1 ಲಕ್ಷಕ್ಕೂ ಹೆಚ್ಚು ಭಾರತೀಯರ ರಾಷ್ಟ್ರೀಯ ಗುರುತುಚೀಟಿಗಳು 'ಡಾರ್ಕ್ ವೆಬ್' ನಲ್ಲಿ ಮಾರಾಟಕ್ಕೆ!
ಹೊಸದಿಲ್ಲಿ,ಜೂ.3: ಆಧಾರ್, ಪಾನ್‌ಕಾರ್ಡ್ ಮತ್ತು ಪಾಸ್ ಪೋರ್ಟ್ ಸೇರಿದಂತೆ ಒಂದು
ಲಕ್ಷಕ್ಕೂ ಅಧಿಕ ಭಾರತೀಯರ ರಾಷ್ಟ್ರೀಯ ಗುರುತು ಚೀಟಿ (ಐಡಿ)ಗಳ ಸ್ಕ್ಯಾನ್ಡ್
ಪ್ರತಿಗಳನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟಕ್ಕಿಡಲಾಗಿದೆ ಎಂದು ಸೈಬರ್ ಗುಪ್ತಚರ ಸಂಸ್ಥೆ
ಸೈಬಲ್ ಬುಧವಾರ ತಿಳಿಸಿದೆ. ಥರ್ಡ್ ಪಾರ್ಟಿಯಿಂದ ಈ ಮಾಹಿತಿಗಳು ಸೋರಿಕೆಯಾಗಿರುವಂತೆ
ಕಂಡು ಬರುತ್ತಿದ್ದು, ಸರಕಾರದ ವ್ಯವಸ್ಥೆಯ ಮೂಲಕವಲ್ಲ ಎಂದು ಸೈಬಲ್ ತನ್ನ ವರದಿಯಲ್ಲಿ
ಹೇಳಿದೆ.
ಈ ಮಾಹಿತಿಗಳನ್ನು ಡಾರ್ಕ್
ವೆಬ್‌ನಲ್ಲಿ ಮಾರಾಟಕ್ಕಿರಿಸಿರುವ ಹ್ಯಾಕರ್ ಇವುಗಳನ್ನು ಭಾರತದ ವಿವಿಧ ಸ್ಥಳಗಳಿಂದ
ಪಡೆದುಕೊಂಡಿದ್ದಾನೆ ಎನ್ನಲಾಗಿದೆ ಎಂದಿರುವ 'ಸೈಬಲ್', ಸೈಬರ್ ಕ್ರಿಮಿನಲ್‌ಗಳಿಂದ
ವೈಯಕ್ತಿಕ ಮಾಹಿತಿಗಳ ಸೋರಿಕೆಯು ಗುರುತು ಕಳ್ಳತನ, ಹಗರಣಗಳು ಮತ್ತು ಕಾರ್ಪೊರೇಟ್
ಬೇಹುಗಾರಿಕೆಯಂತಹ ವಿವಿಧ ದುಷ್ಕೃತ್ಯಗಳಿಗೆ ಕಾರಣವಾಗುತ್ತದೆ.
ಹಲವಾರು ಕ್ರಿಮಿನಲ್‌ಗಳು ವಂಚಕ ಚಟುವಟಿಕೆಗಳಿಗಾಗಿ ದೂರವಾಣಿ ಕರೆಯ
ಮೂಲಕ ಜನರ ವಿಶ್ವಾಸವನ್ನು ಗಳಿಸಲು ಐಡಿಗಳಲ್ಲಿಯ ವೈಯಕ್ತಿಕ ವಿವರಗಳನ್ನು
ಬಳಸಿಕೊಳ್ಳುತ್ತಾರೆ ಎಂದು ಕಳವಳವನ್ನು ವ್ಯಕ್ತಪಡಿಸಿದೆ.
'ಸೈಬಲ್' ನ
ಸಂಶೋಧಕರು ಹ್ಯಾಕರ್‌ನಿಂದ ಸುಮಾರು 1,000 ಸ್ಕಾನ್ಡ್ ಐಡಿಗಳನ್ನು ಖರೀದಿಸಿದ್ದು,ಇವು
ಭಾತೀಯರಿಗೆ ಸೇರಿದ್ದು ಎನ್ನುವುದು ದೃಢಪಟ್ಟಿದೆ. ಥರ್ಡ್ ಪಾರ್ಟಿಯಿಂದ ಈ ಮಾಹಿತಿಗಳು
ಸೋರಿಕೆಯಾಗಿವೆ ಎನ್ನುವುದನ್ನು ಪ್ರಾಥಮಿಕ ವಿಶ್ಲೇಷಣೆಗಳು ಸೂಚಿಸಿವೆ. ಸರಕಾರಿ ದತ್ತಾಂಶ
ಕೋಶಗಳಿಂದ ಈ ಮಾಹಿತಿಗಳು ಸೋರಿಕೆಯಾಗಿರುವ ಯಾವುದೇ ಸುಳಿವು ಕಂಡು ಬಂದಿಲ್ಲ. ಯಾವುದೋ
ಕಂಪನಿಯ ಡಾಟಾಬೇಸ್‌ನ 'ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ)'ವಿಭಾಗದಿಂದ ಈ
ಮಾಹಿತಿಗಳು ಸೋರಿಕೆಯಾಗಿರಬಹುದು ಎನ್ನುವುದನ್ನು ಸ್ಕಾನ್ಡ್ ಐಡಿ ದಾಖಲೆಗಳು
ಬೆಟ್ಟುಮಾಡುತ್ತಿವೆ ಎಂದು 'ಸೈಬಲ್' ಹೇಳಿದೆ.
ದೂರವಾಣಿ, ಇ-ಮೇಲ್ ಅಥವಾ
ಎಸ್‌ಎಂಎಸ್ ಮೂಲಕ ವೈಯಕ್ತಿಕ ವಿವರಗಳನ್ನು,ವಿಶೇಷವಾಗಿ ಹಣಕಾಸು ಮಾಹಿತಿಗಳನ್ನು
ಹಂಚಿಕೊಳ್ಳದಂತೆ ಸೈಬಲ್ ಸಾರ್ವಜನಿಕರಿಗೆ ಸೂಚಿಸಿದೆ. (ಮಾಹಿತಿ ಕೃಪೆ ವಾರ್ತಾಭಾರತಿ )
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ