
ಇನ್ನು ಮುಂದೆ ವರ್ತಕರಿಗೆ ಇಷ್ಟು ಪ್ರಮಾಣದಲ್ಲಿ ಮಾತ್ರ ದಾಸ್ತಾನು ಇಟ್ಟುಕೊಳ್ಳಬೇಕು ಎಂಬ ಮಿತಿ ಇರುವುದಿಲ್ಲ. ಈ ದಿನ ಐತಿಹಾಸಿಕವಾದದ್ದು. ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂದಿದ್ದರೆ, ದೇಶದ ರೈತರಿಗೆ ಈ ದಿನ ಸ್ವಾತಂತ್ರ್ಯ ಸಿಕ್ಕಂತಾಯಿತು ಎಂದು ತೋಮರ್ ಹೇಳಿದ್ದಾರೆ. ಇನ್ನು ಮುಂದೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸಮಸ್ಯೆಗಳು ಸಹ ಇರುವುದಿಲ್ಲ ಎಂದು ಸರ್ಕಾರ ಹೇಳಿದೆ. ರೈತರು ತಮ್ಮ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಗೆ ಎಲ್ಲಾದರೂ ಮಾರಾಟ ಮಾಡಬಹುದು. ರೈತರೇ ಎಲೆಕ್ಟ್ರಾನಿಕ್ ಪ್ಲಾಟ್ ಫಾರ್ಮ್ ಗಳ ಮೂಲಕ ಕೃಷಿ ಉತ್ಪನ್ನಗಳ ಮಾರಾಟ ಮಾಡಬಹುದು ಎಪಿಎಂಸಿಯಿಂದ ಹೊರಗೆ ಮಾರುವ ಯಾವುದೇ ಉತ್ಪನ್ನಗಳ ಮೇಲೆ ತೆರಿಗೆ ಹಾಕುವುದಿಲ್ಲ ಒಂದು ದೇಶ, ಒಂದು ಮಾರುಕಟ್ಟೆ ಎಂಬ ದೂರದೃಷ್ಟಿಯೊಂದಿಗೆ ಭಾರತ ಮುಂದುವರಿಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಮತ್ತೊಂದು ಮಹತ್ವದ ತೀರ್ಮಾನದಲ್ಲಿ, ರೈತರ ಭೂಮಿ ವ್ಯಾಜ್ಯಗಳ ನಿವಾರಣೆಗೆ ಎಸ್ ಡಿಎಂ ಅಥವಾ ಡಿಸಿ ಜವಾಬ್ದಾರರು ಎನ್ನಲಾಗಿದೆ. ಭಾರತದಲ್ಲಿ ಶೇಕಡಾ ಎಂಬತ್ತೈದರಷ್ಟು ಸಣ್ಣ ಹಿಡುವಳಿ ರೈತರು ಇದ್ದಾರೆ. ಇಂದಿನ ಕ್ರಮದಿಂದ ವರ್ತಕರು, ಬಂಡವಾಳ, ತಂತ್ರಜ್ಞಾನ ಹೀಗೆ ಎಲ್ಲ ಅಗತ್ಯವೂ ರೈತರಿಗೆ ದೊರೆತಂತೆ ಆಗುತ್ತದೆ ಎಂದು ತೋಮರ್ ಹೇಳಿದ್ದಾರೆ.
ಮೋದಿ ಸರ್ಕಾರ ಎಂ.ಎಸ್. ಸ್ವಾಮಿನಾಥನ್ ವರದಿಯನ್ನು ಒಪ್ಪಿಕೊಂಡಿದೆ. ಕನಿಷ್ಠ ಬೆಂಬಲ ಬೆಲೆಯನ್ನು ಏರಿಸಲು ವ್ಯವಸ್ಥೆ ಮಾಡಿದೆ. ಸರ್ಕಾರದ ಇಂದಿನ ನಿರ್ಧಾರವು ಕೃಷಿ ವಲಯವನ್ನು ಹೊಸ ಎತ್ತರಕ್ಕೆ ಒಯ್ಯುತ್ತದೆ. ಭಾರತದ ಕೃಷಿಕರ ಜೀವನ ಮಟ್ಟವು ಇದರಿಂದ ಸುಧಾರಣೆ ಕಾಣುತ್ತದೆ ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.
(ಮಾಹಿತಿ ಕೃಪೆ ಒನ್ ಇಂಡಿಯಾ ಕನ್ನಡ...)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ