
ಕನ್ನಡಿಗರ ಹೃದಯ ಕದ್ದ ಮೋಹಕ ತಾರೆ, ಸಕ್ಕರೆ ನಾಡು ಮಂಡ್ಯದ ಮಾಜಿ ಸಂಸದೆಯೂ ಆಗಿದ್ದ ರಮ್ಯಾ ಎಲ್ಲಿಗೆ ಹೋದ್ರು? ಅವರು ಎಲ್ಲಿದ್ದಾರೆ? ಹೇಗಿದ್ದಾರೆ? ಅನ್ನೋ ಸಾಲು ಸಾಲು ಪ್ರಶ್ನೆಗಳು ಅವರ ಅಭಿಮಾನಿಗಳ ವಲಯದಲ್ಲಿ ಕೇಳಿ ಬರ್ತಾನೇ ಇತ್ತು. ಇದೀಗ ರಮ್ಯಾ ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಿದ್ದಾರೆ.
ರಮ್ಯಾ ಫೇಸ್‌ಬುಕ್ ಆಯಕ್ಟಿವೇಟ್!
ಕಳೆದ
ಕೆಲದಿನಗಳ ಹಿಂದೆ ತಮ್ಮ ಟ್ವಿಟರ್‌ಅನ್ನು ರಮ್ಯಾ ಆಯಕ್ಟಿವೇಟ್ ಮಾಡಿದ್ದರು. ಇದೀಗ
ಫೇಸ್‌ಬುಕ್‌ನಲ್ಲಿ ಪೋಸ್ಟ್ ಒಂದನ್ನು ಹಾಕುವ ಮೂಲಕ ರಮ್ಯಾ ಮತ್ತೆ
ಪ್ರತ್ಯಕ್ಷರಾಗಿದ್ದಾರೆ.
ಕಳೆದ ವರ್ಷ ಮೇ 29ರಂದು ಕೊನೆ ಪೋಸ್ಟ್ ಹಾಕಿದ್ದ ರಮ್ಯಾ, ಬಳಿಕ
ಯಾವುದೇ ರೀತಿಯ ಪೋಸ್ಟ್‌ಗಳನ್ನು ಶೇರ್ ಮಾಡಿರಲಿಲ್ಲ. ಇದೀಗ ಸಡನ್ ಎಂಟ್ರಿ ಕೊಟ್ಟಿರೋ
ಸ್ಯಾಂಡಲ್‌ವುಡ್ ಪದ್ಮಾವತಿ, ಕೇರಳದಲ್ಲಿ ಆನೆಯೊಂದಕ್ಕೆ ಸಿಡಿಮದ್ದು ತಿನ್ನಿಸಿ
ಹತ್ಯೆಗೈದ ಪ್ರಕರಣದ ಬಗ್ಗೆ ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ.
ನೀವೆಲ್ಲರೂ
ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೀರಿ ಮತ್ತು ಸುರಕ್ಷಿತವಾಗಿರುತ್ತೀರಿ ಎಂದು
ಭಾವಿಸುತ್ತೇನೆ. ಅದರ ಜೊತೆಗೆ ಸ್ವಲ್ಪ ಸಮಯ ತೆಗೆದುಕೊಂಡು ಈ ಅರ್ಜಿಗೆ ಸಹಿ ಹಾಕಿ ಅಂತಾ
ಮನವಿ ಮಾಡಿದ್ದಾರೆ. ಆನೆಗೆ ಸಿಡಿಮದ್ದು ತಿನ್ನಿಸಿ ಹತ್ಯೆಗೈದಿರುವ ಆರೋಪಿಗಳ ವಿರುದ್ಧ
ಕ್ರಿಮಿನಲ್ ಕೇಸ್ ದಾಖಲಿಸಲು ಇರುವ ಲಿಂಕ್ ಒಂದನ್ನು ಶೇರ್ ಮಾಡಿದ್ದಾರೆ. ಈ ಮೂಲಕ
ಆನೆಯ ಸಾವಿಗೆ ಮರುಗಿರುವ ರಮ್ಯಾ, ಆನೆ ಹತ್ಯೆಗೈದ ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸ್
ದಾಖಲಿಸಲು ಅರ್ಜಿಗೆ ಎಲ್ಲರೂ ಸಹಿ ಮಾಡಿ ಎಂದಿದ್ದಾರೆ.ತೆರೆ ಮರೆಗೆ ಸರಿದಿದ್ದ 'ಪದ್ಮಾವತಿ'
ಕಳೆದ ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಕಡು ಟ್ವೀಟಾಸ್ತ್ರ ಪ್ರಯೋಗಿಸುತ್ತಿದ್ದ ರಮ್ಯಾರನ್ನ ನಂತರದಲ್ಲಿ ಕಾಂಗ್ರೆಸ್ ಪಕ್ಷ, ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ಸ್ಥಾನದಿಂದಲೂ ಗೇಟ್ಪಾಸ್ ನೀಡಿತ್ತು. ಆಗೆಲ್ಲ.. ಕನ್ನಡದ ಪದ್ಮಾವತಿ ಮತ್ತೆ ಬಣ್ಣ ಹಚ್ಚಬಹುದು ಅನ್ನೋ ಆಸೆ ಅವರ ಅಭಿಮಾನಿಗಳಲ್ಲಿ ಚಿಗುರೊಡೆದಿತ್ತು. ಆದ್ರೆ, ರಮ್ಯಾ ಮಾತ್ರ ಏಗ್ದಂ ಸೈಲೆಂಟ್ ಆಗಿಬಿಟ್ಟಿದ್ದರು. ತಮ್ಮನ್ನು ತಾವು ದೀರ್ಘಕಾಲದ ಅಜ್ಞಾತವಾಸಕ್ಕೆ ದೂಡಿಕೊಂಡಿದ್ದ ರಮ್ಯಾ ಇಂದು ಸಡನ್ ಆಗಿಯೇ ಬಿಗ್ ಸರ್‌ಪ್ರೈಸ್ ಕೊಟ್ಟಿದ್ದಾರೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ