾಹಿತಿ ಕೃಪೆ ಈ ಸಂಜೆ)

BIG NEWS : "ಎಲ್ಲದಕ್ಕೂ ನಾವು ರೆಡಿ, ಒಂದಿಚೂ ಜಾಗ ಬಿಟ್ಟುಕೊಡಲ್ಲ" : ಕುತಂತ್ರಿ ಚೀನಾಗೆ ಮೋದಿ ವಾರ್ನಿಂಗ್..!

ನವದೆಹಲಿ : ಯಾವುದೇ ಕಾರಣಕ್ಕೂ ದೇಶದ ಒಂದೇ ಒಂದು ಇಂಚು ಜಾಗವನ್ನು ಬಿಟ್ಡುಕೊಡುವ ಪ್ರಶ್ನೆಯೇ ಇಲ್ಲ ಎಂದು ನೇರವಾಗಿಯೇ ಚೀನಾಗೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ರಾಷ್ಟ್ರದ ಪ್ರತಿಯೊಂದು ಭಾಗವನ್ನು ಯಾವುದೇ ಬೆಲೆ ತೆತ್ತದಾರೂ ಸರಿಯೇ. ದೇಶದ ರಕ್ಷಣಾ ವಿಷಯದಲ್ಲಿ ನಾವು ಯಾರ ಜೊತೆಯೂ ಸಂಧಾನ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸರ್ವ ಪಕ್ಷಗಳ ಸಭೆಯ ನಂತರ ರಾಷ್ಟವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ತಾಯ್ನಾಡಿಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿರುವ ವೀರ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎನ್ನುವ ಮೂಲಕ ಚೀನಾಕ್ಕೆ ಎಚ್ಚರಿಕೆ ಕೊಟ್ಟರು.
ಗಡಿಯಲ್ಲಿ ಈಗ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತದೆ.
ರಾಷ್ಟ್ರ ಹಿತ, ದೇಶವಾಸಿಗಳ ಹಿತವೇ ನಮಗೆ ಮುಖ್ಯ. ಭಾರತ ಶಾಂತಿ ಮತ್ತು ಸ್ನೇಹವನ್ನು ಚಾಚುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ದೇಶದ ಸಾರ್ವಭೌಮತೆಯೇ ಮುಖ್ಯ. ಸೇನೆಗೆ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು, ಕ್ಷಿಪಣಿಗಳು ಸೇರಿವೆ. ಭೂ, ವಾಯು, ನೌಕಾ ದಳಗಳು ಯಾವುದೇ ದಾಳಿಯನ್ನು ಎದುರಿಸಲು ನಾವು ಸಮರ್ಥವಾಗಿದ್ದೇವೆ ಎಂದು ತಿಳಿಸಿದರು.
ಅಗತ್ಯ ಕ್ರಮಗಳನ್ನಯ ತೆಗೆದುಕೊಳ್ಳಲು ನಮ್ಮ ಸೇನೆಗೆ ಪೂರ್ತಿ ಸ್ವಾತಂತ್ರ್ಯ ನೀಡಲಾಗಿದೆ. ನಮ್ಮ ಸೇನಾ ಪಡೆಗಳು ನಮ್ಮ ಗಡಿಗಳನ್ನು ರಕ್ಷಿಸುವ ಪೂರ್ಣ ಸಾಮರ್ಥ್ಯ ಹೊಂದಿವೆ. ಸೈನಿಕರ ಬೆಂಬಲಕ್ಕೆ ಇಡೀ ದೇಶ ಇರಲಿದೆ ಎಂಬ ಭರವಸೆಯನ್ನು ಯೋಧರಿಗೆ ನಾನು ನೀಡುತ್ತೇನೆ ಎಂದು ಮೋದಿ ಹೇಳಿದ್ದಾರೆ.
ಎಲ್‌ಎಸಿ ಬಳಿ ಸೇನೆಯ ಗಸ್ತು ಹೆಚ್ಚಿಸಲಾಗಿದೆ. ನಮ್ಮ ದೇಶ ಸುಭದ್ರವಾಗಿದ್ದು ಯಾರು ಭಯ ಪಡಬೇಕಾದ ಅಗತ್ಯವಿಲ್ಲ. ರಾಷ್ಟ್ರೀಯ ಸುರಕ್ಷತೆಯೇ ನಮ್ಮ ಆಧ್ಯತೆಯಾಗಿದೆ ಎಂದು ನಾನು ಆಶ್ವಾಸನೆ ನೀಡುತ್ತಿದ್ದೇನೆ ಎಂದು ಮೋದಿ ತಿಳಿಸಿದರು.
ಭಾರತದ ಗಡಿಯ ಒಳಗಡೆ ಚೀನಾದವರು ಬಂದಿಲ್ಲ. ಭಾರತ ಮಾತೆಯನ್ನು ಎದುರು ಹಾಕಿದವರಿಗೆ ನಮ್ಮ ಸೈನಿಕರು ಪಾಠ ಕಲಿಸಿ ಬಲಿದಾನ ಮಾಡಿದ್ದಾರೆ. ನಮ್ಮ ಸೈನಿಕರು ಏನು ಮಾಡಬೇಕೋ ಅದನ್ನು ಸರಿಯಾಗಿ ಮಾಡುತ್ತಿದ್ದಾರೆ. ಕ್ರಿಯೆ ತಕ್ಕ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಮೋದಿ ಸರ್ವ ಪಕ್ಷ ಸಭೆಯಲ್ಲಿ ತಿಳಿಸಿದ್ದಾರೆ.
ಆರ್‌ಜೆಡಿ ಮತ್ತು ಆಪ್ ಹೊರತು ಪಡಿಸಿ ಎಲ್ಲಾ ಪಕ್ಷಗಳ ನಾಯಕರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದರು. ಈ ವೇಳೆ, ಪಕ್ಷಗಳ ನಾಯಕರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮತ್ತು ವಿದೇಶಾಂಗ ಸಚಿವ ಜೈಶಂಕರ್ ವಿವರಣೆ ನೀಡಿದರು.
ಬಳಿಕ ಎಲ್ಲಾ ಪಕ್ಷಗಳ ನಾಯಕರು ತಮ್ಮ ಅಭಿಪ್ರಾಯ ಮಂಡಿಸಿದ್ರು. ಗಡಿ ವಿಚಾರವಾಗಿ ಬಹುತೇಕ ನಾಯಕರು ಸರ್ಕಾರಕ್ಕೆ ವಿಶ್ವಾಸ ತುಂಬಿದ್ದಾರೆ. ಭಾರತದ ಸರ್ವಪಕ್ಷ ಸಭೆ ಬೆನ್ನಲ್ಲೇ ಮಾಡೋದನ್ನೆಲ್ಲಾ ಮಾಡಿರುವ ಚೀನಾ ಈಗ ಶಾಂತಿ ಮಂತ್ರ ಜಪಿಸುತ್ತಿದೆ. ಪರಿಸ್ಥಿತಿ ಬಿಗಡಾಯಿಸೋದು ಬೇಡ. ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆ ಆಗಬಹುದು ಎಂದು ಹೇಳಿದೆ.
ಮೋದಿ ಭಾಷಣದ ಆರಂಭದಲ್ಲಿ ವಿಶ್ವ ಯೋಗ ದಿನದ ಹಿನ್ನೆಲೆಯಲ್ಲಿ ಭಾನುವಾರ ಎಲ್ಲರೂ ಮನೆಯಲ್ಲೇ ಕುಟುಂಬದವರ ಜೊತೆ ಯೋಗ ಮಾಡಿ. ಕೊರೊನಾ ವಿರುದ್ಧ ಹೋರಾಡಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಬೇಕಾಗುತ್ತದೆ. ಯೋಗದಿಂದ ರೋಗ ನಿರೋಧಕ ಶಕ್ತಿ ಬರುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಮೊದಲಿಗರಾಗಿ ಮಾತು ಆರಂಭಿಸಿದ ವಿರೋಧ ಪಕ್ಷದ ನಾಯಕಿ ಸೋನಿಯಾ ಗಾಂಧಿ, 'ನಮ್ಮನ್ನು ಈಗಲೂ ಕತ್ತಲಿನಲ್ಲಿ ಇಡಲಾಗಿದೆ,' ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಮಮತಾ ಬ್ಯಾನರ್ಜಿ ಸೇರಿ ಇನ್ನುಳಿದ ಹೆಚ್ಚಿನ ನಾಯಕರೆಲ್ಲಾ ಸರಕಾರದ ಜೊತೆಗಿರುವುದಾಗಿ ಭರವಸೆ ನೀಡಿದರು.
ಗೃಹ ಸಚಿವ ರಾಜನಾಥ್‌ ಸಿಂಗ್‌ ಹಾಗೂ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಲಡಾಖ್‌ನಲ್ಲಿ ನಡೆದ ಘಟನೆಯ ಬಗ್ಗೆ ವಿರೋಧ ಪಕ್ಷಗಳಿಗೆ ವಿವರಣೆ ನೀಡುವುದರೊಂದಿಗೆ ಈ ವರ್ಚುವಲ್‌ ಸರ್ವಪಕ್ಷ ಸಭೆ ಆರಂಭಗೊಂಡಿತು. ನಂತರ ಪ್ರತಿಪಕ್ಷಗಳ ನಾಯಕರು ಒಬ್ಬೊಬ್ಬರಾಗಿ ತಮ್ಮ ಅಭಿಪ್ರಯಾಗಳನ್ನು ಹೇಳಿದರು
(ಮಾಹಿತಿ ಕೃಪೆ ಈ ಸಂಜೆ)

ರಾಜ್ಯದ ಜನರೇ ಎಚ್ಚರ : ಕರ್ನಾಟಕದ ಮೂಲೆಮೂಲೆಗೂ ಎಂಟ್ರಿ ಕೊಟ್ಟಿದೆ ಕೊರೋನಾ..!

ಬೆಂಗಳೂರು, ಜೂ.19- ರಾಜ್ಯದ ಜನರು ಎಚ್ಚರ ವಹಿಸದಿದ್ದರೆ ಮಹಾಮಾರಿ ಕೊರೊನಾಗೆ ಬಲಿಯಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಬೀದಿಬದಿಯ ವ್ಯಾಪಾರಿಯಿಂದ ಹಿಡಿದು ಕೊರೊನಾ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸುತ್ತಿರುವ ವೈದ್ಯರು, ಪೊಲೀಸರು, ಜನಪ್ರತಿನಿಧಿಗಳನ್ನೂ ಕೊರೊನಾ ತನ್ನ ಕರಾಳ ಕಬಂಧ ಬಾಹುವಿನಲ್ಲಿ ಹಿಡಿದಿಟ್ಟುಕೊಳ್ಳುತ್ತಿದೆ.
ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಏರುತ್ತಲೇ ಇದೆ. ರಾಜ್ಯದ ಜನ ಎಚ್ಚರ ವಹಿಸಬೇಕಿದೆ. ಕಿಲ್ಲರ್ ಕೊರೊನಾದ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ಲಾಕ್‍ಡೌನ್ ತೆರವಾಗಿದೆ.

ನಮಗೇನೂ ಆಗುವುದಿಲ್ಲ ಎಂದು ಉಡಾಫೆ ಧೋರಣೆ ತಾಳಿದರೆ ಕೊರೊನಾ ತಗುಲಿ ಯಾತನೆ ಅನುಭವಿಸುವ ದಿನಗಳು ದೂರವಿಲ್ಲ. ಅಂತಹ ಸನ್ನಿವೇಶಗಳು ರಾಜ್ಯದಲ್ಲಿ ಸೃಷ್ಟಿಯಾಗುತ್ತಿವೆ.
ಪ್ರತಿದಿನ 5, 10, 20, 30 ಸೋಂಕಿತರು ಕಾಣಿಸಿಕೊಳ್ಳುತ್ತಿದ್ದ ಪ್ರಮಾಣ ಈಗ 300 ರಿಂದ 500ಕ್ಕೆ ಏರಿಕೆಯಾಗುತ್ತಿದೆ. ಮಾಸ್ಕ್, ಸ್ಯಾನಿಟೈಜರ್ ಎಲ್ಲೆಂದರಲ್ಲಿ ದೊರೆಯುತ್ತಿತ್ತು. ಈಗ ಅದರ ಪ್ರಮಾಣವೂ ಕೂಡ ಕ್ಷೀಣಿಸಿದಂತೆ ಕಂಡುಬರುತ್ತಿದೆ.
ಆಸ್ಪತ್ರೆಗಳಲ್ಲಿ ಐಸೊಲೇಷನ್ ಸಂಖ್ಯೆ ಕಡಿಮೆ ಇತ್ತು. ಜನರಲ್ಲಿ ಸೋಂಕಿನ ಬಗ್ಗೆ ಭಯ ಇತ್ತು. ಈಗ ಜನರಲ್ಲಿ ಸೋಂಕಿನ ಬಗ್ಗೆ ಭಯ ಇಲ್ಲ. ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ, ಮಾಸ್ಕ್ ಧರಿಸುತ್ತಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ.
ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಹಾಗಾಗಿ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಜತೆಜತೆಗೆ ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ. ವಿಶೇಷವಾಗಿ ಮಕ್ಕಳು, ವೃದ್ಧರು, ರೋಗಿಗಳು ಸೋಂಕಿನಿಂದ ಬಲಿಯಾಗುತ್ತಿದ್ದಾರೆ. ಹಾಗಾಗಿ ಈ ರೋಗವನ್ನು ನಿಯಂತ್ರಿಸುವುದೊಂದೇ ಮಾರ್ಗವಾಗಿದ್ದು, ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಬೇಕು.
ಮೊದಮೊದಲು ಸರ್ಕಾರ ಉಚಿತವಾಗಿ ಕ್ವಾರಂಟೈನ್ ಮಾಡುತ್ತಿತ್ತು. ಪ್ರಾಥಮಿಕ, ದ್ವಿತೀಯ ಸಂಪರ್ಕವನ್ನು ಕೂಡ ಪತ್ತೆಹಚ್ಚಿ ಶಂಕಿತರನ್ನು ಕ್ವಾರಂಟೈನ್ ಮಾಡಿ ಸೋಂಕಿತರನ್ನು ಆಸ್ಪತ್ರೆಗೆ ಕಳುಹಿಸುವ ಕೆಲಸ ಮಾಡುತ್ತಿತ್ತು. ಈಗ ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚುವ ಗೋಜಿಗೆ ಹೋಗುತ್ತಿಲ್ಲ. ಸೋಂಕಿತರನ್ನು ಮಾತ್ರ ಚಿಕಿತ್ಸೆಗೆ ದಾಖಲು ಮಾಡಲಾಗುತ್ತಿದೆ.
ಇತ್ತ ಆಸ್ಪತ್ರೆಗಳಲ್ಲಿ ಸೋಂಕಿತರ ಪ್ರಮಾಣ ಏರಿಕೆಯಾಗಿ ಐಸೊಲೇಷನ್ ಘಟಕಗಳು, ಕ್ವಾರಂಟೈನ್ ಕೇಂದ್ರಗಳು ಕೂಡ ಭರ್ತಿಯಾಗಿವೆ. ಉಚಿತವಾಗಿ ಕ್ವಾರಂಟೈನ್ ಕೇಂದ್ರಗಳನ್ನು ಸರ್ಕಾರ ನಿರ್ವಹಿಸುತ್ತಿತ್ತು. ಮತ್ತೆ ಕೆಲವೆಡೆ ಕ್ವಾರಂಟೈನ್ ಕೇಂದ್ರದ ವೆಚ್ಚವನ್ನು ಶಂಕಿತರೇ ಭರಿಸಬೇಕಾಗಿದೆ.
ಮಹಾನಗರಗಳಲ್ಲಿ ಬೀದಿಬದಿಯ ವ್ಯಾಪಾರಿಯಿಂದ ಹಿಡಿದು ವೈದ್ಯರವರೆಗೆ ಕೊರೊನಾ ಆವರಿಸಿದೆ. ಪೊಲೀಸರು, ನರ್ಸ್, ಟ್ಯಾಕ್ಸಿ ಚಾಲಕರು, ಪತ್ರಕರ್ತರು, ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡಿದ ಆಶಾ ಕಾರ್ಯಕರ್ತೆಯರು ಹೀಗೆ ಬಹುತೇಕರಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ.
ಮಹಾನಗರಗಳಲ್ಲಿ ಕಂಟೈನ್ಮೆಂಟ್ ಝೋನ್‍ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪೊಲೀಸ್ ಠಾಣೆ, ಸರ್ಕಾರಿ ಕಚೇರಿಗಳು, ತೆರಿಗೆ ಮತ್ತು ವಾಣಿಜ್ಯ ಇಲಾಖೆ ಕಚೇರಿ, ಇವಿಷ್ಟೇ ಅಲ್ಲ, ಶಕ್ತಿಕೇಂದ್ರಕ್ಕೆ ಕೊರೊನಾ ವಕ್ಕರಿಸಿ ಸೀಲ್‍ಡೌನ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಹೀಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಕೊರೊನಾ ಶಂಕಿತರು ಪತ್ತೆಯಾಗುತ್ತಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸರ್ಕಾರಿ ಆಸ್ಪತ್ರೆಗಳ ಜತೆಗೆ ಖಾಸಗಿ ಆಸ್ಪತ್ರೆಗಳಲ್ಲೂ ಕೂಡ ಕೊರೊನಾ ಚಿಕಿತ್ಸೆ ಪ್ರಾರಂಭವಾಗಬೇಕಿದೆ.
ಇನ್ನು ಮುಂದೆ ಚಿಕಿತ್ಸಾ ವೆಚ್ಚವನ್ನು ಜನರೇ ಭರಿಸಬೇಕಾಗಬಹುದು. ನಮ್ಮ ಮನೆಗಳೇ ನಮಗೆ ಕ್ವಾರಂಟೈನ್ ಕೇಂದ್ರಗಳಾಗಬಹುದು. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು.
ಆರೋಗ್ಯ ಇಲಾಖೆ ಸೂಚಿಸಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಅಗತ್ಯವಾಗಿ ಪಾಲಿಸಬೇಕು. ಮಾಸ್ಕ್, ಸ್ಯಾನಿಟೈಜರ್‍ಗಳನ್ನು ತಪ್ಪದೆ ಬಳಸಬೇಕು. ಇಲ್ಲವಾದರೆ ಮಹಾಮಾರಿ ಕೊರೊನಾಕ್ಕೆ ಬಲಿಯಾಗಬೇಕಾಗುತ್ತದೆ ಎಚ್ಚರ..!
(ಮಾಹಿತಿ


ಈ ಸಂಜೆ
ಕೃಪೆ )

ಮೇಲ್ಮನೆಯ 7 ಅಭ್ಯರ್ಥಿಗಳ ಅವಿರೋಧ ಆಯ್ಕೆ



ಬೆಂಗಳೂರು, ಜೂ.19-ರಾಜ್ಯ ವಿಧಾನಸಭೆ ಯಿಂದ ವಿಧಾನಪರಿಷತ್‍ನ ಏಳು ಸದಸ್ಯ ಸ್ಥಾನಗಳ ದ್ವೈವಾರ್ಷಿಕ ಚುನಾವಣೆಗೆ ಸಲ್ಲಿಸಿದ್ದ 9 ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಇಂದು ನಡೆದಿದ್ದು, ಇಬ್ಬರ ನಾಮಪತ್ರಗಳು ತಿರಸ್ಕøತಗೊಂಡಿವೆ. ಏಳು ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.
ನಿನ್ನೆ ಉಮೇದುವಾರಿಕೆ ಸಲ್ಲಿಸಿದ್ದ ಆಡಳಿತಾರೂಢ ಬಿಜೆಪಿಯ ಅಭ್ಯರ್ಥಿಗಳಾದ ಮಾಜಿ ಸಚಿವರಾದ ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್, ಸುನಿಲ್ ವಲ್ಯಾಪುರೆ, ಕೆ.ಪ್ರತಾಪ್‍ಸಿಂಹ ನಾಯಕ್, ಕಾಂಗ್ರೆಸ್ ಅಭ್ಯರ್ಥಿಗಳಾದ ಬಿ.ಕೆ.ಹರಿಪ್ರಸಾದ್, ನಾಜಿರ್ ಅಹಮ್ಮದ್ ಹಾಗೂ ಜೆಡಿಎಸ್ ಅಭ್ಯರ್ಥಿ ಗೋವಿಂದ ರಾಜು ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ.
ಮೂರು ಪಕ್ಷಗಳ ಏಳು ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಉಳಿದಿದೆ.
ನಾಮಪತ್ರ ಸಲ್ಲಿಕೆಗೆ ಕಡೆ ದಿನವಾದ ನಿನ್ನೆ ಸೂಚಕರಾಗಿ ಯಾವುದೇ ಶಾಸಕರು ಸಹಿ ಮಾಡದಿದ್ದರೂ ಪಕ್ಷೇತರ ಅಭ್ಯರ್ಥಿ ಎ.ಯಡವನಹಳ್ಳಿ ಪಿ.ಸಿ.ಕೃಷ್ಣಗೌಡ ಹಾಗೂ ಮಂಡಿಕಲ್ ನಾಗರಾಜ ಅವರು ನಾಮಪತ್ರ ಸಲ್ಲಿಸಿದ್ದರು. ರಾಜ್ಯಸಭೆ ಚುನಾವಣಾಧಿಕಾರಿಯಾಗಿರುವ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ನಾಮಪತ್ರ ಪರಿಶೀಲನೆ ನಡೆಸಿದರು.
ಸೂಚಕರ ಸಹಿ ಇಲ್ಲದ ಇವರಿಬ್ಬರ ನಾಮಪತ್ರವನ್ನು ತಿರಸ್ಕರಿಸಿದ್ದಾರೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ನಾಮಪತ್ರಗಳು ಕ್ರಬದ್ಧವಾಗಿವೆ ಎಂದು ಪ್ರಕಟಿಸಿದ್ದಾರೆ.
ನಾಮಪತ್ರ ವಾಪಸ್ ಪಡೆಯಲು ಜೂ.22 ಕಡೆಯ ದಿನವಾಗಿದ್ದು, ಅಂದು ಸಂಜೆ ವೇಳೆಗೆ ಅವಿರೋಧ ಆಯ್ಕೆಯಾಗಿರುವುದನ್ನು ಅಧಿಕೃತವಾಗಿ ಚುನಾವಣಾ ಅಧಿಕಾರಿ ಪ್ರಕಟಿಸಲಿದ್ದಾರೆ.


(ಮಾಹಿತಿ

ಈ ಸಂಜೆ

ಕೃಪೆ )

ಚೀನಾ ಗಡಿಯಲ್ಲಿ ಹಿಮ ಬಂಡೆಯಂತೆ ನಿಂತ ಕನ್ನಡಿಗ ಯೋಧ

ಬೆಳಗಾವಿ: ಭಾರತದ ಗಡಿ ಭಾಗದಲ್ಲಿ ಕಾಲು ಕೆದರಿ ಜಗಳ ತೆಗೆಯುತ್ತಿರುವ ಚೀನಾ ಸೈನಿಕರಿಗೆ ತೊಡೆ ತಟ್ಟಿ, ದೇಹದ ಕಣ ಕಣವನ್ನೇ ಮಂಜುಗಡ್ಡೆಯಾಗಿಸುವ ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಬೆಳಗಾವಿ ಜಿಲ್ಲೆಯ ಯೋಧನೊಬ್ಬ ಭಾರತದ ರಕ್ಷಣೆಗಾಗಿ ಕಳೆದ ನಾಲ್ಕು ತಿಂಗಳಿಂದ ಸೇವೆ ಸಲ್ಲಿಸುತ್ತಿದ್ದಾನೆ. ಒಂದೆಡೆ ಚೀನಾ ಉಪಟಳವಾದರೆ, ಇನ್ನೊಂದೆಡೆ ಜಗಳಗಂಟ ಪಾಕಿಸ್ತಾನವನ್ನು ಹಿಮ್ಮೆಟ್ಟಿಸುವಲ್ಲಿ ಯೋಧ ನಿರತನಾಗಿದ್ದಾನೆ.
ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ಯೋಧ ಅರುಣ ಮಿಸಾಳೆ ಕಳೆದ ಮೂರುವರೆ ತಿಂಗಳಿಂದ ಸಿಯಾಚಿನ್‌ ಗ್ಲೆಸಿಯರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಇಡೀ ದೇಹವನ್ನೇ ಹೆಪ್ಪುಗಟ್ಟಿಸುವ ಮೈನಸ್‌ 40 ಡಿಗ್ರಿ ತಾಪಮಾನದಲ್ಲಿ ಕಣ್ಣಿಗೆ ಎಣ್ಣೆ ಹಾಕಿಕೊಂಡು ದೇಶ ಸೇವೆ ಮಾಡುತ್ತಿದ್ದಾನೆ. ಸದ್ಯ ಚೀನಾದಿಂದ ಸ್ವಲ್ಪ ದೂರದಲ್ಲಿಯೇ ಇರುವ ಯೋಧ ಅರುಣ ಅಲ್ಲಿಯ ಸದ್ಯದ ಸ್ಥಿತಿಗತಿ ಕುರಿತು “ಉದಯವಾಣಿ’ಯೊಂದಿಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾನೆ.
ಜಗತ್ತಿನ ಅತಿ ಎತ್ತರದ ಯುದ್ಧಭೂಮಿ:
ಜೀವನದಲ್ಲಿ ಒಮ್ಮೆ ಮಾತ್ರ ಸಿಯಾಚಿನ್‌ ಗ್ಲೆಸಿಯರ್‌ನಲ್ಲಿ ಕರ್ತವ್ಯ ನಿರ್ವಹಿಸುವ ಅವಕಾಶ ಯೋಧನಿಗೆ ಸಿಗುತ್ತದೆ. ಇದೇ ಅವಕಾಶವನ್ನೇ ಬಳಸಿಕೊಂಡು ಮಾರ್ಚ್‌ನಲ್ಲಿ ಮೈನಸ್‌ 30-35ರ ತಾಪಮಾನದಲ್ಲಿ ಪರ್ವತವನ್ನೇರಿದ ಯೋಧ ಅರುಣ ಗಡಿ ಕಾಯುತ್ತ ನಿಂತಿದ್ದಾನೆ. ಜಗತ್ತಿನ ಅತಿ ಎತ್ತರದ ಯುದ್ಧಭೂಮಿ, ಅಪಾಯಕಾರಿ ಹವಾಮಾನದಲ್ಲಿ ಭಾರತೀಯ ಸೇನೆ ಇಲ್ಲಿ ನಮ್ಮ ನೆಲವನ್ನು ರಕ್ಷಣೆ ಮಾಡುತ್ತಿದ್ದು, ಇದರಲ್ಲಿ ನಮ್ಮ ಕನ್ನಡಿಗ ಯೋಧ ಇರುವುದು ಹೆಮ್ಮೆಯ ವಿಷಯವಾಗಿದೆ.

ಶತ್ರುಗಳ ಗುಂಡಿಗಿಂತ ಚಳಿಯೇ ಉಗ್ರ:
ಅಪಾಯಕಾರಿ ಹವಾಮಾನದಲ್ಲಿ ಗಡಿ ಕಾಯುವುದು ಸವಾಲಿನ ಕೆಲಸವಾಗಿದೆ. ಶತ್ರುಗಳ ಗುಂಡಿಗಿಂತ ಚಳಿಯೇ ಉಗ್ರನಂತೆ ನರ್ತಿಸುತ್ತದೆ. ಈ ಹಿಮ ಪ್ರವಾಹಕ್ಕೆ ಅನೇಕ ಯೋಧರು ಪ್ರಾಣ ತೆತ್ತಿದ್ದಾರೆ. ಇಲ್ಲಿ ಕರ್ತವ್ಯ ನಿರ್ವಹಿಸಲು ಕೇವಲ ಮೂರು ತಿಂಗಳು ಮಾತ್ರ ಅವಕಾಶ ಇದೆ. ಆದರೆ ಸದ್ಯ ಲಾಕ್‌ಡೌನ್‌ದಿಂದಾಗಿ ಕೆಲವು ಯೋಧರು ಕರ್ತವ್ಯಕ್ಕೆ ಹಾಜರಾಗದಿರುವುದು, ಜತೆಗೆ
ಭಾರತ-ಚೀನಾ ಸಂಘರ್ಷ ಹಿನ್ನೆಲೆಯಲ್ಲಿ ಮತ್ತೆ ಒಂದು ತಿಂಗಳು ಯೋಧ ಅರುಣ ಮಿಸಾಳೆಯ ಸೇವೆ ಹೆಚ್ಚುವರಿಯಾಗಿದೆ.
ಮಾರ್ಚ್‌ ತಿಂಗಳಲ್ಲಿ ಯೋಧ ಅರುಣ ಕಾಲ್ನಡಿಗೆ ಮೂಲಕ ಹಿಮ ಪರ್ವತವನ್ನೇರುವಾಗ ಸುಮಾರು ಮೈನಸ್‌ 50-55 ಡಿಗ್ರಿವರೆಗೂ ಹವಾಮಾನ ಇತ್ತು. ಸದ್ಯ ಹವಾಮಾನ ತುಸು ಇಳಿಕೆಯಾಗಿದ್ದು, ಮಧ್ಯ ರಾತ್ರಿಯಲ್ಲಿ ಮೈನಸ್‌ 25ರವರೆಗೂ ಇರುತ್ತದೆ. ಇಂಥದರಲ್ಲಿ ಹಿಮವನ್ನೇ ಕಾಯಿಸಿ ನೀರು ಕುಡಿಯಬೇಕಾಗುತ್ತದೆ. ನಿದ್ದೆಯಂತೂ ಅಷ್ಟಕ್ಕಷ್ಟೇ ಆಗಿದ್ದು, ನಿದ್ದೆಯಲ್ಲಿದ್ದಾಗ ಆಮ್ಲಜನಕ ಪಡೆದುಕೊಳ್ಳಲು 2-3 ಬಾರಿ ಎದ್ದು ನೀರು ಕುಡಿಯಬೇಕಾಗುತ್ತದೆ ಎನ್ನುತ್ತಾರೆ ಯೋಧ ಅರುಣ ಮಿಸಾಳೆ.

ಸಿಯಾಚಿನ್‌ದಲ್ಲಿ ಸ್ನಾನ ಮಾಡದ ಯೋಧ:
ನಾಲ್ಕು ತಿಂಗಳಲ್ಲಿ ಒಮ್ಮೆಯೂ ಸ್ನಾನ ಮಾಡಿಲ್ಲ. ಬಕೆಟ್‌ನಲ್ಲಿ ನೀರು ಕಾಯಿಸಿ ತೆಗೆದುಕೊಳ್ಳುವಷ್ಟರಲ್ಲಿ ಹಿಮ ಆಗಿರುತ್ತದೆ. ನಾವು ಧರಿಸುವ ಸಮವಸ್ತ್ರಗಳೇ ನಮಗೆ ಸಂಜೀವಿನಿ ಇದ್ದಂತೆ. ಸಂಪೂರ್ಣ ದೇಹವನ್ನು ಮುಚ್ಚುವ ಈ ಸಮವಸ್ತ್ರದಿಂದ ದೇಹ ಸ್ವಲ್ಪ ಪ್ರಮಾಣದಲ್ಲಿ ಚಳಿ ತಡೆದುಕೊಳ್ಳುತ್ತದೆ. ಅತಿ ಹೆಚ್ಚು ಹಿಮಪಾತ ಆಗುವಾಗ ಹಿಮ ತೆಗೆದು ಅಲ್ಲಿ ದಿನ ಕಳೆಯುವುದೇ ಒಂದು ದೊಡ್ಡ ಸವಾಲಾಗಿದೆ. ಒಂದೆಡೆ ಹಿಮಪಾತ, ಮತ್ತೂಂದೆಡೆ ಶತ್ರುಗಳಿಂದ ರಕ್ಷಿಸಿಕೊಳ್ಳುವುದು ಎಂದರೆ ಹೋದ ಜೀವ ಮತ್ತೆ ವಾಪಸ್‌ ಪಡೆದುಕೊಂಡಂತೆ ಎಂಬ ಮಾತನ್ನು ಅರುಣ ಹೇಳಿಕೊಂಡರು.

ನಾಲ್ಕು ದಿನಗಳ ಹಿಂದೆ ಭಾರತ-ಚೀನಾ ಮಧ್ಯೆ ನಡೆದ ಗುಂಡಿನ ಕಾಳಗದಿಂದ ಸುಮಾರು 8-10 ಕಿ.ಮೀ. ದೂರದಲ್ಲಿರುವ ಯೋಧ ಅರುಣ ಅವರ ತಂಡವೂ ಅಲರ್ಟ್‌ ಆಗಿದ್ದು, ಪ್ರತಿ ಕ್ಷಣವನ್ನು ಶತ್ರುಗಳ ಹೆಜ್ಜೆಗಳತ್ತ ದೃಷ್ಟಿ ಹರಿಸಿದೆ. ಯಾವುದೇ ಕ್ಷಣದಲ್ಲಿಯೂ ಚೀನಾ ಸೈನಿಕರು ಭಾರತದ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಹೀಗಾಗಿ ದೇಶದ ಗಡಿ ಕಾಯುವಲ್ಲಿ ಇಂಥ ಅನೇಕ ತಂಡಗಳು ಸಜ್ಜಾಗಿವೆ. ಮಾಜಿ ಸೈನಿಕ, ತಂದೆ ಲಕ್ಷ್ಮಣ ಹಾಗೂ ತಾಯಿ ಜೀಜಾಬಾಯಿ ಅವರ ಕಿರಿಯ ಪುತ್ರನಾಗಿರುವ ಅರುಣ 2012ರಲ್ಲಿ ಮರಾಠಾ ಲಘು ಪದಾತಿ ದಳಕ್ಕೆ ಸೇರಿದ್ದರು. ಪತ್ನಿ ಸವಿತಾ ಕಳೆದ ವರ್ಷವೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬರುವ
ಜೂ.20ಕ್ಕೆ ಮೊದಲ ವರ್ಷದ ಜನ್ಮ ದಿನಾಚರಣೆ ಇದೆ. ಹಿರಿಯ ಸಹೋದರ ಮಂಜುನಾಥ ಕೂಡ ಸಿಐಎಸ್‌ಎಫ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ.

5-6 ಕೆ.ಜಿ. ತೂಕ ಇಳಿಕೆ
ಶತ್ರು ರಾಷ್ಟ್ರಗಳಾದ ಚೀನಾ ಹಾಗೂ ಪಾಕಿಸ್ತಾನದ ಸೈನಿಕರನ್ನು ಹಿಮ್ಮೆಟ್ಟಿಸುವಲ್ಲಿ ನಿರತನಾಗಿರುವ ಬೆಳಗಾವಿಯ ಯೋಧ ಅರುಣ ಮಿಸಾಳೆ ಸಿಯಾಚಿನ್‌ ಗ್ಲೆಸಿಯರ್‌ಗೆ ಹೋಗುವ ಮುನ್ನ ಅನೇಕ ತರಬೇತಿ ಪಡೆದುಕೊಂಡಿದ್ದಾನೆ.
ವೈದ್ಯಕೀಯ ವರದಿ ಸರಿಯಾಗಿ ಇದ್ದರೆ ಮಾತ್ರ ಸಿಯಾಚಿನ್‌ಗೆ ಕಳುಹಿಸಲಾಗುತ್ತದೆ. ಅರುಣ ಆಯ್ಕೆಯಾದ ಬಳಿಕ ಈ ಮೂರುವರೆ
ತಿಂಗಳಲ್ಲಿ ಈತನ ದೇಹ ತೂಕ 5ರಿಂದ 6 ಕೆ.ಜಿ ಇಳಿಕೆ ಆಗಿದೆ. ಇಲ್ಲಿ ಆಹಾರ ತಯಾರಿಸಿ ಉಣ್ಣುವುದು ಎಂದರೆ ಆಗದ ಮಾತು.
ಕೇವಲ ಒಣ ಹಣ್ಣು(ಡ್ರೈ ಫ್ರೂಟ್ಸ್‌)ಗಳನ್ನೇ ತಿಂದು ಬದುಕುತ್ತಿರುವ ಯೋಧರಿಗೆ ಚಳಿ ತಡೆದುಕೊಳ್ಳುವುದೇ ದೊಡ್ಡ ಸವಾಲಾಗಿದೆ.
ಸದ್ಯ ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವುದರಿಂದ ಇನ್ನೂ ಕೆಲವು ದಿನಗಳ ಕಾಲ ಅರುಣ ಅಲ್ಲಿಯೇ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ.

– ಭೈರೋಬಾ ಕಾಂಬಳೆ
(ಮಾಹಿತಿ
ಉದಯವಾಣಿ ಕೃಪೆ ) 

ಜಿಂದಾಲ್ ನಂಜು ಮುಂದುವರೆದರೆ ಕಂಪನಿ ಸಂಪೂರ್ಣ ಬಂದ್; ಆನಂದ್ ಸಿಂಗ್

ಬಳ್ಳಾರಿ, ಜೂನ್ 19: ಬಳ್ಳಾರಿ ಜಿಲ್ಲೆಯ ಜಿಂದಾಲ್ ನಂಜು ಇದೇ‌ ರೀತಿ ಮುಂದುವರೆದರೆ ಇಡೀ ಕಂಪನಿಯನ್ನು ಸಂಪೂರ್ಣ ಬಂದ್ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಇಲಾಖೆ ಖಾತೆ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ. ‌
ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಂದಾಲ್ ನಲ್ಲಿ ಮಹಾಮಾರಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಸೋಂಕು ನಿಯಂತ್ರಣಕ್ಕೆ ಬರದಿದ್ದರೆ ಜಿಂದಾಲ್ ಕಂಪನಿಯನ್ನು ಸಂಪೂರ್ಣ ಬಂದ್ ಮಾಡಲಾಗುವುದು. ಈ ಕುರಿತು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ತುರ್ತು ಸಭೆ ಕರೆದಿದ್ದು, ಸಭೆಯಲ್ಲಿ ಚೆರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸುತ್ತಿದ್ದು, ಎಲ್ಲರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೂ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನೆಲೆ ಸೊಮವಾರ ತುರ್ತು ಸಭೆ ಕರೆಯಲಾಗಿದೆ. ಜಿಂದಾಲ್ ಮುಖ್ಯಸ್ಥ ವಿನೋದ್ ನಾವೆಲ್ ಅವರೂ ಸಭೆಗೆ ಆಗಮಿಸಲಿದ್ದಾರೆ ಎಂದರು. ದೇಶ ಲಾಕ್ ಡೌನ್ ಮಾಡಿದಾಗಲೂ ಜಿಂದಾಲ್ ಗೆ ಕೆಲಸ ಮಾಡಲು ಅವಕಾಶ ಕೊಟ್ಟಿದ್ದೆವು. ಹೀಗಾಗಿ ಜನ ನಮ್ಮ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೆ. ಆದರೆ ಸರ್ಕಾರ ಅಗತ್ಯ ಬಿದ್ದರೆ ಜಿಂದಾಲ್ ಸಂಪೂರ್ಣ ಬಂದ್ ಮಾಡಲು ಸಿದ್ಧವಾಗಿದೆ ಎಂದಿದ್ದಾರೆ.
(ಮಾಹಿತಿOneindiaಕೃಪೆ )  

ಬಾಗಲಕೋಟೆ: ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಬಾಗಲಕೋಟೆ: ಸಾಲದ ಬಾಧೆಯಿಂದ ಬಾದಾಮಿ ತಾಲ್ಲೂಕಿನ ತಳಕವಾಡದ ರೈತ ಶಂಕರಪ್ಪ ಬಾದಾಮಿ (28) ಶುಕ್ರವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಂಕರಪ್ಪ ತಳಕವಾಡದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ₹ 1 ಲಕ್ಷ, ಕುಳಗೇರಿಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಲ್ಲಿ ₹ 3 ಲಕ್ಷ ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ.
ಕಳೆದ ಆಗಸ್ಟ್‌ನಲ್ಲಿ ಮಲಪ್ರಭಾ ನದಿಯ ಪ್ರವಾಹದಿಂದ ಜಮೀನಿನಲ್ಲಿದ್ದ ಬೆಳೆ ಹಾನಿಗೀಡಾಗಿತ್ತು. ಆಗಿನಿಂದ ಶಂಕರಪ್ಪ ಖಿನ್ನತೆಗೆ ಒಳಗಾಗಿದ್ದರು. ಸಾಲ ತೀರಿಸುವುದು ಹೇಗೆಂದು ನೊಂದಿದ್ದರು ಎಂದು ತಿಳಿದುಬಂದಿದೆ.
ಮನೆಯಲ್ಲಿಯೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, June 18, 2020

ಎಚ್‌ಡಿಕೆ ನೋಡಬೇಕಾದ ಸುದ್ದಿ ಇದು: ಜಿಲ್ಲಾಧಿಕಾರಿ ಎದುರು ಬಿಕ್ಕಿಬಿಕ್ಕಿ ಅತ್ತ ಅಂಗವಿಕಲೆ!

ಬೆಳಗಾವಿ: ರಾಮದುರ್ಗ ತಾಲೂಕಿನ ಅಂಗವಿಕಲ ಯುವತಿಯೊಬ್ಬಳು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಅವರ ಬಳಿ ಕಣ್ಣೀರಿಟ್ಟ ಘಟನೆ ಗುರುವಾರ ನಡೆದಿದೆ.
ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜನತಾ ದರ್ಶನಕ್ಕೆ ಬಂದಿದ್ದ ಅಂಗವಿಕಲ ಯುವತಿ ಸಲೀಮಾ ಅವರಿಗೆ ಅನುಕಂಪ ತೋರಿ ರಾಮದುರ್ಗ ತಹಸೀಲ್ದಾರ್ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಿಸಲಾಗಿತ್ತು. ಈಗ ದಿಢೀರನೆ ಕೆಲಸದಿಂದ ತೆಗೆದಿದ್ದಾರೆ. ಇದರಿಂದ ಮನನೊಂದ ಆ ಯುವತಿ, ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿ ಎದುರು 'ನನಗೆ ನ್ಯಾಯ ಕೊಡಿಸಿ' ಎಂದು ಮಕ್ಕಳಂತೆ ಗಳಗಳನೆ ಅತ್ತರು.
'ಕಳೆದ ಅಕ್ಟೋಬರ್‌ನಿಂದ ಪ್ರಸಕ್ತ ವರ್ಷದ ಮಾರ್ಚ್‌ವರೆಗೂ ಕೆಲಸ ಮಾಡಿರುವೆ.
ತಿಂಗಳಿಗೆ 5 ಸಾವಿರ ರೂ. ಸಂಬಳ ಎಂದು ಹೇಳಿ 5 ತಿಂಗಳು ಕೆಲಸ ಮಾಡಿಸಿಕೊಂಡು ಕೇವಲ 10 ಸಾವಿರ ರೂ. ನೀಡಿದ್ದಾರೆ. ಈಗ ಮತ್ತೆ ಕೆಲಸಕ್ಕೆ ಹೋದರೆ ಬರುವುದು ಬೇಡ ಎನ್ನುತ್ತಿದ್ದಾರೆ' ಎಂದು ಅಳಲು ತೋಡಿಕೊಂಡಳು. ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ. ಬೊಮ್ಮನಹಳ್ಳಿ, ಗುತ್ತಿಗೆ ಆಧಾರದ ಮೇಲೆ ಕೆಲಸ ಕೊಡಿಸುವೆ ಎಂದು ತಿಳಿಸಿದರು. ಅಷ್ಟಕ್ಕೆ ಸುಮ್ಮನಾಗದ ಯುವತಿ, ತಕ್ಷಣವೇ ಬಾಕಿ ಸಂಬಳ ಹಾಗೂ ಕೆಲಸ ನೀಡುವಂತೆ ಹಠ ಹಿಡಿದಳು. ಆದರೆ, ಜಿಲ್ಲಾಧಿಕಾರಿ ಅವರು ಭರವಸೆ ನೀಡಿ ಹೊರಟು ಹೋದರು.
(ಮಾಹಿತಿ ಕೃಪೆ ವಿಜಯವಾಣಿ)

ಮಗುವಿನ ಜನ್ಮ ನೀಡಿದ ಕೊರೊನಾ ವೈರಸ್ ಸೋಂಕಿತೆ

ಕೊರೊನಾ ಸೋಂಕು ಹೊಂದಿದ್ದ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ.

22 ವರ್ಷದ ಗರ್ಭಿಣಿಗೆ ಕೊರೊನಾ ವೈರಸ್ ತಗುಲಿತ್ತು. ಜೂನ್ 17 ರಂದು ಉಡುಪಿಯ ಡಾ.ಟಿ.ಎಂ.ಎ ಪೈ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು.

ಕಾರ್ಕಳ ಮೂಲದ ಮಹಿಳೆ ಗೆ ತುರ್ತು ಸಿಸೇರಿಯನ್ ಮಾಡಲಾಗಿದ್ದು, ತಾಯಿ, ಮಗು ಆರೋಗ್ಯವಾಗಿದೆ.

ಪ್ರಸೂತಿ ತೊಂದರೆ ಕಾರಣಗಳಿಂದ ಸಿಸೇರಿಯನ್ ಮಾಡಬೇಕಾಯಿತು. ತುರ್ತು ಶಸ್ತ್ರಚಿಕಿತ್ಸೆಗೆ ಮಹಿಳೆಗೆ ಅಗತ್ಯವಾಗಿತ್ತು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಪಡಿತರ ಚೀಟಿಯನ್ನು ಆಧಾರ್‌ಗೆ ಲಿಂಕ್ ಮಾಡುವ ಸುಲಭ ವಿಧಾನ ಇದು

 ನವದೆಹಲಿ: ನಿಮ್ಮ ರೇಷನ್ ಕಾರ್ಡ್ ಅನ್ನು ನೀವು ಇನ್ನೂ ಆಧಾರ್‌ಗೆ ಲಿಂಕ್ ಮಾಡಿಲ್ಲವೇ.? ಹಾಗಿದ್ದರೆ ಇಂದೇ ಲಿಂಕ್ ಅನ್ನು ಪೂರ್ಣಗೊಳಿಸಿ ಏಕೆಂದರೆ ಸೆಪ್ಟೆಂಬರ್ 30 ರ ನಂತರ, ಪಡಿತರ ಕಾರ್ಡ್ (Ration Card) ಆಧಾರ್ ನೊಂದಿಗೆ ಲಿಂಕ್ ಮಾಡದಿದ್ದರೆ ಪಡಿತರವನ್ನು ಪಡೆಯುವಲ್ಲಿ ತೊಂದರೆ ಅನುಭವಿಸಬಹುದು. ಈಗ ನೀವು ಮನೆಯಲ್ಲಿಯೇ ಇದ್ದು ಪಡಿತರ ಚೀಟಿಯೊಂದಿಗೆ ನಿಮ್ಮ ಆಧಾರ್ ಅನ್ನು ಲಿಂಕ್ ಮಾಡಬಹುದು. ನೀವು ಹೇಗೆ ಲಿಂಕ್ ಮಾಡಬಹುದು ಎಂದು ನಾವು ನಿಮಗೆ ಹೇಳುತ್ತೇವೆ.
ರೇಷನ್ ಕಾರ್ಡ್-ಆಧಾರ್‌ಗೆ ಲಿಂಕ್ ಮಾಡಲು ಸೆಪ್ಟೆಂಬರ್ 30 ಕೊನೆಯ ದಿನ:
ದೇಶಾದ್ಯಂತ ಕರೋನಾ ಬಿಕ್ಕಟ್ಟಿನ ದೃಷ್ಟಿಯಿಂದ ಕೇಂದ್ರ ಸರ್ಕಾರ ಪಡಿತರ ಚೀಟಿಯನ್ನು ಆಧಾರ್‌ಗೆ ಜೋಡಿಸುವ ದಿನಾಂಕವನ್ನು ಸೆಪ್ಟೆಂಬರ್ 30 ಕ್ಕೆ ವಿಸ್ತರಿಸಿದೆ.
ಸೆಪ್ಟೆಂಬರ್ 30 ರೊಳಗೆ ತಮ್ಮ ಪಡಿತರ ಚೀಟಿಯನ್ನು ಆಧಾರ್‌ಗೆ ಲಿಂಕ್ ಮಾಡದವರಿಗೆ ಪಡಿತರ ನೀಡಲಾಗುವುದಿಲ್ಲ ಎಂದು ಕೇಂದ್ರ ಆಹಾರ ಸಚಿವಾಲಯ ಹೇಳಿದೆ.
ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ:
ಮೊದಲನೆಯದಾಗಿ ಆಧಾರ್ ನೀಡುವ ಸಂಘಟನೆಯಾದ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) uidai.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಇದರ ನಂತರ ಇಲ್ಲಿ 'ಸ್ಟಾರ್ಟ್ ನೌ' (Start Now) ಆಯ್ಕೆಯನ್ನು ಕ್ಲಿಕ್ ಮಾಡಿ. ಈಗ ನಿಮ್ಮ ವಿಳಾಸ ವಿವರಗಳನ್ನು ಭರ್ತಿ ಮಾಡಿ - ಜಿಲ್ಲೆ ಮತ್ತು ರಾಜ್ಯ. ಲಭ್ಯವಿರುವ ಆಯ್ಕೆಗಳಿಂದ 'ರೇಷನ್ ಕಾರ್ಡ್' (Ration Card) ಪ್ರಯೋಜನ ಪ್ರಕಾರವನ್ನು ಆಯ್ಕೆಮಾಡಿ. 'ರೇಷನ್ ಕಾರ್ಡ್' ಯೋಜನೆಯನ್ನು ಆಯ್ಕೆಮಾಡಿ.
ಒಟಿಪಿ ನಮೂದಿಸಿ :
ಈಗ ನಿಮ್ಮ ಪಡಿತರ ಚೀಟಿ ಸಂಖ್ಯೆ, ಆಧಾರ್ ಸಂಖ್ಯೆ, ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನಿಮ್ಮ ನೋಂದಾಯಿತ ಮೊಬೈಲ್‌ಗೆ ಒನ್-ಟೈಮ್ ಪಾಸ್‌ವರ್ಡ್ (ಒಟಿಪಿ) ಕಳುಹಿಸಲಾಗುತ್ತದೆ. ಒಟಿಪಿ ಭರ್ತಿ ಮಾಡಿ. ಇದರ ನಂತರ ಪ್ರಕ್ರಿಯೆಯ ಪೂರ್ಣಗೊಳಿಸುವಿಕೆಯ ಅಧಿಸೂಚನೆಯನ್ನು ಪರದೆಯ ಮೇಲೆ ನೋಡಲಾಗುತ್ತದೆ. ಅದನ್ನು ಪೋಸ್ಟ್ ಮಾಡಿ ನಿಮ್ಮ ಅರ್ಜಿಯನ್ನು ಪರಿಶೀಲಿಸಲಾಗುತ್ತದೆ ಮತ್ತು ಯಶಸ್ವಿ ಪರಿಶೀಲನೆಯ ನಂತರ ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಗೆ ಲಿಂಕ್ ಮಾಡಲಾಗುತ್ತದೆ.
ಒಂದು ರಾಷ್ಟ್ರ ಒನ್ ಕಾರ್ಡ್ ಯೋಜನೆ:
ಜೂನ್ 1 ರಿಂದ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಡಿತರ ಕಾರ್ಡ್ ಪೋರ್ಟಬಿಲಿಟಿ ಸೇವೆ 'ಒನ್ ನೇಷನ್-ಒನ್ ರೇಷನ್ ಕಾರ್ಡ್' (One Nation One Card) ಅನ್ನು ಪ್ರಾರಂಭಿಸಲಾಗಿದೆ. ಈಗ ನೀವು ಈ ಯೋಜನೆಯಡಿ ಯಾವುದೇ ರಾಜ್ಯದಲ್ಲಿ ಪಡಿತರವನ್ನು ಖರೀದಿಸಬಹುದು. ಅಂದರೆ ನೀವು ಯಾವ ರಾಜ್ಯದಲ್ಲೇ ಇದ್ದರೂ ಪಡಿತರ ಕೊಳ್ಳುವ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಈ ಯೋಜನೆ ಈಗಾಗಲೇ ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಹರಿಯಾಣ, ರಾಜಸ್ಥಾನ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಗೋವಾ, ಜಾರ್ಖಂಡ್, ತ್ರಿಪುರ, ಬಿಹಾರ, ಉತ್ತರ ಪ್ರದೇಶ, ಪಂಜಾಬ್ ಹಿಮಾಚಲ ಪ್ರದೇಶ ಮತ್ತು ದಮನ್-ಡಿಯುಗಳಲ್ಲಿ ಜಾರಿಯಲ್ಲಿದೆ.
90 ರಷ್ಟು ಪಡಿತರ ಚೀಟಿಗಳನ್ನು ಲಿಂಕ್ ಮಾಡಲಾಗಿದೆ:
ಸಚಿವಾಲಯದ ಪ್ರಕಾರ ಇದುವರೆಗಿನ ಒಟ್ಟು 23.5 ಕೋಟಿ ಪಡಿತರ ಚೀಟಿಗಳಲ್ಲಿ 90 ಪ್ರತಿಶತ ಪಡಿತರ ಚೀಟಿಗಳು ಆಧಾರ್‌ಗೆ ಸಂಬಂಧಿಸಿವೆ. 80 ಕೋಟಿ ಫಲಾನುಭವಿ ಕುಟುಂಬದ ಕನಿಷ್ಠ ಒಬ್ಬ ಸದಸ್ಯನ ಆಧಾರ್ ಅನ್ನು ಪಡಿತರ ಚೀಟಿಗೆ ಲಿಂಕ್ ಮಾಡಲಾಗಿದೆ.
(ಮಾಹಿತಿ ಕೃಪೆ ZeeKannada)

ಮಾಸ್ಕ್‌ ದಿನ

ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲರೂ ಕಡ್ಡಾಯ ಮಾಸ್ಕ್ ಧರಿಸಬೇಕು ಎಂದು ಜಾಗೃತಿ ಮೂಡಿಸುವ ಸಲುವಾಗಿ ಇಂದು ರಾಜ್ಯಾದ್ಯಂತ 'ಮಾಸ್ಕ್‌ ದಿನ' ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಇಂದು ಬೆಂಗಳೂರಿನಲ್ಲಿ ಜನಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಿ, ಭಾಗವಹಿಸಲಾಯಿತು. ನಾಡಿನ ಖ್ಯಾತನಾಮರು, ಸಂಸದರು, ಶಾಸಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.ImageImage
ImageImage

ಮಹಾ ಮಳೆಗೆ ತುಂಬಿ ಹರಿಯುತ್ತಿರುವ ಕೃಷ್ಣೆ: ಹಿಪ್ಪರಗಿ ಜಲಾಶಯಕ್ಕೆ 44ಸಾವಿರ ಕ್ಯೂಸೆಕ್ಸ್ ನೀರು

ಬನಹಟ್ಟಿ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೊಯ್ನಾ ಜಲಾಶಯ ಹಾಗೂ ರಾಜಾಪೂರ ಡ್ಯಾಂಗಳಿಂದ ನೀರು ಸರಾಗವಾಗಿ ಕೃಷ್ಣಾ ನದಿಗೆ ಹರಿದು ಬರುತ್ತಿದ್ದು, ಒಂದೇ ದಿನದಲ್ಲಿ ಬಾರಿ ಪ್ರಮಾಣದ ನೀರು ಹರಿದು ಬಂದಿದೆ.
ವಿಜಯಪುರ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ಅನೇಕ ನಗರ ಮತ್ತು ಗ್ರಾಮೀಣ ಪ್ರದೇಶಗಳ ಲಕ್ಷಾಂತರ ಸಂಖ್ಯೆಯ ಜನ ಮತ್ತು ಜಾನುವಾರುಗಳಿಗೆ ಹಿಪ್ಪರಗಿ ಜಲಾಶಯ ಸಂಜೀವಿನಿಯಾಗಿದ್ದು, ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಜಲಾಶಯ ನೋಡುಗರನ್ನು ಸೆಳೆಯುತ್ತಿದೆ. ಹಾಗೂ ಕೃಷ್ಣಾ ನದಿ ತುಂಬಿ ಹರಿಯುತ್ತಿರುವುದರಿಂದ ಅಕ್ಕ ಪಕ್ಕದ ಗ್ರಾಮಗಳ ಜನರು ಹಾಗೂ ರೈತರ ಮುಖದಲ್ಲಿ ಮತ್ತಷ್ಟು ಮಂದಹಾಸ ಮೂಡಿದೆ.
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಇಂದು ಹಿಪ್ಪರಗಿ ಜಲಾಶಯಕ್ಕೆ ಒಟ್ಟು 44,000 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಅದೇ ರೀತಿಯಾಗಿ ಜಲಾಶಯದಿಂದ 44,000 ಕ್ಯೂಸೆಕ್ಸ್ ಪ್ರಮಾಣದ ನೀರನ್ನು ಮುಂದೆ ಹರಿ ಬೀಡಲಾಗುತ್ತದೆ. ಜಲಾಶಯದ ನೀರಿನ ಮಟ್ಟ 521.60 ಮೀ ಆಗಿದೆ ಎಂದು ರಬಕವಿ-ಬನಹಟ್ಟಿ ತಹಸೀಲ್ದಾರ ಪ್ರಶಾಂತ ಚನಗೋಂಡ ತಿಳಿಸಿದ್ದಾರೆ.
(ಮಾಹಿತಿ
ಉದಯವಾಣಿ ಕೃಪೆ ) 

ಬಳ್ಳಾರಿ: ಜಿಲ್ಲಾಧಿಕಾರಿ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ಜಿಂದಾಲ್


ಬಳ್ಳಾರಿ, ಜೂನ್ 18: ಬಳ್ಳಾರಿ ಜಿಲ್ಲೆಗೆ ಮಾರಕ ಆಗಿರುವ ಜಿಂದಾಲ್ ಕಾರ್ಖಾನೆ ನೌಕರರು ಬೇರೆ ಕಡೆಗೆ ಸಂಚಾರ ಮಾಡದಂತೆ ತಡೆಯುವ ನಿಟ್ಟಿನಲ್ಲಿ, ಜಿಂದಾಲ್ ಟೌನ್ ಶಿಪ್ ನ್ನು ಸಂಪೂರ್ಣ ಲಾಕ್ ಡೌನ್ ಮಾಡುವಂತೆ ಬಳ್ಳಾರಿ ಜಿಲ್ಲಾಡಳಿತ ಆದೇಶ ಮಾಡಿತ್ತು.
ಈ ಮೂಲಕ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಆದೇಶದ ಅನ್ವಯ ಜಿಂದಾಲ್ ಟೌನ್ ಶಿಪ್ ನಲ್ಲಿ ಇರುವ ಉದ್ಯೋಗಿಗಳಿಂದ ಮಾತ್ರ ಕಂಪನಿ ನಡೆಸುವಂತೆ ಆದೇಶದಲ್ಲಿತ್ತು. ಆದರೆ ಜಿಲ್ಲಾಡಳಿತದ ಆದೇಶಕ್ಕೆ ಕವಡೆ ಕಾಸಿನ‌ ಕಿಮ್ಮತ್ತು ನೀಡಿಲ್ಲ. ಆದೇಶ ಮೀರಿ ಜಿಂದಾಲ್ ನ ಇಸಿಪಿಎಲ್ ಸಿಬ್ಬಂದಿ ಗೇಟ್ ಮೂಲಕ ಕೆಲಸಕ್ಕೆ ಒಳ ಹೋಗುವುದು ಮತ್ತು ಹೊರ ಬರುವುದು ಮಾಡುತ್ತಿದ್ದಾರೆ.
ಜಿಂದಾಲ್ ಕಾರ್ಖಾನೆಯಲ್ಲಿ 178 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ, ಬಳ್ಳಾರಿ ಜಿಲ್ಲಾಡಳಿತದಿಂದ ಜಿಂದಾಲ್ ನ್ನು ಲಾಕ್ ಡೌನ್ ಮಾದರಿ ಅನುಸರಿಸಲು ಆದೇಶ ಮಾಡಿತ್ತು. ಜಿಂದಾಲ್ ಸುತ್ತಲಿನ ವಾಸವಾಗಿರುವ ಕಾರ್ಮಿಕರು ಟೌನ್ ಶಿಪ್ ಹೊರತುಪಡಿಸಿ ಬೇರೆ ಗ್ರಾಮದ ಕಾರ್ಮಿಕರು ಯಾರೂ ಹೊರ ಹೋಗಬಾರದು, ಒಳ ಬರಬಾರದೆಂದು ಜಿಲ್ಲಾಡಳಿತ ಆದೇಶವನ್ನು ಹೊರಡಿಸಿತ್ತು.
ಆದರೆ ಜಿಲ್ಲಾಡಳಿತದ ಆದೇಶ ಮೀರಿ ಜಿಂದಾಲ್ ಕಾರ್ಮಿಕರು ಕಾರ್ಖಾನೆಗೆ ಬರುತ್ತಿದ್ದಾರೆ. ಹೂವು ತರಲು ಹೊರಗಡೆಯಿಂದ ಒಳಗಡೆ, ಒಳಗಡೆಯಿಂದ ಹೊರಗಡೆ ಹೋಗರಬಾರದೆಂಬ ನಿಯಮ ಕೇವಲ ಆದೇಶ ಸೀಮಿತವಾಯಿತಾ? ಎನ್ನುವ ಅನುಮಾನ ಕಾಡುತ್ತಿದೆ. ರಾಜಾರೋಷವಾಗಿ ಸಂಡೂರು ತಾಲೂಕಿನ ಸುಲ್ತಾನಪುರದ ಬಳಿ ಇರೋ ECPL ಗೇಟಿನಿಂದ ಕಾರ್ಮಿಕರು ಒಳ ಪ್ರವೇಶ ಮಾಡುತ್ತಿದ್ದಾರೆ.
 ಸುಮಾರು 35 ಸಾವಿರ ಉದ್ಯೋಗಿಗಳು ಜಿಂದಾಲ್ ನಲ್ಲಿ ಕೆಲಸ ಮಾಡುತ್ತಿದ್ದು, ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದಾಗಿ ಜಿಂದಾಲ್ ಹೇಳಿಕೊಂಡಿತ್ತು, ಅಲ್ಲದೇ ಟೌನ್ ಶಿಪ್ ನಲ್ಲಿ ಇರುವ 3500 ಕಾರ್ಮಿಕರಿಂದ ಮಾತ್ರ ಕಂಪನಿ ನಡೆಸುವುದಾಗಿ ಹೇಳಿಕೊಂಡಿತ್ತು. ಆದರೆ ಇಂದು ಕಂಪನಿಯು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾಡಳಿತದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಈ ಬಗ್ಗೆ ಸರ್ಕಾರ ಮತ್ತು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು.
(ಮಾಹಿತಿOneindiaಕೃಪೆ )   

ಯಡಿಯೂರಪ್ಪ ಸ್ವಾಮಿ ಹೇಳ್ತಾರೆ ಕರ್ನಾಟಕಕ್ಕೆ ಲಾಕ್ ಡೌನ್ ಬೇಡವಂತೆ


Tuesday, June 16, 2020

ಊಟ ಮಾಡುವಾಗ ಹಸಿ ಈರುಳ್ಳಿ ತಿಂದರೆ ಏನಾಗುತ್ತದೆ ಗೊತ್ತಾ?

ಬೆಂಗಳೂರು : ಈರುಳ್ಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಕೆಲವರಿಗೆ ಊಟ ಮಾಡುವಾಗ ಹಸಿ ಈರುಳ್ಳಿ ತಿನ್ನುವ ಅಭ್ಯಾಸವಿದೆ. ಇದು ಆರೋಗ್ಯಕ್ಕೆ ಉತ್ತಮವೇ?
ಹಸಿ ಈರುಳ್ಳಿಯಲ್ಲಿ ಕ್ವೆರ್ಸಟಿನ್ ಎನ್ನುವ ರಾಸಾಯನಿಕ ಅಂಶವಿದೆ. ಇದು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುತ್ತವೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಆದರೆ ಊಟ ಮಾಡುವಾಗ ಹಸಿ ಈರುಳ್ಳಿಯನ್ನು ಸೇವಿಸುವುದು ತುಂಬಾ ಒಳ್ಳೆಯದು, ಇದು ನಮ್ಮ ದೇಹದಲ್ಲಿ ಬೊಜ್ಜು ಶೇಖರಣೆಯಾಗದಂತೆ ತಡೆಯುತ್ತದೆ.

Monday, June 15, 2020

ರಾಜ್ಯದ 10 ಪ್ರಮುಖ ದೇವಾಲಯಗಳ ಪಟ್ಟಿಗೆ ಹುಲಿಗಿ ಸೇರ್ಪಡೆ: ಅಧಿಕಾರಿ ಮುಂದುವರಿಕೆಗೆ ಡಿಸಿ ಒಲವು

ಗಂಗಾವತಿ: ಭಕ್ತರು ಅತಿಹೆಚ್ಚು ಭೇಟಿ ನೀಡಿ ದರ್ಶನ ಪಡೆಯುವ ಹಾಗೂ ಅತಿ ಹೆಚ್ಚು ಆದಾಯ ಹೊಂದಿರುವ ರಾಜ್ಯದ ಹತ್ತು ಪ್ರಮುಖ ದೇವಾಲಯಗಳ ಪಟ್ಟಿಯಲ್ಲಿ ಕೊಪ್ಪಳ ತಾಲ್ಲೂಕಿನ ಹುಲಿಗಿಯೂ ಸ್ಥಾನ ಪಡೆದಿದೆ.
ಈ ಹಿನ್ನೆಲೆ ತಾಲ್ಲೂಕಿನ ಪ್ರಮುಖ ಧಾರ್ಮಿಕ ತಾಣವಾದ ಅಂಜನಾದ್ರಿ ದೇವಸ್ಥಾನದ ಮುಖ್ಯಕಾರ್ಯನಿರ್ವಾಹಣ ಅಧಿಕಾರಿಯಾಗಿರುವ ಸಿ.ಎಸ್. ಚಂದ್ರಮೌಳಿ, ಜೂನ್ ತಿಂಗಳಲ್ಲಿ ವಯೋ ನಿವೃತ್ತಿಯಾಗಲಿದ್ದಾರೆ. ಆದರೆ ಅವರ ಸೇವೆಯನ್ನು ಮುಂದುವರೆಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದಿರುವ ಜಿಲ್ಲಾಧಿಕಾರಿಗಳು, ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಮಾತ್ರವಲ್ಲದೇ ಕನಕಗಿರಿಯ ಕನಕಾಚಲ ದೇಗುಲದ ಅಭಿವೃದ್ಧಿಯ ಹಾಗೂ ಆದಾಯ ಸಂಗ್ರಹಣೆಯಲ್ಲಿ ಜಾರಿಗೆ ತಂದ ಸುಧಾರಣೆಗಳಲ್ಲಿ ಚಂದ್ರಮೌಳಿ ಅವರ ಪಾತ್ರ ದೊಡ್ಡದು ಎಂದು ತಿಳಿಸಿದ್ದಾರೆ.
ಹುಲಿಗೆಮ್ಮ ದೇಗುಲ ಸೇರಿದಂತೆ ನಾನಾ ದೇಗುಲಗಳ ಆಡಳಿತಾಧಿಕಾರಿಯಾಗಿದ್ದ ಚಂದ್ರಮೌಳಿ ಅವರಿಂದ ಸುಮಾರು ಒಂಭತ್ತು ಕೋಟಿ ಮೌಲ್ಯದ ಆದಾಯ ಸರ್ಕಾರಕ್ಕೆ ಬಂದಿದೆ. ಹೀಗಾಗಿ ಜೂನ್ ತಿಂಗಳಲ್ಲಿ ವಯೋ ನಿವೃತ್ತಿಯಾಗಲಿರುವ ಚಂದ್ರಮೌಳಿ ಅವರನ್ನು ದೇಗುಲದ ಸಮಿತಿಗಳ ವೆಚ್ಚದ ಷರತ್ತಿಗೆ ಒಳಪಟ್ಟು ವಿಶೇಷ ಅಧಿಕಾರಿಯನ್ನಾಗಿ ನಿಯೋಜಿಸಬೇಕು. 2007ರಲ್ಲಿ ಕರ್ತವ್ಯಕ್ಕೆ ನಿಯೋಜನೆಯಾದಾಗ ಹುಲಿಗೆಮ್ಮ ದೇಗುಲದ ಆದಾಯ ಒಂದು ಕೋಟಿ ಇತ್ತು. ಆದರೆ ಕಳೆದ 13 ವರ್ಷದಲ್ಲಿ ಈ ಆದಾಯವನ್ನು ಒಂಭತ್ತು ಕೋಟಿ ಮೊತ್ತಕ್ಕೆ ಏರಿಸುವಲ್ಲಿ ಹಲವು ದಿಟ್ಟ ಕ್ರಮಗಳನ್ನು ಚಂದ್ರಮೌಳಿ ಕೈಗೊಂಡಿದ್ದಾರೆ. ಈ ಮೂಲಕ ಧಾರ್ಮಿಕ ತಾಣದಲ್ಲಿ ಸ್ವಚ್ಛತೆಯ ಜೊತೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ದಕ್ಷ ಹಾಗೂ ಪಾರದರ್ಶಕ ಆಡಳಿತದಿಂದಾಗಿ ಇಂದು ದೇಗುಲಕ್ಕೆ ಸಾಕಷ್ಟು ಆದಾಯ ಬಂದಿದೆ.
ರಾಜ್ಯದ ಪ್ರಮುಖ ಹತ್ತು ದೇವಾಲಯಗಳ ಪಟ್ಟಿಯಲ್ಲಿ ಹುಲಿಗಿ ದೇವಾಲಯವೂ ಸೇರಿದೆ. ವಿಶಾಲ ರಸ್ತೆ ನಿರ್ಮಾಣ, ವಾಣಿಜ್ಯ ಮಳಿಗೆ ನಿರ್ಮಾಣ, ದೇಗುಲದ ಸಮಗ್ರ ಅಭಿವೃದ್ಧಿಗೆ 26 ಎಕರೆ ಜಮೀನು ಖರೀದಿಸಿದ ಕೀರ್ತಿ ಚಂದ್ರಮೌಳಿ ಅವರದ್ದು ಎಂದು ಹೇಳಿದ್ದಾರೆ.
-ಶ್ರೀನಿವಾಸ್ ಎಂ ಜೆ
(ಮಾಹಿತಿ ಕೃಪೆ 14/06/2020 ಕನ್ನಡಪ್ರಭ)

ಶಿವಮೊಗ್ಗ: ಜಮೀನು ವಿವಾದದಿಂದ ಬೇಸರ, ವಿಷ ಕುಡಿದು ಮಹಿಳೆ ಆತ್ಮಹತ್ಯೆ

ಶಿವಮೊಗ್ಗ: ಕೌಟುಂಬಿಕ ಆಸ್ತಿ ಕಲಹದಿಂದ ಬೇಸತ್ತ ಮಹಿಳೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ನಡೆದಿದೆ.
ಶಿಕಾರಿಪುರದ ಕಾಗಿನೆಲ್ಲಿ ಗ್ರಾಮದ ಸುಶೀಲಮ್ಮ(43) ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ.
ಘಟನೆ ವಿವರ
ಸುಶೀಲಮ್ಮ ಅವರ ಪತಿ ಚಂದ್ರಪ್ಪ ಅವರು ಹತ್ತು ಎಕರೆ ಭೂಮಿಯನ್ನು ಖರೀದಿಸಿದ್ದರು. ಈ ಆಸ್ತಿಯನ್ನು ಆತ ತನ್ನ ತಾಯಿಯ ಹೆಸರಲ್ಲಿ ನೊಂದಾಯಿಸಿದ್ದರು. ಆದರೆ ಆಸ್ತಿ ಮೇಲೆ ಕಣ್ಣಿಟ್ಟಿದ್ದ ಚಂದ್ರಪ್ಪ ಸೋದರರು ಈ ಆಸ್ತಿಯನ್ನು ತಮ್ಮ ಹೆಸರಿನಲ್ಲಿ ನೋಂದಾಯಿಸುವಂತೆ ತಾಯಿಗೆ ಪೀಡಿಸುತ್ತಿದ್ದರು. ಈ ವಿಷಯದಲ್ಲಿ, ಸಹೋದರರು ಆಗಾಗ್ಗೆ ಪರಸ್ಪರ ಜಗಳವಾಡುತ್ತಿದ್ದರು.
ಅಂತಿಮವಾಗಿ ತಾಯಿ ಸೋದರರ ನಡುವೆ ಮಾತುಕತೆಗೆ ಸಿದ್ದತೆ ಂಆಡಿದ್ದಾರೆ.
ಅಲ್ಲದೆ ಆಸ್ತಿಯನ್ನು ಮೂವರು ಸಹೋದರರ ನಡುವೆ ಸಮಾನವಾಗಿ ಹಂಚಿಕೆ ಮಾಡಲು ತೀರ್ಮಾನಿಸಿದ್ದಾರೆ. ಆದರೆ ತನ್ನ ಪತಿಗೆ ಸೇರಿದ್ದ ಭೂಮಿಗೆ ಭೇಟಿ ನೀಡಿದ್ದ ಸುಶೀಲಮ್ಮನನ್ನು ಕಂಡ ಆಕೆಯ ಮೈದುನರು ಅವಾಚ್ಯ ಶಬ್ದಗಳನ್ನಾಡಿ ಅಪಮಾನಿಸಿದ್ದಾರೆ. ಇದರಿಂದಾಗಿ ಆಕೆಯ ಮನಸ್ಸಿಗೆ ಘಾಸಿಯಾಗಿದೆ.
ಮನನೊಂದಿದ್ದ ಸುಶೀಲಮ್ಮ ಮನೆಗೆ ತೆರಳಿದವಳೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಕುಡಿದಿದ್ದ ಆಕೆಯನ್ನು ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ತಲುಪುವ ಮೊದಲು ಆಕೆ ಕೊನೆಯುಸಿರೆಳೆದಿದ್ದಾಳೆ.
ಘಟನೆ ಸಂಬಂಧ ಶಿಕಾರಿಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಮಾಹಿತಿ ಕೃಪೆ ಕನ್ನಡಪ್ರಭ)