Saturday, June 6, 2020
Friday, June 5, 2020
Thursday, June 4, 2020
ಕೊರೋನಾ ವೈರಸ್ ಮೇಲೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಪ್ರಯೋಗ ಆರಂಭ: ವಿಶ್ವ ಆರೋಗ್ಯ ಸಂಸ್ಥೆ
ಜಿನೀವಾ: ಕೊರೋನಾ ವೈರಸ್ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯ ವೈದ್ಯಕೀಯ ಪ್ರಯೋಗಗಳನ್ನು ಆರಂಭಿಸಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ.
ಸುರಕ್ಷತಾ ಪರಾಮರ್ಶೆಯನ್ನು ನಡೆಸಲು ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯ ಮೇಲೆ ಪ್ರಾಯೋಗಿಕ ಪರೀಕ್ಷೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗುವುದು ಎಂದು ಕಳೆದ ತಿಂಗಳು 25ರಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಆದರೆ ಇದೀಗ ತನ್ನ ಅಭಿಪ್ರಾಯ ಮತ್ತು ನಿರ್ಧಾರಗಳನ್ನು ಬದಲಾಯಿಸಿದ್ದು ಪ್ರಯೋಗಗಳನ್ನು ಬದಲಾಯಿಸುವುದರಲ್ಲಿ ಯಾವುದೇ ಕಾರಣಗಳಿಲ್ಲ ಎಂದು ಹೇಳಿದೆ.
ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯಿಂದ ಕೋವಿಡ್-19 ರೋಗಿಗಳ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ದ ಲ್ಯಾನ್ಸೆಟ್ ವೈದ್ಯಕೀಯ ಪತ್ರಿಕೆ ಪ್ರಕಟಿಸಿದ ನಂತರ ವಿಶ್ವ ಆರೋಗ್ಯ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಸಾಮಾನ್ಯವಾಗಿ ಮಲೇರಿಯಾ ಜ್ವರಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವರು ಕೋವಿಡ್-19 ಚಿಕಿತ್ಸೆಗಾಗಿ ಬಳಸಲು ಶಿಫಾರಸು ಮಾಡಿ ಭಾರತದಿಂದ ತರಿಸಿಕೊಂಡಿದ್ದರು. ಹಲವು ದೇಶಗಳ ಸರ್ಕಾರಗಳು ಈ ಔಷಧಿ ಬಳಕೆಯನ್ನು ಬೆಂಬಲಿಸಿವೆ.
ಕಳೆದ ವಾರ, ಸಾಲಿಡಾರಿಟಿ ಟ್ರಯಲ್‌ನ ಕಾರ್ಯನಿರ್ವಾಹಕ ಗುಂಪು ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆ ಹೆಚ್ಚಾಗಿ ಮಾಡುವುದಕ್ಕೆ ತಡೆ ತಂದಿತ್ತು. ಔಷಧದ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
(ಮಾಹಿತಿ ಕೃಪೆ ಕನ್ನಡಪ್ರಭ....)
(ಮಾಹಿತಿ ಕೃಪೆ ಕನ್ನಡಪ್ರಭ....)
Wednesday, June 3, 2020
ದ್ವಿತೀಯ ಪಿಯುಸಿ 'ಇಂಗ್ಲೀಷ್' ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ.!
ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ. ಜೂನ್ 18 ರಂದು ನಡೆಯುವ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಮತ್ತು ಅವರ ಪರೀಕ್ಷಾ ಕೇಂದ್ರದ ವಿವರವುಳ್ಳು ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಲಾಗಿದೆ.
ವಿದ್ಯಾರ್ಥಿಗಳು ತಾವು ಇರುವ
ಜಿಲ್ಲೆಯಲ್ಲೇ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದ್ದು,
ಇದೀಗ ವಿದ್ಯಾರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ
ಪ್ರಕಟಿಸಿದೆ.ಈ ಸಂಬಂಧ ಕಾಲೇಜುಗಳ ಪ್ರಾಚಾರ್ಯರ ಮೂಲಕ ತಿದ್ದುಪಡಿಗೆ ಜೂನ್ 5 ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಜೂನ್ 7 ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ. ವಿದ್ಯಾರ್ಥಿಗಳು www.pue.kar.nic.in ವೆಬ್ ಸೈಟ್ ನಲ್ಲಿ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಂಡು ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹೋಗಬಹುದು ಎಂದು ಇಲಾಖೆ ತಿಳಿಸಿದೆ.
ಅನಾನಸಿನಲ್ಲಿ ಪಟಾಕಿಯಿಟ್ಟದ್ದು ಗರ್ಭಿಣಿ ಆನೆಗಲ್ಲ, ತಾಯ್ತನಕ್ಕೆ..!
- ಸಿದ್ದು ಸತ್ಯಣ್ಣನವರ್
ಕೇರಳದ
ವೆಲ್ಲಿಯಾರ್ ಎಂಬಲ್ಲಿನ ಈ ಅಮಾನವೀಯ ಘಟನೆಯನ್ನು ಮಾನವ ಸಂಘಜೀವಿ ಎಂಬ ನೆಲೆಗಟ್ಟಿನಲ್ಲಿ
ನೋಡುವುದಾದರೆ, ಗ್ರಹಿಸುವುದೇಗೆ ಅವನ ರಾಕ್ಷಸಿತನವನ್ನು. ಕೇರಳದ ವೆಲ್ಲಿಯಾರ್
ಎಂಬಲ್ಲಿನ ಅರಣ್ಯಾಧಿಕಾರಿ ಮೋಹನ್ ಕೃಷ್ಣ ಎಂಬುವವರು ಆ ಗರ್ಭಿಣಿ ಆನೆಯ ಸ್ಥಿತಿ ನೆನೆದು
ತಮ್ಮ ನೋವನ್ನು ಬರೆದುಕೊಳ್ಳದೆ ಹೋಗಿದ್ದರೆ ಇದಾವುದು ಬೆಳಕಿಗೆ ಬರುತ್ತಲೇ ಇರಲಿಲ್ಲ.
ಪಟಾಕಿ ತುಂಬಿದ ಅನಾನಸ್ ತಿಂದ ಮೇಲೆ ಆನೆ ಊರ ತುಂಬಾ
ಓಡಾಡಿದರೂ ಯಾರಿಗೂ ಸಣ್ಣ ಹಾನಿಯನ್ನೂ ಮಾಡಿಲ್ಲ. ಗಂಟಲು ಹಾಗೂ ದೇಹದೊಳಗಿನ ಉರಿಗೆ ನಡು
ನೀರಿನಲ್ಲಿ ನಿಂತ ಆ ಆನೆ ಅಲ್ಲೇ ಅಸುನೀಗುವಾಗ ಎಷ್ಟು ಸಂಕಟಪಟ್ಟಿರಬಹುದು. ಕಳೆದ ಕೆಲ
ದಿನಗಳ ಹಿಂದೆ ನಾಯಿಯೊಂದರ ನಾಲ್ಕು ಕಾಲೂ ಕಟ್ಟಿ ನೀರಿಗೆ ಎಸೆದವರು, ಖುಷಿಪಡುವುದು
ವಿಡಿಯೋವೊಂದರಲ್ಲಿ ಸೆರೆಯಾಗಿತ್ತು.ಈಗ ಆನೆಯ ಅನ್ನದಲ್ಲಿ ಪಟಾಕಿ ಇಟ್ಟು ಕೊಂದದ್ದು. ಮಾಂಸಾಹಾರಿ ಪ್ರಾಣಿಗಳು ಸಹ ದುರ್ಬಲ ಪ್ರಾಣಿಗಳನ್ನು ಕೊಂದು ಆಹಾರ ಕ್ರಮ ಅನುಸರಿಸಿದರೂ, ಮನುಜನ ನೀಚತನದ ಸಮೀಪಕ್ಕೂ ಸುಳಿಯಲಾರವು. ಹೆಣ್ತನದ ಭಿಕ್ಷೆಯಲ್ಲೇ ಬದುಕುವ ಈ ಗಂಡಸೆಂಬ ಯಕಶ್ಚಿತ್ ಪ್ರಾಣಿಯ ನೀಚತನ ಯಾವ ಮೇರೆಯದ್ದು. ಥತ್ !
(ಮಾಹಿತಿ ಕೃಪೆಸುದ್ದಿದಿನ...)
ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ: ಬದಲಾದೀತೆ ರೈತರ ಬದುಕು?
ಇನ್ನು ಮುಂದೆ ವರ್ತಕರಿಗೆ ಇಷ್ಟು ಪ್ರಮಾಣದಲ್ಲಿ ಮಾತ್ರ ದಾಸ್ತಾನು ಇಟ್ಟುಕೊಳ್ಳಬೇಕು ಎಂಬ ಮಿತಿ ಇರುವುದಿಲ್ಲ. ಈ ದಿನ ಐತಿಹಾಸಿಕವಾದದ್ದು. ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂದಿದ್ದರೆ, ದೇಶದ ರೈತರಿಗೆ ಈ ದಿನ ಸ್ವಾತಂತ್ರ್ಯ ಸಿಕ್ಕಂತಾಯಿತು ಎಂದು ತೋಮರ್ ಹೇಳಿದ್ದಾರೆ. ಇನ್ನು ಮುಂದೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸಮಸ್ಯೆಗಳು ಸಹ ಇರುವುದಿಲ್ಲ ಎಂದು ಸರ್ಕಾರ ಹೇಳಿದೆ. ರೈತರು ತಮ್ಮ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಗೆ ಎಲ್ಲಾದರೂ ಮಾರಾಟ ಮಾಡಬಹುದು. ರೈತರೇ ಎಲೆಕ್ಟ್ರಾನಿಕ್ ಪ್ಲಾಟ್ ಫಾರ್ಮ್ ಗಳ ಮೂಲಕ ಕೃಷಿ ಉತ್ಪನ್ನಗಳ ಮಾರಾಟ ಮಾಡಬಹುದು ಎಪಿಎಂಸಿಯಿಂದ ಹೊರಗೆ ಮಾರುವ ಯಾವುದೇ ಉತ್ಪನ್ನಗಳ ಮೇಲೆ ತೆರಿಗೆ ಹಾಕುವುದಿಲ್ಲ ಒಂದು ದೇಶ, ಒಂದು ಮಾರುಕಟ್ಟೆ ಎಂಬ ದೂರದೃಷ್ಟಿಯೊಂದಿಗೆ ಭಾರತ ಮುಂದುವರಿಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಮತ್ತೊಂದು ಮಹತ್ವದ ತೀರ್ಮಾನದಲ್ಲಿ, ರೈತರ ಭೂಮಿ ವ್ಯಾಜ್ಯಗಳ ನಿವಾರಣೆಗೆ ಎಸ್ ಡಿಎಂ ಅಥವಾ ಡಿಸಿ ಜವಾಬ್ದಾರರು ಎನ್ನಲಾಗಿದೆ. ಭಾರತದಲ್ಲಿ ಶೇಕಡಾ ಎಂಬತ್ತೈದರಷ್ಟು ಸಣ್ಣ ಹಿಡುವಳಿ ರೈತರು ಇದ್ದಾರೆ. ಇಂದಿನ ಕ್ರಮದಿಂದ ವರ್ತಕರು, ಬಂಡವಾಳ, ತಂತ್ರಜ್ಞಾನ ಹೀಗೆ ಎಲ್ಲ ಅಗತ್ಯವೂ ರೈತರಿಗೆ ದೊರೆತಂತೆ ಆಗುತ್ತದೆ ಎಂದು ತೋಮರ್ ಹೇಳಿದ್ದಾರೆ.
ಮೋದಿ ಸರ್ಕಾರ ಎಂ.ಎಸ್. ಸ್ವಾಮಿನಾಥನ್ ವರದಿಯನ್ನು ಒಪ್ಪಿಕೊಂಡಿದೆ. ಕನಿಷ್ಠ ಬೆಂಬಲ ಬೆಲೆಯನ್ನು ಏರಿಸಲು ವ್ಯವಸ್ಥೆ ಮಾಡಿದೆ. ಸರ್ಕಾರದ ಇಂದಿನ ನಿರ್ಧಾರವು ಕೃಷಿ ವಲಯವನ್ನು ಹೊಸ ಎತ್ತರಕ್ಕೆ ಒಯ್ಯುತ್ತದೆ. ಭಾರತದ ಕೃಷಿಕರ ಜೀವನ ಮಟ್ಟವು ಇದರಿಂದ ಸುಧಾರಣೆ ಕಾಣುತ್ತದೆ ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.
(ಮಾಹಿತಿ ಕೃಪೆ ಒನ್ ಇಂಡಿಯಾ ಕನ್ನಡ...)
ಬಿಎಸ್‌ವೈ ಭೇಟಿ ಮಾಡಿದ ಕತ್ತಿ: ಸಚಿವ ಸ್ಥಾನದ ಭರವಸೆ ಕೊಟ್ಟ ಸಿಎಂ
ಕಳೆದ ವಾರ ಭೋಜನ ಕೂಟ ನಡೆಸಿದ ಉಮೇಶ್ ಕತ್ತಿ ಇಂದು ಮುಖ್ಯಮಂತ್ರಿಯವರ ಜತೆ ಸುಮಾರು 20 ನಿಮಿಷ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಕಳೆದ ವಾರದ ಸಭೆಯಲ್ಲಿ ಶಾಸಕರು ಮತ್ತು ತಮ್ಮ ಮಧ್ಯೆ ನಡೆದ ಮಾತುಕತೆಯ ವಿವರಗಳನ್ನು ನೀಡಿದರು. ಪ್ರತಿಯೊಬ್ಬ ಶಾಸಕನ ಅಭಿಪ್ರಾಯವನ್ನೂ ಅವರು ಹೇಳಿದರು.
ಈ
ಸಂದರ್ಭದಲ್ಲಿ ಕತ್ತಿ ತಮ್ಮ ಸಹೋದರ ರಮೇಶ್ ಕತ್ತಿ ಅವರಿಗೆ ರಾಜ್ಯಸಭೆಗೆ ಟಿಕೆಟ್
ನೀಡುವಂತೆ ಮನವಿ ಮಾಡಿದರು. ಟಿಕೆಟ್ ಕೊಡುವ ಅಥವಾ ಬಿಡುವ ವಿಚಾರ ವರಿಷ್ಠರಿಗೆ
ಸೇರಿದ್ದು, ಎಲ್ಲವನ್ನೂ ಅವರೇ ನಿರ್ಧರಿಸುತ್ತಾರೆ.
ಆದರೆ, ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಿಸಿ, ನಿನ್ನನ್ನು ಮಂತ್ರಿ
ಮಾಡುತ್ತೇನೆ ಎಂದು ಯಡಿಯೂರಪ್ಪ ಭರವಸೆ ನೀಡಿದರು ಎಂದು ಮೂಲಗಳು ಹೇಳಿವೆ.
(ಮಾಹಿತಿ ಕೃಪೆ ಪ್ರಜಾವಾಣಿ...)
ಕೊವಿಡ್-19 ಪರಿಹಾರದ ಹಣ ಕಾರ್ಮಿಕರ ಖಾತೆಗೆ ಜಮಾ ಮಾಡಲಾಗಿದೆ: ಹೈಕೋರ್ಟ್ ಗೆ ಸರ್ಕಾರದ ಮಾಹಿತಿ
1 ಲಕ್ಷಕ್ಕೂ ಹೆಚ್ಚು ಭಾರತೀಯರ ರಾಷ್ಟ್ರೀಯ ಗುರುತುಚೀಟಿಗಳು 'ಡಾರ್ಕ್ ವೆಬ್' ನಲ್ಲಿ ಮಾರಾಟಕ್ಕೆ!
ಈ ಮಾಹಿತಿಗಳನ್ನು ಡಾರ್ಕ್
ವೆಬ್‌ನಲ್ಲಿ ಮಾರಾಟಕ್ಕಿರಿಸಿರುವ ಹ್ಯಾಕರ್ ಇವುಗಳನ್ನು ಭಾರತದ ವಿವಿಧ ಸ್ಥಳಗಳಿಂದ
ಪಡೆದುಕೊಂಡಿದ್ದಾನೆ ಎನ್ನಲಾಗಿದೆ ಎಂದಿರುವ 'ಸೈಬಲ್', ಸೈಬರ್ ಕ್ರಿಮಿನಲ್‌ಗಳಿಂದ
ವೈಯಕ್ತಿಕ ಮಾಹಿತಿಗಳ ಸೋರಿಕೆಯು ಗುರುತು ಕಳ್ಳತನ, ಹಗರಣಗಳು ಮತ್ತು ಕಾರ್ಪೊರೇಟ್
ಬೇಹುಗಾರಿಕೆಯಂತಹ ವಿವಿಧ ದುಷ್ಕೃತ್ಯಗಳಿಗೆ ಕಾರಣವಾಗುತ್ತದೆ.
ಹಲವಾರು ಕ್ರಿಮಿನಲ್‌ಗಳು ವಂಚಕ ಚಟುವಟಿಕೆಗಳಿಗಾಗಿ ದೂರವಾಣಿ ಕರೆಯ
ಮೂಲಕ ಜನರ ವಿಶ್ವಾಸವನ್ನು ಗಳಿಸಲು ಐಡಿಗಳಲ್ಲಿಯ ವೈಯಕ್ತಿಕ ವಿವರಗಳನ್ನು
ಬಳಸಿಕೊಳ್ಳುತ್ತಾರೆ ಎಂದು ಕಳವಳವನ್ನು ವ್ಯಕ್ತಪಡಿಸಿದೆ.
'ಸೈಬಲ್' ನ
ಸಂಶೋಧಕರು ಹ್ಯಾಕರ್‌ನಿಂದ ಸುಮಾರು 1,000 ಸ್ಕಾನ್ಡ್ ಐಡಿಗಳನ್ನು ಖರೀದಿಸಿದ್ದು,ಇವು
ಭಾತೀಯರಿಗೆ ಸೇರಿದ್ದು ಎನ್ನುವುದು ದೃಢಪಟ್ಟಿದೆ. ಥರ್ಡ್ ಪಾರ್ಟಿಯಿಂದ ಈ ಮಾಹಿತಿಗಳು
ಸೋರಿಕೆಯಾಗಿವೆ ಎನ್ನುವುದನ್ನು ಪ್ರಾಥಮಿಕ ವಿಶ್ಲೇಷಣೆಗಳು ಸೂಚಿಸಿವೆ. ಸರಕಾರಿ ದತ್ತಾಂಶ
ಕೋಶಗಳಿಂದ ಈ ಮಾಹಿತಿಗಳು ಸೋರಿಕೆಯಾಗಿರುವ ಯಾವುದೇ ಸುಳಿವು ಕಂಡು ಬಂದಿಲ್ಲ. ಯಾವುದೋ
ಕಂಪನಿಯ ಡಾಟಾಬೇಸ್‌ನ 'ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ)'ವಿಭಾಗದಿಂದ ಈ
ಮಾಹಿತಿಗಳು ಸೋರಿಕೆಯಾಗಿರಬಹುದು ಎನ್ನುವುದನ್ನು ಸ್ಕಾನ್ಡ್ ಐಡಿ ದಾಖಲೆಗಳು
ಬೆಟ್ಟುಮಾಡುತ್ತಿವೆ ಎಂದು 'ಸೈಬಲ್' ಹೇಳಿದೆ.
ದೂರವಾಣಿ, ಇ-ಮೇಲ್ ಅಥವಾ
ಎಸ್‌ಎಂಎಸ್ ಮೂಲಕ ವೈಯಕ್ತಿಕ ವಿವರಗಳನ್ನು,ವಿಶೇಷವಾಗಿ ಹಣಕಾಸು ಮಾಹಿತಿಗಳನ್ನು
ಹಂಚಿಕೊಳ್ಳದಂತೆ ಸೈಬಲ್ ಸಾರ್ವಜನಿಕರಿಗೆ ಸೂಚಿಸಿದೆ.(ಮಾಹಿತಿ ಕೃಪೆ ವಾರ್ತಾಭಾರತಿ)
Tuesday, June 2, 2020
ಕೊರೊನಾ ಪತ್ತೆಹಚ್ಚುವಲ್ಲಿ ಮೈಲಿಗಲ್ಲು: ರೋಗ ಪತ್ತೆ ಹಚ್ಚಲು ಜಸ್ಟ್ 10 ನಿಮಿಷ ಸಾಕು
ಕೊರೊನಾದ ಜೊತೆ ಬದುಕುವುದು ಕಲಿಯಬೇಕು ಎನ್ನುತ್ತಿರುವಾಗಲೇ ಕೊರೊನಾವನ್ನು ಮೆಟ್ಟಿ ನಿಲ್ಲುವ ಪ್ರಯತ್ನಗಳು ಕೂಡ ಯಶಸ್ಸಿನ ದಿಕ್ಕನ್ನು ಫಾಲೋ ಮಾಡುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ವಾಷಿಂಗ್ಟನ್ನ ವಿಜ್ಞಾನಿಗಳು ಕೇವಲ 10 ನಿಮಿಷದಲ್ಲಿ ಕೊರೊನಾ ಇದೆಯಾ ಇಲ್ಲವಾ ಎಂದು ಕಂಡುಹಿಡಿಯುವ ಟೆಸ್ಟಿಂಗ್ ಕಿಟ್ ರೆಡಿಮಾಡಿದ್ದಾರೆ.
ದೇಹದಲ್ಲಿ ಕೊರೊನಾ ಸೋಂಕು ಇದೆಯಾ ಎನ್ನುವುದನ್ನು ಈ ಯಂತ್ರ ಕೇವಲ 10 ನಿಮಿಷದಲ್ಲಿ ಕಂಡುಹಿಡಿಯಬಲ್ಲದಂತೆ. ಕೊರೊನಾ ವೈರಸ್ ಇದ್ದಾಗ ಆಗುವ ಬಣ್ಣ ಬದಲಾವಣೆಯನ್ನು ಪತ್ತೆಹಚ್ಚಬಲ್ಲ ಪರೀಕ್ಷಾ ಸಾಧನವನ್ನು ಸಂಶೋಧಕರು ತಯಾರಿಸಿದ್ದಾರೆ. ಇಲ್ಲಿನ ಎಸಿಎಸ್ ನ್ಯಾನೋ ಪತ್ರಿಕೆಯಲ್ಲಿ , ಯೂನಿವರ್ಸಿಟಿ ಆಫ್ ಮರ್ಯಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ನ ಸಂಶೋಧಕರು ಪ್ರಕಟಿಸಿರುವ ವರದಿಯಲ್ಲಿ ಈ ವಿಷಯ ತಿಳಿಸಲಾಗಿದೆ.
ನಮ್ಮ ಪ್ರಾಯೋಗಿಕ ಸಂಶೋಧನೆಯ ಪ್ರಕಾರ, ಈ ಪರೀಕ್ಷೆಯು ವ್ಯಕ್ತಿಯ ಸ್ವ್ಯಾಬ್ನ ಸ್ಯಾಂಪಲ್ನಲ್ಲಿ ಇರಬಹುದಾದ ವೈರಸ್ನ ಆರ್ಎನ್ಎ ಮೆಟಿರಿಯಲ್ನ್ನು ಪತ್ತೆ ಹಚ್ಚಲಿದೆ. ಸೋಂಕು ತಗುಲಿದ ಮೊದಲನೇ ದಿನದಂದೆ, ಸೋಂಕಿನ ಇರುವಿಕೆಯನ್ನು ಪತ್ತೆ ಹಚ್ಚಬಲ್ಲದು. ಆದಾಗ್ಯೂ ಈ ಸಂಬಂಧ ಇನ್ನೊಂದಿಷ್ಟು ಅಧ್ಯಯನದ ಅಗತ್ಯವಿದೆ ಅಂತ ಸಂಶೋಧನೆಯ ಮುಖ್ಯಸ್ಥರಾದ ಡೀಪಾಂಜನ್ ಪಾನ್ ಹೇಳಿದ್ದಾರೆ.
(ಮಾಹಿತಿ ಕೃಪೆ ನ್ಯೂಸ್ ಫಾಸ್ಟ್ ಲೈವ್)
ವ್ಯಕ್ತಿಯ ಕಾಮದಾಟಕ್ಕೆ ಅಪ್ರಾಪ್ತೆ ಜೀವನ ಬಲಿ: ಹೆಣ್ಣು ಮಗುವಿಗೆ ಜನ್ಮ ನೀಡಿದ 13ರ ಬಾಲಕಿ
ವಿಜಯಪುರ: ವ್ಯಕ್ತಿಯೊಬ್ಬನ ಕಾಮದಾಟದಿಂದ ಅಪ್ರಾಪ್ತ ಬಾಲಕಿಯ ಜೀವನ ನರಕದಲ್ಲಿ ಸಿಲುಕಿದಂತಾಗಿದೆ. 13 ವರ್ಷದ ಬಾಲಕಿ ಮೇಲಿನ ನಿರಂತರ ಅತ್ಯಾಚಾರದಿಂದಾಗಿ ಇದೀಗ ಆಕೆ ಹೆಣ್ಣು ಮಗುವಿನ ತಾಯಿಯಾಗಿದ್ದಾಳೆ.
ಸಿಂದಗಿ ತಾಲೂಕಿನ ಗೊರವಗುಂಡಗಿ ಗ್ರಾಮದ ಶರಣಬಸು ಅವರಾದಿ (35) ನೀಚ ಕೃತ್ಯವೆಸಗಿದ ಕಾಮುಕ. ಬಸವನ ಬಾಗೇವಾಡಿ ಮೂಲದ ತಾಯಿ ತನ್ನ ಮೂವರು ಮಕ್ಕಳೊಂದಿಗೆ ಬೆಂಗಳೂರಿನ ಕೆಂಗೇರಿ ಬಳಿಯ ಅನಿಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಕೂಲಿ-ನಾಲಿ ಮಾಡಿ ಜೀವನ ಸಾಗಿಸುತ್ತಿದ್ದಳು. ಇತ್ತ ತಾಯಿ ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ಆರೋಪಿ ಶರಣಬಸು ಬಾಲಕಿಯೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದ.
ಅತ್ಯಾಚಾರದ ವಿಚಾರ ಯಾರಿಗೂ ಹೇಳದಂತೆ ಅಪ್ರಾಪ್ತೆಗೆ ಆರೋಪಿ ಜೀವ ಬೆದರಿಕೆ ಹಾಕಿದ್ದಾನೆ. ಆದರೆ, ಈ ವಿಚಾರ ತಾಯಿಗೆ ಗೊತ್ತಾದ ಬಳಿಕವೂ ಶರಣಬಸು ಆಕೆಗೂ ಬೆದರಿಕೆಯೊಡ್ಡಿದ್ದಾನೆ. ಆದರೆ, ಸತ್ಯ ಎಷ್ಟು ದಿನ ಅಂತ ಮರೆಮಾಚಲು ಸಾಧ್ಯ. ಹೆರಿಗೆ ಬಳಿಕ ಶರಣಬಸು ಕರ್ಮಕಾಂಡವೆಲ್ಲವೂ ಬಟಾಬಯಲಾಗಿದೆ. ನಿರಂತರ ಅತ್ಯಾಚಾರ ಪರಿಣಾಮ ಮೇ 30ರಂದು ಬಾಲಕಿ ವಿಜಯಪುರದ ಸಿಂದಗಿ ತಾಲೂಕು ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಇದೀಗ ಸಿಂದಗಿ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಸಂತ್ರಸ್ತ ಬಾಲಕಿ ತಾಯಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಶರಣಬಸು ಅವರಾದಿಯ ಪತ್ತೆಗೆ ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್)
(ಮಾಹಿತಿ ಕೃಪೆ ವಿಜಯವಾಣಿ....)
ಶಾಲೆ ಪುನಾರಂಭ: ಎಸ್ ಡಿ ಎಂಸಿ , ಪೋಷಕರ ಜೊತೆ ಚರ್ಚಿಸಿ ತೀರ್ಮಾನ: ಸುರೇಶ್ ಕುಮಾರ್
ಬೆಂಗಳೂರು: ರಾಜ್ಯದಲ್ಲಿ ಹಂತ ಹಂತವಾಗಿ ಶಾಲೆಗಳನ್ನು ಪುನರಾರಂಭಿಸುವ ಸಾಧಕ- ಬಾಧಕಗಳ ಕುರಿತು ಪೋಷಕರು ಮತ್ತು ಸಂಬಂಧಿಸಿದ ಪಾಲುದಾರರ ಸಭೆಗಳನ್ನು ಪ್ರತಿ ಶಾಲೆಯ ಮಟ್ಟದಲ್ಲಿ ಆಯೋಜಿಸಿ ಅಭಿಪ್ರಾಯ ಪಡೆಯಲು ತೀರ್ಮಾನಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಮೇ 30ರಂದು ಹೊರಡಿಸಿರುವ ಮಾರ್ಗಸೂಚಿಯಂತೆ ಶಾಲಾಗಳ ಪುನರಾರಂಭಕ್ಕೆ ಸೂಕ್ತ ಸಮಾಲೋಚನೆ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಎಲ್ಲಾ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಇದೇ ತಿಂಗಳ 10 ರಿಂದ 12ರ ಒಳಗಾಗಿ ಪೋಷಕರು_ಮತ್ತು_ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರ ಸಭೆ ನಡೆಸಿ ಚರ್ಚೆ ನಡೆಸುವಂತೆ ಸೂಚಿಸಲಾಗಿದೆ ಎಂದಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಶಾಲೆಗಳನ್ನು ಪುನರಾರಂಭ ಮಾಡಬಹುದಾದ ದಿನಾಂಕ, ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಧಾನ, ಶಾಲೆಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಚರ್ಚೆ ನಡೆಸಿ ಸರ್ಕಾರಕ್ಕೆ ಅಭಿಪ್ರಾಯ ತಿಳಿಸುವಂತೆ ಮುಖ್ಯೋಪಧ್ಯಾಯರಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
(ಮಾಹಿತಿ ಕೃಪೆ ಕನ್ನಡಪ್ರಭ...)
ಕೊರೋನಾ ಲಾಕ್ ಡೌನ್ ಗೆ 'ಬಾಡಿ ಹೋದ ಹೂಗಳು': ಕೊಳ್ಳುವವರಿಲ್ಲದೆ 360 ಕೋಟಿ ರೂ. ನಷ್ಟ
ಬೆಂಗಳೂರು: ಕೋವಿಡ್-19 ಹೂ ಬೆಳೆಗಾರರನ್ನು ಮತ್ತು ಮಾರಾಟಗಾರರನ್ನು ನಿಜಕ್ಕೂ ಸಂಕಷ್ಟಕ್ಕೆ ತಳ್ಳಿದೆ. ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿರುವ ಸುಮಾರು 2 ಸಾವಿರ ಹೂ ಬೆಳೆಗಾರರು ಕಳೆದ ಮೂರು ತಿಂಗಳಿನಿಂದ ಸುಮಾರು 360 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಬೇಸಿಗೆ ಕಾಲದಲ್ಲಿ ಮದುವೆ ಇನ್ನಿತರ ಶುಭ ಸಮಾರಂಭಗಳು ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ರದ್ದಾಗಿರುವುದರಿಂದ ಮಾರ್ಚ್ ತಿಂಗಳಿನಿಂದ ಬೆಳೆದ ಹೂವುಗಳನ್ನು ಕೊಳ್ಳುವವರಿಲ್ಲದಾಗಿದೆ. ಇನ್ನು ಸರ್ಕಾರ ಮದುವೆ ಮಾಡಲು ಅನುಮತಿ ಕೊಟ್ಟರೂ ಸಹ 50ಕ್ಕಿಂತ ಹೆಚ್ಚು ಅತಿಥಿಗಳನ್ನು ಸೇರಿಸುವಂತಿಲ್ಲ,ಸರಳವಾಗಿ ಮಾಡಬೇಕು ಎಂದು ಹೇಳಿರುವುದು, ಅನೇಕ ಕಡೆಗಳಲ್ಲಿ ಉತ್ಸವ, ಜಾತ್ರೆ, ಇನ್ನಿತರ ಕಾರ್ಯಕ್ರಮಗಳನ್ನು ರದ್ದುಪಡಿಸಿರುವುದು ಹೂ ಬೆಳೆಗಾರರು, ಕೃಷಿಕರು ತಲೆ ಮೇಲೆ ಕೈ ಹೊತ್ತು ಕೂರುವಂತೆ ಮಾಡಿದೆ. ಒಂದು ಎಕರೆ ಪ್ರದೇಶದಲ್ಲಿ 2 ಲಕ್ಷ ಹಣ ಹಾಕಿ ಹೂ ಬೆಳೆದರೆ ಬೇರೆ ಸಮಯಗಳಲ್ಲಾದರೆ ಅದನ್ನು ಮಾರಾಟ ಮಾಡಿ ಕೈಗೆ 4ರಿಂದ 5 ಲಕ್ಷ ರೂಪಾಯಿ ಸಿಗುತ್ತಿತ್ತು. ಆದರೆ ಈಗ ಕಳೆದ ಎರಡು-ಮೂರು ತಿಂಗಳಿನಿಂದ ಕೊಳ್ಳುವವರಿಲ್ಲದೆ ಹಲವು ರೈತರು ಬೆಳೆದ ಹೂಗಳನ್ನು ಕಿತ್ತು ಬಿಸಾಕಿದರೆ ಇನ್ನು ಹಲವರು ಅದರ ಮೇಲೆ ಟ್ರ್ಯಾಕ್ಟರ್ ಹರಿಸಿ ನಾಶಪಡಿಸಿದ್ದಾರೆ.ಕಳೆದ ಎರಡು ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ಹೂ ಬೆಳೆಗಾರರು ಬಾಗಿಲು ಹಾಕಿದ್ದಾರೆ ಎಂದು ದಕ್ಷಿಣ ಭಾರತ ಹೂ ಬೆಳೆಗಾರರ ಒಕ್ಕೂಟದ ನಿರ್ದೇಶಕ ಶ್ರೀಕಾಂತ್ ಬೊಲಪಳ್ಳಿ ಹೇಳುತ್ತಾರೆ.
ಬೆಂಗಳೂರು ಸುತ್ತಮುತ್ತ 2,500 ಎಕರೆ ಪ್ರದೇಶದಲ್ಲಿ ಬೆಳೆಗಾರರು ಬೆಳೆದ ಗುಲಾಬಿ, ಸೇವಂತಿಗೆ, ಮಲ್ಲಿಗೆ, ಕನಕಾಂಬರ, ಜರ್ಬೆರಾ ಮೊದಲಾದವುಗಳನ್ನು ಖರೀದಿಸುವವರೇ ಇಲ್ಲವಾಗಿದೆ. ಲಾಭ ಸಿಗುವುದು ಬಿಡಿ, ಹಾಕಿದ ಬಂಡವಾಳ ವಾಪಸ್ ಬಂದಿಲ್ಲ ಎನ್ನುತ್ತಾರೆ ದೊಡ್ಡಬಳ್ಳಾಪುರದ ರೈತ ಮಹಿಳೆ ಮಂಜುಶ್ರೀ.
ಬಹುತೇಕ ರೈತರಿಗೆ ನಷ್ಟವಾಗಿದೆ, ರೈತರ ವಿದ್ಯುತ್ ಬಿಲ್ ಪಾವತಿ ಮನ್ನಾ ಮಾಡಿ ಎಂದು ಹೂ ಬೆಳೆಗಾರರ ಒಕ್ಕೂಟ ಡಿಸಿಎಂ ಅಶ್ವಥನಾರಾಯಣ ಮತ್ತು ತೋಟಗಾರಿಕೆ ಇಲಾಖೆ ಸಚಿವ ನಾರಾಯಣ ಗೌಡ ಅವರಿಗೆ ಮನವಿ ಮಾಡಿತ್ತು.
(ಮಾಹಿತಿ ಕೃಪೆ ಕನ್ನಡಪ್ರಭ....)
ಜಿಲ್ಲಾಧಿಕಾರಿಗಳು ತಾಲ್ಲೂಕು ಕೇಂದ್ರಗಳಲ್ಲಿ ವಾಸ ಮಾಡಬೇಕು: ಬಿ.ಎಸ್.ಯಡಿಯೂರಪ್ಪ
ಬೆಂಗಳೂರು: ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ತಾಲ್ಲೂಕುಗಳನ್ನು ವಿಭಾಗಿಸಿಕೊಂಡು ತಾಲ್ಲೂಕು ಕೇಂದ್ರಗಳಲ್ಲಿ ವಾಸ ಮಾಡಿ ಕೋವಿಡ್ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದರು.
ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅವರು ಇಂದು ಕಲಬುರ್ಗಿ, ವಿಜಯಪುರ, ಉಡುಪಿ, ಯಾದಗಿರಿ, ರಾಯಚೂರು ಮತ್ತು ಬೆಳಗಾವಿ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವೀಡಿಯೋ ಸಂವಾದದಲ್ಲಿ ಮಾತನಾಡಿದರು.
ತಾಲ್ಲೂಕು ಕೇಂದ್ರಗಳಲ್ಲಿಯೇ ಮೊಕ್ಕಾಂ ಹೂಡಿ ಮೇಲ್ವಿಚಾರಣೆ ಮಾಡುವಂತೆ ಸೂಚಿಸಿದ ಮುಖ್ಯಮಂತ್ರಿಗಳು ಜೂನ್ 08 ರಿಂದ ಸಡಲಿಕೆಗಳನ್ನು ಮಾಡುತ್ತಿರುವುದರಿಂದ ಕಟ್ಟೆಚ್ಚರ ವಹಿಸಿ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು. ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ವಲಸಿಗರಿಂದ ಕೋವಿಡ್ 19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಣಕ್ಕೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಕೋವಿಡ್ 19 ಪರೀಕ್ಷಾ ಕಿಟ್‍ಗಳ ಪೂರೈಕೆಯಲ್ಲಿ ವ್ಯತ್ಯಾಸವಾಗಬಾರದು. ಗೃಹ ಬಂಧನದಲ್ಲಿದ್ದವರು (ಹೋಮ್ ಕ್ವಾರಂಟೈನ್) ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಬೇಕು. ಪೋಲೀಸ್ ಇಲಾಖೆ ವತಿಯಿಂದ ಗೃಹ ಬಂಧನದಲ್ಲಿರುವವರ ಮನೆಯ ಬಳಿ ಪೇದೆಗಳನ್ನು ನಿಯೋಜಿಬೇಕಲ್ಲದೆ. ಗ್ರಾಮ ಪಂಚಾಯತಿಗಳಲ್ಲಿ ಟಾಸ್ಕ್ ಫೋರ್ಸ್ ರಚಿಸಿ, ಇವರ ಬಗ್ಗೆ ನಿಗಾ ವಹಿಸಬೇಕು. ಗ್ರಾಮ ಪಂಚಾಯತಿಗಳ ಸದಸ್ಯರಿಗೆ ಈ ಬಗ್ಗೆ ತರಬೇತಿಯನ್ನೂ ನೀಡಲಾಗಿದ್ದು, ಬೂತ್ ಮಟ್ಟದ ತಂಡಗಳೂ ಪ್ರತಿ ದಿನ ವರದಿ ಸಲ್ಲಿಸುವಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಪ್ರತಿ ಗ್ರಾಮ ಹಾಗೂ ನಗರಗಳಲ್ಲಿ ವಾರ್ಡ್ ಮಟ್ಟದಲ್ಲಿ ಕಾವಲು ಸಮಿತಿಗಳನ್ನು ರಚಿಸಬೇಕಲ್ಲದೆ, ಈ ಸಮಿತಿಗಳು ಕ್ರಿಯಾಶೀಲವಾಗಿದ್ದು, ಹೋಮ್ ಕ್ವಾರಂಟೈನ್ ಉಲ್ಲಂಘನೆಯಾದರೆ ಎಫ್.ಐ.ಆರ್ ದಾಖಲಿಸಬೇಕು ಎಂದು ನಿರ್ದೇಶಿಸಿದರು. ಗಡಿ ಭಾಗಗಳಿರುವ ಜಿಲ್ಲೆಗಳು ಕಟ್ಟುನಿಟ್ಟಾಗಿ ಗಡಿ ಪ್ರದೇಶಗಳನ್ನು ಕಾಯ್ದು, ಅಕ್ರಮ ಪ್ರವೇಶವನ್ನು ತಡೆಯಬೇಕು. ಮೃತ ದೇಹಗಳನ್ನು ಯಾವುದೇ ಕಾರಣಕ್ಕೂ ರಾಜ್ಯದೊಳಗೆ ತರದಂತೆ ನೋಡಿಕೊಳ್ಳಬೇಕೆಂದು ನಿರ್ದೇಶಿಸಿದರು.
ಎಸ್.ಎಸ್.ಎಲ್.ಸಿ / ಪಿ.ಯು.ಸಿ ಪರೀಕ್ಷಾ ದಿನಾಂಕಗಳು ನಿಗದಿಯಾಗಿದ್ದು, ಪರೀಕ್ಷೆಗಳು ಸುಗಮವಾಗಿ ನಡೆಯುವಂತೆ ಕ್ರಮ ವಹಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ ಅಖ್ತರ್ ಹಾಗೂ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಉಪಸ್ಥಿತರಿದ್ದರು.
(ಮಾಹಿತಿ ಕೃಪೆ ಉದಯವಾಣಿ)
Sunday, May 31, 2020
ಹಾಲು ಕರೆಯುವಾಗ ಸಿಡಿಲು ಬಡಿದು ಹಸು ಸೇರಿದಂತೆ ತಂದೆ, ಇಬ್ಬರು ಪುತ್ರಿಯರ ದುರ್ಮರಣ
ಕೋಲಾರ: ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಭಾರಿ ಮಳೆಗೆ ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಧಾರುಣವಾಗಿ ಸಾವಿಗೀಡಾಗಿದ್ದಾರೆ.
ಕೋಲಾರ ಸಮೀಪದ ಆಂಧ್ರ ಗಡಿ ಚಿತ್ತೂರು ಜಿಲ್ಲೆಯ ಪೆದ್ದಪಂಜಾಣಿ ಮಂಡಲಂನ ತಿಪ್ಪಿರೆಡ್ಡಿಪಲ್ಲಿಯಲ್ಲಿ ದುರಂತ ಸಂಭವಿಸಿದೆ. ಸಿಡಿಲು ಬಡಿದು ತಂದೆ ಹಾಗೂ ಇಬ್ಬರು ಪುತ್ರಿಯರು ಮತ್ತು ಒಂದು ಹಸು ಮೃತಪಟ್ಟಿದೆ.
ತಂದೆ ರಾಮಕೃಷ್ಣ (52) ಮಕ್ಕಳಾದ ರಮಾದೇವಿ (24) ಹಾಗೂ ಮೀನಾ (22) ಮೃತ ದುರ್ದೈವಿಗಳು. ತೋಟದ ಬಳಿ ಹಸುವಿನಲ್ಲಿ ಹಾಲು ಕರೆಯುತ್ತಿದ್ದ ವೇಳೆ ಸಿಡಿಲು ಬಡಿದು ದುರ್ಘಟನೆ ಸಂಭವಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸಿಡಿಲಾಘಾತದಿಂದ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. (ದಿಗ್ವಿಜಯ ನ್ಯೂಸ್)
(ಮಾಹಿತಿ ಕೃಪೆ ಪ್ರಜಾವಾಣಿ...)
Subscribe to:
Posts (Atom)